Next CM: ಮತ್ತೆ ಕೇಳಿಬಂದ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಕೂಗು; ಕಾಂಗ್ರೆಸ್‌ನಲ್ಲಿ ತಲ್ಲಣ Vistara News

ಕರ್ನಾಟಕ

Next CM: ಮತ್ತೆ ಕೇಳಿಬಂದ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಕೂಗು; ಕಾಂಗ್ರೆಸ್‌ನಲ್ಲಿ ತಲ್ಲಣ

Next CM: ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡದಂತೆ ಹೈಕಮಾಂಡ್‌ ಸೂಚಿಸಿದ್ದರೂ ಸತೀಶ್‌ ಜಾರಕಿಹೊಳಿ ಮುಂದಿನ ಸಿಎಂ ಎಂಬ ಕೂಗು ಕಾಂಗ್ರೆಸ್‌ನಲ್ಲಿ ಮತ್ತೆ ಕೇಳಿಬಂದಿದೆ.

VISTARANEWS.COM


on

Satish jarkiholi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಕೈ ನಾಯಕರಿಗೆ ಹೈಕಮಾಂಡ್‌ ಸೂಚಿಸಿರುವ ಬೆನ್ನಲ್ಲೇ “ಸತೀಶ್ ಜಾರಕಿಹೊಳಿ ಮುಂದಿನ ಸಿಎಂ” (Next CM) ಎಂಬ ಕೂಗು ಕಾಂಗ್ರೆಸ್‌ ವಲಯದಲ್ಲಿ ಮತ್ತೆ ಕೇಳಿಬಂದಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿಶ್ವಾಸ್‌ ವೈದ್ಯ ಅವರು ಕಾರ್ಯಕ್ರಮವೊಂದರಲ್ಲಿ “ಮುಂದಿನ ಸಿಎಂ ಸತೀಶ್ ಜಾರಕಿಹೊಳಿ”‌ (Satish Jarkiholi to be next CM) ಹೇಳಿಕೆ ನೀಡಿದ್ದು, ಇದರಿಂದ ಕಾಂಗ್ರೆಸ್‌ನಲ್ಲಿ ತಲ್ಲಣ ಶುರುವಾಗಿದೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ದೀಪಾವಳಿ ಹಾಗೂ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಸವದತ್ತಿ ಶಾಸಕ ವಿಶ್ವಾಸ್‌ ವೈದ್ಯ ಅವರು, ಸತೀಶ್‌ ಜಾರಕಿಹೊಳಿ ಮುಂದಿನ ಸಿಎಂ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸವದತ್ತಿ ಶಾಸಕ ವಿಶ್ವಾಸ್‌ ವೈದ್ಯ

2028ಕ್ಕೆ ನಾನು ಸಿಎಂ ರೇಸ್‌ನಲ್ಲಿ ಇರುತ್ತೇನೆ. ಈ ಬಾರಿ ನಾನು ಸಿಎಂ ರೇಸ್‌ನಲ್ಲಿ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಈಗ ಅವರ ಆಪ್ತರಿಂದ ಸಿಎಂ ರೇಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಅವರ ಆಪ್ತ ಶಾಸಕ ವಿಶ್ವಾಸ್‌ ವೈದ್ಯ ಹೇಳಿರುವುದರಿಂದ ಪಕ್ಷದ ವಲಯದಲ್ಲಿ ಮುಂದಿನ ಸಿಎಂ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ | CT Ravi : ಎಚ್‌ಡಿಕೆ ಜತೆ ಸಿದ್ದರಾಮಯ್ಯ ಕೂಡಾ ದತ್ತಪೀಠಕ್ಕೆ ಬರಲಿ ಎಂದ ಸಿ.ಟಿ ರವಿ

ದಲಿತ ನಾಯಕರೂ ಕಾಂಗ್ರೆಸ್‌ನಲ್ಲಿ ಸಿಎಂ ಆಗಬಹುದು: ಎಂ. ಲಕ್ಷ್ಮಣ್

ಮಡಿಕೇರಿ: ಪ್ರತಿಯೊಬ್ಬರೂ ಮಂತ್ರಿ, ಮುಖ್ಯ ಮಂತ್ರಿಗಳಾಗುವ ಅವಕಾಶ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಸತೀಶ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗಬಹುದು. ದಲಿತ ನಾಯಕರೂ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳಾಗಬಹುದು ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಇಲ್ಲಿಯವರೆಗೆ ದೇಶದಲ್ಲಿ ಎಷ್ಟು ಜನರನ್ನು ಮುಖ್ಯಮಂತ್ರಿಗಳಾಗಿ ಮಾಡಿದ್ದಾರೆ. ಯಾವುದೇ ಉತ್ತಮ ಸ್ಥಾನಮಾನ ಕೊಡದೆ ಈ ಕಮ್ಯುನಿಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಎಲ್ಲಾ ಸಮುದಾಯಗಳನ್ನು ಗುರುತಿಸುತ್ತದೆ. ಸತೀಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಸೇರಿ ಎಲ್ಲರೂ ಕೂಡ ಸಿಎಂ ಆಗುತ್ತಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅವಕಾಶ ಮಾಡಿಕೊಡಲಿದೆ. ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವಾಗ ಉಳಿದ ಸಮುದಾಯದವರು ಬಿಜೆಪಿಗರಿಗೆ ಕಾಣಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Karnataka Electricity : ಜನವರಿವರೆಗೂ ವಿದ್ಯುತ್ ಸಮಸ್ಯೆ ಇಲ್ಲ ಎಂದ ಜಾರ್ಜ್! ಆನಂತರ..?

ಪಕ್ಷ ನಿರ್ಧಾರ ಮಾಡುತ್ತೆ ಎಂದ ಕೃಷ್ಣಬೈರೇಗೌಡ

ಬಳ್ಳಾರಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಯಾವ ಸಮಯಕ್ಕೆ ಯಾರು ಸಿಎಂ ಆಗುತ್ತಾರೆ ಎಂಬುವುದನ್ನು ಪಕ್ಷ ನಿರ್ಧಾರ ಮಾಡುತ್ತೆ. ಒಳ್ಳೆ ಆಡಳಿತ ನಡೆಸಲು ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಆ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕು. ಪಕ್ಷ, ಶಾಸಕರು ಸೇರಿ ಸಿಎಂ ಆಗಿ ಅಯ್ಕೆ ಮಾಡಲಾಗಿದೆ. ಮುಂದೆ ಯಾರನ್ನು ಸಿಎಂ ಮಾಡಬೇಕು ಎಂಬುವುದನ್ನು ಪಕ್ಷ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

CM Siddaramaiah : ಬಿಜೆಪಿ ನಾಯಕರು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷವನ್ನು ಕಟುವಾದ ಮಾತುಗಳಿಂದ ಟೀಕೆ ಮಾಡಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

CM Siddarmaiah infrot of vidhansoudha
Koo

ಬೆಂಗಳೂರು: ಸೋಮವಾರ (ಡಿ. 4) ಹುಬ್ಬಳ್ಳಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ (Muslim community) ರಕ್ಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿರುವ ಮಾತಿಗೆ ಈಗ ವಿವಾದ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ನಾಯಕರು (BJP leaders) ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಕಿಡಿಕಾರಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷವನ್ನು ಕಟುವಾದ ಮಾತುಗಳಿಂದ ಟೀಕೆ ಮಾಡಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದರಲ್ಲಿ ತಪ್ಪು ಏನಿದೆ…!? ನಾನು ಹೇಳಿದ್ದು ಒಂದು ನೀವು ಬರೆದಿರುವುದು ಒಂದು. ಒಂದು ಪತ್ರಿಕೆಯವರು ಸರಿಯಾಗಿ ಬರೆದಿದ್ದಾರೆ. ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ ಅಂತ ನಾನು ಹೇಳಿರೋದು. ನೀವು ಅದಕ್ಕೆ ಉಪ್ಪು ಖಾರ ಹಾಕಬೇಡಿ ಎಂದು ಹೇಳಿದರು.

ಇದನ್ನೂ ಓದಿ: Belagavi Winter Session: ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು; ಗಂಭೀರವಾಗಿ ಪರಿಗಣಿಸಿದ ಸರ್ಕಾರ

ಅಲ್ಪಸಂಖ್ಯಾತರನ್ನು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ

ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ. ಅಲ್ಪಸಂಖ್ಯಾತರಿಗೆ 4 ರಿಂದ 5 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡುವುದಾಗಿ ಹೇಳಿದ್ದೇನೆ. ಇದನ್ನು ಬಿಜೆಪಿ ಓಲೈಕೆ ರಾಜಕಾರಣ ಎಂದು ಕರೆದರೆ ಹೇಗೆ? ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಮುದಾಯದ ಪರ ಇದ್ದೇವೆ ಎಂದು ಹೇಳಬೇಕಾಗುತ್ತೆ: ಸತೀಶ್‌ ಜಾರಕಿಹೊಳಿ

ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಚಿವ ಸತೀಶ್ ಜಾರಕಿಹೊಳಿ ಸಮರ್ಥನೆ ಮಾಡಿಕೊಂಡಿದ್ದಾರೆ. ಸಮುದಾಯದ ಕಾರ್ಯಕ್ರಮಗಳಲ್ಲಿ ಅಂತಹ ಹೇಳಿಕೆ ಸಹಜ. ಸಮುದಾಯದ ಪರ ಇದ್ದೇವೆ ಎಂದು ಹೇಳಬೇಕಾಗುತ್ತದೆ. ಅದು ಮುಸ್ಲಿಂ ಸಮುದಾಯ ಇರಲಿ ಯಾವುದೇ ಸಮುದಾಯ ಇರಲಿ ಎಂದು ಹೇಳಿದ್ದಾರೆ.

ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಕಿಡಿ

ಈ ಸರ್ಕಾರ ಬಂದ ದಿನದಿಂದಲೂ ಈ ಕೆಲಸವನ್ನು ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಸುವುದು ಅಷ್ಟೇ ಇವರ ರಾಜಕಾರಣ. ಅಭಿವೃದ್ಧಿ ರಾಜಕಾರಣ ಇಲ್ಲ. ಬರೀ ದ್ವೇಷದ ರಾಜಕಾರಣ ಮಾಡುವುದು ಅಷ್ಟೇ ಇವರ ಕೆಲಸ. ಸದನದಲ್ಲಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಚರ್ಚೆ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ಇದೊಂದು ಎಡಬಿಡಂಗಿ ಸರ್ಕಾರ: ಆರ್.‌ ಅಶೋಕ್

ಇದೊಂದು ಎಡಬಿಡಂಗಿ ಸರ್ಕಾರವಾಗಿದೆ. ಹಿಂದು ಸೆಕೆಂಡ್ ದರ್ಜೆ ಪ್ರಜೆಗಳಲ್ಲ. ಮುಸ್ಲಿಂ ಓಲೈಕೆ ಮಾಡುವುದನ್ನು ಬಿಡಲಿ. ಒಬ್ಬ ಸಿಎಂ ಒಂದು ಸಮುದಾಯದ ಪರ ನಿಲ್ಲೋದು ಸರಿಯಲ್ಲ. ಸಚಿವ ಜಮೀರ್ ಅಹಮದ್ ಖಾನ್ ಆಯಿತು. ಈಗ ಸಿದ್ದರಾಮಯ್ಯ‌ ಮಾತನಾಡುತ್ತಿದ್ದಾರೆ. ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಶಾದಿ ಭಾಗ್ಯ ಮಾಡಿದರು. ಎಸ್ಸಿ ಸಮುದಾಯದಲ್ಲಿ ಬಡವರು ಇರಲಿಲ್ವಾ? ಇವರನ್ನು ಕಳೆದ ಬಾರಿ ಜನ ಸೋಲಿಸಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಚಾಳಿ ಶುರು ಮಾಡಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಖಂಡನೀಯ. ಹಿಂದುಗಳು ಕೆಳಗೆ, ಮುಸ್ಲಿಮರು ಮೇಲೆ ಅಂತ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು. ಸಂವಿಧಾನ ಪೀಠಿಕೆಯನ್ನು ಹೇಳುವಾಗ ಎಲ್ಲರೂ ಒಂದೇ ಅಂತ ಹೇಳಲಾಗುವುದು. ಈಗ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದು ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಟಿಪ್ಪು ಸುಲ್ತಾನ್ ಆಚರಣೆಯಂತಹ ಕಾರ್ಯಕ್ರಮವನ್ನು ಬಿಡಬೇಕು ಎಂದು ಆರ್.‌ ಅಶೋಕ್‌ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಒಂದು ಸಮುದಾಯಕ್ಕೆ ಓಲೈಕೆ ಮಾಡಬಾರದು: ಆರಗ

ಒಬ್ಬ ಮುಖ್ಯಮಂತ್ರಿಯಾಗಿ ಒಂದು ಸಮುದಾಯಕ್ಕೆ ಓಲೈಕೆ ಮಾಡಬಾರದು. ನಾನು ನಿಮಗೆ ರಕ್ಷಣೆ ಕೊಡುತ್ತೇವೆ ಎಂದು ಹೇಳುತ್ತಾರೆ. ಅವರಿಗೆ ಏನು ಭಯ ಇದೆ? ಸಿಎಂ ಅವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂತಹ ತುಷ್ಟೀಕರಣದಿಂದ ಮೂರು ರಾಜ್ಯವನ್ನು ಕಳೆದುಕೊಂಡಿದ್ದಾರೆ. ಸಿಎಂ ಹೇಳಿಕೆಯನ್ನು ನಾನು ಖಂಡಿಸತ್ತೇನೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಇದನ್ನೂ ಓದಿ: Illegal Arecanut: ರಾಜ್ಯದಲ್ಲಿ ಅಕ್ರಮ ಅಡಿಕೆ ದಂಧೆ? ಬೆಂಗಳೂರಲ್ಲಿ ಅಂತಾರಾಜ್ಯ ಜಾಲ ಪತ್ತೆ

ಧರ್ಮದ ಹೆಸರಲ್ಲಿ ರಾಜಕಾರಣ: ಚಲವಾದಿ ನಾರಾಯಣ ಸ್ವಾಮಿ

ಪರಿಷತ್‌ ಸದಸ್ಯ ಚಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿ, ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರು ಈಗ ಹುಟ್ಟಿದ್ದಾರೆ ಅಂದುಕೊಂಡಿದ್ದಾರೆ. ಅವರಿಗೆ ಈ ದೇಶ ಯಾವುದೇ ಅನ್ಯಾಯ ಮಾಡಿಲ್ಲ‌. ನಮ್ಮ‌ ಸರ್ಕಾರ ಇದ್ದಾಗಲೂ ಸಹಾಯ ಮಾಡಿದೆ. ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನರು ನಮ್ಮ ಪಕ್ಷದಲ್ಲೂ ಇದ್ದಾರೆ. ಕಾಂಗ್ರೆಸ್‌ನವರು ಅವರನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆಯ್ತು ಮುಸ್ಲಿಂರನ್ನು ಸಿಎಂ ಮಾಡಿದ್ದಾರಾ, ಅಧ್ಯಕ್ಷ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಏನಿದು ವಿವಾದ?

ಹುಬ್ಬಳ್ಳಿ‌ಯಲ್ಲಿ ಸೋಮವಾರ ನಡೆದಿದ್ದ‌ ಮುಸ್ಲಿಂ ಸಮಾವೇಶದಲ್ಲಿ ಸಿಎಂ‌ ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ‌ಲಾಭಕ್ಕೆ ಕೆಲವರು ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಾರೆ. ಇದರಿಂದ ತಾತ್ಕಾಲಿಕ ಲಾಭ ಸಿಗಬಹುದು. ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕು. ಈ ವರ್ಷ ನಾಲ್ಕು ಸಾವಿರ ಕೋಟಿ ಅನುದಾನ ಅಲ್ಪಸಂಖ್ಯಾತರ ಇಲಾಖೆಗೆ ಕೊಟ್ಟಿದ್ದೇವೆ. 10 ಸಾವಿರ ಕೋಟಿ ಹಣ ಅಲ್ಪಸಂಖ್ಯಾತ ಇಲಾಖೆಗೆ ಖರ್ಚು ಮಾಡಬೇಕು ಅನ್ನೋದು ನಮ್ಮ ಉದ್ದೇಶ. ನಾನು ಕೊಟ್ಟಿದ್ದ ಹಣ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬೇಕು. ದೇಶದ ಸಂಪತ್ತಲ್ಲಿ ನಿಮಗೆ ಪಾಲು ಸಿಗಬೇಕು. ದೇಶದ ಸಂಪತ್ತು ನಿಮಗೂ ಹಂಚುತ್ತೇನೆ. ನಿಮಗೆ ಅನ್ಯಾಯ ಮಾಡೋಕೆ ನಾನು ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಹೇಳಿದ್ದರು.

Continue Reading

ಕರ್ನಾಟಕ

Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!

Elephant Death : ಹಾಸನದ ಯಳಸೂರು ಕಾಡಿನಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಮೃತಪಟ್ಟ ಅರ್ಜುನನ ಅಂತ್ಯಸಂಸ್ಕಾರ ಅದೇ ಜಾಗದಲ್ಲಿ ನಡೆಯುತ್ತಿದೆ. ಒಂದೆಡೆ ಪ್ರತಿಭಟನೆ, ಇನ್ನೊಂದು ಕಡೆ ಕಣ್ಣೀರ ಧಾರೆ ಸುರಿಯುತ್ತಿದೆ.

VISTARANEWS.COM


on

Arjuna death
Koo

ಹಾಸನ: ಎದ್ದೇಳು ರಾಜ ನಾನು ಬಂದಿದೀನಿ.. ಬಾ ಮನೆಗೆ ಹೋಗೋಣ : ಹೀಗೊಂದು ಕಣ್ಣೀರಿಡುತ್ತಿದ್ದಾರೆ ಕಾಡಾನೆ ಕಾರ್ಯಾಚರಣೆ ವೇಳೆ ಮರಣ ಹೊಂದಿದ ಆನೆ ಅರ್ಜುನನ ಮಾವುತ. ಮೈಸೂರು ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ತನ್ನ ಬೆನ್ನಮೇಲೆ ಹೊತ್ತು ಮೆರೆಸಿದ ವೀರ ಅರ್ಜುನ (Elephant Arjuna) ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ (Elephant Operation) ವೇಳೆ ಅಸು ನೀಗಿದ್ದ. ಪ್ರಾಣ ಕಳೆದುಕೊಂಡ ಜಾಗದಲ್ಲೇ ಅಂತ್ಯ ಸಂಸ್ಕಾರದ (final rites) ವಿಧಿ ವಿಧಾನಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಆನೆಯನ್ನು ತಬ್ಬಿಕೊಂಡು ಮಾವುತರು ಕಣ್ಣೀರು ಹಾಕುತ್ತಿರುವ ದೃಶ್ಯ ಎಲ್ಲರೂ ಮರುಗುವಂತೆ ಮಾಡಿದೆ.

Arjuna death Final rites Kavadi
ಕಣ್ಣೀರು ಹಾಕುತ್ತಿರುವ ಕಾವಾಡಿ

ಅರ್ಜುನನ್ನು ಪ್ರೀತಿಯಿಂದ ಪಳಗಿಸಿ, ಅವನ ಆಟಪಾಠಗಳಲ್ಲೇ ಮರೆತಿದ್ದ ಕಾವಾಡಿಗರಿಗೆ ತಮ್ಮ ಮಗುವನ್ನು ಕಳೆದುಕೊಂಡಷ್ಟೇ ದುಖ ಆಗುತ್ತಿದೆ. ಅದರಲ್ಲೂ ಅರ್ಜುನನ ಸಾವು ಅನ್ಯಾಯ ಎಂಬ ಮಾತುಗಳು ಕಾವಾಡಿಗರ ವಲಯದಲ್ಲಿದ್ದು ಕಣ್ಣೀರನ್ನು ಇನ್ನಷ್ಟು ಹೆಚ್ಚಿಸಿದೆ.

ಎದ್ದೇಳು ರಾಜ ನಾನು ಬಂದಿದೀನಿ.. ಬಾ ಮನೆಗೆ ಹೋಗೋಣ ಎನ್ನುತ್ತಾ ಅರ್ಜುನನ್ನು ಎಬ್ಬಿಸಲು ಪ್ರಯತ್ನ ಮಾಡಿದ ಕಾವಾಡಿ, ʻʻನಿನಗೆ ಮುದ್ದೆ ಮಾಡಿ ಕೊಡ್ತಿನಿ.. ಊಟ ಕೊಡ್ತಿನಿ.. ರಾಜ ನಾನು ಬಂದಿದಿನಿ ಎದ್ದೇಳುʼʼ ಎಂದೆಲ್ಲ ಕಣ್ಣೀರು ಹಾಕಿದ ಕಾವಾಡಿ ಕೊನೆಗೆ, ʻʻಅನ್ಯಾಯವಾಗಿ ನಿನ್ನ ಇಲ್ಲಿ ಕರ್ಕೊಬಂದು ಸಾಯಿಸಿ ಬಿಟ್ರಲ್ಲʼʼ ಎಂದು ಬಿಕ್ಕಿ ಬಿಕ್ಕಿ ಅತ್ತರು.

Arjuna death Final rites

ಮೈಸೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಒತ್ತಾಯ

ಕಾರ್ಯಾರಣೆಯ ವೇಳೆ ಕಾಡಾನೆಯ ದಾಳಿಗೆ ಒಳಗಾದ ಅರ್ಜುನ ಅಲ್ಲೇ ಪ್ರಾಣ ಕಳೆದುಕೊಂಡಿದ್ದ. ಆತನ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಮೃತಪಟ್ಟ ಜಾಗದಲ್ಲೇ ನಡೆಸಲಾಗುತ್ತಿದೆ. ಮೈಸೂರು ಅರಮನೆಯ ಪುರೋಹಿತರಾದ ಪ್ರಹ್ಲಾದ್‌ ಅವರು ವಿಧಿ ವಿಧಾನಗಳ ನೇತೃತ್ವ ವಹಿಸಿದ್ದಾರೆ. ಹಾಸನ ಡಿಸಿ ಸತ್ಯಭಾಮ ಹಾಗೂ ಎಸ್ಪಿ ಮೊಹಮ್ಮದ್ ಸುಜೀತಾ ಅವರು ಆಗಮಿಸಿದ್ದಾರೆ. ಈ ನಡುವೆ, ಅಂತ್ಯ ಸಂಸ್ಕಾರವನ್ನು ಬೇರೆ ಜಾಗದಲ್ಲಿ ಅದರಲ್ಲೂ ಮೈಸೂರಿನಲ್ಲಿ ನಡೆಸಬೇಕು ಎಂದು ಕೆಲವು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಅಂತ್ಯ ಸಂಸ್ಕಾರವನ್ನು ಬೇರೆ ಕಡೆ ನಡೆಸಿ ಅಲ್ಲೊಂದು ಸ್ಮಾರಕವನ್ನು ಕಟ್ಟಬೇಕು, ಅದು ಎಲ್ಲರಿಗೂ ಕಾಣುವಂತಿರಬೇಕು ಎನ್ನುವುದು ಹೋರಾಟಗಾರರ ಒತ್ತಾಯ.

ಆದರೆ, ಅರ್ಜುನನಿಗೆ ಈಗಾಗಲೇ ಸಾಕಷ್ಟು ನೋವಾಗಿದೆ. ಇಲ್ಲಿಂದ ಸ್ಥಳಾಂತರ ಮಾಡಿ ತೊಂದರೆ ಕೊಡುವುದು ಬೇಡ, ಇಲ್ಲೇ ಅಂತ್ಯಸಂಸ್ಕಾರ ಮಾಡಲು ಅವಕಾಶ ಕೊಡಿ ಎಂದು ಮೈಸೂರು ಅರಮನೆಯ ಪುರೋಹಿತರು ಮನವಿ ಮಾಡಿಕೊಂಡಿದ್ದಾರೆ.

Arjuna death Final rites Kavadi

ಅರ್ಜುನನ ನೋಡಲು ಜನ ಸಾಗರ

ಮೃತ ಅರ್ಜುನ ನೋಡಲು ಮತ್ತು ಅವನ ಅಂತ್ಯ ಸಂಸ್ಕಾರದ ವೇಳೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಮುಂದಾಗುತ್ತಿದ್ದಂತೆ ಜನರ ಪ್ರತಿಭಟನೆ ಹೆಚ್ಚಿತು. ಹೀಗಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಅರ್ಜುನನ ಮೃತದೇಹದ ಮುಂದೆಯೂ ಕೆಲವರು ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಿದ್ದಾರೆ. ಅವನ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಶಿಕ್ಷಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಜತೆಗೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಕಾಡಿನಲ್ಲಿ ಅಂತ್ಯ ಸಂಸ್ಕಾರ ಬೇಡ, ಸ್ಮಾರಕ ನಿರ್ಮಿಸಿ: ಶಾಸಕ ಮಂಜು ಒತ್ತಾಯ

ಈ ನಡುವೆ, ಕಾಡಿನ ನಡುವೆ‌ ಅರ್ಜುನನ ಅಂತ್ಯ ಸಂಸ್ಕಾರ ನಡೆಸಬಾರದು, ರಸ್ತೆ ಸಂಪರ್ಕ ಹಾಗು ಮೂಲಭೂತ ಸೌಲಭ್ಯಗಳು ಇರುವ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಅರ್ಜುನನ ಹೆಸರಿನಲ್ಲಿ ಸ್ಮಾರಕ ಮಾಡಬೇಕು ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಒತ್ತಾಯ ಮಾಡಿದ್ದಾರೆ.

ʻʻಅರ್ಜುನ ರಾಜ್ಯದ ಜನರ ಪ್ರೀತಿಪಾತ್ರ ಆನೆ. ದಸರಾದಲ್ಲಿ ನಾಡದೇವರೆ ಚಾಮುಂಡೇಶ್ಚರಿ ಹೊತ್ತ ಅರ್ಜುನನ ನೆನಪು ಉಳಿಯಬೇಕು. ಅರ್ಜುನನ ನೆನಪು ಉಳಿಯಲು ಸ್ಮಾರಕ ನಿರ್ಮಾಣ ಆಗಬೇಕುʼʼ ಎಂದು ಅವರು ಹೇಳಿದ್ದಾರೆ. ಅರಣ್ಯ ಸಚಿವರು ಕರೆದಿರುವ ಸಭೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಮಾಡುವುದಾಗಿ ಅವರು ಹೇಳಿದರು.

Arjuna death Final rites

ಉನ್ನತ ಮಟ್ಟದ ತನಿಖೆಗೆ ವಾಟಾಳ್‌ ನಾಗರಾಜ್‌ ಆಗ್ರಹ

ʻʻಸುಮಾರು 22 ವರ್ಷಗಳ ಕಾಲ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ ಅರ್ಜುನ ಸಾವನ್ನಪ್ಪಿರುವುದು ಅತ್ಯಂತ ಗಂಭೀರವಾದ ಸಂಗತಿ. ಅರ್ಜುನನ ಸಾವಿಗೆ ಕಾರಣ ಯಾರು ಎಂಬುದನ್ನು ತಿಳಿಯಬೇಕು. ಹಾಗಾಗಿ ಅರಣ್ಯ ಇಲಾಖೆಯವರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕುʼʼ ಎಂದು ಕ‌ನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ʻʻಅರ್ಜುನನ ಸಾವಿನಿಂದ ಕೋಟಿ ಕೋಟಿ ಜನರ ಮನಸ್ಸಿಗೆ ನೋವಾಗಿದೆ‌. ಅರ್ಜುನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಕಾಡಾನೆಗಳ ದಾಳಿಯಿಂದ ಅರ್ಜುನ ಸಾವನ್ನಪ್ಪಿರುವುದರಿಂದ ನಿಜಕ್ಕೂ ನೋವಾಗಿದೆ. ಅರ್ಜುನನ ಸಾವಿನ ಬಗ್ಗೆ ತನಿಖೆ ಆಗದಿದ್ದರೆ ಕನ್ನಡ ಚಳುವಳಿ ವಾಟಾಳ್ ಪಕ್ಷ ತೀವ್ರ ಹೋರಾಟ ನಡೆಸಲಿದೆʼʼ ಎಂದು ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

Continue Reading

ಕರ್ನಾಟಕ

Cyber crime : ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯ!

Cyber crime : ಸೈಬರ್ ಹ್ಯಾಕರ್ಸ್ ಹಾವಳಿ ಹೈಕೋರ್ಟ್‌ಗೂ ತಪ್ಪಿಲ್ಲ. ಕಲಾಪದ ಲೈವ್ ಸ್ಟ್ರೀಮಿಂಗ್ ವೇಳೆ ಅಶ್ಲೀಲ ದೃಶ್ಯಾವಳಿ ಅಪ್‌ಲೋಡ್‌ ಆಗಿದೆ. ಹೀಗಾಗಿ ಹೈಕೋರ್ಟ್‌ನ ಲೈವ್‌ ಸ್ಟ್ರೀಮಿಂಗ್‌ ಅನ್ನು ಸ್ಥಗಿತ ಮಾಡಲಾಗಿದೆ.

VISTARANEWS.COM


on

By

High Court live streaming hacked by hackers
Koo

ಬೆಂಗಳೂರು: ಹೈಕೋರ್ಟ್‌ನಲ್ಲಿ ನಡೆಯುವ ಕಾರ್ಯ ಕಲಾಪಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಹ್ಯಾಕರ್ಸ್‌ಗಳು ಹ್ಯಾಕ್‌ (Cyber crime) ಮಾಡಿ, ಅಶ್ಲೀಲ ದೃಶ್ಯಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಹೈಕೋರ್ಟ್ ಕಲಾಪಕ್ಕೂ ಸೈಬರ್ ಹ್ಯಾಕರ್ಸ್ ಹಾವಳಿಯಿಂದಾಗಿ ವಿಡಿಯೋ ಕಾನ್ಫರೆನ್ಸ್ ಸ್ಥಗಿತ ಮಾಡಲಾಗಿದೆ.

ಸೈಬರ್ ಸೆಕ್ಯುರಿಟಿ ಸಮಸ್ಯೆ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಅನ್ನು ಸ್ಥಗಿತ ಮಾಡಲಾಗಿದೆ ಎಂದು ಸಿಜೆ ಪ್ರಸನ್ನ ಬಿ ವರಾಳೆ ಸ್ಪಷ್ಟನೆ ನೀಡಿದ್ದಾರೆ. ಕೆಲ ಕೋರ್ಟ್ ಹಾಲ್‌ಗಳ ವಿಡಿಯೊ ಕಾನ್ಫರೆನ್ಸ್ ಹ್ಯಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಬ್ಬಂದಿ ಸದ್ಯಕ್ಕೆ ಸೌಲಭ್ಯ ಸ್ಥಗಿತಗೊಳಿಸಿದ್ದಾರೆ.

ಲೈವ್ ಸ್ಟ್ರೀಮಿಂಗ್ ಹ್ಯಾಕ್‌ ಮಾಡಿದ್ದು, ಬಳಿಕ ಅಶ್ಲೀಲ ದೃಶ್ಯಗಳನ್ನೆಲ್ಲ ಅಪ್ಲೋಡ್‌ ಮಾಡಿದ್ದಾರೆ. ಇದರಿಂದಾಗಿ ಮುಜುಗರಕ್ಕೆ ಒಳಗಾಗಬೇಕಾಯಿತು. ಹ್ಯಾಕ್‌ ಆಗಿದ್ದು ತಿಳಿಯುತ್ತಿದ್ದಂತೆ ಹೈಕೋರ್ಟ್ ಸಿಬ್ಬಂದಿ ಕೇಂದ್ರ ವಿಭಾಗ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರನ್ವಯ ಎಫ್‌ಐಆರ್‌ ದಾಖಲು ಮಾಡಲಾಗಿದೆ. ದೂರು ದಾಖಲಿಸಿಕೊಂಡಿರುವ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Physical Abuse : ವೈನ್‌ ಕೊಟ್ಟು ರೇಪ್‌ ಮಾಡಿದ್ದ ನಿವೃತ್ತ ಐಎಎಸ್‌; ದೌರ್ಜನ್ಯದ ಹಿಂದಿನ ಕಹಾನಿ ಏನು?

Physical Abuse : ನಿವೃತ್ತ ಐಎಎಸ್‌ ಅಧಿಕಾರಿ ವಿರುದ್ಧ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದ್ದು, ಶಿವಮೊಗ್ಗದ ಯುವತಿಯೊಬ್ಬಳು ಠಾಣೆ ಮೆಟ್ಟಿಲೇರಿದ್ದಾಳೆ.

VISTARANEWS.COM


on

By

Retired IAS officer raped woman
ನಿವೃತ್ತ ಐಎಎಸ್‌ ಅಧಿಕಾರಿ ರಾಮಚಂದ್ರ
Koo

ಬೆಂಗಳೂರು: ಕೇರ್‌ ಟೇಕರ್‌ ಆಗಿ ಬಂದ ಯುವತಿಗೆ ಮತ್ತಿನೌಷಧಿ ನೀಡಿ ನಿವೃತ್ತ ಐಎಎಸ್ ಅಧಿಕಾರಿ ಅತ್ಯಾಚಾರ (Physical Abuse) ಎಸಗಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಜಯನಗರದಲ್ಲಿ ಈ ಘಟನೆ ನಡೆದಿದ್ದು, ನಿ‌ವೃತ್ತ ಐಎಎಸ್‌ ಅಧಿಕಾರಿ ರಾಮಚಂದ್ರ ಎಂಬುವವರ ವಿರುದ್ಧ ತಿಲಕ್‌ನಗರದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶಿವಮೊಗ್ಗದ ನಿವಾಸಿಯಾಗಿರುವ ಸಂತ್ರಸ್ತೆ (28) ಪ್ರೊಪ್ರೇಟರ್‌ ಕೆಲಸ ಮಾಡಿಕೊಂಡಿದ್ದರು. ಹೀಗಿದ್ದಾಗ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ರಾಮಚಂದ್ರ ಸಂತ್ರಸ್ತೆಗೆ ಫೋನ್‌ ಕರೆ ಮಾಡಿ, ಪತ್ನಿಗೆ ಮರೆವಿನ ಕಾಯಿಲೆ ಇದೆ. ಪತ್ನಿಯ ಸ್ಥಿತಿ ನೋಡಿಕೊಂಡು ಕೇರ್‌ ಟೇಕರ್‌ ಅನ್ನು ಕಳುಹಿಸಿ ಎಂದು ಕೇಳಿದ್ದಾರೆ.

ಹೀಗಾಗಿ ಜಯನಗರದಲ್ಲಿದ್ದ ರಾಮಚಂದ್ರರ ಮನೆಗೆ ಸಂತ್ರಸ್ತೆ ಹೋಗಿ, ಆ ರಾತ್ರಿ ರಾಮಚಂದ್ರರ ಪತ್ನಿಯನ್ನು ನೋಡಿಕೊಂಡು ಅಲ್ಲೇ ತಂಗಿದ್ದಾರೆ. ಸಂತ್ರಸ್ತೆ ರಾಮಚಂದ್ರರ ಪತ್ನಿ ಜತೆಗೆ ರೂಮಿನಲ್ಲಿ ಮಲಗಿದ್ದಾಗ, ಮಧ್ಯರಾತ್ರಿಯಂದು ಬಂದು ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಸಂತ್ರಸ್ತೆ ಕೆಲಸಕ್ಕೆ ಅವರ ಮನೆಗೆ ಹೋಗುವುದನ್ನೇ ಬಿಟ್ಟು, ಮತ್ತೊಬ್ಬಳನ್ನು ಕೇರ್‌ ಟೇಕರ್‌ ಆಗಿ ಕಳಿಸಿದ್ದಳು. ಈ ಮಧ್ಯೆ ಆ ಕೇರ್‌ ಟೇಕರ್‌ ಊರಿಗೆ ಹೋದಾಗ ಅನಿರ್ವಾಯವಾಗಿ ಸಂತ್ರಸ್ತೆ ರಾಮಚಂದ್ರರ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಮಧ್ಯೆ ಸಂತ್ರಸ್ತೆಗೆ ಫೋನ್‌ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾರೆ. ಹೀಗೆ ಮನೆಗೆ ಬಂದ ಸಂತ್ರಸ್ತೆಗೆ ರಾಮಚಂದ್ರ ವೈನ್‌ನಲ್ಲಿ ಮತ್ತಿನೌಷಧಿ ಬೆರೆಸಿ ಕೊಟ್ಟಿದ್ದಾರೆ. ಆಕೆ ಕುಡಿಯುತ್ತಿದ್ದಂತೆ ಪ್ರಜ್ಞೆ ತಪ್ಪಿದಾಗ ಅತ್ಯಾಚಾರ ಎಸಗಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಸಂಪೂರ್ಣ ನಗ್ನ ಸ್ಥಿತಿಯಲ್ಲಿದ್ದನ್ನು ಕಂಡು ಅಘಾತಕ್ಕೆ ಒಳಗಾಗಿದ್ದಾರೆ. ಅಲ್ಲೇ ಪಕ್ಕದಲ್ಲಿ ನೋಡಿದಾಗ ರಾಮಚಂದ್ರರೂ ನಗ್ನರಾಗಿದ್ದು ಕಂಡಿದೆ. ಈ ನಡುವೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಯಾರಿಗಾದರೂ ಈ ವಿಷಯ ಹೇಳಿದರೆ ಜತೆಗೆ ಇರುವ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.

ಇದನ್ನೂ ಓದಿ: Theft Case : ಬೆಂಗಳೂರಿಗರೇ ಎಚ್ಚರ; ಖಾಕಿ ಡ್ರೆಸ್‌ನಲ್ಲಿ ಬಂದು ದರೋಡೆ ಮಾಡ್ತಾರೆ ಹುಷಾರ್‌!

ಮಾತ್ರವಲ್ಲದೇ ಸಂತ್ರಸ್ತೆಗೆ ಹೆದರಿಸಿ ಬಳಿಕ 5 ಲಕ್ಷ ರೂ. ಚೆಕ್‌ ಅನ್ನು ನೀಡಿ, ಈ ಹಣವನ್ನು ವಾಪಸ್‌ ಕೊಡುವುದು ಬೇಡ. ಬದಲಿಗೆ ಬಿಸಿನೆಸ್‌ನಲ್ಲಿ ನನ್ನ ಪಾರ್ಟರ್‌ ಮಾಡಿಕೊಂಡು, ಬಂದ ಆದಾಯದಲ್ಲಿ ನನಗೆ 25% ಲಾಭಂಶದ ಹಣ ನೀಡುವಂತೆ ಹೇಳಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಜತೆಗೆ ಸಂತ್ರಸ್ತೆಯ ಕಚೇರಿಯನ್ನೆಲ್ಲ ಆರೋಪಿ ಸುರ್ಪದಿಗೆ ಪಡೆದು ಎರಡನೇ ಬಾರಿಯೂ ಅತ್ಯಾಚಾರವೆಸಗಿದ್ದಾನೆ. ಆತನಿಂದ ಗರ್ಭಿಣಿಯಾದ ವಿಷಯವನ್ನು ತಿಳಿಸಿದಾಗ ನನಗೂ ಇದಕ್ಕೂ ಸಂಬಂಧವಿಲ್ಲ ಕೈತೊಳೆದುಕೊಂಡಿದ್ದಾರೆ. ಮತ್ತೆ ಸಂತ್ರಸ್ತೆಯ ಮನೆಗೆ ಬಂದು ನನ್ನ ಮೇಲೆ ದೂರು ನೀಡಬೇಡ, ಹೊಟ್ಟೆಯಲ್ಲಿರುವ ಮಗುವಿನ ಭವಿಷ್ಯದ ಬಗ್ಗೆ ಯೋಚಿಸು, ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ನನ್ನ ಕುಟುಂಬಸ್ಥರನ್ನು ಒಪ್ಪಿಸುವೆ ಎಂದೇಳಿ ಮೋಸ ಮಾಡಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.

ಗನ್‌ ತೋರಿಸಿ ಬ್ಲ್ಯಾಕ್‌ಮೇಲ್‌!

ಈ ಪ್ರಕರಣ ಸಂಬಂಧ ದೂರು ದಾಖಲಿಸಿ ತಿಂಗಳಾನುಗಟ್ಟಲೆಯಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಪರ ವಕೀಲ ಬಾಲನ್ ಆರೋಪಿಸಿದ್ದಾರೆ. ರಾಮಚಂದ್ರ ತಮ್ಮ ಪತ್ನಿಗೆ ಮರೆವಿನ ಖಾಯಿಲೆ ಇದೆ ಎಂದು ಸಂತ್ರಸ್ತೆಯನ್ನು ಮನೆಯಲ್ಲಿ ಕೇರ್‌ ಟೇಕರ್‌ ಆಗಿ ನೇಮಕ ಮಾಡಿಕೊಂಡಿದ್ದರು.

ಈ ನಡುವೆ ಸಂತ್ರಸ್ತೆ ಮೇಲೆ ಕಣ್ಣಿಟ್ಟಿದ್ದ ರಾಮಚಂದ್ರ ವೈನ್‌ನಲ್ಲಿ ಮತ್ತಿನೌಷಧಿ ಬೆರಸಿ ಬಳಿಕ ಅತ್ಯಾಚಾರ ಎಸಗಿದ್ದಾರೆ. ಯುವತಿಗೆ ಪ್ರಜ್ಞೆ ಬಂದಾಗ ತನ್ನ ಮೇಲೆ ನಡೆದಿದ್ದ ಕೌರ್ಯವನ್ನು ಖಂಡಿಸಲು ಮುಂದಾಗಿದ್ದಾರೆ. ಈ ವೇಳೆ ಗನ್ ತೋರಿಸಿ ಬೆದರಿಕೆ ಹಾಕಿ, ಬಾಯಿ ಮುಚ್ಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊಬೈಲ್‌ನಲ್ಲಿ ಮೆಸೇಜ್ ಎಕ್ಸ್‌ಚೆಂಜ್ ಎವಿಡೆನ್ಸ್ ಕೂಡ ಇದೆ. ಆದರೆ ಪೊಲೀಸರು ಸಂತ್ರಸ್ತೆಗೆ ನೋಟಿಸ್ ನೀಡುವ ಕೆಲಸ ಮಾಡಿದ್ದಾರೆ. ಅಷ್ಟೆ ಅಲ್ಲದೆ ಆಕೆಯ ಕುಟುಂಬದವರ ಮೇಲೆ ಕೂಡ ಕೇಸ್ ಹಾಕಿದ್ದಾರೆ. ಹೀಗಾಗಿ ಕೇಸ್‌ ಅನ್ನು ಸ್ಕ್ವಾಷ್ ಮಾಡುವುದಕ್ಕೆ ರಿಟ್ ಪಿಟಿಷನ್ ಹಾಕಿರುವುದಾಗಿ ಬಾಲನ್‌ ತಿಳಿಸಿದ್ದಾರೆ. ಶಿವಮೊಗ್ಗದಿಂದ ಇಲ್ಲಿಗೆ ಬಂದ ಹೆಣ್ಣು ಮಗಳ ಮೇಲೆ ಈ ರೀತಿ ಕೃತ್ಯ ನಡೆಸಿದ್ದಾರೆ. ಸದ್ಯಕ್ಕೆ ಇದೊಂದು ಘಟನೆ ಹೊರ ಬಂದಿದೆ, ಆದರೆ ಇನ್ನು ಇಂತಹ ಪ್ರಕರಣಗಳು ಹೆಚ್ಚಾಗಿರಬಹುದು ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading
Advertisement
India bloc Leaders
ದೇಶ38 mins ago

INDIA Alliance: ಬಿಜೆಪಿ ಭರ್ಜರಿ ಗೆಲುವಿನ ಬಳಿಕ ʼಇಂಡಿಯಾ’ ಕೂಟದಲ್ಲಿ ಕೋಲಾಹಲ! ಮೀಟಿಂಗ್ ಕ್ಯಾನ್ಸಲ್

CM Siddarmaiah infrot of vidhansoudha
ಕರ್ನಾಟಕ47 mins ago

CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

Arjuna death
ಕರ್ನಾಟಕ50 mins ago

Elephant Arjuna : ಎದ್ದೇಳು ರಾಜ, ನಾನು ಬಂದಿದ್ದೀನಿ ; ಅರ್ಜುನನ ಮುಂದೆ ಕಾವಾಡಿಗರ ಕಣ್ಣೀರು!

actor nani
South Cinema1 hour ago

Actor Nani: ‘ಹಾಯ್​ ನಾನ್ನʼ ಚಿತ್ರತಂಡದಿಂದ ವಿಜಯ್‌-ರಶ್ಮಿಕಾ ಖಾಸಗಿ ಫೋಟೊ ಬಳಕೆ; ನಾನಿ ಹೇಳಿದ್ದೇನು?

High Court live streaming hacked by hackers
ಕರ್ನಾಟಕ1 hour ago

Cyber crime : ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯ!

Jay Shah wins 'Sports Business Leader of the Year' award
ಕ್ರಿಕೆಟ್1 hour ago

Jay Shah: ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್​ ದಿ ಇಯರ್ ಪ್ರಶಸ್ತಿ ಗೆದ್ದ ಜಯ್ ಶಾ

shivvanna naani
South Cinema2 hours ago

Shiva Rajkumar: ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ತೆಲುಗು ನಟ ನಾನಿ

Retired IAS officer raped woman
ಕರ್ನಾಟಕ2 hours ago

Physical Abuse : ವೈನ್‌ ಕೊಟ್ಟು ರೇಪ್‌ ಮಾಡಿದ್ದ ನಿವೃತ್ತ ಐಎಎಸ್‌; ದೌರ್ಜನ್ಯದ ಹಿಂದಿನ ಕಹಾನಿ ಏನು?

Leaf spot disease in Karnataka
ಕರ್ನಾಟಕ2 hours ago

Belagavi Winter Session: ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು; ಗಂಭೀರವಾಗಿ ಪರಿಗಣಿಸಿದ ಸರ್ಕಾರ

winter morning
ಅಂಕಣ2 hours ago

ದಶಮುಖ ಅಂಕಣ: ಬೆಳಗೆಂಬ ಬೆರಗು!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ10 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌