Shivaji Statue: ಹೆಬ್ಬಾಳ್ಕರ್‌ಗೆ ಜಾರಕಿಹೊಳಿ ಸೆಡ್ಡು; ಮಾ. 2ರಂದೇ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡುವೆನೆಂದ ಸಾಹುಕಾರ್‌ - Vistara News

ಕರ್ನಾಟಕ

Shivaji Statue: ಹೆಬ್ಬಾಳ್ಕರ್‌ಗೆ ಜಾರಕಿಹೊಳಿ ಸೆಡ್ಡು; ಮಾ. 2ರಂದೇ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡುವೆನೆಂದ ಸಾಹುಕಾರ್‌

Shivaji Statue: ಮಾರ್ಚ್ 5ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಮೊದಲು ಸರ್ಕಾರದ ಕಡೆಯಿಂದ ಪ್ರತಿಮೆ ಉದ್ಘಾಟಿಸುವುದಾಗಿ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

VISTARANEWS.COM


on

Shivaji statue row
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಜಿಲ್ಲೆಯಲ್ಲಿ ಮರಾಠ ಮತಗಳ ಓಲೈಕೆಗಾಗಿ ರಾಜಕಾರಣಿಗಳು ಮುಂದಾಗಿದ್ದು, ಇದರ ಜತೆಗೆ ಪ್ರತಿಮೆ ಪಾಲಿಟಿಕ್ಸ್‌ ಕೂಡ ತಾರಕಕ್ಕೇರಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸ ಗಡ ಕೋಟೆಯಲ್ಲಿ ನಿರ್ಮಿಸಿರುವ ಛತ್ರಪತಿ ಶಿವಾಜಿ ಪ್ರತಿಮೆ (Shivaji Statue) ಲೋಕಾರ್ಪಣೆ ವಿಷಯದಲ್ಲಿ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಒಂದೆಡೆ ಮಾರ್ಚ್‌ 5ರಂದು ಪ್ರತಿಮೆ ಲೋಕಾರ್ಪಣೆ ಮಾಡುತ್ತೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರೆ, ಮತ್ತೊಂದೆಡೆ ಮಾರ್ಚ್‌ 2ರಂದೇ ನಾವು ಸರ್ಕಾರದ ಕಡೆಯಿಂದ ಪ್ರತಿಮೆ ಉದ್ಘಾಟಿಸುತ್ತೇವೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಘೋಷಿಸಿದ್ದಾರೆ.

ಮಾರ್ಚ್ 5ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಪ್ರತಿಮೆ ಲೋಕಾರ್ಪಣೆ ವಿಚಾರಕ್ಕೆ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಮಾರ್ಚ್‌ ೨ರಂದು ಸರ್ಕಾರದ ವತಿಯಿಂದ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರೂ ನಾನು ಪ್ರತ್ಯೇಕ ಉದ್ಘಾಟನೆ ಮಾಡುತ್ತೇನೆ ಎಂದು ಹೇಳುವುದು ಒಳ್ಳೆಯದಲ್ಲ. ನಾನು ಮಾರನೇ ದಿನ 10 ಸಾವಿರ ಜನರ ಕರೆದೊಯ್ಯುತ್ತೇನೆ ಎಂದು ಅವರು ಹೇಳಿದರೆ ಅದು ನಡೆಯಲ್ಲ. ಅದು ಅವರ ಶಾಸಕ ಸ್ಥಾನಕ್ಕೂ ಗೌರವ ತರಲ್ಲ. ಅವರ ಪಕ್ಷಕ್ಕೂ ಒಳ್ಳೆಯದಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮಹಾನುಭಾವನ ವಿಚಾರದಲ್ಲಿ ಕೆಳಮಟ್ಟಕ್ಕೆ ಇಳಿಯಲ್ಲ

ಸಿಎಂ ಹಾಗೂ ಸರ್ಕಾರ ಉದ್ಘಾಟನೆ ಮಾಡಿದ ಮೇಲೆ ಮತ್ತೊಮ್ಮೆ ಉದ್ಘಾಟನೆ ಮಾಡುವುದರಲ್ಲಿ ಏನು ಅರ್ಥವಿದೆ? ಶಿವಾಜಿಯಂಥ ಮಹಾನುಭಾವನ ವಿಚಾರದಲ್ಲಿ ರಾಜಕೀಯವಾಗಿ ಕೆಳಮಟ್ಟಕ್ಕೆ ಇಳಿಯಲ್ಲ, ಅವರು ಇಳಿಯಲಿ. ಸಿಎಂ ಲೋಕಾರ್ಪಣೆ ಮಾಡಿದ ಬಳಿಕ ಆ ಅಧ್ಯಾಯ ಮುಗಿಯಲಿದೆ ಎಂದು ಹೇಳಿದರು.

ಇದನ್ನೂ ಓದಿ | Hasana JDS politics : ಹಾಸನದ ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲೋರ‍್ಯಾರು? ನಾಳೆ ಎಚ್‌ಡಿಕೆ ಸಮ್ಮುಖದಲ್ಲಿ ಜೆಡಿಎಸ್‌ ಟಿಕೆಟ್ ಫೈನಲ್‌

ನಾವು ಛತ್ರಪತಿ ಶಿವಾಜಿ ಪ್ರತಿಮೆ ವಿಚಾರವಾಗಿ ವಿವಾದ ಮಾಡಲು ಹೋಗಲಿಲ್ಲ. ಯಾವಾಗ ಅವರು ಕಾರ್ಯಕ್ರಮವನ್ನು ಕಾಂಗ್ರೆಸ್‌ಮಯ ಮಾಡಲು ಹೋದರಲ್ಲ ಆಗ ಬಾಯಿ ಬಿಟ್ಟಿದ್ದೇವೆ. ಅವರು ಖರ್ಗೆ, ಸಿದ್ದರಾಮಯ್ಯರನ್ನು ಕರೆ ತರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕರೆ ತರಲಿ ಆದರೆ ಅದರಲ್ಲಿ ಒಬ್ಬನೇ ಒಬ್ಬ ಸರ್ಕಾರದ ಪ್ರತಿನಿಧಿ ಹೆಸರಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮಾತನಾಡಿದ್ದೇನೆ. ಅಲ್ಲಿಯವರೆಗೆ ನಾನು ಮಾತನಾಡಿದ್ದರೆ ತೋರಿಸಿ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಹೇಳಿದರು.

ಸಿ.ಪಿ.ಯೋಗೇಶ್ವರ್‌ ಪ್ರವಾಸೋದ್ಯಮ ಸಚಿವರಿದ್ದಾಗ ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಅನುದಾನ ತರಲು ರಮೇಶ್ ಜಾರಕಿಹೊಳಿ ಅಡ್ಡಿ ಎಂಬ ಚನ್ನರಾಜ ಹಟ್ಟಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅಷ್ಟು ಕೀಳುಮಟ್ಟದ ರಾಜಕಾರಣವನ್ನು ಜೀವನದಲ್ಲಿ ನಾನು ಮಾಡಿಲ್ಲ, ಮಾಡುವುದೂ ಇಲ್ಲ. ಆ ರೀತಿ ಮಾಡುವುದು ಅವರಿಗೆ ಶೋಭೆ ತರುತ್ತದೆ, ಆ ಮಟ್ಟಕ್ಕೆ ಇಳಿಯುವುದಕ್ಕೆ ಅವರೇ ಕಾರಣ. ಹಾಗೆ ನಾನೇನಾದಾರೂ ಮಾಡಿದರೆ ಕೊಲ್ಲಾಪುರ ಲಕ್ಷ್ಮಿ ತಾಯಿ ನೋಡಿಕೊಳ್ಳಲಿ ಎಂದು ಹೇಳಿದರು.

ಮಾರ್ಚ್ 2ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರ ಪ್ರತಿಕ್ರಿಯಿಸಿ, ಆ ದಿನ ಅರ್ಧ ಗಂಟೆಯ ಕಾರ್ಯಕ್ರಮ ನಡೆಯುತ್ತದೆ, ಆ ಕಾರ್ಯಕ್ರಮ ಮುಗಿಸಿ ನಂದಗಡಕ್ಕೆ ಹೋಗಬೇಕು. ಕಾರ್ಯಕ್ರಮಕ್ಕೆ ಜನ ಸೇರಿಸುವ ಬಗ್ಗೆ ಸಂಜಯ್ ಪಾಟೀಲ್, ಧನಂಜಯ ಜಾಧವ್ ಕೇಳಿ ನಿರ್ಧಾರ ಮಾಡಲಾಗುವುದು. ನಾನು ಗೋಕಾಕ್ ಶಾಸಕ, ಬಿಜೆಪಿ ಪ್ರಮುಖ ನಾಯಕನಾಗಿದ್ದೇನೆ. ಪಕ್ಷ ಹೇಳಿದ ಹಾಗೇ ಕೆಲಸ ಮಾಡಬೇಕಾಗುತ್ತದೆ. ಇದರಲ್ಲಿ ನಮ್ಮ ಸ್ವಂತ ನಿರ್ಣಯ ಇರಲ್ಲ. ನಾನೇ ಸ್ವಂತ ದುಡ್ಡು ಹಾಕಿದ್ದೇನೆ ಎಂದಾಗ ಸರ್ಕಾರಿ ದುಡ್ಡು ಎಂದು ತೋರಿಸಲು ನಾನು ಎಂಟ್ರಿ ಆಗಬೇಕಾಯಿತು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಚಿವರಾಗಿದ್ದಾಗ 50 ಲಕ್ಷ ರೂ. ಅನುದಾನ ನೀಡಿದ್ದರು ಎಂಬ ಚನ್ನರಾಜ ಹಟ್ಟಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ಬಗ್ಗೆ ಮಾಹಿತಿ ಇಲ್ಲ, ನೀಡಿದ್ದರೆ ಸ್ವಾಗತ. ಶಾಸಕರ ಲೆಟರ್ ನೋಡಿ ಮಾತನಾಡಬೇಡಿ, ಸರ್ಕಾರದ ಆದೇಶ ತೋರಿಸಿದರೆ ಅದಕ್ಕೆ ಮಾನ್ಯತೆ ಇದೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದಿನ ರಾಜಕೀಯ ಹೋರಾಟ ಹೇಗಿರುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ನಮ್ಮ ನಾಯಕರು ನಿರ್ಣಯ ಮಾಡುತ್ತಾರೆ, ನಾವು ಸ್ಟಾರ್ಟ್ ಮಾಡಿದ್ದೇವೆ ಅಷ್ಟೇ. ಬೇಕಾದವರೂ ಅಭ್ಯರ್ಥಿ ಆಗಲಿ, ಇವರೇ ಇಬ್ಬರು ಸೋಲಿಸುತ್ತಾರೆ ಎಂದು ಸಂಜಯ್ ಪಾಟೀಲ್, ಧನಂಜಯ ಜಾಧವ್‌ರನ್ನು ತೋರಿಸಿದರು.

ಮಾರ್ಚ್ 2ರ ಬಳಿಕ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಕಿ ಹೇಗೆ ಕೆಲಸ ಮಾಡಬೇಕೆಂದು ಪ್ಲಾನ್‌ ಮಾಡಿದ್ದೇವೆ, ಅದರಂತೆ ಕೆಲಸ ಮಾಡುತ್ತೇವೆ. ಯಾವ ಗ್ರಾಮದಲ್ಲಿ ಯಾರು ಇರಬೇಕು ಯಾರು ಉಸ್ತುವಾರಿ ತಗೆದುಕೊಳ್ಳಬೇಕು ಎಂಬ ನಿರ್ಣಯ ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದರು.

ಹಿರೇಬಾಗೇವಾಡಿಯಲ್ಲಿ 15 ವರ್ಷಗಳಿಂದ ಬಸವಣ್ಣ ಮೂರ್ತಿ ಅಧಿಕೃತ ಲೋಕಾರ್ಪಣೆ ಮಾಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ಶಾಸಕಿಗೆ ಕೇಳಬೇಕು. ನಮಗೆ ಶಿವಾಜಿ, ಬಸವಣ್ಣ, ಅಂಬೇಡ್ಕರ್ ಬಗ್ಗೆ ಅಷ್ಟೇ ಗೌರವ ಇದೆ ಎಂದ ಅವರು, ಶಿವಾಜಿ ಮೇಲಿನ ಕಾಳಜಿ ಬಸವಣ್ಣ ಮೇಲೆ ಶಾಸಕಿಗೆ ಇಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬಸವಣ್ಣವರ ಸಮುದಾಯದ ಮತ ಕಡಿಮೆ ಇದೆ, ಅದಕ್ಕಾಗಿ ಲೋಕಾರ್ಪಣೆಗೆ ಮುಂದಾಗಿಲ್ಲ ಎಂದು ಟೀಕಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಗೋಕಾಕ್ ಬಿಟ್ಟು ಬರಲ್ಲ. ಅವರೇನೂ ನಮ್ಮಂತವರು ಎದುರಿಸುವ ವ್ಯಕ್ತಿ ಅಲ್ಲ ಎಂದರು. ಇದೇ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಸಿದ್ದರಾಮಯ್ಯ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಪಕ್ಷದ ಪ್ರಚಾರ ಅವರು ಮಾಡಲಿ, ಮಾರ್ಚ್ 2ರ ಬಳಿಕ ನಾವು ಪ್ರಚಾರ ಮಾಡುತ್ತೇವೆ. ಅದಕ್ಕಾಗಿ ಒಂದು ಕಮಿಟಿ ಮಾಡಿದ್ದು, ಅದರಲ್ಲಿ ನಾನು ಇದ್ದೇನೆ ಎಂದರು.

ಇದನ್ನೂ ಓದಿ | BY Vijayendra : ಮತ್ತೆ ಸದ್ದು ಮಾಡಿದ ಮುಂದಿನ ಸಿಎಂ ವಿಜಯೇಂದ್ರ ಪ್ರಸ್ತಾಪ ; ಬಿಜೆಪಿ ಶಾಸಕರಿಂದಲೇ ಕೇಳಿಬಂದ ಹೇಳಿಕೆ

ಕನಕಪುರ ಜವಾಬ್ದಾರಿ ಕೊಟ್ಟರೆ ಹೋಗುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಜವಾಬ್ದಾರಿ ಕೊಟ್ಟರೆ ಕನಕಪುರಕ್ಕೆ ಹೋಗುತ್ತೇನೆ. ಕನಕಪುರದಲ್ಲಿ ಅಷ್ಟು ದೊಡ್ಡ ಲೀಡರ್ ಅಲ್ಲ ಅವನು, ಅಡ್ಜಸ್ಟ್‌ಮೆಂಟ್ ರಾಜಕಾರಣದ ಲೀಡರ್ ಅವನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಅಮಿತ್ ಶಾ ಅವರನ್ನು ಭೇಟಿಯಾಗಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಶುಕ್ರವಾರ ಭೇಟಿಯಾಗಿದ್ದೇನೆ, ಮೊನ್ನೆ ಕೊಲ್ಲಾಪುರದಲ್ಲೂ ಭೇಟಿಯಾಗಿದ್ದೆ ಎಂದ ಅವರು, ಸಿಡಿ ಷಡ್ಯಂತ್ರ ಪ್ರಕರಣ ಸಿಬಿಐ ತನಿಖೆ ವಹಿಸುವ ವಿಚಾರಕ್ಕೆ ಪ್ರತಿಕ್ರಯಿಸಿ, ಅದರ ಬಗ್ಗೆ ಚರ್ಚೆ ನಡೆದಿದೆ. ಅವೆಲ್ಲಾ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಯೋಗೇಂದ್ರ ನೇಮಕ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ರೆಡ್ಡಿ ಬೆಂಬಲ

Rajya Sabha Election: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಅವರು ಯೋಗೇಂದ್ರ ವಿಕ್ರಂ ಅವರನ್ನು ತಮ್ಮ ಪಕ್ಷದ ಪರವಾಗಿ ಚುನಾವಣೆ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ.

VISTARANEWS.COM


on

Rajya Sabha Elections Yogendra appointed as KRPP agent Reddy supports to Congress
Koo

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ಮಂಗಳವಾರ (ಫೆ. 27) ನಡೆಯಲಿರುವ ಚುನಾವಣೆ (Rajya Sabha Election) ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ (Janardhana Reddy) ಅವರು ಯೋಗೇಂದ್ರ ವಿಕ್ರಂ (Yogendra Vikram) ಅವರನ್ನು ಚುನಾವಣೆ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ.

ಈ ಬಗ್ಗೆ ವಿಕ್ರಂ ಅವರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಸೋಮವಾರ ಪತ್ರ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು.

ರಾಜ್ಯಸಭಾ ಚುನಾವಣೆ (Rajya Sabha Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಜೋರಾಗಿದೆ. ಬಹುಮತ ಇರುವ ಕಾಂಗ್ರೆಸ್‌ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯನ್ನು ತಮ್ಮತ್ತ ಸೆಳೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ರೆಡ್ಡಿ ಅವರು ಸಿಎಂ ನಿವಾಸ ಕಾವೇರಿಯಲ್ಲಿ ಸೋಮವಾರ ಭೇಟಿ ಮಾಡಿರುವುದು ಇದನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಂಬಂಧಿಸಿ ರಾಜ್ಯಸಭಾ ಚುನಾವಣೆ ಏಜೆಂಟ್‌ ಆಗಿ ಯೋಗೇಂದ್ರ ವಿಕ್ರಂ ಅವರನ್ನು ನೇಮಕ ಮಾಡಲಾಗಿದೆ. ಇವರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಪತ್ರ ಕೊಡುವ ವೇಳೆ ಡಿ.ಕೆ. ಶಿವಕುಮಾರ್‌ ಹಾಗೂ ಶಿವರಾಜ್‌ ತಂಗಡಗಿ ಇರುವುದು ಈ ಅನುಮಾನವನ್ನು ಮತ್ತಷ್ಟು ದೃಢಪಡಿಸಿದೆ.

ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ ಜತೆಗಿದ್ದರು.

ಈ ವರೆಗೂ ಜನಾರ್ದನ ರೆಡ್ಡಿ ಅವರು ಬಿಜೆಪಿ ಪರವಾಗಿಯೇ ಮಾತನಾಡುತ್ತಿದ್ದರು. ಅವರು ಬಿಜೆಪಿಗೆ ಇಲ್ಲವೇ ಬಿಜೆಪಿ – ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಅವರು ಕಾಂಗ್ರೆಸ್‌ ಪಾಳೆಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಕರೆತರುವಲ್ಲಿ, ಅವರ ಬೆಂಬಲ ಪಡೆಯುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ನಮಗೆ ನೀವು-ನಿಮಗೆ ನಾವು

ರೆಡ್ಡಿ ಪಕ್ಷೇತರ ಶಾಸಕರಾಗಿರುವ ಕಾರಣ ಅವರಿಗೆ ಇಂಥದ್ದೇ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ನಿಯಮ ಇಲ್ಲ. ಅಲ್ಲದೆ, ಅವರು ಪಕ್ಷೇತರರಾಗಿರುವುದರಿಂದ ಆಡಳಿತ ಪಕ್ಷದವರನ್ನು ಚೆನ್ನಾಗಿ ಇಟ್ಟುಕೊಂಡರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಅದಕ್ಕೆ ಹೆಚ್ಚಿನ ಅನುದಾನವನ್ನು ತರಬಹುದಾಗಿದೆ. ಇದನ್ನೇ ದಾಳವಾಗಿ ಬಳಸಿಕೊಂಡ ಡಿಸಿಎಂ ಡಿ.ಕೆ. ಶಿವಕುಮಾರ್‌ ಶುಕ್ರವಾರ ವಿಧಾನಸಭೆಯಲ್ಲಿ ರೆಡ್ಡಿ ಅವರ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸಹಕಾರ ಕೊಡುವೆ, ಪಕ್ಷಕ್ಕೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದ್ದಾರೆನ್ನಲಾಗಿದೆ.

ಕೆಲಸ ಮಾಡಿಕೊಟ್ಟಿರುವ ಡಿಕೆಶಿ!

ಒಟ್ಟು ನಾಲ್ಕೂ ಪಕ್ಷೇತರರ ಮತಗಳನ್ನು ಸಹ ಕಾಂಗ್ರೆಸ್‌ಗೆ ಹಾಕಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ನಡೆಸಿದ್ದಾರೆ. ‌ಇದರ ಭಾಗವಾಗಿ ಶುಕ್ರವಾರ ವಿಧಾನಸಭೆಯಲ್ಲಿ ಜನಾರ್ದನ ರೆಡ್ಡಿಗೆ ನಗರಾಭಿವೃದ್ಧಿ ಇಲಾಖೆಯ ಕೆಲಸ ಮಾಡಿಕೊಟ್ಟು ಚುನಾವಣೆಯಲ್ಲಿ ತಮ್ಮ ಪರ ಇರುವಂತೆ ಡಿಕೆಶಿ ಹೇಳಿದ್ದಾರೆನ್ನಲಾಗಿದೆ. ಈಗ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ರೆಡ್ಡಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಪರೋಕ್ಷ ಸಂದೇಶವನ್ನು ರವಾನೆ ಮಾಡಲಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಯಾರು ಕೈಕೊಡುತ್ತಾರೆ? ಯಾರು ಕೈ ಹಿಡಿಯುತ್ತಾರೆ?

ಅಡ್ಡ ಮತದಾನದ ಭೀತಿಯೂ ಇರುವುದರಿಂದ ಕಾಂಗ್ರೆಸ್‌ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ನಿರ್ಧಾರ ಮಾಡಿದೆ. ಅಲ್ಲಿಂದಲೇ ನೇರವಾಗಿ ಕರೆತಂದು ಮತದಾನವನ್ನು ಮಾಡಿಸಲಿದೆ. ಇತ್ತ ಜೆಡಿಎಸ್ – ಬಿಜೆಪಿ ಅಭ್ಯರ್ಥಿಗಳಿಂದಲೂ ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕ ಮಾಡಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗೆ ಇನ್ನೂ ಐದು ಮತಗಳ ಕೊರತೆ ಇದೆ. ಹೀಗಾಗಿ ಪಕ್ಷೇತರ ಮತ ಸೆಳೆಯಲು ಮೈತ್ರಿ ಪಕ್ಷಗಳ ನಾಯಕರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕೊನೇ ಘಳಿಗೆಯಲ್ಲಿ ಯಾರು ಯಾರಿಗೆ ಕೈಕೊಡಲಿದ್ದಾರೆ? ಕೈ ಹಿಡಿಯಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.

ಇದನ್ನೂ ಓದಿ: Rajya Sabha Election: ನಾಳೆ ರಾಜ್ಯಸಭಾ ಕದನ; ಅಡ್ಡಮತದಾನ ಭೀತಿ, ಕೈಗೆ ಫಜೀತಿ! ಲೆಕ್ಕಾಚಾರ ಹೇಗೆ?

ಇನ್ನೂ ತೀರ್ಮಾನ ಮಾಡಿಲ್ಲ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಐತಿಹಾಸಿಕ ಆನೆಗೊಂದಿ ಉತ್ಸವವನ್ನು ವೈಭವದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಮಾರ್ಚ್ ತಿಂಗಳಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ‌ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಆಹ್ವಾನ ನೀಡಲು ಹೋಗಿದ್ದೆ. ರಾಜ್ಯಸಭಾ ಚುನಾವಣೆಗೆ ಮತ ನೀಡುವಂತೆ ಎಲ್ಲರೂ ಮನವಿ ಮಾಡಿದ್ದಾರೆ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಪಕ್ಷದವರೂ ಮನವಿ ಮಾಡಿದ್ದಾರೆ. ನಾನು ಇನ್ನೂ ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

Continue Reading

ಬೆಂಗಳೂರು

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Water supply : ಜಲಮಂಡಳಿಯು (BWSSB) ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಒಂದು ದಿನದ ಮಟ್ಟಿಗೆ ಕಾವೇರಿ ನೀರು ಪೂರೈಕೆಯಲ್ಲಿ (Cauvery water supply) ವ್ಯತ್ಯಯ (Water Crisis) ಉಂಟಾಗಲಿದೆ.

VISTARANEWS.COM


on

By

Drinking water supply to be disrupted in Bengaluru tomorrow
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನ ಹಲವೆಡೆ ನಾಳೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ (Water Crisis) ಉಂಟಾಗಲಿದೆ. ಫೆ.27ರ ಬೆಳಗ್ಗೆ 6 ಗಂಟೆಯಿಂದ 28ರ ಬೆಳಗ್ಗೆ 6 ಗಂಟೆವರೆಗೂ ನೀರು ಪೂರೈಕೆ (Water supply) ಸ್ಥಗಿತವಾಗಲಿದೆ.

ಬೆಂಗಳೂರು ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿಗಳು ಹಾಗೂ ಯುಎಫ್‌ಡಬ್ಲ್ಯೂ ಬಲ್ಕ್‌ ಪ್ಲೋ ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇದರ ಸಲುವಾಗಿ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಹೀಗಾಗಿ ನಗರದ ಬಹುತೇಕ ಕಡೆಗಳಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ. ಕುಡಿಯುವ ನೀರಿನ ಕೊರತೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಪ್ರಕಟಣೆ ಹೊರಡಿಸಿದ್ದು, ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಇದನ್ನೂ ಓದಿ: Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

ಯಾವ್ಯಾವ ಏರಿಯಾದಲ್ಲಿ ನೀರಿಲ್ಲ?

4ನೇ ಬ್ಲಾಕ್ ನಂದಿನಿ ಲೇಔಟ್, ಬಿ.ಹೆಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ ಮತ್ತು ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ ಹಾಗೂ ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೇ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ & 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಯಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ಬಿಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ, ಕಂದಾಯ ಲೇಔಟ್, ಮುಳಕಟ್ಟಮ್ಮ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿಪಾಳ್ಯದಲ್ಲಿ ನೀರಿನ ಸಮಸ್ಯೆ ಆಗಲಿದೆ.

ಜತೆಗೆ ಬಿ.ಇ.ಎಲ್ 1ನೇ & 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ, ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ. ವಿಶ್ವೇಶರಯ್ಯ ಲೇಔಟ್, ಮುನೇಶ್ವರನಗರ, ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್, ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಗಳಗುಂಟೆ ಸೇರಿದಂತೆ ದಾಸರಹಳ್ಳಿ, ಜಾಲಹಳ್ಳಿ, ಹೆಚ್.ಎಂ.ಟಿ, ಚೊಕ್ಕಸಂದ್ರ, ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕುಡಿಯುವ ನೀರು ಬರುವುದಿಲ್ಲ.

ಮುಕ್ಕಾಲು ಬೆಂಗಳೂರಲ್ಲಿ ಕುಡಿಯುವ ನೀರಿನ ವ್ಯತ್ಯಯ
ಬೆಂಗಳೂರಲ್ಲಿ ಈ ಏರಿಯಾದಲ್ಲಿ ನೀರಿನ ವ್ಯತ್ಯಯ
ಒಂದು ದಿನದ ಮಟ್ಟಿಗೆ ನೀರಿನ ವ್ಯತ್ಯಯ
ಫೆ.27ರಂದು ನೀರು ಸ್ಥಗಿತ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿನ್ನದ ದರ

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

ರಾಜ್ಯದಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಸೋಮವಾರ ಕ್ರಮವಾಗಿ ₹10 ಮತ್ತು ₹11 ಇಳಿಕೆ ಕಂಡಿದೆ.

VISTARANEWS.COM


on

gold wear bride
Koo

ಬೆಂಗಳೂರು: ರಾಜ್ಯದಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಸೋಮವಾರ ಕ್ರಮವಾಗಿ ₹10 ಮತ್ತು ₹11 ಇಳಿಕೆ ಕಂಡಿದೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹5760ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹46,080 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹57,600 ಮತ್ತು ₹5,76,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹6,284 ಆಗಿದ್ದರೆ, ಎಂಟು ಗ್ರಾಂ ಬೆಲೆ ₹50,272 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹62,840 ಮತ್ತು ₹6,28,400 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ ₹71.50, ಎಂಟು ಗ್ರಾಂ ₹572 ಮತ್ತು 10 ಗ್ರಾಂ ₹715ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹7,150 ಮತ್ತು 1 ಕಿಲೋಗ್ರಾಂಗೆ ₹71,500 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ57,75062,940
ಮುಂಬಯಿ57,60062,840
ಬೆಂಗಳೂರು57,60062,840
ಚೆನ್ನೈ58,10063,380

ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಎಂದರೇನು?

ಬೆಂಗಳೂರಿನಲ್ಲಿ ಚಿನ್ನದ ದರಗಳನ್ನು ಪರಿಶೀಲಿಸುವುದರ ಹೊರತಾಗಿ, ನೀವು ಮೇಕಿಂಗ್ ಚಾರ್ಜ್‌ಗಳನ್ನು ಸಹ ನೋಡಬೇಕು. ಮೇಕಿಂಗ್ ಚಾರ್ಜ್ ಎನ್ನುವುದು ಅಂತಿಮ ಮಾರಾಟದ ಬೆಲೆಗೆ ಬರುವ ಮೊದಲು ಆಭರಣದ ಬೆಲೆಗೆ ಸೇರಿಸುವ ಶುಲ್ಕ. ಆಭರಣದ ತಯಾರಿಕೆಯ ಶುಲ್ಕಗಳು ಗ್ರಾಹಕರು ಖರೀದಿಸುವ ಆಭರಣದ ಪ್ರಕಾರವನ್ನು ಅವಲಂಬಿಸಿ ಬದಲಾಗಬಹುದು. ಇದು ಆಭರಣವನ್ನು ತಯಾರಿಸುವಾಗ ಅಗತ್ಯವಿರುವ ಸೂಕ್ಷ್ಮ ವಿವರಗಳನ್ನು ಅವಲಂಬಿಸಿರುತ್ತದೆ.

ಬೆಂಗಳೂರಿನಲ್ಲಿ ಒಬ್ಬ ಆಭರಣ ವ್ಯಾಪಾರಿಯಿಂದ ಇನ್ನೊಂದಕ್ಕೆ ತಯಾರಿಕೆಯ ಶುಲ್ಕಗಳು ಭಿನ್ನವಾಗಿರುತ್ತವೆ. ಬೆಂಗಳೂರಿನ ಕೆಲವು ಆಭರಣ ವ್ಯಾಪಾರಿಗಳು ಇದನ್ನು ಮೇಕಿಂಗ್ ಚಾರ್ಜ್ ಎಂದು ಕರೆಯುತ್ತಾರೆ. ಕೆಲವರು ಇದನ್ನು ವೇಸ್ಟೇಜ್ ಚಾರ್ಜ್ ಎಂದು ಕರೆಯಬಹುದು. ಆಭರಣದ ಫಿನಿಶಿಂಗ್ ಮಾನವ ನಿರ್ಮಿತವಾಗಿದ್ದರೆ, ಯಂತ್ರವನ್ನು ಬಳಸಿ ಮಾಡಿದ ಆಭರಣಗಳಿಗೆ ಹೋಲಿಸಿದರೆ ಮೇಕಿಂಗ್ ಶುಲ್ಕಗಳು ಹೆಚ್ಚು. ಉತ್ಪನ್ನದ ದರಗಳು ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಮತ್ತು ಒಂದು ನಗರದಿಂದ ಇನ್ನೊಂದು ನಗರಕ್ಕೆ ಭಿನ್ನವಾಗಿರುತ್ತವೆ.

ಖರೀದಿಗೆ ಮುನ್ನ ಚಿನ್ನದ ಶುದ್ಧತೆ ಮತ್ತು ಗುಣಮಟ್ಟವನ್ನು ಪರೀಕ್ಷಿಸಬೇಕು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನ ತ್ರಿಕೋನ ಮುದ್ರೆ ಇದೆ ಎಂದು ಖಚಿತಪಡಿಸುವುದು ಮೊದಲನೆಯದು. ನೀವು ಖರೀದಿಸುವ ಚಿನ್ನದ ಗುಣಮಟ್ಟದ ಮೇಲೆ ಇದು ಭರವಸೆ ಒದಗಿಸುವ ಸಂಗತಿ. ಇದರಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿರ್ಧರಿಸುವ ಕೋಡ್ ಕೂಡ ಇರುತ್ತದೆ. ನೀವು ಚಿನ್ನದ ನಾಣ್ಯಗಳನ್ನು ಖರೀದಿಸಲು ಬಯಸಿದರೆ, ಕೆಲವು ಬ್ಯಾಂಕ್‌ಗಳಿಂದ ಖರೀದಿಸುವುದು ಉತ್ತಮ.

ನೀವು ಬೆಂಗಳೂರಿನಲ್ಲಿ ಚಿನ್ನವನ್ನು ಖರೀದಿಸುವಾಗ ಹಾಲ್‌ಮಾರ್ಕ್ ಮಾಡಿದ ಚಿನ್ನವನ್ನು ಖರೀದಿಸುವುದು ಮುಖ್ಯ. ಹಾಲ್‌ಮಾರ್ಕ್‌ಚಿನ್ನದಲ್ಲಿ ಮೋಸಹೋಗುವ ಸಾಧ್ಯತೆಗಳು ಬಹುತೇಕ ಶೂನ್ಯ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಥವಾ BIS ಅನ್ನು ಭಾರತದಲ್ಲಿ ಚಿನ್ನವನ್ನು ಹಾಲ್‌ಮಾರ್ಕ್ ಮಾಡುವ ಕಾರ್ಯಕ್ಕೆ ನಿಯೋಜಿಸಲಾಗಿದೆ. ಚಿನ್ನವನ್ನು ಖರೀದಿಸುವ ಮೊದಲು BISನ ಲೋಗೋ ಸೇರಿದಂತೆ ಹಲವಾರು ವಿಷಯಗಳನ್ನು ನೋಡಿ. BISನ ಲೋಗೋದ ಹೊರತಾಗಿ ಆಭರಣ ವ್ಯಾಪಾರಿಯ ಹೆಸರು ಅಥವಾ ಲೋಗೋ ಇರಬಹುದು. ಚಿನ್ನದ ತಯಾರಿಕೆಯ ದಿನಾಂಕ ಸಹ ಇರುತ್ತದೆ. ಇನ್ನೊಂದು ಪ್ರಮುಖ ವಿಷಯವೆಂದರೆ ನೀವು ಖರೀದಿಸಿದ ಚಿನ್ನದ ರಶೀದಿಯನ್ನು ಸಹ ತೆಗೆದುಕೊಳ್ಳಬೇಕು. ನೀವು ಚಿನ್ನಾಭರಣವನ್ನು ಮಾರಾಟ ಮಾಡಲು ಬಯಸಿದರೆ ಭವಿಷ್ಯದಲ್ಲಿ ಇದು ಸಹಾಯ ಮಾಡುತ್ತದೆ. ಹಾಲ್‌ಮಾರ್ಕ್ ಮಾಡಿದ ಚಿನ್ನವು 22 ಕ್ಯಾರಟ್ ಶುದ್ಧತೆಯ ಚಿನ್ನ.

ಇದನ್ನೂ ಓದಿ: Gold Rate Today: ಚಿನ್ನ ಖರೀದಿಸಲು ಹೊರಡುವ ಮುನ್ನ ಇಂದಿನ ಬೆಲೆ ತಿಳಿದುಕೊಳ್ಳಿ

Continue Reading

ಕ್ರೈಂ

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Murder Case : ವೃದ್ಧೆ ಸುಶೀಲಮ್ಮ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ತಾನೇ ವೃದ್ಧೆ ದೇಹವನ್ನು ಕತ್ತರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಕಾರಣ ಕೇಳಿದ್ದರೆ ಮೌನಕ್ಕೆ ಶರಣಾಗುತ್ತಿದ್ದಾನೆ.

VISTARANEWS.COM


on

By

Elderly woman murdered in Bengaluru accused did not give any reason
ಬಂಧಿತನಾಗಿರುವ ಆರೋಪಿ ದಿನೇಶ್‌
Koo

ಬೆಂಗಳೂರು: ಕೆ.ಆರ್. ಪುರಂ ಠಾಣಾ ವ್ಯಾಪ್ತಿಯ ನಿಸರ್ಗ ಲೇಔಟ್‌ನಲ್ಲಿ ನಡೆದ ವೃದ್ಧೆ ಸುಶೀಲಮ್ಮ ಭೀಕರ ಹತ್ಯೆ ಪ್ರಕರಣವು ಜನರನ್ನು ಬೆಚ್ಚಿಬೀಳಿಸಿದೆ. ಬಂಧಿತ ಆರೋಪಿ ದಿನೇಶ್‌ ವಿಚಾರಣೆ ವೇಳೆ ಅಜ್ಜಿ ದೇಹವನ್ನು ತುಂಡು ಮಾಡಿದ್ದಾಗಿ (Murder Case) ಒಪ್ಪಿಕೊಂಡಿದ್ದಾನೆ.

ಫೆ.24ರ ಮಧ್ಯಾಹ್ನ ಆರೋಪಿ ದಿನೇಶ್‌ ಮನೆಗೆ ಸುಶೀಲಮ್ಮ ಹೋಗಿದ್ದರು ಎನ್ನಲಾಗಿದೆ. ಅಜ್ಜಿ ಸುಶೀಲಮ್ಮ ನಮ್ಮ ಮನೆಗೆ ಬಂದಾಗ ಬಾತ್ ರೂಂ ಬಳಿ ಕಾಲು ಜಾರಿ ಬಿದ್ದರು. ಈ ವೇಳೆ ಜೋರಾಗಿ ಕೂಗಿದರೂ ಅಜ್ಜಿ ಎದೇಳಿಲ್ಲ ನಂತರ ನಮ್ಮ ಮನೆಯಲ್ಲೇ ಮೃತಪಟ್ಟರು. ಆ ದಿನ ಮನೆಯಲ್ಲಿ ಹೆಂಡತಿ ಮಕ್ಕಳು ಕಾರ್ಯಕ್ರಮ ಒಂದಕ್ಕೆ ಹೋಗಿದ್ದರು. ಅಜ್ಜಿ ಮೃತಪಟ್ಟಾಗ ಏನು ಮಾಡಬೇಕು ಎಂಬುದು ಗೊತ್ತಾಗಿಲ್ಲ ಎಂದಿದ್ದಾನೆ.

ತನ್ನದೇ ಮನೆಯಲ್ಲಿ ದಿನೇಶ್‌ ಅಜ್ಜಿಯ ಮೃತದೇಹದೊಂದಿಗೆ ಒಂದು ದಿನ ಕಳೆದಿದ್ದಾನೆ. 24ರ ರಾತ್ರಿ ಅಜ್ಜಿಯ ಮೃತದೇಹವನ್ನು ತುಂಡು ತುಂಡಾಗಿ ಕಟ್ ಮಾಡಿದ್ದಾನೆ. ನಂತರ ಕೆ.ಆರ್.ಪುರಂ ಬಸ್ ಸ್ಟ್ಯಾಂಡ್ ಬಳಿ ಡ್ರಮ್ ಹಾಗೂ ಡಸ್ಟ್ ಬೀನ್ ಕವರ್ ಖರೀದಿ ಮಾಡಿದ್ದಾನೆ. ಫೆ.25 ರ ಮುಂಜಾನೆ 3:30ಕ್ಕೆ ವೃದ್ಧೆಯ ದೇಹವನ್ನು ತುಂಡು ತುಂಡಾಗಿ ಕಟ್ ಮಾಡಿ ಡ್ರಮ್‌ಗೆ ತುಂಬಿ ಬಿಸಾಡಲು ಪ್ಲಾನ್‌ ಮಾಡಿದ್ದ. ಅದರಂತೆ ಆವಲಹಳ್ಳಿ ಕೆರೆಗೆ ಮೃತದೇಹದ ಕೆಲ ಭಾಗಗಳನ್ನು ಬಿಸಾಡಿ ಬಂದಿದ್ದ.

ಮೃತದೇಹ ಬಿಸಾಡುವ ಮುನ್ನ ಮನೆಯ ಮುಂಭಾಗದ ಬೀದಿ ದೀಪವನ್ನು ಆಫ್‌ ಮಾಡಿದ್ದ. ಆ ನಂತರ ಮೃತದೇಹವಿದ್ದು ಡ್ರಮ್ ತಗೆದುಕೊಂಡು ಹೋಗಿ ಪಾಳು ಮನೆ ಬಳಿ ಬಿಸಾಡಿ ಬಂದಿದ್ದ. ಪೊಲೀಸರು ಸಿಸಿ ಟಿವಿ ಪರಿಶೀಲನೆ ವೇಳೆ ಆರೋಪಿ ಚಹರೆ ಪತ್ತೆಯಾಗಿತ್ತು. ಪೊಲೀಸರು ಆರೋಪಿ ದಿನೇಶ್‌ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವೃದ್ಧೆ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟರಾ? ಒಂದು ವೇಳೆ ಆಕಸ್ಮಿಕವಾಗಿ ಮೃತಪಟ್ಟರೂ, ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸದೇ ದಿನೇಶ್‌ ಯಾಕಾಗಿ ವೃದ್ಧೆ ದೇಹವನ್ನು ತುಂಡು ತುಂಡಾಗಿ ಮಾಡಿದ ಎಂಬ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: Bike Wheeling : ಮಕ್ಕಳ ವ್ಹೀಲಿಂಗ್‌ ಶೋಕಿಗೆ ಪೋಷಕರಿಗೆ ದಂಡ

ಬಿಜೆಪಿಯ ಕಾರ್ಯಕರ್ತೆ ಸುಶೀಲಮ್ಮ

ಬಿಜೆಪಿಯ ಕಾರ್ಯಕರ್ತೆರಾಗಿದ್ದ ಸುಶೀಲಮ್ಮ ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದರು. ಸುಶೀಲಮ್ಮಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗನಿದ್ದ. ಸುಶೀಲಮ್ಮ ಮಕ್ಕಳಿಂದ ಪ್ರತ್ಯೇಕವಾಗಿದ್ದರು. ಆಸ್ತಿ ಮಾರಾಟದಿಂದ ಬಂದಿದ್ದ ಹಣದಲ್ಲಿ ನಿಸರ್ಗ ಲೇಔಟ್‌ನಲ್ಲಿ ಮನೆಯನ್ನು ಲೀಸ್‌ಗೆ ಪಡೆದು ವಾಸವಿದ್ದರು. ಸುಶೀಲಮ್ಮ ಇದ್ದ ಕಟ್ಟಡದಲ್ಲೇ ಕಿರಿಯ ಪುತ್ರಿ ವಾಸವಿದ್ದರು. ಆದರೆ ತಾಯಿ ನಾಪತ್ತೆಯಾಗಿದ್ದರೂ ಮಕ್ಕಳು ಗಂಭೀರವಾಗಿ ಪರಿಗಣಿಸಿಲ್ವಾ ಎಂಬ ಪ್ರಶ್ನೆ ಕಾಡುತ್ತೆ.

ಆದರೆ ಕೆಲವೊಮ್ಮೆ ಮನೆಯಿಂದ ಹೊರ ಹೋದರೆ ಸುಶೀಲಮ್ಮ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಹಾಗಾಗಿ ಮಕ್ಕಳು ಕೂಡ ಅಷ್ಟೊಂದು ತಲೆ ಕೆಡಿಸಿಕೊಂಡು ಹುಡುಕಿರಲಿಲ್ಲ. ಫೆ.25ರ ಸಂಜೆ ಡ್ರಮ್‌ನಲ್ಲಿ ಮೃತದೇಹ ಪತ್ತೆಯಾದಾಗಲೇ ತಾಯಿ ಹತ್ಯೆಯಾಗಿದೆ ಎಂಬುದು ತಿಳಿದು ಬಂದಿದೆ. ಬಿಜೆಪಿ ಕಾರ್ಯಕರ್ತೆಯಾಗಿದ್ದ ಸುಶೀಲಮ್ಮಗೆ ಕಳೆದ ಬಾರಿಯ ಚುನಾವಣಾ ಪ್ರಚಾರದಲ್ಲಿ ದಿನೇಶ್‌ ಪರಿಚಯವಾಗಿದ್ದ ಎನ್ನಲಾಗಿದೆ.

ಸದ್ಯ, ವೃದ್ಧೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು ತಾನೇ ಎಂದು ಹೇಳಿಕೆ ನೀಡಿರುವ ದಿನೇಶ್‌, ಕೊಲೆಗೆ ಕಾರಣವೇನು ಎಂಬುದನ್ನು ಹೇಳುತ್ತಿಲ್ಲ. ಹತ್ಯೆಯ ಹಿಂದಿನ ಮೋಟಿವ್ ಬಗ್ಗೆ ತುಟಿ ಬಿಚ್ಚಿಲ್ಲ. ಮಾಂಸ ಕತ್ತರಿಸುವ ಕತ್ತಿಯಿಂದ ತುಂಡು ತುಂಡು ಮಾಡಿದ್ದಾನೆ. ಹಾಗಾದರೆ ಕೊಲೆಗೆ ಬಳಸಿದ ಕತ್ತಿ ಎಲ್ಲಿಂದ ತಂದಿದ್ದ? ಮೊದಲೇ ಪ್ಲಾನ್‌ ಮಾಡಿದ್ದನಾ? ಹಂತಕ ದಿನೇಶ್ ಒಬ್ಬನೆ ಕೊಲೆ ಮಾಡಿದ್ದನಾ? ಬೇರೆ ಯಾರಾದರೂ ಕೈ ಜೋಡಿಸಿದ್ದರಾ ಎಂಬ ಆಯಾಮದಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Rajya Sabha Elections Yogendra appointed as KRPP agent Reddy supports to Congress
ರಾಜಕೀಯ20 seconds ago

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಯೋಗೇಂದ್ರ ನೇಮಕ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ರೆಡ್ಡಿ ಬೆಂಬಲ

Actor Darshan rally police deny permission
ಸ್ಯಾಂಡಲ್ ವುಡ್13 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು19 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ31 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ33 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ41 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ44 mins ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ1 hour ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Janardhana Reddy meets CM Siddaramaiah and DCM DK Shivakumar
ರಾಜಕೀಯ1 hour ago

Rajya Sabha Election: ಸಿಎಂ, ಡಿಸಿಎಂ ಭೇಟಿ ಮಾಡಿದ ಜನಾರ್ದನ ರೆಡ್ಡಿ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ?

Namma Metro Farmer
ಬೆಂಗಳೂರು1 hour ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಪ್ರವೇಶ ನಿರಾಕರಿಸಿದ ಮೆಟ್ರೋ; ನೆಟ್ಟಿಗರ ಆಕ್ರೋಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌