Sagar News | ಅರಣ್ಯ ಇಲಾಖೆಯಿಂದ ರೈತರ ವಿರುದ್ಧ ಕಾನೂನುಬಾಹಿರ ಕೇಸು: ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ - Vistara News

ಕರ್ನಾಟಕ

Sagar News | ಅರಣ್ಯ ಇಲಾಖೆಯಿಂದ ರೈತರ ವಿರುದ್ಧ ಕಾನೂನುಬಾಹಿರ ಕೇಸು: ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ

Sagar News | ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ಕಾನೂನುಬಾಹಿರವಾಗಿ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.

VISTARANEWS.COM


on

Farmers' Protest Committee sagar Forest Department
ರೈತರ ಮೇಲೆ ಅರಣ್ಯ ಇಲಾಖೆಯು ಕಾನೂನುಬಾಹಿರವಾಗಿ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಾಗರ: ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ (Sagar News ) ಶಿಡ್ಲಿಘಟ್ಟ, ಕಾತೂರು, ತಾಳಗುಪ್ಪ, ಗುಂಡ್ಲ ಗ್ರಾಮದ 140ಕ್ಕೂ ಹೆಚ್ಚು ರೈತರ ಮೇಲೆ ಅರಣ್ಯ ಇಲಾಖೆಯು ಕಾನೂನುಬಾಹಿರವಾಗಿ 64ರ ಕಾಯಿದೆ ಅಡಿ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಗುರುವಾರ (ಡಿ.೨೯) ಮಲೆನಾಡು ರೈತ ಹೋರಾಟ ಸಮಿತಿಯ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್, ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಶಿಡ್ಡಿಹಳ್ಳಿ ಕಾತೂರು, ತಾಳಗುಪ್ಪ, ಗೆಂಡ್ಲ ಗ್ರಾಮದ 140 ಕ್ಕೂ ಹೆಚ್ಚು ರೈತರ ವಿರುದ್ಧ ಅರಣ್ಯ ಇಲಾಖೆಯು ಕಾನೂನುಬಾಹಿರವಾಗಿ ಕೇಸು ದಾಖಲಿಸಿರುವ ಕ್ರಮ ಖಂಡನೀಯ. ಜಿಲ್ಲಾಧಿಕಾರಿಗಳು ರೈತರ ಮೇಲೆ ಹಾಕಿರುವ ಕೇಸು ಕಾನೂನುಬಾಹಿರವೆಂದು ಪರಿಶಿಷ್ಟ ಕಲ್ಯಾಣ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ, ಅರಣ್ಯ ಇಲಾಖೆಯು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 17 ತಿಂಗಳಿನಿಂದ ಈ ಭಾಗದ ರೈತರು ತಮ್ಮ ಮೇಲೆ ಹಾಕಿರುವ ಕೇಸು ಹಿಂದಕ್ಕೆ ಪಡೆದು ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸೊರಬ ಕ್ಷೇತ್ರದ ಶಾಸಕರು ಸಂಕಷ್ಟದಲ್ಲಿರುವ ರೈತರ ಬಗ್ಗೆ ಕಾಳಜಿ ವಹಿಸದೆ ಇರುವುದು ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ 90 ಸಾವಿರಕ್ಕೂ ಹೆಚ್ಚು ಜನರು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದ್ದಾರೆ. ಅವರು ಯಾರಿಗೂ ನೋಟಿಸು ಕೊಡದೆ ಕೇವಲ ಸೊರಬ ತಾಲೂಕಿನ 140 ರೈತರ ವಿರುದ್ಧ ಕೇಸ್ ದಾಖಲಿಸಿರುವುದು ದುರುದ್ದೇಶಪೂರಿತವಾಗಿದೆ ಎಂದರು.

ಸ್ವತಃ ಜಿಲ್ಲಾಧಿಕಾರಿಗಳೇ ರೈತರ ಮೇಲೆ ದಾಖಲಿಸಿರುವ ಪ್ರಕರಣ ಕಾನೂನುಬಾಹಿರ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ರೈತರನ್ನು ಒಕ್ಕಲೆಬ್ಬಿಸಲು ಪಣತೊಟ್ಟು ನಿಂತಂತೆ ಕಾಣುತ್ತಿದೆ. ಸತ್ತು ಹೋಗಿರುವ ಸರ್ಕಾರ, ಬೇಜವಾಬ್ದಾರಿ ಮುಖ್ಯಮಂತ್ರಿ, ಸಂಸದರು, ಶಾಸಕರಿಂದಾಗಿ ರೈತರು ನೆಮ್ಮದಿಯಿಂದ ನಿದ್ರೆ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ರೈತರ ಮೇಲೆ ಕಾನೂನುಬಾಹಿರವಾಗಿ ಹಾಕಿರುವ ಕೇಸು ಅನ್ನು ತಕ್ಷಣ ಹಿಂದಕ್ಕೆ ಪಡೆಯದಿದ್ದರೆ ಉಪವಿಭಾಗಾಧಿಕಾರಿ ಕಚೇರಿಗೆ ಬೀಗ ಜಡಿದು ಕಾನೂನುಭಂಗ ಚಳವಳಿ ಹಮ್ಮಿಕೊಳ್ಳುವುದು ಅನಿವಾರ್ಯ ವಾಗುತ್ತದೆ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶಾಮಿಯಾನ ಗುತ್ತಿಗೆ ನೀಡದ್ದಕ್ಕೆ ಪುರುಷೋತ್ತಮ ಬಿಳಿಮಲೆ ಸುಳ್ಳು ಆರೋಪ: ಡಾ. ಮಹೇಶ್‌ ಜೋಶಿ ಹೇಳಿಕೆ

ಸಮಿತಿಯ ಸಾಗರ ತಾಲೂಕು ಸಂಚಾಲಕ ಧರ್ಮೇಂದ್ರ ಶಿರವಾಳ ಮಾತನಾಡಿದರು. ಸೊರಬ ಸಂಚಾಲಕ ಪರಶುರಾಮ ಶಿಡ್ಲಿಘಟ್ಟ, ಪ್ರಮುಖರಾದ ಅಜೀಜ್ ಸಾಬ್, ನಾಗರಾಜ್, ವೀರೇಶ್ ಗೌಡ, ಮಹಾದೇವಪ್ಪ, ಕಮಲಮ್ಮ, ಪಕೀರಮ್ಮ, ಗೌರಮ್ಮ, ಕೃಷ್ಣಪ್ಪ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ | ‌ಹಳೆ ಮೈಸೂರಿನಲ್ಲಿ ಶೇ.50 ಸೀಟು ಗೆಲ್ಲುತ್ತದೆ ಬಿಜೆಪಿ: ಬೂತ್ ವಿಜಯ ಅಭಿಯಾನಕ್ಕೆ ಅಮಿತ್ ಶಾ ಚಾಲನೆ ಎಂದ ಡಿ.ವಿ. ಸದಾನಂದಗೌಡ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka CM Row: ‘ಗೌಡ’ ಸಿಎಂ ಆಯ್ತು, ಈಗ ‘ಲಿಂಗಾಯತ’ ಸಿಎಂ ಕೂಗು; ರಂಭಾಪುರಿ ಶ್ರೀ ಹೇಳಿದ ಹೆಸರಿದು!

Karnataka CM Row: ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎಂದು ಬಾಳೆಹೊನ್ನೂರು‌ಶ್ರೀ ರಂಭಾಪುರಿ ಡಾ.ವೀರ‌ಸೋಮೇಶ್ವರ ಜಗದ್ಗುರು ಎಂದು ಆಗ್ರಹಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಚಂದ್ರಶೇಖರ ಸ್ವಾಮೀಜಿ ಅವರು ಒಕ್ಕಲಿಗ ಸಮುದಾಯದ ಡಿಕೆಶಿ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದರಿಂದಾಗಿ ಸಿಎಂ ಬದಲಾವಣೆಯ ಚರ್ಚೆಯು ಇನ್ನಷ್ಟು ಕಾವು ಪಡೆದುಕೊಂಡಿದೆ.

VISTARANEWS.COM


on

Karnataka CM Row
Koo

ಕಲಬುರಗಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ತೀವ್ರ ಚರ್ಚೆಗಳು (Karnataka CM Row) ನಡೆಯುತ್ತಿದ್ದು, ಆಯಾ ಸಮುದಾಯಗಳ ಸ್ವಾಮೀಜಿಗಳು ಒಂದೊಂದು ಹೆಸರನ್ನು ಸೂಚಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ (DK Shivakumar) ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎಂದು ಬಾಳೆಹೊನ್ನೂರು‌ಶ್ರೀ ರಂಭಾಪುರಿ ಡಾ.ವೀರ‌ಸೋಮೇಶ್ವರ ಜಗದ್ಗುರು ಆಗ್ರಹಿಸಿದ್ದಾರೆ. ಇದು ಈಗ ಸಿಎಂ ಬದಲಾವಣೆ ಚರ್ಚೆಗೆ ಹೊಸ ತಿರುವು ನೀಡಿದಂತಾಗಿದೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾಗಾಗಿ, ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ಕೊಟ್ಟರೂ ತಪ್ಪಿಲ್ಲ. ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯ‌ವು ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಕೊಟ್ಟರೆ ರಾಜ್ಯದಲ್ಲಿ ಒಳ್ಳೆಯ ಅಭಿವೃದ್ಧಿಯಾಗುತ್ತದೆ. ಸಿಎಂ ಸ್ಥಾನ ಅಲ್ಲದಿದ್ದರೂ ಡಿಸಿಎಂ ಸ್ಥಾನವನ್ನಾದರೂ ಕೊಡಬೇಕು” ಎಂದು ಹೇಳಿದರು.

Shamanur Shivashankarappa

“ರಾಜ್ಯದಲ್ಲಿ ವೀರೇಂದ್ರ ಪಾಟೀಲ್‌ ಅವರಿಗೆ ಬಿಟ್ಟರೆ ಬೇರೆಯವರು ಸಿಎಂ ಆಗಿಲ್ಲ. ಹಾಗಾಗಿ, ಈಗ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಿಎಂ ಸ್ಥಾನ ಕೊಡಿ. ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇವರಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಹುದ್ದೆ ನೀಡಿದರೆ ರಾಜ್ಯದಲ್ಲಿ ಇನ್ನಷ್ಟು ಒಳ್ಳೆಯ ಆಡಳಿತ ಸಿಕ್ಕು ರಾಜ್ಯವು ಅಭಿವೃದ್ಧಿಯಾಗುತ್ತದೆ” ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ಚಂದ್ರಶೇಖರ ಸ್ವಾಮೀಜಿ ಹೇಳಿದ್ದೇನು?

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಕೆಲ ದಿನಗಳ ಹಿಂದೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆಯೇ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಬ್ಯಾಟಿಂಗ್‌ ಮಾಡಿದ್ದರು. “ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು” ಹೇಳಿದ್ದರು.

Bangalore Rain

ಚರ್ಚೆಯೇ ಬೇಡ ಎಂದ ಡಿಕೆಶಿ

ಸಿಎಂ, ಡಿಸಿಎಂ ಕುರಿತು ಕಾಂಗ್ರೆಸ್‌ನ ಯಾವ ಎಂಎಲ್‌ಎ ಕೂಡ ಚರ್ಚಿಸಬಾರದು ಎಂಬುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. “ಪಕ್ಷವನ್ನು ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ಒಳ್ಳೆಯದಾಗುತ್ತದೆ. ಚಂದ್ರಶೇಖರ ಸ್ವಾಮೀಜಿ ಅವರು ನನ್ನ ಮೇಲಿನ ಅಭಿಮಾನಕ್ಕಾಗಿ ಹಾಗೆ ಮಾತನಾಡಿದ್ದಾರೆ. ಬೇರೆ ಯಾವ ಸ್ವಾಮೀಜಿಗಳೂ ಮಾತನಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ. ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ” ಎಂದಿದ್ದಾರೆ.

ಇದನ್ನೂ ಓದಿ: DK Shivakumar: ಸಿಎಂ, ಡಿಸಿಎಂ ಚರ್ಚೆ ಇಲ್ಲ, ಬಾಯಿಗೆ ಬೀಗ ಹಾಕಿಕೊಂಡಿರಿ; ಡಿಕೆಶಿ ಖಡಕ್‌ ಎಚ್ಚರಿಕೆ

Continue Reading

ಚಿಕ್ಕಮಗಳೂರು

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Dengue Fever : ಪ್ರಸಕ್ತ ವರ್ಷ ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಾಲಕಿಯೊಬ್ಬಳು ಮಹಾಮಾರಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

VISTARANEWS.COM


on

By

Dengue Fever
Koo

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ (Dengue Fever) ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸಾನಿಯಾ (6) ಮೃತ ದುರ್ದೈವಿ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.

ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾನಿಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕಿದರು.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

DK Shivakumar: ಸಿಎಂ, ಡಿಸಿಎಂ ಚರ್ಚೆ ಇಲ್ಲ, ಬಾಯಿಗೆ ಬೀಗ ಹಾಕಿಕೊಂಡಿರಿ; ಡಿಕೆಶಿ ಖಡಕ್‌ ಎಚ್ಚರಿಕೆ

DK Shivakumar: ಕರ್ನಾಟಕದ ಸಿಎಂ ಹಾಗೂ ಡಿಸಿಎಂ ಕುರಿತು ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ಯಾವ ರೆಕಮಂಡೇಷನ್‌ ಕೂಡ ಅವಶ್ಯಕತೆ ಇಲ್ಲ. ನಾನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕ ಕೂಡ ಇದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂಬುದಾಗಿ ಸಿಎಂ ಹಾಗೂ ಡಿಸಿಎಂ ಗೊಂದಲದ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರು ಹೇಳಿದ್ದಾರೆ.

VISTARANEWS.COM


on

DK Shivakumar
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ (Karnataka) ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಸಮುದಾಯವಾರು ಡಿಸಿಎಂ ಹುದ್ದೆ ನೀಡಬೇಕು ಎಂದು ಒಂದಷ್ಟು ಜನ ಆಗ್ರಹಿಸಿದರೆ, ಡಿ.ಕೆ.ಶಿವಕುಮಾರ್‌ ಅವರಿಗೇ ಸಿಎಂ ಹುದ್ದೆ ನೀಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ, ಸಿಎಂ, ಡಿಸಿಎಂ ಚರ್ಚೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಪ್ರತಿಕ್ರಿಯಿಸಿದ್ದು, “ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿರಿ” ಎಂಬುದಾಗಿ ಬಣ ರಾಜಕೀಯ ಮಾಡುವವರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

“ಕರ್ನಾಟಕದ ಸಿಎಂ ಹಾಗೂ ಡಿಸಿಎಂ ಕುರಿತು ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ಯಾವ ರೆಕಮಂಡೇಷನ್‌ ಕೂಡ ಅವಶ್ಯಕತೆ ಇಲ್ಲ. ನಾನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕ ಕೂಡ ಇದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇಲ್ಲದಿದ್ದರೆ, ಎಐಸಿಸಿ ಹಾಗೂ ನಾನು ವಿಧಿಯಿಲ್ಲದೆ ನೋಟಿಸ್‌ ನೀಡಬೇಕಾಗುತ್ತದೆ. ಅನಿವಾರ್ಯವಾಗಿ ಪಕ್ಷದ ಶಿಸ್ತು ಕಾಪಾಡಲು ನೋಟಿಸ್ ನೀಡಬೇಕಾಗುತ್ತದೆ” ಎಂದು ಲಾಬಿ ಮಾಡುವ ಶಾಸಕರಿಗೆ ಎಚ್ಚರಿಕೆ ನೀಡಿದರು.

“ಪಕ್ಷವನ್ನು ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ಒಳ್ಳೆಯದಾಗುತ್ತದೆ. ಚಂದ್ರಶೇಖರ ಸ್ವಾಮೀಜಿ ಅವರು ನನ್ನ ಮೇಲಿನ ಅಭಿಮಾನಕ್ಕಾಗಿ ಹಾಗೆ ಮಾತನಾಡಿದ್ದಾರೆ. ಬೇರೆ ಯಾವ ಸ್ವಾಮೀಜಿಗಳೂ ಮಾತನಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ. ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ” ಎಂದು ಕೂಡ ಹೇಳಿದರು.

ಚಂದ್ರಶೇಖರ ಸ್ವಾಮೀಜಿ ಹೇಳಿದ್ದೇನು?

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಕೆಲ ದಿನಗಳ ಹಿಂದೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆಯೇ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಬ್ಯಾಟಿಂಗ್‌ ಮಾಡಿದ್ದರು. “ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು” ಹೇಳಿದ್ದರು.

ಇದನ್ನೂ ಓದಿ: DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

Continue Reading

ಬೆಂಗಳೂರು ಗ್ರಾಮಾಂತರ

Attica Babu: ಕಳ್ಳರಿಂದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಬಂಧನ

Attica Babu: ಕಳ್ಳರಿಬ್ಬರು ಕದ್ದ ಚಿನ್ನವನ್ನು ಖರೀದಿ ಮಾಡಿದ್ದಕ್ಕೆ ಅಟ್ಟಿಕಾ ಗೋಲ್ಡ್‌ ಕಂಪೆನಿ ಮಾಲೀಕನ ಬಂಧನವಾಗಿದೆ. ಕಳ್ಳ ಮಾಲು ಕೇಸ್‌ನಲ್ಲಿ ಮೂವರನ್ನು ಬಂಧಿಸಲಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

attika babu
Koo

ದೊಡ್ಡಬಳ್ಳಾಪುರ: ಕಳ್ಳರು ಕದ್ದ ಚಿನ್ನವನ್ನು ಖರೀದಿ ಮಾಡಿದ ಆರೋಪದಡಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು (Attica Babu) ಮತ್ತೊಮ್ಮೆ ಬಂಧನವಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಶನಿವಾರ (ಜೂ.29) ಮುಂಜಾನೆ ಬಂಧಿಸಿ ಕರೆತಂದಿದ್ದಾರೆ.

ಮೊನ್ನೆಯಷ್ಟೇ ತುರುವೇಕೆರೆ ಪೊಲೀಸರು ಬೆಂಗಳೂರಿಗೆ ಬಂದು ಬಾಬುರನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದ ಅಟ್ಟಿಕಾ ಬಾಬುರನ್ನು ದೊಡ್ಡಬಳ್ಳಾಪುರ ಪೊಲೀಸರು ಕೂಡಲೆ ಬಂಧಿಸಿದ್ದಾರೆ.

ಇಬ್ಬರು ಕಳ್ಳರು ಕಳ್ಳತನ ಮಾಡಿದ ಚಿನ್ನದ ಮಾಲು ಖರೀದಿ ಆರೋಪದಲ್ಲಿ ಬಾಬು ಬಂಧನವಾಗಿದೆ. ಬೊಮ್ಮನಹಳ್ಳಿ ಬಾಬು ಸೇರಿದಂತೆ ಮೂವರ ಬಂಧನವಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ತುರುವೇಕೆರೆ ಪೊಲೀಸ್‌ ಠಾಣೆಯಲ್ಲೂ ಪ್ರಕರಣ ದಾಖಲು

ಖ್ಯಾತ ಚಿನ್ನದ ವ್ಯಾಪಾರಿ, ಅಟ್ಟಿಕಾ ಗೋಲ್ಡ್‌ ಕಂಪನಿ (Attica Gold Company) ಮಾಲೀಕ ಅಟ್ಟಿಕಾ ಬಾಬು (Attica Babu) ಅಲಿಯಾಸ್‌ ಬೊಮ್ಮನಹಳ್ಳಿ ಬಾಬು ಅವರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು (Turuvekere Police) ಜೂನ್‌ 26 ಬಂಧಿಸಿದ್ದರು. ಕದ್ದ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ (Bengaluru) ಫ್ರೇಜರ್‌ ಟೌನ್‌ ನಿವಾಸದ ಬಳಿ ಅಟ್ಟಿಕಾ ಬಾಬು ಅವರನ್ನು ಪೊಲೀಸರು ಬಂಧಿಸಿದ್ದರು.

ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ ಕುರಿತು ತುರುವೇಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ, ತುರುವೇಕೆರೆ ಸಿಪಿಐ ಲೋಹಿತ್‌ ಬಿ.ಎನ್‌ ಹಾಗೂ ತಂಡದಿಂದ ಬಂಧಿಸಲಾಗಿತ್ತು. ಹಗಲು ಕಳ್ಳತನದ ಆರೋಪಿ ಉದಯ್‌ ಅಲಿಯಾಸ್‌ ಅಶೋಕ್‌ ಎಂಬಾತ ತನ್ನ ಹೆಂಡತಿ ಶಾರದಾ ಮೂಲಕ ಅಟ್ಟಿಕಾ ಬಾಬುಗೆ ಚಿನ್ನ ಮಾರಾಟ ಮಾಡಿಸುತ್ತಿದ್ದ. ತುರುವೇಕೆರೆ ವ್ಯಾಪ್ತಿಯಲ್ಲಿ ಕದ್ದ ಚಿನ್ನವನ್ನು ಅಟ್ಟಿಕಾ ಬಾಬು ಖರೀದಿ ಮಾಡುತ್ತಿರುವ ಕುರಿತು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

ಶಾರದಾ ಮೂಲಕ ಜಿಗಣಿಯಲ್ಲಿರುವ ಅಟ್ಟಿಕಾ ಗೋಲ್ಡ್‌ ಕಂಪನಿಯಲ್ಲಿ ಉದಯ್‌ ಅಲಿಯಾಸ್‌ ಅಶೋಕ್‌ ಮಾರಾಟ ಮಾಡಿಸಿದ್ದ. ಪ್ರಕರಣ ದಾಖಲಾದ ಬಳಿಕ ಪೊಲೀಸರು ತನಿಖೆ ಮಾಡಿದ್ದರು. ಕಳ್ಳತನ ಮಾಡಿದ ಚಿನ್ನಾಭರಣವನ್ನು ಖರೀದಿಸಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರ ತಂಡವು ಬೆಂಗಳೂರಿಗೆ ಆಗಮಿಸಿ, ಅಟ್ಟಿಕಾ ಬಾಬು ಅವರನ್ನು ಬಂಧಿಸಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಬಾಬುರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕಳ್ಳ ಮಾಲು ಕೇಸ್‌ನಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: Attica Babu : ಅಟ್ಟಿಕಾ ಬಾಬು ತಂದಿಟ್ಟಿದ್ದ ಲೋಡ್‌ಗಟ್ಟಲೆ ರಂಜಾನ್‌-ಯುಗಾದಿ ಕಿಟ್‌ ಸೀಜ್‌ ಮಾಡಿದ ಪೊಲೀಸರು!

2022ರಲ್ಲೂ ಬಂಧಿಸಲಾಗಿತ್ತು

ಎರಡನೇ ಮದುವೆಯಾಗಿ, ಮೋಸ ಮಾಡಿದ್ದಾರೆ ಎಂಬುದಾಗಿ ಮಹಿಳೆಯೊಬ್ಬರು ದೂರು ನೀಡಿದ ಕಾರಣ 2022ರಲ್ಲೂ ಅಟ್ಟಿಕಾ ಬಾಬು ಅವರನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದರು. ಶೇಖ್‌ ಮಿನಾಜ್‌ ಎಂಬ ಮಹಿಳೆಯು ಹಲ್ಲೆ ಹಾಗೂ ಮೋಸ ಮಾಡಿದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಅಟ್ಟಿಕಾ ಬಾಬು ವಿರುದ್ಧ ಹಲ್ಲೆ, ವರದಕ್ಷಿಣೆ ಕಿರುಕುಳದ ಪ್ರಕರಣ ಕೂಡ ದಾಖಲಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಅಟ್ಟಿಕಾ ಬಾಬು ಬಿಡುಗಡೆಯಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
INDW vs SAW
ಕ್ರೀಡೆ27 seconds ago

INDW vs SAW: ಟೆಸ್ಟ್​ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತ ಮಹಿಳಾ ತಂಡ

Karnataka CM Row
ಪ್ರಮುಖ ಸುದ್ದಿ4 mins ago

Karnataka CM Row: ‘ಗೌಡ’ ಸಿಎಂ ಆಯ್ತು, ಈಗ ‘ಲಿಂಗಾಯತ’ ಸಿಎಂ ಕೂಗು; ರಂಭಾಪುರಿ ಶ್ರೀ ಹೇಳಿದ ಹೆಸರಿದು!

Dengue Fever
ಚಿಕ್ಕಮಗಳೂರು34 mins ago

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Aiden Markram
ಕ್ರೀಡೆ44 mins ago

Aiden Markram: ಧೋನಿಯಂತೆ ಮಾರ್ಕ್ರಮ್​ ಕೂಡ ಲಕ್ಕಿ ಕ್ಯಾಪ್ಟನ್​; ಸಾಧನೆ ಹೀಗಿದೆ

Fahadh Faasil in trouble faces Human Rights Commission action
ಮಾಲಿವುಡ್49 mins ago

Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು

Viral Video
ವೈರಲ್ ನ್ಯೂಸ್51 mins ago

Viral Video: ಖೈದಿ ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿ ಲೈಂಗಿಕ ಕ್ರಿಯೆ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

5 Soldiers Killed
ದೇಶ54 mins ago

5 Soldiers Killed: ಲಡಾಕ್‌ನ ನದಿಯಲ್ಲಿ ಸೇನಾ ವಾಹನ ಮಗುಚಿ ಭೀಕರ ದುರಂತ; ಐವರು ಯೋಧರು ಹುತಾತ್ಮ

DK Shivakumar
ಕರ್ನಾಟಕ1 hour ago

DK Shivakumar: ಸಿಎಂ, ಡಿಸಿಎಂ ಚರ್ಚೆ ಇಲ್ಲ, ಬಾಯಿಗೆ ಬೀಗ ಹಾಕಿಕೊಂಡಿರಿ; ಡಿಕೆಶಿ ಖಡಕ್‌ ಎಚ್ಚರಿಕೆ

Actor Darshan Suffering From Sade Sati
ಸ್ಯಾಂಡಲ್ ವುಡ್1 hour ago

Actor Darshan: 2024 ಡೇಂಜರಸ್ ಇಯರ್ ಫಾರ್ ಮಿ ಅನ್ನೋದು `ಡೆವಿಲ್‌’ಗೆ ಮೊದಲೇ ಗೊತ್ತಿತ್ತಾ?

deepika padukone
Latest1 hour ago

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ19 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌