Lok Sabha Election 2024: ಭ್ರಷ್ಟರನ್ನು ಜೈಲಿಗೆ ಹಾಕಬೇಕೋ ಬೇಡವೋ? ಗುಡುಗಿದ ಅಮಿತ್‌ ಶಾ! - Vistara News

ಕರ್ನಾಟಕ

Lok Sabha Election 2024: ಭ್ರಷ್ಟರನ್ನು ಜೈಲಿಗೆ ಹಾಕಬೇಕೋ ಬೇಡವೋ? ಗುಡುಗಿದ ಅಮಿತ್‌ ಶಾ!

Lok Sabha Election 2024: ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ವಾದ ಮಾಡಿದ್ದೆವು. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕಬೇಕೋ? ಬೇಡವೋ? ರಾಹುಲ್ ಗಾಂಧಿ ಅವರೇ, ಹೇಳಿ ನಿಮ್ಮ ಸಂಸದನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದೆ, ಅವರನ್ನು ಜೈಲಿಗೆ ಹಾಕಬೇಕೋ ಬೇಡವೋ? ಮಮತಾ ದೀದಿ ನಿಮ್ಮ ಶಾಸಕನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದೆ. ಅವರನ್ನು ಜೈಲಿಗೆ ಹಾಕದೆ, ಅರಮನೆಯಲ್ಲಿ ಇಡಬೇಕಿತ್ತಾ? ಎಂದು ಅಮಿತ್‌ ಶಾ ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

Lok Sabha Election 2024 Should corrupt people be put in jail Amit Shah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಚುನಾವಣಾ ಚಾಣಕ್ಯ, ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳ ಇಂಡಿಯಾ ಒಕ್ಕೂಟ (I.N.D.I.A) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರದ್ದು ಪರಿವಾರವಾ ಹಾಗೂ ಭ್ರಷ್ಟಾಚಾರ ಇಂಡಿ ಒಕ್ಕೂಟ ಎಂದು ಕಿಡಿಕಾರಿದ್ದಾರೆ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿದ್ದೆವು. ಇಂಥವರನ್ನು ಜೈಲಿಗೆ ಹಾಕಬೇಕೋ ಬೇಡವೋ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕದೇ ಅರಮನೆಯಲ್ಲಿಡಬೇಕಿತ್ತಾ ಎಂದೂ ಪ್ರಶ್ನೆ ಮಾಡಿದ್ದಾರೆ.

“ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಲಾಗಿದ್ದ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್‌ ಶಾ, ನೀವು ಕಿವಿಕೊಟ್ಟು ಕೇಳಿಸಿಕೊಳ್ಳಿ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ವಾದ ಮಾಡಿದ್ದೆವು. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕಬೇಕೋ? ಬೇಡವೋ? ರಾಹುಲ್ ಗಾಂಧಿ ಅವರೇ, ಹೇಳಿ ನಿಮ್ಮ ಸಂಸದನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದೆ, ಜೈಲಿಗೆ ಹಾಕಬೇಕೋ ಬೇಡವೋ? ಮಮತಾ ದೀದಿ ನಿಮ್ಮ ಶಾಸಕನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದೆ. ಅವರನ್ನು ಜೈಲಿಗೆ ಹಾಕದೆ, ಅರಮನೆಯಲ್ಲಿ ಇಡಬೇಕಿತ್ತಾ? ಎಂದು ಪ್ರಶ್ನೆ ಮಾಡಿದರು.

ಹಗರಣಗಳ ಬಗ್ಗೆ ಮಾಹಿತಿ ಕೊಟ್ಟ ಶಾ

ನರೇಂದ್ರ ಮೋದಿ ಅವರ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ಒಂದು ಕಡೆ ಇಂಡಿ ಅಲೆಯನ್ಸ್ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿದೆ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಕಾಲದ ಹಗರಣಗಳನ್ನು, ಭ್ರಷ್ಟಾಚಾರಗಳನ್ನು ನೋಡಿದ್ದೀರಾ? ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಇವರೆಲ್ಲರೂ 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ. ಕಾಂಗ್ರೆಸ್ ಕಾಲದ ಒಂದೊಂದೇ ಹಗರಣಗಳ ಅಮಿತ್ ಶಾ ಮಾಹಿತಿ ನೀಡಿದರು.

ನಾನು ನರೇಂದ್ರ ಮೋದಿ ಅವರ ಜತೆ ನಲವತ್ತು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರು ಸಿಎಂ ಆಗಿ, ಪ್ರಧಾನಿಯಾಗಿ ಕಾರ್ಯನಿರ್ವಹಣೆ ಮಾಡಿದ ರೀತಿಯನ್ನು ಹತ್ತಿರದಿಂದ ನೋಡಿದ್ದೇನೆ. ಇಡೀ ದೇಶ ಮೋದಿ ಜತೆ ನಿಂತಿದೆ. ಮೋದಿ ಸರ್ಕಾರ ಬಡವರ, ದಲಿತರ, ಆದಿವಾಸಿಗಳ ಸರ್ಕಾರ ಆಗಿದೆ. ಬಡವರಿಗೆ ಆಹಾರ ಪೂರೈಸುವ ಕೆಲಸವನ್ನು ಮೋದಿ ಮಾಡಿದ್ದಾರೆ. 12 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಮನೆ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಿದ್ದು ಮೋದಿ ಸರ್ಕಾರ. ಕೋಟ್ಯಂತರ ಕಾರ್ಯಕರ್ತರಿಗೆ ಹೊಸ ಉತ್ಸಾಹ ಮೂಡಿಸುತ್ತಿರುವುದು ಮೋದಿ ಎಂದು ಅಮಿತ್‌ ಶಾ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.

ಆರ್ಟಿಕಲ್ 370 ತೆಗೆದರೆ ಕಾಶ್ಮೀರದಲ್ಲಿ ರಕ್ತಪಾತ ಆಗುತ್ತ ಎಂದು ಹೇಳಿದರು. ರಾಹುಲ್ ಗಾಂಧಿ ಅವರೇ, ಅಲ್ಲಿ ಯಾವುದೇ ಒಂದು ತೊಟ್ಟು ರಕ್ತವೂ ಬೀಳಲಿಲ್ಲ. ರಾಮಮಂದಿರ ನಿರ್ಮಾಣ ಮಾಡೋಕೆ ಬಿಡಲ್ಲ ಎಂದು ಹೇಳಿದರು. ರಾಮ ಮಂದಿರವನ್ನು ನಿರ್ಮಾಣ ಮಾಡಿ, ಭವ್ಯ ರಾಮಲಲ್ಲಾ ಪ್ರತಿಷ್ಠಾಪನೆಯನ್ನು ಕೂಡ ಮಾಡಲಾಯಿತು. ಧಮ್ಕಿ ಹಾಕಿದವರಿಗೆ, ರಾಮಮಂದಿರ ನಿರ್ಮಾಣ ಮಾಡಿ ತೋರಿಸಿದ್ದೇವೆ. ಭಕ್ತರು ಆರಾಮವಾಗಿ ರಾಮನ ದರ್ಶನ ಪಡೆಯುತ್ತಿದ್ದಾರೆ ಎಂದು ಅಮಿತ್‌ ಶಾ ಅವರು ಕಾಂಗ್ರೆಸ್‌ ನಾಯಕರನ್ನು ಕುಟುಕಿದರು.

ಸಿದ್ದರಾಮಯ್ಯ ಹಿಂದೆ ಅಹಿಂದ ಹೋಗದಂತೆ ನೋಡಿಕೊಳ್ಳಿ!

ಸಿಎಂ ಸಿದ್ದರಾಮಯ್ಯ ಅವರ (CM Siddaramaiah) ಹಿಂದೆ ಅಹಿಂದ ಹೋಗಲು ಬಿಡಬೇಡಿ. ಅಹಿಂದ ವೋಟ್ ಬ್ಯಾಂಕ್ ಅನ್ನು ಸೆಳೆಯು ಪ್ಲ್ಯಾನ್ ಮಾಡಿ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಹಿಂದ ಸಾಥ್ ನೀಡಿದೆ. ಈ ಬಾರಿ ಅಹಿಂದ ವೋಟ್ ಸೆಳೆಯಲು ಪ್ಲ್ಯಾನ್ ಮಾಡಿ. ರಾಜ್ಯದಲ್ಲಿ ಅಹಿಂದ ವೋಟ್ ಮೇಲೆ ಕಣ್ಣಿಡಿ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ ಸೆಳೆಯಲು ಯೋಜನೆ ರೂಪಿಸಿ, ಯಾವುದೇ ಸಮುದಾಯದ ವೋಟ್ ಮೈತ್ರಿ ಬಿಟ್ಟು ಹೋಗದಂತೆ ಪ್ಲ್ಯಾನ್ ಮಾಡಿ ಎಂದು ಸಭೆಯಲ್ಲಿ ಅಮಿತ್ ಶಾ ಕಿವಿ ಮಾತು ಹೇಳಿದರು.

ಈ ಬಾರಿ ದೇಶದಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕರ್ನಾಟಕದಲ್ಲಿ 2014ರಲ್ಲಿ 17 ಸೀಟು, 2019ರಲ್ಲಿ 25 ಸೀಟು ಗೆಲ್ಲಿಸಿ, ಹೆಚ್ಚು ಮತಗಳನ್ನ ಕೊಟ್ಟಿದ್ದೀರಿ. ಹೀಗಾಗಿ ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಬೇಕು. 28 ಕ್ಷೇತ್ರಗಳನ್ನು ಗೆಲ್ಲಲು ಸಿದ್ಧರಾಗಿದ್ದೀರಾ? ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿರ್ಧಾರ ಮಾಡಿದ್ದೀರಾ ಎಂದು ಇದೇ ವೇಳೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Lok Sabha Election 2024: ಅಮಿತ್ ಶಾ ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡಲೋ? ಕಿತ್ತುಕೊಳ್ಳಲೋ? ಸಿಎಂ ಪ್ರಶ್ನೆ

ಭಯೋತ್ಪಾದಕರ ಸೊಲ್ಲಡಗಿಸಿದ್ದು ಬಿಜೆಪಿ

ಸಿದ್ದರಾಮಯ್ಯ ಅವರೇ, ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇತ್ತು. ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗುತ್ತಾ ಇದ್ದರು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಮೌನವಾಗಿದ್ದರು. ನಮ್ಮ‌ ಕಾಲದಲ್ಲಿ ಪುಲ್ವಾಮಾ ದಾಳಿ ನಡೆಸಿದ್ದರು. ಆದರೆ, ನಾವು ಸುಮ್ಮನೆ ಕೂರಲಿಲ್ಲ. ನರೇಂದ್ರ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿ, ಭಯೋತ್ಪಾದಕರ ಸೊಲ್ಲಡಗಿಸಿತು ಎಂದು ಅಮಿತ್ ಶಾ ಹೇಳಿದರು.

ಎಲ್ಲ ಅಭ್ಯರ್ಥಿಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡ ಅಮಿತ್‌ ಶಾ!

ಭಾಷಣದ ಆರಂಭದಲ್ಲಿ ಮಾತನಾಡಿದ ಅಮಿತ್‌ ಶಾ ಅವರು ಪಕ್ಷದ ಒಬ್ಬೊಬ್ಬ ಅಭ್ಯರ್ಥಿಗಳ ಹೆಸರು ಕರೆದು ಪಕ್ಕದಲ್ಲಿ ನಿಲ್ಲುವಂತೆ ಸೂಚನೆ ನೀಡಿದರು. ಎಲ್ಲರೂ ನಿಂತ ಬಳಿಕ ಅವರ ಕಡೆ ಕೈ ಬೊಟ್ಟು ಮಾಡಿ ತೋರುತ್ತಾ, “ಇವರನ್ನು ಗೆಲ್ಲಿಸಬೇಕೋ, ಬೇಡವೋ? ಎಂದು ಅಲ್ಲಿ ಸೇರಿದ್ದ ಪ್ರಮುಖರನ್ನು ಪ್ರಶ್ನೆ ಮಾಡಿದರು. ಎಲ್ಲರೂ ಒಕ್ಕೊಲರಲಿನಿಂದ “ಗೆಲ್ಲಿಸಬೇಕು.. ಗೆಲ್ಲಿಸಬೇಕು..” ಎಂದು ಘೋಷಣೆ ಕೂಗಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Actor Darshan: ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ ಅಂಬರೀಶ್‌ ಏಕೀ ಗಾಢ ಮೌನ?

Actor Darshan: ಕೊಲೆ ಪ್ರಕರಣದಲ್ಲಿ ದರ್ಶನ್‌ ಜೈಲುಪಾಲಾದ ಮೇಲೆ ಸುಮಲತಾ ಫುಲ್ ಸೈಲೆಂಟ್ ಆಗಿದ್ದಾರೆ. ಅತ್ತ ಮಾಧ್ಯಮಗಳಿಗೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಗಾಢ ಮೌನಕ್ಕೆ ಜಾರಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡ ದರ್ಶನ್‌ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿದ್ದಾರೆ.

VISTARANEWS.COM


on

actor Darshan and Sumalatha Ambareesh
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್‌ (Actor Darshan) ಕುರಿತು ರಮ್ಯ, ರಚಿತಾ, ಸುದೀಪ್‌, ಉಪೇಂದ್ರ ಸೇರಿದಂತೆ ಚಿತ್ರರಂಗದ ಹಲವಾರು ಸ್ಟಾರ್‌ಗಳು ಹಾಗೂ ರಾಜಕಾರಣಿಗಳು ಹೇಳಿಕೆ ನೀಡಿದ್ದಾರೆ. ಆದರೆ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್‌ (Sumalatha Ambareesh) ಮಾತ್ರ ತುಟಿ ಪಿಟಕ್‌ ಎಂದಿಲ್ಲ. ಒಂದು ಕಾಲದಲ್ಲಿ ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ, ಈ ಪ್ರಕರಣದಲ್ಲಿ ಮೌನ ಕಾಪಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.

ನಟ ಅಂಬರೀಶ್ ಇದ್ದ ಕಾಲದಿಂದಲೂ, ʼದರ್ಶನ್‌ ನಮ್ಮ ದೊಡ್ಡ ಮಗʼ ಅನ್ನುತ್ತಿದ್ದ ಸುಮಲತಾ, 2019ರಲ್ಲಿ ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ನಿಂತಾಗ ಪ್ರಚಾರಕ್ಕೆ ದರ್ಶನ್‌ ಬೆಂಬಲ ಪಡೆದಿದ್ದರು. ಇಪ್ಪತ್ತು ದಿನಗಳ ಕಾಲ ಸುಮಲತಾ ಜತೆ ಪ್ರಚಾರ ಮಾಡಿ ಅವರನ್ನು ಗೆಲ್ಲಿಸುವಲ್ಲಿ ದರ್ಶನ್ ಪ್ರಮುಖ ಪಾತ್ರ ವಹಿಸಿದ್ದ.

ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿಯ ಕಾರಣದಿಂದಾಗಿ ಸುಮಲತಾ ಹಿಂದೆ ಸರಿದಾಗಲೂ ತಾಯಿಯ ಜತೆ ಇರ್ತೀನಿ ಎಂದು ದರ್ಶನ್ ಹೇಳಿದ್ದ. ಮಂಡ್ಯದಲ್ಲಿ ಸಭೆ ನಡೆಸಿ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ ಎಂದಿದ್ದ ದರ್ಶನ್‌. ಅಮ್ಮನ ನಿರ್ಧಾರವೇ ನನ್ನ ನಿರ್ಧಾರ ಎಂದಿದ್ದ.

ʼಇವನು ನಮ್ಮ ದತ್ತು ಮಗ ಅಲ್ಲ ಸ್ವಂತ ಮಗ. ಮಗನ ಜತೆ ಸದಾ ಇರ್ತೀನಿʼ ಎಂದಿದ್ದ ಸುಮಲತಾ, ಇದೀಗ ಕೊಲೆ ಪ್ರಕರಣದಲ್ಲಿ ಆತ ಜೈಲುಪಾಲಾದ ಮೇಲೆ ಫುಲ್ ಸೈಲೆಂಟ್ ಆಗಿದ್ದಾರೆ. ಅವರು ಅತ್ತ ಮಾಧ್ಯಮಗಳಿಗೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಗಾಢ ಮೌನಕ್ಕೆ ಜಾರಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡ ದರ್ಶನ್‌ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿದ್ದಾರೆ. ಯಾವುದಕ್ಕೂ ಅಭಿಷೇಕ್‌ ಪ್ರತಿಕ್ರಿಯೆ ನೀಡಿಲ್ಲ.

ಸುಮಲತಾ ಮೌನದ ಹಿಂದೆ ಹಲವು ಕಾರಣಗಳನ್ನು ಊಹಿಸಲಾಗಿದೆ. ದರ್ಶನ್‌ ಅಪರಾಧಿ ಅಥವಾ ನಿರಪರಾಧಿ ಎಂದು ಸಾಬೀತಾಗುವವರೆಗೆ ಏನೇ ಆಡಿದರೂ ಆಮೇಲೆ ನಾಲಿಗೆ ಕಚ್ಚಿಕೊಳ್ಳಬೇಕಾಗಬಹುದು ಎಂಬ ಎಚ್ಚರಿಕೆ ಇದರ ಹಿಂದಿದೆ. ಈ ಸಮಯದಲ್ಲಿ ಆರೋಪಿಯನ್ನು ಬೆಂಬಲಿಸಿದರೆ ಅದು ತಮ್ಮ ತಲೆಗೂ ಬರಬಹುದು ಎಂದು ಆತಂಕವೂ ಇದೆ. ಮಂಡ್ಯದಲ್ಲೂ ಕೂಡ ದರ್ಶನ್‌ ರೌಡಿಸಂ ಚಾಳಿಯ ಬಗ್ಗೆ ಜನರಲ್ಲಿ ಸಿಟ್ಟೂ ಇದೆ.

ದರ್ಶನ್‌ ಈ ಪ್ರಕರಣದಿಂದ ತನ್ನನ್ನು ಪಾರು ಮಾಡುವಂತೆ ಹಲವು ಪ್ರಭಾವಿ ರಾಜಕಾರಣಿಗಳ ಬೆನ್ನಿಗೆ ಬಿದ್ದಿದ್ದರು ಎನ್ನಲಾಗಿದೆ. ಆದರೆ ಪ್ರಕರಣದ ಗಂಭೀರತೆ ಅರಿತ ಅವರ್ಯಾರೂ ದರ್ಶನ್‌ ಸಪೋರ್ಟ್‌ಗೆ ಬಂದಿಲ್ಲ. ಸಿಎಂ ಕೂಡ ಈ ಪ್ರಕರಣದಲ್ಲಿ ಎಷ್ಟೇ ಪ್ರಭಾವ ಬಳಸಿದರೂ ಅದಕ್ಕೆ ಒಳಗಾಗಬೇಡಿ, ಯಾರನ್ನೂ ಬಿಡಬೇಡಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಈಗ ದರ್ಶನ್‌ ಕುರಿತ ಆಪ್ತತೆ ಪ್ರದರ್ಶನ ಮಾಡುವುದು ಸರಿಯಲ್ಲ. ಇದು ರಾಜಕೀಯವಾಗಿಯೂ ತಮಗೆ ಮುಳುವಾಗಬಹುದು ಎಂದು ಸುಮಲತಾಗೆ ಅನಿಸಿದ್ದು, ಇದೇ ಅಮ್ಮ- ಮಗನ ಬಾಂಧವ್ಯದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎನ್ನಲಾಗಿದೆ.

`ನಾನೇ 30 ಲಕ್ಷ ರೂ. ಕೊಟ್ಟೆ….’ ಕೊಲೆ ಬಗ್ಗೆ ಸ್ವ ಇಚ್ಛೆ ಹೇಳಿಕೆ ನೀಡಿದ ದರ್ಶನ್‌

ರೇಣುಕಾ ಸ್ವಾಮಿ ಹತ್ಯೆ (Renuka Swamy murder case) ಕೇಸ್‌ನ ಆರೋಪಿ, ನಟ ದರ್ಶನ್‌ (Actor Darshan) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ. ಪ್ರಕರಣ ಮುಚ್ಚಿಹಾಕಲು 30 ಲಕ್ಷ ರೂ. ನೀಡಿರುವುದಾಗಿ ತಿಳಿಸಿದ್ದಾನೆ.

ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಅಲಿಯಾಸ್‌ ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ ನೀಡಿದ್ದು, ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್‌ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ.

ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್‌ ಒಪ್ಪಿಕೊಂಡಿಲ್ಲ. ಶೆಡ್‌ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು, ಜೂನ್‌ 8ರಂದು ರಾತ್ರಿ ದರ್ಶನ್‌ ತನ್ನ ಜೀಪಿನಲ್ಲಿ ಶೆಡ್‌ ಕಡೆಗೆ ಆಗಮಿಸಿದ್ದನ್ನು ತೋರಿಸಿವೆ. ಹತ್ಯೆಯ ನಂತರ ದರ್ಶನ್‌ ಆರೋಪಿಗಳ ಜೊತೆಗೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿಂದ ಗೊತ್ತಾಗಿದೆ. ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ.

ಇದನ್ನೂ ಓದಿ: Actor Darshan: ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು ಎಂದು ದರ್ಶನ್‌ಗೆ ತಿರುಗೇಟು ಕೊಟ್ಟ ಉಮಾಪತಿ!

Continue Reading

ಕ್ರೈಂ

Actor Darshan: `ನಾನೇ 30 ಲಕ್ಷ ರೂ. ಕೊಟ್ಟೆ….’ ಕೊಲೆ ಬಗ್ಗೆ ಸ್ವ ಇಚ್ಛೆ ಹೇಳಿಕೆ ನೀಡಿದ ದರ್ಶನ್‌

Actor Darshan: ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್‌ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ.

VISTARANEWS.COM


on

actor Darshan Arrested
Koo

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ (Renuka Swamy murder case) ಕೇಸ್‌ನ ಆರೋಪಿ, ನಟ ದರ್ಶನ್‌ (Actor Darshan) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ. ಪ್ರಕರಣ ಮುಚ್ಚಿಹಾಕಲು 30 ಲಕ್ಷ ರೂ. ನೀಡಿರುವುದಾಗಿ ತಿಳಿಸಿದ್ದಾನೆ.

ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಅಲಿಯಾಸ್‌ ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ ನೀಡಿದ್ದು, ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್‌ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ.

ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್‌ ಒಪ್ಪಿಕೊಂಡಿಲ್ಲ. ಶೆಡ್‌ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು, ಜೂನ್‌ 8ರಂದು ರಾತ್ರಿ ದರ್ಶನ್‌ ತನ್ನ ಜೀಪಿನಲ್ಲಿ ಶೆಡ್‌ ಕಡೆಗೆ ಆಗಮಿಸಿದ್ದನ್ನು ತೋರಿಸಿವೆ. ಹತ್ಯೆಯ ನಂತರ ದರ್ಶನ್‌ ಆರೋಪಿಗಳ ಜೊತೆಗೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿಂದ ಗೊತ್ತಾಗಿದೆ. ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ.

ರಾಜಕಾಲುವೆ ಪಾಲಾದ ಮೊಬೈಲ್‌ ಹುಡುಕಾಟಕ್ಕೆ ಅಗ್ನಿಶಾಮಕ ದಳ

ನಟ ದರ್ಶನ್‌ (Actor Darshan) ಗ್ಯಾಂಗ್‌ನಿಂದ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ ಕೇಸ್‌ನಲ್ಲಿ, (Renuka Swamy Murder Case) ರಾಜಕಾಲುವೆ ಪಾಲಾಗಿರುವ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರ ಮೊಬೈಲ್‌ಗಳಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಮಹತ್ವದ ಸಾಕ್ಷಿಗಳನ್ನು ಇದು ಹೊಂದಿದ್ದು, ಇದೀಗ ಶೋಧಕ್ಕಾಗಿ ಅಗ್ನಿಶಾಮಕ ದಳದ ಮೊರೆ ಹೋಗಲಾಗಿದೆ.

ಸತತ 11 ದಿನಗಳಿಂದ ಮೃತ ರೇಣುಕಾಸ್ವಾಮಿ ಮೊಬೈಲ್‌ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಜೂನ್‌ 8ರಂದು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಜೂನ್ 9ರ ಮುಂಜಾನೆ ಮೃತ ರೇಣುಕಾಸ್ವಾಮಿ ಹಾಗೂ A5 ಆರೋಪಿ ರಾಘವೇಂದ್ರ ಇಬ್ಬರ ಮೊಬೈಲ್ ಅನ್ನು ಪಡೆದು ಸುಮನಹಳ್ಳಿಯ ರಾಜಕಾಲುವೆ ಬಳಿ ಪ್ರದೂಶ್ ಬಿಸಾಡಿದ್ದ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆಸಲಾದ ಹಲ್ಲೆಯನ್ನು ಈ ಮೊಬೈಲ್‌ಗಳಲ್ಲಿ ಆರೋಪಿಗಳು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರರ ಮೊಬೈಲ್‌ಗಳು ಪ್ರಮುಖ ಸಾಕ್ಷಿಯಾಗಿವೆ. ಇಬ್ಬರ ಮೊಬೈಲ್‌ಗಳನ್ನೂ ರಾಜಕಾಲುವೆಗೆ ಬಿಸಾಡಿದ್ದಾಗಿ ಪ್ರದೂಶ್ ಹೇಳಿಕೆ ನೀಡಿದ್ದಾನೆ.

ಆತ ತೋರಿಸಿದ ಸುಮನಹಳ್ಳಿ ರಾಜಕಾಲುವೆಯ ಬಳಿ ಪೋಲಿಸ್ ಅಧಿಕಾರಿಗಳು ಮಹಜರು ನಡೆಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರ ಸಹಾಯದಿಂದ ರಾಜಕಾಲುವೆಯಲ್ಲಿ ಮೊಬೈಲ್ ಹುಡುಕಾಡಿಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಹೀಗಾಗಿ ಮೋಬೈಲ್ ಪತ್ತೆ ಮಾಡಿಕೊಡುವಂತೆ ಪೊಲೀಸರು ರಾಜಾಜಿನಗರ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಮೊರೆ ಹೋಗಿದ್ದಾರೆ.

ಈ ನಡುವೆ, ಮೊಬೈಲ್‌ ಅನ್ನು ಬೇರೆ ಕಡೆ ಅವಿತಿರಿಸಿ ಅಥವಾ ನಾಶ ಮಾಡಿ, ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದೇನೆ ಎಂದು ಪ್ರದೂಶ್‌ ಹೇಳಿಕೆ ನೀಡಿ ಪೊಲೀಸರ ದಾರಿ ತಪ್ಪಿಸಿರುವ ಸಾಧ್ಯತೆಯೂ ಇದೆ. ಅಥವಾ ಆತ ಬಿಸಾಡಿರುವ ಮೊಬೈಲ್‌ಗಳನ್ನು ಗುಜರಿ ವಸ್ತು ಆಯುವವರು ಎತ್ತಿಕೊಂಡುಹೋಗಿರುವ ಸಾಧ್ಯತೆಯೂ ಇದೆ. ಇವೆಲ್ಲ ಸಾಧ್ಯತೆಗಳಿಂದಾಗಿ ಈ ಮೊಬೈಲ್‌ ಹುಡುಕಾಟ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತಾಗಿದೆ.

ಇದನ್ನೂ ಓದಿ: Actor Darshan: ದರ್ಶನ್ ಮನೆ ಒತ್ತುವರಿ ತೆರವಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌; ಬುಲ್ಡೋಜರ್‌ ರೆಡಿ ಮಾಡುತ್ತಿದೆ ಬಿಬಿಎಂಪಿ

Continue Reading

ಕ್ರೈಂ

Renuka Swamy Murder Case: ರಾಜಕಾಲುವೆ ಪಾಲಾದ ಮೊಬೈಲ್‌ ಹುಡುಕಾಟಕ್ಕೆ ಅಗ್ನಿಶಾಮಕ ದಳ

Renuka Swamy Murder Case: ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರರ ಮೊಬೈಲ್‌ಗಳು ಪ್ರಮುಖ ಸಾಕ್ಷಿಯಾಗಿವೆ. ಇಬ್ಬರ ಮೊಬೈಲ್‌ಗಳನ್ನೂ ರಾಜಕಾಲುವೆಗೆ ಬಿಸಾಡಿದ್ದಾಗಿ ಪ್ರದೂಶ್ ಹೇಳಿಕೆ ನೀಡಿದ್ದಾನೆ.

VISTARANEWS.COM


on

renuka swamy murder case
Koo

ಬೆಂಗಳೂರು: ನಟ ದರ್ಶನ್‌ (Actor Darshan) ಗ್ಯಾಂಗ್‌ನಿಂದ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ ಕೇಸ್‌ನಲ್ಲಿ, (Renuka Swamy Murder Case) ರಾಜಕಾಲುವೆ (Rajakaluve) ಪಾಲಾಗಿರುವ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರ ಮೊಬೈಲ್‌ಗಳಿಗಾಗಿ (mobile phones) ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಮಹತ್ವದ ಸಾಕ್ಷಿಗಳನ್ನು ಇದು ಹೊಂದಿದ್ದು, ಇದೀಗ ಶೋಧಕ್ಕಾಗಿ ಅಗ್ನಿಶಾಮಕ ದಳದ ಮೊರೆ ಹೋಗಲಾಗಿದೆ.

ಸತತ 11 ದಿನಗಳಿಂದ ಮೃತ ರೇಣುಕಾಸ್ವಾಮಿ ಮೊಬೈಲ್‌ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಜೂನ್‌ 8ರಂದು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಜೂನ್ 9ರ ಮುಂಜಾನೆ ಮೃತ ರೇಣುಕಾಸ್ವಾಮಿ ಹಾಗೂ A5 ಆರೋಪಿ ರಾಘವೇಂದ್ರ ಇಬ್ಬರ ಮೊಬೈಲ್ ಅನ್ನು ಪಡೆದು ಸುಮನಹಳ್ಳಿಯ ರಾಜಕಾಲುವೆ ಬಳಿ ಪ್ರದೂಶ್ ಬಿಸಾಡಿದ್ದ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆಸಲಾದ ಹಲ್ಲೆಯನ್ನು ಈ ಮೊಬೈಲ್‌ಗಳಲ್ಲಿ ಆರೋಪಿಗಳು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರರ ಮೊಬೈಲ್‌ಗಳು ಪ್ರಮುಖ ಸಾಕ್ಷಿಯಾಗಿವೆ. ಇಬ್ಬರ ಮೊಬೈಲ್‌ಗಳನ್ನೂ ರಾಜಕಾಲುವೆಗೆ ಬಿಸಾಡಿದ್ದಾಗಿ ಪ್ರದೂಶ್ ಹೇಳಿಕೆ ನೀಡಿದ್ದಾನೆ.

ಆತ ತೋರಿಸಿದ ಸುಮನಹಳ್ಳಿ ರಾಜಕಾಲುವೆಯ ಬಳಿ ಪೋಲಿಸ್ ಅಧಿಕಾರಿಗಳು ಮಹಜರು ನಡೆಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರ ಸಹಾಯದಿಂದ ರಾಜಕಾಲುವೆಯಲ್ಲಿ ಮೊಬೈಲ್ ಹುಡುಕಾಡಿಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಹೀಗಾಗಿ ಮೊಬೈಲ್ ಪತ್ತೆ ಮಾಡಿಕೊಡುವಂತೆ ಪೊಲೀಸರು ರಾಜಾಜಿನಗರ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಮೊರೆ ಹೋಗಿದ್ದಾರೆ.

ಈ ನಡುವೆ, ಮೊಬೈಲ್‌ ಅನ್ನು ಬೇರೆ ಕಡೆ ಅವಿತಿರಿಸಿ ಅಥವಾ ನಾಶ ಮಾಡಿ, ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದೇನೆ ಎಂದು ಪ್ರದೂಶ್‌ ಹೇಳಿಕೆ ನೀಡಿ ಪೊಲೀಸರ ದಾರಿ ತಪ್ಪಿಸಿರುವ ಸಾಧ್ಯತೆಯೂ ಇದೆ. ಅಥವಾ ಆತ ಬಿಸಾಡಿರುವ ಮೊಬೈಲ್‌ಗಳನ್ನು ಗುಜರಿ ವಸ್ತು ಆಯುವವರು ಎತ್ತಿಕೊಂಡುಹೋಗಿರುವ ಸಾಧ್ಯತೆಯೂ ಇದೆ. ಇವೆಲ್ಲ ಸಾಧ್ಯತೆಗಳಿಂದಾಗಿ ಈ ಮೊಬೈಲ್‌ ಹುಡುಕಾಟ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತಾಗಿದೆ.

ಪವಿತ್ರಾ ಗೌಡ ಅಸ್ವಸ್ಥ, ಆಸ್ಪತ್ರೆಗೆ ಶಿಫ್ಟ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಪವಿತ್ರಾಗೌಡ ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ (Pavithra Gowda), ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಕೆಲವೇ ಕ್ಷಣಗಳ ಹಿಂದೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರು ಬಂದಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಪವಿತ್ರಾಗೌಡಳನ್ನು ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.‌

ರಾಜಕಾಲುವೆ ಮೇಲೆ ನಿರ್ಮಿಸಿದ ದರ್ಶನ್‌ ಮನೆಯತ್ತ ಬಿಬಿಎಂಪಿ ಬುಲ್‌ಡೋಜರ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಮನೆ ಒತ್ತುವರಿ ತೆರವು ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ನಟ ದರ್ಶನ್ (Actor Darshan) ಮನೆ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಮೌಕಿಕ ಸೂಚನೆ ಸಿಕ್ಕಿದೆ ಎನ್ನಲಾಗಿದ್ದು, ಯಾರೇ ಒತ್ತುವರಿ ಮಾಡಿ ಸ್ಟೇ ತಂದಿದ್ದರೂ ಕಾನೂನಿನ ಪ್ರಕಾರ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ನಟ ದರ್ಶನ್ ಮನೆ ರಾಜಕಾಲುವೆ ‌ಮೇಲೆ ಇದ್ದರೂ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಇದೀಗ ಒತ್ತುವರಿಗೆ ತೆರವಿಗೆ ಸೂಚನೆ ಹಿನ್ನೆಲೆಯಲ್ಲಿ ಕ್ರಮಕ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಮಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕೂಡ ಒತ್ತುವರಿ ವಿಚಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.

ರಾಜಧಾನಿಯಲ್ಲಿ 2016ರಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸಿದ್ದರಾಮಯ್ಯ ಸರ್ಕಾರ ಬಿಬಿಎಂಪಿಗೆ ಸೂಚನೆ ನೀಡಿತ್ತು. ಆಗ ಆರ್‌.ಆರ್‌. ನಗರದ ದರ್ಶನ್‌ ಅವರ ನಿವಾಸ ಕೂಡ ರಾಜ ಕಾಲುವೆಯ ಬಫರ್‌ ಜೋನ್‌ ಮೇಲೆ ನಿರ್ಮಿಸಿರುವುದು ತಿಳಿದುಬಂದಿತ್ತು.

ಇದನ್ನೂ ಓದಿ: Prajwal Revanna Case: ಪರಾರಿಯಾಗಲು ಸಹಾಯ; ಪ್ರಜ್ವಲ್ ರೇವಣ್ಣ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್!

Continue Reading

ಮಳೆ

Karnataka Weather : ಭಾರಿ ಮಳೆ ಜತೆಗೆ ಬೀಸಲಿದೆ ಬಿರುಗಾಳಿ; ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Weather Forecast : ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ (Heavy rain alert) ಬಿರುಗಾಳಿ ಬೀಸಲಿದ್ದು, ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ (Fisher Warning) ನೀಡಲಾಗಿದೆ. ಜತೆಗೆ ಮಲೆನಾಡು, ಒಳನಾಡಿನಲ್ಲೂ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು : ರಾಜ್ಯಾದ್ಯಂತ ಬುಧವಾರದಂದು ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಹಗುರದಿಂದ ಕೂಡಿರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಉತ್ತರ ಒಳನಾಡಿನ ಹಲವೆಡೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇತ್ತ ಮಲೆನಾಡಿನ ಜಿಲ್ಲೆಯಾದ್ಯಂತ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲೂ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

9 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ

ಗುಡುಗು, ಸಿಡಿಲು ಜತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿ ವೇಗವು 30-40 ಕಿ.ಮೀ ಇರಲಿದೆ. ಹೀಗಾಗಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿ ಒಳನಾಡಿನ ಚಿತ್ರದುರ್ಗ, ಮಂಡ್ಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಡಲಿಗೆ ಮೀನುಗಾರರ ದಿಗ್ಬಂಧನ

ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿ ಇರಲಿದ್ದು, ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಜೂನ್‌ 21ರವರೆಗೆ ಮೀನುಗಾರರು ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ. ಜತೆಗೆ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Neeraj Chopra
ಕ್ರೀಡೆ8 mins ago

Neeraj Chopra: ಪಾವೊ ನೂರ್ಮಿ ಅಥ್ಲೆಟಿಕ್ಸ್ ಗೇಮ್ಸ್​; ಚೊಚ್ಚಲ ಚಿನ್ನ ಗೆದ್ದ ನೀರಜ್ ಚೋಪ್ರಾ

Mobile Addiction
Latest9 mins ago

Mobile Addiction: ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ತಪ್ಪಿಸಬೇಕೆ? ಈ 5 ಸಲಹೆ ಅನುಸರಿಸಿ

Sunny Leone reaction about actor darshan incident
ಸ್ಯಾಂಡಲ್ ವುಡ್35 mins ago

Sunny Leone: ಬೆಂಗಳೂರಿಗೆ ಬಂದ ಸನ್ನಿ ಲಿಯೋನ್ ; ದರ್ಶನ್ ಬಗ್ಗೆ ಕೇಳಿದ್ದಕ್ಕೆ ಗರಂ ಆದ ಹಾಟ್‌ ಬೆಡಗಿ!

actor Darshan and Sumalatha Ambareesh
ಪ್ರಮುಖ ಸುದ್ದಿ41 mins ago

Actor Darshan: ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ ಅಂಬರೀಶ್‌ ಏಕೀ ಗಾಢ ಮೌನ?

Shot Dead
ವಿದೇಶ44 mins ago

ಮುಂದುವರಿದ ʼಅಪರಿಚಿತರʼ ಕಾರ್ಯಾಚರಣೆ; ಭಾರತೀಯ ಸೇನಾನೆಲೆ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಪಾಕ್ ಸೇನಾಧಿಕಾರಿ ಹತ್ಯೆ

Kane Williamson
ಕ್ರೀಡೆ49 mins ago

Kane Williamson: ನಾಯಕತ್ವದಿಂದ ಕೆಳಗಿಳಿದ ಕೇನ್​ ವಿಲಿಯಮ್ಸನ್

Actor Darshan Renuka Swamy murder case umapathy counter
ಸ್ಯಾಂಡಲ್ ವುಡ್1 hour ago

Actor Darshan: ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು ಎಂದು ದರ್ಶನ್‌ಗೆ ತಿರುಗೇಟು ಕೊಟ್ಟ ಉಮಾಪತಿ!

International Yoga Day 2024
ಆರೋಗ್ಯ1 hour ago

International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

Lucknow Airport
ದೇಶ1 hour ago

Lucknow Airport: ವಿಮಾನ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ನಡೆಸಿದ ಮಹಿಳೆ; ಕಾರಣ ಏನು?

USA vs SA
ಕ್ರಿಕೆಟ್1 hour ago

USA vs SA: ಇಂದು ದಕ್ಷಿಣ ಆಫ್ರಿಕಾ-ಅಮೆರಿಕ ನಡುವೆ ಸೂಪರ್​-8 ಕದನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ3 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌