Halashri Swameeji : ಸಿಕ್ಕಿಬೀಳುವ ಭಯ; 56 ಲಕ್ಷ ರೂ. ಹಣವನ್ನು ಹಿರೇಹಡಗಲಿ ಮಠದಲ್ಲಿ ಇಟ್ಟುಬಂದ ಮೈಸೂರಿನ ಲಾಯರ್‌! - Vistara News

ಕರ್ನಾಟಕ

Halashri Swameeji : ಸಿಕ್ಕಿಬೀಳುವ ಭಯ; 56 ಲಕ್ಷ ರೂ. ಹಣವನ್ನು ಹಿರೇಹಡಗಲಿ ಮಠದಲ್ಲಿ ಇಟ್ಟುಬಂದ ಮೈಸೂರಿನ ಲಾಯರ್‌!

Halashri Swameeji : ಮೈಸೂರಿನ ಲಾಯರ್‌ ಒಬ್ಬರು 56 ಲಕ್ಷ ರೂ. ಹಣವನ್ನು ಹಿರೇಹಡಗಲಿ ಮಠದಲ್ಲಿಟ್ಟು ಬಂದಿದ್ದಾರೆ. ನನಗೆ ಗೊತ್ತಿಲ್ಲದೆ ಸ್ವಾಮೀಜಿಯ ಡ್ರೈವರ್‌ ಇಟ್ಟು ಹೋದ ಹಣವಿದು ಎಂದು ಸಿಸಿಬಿಗೆ ತಿಳಿಸಿದ್ದಾರೆ. ಹಾಲಶ್ರೀ ವಿಚಾರಣೆ ಶುರುವಾಗುತ್ತಿದ್ದಂತೆಯೇ ಇಂಥ ಬೆಳವಣಿಗೆ ನಡೆದಿದೆ.

VISTARANEWS.COM


on

Pranav prasad lawyer Mysore
ಇವರೇ ಹಿರೇಹಡಗಲಿ ಮಠದಲ್ಲಿ 56 ಲಕ್ಷ ರೂ. ಇಟ್ಟು ಬಂದ ಮೈಸೂರಿನ ಲಾಯರ್‌ ಪ್ರಣವ್‌ ಪ್ರಸಾದ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಟೀಮ್‌ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬಿಜೆಪಿ ಟಿಕೆಟ್‌ ಹೆಸರಿನಲ್ಲಿ 5 ಕೋಟಿ ರೂ. ವಂಚಿಸಿದ (Five Crore rupees fraud) ಪ್ರಕರಣದಲ್ಲಿ ಯಾರ್ಯಾರೋ ಸಿಕ್ಕಿಬೀಳುವ ಸಾಧ್ಯತೆಗಳು ಹೆಚ್ಚುತ್ತಿವೆ. ಇದೀಗ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swameeji) ಬಂಧನಕ್ಕೆ ಒಳಗಾಗಿ ಅವರ ವಿಚಾರಣೆ ಶುರುವಾಗುತ್ತಿರುವಂತೆಯೇ ಮೈಸೂರಿನ ವಕೀಲರೊಬ್ಬರು ತನ್ನಲ್ಲಿದ್ದ 56 ಲಕ್ಷ ರೂ.ಯನ್ನು ಹಿರೇಹಡಗಲಿ ಮಠದಲ್ಲಿಟ್ಟು ಬಂದಿದ್ದಾರೆ!

ಮೈಸೂರಿನಲ್ಲಿ ವಕೀಲರಾಗಿರುವ ಪ್ರಣವ್‌ ಪ್ರಸಾದ್‌ (Lawyer Pranav Prasad) ಎಂಬವರು ಈಗ ಕಾರಿನಲ್ಲಿ ಹಿರೇಹಡಗಲಿಗೆ ಹೋಗಿ ಅಲ್ಲಿನ ಪಲ್ಲಕಿಯ ಮೇಲೆ 56 ಲಕ್ಷ ರೂ. ಇರುವ ಚೀಲವನ್ನು ಇಟ್ಟುಬಂದಿದ್ದಾರೆ. ಜತೆಗೆ ಅಲ್ಲಿರುವ ಅಭಿನವ ಹಾಲಶ್ರೀಗಳ ತಂದೆಗೆ ಹೇಳಬೇಕು ಎಂದು ಬಯಸಿದ್ದೆ. ಆದರೆ, ಅವರು ಸಿಗಲಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ ಮತ್ತು ಸಿಸಿಬಿಯ ಡಿಸಿಪಿಯರಿಗೆ ಒಂದು ಪತ್ರವನ್ನು ಬರೆದು ತಾವು ಹಣ ಇಟ್ಟು ಬಂದಿರುವ ಬಗ್ಗೆ ವಿಡಿಯೊ ಕೂಡಾ ಮಾಡಿದ್ದಾರೆ.

Pranav prasad Mysore
ಹಿರೇಹಡಗಲಿ ಮಠದಲ್ಲಿ ಹಣ ಇಟ್ಟು ಬಂದ ಮೈಸೂರಿನ ಲಾಯರ್‌ ಪ್ರಣವ್‌ ಪ್ರಸಾದ್‌

ಈ ಹಣವನ್ನು ಸ್ವಾಮೀಜಿಯವರ ಚಾಲಕ ಕಚೇರಿಯಲ್ಲಿ ಇಟ್ಟು ಹೋಗಿದ್ದ. ಅದು ಹಣ ಎಂದು ಮೊದಲು ತಿಳಿದಿರಲಿಲ್ಲ. ಬಳಿಕ ಆತನನ್ನು ಕರೆಸಿ ವಿಚಾರಿಸಿದಾಗಲಷ್ಟೇ ಗೊತ್ತಾಯಿತು. ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದರೂ ಆತ ಒಯ್ಯಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸ್ವಾಮೀಜಿಗೂ ಪ್ರಣವ್‌ಗೂ ಏನು ಸಂಬಂಧ? ಹಾಗಿದ್ದರೆ ಪತ್ರದಲ್ಲಿ ಏನಿದೆ?

  1. ಪಣವ್ ಪ್ರಸಾದ್ (53 ವರ್ಷ) ಆದ ನಾನು ಮೈಸೂರಿನ ನಂ-15171512/ ಸಿ ಮತ್ತು ಡಿ ಬ್ಲಾಕ್, ಅನಿಕೇತನ ರಸ್ತೆ, ಕೃಷ್ಣಂ ಸುವಿಧಾ ಅಪಾರ್ಟೆಂಟ್ ಕುವೆಂಪು ನಗರ, ಮೈಸೂರು -23 ಈ ವಿಳಾಸದಲ್ಲಿ ವಾಸವಾಗಿದ್ದು, ವಕೀಲ ವೃತ್ತಿ ಮಾಡಿಕೊಂಡಿರುತ್ತೇನೆ.
  2. ಚೈತ್ರ ಕುಂದಾಪುರ ಪ್ರಕರಣದಲ್ಲಿ ಸುದ್ದಿಯಲ್ಲಿರುವ ಇದೇ ಅಭಿನವ ಹಾಲಶ್ರೀ ಸ್ವಾಮೀಜಿಗಳು ನನಗೂ ಮತ್ತು ನನ್ನ ಕುಟುಂಬಿಕರಿಗೂ ಪರಿಚಯವಿದ್ದು, ಕಳೆದ ಎಂಟು ತಿಂಗಳಿಂದ ನಮ್ಮ ಒಡನಾಟದಲ್ಲಿ ಇದ್ದರು.
  3. ಇವರು ನಮ್ಮ ಮನೆಗೆ ಬರುವುದು ಆಶೀರ್ವಚನ ನೀಡುವುದು ಪುಸಾದ ಸ್ವೀಕರಿಸುವುದು ಮಾಡುತ್ತಾ ಬಂದಿದ್ದರು. ಇವರ ಬಗ್ಗೆ ನನಗೆ ವಿಶ್ವಾಸ ಹಾಗೂ ಗೌರವ ಇತ್ತು. ಇವರು ನಿಜವಾದ ಧರ್ಮಭೀರು ಸ್ವಾಮೀಜಿ ಎಂದು ನಾವು ಇದುವರೆಗೆ ನಂಬಿದ್ದವು. ಆದರೆ, ಆದರೆ, ಮಾಧ್ಯಮಗಳಲ್ಲಿ ವರದಿಯಾದ ವಿಚಾರ ನೋಡಿ ನಮಗೆ ಆಘಾತವಾಯಿತು.
  4. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಸದಾ ಸ್ವಾಮೀಜಿಯ ಜೊತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದವು.
  5. ಅದಾದ ನಂತರ ಕರೆ ಮಾಡಿದ ಚಾಲಕ ರಾಜು ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದ್ದರು. ಜೊತೆಗೆ ವಕೀಲರಿಗೆ ಒಂದಷ್ಟು ಬ್ಯಾಗ್ ತಲುಪಿಸಲು ಹೇಳಿದ್ದರು. ಆದರೆ ಆ ವಕೀಲರು ನನಗೆ ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು.
  6. ಕೂಡಲೇ ಅವನನ್ನು ಗದರಿಸಿ ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಸೂಚನೆ ಕೊಟ್ಟೆ. ಅದಾದ ನಂತರ ಆ ಬ್ಯಾಗ್‌ನಿಂದ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಉಳಿದ ಹಣವನ್ನು ಹಣವನ್ನು ಅದನ್ನು ದಯಮಾಡಿ ನಮ್ಮ ಮಠದ ಪೂಜಾರಿ ಹಾಲಸ್ವಾಮಿಯವರಿಗೆ ತಲುಪಿಸಿ ಎಂದು ಸ್ವಾಮೀಜಿಯವರು ಹೇಳಿದ್ದಾರೆ ಎಂದು ಹೇಳಿದನು.
  7. ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಅವನಿಗೆ ಹಲವು ಬಾರಿ ಹೇಳಿದೆ. ಮೂರ್ನಾಲ್ಕು ದಿನವಾದರೂ ಅವರು ಯಾರು ಈ ಕಡ ತಲೆಹಾಕಲಿಲ್ಲ. ಸ್ವಾಮೀಜಿ ಹೇಳಿದಂತೆ ಮಠದಲ್ಲಿ ಹಾಲಸ್ವಾಮಿ ಎಂಬ ಎಂಬುವರಿಗೆ ಇಂದು ಬೆಳಗ್ಗೆ ತಲುಪಿಸಿ ಬಂದಿರುತ್ತೇನೆ.
  8. ಈ ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಮಾನ್ಯರಾದ ತಮ್ಮ ಗಮನಕ ಈ ವಿಚಾರಗಳನ್ನು ತರುತ್ತಿದ್ದು, ಈ ವಿಚಾರಗಳು ಮುಂದಿನ ತಮ್ಮ ತನಿಖೆಗೆ ಅನುಕೂಲವಾಗುವುದು ಎಂಬ ಉದ್ದೇಶದಿಂದ ತಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
  9. ನನಗೆ ಜೀವ ಭಯವಿದ್ದು ತಾವು ಸೂಕ್ತ ರಕ್ಷಣೆ ನೀಡಬೇಕೆಂದು ಕೋರುತ್ತೇನೆ.

ಇದಿಷ್ಟು ಪತ್ರದಲ್ಲಿರುವ ಮಾಹಿತಿ.

Pranav prasad money and letter
ಪವನ್‌ ಪ್ರಸಾದ್‌ ಇಟ್ಟು ಬಂದ ಹಣ ಮತ್ತು ಸಿಸಿಬಿಗೆ ಬರೆದ ಪತ್ರ

ಪತ್ರದಲ್ಲಿ ಇದು ಹಾಲಶ್ರೀ ಸ್ವಾಮೀಜಿ ಅವರ ಚಾಲಕ ಬಿಟ್ಟು ಹೋದ ಬ್ಯಾಗ್‌ನಲ್ಲಿ ಈ ಹಣವಿತ್ತು ಎಂದು ಹೇಳಿರುವ ಪ್ರಣವ್‌ ಪ್ರಸಾದ್‌ ಅವರು ಹಿರೇಹಡಗಲಿ ಮಠದಲ್ಲಿ ಮಾಡಿರುವ ವಿಡಿಯೊದಲ್ಲಿ ಇದು ಹಾಲಶ್ರೀ ಸ್ವಾಮೀಜಿಗಳು ನನಗೆ ಕೊಟ್ಟ ಹಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: Halashri Swameeji : ಹಾಲಶ್ರೀ ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ; ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತಾ?

ಸಿಕ್ಕಿಬೀಳುವ ಭಯ ಕಾಡಿದ್ದರಿಂದ ಈ ಕ್ರಮ ಸಾಧ್ಯತೆ

ಹಾಲಶ್ರೀ ಸ್ವಾಮೀಜಿ ಅವರು ಗೋವಿಂದ ಪೂಜಾರಿಯಿಂದ ಪಡೆದ ಹಣದಲ್ಲಿ 50 ಲಕ್ಷ ರೂ.ಯನ್ನು ಮರಳಿಸಿದ್ದಾರೆ. ಉಳಿದ ಹಣದಲ್ಲಿ ಭೂಮಿ, ಪೆಟ್ರೋಲ್‌ ಪಂಪ್‌ ಮತ್ತು ಕಾರು ಖರೀದಿಸಿದ್ದಾರೆ. ನಿಜವೆಂದರೆ, ಇಷ್ಟಲ್ಲದೆಯೂ ಸಾಕಷ್ಟು ಹಣ ಹಾಲಶ್ರೀಯವರ ಕೈಯಲ್ಲಿತ್ತು. ಒಂದೊಮ್ಮೆ ತಮ್ಮ ಬಂಧನವಾದರೆ ಅದೆಲ್ಲವೂ ಸಿಕ್ಕಿಬಿಡುತ್ತದೆ ಎಂಬ ಕಾರಣಕ್ಕಾಗಿ ತಮ್ಮ ಆತ್ಮೀಯರ ಮನೆಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಣವ್‌ ಪ್ರಸಾದ್‌ ಅವರಿಗೆ ಇದು ಹಣ ಎಂದು ಗೊತ್ತಿಲ್ಲದಿರುವ ಸಾಧ್ಯತೆ ಕಡಿಮೆ. ಅಥವಾ ಅವರೇ ಹೇಳಿದಂತೆ ಸುಮ್ಮನೆ ಇಟ್ಟು ಹೋಗಿರಲೂಬಹುದು. ಆದರೆ, ಈಗ ಹಾಲಶ್ರೀ ಸ್ವಾಮೀಜಿಗಳ ಬಂಧನವಾಗಿರುವುದರಿಂದ ವಿಚಾರಣೆಯ ವೇಳೆ ತಮ್ಮ ಹಣ ಮೈಸೂರಿನ ಪ್ರಣವ್‌ ಪ್ರಸಾದ್‌ ಅವರ ಮನೆಯಲ್ಲಿದೆ ಎಂದು ಸ್ವಾಮೀಜಿ ಹೇಳಿಯೇ ಹೇಳುತ್ತಾರೆ. ಆಗ ಸಿಸಿಬಿ ತಮ್ಮನ್ನೂ ಕಟಕಟೆಗೆ ಎಳೆಯುವ ಸಾಧ್ಯತೆ ಇರುವುದರಿಂದ ಮೊದಲೇ ಇದನ್ನು ಮಠಕ್ಕೆ ತಲುಪಿಸಿದರೆ ತಾವು ಸೇಫ್‌ ಆಗಬಹುದು ಎಂಬ ಉದ್ದೇಶದಿಂದ ಪ್ರಣವ್‌ ಪ್ರಸಾದ್‌ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟಾದರೂ ಪೊಲೀಸರು ಪ್ರಣವ್‌ ಪ್ರಸಾದ್‌ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದೇ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

CT Ravi: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರು ಹೇಗೆ ಹಗರಣ ಎಸಗಿದ್ದಾರೆ ಎಂಬುದರ ಕುರಿತು ಸಿ.ಟಿ.ರವಿ ಅವರು ವಿಸ್ತೃತವಾಗಿ ಹೇಳಿದ್ದಾರೆ. ಪತ್ರದ ಪೂರ್ತಿ ಸಾರಾಂಶ ಇಲ್ಲಿದೆ.

VISTARANEWS.COM


on

CT Ravi
Koo

ಬೆಂಗಳೂರು: ಮುಡಾ ನಿವೇಶನ ಪ್ರಕರಣಕ್ಕೆ (MUDA Site Scam) ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸದನದಲ್ಲಿ ಉತ್ತರ ಕೊಡದಿರುವುದು, ಚರ್ಚೆಗೆ ಅವಕಾಶ ನೀಡದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ (CT Ravi) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತ ಹಾಗೂ ಸುದೀರ್ಘ ಪತ್ರ ಬರೆಯುವ ಮೂಲಕ ಮುಡಾ ಪ್ರಕರಣವನ್ನು ವಿಸ್ತೃತವಾಗಿ ಬಹಿರಂಗಗೊಳಿಸಿದ್ದಾರೆ. ಹಾಗಾದರೆ, ಸಿ.ಟಿ.ರವಿ ಪತ್ರದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಸಾರಾಂಶ.

ಮಾನ್ಯರೆ…
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರಾಯಿತ್ವ ಇರುವ ಆಡಳಿತ ಪಕ್ಷ, ಪ್ರತಿಪಕ್ಷಗಳ ಆರೋಪ, ಪ್ರಶ್ನೆಗಳಿಗೆ ಉತ್ತರಿಸುವ ಅತ್ಯುನ್ನತ ವೇದಿಕೆ ವಿಧಾನ ಮಂಡಲವೇ ಅಲ್ಲವೇ. ಅಲ್ಲಿ ಪ್ರತಿಪಕ್ಷಗಳಿಗೆ ಆರೋಪಿಸಲು, ಪ್ರಶ್ನಿಸಲು ಅವಕಾಶ ಕೊಡದೇ ಸದನದ ಹೊರಗೆ ಬಂದು ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಮತ್ತು ತಮ್ಮ ಸಾರ್ವಜನಿಕ ಬದುಕಿಗೆ ಸಂಬಂಧಿಸಿದಂತೆ ಅರ್ಧ ಸತ್ಯವನ್ನು ಮಾತ್ರ ಹೇಳಿದ್ದೀರಿ. ಪೂರ್ಣ ಸತ್ಯವನ್ನು ಪ್ರಜಾಪ್ರಭುತ್ವದ ಪ್ರಭುಗಳಿಗೆ ಮುಟ್ಟಿಸಲು ಮಾಧ್ಯಮದ ಮೂಲಕ ನಿಮಗೆ ಬಹಿರಂಗ ಪತ್ರ ಬರೆಯುತ್ತಿದ್ದೇನೆ.

ಮುಡಾ ಹಗರಣ

1935ರಲ್ಲಿ ಅಂದಿನ ಮೈಸೂರು ಸರ್ಕಾರ ಕೆಸರೆಗದ್ದೆ ಗ್ರಾಮದ ಸರ್ವೆ ನಂ. 462, 464 ರ ಜಮೀನನ್ನು ಹರಾಜು ಮಾಡುವಾಗ ಪರಿಶಿಷ್ಟ-1 ಎಂದು ಹರಾಜು ಮಾಡಿ ಕೇವಲ ಒಂದು ರೂ. ಕಿಮ್ಮತ್ತು ಕಟ್ಟಿಸಿಕೊಂಡು ಕ್ರಮವಾಗಿ 4 ಎಕರೆ 37 ಗುಂಟೆ ಮತ್ತು 3 ಎಕರೆ 16 ಗುಂಟೆ ಒಟ್ಟು 8 ಎಕರೆಗೂ ಹೆಚ್ಚು ಜಮೀನನ್ನು ಜವರ ಉರುಫ್ ನಿಂಗ ಎಂಬುವವರಿಗೆ ನೀಡಿದೆ. ಪರಿಶಿಷ್ಟ -1 ಅಂದರೆ ವಿಶೇಷವಾಗಿ ಪರಿಶಿಷ್ಟ ಜನಾಂಗಕ್ಕೆ ಕಡಿಮೆ ಕಿಮ್ಮತ್ತಿನಲ್ಲಿ ನೀಡಿರುವುದು ಇದು ಪಿಟಿಸಿಎಲ್ ಆಕ್ಟ್ ವ್ಯಾಪ್ತಿಗೆ ಬರುವುದಿಲ್ಲವೇ?

CT Ravi

1968 ರಲ್ಲಿ ಜವರ ಉರುಫ್ ನಿಂಗ ಅವರ ಮೂರು ಮಕ್ಕಳಲ್ಲಿ ಇಬ್ಬರು ಮಕ್ಕಳಾದ ಮಲ್ಲಯ್ಯ ಮತ್ತು ದೇವರಾಜು ಇವರು 300 ರೂ.ಗಳಿಗೆ ಮತ್ತೊಬ್ಬ ಸಹೋದರ ಮೈಲಾರಯ್ಯನವರಿಗೆ ಸರ್ವೆ ನಂ. 464, 462ರ ಜಮೀನಿನ ಹಕ್ಕು ಖುಲಾಸೆ ಪತ್ರ ನೋಂದಣಿ ಇಲಾಖೆ ಮುಖಾಂತರವೇ ನೋಂದಣಿ ಮಾಡಿಕೊಟ್ಟಿರುವುದು ಸತ್ಯವಲ್ಲವೇ? ಇದಕ್ಕೆ ಸಂಬಂಧಿಸಿದಂತೆ ಎಂ.ಆರ್. ದಾಖಲೆಗಳನ್ನು ಪರಿಶೀಲಿಸಬಹುದಾಗಿದ್ದು ಜಮೀನಿನ ವಾರಸುದಾರರು ಮೈಲಾರಯ್ಯ ಮತ್ತು ಅವರ ಕುಟುಂಬಕ್ಕೆ ಸೇರಿರುವುದಾಗಿತ್ತದೆ.

1992 ರಲ್ಲಿ ಮುಡಾ 4/1 ನೋಟಿಫಿಕೇಶನ್ ಆಗಿದ್ದು ನಂತರ 1997 ರ ಸಾಲಿನಲ್ಲಿ 6/1 ನೋಟಿಫಿಕೇಶನ್ ಆಗಿರುವುದು ಸತ್ಯವಲ್ಲವೇ? ನೀವು ವಿಲೇಜ್ ಮ್ಯಾಪ್ ತೋರಿಸಿ ಈ ಜಮೀನು ಗ್ರಾಮದ ಅಂಚಿನಲ್ಲಿ ಬರುತ್ತದೆ ಎಂದು ಅರ್ಧಸತ್ಯವನ್ನು ಹೇಳಿದ್ದೀರಿ, ಆದರೆ ಲೇಔಟ್ ಪ್ಲಾನ್‌ನಲ್ಲಿ ಲೇಔಟ್‌ನ ಮಧ್ಯದಲ್ಲೇ ಈ ಜಮೀನು ಬಂದರೂ ತಪ್ಪು ಮಾಹಿತಿ ನೀಡಿ ಡಿ ನೋಟಿಫಿಕೇಶನ್ ಮಾಡಲಾಗಿದೆ. ಆ ಸಂದರ್ಭದಲ್ಲಿ ತಾವು ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಿಜವಲ್ಲವೇ? ಆರ್.ಟಿ.ಸಿ. ಸ್ವಾಧೀನದ ಕಾಲಂನಲ್ಲಿ ಸರ್ವೇ ನಂ. 464 ಮುಡಾ ಎಂದಿರುವುದು ಸತ್ಯವಲ್ಲವೇ?

1999ರಿಂದ 2003ರವರೆಗೂ ಮುಡಾದವರು ಇಂಡೀಕರಣ ಮಾಡಿಸಿದ್ದು, ಅದರಲ್ಲಿ ಭೂ ಸ್ವಾಧೀನದಾರರು ಮೂಡಾ ಎಂದೇ ಇರುತ್ತದೆ. 2003 ರಲ್ಲಿ 35 ವರ್ಷಗಳ ಹಿಂದೆ ಮರಣ ಹೊಂದಿದ ಜವರ ಉರುಫ್ ನಿಂಗ ಇವರ ಹೆಸರಿಗೆ ಮರುಸ್ಥಾಪನೆ ಮಾಡಿಸಿ ನಂತರ ದೇವರಾಜುರವರ ಹೆಸರಿಗೆ ವರ್ಗಾವಣೆ ಮಾಡಿಸಿರುತ್ತಾರೆ. 2004 ಮತ್ತು 2005ರ ಸಾಲಿನ ಆರ್.ಟಿ.ಸಿ.ಯಲ್ಲಿ ಮಾತ್ರ ಕ್ರಮವಾಗಿ ದೇವರಾಜ ಮತ್ತು ಮಲ್ಲಿಕಾರ್ಜುನಸ್ವಾಮಿಯವರ ಹೆಸರು
ಇದೆ. ಈ ಸಂದರ್ಭದಲ್ಲಿಯೂ ತಾವು ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಿಜವಲ್ಲವೇ?

CT Ravi
CT Ravi

2006 ರಿಂದ ನಿರಂತರವಾಗಿ ಇಂದಿನವರೆಗೂ ಆರ್.ಟಿ.ಸಿ.ಯಲ್ಲಿ ಭೂಸ್ವಾಧೀನದಾರರ ಹೆಸರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದು ಇರುವುದು ಸತ್ಯವಲ್ಲವೇ? 2003 ರಿಂದಲೇ ಈ ಜಾಗದ ನಿವೇಶನ ಹಂಚಿಕೆಯಾಗಿ 12 ಕ್ಕೂ ಹೆಚ್ಚು ಜನರಿಗೆ ನಿವೇಶನ ಹಂಚಿರುವುದು ಸತ್ಯವಲ್ಲವೇ?

ಟೆಂಡರ್‌, ನಕ್ಷೆ ಪರಿಶೀಲಿಸಿ

ದಿನಾಂಕ-27-4-2001ರ ಕಂಟ್ರಾಕ್ಟ್ ಅಗ್ರಿಮೆಂಟ್‌ನಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದೇವನೂರು ಬಡಾವಣೆ ಅಭಿವೃದ್ಧಿ ಪಡಿಸಲು ಎಲ್ & ಟಿ ಕಂಪೆನಿಗೆ ಗುತ್ತಿಗೆ ನೀಡಿದ್ದು, ಟೆಂಡರ್ ಮೊತ್ತ 11,68,86,652/-ರೂಗಳಾಗಿದ್ದು ಕಾಮಗಾರಿ ಪ್ರಾರಂಭದ ದಿನಾಂಕ-18-5-2001 ಆಗಿದ್ದು ಕಾಮಗಾರಿ ಮುಕ್ತಾಯದ ದಿನಾಂಕ -17-5-2003 ಆಗಿರುತ್ತದೆ. ಅಂದರೆ ನಿಮ್ಮ ಭಾವಮೈದುವ ಜಮೀನು ಖರೀದಿಸುವ ಮೊದಲೇ ಸರ್ವೇ ನಂ. 464 ರ 3 ಎಕರೆ 16 ಗುಂಟೆ ಜಮೀನಿನಲ್ಲಿ ರಸ್ತೆ, ಪಾರ್ಕು, ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿರುವುದು ಸತ್ಯವಲ್ಲವೇ? ಇದಕ್ಕೆ ಸಂಬಂಧಿಸಿದಂತೆ ಬಡಾವಣೆ ನಕ್ಷೆ, ಕಾಮಗಾರಿ ಟೆಂಡರ್, ಕಾಮಗಾರಿ ಗುತ್ತಿಗೆ ಪರಿಶೀಲಿಸಬಹುದು.

ನಿಮ್ಮ ಭಾವಮೈದುನ ಖರೀದಿಸುವುದಕ್ಕೆ ಮುಂಚಿತವಾಗಿಯೇ ಅಭಿವೃದ್ಧಿಗೊಂಡು ನಿವೇಶನ ಹಂಚಿಕೆಯಾದಂತಹ ಸರ್ವೆ ನಂ. 464 ರ 3 ಎಕರೆ 16 ಗುಂಟೆ 2004 ಕೃಷಿ ಜಮೀನಾಗಿ ಕಾಣಿಸಿದ್ದು ಹೇಗೆ? ಮತ್ತು ಸ್ಥಳಪರಿಶೀಲಿಸದೆಯೇ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಅನ್ಯಕಾಂತ ಮಾಡಲು ಪ್ರಭಾವ ಬೀರಿದ ವ್ಯಕ್ತಿ ತಾವೇ ಅಲ್ಲವೇ? ಆಗಲೂ ಸಹ ತಾವು ಉಪಮುಖ್ಯಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ.

ನಿಮ್ಮ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಈ ಜಮೀನು ಖರೀದಿಸುವ ಸಂದರ್ಭದಲ್ಲಿ ನೀಡಿರುವ ವಿಳಾಸ ಮನೆ ನಂ. 1245, ಟಿ.ಕೆ. ಲೇಔಟ್, 4 ನೇ ಹಂತ, 3 ನೇ ಕ್ರಾಸ್, ಕುವೆಂಪುನಗರ, ಮೈಸೂರು ನಗರ ಈ ವಿಳಾಸವು ತಾವು ಈ ಹಿಂದೆ ವಾಸ ಮಾಡುತ್ತಿದ್ದ ಮನೆಯ ವಿಳಾಸವಲ್ಲವೇ?

ಮೈಲಾರಯ್ಯ ಮತ್ತು ಮಕ್ಕಳು ವಾರಸುದಾರರು ಆಗಿದ್ದರೂ ಸಹ ಎಂ.ಆರ್. ಪರಿಶೀಲಿಸದೇ ನಿಧನ ಹೊಂದಿ 35 ವರ್ಷಕ್ಕೂ ಹೆಚ್ಚುಕಾಲವಾಗಿದ್ದರೂ ಸಹ ಜವರ ಉರುಫ್ ನಿಂಗ ಅವರ ಹೆಸರಿಗೆ ಮರುಸ್ಥಾಪಿಸಿರುವುದು ಮತ್ತು ಜೆ. ದೇವರಾಜು ಹೆಸರಿಗೆ ಖಾತೆ ವರ್ಗಾವಣೆ ಮಾಡಿರುವುದು ನಿಯಮ ಬಾಹಿರವಲ್ಲವೇ? ಜೆ. ದೇವರಾಜುರವರು ಸರ್ಕಾರಿ ಉದ್ಯೋಗಿಯಾಗಿದ್ದರೂ ಸಹ ತಪ್ಪು ಮಾಹಿತಿ ನೀಡಿ ನಾನು ರೈತ, ಈ ಜಮೀನಿನಲ್ಲಿ ತೆಂಗಿನ ಸಸಿಗಳು ಸೇರಿದಂತೆ ಮಾವು ಇತ್ಯಾದಿ ಬೆಳೆಗಳು ಇದ್ದು, ನನಗೆ ಇದನ್ನು ಬಿಟ್ಟರೆ ಇನ್ಯಾವುದೇ ಆದಾಯವಿಲ್ಲವೆಂದು ಸುಳ್ಳು ಮಾಹಿತಿ ನೀಡಿ ತಮ್ಮ ಪ್ರಭಾವದಿಂದ ಡಿ ನೋಟಿಫಿಕೇಶನ್ ಮಾಡಿಸಲಾಗಿದೆ ಎಂಬ ಆರೋಪವಿದೆ.

ಸತ್ಯದ ಅರಿವು ಇರಲಿಲ್ಲವೇ?

2010 ರಲ್ಲಿ ತಮ್ಮ ಧರ್ಮಪತ್ನಿ ಪಾರ್ವತಮ್ಮನ ಹೆಸರಿಗೆ ತಮ್ಮ ಭಾವಮೈದುನ ದಾನಪತ್ರ ಮಾಡುವಾಗಲೇ ಮುಡಾ ಸರ್ವೇ ನಂ 464 ರ 3 ಎಕರೆ 16 ಗುಂಟೆ ಜಾಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ ಸತ್ಯದ ಅರಿವು ತಮಗಿರಲಿಲ್ಲವೇ?

2013ರ ಚುನಾವಣಾ ಪ್ರಮಾಣ ಪತ್ರದಲ್ಲಿ ನೀವು ಈ ಸತ್ಯವನ್ನು ಮುಚ್ಚಿಟ್ಟಿದ್ದೀರಿ. ಅದಕ್ಕೆ ನೀವು ಕೊಟ್ಟಿರುವ ಉತ್ತರ ಕಣ್ಣಪ್ಪಿನಿಂದ ಹೀಗೆ ಆಗಿದೆ ಎಂದಿದ್ದೀರಿ. ಆರ್.ಪಿ. ಆಕ್ಟ್ ಸೆಕ್ಷನ್ 125 ಎ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಲ್ಲವೇ? (6 ತಿಂಗಳು ಸಜೆ ಮತ್ತು ದಂಡ) 2014 ರಲ್ಲಿ ನಿಮ್ಮ ಧರ್ಮಪತ್ನಿಯವರು ನನ್ನ ಜಮೀನು ಅತಿಕ್ರಮಣವಾಗಿದೆ ಎಂದು ದೂರು ನೀಡಿದಾಗ ಮುಡಾದವರು ಪರ್ಯಾಯವಾಗಿ ಅಂದಿನ 15 ಲಕ್ಷ ಮಾರುಕಟ್ಟೆ ದರದಂತೆ ಕೊಡುತ್ತೇವೆಂದು ಪತ್ರ ಬರೆದಿದ್ದು ನಿಜವಲ್ಲವೇ?

2010 ರಲ್ಲಿ ನಿಮ್ಮ ಧರ್ಮಪತ್ನಿಯವರಿಗೆ ದಾನಪತ್ರ ಆಗುವಾಗ ಅನ್ಯಕ್ರಾಂತವಾಗಿರುವ ಭೂಮಿಯನ್ನು ತಾವು ತಮ್ಮ 2018 ರ ಚುನಾವಣಾ ಪ್ರಮಾಣಪತ್ರದಲ್ಲಿ ಅನ್ಯಕಾಂತವಾದ ಜಾಗವನ್ನು ಕೃಷಿ ಭೂಮಿ ಹಾಗೂ ಇದರ ಮೌಲ್ಯ 25 ಲಕ್ಷ ರೂ. ಎಂದು ನಮೂದಿಸಲಾಗಿದೆ. 2023 ರ ಚುನಾವಣಾ ಪ್ರಮಾಣಪತ್ರದಲ್ಲಿ ಇದೇ ಜಾಗದ ಮೌಲ್ಯವನ್ನು 8 ಕೋಟಿಯೆಂದು ನಮೂದಿಸಿದ್ದೀರಿ.

ಈಗ ಮುಖ್ಯಮಂತ್ರಿಗಳಾಗಿರುವ ತಾವು ನಿವೇಶನವನ್ನು ವಾಪಸ್ ನೀಡಲು ಕೇಳುತ್ತಿರುವ ಮೌಲ್ಯ 65 ಕೋಟಿ ರೂ.ಗಳು. ಈಗ ನೀವು ಅವರ ಕುಟುಂಬ ಒಡೆದರೂ ಎಂದು ಹೇಳಿದ್ದೀರಿ ಮೈಲಾರಯ್ಯ ಮತ್ತು ಅವರ ಮಕ್ಕಳಿಗೆ ಸೇರಬೇಕಾದ ಆಸ್ತಿಯನ್ನು ಜೆ. ದೇವರಾಜು ಹೆಸರಿಗೆ ಖಾತೆ ಮಾಡಿಸಿ ಅಲ್ಲಿಂದ ನಿಮ್ಮ ಭಾವಮೈದುನ ನಂತರ ನಿಮ್ಮ ಧರ್ಮಪತ್ನಿ ಹೆಸರಿಗೆ ವರ್ಗಾಯಿಸಿಕೊಂಡಿರುವುದು ಮೈಲಾರಯ್ಯರವರ ಕುಟುಂಬದವರಿಗೆ ಮಾಡಿದ ಮೋಸವಲ್ಲವೇ?

UDD 08 TTP 2014, Dated 11-2-2015 ರಂತೆ ಅಧಿಸೂಚನೆ ಹೊರಡಿಸಿ, 50:50ರ ನಿಯಮ ರೂಪಿಸಿದ್ದು ನಿಯಮದಂತೆ ನಿವೇಶನ ಹಂಚಿಕೆ ಮಾಡುವಾಗ ಸರ್ಕಾರದ ಅನುಮತಿ ಪಡೆಯಲಾಗಿದೆಯೇ? ನಿಮ್ಮ ಧರ್ಮಪತ್ನಿ ಪಾರ್ವತಮ್ಮನವರಿಗೆ 50:50 ನಿಯಮದಂತೆ ನಿವೇಶನ ಪಡೆಯಲು ಸರ್ಕಾರದ ಅನುಮತಿ ಕಡ್ಡಾಯವಾಗಿದ್ದು, ಸರ್ಕಾರ ಅನುಮತಿ ನೀಡಿದೆಯೇ? ಇದೇ ರೀತಿ ರಾಜ್ಯದಲ್ಲಿ ಜಮೀನು ಕಳೆದುಕೊಂಡು ಪರಿಹಾರ ಪಡೆಯದೇ ಇರುವ ಪ್ರಕರಣಗಳಿಗೆ 50:50 ನಿಯಮದ ಅನುಪಾತದಂತೆ ನಿವೇಶನ ನೀಡಲಾಗಿದೆಯೇ?

ಸಿಬಿಐ ತನಿಖೆಗೆ ವಹಿಸಿ

ನೀವು ನನ್ನ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದ್ದೀರಿ. ನಮಗೆ ತಿಳಿದಿರುವಂತೆ ಸುಮಾರು 70 ಕ್ಕೂ ಹೆಚ್ಚು ದೂರುಗಳು ಲೋಕಾಯುಕ್ತರ ಮುಂದೆ ನಿಮ್ಮ ಮೇಲೆ ದಾಖಲಾಗಿದೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಸತ್ಯಾಸತ್ಯತೆ ಹೊರಗೆ ಬರುತ್ತದೆ.

ಹಿಂದಿನ ತಮ್ಮ ಸರ್ಕಾರದ ಆರಂಭದ ಅವಧಿಯಲ್ಲಿ ಇಬ್ಬರು ಇಂಜಿನಿಯರ್‌ಗಳ ಮನೆಯಲ್ಲಿ ನೂರುಕೋಟಿಗಟ್ಟಲೇ ಹಣ ಸಿಕ್ಕಿದ್ದು, (ಡಿನೋಟಿಫಿಕೇಶನ್ ಸಂದರ್ಭದಲ್ಲಿ) ಹಾಗೂ ಇಂದಿನ ಪ್ರಸ್ತುತ ಸರ್ಕಾರದ ಆರಂಭದಲ್ಲಿಯೇ ಇಬ್ಬರು ಪ್ರಭಾವಿಗಳ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದ್ದು, ಎಸ್‌ಹೆಚ್‌ಡಿಪಿ ಟೆಂಡರ್ ಪ್ಯಾಕೇಜ್ ಮಾಡಿ ನಾಲ್ಕು ಸಾವಿರ ಕೋಟಿ ಟೆಂಡರ್ ನಿಗದಿಪಡಿಸಿ ಬೇಕಾದವರಿಗೆ ನೀಡಿರುವುದು, ಬಿಬಿಎಂಪಿನಲ್ಲಿ ಎರಡು ಸಾವಿರ ಕೋಟಿ ಟೆಂಡರ್ ಪ್ಯಾಕೇಜ್ ಮಾಡಿ ಪರ್ಸೆಂಟೇಜ್ ನಿಗದಿಮಾಡಿರುವುದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ ಬೆಂಗಳೂರು ಎನ್ನುವ ಸಂಘಕ್ಕೆ ಟೆಂಡರ್ ನೀಡಿ ಪರ್ಸೆಂಟೇಜ್ ನಿಗದಿ ಮಾಡಿರುವುದು ತಮ್ಮ ಪ್ರಾಮಾಣಿಕ ಆಡಳಿತ ಮಾದರಿಗಳೇ?

ಪ್ರತಿಯೊಂದು ಆಯಕಟ್ಟಿನ ಹುದ್ದೆಗೂ ದರ ನಿಗದಿ ಮಾಡಿರುವ ಬಗ್ಗೆ ವಿಧಾನಸೌಧದ ಗೋಡೆಗಳೇ ಮಾತನಾಡುತ್ತಿವೆ.
ಅರ್ಕಾವತಿ ಬಡಾವಣೆಯಲ್ಲಿ ನೀಡು ಹೆಸರಿನಲ್ಲಿ ನಿಯಮ ಉಲ್ಲಂಘಿಸಿ 880 ಎಕರೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿರುವುದು ಕಳಂಕವಲ್ಲವೇ? ರೀಡು ಪಿತಾಮಹ ಯಾರೆಂದು ಹೇಳಬಲ್ಲಿರಾ? ಅರ್ಕಾವತಿ ಪ್ರಕರಣದಲ್ಲಿ ನೀವೇ ನೇಮಕ ಮಾಡಿದ ಕೆಂಪಣ್ಣ ಆಯೋಗ ನೀಡು ಡಿ ನೋಟಿಫಿಕೇಶನ್ ಸಂಬಂಧಿಸಿದಂತೆ ವರದಿ ನೀಡಿದ್ದು, ತಾವು ಪ್ರಕರಣದ ಬಗ್ಗೆ ಸದನದ ಮುಂದೆ ಮಂಡಿಸಿ ಅಕ್ರಮ ನಡೆಸಿದವರ ಬಗ್ಗೆ ಕ್ರಮ ಯಾಕೆ ತೆಗೆದುಕೊಂಡಿಲ್ಲ? ತಾವು ಪ್ರಾಮಾಣಿಕರಲ್ಲವೇ ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಿ?

ತಾವೇ ಭ್ರಷ್ಟರನ್ನು ಬೆಳೆಸಿ ನಿವೃತ್ತಿಯ ನಂತರವು ಕಡುಭ್ರಷ್ಟರಿಗೆ ಉನ್ನತ ಹುದ್ದೆಯನ್ನು ದಯಪಾಲಿಸಿರುವುದು ಸಾರ್ವಜನಿಕ ಜೀವನಕ್ಕೆ ಕಳಂಕವಲ್ಲವೇ? ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರಕುಮಾರ್ರವರು ನಿರಂತರವಾಗಿ ಸರ್ಕಾರಕ್ಕೆ ಮುಡಾ ಹಗರಣ ಕುರಿತಂತೆ 14 ಪತ್ರಗಳನ್ನು ಬರೆದರೂ ನಿರ್ಲಕ್ಷ ವಹಿಸಿದ್ದು, ಅಕ್ರಮಕ್ಕೆ ಬೆಂಬಲಿಸಿದಂತೆ ಅಲ್ಲವೇ?

ಎಲ್ಲಾ ಅಕ್ರಮಕ್ಕೆ ಫೋನ್ ಮಾಡಿ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದ ಪ್ರಭಾವಿ ಚಿಕ್ಕಬಾಸ್ ಯಾರೆಂದು ಹೆಸರು ಹೇಳಬೇಕೇ? ಮುಡಾದಲ್ಲಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮ ಹೆಸರು ಹಾಗೂ ಪ್ರಭಾವವನ್ನು ಬಳಸಿಕೊಂಡು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆಸಿ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ. ಈ ಹಿಂದೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅವ್ಯವಹಾರ ಕುರಿತಂತೆ ಸಿಬಿಐ ತನಿಖೆ ನಡೆಸಲಾಗಿದೆ. ಮುಡಾದ ತನಿಖೆಯು ಸಿಬಿಐ ಮೂಲಕ ನಡೆದರೆ ಇದರ ಸತ್ಯಾಸತ್ಯತೆ ಬಹಿರಂಗವಾಗುತ್ತದೆ. ಇದರಲ್ಲಿ ನಿಮ್ಮದೇನು ತಪ್ಪಿಲ್ಲದಿದ್ದರೆ ಎಲ್ಲವೂ ಕ್ರಮಬದ್ದವಾಗಿದ್ದರೆ ಸಿಬಿಐಗೆ ತನಿಖೆಗೆ ವಹಿಸಲು ಭಯ ಏಕೆ?

ಪ್ರತಿಯೊಬ್ಬ ಭ್ರಷ್ಟಚಾರಿಯು ತಾನು ಸಿಕ್ಕಿಹಾಕಿಕೊಳ್ಳುತ್ತೇನೆಂದು ಅನ್ನಿಸಿದಾಗ ಭಯಗೊಳ್ಳುತ್ತಾನೆ. ಭಾವನಾತ್ಮಕ ರಕ್ಷಣೆಯನ್ನು ಜಾತಿಯ ಹೆಸರಿನಲ್ಲಿ ಪಡೆಯುವ ಪ್ರಯತ್ನ ಮಾಡುತ್ತಾನೆ. ತಾವು ಕೂಡ ಈಗ ಅಂತಹದೇ ಪ್ರಯತ್ನದಲ್ಲಿ ಇದ್ದೀರಿ. ನಾನು ಕೂಡ ದಾಖಲೆಯನ್ನು ಪರಿಶೀಲಿಸಿದ್ದೇನೆ. ಮುಡಾದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಚಾರ, ಅಧಿಕಾರದ ದುರುಪಯೋಗ ನಡೆದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿ ಕಾಣಿಸುತ್ತಿದೆ. ಇನ್ನೊಮ್ಮೆ ವಿಶೇಷ ಅಧಿವೇಶನ ಇದಕ್ಕಾಗಿಯೇ ಕರೆಯಿರಿ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೇ ಚರ್ಚಿಸೋಣ. ಆಗಾಗ ತಾವು ಹೇಳುತ್ತಿದ್ದ ಮಾತನ್ನು ನೆನಪಿಸಿ ಈ ಪತ್ರವನ್ನು ಪೂರ್ಣಗೊಳಿಸುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು, ಉಪ್ಪು ತಿಂದವನು ನೀರು ಕುಡಿಯಬೇಕು. ಇದು ನಿಮ್ಮದೇ ಮಾತು. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿಯೂ ಇದು ಅನ್ವಯವಾಗಲಿ.

ಸಿ.ಟಿ. ರವಿ….

ಇದನ್ನೂ ಓದಿ: HD Kumaraswamy: ಹಣ ಕಟ್ಟಿ 40 ವರ್ಷ ಆಗಿದೆ, ನನಗಿನ್ನೂ ಮುಡಾ ನಿವೇಶನವನ್ನೇ ಕೊಟ್ಟಿಲ್ಲ: ಎಚ್‌ಡಿಕೆ

Continue Reading

ಬೆಂಗಳೂರು

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Kannada Sahitya Sammelana: ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 5 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ಕನ್ನಡ ಭಾಷೆಯ ಜ್ಞಾನ ಇಂದು ದೇಶ-ವಿದೇಶಗಳಲ್ಲಿ ಪಸರಿಸಿದೆ. ಯಾವುದೇ ದೇಶಕ್ಕೆ ಹೋದರು ನಮ್ಮ ಕನ್ನಡಿಗರು ನೆಲೆಸಿರುವುದನ್ನು ನಾವು ಕಾಣುತ್ತೇವೆ. ಕನ್ನಡ ಭಾಷೆಗಿರುವ ಶ್ರೀಮಂತಿಕೆಯ ಸಾಹಿತ್ಯ, ಸಂಸ್ಕೃತಿ, ಅಪಾರ ಜ್ಞಾನ ಸಂಪತ್ತಿನಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

VISTARANEWS.COM


on

Minister Dinesh Gundurao drives for the 5th Kannada Sahitya Sammelana in Bengaluru
Koo

ಬೆಂಗಳೂರು: ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೆಳಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು.‌ ಬಳಿಕ ಶ್ರೀರಾಮ್‌ಪುರ ಸನ್ ರೈಸ್ ವೃತ್ತದಿಂದ ಶೇಷಾದ್ರಿಪುರಂವರೆಗೆ ಕನ್ನಡ ಜಾಗೃತಿ ಮೆರವಣಿಗೆ ನಡೆಸಲಾಯಿತು.‌ ಸಾವಿರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ ಕನ್ನಡ ಹಬ್ಬಕ್ಕೆ ಮೆರಗು ನೀಡಿದರು.‌ ವಿವಿಧ ಸಾಂಸ್ಕೃತಿಕ ಮೇಳಗಳು ಕನ್ನಡ ಜಾಗೃತಿ ಮೆರವಣಿಗೆಯಲ್ಲಿ ಗಮನ ಸೆಳೆದವು.

ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಸಾಂಸ್ಕೃತಿಕ ಭಂಡಾರವೇ ಇದೆ. ಕನ್ನಡ ಭಾಷೆಯ ಜ್ಞಾನ ಇಂದು ದೇಶ ವಿದೇಶಗಳಲ್ಲಿ ಪಸರಿಸಿದೆ. ಯಾವುದೇ ದೇಶಕ್ಕೆ ಹೋದರು ನಮ್ಮ ಕನ್ನಡಿಗರು ನೆಲೆಸಿರುವುದನ್ನು ನಾವು ಕಾಣುತ್ತೇವೆ. ಕನ್ನಡ ಭಾಷೆಗಿರುವ ಶ್ರೀಮಂತಿಕೆಯ ಸಾಹಿತ್ಯ, ಸಂಸ್ಕೃತಿ, ಅಪಾರ ಜ್ಞಾನ ಸಂಪತ್ತಿನಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಗಾಂಧಿನಗರದಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, ಕನ್ನಡಕ್ಕೆ ನಮ್ಮ ಕಡೆಯಿಂದ ಒಂದು ಸಣ್ಣ ಸೇವೆ. ಯುವಕರು ನಮ್ಮ ಕನ್ನಡ ಭಾಷೆಯಲ್ಲಿರುವ ಜ್ಞಾನವನ್ನು ಸಂಪಾದಿಸಿಕೊಂಡು, ಕನ್ನಡ ಸೇವೆಗೆ ಸದಾ ಸಜ್ಜಾಗಿರಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

ವಿ.ರಾಣಿ ಗೋವಿಂದರಾಜು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಕವಿ ಗೋಷ್ಠಿ ಸೇರಿದಂತೆ, ಕನ್ನಡ ನಾಳೆಗಳು ಹೇಗಿರಬೇಕು ಹಾಗೂ ಸರ್ವಜನಾಂಗದ ಶಾಂತಿಯ ತೋಟ- ಗಾಂಧಿನಗರ ಕ್ಷೇತ್ರ ಎಂಬ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಅಲ್ಲದೇ ಕನ್ನಡ ಸೇವೆ ಸಲ್ಲಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಕ್ಕೂ ಹೆಚ್ಚು ಗಣ್ಯರನ್ನು ಇದೇ ವೇಳೆ ಗೌರವಿಸಿ, ಸನ್ಮಾನಿಸಲಾಯಿತು.

Continue Reading

ಯಾದಗಿರಿ

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ಶಾಸಕ ಚನ್ನಾರೆಡ್ಡಿ ಪಾಟೀಲ ಭೇಟಿ

Yadgiri News: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಸೇತುವೆ ಕೃಷ್ಣಾ ನದಿಯ ಪ್ರವಾಹದಿಂದ ಜಲಾವೃತವಾಗಿದ್ದು, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ, ಪ್ರವಾಹದಿಂದ ಹಾನಿಯಾದ ಪ್ರದೇಶವನ್ನು ಪರಿಶೀಲನೆ ಮಾಡಿದರು.

VISTARANEWS.COM


on

Yadgiri News Kolluru bridge inundation MLA Channareddy Patil tunnuru visit inspection
Koo

ಯಾದಗಿರಿ: ಕೃಷ್ಣಾ ನದಿಯ ಪ್ರವಾಹದಿಂದ ಕೊಳ್ಳುರು ಸೇತುವೆ ಜಲಾವೃತವಾಗಿದ್ದು, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ, ಪರಿಶೀಲನೆ (Yadgiri News) ಮಾಡಿದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಸೇತುವೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ, ಪ್ರವಾಹದಿಂದ ಹಾನಿಯಾದ ಪ್ರದೇಶ ವೀಕ್ಷಣೆ ಮಾಡಿದರು.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆ ಕೊಳ್ಳುರು ಸೇತುವೆ ಕೃಷ್ಣಾ ನದಿಯ ಪ್ರವಾಹಕ್ಕೆ ಜಲಾವೃತವಾಗಿದೆ‌. ಸೇತುವೆಯು ರಾಯಚೂರು-ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ, ಈಗ ಸಂಪರ್ಕ ಕಡಿತಗೊಂಡಿದೆ. ಸೇತುವೆ ತೀರಕ್ಕೆ ತೆರಳಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಕೃಷ್ಣಾ ನದಿಯ ಪ್ರವಾಹದ ಪರಿಸ್ಥಿತಿ ಅವಲೋಕನೆ ಮಾಡಿದರು.

ಈ ವೇಳೆ ಶಾಸಕರು, ಕೊಳ್ಳುರು ಗ್ರಾಮದ ಜನರ ಸಮಸ್ಯೆ ಆಲಿಸಿದರು. ಪ್ರತಿ ವರ್ಷ ಕೃಷ್ಣಾ ನದಿಯ ಪ್ರವಾಹ ಬಂದಾಗ ಹಾನಿಯಾಗುವ ಬಗ್ಗೆ ಗ್ರಾಮಸ್ಥರು ನೋವು ತೊಡಿಕೊಂಡರು. ಕೃಷ್ಣಾ ನದಿ ತೀರದ ರೈತರು ಪ್ರತಿ ವರ್ಷ ಬೆಳೆ ಹಾನಿ ಎದುರಿಸುತ್ತಿದ್ದೆ. ಈ ಸೇತುವೆ ಕೆಳಭಾಗದಲ್ಲಿದೆ ಎತ್ತರವಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ಕೃಷ್ಣಾ ನದಿಗೆ ಹೆಚ್ಚು ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕೊಳ್ಳುರು ಸೇತುವೆ ಮುಳುಗಡೆಯಾಗಿದೆ‌. ಮುಂದಿನ ದಿನಗಳಲ್ಲಿ ಸೇತುವೆ ಎತ್ತರವಾಗಿ ನಿರ್ಮಾಣ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.ಕೃಷ್ಣಾ ಪ್ರವಾಹದಿಂದ ಬೆಳೆ ಹಾನಿಯಾಗಿದೆ. ನಷ್ಟವಾದ ರೈತರಿಗೆ ಪರಿಹಾರ ಕೊಡಿಸುತ್ತೇವೆ. ಸರ್ಕಾರ ಪರಿಹಾರ ಕಲ್ಪಿಸುವ ಕೆಲಸ ಮಾಡಲಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಕೃಷ್ಣಾ ನದಿ ತೀರದ ಜನರು ನದಿ ತೀರಕ್ಕೆ ತೆರಳದೆ ಸುರಕ್ಷಿತವಾಗಿ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಈ ಸಂದರ್ಭದಲ್ಲಿ ವೇಳೆ ಮಲ್ಲಿಕಾರ್ಜುನ ಈಟೆ, ಶರಣಗೌಡ ಕುರಕುಂದಿ, ಶರಣಗೌಡ ಬಲಕಲ್, ಶರಣಗೌಡ ಮಾಲಿಪಾಟೀಲ, ಶಿವಾರೆಡ್ಡಿ ಪಾಟೀಲ ಕೊಳ್ಳುರು ಸೇರಿದಂತೆ ಅನೇಕರು ಇದ್ದರು.

Continue Reading

ಬೆಂಗಳೂರು

Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

Bengaluru News: ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ “ದೀಕ್ಷಾ ದಿನದ ” ಪ್ರಯುಕ್ತ ಒಕ್ಕಲಿಗ ಯುವ ಬ್ರಿಗೇಡ್ ಸೇವಾ ಸಂಸ್ಥೆಯಿಂದ ಇದೇ ಜು.28 ರಂದು ಹಾಗೂ ಆ.1,3 ಮತ್ತು 5 ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Nirmala Sahaya Hasta programme by Okkaliga Yuva Brigade on 28th July and 1st 3rd and 5th August
Koo

ಬೆಂಗಳೂರು: ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ “ದೀಕ್ಷಾ ದಿನʼದ ಪ್ರಯುಕ್ತ ಒಕ್ಕಲಿಗ ಯುವ ಬ್ರಿಗೇಡ್ ಸೇವಾ ಸಂಸ್ಥೆಯಿಂದ ಇದೇ ಜು.28ರಂದು ಹಾಗೂ ಆಗಸ್ಟ್‌ 1, 3 ಮತ್ತು 5ರಂದು “ನಿರ್ಮಲ ಸಹಾಯ ಹಸ್ತ” ಕಾರ್ಯಕ್ರಮ (Bengaluru News) ಏರ್ಪಡಿಸಲಾಗಿದೆ.

ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದೀಕ್ಷಾ ದಿನದ ಪ್ರಯುಕ್ತ ಪ್ರತಿವರ್ಷದಂತೆ, ಈ ವರ್ಷವೂ ಕೂಡ, ಶಾಲೆಗಳಿಗೆ ಅಗತ್ಯ ಸೌಲಭಗಳನ್ನು ಒದಗಿಸುವ ಹಾಗೂ ಶಾಲೆಯ ದತ್ತು ಸ್ವೀಕಾರ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

ಜು.28ರಂದು ಒಡೆಯರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 100 ವಿದ್ಯಾರ್ಥಿಗಳಿಗೆ ಊಟದ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮ. ಆ.1 ರಂದು ಚಪ್ಪರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಹಾಗೂ ಇತರ ಅಧ್ಯಯನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಆ.3ರಂದು ಗಂಗನಕುಪ್ಪೆ ಕಿರಿಯ ಮಾಧ್ಯಮಿಕ ಶಾಲೆಗೆ ಕಂಪ್ಯೂಟರ್ ಹಾಗೂ ಇತರ ಅಧ್ಯಯನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಮತ್ತು ಆ.05 ರಂದು ಸರಗೂರು ಆದಿವಾಸಿಗಳ ಶಾಲೆಗೆ ಸ್ಕೂಲ್ ಬ್ಯಾಗ್ ಹಾಗೂ ಇತರ ಅಧ್ಯಯನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading
Advertisement
ICW 2024
ಫ್ಯಾಷನ್28 mins ago

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

Indian Army
ದೇಶ58 mins ago

ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜಿಸಿದ ಕೇಂದ್ರ; ಏನಿದರ ಮರ್ಮ?

Joe Root
ಕ್ರೀಡೆ2 hours ago

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

CT Ravi
ಕರ್ನಾಟಕ2 hours ago

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

Aishwarya Rai Bachchan
ಸಿನಿಮಾ2 hours ago

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Mukesh Ambani
ವಾಣಿಜ್ಯ2 hours ago

Mukesh Ambani: ಮುಕೇಶ್ ಅಂಬಾನಿಯ ಒಂದು ದಿನದ ಆದಾಯ 163 ಕೋಟಿ ರೂ! ಒಟ್ಟು ಸಂಪತ್ತೆಷ್ಟು?

Minister Dinesh Gundurao drives for the 5th Kannada Sahitya Sammelana in Bengaluru
ಬೆಂಗಳೂರು2 hours ago

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

The woman shows gray hair on her head. Hair with fragments of gray hair, hair roots requiring dyeing
ಆರೋಗ್ಯ2 hours ago

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Yadgiri News Kolluru bridge inundation MLA Channareddy Patil tunnuru visit inspection
ಯಾದಗಿರಿ2 hours ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ಶಾಸಕ ಚನ್ನಾರೆಡ್ಡಿ ಪಾಟೀಲ ಭೇಟಿ

Nirmala Sahaya Hasta programme by Okkaliga Yuva Brigade on 28th July and 1st 3rd and 5th August
ಬೆಂಗಳೂರು2 hours ago

Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ7 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ8 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌