ಕರ್ನಾಟಕ
Karnataka Election 2023: ಚಾಮರಾಜನಗರದಲ್ಲಿ ಸುದೀಪ್ ಜತೆ ರೋಡ್ ಶೋ; ಕಾರಿನಿಂದ ಕೆಳಗೆ ಬಿದ್ದ ಸೋಮಣ್ಣ
kiccha sudeep: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತ ಬೇಟೆಗೆ ನಾನಾ ರೀತಿಯ ಕಸರತ್ತುಗಳು ನಡೆಯುತ್ತಿವೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಕಿಚ್ಚ ಸುದೀಪ್ ಜತೆ ರೋಡ್ ಶೋ ನಡೆಸಿದ್ದು, ಈ ವೇಳೆ ಅಭಿಮಾನಿಯೊಬ್ಬನ ಅವಾಂತರದಿಂದ ಸೋಮಣ್ಣ ಕೆಳಗೆ ಬಿದ್ದಿದ್ದಾರೆ
ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಐದು ದಿನ ಮಾತ್ರವೇ ಬಾಕಿ ಇದೆ. ಈ ವೇಳೆ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್ ತಾರೆಯರನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಪರ ಕಿಚ್ಚ ಸುದೀಪ್ (Kiccha Sudeep) ಸಹ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ. ಸೋಮಣ್ಣ (V Somanna) ಪರ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಕಾರಿನ ಮೇಲೆ ಸುದೀಪ್ ಜತೆಗೆ ಹತ್ತಿ ನಿಂತಿದ್ದ ಸೋಮಣ್ಣ ಕೆಳಗೆ ಬಿದ್ದಿದ್ದಾರೆ.
ನಟ ಕಿಚ್ಚ ಸುದೀಪ್ ಈಗಾಗಲೇ ರಾಜ್ಯದ ಹಲವು ಕಡೆ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಪೂರ್ಣ ಬಹುಮತವನ್ನು ಬಿಜೆಪಿಗೆ ನೀಡಿ ಎಂದು ಮನವಿ ಮಾಡುತ್ತಾ ಬರುತ್ತಿದ್ದಾರೆ. ಅವರು ಹೋದಲೆಲ್ಲ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು, ಜನರು ಸೇರುತ್ತಿದ್ದಾರೆ. ಹೀಗಾಗಿ ಅವರಿಗೆ ಎಲ್ಲ ಕಡೆ ಪ್ರಚಾರಕ್ಕೆ ಬರುವಂತೆ ಬೇಡಿಕೆಗಳು ಹೆಚ್ಚಾಗಿವೆ. ಈ ನಡುವೆ ಸೋಮಣ್ಣ ಅವರು ತಾವು ಸ್ಪರ್ಧೆ ಮಾಡಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸುದೀಪ್ ಅವರನ್ನು ಕರೆಸಿಕೊಂಡಿದ್ದಾರೆ.
ಇದನ್ನೂ ಓದಿ: Modi in Karnataka : ಮೋದಿ ರೋಡ್ ಶೋ ನಡುವೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್ ಬಿಟ್ಟು ಸೀನ್ ಕ್ರಿಯೇಟ್ ಮಾಡ್ತಾರಂತೆ!
ಅಭಿಮಾನಿ ಮಾಡಿದ ಎಡವಟ್ಟು
ಚಾಮರಾಜನಗರದ ಸಂತೇಮರಹಳ್ಳಿಗೆ ವೃತ್ತ, ಗುಂಡ್ಲುಪೇಟೆ ವೃತ್ತದಲ್ಲಿ ರೋಡ್ ಶೋ ನಡೆಸಲಾಗುತ್ತಿತ್ತು. ಈ ವೇಳೆ ಸುದೀಪ್ ಕಾರಿನ ಮೇಲೆ ನಿಂತು ಜನರತ್ತ ಕೈಬೀಸುತ್ತಿದ್ದರು. ಕಾರಿನ ಸುತ್ತಲೂ ಅಭಿಮಾನಿಗಳ ದಂಡೇ ಸೇರಿತ್ತು. ಈ ವೇಳೆ ಸುದೀಪ್ ಜತೆಗೆ ಸಚಿವ ಸೋಮಣ್ಣ ಅವರೂ ನಿಂತಿದ್ದರು. ಸುದೀಪ್ ಅವರನ್ನು ತಬ್ಬಿಕೊಂಡು ಶುಭ ಹಾರೈಸುವ ವೇಳೆ ಹಿಂದಿನಿಂದ ಓಡಿ ಬಂದು ಕಾರು ಹತ್ತಿದ ಸುದೀಪ್ ಅಭಿಮಾನಿಯೊಬ್ಬ ಸೀದಾ ಕಾರಿನ ಮೇಲೆ ನಿಂತು ಸೋಮಣ್ಣ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಬಳಿಕ ಸುದೀಪ್ ಅವರನ್ನು ಮಾತನಾಡಿಸಲು ಹೋಗುವ ವೇಳೆ ನಿಯಂತ್ರಣ ತಪ್ಪಿದ್ದಾನೆ. ತಾನು ಕೆಳಗೆ ಬೀಳುವಾಗ ಸೋಮಣ್ಣ ಅವರನ್ನೂ ಹಿಡಿದುಕೊಂಡು ಬಿದ್ದಿದ್ದಾನೆ. ಆದರೆ, ಸೋಮಣ್ಣ ಅವರನ್ನು ಸುದೀಪ್ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ನಿಧಾನವಾಗಿ ಕಾರಿನ ಮೇಲೆಯೇ ಬಿದ್ದಿದ್ದಾರೆ.
ಅದೇ ವೇಳೆ ಸೋಮಣ್ಣ ಅವರನ್ನು ಬೌನ್ಸರ್ ಕೂಡಾ ಹಿಡಿದುಕೊಂಡಿದ್ದಾರೆ. ಇನ್ನೊಂದು ಕಡೆ ಆ ಅಭಿಮಾನಿ ಮೇಲೆ ಪೊಲೀಸರೊಬ್ಬರು ಲಾಠಿ ಬೀಸಿ ಕಳಿಸಿದ್ದಾರೆ.
ಲಘು ಲಾಠಿ ಪ್ರಹಾರ
ನಟ ಸುದೀಪ್ ಅವರನ್ನು ನೋಡಲು ಸಾವಿರಾರು ಮಂದಿ ಮುಗಿಬಿದ್ದಿದ್ದು, ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು. ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಸುದೀಪ್ ನೋಡಲು ನೂಕು ನುಗ್ಗಲು ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.
ಕಾರಿನಿಂದ ಕೆಳಗೆ ಬಿದ್ದ ಸೋಮಣ್ಣ ಅವರ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Karnataka Election 2023: ಶೋಭಾ ಕರಂದ್ಲಾಜೆ ಅವರೇ ನೀವು ಸೀತೆಯಾಗಿ, ಶೂರ್ಪನಖಿ ಆಗಬೇಡಿ: ರಮೇಶ್ ಬಾಬು ತಿರುಗೇಟು
ಕ್ರೇನ್ ಮೂಲಕ ಸೇಬಿನ ಹಾರ
ಚಾಮರಾಜನಗರದ ಸಂತೇಮರಹಳ್ಳಿಗೆ ವೃತ್ತ, ಗುಂಡ್ಲುಪೇಟೆ ವೃತ್ತದಲ್ಲಿ ಪ್ರಚಾರ ಮಾಡುವ ವೇಳೆ ನಟ ಸುದೀಪ್‌ಗೆ ಅವರ ಅಭಿಮಾನಿಗಳು ಸೇರಿ ಸೇಬಿನ ಹಾರ ಹಾಕಿದ್ದಾರೆ. ಸೋಮಣ್ಣ ಜತೆ ಕಾರಿನ ಮೇಲೆ ನಿಂತ ಸುದೀಪ್ ಜನರತ್ತ ಕೈ ಬೀಸುತ್ತಾ ಸಾಗಿದರು.
ಕರ್ನಾಟಕ
Liquor Consumption: ಬಡವನ ಕುಡಿತದ ವಾರ್ಷಿಕ ಲೆಕ್ಕಾಚಾರ ಇಲ್ಲಿದೆ! ದಿನಕ್ಕೆ ಆತನ ಸರಾಸರಿ ಖರ್ಚೆಷ್ಟು?
liquor price: ರಾಜ್ಯ ಸರ್ಕಾರ ಮದ್ಯದ ಮೇಲಿನ ಸುಂಕವನ್ನು ಏರಿಕೆ ಮಾಡುತ್ತಲೇ ಇದೆ. ಇದು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಕಾರಣದಿಂದಾಗಿ ಮದ್ಯದ ಮೇಲಿನ ಸುಂಕವನ್ನು ಇಳಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕುಡುಕರ ಸಂಘವು ಪತ್ರ ಬರೆದು ಮನವಿ ಮಾಡಿದೆ!
ಬೆಂಗಳೂರು: ಅನೇಕ ಬಜೆಟ್ ಮಂಡನೆ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಆಯಾ ಸರ್ಕಾರಗಳು ಶಾಕ್ ಕೊಡುತ್ತಲೇ ಬರುತ್ತಿವೆ. ಮದ್ಯದ ದರದ ಮೇಲೆ ಅಬಕಾರಿ ಸುಂಕವನ್ನು ಹೇರುತ್ತಿವೆ. ಈಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲಿದೆ. ಅದಕ್ಕೆ ಹಣ ಹೊಂದಾಣಿಕೆಯನ್ನು ಮಾಡಬೇಕಿದೆ. ಇದು ಈಗ ಮದ್ಯ ಪ್ರಿಯರಲ್ಲಿ ತಲ್ಲಣವನ್ನು ಹುಟ್ಟಿಸಿದೆ. ಈ ಕಾರಣಕ್ಕೆ ಅವರೆಲ್ಲರೂ “ಎಣ್ಣೆಯ ವಿಷ್ಯ, ಬೇಡವೋ ಶಿಷ್ಯ” ಎಂಬ ಹಾಡನ್ನು ಹಾಡಬೇಕಾಗುತ್ತದೆ ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮದ್ಯ ಪ್ರೇಮಿಗಳ/ಕುಡುಕರ ಸಂಘವು, ಈಗಾಗಲೇ ಮದ್ಯದ (Liquor Consumption) ಸುಂಕವನ್ನು ಹೆಚ್ಚಳ ಮಾಡಿದ್ದು, ಅದನ್ನು ಇಳಿಸಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ಈಗ ವೈರಲ್ (Viral News) ಆಗಿದೆ.
ಇದಲ್ಲದೆ, ಅಬಕಾರಿ ಸಚಿವರು, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ದಯಮಾಡಿ ಅಬಕಾರಿ ಸುಂಕವನ್ನು ಇಳಿಸಿ ಸಂಕಷ್ಟದಲ್ಲಿರುವ ಮದ್ಯ ಪ್ರಿಯರ ರಕ್ಷಣೆಗೆ ದಾವಿಸಿ ಎಂದು ಮೊರೆ ಇಟ್ಟಿದ್ದಾರೆ!
ಇದನ್ನೂ ಓದಿ: Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!
ಮನವಿ ಪತ್ರದಲ್ಲೇನಿದೆ?
ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರಿಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ ,ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ, ಸರ್ಕಾರಿ ನೌಕರರು, ವಕೀಲರು ಎಂಬ ತಾರತಮ್ಯ ಇಲ್ಲದೆ ಮದ್ಯ ಸೇವನೆಯನ್ನು ಮಾಡುತ್ತಾರೆ. ಎಲ್ಲ ವರ್ಗದವರು ಮದ್ಯ ಸೇವನೆಯನ್ನು ಮಾಡುತ್ತಿದ್ದು, ಇದು ಆಹಾರ ಸಂಸ್ಕೃತಿಯ ಭಾಗವಾಗಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಆರಾಧನೆ ಪದ್ಧತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಸುರಪಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ.
ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲ ಆದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬ ದುಃಖಕರ ವಿಷಯ. ಈಗಾಗಲೇ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಏನೆಂದರೆ, ಒಬ್ಬ ಬಿಪಿಎಲ್ ಕಾರ್ಡ್ ಹೊಂದಿದವನ ಆದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಗೂಲಿ ನೌಕರ ದಿನವೂ ಸರಾಸರಿ 180 ಎಂ.ಎಲ್. ಕುಡಿದರೂ ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿಯಷ್ಟು ಮದ್ಯಕ್ಕೆ ಖರ್ಚು ತಗಲುತ್ತದೆ. ಅಂದರೆ, ತಿಂಗಳಿಗೆ 7500 ರೂಪಾಯಿ ಬೇಕಾಗುತ್ತದೆ. ವಾರ್ಷಿಕ 90,000 ರೂಪಾಯಿ ಒಬ್ಬ ಮದ್ಯ ಪ್ರೇಮಿ ಕುಡುಕನಿಗೆ ಬೇಕಾಗುತ್ತದೆ.
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಆದ್ದರಿಂದ ಮದ್ಯದ ಮೇಲಿನ ಸುಂಕದ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಬ್ರಾಂಡ್‌ನ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಹಾಗೂ ಬಿಯರ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಎಲ್ಲ ಮದ್ಯ ಪ್ರಿಯ ಬ್ರದರ್ಸ್ & ಸಿಸ್ಟರ್ಸ್ ಪರವಾಗಿ ವಿನಂತಿಸುತ್ತೇವೆ.
ಕರ್ನಾಟಕ
Anganawadi worker: ತಂಗಿಗೆ ನನ್ನ ಕೆಲಸ ಕೊಡಿ ಎಂದು ತನ್ನ ಬದುಕಿಗೆ ದುರಂತ ಅಂತ್ಯ ಹಾಡಿದ ಅಂಗನವಾಡಿ ಕಾರ್ಯಕರ್ತೆ!
ಕೃಷಿ ಹೊಂಡಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತೆ (Anganawadi worker) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ತನ್ನ ಕೆಲಸವನ್ನು ತಂಗಿಗೆ ಕೊಡಿ ಎಂದು ಡೆತ್‌ನೋಟ್ (Death note) ಬರೆದಿದ್ದಾರೆ.
ಚಿಕ್ಕಬಳ್ಳಾಪುರ: ಇಲ್ಲಿನ ದಿಬ್ಬೂರು ಗ್ರಾಮದ ಕೃಷಿ ಹೊಂಡಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತೆ (Anganawadi worker) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಲಾವತಿ (35) ಆತ್ಮಹತ್ಯೆ ಮಾಡಿಕೊಂಡವರು.
ಕಲಾವತಿ ದಿಬ್ಬೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಆದರೆ ಡೆತ್‌ನೋಟ್ ಬರೆದಿಟ್ಟು ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ತನ್ನ ಕೆಲಸವನ್ನು ಮೈದುನ ಪತ್ನಿ ಅಂದರೆ ತನ್ನ ತಂಗಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ನನ್ನ ಸಾವಿಗೆ ನಾನೇ ಕಾರಣ, ಯಾರು ಹೊಣೆಯಲ್ಲ. ನನ್ನ ಮೈದುನ ಪತ್ನಿಗೆ (ತಂಗಿ) ನನ್ನ ಕೆಲಸ ಕೊಡಿ. ಆಕೆ ಚೆನ್ನಾಗಿ ಕೆಲಸ ಮಾಡುತ್ತಾಳೆ. ಬಾಲವಿಕಾಸ ಸಮಿತಿಯನ್ನು ಅಧ್ಯಕ್ಷರ ಮತ್ತು ಕಾರ್ಯಕರ್ತೆ ಹೆಸರಲ್ಲಿ ಜಂಟಿ ಖಾತೆ ತೆರಯಬೇಕು. ಜತೆಗೆ ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತಿಗೆ ಮನವಿ ಮಾಡಿದ್ದಾರೆ. ಜತೆಗೆ ತಾನು ಕೊಡಬೇಕಾಗಿರುವ ಸಾಲದ ವಿವರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಕೃಷಿ ಹೊಂಡದಿಂದ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Congress Guarantee: ಪಾರ್ಟ್ ಟೈಂ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!
ಜೂನ್ 10 ಹಾಗೂ 11ರಂದು ಕುಟುಂಬ ಸಮೇತರಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದರ್ಶನಕ್ಕೆ ಡಿ.ಕೆ. ಶಿವಕುಮಾರ್ ತೆರಳಲಿದ್ದಾರೆ.
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಅದ್ಧೂರಿಯಾಗಿ ಚಾಲನೆ ನೀಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ವಿನೂತನ ಉಪಾಯವೊಂದನ್ನು ಆಯ್ಕೆ ಮಾಡಿಕೊಂಡಿದೆ. ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಲು ಸ್ವತಃ ಸಿಎಂ ಸಿದ್ದರಾಮಯ್ಯ ಕಂಡಕ್ಟರ್ ಆಗಲಿದ್ದಾರೆ.
ಜೂನ್ 11ರಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಬಳಿ ಯೋಜನೆಗೆ ಚಾಲನೆ ನೀಡಿ ಸಿದ್ದರಾಮಯ್ಯ ಮಾತನಾಡಲಿದ್ದಾರೆ.
ಆದರೆ ಅದಕ್ಕೂ ಮುನ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ(ಮೆಜೆಸ್ಟಿಕ್) ವಿಧಾನಸೌಧದವರೆಗೆ ಮಾರ್ಗ ಸಂಖ್ಯೆ 43ರಲ್ಲಿ ಸಿದ್ದರಾಮಯ್ಯ ಬಸ್‌ನಲ್ಲೇ ಚಲಿಸಲಿದ್ದಾರೆ. ಈ ವೇಳೆ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ಸಿದ್ದರಾಮಯ್ಯ ನೀಡಲಿದ್ದಾರೆ. ಈ ರೀತಿ ವಿಧಾನಸೌಧದವರೆಗೂ ಕಂಡಕ್ಟರ್ ಆಗಿ ಕೆಲಸ ಮಾಡಲಿದ್ದಾರೆ.
ಡಿ.ಕೆ. ಶಿವಕುಮಾರ್ ಗೈರು
ಚುನಾವಣೆಗೂ ಮುನ್ನ ಕಾಂಗ್ರೆಸ್‌ನಿಂದ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದನ್ನು ಪ್ರಚಾರ ಮಾಡಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಪ್ರಚಾರದ ನೇತೃತ್ವ ವಹಿಸಿದ್ದ, ಇದೀಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಶಕ್ತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ.
ಜೂನ್ 10 ಹಾಗೂ 11ರಂದು ಕುಟುಂಬ ಸಮೇತರಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದರ್ಶನಕ್ಕೆ ಡಿ.ಕೆ. ಶಿವಕುಮಾರ್ ತೆರಳಲಿದ್ದಾರೆ. ಸರ್ಕಾರದ ಮಹತ್ವದ ಯೋಜನೆಗೆ ಚಾಲನೆ ನೀಡುವ ವೇಳೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಮೂಲಕ ಗೂರುಹಾಜರಾಗಲಿದ್ದಾರೆ.
ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಆರೋಗ್ಯ
Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!
Chamarajanagar oxygen tragedy: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 2021ರಲ್ಲಿ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ ಮೇ 2ರಂದು 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆಗ್ರಹಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಬೆಂಗಳೂರು: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಾಗೂ ಕೋವಿಡ್ (Covid 19) ಸಂದರ್ಭದಲ್ಲಿ ನಡೆದ ಕೆಲವು ಸಂಗತಿಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ (Chamarajanagar oxygen tragedy) ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಈ ಘಟನೆಯು ಎರಡು ಇಲಾಖೆಗೆ ಒಳಪಡುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ (Health Department) ಸಮನ್ವಯತೆ ಇರುವುದರಿಂದ ತನಿಖೆಯನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ, ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಹೊಸ ಸರ್ಕಾರ ಬಂದಿರುವುದರಿಂದ ನಾವು ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಮರು ತನಿಖೆಗೆ ಸರ್ಕಾರಕ್ಕೆ ಹೇಳಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಈ ಬಗ್ಗೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆಯಾಗಿದೆ. ನಾನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ. ಇದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರೂ ಕೆಲಸ ಮಾಡಬೇಕು. ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಬೇಕಿದೆ. ಅಲ್ಲಿ ಶಾಂತಿ ಸೌಹರ್ದತೆ ನೆಲೆಸಬೇಕಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಅವಧಿಯ ಟೆಂಡರ್‌ಗಳ ಮರು ಪರಿಶೀಲನೆ ಮಾಡಲಾಗುತ್ತದೆ. ಅನುಮಾನ ಬಂದ ಟೆಂಡರ್‌ಗಳ ತನಿಖೆ ಮಾಡುತ್ತೇವೆ. ಹೆಚ್ಚು ಬಿಡ್ ಮಾಡಿರುವ ಟೆಂಡರ್‌ಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಕರೆಯಲಾಗಿದ್ದ 108 ಆಂಬ್ಯುಲೆನ್ಸ್ ಟೆಂಡರ್ ಮತ್ತು ಡಯಾಲಿಸಿಸ್ ಟೆಂಡರ್ ಅನ್ನು ರದ್ದುಪಡಿಸಿದ್ದು, ಮರು ಟೆಂಡರ್ ಕರೆಯುತ್ತೇವೆ. ಜಿವಿಕೆ ಮೇಲೆ ಆರೋಪ ಬಂದಿರುವ ಕಾರಣ ಈ ಕ್ರಮ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ತರಾಟೆ
ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ಜತೆ ಸಭೆ ಮುಂದುವರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಗಳಲ್ಲಿ ಸಾವಾದರೆ ನಾನು ಸಹಿಸೋದಿಲ್ಲ. ಯಾರದ್ದೇ ತಪ್ಪು ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಚಾರವಾಗಿ ಯಾವುದೇ ರಾಜಕೀಯ ಒತ್ತಡ ತಂದರೂ ಪ್ರಯೋಜನ ಇಲ್ಲ. ರಾಜಕೀಯ ಒತ್ತಡ ತಂದರೆ ಅದರ ಮುಂದಿನ ಪರಿಣಾಮವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
ಈ ಹಿಂದೆ ಡಯಾಬಿಟಿಕ್ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಜಿರೋ ಡಯಾಬಿಟಿಕ್ ಎಂದು ಯಾದಗಿರಿ ಜಿಲ್ಲೆಯಲ್ಲಿ ವರದಿ ನೀಡಲಾಗಿದೆ. ಆದರೆ, ಇಂತಹ ತಪ್ಪು ಮಾಹಿತಿಗಳನ್ನು ಕೊಡಬಾರದು ಎಂದು ಇದೇ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ