Best places to visit in Mandya : ಮಂಡ್ಯದ ಸುತ್ತಮುತ್ತ ನೋಡಲೇಬೇಕಾದ ಸ್ಥಳಗಳಿವು - Vistara News

ಕರ್ನಾಟಕ

Best places to visit in Mandya : ಮಂಡ್ಯದ ಸುತ್ತಮುತ್ತ ನೋಡಲೇಬೇಕಾದ ಸ್ಥಳಗಳಿವು

ಮಂಡ್ಯ ಜಿಲ್ಲೆಯ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳ ಕುರಿತಾದ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

mandya tourism
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರಿಗರಿಗೆ ಒಂದು ದಿನದ ಪ್ರವಾಸಕ್ಕೆ ಸರಿಹೊಂದುವ ಅನೇಕ ಸ್ಥಳಗಳಿವೆ. ಅದರಲ್ಲಿ ಮೈಸೂರು ಕೂಡ ಒಂದು. ಆದರೆ ಮೈಸೂರಿಗಿಂತ ಮೊದಲು ಸಿಗುವ ಮಂಡ್ಯದ (Best places to visit in Mandya) ಸನಿಹದಲ್ಲೇ ಹಲವಾರು ಪ್ರವಾಸಿ ತಾಣಗಳಿವೆ. ಅಂತಹ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ಶ್ರೀರಂಗಪಟ್ಟಣ


ಶ್ರೀರಂಗಪಟ್ಟಣದ ಶ್ರೀ ರಂಗನಾಥನ ದೇವಾಲಯವನ್ನು ಕ್ರಿ.ಶ 984ರಲ್ಲಿ ತಿರುಮಲಯ್ಯ ಎಂಬ ಗಂಗರ ಸರದಾರನು ನಿರ್ಮಿಸಿದನು ಎಂದು ಶಾಸನವು ತಿಳಿಸುತ್ತದೆ. ಇದು ಹೊಯ್ಸಳ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇಲ್ಲಿನ ಮುಖ್ಯ ದೇವತೆಯು ಭಗವಂತನಾದ ವಿಷ್ಣುವಿನ (ರಂಗನಾಥನ) ರೂಪದಲ್ಲಿ ಆದಿಶೇಷನ (ಸಾವಿರ ತಲೆಯ ದೈವಿಕ ಸರ್ಪವು ಹಾವುಗಳ ರಾಜ) ಸುರುಳಿಗಳ ಮೇಲೆ ಮಲಗಿದ ರೀತಿಯಲ್ಲಿದೆ. ಇಲ್ಲಿ ಭಗವಾನ್ ವಿಷ್ಣುವು ತನ್ನ ನಾಭಿಯಲ್ಲಿ ದೇವಿ, ಶ್ರೀದೇವಿ, ಭೂದೇವಿ ಮತ್ತು ಬ್ರಹ್ಮ ದೇವರಿಂದ ಸುತ್ತುವರಿದಿದ್ದಾನೆ. ಅವನ ಪಾದದಲ್ಲಿ ಕಾವೇರಿ ಎಂದು ಗುರುತಿಸಲಾದ ಲಕ್ಷ್ಮಿ ದೇವಿಯ ಕುಳಿತಿರುವ ಚಿತ್ರವಿದೆ. ಸಂಕೀರ್ಣ ಸಮರ್ಪಿತ ನರಸಿಂಹ, ಗೋಪಾಲಕೃಷ್ಣ, ಶ್ರೀನಿವಾಸ, ಹನುಮಾನ್, ಗರುಡ, ರಂಗನಾಯಕಿ, ಸುದರ್ಶನ ಚಕ್ರ ಮತ್ತು ಆಳ್ವಾರರುಗಳಲ್ಲಿ ಅನೇಕ ಉಪ-ದೇಗುಲಗಳಿವೆ.

ಇದನ್ನೂ ಓದಿ: Places To Visit In July : ಜುಲೈ ತಿಂಗಳಲ್ಲಿ ಸುಮಧುರ ಪ್ರವಾಸಕ್ಕೆ ಸೂಕ್ತ ಸ್ಥಳಗಳಿವು…
ಸುದೀರ್ಘ ಕಾಲ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿದ್ದದ್ದು ಶ್ರೀರಂಗಪಟ್ಟಣ. ಆದರೂ ಇದು ಹೆಚ್ಚಾಗಿ ಗುರುತಿಸಿಕೊಂಡಿದ್ದು ಟಿಪು ಸುಲ್ತಾನನಿಂದ. ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣದಲ್ಲಿ ಬೇಸಿಗೆ ಅರಮನೆಯನ್ನು ಕಟ್ಟಿಕೊಂಡಿದ್ದ. ಇದೀಗ ಅದು ವಸ್ತು ಸಂಗ್ರಾಹಲಯವಾಗಿದೆ. ಟಿಪ್ಪು ಮತ್ತು ಅವನ ತಂದೆ ಹೈದರ್‌ ಅಲಿಯನ್ನು ಸಮಾಧಿ ಮಾಡಿದ ಗುಂಬಜ್‌, ಜಾಮಾ ಮಸೀದಿ, ಗನ್‌ ಪೌಡರ್‌ ಕೋಣೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಪಾಂಡವಪುರ


ಮಂಡ್ಯದಿಂದ 28 ಕಿ.ಮೀ ದೂರದಲ್ಲಿರುವ ಪಾಂಡವಪುರ ಹೈದರ್‌ ಮತ್ತು ಟಿಪ್ಪು ಸುಲ್ತಾನರ ಆಳ್ವಿಕೆಯ ಸಮಯದಲ್ಲಿ ಫ್ರೆಂಚ್‌ ಸೈನ್ಯದ ಶಿಬಿರದ ಜಾಗವಾಗಿತ್ತು. ಅದೇ ಕಾರಣಕ್ಕೆ ಈ ಸ್ಥಳವನ್ನು ಫ್ರೆಂಚ್‌ ರಾಕ್ಸ್‌ ಎಂದೂ ಕರೆಯಲಾಗುತ್ತದೆ. ಪಾಂಡವಪುರವು ಮಹಾಭಾರತಕ್ಕೆ ಸಂಬಂಧಿಸಿದ ಘಟನೆಗಳೊಂದಿಗೆ ಸಂಬಂಧಿಸಿದೆ. ಪಾಂಡವರು ಕಾಡಿನಲ್ಲಿದ್ದಾಗ, ಮೇಣದ ಅರಮನೆಯಿಂದ ತಪ್ಪಿಸಿಕೊಂಡ ನಂತರ, ಇಲ್ಲಿನ ‘ಕುಂತಿ ಬೆಟ್ಟ’ ಎಂಬ ಬೆಟ್ಟದ ಮೇಲೆ ಬೀಡು ಬಿಟ್ಟಿದ್ದರು ಎಂದು ನಂಬಲಾಗಿದೆ. ಅದೇ ಕಾರಣಕ್ಕೆ ಇದನ್ನು ಪಾಂಡವಪುರ ಎಂದು ಕರೆಯಲಾಗುತ್ತದೆ. ಕುಂತಿ ಬೆಟ್ಟವು ಒಂದೇ ಬೆಟ್ಟವಲ್ಲ. ಹಲವಾರು ಮೈಲುಗಳಷ್ಟು ಪ್ರದೇಶದಲ್ಲಿ ಹರಡಿರುವ ಅನೇಕ ಬೆಟ್ಟಗಳ ಸರಪಳಿಯಾಗಿದೆ. ಈ ಬೆಟ್ಟಗಳಿಗೆ ಕುಂತಿ, ಭೀಮ ಮತ್ತು ಬಕಾಸುರನ ದಂತಕಥೆಗಳೊಂದಿಗೆ ಸಂಬಂಧವಿರುವುದರಿಂದ ಈ ಬೆಟ್ಟಗಳಿಗೆ ಸ್ಥಳೀಯವಾಗಿ ಕುಂತಿ ಬೆಟ್ಟ, ಭೀಮನ ಬೆಟ್ಟ (ಒನಕೆ ಬೆಟ್ಟ), ಬಕಾಸುರ ಬೆಟ್ಟ ಎಂದು ಕರೆಯಲಾಗುತ್ತದೆ. ಕುಂತಿ ಬೆಟ್ಟದ ಮೇಲೆ ಶಿವನ ದೇವಾಲಯ ಮತ್ತು ಕುಂತಿ ಕೋಲ ಎಂದು ಕರೆಯಲ್ಪಡುವ ತೊಟ್ಟಿಯಿದೆ. ಹಾಗೆಯೇ ಭೀಮನ ಬಂಡಿ ಮತ್ತು ಭೀಮನ ಪಾದದ ಗುರುತೂ ಇಲ್ಲಿದೆ. ಕುಂತಿ ಬೆಟ್ಟದ ತಪ್ಪಲಿನಲ್ಲಿ ಶಾಲೆ, ಹಾಸ್ಟೆಲ್ ಮತ್ತು ಕಲ್ಯಾಣ ಮಂಟಪದೊಂದಿಗೆ ದಕ್ಷಿಣಾಮೂರ್ತಿ ಮತ್ತು ಮಲ್ಲಿಕಾರ್ಜುನ ದೇವಾಲಯಗಳಿವೆ.

ರಂಗನತಿಟ್ಟು ಪಕ್ಷಿಧಾಮ


1940ರಲ್ಲಿ ಪ್ರಸಿದ್ಧ ಪಕ್ಷಿ ವಿಜ್ಞಾನಿ ಡಾ. ಸಲೀಂ ಅಲಿ ಅವರ ಅಪೇಕ್ಷೆಯ ಮೇರೆಗೆ ಅಭಯಾರಣ್ಯವಾಗಿ ಘೋಷಿಸಲ್ಪಿಟ್ಟಿದ್ದು ರಂಗನತಿಟ್ಟು ಪಕ್ಷಿಧಾಮ. ಈ ಪಕ್ಷಿಧಾಮ ಕಾವೇರಿ ನದಿಯ ದಡದಲ್ಲಿ 0.67 ಚ.ಕಿ.ಮೀನಷ್ಟು ವಿಸ್ತೀರ್ಣದಲ್ಲಿದೆ. ಇಲ್ಲಿಗೆ ಅಮೆರಿಕ, ಯುರೋಪ್‌ ಮತ್ತು ಸೈಬೀರಿಯಾದಿಂದ ವಲಸೆ ಪಕ್ಷಿಗಳು ಬರುತ್ತವೆ. ಇಲ್ಲಿ ದೋಣಿ ವಿಹಾರಕ್ಕೂ ಅವಕಾವಿದೆ. ಕೊಕ್ಕರೆ, ಮಿಂಚುಳ್ಳಿ, ಕಾರ್ಮೊರೆಂಟ್, ಡಾರ್ಟರ್, ಹೆರಾನ್‌ಗಳು, ಕಾಡು ಬಾತುಕೋಳಿಗಳು, ರಿವರ್ ಟರ್ನ್, ಕ್ಯಾಟಲ್ ಎಗ್ರೆಟ್ಸ್, ಇಂಡಿಯನ್ ರೋಲರ್, ಐಬಿಸ್, ಕಾಮನ್ ಸ್ಪೂನ್‌ಬಿಲ್, ಗ್ರೇಟ್ ಸ್ಟೋನ್ ಪ್ಲೋವರ್ ಮತ್ತು ಪೆಲಿಕಾನ್‌ಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಮೊಸಳೆಗಳನ್ನೂ ಕೂಡ ಇಲ್ಲಿ ಸಾಕಲಾಗಿದೆ.

ಇದನ್ನೂ ಓದಿ: D.K. Shivakumar: ಎರಡು ದಿನ ನವದೆಹಲಿ ಪ್ರವಾಸಕ್ಕೆ ಹೊರಟ ಡಿಸಿಎಂ ಡಿ.ಕೆ. ಶಿವಕುಮಾರ್‌

ಕೊಕ್ಕರೆಬೆಳ್ಳೂರು


ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಈ ಕೊಕ್ಕರೆಬೆಳ್ಳೂರಿಗೆ ಸ್ಪಾಟ್‌-ಬಿಲ್ಡ್‌ ಪೆಲಿಕಾನ್‌ಗಳು ಮತ್ತು ಬಣ್ಣದ ಬಣ್ಣದ ಕೊಕ್ಕರೆಗಳು ವಲಸೆ ಬರುತ್ತವೆ. ಪ್ರತಿ ವರ್ಷ ಈ ಸಮಯದಲ್ಲಿ ಪ್ರಪಂಚದಾದ್ಯಂತದ ಪಕ್ಷಿ ಪ್ರೇಮಿಗಳು ಈ ಸ್ಥಳಕ್ಕೆ ಬಂದು ಪಕ್ಷಿಗಳನ್ನು ವೀಕ್ಷಿಸುತ್ತಾರೆ. ಪೆಲಿಕಾನ್‌ಗಳು ಮಾತ್ರವಲ್ಲದೆ ಹಳ್ಳಿಯ ಮರಗಳಲ್ಲಿ ಗೂಡುಕಟ್ಟುವ ಮತ್ತು ಸಂತಾನೋತ್ಪತ್ತಿ ಮಾಡುವ ಇತರ ಪಕ್ಷಿಗಳಾದ ಕಾರ್ಮೊರೆಂಟ್, ಬ್ಲ್ಯಾಕ್ ಐಬಿಸ್, ಗ್ರೇ ಹೆರಾನ್, ಕಪ್ಪು-ಕಿರೀಟದ ನೈಟ್ ಹೆರಾನ್ ಮತ್ತು ಇಂಡಿಯನ್ ಪಾಂಡ್ ಹೆರಾನ್ ಅನ್ನೂ ನೀವಿಲ್ಲಿ ಕಾಣಬಹುದು. ಹಳ್ಳಿಗರು ಈ ಪಕ್ಷಿಗಳ ಹಿಕ್ಕೆಗಳನ್ನು ತಮ್ಮ ಕೃಷಿಗೆ ಗೊಬ್ಬರವಾಗಿ ಬಳಸುತ್ತಾರೆ.

ಶಿವನಸಮುದ್ರ


ನಿಸರ್ಗ ಪ್ರೇಮಿಗಳಿಗೆ ಉಲ್ಲಾಸ ತಂದುಕೊಡುವಂತಹ ಸ್ಥಳ ಶಿವನಸಮುದ್ರ. ಕಾಡಿನಿಂದ ಕೂಡಿದ ಬೆಟ್ಟಗಳ ನಡುವೆ ನೀರು ಗರ್ಜಿಸಿಕೊಂಡು 75 ಮೀಟರ್‌ ಆಳಕ್ಕೆ ಬೀಳುತ್ತದೆ. ಮಳೆಗಾಲದ ಸಮಯದಲ್ಲಿ ಇಲ್ಲಿ ಕಾವೇರಿ ನದಿ ಎರಡು ಕವಲೊಡೆದುಕೊಂಡು ಜಲಪಾತದ ರೂಪದಲ್ಲಿ ಬೀಳುವುದನ್ನು ಕಾಣಬಹುದು. ಈ ಎರಡು ಜಲಪಾತಗಳನ್ನು ಗಗನಚುಕ್ಕಿ ಮತ್ತು ಭರಚುಕ್ಕಿ ಎಂದು ಕರೆಯಲಾಗುತ್ತದೆ. ಶಿವನಸಮುದ್ರವು 1902ರಲ್ಲಿ ಕೋಲಾರದ ಗೋಲ್ಡ್ ಫೀಲ್ಡ್‌ಗಳಿಗೆ ವಿದ್ಯುತ್ ಪೂರೈಸಲು ಸ್ಥಾಪಿಸಲಾದ ಭಾರತದ ಮೊದಲ ಜಲವಿದ್ಯುತ್ ಸ್ಥಾವರಕ್ಕೆ ನೆಲೆಯಾಗಿದೆ.

ಕಾವೇರಿ ವನ್ಯಜೀವಿ ಅಭಯಾರಣ್ಯ:


ಕಾವೇರಿ ವನ್ಯಜೀವಿ ಅಭಯಾರಣ್ಯವು ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ವ್ಯಾಪಿಸಿರುವ ಸಂರಕ್ಷಿತ ವನ್ಯಜೀವಿ ಪ್ರದೇಶವಾಗಿದೆ. ಇದು ಸುಮಾರು 519 ಚ.ಕಿ.ಮೀ. ವಿಸ್ತೀರ್ಣಕ್ಕೆ ಹಬ್ಬಿರುವ ಅಭಯಾರಣ್ಯವಾಗಿದೆ.

ಆದಿಚುಂಚನಗಿರಿ ನವಿಲು ಅಭಯಾರಣ್ಯ

ಆದಿಚುಂಚನಗಿರಿ ಯಾತ್ರಾ ಕೇಂದ್ರದ ಪಕ್ಕದಲ್ಲಿ ಆದಿಚುಂಚನಗಿರಿ ನವಿಲು ಅಭಯಾರಣ್ಯವಿದೆ. ನಾಗಮಂಗಲ ತಾಲೂಕಿನಲ್ಲಿರವ ಈ ಅಭಯಾರಣ್ಯವು 88.4 ಹೆಕ್ಟೇರ್‌ ವಿಸ್ತೀರ್ಣಕ್ಕೆ ಹಬ್ಬಿದೆ. ಇಲ್ಲಿ ಸುಮಾರು 99 ಜಾತಿಯ ಪಕ್ಷಿಗಳು, 32 ಜಾತಿಯ ಚಿಟ್ಟೆಗಳು ಮತ್ತು ಹಲವಾರು ಜಾತಿಯ ಸರೀಸೃಪಗಳು ಹಾಗೆಯೇ ಉಭಯಚರಗಳನ್ನು ಹೊಂದಿದೆ.

ಇದನ್ನೂ ಓದಿ: Benefits Of Cardamom: ಏಲಕ್ಕಿ ಪರಿಮಳಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಬೇಕು!

ಬಲಮುರಿ ಜಲಪಾತ


ಶ್ರೀರಂಗಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಬಲಮುರಿ ಜಲಪಾತ ಚಿಕ್ಕದಾದರೂ ರಮಣೀಯ ಜಲಪಾತವಾಗಿದೆ. ಚೆಕ್‌ ಡ್ಯಾಮ್‌ ಮೇಲೆ ನೀರು ಬೀಳುವುದನ್ನು ಇಲ್ಲಿ ಕಾಣಬಹುದು. ನೀರಿನಲ್ಲಿ ಯಾವುದೇ ಭಯವಿಲ್ಲದೆ ಆಟವಾಡಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು.

ಹೇಮಗಿರಿ ಜಲಪಾತ

ಕೆ.ಆರ್.ಪೇಟೆಯಿಂದ ಸುಮಾರು 10 ಕಿ.ಮೀ ದೂರವನ್ನು ಕ್ರಮಿಸಿದರೆ ನೀವು ಹೇಮಗಿರಿ ಜಲಪಾತವನ್ನು ಕಾಣಬಹುದು. ಹೇಮಾವತಿ ನದಿಯಿಂದಾಗಿರುವ ಈ ಜಲಪಾತವು ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವೆಂದೇ ಹೇಳಬಹುದು.

ಭೀಮೇಶ್ವರಿ ನೇಚರ್ ಅಂಡ್ ಅಡ್ವೆಂಚರ್ ಕ್ಯಾಂಪ್


ರಾಜ್ಯ ಸರ್ಕಾರ ನಡೆಸುವ ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ಗಳ ಒಂದು ಘಟಕ ಭೀಮೇಶ್ವರಿ ನೇಚರ್‌ ಅಂಡ್‌ ಅಡ್ವೆಂಚರ್‌ ಕ್ಯಾಂಪ್‌. ಈ ಕ್ಯಾಂಪ್‌ನಲ್ಲಿ ಹಲವು ಸಾಹಸಮಯ ಕ್ರೀಡೆಗಳನ್ನು ನೀವು ಆಡಬಹುದಾಗಿದೆ. ಜಿಪ್‌ ಲೈನ್‌, ರೋಪ್‌ ವಾಕಿಂಗ್‌, ಕಯಾಕಿಂಗ್‌ ಸೇರಿ ಹಲವು ಆಟಗಳು ಇಲ್ಲಿವೆ. ಮಳೆಗಾಲದ ನಂತರ ಆಗಸ್ಟ್‌ನಿಂದ ಫೆಬ್ರವರಿ ನಡುವೆ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಕಾವೇರಿ ನದಿ ಹರಿಯುವ ಈ ಸ್ಥಳ ನಿಸರ್ಗ ಪ್ರಿಯರಿಗೂ ಇಷ್ಟವಾಗುತ್ತದೆ.

ಶಿಂಷಾ ಜಲಪಾತ

ಮಳವಳ್ಳಿ ಪಟ್ಟಣದಿಂದ 25 ಕಿ.ಮೀ ಪ್ರಯಾಣ ಮಾಡಿದರೆ ನಿಮಗೆ ಶಿಂಷಾ ಜಲಪಾತ ಸಿಗುತ್ತದೆ. ಈ ಜಲಪಾತದಲ್ಲಿ ಶಿಂಷಾ ನದಿ 200 ಅಡಿ ಆಳಕ್ಕೆ ಬಿದ್ದು ಜಲಪಾತದ ರೂಪ ಪಡೆದುಕೊಳ್ಳುತ್ತದೆ. ಇಲ್ಲಿ ನೇತಾಡುವ ಸೇತುವೆಯೂ ಇದ್ದು, ಪ್ರವಾಸಿಗರನ್ನು ಸೆಳೆಯುತ್ತದೆ.

ಇದನ್ನೂ ಓದಿ: Delhi Court Firing: ಕೋರ್ಟ್‌ ಆವರಣದಲ್ಲಿ ಹೈಡ್ರಾಮಾ; ವಕೀಲರ ಮಧ್ಯೆಯೇ ಸಂಘರ್ಷ, ಫೈರಿಂಗ್‌ ವಿಡಿಯೊ ವೈರಲ್

ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್)


ಮೈಸೂರು ರಾಜ್ಯವಾಗಿದ್ದ ಸಮಯದಲ್ಲಿ ಮೈಸೂರು ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಮತ್ತು ಶಿವನಸಮುದ್ರ ಜಲವಿದ್ಯುತ್‌ ಕೇಂದ್ರಕ್ಕೆ ನೀರು ಪೂರೈಸುವ ಉದ್ದೇಶವನ್ನಿಟ್ಟುಕೊಂಡು ಕೃಷ್ಣರಾಜ ಸಾಗರ ಆಣೆಕಟ್ಟನ್ನು ನಿರ್ಮಿಸಲಾಯಿತು. ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರು ಟಿ.ಆನಂದ ರಾವ್‌, ಸರ್‌ ಮಿರ್ಜಾ ಇಸ್ಮಾಯಿಲ್‌ ಸೇರಿ ಹಲವು ಇಂಜಿನಿಯರ್‌ಗಳ ಜತೆ ಸೇರಿಕೊಂಡು ಮಾಡಿದ ಆಣೆಕಟ್ಟಿದು. ಅಣೆಕಟ್ಟಿನ ಕೆಲಸವು 1911-1932 ರ ನಡುವೆ ಪೂರ್ಣಗೊಂಡಿತು. ಅಣೆಕಟ್ಟು 8600 ಅಡಿ ಉದ್ದ ಮತ್ತು 130 ಅಡಿ ಎತ್ತರವಿದೆ.

ಬೃಂದಾವನ ಉದ್ಯಾನವನ


ಬೃಂದಾವನ ಉದ್ಯಾನವನ ಸುಮಾರು 60 ಎಕರೆ ವಿಸ್ತೀರ್ಣ ಹೊಂದಿದೆ. ಈ ಉದ್ಯಾನವನವು ಕಾಶ್ಮೀರದ ಶಾಲಿಮಾರ್ ಉದ್ಯಾನವನದ ಮಾದರಿಯಲ್ಲಿ, ಹಚ್ಚ ಹಸಿರಿನ ಹುಲ್ಲುಹಾಸುಗಳು, ಸಸ್ಯಾಲಂಕರಣ ಮತ್ತು ಕಾರಂಜಿಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸತ್ಯಾಗ್ರಹ ಸೌಧ, ಶಿವಪುರ


ಇದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಿಗುವ ಮದ್ದೂರಿನಲ್ಲಿರುವ ಸ್ವಾತಂತ್ರ್ಯ ಹೋರಾಟದ ಸ್ಮಾರಕ. ಇದನ್ನು 1938 ರ ಶಿವಪುರ ಧ್ವಜ ಸತ್ಯಾಗ್ರಹದ ನೆನಪಿಗಾಗಿ ನಿರ್ಮಿಸಲಾಗಿದೆ.

ಮೇಲುಕೋಟೆ


ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿ ದೇಗುಲ, ಯೋಗಾನರಸಿಂಹ ದೇವಸ್ಥಾಮ, ವಿವಿಧ ಮಠಗಳು ಮತ್ತು ಸಂಸ್ಕೃತ ಸಂಶೋಧನಾ ಅಕಾಡೆಮಿಯಿದೆ. ಸುಂದರ ಬೆಟ್ಟವನ್ನು ಹೊಂದಿರುವ ಇದು ರಾಜ್ಯದ ಪ್ರಮುಖ ಯಾತ್ರಾ ಕೇಂದ್ರವೂ ಹೌದು. ವೈಷ್ಣವ ಸಂತ ರಾಮಾನುಜರು ಕಳೆದುಹೋದ ಮುಖ್ಯ ದೇವತೆಯ ವಿಗ್ರಹವನ್ನು ಮರಳಿ ಇಲ್ಲಿ ಸ್ಥಾಪಿಸಿದರು ಎಂದು ಪುರಾಣ ಹೇಳುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ವಾರ್ಷಿಕ ವೈರಮುಡಿ ಬ್ರಹ್ಮೋತ್ಸವ ಉತ್ಸವದಲ್ಲಿ ದೇವರನ್ನು ಮೈಸೂರಿನ ಮಾಜಿ ಮಹಾರಾಜರು ಅರ್ಪಿಸಿದ ಭವ್ಯವಾದ ವಜ್ರಖಚಿತ ಕಿರೀಟದಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಇಲ್ಲಿ ಏಳು ಆಂಜನೇಯ ದೇವಾಲಯಗಳು, ನಾಲ್ಕು ಗರುಡ ದೇವಾಲಯಗಳು, ಪಂಚ ಭಾಗವತ ದೇವಾಲಯ, ವೆಂಕಟರಮಣ ದೇವಾಲಯ ಮತ್ತು ಹೊಸ ವೆಂಕಟೇಶ್ವರ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳಿವೆ.

ಇದನ್ನೂ ಓದಿ: International Bikini Day 2023: ಅಂತಾರಾಷ್ಟ್ರೀಯ ಬಿಕಿನಿ ದಿನ ಕಿರುತೆರೆ ಸೆಲೆಬ್ರಿಟಿಗಳ ಹಾಟ್‌ ಫೋಟೊಗಳು ವೈರಲ್‌!

ಆದಿಚುಂಚನಗಿರಿ


ಒಕ್ಕಲಿಗ ಸಮುದಾಯದ ಸ್ವಾಮಿಯ ಸ್ಥಾನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಭಗವಾನ್ ಗಂಗಾಧರೇಶ್ವರ ಇಲ್ಲಿ ಪ್ರಧಾನ ದೇವರಾಗಿದ್ದಾರೆ. ಅವರ ಜತೆಯಲ್ಲಿ ಶಿವನ ನಾಲ್ಕು ಅವತಾರಗಳಾದ ಮಲ್ಲೇಶ್ವರ, ಸೋಮೇಶ್ವರ, ಸಿದ್ದೇಶ್ವರ ಮತ್ತು ಚಂದ್ರಮೌಳೇಶ್ವರನಿಗೂ ಪೂಜೆ ಸಲ್ಲಿಸಲಾಗುತ್ತದೆ. ಈ ದೇವಾಲಯದ ಸಂಕೀರ್ಣವು ಗಣಪತಿ, ಸ್ತಂಭಂಬಿಕಾ ದೇವಿ, ಸುಬ್ರಮಣ್ಯ ದೇವರು, ಮಲ್ಲಮ್ಮ ದೇವಿ ಮುಂತಾದ ದೇವತೆಗಳನ್ನು ಒಳಗೊಂಡಿದೆ. ಆದಿಚುಂಚನಗಿರಿಯಲ್ಲಿ ಹೊಸ ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯವು 18 ಅಡಿ ಅಗಲ ಮತ್ತು ಒಟ್ಟು 21 ಅಡಿ ಎತ್ತರವಿದೆ. ಈ ದೇಗುಲದಲ್ಲಿ ಒಟ್ಟು 128 ಕಂಬಗಳಿವೆ.

ವೆಂಕಟರಮಣಸ್ವಾಮಿ ದೇವಸ್ಥಾನ, ಕರಿಘಟ್ಟ


ಕರಿಘಟ್ಟವು ಶ್ರೀರಂಗಪಟ್ಟಣದಿಂದ ಸುಮಾರು 5 ಕಿ.ಮೀ ದೂರದಲ್ಲಿ, ಲೋಕಪಾವನಿ ನದಿಯ ದಡದಲ್ಲಿದೆ. ಇಲ್ಲಿ ಅತ್ಯಂತ ಎತ್ತರದ ಬೆಟ್ಟ(2697 ಅಡಿ) ಇರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಟ್ಟದ ಮೇಲೆ ವೆಂಕಟರಮಣಸ್ವಾಮಿ ದೇಗುಲವಿದೆ. ಅಲ್ಲಿಗೆ ಕಾಲ್ನಡಿಗೆ ಅಥವಾ ವಾಹನದ ಮೂಲಕ ಹೋಗಬಹುದಾಗಿದೆ. ವೆಂಕಟರಮಣಸ್ವಾಮಿ ದೇವಾಲಯವನ್ನು ಮೈಸೂರು ರಾಜರ (ರಾಜ ಒಡೆಯ) ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಈ ದೇವಾಲಯದ ಸಂಕೀರ್ಣವು ವೆಂಕಟರಮಣ, ಲಕ್ಷ್ಮಿ ಮತ್ತು ರಾಮ-ಲಕ್ಷ್ಮಣ-ಸೀತೆಯ ದೇವರ ಮೂರ್ತಿಗಳನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿರುವ ಗರುಡ ಮಂಟಪದಲ್ಲಿ ಗರುಡ ಶಿಲ್ಪವನ್ನು ಇರಿಸಲಾಗಿದೆ. ಬಲಕ್ಕೆ ಪದ್ಮಾವತಿ ದೇವಸ್ಥಾನ ಮತ್ತು ಎಡಕ್ಕೆ ಹನುಮಾನ್ ದೇವಸ್ಥಾನವನ್ನು ಕಾಣಬಹುದಾಗಿದೆ.

ಇನ್ನಷ್ಟು ದೇಗುಲಗಳು

ಈ ಮೇಲಿನದಷ್ಟೇ ಅಲ್ಲದೆ ಇನ್ನೂ ಅನೇಕ ದೈವಿಕ ಸ್ಥಳಗಳನ್ನು ಮಂಡ್ಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀವು ಕಾಣಬಹುದು. ಅಘಾಲಯ, ಬಸರಾಳು, ಬೆಳ್ಳೂರು, ಬಿಂಡಿಗನವಿಲೆ, ಗೋಂವಿದನಹಳ್ಳಿ, ಹರಿಹರಪುರ, ಹೊಸಹೊಳಲು, ಕಂಬದಹಳ್ಳಿ, ಕಿಕ್ಕೇರಿ, ಮದ್ದೂರುಮ ಮಾರೇಹಳ್ಳಿ, ನಾಗಮಂಗಲ, ತೊಳಚಿ, ತೊಣ್ಣೂರು, ಕಲ್ಲಹಳ್ಳಿಯಲ್ಲಿ ಅದ್ಭುತವಾದ ದೇಗುಲಗಳಿವೆ. ಎಲ್ಲ ದೇವಸ್ಥಾನಗಳು ರಾಜರ ಕಾಲದ ಇತಿಹಾಸವನ್ನು ಹೊಂದಿವೆ.

FAQ

what is the famous name of mandya?

Mandya seems to have been known as ‘Vedaranya’ and later, as ‘Vishnupura’ in Kritayuga. It is said that a rishi (sage) was doing a penance here and installed an image of God Janardana and was said to be teaching wild beast to pronounce the sacred word, VEDA.

What is the traditional food of Mandya?

Ragi mudde is the main food in Kolar, Mandya, Hassan, Mysore, Tumkur districts in Karnataka and Rayalaseema Region in Andhra Pradesh. A similar variation known as Dhindo is also eaten in Northeast India, Nepal and Bhutan.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Karnataka Weather: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮೇ 3ರವರೆಗೆ ಹೆಚ್ಚಿರಲಿದೆ ಶಾಖದ ಅಲೆಗಳ ತೀವ್ರತೆ!

Karnataka Weather: ಮೇ 3ರವರೆಗೆ ಬೀದರ್, ಕಲಬುರ್ಗಿ, ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

VISTARANEWS.COM


on

Karnataka weather
Koo

ಬೆಂಗಳೂರು: ರಾಜ್ಯದಲ್ಲಿ ಏ.30ರಂದು ಮಂಗಳವಾರ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳ ತೀವ್ರತೆ (Heat wave) ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ರಾಜ್ಯದಾದ್ಯಂತ ಏ.30ರಿಂದ ಮೇ 5ರವರೆಗೆ ಒಣ ಹವೆ ಇರಲಿದೆ. ಅದೇ ರೀತಿ ಮೇ 6ರಂದು ಮಂಡ್ಯ ಜಿಲ್ಲೆಯ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆಲವೆಡೆ ಹಗರು ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ತಿಳಿಸಿದೆ.

ಶಾಖದ ಅಲೆಯ ಎಚ್ಚರಿಕೆ

ಮೇ 3ರವರೆಗೆ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ತಾಪಮಾನದ ಮುನ್ಸೂಚನೆ

ಮೇ 3ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳವರೆಗೆ ಬಾಗಲಕೋಟೆ, ಕಲಬುರಗಿ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

ಇದನ್ನೂ ಓದಿ | Karnataka Weather: ರಾಜ್ಯದಲ್ಲಿ ಮೇ 2ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಳ; ಆರೆಂಜ್‌ ಅಲರ್ಟ್‌ ಘೋಷಣೆ

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37°C ಮತ್ತು 23°C ಇರುವ ಸಾಧ್ಯತೆ ಇದೆ.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸ್ತ್ರೀಯರ ಘನತೆಗೆ ಹಾನಿ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆರೋಪ ಸಾಬೀತಾದರೆ ಏಳು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ಆಗಬಹುದು. ತನ್ನ ಮೇಲೆ ರೇಪ್‌ ನಡೆದಿದೆ ಎಂದು ಆರೋಪ ನೀಡಿದವರು ಬಲವಾಗಿ ಕೋರ್ಟ್‌ನಲ್ಲಿ ವಾದಿಸಿದರೆ ಆರೋಪಿಯನ್ನು ಯಾರೂ ಕಾಪಾಡಲಾರರು. ಆದರೆ ಅಧಿಕಾರದಲ್ಲಿ ಇರುವವರ ಮುಂದೆ ಬಡ ಆರೋಪಿಗಳು ನಿಲ್ಲಲು ಸಾಧ್ಯವೇ ಎಂಬುದೇ ಆತಂಕದ ಪ್ರಶ್ನೆ.

VISTARANEWS.COM


on

Vistara Editorial
Koo

ಹಾಸನದಲ್ಲಿ ಹುಟ್ಟಿಕೊಂಡು ರಾಜ್ಯಾದ್ಯಂತ, ದೇಶಾದ್ಯಂತ ಸುದ್ದಿಯಾಗುತ್ತಿರುವ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಪ್ರಕರಣ ಈಗಾಗಲೇ ಸಾಕಷ್ಟು ರಾಜಕೀಯ ಕೋಲಾಹಲ ಎಬ್ಬಿಸಿದೆ. ಈ ಪ್ರಕರಣವನ್ನು ಸಾರ್ವಜನಿಕಗೊಳಿಸಿದ ಸಂದರ್ಭ, ಇದರ ಹಿಂದೆ ಮುಂದೆ ಇರುವ ರಾಜಕೀಯ ಲೆಕ್ಕಾಚಾರಗಳು, ಈಗ ನಡೆಯುತ್ತಿರುವ ಪ್ರತಿಭಟನೆಗಳು, ಎಲ್ಲವೂ ಕುತೂಹಲಕರವಾಗಿವೆ. ಆರೋಪಿ ಎನಿಸಿಕೊಂಡಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ, ಈಗಾಗಲೇ ದೇಶ ಬಿಟ್ಟು ಜರ್ಮನಿಗೆ ತೆರಳಿದ್ದಾರೆ. “ತನಿಖೆಗೆ ಕರೆದಾಗ ಬರುತ್ತಾರೆ” ಎಂದು ಅವರ ತಂದೆ ಎಚ್‌ಡಿ ರೇವಣ್ಣ ಹೇಳಿದ್ದಾರೆ. ಆದರೆ ಬಹುಶಃ ನಿರೀಕ್ಷಣಾ ಜಾಮೀನು ದೊರೆಯುವವರೆಗೂ ಪ್ರಜ್ವಲ್‌ ಮರಳುವುದು ಅನುಮಾನವೇ ಅನಿಸುತ್ತದೆ. “ತನಿಖೆ ನಡೆಯಲಿ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ” ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಎಲ್ಲರ ಮಾತೂ ಹೌದು.

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್ 354A, 354D, 506, 509 ಅಡಿ ಕೇಸ್‌ ದಾಖಲಾಗಿದ್ದು, ಆರೋಪ ಸಾಬೀತಾದರೆ ಏಳು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ಆಗಬಹುದು. ತನ್ನ ಮೇಲೆ ರೇಪ್‌ ನಡೆದಿದೆ ಎಂದು ಆರೋಪ ನೀಡಿದವರು ಬಲವಾಗಿ ಕೋರ್ಟ್‌ನಲ್ಲಿ ವಾದಿಸಿದರೆ ಆರೋಪಿಯನ್ನು ಯಾರೂ ಕಾಪಾಡಲಾರರು. ಆದರೆ ಶ್ರೀಮಂತರು, ಪ್ರಭಾವಿಗಳು ಹಾಗೂ ಅಧಿಕಾರದಲ್ಲಿ ಇರುವವರ ಮುಂದೆ ಬಡ ಆರೋಪಿಗಳು ನಿಲ್ಲಲು ಸಾಧ್ಯವೇ? ಇದು ಕಾನೂನು ಹಾಗೂ ನ್ಯಾಯಾಂಗದ ಪಾರದರ್ಶಕತೆ, ತನಿಖಾ ಸಂಸ್ಥೆಗಳ ಪ್ರಾಮಾಣಿಕತೆ ಹಾಗೂ ಸಾಕ್ಷಿಗಳನ್ನು ಕಲೆಹಾಕುವ ಪರಿಶ್ರಮ ಇವುಗಳನ್ನೆಲ್ಲ ಅವಲಂಬಿಸಿದೆ.

ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆಗೆ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿದ್ದು, ಅಧಿಕೃತವಾಗಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ಐಪಿಎಸ್‌ ಅಧಿಕಾರಿಗಳು ಇದ್ದಾರೆ. ಎಡಿಜಿಪಿ ಬಿ.ಕೆ. ಸಿಂಗ್ ಎಸ್‌ಐಟಿ ಮುಖ್ಯಸ್ಥರಾಗಿದ್ದು, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ ಸೀಮಾ ಲಾಟ್ಕರ್ ಸದಸ್ಯರಾಗಿದ್ದಾರೆ. ಸಿಐಡಿಯಲ್ಲಿ ಎಡಿಜಿಪಿಯಾಗಿರುವ ಬಿ.ಕೆ ಸಿಂಗ್ ಅವರು, ಈ ಹಿಂದೆ ಗೌರಿ ಲಂಕೇಶ್ ಕೊಲೆ ಕೇಸ್‌ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಚಿತ್ರೀಕರಣ ಮಾಡಿದ ವ್ಯಕ್ತಿಗಳು ಮತ್ತು ಅದನ್ನು ಸಾರ್ವಜನಿಕ ಪಡಿಸಿದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಕೋರಿದೆ. ಮಹಿಳಾ ಸಂಘಟನೆಗಳು, ಮಹಿಳಾ ಹಕ್ಕುಗಳ ಆಯೋಗ ಕೂಡ ಈ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಲು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದೆ.

ಇದೆಲ್ಲವೂ ಒಂದು ಕಡೆಗಾದರೆ, ಪ್ರಕರಣದ ಇನ್ನೊಂದು ಆಯಾಮವನ್ನೂ ನೋಡಬೇಕು. ಲೈಂಗಿಕ ಕಿರುಕುಳದ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಎಲ್ಲರಿಗೂ ಸಿಗುವಂತೆ ಹಂಚಿದವರು ಯಾರು? ಯಾಕೆ ಅದನ್ನು ಚುನಾವಣೆಯ ಸಂದರ್ಭದಲ್ಲಿಯೇ ಹೊರಬಿಡಲಾಯಿತು? ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ರಾಜಕೀಯ ಮೈತ್ರಿ ಮಾಡಿಕೊಂಡಿರುವ ಸಮಯವನ್ನೇ ಆಯ್ದುಕೊಂಡು ಈ ವಿಡಿಯೋಗಳನ್ನು ಹರಿದಾಡುವಂತೆ ಮಾಡುವ ಹಿನ್ನೆಲೆಯಲ್ಲಿ ಚುನಾವಣಾ ಅಭ್ಯರ್ಥಿಯೊಬ್ಬರ ಸೋಲಿಗಾಗಿ ನಡೆಸಿದ ಸಂಚು ಕೂಡ ಇಲ್ಲವೇ? ಇದು ಸಮಯಸಾಧಕತನವಲ್ಲ, ಇದರ ಹಿಂದೆ ರಾಜಕೀಯ ಇಲ್ಲ ಎನ್ನುವುದು ತೀರಾ ಮುಗ್ಧತೆಯೂ ಅಲ್ಲ, ಭಂಡತನವಾಗುತ್ತದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ನಿಜ; ಆದರೆ ಸಂತ್ರಸ್ತ ಅಮಾಯಕ ಮಹಿಳೆಯರ ಗುರುತನ್ನು ಸಾರ್ವಜನಿಕಗೊಳಿಸಿದವರೂ ಆರೋಪಿಗಳೇ ಅಲ್ಲವೇ? ಅವರಿಗೂ ಶಿಕ್ಷೆಯಾಗಬೇಕಿದೆ. ಇದು ಮಹಿಳೆಯ ಘನತೆಗೆ ಕುಂದು ತರುವ ಸಂಚು.

ಘಟನೆಯ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದೊಳಗೆ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ತಿಳಿಯದು. ಅದು ಪಕ್ಷದ ಆಂತರಿಕ ವಿಚಾರ. ಪಕ್ಷದಿಂದ ಅವರ ಉಚ್ಚಾಟನೆಗೆ ತೀರ್ಮಾನಿಸಲಾಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ. ಹಾಗೆ ಆದರೆ ಪಕ್ಷ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಬೇಕು. ಬಿಜೆಪಿ ಕೂಡ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ, ಪ್ರಕರಣದ ಬಗ್ಗೆ ಬಿಜೆಪಿ ನಾಯಕರ ನಿಲುವು ಏನಿದೆ ಎಂದು ಸಾರ್ವಜನಿಕರು ತಿಳಿಯಲು ಬಯಸಿದರೆ ತಪ್ಪಾಗದು. ಹಾಗೆಯೇ ಹಾಸನ ಲೋಕಸಭೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ಈ ಪ್ರಕರಣ ಯಾವ ರೀತಿ ಕೆಲಸ ಮಾಡಿದೆ, ಫಲಿತಾಂಶ ಹೇಗಿದ್ದೀತು ಎಂದು ತಿಳಿಯುವುದಕ್ಕೆ ಫಲಿತಾಂಶದವರೆಗೂ ಕಾಯಬೇಕಾದೀತು. ಬಿಕೆ ಸಿಂಗ್‌ ನೇತೃತ್ವದ ಎಸ್‌ಐಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರಕರಣ ತಾರ್ಕಿಕ ಕೊನೆ ಮುಟ್ಟಬಹುದು. ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹಾರೈಸೋಣ.

ಇದನ್ನೂ ಓದಿ: DK Shivakumar: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ

Continue Reading

ಉತ್ತರ ಕನ್ನಡ

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Honnavar News: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ರಾಮಕ್ಷತ್ರಿಯ ಸಂಘದಿಂದ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

VISTARANEWS.COM


on

Honnavar News
Koo

ಹೊನ್ನಾವರ: ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ದೊರೆತಾಗ, ಆ ಮಗು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಹಾಗೆಯೇ ಉಪನಯನವನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಮಾಡುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಅದೇ ರೀತಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ, ಸಂಸ್ಕಾರಯುತ ಸಮಾಜ ನಿರ್ಮಾಣದ ಜವಾಬ್ದಾರಿ ಕೂಡ ಪಾಲಕರ ಮೇಲಿದೆ ಎನ್ನುವುದನ್ನು ಅರಿಯಬೇಕಾಗಿದೆ ಎಂದು ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದಲ್ಲಿ ಹೊನ್ನಾವರದ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ಅಡಕಾರದ ರಾಮಕ್ಷತ್ರಿಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ, ರಾಮರಕ್ಷಾ ಸ್ತೋತ್ರ ಮತ್ತು ರಾಮ ತಾರಕ ಮಂತ್ರಗಳ ಪಠಣ ಮಾಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ರೂಢಿಸಿದಾಗ ಮಕ್ಕಳಲ್ಲಿ ಆಧ್ಯಾತ್ಮಿಕ ಒಲವು ಮೂಡಲು ಸಾಧ್ಯ. ಈ ಆಧ್ಯಾತ್ಮಿಕ ಒಲವು ಸಂಸ್ಕಾರಯುತ ಮನುಷ್ಯನನ್ನು ನಿರ್ಮಾಣ ಮಾಡುತ್ತದೆ ಎಂದರು. ಇದೇ ವೇಳೆ ಪ್ರತಿವರ್ಷ ದಂಪತಿಗಳ ಶಿಬಿರ, ಯೋಗ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ರಾಮಕ್ಷತ್ರಿಯ ಪರಿಷದ್‌ನ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮಾತನಾಡಿ, ಸ್ವರ್ಣವಲ್ಲೀ ಮಠಾಧೀಶರ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಪರಿಷದ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳ ಮೂಲಕ ಸಂಘಟಿತರಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಮಕ್ಷತ್ರಿಯ ಸಮಾಜದ 33 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಪ್ರಾರಂಭದಲ್ಲಿ ಸೀತಾರಾಮ ನಾಯ್ಕ ಹಳದಿಪೂರ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಮೋದ ನಾಯ್ಕ ಸ್ವಾಗತಿಸಿದರು. ಅಡಕಾರ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ರಾಮದಾಸ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್ ಐದು ವರ್ಷಗಳ ವರದಿ ವಾಚಿಸಿದರು. ರವಿ ನಾಯ್ಕ ನಿರೂಪಿಸಿದರು. ಮಹೇಶ ನಾಯ್ಕ ವಂದಿಸಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ವೇದಿಕೆಯಲ್ಲಿ ಪರಿಷದ್‌ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮತ್ತು ಶ್ರೀನಿವಾಸ ನಾಯ್ಕ ಮುಂಬಯಿ ಇವರಿಗೆ ಅಡಕಾರ ಸಂಘದಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಿಲ್ಕ್ಸ್ ಇದರ ಮಾಲಿಕರಾದ ರತ್ನಾಕರ ನಾಯ್ಕರವರು 33 ವಟುಗಳಿಗೆ ವಿಶೇಷ ಉಡುಗೊರೆಯೊಂದಿಗೆ ಗೌರವಿಸಿದರು.

Continue Reading

ಬೆಂಗಳೂರು

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Sadhguru Jaggi Vasudev: ಕಾಂಬೋಡಿಯಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕತೆಯ ಅನ್ವೇಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ತೆರಳಿದ್ದಾರೆ. ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸದ್ಗುರುಗಳ ಮೊದಲ ಪ್ರಯಾಣವಾಗಿದೆ.

VISTARANEWS.COM


on

Sadhguru Jaggi Vasudev
Koo

ಸೀಮ್‌ ರೀಪ್‌(ಕಾಂಬೋಡಿಯಾ): ಮೆದುಳಿನ ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಆಳದ ಅನ್ವೇಷಣೆಗಾಗಿ ಆಧ್ಯಾತ್ಮಿಕ ಗುರು ಹಾಗೂ ಈಶ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಕಾಂಬೋಡಿಯಾಗೆ ತೆರಳಿದ್ದಾರೆ. ಕಾಂಬೋಡಿಯಾ ಪ್ರವಾಸೋದ್ಯಮ ಸಚಿವ ಎಚ್.ಇ. ಎಸ್ಒಕೆ ಸೋಕೆನ್ ಅವರು ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಗಮನಾರ್ಹ ಆತಿಥ್ಯದ ಜತೆಗೆ ಸಚಿವರು, ಕಾಂಬೋಡಿಯಾದ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಸದ್ಗುರುಗಳಿಗೆ ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಅಲ್ಲಿ ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

2023 ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.

Continue Reading
Advertisement
Karnataka weather
ಕರ್ನಾಟಕ21 mins ago

Karnataka Weather: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮೇ 3ರವರೆಗೆ ಹೆಚ್ಚಿರಲಿದೆ ಶಾಖದ ಅಲೆಗಳ ತೀವ್ರತೆ!

Vistara Editorial
ಸಂಪಾದಕೀಯ49 mins ago

ವಿಸ್ತಾರ ಸಂಪಾದಕೀಯ: ಸ್ತ್ರೀಯರ ಘನತೆಗೆ ಹಾನಿ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ

Labour Day 2024
ದೇಶ50 mins ago

Labour Day 2024: ಕಾರ್ಮಿಕರು ಕೇಂದ್ರ ಸರ್ಕಾರದ ಇ-ಶ್ರಮ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Paneer test
ಆರೋಗ್ಯ51 mins ago

Paneer Test: ನಾವು ತಿನ್ನುವ ಪನೀರ್‌ ಶುದ್ಧವಾದದ್ದೋ, ಕಲಬೆರಕೆಯದ್ದೋ ಪರೀಕ್ಷೆ ಮಾಡೋದು ಹೇಗೆ?

dina bhavishya read your daily horoscope predictions for April 30 2024
ಭವಿಷ್ಯ2 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

Pakistan Inflation
ವಿದೇಶ7 hours ago

Pakistan Inflation: ಪಾಕಿಸ್ತಾನ ಮತ್ತಷ್ಟು ದಿವಾಳಿ; ಲೀಟರ್‌ ಪೆಟ್ರೋಲ್‌ಗೆ 290 ರೂ., ಕೆ.ಜಿ ಹಿಟ್ಟಿಗೆ 800 ರೂ.

Honnavar News
ಉತ್ತರ ಕನ್ನಡ7 hours ago

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Sadhguru Jaggi Vasudev
ಬೆಂಗಳೂರು7 hours ago

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Justin Trudeau
ದೇಶ7 hours ago

Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

M P Rudramba
ಕರ್ನಾಟಕ8 hours ago

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202418 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202419 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌