Physical Abuse: ಮಸಾಜ್‌ ಅಷ್ಟೇ ಸಾಕಾಗಲ್ಲ, ಹ್ಯಾಪಿ ಎಂಡಿಂಗ್ ಬೇಕು; ಪಾರ್ಲರ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನ ಸೆರೆ - Vistara News

ಕರ್ನಾಟಕ

Physical Abuse: ಮಸಾಜ್‌ ಅಷ್ಟೇ ಸಾಕಾಗಲ್ಲ, ಹ್ಯಾಪಿ ಎಂಡಿಂಗ್ ಬೇಕು; ಪಾರ್ಲರ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನ ಸೆರೆ

Physical Abuse: ಮಸಾಜ್ ಪಾರ್ಲರ್‌ಗಳಲ್ಲಿ ಕೆಲಸ ಮಾಡುವ ಯುವತಿಯರು ಎಷ್ಟು ಸೇಫ್ ಎಂಬ ಪ್ರಶ್ನೆ ಕಾಡುತ್ತಿದೆ. ಸಲೂನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ, ಸಲೂನ್‌ ಮಾಲೀಕರ ಸಂಬಂಧಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

VISTARANEWS.COM


on

Physical Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಸಾಜ್‌ ಪಾರ್ಲರ್‌ನಲ್ಲಿ ಕೆಲಸ ಮಾಡುವ ಯುವತಿಗೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ (Physical Abuse) ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ನೊಂದ ಯುವತಿ ದೂರು ದಾಖಲಿಸಿದ್ದಾರೆ.

ಮ್ಯಾಜಿಕ್ ಟಚ್ ಯೂನಿಸೆಕ್ಸ್ ಸೆಲೂನ್‌ನಲ್ಲಿ ಸಂತ್ರಸ್ತೆ ಅಸಿಸ್ಟೆಂಟ್‌ ಮ್ಯಾನೇಜರ್‌ ಕೆಲಸ ಮಾಡುತ್ತಿದ್ದು, ಇಲ್ಲಿಗೆ ಬಂದ ರವೀಂದ್ರ ಶೆಟ್ಟಿ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ರತ್ನಾವತಿ ಮತ್ತು ಜಗದೀಶ್ ಎಂಬುವವರಿಗೆ ಸೇರಿದ ಸೆಲೂನ್‌ ಇದಾಗಿದೆ ಎಂದು ತಿಳಿದುಬಂದಿದೆ. ಆರೋಪಿ ರವೀಂದ್ರ ಶೆಟ್ಟಿ ಎಂಬಾತ ರತ್ನಾವತಿ ಅವರ ಸಂಬಂಧಿಯಾಗಿದ್ದಾನೆ.

ಆರೋಪಿ ಪದೇ ಪದೆ ಪಾರ್ಲರ್‌ಗೆ ಬಂದು ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಮಾತ್ರವಲ್ಲದೆ ಮಸಾಜ್‌ ನನಗೆ ಸಾಕಾಗುವುದಿಲ್ಲ, ಹ್ಯಾಪಿ ಎಂಡಿಂಗ್ ಬೇಕು ಎಂದು ಹೇಳುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗೆ ಇದೇ‌ ತಿಂಗಳ 14ರಂದು ಮತ್ತೆ ಮಸಾಜ್ ಪಾರ್ಲರ್‌ಗೆ ಬಂದಿದ್ದು, ಯುವತಿಯನ್ನು ಬಲವಂತವಾಗಿ ರೂಂ ಒಳಗಡೆ ಎಳೆದೊಯ್ದಿದ್ದಾನೆ ಎಂದು ದೂರಲಾಗಿದೆ.

ಇದನ್ನೂ ಓದಿ: Prithvi Shaw : ನಟಿ ಸಪ್ನಾ ಗಿಲ್​ ವಿರುದ್ಧ ಕೊಲೆ ಕೇಸ್​ ಕೂಡ ದಾಖಲು, ಮತ್ತೊಮ್ಮೆ ಜೈಲು ಸೇರುವ ಸಾಧ್ಯತೆ?

ಆರೋಪಿ ರವೀಂದ್ರ ಯುವತಿ ಎಷ್ಟೇ ಬೇಡ ಎಂದರು ವಸ್ತ್ರಗಳನ್ನು ಬಲವಂತವಾಗಿ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ಖಾಸಗಿ ಅಂಗವನ್ನು ಮುಟ್ಟುವಂತೆ ಯುವತಿಗೆ ಹೇಳಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈತನ ಕಾಮುಕ ಚೇಷ್ಟೆಗೆ ನೊಂದ ಯುವತಿಯು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ರವೀಂದ್ರ ಶೆಟ್ಟಿ ಮತ್ತು ಸಲೂನ್‌ ಮಾಲೀಕರಾದ ರತ್ನಾವತಿಯ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರವೀಂದ್ರ ಶೆಟ್ಟಿಯನ್ನು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

BJP-JDS Padayatra: ಮೈಸೂರು ಚಲೋಗೆ ಸರ್ಕಾರ ಅನುಮತಿ; ನಾಳೆ ಬೆಳಗ್ಗೆ ಚಾಲನೆ, ಪಾದಯಾತ್ರೆ ಮಾರ್ಗದ ವಿವರ ಇಲ್ಲಿದೆ

BJP-JDS Padayatra: ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ಶನಿವಾರ ಬೆಳಗ್ಗೆ 9.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಗುತ್ತದೆ.

VISTARANEWS.COM


on

BJP-JDS Padayatra
Koo

ಬೆಂಗಳೂರು: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. “ಭ್ರಷ್ಟ ಕಾಂಗ್ರೆಸ್ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ಶನಿವಾರ ಬೆಳಗ್ಗೆ 9.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಗುತ್ತದೆ. ಏಳು ದಿನಗಳ ಪಾದಯಾತ್ರೆ ಸಾಗುವ ಮಾರ್ಗದ ವಿವರವನ್ನು ಇಲ್ಲಿ ನೀಡಲಾಗಿದೆ.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಲಿದ್ದಾರೆ. ಒಟ್ಟು 124 ಕಿ.ಮೀ ಪಾದಯಾತ್ರೆ ಸಾಗಲಿದ್ದು, ಸಮಾರೋಪ ಸಮಾರಂಭ ಸೇರಿ ಒಟ್ಟು ಎಂಟು ದಿನಗಳ ಕಾರ್ಯಕ್ರಮದ ಮಾಹಿತಿ ಇಲ್ಲಿದೆ.

ಪಾದಯಾತ್ರೆ ಸಾಗುವ ವಿವರ

  • ಆ.3- ಕೆಂಗೇರಿಯಿಂದ ಹೊರಟು ಬಿಡದಿಯಲ್ಲಿ ವಾಸ್ತವ್ಯ
  • ಆ.4- ಬಿಡದಿಯಿಂದ ಹೊರಟು ಕೆಂಗಲ್‌ನಲ್ಲಿ ಹಾಲ್ಟ್
  • ಆ.5- ಕೆಂಗಲ್ ನಿಂದ ಹೊರಟು ನಿಡಘಟ್ಟದಲ್ಲಿ ವಾಸ್ತವ್ಯ
  • ಆ.6- ನಿಡಘಟ್ಟದಿಂದ ಹೊರಟು ಮಂಡ್ಯ
  • ಆ.7- ಮಂಡ್ಯದಿಂದ ಹೊರಟು ತೂಬಿನಕೆರೆಯಲ್ಲಿ ವಾಸ್ತವ್ಯ
  • ಆ.8- ತೂಬಿನ ಕೆರೆಯಿಂದ ಹೊರಟು ಶ್ರೀರಂಗಪಟ್ಟಣದಲ್ಲಿ ಹಾಲ್ಟ್
  • ಆ.9- ಶ್ರೀರಂಗಪಟ್ಟಣದಿಂದ ಹೊರಟು ಮೈಸೂರು ಹೊರವಲಯದಲ್ಲಿ ವಾಸ್ತವ್ಯ
  • ಆ.10- ಮೈಸೂರು ಹೊರವಲಯದಿಂದ ಕೇಂದ್ರ ನಾಯಕರ ಜತೆ ಪಾದಯಾತ್ರೆ ಹೊರಟು ಸಮಾರೋಪ ಸಮಾರಂಭದ ವೇದಿಕೆ ತಲುಪುವುದು.

ಶಾಂತಿಯುತವಾಗಿ ಪಾದಯಾತ್ರೆ ನಡೆಸಲು ಅನುಮತಿ: ಪರಮೇಶ್ವರ್

ಬೆಂಗಳೂರು: ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ಸರ್ಕಾರ ನಿರ್ಧರಿಸಿದೆ. ಶಾಂತಿಯುತವಾಗಿ ಅವರು ಪಾದಯಾತ್ರೆ ನಡೆಸುತ್ತೇವೆ ಎಂದಿದ್ದಾರೆ. ಹೀಗಾಗಿ ಅನುಮತಿ ಕೊಡಲು ನಾವು ನಿರ್ಧರಿಸಿದ್ದೇವೆ ಎಂಧೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಇದನ್ನೂ ಓದಿ | Rakshit Shetty: ಯಶವಂತಪುರ ಪೊಲೀಸರ ಮುಂದೆ ಹಾಜರಾದ ನಟ ರಕ್ಷಿತ್‌ ಶೆಟ್ಟಿ, ಕಾಪಿರೈಟ್‌ ಉಲ್ಲಂಘನೆ ವಿಚಾರಣೆ

ನಗರದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಕಮಿಷನರ್

ನಾಳೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಿನ್ನೆಲೆ‌ ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿ, ಎಲ್ಲಿಂದ ಯಾವ ರೀತಿ ಪಾದಯಾತ್ರೆ ಮಾಡುತ್ತಾರೋ ಅಂತ ಇನ್ನೂ ಗೊತ್ತಿಲ್ಲ. ನಗರದಲ್ಲಿ ಪ್ರತಿಭಟನೆ, ರ‍್ಯಾಲಿ, ಪಾದಯಾತ್ರೆಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶದ ಅನ್ವಯ ಅನುಮತಿ ಇಲ್ಲ. ಆದರೂ ಪೂರಕವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ. ಪ್ರತಿಭಟನೆಗೆ ಬೆಂಗಳೂರಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಮುನಿಸು ಶಮನ, ಬಿಜೆಪಿ, ಜೆಡಿಎಸ್‌ ಒಗ್ಗೂಡಿ ಪಾದಯಾತ್ರೆ

ನವದೆಹಲಿ/ಬೆಂಗಳೂರು: ಮುಡಾ ಹಗರಣ ಸೇರಿ ಹಲವು ಭ್ರಷ್ಟಾಚಾರ ಆರೋಪ ಹೊತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೈಗೊಳ್ಳಲು ತೀರ್ಮಾನಿಸಿರುವ ಪಾದಯಾತ್ರೆಗೆ (BJP Padayatra) ಸಹಕಾರ ನೀಡುವುದಿಲ್ಲ ಎಂದು ಬಂಡಾಯದ ಬಾವುಟ ಹಾರಿಸಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರ ಮುನಿಸು ಈಗ ಶಮನವಾಗಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವರು ಮಾತುಕತೆ ನಡೆಸಿದ್ದು, “ಬಿಜೆಪಿ ಹಾಗೂ ಜೆಡಿಎಸ್‌ ಒಗ್ಗೂಡಿ ಶನಿವಾರದಿಂದ (ಆಗಸ್ಟ್‌ 3) ಪಾದಯಾತ್ರೆ ಆರಂಭಿಸಲಾಗುತ್ತದೆ” ಎಂದು ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | DK Shivakumar: ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್‌ ಪ್ರಶ್ನೆಗಳ ಸವಾಲು, ಹೆಜ್ಜೆಗೆ ಒಂದು ಪ್ರಶ್ನೆ ಎಂದ ಡಿಕೆಶಿ

ದೆಹಲಿಯಲ್ಲಿ ಪ್ರಲ್ಹಾದ್‌ ಜೋಶಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದರು. “ಶನಿವಾರದಿಂದ ನಮ್ಮ ಪಾದಯಾತ್ರೆ ಪ್ರಾರಂಭ ಆಗಲಿದೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಮೂಡಾ ಹಾಗೂ ವಾಲ್ಮೀಕಿ ಹಗರಣಗಳು ಇದಕ್ಕೆ ಜ್ವಲoತ ಉದಾಹರಣೆಗಳಾಗಿವೆ. ಕಾಂಗ್ರೆಸ್‌ನವರು ಕೂಡ ಮೂಡಾ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಒಟ್ಟಿಗೆ ಪಾದಯಾತ್ರೆ ಕೈಗೊಳ್ಳುತ್ತವೆ. ಕುಮಾರಸ್ವಾಮಿ ಅವರ ಜತೆ ಇದ್ದ ಸಣ್ಣ ಕಮ್ಯುನಿಕೇಷನ್ ಗ್ಯಾಪ್ ಸರಿ ಆಗಿದೆ. ನಾವು ಕುಮಾರಸ್ವಾಮಿ ಅವರ ಹತ್ತಿರ ಮಾತಾಡಿದ್ದೇವೆ. 7 ದಿನಗಳ ಪಾದಯಾತ್ರೆ ಪೂರ್ಣಗೊಳ್ಳಲಿದೆ” ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

Continue Reading

ದೇಶ

Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1.0 ಲಕ್ಷ ಕೋಟಿ ರೂ. ರೈತರ ಬಾಕಿ ತೀರಿಸಲಾಗಿದೆ. ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ನೀತಿಯ ಅನುಸಾರ ರೈತರಿಗೆ ಆಗಬೇಕಾದ ಪಾವತಿಗಳ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಯುತ್ತಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

VISTARANEWS.COM


on

1 lakh crore Rs dues paid to farmers in current sugar season says Pralhad Joshi
Koo

ನವದೆಹಲಿ: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ತೀರಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ನೀತಿಯ ಅನುಸಾರ ರೈತರಿಗೆ ಆಗಬೇಕಾದ ಪಾವತಿಗಳ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: KSET 2024: ಕೆಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ.22 ಕೊನೆ ದಿನ; ವೇಳಾಪಟ್ಟಿ ಹೀಗಿದೆ

ಪ್ರಸಕ್ತ ಸಕ್ಕರೆ ಋತುವಿನಲ್ಲಿ 1.05 ಲಕ್ಷ ಕೋಟಿ ರೂ. ಪಾವತಿಯೊಂದಿಗೆ ಶೇ.94.8 ಕ್ಕಿಂತ ಹೆಚ್ಚಿನ ಮೊತ್ತದ ಕಬ್ಬಿನ ಬಾಕಿ ತೀರಿಸಲಾಗಿದೆ ಎಂದರು.

ಇದನ್ನೂ ಓದಿ: KEA Exams Time Table: ಪಿಎಸ್‌ಐ ಸೇರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಕಬ್ಬು ಬೆಳೆಗಾರರ ಬಾಕಿಯನ್ನು ಅತಿ ಕಡಿಮೆ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ರೈತಪರ ಕಾರ್ಯಕ್ರಮಗಳನ್ನು ಕೈಗೊಂಡ ಪರಿಣಾಮ 2021-22ರ ಸಕ್ಕರೆ ಋತುವಿನ ಶೇ. 99.99 ರಷ್ಟು ಕಬ್ಬಿನ ಬಾಕಿಯನ್ನು ತೀರಿಸಲಾಗಿದೆ ಎಂದು ಹೇಳಿದರು.

Continue Reading

ಬೆಂಗಳೂರು

Kidnap case : ಪತಿ ಮೇಲಿನ ಸಿಟ್ಟಿಗೆ ಗೆಳೆಯನ ಜತೆ ಸೇರಿ ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಾಯಿ!

Kidnap case : ಕೌಟುಂಬಿಕ ಕಲಹಕ್ಕೆ ಪತಿಯಿಂದ ದೂರಾಗಿದ್ದ ಪತ್ನಿ ಬೇರೊಂದು ಮದುವೆ ಆಗಿದ್ದಳು. ಈ ನಡುವೆ ಏಕಾಏಕಿ ಮನೆ ಬಳಿ ಆಕೆ ಸ್ವಂತ ಮಗುವನ್ನೇ ಕಿಡ್ನ್ಯಾಪ್‌ ಮಾಡಿ ಎಸ್ಕೇಪ್‌ ಆಗಿದ್ದಾಳೆ.

VISTARANEWS.COM


on

By

kidnap case
Koo

ಬೆಂಗಳೂರು: ಬೆಂಗಳೂರಿನಲ್ಲಿ ತಾಯಿಯಿಂದಲೇ ಮಗುವಿನ (Kidnap case) ಅಪಹರಣವಾಗಿದೆ. ಮಗುವನ್ನು ಕಿಡ್ನ್ಯಾಪ್ ಮಾಡಿ ಎಸ್ಕೇಪ್‌ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕೆಆರ್‌ ಪುರಂನ ಕ್ಯಾಸ ಗ್ರ್ಯಾಂಡ್ ರಾಯ್ಸಿ ಅಪಾರ್ಟ್ ಮೆಂಟ್ ಮುಂಭಾಗ ಬೆಳಗ್ಗೆ 8.30 ರ ಸುಮಾರಿಗೆ ಘಟನೆ ನಡೆದಿದೆ.

ಮಗುವಿನ ತಾಯಿ ಅನುಪಮ ಮತ್ತು ಆತನ ಸ್ನೇಹಿತನಿಂದ ಈ ಕೃತ್ಯ ನಡೆದಿದೆ. ಪತಿ ಸಿದ್ದಾರ್ಥ ಮತ್ತು ಪತ್ನಿ ಅನುಪಮ ನಡುವೆ ಕೌಟುಂಬಿಕ ಕಲಹವಿತ್ತು. ಹೀಗಾಗಿ ಈ ಇಬ್ಬರು ದೂರವಾಗಿದ್ದರು. ದೂರಾದ ಬಳಿಕ ಪತ್ನಿ ಅನುಪಮ ಬೇರೊಬ್ಬ ವ್ಯಕ್ತಿ ಜತೆಗೆ ಮದುವೆ ಆಗಿದ್ದರು.

ಈ ಹಿನ್ನೆಲೆಯಲ್ಲಿ ಕೋರ್ಟ್ ಮಗುವನ್ನು ಪತಿ ಸಿದ್ದಾರ್ಥ್‌ ವಶಕ್ಕೆ ಒಪ್ಪಿಸಿತ್ತು. ಆದರೆ ಇಂದು ಶುಕ್ರವಾರ ಅಪಾರ್ಟ್‌ಮೆಂಟ್ ಮುಂಭಾಗ ಸ್ಕೂಲ್‌ಗೆ ಹೋಗಲು ನಿಂತಿದ್ದಾಗ ಅನುಪಮ, ಸ್ನೇಹಿತ ಜತೆ ಸೇರಿ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಸದ್ಯ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಗುವನ್ನು ಕಿಡ್ನ್ಯಾಪ್‌ ಮಾಡುವ ದೃಶ್ಯವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Murder case : ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಕಿರಾತಕ

ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ

ಬೆಂಗಳೂರಿನಲ್ಲಿ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಮತಾ (31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವಳು. ಬೆಂಗಳೂರಿನ ಬಾಗಲಗುಂಟೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಘಟನೆ ನಡೆದಿದೆ. ಡೆತ್ ನೋಟ್ ಬರೆದಿಟ್ಟಿರುವ ಮಮತಾ, ನನ್ನ ಬಗ್ಗೆ ಕೆಟ್ಟದ್ದಾಗಿ ಏನಾದರೂ ಬಂದರೆ ನೀವೆ ಹೊಣೆ ಎಂದು ಉಲ್ಲೇಖಸಿದ್ದಾಳೆ. ಇಬ್ಬರು ಯುವಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Rakshit Shetty: ಯಶವಂತಪುರ ಪೊಲೀಸರ ಮುಂದೆ ಹಾಜರಾದ ನಟ ರಕ್ಷಿತ್‌ ಶೆಟ್ಟಿ, ಕಾಪಿರೈಟ್‌ ಉಲ್ಲಂಘನೆ ವಿಚಾರಣೆ

Rakshit Shetty: ನಟ ರಕ್ಷಿತ್ ಶೆಟ್ಟಿ ಹಾಗೂ ಅವರ ಒಡೆತನದ ಪರಂವಹ ಸ್ಟುಡಿಯೋ ಮೇಲೆ ಎಫ್ಐಆರ್ ದಾಖಲಾಗಿತ್ತು. ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ʼಗಾಳಿಮಾತುʼ ಹಾಗು ʼನ್ಯಾಯ ಎಲ್ಲಿದೆʼ ಎಂಬ ಸಿನಿಮಾದ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡ ಆರೋಪ ಅವರ ಮೇಲಿದೆ.

VISTARANEWS.COM


on

Koo

ಬೆಂಗಳೂರು: ಹಾಡುಗಳ ಕಾಪಿರೈಟ್ ಉಲ್ಲಂಘನೆ (Copy Right Violation) ಆರೋಪದಲ್ಲಿ ನಟ, ಸಿಂಪಲ್‌ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ವಿರುದ್ಧ ದಾಖಲಾಗಿದ್ದ ಎಫ್ಐಆರ್ (FIR) ಪ್ರಕರಣಕ್ಕೆ ಸಂಬಂಧಿಸಿ, ಯಶವಂತಪುರ ಪೊಲೀಸರ ಎದುರು ವಿಚಾರಣೆಗೆ ನಟ ರಕ್ಷಿತ್ ಶೆಟ್ಟಿ ಹಾಜರಾಗಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಹಾಗೂ ಅವರ ಒಡೆತನದ ಪರಂವಹ ಸ್ಟುಡಿಯೋ ಮೇಲೆ ಎಫ್ಐಆರ್ ದಾಖಲಾಗಿತ್ತು. ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ʼಗಾಳಿಮಾತುʼ ಹಾಗು ʼನ್ಯಾಯ ಎಲ್ಲಿದೆʼ ಎಂಬ ಸಿನಿಮಾದ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡ ಆರೋಪ ಅವರ ಮೇಲಿದೆ. ʼನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಮತ್ತು ʼಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆʼ ಎಂಬ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಎಂಬವರು ದೂರು ಸಲ್ಲಿಸಿದ್ದರು.

ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಎರಡು ಹಾಡು ಅನುಮತಿಯಿಲ್ಲದೆ ಬಳಕೆ ಮಾಡಿಕೊಂಡ ಆರೋಪದ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಸಿನಿಮಾ ತೆರೆ ಕಾಣುವುದಕ್ಕೂ ಮುನ್ನ MRT ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ರಕ್ಷಿತ್‌ ಉತ್ತರ ನೀಡಿದ್ದಾರೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ನಾವು ಹಾಡು ಬಳಕೆ ಮಾಡುವ ಕುರಿತು ಮಾತುಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಡ್ಜೆಟ್ ಅನ್ನು ಮೀರಿತ್ತು. ಎಂಆರ್‌ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರು ಮಾತುಕತೆಗೆ ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಮಾಡಿದ್ದಾರೆ ಎಂದು ಉತ್ತರಿಸಿರುವ ರಕ್ಷಿತ್‌ ಶೆಟ್ಟಿ, ಚಿತ್ರದಲ್ಲಿ ಬಳಕೆಯಾಗಿರುವ ಹಾಡಿನ ತುಣುಕುಗಳನ್ನು ತೋರಿಸಿದ್ದಾರೆ. ಚಿತ್ರದಲ್ಲಿ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್‌ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿತ್ತು.

ಈ ಮುಂಚೆ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಬಳಕೆಯಾದ ಒಂದು ಹಾಡಿನ ವಿರುದ್ಧ ಲಹರಿ ಮ್ಯೂಸಿಕ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕಾಪಿರೈಟ್ ನಿಯಮ ಉಲ್ಲಂಘಿಸಿ ತಮ್ಮ ಸಂಸ್ಥೆಯ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ, ಅನುಮತಿ ಇಲ್ಲದೆ ಹಾಡು ಬಳಸಲಾಗಿದೆ ಎಂದು ಆರೋಪಿಸಿ ಲಹರಿ ಸಂಸ್ಥೆ ಕೇಸ್ ಹಾಕಿತ್ತು.

ಇದನ್ನೂ ಓದಿ | Rakshit Shetty: ರಕ್ಷಿತ್‌ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!

Continue Reading
Advertisement
intel layoffs
ವಿದೇಶ2 mins ago

Intel Layoffs: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ಕಂಪನಿಯಿಂದ 18,000 ಉದ್ಯೋಗಿಗಳು ವಜಾ

Sexual Abuse
Latest7 mins ago

Sexual Abuse: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಮಗು ಜನನ! ಆಘಾತಗೊಂಡು ಅಲ್ಲೇ ಕೂತಿದ್ದ ಬಾಲಕಿ

BJP-JDS Padayatra
ಕರ್ನಾಟಕ11 mins ago

BJP-JDS Padayatra: ಮೈಸೂರು ಚಲೋಗೆ ಸರ್ಕಾರ ಅನುಮತಿ; ನಾಳೆ ಬೆಳಗ್ಗೆ ಚಾಲನೆ, ಪಾದಯಾತ್ರೆ ಮಾರ್ಗದ ವಿವರ ಇಲ್ಲಿದೆ

1 lakh crore Rs dues paid to farmers in current sugar season says Pralhad Joshi
ದೇಶ23 mins ago

Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

Viral Video
Latest26 mins ago

Viral Video: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬಿದ್ದ ಕಬ್ಬಿಣದ ಗೇಟ್; ಶಾಕಿಂಗ್‌ ವಿಡಿಯೊ

ಸಿನಿಮಾ30 mins ago

OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

kidnap case
ಬೆಂಗಳೂರು39 mins ago

Kidnap case : ಪತಿ ಮೇಲಿನ ಸಿಟ್ಟಿಗೆ ಗೆಳೆಯನ ಜತೆ ಸೇರಿ ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಾಯಿ!

NEET UG 2024
ದೇಶ57 mins ago

NEET UG 2024: ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಎರಡು ನಗರಗಳಿಗೆ ಸೀಮಿತ; ಮರು ಪರೀಕ್ಷೆ ಅಗತ್ಯವಿಲ್ಲ-ಸುಪ್ರೀಂಕೋರ್ಟ್‌

ಸಿನಿಮಾ1 hour ago

Rakshit Shetty: ಯಶವಂತಪುರ ಪೊಲೀಸರ ಮುಂದೆ ಹಾಜರಾದ ನಟ ರಕ್ಷಿತ್‌ ಶೆಟ್ಟಿ, ಕಾಪಿರೈಟ್‌ ಉಲ್ಲಂಘನೆ ವಿಚಾರಣೆ

MS Dhoni
ಕ್ರೀಡೆ1 hour ago

MS Dhoni: ನೆಚ್ಚಿನ ಆಟಗಾರನನ್ನು ಹೆಸರಿಸಿದ ಧೋನಿ; ಕೊಹ್ಲಿ, ರೋಹಿತ್​ ಅಲ್ಲ, ಮತ್ಯಾರು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌