Minors love tragedy : ಲಾರಿಯಡಿಗೆ ಬಿದ್ದು ಭಗ್ನಪ್ರೇಮಿ ಬಾಲಕ, 10ನೇ ತರಗತಿ ವಿದ್ಯಾರ್ಥಿನಿಯ ಜತೆಗೆ ಇತ್ತಾ ಪ್ರೇಮ ಪ್ರಕರಣ? - Vistara News

ಕರ್ನಾಟಕ

Minors love tragedy : ಲಾರಿಯಡಿಗೆ ಬಿದ್ದು ಭಗ್ನಪ್ರೇಮಿ ಬಾಲಕ, 10ನೇ ತರಗತಿ ವಿದ್ಯಾರ್ಥಿನಿಯ ಜತೆಗೆ ಇತ್ತಾ ಪ್ರೇಮ ಪ್ರಕರಣ?

Love tragedy : ಇನ್ನೂ ಕಲಿಕೆಯ ಬಗ್ಗೆ ಯೋಚಿಸಬೇಕಾದ, ಆಟವಾಡಿಕೊಂಡಿರಬೇಕಾದ ಮಕ್ಕಳು ಪ್ರೇಮ, ಕಾಮದ ಬಲೆಗೆ ಬಿದ್ದರೆ ದುರಂತಗಳೇ ಸಂಭವಿಸುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ.

VISTARANEWS.COM


on

Love story
ಕಣ್ಣೀರು ಹಾಕುತ್ತಿರುವ ಮೃತ ಬಾಲಕನ ಕುಟುಂಬ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಬಳ್ಳಾಪುರ: ಇನ್ನೂ ಜಗತ್ತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದ ವಯಸ್ಸಿನಲ್ಲೇ ಪ್ರೀತಿ, ಕಾಮದ ಬಲೆಗೆ ಬಿದ್ದು ನರಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಂಥಹುದೇ ವಿಕೃತ ಮನೋಸ್ಥಿತಿಗೆ ಒಳಗಾಗಿ ಇನ್ನೂ 17ರ ವಯಸ್ಸಿನಲ್ಲೇ ಭಗ್ನ ಪ್ರೇಮದ ನೋವನ್ನು ಅನುಭವಿಸಿದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ ಬಾಲಕ ಹೆದ್ದಾರಿಯಲ್ಲಿ ಲಾರಿಯಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ರಾಷ್ಟ್ರೀಯ ಹೆದ್ದಾರಿ 44ರ ಯರ್ರಲಕ್ಕೇನಹಳ್ಳಿ ಕ್ರಾಸ್ ಬಳಿ ಲಾರಿಯಡಿ ಬಿದ್ದು ಪ್ರಾಣ ಕಳೆದುಕೊಂಡಿರುವ ಬಾಲಕನನ್ನು ಬೀಚಗಾನಹಳ್ಳಿ ಗ್ರಾಮದ ಮನೋಹರ್ (17) ಎಂದು ಗುರುತಿಸಲಾಗಿದೆ.

ಮನೋಹರ್‌ ಪಿಯುಸಿ ಓದುತ್ತಿದ್ದು, ಆತ ಬೀಚಗಾನಹಳ್ಳಿಯ ಕಸ್ತೂರ್ಬಾ ಆರ್.ಎಂ.ಎಸ್.ಎ ವಸತಿ ಶಾಲೆಯ ವಿದ್ಯಾರ್ಥಿನಿ‌ಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ ಎನ್ನಲಾಗಿದೆ.

ಆತನ ಕೈಯನ್ನು ಬ್ಲೇಡಿನಿಂದ ಕೊಯ್ಯಲಾಗಿದ್ದು, ಆತ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ಲಾರಿಯಡಿಗೆ ಜಿಗಿದನೇ ಎನ್ನು ಪ್ರಶ್ನೆಗಳಿವೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಯರ್ರಲಕ್ಕೇನಹಳ್ಳಿ ಕ್ರಾಸ್‌ನಲ್ಲಿ ನಡೆದ ಈ ಘಟನೆಯ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರಿಬ್ಬರ ಚಿತ್ರಗಳು ವೈರಲ್‌ ಆಗಿದ್ದವು..

ಸ್ಥಳೀಯರು ಹೇಳುವ ಪ್ರಕಾರ ವಿದ್ಯಾರ್ಥಿನಿ ವಾಸವಾಗಿರುವ ಹಾಸ್ಟೆಲ್‌ನ ಅವ್ಯವಸ್ಥೆಯೇ ಮಕ್ಕಳು ದಾರಿ ತಪ್ಪಲು ಕಾರಣ. ಕಸ್ತೂರ್ಬಾ ಹಾಸ್ಟೆಲ್‌ ನಿರ್ಗತಿಕ ಹೆಣ್ಮಕ್ಕಳಿಗಾಗಿ ರೂಪಿಸಿದ್ದು. ಆದರೆ, ಇಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎನ್ನಲಾಗುತ್ತಿದೆ. ಕೆಲವು ಸಮಯದ ಹಿಂದೆ ಇಲ್ಲಿನ ಹಾಸ್ಟೆಲ್‌ಗೆ ಆಗಾಗ ಹುಡುಗರು ಹೋಗಿ ಚುಡಾಯಿಸಿದ ಘಟನೆಗಳು ನಡೆದಿದ್ದವು. ಅದಷ್ಟೇ ಅಲ್ಲ, ಇದೇ ಬಾಲಕ ಹಾಸ್ಟೆಲ್‌ಗೆ ಹೋಗಿ ವಿದ್ಯಾರ್ಥಿನಿಯ ಜತೆಗೆ ಮಲಗಿಕೊಂಡು ತೆಗೆದ ಚಿತ್ರಗಳು ವೈರಲ್‌ ಆಗಿದ್ದವು. ಈ ಚಿತ್ರಗಳನ್ನು ನೋಡಿದ ಸಾರ್ವಜನಿಕರು ಇದೇನು ಹಾಸ್ಟೆಲಾ? ಕ್ಲಬ್ಬಾ ಎಂದು ಪ್ರಶ್ನಿಸಿದ್ದರು. ಇದೀಗ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಆತನ ತಂದೆ ಹಿಂದೆಯೇ ತೀರಿಕೊಂಡಿದ್ದು, ತಾಯಿ ಮಾತ್ರ ಇದ್ದಾರೆ. ಅಪ್ರಾಪ್ತರು ಹಾದಿ ತಪ್ಪಿದರೆ ಆಗುವ ದುರಂತಕ್ಕೆ ಇದು ಒಂದು ಉದಾಹರಣೆ.

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

ಬೆಂ.ಗ್ರಾಮಾಂತರ: ತಮಿಳುನಾಡಿನ ಹೊಸೂರು ಸಮೀಪದ ಬಾಗಲೂರಿನ ಕೆರೆಯಲ್ಲಿ ಮುಳುಗಿ (Drown in lake) ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೆರೆಯಲ್ಲಿ ಈಜಲು ತೆರಳಿದ್ದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ.

ಬಾಗಲೂರು ಗ್ರಾಮದ ವಿನೋದ್ ಸಿಂಗ್, ಶಶಾಂಕ್ ಮೃತ ಬಾಲಕರು. ವಿಷಯ ತಿಳಿದು ಬಾಗಲೂರು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಬಾಗಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿರುಪತಿಯಿಂದ ಮರಳುತ್ತಿದ್ದಾಗ ಅಪಘಾತ; ಕೆಜಿಎಫ್‌ ದಂಪತಿ ಸ್ಥಳದಲ್ಲೇ ಸಾವು

ಕೋಲಾರ: ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆ ಚಂದ್ರಗಿರಿ-ಕಾಸಿಪಂಟ್ಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road accident) ಕೆಜಿಎಫ್‌ ಮೂಲದ ದಂಪತಿ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಡಿಕ್ಕಿಯ ಹೊಡೆತಕ್ಕೆ ಕಾರು ನುಚ್ಚುನೂರಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್‌ನ ದಂಪತಿಗಳಾದ ಗೋಪಿನಾಥ್ ಮತ್ತು ಶ್ಯಾಮಲಾ ಅವರು ತಿರುಪತಿಗೆ ಹೋಗಿದ್ದರು. ತಿರುಪತಿಯಲ್ಲಿ ದೇವರ ದರ್ಶ ಮುಗಿಸಿ ಹಿಂದಿರುಗುವಾಗ ಅಪಘಾತ ನಡೆದಿದೆ. ಚಂದ್ರಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Karnataka Election 2023 : ಕಾಂಗ್ರೆಸ್‌ಗೆ ರಘು ಆಚಾರ್‌ ರಾಜೀನಾಮೆ; ಚಿತ್ರದುರ್ಗದಲ್ಲಿ ಜೆಡಿಎಸ್‌ ಬಲಪಡಿಸಲು ಪ್ರಯತ್ನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

CH Vijayashankar: ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

VISTARANEWS.COM


on

CH Vijayashankar
Koo

ಮೈಸೂರು: ಮೇಘಾಲಯದ (Meghalaya) ರಾಜ್ಯಪಾಲರಾಗಿ (Meghalaya Governor) ರಾಜ್ಯದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ (CH Vijayashankar) ಅವರನ್ನು ನೇಮಕ ಮಾಡಲಾಗಿದೆ.

ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ವಿಜಯಶಂಕರ್‌ ಅವರನ್ನು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಆದೇಶ ಹೊರಡಿಸಿದ್ದಾರೆ. ನಿನ್ನೆ ತಡರಾತ್ರಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಜಯಶಂಕರ್‌ ಅವರು ಮೈಸೂರಿನ ಮಾಜಿ ಸಂಸದ ಹಾಗೂ ಮಾಜಿ ಸಚಿವರಾಗಿದ್ದಾರೆ.

ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 1994ರಲ್ಲಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ 12ನೇ ಲೋಕಸಭೆಗೆ ಆಯ್ಕೆಯಾದರು. ಮೈಸೂರಿನ ಒಡೆಯರ್ ರಾಜವಂಶದ ಮುಖ್ಯಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಿಂತು ಮರು ಆಯ್ಕೆಯಾದರು.

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಅರಣ್ಯ, ಪರಿಸರ ಇಲಾಖೆ, ಸಣ್ಣ ಪ್ರಮಾಣದ ಕೈಗಾರಿಕೆಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 15 ಜೂನ್ 2010ರಿಂದ ಜನವರಿ 2016ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

6 ಮಂದಿ ನೂತನ ರಾಜ್ಯಪಾಲರ ನೇಮಕ

ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಸಂತೋಷ್‌ ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಒ.ಪಿ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ಸರ್ಕಾರ ಮೂವರು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ. ಪಂಜಾಬ್‌ನಲ್ಲಿ ಭಗವಂತ ಮಾನ್‌ ನೇತೃತ್ವದ ಎಎಪಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ಸ್ಥಾನಕ್ಕೆ ಅಸ್ಸಾಂನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ನೇಮಿಸಲಾಗಿದೆ. ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಜತೆಗೆ ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್‌

Continue Reading

ಕ್ರೈಂ

Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

Police Firing: ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ‌‌ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

VISTARANEWS.COM


on

rowdysheeters police firing
Koo

ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdysheeters) ಮೇಲೆ ಕನಕಪುರ ನಗರ ಪೊಲೀಸರು (Kanakapura Police) ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನ ಕೈ ಕತ್ತರಿಸಿ (Assault Case) ಪರಾರಿಯಾಗಿದ್ದ ರೌಡಿಗಳನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್ಐ ಮನೋಹರ್ ಅವರಿಂದ ಫೈರಿಂಗ್ ನಡೆದಿದೆ. ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಗಾಯಗೊಂಡ ರೌಡಿಶೀಟರ್‌ಗಳು. ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದೆ.

ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ‌‌ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಮುಂಜಾನೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಈ ರೌಡಿಗಳು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಅವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಎಂಬವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

ರಾಯಚೂರು: ವಿಚ್ಛೇದಿತ ನರ್ಸ್‌ ಒಬ್ಬಾಕೆಯೊಂದಿಗೆ ಲವ್ವಿ ಡವ್ವಿ (Illicit Relationship) ಹೊಂದಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ (Police constable) ಒಬ್ಬಾತನಿಗೆ ಆತನ ಪತ್ನಿ ಕಾನೂನು ಅಸ್ತ್ರದ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ. ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.

ಸಿರವಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಎಂಬಾತನ ಮೇಲೆ ಆತನ ಪತ್ನಿಯಿಂದ ಕೇಸು ಬಿದ್ದಿದೆ. ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೇದೆ ಆಗಿರುವ ಪ್ಯಾರಿ ಬೇಗಂ ಎಂಬಾಕೆ ಈತನ ಪತ್ನಿ ಹಾಗೂ ದೂರು ಸಲ್ಲಿಸಿದವರು. ರಾಜ್ ಮಹಮ್ಮದ್ ಮತ್ತು ಪ್ಯಾರಿ‌ ಬೇಗಂ ಪ್ರೀತಿಸಿ ಮದುವೆಯಾದವರು. ಆದರೆ ಇತ್ತೀಚೆಗೆ ರಾಜ್‌ ಮಹಮ್ಮದ್‌ ಇನ್ನೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.

ಕವಿತಾ ಆಸ್ಪತ್ರೆ ನರ್ಸ್ ಸರಳ ಎಂಬಾಕೆಯ ಜೊತೆ ಸುಮಾರು 4-5 ವರ್ಷಗಳಿಂದ ವಿವಾಹೇತರ ಸಂಬಂಧ ನಡೆಸಿದ್ದ. ಇವರಿಬ್ಬರನ್ನೂ ಮನೆಯೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಪ್ಯಾರಿ ಬೇಗಂ ಹಿಡಿದಿದ್ದರು. ಬಳಿಕ ಪೊಲೀಸರಿಗೆ ಒಪ್ಪಿಸಿ ಪತಿ ವಿರುದ್ಧವೇ ಎಸ್ಪಿಗೆ ದೂರು ನೀಡಿದ್ದಾರೆ. ಎಸ್‌ಪಿಯನ್ನು ಭೇಟಿ ಮಾಡಿ, ‌ಬಳಿಕ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜ್ ಮಹಮ್ಮದ್, ರಿಜಿಯಾ ಬೇಗಂ, ಮೈಬೂಬ್ ಮತ್ತು ಸ್ಟಾಫ್ ನರ್ಸ್ ಸರಳ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗರ್ಭಪಾತ, ವರದಕ್ಷಿಣೆ ಕಿರುಕುಳ (Dowry harassment), ಕೊಲೆ ಯತ್ನ (Murder attempt) ಸೇರಿದಂತೆ ಹಲವು ಆರೋಪಗಳನ್ನು ಗಂಡನ ವಿರುದ್ಧ ಪ್ಯಾರಿ ಬೇಗಂ ನೀಡಿದ್ದಾರೆ.

ಇದನ್ನೂ ಓದಿ: Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Continue Reading

ದೇಶ

New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್‌

New Governors: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಈ ಪೈಕಿ ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ನೇಮಕವಾಗಿದ್ದಾರೆ. ಹೊಸ ರಾಜ್ಯಪಾಲರ ಪಟ್ಟಿ ಇಲ್ಲಿದೆ.

VISTARANEWS.COM


on

New Governors
Koo

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ (New Governors). ಜತೆಗೆ ಮೂವರು ರಾಜ್ಯಪಾಲರನ್ನು ಬೇರೆಡೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ನೇಮಕವಾಗಿದ್ದಾರೆ. ಇನ್ನು ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಮಣಿಪುರದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ. ಬನ್ವಾರಿಲಾಲ್ ಪುರೋಹಿತ್ ಅವರ ಬದಲಿಗೆ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ.

ಇನ್ನು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಾಧಿಕಾರಿಯಾಗಿ ಗುಲಾಬ್ ಚಂದ್ ಕಟಾರಿಯಾ ಅವರನ್ನೇ ನೇಮಕ ಮಾಡಲಾಗಿದೆ. ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢದ ಆಡಳಿತಾಧಿಕಾರಿ ಹುದ್ದೆಗೆ ಬನ್ವಾರಿಲಾಲ್ ಪುರೋಹಿತ್ ಅವರು ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ್ದು, ರಾಷ್ಟ್ರಪದಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. 83 ವರ್ಷದ ಬನ್ವಾರಿಲಾಲ್ ಪುರೋಹಿತ್ ತಮ್ಮ ರಾಜೀನಾಮೆ ಪತ್ರದಲ್ಲಿ, “ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳಿಂದಾಗಿ ನಾನು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ರಾಜ್ಯಪಾಲ ಮತ್ತು ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆʼʼ ಎಂದು ತಿಳಿಸಿದ್ದರು.

ಸಿಕ್ಕಿಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಮತ್ತು ಹೆಚ್ಚುವರಿಯಾಗಿ ಮಣಿಪುರದ ಜವಾಬ್ದಾರಿಯನ್ನು ಸಹ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅನುಸೂಯಾ ಉಕ್ಯೆ ಅವರು ಕಳೆದ ವರ್ಷ ಫೆಬ್ರವರಿಯಿಂದ ಮಣಿಪುರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಜೆಪಿ ಹಿರಿಯ ನಾಯಕ ಓಂ ಪ್ರಕಾಶ್ ಮಾಥುರ್ ಅವರನ್ನು ಸಿಕ್ಕಿಂನ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತೆಲಂಗಾಣದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದ ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಮಹಾರಾಷ್ಟ್ರದ ಜಬಾಬ್ದಾರಿ ನೀಡಲಾಗಿದೆ. ಕೇಂದ್ರದ ಮಾಜಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನಿಯುಕ್ತಿಗೊಳಿಸಲಾಗಿದೆ.

ತ್ರಿಪುರಾದ ಮಾಜಿ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹ ಸಹಾಯಕರಲ್ಲಿ ಒಬ್ಬರಾದ ಮಾಜಿ ಐಎಎಸ್ ಅಧಿಕಾರಿ ಕೆ.ಕೈಲಾಶ್‌ನಾಥನ್‌ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೈಲಾಶ್‌ನಾಥನ್‌ ಜೂನ್ 30ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹರಿಭಾವು ಕಿಸಾನ್ ರಾವ್ ಬಾಗ್ಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅಸ್ಸಾಂನ ಮಾಜಿ ಲೋಕಸಭಾ ಸದಸ್ಯ ರಾಮನ್ ದೇಕಾ ಅವರನ್ನು ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ರಾಜ್ಯ ಹೊಸ ರಾಜ್ಯಪಾಲರು
ಮೇಘಾಲಯಸಿ.ಎಚ್.ವಿಜಯ ಶಂಕರ್
ರಾಜಸ್ಥಾನಹರಿಭಾವು ಕಿಸಾನ್ ರಾವ್ ಬಾಗ್ಡೆ
ತೆಲಂಗಾಣಜಿಷ್ಣು ದೇವ್ ವರ್ಮಾ
ಸಿಕ್ಕಿಂಓಂ ಪ್ರಕಾಶ್ ಮಾಥುರ್
ಜಾರ್ಖಂಡ್ಸಂತೋಷ್ ಕುಮಾರ್ ಗಂಗ್ವಾರ್
ಛತ್ತೀಸ್‌ಗಢರಾಮನ್ ದೇಕಾ
ಮಹಾರಾಷ್ಟ್ರಸಿ.ಪಿ. ರಾಧಾಕೃಷ್ಣನ್
ಪಂಜಾಬ್ಗುಲಾಬ್ ಚಂದ್ ಕಟಾರಿಯಾ
ಅಸ್ಸಾಂ, ಮಣಿಪುರಲಕ್ಷ್ಮಣ್ ಪ್ರಸಾದ್ ಆಚಾರ್ಯ

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Continue Reading

ಪ್ರಮುಖ ಸುದ್ದಿ

Karnataka Rain News: ತುಂಬಿ ಬರಿಯುತ್ತಿರುವ ಕೃಷ್ಣಾ, ಘಟಪ್ರಭಾ; ಸೇತುವೆ ಮುಳುಗಡೆ, ನಡುಗಡ್ಡೆಯಿಂದ ಗರ್ಭಿಣಿಯರ ಸ್ಥಳಾಂತರ

Karnataka Rain News: ಕೃಷ್ಣಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹದ ಪರಿಸ್ಥಿತಿ ಉದ್ಭವವಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸುಕ್ಷೇತ್ರ ವೀರಭದ್ರ ದೇವಾಲಯ ಜಲಾವೃತಗೊಂಡಿದೆ. ರಾತ್ರಿ 11 ಗಂಟೆಗೆ ದೇವಸ್ಥಾ ಪ್ರಾಂಗಣದಲ್ಲಿ ಕೃಷ್ಣೆಯ ನೀರು ತುಂಬಿಕೊಂಡಿದೆ.

VISTARANEWS.COM


on

karnataka rain news yadgir
Koo

ಚಿಕ್ಕೋಡಿ: ಉತ್ತರ ಕರ್ನಾಟಕದಲ್ಲಿ (Uttara Karnataka) ಹೆಚ್ಚಿರುವ ಮಳೆಯ (Karnataka Rain News) ಪರಿಣಾಮ ಕೃಷ್ಣಾ (Krishna River) ಹಾಗೂ ಘಟಪ್ರಭಾ ನದಿಗಳಲ್ಲಿ (Ghataprabha river) ಪ್ರವಾಹ ಪರಿಸ್ಥಿತಿ (Flood situation) ಉಂಟಾಗಿದೆ. ಸೇತುವೆಗಳು ಮುಳುಗಿ ರಸ್ತೆಗಳು ಜಲಾವೃತಗೊಂಡು ಹಲವಾರು ನಡುಗಡ್ಡೆಗಳು ಸಂಪರ್ಕ ಕಳೆದುಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಡುಗಡ್ಡೆಗಳಿಂದ ಗರ್ಭಿಣಿಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಕೃಷ್ಣಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹದ ಪರಿಸ್ಥಿತಿ ಉದ್ಭವವಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸುಕ್ಷೇತ್ರ ವೀರಭದ್ರ ದೇವಾಲಯ ಜಲಾವೃತಗೊಂಡಿದೆ. ರಾತ್ರಿ 11 ಗಂಟೆಗೆ ದೇವಸ್ಥಾ ಪ್ರಾಂಗಣದಲ್ಲಿ ಕೃಷ್ಣೆಯ ನೀರು ತುಂಬಿಕೊಂಡಿದೆ. ವೀರಭದ್ರ ಶಿವಲಿಂಗ ಜಲಾವೃತವಾಗಿದ್ದು, ಮೊಳಕಾಲು ಆಳದ ನೀರಿನಲ್ಲಿ ವೀರಭದ್ರ ದೇವರಿಗೆ ಮಂಗಳಾರತಿ ಮಾಡಲಾಯಿತು.

ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಇರುವ ಸುಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಕೃಷ್ಣಾ ನದಿಯ ನೀರು ತುಂಬಿರುವುದರಿಂದ ದೂರದಿಂದಲೇ ದರ್ಶನ ಪಡೆಯುತ್ತಿದ್ದಾರೆ.

ಗರ್ಭಿಣಿಯರ ಸ್ಥಳಾಂತರ

ಯಾದಗಿರಿ: ಕೃಷ್ಣಾ ನದಿಯ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣಾ ನದಿಯ ಮಧ್ಯ ಭಾಗದಲ್ಲಿರುವ ನೀಲಕಂಠರಾಯನ ಗಡ್ಡಿ ನಡುಗಡ್ಡೆಯಾಗಿದೆ. ನಡುಗಡ್ಡೆಯಲ್ಲಿದ್ದ ಗರ್ಭಿಣಿಯರನ್ನು ಆಚೆ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ತಹಶೀಲ್ದಾರ ವಿಜಯಕುಮಾರ್ ಭೇಟಿ ನೀಡಿ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿಸಿ ನಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ನಡುಗಡ್ಡೆಗೆ ತೆರಳಲು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾದ ಸೇತುವೆ ಇದೆ. ಆದರೆ ಕೃಷ್ಣಾ ನದಿಗೆ ಹೆಚ್ಚು ನೀರು ಬಿಟ್ಟರೆ ಸೇತುವೆ ಮುಳುಗಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿ ಮೂವರು ಗರ್ಭಿಣಿಯರನ್ನು ಸ್ಥಳಾಂತರಿಸಲಾಗಿದೆ.

9 ವರ್ಷದ ಹಿಂದೆ ಹೀಗೆಯೇ ಕೃಷ್ಣಾ ನದಿ ಪ್ರವಾಹ ಬಂದಿದ್ದಾಗ, ಗರ್ಭಿಣಿಯಾಗಿದ್ದ ಇದೇ ಗ್ರಾಮದ ಯಲ್ಲವ್ವ ಎಂಬಾಕೆ ನದಿ ಪ್ರವಾಹ ಈಜಿ ದಡ ಸೇರಿದ್ದರು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಈಗಾಗಲೇ ಮುಂಜಾಗ್ರತೆ ವಹಿಸಿ ಗರ್ಭಿಣಿಯರ ಸ್ಥಳಾಂತರ ಮಾಡಿದೆ ಜಿಲ್ಲಾಡಳಿತ.

ಬಾಗಲಕೋಟೆ: ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಮುಧೋಳ ಬಳಿಯ ಯಾದವಾಡ ಸೇತುವೆ ಮುಳುಗಡೆಯಾಗಿದೆ.

ಸೇತುವೆ ಮೇಲೆ 2 ಅಡಿ ನೀರಿನ ಹರಿವಿದ್ದು, ಅದೇ ನೀರಲ್ಲೇ ವಾಹನಗಳು ಸಂಚರಿಸುತ್ತಿವೆ. ಇದು ಮುಧೋಳ ನಗರದಿಂದ ಗೋಕಾಕ ತಾಲ್ಲೂಕಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಬ್ರಿಡ್ಜ್ ಮೇಲೆ ಹೆಚ್ಚಿನ ನೀರು ಬಂದಲ್ಲಿ ಯಾದವಾಡ, ಉತ್ತೂರು, ಚನ್ನಾಳ, ಮಿರ್ಜಿ, ರಂಜಣಗಿ, ಒಂಟಗೋಡಿ, ರೂಗಿ, ಹಲಕಿ, ನಿಂಗಾಪುರ, ಮೆಟಗುಡ್ಡ ಗ್ರಾಮ ಸಂಪರ್ಕ ಕಡಿತವಾಗಲಿವೆ.

ಮಟನ್‌ ಮಾರ್ಕೆಟ್‌ಗೆ ಘಟಪ್ರಭಾ ನೀರು

ಬೆಳಗಾವಿ: ಗೋಕಾಕದ ಮಟನ್ ಮಾರ್ಕೇಟ್‌ಗೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಈ ಹಿನ್ನೆಲೆ ಗಾಡಿಯಲ್ಲಿಟ್ಟು ಮಟನ್ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ನಗರಸಭೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ ನಗರಸಭೆ ಸಿಬ್ಬಂದಿ ಹಾಗೂ ವ್ಯಾಪಾರಸ್ಥರ ನಡುವೆ ವಾಗ್ವಾದ ಘಟಿಸಿತು.

ನೀರು ಬಂದಿರುವ ಪಕ್ಕದ ಜಾಗದಲ್ಲಿಯೇ ವ್ಯಾಪಾರಸ್ಥರು ಮಟನ್ ಮಾರಾಟ ಮಾಡುತ್ತಿದ್ದಾರೆ. ಬೇರೆ ಕಡೆ ಮಾರಾಟ ಮಾಡಿ ನೀರು ಬಂದಿರುವ ಕಡೆ ಬೇಡ ಎಂದು ನಗರಸಭೆ ಸಿಬ್ಬಂದಿ ಹೇಳಿದ್ದು, ನಮಗೆ ಬೇರೆ ಕಡೆ ಜಾಗವನ್ನಾದರೂ ತೋರಿಸಿ ಎಂದು ವ್ಯಾಪಾರಸ್ಥರು ಪಟ್ಟು ಹಿಡಿದರು.

ಇದನ್ನೂ ಓದಿ: Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

Continue Reading
Advertisement
IND vs SL
ಕ್ರೀಡೆ24 mins ago

IND vs SL: ಗ್ಲೆನ್​ ಮ್ಯಾಕ್ಸ್​ವೆಲ್​ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್

Gold Rate Today
ಚಿನ್ನದ ದರ38 mins ago

Gold Rate Today: ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ? ಇಂದಿನ ಬೆಲೆ ಚೆಕ್‌ ಮಾಡಿ

Bigg Boss OTT 3 Anil Kapoor as the worst ever host of Bigg Boss
ಬಿಗ್ ಬಾಸ್42 mins ago

Bigg Boss OTT 3: ಅನಿಲ್​ ಕಪೂರ್ ʻವರ್ಸ್ಟ್‌ ನಿರೂಪಕʼ ಎಂದ ನೆಟ್ಟಿಗರು ; ಬೇಸತ್ತ ವೀಕ್ಷಕರು!

CH Vijayashankar
ಪ್ರಮುಖ ಸುದ್ದಿ55 mins ago

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

Vinay Rajkumar pepe the film A certificate
ಸ್ಯಾಂಡಲ್ ವುಡ್1 hour ago

Vinay Rajkumar: ಸೆನ್ಸಾರ್ ಪಾಸಾದ ‘ಪೆಪೆ’; ವಿನಯ್ ರಾಜ್ ಕುಮಾರ್ ಚಿತ್ರಕ್ಕೆ A’ ಸರ್ಟಿಫಿಕೇಟ್!

INDW vs SLW Final
ಪ್ರಮುಖ ಸುದ್ದಿ1 hour ago

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

Suzuki India
ಆಟೋಮೊಬೈಲ್1 hour ago

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

rowdysheeters police firing
ಕ್ರೈಂ1 hour ago

Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

ಪ್ರಮುಖ ಸುದ್ದಿ2 hours ago

Olympic Games Paris: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ

Bigg Boss Marathi 5 premiere ritesh deshmukh co star shubhankar tawde
ಬಿಗ್ ಬಾಸ್2 hours ago

Bigg Boss Marathi 5: ಶುರುವಾಯ್ತು ಮರಾಠಿ ಬಿಗ್​ಬಾಸ್ 5; ಈ ಬಾರಿ ರಿತೇಶ್ ದೇಶ್​ಮುಖ್ ನಿರೂಪಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ15 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ20 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ21 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌