ಕಿಮ್ಸ್‌ ಮಗು ಕಳವು ಪ್ರಕರಣದಲ್ಲಿ ತಾಯಿಯೇ ವಿಲನ್‌, ಕಾರಣ ಕೇಳಿದ್ರೆ ನಿಜಕ್ಕೂ ಬೇಸರವಾಗ್ತದೆ! - Vistara News

ಕರ್ನಾಟಕ

ಕಿಮ್ಸ್‌ ಮಗು ಕಳವು ಪ್ರಕರಣದಲ್ಲಿ ತಾಯಿಯೇ ವಿಲನ್‌, ಕಾರಣ ಕೇಳಿದ್ರೆ ನಿಜಕ್ಕೂ ಬೇಸರವಾಗ್ತದೆ!

ಕಿಮ್ಸ್‌ ಆಸ್ಪತ್ರೆಯಿಂದ ಕಾಣೆಯಾಗಿದೆ ಎನ್ನಲಾಗಿದ್ದ ಮಗು ಸಿಕ್ಕಿದೆ. ಹಾಗಿದ್ದರೆ ಅದಕ್ಕೆ ಏನಾಗಿತ್ತು? ಈ ಪ್ರಕರಣದಲ್ಲಿ ತಾಯಿಯೇ ವಿಲನ್‌ ಆಗಿದ್ದು ಹೇಗೆ? ನಿಜಕ್ಕೂ ಅಲ್ಲಿ ನಡೆದುದೇನು?

VISTARANEWS.COM


on

ಸಲ್ಮಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಮಗು ಕಳ್ಳತನ ಪ್ರಕರಣದಲ್ಲಿ ದೊಡ್ಡ ತಿರುವು ಸಿಕ್ಕಿದೆ. ನನ್ನ ಮಗುವನ್ನು ಯಾರೋ ಕಳವು ಮಾಡಿದ್ದಾರೆ ಎಂದು ಜೂನ್‌ 13ರಂದು ಪೊಲೀಸರಿಗೆ ದೂರು ನೀಡಿದ್ದ ತಾಯಿ ಸಲ್ಮಾಳೇ ಈಗ ವಿಲನ್‌ ಆಗಿದ್ದಾಳೆ!

ತಾಯಿಯೇ ಮಗುವನ್ನು ಬಾತ್‌ರೂಮ್ ಕಿಟಕಿಯ ಮೂಲಕ‌ ಹೊರಗೆ ಎಸೆದಿರುವುದು ವಿಚಾರಣೆಯ ಬಳಿಕ‌ ಬಯಲಾಗಿರುವುದರಿಂದ ವಿದ್ಯಾನಗರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಏನಾಗಿತ್ತು ಆವತ್ತು?
ಸಲ್ಮಾಗೆ ತಿಂಗಳ ಹಿಂದೆ ಹೆರಿಗೆಯಾಗಿದ್ದು, ಆಕೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ, ಜೂನ್‌ 13ರಂದು ಆಕೆ ತನ್ನ ಮಗುವನ್ನು ಯಾರೋ ಸೆಳೆದುಕೊಂಡು ಹೋದರು ಎಂದು ರಂಪ ಎಬ್ಬಿಸಿದ್ದಾಳೆ. ಬಾತ್‌ರೂಂಗೆ ಹೋಗಿ ಬರುವಾಗ ಎಳೆದುಕೊಂಡು ಹೋದರು ಎಂದು ಹೇಳಿದ್ದರು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಎಲ್ಲೂ ದಾಖಲಾಗಿರಲೇ ಇಲ್ಲ!
ಆಸ್ಪತ್ರೆಯಿಂದಲೇ ಮಗುವನ್ನು ತಾಯಿಯ ಕೈಯಿಂದಲೇ ಸೆಳೆದುಕೊಂಡು ಹೋಗಿದ್ದಾರೆ ಎಂಬ ದೂರು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಹಾಗಾಗಿ ಪೊಲೀಸರೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದರು. ಮಗುವನ್ನು ಕದ್ದೊಯ್ದ ಅಥವಾ ಯಾರಾದರೂ ತೆಗೆದುಕೊಂಡ ಹೋದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗಿವೆಯೇ ಎಂದು ಪರಿಶೀಲಿಸಿದರು. ವಿಚಿತ್ರವೆಂದರೆ ಕಿಮ್ಸ್‌ ಆಸ್ಪತ್ರೆಯಲ್ಲಿ ೩೦೦ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳಿವೆ, ಎಲ್ಲಿಯೂ ಆ ದೃಶ್ಯಗಳು ಕಾಣಿಸಿರಲಿಲ್ಲ.

ತಾಯಿಯ ವಿಚಾರಣೆ
ಸಿಸಿ ಕ್ಯಾಮೆರಾಗಳಿದ್ದರೂ ಎಲ್ಲೂ ಅಂಥ ಘಟನೆ ದಾಖಲಾಗದೆ ಇದ್ದುದರಿಂದ ಸ್ವಲ್ಪ ಸಂಶಯದಿಂದ ಮತ್ತು ಇನ್ನು ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶದಿಂದ ಪೊಲೀಸರು ತಾಯಿ ಸಲ್ಮಾ ಅವರನ್ನೇ ವಶಕ್ಕೆ ಪಡೆದಿದ್ದರು. ಜತೆಗೆ ಮಗು ಕಾಣೆಯಾದ ಬಳಿಕ ಸಲ್ಮಾ ಅವರ ವರ್ತನೆ ಕೂಡಾ ಸ್ವಲ್ಪ ಸಂಶಯ ಮೂಡಿಸುವಂತೆ ಇರುತ್ತಿತ್ತು.

ಸಲ್ಮಾ ಬಾಯಿ ಬಿಟ್ಟಳು ಸತ್ಯ!
ಪೊಲೀಸರ ತೀವ್ರ ವಿಚಾರಣೆ ವೇಳೆ ಸಲ್ಮಾ ತಾನೇ ಮಗುವನ್ನು ಬಾತ್‌ ರೂಂನ ಕಿಟಕಿಯಿಂದ ಹೊರಗೆ ಎಸೆದಿದ್ದಾಗಿ ಒಪ್ಪಿಕೊಂಡಳು. ಇದನ್ನು ಪರಿಗಣಿಸಿ ಅಕೆಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ‌ಒಂದನೇ ಅಧಿಕ ದಿವಾಣಿ ಹಾಗೂ ಜೆಎಂಎಫ್‌ಸಿ ಯಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಸಲ್ಮಾಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಹಾಗಿದ್ದರೆ ಎಸೆದುದು ಯಾಕೆ?
ತಾನೇಕೆ ಹಾಗೆ ಮಾಡಿದೆ ಎಂಬುದಕ್ಕೆ ತಾಯಿ ಸಲ್ಮಾ ಕೊಟ್ಟ ಕಾರಣ ಕೇಳಿದ್ರೆ ನಿಜಕ್ಕೂ ಎಂಥವರೂ ಬೇಸರ ಪಡಬೇಕು. ಈ ಮಗುವಿನ ಮೆದುಳು ಬೆಳವಣಿಗೆ ಆಗಿಲ್ಲ ಎಂದು ವೈದ್ಯರು ಹೇಳಿದ್ದರಂತೆ. ಹೀಗಾಗಿ ಮಗುವನ್ನು ಮುಂದೆ ಸಾಕುವುದು ಹೇಗೆ ಎಂಬ ಆತಂಕದಲ್ಲಿ ಆಕೆ ಇಂಥ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾಳೆ. ಹಾಗಿದ್ದರೆ ಆಕೆ ಗರ್ಭಿಣಿಯಾದ ಆರಂಭದಲ್ಲೇ ಸ್ಕ್ಯಾನಿಂಗ್‌ ಮಾಡಿಸಿರಲಿಲ್ಲವೇ? ಆಗಲೂ ಗೊತ್ತಾಗಿರಲಿಲ್ಲವೇ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ.

ಹಾಗಿದ್ದರೆ ಮಗು ಏನಾಯಿತು?
ಇಲ್ಲಿ ಕಾಡುವ ಇನ್ನೊಂದು ಪ್ರಶ್ನೆ ಎಂದರೆ, ಆವತ್ತು ಸಲ್ಮಾ ಬಾತ್‌ ರೂಂ ಕಿಟಕಿಯಿಂದ ಎಸೆದ ಮಗು ಎಲ್ಲಿ ಹೋಯಿತು? ನಿಜವೆಂದರೆ, ಜೂನ್‌ ೧೪ರಂದು ಅದೇ ಆಸ್ಪತ್ರೆಯ ಹೊರಗಡೆ ಒಂದು ಮಗು ಸಿಕ್ಕಿತ್ತು. ಅದನ್ನು ಕಿಮ್ಸ್‌ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈಗ ಅದಕ್ಕೆ ೪೦ ದಿನಗಳು ತುಂಬಿವೆ. ಜೈಲುಪಾಲಾಗಿರುವ ತಾಯಿಯ ಕೈಗೇ ಈ ಮಗುವನ್ನು ಕೊಡುತ್ತಾರಾ? ಮೆದುಳು ಬೆಳೆಯದ ಮಗುವಿನ ಮುಂದಿನ ಚಿಕಿತ್ಸೆ ಹೇಗೆ ಎನ್ನುವ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ| ಪ್ರೀತಿಗಾಗಿ ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಅಪ್ರಾಪ್ತ ಮಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Liquid Nitrogen : ಕಾಟನ್ ಕ್ಯಾಂಡಿ ಬಳಿಕ ಕರ್ನಾಟಕದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ

Liquid Nitrogen: ಆರೋಗ್ಯಕ್ಕೆ ಕುತ್ತು ತರುವ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿ ಬ್ಯಾನ್‌ ಬಳಿಕ ಇದೀಗ ಆಹಾರದಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಬಳಕೆಯನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಆದೇಶವನ್ನು ಹೊರಡಿಸಿದೆ. ಆ ಪ್ರಕಾರ ಯಾರಾದರೂ ಲಿಕ್ವಿಡ್‌ ನೈಟ್ರೋಜನ್‌ ಬಳಸಿದ್ರೆ ಜೀವಾವಧಿ ಶಿಕ್ಷೆಯೊಂದಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

VISTARANEWS.COM


on

By

LIQUID NITROGEN
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್‌ನ ಒಂದು ತುತ್ತು ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ಕಲರ್ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿ ಬಳಿಕ ಇದೀಗ ರಾಜ್ಯದಲ್ಲಿ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ಬ್ಯಾನ್ ಮಾಡಲಾಗಿದೆ.

ಕೆಲವು ರೆಸ್ಟೋರಂಟ್‌ಗಳಲ್ಲಿ ಫುಡ್‌ ಪ್ರಿಯರನ್ನು ಆಕರ್ಷಿಸಲೆಂದೇ ತರಹೇವಾರಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್‌ ಐಸ್‌ಕ್ರೀಂ, ಸ್ಮೋಕ್‌ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು,ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಹೀಗಾಗಿ ಲಿಕ್ವಿಡ್ ನೈಟ್ರೋಜನ್ ಬಳಸಿದ ಆಹಾರ ಸೇವಿಸುವ ಮುನ್ನ ಎಚ್ಚರವಾಗಿರಿ.

ಈ ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆಯಿಂದ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್‌ ನೈಟ್ರೋಜನ್‌ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಪಕ್ಕದ ತಮಿಳುನಾಡಲ್ಲಿ ಬಿಸ್ಕತ್‌ ಮತ್ತು ಐಸ್‌ಕ್ರೀಮ್‌ನಂತಹ ಆಹಾರ ಪದಾರ್ಥಗಳ ಜತೆ ಲಿಕ್ವಿಡ್‌ ನೈಟ್ರೋಜನ್‌ ನೇರ ಬಳಕೆಯನ್ನು ನಿಷೇಧಿಸಿದೆ. ಇದೀಗ ಕರ್ನಾಟಕದಲ್ಲೂ ಲಿಕ್ವಿಡ್‌ ನೈಟ್ರೋಜನ್‌ ಬಳಕೆಯನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Cotton Candy Ban : ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ ಬ್ಯಾನ್‌, ಗೋಬಿ ಮಂಚೂರಿಗೂ ಡೇಂಜರ್‌

ಈ ಲಿಕ್ವಿಡ್‌ ನೈಟ್ರೋಜನ್‌ ಅಥವಾ ದ್ರವ ಸಾರಜನಕವನ್ನು ಔಷಧ ಮತ್ತು ರಾಸಾಯನಿಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು 40 ಡಿಗ್ರಿ ಸೆಂಟಿಗ್ರೇಡ್‌ನಷ್ಟು ತಂಪಾಗಿಸಲು ಬಳಸುತ್ತವೆ. ಅಲ್ಲದೆ, ಫ್ರೀಜ್‌ ಮಾಡುವ ಹಲವು ವಿಧಾನಗಳಲ್ಲಿ ಬಳಸುತ್ತಾರೆ. ಈ ಲಿಕ್ವಿಡ್‌ ನೈಟ್ರೋಜನ್‌ ಸುರಿದರೆ ಥಟ್ಟನೆ ಹಿಗ್ಗಿ ಬಿಳಿಯ ಹೊಗೆಯಂತೆ ಆವಿಯಾಗಿ ಬಿಡುತ್ತದೆ.

ಇನ್ನೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ಪ್ರಕಾರ ಲಿಕ್ವಿಡ್‌ ನೈಟ್ರೋಜನ್‌ ಆಹಾರದಲ್ಲಿ ಬಳಸಬಾರದು ಎಂಬುದು ಈ ಮೊದಲಿನಿಂದಲೂ ಇದೆ. ಆದರೂ ಕೆಲವರು ಜನರನ್ನು ಆಕರ್ಷಿಸಲು, ಹೊಸ ಮೆನುವಿಗಾಗಿ ಇದನ್ನು ಬಳಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಬಳಸುವವರ ವಿರುದ್ಧ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Prajwal Revanna Case: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪೋಸ್ಟರ್ ವಾರ್‌

Prajwal Revanna Case: ಪೆನ್ ಡ್ರೈವ್ ವೀಡಿಯೋ (Pen Drive Case) ಲೀಕ್ ಹಿಂದೆ ಡಿಸಿಎಂ ಡಿಕೆಶಿ ಕೈವಾಡವಿದೆ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಬೆನ್ನಲ್ಲೇ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಅನಾಮಿಕರು ಅಂಟಿಸಿರುವ ಪೋಸ್ಟರ್‌ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

VISTARANEWS.COM


on

prajwal ravanna case dk shivakumar poster
Koo

ಬೆಂಗಳೂರು: ಹಾಸನ ಸಂಸದ (Hassan PM) ಪ್ರಜ್ವಲ್‌ ರೇವಣ್ಣ (Prajwal Revanna Case) ಹಾಗೂ ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna) ಅವರ ಲೈಂಗಿಕ ಹಗರಣದಲ್ಲಿ, ಇದುವರೆಗೂ ಹತಾಶವಾಗಿದ್ದ ಬಿಜೆಪಿ (BJP) ಹಾಗೂ ಜೆಡಿಎಸ್‌ಗೆ (JDS) ಈಗ ಆಡಿಯೋ ಅಸ್ತ್ರ ದೊರೆತಿದೆ. ವಕೀಲ ದೇವರಾಜೇಗೌಡ ಪತ್ರಿಕಾಗೋಷ್ಠಿಯ ಬಳಿಕ ತುಸು ಚೇತರಿಕೆ ಬಂದಿದೆ. ಇದರ ನಡುವೆ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ವಿರುದ್ಧ ಪೋಸ್ಟರ್‌ಗಳು ನಗರದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿವೆ.

ಪೆನ್ ಡ್ರೈವ್ ವೀಡಿಯೋ (Pen Drive Case) ಲೀಕ್ ಹಿಂದೆ ಡಿಸಿಎಂ ಡಿಕೆಶಿ ಕೈವಾಡವಿದೆ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಬೆನ್ನಲ್ಲೇ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಅನಾಮಿಕರು ಅಂಟಿಸಿರುವ ಪೋಸ್ಟರ್‌ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. “ಹೆಣ್ಣು ಮಕ್ಕಳ ವೀಡಿಯೋ ಬಳಸಿಕೊಂಡು ರಾಜಕೀಯ ಮಾಡುವ ವ್ಯಕ್ತಿ” ಎಂದು ಇವುಗಳಲ್ಲಿ ಆರೋಪಿಸಲಾಗಿದೆ. ಜೊತೆಗೆ ಹಲವು ಅವಹೇಳನಕಾರಿ ಒಕ್ಕಣೆಗಳೂ ಈ ಪೋಸ್ಟರ್‌ಗಳಲ್ಲಿ ಕಂಡುಬಂದಿವೆ.

ಕೆಪಿಸಿಸಿ ಕಚೇರಿ, ಡಿಕೆ ಶಿವಕುಮಾರ್‌ ಪಾಲುದಾರಿಕೆ ಹೊಂದಿರುವ ಲುಲು ಮಾಲ್ ಸೇರಿದಂತೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪೋಸ್ಟರ್ ಕಂಡುಬಂದಿವೆ. ರಾತ್ರೋರಾತ್ರಿ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದು, ಪೊಲೀಸರು ಇದರ ಹಿಂದಿರುವವರ ಹುಡುಕಾಟದಲ್ಲಿ ತೊಡಗಿದ್ದಾರೆ.

ಡಿಕೆಶಿ ಆಡಿಯೋ ಕಾಂಗ್ರೆಸ್‌ಗೆ ತಲೆನೋವು

ಕಳೆದ ಹದಿನೈದು ದಿನಗಳಿಂದ ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಇಟ್ಟುಕೊಂಡು ಚೆನ್ನಾಗಿಯೇ ಆಟವಾಡಿದ್ದ ಕಾಂಗ್ರೆಸ್‌, ಮತದಾನದ ಮುನ್ನಾದಿನವಾದ ಭಾನುವಾರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಚುನಾವಣೆಯ ಹಿಂದಿನ ದಿನವೇ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ಡಿಕೆ ಶಿವಕುಮಾರ್ ಆಡಿಯೋ ಅನ್ನು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಬಿಡುಗಡೆ ಮಾಡಿದ್ದು, ಪ್ರಕರಣದ ಹಿಂದಿನ ಸತ್ಯಾಸತ್ಯತೆ ಬಗ್ಗೆ ಸಾರ್ವಜನಿಕರು ಇನ್ನೊಂದು ಕೋನದಿಂದ ಯೋಚಿಸುವಂತಾಗಿದೆ.

ದೇವರಾಜೇಗೌಡ ಜತೆ ಡಿಕೆ ಶಿವಕುಮಾರ್‌ ನಡೆಸಿರುವ ಮಾತುಕತೆಯ ಆಡಿಯೋದಲ್ಲಿ ಡಿಕೆಶಿ ಧ್ವನಿ ಸ್ಪಷ್ಟವಾಗಿದೆ ಎನ್ನಲಾಗಿದೆ. ಪೆನ್ ಡ್ರೈವ್ ಮಾಡಿಸಿದ್ದೇ ಡಿಕೆಶಿ ಎಂದು ಆರೋಪಿಸಲಾಗಿದೆ. ರಾಜಕೀಯ ಲಾಭಕ್ಕಾಗಿ ವ್ಯವಸ್ಥೆಯನ್ನು ಬಳಸಿಕೊಂಡಿದ್ದು, ಕಾಂಗ್ರೆಸ್ ಸರ್ಕಾರ ಎಸ್ಐಟಿ ಅಧಿಕಾರಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.

ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುವ ಬಗ್ಗೆ ಹಾಗೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಬಿಜೆಪಿ ವಕ್ತಾರ ವಿವೇಕರೆಡ್ಡಿ ಹೇಳಿದ್ದಾರೆ. ಎಸ್ಐಟಿ ತನಿಖೆ ಮೇಲೆ ಅನುಮಾನ ಬರುತ್ತಿದೆ. ಹೀಗಾಗಿ ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಈ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಸಿಎಂಗೆ ಮನವಿ ಬಳಿಕ ಹೈಕೋರ್ಟ್ ಮೊರೆ ಹೋಗಲಾಗುತ್ತದೆ. ಈ ನಡುವೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ವಿವೇಕರೆಡ್ಡಿ ಹೇಳಿದ್ದಾರೆ.

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಇದ್ದರೆ ಡಿಲೀಟ್‌ ಮಾಡಿ

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿದೆಯೇ? ಇದ್ದರೆ ಅದು ದೊಡ್ಡ ಅಪರಾಧವಾಗಿದೆ. ಈಗಲೇ ಅದನ್ನು ಡಿಲೀಟ್‌ ಮಾಡಿಬಿಡಿ. ಒಂದು ವೇಳೆ ನೀವು ಡಿಲೀಟ್‌ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಅಧಿಕೃತ ಪ್ರಕಟಣೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ. ಈಗಾಗಲೇ ಈ ಪ್ರಕರಣ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡಿದೆ. ಇನ್ನು ವಿಡಿಯೊದಲ್ಲಿ ಹಾಸನ ಸೇರಿದಂತೆ ಹಲವು ಕಡೆಯ ಮಹಿಳೆಯರು ಇದ್ದಾರೆನ್ನಲಾಗಿದ್ದು, ಅವರ ಮುಖವನ್ನು ಬ್ಲರ್‌ ಮಾಡಲಾಗಿಲ್ಲ. ಹೀಗಾಗಿ ಈ ಕೇಸ್‌ ಮತ್ತಷ್ಟು ಜಟಿಲವಾಗಿದೆ.

ಈ ಸಂಬಂಧ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದು, ಅಶ್ಲೀಲ ವಿಡಿಯೊವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ‌ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೆ, ಅಂಥ ವ್ಯಕ್ತಿಗಳ‌ನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Prajwal Revanna Case Delete vulgar video and avoid legal action says SIT chief

ಡಿಲೀಟ್‌ ಮಾಡಿ ಕಾನೂನು ಕ್ರಮದಿಂದ ಪಾರಾಗಿ

ಅಶ್ಲೀಲ ವಿಡಿಯೊ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

Continue Reading

ಪ್ರಮುಖ ಸುದ್ದಿ

Lok Sabha Election 2024: ಮೊದಲೆರಡು ಗಂಟೆಗಳ ಮತದಾನ ನಿರೀಕ್ಷೆಗಿಂತ ಕಡಿಮೆ, ಇನ್ನೂ ಇಳಿಯುವ ಆತಂಕ; ಎಲ್ಲಿ ಎಷ್ಟು?

Lok Sabha Election 2024: ಶಿವಮೊಗ್ಗದಲ್ಲಿ 11.45, ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. 11.42, ಚಿಕ್ಕೋಡಿಯಲ್ಲಿ ಶೇ. 10.81, ಬಳ್ಳಾರಿಯಲ್ಲಿ ಶೇ. 10.37, ಬೆಳಗಾವಿಯಲ್ಲಿ ಶೇ. 9.31, ಧಾರವಾಡದಲ್ಲಿ ಶೇ.9.38, ವಿಜಯಪುರದಲ್ಲಿ 9.22%, ರಾಯಚೂರಿನಲ್ಲಿ ಶೇ. 8.83 , ಹಾವೇರಿಯಲ್ಲಿ ಶೇ. 8.2, ಕಲಬುರಗಿಯಲ್ಲಿ ಶೇ. 8.71 ಮತದಾನ ದಾಖಲಾಯಿತು. ಸರಾಸರಿ ಶೇ. 9.5 ಎಂದು ಅಂದಾಜಿಸಲಾಗಿದೆ. ಇದು ನಿರೀಕ್ಷೆಗಿಂತ ಕಡಿಮೆಯಾಗಿದೆ.

VISTARANEWS.COM


on

lok sabha election 2024 voting second phase
Koo

ಬೆಂಗಳೂರು: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ (lok sabha constituency) ನಡೆಯುತ್ತಿರುವ ಲೋಕಸಭೆ ಚುನಾವಣೆ (lok sabha election 2024) ಮತದಾನ (voting) ಬೆಳಗ್ಗಿನ ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 9.5% ಮತದಾನ ದಾಖಲಿಸಿತು. ಮೊದಲ ಹಂತದ ಚುನಾವಣೆಗೆ ಹೋಲಿಸಿದರೆ ಈ ಪ್ರತಿಕ್ರಿಯೆ ನೀರಸವಾಗಿದೆ. ಮೊದಲ ಹಂತದ ಮತದಾನದಲ್ಲಿ ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 10% ಮತದಾನ ಕಂಡುಬಂದಿತ್ತು. ಮುಂಜಾನೆ 7 ಗಂಟೆಗೆ ಮತದಾನ ಶುರುವಾಗಿದೆ.

ಶಿವಮೊಗ್ಗದಲ್ಲಿ 11.45, ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. 11.42, ಚಿಕ್ಕೋಡಿಯಲ್ಲಿ ಶೇ. 10.81, ಬಳ್ಳಾರಿಯಲ್ಲಿ ಶೇ. 10.37, ಬೆಳಗಾವಿಯಲ್ಲಿ ಶೇ. 9.31, ಧಾರವಾಡದಲ್ಲಿ ಶೇ.9.38, ವಿಜಯಪುರದಲ್ಲಿ 9.22%, ರಾಯಚೂರಿನಲ್ಲಿ ಶೇ. 8.83 , ಹಾವೇರಿಯಲ್ಲಿ ಶೇ. 8.2, ಕಲಬುರಗಿಯಲ್ಲಿ ಶೇ. 8.71 ಮತದಾನ ದಾಖಲಾಯಿತು. ಸರಾಸರಿ ಶೇ. 9.5 ಎಂದು ಅಂದಾಜಿಸಲಾಗಿದೆ. ಇದು ನಿರೀಕ್ಷೆಗಿಂತ ಕಡಿಮೆಯಾಗಿದೆ.

ಹತ್ತು ಗಂಟೆಯ ಬಳಿಕ ಬಿಸಿಲು ಏರುವುದರಿಂದ, ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿನಲ್ಲಿ ಮತದಾನ ಇನ್ನಷ್ಟು ಇಳಿಕೆಯಾಗುವ ಆತಂಕ ಕಂಡುಬಂದಿದೆ. ಸಂಜೆಯ ವೇಳೆ ಮಳೆ ಬರುವ ಸಾಧ್ಯತೆಯೂ ಇರುವುದರಿಂದ, ಸಂಜೆಯೂ ಮತದಾನ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಆತಂಕ ತಲೆದೋರಿದೆ.

ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಶಿವಮೊಗ್ಗದಲ್ಲಿ ಬಿಎಸ್‌ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ, ಈಶ್ವರಪ್ಪ, ಹುಬ್ಬಳ್ಳಿಯಲ್ಲಿ ಪ್ರಹ್ಲಾದ್‌ ಜೋಶಿ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಕಾರವಾರದಲ್ಲಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವಾರು ಗಣ್ಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಕೆಲವೆಡೆ ಮತಯಂತ್ರ ಕೈಕೊಟ್ಟು ಮತದಾರರು ಗಂಟೆಗಟ್ಟಲೆ ಕಾಯುವಂತಾಯಿತು. ತಂತ್ರಜ್ಞರು ಆಗಮಿಸಿ ಸರಿಪಡಿಸಿದ ಬಳಿಕ ಮತ ಹಾಕಲಾಯಿತು. ಮಹಿಳೆಯರಿಗಾಗಿ ಏರ್ಪಡಿಸಿದ ಪಿಂಕ್‌ ಬೂತ್‌ಗಳಲ್ಲಿಯೂ ಉತ್ತಮ ಸ್ಪಂದನ ವ್ಯಕ್ತವಾಯಿತು. ಹಲವು ಕಡೆಗಳಲ್ಲಿ ಮತದಾರರು ಬಹಿಷ್ಕಾರ ವ್ಯಕ್ತಡಿಸಿದರು. ಹಲವೆಡೆ ಶತಾಯುಷಿಗಳು ಆಗಮಿಸಿ ಮತ ಹಾಕುವ ಉತ್ಸಾಹ ತೋರಿದರು. ಒಂದು ಕಡೆ ದಿವ್ಯಾಂಗ ಯುವತಿ ಮೊದಲ ಮತ ಹಾಕಿದಳು. ಉತ್ತರ ಕನ್ನಡದಲ್ಲಿ ನವದುರ್ಗೆಯರ ರೂಪದಲ್ಲಿ ಮೊದಲ ಮತದಾನ ನಡೆದುದು ವಿಶಿಷ್ಟವಾಗಿತ್ತು.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ 28,269 ಮತಗಟ್ಟೆ ಸ್ಥಾಪಿಸಿದ್ದು, ಶಾಂತಿಯುತ ಚುನಾವಣೆ ನಡೆಸಲು ಸುಮಾರು 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾನ ಕೇಂದ್ರದಲ್ಲಿ ಮತದಾರರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳ ಸುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಕ್ಷೇತ್ರಗಳಲ್ಲಿ 2,59,52,958 ಮತದಾರರಿದ್ದು, 1,29,48,978 ಪುರುಷ, 1,29,64,570 ಮಹಿಳಾ ಹಾಗೂ 1,945 ತೃತೀಯ ಲಿಂಗಿ ಮತದಾರರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಡಿಮೆ 16,41,156 ಮತದಾರರಿದ್ದರೆ, ಅತಿ ಹೆಚ್ಚು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 20,98,202 ಮತದಾರರಿದ್ದಾರೆ.

ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಮಾಡಿದರು. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Continue Reading

ಕ್ರೈಂ

Road Accident: ಕಲ್ಲು ಸಾಗಿಸುತ್ತಿದ್ದ ಕ್ಯಾಂಟರ್‌ ಪಲ್ಟಿಯಾಗಿ ಮೂವರ ಸಾವು

Road Accident: ಕೋಲಾರದ ಮಾಲೂರಿನ ಚಿಕ್ಕತಿರುಪತಿಯಿಂದ ಮಂಚೇನಹಳ್ಳಿಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ‌ ಪಲ್ಟಿಯಾಗಿದೆ. ಕ್ಯಾಂಟರ್‌ನ ಹಿಂಬದಿಯಲ್ಲಿ ಸಾಗಿಸಲಾಗುತ್ತಿದ್ದ ಕಲ್ಲಿನ ಕಂಬಗಳ ಮೇಲೆ ಕುಳಿತಿದ್ದ ಕೂಲಿ ಕಾರ್ಮಿಕರು, ಈ ಕಲ್ಲುಗಳಡಿ ಸಿಲುಕಿಕೊಂಡು ದಾರುಣವಾಗಿ ಸಾವಿಗೀಡಾದರು.

VISTARANEWS.COM


on

chikkaballapur road accident
Koo

ಚಿಕ್ಕಬಳ್ಳಾಪುರ: ಕಲ್ಲು ಕೂಚ (ಕಂಬ) ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ (Road Accident), ಕಂಬಗಳಡಿ ಸಿಲುಕಿಕೊಂಡು ಮೂವರು ಕಾರ್ಮಿಕರು (laborers death) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕ್ಕಬಳ್ಳಾಪುರ- ಗೌರಿಬಿದನೂರು (Chikkaballapur news) ಮಾರ್ಗದ ಕಣಿವೆ ಬಳಿ ದುರ್ಘಟನೆ ನಡೆದಿದೆ.

ಕೋಲಾರದ ಮಾಲೂರಿನ ಚಿಕ್ಕತಿರುಪತಿಯಿಂದ ಮಂಚೇನಹಳ್ಳಿಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ‌ ಪಲ್ಟಿಯಾಗಿದೆ. ಕ್ಯಾಂಟರ್‌ನ ಹಿಂಬದಿಯಲ್ಲಿ ಸಾಗಿಸಲಾಗುತ್ತಿದ್ದ ಕಲ್ಲಿನ ಕಂಬಗಳ ಮೇಲೆ ಕುಳಿತಿದ್ದ ಕೂಲಿ ಕಾರ್ಮಿಕರು, ಈ ಕಲ್ಲುಗಳಡಿ ಸಿಲುಕಿಕೊಂಡು ದಾರುಣವಾಗಿ ಸಾವಿಗೀಡಾದರು.

108 ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಕರೆ ಕಳುಹಿಸಿದರೂ ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಆಂಬ್ಯುಲೆನ್ಸ್ ಬಂದಿದ್ದರೆ ಜೀವಗಳನ್ನು ಉಳಿಸಬಹುದಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ‌ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಾಲಬಾಧೆ ತಾಳಲಾಗದೆ ರೈತ ಆತ್ಮಹತ್ಯೆ

ಕೊರಟಗೆರೆ: ಸಾಲದ ಬಾಧೆ ತಾಳಲಾರದೇ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕಬ್ಬಿಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ರಾಜಣ್ಣ (38) ಮೃತಪಟ್ಟ ರೈತ. ಜಮೀನಿನಲ್ಲಿ ಬೋರ್‌ವೆಲ್ ಕೊರೆಸಲು ರೈತ ರಾಜಣ್ಣ ಹಲವು ಖಾಸಗಿ ಫೈನಾನ್ಸ್‌ಗಳಲ್ಲಿ 12 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು, ಜಮೀನಿನಲ್ಲಿ 5ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಿದ್ದು ನೀರು ಸಿಗದ ಕಾರಣ ಮನನೊಂದಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: Female Foeticide: ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಗರ್ಭಪಾತ ಮಾಡುವಾಗಲೇ ದಾಳಿ, ಮೂವರ ಅರೆಸ್ಟ್‌!

ತನ್ನ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದು, ಕಳೆದ ಭಾನುವಾರ ತಡರಾತ್ರಿ ತನ್ನ ಜಮೀನಿನಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸ್ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡು ವರ್ಷದಿಂದ ಮಳೆ ಇಲ್ಲದೆ ಬೆಳೆಗಳೆಲ್ಲವೂ ನಾಶವಾಗಿ ರೈತ ಮಾಡಿರುವ ಸಾಲ ತೀರಿಸಲಾಗದೆ ನೇಣು ಹಾಕಿಕೊಳ್ಳುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ. ಹಣದ ವಸೂಲಿಗೆ ಬರುತ್ತಿರುವ ಮೈಕ್ರೋ ಫೈನಾನ್ಸ್ ಹಾಗೂ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಬೇಕು. ಮಳೆ ಇಲ್ಲದೆ ಬೆಳೆ ಇಲ್ಲದೆ ರೈತ ಎಲ್ಲಿಂದ ಸಾಲವನ್ನು ಕಟ್ಟುತ್ತಾನೆ? ಈ ಘಟನೆಗಳ ಬಗ್ಗೆ ಕೊಡಲೇ ಸರ್ಕಾರ ಗಮನ ಹರಿಸಬೇಕು. ರೈತರ ಪ್ರಾಣವನ್ನು ಉಳಿಸಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

Continue Reading
Advertisement
Job Alert
ಉದ್ಯೋಗ6 mins ago

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

LIQUID NITROGEN
ಬೆಂಗಳೂರು7 mins ago

Liquid Nitrogen : ಕಾಟನ್ ಕ್ಯಾಂಡಿ ಬಳಿಕ ಕರ್ನಾಟಕದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ

IPL 2024
ಕ್ರೀಡೆ11 mins ago

IPL 2024: ಬಸ್‌ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

prajwal ravanna case dk shivakumar poster
ಪ್ರಮುಖ ಸುದ್ದಿ26 mins ago

Prajwal Revanna Case: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪೋಸ್ಟರ್ ವಾರ್‌

Naxal activities
ದೇಶ45 mins ago

Naxal activities: 6 ಕುಕ್ಕರ್‌ ಬಾಂಬ್‌, IED ಸ್ಫೋಟಕಗಳು ಪತ್ತೆ; ತಪ್ಪಿದ ಭಾರೀ ನಕ್ಸಲ್‌ ಅಟ್ಯಾಕ್‌

Rohit Sharma
ಕ್ರೀಡೆ1 hour ago

Rohit Sharma: ರೋಹಿತ್ ಶರ್ಮ​ ಕಣ್ಣೀರಿಗೆ ಅಸಲಿ ಕಾರಣ ಇದಂತೆ!

lok sabha election 2024 voting second phase
ಪ್ರಮುಖ ಸುದ್ದಿ1 hour ago

Lok Sabha Election 2024: ಮೊದಲೆರಡು ಗಂಟೆಗಳ ಮತದಾನ ನಿರೀಕ್ಷೆಗಿಂತ ಕಡಿಮೆ, ಇನ್ನೂ ಇಳಿಯುವ ಆತಂಕ; ಎಲ್ಲಿ ಎಷ್ಟು?

T20 World Cup 2024
ಕ್ರೀಡೆ2 hours ago

T20 World Cup 2024: ಮಿನಿ ವಿಶ್ವಕಪ್​ ಸಮರಕ್ಕೆ ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಪೂರ್ಣ; ವಿಡಿಯೊ ವೈರಲ್​

Ramana Avatara Movie
ಸಿನಿಮಾ2 hours ago

Ramana Avatara Movie: ಬಂಪರ್ ಆಫರ್; ಕೇವಲ 99 ರೂ.ಗೆ ಸಿಗಲಿದೆ ‘ರಾಮನ ಅವತಾರ’ ಸಿನಿಮಾ ಟಿಕೆಟ್

Narendra Modi
ದೇಶ2 hours ago

Narendra Modi: ಮತದಾನದ ಬಳಿಕ ಮಗುವನ್ನು ಎತ್ತಿ ಆಡಿಸಿದ ಪ್ರಧಾನಿ ಮೋದಿ; ವಿಡಿಯೋ ನೋಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ16 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ17 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ17 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌