Kidnapping Case : ಬಸ್‌ನಲ್ಲಿ ಅಪರಿಚಿತರ ಕೈಗೆ ಕೊಟ್ಟ ಮಗು ಮಿಸ್ಸಿಂಗ್‌; ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಪೊಲೀಸರು - Vistara News

ಕರ್ನಾಟಕ

Kidnapping Case : ಬಸ್‌ನಲ್ಲಿ ಅಪರಿಚಿತರ ಕೈಗೆ ಕೊಟ್ಟ ಮಗು ಮಿಸ್ಸಿಂಗ್‌; ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಪೊಲೀಸರು

Missing case : ಬಸ್‌ನಲ್ಲಿ ಕೂರಲು ಸೀಟು ಸಿಗದ ಕಾರಣಕ್ಕೆ ಕೈಯಲ್ಲಿದ್ದ ಮಗುವನ್ನ‌ ಎತ್ತಿಕೊಂಡ ಅಪರಿಚಿತ ಮಹಿಳೆಯೊಬ್ಬಳು ಮಗುವಿನ ಸಮೇತ ಎಸ್ಕೇಪ್ (Kidnapping Case) ಆಗಿದ್ದಾಳೆ ಎಂಬ ಸುಳ್ಳು ದೂರೊಂದು ದಾಖಲಾಗಿದೆ.

VISTARANEWS.COM

on

Malavalli police give a twist to Mandya childs missing case
ಕಳವು ಆಗಿದೆ ಎನ್ನಲಾದ ಮಗು ಹಾಗೂ ಸುಳ್ಳು ದೂರು ಕೊಟ್ಟ ಸವಿತಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಡ್ಯ: ಮಂಡ್ಯದಲ್ಲಿ ಮಗು ಮಿಸ್ಸಿಂಗ್‌ ಕೇಸ್‌ಗೆ (Missing Case) ಪೊಲೀಸರ ತನಿಖೆಯಲ್ಲಿ ಟ್ವಿಸ್ಟ್‌ ಸಿಕ್ಕಿದೆ. ಮಹಿಳೆಯ ಹೈಡ್ರಾಮಾಕ್ಕೆ ಪೊಲೀಸರೇ ದಂಗಾಗಿದ್ದರು. ಆಕೆ ಮಧ್ಯ ವಯಸ್ಸಿನ ಮಹಿಳೆ, ಈಗಾಗಲೇ ಮಕ್ಕಳು, ಮೊಮ್ಮಕ್ಕಳನ್ನು ಹೊಂದಿದ್ದಾಳೆ. ನಿನ್ನೆ ಬುಧವಾರ ಚೆನ್ನಪಟ್ಟಣದಿಂದ ಮಳವಳ್ಳಿಗೆ ಹೋಗುತ್ತಿದ್ದಳು. ಮಳವಳ್ಳಿ ಪಟ್ಟಣದಲ್ಲಿ ತನ್ನ 7 ತಿಂಗಳ ಗಂಡು ಮಗುವೊಂದನ್ನು ಅಪರಿಚಿತ ಮಹಿಳೆಯೊಬ್ಬಳು ಎತ್ತಿಕೊಂಡು (Kidnapping Case) ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನ್ವಯ ಮಗು ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಮಳವಳ್ಳಿ ಠಾಣೆ ಪೊಲೀಸರು (Malavalli Police) ತನಿಖೆಗೆ ಇಳಿಯುವ ಮೊದಲೇ ಇಡೀ ಪ್ರಕರಣ ಬೇರೊಂದು ಟ್ವಿಸ್ಟ್ ಪಡೆದುಕೊಂಡಿತ್ತು.

ಟಿ.ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಸವಿತಾ ಎಂಬಾಕೆ ಚೆನ್ನಪಟ್ಟಣದಿಂದ ಮಳವಳ್ಳಿಗೆ ಸರ್ಕಾರಿ ಬಸ್‌ನಲ್ಲಿ ತೆರಳುತ್ತಿದ್ದಳು. ಈ ವೇಳೆ ಸೀಟ್‌ ಇಲ್ಲದ ಕಾರಣಕ್ಕೆ ತನ್ನ 7 ತಿಂಗಳ ಮಗುವನ್ನು ಬಸ್‌ನಲ್ಲೇ ಇದ್ದ ಅಪರಿಚಿತ ಮಹಿಳೆಯೊಬ್ಬರು ಮಗು ಎತ್ತಿಕೊಂಡಿದ್ದಳು. ಆದರೆ ಮಳವಳ್ಳಿ ಬಸ್ ನಿಲ್ದಾಣದಲ್ಲಿಬಸ್ ಇಳಿಯುತ್ತಲೇ ಮಗುವಿನ ಸಮೇತ ಎಸ್ಕೇಪ್ ಆಗಿದ್ದಾಳೆ ಎಂದು ಏಕಾಏಕಿ ಕಿರುಚಾಡಲು ಶುರು ಮಾಡಿದ್ದಳು.

ನಂತರ ಮಳವಳ್ಳಿ ಪಟ್ಟಣ ಠಾಣೆಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಮೇರೆಗೆ ಮಗುವಿನ ನಾಪತ್ತೆ ಪ್ರಕರಣ ದಾಖಲಿಸಿಕೊಂಡರು. ಇನ್ನೇನು ತನಿಖೆ ಮುಂದುವರೆಸಬೇನ್ನುವಷ್ಟರಲ್ಲಿ ಇಡೀ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿತ್ತು. ಯಾಕಂದರೆ ತನ್ನ ಮಗು ನಾಪತ್ತೆ ಆಗಿದೆ ಎಂದು ಹೇಳಿಕೊಂಡು ದೂರು ನೀಡಿದ್ದ ಮಹಿಳೆಯದ್ದೇ ಆಗಿರಲಿಲ್ಲ.

ಯಾಕೆಂದರೆ ಪೊಲೀಸರು ಮಗು ಕಿಡ್ನ್ಯಾಪ್ ಆಗಿದೆ ಎಂದು ಪ್ರಕಟಣೆ ಹೊರಡಿಸಿದ್ದರು. ಎಲ್ಲಾ ಕಡೆಗಳಲ್ಲಿ ಫೋಟೊ ವೈರಲ್ ಆಗಿತ್ತು. ಈ ಫೋಟೊವನ್ನು ನೋಡಿದ ಮಗುವಿನ ನಿಜವಾದ ತಂದೆಗೆ ಒಂದು ಕ್ಷಣ ಆಘಾತವೇ ಆಗಿತ್ತು. ಯಾಕಂದರೆ ಕಿಡ್ನ್ಯಾಪ್ ಆಗಿದೆ ಎಂದು ಹೇಳಲಾಗಿರುವ ಮಗು ತನ್ನ ಹೆತ್ತವರ ಮಡಿಲಿನಲ್ಲಿ ಜೋಪಾನವಾಗಿತ್ತು.

ಇದನ್ನೂ ಓದಿ: BBK SEASON 10: ನನ್ನ ಕ್ಯಾರೆಕ್ಟರ್‌ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ; ಸಂಗೀತಾಗೆ ಕಾರ್ತಿಕ್‌ ತಿರುಗೇಟು!

ಹೌದು ಇಲ್ಲಿ ನಾಪತ್ತೆಯಾಗಿದ್ದ ಮಗುವು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದ ದರ್ಶನ್ ಹಾಗೂ ರಮ್ಯಾ ದಂಪತಿಯಾದಾಗಿತ್ತು. ದರ್ಶನ್‌ರ ಪತ್ನಿ ರಮ್ಯಾ ಅವರು ಚೆನ್ನಪಟ್ಟಣ ತಾಲೂಕಿನ ನೆರಲೂರು ಗ್ರಾಮದವರು, ಇಲ್ಲಿ ಮಗು ಕಿಡ್ನ್ಯಾಪ್ ಎಂದು ದೂರು ನೀಡಿರುವ ಸವಿತ ಸಹ ನೆರಲೂರಿನ ಗ್ರಾಮದವಳೇ ಆಗಿದ್ದಳು.

ಸವಿತಾಳಿಗೆ ಈಗಾಗಲೇ ಮಕ್ಕಳು ಮೊಮ್ಮಕ್ಕಳು ಇದ್ದಾರೆ. ಆಕೆ ಹೇಳಿಕೊಂಡಿರುವಂತೆ ಆಕೆ ನರಸೀಪುರ ಗ್ರಾಮದವಳು ಅಲ್ಲ. ಜತೆಗೆ ತನ್ನ ಪತ್ನಿ ಶಿವಕುಮಾರ್ ಎಂದು ಹೇಳಿರುವ ಹೆಸರು ಸಹ ಸುಳ್ಳು. ಯಾಕಂದರೆ ಸವಿತಾಳ ಗಂಡ ತೀರಿ ಹೋಗಿ ಹಲವು ವರ್ಷಗಳೇ ಕಳೆದುಹೋಗಿವೆಯಂತೆ. ಸದ್ಯ ಆಕೆಗೆ ಆರೋಗ್ಯದ ಸಮಸ್ಯೆ ಎದುರಾಗಿದ್ದು, ಮಂಡ್ಯದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ನಡುವೆ ತಮ್ಮ ಸ್ನೇಹಿತನ ಮಗುವನ್ನು ಕುರಿತು ಹರಡಿರುವ ವದಂತಿ ಹಾಗೂ ಸುಳ್ಳು ಸುದ್ದಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ದರ್ಶನ್ ಸ್ನೇಹಿತರು ಮಕ್ಕಳ ವಿಚಾರದಲ್ಲಿ ಯಾರೂ ಹೀಗೆ ಮಾಡಬಾರದು. ಆಕೆಯ ವಿರುದ್ಧ ಕ್ರಮಕೈಗೊಂಡು, ಸರಿಯಾದ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಮಗುವನ್ನ ಕಿಡ್ನ್ಯಾಪ್‌ ಮಾಡಲಾಗಿದೆ ಎಂಬ ವಿಚಾರ ಇಟ್ಟುಕೊಂಡು ತನಿಖೆ ಕೈಗೊಳ್ಳಲಾರಂಭಿಸಿದ ಮಳವಳ್ಳಿ ಪಟ್ಟಣ ಠಾಣೆ ಪೊಲೀಸರಿಗೆ ಈಗ ಪ್ರಕರಣ ಮತ್ತೊಂದು ತಿರುವಿನತ್ತ ಸಾಗಿದೆ. ಇಲ್ಲಿ ಸುಳ್ಳು ದೂರು ನೀಡಿ ಪ್ರಕರಣ ದಾಖಲಿಸಿರುವ ಆಕೆಯ ವಿಚಾರಣೆ ನಂತರವಷ್ಟೇ ಇಡೀ ಪ್ರಕರಣ ಸತ್ಯಾಂಶ ಹೊರ ಬರಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Murder case : ಬನಶಂಕರಿಯಲ್ಲಿ ಚಾಕು ಇರಿದು ಯುವಕನ‌ ಕೊಲೆ ಮಾಡಿದ ರೌಡಿಶೀಟರ್‌

Murder case : ಪ್ರತ್ಯೇಕ ಕಡೆಗಳಲ್ಲಿ ಕೊಲೆ ಪ್ರಕರಣಗಳು ವರದಿ ಆಗಿವೆ. ಬೆಂಗಳೂರಿನಲ್ಲಿ ರೌಡಿಶೀಟರ್‌ವೊಬ್ಬ ಯುವಕನ ಕೊಲೆ ಮಾಡಿದ್ದರೆ, ಶಿವಮೊಗ್ಗದಲ್ಲಿ ದುಷ್ಕರ್ಮಿಗಳು ವ್ಯಕ್ತಿಯನ್ನು ಛಿದ್ರ, ಛಿದ್ರವಾಗಿ ಕೊಲೆ ಮಾಡಿ ನದಿಗೆ ಎಸೆದಿದ್ದಾರೆ. ಇನ್ನು ದಾವಣಗೆರೆಯಲ್ಲಿ ಒಂದು ಸಾವಿರ ರೂಪಾಯಿ ಕೊಡದ್ದಕ್ಕೆ ಚಾಕು ಇರಿಯಲಾಗಿದೆ.

VISTARANEWS.COM

on

By

Murder Case
ಕೊಲೆ ಆರೋಪಿ ವಸೀಂ ಕುರಿತು ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸ್ಕರ್
Koo

ಬೆಂಗಳೂರು: ಬೆಂಗಳೂರಿನ ಬನಶಂಕರಿಯಲ್ಲಿ ಯುವಕನೊಬ್ಬನ (Murder case) ಕೊಲೆಯಾಗಿದೆ. ಸೋಮವಾರ ಮಧ್ಯಾಹ್ನ ಕಾವೇರಿ ನಗರದಲ್ಲಿ (Murder Case) ಘಟನೆ ನಡೆದಿದೆ. ವಿಕ್ರಂ (21) ಮೃತ ದುರ್ದೈವಿ. ರೌಡಿಶೀಟರ್ ವಸಿಂ (28) ಎಂಬಾತ ಕೊಲೆ ಮಾಡಿದ ಆರೋಪಿ ಆಗಿದ್ದಾನೆ.

ಆರೋಪಿ ವಸಿಂನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿಕ್ರಂ ಆರೋಪಿ ವಸೀಂಗೆ ಹಲ್ಲೆ ಮಾಡಿದ್ದ. ಹೀಗಾಗಿ ವಸೀಂ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದ. ಇವತ್ತು ಕಾವೇರಿ ನಗರದ 8ನೇ ಕ್ರಾಸ್‌ನಲ್ಲಿ ವಿಕ್ರಂ ಸ್ನೇಹಿತನ ಜತೆ‌ ನಿಂತಿದ್ದ. ಈ ವೇಳೆ ಚಾಕುವಿನಿಂದ ನೇರ ಎದೆಗೆ ಇರಿದು ವಸೀಂ ಎಸ್ಕೇಪ್ ಆಗಿದ್ದ.

ಕೂಡಲೇ ಗಾಯಾಳು ವಿಕ್ರಂನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆ ನಡೆದು ಕೆಲವೇ ಗಂಟೆಯಲ್ಲಿ ಆರೋಪಿ ವಸೀಂನನ್ನು ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಶಿವಮೊಗ್ಗದಲ್ಲಿ ಅನೈತಿಕ ಸಂಬಂಧಕ್ಕೆ ವ್ಯಕ್ತಿಯ ಭೀಕರ ಹತ್ಯೆ

ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಛಿದ್ರ, ಛಿದ್ರವಾಗಿ ಕೊಲೆ ಮಾಡಿ ನದಿಗೆ ಎಸೆದಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲ್ಲೂಕು ನಾಗೀಹಳ್ಳಿ ಗ್ರಾಮದಲ್ಲಿ ಹತ್ಯೆ ನಡೆದಿದೆ. ಕೃಷ್ಣಪ್ಪ (33) ಕೊಲೆಯಾದ ದುರ್ದೈವಿ. ಕಳೆದ ಮೂರು ದಿನಗಳ ಹಿಂದೆ ಕೃಷ್ಣಪ್ಪ ಅವರ ಪತ್ನಿ ಕಾಣೆಯಾಗಿದ್ದಾರೆ ಎಂದು ಶಿರಾಳಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಆದರೆ ಕಿರಣ್ ಬಂಧನದ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಕೃಷ್ಣಪ್ಪನ ಪತ್ನಿ ಜತೆ ಕಿರಣ್‌ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಕಿರಣನನ್ನು ಕರೆದು ಕೃಷ್ಣಪ್ಪ ಬೈದು ಎಚ್ಚರಿಕೆ ನೀಡಿ ಕಳಿಸಿದ್ದ. ಇದರಿಂದ ಸಿಟ್ಟಾದ ಕಿರಣ್‌ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್‌ ಹಾಗೂ ಗಣೇಶನ ಸಹಾಯ ಪಡೆದು ಕಂದ್ಲಿ, ಕುಡುಗೋಲು ಮತ್ತು ಪ್ಲಾಸ್ಟಿಕ್‌ ಕೊಪ್ಪೆಗಳನ್ನು ಬಳಸಿ ಕೊಲೆ ಮಾಡಿದ್ದಾರೆ.

ಕೃಷ್ಣಪ್ಪನನ್ನು ಕರೆಸಿಕೊಂಡ ಕಿರಣ್‌ ಮಧ್ಯರಾತ್ರಿವರೆಗೂ ಮದ್ಯ ಕುಡಿಸಿದ್ದ. ಬಳಿಕ ಕೊಲೆ ಮಾಡಿದ ಕಿರಣ್ ಹಾಗೂ ಸ್ನೇಹಿತರು ಕೃಷ್ಣಪ್ಪನ ಅಂಗಾಂಗಗಳನ್ನ ಕತ್ತರಿಸಿ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ತುಂಬಿಕೊಂಡಿದ್ದರು. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನು ಹಿಡಿದು ಕೊರಟೆಗೆರೆ , ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್‌ ಬಳಿ ಶವ ಎಸೆದು ಬಳಿಕ ಕಾಲ್ಕಿತ್ತಿದ್ದರು.

ನದಿಗೆ ಎರಡು ಚೀಲದಲ್ಲಿದ್ದ ಕೃ‍ಷ್ಣಪ್ಪನ ಅಂಗಾಂಗಗಳನ್ನು ಎಸೆದು ಕಿರಣ್‌ ಏನು ಆಗದಂತೆ ವಾಪಸ್‌ ಆಗಿದ್ದ. ಆದರೆ ಕಿರಣ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಸದ್ಯ ಎಫ್.ಐ.ಆರ್. ದಾಖಲಿಸಿ ಆರೋಪಿಗಳನ್ನು ಬಂಧಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಸಾವಿರ ರೂ. ಗಾಗಿ ಯುವಕನಿಗೆ ಚಾಕು ಇರಿದ ದುರುಳರು

ದಾವಣಗೆರೆಯ ಚನ್ನಗಿರಿ ತಾಲೂಕಿನ ಗಾಣದಗಟ್ಟೆ ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಬಂದ ಯುವಕನೊರ್ವ ವ್ಯಕ್ತಿಯೊಬ್ಬರಿಗೆ ಹೊಡೆದು ಚಾಕು ಇರಿದಿದ್ದಾನೆ. ಅಣ್ಣಪ್ಪ (45) ಚಾಕು ಇರಿತಕ್ಕೆ ಒಳಗಾದವರು. ಒಂದು ಸಾವಿರ ರೂಪಾಯಿ ಕೊಡದೆ ಇರುವುದಕ್ಕೆ ಗಾಣದಗಟ್ಟೆ ಗ್ರಾಮದ ರಾಕೇಶ್ ಎಂಬಾತ ಚಾಕು ಇರಿದಿದ್ದಾನೆ. ಗಲಾಟೆ ಹಾಗೂ ಚಾಕು ಇರಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ.

ಅಣ್ಣಪ್ಪ ಹಾಗೂ ಸುನೀಲ್ ಎನ್ನುವರು ಇಬ್ಬರು ಸ್ನೇಹಿತರು, ರಾಕಿ ಹತ್ತಿರ ಒಂದು ಸಾವಿರ ಸಾಲ ಪಡೆದಿದ್ದರು. ಎರಡು ತಿಂಗಳಾದರೂ ನೀಡಿಲ್ಲ ಎಂದು ಗಾಣದಗಟ್ಟೆಯಲ್ಲಿ ರಾಕಿ ಜಗಳ ತೆಗೆದಿದ್ದ. ಜಗಳ ಮಾಡುತ್ತಿದ್ದಾಗ ಸ್ನೇಹಿತನ ಪರ ಹೋದ ಅಣ್ಣಪ್ಪ, ಇನ್ನೆರಡು ದಿನಗಳಲ್ಲಿ ನಾನೇ ಸಾವಿರ ರೂಪಾಯಿ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದ.

ಆದರೂ ಒಪ್ಪದೆ, ಹಣನಾ ಸುನೀಲ್ ಕೊಡಬೇಕಿರುವುದು ನೀನು ಅಲ್ಲ ಎಂದು ಜಗಳ ತೆಗೆದಿದ್ದ. ಎರಡು ಗುಂಪುಗಳ‌ ನಡುವೆ ಜಗಳವಾಗಿ ರಾಕೇಶ್ ಅಣ್ಣಪ್ಪನಿಗೆ ಚಾಕು ಇರಿದಿದ್ದಾನೆ. ಸದ್ಯ ಕುಟುಂಬಸ್ಥರು ಅಣ್ಣಪ್ಪನನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಗೆ ದೂರು‌ ನೀಡಿದರೂ ಆರೋಪಿಯನ್ನು ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡದ್ದಕ್ಕೆ ಚಾಕು ಹಾಕಿದ ಸ್ನೇಹಿತ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಬಳಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ಕಾರ್ಯಕ್ರಮದ ವೇಳೆ ನೀನು ನನಗೆ ಅವಕಾಶ ನೀಡಲಿಲ್ಲ ಎಂದು ಮೂವರು ತಕರಾರು ತೆಗೆದಿದ್ದರು. ಅಷ್ಟೇ ಅಲ್ಲದೇ ಗಲಾಟೆ ಕೂಡಾ ಮಾಡಿಕೊಂಡಿದ್ದಾರೆ.

ಗಲಾಟೆ ವಿಕೋಪಕ್ಕೆ ತಿರುಗಿದ್ದು ಆದಿತ್ಯ (26), ಪ್ರಕಾಶ್ (24) ಇವರಿಬ್ಬರಿಗೆ ಆತನ ಸ್ನೇಹಿತ ತಿರುಮಲ (25) ಎಂಬಾತ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಯುವಕರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Murder case : ಶಿವಮೊಗ್ಗದಲ್ಲಿ ಭೀಕರ ಹತ್ಯೆ; ವ್ಯಕ್ತಿಗೆ ಮದ್ಯ ಕುಡಿಸಿ ಬಳಿಕ ದೇಹವನ್ನು ತುಂಡಾಗಿ ಕತ್ತರಿಸಿ ನದಿಗೆ ಎಸೆದ ದುರುಳರು

Murder case : ಶಿವಮೊಗ್ಗದಲ್ಲಿ ಭೀಕರ ಹತ್ಯೆ ನಡೆದಿದೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿಯ ಉಸಿರು ನಿಂತಿದೆ. ವ್ಯಕ್ತಿಗೆ ಕಂಠಪೂರ್ತಿ ಕುಡಿಸಿ ಬಳಿಕ ದೇಹವನ್ನು ಕತ್ತರಿಸಿ ದುರುಳರು ನದಿಗೆ ಎಸೆದಿದ್ದಾರೆ.

VISTARANEWS.COM

on

By

Murder case
Koo

ಶಿವಮೊಗ್ಗ: ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಛಿದ್ರ, ಛಿದ್ರವಾಗಿ ಕೊಲೆ ಮಾಡಿ (Murder Case) ನದಿಗೆ ಎಸೆದಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲ್ಲೂಕು ನಾಗೀಹಳ್ಳಿ ಗ್ರಾಮದಲ್ಲಿ ಹತ್ಯೆ ನಡೆದಿದೆ. ಕೃಷ್ಣಪ್ಪ (33) ಕೊಲೆಯಾದ ದುರ್ದೈವಿ. ಕಳೆದ ಮೂರು ದಿನಗಳ ಹಿಂದೆ ಕೃಷ್ಣಪ್ಪ ಅವರ ಪತ್ನಿ ಕಾಣೆಯಾಗಿದ್ದಾರೆ ಎಂದು ಶಿರಾಳಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಆದರೆ ಕಿರಣ್ ಬಂಧನದ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಕೃಷ್ಣಪ್ಪನ ಪತ್ನಿ ಜತೆ ಕಿರಣ್‌ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಕಿರಣನನ್ನು ಕರೆದು ಕೃಷ್ಣಪ್ಪ ಬೈದು ಎಚ್ಚರಿಕೆ ನೀಡಿ ಕಳಿಸಿದ್ದ. ಇದರಿಂದ ಸಿಟ್ಟಾದ ಕಿರಣ್‌ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್‌ ಹಾಗೂ ಗಣೇಶನ ಸಹಾಯ ಪಡೆದು ಕಂದ್ಲಿ, ಕುಡುಗೋಲು ಮತ್ತು ಪ್ಲಾಸ್ಟಿಕ್‌ ಕೊಪ್ಪೆಗಳನ್ನು ಬಳಸಿ ಕೊಲೆ ಮಾಡಿದ್ದಾರೆ.

ಕೃಷ್ಣಪ್ಪನನ್ನು ಕರೆಸಿಕೊಂಡ ಕಿರಣ್‌ ಮಧ್ಯರಾತ್ರಿವರೆಗೂ ಮದ್ಯ ಕುಡಿಸಿದ್ದ. ಬಳಿಕ ಕೊಲೆ ಮಾಡಿದ ಕಿರಣ್ ಹಾಗೂ ಸ್ನೇಹಿತರು ಕೃಷ್ಣಪ್ಪನ ಅಂಗಾಂಗಗಳನ್ನ ಕತ್ತರಿಸಿ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ತುಂಬಿಕೊಂಡಿದ್ದರು. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನು ಹಿಡಿದು ಕೊರಟೆಗೆರೆ , ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್‌ ಬಳಿ ಶವ ಎಸೆದು ಬಳಿಕ ಕಾಲ್ಕಿತ್ತಿದ್ದರು.

ನದಿಗೆ ಎರಡು ಚೀಲದಲ್ಲಿದ್ದ ಕೃ‍ಷ್ಣಪ್ಪನ ಅಂಗಾಂಗಗಳನ್ನು ಎಸೆದು ಕಿರಣ್‌ ಏನು ಆಗದಂತೆ ವಾಪಸ್‌ ಆಗಿದ್ದ. ಆದರೆ ಕಿರಣ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಸದ್ಯ ಎಫ್.ಐ.ಆರ್. ದಾಖಲಿಸಿ ಆರೋಪಿಗಳನ್ನು ಬಂಧಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಸಾವಿರ ರೂ. ಗಾಗಿ ಯುವಕನಿಗೆ ಚಾಕು ಇರಿದ ದುರುಳರು

ದಾವಣಗೆರೆಯ ಚನ್ನಗಿರಿ ತಾಲೂಕಿನ ಗಾಣದಗಟ್ಟೆ ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಬಂದ ಯುವಕನೊರ್ವ ವ್ಯಕ್ತಿಯೊಬ್ಬರಿಗೆ ಹೊಡೆದು ಚಾಕು ಇರಿದಿದ್ದಾನೆ. ಅಣ್ಣಪ್ಪ (45) ಚಾಕು ಇರಿತಕ್ಕೆ ಒಳಗಾದವರು. ಒಂದು ಸಾವಿರ ರೂಪಾಯಿ ಕೊಡದೆ ಇರುವುದಕ್ಕೆ ಗಾಣದಗಟ್ಟೆ ಗ್ರಾಮದ ರಾಕೇಶ್ ಎಂಬಾತ ಚಾಕು ಇರಿದಿದ್ದಾನೆ. ಗಲಾಟೆ ಹಾಗೂ ಚಾಕು ಇರಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ.

ಅಣ್ಣಪ್ಪ ಹಾಗೂ ಸುನೀಲ್ ಎನ್ನುವರು ಇಬ್ಬರು ಸ್ನೇಹಿತರು, ರಾಕಿ ಹತ್ತಿರ ಒಂದು ಸಾವಿರ ಸಾಲ ಪಡೆದಿದ್ದರು. ಎರಡು ತಿಂಗಳಾದರೂ ನೀಡಿಲ್ಲ ಎಂದು ಗಾಣದಗಟ್ಟೆಯಲ್ಲಿ ರಾಕಿ ಜಗಳ ತೆಗೆದಿದ್ದ. ಜಗಳ ಮಾಡುತ್ತಿದ್ದಾಗ ಸ್ನೇಹಿತನ ಪರ ಹೋದ ಅಣ್ಣಪ್ಪ, ಇನ್ನೆರಡು ದಿನಗಳಲ್ಲಿ ನಾನೇ ಸಾವಿರ ರೂಪಾಯಿ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದ.

ಆದರೂ ಒಪ್ಪದೆ, ಹಣನಾ ಸುನೀಲ್ ಕೊಡಬೇಕಿರುವುದು ನೀನು ಅಲ್ಲ ಎಂದು ಜಗಳ ತೆಗೆದಿದ್ದ. ಎರಡು ಗುಂಪುಗಳ‌ ನಡುವೆ ಜಗಳವಾಗಿ ರಾಕೇಶ್ ಅಣ್ಣಪ್ಪನಿಗೆ ಚಾಕು ಇರಿದಿದ್ದಾನೆ. ಸದ್ಯ ಕುಟುಂಬಸ್ಥರು ಅಣ್ಣಪ್ಪನನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಗೆ ದೂರು‌ ನೀಡಿದರೂ ಆರೋಪಿಯನ್ನು ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡದ್ದಕ್ಕೆ ಚಾಕು ಹಾಕಿದ ಸ್ನೇಹಿತ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಬಳಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ಕಾರ್ಯಕ್ರಮದ ವೇಳೆ ನೀನು ನನಗೆ ಅವಕಾಶ ನೀಡಲಿಲ್ಲ ಎಂದು ಮೂವರು ತಕರಾರು ತೆಗೆದಿದ್ದರು. ಅಷ್ಟೇ ಅಲ್ಲದೇ ಗಲಾಟೆ ಕೂಡಾ ಮಾಡಿಕೊಂಡಿದ್ದಾರೆ.

ಗಲಾಟೆ ವಿಕೋಪಕ್ಕೆ ತಿರುಗಿದ್ದು ಆದಿತ್ಯ (26), ಪ್ರಕಾಶ್ (24) ಇವರಿಬ್ಬರಿಗೆ ಆತನ ಸ್ನೇಹಿತ ತಿರುಮಲ (25) ಎಂಬಾತ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಯುವಕರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತುಮಕೂರು

Self Harming : ತುಮಕೂರಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ; ಸಾಲಗಾರರ ಕಿರುಕುಳಕ್ಕೆ ಮಹಿಳೆ ನೇಣಿಗೆ ಶರಣು

Self Harming : ತುಮಕೂರಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಸಾಲಗಾರರ ಕಿರುಕುಳ ಬೇಸತ್ತು ಮಹಿಳೆಯೊಬ್ಬರು ನೇಣಿಗೆ ಶರಣಾಗಿದ್ದಾರೆ.

VISTARANEWS.COM

on

By

Microfinance crisis in Tumkur Woman commits suicide after being harassed by debtors
Koo

ತುಮಕೂರು: ತುಮಕೂರಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮಂಜುಳಾ (39) ಮೃತಳು.

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಘಟನೆ ನಡೆದಿದೆ.
ಮೈಕ್ರೋ ಫೈನಾನ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದಿದ್ದ ಮಂಜುಳಾ, ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕೃಷ್ಣಾ ನದಿಗೆ ಹಾರಿದ ಯುವತಿಯ ಶವ ಪತ್ತೆ

ಕಳೆದ ಸಪ್ಟೆಂಬರ್ 14ರಂದು ಕೃಷ್ಣಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಳಿಯ ಸೇತುವೆ ಮೇಲಿಂದ ನದಿಗೆ ಹಾರಿದ್ದಳು. ನೆರೆಯ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದ ಬಾಲವ್ವ ಕಮರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಎರಡು ದಿನಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ನದಿಯಿಂದ ಯುವತಿ ಶವ ಹೊರ ತೆಗೆದಿದ್ದಾರೆ. ಯುವತಿ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬಸ್‌ ಡಿಕ್ಕಿಯಾಗಿ ಚಾಲಕ ಸಾವು

ಕಾರಿಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ಚಾಲಕನೊರ್ವ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡದ ಶಿರಸಿ-ಸಿದ್ದಾಪುರ ರಸ್ತೆಯ ಕಾನಗೋಡು ಗ್ರಾಮದ ಬಳಿ ನಡೆದಿದೆ. ಸಿದ್ದಾಪುರ ತಾಲ್ಲೂಕಿನ ಕೊಂಡ್ಲಿ ನಿವಾಸಿ ಚಂದ್ರಶೇಖರ ಬೆಲ್ಲದ್(55) ಮೃತ ದುರ್ದೈವಿ. ಕಾರಿನಲ್ಲಿದ್ದ ಚಂದ್ರಶೇಖರ್ ಅವರ ಪತ್ನಿ ಸುಜಾತಾ ಬೆಲ್ಲದ್‌ಗೂ ಗಾಯವಾಗಿದೆ. ದಂಪತಿ ತಮ್ಮ ಕಾರಿನಲ್ಲಿ ಸಿದ್ದಾಪುರದಿಂದ ಶಿರಸಿಗೆ ಹೊರಟಿದ್ದರು. ಬಸ್ ಶಿರಸಿಯಿಂದ ಸಾಗರಕ್ಕೆ ಹೊರಟಿದ್ದಾಗ ಕಾರಿಗೆ ಬಡಿದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಚಂದ್ರಶೇಖರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

MLA Muniratna: ಜಾತಿ ನಿಂದನೆ ಕೇಸ್‌; ನಾನವನಲ್ಲ.. ನಾನವನಲ್ಲ ಎನ್ನುತ್ತಿರುವ ಶಾಸಕ ಮುನಿರತ್ನ; ವಾಯ್ಸ್‌ ಸ್ಯಾಂಪಲ್‌ ಫೋರೆನ್ಸಿಕ್‌ಗೆ ರವಾನೆ

MLA Muniratna: ಬಿಬಿಎಂಪಿ ಗುತ್ತಿಗೆದಾರನಿಗೆ ಲಂಚ ಕೇಳಿದ್ದಲ್ಲದೇ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದಕ್ಕೆ ಶಾಸಕ ಮುನಿರತ್ನ ಅವರನ್ನು (MLA Muniratna) ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಏನೇ ಪ್ರಶ್ನೆ ಕೇಳಿದರೂ ನಾನವನಲ್ಲ ಎಂಬ ಉತ್ತರವಷ್ಟೇ ಶಾಸಕರಿಂದ ಬರುತ್ತಿದೆ. ಸೋಮವಾರ ಫೋರೆನ್ಸಿಕ್‌ ಲ್ಯಾಬ್‌ಗೆ ಶಾಸಕರ ವಾಯ್ಸ್‌ ಸ್ಯಾಂಪಲ್‌ ರವಾನೆ ಮಾಡಲಾಗಿದ್ದು, ಅನಾರೋಗ್ಯ ಹಿನ್ನೆಲೆ ಮೆಡಿಕಲ್‌ ಚೆಕ್‌ಅಪ್‌ ಕೂಡ ಮಾಡಲಾಗಿದೆ.

VISTARANEWS.COM

on

By

Mla Munirathnas voice sample sent for forensic
Koo

ಬೆಂಗಳೂರು: ಆಂಧ್ರಕ್ಕೆ ಹೋಗುತ್ತಿದ್ದ ಶಾಸಕ‌ ಮುನಿರತ್ನ (MLA Muniratna) ಅವರ ಮೊಬೈಲ್ ನೆಟ್‌ವರ್ಕ್‌ ಟ್ರಾಕ್ ಮಾಡಿ ಬಂಧನ ಮಾಡಲಾಗಿತ್ತು. ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ಸಂಬಂಧ ಶಾಸಕ ಮುನಿರತ್ನ ವಿಚಾರಣೆ ತೀವ್ರಗೊಂಡಿದೆ. ಆದರೆ ಶಾಸಕರು ಮಾತ್ರ ತಮ್ಮ ಎಂದಿನ ಮಾತಿಗೆ ಸ್ಟಿಕ್ ಆನ್ ಆಗಿದ್ದು ನಾನವನಲ್ಲ ಎಂದು ಜಪಿಸುತ್ತಿದ್ದಾರೆ. ಹೀಗಾಗಿ ಶಾಸಕರ ವಿಚಾರಣೆ ಮಾಡುವುದೇ ಪೊಲೀಸರಿಗೆ ತಲೆನೋವಾಗಿದೆ.

ಮುನಿರತ್ನರನ್ನು ಬಂಧನ ಮಾಡುವ ಮುನ್ನ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರನ್ನು ವೈಯಾಲಿಕಾವಲ್‌ನಲ್ಲಿರುವ ಶಾಸಕರ ಕಚೇರಿಯಲ್ಲಿ ಸ್ಥಳ ಮಹಜರು ನಡೆಸಲಾಗಿತ್ತು. ಈ ವೇಳೆ ಶಾಸಕ ಕೂತು ಬೈದ ಸ್ಥಳ , ಹಲ್ಲೆ ಮಾಡಿದ್ದ ಸ್ಥಳದ ಬಗ್ಗೆ ವಿವರಣೆ ನೀಡಿದ್ದರು. ಆದರೆ ಮುನಿರತ್ನ ಅವರ ಸ್ಥಳ ಮಹಜರು ಪ್ರಕ್ರಿಯೆ ನಡೆದಿಲ್ಲ. ಅದೆಲ್ಲಾದಕ್ಕೂ ಹೆಚ್ಚಾಗಿ ನಾನವನಲ್ಲ ಎಂಬ ಉತ್ತರಕ್ಕೆ ಕಟ್ಟುಬಿದ್ದಿದ್ದಾರೆ.

ಶಾಸಕ ಮುನಿರತ್ನಗೆ ಸುಮಾರು ಮೂವತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಆದರೆ ಅದಕ್ಕೆ ತಕ್ಕುದಾದ ಸ್ಪಷ್ಟನೆ ಶಾಸಕರಿಂದ ಸಿಗುತ್ತಿಲ್ಲ. ಇನ್ನು ಇದೆಲ್ಲಾ ರಾಜಕೀಯ ಷಡ್ಯಂತ್ರ, ನನ್ನ ದನಿಯನ್ನು ಮಾನ್ಯೂಪ್ಲೇಟ್ ಮಾಡಲಾಗಿದೆ ಎಂಬ ಮಾತಿಗೆ ನಿಂತಿದ್ದಾರೆ. ಇನ್ನು ಸೋಮವಾರ ಅಶೋಕನಗರ ಪೊಲೀಸ್ ಠಾಣೆಗೆ ಫೋರೆನ್ಸಿಕ್ ಎಕ್ಸ್‌ಪರ್ಟಸ್‌ ಕೂಡ ಆಗಮಿಸಿದ್ದರು. ಶಾಸಕ ಮುನಿರತ್ನ ಅವರ ವಾಯ್ಸ್ ಸ್ಯಾಂಪಲ್ ಕೂಡ ಕಲೆಕ್ಟ್ ಮಾಡಿಕೊಂಡರು. ಈ ವಾಯ್ಸ್ ಸ್ಯಾಂಪಲ್‌ನಿಂದ ಮಾತ್ರ ಆಡಿಯೋ ಅಸಲಿಯತ್ತು ತಿಳಿಯಲಿದೆ

ಸದ್ಯ ಎರಡು ದಿನದ ಪೊಲೀಸ್ ಕಷ್ಟಡಿ ಅಂತ್ಯವಾಗಲಿದೆ. ಅಷ್ಟರಲ್ಲಿ ಆದಷ್ಟು ಬೇಗ ಮುನಿರತ್ನ ಅವರ ಸ್ಟೇಟ್ಮೆಂಟ್ ಪಡೆಯಬೇಕಿದೆ. ಸೋಮವಾರ ಮುನಿರತ್ನ ಮೆಡಿಕಲ್ ಚೆಕ್‌ಅಪ್‌ಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ನನಗೆ ಆರೋಗ್ಯ ಸಮಸ್ಯೆ ಇದೆ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ ಎಂದು ಜಡ್ಜ್ ಬಳಿ ಮುನಿರತ್ನ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಮುನಿರತ್ನಗೆ ಮೆಡಿಕಲ್ ಟೆಸ್ಟ್ ಮಾಡಿಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Dina bhavishya
ಭವಿಷ್ಯ2 hours ago

Dina Bhavishya : ಕುಟುಂಬದ ಸದಸ್ಯರಿಂದ ರಹಸ್ಯ ಸುದ್ದಿಯೊಂದು ಅಚ್ಚರಿ ತರುವುದು

Murder Case
ಬೆಂಗಳೂರು10 hours ago

Murder case : ಬನಶಂಕರಿಯಲ್ಲಿ ಚಾಕು ಇರಿದು ಯುವಕನ‌ ಕೊಲೆ ಮಾಡಿದ ರೌಡಿಶೀಟರ್‌

Murder case
ಶಿವಮೊಗ್ಗ10 hours ago

Murder case : ಶಿವಮೊಗ್ಗದಲ್ಲಿ ಭೀಕರ ಹತ್ಯೆ; ವ್ಯಕ್ತಿಗೆ ಮದ್ಯ ಕುಡಿಸಿ ಬಳಿಕ ದೇಹವನ್ನು ತುಂಡಾಗಿ ಕತ್ತರಿಸಿ ನದಿಗೆ ಎಸೆದ ದುರುಳರು

Microfinance crisis in Tumkur Woman commits suicide after being harassed by debtors
ತುಮಕೂರು11 hours ago

Self Harming : ತುಮಕೂರಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ; ಸಾಲಗಾರರ ಕಿರುಕುಳಕ್ಕೆ ಮಹಿಳೆ ನೇಣಿಗೆ ಶರಣು

Mla Munirathnas voice sample sent for forensic
ಬೆಂಗಳೂರು13 hours ago

MLA Muniratna: ಜಾತಿ ನಿಂದನೆ ಕೇಸ್‌; ನಾನವನಲ್ಲ.. ನಾನವನಲ್ಲ ಎನ್ನುತ್ತಿರುವ ಶಾಸಕ ಮುನಿರತ್ನ; ವಾಯ್ಸ್‌ ಸ್ಯಾಂಪಲ್‌ ಫೋರೆನ್ಸಿಕ್‌ಗೆ ರವಾನೆ

Rowdy-sheeter stripped young man naked and assaulted
ಬೆಂಗಳೂರು14 hours ago

Assault Case : ಯುವಕನ ಬೆತ್ತಲೆಗೊಳಿಸಿ ನಡುರಸ್ತೆಯಲ್ಲೆ ಅಟ್ಟಾಡಿಸಿ ಹೊಡೆದ ರೌಡಿಶೀಟರ್‌! ವಿಡಿಯೊ ಮಾಡಿ ಪುಂಡಾಟ

assault case
ಬೆಂಗಳೂರು15 hours ago

Assault Case : ಲಾಠಿ ಏಟಿಗೆ ಜೀವ ಬಿಟ್ಟನಾ? ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ರಾ ಪೊಲೀಸರು!

Road Accident
ಬೆಂಗಳೂರು ಗ್ರಾಮಾಂತರ16 hours ago

Road Accident : ಲಾರಿ ಡಿಕ್ಕಿ ಹೊಡೆದು ಬೈಕ್‌ ನಜ್ಜುಗುಜ್ಜು; ಸ್ಥಳದಲ್ಲೇ ಪ್ರಾಣಬಿಟ್ಟ ಸವಾರ, ಮತ್ತೋರ್ವ ಗಂಭೀರ

karnataka weather forecast
ಮಳೆ1 day ago

Karnataka Weather : ಇಂದು ಕರಾವಳಿಯಲ್ಲಿ ಸಾಧಾರಣ ಮಳೆ; ಉಳಿದೆಡೆ ಮುಂದುವರಿಯಲಿದೆ ಒಣಹವೆ

dina bhavishya
ಭವಿಷ್ಯ1 day ago

Dina Bhavishya : ಮುಂಗೋಪದಿಂದ ಈ ರಾಶಿಯವರಿಗೆ ನಷ್ಟವೇ ಹೆಚ್ಚು; ಈ ದಿನ ಮೌನದಿಂದ ಇರುವುದೇ ಒಳಿತು

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 year ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌