Robotic Technology | ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನ - Vistara News

ಆರೋಗ್ಯ

Robotic Technology | ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನ

ನಗರದ ಫೋರ್ಟಿಸ್‌ ಆಸ್ಪತ್ರೆಯು ನೂತನ ತಂತ್ರಜ್ಞಾನದಿಂದ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನವನ್ನು (Robotic Technology) ಬಳಸಲಾಗಿದೆ.

VISTARANEWS.COM


on

Robotic Technology ಫೋರ್ಟಿಸ್‌ ಆಸ್ಪತ್ರೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫೋರ್ಟಿಸ್ ಆಸ್ಪತ್ರೆಯೂ ಇದೇ ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ (Robotic Technology) ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ತಂತ್ರಜ್ಞಾನದ ಮೂಲಕ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ ಹುಲ್ಸೆ, ಮ್ಯಾಕೋ ರೋಬೊಟಿಕ್ ಆರ್ಮ್ ಅಸಿಸ್ಟೆಡ್ ಟೆಕ್ನಾಲಜಿ ಬಳಸಿ ಬಹು ಅಸ್ವಸ್ಥತೆಯಿಂದ ಬಳಲುತ್ತಿದ್ದ 66 ವರ್ಷದ ಆಫ್ರಿಕನ್ ರೋಗಿಗೆ ಹೊಸ ಜೀವನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಈ ಆಫ್ರಿಕನ್‌ ರೋಗಿಯು ಕಳೆದ 15 ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಕಾಲಕ್ರಮೇಣ ಅವರ ಆರೋಗ್ಯ ಸ್ಥಿತಿ ಕ್ಷೀಣಿಸತೊಡಗಿತು. ಮೊಣಕಾಲು ನೋವಿನ ಜತೆಗೆ ಅಧಿಕ ರಕ್ತದೊತ್ತಡ, ಆಸ್ತಮಾ, ಜನ್ಮಜಾತ ಹೃದಯ ದೋಷಗಳು ಅವರನ್ನು ಬಹುವಾಗಿ ಕಾಡಿತ್ತು. ರೋಗಿಯು ಸಂಧಿವಾತದಿಂದಾಗಿ ಅವರ ಎರಡೂ ಮೊಣಕಾಲುಗಳು ಸಂಪೂರ್ಣವಾಗಿ ಹಾನಿಗೊಳಗಾದವು. ರೋಗಿಯು ಫೊರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಎರಡೂ ಮೊಣಕಾಲುಗಳಿಗೆ ಪ್ರತ್ಯೇಕವಾಗಿ 3 ದಿನಗಳ ಅಂತರದಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆವು. 3D ವರ್ಚುವಲ್ ಮಾದರಿ ಹಾಗೂ ಶಸ್ತ್ರಚಿಕಿತ್ಸೆ ನಡೆಸಲು ನೂತನ ತಂತ್ರಜ್ಞಾನವಾದ ಮ್ಯಾಕೋ ರೋಬೊಟಿಕ್ ತಂತ್ರಜ್ಞಾನವು ನಮಗೆ ಸಹಾಯ ಮಾಡಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೊಬೊಟಿಕ್-ಆರ್ಮ್ ಮೂಳೆಯನ್ನು ಸರಿಯಾದ ಕೋನದಲ್ಲಿ ವಿಭಜಿಸಲು ನೆರವು ನೀಡಿತು. ಈ ಮೂಲಕ ಅವರಿಗೆ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಅದರಲ್ಲಿ ಯಶಸ್ವಿ ಕಂಡೆವು ಎಂದು ವಿವರಿಸಿದರು.

ವೇಗ ಚೇತರಿಕೆ ಸಾಧ್ಯ
ಸಾಂಪ್ರದಾಯಿಕ ಮೊಣಕಾಲು ಅಥವಾ ಸೊಂಟ ಬದಲಿ ಶಸ್ತ್ರಚಿಕಿತ್ಸೆಗಳು ಕಳೆದ ಮೂರು ದಶಕಗಳಲ್ಲಿ ರೋಗಿಗಳ ಜೀವನದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುತ್ತಾ ಬಂದಿದೆ. ಆದರೆ, ಈ ನೂತನ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನವೂ ಮೂಳೆಗಳ ಜೋಡಣೆಯ ನಿಖರತೆಯನ್ನು ಇನ್ನಷ್ಟು ಸ್ವಷ್ಟಗೊಳಿಸಿದೆ. ತಂಡಾದ ಮೂಳೆ ಮತ್ತು ಮೃದು ಅಂಗಾಂಶಗಳ ಸಂರಕ್ಷಣೆ, ಶಸ್ತ್ರಚಿಕಿತ್ಸೆಯ ನಂತರದ ಅಸ್ವಸ್ಥತೆಯನ್ನು ಕಡಿಮೆ ಮಾಡಿದೆ. ವೇಗವಾಗಿ ಚೇತರಿಕೆಯಾಗುವುದರ ಜತೆಗೆ ರಕ್ತದ ನಷ್ಟವೂ ತಗ್ಗಲಿದೆ. ಇದೊಂದು ಅತ್ಯಂತ ಪ್ರಯೋಜನಕಾರಿ ತಂತ್ರಜ್ಞಾನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್‌ನ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ, ಮ್ಯಾಕೋ ಎಂಬ ರೋಬೊಟಿಕ್ ಪ್ಲಾಟ್‌ಫಾರ್ಮ್‌ ಅನ್ನು ಪರಿಚಯಿಸಲಾಗಿದ್ದು, ಒಂದೇ ವೇದಿಕೆಯಲ್ಲಿ ಮೊಣಕಾಲು ಮತ್ತು ಸಂಪೂರ್ಣ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸುಲಭಗೊಳಿಸಿದೆ ಎಂದಿದ್ದಾರೆ.

ಇದನ್ನೂ ಓದಿ | KFD vaccine | ಮಂಗನ ಕಾಯಿಲೆ ತಡೆ ಲಸಿಕೆಗೆ ಅನುಮತಿಯೇ ಇಲ್ಲ; ಆದರೂ ಜನರಿಗೆ ನೀಡುತ್ತಿದ್ದೆ ಸರ್ಕಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Cashless Health Claim: ಸಂಪೂರ್ಣ ನಗದು ರಹಿತ ಆರೋಗ್ಯ ವಿಮೆ ಕ್ಲೈಮ್; ಆಗಸ್ಟ್ 1ರಿಂದ ಜಾರಿ

ಅರೋಗ್ಯ ಕ್ಲೈಮ್ ನಲ್ಲಿ ನಗದು ರಹಿತ ಸೇವೆಗಳನ್ನು (Cashless Health Claim) ಸ್ವೀಕರಿಸಲು, ನಿಭಾಯಿಸಲು ಮತ್ತು ಸಹಾಯ ಮಾಡಲು ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್‌ಗಳನ್ನು ವಿಮೆಗಾರರು ವ್ಯವಸ್ಥೆಗೊಳಿಸಬೇಕು. ವಿಮಾದಾರರು ಡಿಜಿಟಲ್ ಮೋಡ್ ಮೂಲಕ ಪಾಲಿಸಿದಾರರಿಗೆ ಪೂರ್ವ ಅಧಿಕಾರವನ್ನು ಸಹ ಒದಗಿಸಬೇಕು ಎಂದು ಐಆರ್ ಡಿಎಐ ಸೂಚಿಸಿದೆ.

VISTARANEWS.COM


on

By

Cashless Health Claim
Koo

ಆರೋಗ್ಯ ವಿಮೆ (health insurance) ಕ್ಲೈಮ್ ಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇದು ಈ ವರ್ಷದ ಆಗಸ್ಟ್ 1ರಿಂದ ಜಾರಿಯಾಗಲಿದೆ. ಇನ್ನು ಮುಂದೆ ವಿಮಾ ಕಂಪನಿಗಳು ಆರೋಗ್ಯ ವಿಮಾ ಕ್ಲೈಮ್‌ಗಳ ನಗದು ರಹಿತ ಸೆಟಲ್‌ಮೆಂಟ್‌ ಗೆ (Cashless Health Claim) ಆದ್ಯತೆ ನೀಡಬೇಕಿದೆ. ಇದರಿಂದ ಪಾಲಿಸಿದಾರರ ಆಸ್ಪತ್ರೆ ಬಿಲ್ (hospital bill) ಪಾವತಿ ಸುಗಮವಾಗಲಿದೆ ಮತ್ತು ವೇಗವಾಗಿ ನಡೆಯಲಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇದಕ್ಕಾಗಿ 2024ರ ಜುಲೈ 31ರ ಮೊದಲು ಅಗತ್ಯ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ವಿಮಾದಾರರು ತಕ್ಷಣವೇ ಜಾರಿಗೆ ತರಬೇಕು ಎಂದು ಹೇಳಿದೆ.

ನಗದು ರಹಿತ ಸೇವೆಗಳನ್ನು ಸ್ವೀಕರಿಸಲು, ನಿಭಾಯಿಸಲು ಮತ್ತು ಸಹಾಯ ಮಾಡಲು ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್‌ಗಳನ್ನು ವಿಮೆದಾರರು ವ್ಯವಸ್ಥೆಗೊಳಿಸಬೇಕು. ವಿಮಾದಾರರು ಡಿಜಿಟಲ್ ಮೋಡ್ ಮೂಲಕ ಪಾಲಿಸಿದಾರರಿಗೆ ಪೂರ್ವ ಅಧಿಕಾರವನ್ನು ಸಹ ಒದಗಿಸಬೇಕು ಎಂದು ಐ ಆರ್ ಡಿ ಎ ಐ ತಿಳಿಸಿದೆ.

ನಗದು ರಹಿತ ಕ್ಲೈಮ್

ಪ್ರತಿಯೊಬ್ಬ ವಿಮಾದಾರರು ಸಮಯಕ್ಕೆ ಅನುಗುಣವಾಗಿ ಶೇ. 100ರಷ್ಟು ನಗದು ರಹಿತ ಕ್ಲೈಮ್ ಇತ್ಯರ್ಥವನ್ನು ಒದಗಿಸಲು ಪ್ರಯತ್ನಿಸಬೇಕು. ಮರುಪಾವತಿಯ ಮೂಲಕ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ನಿದರ್ಶನಗಳು ಕನಿಷ್ಠ ಮಟ್ಟದಲ್ಲಿರಿಸಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ವಿಮಾದಾರರು ಪ್ರಯತ್ನಿಸಬೇಕು ಎಂದು ಹೇಳಿದೆ.

ನಗದು ರಹಿತಕ್ಕೆ ತಕ್ಷಣ ನಿರ್ಧಾರ

ವಿಮಾದಾರರು ನಗದು ರಹಿತ ವಿನಂತಿಯನ್ನು ತಕ್ಷಣವೇ ನಿರ್ಧರಿಸಬೇಕು. ಅದು ವಿನಂತಿ ಸ್ವೀಕೃತಿಯ ಒಂದು ಗಂಟೆಗಿಂತ ಹೆಚ್ಚು ಇರಬಾರದು ಎಂದು ಐಆರ್ ಡಿಎ ಆರೋಗ್ಯ ವಿಮಾ ವ್ಯವಹಾರದ ಸುತ್ತೋಲೆಯಲ್ಲಿ ತಿಳಿಸಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವಿನಂತಿಯನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ವಿಮಾದಾರರು ಅಂತಿಮ ಸೆಟಲ್ ಮೆಂಟ್ ಮಾಡಬೇಕು ಎಂದು ತಿಳಿಸಿರುವ ಐಆರ್ ಡಿಎಐ, ಯಾವುದೇ ಸಂದರ್ಭದಲ್ಲೂ, ಪಾಲಿಸಿದಾರರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಕಾಯುವಂತೆ ಮಾಡಬಾರದು ಎಂದು ಹೇಳಿದೆ.


ಡಿಸ್ಚಾರ್ಜ್ ವಿಳಂಬ ಮಾಡಬಾರದು

ಡಿಸ್ಚಾರ್ಜ್ ಅವಧಿ ಮೂರು ಗಂಟೆಗಳಿಗಿಂತ ಹೆಚ್ಚಿನ ವಿಳಂಬವಾದರೆ ಆಸ್ಪತ್ರೆಯಿಂದ ಶುಲ್ಕ ವಿಧಿಸಿದರೆ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಭರಿಸಬೇಕು. ಚಿಕಿತ್ಸೆಯ ಸಮಯ, ಪಾಲಿಸಿದಾರನ ಮರಣ, ವಿಮಾದಾರನು ಕ್ಲೈಮ್ ಇತ್ಯರ್ಥಕ್ಕಾಗಿ ವಿನಂತಿಯನ್ನು ತಕ್ಷಣವೇ ಪ್ರಕ್ರಿಯೆಗೊಳಿಸಬೇಕು ಮತ್ತು ಮೃತ ದೇಹವನ್ನು ತಕ್ಷಣವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದು ಐಆರ್ ಡಿಎಐ ತಿಳಿಸಿದೆ.

ಕ್ಲೈಮ್ ಇತ್ಯರ್ಥದ ಸಮೀಕ್ಷೆ ವರದಿ ಏನು ಹೇಳಿದೆ?

ಪಾಲಿಸಿದಾರರಿಗೆ ಕ್ಲೈಮ್ ಇತ್ಯರ್ಥವು ತೊಡಕಿನ ಕಾರ್ಯವಿಧಾನವಾಗಿದೆ. ಸಮೀಕ್ಷೆಯೊಂದರ ಪ್ರಕಾರ ಕಳೆದ 3 ವರ್ಷಗಳಲ್ಲಿ ಶೇ. 43ರಷ್ಟು ವಿಮಾ ಪಾಲಿಸಿದಾರರು ತಮ್ಮ “ಆರೋಗ್ಯ ವಿಮೆ” ಕ್ಲೈಮ್‌ಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಿದ್ದರು. ವಿಮಾ ಕಂಪನಿಗಳು ಆರೋಗ್ಯ ಸ್ಥಿತಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ಸ್ಥಿತಿ ಎಂದು ವರ್ಗೀಕರಿಸುವ ಮೂಲಕ ಕ್ಲೈಮ್‌ಗಳನ್ನು ತಿರಸ್ಕರಿಸುವುದರಿಂದ ಹಿಡಿದು ಭಾಗಶಃ ಮೊತ್ತವನ್ನು ಮಾತ್ರ ಅನುಮೋದಿಸುವವರೆಗೆ ಸವಾಲುಗಳನ್ನು ಎದುರಿಸುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕ್ಲೈಮ್ ನಿರಾಕರಿಸುವಂತಿಲ್ಲ

ಉತ್ಪನ್ನ ನಿರ್ವಹಣಾ ಸಮಿತಿ (PMC) ಅಥವಾ ಕ್ಲೈಮ್ಸ್ ರಿವ್ಯೂ ಕಮಿಟಿ (CRC) ಎಂದು ಕರೆಯಲ್ಪಡುವ ಪಿಎಂಸಿಯ ಮೂರು ಸದಸ್ಯ ಉಪ-ಗುಂಪಿನ ಅನುಮೋದನೆಯಿಲ್ಲದೆ ಯಾವುದೇ ಕ್ಲೈಮ್ ಅನ್ನು ನಿರಾಕರಿಸಬಾರದು ಎಂದು ಹೇಳಿರುವ ಐಆರ್ ಡಿಎ ಐ, ಒಂದು ವೇಳೆ ಕ್ಲೈಮ್ ಅನ್ನು ನಿರಾಕರಿಸಿದರೆ ಅಥವಾ ಭಾಗಶಃ ಅನುಮತಿಸದಿದ್ದರೆ ಪಾಲಿಸಿ ಡಾಕ್ಯುಮೆಂಟ್‌ನ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಉಲ್ಲೇಖಿಸುವ ಸಂಪೂರ್ಣ ವಿವರಗಳನ್ನು ಹಕ್ಕುದಾರರಿಗೆ ತಿಳಿಸಬೇಕು. ಕ್ಲೈಮ್‌ನ ಸೂಚನೆಯ ಪ್ರಕಾರ ವಿಮಾದಾರರು ಮತ್ತು ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್‌ಗಳು (ಟಿಪಿಎ) ಆಸ್ಪತ್ರೆಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕು. ಪಾಲಿಸಿದಾರರು ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ನಿಯಂತ್ರಕರು ತಿಳಿಸಿದ್ದಾರೆ.


ಪಾಲಿಸಿ ಪೋರ್ಟ್ ಮಾಡುವ ಅಧಿಕಾರ

ಐಆರ್ ಡಿಎಐ ಪ್ರಕಾರ ಒಬ್ಬ ಪಾಲಿಸಿದಾರರು ತನ್ನ ಪಾಲಿಸಿಗಳನ್ನು ಒಬ್ಬ ವಿಮಾದಾರರಿಂದ ಇನ್ನೊಂದು ಇನ್ಶುರೆನ್ಸ್ ಕಂಪನಿಗೆ ಪೋರ್ಟ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಇದನ್ನು ಪಡೆಯುವವರು ಮತ್ತು ಅಸ್ತಿತ್ವದಲ್ಲಿರುವ ವಿಮಾದಾರರು ಜಂಟಿಯಾಗಿ ಪಾಲಿಸಿದಾರರ ಸಂಪೂರ್ಣ ಅಂಡರ್ರೈಟಿಂಗ್ ವಿವರಗಳು ಮತ್ತು ಕ್ಲೈಮ್ ಇತಿಹಾಸವನ್ನು ವರ್ಗಾಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅದು ಹೇಳಿದೆ.

ಅಸ್ತಿತ್ವದಲ್ಲಿರುವ ವಿಮಾದಾರರು ಸ್ವಾಧೀನಪಡಿಸಿಕೊಳ್ಳುವ ವಿಮಾದಾರರು ಕೇಳಿದ ಮಾಹಿತಿಯನ್ನು ತಕ್ಷಣವೇ ಒದಗಿಸಬೇಕು. ಅದು ವಿಮಾ ಮಾಹಿತಿ ಬ್ಯೂರೋ ಆಫ್ ಇಂಡಿಯಾ (IIB) ಮೂಲಕ ವಿನಂತಿಯ ಸ್ವೀಕೃತಿಯ 72 ಗಂಟೆಗಳ ಒಳಗೆ. ಸ್ವಾಧೀನಪಡಿಸಿಕೊಳ್ಳುವ ವಿಮಾದಾರರು ಪ್ರಸ್ತಾವನೆಯನ್ನು ತಕ್ಷಣವೇ ನಿರ್ಧರಿಸಬೇಕು ಮತ್ತು ಸಂವಹನ ಮಾಡಬೇಕು. ಆದರೆ ಅಸ್ತಿತ್ವದಲ್ಲಿರುವ ವಿಮಾದಾರರಿಂದ ಮಾಹಿತಿಯ ಸ್ವೀಕೃತಿಯ 5 ದಿನಗಳಿಗಿಂತ ಹೆಚ್ಚು ಇರಬಾರದು.

ಇದನ್ನೂ ಓದಿ: Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಪಾಲಿಸಿದಾರನು ಪಡೆದ ಕ್ರೆಡಿಟ್‌ಗಳನ್ನು ವಿಮಾ ಮೊತ್ತದ ಮಟ್ಟಿಗೆ ವರ್ಗಾಯಿಸಲು ಅರ್ಹನಾಗಿರುತ್ತಾನೆ. ಯಾವುದೇ ಕ್ಲೈಮ್ ಬೋನಸ್, ನಿರ್ದಿಷ್ಟ ಕಾಯುವ ಅವಧಿ, ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಾಗಿ ಕಾಯುವ ಅವಧಿ, ಹಿಂದಿನ ಪಾಲಿಸಿಯಲ್ಲಿ ಅಸ್ತಿತ್ವದಲ್ಲಿರುವ ವಿಮಾದಾರರಿಂದ ಮೊರಟೋರಿಯಂ ಅವಧಿಯನ್ನು ಸ್ವಾಧೀನಪಡಿಸಿಕೊಂಡಿರುವ ವಿಮಾದಾರರಿಗೆ ವರ್ಗಾಯಿಸಲು ಅರ್ಹರಾಗಿರುತ್ತಾರೆ ಎಂದು ಐಆರ್ ಡಿಎಐ ಹೇಳಿದೆ.

Continue Reading

ಆರೋಗ್ಯ

Menopause: ಮಹಿಳೆಯರೇ, ಈ ಸಮಸ್ಯೆಗಳು ಕಾಣಿಸುತ್ತಿವೆಯೇ?; ಹಾಗಿದ್ದರೆ ನಿಮ್ಮ ಮೆನೋಪಾಸ್‌ ಸಮೀಪದಲ್ಲಿದೆ ಎಂದರ್ಥ!

ಹಲವು ಮಹಿಳೆಯರಲ್ಲಿ 40 ವರ್ಷ ತಲುಪುವ ಮೊದಲೇ ಮೆನೋಪಾಸ್‌ ಪೂರ್ವ ಲಕ್ಷಣಗಳು ಗೋಚರಿಸುತ್ತಿವೆ. ಮೆನೋಪಾಸ್‌ ಮಹಿಳೆಯ ಆರೋಗ್ಯದ ಸಾಮಾನ್ಯ ಘಟ್ಟವೇ ಆಗಿದ್ದರೂ ಈ ಸಂದರ್ಭ ಬಹಳಷ್ಟು ಸಾರಿ ವೈದ್ಯರ ನೆರವು, ಸುತ್ತಲಿನವರ ಕಾಳಜಿ ಪ್ರೀತಿಯೂ ಬೇಕಾಗುತ್ತದೆ. ಯಾವೆಲ್ಲ ಲಕ್ಷಣಗಳ ಮೂಲಕ, ಪ್ರತಿ ಮಹಿಳೆ ತನ್ನ ಮೆನೋಪಾಸ್‌ ಸಮೀಪಿಸುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು? ಈ ಕುರಿತ ಉಪಯುಕ್ತ (Menopause) ಮಾಹಿತಿ ಇಲ್ಲಿದೆ.

VISTARANEWS.COM


on

Menopause
Koo

ಬದಲಾದ ಜೀವನಕ್ರಮ, ಬದಲಾದ ವಾತಾವರಣ, ನಗರ ಜೀವನ, ಒತ್ತಡ ಇವೆಲ್ಲವೂ ಇಂದು ಮನುಷ್ಯನ ದೇಹ ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತಿವೆ. ಮಹಿಳೆಯ ಮೆನೋಪಾಸ್‌ ಅಥವಾ ಋತುಬಂಧವೂ ಕೂಡಾ ಇಂದು ಇಂತಹ ಅನೇಕ ಕಾರಣಗಳಿಂದಾಗಿ ಬಹುಬೇಗನೆ ಆಗುತ್ತಿದೆ. ಹಲವರಲ್ಲಿ ನಲವತ್ತನ್ನು ತಲುಪುವ ಮೊದಲೇ ಮೆನೋಪಾಸ್‌ ಪೂರ್ವ ಲಕ್ಷಣಗಳು ಗೋಚರಿಸುತ್ತಿವೆ. ಮೆನೋಪಾಸ್‌ ಮಹಿಳೆಯ ಆರೋಗ್ಯದ ಸಾಮಾನ್ಯ ಘಟ್ಟವೇ ಆಗಿದ್ದರೂ ಈ ಸಂದರ್ಭ ಬಹಳಷ್ಟು ಸಾರಿ ವೈದ್ಯರ ನೆರವು, ಸುತ್ತಲಿನವರ ಕಾಳಜಿ ಪ್ರೀತಿಯೂ ಬೇಕಾಗುತ್ತದೆ. ಯಾವೆಲ್ಲ ಲಕ್ಷಣಗಳ ಮೂಲಕ, ಪ್ರತಿ ಮಹಿಳೆ ತನ್ನ ಮೆನೋಪಾಸ್‌ ಸಮೀಪಿಸುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು (Menopause) ಎಂಬುದನ್ನು ನೋಡೋಣ.

Female Menstrual Cycle Concept

ಸಮತೋಲನ ತಪ್ಪಿದ ಋತುಚಕ್ರ

ಪೀರಿಯಡ್ಸ್‌ ಅಥವಾ ಮಾಸಿಕ ಋತುಚಕ್ರದ ಕ್ರಮ ಬದಲಾಗಬಹುದು. ಪೀರಿಯಡ್‌ ನಡುವಿನ ಅಂತರ ಕಡಿಮೆಯಾಗಬಹುದು. ರಕ್ತಸ್ರಾವದಲ್ಲಿ ಏರಿಳಿತವಾಗಬಹುದು ಅಥವಾ, ಕಡಿಮೆ ರಕ್ತಸ್ರಾವವಾಗಬಹುದು, ಹೆಚ್ಚಾಗಬಹುದು. ಅಥವಾ ಮಾಸಿಕ ಋತುಸ್ರಾವ ತಪ್ಪಬಹುದು. ಹಾಗಾಗಿ, ಇಂತಹ ಸಮಸ್ಯೆ ನಿಮ್ಮ ಗಮನಕ್ಕೆ ಬರುತ್ತಿದೆ ಎಂದಾದಲ್ಲಿ, ಇವೆಲ್ಲವನ್ನೂ ಒಂದು ಡೈರಿಯಲ್ಲಿ ಬರೆದಿಟ್ಟುಕೊಂಡು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಸೆಖೆಯೋ ಸೆಖೆ

ವಾತಾವರಣ ತಂಪಾಗಿದ್ದರೂ, ನಿಮಗೆ ಮಾತ್ರ ಇದ್ದಕ್ಕಿದ್ದಂತೆ ಸೆಖೆಯಾಗಬಹುದು. ಬೆವರಿಳಿಯಬಹುದು. ರಾತ್ರಿ ಮಲಗಿದ ಸಂದರ್ಭ ಇದ್ದಕ್ಕಿಂದ್ದಂತೆ ವಿಪರೀತ ಸೆಖೆಯಾಗಿ ನಿದ್ದೆಗೆಡಬಹುದು. ಇದಕ್ಕಾಗಿ, ನಿಮ್ಮ ಮಲಗುವ ಕೋಣೆಯನ್ನು ತಂಪಾಗಿಡಿ. ಜೊತೆಗೆ ಮಸಾಲೆ ಪದಾರ್ಥಗಳು ಹಾಗೂ ಕೆಫಿನ್‌ಯುಕ್ತ ಆಹಾರದಿಂದ ದೂರವಿರಿ.

stay awake till late night what is the problem For health

ನಿದ್ದೆಯ ಸಮಸ್ಯೆ

ಮಲಗಿದ ಮೇಲೆ ನಿದ್ದೆಗೆ ಜಾರಲು ಬಹಳ ಸಮಯ ಬೇಕಾಗಬಹುದು. ನಿದ್ದೆ ಬರುತ್ತಿದೆ ಎನಿಸಿದರೂ ಬಹಳ ಹೊತ್ತಿನವರೆಗೆ ನಿದ್ದೆ ಹತ್ತಿರ ಸುಳಿಯದು. ಹೀಗಾಗುತ್ತಿದ್ದರೆ, ಒಂದು ನಿಗದಿತ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕೆಫಿನ್‌ ಹಾಗೂ ಗ್ಯಾಜೆಟ್‌ಗಳಿಂದ ದೂರವಿರಿ.

Foods are also responsible for relieving stress and increasing cheerfulness Foods That Lift Your Mood

ಮೂಡ್‌ ಬದಲಾವಣೆ

ಇದ್ದಕ್ಕಿದ್ದಂತೆ ಅನಗತ್ಯವಾಗಿ ಉದ್ವೇಗ, ಸಿಟ್ಟು, ಹತಾಶೆ, ಬೇಸರ ಇತ್ಯಾದಿ ಭಾವನೆಗಳು ಕೆಲವೊಮ್ಮೆ ಒತ್ತಾಗಿ ಬರಬಹುದು. ಕಾರಣವಿಲ್ಲದೆ ಬೇಸರದ ಛಾಯೆ ಕವಿದಿರಬಹುದು. ಅನಗತ್ಯವಾಗಿ ನಿಮ್ಮ ಪ್ರೀತಿಪಾತ್ರರ ಸಣ್ಣ ನಡೆಯೂ ಸಿಟ್ಟು ತರಿಸಬಹುದು. ಇದ್ದಕ್ಕಿದ್ದಂತೆ ಬೇರೊಬ್ಬರ ಮೇಲೆ ರೇಗುವುದು ಇತ್ಯಾದಿ ಮೂಡ್‌ ಬದಲಾವಣೆಯೂ ಮೆನೋಪಾಸ್‌ ಹತ್ತಿರ ಬರುತ್ತಿರುವುದರ ಕಾರಣಗಳೇ ಆಗಿವೆ. ನಿಮ್ಮ ಪ್ರೀತಿಪಾತ್ರರ ಬಳಿಯಲ್ಲಿ ಈ ಬಗ್ಗೆ ಚರ್ಚಿಸಿ, ವೈದ್ಯರಿಂದ ಸರಿಯಾದ ಸಲಹೆ ಮಾರ್ಗದರ್ಶನ ಪಡೆಯಿರಿ.

ಲೈಂಗಿಕ ನಿರಾಸಕ್ತಿ

ಸಂಗಾತಿಯ ಜೊತೆಗೆ ಸರಸ ಸಲ್ಲಾಪದಲ್ಲಿ ಆಸಕ್ತಿ ಇಲ್ಲದಿರುವುದು, ಅವರ ಕೋರಿಕೆ ಕಿರಿಕಿರಿಯಾಗುವುದು, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಸಂಪೂರ್ಣವಾಗಿ ಕಡಿಮೆಯಾಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್‌ ಪೂರ್ವ ಲಕ್ಷಣಗಳೇ ಆಗಿವೆ.

vagina

ಯೋನಿಯಲ್ಲಿ ತುರಿಕೆ

ಯೋನಿ ಒಣಗಿದಂತಾಗುವುದು, ಆ ಭಾಗದಲ್ಲಿ ತುರಿಕೆ ಇತ್ಯಾದಿ ಸಮಸ್ಯೆಗಳೂ ಮೆನೋಪಾಸ್‌ ಸಂದರ್ಭದಲ್ಲಿ ಆಗುವ ಸಂಭವ ಹೆಚ್ಚು. ಯೋನಿಗೆ ಹಚ್ಚಬಹುದಾದ ಲುಬ್ರಿಕೆಂಟ್‌ಗಳು, ಮುಲಾಮುಗಳು, ಮಾಯ್‌ಶ್ಚರೈಸರ್‌ಗಳನ್ನು ವೈದ್ಯರಿಂದ ಕೇಳಿ ಪಡೆಯುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು. ರಾಸಾಯನಿಕಯುಕ್ತ ಸಾಬೂನುಗಳಿಂದ ಆ ಭಾಗವನ್ನು ಅತಿಯಾಗಿ ತೊಳೆಯುವುದು ಇತ್ಯಾದಿ ಮಾಡಬೇಡಿ. ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ.

ಸ್ಮರಣ ಶಕ್ತಿ ಕುಂಠಿತ

ಸ್ಮರಣ ಶಕ್ತಿ ಕಡಿಮೆಯಾಘುವುದು, ತಾನು ಮಾಡಬೇಕಾದ ಕೆಸ ಕೆಲವೊಮ್ಮೆ ಮರೆತು ಹೋಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್‌ ಪೂರ್ವ ಲಕ್ಷಣಗಳೇ. ಹೀಗಾಗಿ, ಮಾಡಬೇಕಾದ ಕೆಲಸಗಳು ಹಾಗೂ ಮರೆತು ಹೋಗಬಹುದು ಎಂಬುದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ಕ್ರಮಬದ್ಧವಾಗಿ ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

Belly Fat Reduction

ತೂಕ ಹೆಚ್ಚಾಗುವುದು

ಮೆನೋಪಾಸ್‌ ಹತ್ತಿರ ಬರುತ್ತಿದ್ದಂತೆ ಬಹಳಷ್ಟು ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಾಗುವುದು. ಹೊಟ್ಟೆಯ ಹಾಗೂ ಸೊಂಟದ ಭಾಗದಲ್ಲಿ ತೂಕ ಏರುವುದು ಸಮಸ್ಯೆಯ ಭಾಗ. ಆರೋಗ್ಯಕರ ಆಹಾರ ಶೈಲಿ, ಹಣ್ಣು ತರಕಾರಿ ಸೊಪ್ಪು ಮೊಳಕೆ ಕಾಳುಗಳೂ ಸೇರಿದಂತೆ ಕ್ಯಾಲ್ಶಿಯಂಯುಕ್ತ ಆಹಾರವನ್ನು ಸೇವಿಸಿ. ವ್ಯಾಯಾಮವೂ ಬಹಳ ಮುಖ್ಯ.

ದೇಹದಲ್ಲಿ ಬಿಗು, ಮಾಂಸಖಂಡಗಳ ನೋವು

ಮಾಂಸಖಂಡಗಳ ಸೆಳೆತ, ನೋವು, ಗಂಟುಗಳಲ್ಲಿ ಬಿಗುತನ, ಸುಸ್ತಾಗುವಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತ ವ್ಯಾಯಾಮ, ಚುರುಕಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಸರಿಯಾದ ಆಹಾರ ಕ್ರಮ ಇತ್ಯಾದಿಗಳ ಅಭ್ಯಾಸ ಬಿಡಬೇಡಿ. ವಿಟಮಿನ್‌ ಡಿ, ಕ್ಯಾಲ್ಶಿಯಂ, ಹಾಗೂ ಇತರ ಪೋಷಕಾಂಶಗಳ ಕೊರತೆಯಿದೆಯೇ ಎಂಬ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸೂಕ್ತ ನೆರವಿನೊಂದಿಗೆ ಮುಂದುವರಿಯಿರಿ.

ಇದನ್ನೂ ಓದಿ: Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

ಕೂದಲು, ಚರ್ಮದ ಸಮಸ್ಯೆ

ಕೂದಲು ಉದುರುವಿಕೆ, ಸರ್ಮ ಒಣಕಲಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಕೂದಲಲ್ಲಿ ನಿಮಗೆ ಗಣನೀಯ ಬದಲಾವಣೆ ಗೋಚರಿಸಬಹುದು. ಚೆನ್ನಾಗಿ ನೀರು ಕುಡಿಯಿರಿ. ಸೂರ್ಯನ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಿ. ವ್ಯಾಯಾಮ, ನಿದ್ದೆ ಇವು ಸರಿಯಾಗಿ ಮಾಡಿ. ಕೂದಲು ಹಾಗೂ ಚರ್ಮದ ಪೋಷಣೆಯ ಕಾಳಜಿ ಮಾಡಿಕೊಳ್ಳಿ.

Continue Reading

ಆರೋಗ್ಯ

Cervical Cancer: ಮಹಿಳೆಯರ ಗರ್ಭಕಂಠದ ಕ್ಯಾನ್ಸರ್‌; ಪುರುಷರಿಗೂ ಇದೆ ಅಪಾಯ!

ಲೈಂಗಿಕ ಸಂರ್ಪಕದ ವೇಳೆ ಸುರಕ್ಷತೆ ಪಾಲಿಸದಿದ್ದರೆ ಅಥವಾ ಲೈಂಗಿಕ ಕ್ರಿಯೆಯ ಬಳಿಕ ಸ್ವಚ್ಛತೆ ಕಾಪಾಡಿಕೊಳ್ಳದೇ ಹೋದರೇ ಕ್ರಮೇಣ ಈ ಸೋಂಕು ಗರ್ಭಕಂಠದಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಕ್ಯಾನ್ಸರ್‌ ಆಗಿ ಪರಿವರ್ತನೆಗೊಳ್ಳಲಿದೆ. ಪುರುಷರಲ್ಲಿಯೂ ಕೂಡ ಎಚ್‌ಪಿವಿ ಸೋಂಕು ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ಈ ಸೋಂಕು ಪುರುಷರಿಗೆ ಗುದ ಮತ್ತು ಶಿಶ್ನ ಕ್ಯಾನ್ಸರ್‌ಗೂ (Cervical cancer) ಕಾರಣವಾಗಬಹುದು.

VISTARANEWS.COM


on

Cervical Cancer
Koo

-ಡಾ ನಿತಿ ರೈಜಾಡಾ, ಹಿರಿಯ ನಿರ್ದೇಶಕರು – ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ
ಇತ್ತೀಚೆಗೆ ಮಹಿಳೆಯರನ್ನು ಅಗಾಧವಾಗಿ ಕಾಡುತ್ತಿರುವ ಕಾಯಿಲೆಗಳ ಪೈಕಿ ಗರ್ಭಕಂಠದ ಕ್ಯಾನ್ಸರ್‌ (Cervical cancer) ಅಥವಾ ಮಾನವ ಪ್ಯಾಪಿಲೋಮ ವೈರಸ್ (HPV) ಕೂಡ ಒಂದು. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ಸೋಂಕು ಕಾಣಿಸಿಕೊಳ್ಳಲಿದೆ. ಮೊದಲೆಲ್ಲಾ ಕೇವಲ ಮಹಿಳೆಯರು ಮಾತ್ರ ಈ ಸೋಂಕಿಗೆ ತುತ್ತಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಪುರುಷರೂ ಕೂಡ ಪ್ಯಾಪಿಲೋಮ ವೈರಸ್‌ಗೆ ಒಳಗಾಗುತ್ತಿರುವುದು ಗಮನಾರ್ಹ ವಿಷಯ. ಹೀಗಾಗಿ ಪುರುಷರು ಸಹ ಈ ಕ್ಯಾನ್ಸರ್‌ನಿಂದ ಸಾಕಷ್ಟು ಜಾಗೃತರಾಗಿರಬೇಕು.

Cervical Cancer

ಏನಿದು ಗರ್ಭಕಂಠದ ಕ್ಯಾನ್ಸರ್‌ ಕ್ಯಾನ್ಸರ್‌

ಗರ್ಭಕಂಠದ ಕ್ಯಾನ್ಸರ್‌ ಮಾನವ ಪ್ಯಾಪಿಲೋಮ ವೈರಸ್ (HPV)ನಿಂದ ಹರಡಲಿದೆ. ಪ್ರಾಥಮಿಕವಾಗಿ HPV 16 ಮತ್ತು HPV 18 ಸೋಂಕಿನಿಂದ ಮಾರ್ಪಟ್ಟು ಎಚ್‌ಪಿವಿ ಸೋಂಕಾಗಿ ಗರ್ಭಕಂಠದಲ್ಲಿ ಬೆಳವಣಿಗೆ ಕಾಣಲಿದೆ. ಲೈಂಗಿಕ ಸಂರ್ಪಕದ ವೇಳೆ ಸುರಕ್ಷತೆ ಪಾಲಿಸದಿದ್ದರೆ ಅಥವಾ ಲೈಂಗಿಕ ಕ್ರಿಯೆಯ ಬಳಿಕ ಸ್ವಚ್ಛತೆ ಕಾಪಾಡಿಕೊಳ್ಳದೇ ಹೋದರೇ ಕ್ರಮೇಣ ಈ ಸೋಂಕು ಗರ್ಭಕಂಠದಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಕ್ಯಾನ್ಸರ್‌ ಆಗಿ ಪರಿವರ್ತನೆಗೊಳ್ಳಲಿದೆ. ಪುರುಷರಲ್ಲಿಯೂ ಕೂಡ ಎಚ್‌ಪಿವಿ ಸೋಂಕು ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ಈ ಸೋಂಕು ಪುರುಷರಿಗೆ ಗುದ ಮತ್ತು ಶಿಶ್ನ ಕ್ಯಾನ್ಸರ್‌ಗೂ ಕಾರಣವಾಗಬಹುದು.

ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು

ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾದವರಲ್ಲಿ ಯೋನಿಯಲ್ಲಿ ರಕ್ತಸ್ತ್ರಾವ, ಮೂತ್ರವಿಸರ್ಜನೆ ವೇಳೆ ನೋವು ಅಥವಾ ಉರಿಯೂತ, ಲೈಂಗಿಕ ಸಂಭೋಗ ವೇಳೆ ನೋವು ಇಂತಹ ಲಕ್ಷಣಗಳು ಕಂಡು ಬಂದರೆ, ಇದು ಗರ್ಭಕಂಠದ ಕ್ಯಾನ್ಸರ್‌ ಬೆಳವಣಿಗೆಯಾಗುತ್ತಿರುವ ಮುನ್ಸೂಚನೆಯಾಗಿರಲಿದೆ. ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಹೆಚ್ಚು ಸೂಕ್ತ. ಇದಕ್ಕಾಗಿ ಪ್ಯಾಪ್ ಸ್ಮೀಯರ್‌ಗಳು ಅಥವಾ HPV ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ ಎಚ್‌ಪಿವಿ ಸೋಂಕು ಕ್ಯಾನ್ಸರ್‌ ಆಗಿ ಪರಿವರ್ತಿಸುವುದನ್ನು ತಡೆಯಬಹುದು.

ಇದನ್ನೂ ಓದಿ: Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಎಚ್‌ಪಿವಿ ಲಸಿಕೆ ಅಗತ್ಯತೆ

ಗರ್ಭಕಂಠದ ಕ್ಯಾನ್ಸರ್‌ ಅಥವಾ ಎಚ್‌ಪಿವಿ ಸೋಂಕಿನಿಂದ ತಪ್ಪಿಸಿಕೊಳ್ಳಲು ಇದೀಗ ಲಸಿಕೆ ಲಭ್ಯವಿದೆ. ಇತ್ತೀಚೆಗೆ ಭಾರತ ಸರ್ಕಾರ ಕೂಡ ಗರ್ಭಕಂಠದ ಕ್ಯಾನ್ಸರ್‌ಗಾಗಿ ಲಸಿಕೆ ಹಾಕುವುದನ್ನು ಮಾನ್ಯ ಮಾಡಿದೆ.
ಈ ಲಸಿಕೆಯು ಹದಿಹರೆಯದಲ್ಲಿಯೇ ಮಹಿಳೆಯರಿಗೆ ಈ ಲಸಿಕೆ ಹಾಕುವುದರಿಂದ ಈ ಕ್ಯಾನ್ಸರ್ ಬರದಂತೆ ತಡೆಯಬಹುದು. 9 ರಿಂದ 26 ವರ್ಷ ವಯಸ್ಸಿನ ಎಲ್ಲಾ ಸ್ತ್ರೀ ಮತ್ತು ಪುರುಷರು ಲಸಿಕೆಯನ್ನು ಪಡೆದರೆ ಗರ್ಭಕಂಠದ ಕ್ಯಾನ್ಸರ್‌ನ ಭವಿಷ್ಯದ ಅಪಾಯ ಗಮನಾರ್ಹವಾಗಿ ಕಡಿಮೆಯಾಗುತ್ತವೆ. 11-13 ವರ್ಷ ವಯಸ್ಸಿನಲ್ಲಿ ಈ ಲಸಿಕೆ ಪಡೆಯಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಲೈಂಗಿಕ ಜೀವನ ಆರಂಭಿಸಿದ ಬಳಿಕ ಈ ಲಸಿಕೆ ಅಷ್ಟಾಗಿ ಪ್ರಯೋಜನ ಬರುವುದಿಲ್ಲ. ಹೀಗಾಗಿ ಮದುವೆಗೂ ಮುನ್ನವೇ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಈ ಲಸಿಕೆ ಹಾಕಲಾಗುವುದು.

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ಗೆ ಚಾಲನೆ

Bengaluru News: ಬೆಂಗಳೂರಿನ ಜೆಪಿ ನಗರದಲ್ಲಿ ನೂತನ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಆಯುರಾಶ್ರಮದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹಾಗೂ ಮಾಜಿ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

VISTARANEWS.COM


on

Inauguration of Pushpam Ayurveda Wellness Center in Bengaluru
Koo

ಬೆಂಗಳೂರು: ನಗರದ ಜೆಪಿ ನಗರದಲ್ಲಿ ನೂತನ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಆಯುರಾಶ್ರಮದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹಾಗೂ ಮಾಜಿ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ (Bengaluru News) ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಡಾ. ಮೊಹಮ್ಮದ್ ರಫಿ ಹಕೀಂ, ಬೆಂಗಳೂರು ಡಿಎಒ ಡಾ. ಶಹಾಬುದ್ದಿನ್, ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಬಲ್ಲಾಳ ಕೆ.ಸಿ., ಡಾ. ಗಿರಿಧರ್ ಕಜೆ ಮತ್ತು ಇತರ ವೈದ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Samsung: ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಸ್ವಾಮಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಪ್ರೈವೇಟ್ ಲಿಮಿಟೆಡ್‌ನ ಘಟಕ ಇದಾಗಿದ್ದು, ಜೆಪಿ ನಗರದ 9ನೇ ಕ್ರಾಸ್ ರಸ್ತೆಯ ತಿರುಮಲಗಿರಿ ದೇವಸ್ಥಾನದ ಮುಂಭಾಗದಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್ ಅನ್ನು ಆರಂಭಿಸಲಾಗಿದೆ.

ಭಾರತೀಯ ಪಾರಂಪರಿಕ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ. ರಾಜಶೇಖರ ಭೂಸನೂರಮಠ ಮತ್ತು ಡಾ. ಮಹತಿ ಸಾಹುಕರ್ ಅವರು, ಈ ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: Shira News: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಟಿ.ಬಿ.ಜಯಚಂದ್ರ

ಈ ಆಯುರ್ವೇದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರ್ನಾಟಕದಲ್ಲಿ ವಿಶೇಷವಾದ ಆಸ್ಪತ್ರೆಯಿದಾಗಿದ್ದು, ತ್ವಚೆ ಆರೈಕೆ, ಗಾಯದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಡಿಟಾಕ್ಸ್, ಮಾನಸಿಕ, ವಿಶೇಷ ಚಿಕಿತ್ಸೆಗಳು ಮತ್ತು ಸಾಮಾನ್ಯ ಚಿಕಿತ್ಸೆಗಳನ್ನು ನಡೆಸುವ ವಿವಿಧ ವಿಭಾಗಗಳನ್ನು ಹೊಂದಿದೆ. ಜನರು ಆರೋಗ್ಯದ ಉತ್ತಮ ಲಾಭಗಳನ್ನು ಪಡೆಯಲು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಭೂಸನೂರಮಠ ತಿಳಿಸಿದ್ದಾರೆ.

Continue Reading
Advertisement
Paris Olympics 2024
ಕ್ರೀಡೆ14 mins ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಕನ್ನಡಿಗ ಬೋಪಣ್ಣ, ಸುಮಿತ್‌ ನಾಗಲ್‌

Parliament Session 2024
ದೇಶ45 mins ago

Parliament Session 2024: ಜೂನ್‌ 24ರಿಂದ ಸಂಸತ್‌ ವಿಶೇಷ ಅಧಿವೇಶನ; ಸ್ಪೀಕರ್‌ ಆಯ್ಕೆ ಸೇರಿ ಏನೆಲ್ಲ ತೀರ್ಮಾನ?

HD Kumaraswamy
ಕರ್ನಾಟಕ50 mins ago

HD Kumaraswamy: ಎಚ್‌ಡಿಕೆ ಭೇಟಿಯಾದ ಉಕ್ಕು ಪ್ರಾಧಿಕಾರದ ಅಧ್ಯಕ್ಷ; ವಿಐಎಸ್‌ಎಲ್ ಪುನಶ್ಚೇತನದ ಬಗ್ಗೆ ಚರ್ಚೆ

Narendra Modi
ದೇಶ1 hour ago

Narendra Modi: ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಪ್ರಧಾನಿ ಮೋದಿ ಸಚಿವರಿಗೆ ಹೇಳಿದ ಕಿವಿ ಮಾತು ಇದು

Actor Darshan
ಸಿನಿಮಾ1 hour ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Danielle Wyatt Marriage
ಕ್ರೀಡೆ1 hour ago

Danielle Wyatt Marriage: ಸಲಿಂಗ ಸಂಗಾತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಂಗ್ಲೆಂಡ್ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ

Actor Darshan
ಕರ್ನಾಟಕ2 hours ago

Actor Darshan: ಒಂದಲ್ಲ, ಎರಡಲ್ಲ, 3 ಕೇಸ್‌ಗಳಲ್ಲಿ ದರ್ಶನ್‌ಗೆ ಸಂಕಷ್ಟ; ಆರೋಪ ಸಾಬೀತಾದರೆ ಯಾವ ಶಿಕ್ಷೆ?

Supreme Court
ದೇಶ2 hours ago

Supreme Court: ನೀಟ್​ ಅಕ್ರಮ ಆರೋಪ; ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

Actor Darshan
ಸಿನಿಮಾ2 hours ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ತನಿಖೆ ಬಳಿಕವೇ ದರ್ಶನ್ ಪಾತ್ರ ಗೊತ್ತಾಗಲಿದೆ ಎಂದ ಸಚಿವ ಪರಮೇಶ್ವರ್‌

Actor Darshan
ಕರ್ನಾಟಕ2 hours ago

Actor Darshan: ಕೊಲೆ ಕೇಸ್‌ಗೆ ಕ್ಷಣಕ್ಕೊಂದು ಟ್ವಿಸ್ಟ್;‌ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನೂ ಅರೆಸ್ಟ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಸಿನಿಮಾ1 hour ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

ಟ್ರೆಂಡಿಂಗ್‌