rain news Biperjoy silicone effect Rain in MangaloreRain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ Vistara News
Connect with us

ಉಡುಪಿ

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

weather Report: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ ಆಗದೇ ಇರುವುದು ತೀವ್ರ ನೀರಿನ ಅಭಾವಕ್ಕೆ ಕಾರಣವಾಗಿದ್ದು, ಮಂಗಳೂರು ವಿಶ್ವವಿದ್ಯಾಲಯವು (Mangalore University) ತನ್ನ ಕಾಲೇಜಿಗೆ ರಜೆಯನ್ನೇ ಘೋಷಿಸಿತ್ತು. ಇದೀಗ ಬಿಪರ್‌ಜಾಯ್‌ ಚಂಡಮಾರುತದಿಂದಾಗಿ (Cyclone Biparjoy) ಎಡಬಿಡದೆ ಮಳೆ (Rain News)ಸುರಿಯುತ್ತಿದೆ.

VISTARANEWS.COM


on

Rain in mangalore
ಮಂಗಳೂರಲ್ಲಿ ಮಳೆ ಅಬ್ಬರ
Koo

ಮಂಗಳೂರು/ಬೆಂಗಳೂರು: ಬಿಪರ್‌ಜಾಯ್ ಚಂಡಮಾರುತ ಎಫೆಕ್ಟ್‌ನಿಂದಾಗಿ (Cyclone Biparjoy) ಶುಕ್ರವಾರ (ಜೂ.8) ಮುಂಜಾನೆ ಮಂಗಳೂರಿನಲ್ಲಿ ಬಿಡದೆ ಮಳೆ (Rain News) ಸುರಿಯುತ್ತಿದೆ. ಮುಂಜಾನೆಯೇ ಆರಂಭಗೊಂಡ ಮಳೆಯಿಂದ ಕಛೇರಿಗೆ ತೆರಳುವವರು, ಶಾಲಾ-ಕಾಲೇಜಿಗೆ ಹೋಗುವವರು ಕೊಂಚ (Weather Report) ಪರದಾಡಿದರು.

ಶುಕ್ರವಾರ ಮುಂಜಾನೆ ಮಂಗಳೂರಲ್ಲಿ ಬಿಡದೆ ಸುರಿಯುತ್ತಿರುವ ಮಳೆ

ಜೂನ್‌ 8 ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ವೇಳೆ ವಿದ್ಯುತ್‌ ವ್ಯತ್ಯಯ ಉಂಟಾಗಬಹುದು. ಬಿರುಗಾಳಿ ಸಹಿತ ಮಳೆಯಾಗುವ ಕಾರಣದಿಂದಾಗಿ ಮರದಡಿ ನಿಲ್ಲದಂತೆ ಸೂಚನೆ ನೀಡಲಾಗಿದೆ. ಇನ್ನು ಕರ್ನಾಟಕ ಕರಾವಳಿಯ ಸಮುದ್ರ ತೀರಾದಲ್ಲಿ ಗಾಳಿ ವೇಗವು 45-55 ಕಿ.ಮೀ ತಲುಪುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಐಎಂಡಿ ಎಚ್ಚರಿಕೆ ನೀಡಿದೆ.

ಬಿಪರ್‌ಜಾಯ್ ಚಂಡಮಾರುತ ಎಫೆಕ್ಟ್‌ನಿಂದಾಗಿ ಉತ್ತರಕನ್ನಡದ ಭಟ್ಕಳ, ಹೊನ್ನಾವರ, ಅಂಕೋಲಾ ತಾಲೂಕುಗಳಲ್ಲಿ ಬೆಳಗ್ಗೆ 9 ಗಂಟೆಯಿಂದ‌ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದಾನೆ. ಬಿಪರ್‌ಜಾಯ್‌ ಚಂಡಮಾರುತ ಹಿನ್ನೆಲೆ ಜೂ.10 ರವರೆಗೆ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಡಲತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ತೀರ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆಯಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇತ್ತ ಕುಮಟಾ, ಕಾರವಾರ ತಾಲೂಕಿನಲ್ಲಿ ಬಿಸಿಲಿನ ವಾತಾವರಣ ಇದೆ.

ಬೆಂಗಳೂರಲ್ಲಿ ಕೆಲವೊಮ್ಮೆ ವಾತಾವರಣವು ಬಿಸಿಲಿನಿಂದ ಕೂಡಿದ್ದರೆ ಮಧ್ಯಾಹ್ನದ ವೇಳೆ ಮೋಡ ಕವಿಯಲಿದೆ. ಸಂಜೆ ಅಥವಾ ರಾತ್ರಿಯಂದು ಮಳೆಯಾಗುವ ಸಾಧ್ಯತೆ ಇದೆ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮೈಸೂರು, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಲಿದೆ. ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ವರುಣ ಅಬ್ಬರಿಸಲಿದ್ದಾನೆ.


ಇದನ್ನೂ ಓದಿ:Mother Dairy: ಬಳಕೆದಾರರ ಮೇಲೆ ‘ಮದರ್ ಡೇರಿ’ ಮಮತೆ, ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ!

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಕಲಬುರಗಿ: 42 ಡಿ.ಸೆ – 27 ಡಿ.ಸೆ
ಗದಗ: 37 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 23 ಡಿ.ಸೆ
ಬೆಳಗಾವಿ: 35 ಡಿ.ಸೆ – 21 ಡಿ.ಸೆ
ಕಾರವಾರ: 33 ಡಿ.ಸೆ – 27 ಡಿ.ಸೆ
ಮಂಗಳೂರು: 34 ಡಿ.ಸೆ – 25 ಡಿ.ಸೆ
ಹೊನ್ನಾವರ: 33 ಡಿ.ಸೆ- 25 ಡಿ.ಸೆ
ಬೆಂಗಳೂರು ನಗರ: 32 ಡಿ.ಸೆ – 22 ಡಿ.ಸೆ

ಉತ್ತರ ಕನ್ನಡದಲ್ಲಿ ವರುಣಾರ್ಭಟ ಇಲ್ಲಿದೆ ನೋಡಿ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಉಡುಪಿ

Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್‌

Chaitra Kundapura : ವಂಚಕಿ ಚೈತ್ರಾ ಜತೆ ಕುಂದಾಪುರದ ಹೆಸರು ಬಳಸಬಾರದು ಎಂಬ ಅರ್ಜಿದಾರರ ದಾವೆಗೆ ಕೋರ್ಟ್‌ ತಾತ್ಕಾಲಿಕವಾಗಿ ಓಕೆ ಎಂದಿದೆ. ಮುಂದಿನ ವಿಚಾರಣೆಯ ಬಳಿಕ ಇದಕ್ಕೆ ಸ್ಪಷ್ಟತೆ ಸಿಗಲಿದೆ.

VISTARANEWS.COM


on

Edited by

Chaitra Kundapura
Koo

ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ ಮಾಡಿರುವ ಕುಂದಾಪುರ ಮೂಲದ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ (Chaitra Kundapura) ಹೆಸರು ಈಗ ಎಲ್ಲೆಡೆ ಫೇಮಸ್‌. ಆದರೆ, ಈಕೆಯ ಹೆಸರನ್ನು ಪದೇಪದೆ ವಂಚನೆಯ ಹೆಸರಲ್ಲಿ ಬಳಸುತ್ತಿರುವುದು ಕುಂದಾಪುರ (Kundapura Name of a town) ಎಂಬ ಊರಿಗೆ ಅಪಮಾನ ಮಾಡಿದಂತಾಗುತ್ತಿದೆ. ಹೀಗಾಗಿ ಆಕೆಯ ಹೆಸರಿನ ಜತೆಗಿರುವ ʻಕುಂದಾಪುರʼ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಎಂದು ಕುಂದಾಪುರದ ವ್ಯಕ್ತಿಯೊಬ್ಬರು ಕೋರ್ಟ್‌ ಮೊರೆ ಹೊಕ್ಕಿದ್ದರು. ಈ ಕೋರ್ಟ್‌ ಈ ಬೇಡಿಕೆಗೆ ತಾತ್ಕಾಲಿಕ ಅಸ್ತು (Court restricts media from using Kundapuara name with Chaitra) ಎಂದಿದೆ.

ವಂಚನೆ ಪ್ರಕರಣವಾಗಿರುವುದರಿಂದ, ಬಿಜೆಪಿ ಟಿಕೆಟ್‌ ವಂಚನೆಯಾಗಿರುವುದರಿಂದ, ಪ್ರಧಾನ ಆರೋಪಿ ಸಾಕಷ್ಟು ಜನಪ್ರಿಯಳಾಗಿರುವುದರಿಂದ ಆಕೆಯ ಹೆಸರು ಮತ್ತು ಸುದ್ದಿ ಗಮನ ಸೆಳೆದಿತ್ತು. ಹೀಗಾಗಿ ಆಕೆಯೊಂದಿಗೆ ಆಕೆಯ ಊರಿನ ಹೆಸರೂ ಜತೆಯಾಗಿ ಬರುತ್ತಿತ್ತು. ಇದು ಸಹಜವಾಗಿ ಅಲ್ಲಿನ ಜನರಿಗೆ ಬೇಸರ ಉಂಟು ಮಾಡಿದೆ.

ಇದನ್ನು ಗಮನಿಸಿದ ಕುಂದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಕೆಯ ಹೆಸರಿನ ಜತೆ ಕುಂದಾಪುರದ ಹೆಸರು ತಳುಕು ಹಾಕುವುದು ಬೇಡ ಎಂದು ಕೋರಿದ್ದರು.

ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್‌ ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್‌ ಶೆಟ್ಟಿ ದಾವೆ ಹೂಡಿದವರು. ನಾನು ಕುಂದಾಪುರ ಮೂಲದವನಾಗಿದ್ದು, ಹೋಟೆಲ್ ನಡೆಸುತ್ತಿದ್ದೇನೆ. ಹೋಟೆಲ್ ಗೆ ಬರುವ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ಅವರು ದಾವೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. 10 ಮತ್ತು 11ನೇ ಶತಮಾನದಲ್ಲಿ ಅಲುಪು ರಾಜವಂಶಸ್ಥರಾದ ಕುಂದವರ್ಮ ಅವರು ಕುಂದಾಪುರದಲ್ಲಿ ಆಳ್ವಿಕೆ ನಡೆಸಿದ್ದು. ಐತಿಹಾಸಿಕ ಕುಂದೇಶ್ವರ ದೇವಸ್ಥಾನ ಸಹ ನಿರ್ಮಿಸಿದ್ದಾರೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಂತರ ಪೋರ್ಚಗೀಸರು, ಜರ್ಮನ್ನರು, ಟಿಪ್ಪುಸುಲ್ತಾನ್‌, ಬ್ರಿಟಿಷರು ಕುಂದಾಪುರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅನೇಕ ಐತಿಹಾಸಿಕ ದೇವಸ್ಥಾಗಳಿಂದ ಕುಂದಾಪುರ ಖ್ಯಾತಿ ಪಡೆದಿದೆ ಎಂದು ದಾವೆಯಲ್ಲಿ ವಿವರಿಸಲಾಗಿತ್ತು.

ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿತ್ತು.

ಇದನ್ನೂ ಓದಿ: Chaitra Kundapura : ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ

ಹೀಗಾಗಿ ಮಾಧ್ಯಮಗಳು ಆಕೆಯ ವಿಚಾರ ಬಂದಾಗ ಕುಂದಾಪುರ ಎಂಬ ಹೆಸರನ್ನು ಉಲ್ಲೇಖಿಸದಂತೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದರು. ಜತೆಗೆ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ಕೂಡಾ ಕೇಳಿದ್ದರು.

ಇದೀಗ ಕೋರ್ಟ್‌ ಅವರ ದಾವೆಯನ್ನು ಸ್ವೀಕರಿಸಿದ್ದು ಮುಂದಿನ ವಿಚಾರಣೆಯ ವರೆಗೆ ಮಾಧ್ಯಮಗಳು ಆಕೆಯ ಹೆಸರಿನ ಜತೆಗೆ ಕುಂದಾಪುರ ಎಂಬ ಹೆಸರನ್ನು ಬಳಸದಂತೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ವಿಚಾರಣೆಯವರೆಗೆ ಈ ನಿರ್ಬಂಧವನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

Continue Reading

ಉಡುಪಿ

Weather report : ರಾಜ್ಯದಲ್ಲಿ ಮಳೆಯಾಟ ಆಟಕ್ಕುಂಟು ಆದರೆ ಲೆಕ್ಕಕ್ಕಿಲ್ಲ..

Rain News : ಉತ್ತರ ಒಳನಾಡಿನ 4 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಉಳಿದಂತೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಸಣ್ಣ ಪ್ರಮಾಣದಲ್ಲಿ (Weather report) ಮಳೆಯಾಗಲಿದೆ.

VISTARANEWS.COM


on

Edited by

Girls walking in rain
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದ ಹಲವೆಡೆ ಮಳೆರಾಯ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾನೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Weather report) ನಿರೀಕ್ಷೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮಳೆಯಾಟ (Rain News) ಆಟಕ್ಕುಂಟು ಲೆಕ್ಕಿಲ್ಲ ಎಂಬಂತೆ ಆಗಿದೆ.

ದಕ್ಷಿಣ ಒಳನಾಡಲ್ಲಿ ಸಣ್ಣದೊಂದು ಮಳೆ

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಭಾಗದಲ್ಲಿ ಚದುರಿದಂತೆ ಮಳೆಯಾಗಲಿದೆ. ಉಳಿದಂತೆ ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಮಂಡ್ಯ ಅತಿ ಕಡಿಮೆ ಮಳೆಯಾಗಲಿದೆ.

ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐಎಂಡಿ ಯೆಲ್ಲೋ ಅಲರ್ಟ್‌ ನೀಡಿದೆ.

ಇದನ್ನೂ ಓದಿ: Cylinder blast : ಸಿಲಿಂಡರ್‌ ಸ್ಫೋಟ; 7 ದಿನಗಳು ನರಳಾಡಿ ಪ್ರಾಣಬಿಟ್ಟ ಮಹಿಳೆ

ಸೆ.22ರ ಶುಕ್ರವಾರ ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಭಾರಿ ಮಳೆಯು ಬಿಳಗಿಯಲ್ಲಿ 10 ಹಾಗೂ ಮಂಠಾಳ 9, ಖಜೂರಿ 8 ಹಾಗೂ ಕಲಬುರಗಿ, ಸುತ್ತೂರಲ್ಲಿ ತಲಾ 7 ಸೆಂ. ಮೀ ಮಳೆಯಾಗಿದೆ.

ಅಡಕಿ, ಚಿತ್ತಾಪುರ, ಸೇಡಂ, ಸುಲೇಪೇಟ, ಬುಕ್ಕಪಟ್ಟಣ, ಕೊಟ್ಟಿಗೆಹಾರ, ಹೊಸಕೋಟೆಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಹಾಲಿಂಗಪುರ, ಕಲಬುರ್ಗಿ AWS, ಚಿಂಚೋಳಿ, ಗುಂಡಗುರ್ತಿ, ಕೋಲಾರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಕದ್ರಾ, ರಬಕವಿ, ಹುಮನಾಬಾದ್, ಮಹಾಗೋವಾ, ಕಮಲಾಪುರ, ಜಾಲಹಳ್ಳಿ, ಮುದಗಲ್ ಹಾಗೂ ಚಿಕ್ಕಬಳ್ಳಾಪುರ , ಸಿ ಆರ್ ಪಟ್ನಾದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಮಂಕಿ, ಗೋಕರ್ಣ, ಗಬ್ಬೂರು , ಶಹಾಪುರ, ಹುಣಸಗಿ, ನಾರಾಯಣಪುರ ಎಚ್‌ಎಂಎಸ್ , ಆಲಮಟ್ಟಿ ಎಚ್‌ಎಂಎಸ್, ತಾಳಿಕೋಟೆ , ಆಳಂದ , ಸೇಡಬಾಳ ಹಾಗೂ ಭಾಲ್ಕಿ, ದೇವನಹಳ್ಳಿ, ಕಳಸ, ಯಗಟಿ, ಮಾಲೂರು, ಚಾಮರಾಜನಗರ, ಮಂಡ್ಯದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಪುತ್ತೂರು Hms, ಹೊನ್ನಾವರ, ಕುಮಟಾ, ಕಾರವಾರ, ಹಳಿಯಾಳ , ಕಕ್ಕೇರಿ, ಶೋರಾಪುರ, ಕೆಂಬಾವಿ, ವಿಜಯಪುರ, ನೆಲೋಗಿ, ಯೆಡ್ವಾಡ ಕೂಡಲಸಂಗಮ, ಮಧುಗಿರಿ, ಚಿಕ್ಕನಹಳ್ಳಿ AWS , ರಾಯಲ್ಪಾಡು, ಟಿ ನರಸೀಪುರ ಸೋಮವಾರಪೇಟೆ, ಹಾರಂಗಿ, ಚಿಂತಾಮಣಿ, ಮೈಸೂರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಉಡುಪಿ

Chaitra Kundapura : ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ

Chaitra Kundapura: ಪ್ರಖರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಆರು ಮಂದಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

VISTARANEWS.COM


on

Edited by

Chaitra and gang
ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್‌ನ ಸದಸ್ಯರಾದ ಗಗನ್‌ ಕಡೂರು, ರಮೇಶ್‌, ಚನ್ನಾನಾಯಕ್‌, ಧನರಾಜ್‌, ಶ್ರೀಕಾಂತ್‌ ನಾಯಕ್‌ ಮತ್ತು ಪ್ರಸಾದ್‌ ಬೈಂದೂರು
Koo

ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್‌ ಆದೇಶಿಸಿದೆ.

ಸೆ. 12ರಂದು ಬಂಧಿತರಾಗಿದ್ದ ಆರೋಪಿಗಳ ಸಿಸಿಬಿ ಪೊಲೀಸರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ, ಪೊಲೀಸರು ಚೈತ್ರಾ ಸೇರಿ ಬಂಧಿತ ಏಳು ಆರೋಪಿಗಳನ್ನ ಶನಿವಾರ ಮೂರನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತ ಏಳು ಆರೋಪಿಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದ ಚೈತ್ರಾ ಆಂಡ್ ಗ್ಯಾಂಗ್ ಈಗ ಪರಪ್ಪನ ಅಗ್ರಹಾರ ಜೈಲಿನ ಕಡೆ ಮುಖ ಮಾಡಿದ್ದಾರೆ. ಸೆಪ್ಟೆಂಬರ್‌ 26ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕಳೆದ ಸೆಪ್ಟೆಂಬರ್‌ 12ರಂದು ಚೈತ್ರಾ ಕುಂದಾಪುರಳನ್ನು (Chaitra Kundapura) ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಮರುದಿನ ಮುಂಜಾನೆಯೇ ಬೆಂಗಳೂರಿಗೆ ಕರೆದುಕೊಂಡು ಬಂದು ಸೆ. 13ರಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್‌ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ (CCB Custody) ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಪ್ರಕರಣದ ಪ್ರಧಾನ ಆರೋಪಿಯಾಗಿರುವ ಚೈತ್ರಾ ಕುಂದಾಪುರ, ಎರಡನೇ ಆರೋಪಿ ಗಗನ್‌ ಕಡೂರು, ನಾಲ್ಕನೇ ಆರೋಪಿ(ಆರೆಸ್ಸೆಸ್‌ ಪ್ರಚಾರಕನ ವೇಷಧಾರಿ) ರಮೇಶ್‌ ಕಡೂರು, ಐದನೇ ಆರೋಪಿ ಚನ್ನಾ ನಾಯ್ಕ್‌ (ಬೆಂಗಳೂರಿನ ಬಿಜೆಪಿ ರಾಷ್ಟ್ರೀಯ ನಾಯಕನೆಂದು ಪೋಸ್‌ ಕೊಟ್ಟವನು), ಆರನೇ ಆರೋಪಿ ಧನರಾಜ್‌ (ರಮೇಶ್‌ ಕಡೂರ್‌ ಮತ್ತು ಚನ್ನಾ ನಾಯ್ಕನನ್ನು ಸಂಪರ್ಕಿಸಿ ಕೊಟ್ಟವನು), ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್‌ ನಾಯಕ್‌ ಹಾಗೂ ಎಂಟನೇ ಆರೋಪಿ ಪ್ರಸಾದ್‌ ಬೈಂದೂರು (ಗೋವಿಂದ ಪೂಜಾರಿ ಆಪ್ತ ಮತ್ತು ಚೈತ್ರಾ ಕುಂದಾಪುರಳನ್ನು ಪರಿಚಯ ಮಾಡಿಕೊಟ್ಟವನು) ಅವರು 10 ದಿನಗಳ ಸಿಸಿಬಿ ಕಸ್ಟಡಿ ಮುಗಿಸಿದ್ದಾರೆ. ಇದೀಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಾಲಶ್ರೀಗೆ ವಿಚಾರಣೆಗೆ ಸೆ. 29ರವರೆಗೆ ಸಮಯವಿದೆ

ಈ ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವಂ ಹಾಲಶ್ರೀ ಸ್ವಾಮೀಜಿ (Halashri swameeji) ತಲೆಮರೆಸಿಕೊಂಡಿದ್ದರು. ಅವರನ್ನು ಸೆಪ್ಟೆಂಬರ್‌ 19ರಂದು ಒಡಿಶಾದ ಕಟಕ್‌ನಲ್ಲಿ ಬಂಧಿಸಲಾಗಿತ್ತು. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ 10 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದ ಪರಿಣಾಮ ಸೆ. 29ರವರೆಗೆ ವಿಚಾರಣೆಗೆ ಅವಕಾಶವಿದೆ.

ವಿಚಾರಣೆಯ ವೇಳೆ ಏನೇನಾಗಿದೆ?

ಆರೋಪಿಗಳು ಕಳೆದ 10 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿ ಇದ್ದಾರಾದರೂ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ ಅನಾರೋಗ್ಯದ ನಾಟಕವಾಡಿ ಮೂರುವರೆ ದಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಲಗಿದ್ದಳು. ಉಳಿದ ಎಲ್ಲರೂ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದರು.

ಕಸ್ಟಡಿಯಲ್ಲಿದ್ದ ವೇಳೆ ಚೈತ್ರಾ ಎಂಡ್‌ ಗ್ಯಾಂಗ್‌ ತಾವು ಮಾಡಿರುವ ಮೋಸ ಮತ್ತು ವಂಚನೆಯನ್ನು ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ಸಿಸಿಬಿ ಅಧಿಕಾರಿಗಳು ಈ ಆರೋಪಿಗಳು ಹಣವನ್ನು ಎಲ್ಲೆಲ್ಲಿ ಇಟ್ಟಿದ್ದರು ಎಂಬ ಮಾಹಿತಿಯನ್ನು ಪಡೆದುಕೊಂಡು ಅಲ್ಲೆಲ್ಲ ಭೇಟಿ ನೀಡಿ ಸುಮಾರು 3.67 ಕೋಟಿ ರೂ. ಮೌಲ್ಯದ ನಗ ಮತ್ತು ನಗದನ್ನು ವಶಕ್ಕೆ ಪಡೆದಿದೆ.

ವಂಚನೆಯಲ್ಲಿ‌ ಅತಿ ಹೆಚ್ಚು ಹಣ ಪಡೆದಿರುವುದು ಚೈತ್ರಾ ಕುಂದಾಪುರ ಎನ್ನುವುದು ಬೆಳಕಿಗೆ ಬಂದಿದೆ. 81 ಲಕ್ಷ ನಗದು, 23 ಲಕ್ಷ ಮೌಲ್ಯದ ಚಿನ್ನಾಭರಣ, 1.8 ಕೋಟಿ ಮೊತ್ತದ ನಿಶ್ಚಿತ ಠೇವಣಿ ಹೊಂದಿದ್ದ ಚೈತ್ರಾ 12 ಲಕ್ಷ ಮೌಲ್ಯದ ಕಿಯಾ ಕಾರು ಖರೀದಿಸಿದ್ದಾಳೆ.

ಸಿಸಿಬಿ ಪೊಲೀಸರು ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿರುವ ಗಗನ್‌ ಕಡೂರ್‌ನನ್ನು ಚಿಕ್ಕಮಗಳೂರು, ಕಡೂರು ಮತ್ತು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ನಕಲಿ ಆರೆಸ್ಸೆಸ್‌ ಪ್ರಚಾರಕನ ಭೇಟಿ, ಕಡೂರಿನ ಮನೆ, ಶಿವಮೊಗ್ಗದಲ್ಲಿ ಹಣ ಹಸ್ತಾಂತರ ಮಾಡಿದ ಜಾಗಗಳಲ್ಲೆಲ್ಲ ಮಹಜರು ಮಾಡಿಸಿದ್ದಾರೆ.

Continue Reading

ಉಡುಪಿ

Weather Report : ನಾಳೆವರೆಗೂ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

Rain News : ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಮುನ್ಸೂಚನೆ ಇದ್ದು, ಮುಂಗಾರು ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಲ್ಲಿ (Weather report) ಸಾಮಾನ್ಯವಾಗಿರಲಿದೆ.

VISTARANEWS.COM


on

Edited by

Rain day Girl enjoying
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಸೆ.23-24ರಂದು ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಆದರೆ ಉತ್ತರ ಒಳನಾಡಲ್ಲಿ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಉತ್ತರ ಕರ್ನಾಟಕದಲ್ಲಿ ಬಿಡುವೇ ಇಲ್ಲ

ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚೆನಯನ್ನು (weather report) ನೀಡಲಾಗಿದೆ. ಎಡಬಿಡದೆ ಮಳೆ ಸುರಿಯಲಿದ್ದು, ಜತೆಗೆ ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ದಕ್ಷಿಣ ಒಳನಾಡಲ್ಲಿ ಲಘು ಮಳೆ

ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ತಗ್ಗಿದ ಅಬ್ಬರ

ಕರಾವಳಿಯಲ್ಲಿ ಮಳೆ ಅಬ್ಬರ ತಗ್ಗಿದೆ. ಆದಾಗ್ಯೂ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ.

ಬೆಂಗಳೂರಲ್ಲಿ ಸಂಜೆಗೆ ಮಳೆ ಕಾಟ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವೊಮ್ಮೆ ಬಿಸಿಲಿನ ತಾಪ ಜಾಸ್ತಿ ಇದ್ದರೆ, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Cauvery Protest: ಕಾವೇರಿ ಕಿಚ್ಚು: ಮಂಡ್ಯ ಬಂದ್‌; ಹೆದ್ದಾರಿಯಲ್ಲಿ ಉರುಳುಸೇವೆ, ರೈತರ ಜತೆ ಸೇರಿದ ಬಿಜೆಪಿ, ಜೆಡಿಎಸ್

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 29 ಡಿ.ಸೆ – 20 ಡಿ.ಸೆ
ಮಂಗಳೂರು: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 21 ಡಿ.ಸೆ
ಗದಗ: 31 ಡಿ.ಸೆ – 21 ಡಿ.ಸೆ
ಹೊನ್ನಾವರ: 31 ಡಿ.ಸೆ- 24 ಡಿ.ಸೆ
ಕಲಬುರಗಿ: 31 ಡಿ.ಸೆ – 23 ಡಿ.ಸೆ
ಬೆಳಗಾವಿ: 28 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 24 ಡಿ.ಸೆ

ಸೆಪ್ಟೆಂಬರ್‌ 23ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯದಲ್ಲಿ ಒಳಹರಿವು, ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗರಿಷ್ಠ ಮಟ್ಟ (ಅಡಿಗಳಲ್ಲಿ)ಇಂದಿನ ಮಟ್ಟ (ಅಡಿಗಳಲ್ಲಿ)ಒಳ ಹರಿವು (ಕ್ಯೂಸೆಕ್)ಹೊರ ಹರಿವು (ಕ್ಯೂಸೆಕ್)
ಕೆಆರ್‌ಎಸ್ ಜಲಾಶಯ (KRS Dam)38.0420.6160165735
ಆಲಮಟ್ಟಿ ಜಲಾಶಯ
(Almatti Dam)
519.6114.73405405
ಮಲಪ್ರಭಾ ಜಲಾಶಯ (Malaprabha Dam)633.8021.440194
ಘಟಪ್ರಭಾ ಜಲಾಶಯ
(Ghataprabha Dam)
662.9142.402311181
ತುಂಗಾಭದ್ರಾ ಜಲಾಶಯ (Tungabhadra Dam)497.7162.92437810316
ಭದ್ರಾ ಜಲಾಶಯ (Bhadra Dam)657.7343.23290290
ಕಬಿನಿ ಜಲಾಶಯ (Kabini Dam)696.1314.8031664390
ಹಾರಂಗಿ
(Harangi Dam)
871.388.0613352791
ಲಿಂಗನಮಕ್ಕಿ (Linganamakki Dam) 554.4468.3054935393
ಹೇಮಾವತಿ
(Hemavathi Dam)
890.5817.6649861300

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Indian Women Cricket Team
ಕ್ರಿಕೆಟ್1 hour ago

Asian Games 2023: ಬಾಂಗ್ಲಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಮೃತಿ ಮಂಧಾನಾ ಪಡೆ

Raja Marga world heart day
ಅಂಕಣ1 hour ago

Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!

Sudha Murty
ಕರ್ನಾಟಕ2 hours ago

Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್‌

Cauvery water Dispute
ಕರ್ನಾಟಕ2 hours ago

Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?

Bus Accident In Raichur
ಕರ್ನಾಟಕ2 hours ago

Bus Accident: ನಿಂತಿದ್ದ ಲಾರಿಗೆ ಸಾರಿಗೆ ಬಸ್‌ ಡಿಕ್ಕಿ; 32 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

DUSU Election Result
ದೇಶ3 hours ago

DUSU Election: ದೆಹಲಿ ವಿವಿಯಲ್ಲಿ ಎಬಿವಿಪಿ ದರ್ಬಾರ್;‌ ಚುನಾವಣೆಯಲ್ಲಿ ಭಾರಿ ಗೆಲುವು, ದೇಶ ಮೊದಲು ಎಂದ ಬಿಜೆಪಿ

fruits and cold cough
ಆರೋಗ್ಯ4 hours ago

Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

new kannada book yabli
ಕಲೆ/ಸಾಹಿತ್ಯ4 hours ago

Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ

cryptocurrency fraud
ಅಂಕಣ4 hours ago

ಸೈಬರ್‌ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!

pak human right
ಕ್ರಿಕೆಟ್4 hours ago

ವಿಸ್ತಾರ ಸಂಪಾದಕೀಯ: ಮಾನವ ಹಕ್ಕುಗಳ ಪ್ರಶ್ನೆ; ಪಾಕ್‌ ಮೊದಲು ತನ್ನ ಹುಳುಕು ಸರಿಪಡಿಸಿಕೊಳ್ಳಲಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

dina bhavishya
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

ಟ್ರೆಂಡಿಂಗ್‌