Ripponpet News: ಗ್ರಾಮೀಣ ಜನರ ಆರೋಗ್ಯದ ತಪಾಸಣೆ ಮುಖ್ಯ: ಉಜ್ಜಯನಿ ಪೀಠದ ಜಗದ್ಗುರು - Vistara News

ಆರೋಗ್ಯ

Ripponpet News: ಗ್ರಾಮೀಣ ಜನರ ಆರೋಗ್ಯದ ತಪಾಸಣೆ ಮುಖ್ಯ: ಉಜ್ಜಯನಿ ಪೀಠದ ಜಗದ್ಗುರು

Ripponpet News: ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸಿರುವುದು ಪ್ರಶಂಸನೀಯ ಎಂದು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.

VISTARANEWS.COM


on

Nandi Hospital ripponpet
ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಿಪ್ಪನ್‌ಪೇಟೆ: “ಹಳ್ಳಿಯಲ್ಲಿನ ಸಾಮಾನ್ಯ ಜನರು ಇಂದಿನ ದುಬಾರಿ ಖರ್ಚು ಮಾಡಿಕೊಂಡು ದೂರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮನೆಯ ಬಾಗಿಲಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಂತಾಗಲು ನಂದಿ ಆಸ್ಪತ್ರೆ ಸಹಕಾರಿಯಾಗಲಿ” ಎಂದು ಉಜ್ಜಯನಿ ಪೀಠದ ಜಗದ್ಗುರುಗಳು ಹೇಳಿದರು.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿನಂದಿ ಆಸ್ಪತ್ರೆ ‘’ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಜ್ಜಯನಿ ಪೀಠದ ಜಗದ್ಗುರುಗಳು, ಆಸ್ಪತ್ರೆಯ ಸದುಪಯೋಗವನ್ನು ಸ್ಥಳೀಯ ಜನತೆ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಜನರ ಆರೋಗ್ಯ ತಪಾಸಣೆ ಬಹಳ ಮುಖ್ಯವಾಗುತ್ತದೆ ಎಂದು ಕರೆ ನೀಡಿದರು.

ಆನಂದಪುರದ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, “ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾರಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ದೂರದ ಆಸ್ಪತ್ರೆಗಳಿಗೆ ಹೋಗಿ ಬರುವುದೇ ಕಷ್ಟವಾಗಿರುವಾಗ ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವುದರೊಂದಿಗೆ ಸಾಕಷ್ಟು ವೈದ್ಯರಿಗೆ ಮತ್ತು ಆರೋಗ್ಯ ಶೂಶ್ರೂಷಿಕಿಯರಿಗೆ, ಔಷಧ ಅಂಗಡಿಯವರಿಗೆ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶಿಯಾಗಿರುವುದು ಪ್ರಶಂಸನೀಯ” ಎಂದರು.

ಇದನ್ನೂ ಓದಿ: Kannada New Movie: ʻದಿಲ್ ದಾರ್’ ಎಂದ ಕೆ.ಮಂಜು ಪುತ್ರ: ಶ್ರೇಯಸ್ ಹೊಸ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್!

ಇದೇ ಕಟ್ಟಡದಲ್ಲಿರುವ ಐಶ್ವರ್ಯ ಕೃಷಿ ಉಪಕರಣಗಳ ಅಂಗಡಿಗೂ ಭೇಟಿ ನೀಡಿ ಗುರು ವಿರಕ್ತ ಪೂಜ್ಯರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮೀಜಿ, ನಾರಾಯಣ ಗುರು ಪೀಠದ ರೇಣುಕಾನಂದ ಮಹಾಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ ಮಾಲೀಕರಾದ ಸಚ್ಚಿನ ಗೌಡ, ಜೆ.ಎ.ಶಾಂತ ಕುಮಾರ್, ಹುಗುಡಿ ರಾಜು, ಬೆಳಕೋಡು ಹಾಲಸ್ವಾಮಿಗೌಡ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Kasapa: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವಿರುದ್ಧ ಪ್ರಕಾಶಮೂರ್ತಿ ಗರಂ; ನಡೆ-ನುಡಿ ಬದಲಿಸಿಕೊಳ್ಳಲು ಬಹಿರಂಗ ಪತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Brest Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

Brest Cancer: ಕ್ಯಾನ್ಸರ್ ಎಂಬ ಹೆಸರು ಕೇಳಿದರೆ ಯಾರ ಮೈ ನಡುಗಲ್ಲ ಹೇಳಿ! ದೇಹದ ಭಾಗದಲ್ಲಿ ಚಿಕ್ಕ ನೋವಿದ್ದರೂ ವೈದ್ಯರ ಬಳಿ ಓಡಿ ಹೋಗೋಣ ಅನಿಸುತ್ತದೆ. ಇನ್ನು ಮಹಿಳೆಯರನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಯೆಂದರೆ ಅದು ಸ್ತನ ಕ್ಯಾನ್ಸರ್. 2040ರ ವೇಳೆಗೆ ಈ ಕಾಯಿಲೆ ಮತ್ತಷ್ಟು ಮಹಿಳೆಯರನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

VISTARANEWS.COM


on

Breast Cancer
Koo

ಬೆಂಗಳೂರು: ಕ್ಯಾನ್ಸರ್ ಒಂದು ಮಾರಕವಾದ ಕಾಯಿಲೆಯಾಗಿದೆ. ಇದರಿಂದ ಬದುಕುಳಿದವರಿಗಿಂತ ಜೀವ ಕಳೆದುಕೊಂಡವರೇ ಹೆಚ್ಚು. ಹಾಗಾಗಿ ಜನರು ಕ್ಯಾನ್ಸರ್ (Brest Cancer) ಎಂದಾಗ ಬೆಚ್ಚಿ ಬೀಳುತ್ತಾರೆ. ಬಹಳ ಹಿಂದಿನ ಕಾಲದಲ್ಲಿ ಇದನ್ನು ಶ್ರೀಮಂತರ ರೋಗ ಎಂದು ಕರೆಯುತ್ತಿದ್ದರು. ಯಾಕೆಂದರೆ ಇದು ಹೆಚ್ಚು ಶ್ರೀಮಂತರಲ್ಲಿ ಕಂಡುಬರುತ್ತಿತ್ತು, ಆದರೆ ಇತ್ತೀಚಿನ ದಿಗಳಲ್ಲಿ ಕ್ಯಾನ್ಸರ್ ರೋಗ ಎಲ್ಲಾ ಜನರಲ್ಲೂ ಕಂಡುಬರುತ್ತಿದೆ.

ದೇಹದ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಶುರು ಮಾಡಿದಾಗ ಅದು ಕ್ಯಾನ್ಸರ್ ಆಗಿ ಬದಲಾಗುತ್ತದೆ. ನಂತರ ಇದು ದೇಹದ ಇತರ ಭಾಗಗಳಿಗೂ ಹರಡುತ್ತದೆ. ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ. ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಮೆದುಳು ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮುಂತಾದ ಕ್ಯಾನ್ಸರ್ ಇದೆ. ಆದರೆ ಇವುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಇದು ಜೀವವನ್ನೇ ತೆಗೆಯುತ್ತದೆ.

ಆದರೆ ಸ್ತನ ಕ್ಯಾನ್ಸರ್ ಈಗ ಜಗತ್ತಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವಂತಹ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಸಾವನಪ್ಪುತ್ತಿದ್ದಾರೆ. ಹಾಗಾಗಿ 2040ರ ವೇಳೆ ಸ್ತನ ಕ್ಯಾನ್ಸರ್ ಮಿಲಿಯನ್‌ಗಟ್ಟಲೆ ಜನರನ್ನು ಬಲಿ ತೆಗೆದುಕೊಳ್ಳಲಿದೆ ಎಂಬುದಾಗಿ ಆಯೋಗವೊಂದು ಕಂಡುಕೊಂಡಿದೆ.

ಲ್ಯಾನ್ಸೆಟ್ ಆಯೋಗದ ಪ್ರಕಾರ, 2020ರಲ್ಲಿ ಸುಮಾರು 7.8 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ, ಮತ್ತು ಸುಮಾರು 685000 ಮಹಿಳೆಯರು ಈ ಕಾಯಿಲೆಯಿಂದ ಜೀವ ಕಳೆದುಕೊಂಡಿದ್ದಾರೆ. ಹಾಗಾಗಿ ಇಡೀ ಜಗತ್ತಿನಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು 2020 ರಲ್ಲಿ 2.3 ಮಿಲಿಯನ್ ನಿಂದ 2040ರ ವೇಳೆಗೆ 3 ಮಿಲಿಯನ್ ಗಿಂತಲೂ ಹೆಚ್ಚಾಗಬಹುದು. ಹಾಗೇ 2040ರ ವೇಳೆಗೆ ಸ್ತನ ಕ್ಯಾನ್ಸರ್ ನಿಂದ ಸಾವನಪ್ಪಿದವರ ಸಂಖ್ಯೆ ವರ್ಷಕ್ಕೆ 1 ಮಿಲಿಯನ್ ಆಗುತ್ತದೆ. ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದದ ದೇಶದ ಜನರು ಇದಕ್ಕೆ ಬಲಿಯಾಗಲಿದ್ದಾರೆ ಎಂಬುದಾಗಿ ತಿಳಿಸಿದೆ.

ಹಾಗಾಗಿ ಸ್ತನ ಕ್ಯಾನ್ಸರ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಆಯೋಗವು ರೋಗಿಗಳು ಮತ್ತು ಆರೋಗ್ಯ ಸಲಹೆಗಾರರ ನಡುವೆ ಉತ್ತಮ ಸಂವಹನ ನಡೆಸಲು ನಿರ್ಣಯಿಸಿದೆ. ಆ ಮೂಲಕ ರೋಗ ಲಕ್ಷಣಗಳು, ಚಿಕಿತ್ಸೆ ಮತ್ತು ಉತ್ತಮ ಜೀವನಶೈಲಿಯನ್ನು ಅನುಸರಿಸುವುದರ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.

ಅದಕ್ಕಾಗಿ ಪ್ರತಿಯೊಬ್ಬ ಆರೋಗ್ಯ ಸಲಹೆಗಾರರು ಕೆಲವು ರೀತಿಯ ಸಂವಹನ ಕೌಶಲ್ಯಗಳ ತರಬೇತಿಯನ್ನು ಪಡೆಯಬೇಕು. ಇದರಿಂದ ರೋಗಗಳು ಮತ್ತು ಆರೋಗ್ಯ ಸಲಹೆಗಾರರ ನಡುವಿನ ಸಂವಹನದ ಗುಣಮಟ್ಟದಲ್ಲಿ ಸುಧಾರಣೆ ಕಂಡುಬರುತ್ತದೆ. ಇದು ರೋಗಿಗಳ ಮೇಲೆ ಸಕರಾತ್ಮಕ ಪರಿಣಾಮ ಬೀರಬಹುದು ಎಂದು ಆಯೋಗವು ತಿಳಿಸಿದೆ.

ಇದನ್ನೂ ಓದಿ: Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

ಹಾಗೇ ಮಹಿಳೆಯರಿಗೆ ಹೆಚ್ಚು ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಮತ್ತು ಅವರು ತಮ್ಮ ಆರೈಕೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ನಿರ್ಧಾರ ಮಾಡಬೇಕು ಎಂದು ತಿಳಿಸಲಾಗಿದೆ.

Continue Reading

ಆರೋಗ್ಯ

Weight Loss Tips: ಇದ್ದಕ್ಕಿದ್ದಂತೆ ದೇಹದ ತೂಕ ಇಳಿಸಲು ಹೋದರೆ ಏನಾಗುತ್ತದೆ ನೋಡಿ!

ಕ್ರಮಬದ್ಧವಾಗಿ ತೂಕ ಇಳಿಸುವಲ್ಲಿ ಗಂಭೀರವಾಗಿ (Weight Loss Tips) ತೊಡಗಿಸಿಕೊಂಡವರು, ವಾರವೊಂದಕ್ಕೆ ಅರ್ಧ ಕೆ.ಜಿ- ಹೆಚ್ಚೆಂದರೆ ಒಂದು ಕೆ.ಜಿ. ತೂಕ ಇಳಿಸಬಹುದು. ಇದನ್ನಾದರೂ ಕಾಯ್ದುಕೊಂಡು ಮುನ್ನಡೆಯುವುದು ಸುಲಭದ ಕೆಲಸವಲ್ಲ. ಹಾಗಿರುವಾಗ ಇದಕ್ಕಿಂತ ಸಿಕ್ಕಾಪಟ್ಟೆ ತೂಕ ಇಳಿಸುವ (Quick weight loss hazards) ಕೆಲಸ ತೊಂದರೆಗಳನ್ನು ತರಬಹುದು, ಹುಷಾರ್!

VISTARANEWS.COM


on

Weight Loss Tips
Koo

ದೀಪಾವಳಿಯಿಂದ ಪ್ರಾರಂಭವಾಗಿ ಯುಗಾದಿಯವರೆಗೂ ಭರಪೂರ ತಿಂದಿದ್ದಾಗಿದೆ. ಪಾರ್ಟಿ ಮಾಡುವುದಕ್ಕೆ, ತಿನ್ನುವುದಕ್ಕೆ ಕಾರಣಗಳು ಏನೇ ಇರಬಹುದು… ತೂಕ ಮಾತ್ರ ಈ ಯಾವ ಕಾರಣಗಳನ್ನೂ ಕೇಳುವುದಿಲ್ಲ. ತನ್ನಷ್ಟಕ್ಕೆ ಏರುತ್ತದೆ! ಮೂರು ತಿಂಗಳಲ್ಲಿ ಏರಿದ ತೂಕವನ್ನು ಇಳಿಸಲು (Weight Loss Tips) ಆರು ತಿಂಗಳು ಒದ್ದಾಡಿದರೂ ಸಾಕಾಗುವುದಿಲ್ಲ. ಅದರಲ್ಲೂ ಹೊಸ ವರ್ಷದ ನಿರ್ಣಯವೆಂದು ಒಂದಿಷ್ಟು ದಿನ ಜಿಮ್‌, ವಾಕಿಂಗ್‌ ಪಾರ್ಕ್‌ಗಳಿಗೆ ಎಡತಾಕಿ, ಬಿಟ್ಟುಬಿಟ್ಟರೆ ಕೆಲಸ ಇನ್ನೂ ಕೆಡುತ್ತದೆ. ಆಗ ಗಮನ ಹೋಗುವುದು ತ್ವರಿತವಾಗಿ ತೂಕ ಇಳಿಸುವ ಉಪಾಯಗಳ ಮೇಲೆ! ತೂಕ ಏರುವುದಕ್ಕೆ ಬೇಕಾಗುವಷ್ಟು ಸಮಯದಲ್ಲಿ, ಏರಿದ ತೂಕವನ್ನು ಇಳಿಸಲು ಸಾಧ್ಯವೇ ಇಲ್ಲ. ಕೆಲವರಿಗೆ ಹಲವಾರು ವಾರಗಳು ಬೇಕಾದಬಹುದು; ಹಲವರಿಗೆ ಕೆಲವಾರು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು- ಕ್ರಮಬದ್ಧವಾಗಿ ತೂಕ ಇಳಿಸಲು. ಇಷ್ಟರ ನಡುವೆ ಫಾಸ್ಟ್‌ಟ್ರಾಕ್‌ನಲ್ಲಿ ತೂಕ ಇಳಿಸುವ ಉಪಾಯಗಳತ್ತ ಕಣ್ಣಾಡಿಸುತ್ತೇವೆ. ಹಾಗೆಲ್ಲಾ ತೂಕವನ್ನು ಸಿಕ್ಕಾಪಟ್ಟೆ ಏರಿಳಿತ ಮಾಡುವುದು ಸರಿಯೇ? ಇದರಿಂದ ಅಡ್ಡ ಪರಿಣಾಮಗಳು (Weight Loss Tips) ಏನೂ ಇಲ್ಲವೇ?
ಖಂಡಿತ ದುಷ್ಪರಿಣಾಮಗಳಿವೆ. ಕ್ರಮಬದ್ಧವಾಗಿ ತೂಕ ಇಳಿಸುವ ಕ್ರಿಯೆಯಲ್ಲೇ ಗಂಭೀರವಾಗಿ ತೊಡಗಿಸಿಕೊಂಡವರು, ವಾರವೊಂದಕ್ಕೆ ಅರ್ಧ ಕೆ.ಜಿ- ಹೆಚ್ಚೆಂದರೆ ಒಂದು ಕೆ.ಜಿ. ತೂಕ ಇಳಿಸುವುದು ಸಾಧ್ಯ. ಇದನ್ನೂ ಕಾಯ್ದುಕೊಂಡು ಮುನ್ನಡೆಯುವುದು ಸುಲಭದ ಕೆಲಸವಲ್ಲ. ಹಾಗಿರುವಾಗ ಇದಕ್ಕಿಂತ ವಿಪರೀತ ಪ್ರಮಾಣದಲ್ಲಿ ತೂಕ ಇಳಿಸುವ ಕೆಲಸ ತೊಂದರೆಗಳನ್ನು ತಂದೀತು, ಜೋಕೆ! ತೊಂದರೆ ಅಂದರೆ… ಏನಾಗುತ್ತದೆ?

Weight Loss tension

ಚಯಾಪಚಯ ಕ್ರಿಯೆ ಕುಸಿಯುತ್ತದೆ

ತೂಕ ಇಳಿಸುವುದಕ್ಕೆ ಯದ್ವಾತದ್ವಾ ಪ್ರಯತ್ನಿಸಿದರೆ ದೇಹದ ಚಯಾಪಚಯ ಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಒಮ್ಮೆ ಈ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾದರೆ, ಅದು ದೇಹದ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮಾತ್ರವಲ್ಲ, ಇಳಿಸಿದ ತೂಕವನ್ನು ಕಾಯ್ದುಕೊಳ್ಳುವುದೂ ಕಷ್ಟವಾಗುತ್ತದೆ. ಅತಿಯಾಗಿ, ತಳಹದಿಯಿಲ್ಲದ ಡಯೆಟ್‌ ಮಾಡಿದರೆ ದೇಹಕ್ಕೆ ಅಗತ್ಯವಾಗುವ ಪೋಷಕಾಂಶಗಳ ಕೊರತೆಯಾಗಿ, ಶರೀರ ನಿಶ್ಶಕ್ತಿಯಿಂದ ಬಳಲಬಹುದು. ಬೇಕಾದ ಸತ್ವಗಳ ಕೊರತೆ ಉಂಟಾಗಿ ಹೊಸ ಸಮಸ್ಯೆಗಳು ಕಾಣಬಹುದು.
ಕ್ಷಿಪ್ರ ತೂಕ ಇಳಿಕೆಗಾಗಿ ಕೆಲವು ಆಹಾರಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದೀರಿ ಎಂದಾದರೆ, ಅವುಗಳನ್ನು ದೀರ್ಘಕಾಲದವರೆಗೆ ನಿಲ್ಲಿಸುವುದು ಸಾಧ್ಯವಾಗುವುದಿಲ್ಲ. ಅಂತಹ ಆಹಾರಗಳನ್ನು ಮರಳಿ ಆರಂಭಿಸಿದ ಕೂಡಲೇ ತೂಕವೂ ಏರತೊಡಗುತ್ತದೆ. ಉದಾ, ಸಿಹಿ ತಿಂಡಿಗಳನ್ನು ಸಂಪೂರ್ಣ ನಿಲ್ಲಿಸುವ ಬದಲು, ಪ್ರಮಾಣ ಕಡಿತ ಮಾಡುವುದು ಹೆಚ್ಚು ಸಹಕಾರಿ.

weight loss

ಕೊಬ್ಬು ಕರಗಿಸಿ

ತೂಕ ಇಳಿಸುವುದೆಂದರೆ ದೇಹದಲ್ಲಿರುವ ಕೊಬ್ಬಿನ ಭಾಗವನ್ನು ಕರಗಿಸುವುದು, ಮಾಂಸಖಂಡಗಳನ್ನಲ್ಲ. ಕೊಬ್ಬು ಕಡಿಮೆ ಮಾಡುವುದರ ಜೊತೆಗೆ ಸ್ನಾಯುಗಳನ್ನು ಸಶಕ್ತ ಮಾಡುವುದು. ಅಂದರೆ, ದೇಹಕ್ಕೆ ಅಗತ್ಯವಾದ ಪ್ರೊಟೀನ್‌ ಒದಗಿಸಿ. ಸ್ನಾಯುಗಳನ್ನು ಹುರಿಗೊಳಿಸಲು ಸರಿಯಾದ ವ್ಯಾಯಾಮ ಮಾಡಿ. ಆಗ ಮಾತ್ರವೇ ಕರಗಿಸಿದ ತೂಕವನ್ನು ಹೆಚ್ಚಿನ ದಿನಗಳವರೆಗೆ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಧಿಡೀರ್‌ ಇಳಿದದ್ದು, ಹಾಗೆಯೇ ಏರಲೂಬಹುದು.

ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ಬೇಕು. ಸೂಕ್ತ ಪ್ರಮಾಣದಲ್ಲಿ ಪಿಷ್ಟ, ಪ್ರೊಟೀನ್‌, ನಾರು, ಖನಿಜ ಮತ್ತು ಜೀವಸತ್ವಗಳು ದೇಹದ ಕಾರ್ಯಕ್ಷಮತೆಗೆ ಅಗತ್ಯ. ಕ್ಯಾಲರಿಗಳನ್ನು ಕಡಿತ ಮಾಡುವಾಗ ಇಂಥ ಅಮೂಲ್ಯ ಸತ್ವಗಳು ದೇಹಕ್ಕೆ ಕೊರತೆಯಾಗಬಾರದು. ಕೇವಲ ಅನಗತ್ಯ ಕ್ಯಾಲರಿಗಳಿಗಷ್ಟೇ ಕತ್ತರಿ ಹಾಕಬೇಕು. ಅಗತ್ಯವಾಗ ಪೋಷಕತತ್ವಗಳು ಯಾವುದೇ ಕಡಿಮೆಯಾದರೂ ದೇಹ ದುರ್ಬಲವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಸುಸ್ತು, ಆಯಾಸ, ಮಲಬದ್ಧತೆ, ಕೂದಲು ಉದುರುವುದು- ಹೀಗೆ ನಾನಾ ರೀತಿಯಲ್ಲಿ ದೇಹ ತನ್ನ ಕಷ್ಟವನ್ನು ನಮ್ಮೊಂದಿಗೆ ಹೇಳಲು ತೊಡಗುತ್ತದೆ.

ಅತಿಯಾದ, ಅವೈಜ್ಞಾನಿಕ ಡಯೆಟ್‌ನಿಂದ ಅನೋರೆಕ್ಸಿಯ ಅಥವಾ ನಿರ್ಜಲೀಕರಣದಂಥ ಸಮಸ್ಯೆ ಕಾಡಬಹುದು. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ತೂಕ ಇಳಿಸುವುದೆಂದರೆ ಸರ್ಕಸ್‌ ಅಲ್ಲ; ಅದು ಆರೋಗ್ಯಕರ ದೇಹ ಮತ್ತು ಮನಸ್ಸುಗಳತ್ತ ನಾವು ಇಡುವ ಸುಸ್ಥಿರ ಹೆಜ್ಜೆ. ಧಿಡೀರ್‌ ತೂಕ ಇಳಿಸುವ ಮೋಹಕ್ಕೆ ಬೀಳದೆ, ಇಡೀ ಪ್ರಕ್ರಿಯೆಯನ್ನು ನಿಧಾನವಾಗಿ ಮತ್ತು ನಿರ್ಣಾಯಕವಾಗಿ ಕೈಗೆತ್ತಿಕೊಳ್ಳಿ.

ಇದನ್ನೂ ಓದಿ: Brain Exercise: ಚುರುಕಾಗಿರಬೇಕೇ? ದೇಹಕ್ಕೆ ವ್ಯಾಯಾಮ ಮಾಡಿದರೆ ಸಾಲದು, ಮೆದುಳಿಗೂ ಮಾಡಿ!

Continue Reading

ಆಹಾರ/ಅಡುಗೆ

Midnight Hunger: ಮಧ್ಯರಾತ್ರಿಯ ಹಸಿವು ನಿಮ್ಮನ್ನು ಕಾಡುತ್ತಿದೆಯೆ? ಈ ಸಂಗತಿಗಳನ್ನು ಗಮನಿಸಿ

ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ (Midnight hunger) ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಆದರೆ ಇದರ ಪರಿಣಾಮ?

VISTARANEWS.COM


on

Midnight Hunger
Koo

ಬಹಳಷ್ಟು ಮಂದಿಯ ಸಮಸ್ಯೆ ಎಂದರೆ ಮಧ್ಯರಾತ್ರಿಯ ಹಸಿವು (Midnight hunger). ಹೌದು. ಇಡೀ ದಿನ ಒಂದು ಶಿಸ್ತುಬದ್ಧ ಆಹಾರ ಕ್ರಮದಲ್ಲಿ ದಿನ ಕಳೆದ ಮೇಲೆ, ಅದ್ಯಾಕೋ ಮಧ್ಯರಾತ್ರಿಯ ಹೊತ್ತು ಏನಾದರೂ ತಿನ್ನಬೇಕೆಂಬ ಚಪಲ ಹೆಚ್ಚುತ್ತದೆ. ಇಡೀ ದಿನದ ತಪಸ್ಸು ನೀರಿನಲ್ಲಿ ಮಾಡಿದ ಹೋಮದಂತಾಗಿಬಿಡುತ್ತದೆ. ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರೊಂದು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಇದರ ಪರಿಣಾಮ ಅನಾರೋಗ್ಯಕರ ಕುರುಕಲು ತಿನಿಸುಗಳೇ ಹೊಟ್ಟೆ ಸೇರುತ್ತದೆ. ಹಾಗಾದರೆ, ಈ ಮಧ್ಯರಾತ್ರಿಯ ತಿನ್ನುವ ಚಪಲವನ್ನು (Midnight hunger) ಮೀರುವುದು ಹೇಗೆ? ಇದರಿಂದ ಹೊರಬರುವುದು ಹೇಗೆ ಎಂಬ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಯಸುವವರಿಗೆ ಇಲ್ಲಿ ಕೆಲವು ಸಲಹೆಗಳಿವೆ.

indian dinner

ರಾತ್ರಿಯೂಟ ಪ್ರೊಟೀನ್‌ನಿಂದ ಶ್ರೀಮಂತವಾಗಿರಲಿ

ಹೌದು. ರಾತ್ರಿಯ ಊಟವನ್ನು ಬೇಗ ಮುಗಿಸುವವರೂ ಸೇರಿದಂತೆ ಒಂದು ಬಹುಮುಖ್ಯ ಉಪಾಯವೆಂದರೆ, ರಾತ್ರಿಯ ಊಟದ ಆಯ್ಕೆ. ನಿಮ್ಮ ರಾತ್ರಿಯ ಊಟದಲ್ಲಿ ಪ್ರೊಟೀನ್‌ ಹೆಚ್ಚಿರಲಿ. ಪ್ರೊಟೀನ್‌ನಿಂದ ಕೂಡಿದ ಆಹಾರ ಹೊಟ್ಟೆ ತುಂಬಿಸಿದ ಅನುಭವ ಕೊಡುತ್ತದೆ. ಪರಿಣಾಮವಾಗಿ ಹಸಿವಾಗುವುದಿಲ್ಲವಾದ್ದರಿಂದ ತಡರಾತ್ರಿ ತಿನ್ನಬೇಕೆಂಬ ತುಡಿತ ಕಾಡುವುದಿಲ್ಲ. ಹಾಗಾಗಿ ರಾತ್ರಿಯ ಊಟವನ್ನೇ ಯೋಚಿಸಿ ಮಾಡಿ. ಆಗ ಏನೇನೋ ಹಾಳುಮೂಳು ತಡರಾತ್ರಿ ತಿನ್ನುವುದು ತಪ್ಪುತ್ತದೆ.

ಕಡಿಮೆ ತಿನ್ನಿ

ರಾತ್ರಿ ಹೀಗೆ ಪ್ರೊಟೀನ್‌ಭರಿತ ಊಟ ಮಾಡಿದರೂ ಮಧ್ಯರಾತ್ರಿ ಹಸಿವಾಯಿತು ಎಂದೇ ಇಟ್ಟುಕೊಳ್ಳೋಣ. ಆಗ ಏನು ಮಾಡುವುದು, ಏನಾದರೂ ತಿನ್ನದೆ ಇದ್ದರೆ ಅಸಿಡಿಟಿಯ ಸಮಸ್ಯೆ ಕೆಲವರದ್ದು. ಹೀಗಾಗಿ ಏನು ತಿನ್ನಬಹುದು, ಏನು ಮಾಡಬೇಕು ಎಂಬ ಪ್ರಶ್ನೆ ಕೆಲವರದ್ದು. ಇಂಥ ಸಂದರ್ಭ ಖಂಡಿತವಾಗಿಯೂ ತಿನ್ನಿ. ಆದರೆ ಏನು ತಿನ್ನುತ್ತಿದ್ದೀರಿ ಎಂಬ ಬಗ್ಗೆ ಗಮನ ಇರಲಿ. ಜೊತೆಗೆ ಎಷ್ಟು ತಿನ್ನುತ್ತಿದ್ದೀರಿ ಎಂಬ ಗಮನವೂ ಇರಲಿ. ಹಾಗಾಗಿ ಇಂಥ ಸಂದರ್ಭ ತಿನ್ನಲಿಕ್ಕಾಗಿಯೇ ಕೆಲವು ಆರೋಗ್ಯಕರ ಆಹಾರಗಳನ್ನು ಸ್ನ್ಯಾಕ್‌ಗಳನ್ನು ಜೊತೆಗೆ ಇಟ್ಟುಕೊಂಡಿರಿ. ಅಷ್ಟೇ ಅಲ್ಲ, ಹೆಚ್ಚು ತಿನ್ನಬೇಡಿ. ಕಡಿಮೆ ಪ್ರಮಾಣದಲ್ಲಿ ತಿಂದು ಹೊಟ್ಟೆಯನ್ನು ಸಮಾಧಾನಪಡಿಸಿ.

Dry seeds

ಒಣಬೀಜಗಳು

ಹೊಟ್ಟೆಯನ್ನು ಸಮಾಧಾನಪಡಿಸುವ ಇಂತಹ ಆರೋಗ್ಯಕರ ಸ್ನ್ಯಾಕ್‌ಗಳು ಏನಿವೆ ಎಂದು ನೀವು ಕೇಳಿದರೆ, ಖಂಡಿತ ಇವೆ. ಒಣಬೀಜಗಳು ಇಂಥ ಸಮಯಕ್ಕೆ ಹೇಳಿ ಮಾಡಿಸಿದ ಸ್ನ್ಯಾಕ್‌ಗಳು. ಕೆಲವು ಹುರಿದ ಧಾನ್ಯಗಳು, ಒಣಬೀಜಗಳು, ಮಖಾನಾದಂತಹ ಕಡಿಮೆ ಕ್ಯಾಲರಿಯ ಸ್ನ್ಯಾಕ್‌ಗಳನ್ನು ಇಟ್ಟುಕೊಳ್ಳಬಹುದು. ಇವು ಕೇವಲ ಆರೋಗ್ಯಕರವಷ್ಟೇ ಅಲ್ಲ, ಇದರಲ್ಲಿರುವ ಕೊಬ್ಬೂ ಕೂಡಾ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಒಳ್ಳೆಯ ಕೊಬ್ಬೇ ಆಗಿದೆ. ಹೀಗಾಗಿ. ಚಿಪ್ಸ್‌, ಕುರುಕಲು, ಎಣ್ಣೆ ಪದಾರ್ಥಗಳು, ಜ್ಯೂಸ್‌ಗಳು, ಟೆಟ್ರಾ ಪ್ಯಾಕೆಟ್‌ಗಳು, ಕೆಫಿನ್‌ಯುಕ್ತ ಪೇಯಗಳು ಇತ್ಯಾದಿಗಳನ್ನು ಹೀರುವ ಅಭ್ಯಾಸವಿದ್ದರೆ ಖಂಡಿತಾ ಬಿಡಿ. ಬಹುಮುಖ್ಯವಾಗಿ ಇಂಥವನ್ನು ಖರೀದಿಸುವ ಅಭ್ಯಾಸವನ್ನೇ ಮೊದಲು ಬಿಡಿ. ಉತ್ತಮ ಆರೋಗ್ಯಕರ ಒಣಬೀಜಗಳು, ಹುರುದ ಧಾನ್ಯಗಳು ಇತ್ಯಾದಿಗಳನ್ನು ಪಕ್ಕದಲ್ಲಿಡಿ. ಕೆಲ ದಿನಗಳ ಕಾಲ ಈ ಅಭ್ಯಾಸ ಕಷ್ಟವಾಗಬಹುದು. ಆದರೆ, ಕಷ್ಟವೇನಲ್ಲ. ಪ್ರಯತ್ನ ಪಟ್ಟರೆ ಖಂಡಿತ ಸಾಧ್ಯವಾಗುತ್ತದೆ.

ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!

Continue Reading

ಆರೋಗ್ಯ

Summer Storage Tips: ಬೇಸಿಗೆಯಲ್ಲಿ ತರಕಾರಿಗಳನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ಅಂಗಡಿಯಿಂದ ತರುವಾಗ ನಳನಳಿಸುತ್ತಿದ್ದ ತರಕಾರಿಗಳನ್ನೇ ಆಯ್ಕೆ ಮಾಡಿಕೊಂಡರೂ, ಅವು ಅಷ್ಟೊಂದು ಅಲ್ಪಾಯುಗಳೇ ಎಂದು ಯೋಚಿಸುವಂತಾಗುತ್ತದೆ. ಬೇಸಿಗೆಯಲ್ಲಿ ತರಕಾರಿಗಳು ಯಾವ ಮಟ್ಟಿಗೆ ಬಾಡುತ್ತವೆ ಎಂದರೆ, ಕ್ಯಾರೆಟ್‌, ಹುರುಳಿಕಾಯಿ, ಆಲೂಗಡ್ಡೆ, ಸೋರೇಕಾಯಿಯಂಥವು ರಬ್ಬರಿನಂತಾಗಿ ಬಿಡುತ್ತದೆ. ಧಗೆಯ ದಿನಗಳಲ್ಲಿ ಕ್ಷಣಮಾತ್ರದಲ್ಲಿ ಬಾಡಿ, ಒಣಗಿ ಹೋಗುವಂತಾಗುತ್ತವೆ ತರಕಾರಿ, ಹಣ್ಣುಗಳು. ಅವುಗಳಲ್ಲಿ ಸಂರಕ್ಷಿಸಿಕೊಳ್ಳುವುದೇ ಸವಾಲು. ಅವುಗಳ ಸತ್ವ ನಶಿಸದಂತೆ ಕಾಪಾಡಿಕೊಳ್ಳುವುದು (Select Summer Storage Tips) ಹೇಗೆ? ಈ ಲೇಖನ ಓದಿ.

VISTARANEWS.COM


on

Summer Storage Tips
Koo

ಬೇಸಿಗೆಯ ಉರಿ ತಾಪಕ್ಕೆ ಕಾಯಿಪಲ್ಲೆಗಳು ಬಾಡುವುದು ಸಹಜ. ಹಾಗೆಂದು ದುಡ್ಡು ಕೊಟ್ಟು ತಂದ ಹಣ್ಣು-ತರಕಾರಿಗಳು ಒಣಗಿ, ನಾರಿನಂತಾದರೆ ಅವುಗಳನ್ನು ತಿನ್ನುವುದು ಹೇಗೆ? ತಿಂದರೂ, ಸತ್ವಹೀನವಾದ ಅವುಗಳ ಸತ್ವ ನಮಗೆಲ್ಲಿ ದೊರೆಯುತ್ತದೆ? ಅಂಗಡಿಯಿಂದ ತರುವಾಗ ನಳನಳಿಸುತ್ತಿದ್ದ ತರಕಾರಿಗಳನ್ನೇ ಆಯ್ಕೆ ಮಾಡಿಕೊಂಡರೂ, ಅವು ಅಷ್ಟೊಂದು ಅಲ್ಪಾಯುಗಳೇ ಎಂದು ಯೋಚಿಸುವಂತಾಗುತ್ತದೆ. ಬೇಸಿಗೆಯಲ್ಲಿ ತರಕಾರಿಗಳು ಯಾವ ಮಟ್ಟಿಗೆ ಬಾಡುತ್ತವೆ ಎಂದರೆ, ಕ್ಯಾರೆಟ್‌, ಹುರುಳಿಕಾಯಿ, ಆಲೂಗಡ್ಡೆ, ಸೋರೇಕಾಯಿಯಂಥವು ರಬ್ಬರಿನಂತಾಗಿ ಎಳೆದಷ್ಟೂ ಹಿಗ್ಗಿ ಮತ್ತೆ ಮೊದಲಿನ ಗಾತ್ರಕ್ಕೇ ಕುಗ್ಗುವ ಸ್ಥಿತಿಸ್ಥಾಪಕ ಗುಣವನ್ನು ಹೊಂದಿಬಿಡುತ್ತವೆ.
ಸ್ವಲ್ಪ ಎಳೆಯ ತರಕಾರಿಗಳ ಕಥೆ ಹೀಗಾದರೆ, ಚೆನ್ನಾಗಿ ಬಲಿತವು ಮರದಂತಾಗಿ, ಅದನ್ನು ಕತ್ತರಿಸುವುದಕ್ಕೆ ಗರಗಸವೇ ಬೇಕು ಎಂಬ ಸ್ಥಿತಿ ಬರುತ್ತದೆ. ಇನ್ನು ಹಣ್ಣುಗಳಲ್ಲಂತೂ ರಸವೇ ಉಳಿಯದೆ, ನಿಸ್ಸಾರವಾಗಿ ಬಿಡುತ್ತವೆ. ಮಳೆಗಾಲದಲ್ಲಿ ಕೊಳೆಯುವುದು ಸಹಜ, ಅಂತೆಯೇ ಬೇಸಿಗೆಯಲ್ಲಿ ಬಾಡುವುದು. ಕಾಲಕ್ಕೆ ತಕ್ಕಂತೆ ಹಣ್ಣು-ತರಕಾರಿಗಳು ಇರುತ್ತವೆ ಎಂಬುದು ಸರಿಯಾದರೂ ಬಾಡಿದ್ದು, ಬೆಳೆದಿದ್ದು, ಕೊಳೆತಿದ್ದನ್ನೆಲ್ಲಾ ತಿನ್ನಲಾದೀತೇ? ಅವುಗಳ ಪೋಷಕಾಂಶಗಳನ್ನು ಸಂರಕ್ಷಿಸಿಟ್ಟುಕೊಳ್ಳುವುದು ಸಾಧ್ಯವೇ? ಬೇಸಿಗೆಯ ತಾಪಕ್ಕೆ ಒಣಗಿ, ಮುರುಟಿದಂತಾಗುವ ಹಣ್ಣು, ತರಕಾರಿಗಳನ್ನು ಕಾಪಾಡಿಕೊಳ್ಳುವುದು (Select Summer Storage Tips) ಹೇಗೆ?

Fresh Vegetables

ದಾರಿ ಯಾವುದು?

ಮೊದಲನೆಯದಾಗಿ, ಸ್ಥಳೀಯವಾಗಿ ಬೆಳೆಯುವ ಕಾಯಿಪಲ್ಲೆಗಳಿಗೆ ಆದ್ಯತೆ ನೀಡಿ. ಯಾವುದೋ ದೂರದ ಊರಿನ ತರಕಾರಿಗಳು, ಬೇರೆ ದೇಶದ ಹಣ್ಣುಗಳನ್ನು ದುಬಾರಿ ಬೆಲೆ ತೆತ್ತು ತಂದರೂ, ಅವುಗಳ ಆಯಸ್ಸು ಹೆಚ್ಚಿರುವುದಿಲ್ಲ. ಕಾರಣ, ಶೀತಲ ಪೆಟ್ಟಿಗೆಯಲ್ಲೋ ಅಥವಾ ಪ್ರಿಸರ್ವೇಟಿವ್‌ ಹೊತ್ತೋ ಬರುವ ಈ ವಸ್ತುಗಳು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಹಿಂದೆಯೇ ಮೂಲ ಸಸ್ಯದಿಂದ ಬೇರೆಯಾದಂಥವು. ಹಾಗಾಗಿ ಸ್ಥಳೀಯ ಉತ್ಪನ್ನಗಳೇ ಹೆಚ್ಚು ತಾಜಾ ಆಗಿರಲು ಸಾಧ್ಯ. ಜೊತೆಗೆ, ತರಕಾರಿ-ಹಣ್ಣುಗಳನ್ನು ಮುಂದಿನ ನಾಲ್ಕಾರು ದಿನಗಳಿಗೆ ಮಾತ್ರವೇ ಖರೀದಿಸಿ. ವಾರಗಟ್ಟಲೆ ಆಗುವಷ್ಟು ಫ್ರಿಜ್‌ನಲ್ಲಿ ಇರಿಸಿದರೆ, ಶೇಖರಣೆ ಕಷ್ಟವಾದೀತು. ಅವುಗಳ ಸತ್ವಗಳೂ ಉಳಿಯುವುದಿಲ್ಲ.

Greens vegetables

ಸೊಪ್ಪುಗಳು

ಸೊಪ್ಪುಗಳನ್ನು ತಂದಾಗ, ಅವುಗಳ ಬೇರಿಗೆ ಮಣ್ಣು ಅಂಟಿದ್ದರೆ, ಅದನ್ನು ತೊಳೆದು ಶುಚಿ ಮಾಡಿ. ನಂತರ ಆ ಸೊಪ್ಪಿನ ಕಂತೆ ಬಿಚ್ಚಿ ಅದನ್ನು ಯಥಾವತ್‌ ಒಂದು ಪಾತ್ರೆ ನೀರಿನಲ್ಲಿ, ಬೇರು ಮುಳುಗುವಂತೆ ಇಡಿ. ಎಲೆಗಳಿಗೆ ನೀರು ತಾಗುವುದು ಬೇಡ. ಹೀಗಿಟ್ಟರೆ ಒಂದೆರಡು ದಿನಗಳವರೆಗೂ ಸೊಪ್ಪುಗಳು ಅಗ್ದಿ ತಾಜಾ ಆಗಿರಬಲ್ಲವು. ಬೇರು ಇಲ್ಲದಿದ್ದರೆ, ಅವುಗಳನ್ನು ಸೋಸಿ, ನೀರಿದ್ದರೆ ಆರಿಸಿ, ಫ್ರಿಜ್‌ನಲ್ಲಿ ಇಡಬಹುದು. ಆದರೆ ಈರುಳ್ಳಿ, ಆಲೂಗಡ್ಡೆ, ಗೆಣಸು, ಬೆಳ್ಳುಳ್ಳಿ, ಟೊಮೇಟೊಗಳನ್ನು ಫ್ರಿಜ್‌ನಲ್ಲಿ ಇರಿಸದೆ, ತಂಪಾದ ಸ್ಥಳದಲ್ಲಿ ಶೇಖರಿಸುವುದೇ ಸರಿ.

Summer Fruits

ಹಣ್ಣುಗಳು

ಇನ್ನೇನು ಮಾವಿನ ಋತು ಪ್ರಾರಂಭವಾಗುತ್ತದೆ. ಆದರೆ ಇದನ್ನು ಶೇಖರಿಸಲು ಸಮಸ್ಯೆಯಿಲ್ಲ. ಮಾವು, ಬಾಳೆ, ಅವಕಾಡೊ, ಕಿವಿ, ಪೇರ್‌, ಪ್ಲಮ್‌ ಮುಂತಾದ ಹಣ್ಣುಗಳು ಕಳಿತಾಗ ಇಥಲೀನ್‌ ಅನಿಲ ಬಿಡುಗಡೆಯಾಗುತ್ತದೆ. ಇದರಿಂದ ಈ ಹಣ್ಣುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸೇಬುಹಣ್ಣು, ಕಲ್ಲಂಗಡಿ, ಗಜ್ಜರಿ, ಬ್ರೊಕೊಲಿಯಂಥ ಹಸಿರು ತರಕಾರಿ ಮುಂತಾದವುಗಳು ಇಥಲೀನ್‌ನಿಂದಾಗಿ ಅವಧಿಗೆ ಮೊದಲೇ ಆಯಸ್ಸು ಕಳೆದುಕೊಳ್ಳುತ್ತವೆ. ಹಾಗಾಗಿ ಈ ಎರಡು ಜಾತಿಯ ಹಣ್ಣ-ತರಕಾರಿಗಳನ್ನು ಒಟ್ಟಾಗಿಸದೆ ಪ್ರತ್ಯೇಕವಾಗಿಯೇ ಶೇಖರಿಸಿಡಿ.

wash fruits

ತೊಳೆಯಬೇಡಿ

ತಂದ ಹಣ್ಣು-ತರಕಾರಿಗಳನ್ನೆಲ್ಲಾ ತೊಳೆದು ಶುಚಿ ಮಾಡಿ ಶೇಖರಿಸುವ ಅಭ್ಯಾಸವಿದೆಯೇ? ಆದರೆ ಬೆರ್ರಿಗಳು, ದ್ರಾಕ್ಷಿಯಂಥವನ್ನು ತಿನ್ನುವ ಮೊದಲಷ್ಟೇ ತೊಳೆದರೆ ಸಾಕು. ಮೊದಲೇ ಅವುಗಳನ್ನು ನೀರಿಗೆ ಹಾಕಿದರೆ, ಎಷ್ಟು ಪ್ರಯತ್ನಿಸಿದರೂ, ಅವುಗಳಲ್ಲಿನ ನೀರು ಆರಿಸುವುದು ಸಾಧ್ಯವಿಲ್ಲ. ಹಾಗಾಗಿ ಈ ಫಲಗಳು ಶೀಘ್ರವೇ ಕೊಳೆಯಲಾರಂಭಿಸುತ್ತವೆ. ಶುಂಠಿಯನ್ನು ಸಹ ಮಣ್ಣಿನೊಂದಿಗೇ ತಂಪಾದ ಜಾಗದಲ್ಲಿರಿಸಿ, ಬೇಕಾದಾಗ ತೊಳೆದು ಉಪಯೋಗಿಸಿದರೆ ಅದರ ಆಯಸ್ಸು ಹೆಚ್ಚು.

ಡಬ್ಬಿಗಳಲ್ಲಿ ಮುಚ್ಚಿಡಿ

ಹೂ ಹೋಸು, ಎಲೆಕೋಸು, ಬ್ರೊಕೊಲಿಯಂಥ ತರಕಾರಿಗಳನ್ನು ಡಬ್ಬಿಗಳಲ್ಲಿ ಬಿಗಿಯಾಗಿ ಮುಚ್ಚಿಡಿ. ಕತ್ತರಿಸದೇ ಇರುವುದನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಇರಿಸಬಹುದು. ಒಮ್ಮೆ ಕತ್ತರಿಸಿಯಾದ ಮೇಲೆ ಡಬ್ಬಿಗಳಲ್ಲಿ ಸೀಲ್‌ ಮಾಡಿ ಶೇಖರಿಸಿ. ಹಾಗಿಲ್ಲದಿದ್ದರೆ ಅವುಗಳು ಬೇಗನೇ ಕಪ್ಪಾಗುತ್ತವೆ. ಕ್ಯಾರೆಟ್‌, ಮೂಲಂಗಿ, ಬೀಟ್‌ನಂಥ ಗಡ್ಡೆಗಳನ್ನು ತಂದಾಗ, ಅವುಗಳ ಮೇಲೆ ಸೊಪ್ಪುಗಳಿರಬಹುದು. ಈ ಸೊಪ್ಪನ್ನು ಬೇರ್ಪಡಿಸಿಯೇ ಶೇಖರಿಸಿಡಿ. ಪ್ಲಾಸ್ಟಿಕ್‌ ಚೀಲಗಳಲ್ಲಿ ಫ್ರಿಜ್‌ನಲ್ಲಿಟ್ಟರೆ ಇವುಗಳನ್ನು ವಾರಗಟ್ಟಲೆ ಕೆಡದಂತೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Summer Storage Tips: ಬೇಸಿಗೆಯಲ್ಲಿ ಸೊಪ್ಪು- ತರಕಾರಿಗಳು ತಾಜಾ ಇರುವಂತೆ ಮಾಡಲು ಹೀಗೆ ಮಾಡಿ

Continue Reading
Advertisement
Breast Cancer
ಲೈಫ್‌ಸ್ಟೈಲ್49 seconds ago

Brest Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

BSP Candidates List
ಪ್ರಮುಖ ಸುದ್ದಿ1 min ago

BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

Road Accident in Hubballi
ಹುಬ್ಬಳ್ಳಿ15 mins ago

Road Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ, ಮತ್ತೋರ್ವ ಗಂಭೀರ

Rameshwaram Cafe
ಕ್ರೈಂ33 mins ago

Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!

New Job Trend
ಉದ್ಯೋಗ36 mins ago

New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

Boat Capsize
ದೇಶ53 mins ago

Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ನಾಲ್ವರು ಶಾಲಾ ಮಕ್ಕಳು ಜಲಸಮಾಧಿ

IPL 2024
ಕ್ರಿಕೆಟ್57 mins ago

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

IPL 2024
ಕ್ರಿಕೆಟ್1 hour ago

IPL 2024: ವಿಶ್ರಾಂತಿ ಬಯಸಿದ ಗ್ಲೆನ್ ಮ್ಯಾಕ್ಸ್​ವೆಲ್​; ಮುಂದಿನ ಪಂದ್ಯಗಳಿಗೆ ಅಲಭ್ಯ

elephant death in dubare camp
ಕೊಡಗು1 hour ago

Elephant Death: ಕ್ಯೂಟ್‌ ಆಗಿ ಆಟವಾಡುತ್ತಿದ್ದ ತಬ್ಬಲಿ ಮರಿಯಾನೆಗೆ ಕೊನೆಗೂ ಸಿಗಲಿಲ್ಲ ತಾಯಿ

Right To Sleep
ಪ್ರಮುಖ ಸುದ್ದಿ1 hour ago

Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ6 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 202423 hours ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌