Best Places to Visit in Hassan: ಹಾಸನ ಪ್ರವಾಸದಲ್ಲಿ ಈ ಸ್ಥಳಗಳನ್ನು ಮಿಸ್‌ ಮಾಡಬೇಡಿ - Vistara News

ಕರ್ನಾಟಕ

Best Places to Visit in Hassan: ಹಾಸನ ಪ್ರವಾಸದಲ್ಲಿ ಈ ಸ್ಥಳಗಳನ್ನು ಮಿಸ್‌ ಮಾಡಬೇಡಿ

ಹಾಸನ ಜಿಲ್ಲೆಯಲ್ಲಿ(Best Places to Visit in Hassan) ಹಲವಾರು ಪ್ರವಾಸಿ ತಾಣಗಳಿವೆ. ಅವುಗಳ ಕುರಿತಾದ ಉಪಯುಕ್ತ ವಿವರ ಇಲ್ಲಿದೆ.

VISTARANEWS.COM


on

places to visit in hassan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಳೆಗಾಲ ಶುರುವಾಗಿದ್ದೇ ತಡ, ಎಲ್ಲರಿಗೂ ಪ್ರವಾಸದ ಗುಂಗು ಹತ್ತಿದಂತಾಗಿದೆ. ಯಾವುದೇ ಸ್ಥಳಗಳಿಗೆ ಹೋದರೂ ಅಲ್ಲಿ ಪ್ರವಾಸಿಗರದ್ದೇ ದಂಡು. ಹಾಗೆಯೇ ಕರ್ನಾಟಕದ ಸುಂದರ ಜಿಲ್ಲೆಗಳಲ್ಲಿ ಒಂದಾದ ಹಾಸನಕ್ಕೂ ಪ್ರವಾಸಿಗರು ಪ್ರಯಾಣ ಬೆಳೆಸಲಾರಂಭಿಸಿದ್ದಾರೆ. ಹಾಸನ ಜಿಲ್ಲೆಗೆ ಹೋದಾಗ ಒಂದಿಷ್ಟು ಪ್ರವಾಸಿ ತಾಣಗಳನ್ನು ಮಿಸ್‌ ಮಾಡದೆಯೆ ನೋಡಲೇಬೇಕು. ಅಂತಹ ಅದ್ಭುತ ಸ್ಥಳಗಳ ಕುರಿತಾಗಿ ಇಲ್ಲಿದೆ ಸಂಪೂರ್ಣ (Best Places to Visit in Hassan) ವಿವರ.

ಹಾಸನಕ್ಕೆ ರಸ್ತೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಿಂದ ರಸ್ತೆ ಮಾರ್ಗ ಅಥವಾ ರೈಲ್ವೆ ಮಾರ್ಗದಲ್ಲಿ ಸಂಚರಿಸಬಹುದು. ಕಾರವಾರ ಎಕ್ಸ್‌ಪ್ರೆಸ್, ಕಣ್ಣೂರು ಎಕ್ಸ್‌ಪ್ರೆಸ್, ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಹಾಸನ ನಗರ ರೈಲು ನಿಲ್ದಾಣವನ್ನು ಬೆಂಗಳೂರು ಮತ್ತು ಮೈಸೂರಿನೊಂದಿಗೆ ಸಂಪರ್ಕಿಸುತ್ತವೆ. ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹಾಸನಕ್ಕೆ ಬಸ್ಸಿನ ಸಂಪರ್ಕವೂ ಚೆನ್ನಾಗಿದ್ದು, ನಾಲ್ಕು ತಾಸುಗಳಲ್ಲಿ ಹಾಸನ ತಲುಪಿಕೊಳ್ಳಬಹುದಾಗಿದೆ.

ಶೆಟ್ಟಿಹಳ್ಳಿ ಚರ್ಚ್‌


ಗೊರೂರು ಅಣೆಕಟ್ಟಿನ ಹಿನ್ನೀರಲ್ಲಿ ನೀವು ಶೆಟ್ಟಿಹಳ್ಳಿ ಚರ್ಚನ್ನು ಕಾಣಬಹುದು. 1860ರಲ್ಲಿ ಫ್ರೆಂಚ್‌ ಮಿಷನರಿ ಶ್ರೀಮಂತ ಮಾಲೀಕರು ನಿರ್ಮಿಸಿದ ಈ ಚರ್ಚ್‌ 1960ರಲ್ಲಿ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿತು. ಈಗ ಚರ್ಚಿನ ಬಹುತೇಕ ಭಾಗ ಉರುಳಿದ್ದು, ಅಳಿದುಳಿದ ಭಾಗವನ್ನು ನೀವು ನೋಡಬಹುದು. ಇದನ್ನು ತೇಲುವ ಚರ್ಚ್‌ ಎಂದೂ ಕರೆಯಲಾಗುತ್ತದೆ. ನವೆಂಬರ್‌ನಿಂದ ಮೇ ತಿಂಗಳವರೆಗೆ ಈ ಚರ್ಚ್‌ ಕಾಣಿಸಿಕೊಳ್ಳುತ್ತಿದೆ. ಜುಲೈನಿಂದ ಅಕ್ಟೋಬರ್‌ವರೆಗೆ ಇದು ಭಾಗಶಃ ಮುಳುಗಿರುತ್ತದೆ.

ಹಾಸನಾಂಬ ದೇವಾಲಯ


ಹಾಸನಾಂಬ ದೇವಾಲಯವು ಹಾಸನದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುತ್ತದೆ. 9 ದಿನಗಳ ನಂತರ ಮತ್ತೆ ಬಾಗಿಲು ಮುಚ್ಚಲಾಗುತ್ತದೆ. ದೇಗುಲದಲ್ಲಿ ದೇವರಿಗೆ ಮುಡಿಸಿದ ಹೂವು ಮತ್ತೆ ದೇವಸ್ಥಾನದ ಬಾಗಿಲು ತೆಗೆಯುವವರೆಗೂ ಬಾಡುವುದಿಲ್ಲ. ಹಾಗೆಯೇ ದೇವರಿಗೆ ಹಚ್ಚಿದ ದೀಪವೂ ಆರುವುದಿಲ್ಲ ಮತ್ತು ನೈವೇದ್ಯ ಮಾಡಿದ ಅನ್ನ ಪ್ರಸಾದ ಕೂಡ ಹಳಸಿರುವುದಿಲ್ಲ ಎಂದು ನಂಬಲಾಗುತ್ತದೆ. ಇದು ಹಾಸನದ ನಗರದೊಳಗೇ ಇರುವ ದೇಗುಲವಾಗಿರುವುದರಿಂದ ಅರಾಮವಾಗಿ ಇಲ್ಲಿಗೆ ನೀವು ತಲುಪಬಹುದು.

ಲಕ್ಷ್ಮಿ ದೇವಿ ದೇವಸ್ಥಾನ


ಹಾಸನದಿಂದ 20 ಕಿ.ಮೀ ದೂರದಲ್ಲಿರುವ ದೊಡ್ಡಗದ್ದವಳ್ಳಿ ಹಳ್ಳಿಯಲ್ಲಿ ಲಕ್ಷ್ಮಿ ದೇವಿ ದೇವಸ್ಥಾನವಿದೆ. ಇದನ್ನು 12ನೇ ಶತಮಾನದಲ್ಲಿ ಹೊಯ್ಸಳ ರಾಜವಂಶದ ಕಾಲದಲ್ಲಿ ನಿರ್ಮಿಸಲಾಯಿತು. ವಿಷ್ಣುವರ್ಧನನ ಆಳ್ವಿಕೆಯಲ್ಲಿ ಶ್ರೀಮಂತ ವ್ಯಾಪಾರಿ ಕುಲ್ಲಹನ ರಾಹುತ ಮತ್ತು ಅವನ ಹೆಂಡತಿ ಸಹಜ ದೇವಿ ಅವರು ಈ ದೇಗುಲವನ್ನು ನಿರ್ಮಿಸಿದರು. ಈ ದೇವಸ್ಥಾನವು ಹಳೇಬೀಡಿನಿಂದ 16 ಕಿ.ಮೀ ಮತ್ತು ಬೇಲೂರಿನಿಂದ 25 ಕಿ.ಮೀ ದೂರದಲ್ಲಿದೆ.

ಮಹಾರಾಜ ಪಾರ್ಕ್


ಹಾಸನ ನಗರದ ಅತ್ಯಂತ ದೊಡ್ಡ ಉದ್ಯಾನವನವೆಂದರೆ ಅದು ಮಹಾರಾಜ ಪಾರ್ಕ್‌. ಹಸಿರು ಹುಲ್ಲು ಮತ್ತು ದೊಡ್ಡ ದೊಡ್ಡ ಮರಗಳಿಂದ ಸುತ್ತುವರಿದಿರುವ ಈ ಪಾರ್ಕ್‌ನಲ್ಲಿ ಜನರು ನಿಸರ್ಗ ಸೌಂದರ್ಯ ಸವಿಯುತ್ತ ಓಡಾಡಲೆಂದು ಕಾಲುದಾರಿಗಳನ್ನು ಮಾಡಲಾಗಿದೆ. ನಗರದೊಳಗೇ ಸಣ್ಣ ಪಿಕ್ನಿಕ್‌ ಮಾಡಬೇಕು ಎನ್ನುವವರಿಗೆ ಇದು ಸೂಕ್ತ ಸ್ಥಳ. ಇಲ್ಲಿ ಈಜುಕೊಳದಿಂದ ಹಿಡಿದು ಮಕ್ಕಳಿಗೆ ಆಟವಾಡುವುದಕ್ಕೆಂದೇ ಹಲವಾರು ಆಟದ ಸಾಮಾಗ್ರಿಗಳನ್ನು ಇರಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಇಲ್ಲಿಗೆ ಭೇಟಿ ನೀಡಬಹುದು.

ಗೊರೂರು ಅಣೆಕಟ್ಟು


ಕಾವೇರಿ ನದಿಯ ಉಪನದಿಯಾದ ಹೇಮಾವತಿ ನದಿಗೆ ಕಟ್ಟಲಾದ ಗೊರೂರು ಅಣೆಕಟ್ಟು ಹಾಸನದಿಂದ ಕೇವಲ 9 ಕಿ.ಮೀ. ದೂರದಲ್ಲಿದೆ. ಈ ಅಣೆಕಟ್ಟನ್ನು 1979ರಲ್ಲಿ ನಿರ್ಮಿಸಲಾಗಿದೆ. ಆಣೆಕಟ್ಟು 4692 ಮೀಟರ್‌ ಉದ್ದ ಮತ್ತು 58 ಮೀಟರ್‌ ಎತ್ತರವಿದೆ. ಇಲ್ಲಿಂದ ನೀರನ್ನು ಹೊರಗೆ ಬಿಡಲು ಆರು ಗೇಟುಗಳಿವೆ. ಈ ಸ್ಥಳಕ್ಕೆ ನೀವು ಹಾಸನ ನಗರದಿಂದ ಬಸ್‌, ಟ್ಯಾಕ್ಸಿ ಅಥವಾ ಆಟೋ ಮೂಲಕ ಹೋಗಬಹುದು. ಸುಂದರ ದೃಶ್ಯ ಸವಿಯುತ್ತ ವಿಶ್ರಾಂತಿ ಪಡೆಯಲು ಬಯಸುವವರಿಗೆ ಇದು ಸೂಕ್ತ ಸ್ಥಳವಾಗಿದೆ.

ಈಶ್ವರ ದೇವಾಲಯ


13ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ದೇವಸ್ಥಾನ ಈಶ್ವರ ದೇವಸ್ಥಾನ. ಇದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿದೆ. ಈ ದೇಗುಲ ವಿಶೇಷವಾಗಿ ವೃತ್ತಾಕಾರದಲ್ಲಿದ್ದು, 16 ಬಿಂದುಗಳ ನಕ್ಷತ್ರಾಕಾರದ ಗುಮ್ಮಟ ಮಂಟಪವೂ ಇದೆ. ಇಲ್ಲಿ ಶೈವ, ವೈಷ್ಣವ, ಶಕ್ತಿ ಮತ್ತು ವೈದಿಕ ದಂತಕಥೆಗಳನ್ನು ಚಿತ್ರಿಸುವಂತಹ ಕಲಾಕೃತಿಗಳಿವೆ. ಇದು ಕೂಡ ಹೊಯ್ಸಳ ವಾಸ್ತುಶಿಲ್ಪವಿರುವ ದೇವಸ್ಥಾನವಾಗಿದೆ. ಇಲ್ಲಿನ ಹಲವು ಭಾಗವು 14ನೇ ಶತಮಾನದಲ್ಲಿ ವಿರೂಪಗೊಂಡಿವೆ. ಈ ಈಶ್ವರ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಿದೆ. ಈ ದೇವಸ್ಥಾನ ಹಾಸನದಿಂದ ಸುಮಾರು 41 ಕಿ.ಮೀ. ದೂರದಲ್ಲಿದೆ.

ಶ್ರವಣಬೆಳಗೊಳ


ಶ್ರವಣಬೆಳಗೊಳದಲ್ಲಿ ಚಂದ್ರಗಿರಿ ಮತ್ತು ವಿಂದ್ಯಗಿರಿ ಎಂಬ ಎರಡು ಬೆಟ್ಟಗಳಿವೆ. ಆಚಾರ್ಯ ಭದ್ರಬಾಹು ಮತ್ತು ಅವರ ಶಿಷ್ಯ ಚಂದ್ರಗುಪ್ತ ಮೌರ್ಯರು ಅಲ್ಲಿ ಧ್ಯಾನ ಮಾಡಿದರು ಎಂದು ನಂಬಲಾಗಿದೆ. ವಿಂದ್ಯಗಿರಿಯಲ್ಲಿ 58 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರನ ಪ್ರತಿಮೆಯಿದೆ. ಇದು ವಿಶ್ವದ ಅತಿ ದೊಡ್ಡ ಏಕಶಿಲೆ ಪ್ರತಿಮೆಯಾಗಿದೆ. ಪ್ರತಿಮೆಯ ತಳದಲ್ಲಿ ಪ್ರಾಕೃತದ ಶಾಸನಗಳಿವೆ. ಶಾಸನಲ್ಲಿ ಪ್ರತಿಮೆ ನಿರ್ಮಾಣಕ್ಕೆ ಧನಸಹಾಯ ನೀಡಿದ ರಾಜ ಚಾವುಂಡರಾಯನನ್ನು ಪ್ರಶಂಶಿಸಲಾಗಿದೆ. ಇದು ಕ್ರಿ.ಶ.981ರ ಕಾಲದ ಪ್ರತಿಮೆಯಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ. ಅದಕ್ಕೆಂದು ಸಾವಿರಾರು ಭಕ್ತರು ಸೇರುತ್ತಾರೆ. ಶ್ರವಣಬೆಳಗೊಳವು ಹಾಸನದಿಂದ 51ಕಿ.ಮೀ. ದೂರದಲ್ಲಿದೆ.

ಹಳೇಬೀಡು


ಹಾಸನದಿಂದ 30 ಕಿ.ಮೀ ದೂರದಲ್ಲಿ ಹಳೇಬೀಡಿದ್ದು, ಅಲ್ಲಿ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಕೇದಾರೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು 1121ರ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಸರೋವರದಿಂದ ಸುತ್ತುವರೆದಿರುವ ದೇವಾಲಯದ ಸಂಕೀರ್ಣವು ಪುರಾತತ್ತ್ವ ಶಾಸ್ತ್ರದ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಹೊಯ್ಸಳೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿಯೇ ಸಂತಾಲೇಶ್ವರ, ಹೊಯ್ಸಳೇಶ್ವರ ಮತ್ತು ವಿಷ್ಣುವರ್ಧನನ ಮಂತ್ರಿ ಕೇತುಮಲ್ಲನಿಗೆ ಸಮರ್ಪಿತವಾದ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಯನ್ನು ನೋಡುವುದರಲ್ಲಿ ನೀವು ಮೈ ಮರೆತುಬಿಡುತ್ತೀರಿ.

ಬೂಸೇಶ್ವರ ದೇವಾಲಯ


ಹಾಸನದಿಂದ 12 ಕಿ.ಮೀ ದೂರದಲ್ಲಿರುವ ಕೊರವಂಗಲದಲ್ಲಿ ಬೂಸೇಶ್ವರ ದೇವಸ್ಥಾನವಿದೆ. ಇದೂ ಕೂಡ 12ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯವಾಗಿದೆ. ಹೊಯ್ಸಳ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯವನ್ನು ರಾಜ ಬಲ್ಲಾಳನ ಆಳ್ವಿಕೆಯಲ್ಲಿ ಬುಚಿ ಹೆಸರಿನ ಶ್ರೀಮಂತ ಕಟ್ಟಿಸಿದನು ಎಂದು ನಂಬಲಾಗಿದೆ. ಇದು ಅವಳಿ ದೇವಾಲಯವಾಗಿದ್ದು, ಎರಡು ಗರ್ಭಗುಡಿಗಳು ಪರಸ್ಪರ ಎದುರು ಬದುರು ಇವೆ. ಇಲ್ಲಿ ರಾಮಾಯಣ, ಮಹಾಭಾರತ, ಭಾಗವತ ಪುರಾಣದ ದೃಶ್ಯಗಳನ್ನು ಚಿತ್ರಿಸುವ ಶಿಲ್ಪಕಲೆಯೊಂದಿಗೆ ಶೈವ, ವೈಷ್ಣವ, ಶಕ್ತಿ ಮತ್ತು ವೈದಿಕ ದೇವತೆಗಳ ಕಲಾಕೃತಿಗಳನ್ನು ಕಾಣಬಹುದು. ಈ ದೇವಾಲಯವನ್ನು ಕೂಡ ಭಾರತೀಯ ಪುರಾತತ್ವ ಇಲಾಖೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಿದೆ.

ಅಲ್ಲಾಳನಾಥ ದೇಗುಲ


ಹಾಸನದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು ಅಲ್ಲಾಳನಾಥ ದೇಗುಲ. ಈ ದೇವಸ್ಥಾನವು ಬೆಟ್ಟದ ಮೇಲಿರುವ ದೇವಸ್ಥಾನವಾಗಿದೆ. ಬೆಟ್ಟದ ಮೇಲೆ ಹತ್ತಿ ಸುತ್ತಲಿನ ಪರಿಸರವನ್ನು ನೀವು ಕಾಣಬಹುದು. ಇಲ್ಲಿ ಐತಿಹಾಸಿಕ ಕಲಾಕೃತಿಗಳನ್ನೂ ಕಾಣಬಹುದಾಗಿದೆ. ಹಾಸನ ಪಟ್ಟಣದಿಂದ ಕಾಲ್ನಡಿಗೆ ಮೂಲಕ ಅಥವಾ ಬಸ್ಸಿನ ಮೂಲಕ ಈ ದೇವಸ್ಥಾನಕ್ಕೆ ತಲುಪಬಹುದು. ಈ ದೇಗುಲದ ಮಾರನಾಥ ಚರ್ಚ್‌ ಬಳಿಯೇ ಇದೆ.

ಹುಲ್ಲೆಕೆರೆ ಪುಷ್ಕರಣಿ


ಹುಲ್ಲೆಕೆರೆ ಪುಷ್ಕರಣಿಯು ಹಾಸನದಿಂದ 30ಕಿ.ಮೀ. ದೂರದಲ್ಲಿ ಬೇಲೂರು ತಾಲೂಕಿನಲ್ಲಿದೆ. ಹೊಯ್ಸಳ ರಾಜರು ನಿರ್ಮಿಸಿರುವ ಈ ಪುಷ್ಕರಣಿಯು ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದೆ. ಸುಂದರ ಹಸಿರು ಪರಿಸರ, ನೀರಿನವರೆಗೂ ಇಳಿದು ಹೋಗಲು ಸಾಧ್ಯವಾಗುವಂತೆ ನಿರ್ಮಿಸಿಲಿರುವ ಕಲ್ಲಿನ ಸುಂದರ ಮೆಟ್ಟಿಲುಗಳು ಆಕರ್ಷಕವಾಗಿವೆ. ಇಲ್ಲಿ ಅತ್ಯದ್ಭುತವಾದ ಕೆತ್ತನೆಯ ಗುಡಿ ಸೌಧಗಳನ್ನು ನೀವು ಕಾಣಬಹುದು. ಫೋಟೋಶೂಟ್‌ಗೆ ಈ ಜಾಗ ಹೇಳಿ ಮಾಡಿಸಿದಂತಿದೆ.

ಪಾರ್ವತಮ್ಮ ಬೆಟ್ಟ


ಈ ಬೆಟ್ಟವು ಹಾಸನ ಜಿಲ್ಲೆಯ ಆಲೂರಿನಿಂದ 12 ಕಿ.ಮೀ ಮತ್ತು ಹಾಸನ ಜಿಲ್ಲಾ ಕೇಂದ್ರದಿಂದ 36 ಕಿ.ಮೀ ದೂರದಲ್ಲಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3200 ಅಡಿ ಎತ್ತರದಲ್ಲಿದೆ. ಈ ಬೆಟ್ಟದ ಮೇಲೆ ಪಾರ್ವತಮ್ಮ ದೇವಾಲಯವಿದ್ದು, ಚಾರಣ ಮಾಡುವ ಮನಸ್ಸಿರುವವರಿಗೆ ಸುಲಭವಾಗಿ ಹತ್ತಲು ಸಾಧ್ಯವಾಗುವಂತಹ ಬೆಟ್ಟ ಇದಾಗಿದೆ. ಬೆಟ್ಟದ ಮೇಲಿನಿಂದ ಸುಂದರ ದೃಶ್ಯವನ್ನು ನೀವು ಕಾಣಬಹುದು. ಮಳೆಗಾಲದ ಸಮಯದಲ್ಲಿ ಮಂಜಿನಿಂದ ತುಂಬಿರುವ ಬೆಟ್ಟವು ಚಾರಣಿಗರಿಗೆ ಸ್ವರ್ಗದಂತೆ ಕಾಣುತ್ತದೆ. ವರ್ಷಕ್ಕೊಂದು ಬಾರಿ ಈ ದೇವಾಲಯದಲ್ಲಿ ಪಾರ್ವತಮ್ಮ ಜಾತ್ರಾ ಮಹೋತ್ಸವವನ್ನೂ ನಡೆಸಲಾಗುತ್ತದೆ.

ಬೇಲೂರು


ಹಾಸನದಿಂದ 38 ಕಿ.ಮೀ ದೂರದಲ್ಲಿ ನೀವು ಬೇಲೂರು ದೇಗುಲವನ್ನು ಕಾಣಬಹುದು. ಇದನ್ನು ದಕ್ಷಿಣ ವಾರಾಣಸಿ ಎಂದೂ ಕರೆಯಲಾಗುತ್ತದೆ. ಭಗವಾನ್‌ ವಿಷ್ಣುವಿನ ಅವತಾರವಾದ ಚೆನ್ನಕೇಶವನ ದೇಗುಲ ಇದಾಗಿದೆ. ಯಗಚಿ ನದಿ ದಡದಲ್ಲಿರುವ ಈ ದೇಗುಲ ಹೊಯ್ಸಳ ವಾಸ್ತು ಶೈಲಿಯಲ್ಲಿದೆ. ಚೆನ್ನಕೇಶವ ದೇವಾಲಯವನ್ನು 1117ರ ಸಮಯದಲ್ಲಿ ನಿರ್ಮಿಸಲಾಯಿತು. ನಕ್ಷತ್ರಾಕಾರದ ವೇದಿಕೆಯ ಮೇಲೆ ದ್ರಾವಿಡ, ರಾಜಗೋಪುರ ಸೇರಿಸಂತೆ ಒಟ್ಟು ಮೂರು ಪ್ರವೇಶದ್ವಾರಗಳಿವೆ. ಇಲ್ಲಿ ಪುಷ್ಕರಣಿ, ಚೆನ್ನಕೇಶವನ ಪತ್ನಿ ರಾಗನಾಯಕಿ ಮತ್ತು ಸೌಮ್ಯನಾಯಕಿಯ ಎರಡು ದೇವಾಲಯಗಳನ್ನು ಕಾಣಬಹುದು.

ಭೋಗ ನರಸಿಂಹ ಸ್ವಾಮಿ ದೇವಾಲಯ


ಭೋಗ ನರಸಿಂಹ ದೇವಾಲಯವು ಹಾಸನದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ದೇವಸ್ಥಾನಕ್ಕೆ ಲಕ್ಷ್ಮಿ ವರದ ಯೋಗ ನರಸಿಂಹ ಸ್ವಾಮಿ ದೇವಾಲಯ ಎಂದೂ ಕರೆಯಲಾಗುತ್ತದೆ. ವಿಷ್ಣು ದೇವರಿಗೆ ಸಮರ್ಪಿತವಾಗಿರುವ ಈ ದೇವಸ್ಥಾನದಲ್ಲಿ ಅತ್ಯಂಯ ಹಳೆಯ ಕಾಲದ ವಾಸ್ತುಶಿಲ್ಪವನ್ನು ಕಾಣಬಹುದು. ಪುರಾತನ ಗ್ರಂಥಗಳ ಕಥೆಗಳನ್ನು ವಿವರಿಸುವಂತ ಕೆತ್ತನೆಗಳನ್ನು ಇಲ್ಲಿನ ಗೋಡೆಗಳ ಮೇಲೆ ಕಾಣಬಹುದು. ಹಾಸನದಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ಶಾಂತಿಗ್ರಾಮದಲ್ಲಿ ಈ ದೇವಾಲಯವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಗದಗ

HK Patil : ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ `ಡಿಕೆಶಿ’ ಎಂದು ಸಚಿವ ಎಚ್‌ಕೆ ಪಾಟೀಲ್‌ ಯಡವಟ್ಟು

HK Patil: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ರಾಜಕಾರಣಿ ಹಾಗೂ ಸಚಿವ ಎಚ್.ಕೆ.ಪಾಟೀಲ್‌ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ ಡಿ.ಕೆ ಎಂದು ಹೇಳಿ ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡ ಘಟನೆ ನಡೆದಿದೆ.

VISTARANEWS.COM


on

By

HK patil
Koo

ಗದಗ: ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿ ಸ್ಥಾನದ‌‌ ಮೇಲೆ ಎಲ್ಲರ ಕಣ್ಣಿದೆ. ಕಾರಣ ಮುಡಾ ಹಗರಣ‌‌ ಎದುರಿಸುತ್ತಿರುವ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಮುಡಾ ಹಗರಣದಿಂದ‌ ಖಾಲಿಯಾಗುತ್ತೆ ಅನ್ನೋ ಬಿಸಿ‌ಬಿಸಿ ಚರ್ಚೆ ಪ್ರಚಲಿತದಲ್ಲಿದೆ. ಇದಕ್ಕೆ ಪುಷ್ಟಿಕರೀಸುವಂತೆ ಗದಗದಲ್ಲಿ ಸಚಿವ ಎಚ್‌ಕೆ ಪಾಟೀಲ್‌ (HK Patil) ಮುಖ್ಯಮಂತ್ರಿ ಹೆಸರನ್ನು ಹೇಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬದಲಿಗೆ ಡಿ.ಕೆ ಶಿವಕುಮಾರ್‌ ಹೆಸರು ಪ್ರಸ್ತಾಪಿಸಿ, ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡಿದ್ದಾರೆ.

ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ‌ ಶುಕ್ರವಾರ ಅದ್ಧೂರಿ 66ನೇ ಕನ್ನಡ ರಾಜ್ಯೋತ್ಸವ ಜರುಗಿತು. ‌ಈ ವೇಳೆ ಜಿಲ್ಲಾ ಉಸ್ತುವಾರಿ‌ ಸಚಿವ ಹಾಗೂ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ವೇದಿಕೆ ಮೇಲೆ ಭಾಷಣದ‌ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವ ಬದಲಾಗಿ, ಡಿಕೆ ಎಂದು ಪ್ರಸ್ತಾಪಿಸಿ, ತಕ್ಷಣ ಎಚ್ಚೆತ್ತು,‌ ಸಿದ್ಧರಾಮಯ್ಯ‌ ಎಂದು ಮುಂದುವರೆದು,‌ ಉಪಮುಖ್ಯಮಂತ್ರಿ‌ ಡಿ.ಕೆ. ಶಿವಕುಮಾರ್‌ ಅವರು ಎಂದೇಳಿ, ತಮ್ಮ ಭಾಷಣ ಮುಂದುವರೆಸಿದರು.

ಮೈಸೂರು ರಾಜ್ಯಕ್ಕೆ ಕರ್ನಾಟಕ‌ ನಾಮಕರಣದ ಐವತ್ತರ‌ ಸಂಭ್ರಮಾಚರಣೆಯನ್ನು ಕಳೆದ ವರ್ಷ 2023ರ ನವಂಬರ್, 1,2,3 ರಂದು ಮೂರು‌ ದಿನಗಳ‌ ಕಾಲ ಗದಗ ನಗರದ ಸೊಸೈಟಿಯ ಆವರಣದಲ್ಲಿ ನಡೆದಿತ್ತು.‌ ಗತವೈಭವ ಮರುಕಳಿಸುವ ಹಾಗೆ, ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಎಲ್ಲ ಜನತೆ‌ ಸಾಕ್ಷಿಯಾಗಿದ್ದೀರಿ. ನಾಡಿನ ಮುಖ್ಯಮಂತ್ರಿಗಳಾದ ಡಿ.ಕೆ (ತಕ್ಷಣ ಎಚ್ಚೆತ್ತು ಭಾಷಣದ ಪ್ರತಿ ತೀಕ್ಷ್ಣವಾಗಿ ವೀಕ್ಷಿಸಿ) ಮಾನ್ಯ‌ ಸಿದ್ಧರಾಮಯ್ಯನವರು,‌ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಸೇರಿದಂತೆ, ಸಚಿವ ಸಂಪುಟದ ಎಲ್ಲ‌ ಸಹೋದ್ಯೋಗಿಗಳು ಈ‌ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಪ್ರಸ್ತಾಪಿಸಿ, ಮುಂದೆ ತಮ್ಮ ಭಾಷಣದ ಸಂದೇಶವನ್ನು ಮುಂದುವರಿಸಿದ್ದಾರೆ.

ಸಿದ್ದರಾಮಯ್ಯನವರ ಸಂಪುಟದಲ್ಲಿ ‌ಅತ್ಯಂತ‌ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿರುವ ಎಚ್.ಕೆ.ಪಾಟೀಲ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿಯೂ ಒಬ್ಬರಾಗಿದ್ದಾರೆ.‌ ದೀಪಾವಳಿ‌ ಶುಭ‌ ಸಂದರ್ಭದಲ್ಲಿ ಸಚಿವರ ಬಾಯಲ್ಲಿ, ಡಿಕೆಶಿ ಮುಖ್ಯಮಂತ್ರಿಯಾಗಿದ್ದು ಅಚಾನಕ್ ಆಗಿ ಆದ ಅಚಾತುರ್ಯವೋ,‌ ಅಥವಾ ಸಚಿವರ ಆಂತರ್ಯದ ನುಡಿಯೋ ಎಲ್ಲವೂ ಕಾಕತಾಳಿಯ‌ ಎಂಬಂತಿದೆ.

Continue Reading

ಸಿನಿಮಾ

Dolly Dhananjay: ಕೋಟೆ ನಾಡಿನ ಕನ್ಯೆ ಜತೆಗೆ ಸಪ್ತಪದಿ ತುಳಿಯಲ್ಲಿದ್ದಾರೆ ಡಾಲಿ ಧನಂಜಯ್‌

Dolly Dhananjay : ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಜೋಡಿ ಹಸೆಮಣೆ ಏರಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಡಾಲಿ ಧನಂಜಯ್‌ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ.

VISTARANEWS.COM


on

By

Dolly Dhananjay
Koo

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ನಟರಾಕ್ಷಸ ಡಾಲಿ ಧನಂಜಯ್‌ (Dolly Dhananjay) ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ಹಲವು ದಿನಗಳ ಮೌನಕ್ಕೆ ತೆರೆ ಎಳೆದಿರುವ ಧನಂಜಯ್ ಬೆಳಕಿನ ಹಬ್ಬ ದೀಪಾವಳಿಯಂದು ಬಾಳ ಸಂಗತಿಯನ್ನು ಪರಿಚಯಿಸಿದ್ದಾರೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ಡಾಕ್ಟರ್ ಧನ್ಯತಾ ಜತೆಗೆ ಸಪ್ತಪದಿ ತುಳಿಯಲಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ಧನ್ಯತಾ ಅವರೊಂದಿಗೆ ಮುಂದಿನ ವರ್ಷ ಫೆಬ್ರವರಿ 16 ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ.

Sandalwood star Dali Dhananjay And dhanya They are getting married next year

ಸಾಂಸ್ಕೃತಿಕ ನಗರಿ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಧನ್ಯತಾ ಹಾಗೂ ಧನಂಜಯ್‌ ವಿವಾಹ ನಡೆಯಲಿದೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ಸೌತ್ ಸಿನಿಮಾ ಇಂಡಸ್ಟ್ರಿ ತಾರೆಯರು ಹಾಗು ಹಲವು ರಾಜಕೀಯ ಗಣ್ಯರು ಡಾಲಿ ಧನಂಜಯ್ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year

ವಿಭಿನ್ನ ರೀತಿಯ ಫೋಟೊಶೂಟ್‌ ನಡೆಸಿ ತಮ್ಮ ಹುಡುಗಿಯನ್ನು ಪರಿಚಯಿಸಿದ ಡಾಲಿ ಧನಂಜಯ್‌

Sandalwood star Dali Dhananjay And dhanya They are getting married next year
Sandalwood star Dali Dhananjay And dhanya They are getting married next year
Continue Reading

ಸಿನಿಮಾ

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

Actor Darshan: ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, 6 ವಾರಗಳ ನಂತ್ರ ಮತ್ತೆ ಸರೆಂಡರ್‌ ಆಗಬೇಕಿದೆ

VISTARANEWS.COM


on

By

Hc grants interim bail to actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 5 ತಿಂಗಳ ಬಳಿಕ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ನೀಡಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಿಂದ ಆದೇಶ ಹೊರಡಿದೆ. ಇನ್ನು ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕಿಲ್ಲ. ಬದಲಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಆದೇಶ ನೀಡಿದೆ.

ಬೆನ್ನುಹುರಿ ಚಿಕಿತ್ಸೆಗೆ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಅಂಗೀಕಾರವಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವಾರದಲ್ಲಿ ಯಾವ ರೀತಿಯ ಚಿಕಿತ್ಸೆ ಎಂಬ ವರದಿಯನ್ನು ನೀಡಬೇಕು. ದರ್ಶನ್ ತನ್ನ ಪಾಸ್‌ಪೋರ್ಟ್ ಸರಂಡರ್ ಮಾಡಬೇಕೆಂದು ನ್ಯಾ . ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಏನಿದು ಕೊಲೆ ಕೇಸ್‌?

ಜೂನ್ 9ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂಬಂಧ ಜೂನ್ 11ರಂದು ಮೈಸೂರಿನಲ್ಲಿ ಎ2 ದರ್ಶನ್ ಅರೆಸ್ಟ್ ಆಗಿದ್ದರು. ಜೂನ್ 22ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜೂ.22ರಂದು ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಅಲ್ಲಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಆ.29ರಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.

ಪವಿತ್ರಾಗೌಡ ಖುಷಿ

ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಖುಷಿ ಆಗಿದ್ದಾರೆ. ತನ್ನಿಂದಾಗಿ ದರ್ಶನ್ ಜೈಲು ಸೇರಿದ ಎಂಬ ಬೇಸರವಿತ್ತು. ದರ್ಶನ್‌ಗೆ ಜಾಮೀನು ಸಿಕ್ಕಿದೆ ಎಂದು ಪವಿತ್ರಾ ಖುಷಿಯಾಗಿದ್ದು, ತನಗೂ ಬೇಲ್ ಸಿಗುತ್ತೆಂಬ ವಿಶ್ವಾಸದಲ್ಲಿದ್ದಾರೆ.

Continue Reading

ಬೆಂಗಳೂರು

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

ಐದು ವರ್ಷದಿಂದ ಹೊಟ್ಟೆಯಲ್ಲೇ ಇದ್ದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ

VISTARANEWS.COM


on

By

Doctors at Fortis Hospital remove fish bone from man's stomach for 5 years
Koo

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years
Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Continue Reading
Advertisement
HK patil
ಗದಗ10 ಗಂಟೆಗಳು ago

HK Patil : ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ `ಡಿಕೆಶಿ’ ಎಂದು ಸಚಿವ ಎಚ್‌ಕೆ ಪಾಟೀಲ್‌ ಯಡವಟ್ಟು

Dolly Dhananjay
ಸಿನಿಮಾ13 ಗಂಟೆಗಳು ago

Dolly Dhananjay: ಕೋಟೆ ನಾಡಿನ ಕನ್ಯೆ ಜತೆಗೆ ಸಪ್ತಪದಿ ತುಳಿಯಲ್ಲಿದ್ದಾರೆ ಡಾಲಿ ಧನಂಜಯ್‌

Dina Bhavishya
ಭವಿಷ್ಯ24 ಗಂಟೆಗಳು ago

Dina Bhavishya : ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ

Dina Bhavishya
ಭವಿಷ್ಯ2 ದಿನಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ3 ದಿನಗಳು ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ3 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು4 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು4 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು4 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ4 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌