Pradeep Eshwar: ಮೆಂಟಲ್‌ ಮುನಿಸ್ವಾಮಿ ರೌಡಿಶೀಟರ್‌; ಮತ್ತೆ ಮುಗಿಬಿದ್ದ ಪ್ರದೀಪ್‌ ಈಶ್ವರ್‌ - Vistara News

ಕರ್ನಾಟಕ

Pradeep Eshwar: ಮೆಂಟಲ್‌ ಮುನಿಸ್ವಾಮಿ ರೌಡಿಶೀಟರ್‌; ಮತ್ತೆ ಮುಗಿಬಿದ್ದ ಪ್ರದೀಪ್‌ ಈಶ್ವರ್‌

Pradeep Eshwar: ಶಾಸಕ ಪ್ರದೀಪ್‌ ಈಶ್ವರ್‌ ಮತ್ತೆ ಸಂಸದ ಮುನಿಸ್ವಾಮಿ ಮೇಲೆ ಮುಗಿಬಿದ್ದಿದ್ದಾರೆ. ಈ ಬಾರಿ ಅವರು ಮೆಂಟಲ್‌ ಮುನಿಸ್ವಾಮಿ ಎಂದು ಗೇಲಿ ಮಾಡಿದ್ದಾರೆ.

VISTARANEWS.COM


on

Pradeep Eshwar Muniswami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೈಸೂರು ಸಂಸದ ಪ್ರತಾಪ್‌ ಸಿಂಹ (MP Pratapsimha), ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಕೆ. ಸುಧಾಕರ್‌ ಅವರನ್ನು ಮಾತಿನ ಮೂಲಕವೇ ಬೆನ್ನಟ್ಟುತ್ತಿದ್ದ ಚಿಕ್ಕಬಳ್ಳಾಪುರದ ನೂತನ ಶಾಸಕ, ಪ್ರದೀಪ್‌ ಈಶ್ವರ್‌ (Pradeep Eshwar) ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ (MP Muniswami) ಮೇಲೆ ಮತ್ತೆ ಮುಗಿಬಿದ್ದಿದ್ದಾರೆ.

ಶನಿವಾರ ಶಾಸಕರ ಭವನದಲ್ಲಿ ಮಾತನಾಡಿದ ಅವರು ಕೋಲಾರ ಸಂಸದ ಮುನಿಸ್ವಾಮಿ ಅವರನ್ನು ಮನಿ ಸ್ವಾಮಿ, ಮೆಂಟಲ್‌ ಮುನಿಸ್ವಾಮಿ ಎಂದು ಕರೆದಿದ್ದಲ್ಲದೆ ಅವರೊಬ್ಬ ರೌಡಿ ಶೀಟರ್‌ ಎಂದು ದಾಖಲೆಗಳನ್ನು ತೋರಿಸಿದರು.

ಕೋಲಾರದ ಸಂಸದರು ಮತ್ತು ಚಿಕ್ಕಬಳ್ಳಾಪುರದ ಶಾಸಕರ ನಡುವೆ ಶುಕ್ರವಾರ ವಾಕ್ಸಮರ ತಾರಕಕ್ಕೇರಿತ್ತು. ಪ್ರದೀಪ್‌ ಈಶ್ವರ್‌ ಅವರು ಮುನಿಸ್ವಾಮಿ ಅವರನ್ನು ಚೈಲ್ಡ್‌ ಆರ್ಟಿಸ್ಟ್‌, ಸಂಸದನ ಗಾಂಭೀರ್ಯವಿಲ್ಲ ಎಂದು ಹೀಗಳೆದಿದ್ದರು. ಇದಕ್ಕೆ ಪ್ರತಿಯಾಗಿ ಪ್ರದೀಪ್‌ ಈಶ್ವರ್‌ ಎರಡನೇ ಹುಚ್ಚ ವೆಂಕಟ್‌, ಅವರಿಗೆ ರಾಜಕೀಯ ಅನುಭವ ಕಡಿಮೆ, ನನ್ನ ಹತ್ರ ಟ್ಯೂಷನ್‌ ತಗೊಳೋಕೆ ಹೇಳಿ ಎಂದಿದ್ದರು ಮುನಿಸ್ವಾಮಿ. ಇದರ ಮುಂದಿನ ಭಾಗ ಶನಿವಾರ ಶಾಸಕರ ಭವನದಲ್ಲಿ ನಡೆಯಿತು.

ʻಕೋಲಾರದ ಎಂಪಿ ಹೆಸರು ಏನು? ಮೆಂಟಲ್ ಮುನಿಸ್ವಾಮಿ ಅಂತ ಅವರ ಹೆಸರು. ಹಾಂ ಮನಿ ಸ್ವಾಮಿ. ಮುನಿಸ್ವಾಮಣ್ಣ ನೀವು ರೌಡಿ ಶೀಟರ್‌ ಇದ್ದೀರಾ.. ನೀವು ನಮ್ಮ ನಾಯಕರ ಬಗ್ಗೆ ಮಾತನಾಡುತ್ತೀರಲ್ಲಾ.. ನಿಮ್ಮ ರೌಡಿ ಶೀಟ್‌ ಬಗ್ಗೆ ಮಾತನಾಡಿʼʼ ಎಂದರು. ಮುನಿಸ್ವಾಮಿ ಅವರು ವೈಟ್ ಫೀಲ್ಡ್ ನಲ್ಲಿ ಕಾಂಪೌಂಡ್ ಹಾಕಿದ್ದಾರೆ. ಅದಕ್ಕೆ ಕೇಸ್‌ ಆಗಿ ರೌಡಿ ಶೀಟರ್‌ ಆಗಿದ್ದಾರೆ. ಇದರ ಬಗ್ಗೆ ಬಿಜೆಪಿ ಮಾತನಾಡಲಿ ಎಂದು ಸವಾಲು ಹಾಕಿದರು.

ನನ್ನ ಕರೆಯೋಕೆ ಹೇಳಿ, ನಾನು ರಾಜಕೀಯ ಪಾಠ ಮಾಡ್ತೇನೆ

“ನಾನು ಏನೋ ಹೇಳಿದ್ರೆ ಪರ್ಸನಲ್‌ ಟಾರ್ಗೆಟ್‌ ಮಾಡ್ತಾರೆ. ಪರ್ಸನಲ್ ಟಾರ್ಗೆಟ್ ಬೇಡ. ನೀವು ಮಾತನಾಡಿದ್ರೆ ನಾವೂ ಮಾತನಾಡ್ತೇವೆ. ಸಂಸದರಾದವರು ಚೈಲ್ಡ್ ಆರ್ಟಿಸ್ಟ್ ತರಹ ಆಡ್ತಾರೆ. ಎಂಪಿಗೆ ಗಾಂಭೀರ್ಯ ಇರಬೇಕು. ನಾನು‌ ಮಾಡಿದ ಆರೋಪಕ್ಕೆ ಉತ್ತರ ನೀಡಿʼʼ ಎಂದು ಹೇಳಿದರು ಪ್ರದೀಪ್‌ ಈಶ್ವರ್‌.

ಪ್ರದೀಪ್‌ ಈಶ್ವರ್‌ಗೆ ರಾಜಕೀಯ ಜ್ಞಾನ ಇಲ್ಲ, ಅವರು ನನ್ನ ಬಳಿ ಟ್ಯೂಷನ್‌ಗೆ ಬರಲಿ ಎಂಬ ಮುನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻನನ್ನ ಕರೆಯೋಕೆ ಹೇಳಿ‌ ನಾನೇ ಅವರಿಗೆ ರಾಜಕೀಯ ಪಾಠ ಮಾಡ್ತೇನೆʼʼ ಎಂದರು.

ನಾನು ಸೋಲಿಸಿದ್ದು ಚೈಲ್ಡ್‌ ಆರ್ಟಿಸ್ಟನ್ನು ಅಲ್ಲ

ನಾನು ಚಿಕ್ಕಬಳ್ಳಾಪುರದಲ್ಲಿ ಸೋಲಿಸಿದ್ದು ಯಾರನ್ನು ಅಂತ ಗೊತ್ತಲ್ವಾ? ಅವರೇನೂ ಚೈಲ್ಡ್‌ ಆರ್ಟಿಸ್ಟ್‌ ಅಲ್ಲ. ಎಂದು ಹೇಳಿದ ಪ್ರದೀಪ್‌, ಬಿಜೆಪಿ ಸಂಸದರಿಗೆ ಸ್ವತಃ ಬಲದ ಮೇಲೆ ಗೆಲ್ಲುವ ಸಾಮರ್ಥ್ಯ ಇಲ್ಲ. ಮೋದಿ‌ ಹೆಸರು ಹೇಳಿಕೊಂಡು ಹೋಗ್ತಾರೆ. ಈ ಬಾರಿ ಸ್ವತಃ ಸಾಮರ್ಥ್ಯದ ಮೇಲೆ ಚುನಾವಣೆ ಮಾಡಲಿ ಎಂದು ಬಿಜೆಪಿ ಎಂಪಿಗಳಿಗೆ ಸವಾಲು ಹಾಕಿದರು.

ಇದನ್ನೂ ಓದಿ: Pradeep Eshwar: ಶಾಸಕ ಪ್ರದೀಪ್‌ ಈಶ್ವರ್‌ 2ನೇ ಹುಚ್ಚ ವೆಂಕಟ್‌ ಎಂದ ಸಂಸದ ಮುನಿಸ್ವಾಮಿ

ಬಿಜೆಪಿ ಸಂಸದರು ಬಹಿರಂಗ ಚರ್ಚೆಗೆ ಬರಲಿ

ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಚರ್ಚೆಗೆ ಬರಲಿ. ಬಹಿರಂಗ ವೇದಿಕೆಯಲ್ಲಿ ಚರ್ಚೆ ಮಾಡೋಣ. ಕಾಂಗ್ರೆಸ್ ಸರ್ಕಾರ ಸಾಧನೆ, ಬಿಜೆಪಿ ಸರ್ಕಾರ ಸಾಧನೆ ಮಾತನಾಡೋಣ. ಜನರಿಗೆ ದಾರಿ ತಪ್ಪಿಸೋದು ಬೇಡ. ಜನರ ಮುಂದೆ ಚರ್ಚೆ ಮಾಡೋಣ ಎಂದು ಬಿಜೆಪಿ ಸಂಸದರಿಗೆ ಸವಾಲು ಹಾಕಿದರು. ಎಂಪಿಗಳು ರಾಜ್ಯ ಸರ್ಕಾರದ ಪರವಾಗಿ ಇರಬೇಕು. ಕೇಂದ್ರದ ಜೊತೆ ‌ಮಾತನಾಡಿ‌ ಅಕ್ಕಿ ಕೊಡಿಸಬೇಕು. ಅದು ಬಿಟ್ಟು ರಾಜಕೀಯ ಮಾತನಾಡುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comments

  1. T S Venkatesh

    25 June 2023, 8:05 AM at 8:05 am

    The biggest personl comment made by Mr Rahul Gandhi(100% Child Artist) against our pride PM Modi ji, I need not explain that comment because the entire country and world knows that stupid comment. Inspite of that our pride PM Modi ji never used unparliamentery language towards that 100% Child Artist.

Leave a Reply

Your email address will not be published. Required fields are marked *

ಹುಬ್ಬಳ್ಳಿ

Assault case: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

Assault case : ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಹೊಡೆದಾಟ ಬಡಿದಾಟ ನಡೆದಿದೆ. ಪುಡಿ ರೌಡಿಗಳ ಗ್ಯಾಂಗ್‌ ವಾರ್‌ ನಡೆದಿದ್ದು, ದೂರು-ಪ್ರತಿದೂರು ದಾಖಲಾಗಿದೆ. ಇತ್ತ ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಉಪಾಧ್ಯಕ್ಷ ಚಪ್ಪಲಿ ಎಸೆದು ಹಲ್ಲೆ ನಡೆಸಿದ್ದಾನೆ.

VISTARANEWS.COM


on

By

Assault Case in Hubballi
Koo

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ನಡುವೆ ಗ್ಯಾಂಗ್ ವಾರ್ (Gang War) ನಡೆದಿದ್ದು, ಎರಡು ಗ್ಯಾಂಗ್‌ಗಳಿಂದ ದೂರು ಪ್ರತಿದೂರು ದಾಖಲಾಗಿದೆ. ಗನ್ ತೋರಿಸಿ‌ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Assault case) ದಾಖಲಾಗಿದೆ.

ಸುಂದರ್, ಪಿಲೋಮಿನ್, ಚಂದ್ರ ಪೌಲ್ ಎಂಬುವವರ ವಿರುದ್ಧ ಹುಬ್ಬಳ್ಳಿಯ ಸೆಟ್ಲಮೆಂಟ್ ನಿವಾಸಿ ಅಭಿಷೇಕ್ ಜಾಧವ್ ದೂರು ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಶಾಮ್ ಜಾಧವ ಹಾಗೂ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ಅವರ ಪುತ್ರ ಅಭಿಷೇಕ್ ಜಾಧವ್‌ಗೆ ಈ ಆರೋಪಿಗಳು ಹುಬ್ಬಳ್ಳಿಗೆ ನಾವೇ ಡಾನ್‌ಗಳು ಎಂದು‌ ಧಮ್ಕಿ ಹಾಕಿದ್ದರಂತೆ.

ಇತ್ತ ಸುಂದರ ಪೌಲ್ ಆ್ಯಂಡ್ ಟೀಮ್ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಅಭಿಷೇಕ್‌ ಜಾಧವ್ ಗ್ಯಾಂಗ್‌ನವರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಹಲವು ಕ್ರಿಮಿನಲ್ ಆರೋಪ ಹೊತ್ತಿರುವ ಈ ಎರಡು ಗ್ಯಾಂಗ್‌ಗಳ ನಡುವೆ ಕಲಹ ಶುರುವಾಗಿದೆ. ಈ ಮಧ್ಯೆ ಪರಸ್ಪರ ಅವಾಜ್ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮಾರಾಮಾರಿ

ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಸೆಟ್ಲ್‌ಮೆಂಟ್‌‌ ಏರಿಯಾದಲ್ಲಿ ಪ್ರಜ್ವಲ ಬೆಳ್ಳಿಗಟ್ಟಿ, ವಿಕಾಸ ಭಜಂತ್ರಿ ಎಂಬುವವರ ಸ್ವಯಂ ಜಾಧವ, ಪ್ರಜ್ವಲ ಜಾಧವ ಎಂಬುವವರು ಗುಂಪು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ.

assault Case in hubballi

ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಹೊಂದಾಣಿಕೆಗೆ ಅವಕಾಶ ಕೊಟ್ಟು ಪೊಲೀಸರು ಸುಮ್ಮನಾಗಿದ್ದಾರೆ ಎಂದು ಹಲ್ಲೆಗೊಳಗಾದ ಗುಂಪು ಆರೋಪಿಸಿವೆ. ಇನ್ನೂ ಹಲ್ಲೆಗೊಳಗಾದವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಗಾಯಾಳುಗಳ MLC ಮಾಡಿ ಸುಮ್ಮನಾಗಿದ್ದಾರೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಚಪ್ಪಲಿ ಎಸೆತ

ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಘಟನೆ ನಡೆದಿದೆ.

ತುರುವೇಕೆರೆ ತಾಲೂಕಿನ ತಂಡಗ ಗ್ರಾಮ ಪಂಚಾಯತಿಯ ಸದಸ್ಯ ಮೋಹನ್ ಮೇಲೆ ಉಪಧ್ಯಾಕ್ಷ ಚನ್ನಬಸವೇಗೌಡನಿಂದ ಹಲ್ಲೆ ನಡೆದಿದೆ. ತಂಡಗ ಗ್ರಾಮ ಪಂಚಾಯತಿ ಅಧ್ಯಕ್ಷನ ಅವಿಶ್ವಾಸ ಮಂಡನೆಗೆ ಸಹಿ ಹಾಕಲು ಮೋಹನ್ ನಿರಾಕರಿಸಿದ್ದರು ಎನ್ನಲಾಗಿದೆ.

ಹೀಗಾಗಿ ಸಹಿ ಹಾಕುವಂತೆ ಮೋಹನ್‌ಗೆ ಚನ್ನಬಸವೇಗೌಡ ಒತ್ತಾಯಿಸಿದ್ದರು. ಸಹಿ ಹಾಕಲು ಒಪ್ಪದಿದ್ದಾಗ ಚನ್ನಬಸವೇಗೌಡ ಸಿಟ್ಟಿನಲ್ಲಿ ಮುಖಕ್ಕೆ ಹೊಡೆದು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಸದ್ಯ ಘಟನೆ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

DK Shivakumar: ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ- ಡಿಸಿಎಂ ದಂಗಲ್ ವಿಚಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಪ್ರಸ್ತಾಪವಾಯಿತು. ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಒತ್ತಾಯ ಮಾಡಿದರು. ಪದಾಧಿಕಾರಿಗಳ ಪ್ರಸ್ತಾಪಕ್ಕೆ ಡಿಕೆ ಶಿವಕುಮಾರ್ ಖಡಕ್ ಉತ್ತರ ನೀಡಿದರು.

VISTARANEWS.COM


on

DK ShivaKumar
Koo

ಬೆಂಗಳೂರು: ಸಿಎಂ- ಡಿಸಿಎಂ ಬದಲಾವಣೆ ಕುರಿತು ಮಾತನಾಡುವ ಪಕ್ಷದ ಶಾಸಕರಿಗೆ ಇಷ್ಟರಲ್ಲೇ ನೋಟೀಸ್‌ (Notice) ನೀಡುತ್ತೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಜೊತೆಗೂ ಮಾತನಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ- ಡಿಸಿಎಂ ದಂಗಲ್ ವಿಚಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಪ್ರಸ್ತಾಪವಾಯಿತು. ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಒತ್ತಾಯ ಮಾಡಿದರು. ಪದಾಧಿಕಾರಿಗಳ ಪ್ರಸ್ತಾಪಕ್ಕೆ ಡಿಕೆ ಶಿವಕುಮಾರ್ ಖಡಕ್ ಉತ್ತರ ನೀಡಿದರು.

ʼಕೆಲವರಿಗೆ ಮೈಕ್ ಕಂಡ ತಕ್ಷಣ ಮಾತಾಡುವ ದೊಡ್ಡ ಚಟವಿದೆ. ಆದರೆ ಇದನ್ನು ಎಐಸಿಸಿ ಗಮನಿಸುತ್ತಿದೆ. ಗೊಂದಲ ಮೂಡಿಸುತ್ತಿರುವವರ ಬಗ್ಗೆ ಅರಿವಿದೆ. ಸಭೆಯಲ್ಲಿ ಶಾಸಕರಿಗೆ ನೋಟೀಸ್ ನೀಡಲಾಗುವುದು. ನಾನು ಮತ್ತು ಸಿಎಂ ಈ ಬಗ್ಗೆ ಮಾತಾಡಿದ್ದೇವೆ. ಸಿಎಂ ಜೊತೆಗೆ ಕೆಲವರ ಬಗ್ಗೆ ಮಾತಾಡಿದ್ದೇನೆ. ಶೀಘ್ರದಲ್ಲೇ ಕೆಲವು ಶಾಸಕರಿಗೆ ನೊಟೀಸ್ ನೀಡುತ್ತೇವೆʼ ಎಂದು ಡಿಕೆಶಿ ನುಡಿದರು.

ಇದೇ ಸಂದರ್ಭದಲ್ಲಿ ಪಕ್ಷಾಧ್ಯಕ್ಷನಾಗಿ ತಮ್ಮ ಶ್ರಮದ ಬಗ್ಗೆ ಪದಾಧಿಕಾರಿಗಳಿಗೆ ಡಿಕೆ ಶಿವಕುಮಾರ್ ಮನವರಿಕೆ ಮಾಡಿಕೊಟ್ಟರು. ʼನಾನು ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು, ಈಗ ಹೇಗಿದೆ ನೋಡಿ. ಸೋನಿಯಾ ಗಾಂಧಿ ಪಕ್ಷ ಸಂಕಷ್ಟದಲ್ಲಿದ್ದಾಗ ನನ್ನ ಅಧ್ಯಕ್ಷನನ್ನಾಗಿ ಮಾಡಿದರು. ಈಗ ಪಕ್ಷ ಸದೃಢವಾಗಿದೆ, ಇನ್ನಷ್ಟು ಬಲಿಷ್ಠ ಮಾಡುವ ಹೊಣೆಗಾರಿಕೆ ನನ್ನ ಮೇಲಿದೆ. ಯಾರೋ ಒಂದಿಬ್ಬರು ನನ್ನನ್ನು ಬಗ್ಗಿಸಬಹುದು ಅಂತ ಭಾವಿಸಿದ್ದರೆ ಅದು ಆಗದ ಕೆಲಸʼ ಎಂದು ಶಿವಕುಮಾರ್‌ ಭರವಸೆ ನೀಡಿದರು.

ಪಕ್ಷ ಕಟ್ಟುವತ್ತ ಡಿಕೆ ಶಿವಕುಮಾರ್‌ ಚಿತ್ತ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಿಂದಲೇ ಒತ್ತಾಯ ಕೇಳಿಬರುತ್ತಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ (DCM Post) ಸ್ಥಾನವನ್ನು ಒಬ್ಬರಿಗೆ ನೀಡಿರುವುದಕ್ಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಆದರೆ, ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದು, ಕೇಡರ್ ಬೇಸ್ ಪಾರ್ಟಿ ಕಟ್ಟಲು ಅವರು ಪಣತೊಟ್ಟಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಇನ್ನು ಲೋಕಸಭೆ ಫಲಿತಾಂಶದ ಹಿನ್ನಡೆ ಹಿನ್ನೆಲೆಯಲ್ಲಿ ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ.

ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ, ಕಾರಣಗಳನ್ನು ಪತ್ತೆ ಹಚ್ಚುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ಧಪಡಿಸಲು ವಲಯವಾರು ಸಮಿತಿ ರಚನೆ ಮಾಡಲು ಹಾಗೂ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಮಾಜಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆಯನ್ನು ಡಿಕೆಶಿ ನಡೆಸಲಿದ್ದಾರೆ. ಕೆಳಹಂತದಲ್ಲಿ ಪಕ್ಷ ಬಲವರ್ಧನೆಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಗೆಯೇ ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ ಮಾಡಿದ್ದು, ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್‌ಗೆ ಪುನಶ್ಚೇತನ ನೀಡಲು ಯೋಜಿಸಿದ್ದು, ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಎಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಎರಡು‌ ರೀತಿಯ ಪ್ಲ್ಯಾನ್ ಆಫ್ ಆ್ಯಕ್ಷನ್ ಮಾಡಲು ಮುಂದಾಗಿದ್ದು, ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆ ಕುರಿತು ಕಾರ್ಯ ಯೋಜನೆ ಮಾಡಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ | Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

Continue Reading

ಪ್ರಮುಖ ಸುದ್ದಿ

M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

M.R.Jayaram: ಶಿಕ್ಷಣ ತಜ್ಞ ದಿವಂಗತ ಡಾ.ಎಂ.ಎಸ್.ರಾಮಯ್ಯ ಅವರ ಹಿರಿಯ ಪುತ್ರ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಮ್ ಅವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯವು ತನ್ನ ಮೂರನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರು ಎಂ.ಆರ್.ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

VISTARANEWS.COM


on

M.R.Jayaram
Koo

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯವು ತನ್ನ ಮೂರನೇ ಘಟಿಕೋತ್ಸವದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಆರ್.ಜಯರಾಮ್ (M.R.Jayaram) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಅವರು ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

M.R.Jayaram

ಡಾ.ಎಂ.ಆರ್.ಜಯರಾಮ್ ಕುರಿತು

ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್ ಅವರು ಕರ್ನಾಟಕದ ಹೆಸರಾಂತ ಲೋಕೋಪಕಾರಿ ಮತ್ತು ಶಿಕ್ಷಣ ತಜ್ಞ ದಿವಂಗತ ಡಾ.ಎಂ.ಎಸ್.ರಾಮಯ್ಯ ಅವರ ಹಿರಿಯ ಪುತ್ರ. 1947ರಲ್ಲಿ ಜನಿಸಿದ ಡಾ.ಜಯರಾಮ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಅವರು ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ಕಾಯಕಕ್ಕೆ ಸಜ್ಜಾದರು.

M.R.Jayaram

1972ರಲ್ಲಿ, ತಮ್ಮ ಇಪ್ಪತ್ತೈದನೇ ವಯಸ್ಸಿನಲ್ಲಿ, ಜಯರಾಮ್ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಎಸ್ಆರ್‌ಟಿ) ಆಡಳಿತ ಮಂಡಳಿಯ (ಈಗ ಆಡಳಿತ ಮಂಡಳಿ) ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ತಮ್ಮ ಜಾಣ್ಮೆ ಮತ್ತು ನಿರ್ವಹಣಾ ಸಾಮರ್ಥ್ಯಗಳಿಂದ ಸಂಸ್ಥೆಗೆ ಗೌರವವನ್ನು ತಂದುಕೊಟ್ಟರು. ಅಂದಿನಿಂದ ಇದು ಎಂಜಿನಿಯರಿಂಗ್ ಶಿಕ್ಷಣದಲ್ಲಿ ಪ್ರಮುಖ ಸಂಸ್ಥೆಯಾಗಿ ಅಭಿವೃದ್ಧಿ ಹೊಂದಿದೆ.

M.R.Jayaram

ರಾಜಕೀಯ ತ್ಯಜಿಸಿದ ಡಾ. ಜಯರಾಮ್

1972ರಲ್ಲಿ ಡಾ. ಜಯರಾಮ್ ಅವರು ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿ ಆಯ್ಕೆಯಾದರು. ನಾಲ್ಕು ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಯರಾಮ್ ಅವರು ರಾಜಕೀಯದಿಂದ ಬೇಸರಗೊಂಡು ವಿಧಾನಸಭೆಗೆ ರಾಜೀನಾಮೆ ನೀಡಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಚುನಾಯಿತ ಪ್ರತಿನಿಧಿಯೊಬ್ಬರು ತಾವೇ ಇಷ್ಟಪಟ್ಟು ಅಧಿಕಾರವನ್ನು ತ್ಯಜಿಸಿದಕ್ಕೆ ಇದು ಏಕೈಕ ಉದಾಹರಣೆಯಾಗಿದೆ. ರಾಜ್ಯ ಶಾಸಕಾಂಗದಿಂದ ಅವರು ಹೊರಗೆ ನಡೆದಿದ್ದು, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಬಹಳ ಲಾಭವಾಗಿತ್ತು, ಯಾಕೆಂದರೆ ನಂತರ ಅವರು ಶಿಕ್ಷಣ ಮತ್ತು ಸಮಾಜ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು.

1979ರಲ್ಲಿ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು (ಎಂಎಸ್ಆರ್‌ಎಂಸಿ) ಸ್ಥಾಪಿಸಿದರು ಮತ್ತು ಡಾ. ಜಯರಾಮ್ ಅವರು ಎಂಎಸ್ಆರ್‌ಎಂಸಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡರು. ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಪಡಿಸಲು ಅವರು ಎರಡೂ ಸಂಸ್ಥೆಗಳನ್ನು ಬಹಳ ಬುದ್ಧಿವಂತ ನಾಯಕತ್ವದೊಂದಿಗೆ ಮುನ್ನಡೆಸಿದರು, ಜೊತೆಗೆ ಪದವಿಪೂರ್ವ ಶಿಕ್ಷಣದಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಿದರು. ಡಾ.ಎಂ.ಆರ್.ಜಯರಾಮ್ ಅವರು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಕೈಗೆಟುಕುವಿಕೆ ಮತ್ತು ಪ್ರವೇಶಕ್ಕೆ ಒತ್ತು ನೀಡುವ ಮೂಲಕ ಈ ಸಂಸ್ಥೆಗಳನ್ನು ಪರಿವರ್ತಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅವರ ಪ್ರಯತ್ನಗಳ ಪರಿಣಾಮವಾಗಿ, ಈ ಪ್ರಮುಖ ಸಂಸ್ಥೆಗಳು ದೇಶದ 25 ಸಂಸ್ಥೆಗಳಲ್ಲಿ ಆಯಾ ಕ್ಷೇತ್ರಗಳಲ್ಲಿವೆ.

M.R.Jayaram

ಡಾ.ಜಯರಾಮ್ ಅವರ ಉತ್ತಮ ನಾಯಕತ್ವಕ್ಕೆ ಸಾಕ್ಷಿ ಎಂಬಂತೆ ಇಂದು ಜಿಇಎಫ್ ತನ್ನ 85 ಎಕರೆ ಜ್ಞಾನ ಗಂಗೋತ್ರಿ ಕ್ಯಾಂಪಸ್‌ನಲ್ಲಿ 18 ಕಾಲೇಜುಗಳು / ಶಾಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ಶಾಲೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ದಂತವೈದ್ಯಕೀಯ, ಕಾನೂನು, ಸಮಾಜ ವಿಜ್ಞಾನ ಮತ್ತು ಮ್ಯಾನೇಜ್‌ಮೆಂಟ್‌ ಸೇರಿವೆ. ಕ್ಯಾಂಪಸ್‌ನಲ್ಲಿ ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳನ್ನು ಒಳಗೊಂಡ 11,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅವರ ದೃಢನಿಶ್ಚಯ ಮತ್ತು ನಿರಂತರ ಪ್ರಯತ್ನದಿಂದ ಈ ಪ್ರತಿಯೊಂದು ಸಂಸ್ಥೆಯೂ “ಅತ್ಯುತ್ತಮ ಕೇಂದ್ರ”ವಾಗಿ ಕರೆಯಿಸಿಕೊಳ್ಳುತ್ತಿದೆ.

M.R.Jayaram

ಡಾ.ಎಂ.ಎಸ್.ರಾಮಯ್ಯ ಅವರ ನಿಧನದ ನಂತರ, ಡಾ.ಜಯರಾಮ್ ಅವರು ತಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಿದರು. ಈಗ ತಮ್ಮ ತಂದೆಯ ನೆನಪಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವತ್ತ ಗಮನ ಹರಿಸಿದ್ದಾರೆ ಮತ್ತು ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆ ಇಂದು ಬೆಂಗಳೂರಿನ ಹೆಮ್ಮೆಯಾಗಿದೆ. ಎಂ.ಎಸ್. ರಾಮಯ್ಯ ಸ್ಕೂಲ್ ಆಫ್ ಅಡ್ವಾನ್ಸ್‌ಡ್‌ ಸ್ಟಡೀಸ್‌ ಕೂಡ ಅವರ ಸೃಷ್ಟಿಯಾಗಿದ್ದು, ನಂತರ ಅದು ಈಗ ಪ್ರಸಿದ್ಧ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯವಾಗಿ ರೂಪಾಂತರಗೊಂಡಿತು. ಮತ್ತು ಇದು ಅವರು ಅವಿರತವಾಗಿ ನಿರ್ಮಿಸಿದ ಹದಿಮೂರು ಬೋಧಕವರ್ಗಗಳನ್ನು ಒಳಗೊಂಡಿದೆ. ಹಾಗೇ ಡಾ.ಜಯರಾಮ್ ಅವರು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ.

ಡಾ.ಜಯರಾಮ್ ಅವರು ಶಿಕ್ಷಣ ತಜ್ಞರಲ್ಲದೆ, ಖ್ಯಾತ ಉದ್ಯಮಿ ಮತ್ತು ಕೈಗಾರಿಕೋದ್ಯಮಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಎಲ್ಲಾ ವ್ಯವಹಾರಗಳನ್ನು ಕ್ರೋಢೀಕರಿಸಿದರು ಮತ್ತು ಅವುಗಳನ್ನು “ವಾಲ್ಡೆಲ್ ಕಾರ್ಪೊರೇಷನ್” ಎಂಬ ಒಂದೇ ಹೆಸರಿನಡಿಯಲ್ಲಿ ತಂದರು. ವಾಲ್ಡೆಲ್ ವಿನ್ಯಾಸ ಎಂಜಿನಿಯರಿಂಗ್ ಮತ್ತು ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಮುದಾಯ ಅಭಿವೃದ್ಧಿ ಮತ್ತು ಲೋಕೋಪಕಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರು ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಆಧ್ಯಾತ್ಮಿಕ ಪುನರುತ್ಥಾನದ ಕೇಂದ್ರವಾದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ (ಮುಖ್ಯಸ್ಥ) ಆಗಿದ್ದಾರೆ. ಕ್ಷೇತ್ರವು ಹಳೆಯ ದೇವಾಲಯಗಳ ಪುನರುಜ್ಜೀವನ, ಕೈವಾರದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸುವುದು, ಅನಾನುಕೂಲಕರ ಮತ್ತು ದುರ್ಬಲ ಜನಸಂಖ್ಯೆಯ ಕಲ್ಯಾಣ ಚಟುವಟಿಕೆಗಳನ್ನು ಒಳಗೊಂಡಿದೆ.

ಡಾ.ಜಯರಾಮ್ ಅವರು ಎಂ.ಎಸ್.ರಾಮಯ್ಯ ಚಾರಿಟೀಸ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದು, ಇದು ಹಲವಾರು ಉತ್ತಮವಾಗಿ ವ್ಯಾಖ್ಯಾನಿಸಲಾದ ಸಾಮಾಜಿಕ ಉದ್ದೇಶಗಳನ್ನು ಅನುಸರಿಸುತ್ತದೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಟ್ರಸ್ಟ್ ವಾರ್ಷಿಕವಾಗಿ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡುತ್ತದೆ.

ಡಾ.ಜಯರಾಮ್ ಅವರು ವೃತ್ತಿಪರ ಸಂಘಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 7000 ಕ್ಕೂ ಹೆಚ್ಚು ಉನ್ನತ ಶಿಕ್ಷಣವನ್ನು ಪ್ರತಿನಿಧಿಸುವ ಉನ್ನತ ವೃತ್ತಿಪರ ಸಂಸ್ಥೆಯಾದ ಎಜುಕೇಶನ್ ಪ್ರಮೋಷನ್ ಸೊಸೈಟಿ ಫಾರ್ ಇಂಡಿಯಾದ ಅಧ್ಯಕ್ಷರಾಗಿದ್ದಾರೆ.

ಸಂಸ್ಥೆಗಳು: ಅವರು ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟದ (ಸಿಒಎಂಇಡಿಕೆ) ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

ಪ್ರಶಸ್ತಿ: ಸೆಪ್ಟೆಂಬರ್‌ 2006 ರಲ್ಲಿ, ಡಾ.ಜಯರಾಮ್ ಅವರಿಗೆ ಶಿಕ್ಷಣ ಮತ್ತು ವ್ಯವಹಾರಕ್ಕೆ ನೀಡಿದ ಕೊಡುಗೆಗಾಗಿ ಯುಕೆಯ ಕೊವೆಂಟ್ರಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿತು. ಮೇ 2022 ರಲ್ಲಿ, ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್ ನೀಡಿತು.

Continue Reading

ಕರ್ನಾಟಕ

Actor Darshan: ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಮೀನಾ; ಕುಟುಂಬಸ್ಥರನ್ನು ಕಂಡು ನಟ ಭಾವುಕ

Actor Darshan: ದರ್ಶನ್‌ ಅವರ ತಾಯಿ ಮೀನಾ, ತಮ್ಮ ದಿನಕರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್‌ ಪರಪ್ಪನ ಅಗ್ರಹಾರ ಜೈಲಿಗೆ ಸೋಮವಾರ ಭೇಟಿ ನೀಡಿದ್ದರು. ಕುಟುಂಬಸ್ಥರನ್ನು ಕಂಡು ದರ್ಶನ್‌ ಕೂಡ ಭಾವುಕರಾಗಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಕುಟುಂಬಸ್ಥರು ಸೋಮವಾರ ಭೇಟಿ ಮಾಡಿದರು. ಕುಟುಂಬಸ್ಥರನ್ನು ನೋಡುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದು, ಈ ವೇಳೆ ಮಗನನ್ನು ಅಪ್ಪಿಕೊಂಡು ತಾಯಿ ಮೀನಾ ಕೂಡ ಕಣ್ಣೀರು ಹಾಕಿದ್ದಾರೆ. ತನ್ನ ಸ್ಥಿತಿ ಕಂಡು ಗೋಳಾಡುತ್ತಿದ್ದ ತಾಯಿಗೆ ದರ್ಶನ್ (Actor Darshan) ಸಮಾಧಾನ ಹೇಳಿದ್ದಾರೆ.

ಭೇಟಿ ವೇಳೆ ಮಗ ವಿನೀಶ್‌ನನ್ನು ತೊಡೆಯ ಮೇಲೆ ಕೂರಿಸಿಕೊಂಡು ದರ್ಶನ್ ಮುದ್ದಾಡಿದ್ದಾರೆ. ಸ್ನೇಹಿತರಂತಿದ್ದ ತಂದೆ-ಮಗನ ಸ್ಥಿತಿ ಕಂಡು ದರ್ಶನ್ ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ. ಇನ್ನು ದರ್ಶನ್‌ಗೆ ಸಹೋದರ ದಿನಕರ್ ತೂಗುದೀಪ್ ಧೈರ್ಯ ತುಂಬಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಕಳೆದ ಹತ್ತು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಾಗಿ ಹಲವು ನಟ, ನಟಿಯರು ಹಾಗೂ ಕುಟುಂಬಸ್ಥರು ನಟ ದರ್ಶನ್‌ರನ್ನು ಭೇಟಿ ಮಾಡುತ್ತಿದ್ದಾರೆ.

ಇದನ್ನೂ ಓದಿ | Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

ಇನ್ನು ಬಂದಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ದರ್ಶನ್‌ಗೆ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ‌ ಕೊಡಬೇಕಾದರೆ ಹತ್ತಾರು ರೂಲ್ಸ್‌ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರಿಗೆ ಜೈಲು ಎಂಟ್ರಿ ನೀಡಲಾಗಿದೆ. ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ಕುಟುಂಬ ಭೇಟಿ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ತಾಯಿ, ತಮ್ಮ ಪತ್ನಿ ಮಗ ಎಂಟ್ರಿ ಕೊಟ್ಟರು. ಹತ್ತು ಗಂಟೆ ಸುಮಾರಿಗೆ ಕುಟುಂಬ ಜೈಲಿಗೆ ಬಂದಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉದಯ್ ದರ್ಶನ್ ಭೇಟಿಗೆ ಕರೆದೊಯ್ದರು. ಉದಯ್‌ ಅವರು ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದರು. ಇಂದು ಕೂಡ ಖಾಸಗಿ ಕಾರಿನಲ್ಲಿ ಉದಯ್‌ ಕುಟುಂಬವನ್ನು ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.

Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!

Actor Darshan is like my son says hamsalekha

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇಂದಾದರೂ ಅವರು ಆಗಮಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ಈಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಂಸಲೇಖ ಮಾತನಾಡಿ ʻʻನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್‌ . ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ ನಾವು. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ.” ಎಂದು ಹಂಸಲೇಖ ಹೇಳಿದ್ದಾರೆ.

“ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ನನ್ನ ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತೀನಿ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ.” ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನಷ್ಟದ ಹಾದಿ ಹಿಡಿದಿರುವ ಬಗ್ಗೆನೂ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. “ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟು ಪ್ರಶಸ್ತಿಗಳು. ಎಷ್ಟು ರಾಷ್ಟ್ರ ಪ್ರಶಸ್ತಿಗಳು. ಎಷ್ಟು ಗೌರವ. ಎಂತಹ ಪ್ರತಿಭಾವಂತರು ಹುಟ್ಟಿ ಬೆಳೆದಿದ್ದಾರೆ. ಅಂದರೆ, ಆ ಎತ್ತರಕ್ಕೆ ಏರಿದ್ದಾರೆ. ಆ ಎತ್ತರಕ್ಕೆ ಹೋದ ಮೇಲೆ ಅಲ್ಲಿಂದ ಕೆಳಗೆ ಬೀಳಬೇಕಾಗುತ್ತೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದ ಕೂಡಲೇ ಅಲ್ಲಿಂದ ಮತ್ತೆ ಏಳುವ ಚಾನ್ಸ್ ಇದೆ.” ಎಂದು ಹಂಸಲೇಖ ಚಿತ್ರರಂಗದ ಬಗ್ಗೆ ಹೇಳಿದ್ದಾರೆ.

Actor Darshan:  ದರ್ಶನ್‌‌‌‌‌‌ ವಿರುದ್ಧ ಪರೋಕ್ಷವಾಗಿ ಕೌಂಟರ್‌ ಕೊಟ್ಟ ನಟ ಜಗ್ಗೇಶ್!

ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್‌, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.

Continue Reading
Advertisement
Assault Case in Hubballi
ಹುಬ್ಬಳ್ಳಿ6 mins ago

Assault case: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

DK ShivaKumar
ಪ್ರಮುಖ ಸುದ್ದಿ11 mins ago

DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

M.R.Jayaram
ಪ್ರಮುಖ ಸುದ್ದಿ13 mins ago

M.R.Jayaram: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

Actor Darshan
ಕರ್ನಾಟಕ17 mins ago

Actor Darshan: ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಮೀನಾ; ಕುಟುಂಬಸ್ಥರನ್ನು ಕಂಡು ನಟ ಭಾವುಕ

DCM Post
ಕರ್ನಾಟಕ1 hour ago

DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

Sheikh Abdul Rashid
ದೇಶ1 hour ago

Sheikh Abdul Rashid: ಸೆರೆಮನೆಯಿಂದ ನೇರ ಸಂಸತ್‌ಗೆ! ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ʼಉಗ್ರರ ಬೆಂಬಲಿಗʼನ ಪ್ರಮಾಣವಚನಕ್ಕೆ NIA ಅಸ್ತು

karnataka Weather Forecast
ಮಳೆ1 hour ago

Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

reels obsession
ಕ್ರೈಂ1 hour ago

Reels Obsession: ಎಕೆ 47, ಬಾಡಿಗಾರ್ಡ್ಸ್‌, ಸುಂದರಿಯರ ನಡುವೆ ರೀಲ್ಸ್‌ ಶೋಕಿ ಮಾಡಿದವನು ಜೈಲುಪಾಲು!

Parliament Sessions
ದೇಶ1 hour ago

Parliament Sessions: ಲೋಕಸಭೆಯಲ್ಲಿ ನೀಟ್‌ ವಿವಾದ ಚರ್ಚೆಗೆ ಆಗ್ರಹಿಸಿ ಸಭಾತ್ಯಾಗ ಮಾಡಿದ ಪ್ರತಿಪಕ್ಷ

Darshan support by Adviti Shetty Block the bad commenter
ಸ್ಯಾಂಡಲ್ ವುಡ್1 hour ago

Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ21 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌