ಕರ್ನಾಟಕ
Modi Meets Celebrities: ನರೇಂದ್ರ ಮೋದಿ ಭೇಟಿ ನಂತರ ಯಶ್, ರಿಷಭ್ ಶೆಟ್ಟಿ, ಅನಿಲ್ ಕುಂಬ್ಳೆ, ಮನೀಶ್ ಪಾಂಡೆ, ಅಯ್ಯೋ ಶ್ರದ್ಧಾ ಹೇಳಿದ್ದೇನು?
ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ (Modi Meets Celebrities) ನಂತರ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ವಿವಿಧ ಕ್ಷೇತ್ರಗಳ ಕುರಿತು ಪ್ರಧಾನಿ ಹೊಂದಿರುವ ಆಳವಾದ ಜ್ಞಾನದ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಉದ್ಘಾಟಿಸುವ ಮುನ್ನಾದಿನ ಭಾನುವಾರ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಸಂಜೆ ರಾಜಭವನದಲ್ಲಿ ನಾಡಿನ ಕ್ರಿಕೆಟಿಗರು, ಯುವ ಉದ್ಯಮಿಗಳು ಹಾಗೂ ಚಿತ್ರನಟರೊಂದಿಗೆ ಔತಣಕೂಟ ಏರ್ಪಡಿಸಿದ್ದರು(Modi Meets Celebrities). ಭೇಟಿ ನಂತರ ಎಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಅನಿಲ್ ಕುಂಬ್ಳೆ, ಕ್ರಿಕೆಟಿಗ
ಪ್ರಧಾನಿಯವರನ್ನು ಐದು ವರ್ಷ ಮೊದಲು ಛತ್ತೀಸ್‌ಗಢದಲ್ಲಿ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೆ. ಈಗ ಮತ್ತೆ ಭೇಟಿ ಮಾಡುತ್ತಿರುವುದು ಗೌರವದ ವಿಚಾರ. ಈಗ ಚೀತಾಗಳು ಬಂದಿವೆ, ಬಂದು ಫೋಟೊ ತೆಗೆದುಕೊಳ್ಳಿ ಎಂದರು. ಕರ್ನಾಟಕದಲ್ಲಿ ಈ ಹಿಂದೆ ವನ್ಯಜೀವಿ ಮಂಡಳಿ ಸದಸ್ಯನಾಗಿದ್ದಾಗ, ಮೋದಿ ಅವರು ಗುಜರಾತ್ ಸಿಎಂ ಆಗಿದ್ದರು. ಅವರು ನೀಡಿದ್ದ ಗುಜರಾತ್ ಸಿಂಹವು ಮೈಸೂರಿನಲ್ಲಿ ಉತ್ತಮವಾಗಿ ಬೆಳೆಯುತ್ತಿದೆ ಎಂದು ಆಗ ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದ್ದೆ. ಇದೆಲ್ಲವನ್ನೂ ಸ್ಮರಿಸಿಕೊಂಡೆವು.
ಜಾವಗಲ್ ಶ್ರೀನಾಥ್, ಕ್ರಿಕೆಟಿಗ
ಬಹಳ ಅದ್ಭುತವಾದ ಸಭೆ. ಕ್ರೀಡೆಯ ಬಗ್ಗೆ ಸಾಕಷ್ಟು ಮಾತನಾಡಿದೆವು. ಕ್ರೀಡೆಯನ್ನು ಶಾಲಾ ಪಠ್ಯದಲ್ಲಿ ಒದಗಿಸುವುದು ಅತ್ಯಾವಶ್ಯಕ ಎಂದು ಅವರು ಹೇಳಿದರು. ಇದು ಬಹಳ ಸಂತೋಷವಾಯಿತು. ಈಗಾಗಲೆ ಭಾರತದಲ್ಲಿ ಕ್ರೀಡೆ ಉತ್ತಮವಾಗಿ ಬೆಳೆಯುತ್ತಿದೆ. ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕುರಿತು ಅವರಿಗೆ ಆಳವಾದ ಅರಿವು ಹಾಗೂ ದೂರದರ್ಶಿತ್ವ ಇದೆ ಎನ್ನುವುದು ತಿಳಿಯಿತು.
ಮನೀಶ್ ಪಾಂಡೆ, ಕ್ರಿಕೆಟಿಗ
ಮೊದಲ ಬಾರಿಗೆ ಮೋದಿಯವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಕ್ರೀಡೆ ಹಾಗೂ ಒಟ್ಟಾರೆ ಕ್ರೀಡೆ ಬಗ್ಗೆ ಮಾತನಾಡಿದೆವು. ಕೋಚಿಂಗ್ ಹೇಗಿದೆ? ಮತ್ತಷ್ಟು ಉತ್ತಮಗೊಳಿಸುವುದು ಹೇಗೆ ಎನ್ನುವುದರ ಕುರಿತು ಚರ್ಚಿಸಿದೆವು. ಈ ಸಮಯದಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಯಿತು.
ಮಯಾಂಕ್ ಅಗರ್ವಾಲ್, ಕ್ರಿಕೆಟಿಗ
ಮೋದಿಯವರಂತಹ ದೂರದರ್ಶೀ ನಾಯಕನನ್ನು ಭೇಟಿ ಮಾಡುವುದು ಬಹಳ ಸಂತಸದ ವಿಚಾರ. ಅವರು ನಮಗೆಲ್ಲ ಸ್ಪೂರ್ತಿ. ದೇಶಕ್ಕಾಗಿ ಅವರು ನೀಡುತ್ತಿರುವ ಸಮಯ ಹಾಗೂ ಶಕ್ತಿ, ಅವರ ಕಾರ್ಯದ ಕಡೆಗೆ ನಾವೆಲ್ಲರೂ ನೋಡುತ್ತಿದ್ದೇವೆ. ಭಾರತದ ಕುರಿತು ಕನಿಷ್ಠ 10-15 ವರ್ಷ ಮುಂದೆ ಯೋಚನೆ ಮಾಡುತ್ತಿದ್ದಾರೆ ಅವರು.
ನಿಖಿಲ್ ಕಾಮತ್, ಜೆರೊಧಾ ಸಹ ಸಂಸ್ಥಾಪಕ
ಬಹಳ ಅದ್ಭುತವಾದ. ಎಲ್ಲ ಕ್ಷೇತ್ರಗಳ ಕುರಿತು ಅವರಿಗಿರುವ ಅಪಾರ ಜ್ಞಾನ ಕಂಡೆವು. ನಮ್ಮೊಡನೆ ಇಷ್ಟು ಸಮಯ ಕಳೆದಿದ್ದು ಸಂತೋಷವಾಯಿತು. ಭಾರತದಲ್ಲಿ ನಿರ್ಮಾಣವಾಗಿರುವ ಸ್ಥಿರ ವ್ಯವಸ್ಥೆಯ ಕಾರಣದಿಂದಾಗಿಯೇ ನಾವು ಜೀವಿಸುತ್ತಿದ್ದೇವೆ, ಹಣಕಾಸಿನ ಲಭ್ಯತೆ ಆಗುತ್ತಿದೆ, ವಿಶ್ವದೊಂದಿಗೆ ಸಂಪರ್ಕ ಸಾಧ್ಯವಾಗುತ್ತಿದೆ.
ನಿತಿನ್ ಕಾಮತ್, ಜೆರೊದಾ ಸಿಇಒ
ಮೋದಿ ಅವರನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಯಿತು. ಪ್ರಶ್ನೆಗಳನ್ನು ಕೇಳುವ ಮೂಲಕ ಅನೇಕ ಮಾಹಿತಿಗಳನ್ನು ನಮಗೆ ನೀಡಿದರು. ನಮ್ಮ ಉದ್ಯಮದ ಕುರಿತು ಇಷ್ಟು ಅಗಾಧವಾದ ಮಾಹಿತಿಯನ್ನು ಅವರು ಹೊಂದಿರುವುದನ್ನು ಕಂಡು ಬೆರಗಾಯಿತು. ಅವರಿಗೆ ಉದ್ಯಮದ ಕುರಿತು ಕಾಳಜಿಯು ವ್ಯಕ್ತವಾಯಿತು.
ರಿಷಭ್ ಶೆಟ್ಟಿ, ಚಿತ್ರನಟ, ನಿರ್ಮಾಪಕ
ಕನಸು ನನಸಾದ ದಿನ. ಅವರನ್ನು ಒಬ್ಬ ಮಹಾನ್ ನಾಯಕ ಎಂದು ನಾನು ಪರಿಗಣಿಸುತ್ತೇನೆ. ಕನ್ನಡ ಹಾಗೂ ಭಾರತೀಐ ಚಿತ್ರೋದ್ಯಮದ ಕುರಿತು ಕೇಳಿದರು. ಮುಂದೆ ಏನೇನು ಮಾಡಬಹುದು ಎಂದು ಕೇಳಿದರು. ಕಾಂತಾರ ಕುರಿತು ಸಾಕಷ್ಟು ಮಾತನಾಡಿದರು. ನಮ್ಮ ಸಂಪ್ರದಾಯ, ಭಾರತೀಯ ಸಂಸ್ಕೃತಿಯ ಕುರಿತು ಕಾಂತಾರ ನಿರ್ಮಾಣ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅನೇಕ ಬಾರಿ ಕಾಂತಾರ ಹೆಸರನ್ನು ಅವರು ಉಲ್ಲೇಖಿಸಿದ್ದು ಕಂಡು ಖುಷಿಯಾಯಿತು.
ಶ್ರದ್ಧಾ ಜೈನ್, ನಟಿ
ಪ್ರಧಾನಿಯವರನ್ನು ಭೇಟಿ ಮಾಡುವುದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವರು ಆಗಮಿಸಿದ ಕೂಡಲೇ, ಅಯ್ಯೋ ಎಂದರು. ನನ್ನ ಮಾತುಗಳನ್ನು ಅವರು ಇಷ್ಟು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆ ಎನ್ನುವುದನ್ನು ನೆನೆದು ಅಚ್ಚರಿಯಾಯಿತು. ನಮ್ಮ ದೇಶದ ಸಂಸ್ಕೃತಿ, ಸೌದರ್ಯವನ್ನು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರ ಹೇಗೆ ಪ್ರತಿಬಿಂಬಿಸುತ್ತಿದೆ ಎನ್ನುವುದರ ಕುರಿತು ಅವರು ಸಂತಸ ವ್ಯಕ್ತಪಡಿಸಿದರು.
ತರುಣ್ ಮೆಹ್ತಾ, ಏಥರ್ ಎನರ್ಜಿ ಸಿಇಒ
ಉದ್ಯಮಿಗಳಿಗಾಗಿ ಸಮಯ ಮಾಡಿಕೊಂಡಿದ್ದು ಬಹಳ ಸಂತೋಷವಾಯಿತು. ದೇಶವನ್ನು ಮುನ್ನಡೆಸಲು ಉದ್ಯಮ ಹೇಗೆ ಬಹುಮುಖ್ಯ ಎನ್ನುವುದನ್ನು ಅವರ ಮಾತಿನಿಂದ ತಿಳಿದುಕೊಂಡೆವು. ಬಹಳ ಅದ್ಭುತ ಅನುಭವ.
ವೆಂಕಟೇಶ್ ಪ್ರಸಾದ್, ಕ್ರಿಕೆಟಿಗ
ಪ್ರಧಾನಿಯವರನ್ನು ಭೇಟಿ ಮAಡುವುದೇ ಒಂದು ಗೌರವದ ಕೆಲಸ. ಅವರು ಎಲ್ಲ ಭಾರತೀಯರಿಗೂ ಸ್ಫೂರ್ತಿ. ಎಷ್ಟು ವಯಸ್ಸಾಗಿದೆ ನಿಮಗೆ ಎನ್ನುವುದು ಮುಖ್ಯವೇ ಅಲ್ಲ, ಅವರು ಎಲ್ಲರಿಗೂ ಪ್ರೋತ್ಸಾಹಿಸುತ್ತಾರೆ. ಭಾರತವನ್ನು ಮಹಾನ್ ಆಗಿಸುವ ಕುರಿತು ಸಾಕಷ್ಟು ಚರ್ಚೆ ನಡೆಯಿತು. ದೇಶಕ್ಕಾಗಿ ಅವರು ನಡೆಸುತ್ತಿರುವ ಕಾರ್ಯ, ಅವರ ಕನಸು ಕೈಗೂಡಲಿ ಎಂದು ಹಾರೈಸುತ್ತೇನೆ ಹಾಗೂ ಎಲ್ಲ ಭಾರತೀಯರೂ ಅವರ ಜತೆಗೆ ಕಾರ್ಯನಿರ್ವಹಿಸೋಣ ಎನ್ನುತ್ತೇನೆ.
ವಿಜಯ್ ಕಿರಗಂದೂರ್, ಹೊಂಬಾಳೆ ಸಂಸ್ಥೆ
ಪ್ರಧಾನಿಯವರ ಜತೆಗೆ 10-12 ನಿಮಿಷ ಮಾತನಾಡಿದ್ದಕ್ಕೆ ಬಹಳ ಸಂತೋಷವಾಯಿತು. ಭಾರತೀಯ ಚಿತ್ರರಂಗದ ಕುರಿತು ಮಾತನಾಡಿದೆವು, ನಮ್ಮ ಆಲೋಚನೆಗಳನ್ನೂ ಹಂಚಿಕೊಂಡೆವು. ನಮಗೆಲ್ಲ ಒಂದು ಪಾಸಿಟಿವ್ ವೈಬ್ರೇಷನ್ ಬಂದಿತು. ಬಹಳ ಚೆನ್ನಾಗಿತ್ತು.
ಯಶ್, ಚಿತ್ರನಟ
ಮೋದಿಯವರನ್ನು ಭೇಟಿ ಮಾಡಿ ಸಂತೋಷವಾಯಿತು. ನಾವು ಹೇಳಿದ್ದೆಲ್ಲವನ್ನೂ ಕೇಳಿದರು. ಉದ್ಯಮದ ಕುರಿತು ಅವರಲ್ಲಿದ್ದ ಆಲೋಚನೆಗಳನ್ನು, ನಿರೀಕ್ಷೆಗಳನ್ನು ಅವರು ಮುಂದಿಟ್ಟರು. ಉದ್ಯಮವಾಗಿ ದೇಶಕ್ಕಾಗಿ ನಾವೇನು ಮಾಡಬಹುದು ಎನ್ನುವುದನ್ನೂ ತಿಳಿಸಿದರು. ಅವರು ಉದ್ಯಮದ ಕುರಿತು ಹೊಂದಿರುವ ಸಣ್ಣ ಸಣ್ಣ ಮಾಹಿತಿಗಳ ಕುರಿತು ನನಗೆ ಅಚ್ಚರಿಯಾಯಿತು. ಚಿತ್ರೋದ್ಯಮದ ಕುರಿತು ಬಹಳ ನಿರೀಕ್ಷೆಗಳನ್ನು ಹೊಂದಿದ್ದಾರೆ. ಎಂದಿನಂತೆಯೇ ನಮ್ಮ ಪ್ರಧಾನಿ ಮೋದಿಯವರು ಬಹಳ ಆದರ್ಶಪ್ರಾಯರು.
ಕರ್ನಾಟಕ
Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ
Cauvery Water Dispute: ರಾಜ್ಯದ ಸ್ಥಿತಿ ಬಗ್ಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು: ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು. ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) (Cauvery Water Dispute) ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ವೈ.ವಿಜಯೇಂದ್ರ ಅವರು, ‘ಗಾಯದ ಮೇಲೆ ಬರೆ’ ಎಳೆದಂತೆ ಸಿಡಬ್ಲ್ಯುಆರ್‌ಸಿಯಿಂದ ಮತ್ತೆ 3000 ಕ್ಯೂಸೆಕ್ ನೀರು ಬಿಡುವ ಆದೇಶ ಪಡೆದು, ಸರ್ಕಾರವು ಕರ್ನಾಟಕದ ಪಾಲಿಗೆ ಕರಾಳ ಶಾಸನ ಬರೆಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕರುನಾಡು ಉದ್ವಿಗ್ನ ಗೊಂಡಿದೆ, ಜನರ ಆಕ್ರೋಶ ಮುಗಿಲು ಮುಟ್ಟಿದೆ, ರೈತ ಬಂಧುಗಳು ಕಂಗಾಲಾಗಿದ್ದಾರೆ. ಇಷ್ಟಾದರೂ ಕಾವೇರಿ ಉಳಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಥವಾಗಿ ಹೋರಾಡಲು ಕನಿಷ್ಠ ಕಾಳಜಿಯೂ ತೋರದೇ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಉಡಾಫೆಯ ಮಾತನಾಡಿಕೊಂಡು ಕನ್ನಡಿಗರ ಕತ್ತು ಹಿಸುಕುತ್ತಿದ್ದಾರೆ. ಕಾವೇರಿ ಪರ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ…
— Vijayendra Yediyurappa (@BYVijayendra) September 26, 2023
ಇದನ್ನೂ ಓದಿ | Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್‌ವೈ
CWRCಯಿಂದ ಮತ್ತೆ ಹೊಡೆತ, ಇನ್ನೂ 18 ದಿನ 3000 ಕ್ಯೂಸೆಕ್ ನೀರು ಬಿಡಲು ಆದೇಶ
ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.ಈವರೆಗೆ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದ ಸಮಿತಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಕಳೆದ ಸೆಪ್ಟೆಂಬರ್ 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳವರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಅದನ್ನು ಅನುಮೋದಿಸಿತ್ತು. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಈ ಆದೇಶವನ್ನು ಎತ್ತಿಹಿಡಿಯಲಾಗಿತ್ತು.
ಇದೀಗ ಮಂಗಳವಾರ (ಸೆ. 26) ನಡೆದ ಸಭೆಯಲ್ಲಿ ಕರ್ನಾಟಕದ ಮಂಡಿಸಿದ ವಾದವನ್ನು ಪರಿಗಣಿಸಿದ ಸಮಿತಿ ನೀರೇ ಬಿಡುವುದಿಲ್ಲ ಎಂಬ ಮನವಿಯನ್ನು ಒಪ್ಪಲಿಲ್ಲ. ಐದು ಸಾವಿರ ಕ್ಯೂಸೆಕ್ ಬದಲಿಗೆ ಮೂರು ಸಾವಿರ ಕ್ಯೂಸೆಕ್‌ಗೆ ಇಳಿಸಿ ಎಂದು ಸೂಚನೆ ನೀಡಿದೆ.
ಸೆ. 13ರಂದು ಹದಿನೈದು ದಿನಗಳವರೆಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ನೀಡಿದ ಆದೇಶ ಊರ್ಜಿತದಲ್ಲಿರುವುದರಿಂದ ಸೆ. 28ರಿಂದ ಹೊಸ ಆದೇಶ ಜಾರಿಗೆ ಬರಲಿದೆ. ಆಗ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಈ ಆದೇಶವು ಅಕ್ಟೋಬರ್ 15ರವರೆಗೆ ಜಾರಿಯಲ್ಲಿ ಇರಲಿದ್ದು, ಅಲ್ಲಿವರೆಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ.
CWRC ಯ ಮುಂದೆ ವಾಸ್ತವ ಸ್ಥಿತಿ ಸಲ್ಲಿಕೆ ಮಾಡಿದ ಕರ್ನಾಟಕ
ಇದಕ್ಕಿಂತ ಮೊದಲು ಕರ್ನಾಟಕವು ತನ್ನ ನೀರಿನ ಪರಿಸ್ಥಿತಿಯ ವಿವರಣೆಯನ್ನು ನೀಡಿತು.
25.09.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟೂ ಒಳಹರಿವಿನ ಕೊರತೆ 53.04% ಆಗಿದೆ. ಕರ್ನಾಟಕ ಸರ್ಕಾರವು ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಈ ಅಂಶವು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು ಕರ್ನಾಟಕ ಮನವಿ ಮಾಡಿತು.
ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಇದನ್ನೂ ಓದಿ | Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್
ಇದಕ್ಕೆ ಪ್ರತಿಯಾಗಿ ತಮಿಳುನಾಡು ನಿಯಮ ಪ್ರಕಾರ 12500 ಕ್ಯೂಸೆಕ್ ನೀರು ಪ್ರತಿದಿನವೂ ಬಿಡುಗಡೆ ಮಾಡಬೇಕು ಎಂಬ ವಾದವನ್ನೇ ಮುಂದೆ ಮಾಡಿತು.
ಅಂತಿಮವಾಗಿ ನಿಯಂತ್ರಣ ಸಮಿತಿಯು ನೀರಿನ ಪ್ರಮಾಣವನ್ನು ಇಳಿಸಿ ಆದೇಶ ಹೊರಡಿಸಿತು.
ಇದೀಗ ಕರ್ನಾಟಕವು ಈ ಅದೇಶವನ್ನು ಮತ್ತೆ ಕಾವೇರಿ ನದಿ ನೀರು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಅವಕಾಶವಿದೆ.
ಕಲೆ/ಸಾಹಿತ್ಯ
Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ
Yakshagana Show: ಮದರ್ ಫೌಂಡೇಶನ್ ಅರ್ಪಿಸುವ ಯಕ್ಷನೂಪುರ ʼರಾಜಾ ತ್ರೀʼ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಬೆಂಗಳೂರು: ರಾಜ್ ಭಟ್ ಜಕ್ಕೂರು ಅವರ ಸಂಯೋಜನೆಯಲ್ಲಿ ಜಲವಳ್ಳಿ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಕ್ಟೋಬರ್ 7ರಂದು ರಾತ್ರಿ 9.30ಕ್ಕೆ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ, ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನ ಹಾಗೂ ಅಜ್ಞಾನ ಕವಿ ವಿರಚಿತ ʼರಾಜಾ ಉರಗಕೇತನʼ ಯಕ್ಷಗಾನ ಪ್ರಸಂಗ (Yakshagana Show) ಪ್ರದರ್ಶನವಾಗಲಿದೆ.
ಮದರ್ ಫೌಂಡೇಶನ್ ಅರ್ಪಿಸುವ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಕೊಳಗಿ, ಜನ್ಸಾಲೆ, ಮೂಡುಬೆಳ್ಳೆ, ಬ್ರಹ್ಮೂರು ಅವರ ಗಾನ ರಸಧಾರೆ, ಅನಿರುದ್ಧ್, ಶಶಾಂಕ್, ಶ್ರೀನಿವಾಸ್ ಪ್ರಭು, ಸುಜನ್ ಹಾಗೂ ಅರುಣ ಅವರ ಚಂಡೆ ಮದ್ದಳೆಯ ಜೇಂಕಾರದಲ್ಲಿ ʼರಾಜಾ ತ್ರೀʼ ಪ್ರದರ್ಶನ ಮೂಡಿಬರಲಿದೆ.
ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ ಪ್ರಸಂಗದಲ್ಲಿ ತಾಮ್ರಧ್ವಜನಾಗಿ ವಿದ್ಯಾಧರ್ ಜಲವಳ್ಳಿ, ಮಯೂರಧ್ವಜನಾಗಿ ಮಂಕಿ ಈಶ್ವರ್ ನಾಯ್ಕ, ಕೃಷ್ಣನಾಗಿ ನಿಲ್ಕೋಡು ಶಂಕರ ಹೆಗಡೆ, ಅರ್ಜುನನಾಗಿ ಹೆನ್ನಾಬೈಲ್ ವಿಶ್ವನಾಥ್, ಹಾಸ್ಯ ಪಾತ್ರಗಳಲ್ಲಿ ರಮೇಶ್ ಭಂಡಾರಿ, ಸಿತಾರಾಮ ಕುಮಾರ್ ಅಭಿನಯಿಸಲಿದ್ದಾರೆ.
ಇದನ್ನೂ ಓದಿ | ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!
ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನʼ ಪ್ರದರ್ಶನದಲ್ಲಿ ಕಂಸನಾಗಿ ತೀರ್ಥಹಳ್ಳಿ ಗೋಪಾಲಾಚಾರ್, ಉಗ್ರಸೇನಾ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್, ರುಚಿಮತಿಯಾಗಿ ಸಂತೋಷ್ ಹಿಲಿಯಾಣ, ದೂತನಾಗಿ ಸೀತಾರಾಮ್ ಕುಮಾರ್, ಬ್ರಾಹ್ಮಣನಾಗಿ ಶ್ರೀಧರ್ ಕಾಸರಕೋಡು, ಮಾಗಧ ಆಗಿ ನಾಗರಾಜ ಭಂಡಾರಿ, ಆಸ್ತೀಯಾಗಿ ಉದಯ ಕಡಬಾಳ್, ಪಾಸ್ತಿಯಾಗಿ ಹರೀಶ್ ಜಪ್ತಿ, ದೃಮಿಳ ಆಗಿ ಕಾರ್ತಿಕ್ ಕಣ್ಣಿ ಬಣ್ಣ ಹಚ್ಚಲಿದ್ದಾರೆ.
ಅಜ್ಞಾತ ಕವಿ ವಿರಚಿತ ʼʼರಾಜಾ ಉರಗಕೇತನʼ ಯಕ್ಷಗಾನದಲ್ಲಿ ರಾಜೇಶ್ ಭಂಡಾರಿ, ಪ್ರಕಾಶ್ ಕಿರಾಡಿ, ವಿಶ್ವನಾಥ್ ಹೆನ್ನಾಬೈಲ್ ಅವರು (ಕೌರವ, ಭೀಮ, ಕೃಷ್ಣ ಪಾತ್ರದಲ್ಲಿ), ವಿನಾಯಕ ಗುಂಡುಬಾಳ, ಕಾರ್ತಿಕ್ ಹೆಗಡೆ, ಶ್ರೀಕಾಂತ್ ರಟ್ಟಾಡಿ, ನಾಗರಾಜ್ ದೇವಲ್ಕುಂದ ಪ್ರಮುಖ ಪಾತ್ರಗಳಲ್ಲಿ ರಂಜಿಸಲಿದ್ದಾರೆ.
ಪ್ರವೇಶ ದರ ಇರಲಿದ್ದು, ಮುಂಗಡ ಟಿಕೆಟ್ ಬುಕಿಂಗ್‌ಗಾಗಿ ರಾಜ್ ಭಟ್ ಮೊ.9019776411 ಸಂಪರ್ಕಿಸಿ.
ವಿಜಯನಗರ
Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ
Vijayanagara News: ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ಜರುಗಿತು.
ಕೂಡ್ಲಿಗಿ: ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ , ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ (Foot and Mouth Disease Vaccination campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಶುಪಾಲನೆ ಭಾಗವಾದ ಆಕಳು ಎತ್ತು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಆರೋಗ್ಯದ ಸಮಸ್ಯೆ ಕಂಡುಬಂದ ವೇಳೆ ತಾಲೂಕಿನ ರೈತರು ಕರೆ ಮಾಡಿದಾಗ ವೈದ್ಯಕೀಯ ತಂಡ ತಕ್ಷಣ ಭೇಟಿ ನೀಡಿ, ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SBI SO Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ
ಇದೇ ವೇಳೆ ಕೂಡ್ಲಿಗಿ ತಾಲೂಕಿನ ವೈದ್ಯರ ಸಿಬ್ಬಂದಿ, ಔಷಧಿ ಗುಣಮಟ್ಟ, ವೈದ್ಯಕೀಯ ಸೇವೆ, ಲಸಿಕೆ ವಿಧಾನ, ಆಸ್ಪತ್ರೆ ಕಟ್ಟಡಗಳ ಸ್ಥಿತಿ ಹಾಗೂ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಾರ್ಯ ನಿರ್ವಹಣೆ ಇತ್ಯಾದಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿರಿಗುಂಬಳಗುಂಟೆ ಪಶುವೈದ್ಯಾಧಿಕಾರಿ ಡಾ. ಮಂಜುಶ್ರೀ, ಚಿರತಗುಂಡು ಪಶುವೈದ್ಯಾಧಿಕಾರಿ ಡಾ. ಇಸ್ಮಾಯಿಲ್ ಜಬೀಉಲ್ಲ, ಡಾ. ಲೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿವಮೊಗ್ಗ
Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ
Death News: ಸೊರಬ ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ(80) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಸೊರಬ: ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ (80) ಮಂಗಳವಾರ ಬೆಳಿಗ್ಗೆ ನಿಧನರಾದರು. (Death News)
ಕೇವಲ ನಾಲ್ಕನೇ ತರಗತಿ ಓದಿ, ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮೂರು ಕೃತಿಗಳನ್ನು ರಚಿಸಿದ್ದರು.
ಕಾವ್ಯಗಳನ್ನು ರಾಗದ ಮೂಲಕ ರಚಿಸಿ ಮನ್ನಣೆ ಪಡೆದ ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಭಾರತ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇವರ ವಯೋಸಹಜ ನಿಧನಕ್ಕೆ ಅಭಾಸಾಪ ಸೇರಿದಂತೆ ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ, ಕಸಾಪ, ಕಜಾಪ, ಕಸಾಸಾಂವೇ ಸಾಹಿತ್ಯ ಘಟಕಗಳು ಕಂಬನಿ ಮಿಡಿದಿವೆ.
-
Live News21 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ11 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ4 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema14 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ14 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್11 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ11 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್15 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ