organ donation Girl dies of brain dead family donates organsOrgan Donation: ಮನೆ ಮಹಡಿಯಿಂದ ಆಯತಪ್ಪಿ ಬಿದ್ದ ಬಾಲಕಿಯ ಮೆದುಳು ನಿಷ್ಕ್ರಿಯ; ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು - Vistara News

ಆರೋಗ್ಯ

Organ Donation: ಮನೆ ಮಹಡಿಯಿಂದ ಆಯತಪ್ಪಿ ಬಿದ್ದ ಬಾಲಕಿಯ ಮೆದುಳು ನಿಷ್ಕ್ರಿಯ; ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು

ಆಟವಾಡುತ್ತಾ ಮನೆಯ ಮಹಡಿಯಿಂದ ಬಿದ್ದ 14 ವರ್ಷದ ಬಾಲಕಿಯೊಬ್ಬಳ ಮೆದುಳು ನಿಷ್ಕ್ರಿಯಗೊಂಡಿತ್ತು. ಬಾಲಕಿಯ ಕುಟುಂಬಸ್ಥರು ನೋವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆಯನ್ನು (Organ Donation) ಮೆರೆದಿದ್ದಾರೆ.

VISTARANEWS.COM


on

brain dead girl
ಕೃತಿ ಜೈನ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಟವಾಡುತ್ತಾ ಆಯತಪ್ಪಿ ಮನೆಯ ಮಹಡಿಯಿಂದ ಬಿದ್ದ ಬಾಲಕಿಯೊಬ್ಬಳ ಮೆದುಳು ನಿಷ್ಕ್ರಿಯಗೊಂಡಿದ್ದು (Brain dead), ಕುಟುಂಬಸ್ಥರು ಮಗಳ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ (Organ Donation) ಮೆರೆದಿದ್ದಾರೆ.

ನಗರದ ಬಾಲ್ಡಿವಿನ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಕೃತಿ ಜೈನ್ (14) ಅಂಗಾಂಗ ದಾನದ ಮೂಲಕ 9 ಮಂದಿಯ ಬದುಕಿಗೆ ಆಸರೆಯಾಗಿದ್ದಾಳೆ. ತಂದೆ ವಿರೇಂದ್ರ ಕುಮಾರ್ ಜೈನ್, ತಾಯಿ ಮೋನಿಕಾ ಅವರು ತಮ್ಮ ಪ್ರೀತಿಯ ಪುತ್ರಿಯ ಅಂಗಾಂಗಳನ್ನು ದಾನ ಮಾಡಿದ್ದಾರೆ.

ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಾಸವಿರುವ ಕೃತಿ ಜೈನ್‌, ಕಳೆದ ಮೇ 24 ರಂದು ಮನೆಯ ಮಹಡಿ ಮೇಲೆ ತನ್ನ ಸಹೋದರ ಸಂಬಂಧಿಗಳೊಂದಿಗೆ ಆಟ ಆಡುತ್ತಿದ್ದರು. ಈ ವೇಳೆ ಆಯತಪ್ಪಿ 8 ರಿಂದ 10 ಅಡಿ ಮೇಲಿನಿಂದ ಬಿದ್ದಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಸತತ ಪರಿಶ್ರಮದ ನಡುವೆಯೂ ಮೇ 28 ರಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಆಕೆಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಲಾಯಿತು.

ಕೃತಿ ಅಗಲಿಕೆಯ ದುಃಖದಲ್ಲೂ ಕುಟುಂಬಸ್ಥರು ಆಕೆಯ ಅಂಗಾಂಗಳನ್ನು ದಾನ ಮಾಡುವ ಧೈರ್ಯದ ನಿರ್ಧಾರ ಮಾಡಿದ್ದಾರೆ. ಜೀವ ಸಾರ್ಥಕತೆ ಸಂಸ್ಥೆಯೊಂದಿಗೆ ಸಮನ್ವಯದಿಂದ ಅಂಗಾಂಗಗಳ ದಾನ ಪ್ರಕ್ರಿಯೆ ನಡೆಸಲಾಗಿದೆ. ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆ ಯಶಸ್ವಿಯಾಗಿ ಕೃತಿ ಅವರ ಶ್ವಾಸಕೋಶ, ಯಕೃತ್, ಮೂತ್ರಪಿಂಡಗಳು, ಹೃದಯದ ಕವಾಟ ಮತ್ತು ಅಕ್ಷಿಪಟಲಗಳನ್ನು ಪಡೆದುಕೊಂಡಿದೆ.

ಅಪಾಯಕಾರಿ ಪರಿಸ್ಥಿತಿಯಲ್ಲಿದ್ದವರಿಗೆ ಅಂಗಾಂಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಶ್ವಾಸಕೋಶವನ್ನು ಚೆನ್ನೈಗೆ ವಾಯುಮಾರ್ಗದ ಮೂಲಕ ರವಾನಿಸಿದ್ದು, ಉಳಿದ ಅಂಗಾಂಗಳನ್ನು ಕರ್ನಾಟಕದಲ್ಲಿಯೇ ಕಸಿ ಮಾಡಿ ಹಲವು ಜೀವಗಳನ್ನು ರಕ್ಷಿಸಲಾಗಿದೆ.

ಅಂಗಾಂಗಳನ್ನು ದಾನ ಮಾಡಿದ ಕುಟುಂಬಸ್ಥರಿಗೆ ಬಿಜಿಎಸ್ ಗ್ಲೋಬಲ್ ಗ್ಲೆನಿಗಲ್ಸ್ ಆಸ್ಪತ್ರೆಯ ತಜ್ಞರಾದ ಡಾ. ಸರಳಾ ಅನಂತ ರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ. ಕೃತಿಯ ಅಂಗಾಂಗಳ ಮೂಲಕ ಬದುಕಿನಲ್ಲಿ ಎರಡನೇ ಅವಕಾಶ ಪಡೆದಿರುವವರು ಮತ್ತು ತೊಂದರೆಯಲ್ಲಿದ್ದ ಕುಟುಂಬದವರು ಇವರ ನಿಸ್ವಾರ್ಥ ಕಾರ್ಯವನ್ನು ಸದಾ ಕಾಲ ಸ್ಮರಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Delhi Murder: ಮಾಜಿ ಗೆಳತಿಗೆ 21 ಬಾರಿ ಚಾಕು ಇರಿದು ಕೊಂದಿದ್ದಕ್ಕೆ ಪಶ್ಚಾತ್ತಾಪ ಇಲ್ಲ ಎಂದ ಆರೋಪಿ ಸಾಹಿಲ್

ಅಂಗಾಂಗ ದಾನ ಒಂದು ಮಹತ್ತರ ಕಾರ್ಯ. ಕೃತಿ ಅವರ ಕುಟುಂಬದ ಈ ಮಹತ್ವದ ನಿರ್ಧಾರ ಅಂಗಾಂಗ ದಾನದ ಮಹತ್ವವವನ್ನು ಸಾರುತ್ತದೆ. ಅಲ್ಲದೆ ಇತರರಿಗೂ ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Multivitamin Pill: ಮಲ್ಟಿವಿಟಮಿನ್‌ ಮಾತ್ರೆಗಳ ಮೊರೆ ಹೋಗದೆ, ನೈಸರ್ಗಿಕವಾಗಿ ಪೋಷಣೆ ಪಡೆಯುವುದು ಹೇಗೆ?

ನಾವು ಸೇವಿಸುವ ಎಲ್ಲವೂ ಸರಿಯಾದ ಮೂಲದಿಂದ ಬಂದ ಉತ್ತಮ ಪೋಷಣೆಯ ಮಾತ್ರೆಗಳೇ ಎಂಬ ಬಗ್ಗೆ ಗೊಂದಲಗಳು ಇದ್ದೇ ಇವೆ. ಆದರೆ, ನಾವು ಸರಿಯಾದ ಆಹಾರ ಸೇವನೆಯ ಮೂಲಕವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಣೆಯನ್ನೂ ಆರೋಗ್ಯಯುತವಾದ ನೈಸರ್ಗಿಕ ಮಾರ್ಗದಲ್ಲಿಯೇ ಪಡೆದುಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮಲ್ಟಿವಿಟಮಿನ್‌ ಮಾತ್ರೆಗಳಿಗಿಂತಲೂ (multivitamin pill) ಹೆಚ್ಚು ಪೋಷಣೆಯನ್ನು ಪಡೆಯಬಹುದು. ಈ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Multivitamin Pill
Koo

ಈಗ ಏನಿದ್ದರೂ ರೆಡಿಮೇಡ್‌ ಕಾಲ. ಎಲ್ಲವೂ ದಿಢೀರ್‌ ಆಗಬೇಕು. ಕಾಯುವುದಕ್ಕೆ, ಮಾಡುವುದಕ್ಕೆ ಯಾರಿಗೂ ಸಮಯವಿಲ್ಲ. ಅಡುಗೆಯಿಂದ ಹಿಡಿದು ಪೋಷಣೆಯವರೆಗೆ ನಮಗೆ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್‌ ವಸ್ತುಗಳೇ ಬೇಕು. ಪ್ರೊಟೀನ್‌ಗಾಗಿ ಪ್ರೊಟೀನ್‌ ಮಿಕ್ಸ್‌ಗಳು, ಮಲ್ಟಿವಿಟಮಿನ್‌ ಮಾತ್ರೆಗಳು ಇತ್ಯಾದಿಗಳ ಸೇವನೆಯೂ ಸಹಜ ಎಂಬಷ್ಟು ಸಲೀಸಾಗಿದೆ. ಆದರೆ, ನಾವು ನಿತ್ಯವೂ ಸೇವಿಸುವ ಆಹಾರ ಮೂಲಗಳಲ್ಲೇ ನಾವು ಪೋಷಕಾಂಶಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ ಎಂಬುದು ವಿಪರ್ಯಾಸ. ಮಾರುಕಟ್ಟೆಯಲ್ಲೂ ವಿಧವಿಧವಾದ ಮಲ್ಟಿವಿಟಮಿನ್‌ಗಳು, ಪೋಷಣೆಯ ಡ್ರಿಂಕ್‌ಗಳೂ ಲಭ್ಯವಿರುವುದರಿಂದ ನಿತ್ಯದ ಪೋಷಣೆಯನ್ನು ಅವುಗಳ ಮೂಲಕವೇ ಸುಲಭವಾಗಿ ಪಡೆಯುವುದು ಬಹಳ ಮಂದಿಗೆ ಧಾವಂತದ ಜೀವನದಲ್ಲಿ ಅಭ್ಯಾಸವೂ ಆಗಿಬಿಟ್ಟಿದೆ. ಆದರೆ ಇವು ನಿಜಕ್ಕೂ, ಆಹಾರಗಳನ್ನು ಸೇವಿಸುವ ಮೂಲಕ ಪಡೆಯುವ ಪೋಷಣೆಯಂತೆ ಒಳ್ಳೆಯದನ್ನೇ ಮಾಡಬಲ್ಲವೇ? ನಾವು ಸೇವಿಸುವ ಎಲ್ಲವೂ ಸರಿಯಾದ ಮೂಲದಿಂದ ಬಂದ ಉತ್ತಮ ಪೋಷಣೆಯ ಮಾತ್ರೆಗಳೇ ಎಂಬ ಬಗ್ಗೆ ಗೊಂದಲಗಳು ಇದ್ದೇ ಇವೆ. ಆದರೆ, ನಾವು ಸರಿಯಾದ ಆಹಾರ ಸೇವನೆಯ ಮೂಲಕವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಣೆಯನ್ನೂ ಆರೋಗ್ಯಯುತವಾದ ನೈಸರ್ಗಿಕ ಮಾರ್ಗದಲ್ಲಿಯೇ ಪಡೆದುಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮಲ್ಟಿವಿಟಮಿನ್‌ ಮಾತ್ರೆಗಳಿಗಿಂತಲೂ (multivitamin pill) ಹೆಚ್ಚು ಪೋಷಣೆಯನ್ನು ಪಡೆಯಬಹುದು ಎಂಬುದನ್ನು ನೋಡೋಣ.

Yellow capsicum

ಹಳದಿ ಕ್ಯಾಪ್ಸಿಕಂ

ಹಳದಿ ಬಣ್ಣದ ಕ್ಯಾಪ್ಸಿಕಂ ವಿಟಮಿನ್‌ ಸಿ ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರಗಳ ಪೈಕಿ ಬಹುಮುಖ್ಯವಾದುದು. ವಿಟಮಿನ್‌ ಸಿ ನೀರಿನಲ್ಲಿ ಕರಗಬಲ್ಲ ಹಾಗೂ ದೇಹ ಹೆಚ್ಚುವರಿಯನ್ನು ಶೇಖರಿಸಿ ಇಡಲಾಗದ ಪೋಷಕಾಂಶವಾದ್ದರಿಂದ ಇದು ನಿತ್ಯವೂ ನಮ್ಮ ದೇಹಕ್ಕೆ ಬೇಕಾದ ಪೋಷಣೆ. ವಿಟಮಿನ್‌ ಸಿ ಕೊರತೆಯಿಂದ ಸ್ಕರ್ವಿ ಸೇರಿದಂತೆ ತಲೆಸುತ್ತು, ಸುಸ್ತು, ಚರ್ಮದಲ್ಲಿ ಕಜ್ಜಿ-ಗುಳ್ಳೆಗಳು, ಮಾಂಸಖಂಡಗಳಲ್ಲಿ ಊತ ಹಾಗೂ ರಕ್ತಸ್ರಾವದಂತಹ ಸಮಸ್ಯೆಗಳೂ ಬರಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ವಿಟಮಿನ್‌ ಸಿ ಬೇಕೇಬೇಕು. ಒಂದು ಹಳದಿ ಕ್ಯಾಪ್ಸಿಕಂನಲ್ಲಿ 75-90 ಎಂಜಿಗಳಷ್ಟು ವಿಟಮಿನ್‌ ಸಿ ಇರುವುದರಿಂದ ಹಲವು ಹಲವು ಸಮಸ್ಯೆಗಳನ್ನು ಇದರ ಸೇವನೆಯಿಂದಲೇ ದೂರ ಇರಿಸಬಹುದಾಗಿದೆ.

Green vegetables

ಹಸಿರು ತರಕಾರಿಗಳು

ಹಸಿರು ಬಣ್ಣದ ತರಕಾರಿಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿರುತ್ತವೆ. ಪಾಲಕ್‌, ಬಸಳೆ, ನುಗ್ಗೆಸೊಪ್ಪು, ಕ್ಯಾಬೇಜ್‌ ಇತ್ಯಾದಿಗಳಲ್ಲಿ ಹೆಚ್ಚು ವಿಟಮಿನ್‌ ಇರುತ್ತದೆ. ವಿಟಮಿನ್‌ ಎ, ಕೆ, ಇ, ಸಿ, ಬೀಟಾ ಕೆರೋಟಿನ್‌, ಫೋಲೇಟ್‌, ವಿಟಮಿನ್‌ ಬಿ1, ಬಿ2, ಬಿ5, ಬಿ3 ಹಾಗೂ ಬಿ6ಗಳಿಗಾಗಿ ಈ ಹಸಿರು ಬಣ್ಣದ ತರಕಾರಿ ಸೊಪ್ಪುಗಳನ್ನು ಆಗಾಗ ಸೇವಿಸಿ.

Mackerel fish on ice

ಮೀನು

ಒಮೆಗಾ 3 ಫ್ಯಾಟಿ ಆಸಿಡ್‌ಗಳಿಗಾಗಿ ಮೀನಿನ ಸೇವನೆ ಬಹಳ ಮುಖ್ಯ. ಮೀನಿನಲ್ಲಿ ವಿಟಮಿನ್‌ ಬಿ೨, ವಿಟಮಿನ್‌ ಡಿ, ಕ್ಯಾಲ್ಶಿಯಂ, ಕಬ್ಬಿಣಾಂಶ, ಝಿಂಕ್‌, ಪಾಸ್ಪರಸ್‌, ಮೆಗ್ನೀಶಿಯಂ, ಅಯೋಡಿನ್‌, ಪೊಟಾಶಿಯಂ ಇವೆಲ್ಲ ಖನಿಜಾಂಶಗಳೂ ಇರುವುದರಿಂದ ಇದು ಅತ್ಯಂತ ಆರೋಗ್ಯಕರ.

Boiled Eggs

ಮೊಟ್ಟೆ

ಪ್ರೊಟೀನ್‌ಗಾಗಿ ರೆಡಿಮೇಡ್‌ ಡ್ರಿಂಕ್‌ಗಳನ್ನು ಕುಡಿಯುವ ಬದಲು ಮೊಟ್ಟೆ ಸೇವಿಸಿದರೆ ಸಾಕು. ಅತ್ಯಂತ ಸರಳ ಹಾಗೂ ಸುಲಭವಾದ ವಿಧಾನವಿದು. ಮೊಟ್ಟೆಯಲ್ಲಿ ಪ್ರೊಟೀನ್‌, ವಿಟಮಿನ್‌ ಎ, ಬಿ, ಬಿ೨, ಬಿ12 ಹಾಗೂ ವಿಟಮಿನ್‌ ಡಿ ಹೇರಳವಾಗಿದೆ. ಅಯೋಡಿನ್‌ ಹಾಗೂ ಸೆಲೆನಿಯಮ್‌ ಕೂಡಾ ಇವೆ.

Health Tips about curd

ಮೊಸರು

ಕ್ಯಾಲ್ಶಿಯಂ ದೇಹಕ್ಕೆ ಬೇಕೆಂದರೆ, ಮೊಸರು ತಿನ್ನುವುದನ್ನು ಬಿಡಬೇಡಿ. ಕ್ಯಾಲ್ಶಿಯಂ, ವಿಟಮಿನ್‌ ಬಿ, ಬಿ12 ಇತ್ಯಾದಿಗಳ ಆಗರ ಮೊಸರು. ಹಾಗೂ ಹಾಲಿನ ಉತ್ಪನ್ನಗಳು. ಹಾಗಾಗಿ, ಹಾಲು, ಮೊಸರು, ಪನೀರ್‌ನಂತಹ ಆಹಾರಗಳನ್ನು ಆಗಾಗ ಸೇವಿಸಿ. ದೇಹಕ್ಕೆ ನಿತ್ಯವೂ ಕ್ಯಾಲ್ಶಿಯಂ ಕೊರತೆಯಾಗದಂತೆ ನೋಡಿಕೊಳ್ಳಿ. ನೆನಪಿಡಿ, ಇವಿಷ್ಟಲ್ಲದೆ, ಒಣಹಣ್ಣುಗಳು, ಒಣ ಬೀಜಗಳು, ಧಾನ್ಯ ಬೇಳೆ ಕಾಳುಗಳು, ತರಕಾರಿ ಹಣ್ಣುಗಳು ಇತ್ಯಾದಿಗಳಿಂದ ಸಮೃದ್ಧವಾದ ಊಟವನ್ನು ನೀವು ನಿತ್ಯವೂ ಮಾಡುತ್ತಿದ್ದರೆ, ಖಂಡಿತವಾಗಿಯೂ ಮಲ್ಟಿ ವಿಟಮಿನ್‌ಗಳ ಸೇವನೆಯ ಅಗತ್ಯವೂ ಬಾರದು.

ಇದನ್ನೂ ಓದಿ: Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

Continue Reading

ಆರೋಗ್ಯ

Leg Swelling: ಪ್ರಯಾಣಿಸುವಾಗ ನಮ್ಮ ಕಾಲುಗಳು ಊದಿಕೊಳ್ಳುವುದೇಕೆ?

ಪ್ರಯಾಣಿಸುವಾಗ, ಕುಳಿತಲ್ಲಿಂದ ಕದಲದಿದ್ದಾಗ, ರಕ್ತ ಪರಿಚಲನೆಗೆ ಅಗತ್ಯವಾದ ದೈಹಿಕ ಚಲನೆಗಳು ಶರೀರದಲ್ಲಿ ಇರುವುದಿಲ್ಲ. ಇದರಿಂದ ನೀರಿನಂಶ ಕಾಲಿನ ಭಾಗದಲ್ಲಿ ತುಂಬಿಕೊಳ್ಳುತ್ತದೆ. ಇದರಿಂದ ಕಾಲುಗಳು ದಪ್ಪವಾದಂತೆ, ಊದಿಕೊಂಡಂತೆ ಕಾಣಬಹುದು. ಸಾಮಾನ್ಯವಾಗಿ ಇದಕ್ಕೆ ಸಿಕ್ಕಾಪಟ್ಟೆ ಚಿಂತೆ ಮಾಡುವ ಅಗತ್ಯವಿಲ್ಲದಿದ್ದರೂ, ಕೆಲವೊಮ್ಮೆ ಕಾಲು ಊದಿಕೊಳ್ಳುವುದರಲ್ಲಿ ಅಪಾಯದ ಮುನ್ಸೂಚನೆಗಳನ್ನು ಕಾಣಬಹುದು. ಏನದು? ಒಂದೆಡೆ ಹೆಚ್ಚು ಸಮಯ ಕೂತಿದ್ದರೆ ಕಾಲುಗಳು ಊದಿಕೊಳ್ಳುವುದೇಕೆ? ಈ ಬಗ್ಗೆ (Leg Swelling) ತಿಳಿದುಕೊಳ್ಳೋಣ.

VISTARANEWS.COM


on

Leg Swelling
Koo

ಪ್ರಯಾಣ ಮಾಡುತ್ತಿದ್ದೀರಿ, ಬಸ್ಸು, ಕಾರು, ವಿಮಾನ… ಯಾವುದೋ ಒಂದರಲ್ಲಿ. ನಾಲ್ಕಾರು ತಾಸುಗಳ ದಾರಿಯಲ್ಲಿ ಕೂತಲ್ಲೇ ಕೂತಿರುತ್ತೀರಿ. ನಿಮ್ಮ ಗಮ್ಯ ತಲುಪಿದ ಮೇಲೆ ನೋಡಿದರೆ, ಕಾಲುಗಳು ಊದಿಕೊಂಡಂತಿವೆ. ʻಅರೆ! ಏನಾಯ್ತು… ಚೆನ್ನಾಗೇ ಇತ್ತಲ್ಲ ಹೊರಡುವಾಗʼ ಎಂದು ಗಾಬರಿ ಬೀಳುತ್ತೀರಿ. ಇದು ನಿಮಗಷ್ಟೇ ಅಲ್ಲ, ಬಹಳಷ್ಟು ಮಂದಿಗೆ ಅನುಭವಕ್ಕೆ ಬಂದಿರಬಹುದು. ಒಂದೆಡೆ ದೀರ್ಘಕಾಲ ಕುಳಿತಿದ್ದರೆ ಕಾಲುಗಳು ಊದಿಕೊಂಡಂತಾಗಿ, ʻಏನಾಯ್ತಪ್ಪ!ʼ ಎಂದು ಚಿಂತಿಸುವಂತಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಸಿಕ್ಕಾಪಟ್ಟೆ ಚಿಂತೆ ಮಾಡುವ ಅಗತ್ಯವಿಲ್ಲದಿದ್ದರೂ, ಕೆಲವೊಮ್ಮೆ ಕಾಲು ಊದಿಕೊಳ್ಳುವುದರಲ್ಲಿ ಅಪಾಯದ ಮುನ್ಸೂಚನೆಗಳನ್ನು ಕಾಣಬಹುದು. ಏನದು? ಒಂದೆಡೆ ಹೆಚ್ಚು ಸಮಯ ಕೂತಿದ್ದರೆ ಕಾಲುಗಳು (Leg Swelling) ಊದಿಕೊಳ್ಳುವುದೇಕೆ?

Middle aged woman suffer from Arthritis,Patellar Tendinitis

ಹೀಗೇಕಾಗುತ್ತದೆ?

ಇದಕ್ಕೆ ಹಲವು ಕಾರಣಗಳು ಇರಬಹುದು. ಆದರೆ ಕಾಲುಗಳಲ್ಲಿ ನೀರು ತುಂಬಿಕೊಳ್ಳುವುದು ಎಲ್ಲಕ್ಕಿಂತ ಪ್ರಮುಖ ಕಾರಣ. ಕುಳಿತಲ್ಲಿಂದ ಕದಲದಿದ್ದಾಗ, ರಕ್ತ ಪರಿಚಲನೆಗೆ ಅಗತ್ಯವಾದ ದೈಹಿಕ ಚಲನೆಗಳು ಶರೀರದಲ್ಲಿ ಇರುವುದಿಲ್ಲ. ಇದರಿಂದ ನೀರಿನಂಶ ಕಾಲಿನ ಭಾಗದಲ್ಲಿ ತುಂಬಿಕೊಳ್ಳುತ್ತದೆ. ಇದರಿಂದ ಕಾಲುಗಳು ದಪ್ಪವಾದಂತೆ, ಕೆಲವೊಮ್ಮೆ ಕೈಗಳು ಸಹ ಊದಿಕೊಂಡಂತೆ ಕಾಣಬಹುದು. ಇದಲ್ಲದೆ ಇನ್ನೂ ಕೆಲವು ಕಾರಣಗಳು ಈ ತೊಂದರೆಯ ಹಿಂದಿರುವುದಕ್ಕೆ ಸಾಧ್ಯವಿದೆ.

ಎತ್ತರದ ಜಾಗದಲ್ಲಿ ಪ್ರಯಾಣ ಮಾಡುತ್ತಿರುವಾಗ ಅಲ್ಲಿನ ಗಾಳಿಯ ಒತ್ತಡ ಮತ್ತು ಆಮ್ಲಜನಕದ ಲಭ್ಯತೆ ವ್ಯತ್ಯಾಸವಾದಾಗಲೂ ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಆಗಲೂ ಕಾಲುಗಳಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಸರಿಯಾಗಿ, ಹೆಚ್ಚು ಚಲನೆಯಿಲ್ಲದಂತೆ ಕುಳಿತಿದ್ದಾಗಲೂ ಇದರ ಪರಿಣಾಮ ಇನ್ನೂ ಹೆಚ್ಚಾದಂತೆ, ಪಾದ, ಕಾಲುಗಳಲ್ಲಿ ನೀರು ತುಂಬಿದಂತೆ ಕಾಣುತ್ತದೆ.

ಪ್ರಯಾಣದಲ್ಲಿ ಹೆಚ್ಚು ನೀರು ಕುಡಿಯದಿರುವುದು ಇದಕ್ಕೆ ಮತ್ತೊಂದು ಕಾರಣವಾಗಿರಬಹುದು. ಹೆಚ್ಚು ನೀರು ಕುಡಿದರೆ ಪದೇಪದೆ ಬಾತ್‌ರೂಂಗಳನ್ನು ಹುಡುಕಬೇಕು ಎನ್ನುವ ಕಾರಣಕ್ಕಾಗಿ ಬಹಳಷ್ಟು ಮಂದಿ ಪ್ರಯಾಣದ ಸಮಯದಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ನೀರಿನ ಲಭ್ಯತೆ ಕಡಿಮೆಯಿದೆ ಎಂಬ ಭಾವ ದೇಹಕ್ಕೆ ಬರುತ್ತಿದ್ದಂತೆ, ಇರುವ ನೀರನ್ನು ಹಿಡಿದಿಟ್ಟುಕೊಳ್ಳಲು ಶರೀರ ಪ್ರಯತ್ನಿಸುತ್ತದೆ. ಆಗಲೂ ಕಾಲುಗಳಲ್ಲಿ ನೀರು ತುಂಬಿಕೊಂಡಂತಾಗುತ್ತದೆ. ಬಿಗಿಯಾದ ಉಡುಪುಗಳು, ಶೂಗಳನ್ನು ಧರಿಸಿ ಪ್ರಯಾಣಿಸುವುದು ಕೆಲವೊಮ್ಮೆ ಇದಕ್ಕೆ ಕಾರಣವಾಗುತ್ತದೆ. ಮೊದಲೇ ಚಲನೆಯಿಲ್ಲದೆ ಕುಳಿತಂಥ ಸ್ಥಿತಿಯಲ್ಲಿ ರಕ್ತಪರಿಚಲನೆ ಕಡಿಮೆಯೇ. ಅದರಲ್ಲಿ ಬಿಗಿಯಾದ ಧಿರಿಸುಗಳನ್ನು ತೊಟ್ಟರೆ, ಇನ್ನಷ್ಟು ತೊಂದರೆಯಾಗುತ್ತದೆ.

ಡಿವಿಟಿ

ಇವೆಲ್ಲಕ್ಕಿಂತ ಹೊರತಾಗಿ ಇನ್ನೊಂದು ಮುಖ್ಯ ಕಾರಣ ಕಾಲಿನ ಊತಕ್ಕೆ ಕಾರಣವಾಗಬಹುದು. ಡೀಪ್‌ ವೈಯ್ನ್‌ ಥ್ರೊಂಬೊಸಿಸ್‌ ಅಥವಾ ಡಿವಿಟಿ ಎಂದೇ ಕರೆಯಲಾಗುತ್ತದೆ ಈ ಕಾರಣವನ್ನು. ಕಾಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುತ್ತದೆ. ಇದರಿಂದ ಕಾಲು ದಪ್ಪವಾಗುತ್ತದೆ. ಹೀಗೆ ರಕ್ತ ಹೆಪ್ಪುಗಟ್ಟುವಂಥ ದೇಹಸ್ಥಿತಿ ಇದ್ದವರು ಪ್ರಯಾಣದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಈ ಸ್ಥಿತಿಯನ್ನು ತ್ವರಿತವಾಗಿ ಗ್ರಹಿಸಿ, ವೈದ್ಯರಲ್ಲಿ ಚಿಕಿತ್ಸೆಯನ್ನೂ ಪಡೆಯಬೇಕು. ಡಿವಿಟಿ ಇದ್ದರೇನಾಗುತ್ತದೆ? ಯಾವ ಲಕ್ಷಣಗಳನ್ನು ಗ್ರಹಿಸಬೇಕು?

ಲಕ್ಷಣಗಳು

ಊತ ಒಂದೇ ಕಾಲಿನಲ್ಲಿ ಕಾಣಬಹುದು. ಸಮಸ್ಯೆ ಇರುವ ಕಾಲು, ಇನ್ನೊಂದು ಕಾಲಿಗಿಂತ, ಭಾರವಾದ ಅನುಭವ ಆಗಬಹುದು. ಹೆಪ್ಪುಗಟ್ಟಿದ ಭಾಗದಲ್ಲಿ ನೋವು, ಉರಿ ಉಂಟಾದೀತು. ನಡೆದಾಡುವಾಗ, ನಿಂತಾಗ ಈ ನೋವು ಇನ್ನೂ ಹೆಚ್ಚು ಅನುಭವಕ್ಕೆ ಬರುತ್ತದೆ. ರಕ್ತ ಗರಣೆಯಾದಲ್ಲಿ ಚರ್ಮ ಕೆಂಪು, ನೀಲಿಯಂಥ ಗಾಢ ಬಣ್ಣದಲ್ಲಿ ಇರಬಹುದು, ಜೊತೆಗೆ ಚರ್ಮ ಬಿಸಿಯೂ ಅನಿಸಬಹುದು. ಆದರೆ ದೇಹದ ಉಳಿದೆಲ್ಲ ಭಾಗಗಳಲ್ಲಿ ಚರ್ಮ ಮಾಮೂಲಿ ಉಷ್ಣತೆಯಲ್ಲೇ ಇರುತ್ತದೆ. ರಕ್ತ ಹೆಪ್ಪುಗಟ್ಟಿದ ರಕ್ತನಾಳಗಳು ಉಬ್ಬಿದಂತೆ, ಎದ್ದುಬಂದಂತೆ ಕಾಣಬಹುದು. ಕಾಲಿನಲ್ಲಿ ಈ ಲಕ್ಷಣಗಳು ಕಂಡರೆ, ಉದಾಸೀನ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಉಸಿರಾಟಕ್ಕೆ ತೊಂದರೆಯಾದರೆ ಶೀಘ್ರ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.

Ankle, Pain

ಮುನ್ನೆಚ್ಚರಿಕೆ

ಡಿವಿಟಿ ಇರುವವರು ದೀರ್ಘ ಪ್ರಯಾಣಕ್ಕೆ ಮುಂಚಿತವಾಗಿ ವೈದ್ಯರಲ್ಲಿ ಸಲಹೆ ಕೇಳುವುದು ಸೂಕ್ತ. ಅಂಥ ತೊಂದರೆಗಳಿಲ್ಲದೆ, ನೀರು ತುಂಬಿದಂತಾಗಿ ಕಾಲು ಊದಿಕೊಳ್ಳುವವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳುವುದು ಒಳ್ಳೆಯದು. ಮೊದಲಿಗೆ, ದೀರ್ಘ ಪ್ರಯಾಣಕ್ಕೆ ಹಗುರವಾದ, ಸೆಡಿಲವಾದ, ಆರಾಮದಾಯಕ ವಸ್ತ್ರಗಳಿರಲಿ. ಬಿಗಿಯಾದ ಪಾದರಕ್ಷೆಗಳು ಬೇಡ, ಬೇಕೆಂದಾಗ ತೆಗೆಯುವಂಥ ಪಾದರಕ್ಷೆಗಳಲ್ಲಿ ಧರಿಸಿ. ಒಂದೇ ರೀತಿಯಲ್ಲಿ ಕಾಲುಗಳನ್ನು ನೇತಾಡಿಸುವ ಬದಲು, ಎತ್ತಿಟ್ಟುಕೊಳ್ಳಲು ಸಾಧ್ಯವೇ ಪರಿಶೀಲಿಸಿ. ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ನೀರು ಕುಡಿಯಿರಿ. ಆಲ್ಕೊಹಾಲ್‌ ಮತ್ತು ಕೆಫೇನ್‌ ಸಮಸ್ಯೆಯನ್ನು ಹೆಚ್ಚಿಸುತ್ತವೆ, ಜೋಕೆ. ದೀರ್ಘ ಪ್ರಯಾಣದ ನಡುವೆ ಸಾಕಷ್ಟು ವಿರಾಮ ತೆಗೆದುಕೊಳ್ಳಿ. ಪ್ರತಿ ತಾಸಿಗೊಮ್ಮೆ ನಾಲ್ಕಾರು ನಿಮಿಷ ಓಡಾಡಿ. ಚೆನ್ನಾಗಿ ನೀರು ಕುಡಿದು, ಬಾತ್‌ರೂಮ್‌ ವಿರಾಮ ತೆಗೆದುಕೊಳ್ಳುವುದು ಹೆಚ್ಚು ಸೂಕ್ತ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading

ದೇಶ

Covishield Vaccine: ಕೋವಿಡ್‌ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ! ವಿವರ ನಿಮಗೆ ತಿಳಿದಿರಲಿ

Covishield Vaccine: ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

VISTARANEWS.COM


on

covishield vaccine
Koo

ಹೊಸದಿಲ್ಲಿ: ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ (AstraZeneca), ತನ್ನ ಕೋವಿಡ್-19 (Covid 19) ಲಸಿಕೆ ಕೋವಿಶೀಲ್ಡ್ (Covishield Vaccine)‌ ಇದು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕಂಪನಿಯ ವಿರುದ್ಧ ದಾಖಲಾಗಿರುವ ಒಂದು ಮೊಕದ್ದಮೆಯ ಸಂದರ್ಭದಲ್ಲಿ ಇದನ್ನು ಒಪ್ಪಿಕೊಳ್ಳಲಾಗಿದೆ.

ಈ ಮೊಕದ್ದಮೆಯಲ್ಲಿ ಲಸಿಕೆಗೆ ಸಂಬಂಧಿಸಿ ಗಂಭೀರ ದೈಹಿಕ ಹಾನಿ ಮತ್ತು ಸಾವುಗಳನ್ನು ಆರೋಪಿಸಲಾಗಿದೆ. ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

ಟಿಟಿಎಸ್ ಎಂದರೇನು?

ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಜೊತೆಗಿನ ಥ್ರಂಬೋಸಿಸ್ ಅಪರೂಪದ ಸ್ಥಿತಿಯಾಗಿದ್ದು, ದೇಹದಲ್ಲಿನ ಅಸಾಮಾನ್ಯ ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್‌ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ಕೋಶಗಳು. ಆದ್ದರಿಂದ ಅವು ತುಂಬಾ ಕಡಿಮೆ ಇರುವುದು ಅಪಾಯಕಾರಿ.

ಅಡೆನೊವೈರಲ್ ವೆಕ್ಟರ್ COVID-19 ಲಸಿಕೆಗಳನ್ನು ಪಡೆದ ಜನರಲ್ಲಿ ಈ ಸ್ಥಿತಿಯನ್ನು ಗಮನಿಸಲಾಗಿದೆ. ಉದಾಹರಣೆಗೆ Vaxzevria, Covishield (AstraZeneca) ಮತ್ತು Johnson & Johnson/Janssen COVID-19 ಲಸಿಕೆ ಪಡೆದವರಲ್ಲಿ. ದೇಹದ ರೋಗನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿ, ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಂಡಿರುವ ಪ್ರೋಟೀನ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳನ್ನು ತಯಾರಿಸುವುದರಿಂದ TTS ಸಂಭವಿಸುತ್ತದೆ.

TTS ಅನ್ನು 2 ಹಂತಗಳಾಗಿ ವರ್ಗೀಕರಿಸಲಾಗಿದೆ.

ಹಂತ 1

  • ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ, ಮೆದುಳು ಅಥವಾ ಕರುಳಿನಲ್ಲಿ, ಕೆಲವೊಮ್ಮೆ ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ಧನಾತ್ಮಕ PF4 ವಿರೋಧಿ ELISA ಪರೀಕ್ಷೆಗಳು ರೋಗನಿರ್ಣಯವನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.
  • ಹಂತ 1 ಪ್ರಕರಣಗಳು ಸಾಮಾನ್ಯವಾಗಿ ಹೆಚ್ಚು ತೀವ್ರವಾಗಿರುತ್ತವೆ ಮತ್ತು ಅಪಾಯಕಾರಿಯಾಗಿರುತ್ತವೆ.
  • ಇದು ಯುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ಹಂತ 2

  • ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿರುವಂತೆ ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ರೋಗನಿರ್ಣಯಕ್ಕೆ ಧನಾತ್ಮಕ PF4 ELISA ಪರೀಕ್ಷೆ ಅಗತ್ಯ.

ರೋಗಲಕ್ಷಣಗಳು

TTSನ ಲಕ್ಷಣಗಳು ತೀವ್ರವಾದ ತಲೆನೋವು, ಹೊಟ್ಟೆ ನೋವು, ಕಾಲುಗಳಲ್ಲಿ ಊತ, ಉಸಿರಾಟದ ತೊಂದರೆ, ಚಿಂತನೆಯಲ್ಲಿ ಸಮಸ್ಯೆ, ದೇಹದ ಕಂಪನಗಳು. ಲಸಿಕೆ ಪಡೆದ ನಂತರ ಯಾರಲ್ಲಾದರೂ ಈ ಚಿಹ್ನೆಗಳು ಕಂಡುಬಂದರೆ ಅವರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

Continue Reading

ಆರೋಗ್ಯ

Ayushman Bharat Diwas 2024: 50 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಅಯುಷ್ಮಾನ್ ಭಾರತ್

Ayushman Bharat Diwas 2024: ದೇಶಾದ್ಯಂತ ಇಂದು ಆಯುಷ್ಮಾನ್ ಭಾರತ್ ದಿನವನ್ನು ಆಚರಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ದಿವಸ್ ಅನ್ನು ಏಪ್ರಿಲ್ 30ರಂದು ಗುರುತಿಸಲಾಗಿದೆ. 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಾರಂಭದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.

VISTARANEWS.COM


on

By

Ayushman Bharat Diwas 2024
Koo

ಬಡ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 2018ರ ಸೆಪ್ಟೆಂಬರ್ 23ರಂದು ಜಾರಿಗೊಳಿಸಲಾಗಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಇಂದು ದೇಶಾದ್ಯಂತ ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas 2024) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನರ ಅರೋಗ್ಯ ರಕ್ಷಣೆಯ ಕುರಿತು ಪ್ರಧಾನಿ (PM) ನರೇಂದ್ರ ಮೋದಿ (narendra modi) ಹೇಳಿರುವ ಸ್ಫೂರ್ತಿದಾಯಕ ಮಾತುಗಳು ಹೀಗಿವೆ.

ಆಯುಷ್ಮಾನ್ ಭಾರತ್ ದಿವಸ್ ಅನ್ನು ಏಪ್ರಿಲ್ 30ರಂದು ಗುರುತಿಸಲಾಗಿದೆ. 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಾರಂಭದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. AB-PMJAY ಎಂಬುದು ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ. ದ್ವಿತೀಯ ಮತ್ತು ತೃತೀಯ ಆಸ್ಪತ್ರೆಯ ಆರೈಕೆಗಾಗಿ 5 ಲಕ್ಷ ರೂ.ವರೆಗೆ ಉಚಿತ ವೆಚ್ಚವನ್ನು ಒದಗಿಸಲಾಗುತ್ತದೆ.

ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಂಟಿಯಾಗಿ ಹಣವನ್ನು ನೀಡಲಾಗುತ್ತದೆ. 2021ರ ಜುಲೈ ವೇಳೆಗೆ AB-PMJAY ಅನ್ನು ಪಶ್ಚಿಮ ಬಂಗಾಳ, ದೆಹಲಿಯ NCT ಮತ್ತು ಒಡಿಶಾ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

ಮಾನದಂಡವೇನು?

ಅಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು 2011ರ ಸಾಮಾಜಿಕ- ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ (SECC) ಉಲ್ಲೇಖಿಸಲಾದ ಮಾನದಂಡಗಳ ಮೇಲೆ ಅರ್ಹರಾಗಿರುತ್ತಾರೆ.

ಮನೆಯಿಲ್ಲದ, ಭೂರಹಿತ ಕುಟುಂಬಗಳು, ಕೂಲಿ ಪಡೆಯುವ ಕಾರ್ಮಿಕರು, ಬುಡಕಟ್ಟು ಜನರು.. ಸೇರಿದಂತೆ ಸರ್ಕಾರ ನಿಗದಿಪಡಿಸುವ ಮಾನದಂಡದ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ನಿವಾಸಿಗಳಿಗೆ ಅರ್ಹತೆಯು ವಿಭಿನ್ನವಾಗಿದೆ.


50 ಕೋಟಿಗೂ ಹೆಚ್ಚು ಅರ್ಹರು

2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ (ಎಸ್‌ಇಸಿಸಿ) ಪಟ್ಟಿಯನ್ನು ಆಧರಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿಗೂ ಹೆಚ್ಚು ಜನರನ್ನು ಅರ್ಹರೆಂದು ಗುರುತಿಸಲಾಗಿದೆ. ಎಲ್ಲಾ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಕಾರ್ಡ್ ಹೊಂದಿರುವವರು ಸಹ ಈ ಯೋಜನೆಗೆ ಅರ್ಹರಾಗಿದ್ದಾರೆ. ಅವರ ಅರ್ಹತೆಯನ್ನು ಪರಿಶೀಲಿಸಲು ಒಬ್ಬರು AB-PMJAY ಸಹಾಯವಾಣಿಗೆ 14555 ಅಥವಾ 1800-111-565ಗೆ ಕರೆ ಮಾಡಬಹುದು.

ಆರೋಗ್ಯ ಕುರಿತು ಪ್ರಧಾನಿ ಮೋದಿ ಮಾತುಗಳು…

  • – ಉತ್ತಮ ಆರೋಗ್ಯವು ಮಾನವನ ಪ್ರಗತಿ ಮತ್ತು ಸಮೃದ್ಧಿಯ ಅಡಿಪಾಯವಾಗಿದೆ. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛ ಬೀದಿಗಳ ಬಗ್ಗೆ ಮಾತ್ರವಲ್ಲ, ಎಲ್ಲರಿಗೂ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವುದಾಗಿದೆ.
  • – ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ನಾವು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಇಂದು ನಮ್ಮ ಗಮನವು ಆರೋಗ್ಯದ ಮೇಲೆ ಮಾತ್ರವಲ್ಲ, ಕ್ಷೇಮದ ಮೇಲೆಯೂ ಇದೆ. ಆರೋಗ್ಯ ರಕ್ಷಣೆಯು ಪ್ರತಿ ಸರ್ಕಾರದ ಆದ್ಯತೆಯಾಗಿರಬೇಕು.

– ರಿಮೋಟ್ ಹೆಲ್ತ್‌ಕೇರ್ ಮತ್ತು ಟೆಲಿಮೆಡಿಸಿನ್ ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಆರೋಗ್ಯ ಪ್ರವೇಶ ವಿಭಜನೆಯನ್ನು ಕಡಿಮೆ ಮಾಡುತ್ತದೆ. ಆಯುಷ್ಮಾನ್ ಭಾರತ್ ನವ ಭಾರತದ ಕ್ರಾಂತಿಕಾರಿ ಹೆಜ್ಜೆಗಳಲ್ಲಿ ಒಂದಾಗಿದೆ. ಇದು ದೇಶದ ಜನಸಾಮಾನ್ಯರ ಮತ್ತು ಬಡವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಭಾರತವನ್ನು ಪ್ರತಿನಿಧಿಸುವ 130 ಕೋಟಿ ಜನರ ಸಾಮೂಹಿಕ ಸಂಕಲ್ಪ ಮತ್ತು ಶಕ್ತಿಯ ಸಂಕೇತವಾಗಿದೆ.

  • – ಉತ್ತಮ ಆರೋಗ್ಯ ಮೂಲಸೌಕರ್ಯವು ಕೇವಲ ಸೌಲಭ್ಯವಲ್ಲ, ಇದು ಆರೋಗ್ಯ ಸೇವೆಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಉತ್ತಮ ಮಾರ್ಗವಾಗಿದೆ. ನಾವು ದೇಶದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ರಚಿಸಬೇಕಾಗಿದೆ. ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳಲ್ಲಿ ಸ್ವಾವಲಂಬನೆ ಇಲ್ಲದೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ನಮ್ಮ ಉದ್ದೇಶಗಳನ್ನು ಸಾಧಿಸಲಾಗುವುದಿಲ್ಲ.
  • – ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು.
Continue Reading
Advertisement
Hassan Pen Drive Case Did Karthik offer to display Prajwal videos on LED wall in Public
ಕ್ರೈಂ4 mins ago

Hassan Pen Drive Case: ಪ್ರಜ್ವಲ್‌ ಅಶ್ಲೀಲ ವಿಡಿಯೊಗಳನ್ನು ಎಲ್‌ಇಡಿ ವಾಲ್‌ನಲ್ಲಿ ಪ್ರದರ್ಶನಕ್ಕೆ ಮುಂದಾಗಿದ್ದರೇ ಕಾರ್ತಿಕ್?

Hassan Pen Drive Case How did Karthik get Prajwal video Devaraje Gowda questions
ರಾಜಕೀಯ24 mins ago

Hassan Pen Drive Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಕಾರ್ತಿಕ್‌ಗೆ ಹೇಗೆ ಸಿಕ್ತು? ಡೌನ್ಲೋಡ್‌ ಮಾಡಿದ್ದು ಯಾರು? ಈ ಬಗ್ಗೆ ದೇವರಾಜೇಗೌಡ ಹೇಳಿದ್ದೇನು?

IPL 2024
ಪ್ರಮುಖ ಸುದ್ದಿ38 mins ago

IPL 2024 : ಐಪಿಎಲ್ ಪ್ಲೇಆಫ್​ ಹಂತಕ್ಕೆ ಇಂಗ್ಲೆಂಡ್ ಆಟಗಾರರು ಅಲಭ್ಯ; ಇದಕ್ಕೂ ಒಂದು ಕಾರಣವಿದೆ

Multivitamin Pill
ಆರೋಗ್ಯ39 mins ago

Multivitamin Pill: ಮಲ್ಟಿವಿಟಮಿನ್‌ ಮಾತ್ರೆಗಳ ಮೊರೆ ಹೋಗದೆ, ನೈಸರ್ಗಿಕವಾಗಿ ಪೋಷಣೆ ಪಡೆಯುವುದು ಹೇಗೆ?

Kannada New Movie
ಸ್ಯಾಂಡಲ್ ವುಡ್46 mins ago

Kannada New Movie: ‘ಕನ್ನಡ ಮಾಧ್ಯಮ’ ಸಿನಿಮಾಕ್ಕೆ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಸಾಥ್; ಮೋಷನ್ ಪೋಸ್ಟರ್ ರಿಲೀಸ್

V Srinivas Prasad
ಪ್ರಮುಖ ಸುದ್ದಿ1 hour ago

V Srinivas Prasad: ಮಣ್ಣಲ್ಲಿ ಮಣ್ಣಾದ ಸಂಸದ ಶ್ರೀನಿವಾಸ ಪ್ರಸಾದ್; ಬೌದ್ಧ ಸಂಪ್ರದಾಯದಂತೆ ಅಂತ್ಯಕ್ರಿಯೆ

KL Rahul
ಕ್ರೀಡೆ1 hour ago

KL Rahul : ವಿಶ್ವ ಕಪ್​ ತಂಡಕ್ಕೆ ರಾಹುಲ್ ಕೈಬಿಟ್ಟ ಬಿಸಿಸಿಐಗೆ ಟಾಂಗ್​ ಕೊಟ್ಟ ಲಕ್ನೊ ಫ್ರಾಂಚೈಸಿ

Actress Summer Fashion
ಫ್ಯಾಷನ್1 hour ago

Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್‌ ಪೂಲ್‌ಸೈಡ್‌ ಹಾಟ್‌ ಲುಕ್‌!

Hassan Pen Drive Case
ಸಿನಿಮಾ1 hour ago

Hassan Pen Drive Case: ಪ್ರಜ್ವಲ್ ರೇವಣ್ಣ ಮೃಗಕ್ಕಿಂತ ಕಡೆ; ಕಿಡಿ ಕಾರಿದ ಬಹುಭಾಷಾ ನಟಿ ಪೂನಂ ಕೌರ್

Physical Abuse
ಕ್ರೈಂ2 hours ago

Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ14 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌