ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾದ ಯುವಕ - Vistara News

ಕ್ರೈಂ

ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾದ ಯುವಕ

ದಿನೇದಿನೇ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಶಿವಮೊಗ್ಗದಲ್ಲಿ ಇಂತಹದೊಂದು ಪ್ರಕರಣ ದಾಖಲಾಗಿದೆ. ಕಠಣ ಕಾನೂನು ಇದ್ದರೂ ಅತ್ಯಾಚಾರ ಪ್ರಕರಣಗಳು ಕಡಿಮೆ ಆಗಿಲ್ಲ.

VISTARANEWS.COM


on

monor rape shivamogga
ಅಪ್ರಾಪ್ತೆ ಮೇಲೆ ಅತ್ಯಾಚಾರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಯುವಕ ವಿದೇಶಕ್ಕೆ ಪರಾರಿಯಾಗಿರುವ ಘಟನೆ ಶಿವಮೊಗ್ಗದ ಹೊಳೆಹೊನ್ನೂರು ಸದಾಶಿವಪುರದ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ ನಡೆದಿದೆ.

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಹಾಗೂ ಆಕೆಯ ಅಜ್ಜಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಿಸಿದ್ದಾರೆ. ವಿದೇಶಕ್ಕೆ ಹಾರಿ ಹೋಗಿರುವ ಆರೋಪಿ ಅಲ್ಲಿಂದಲ್ಲೇ ಅಪ್ರಾಪ್ತೆಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದ್ದಾರೆ.

ಇದನ್ನೂ ಓದಿ | ನೆರೆ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಕೆಲ ದಿನಗಳ ಹಿಂದೆ ಯುವಕನ ಕಡೆಯವರಿಂದ ಅಪ್ರಾಪ್ತೆ ಮೇಲೆ ಹಲ್ಲೆ ಮಾಡಲು ಯತ್ನವೂ ಆಗಿದೆ. ಅಪ್ರಾಪ್ತ ಯುವತಿ ತನ್ನ ಅಜ್ಜಿ ಜತೆ ವಾಸವಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯುವಕ ಮತ್ತು ಆತನ ಕುಟುಂಬದ ವಿರುದ್ಧ ಎಸ್‌ಪಿ ಕಚೇರಿಗೆ ದೂರು ನೀಡಿದ್ದು, ತನ್ನ ಜೀವನದ ಜತೆ ಚೆಲ್ಲಾಟವಾಡಿದ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾಳೆ.

ಇದನ್ನೂ ಓದಿ | ಶಿವಮೊಗ್ಗ ಕಾಲೇಜಿನ ಅಂಗಳದಲ್ಲಿ ಮರುಕಳಿಸಲಿದೆ ವಿದ್ಯಾರ್ಥಿಗಳ ಹಳೆ ನೆನಪು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Sedition Case : ಪಾಕೈಸ್ತಾನ್‌ ಟ್ವೀಟ್‌ಗೆ ಸಿಟ್ಟಿಗೆದ್ದ ಕಾಂಗ್ರೆಸ್‌, ಪಾಕಿಸ್ತಾನದಲ್ಲೇ ಕೇಸ್‌ ಹಾಕಿ ಎಂದ ಬಿಜೆಪಿ!

Sedition Case : ಕಾಂಗ್ರೆಸ್‌ ಮತ್ತು ಬಿಜೆಪಿ ಒಂದು ಕಡೆ ಬೀದಿ ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಸೋಷಿಯಲ್‌ ಮೀಡಿಯಾದಲ್ಲೂ ಫೈಟ್‌ ಮಾಡುತ್ತಿವೆ. ಕಾಂಗ್ರೆಸ್‌ ಪಕ್ಷ ಬಿಜೆಪಿಗೆ ಎಚ್ಚರಿಕೆಯನ್ನೂ ನೀಡಿದೆ.

VISTARANEWS.COM


on

Sedition Case Congress BJP
Koo

ಬೆಂಗಳೂರು: ರಾಜ್ಯಸಭೆ ಚುನಾವಣೆಯ (Rajyasabha Election) ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲೇ ಕೆಲವರು ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಘೋಷಣೆ ಕೂಗಿದ್ದಾರೆ ಎಂಬ ಘಟನೆ (Sedition Case) ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರಿ ಸಂಘರ್ಷಕ್ಕೇ ಕಾರಣವಾಗಿದೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಅದು ಕೋಲಾಹಲವೆಬ್ಬಿಸಿದೆ, ರಾಜ್ಯಾದ್ಯಂತ ಈ ಹೇಳಿಕೆಯ ವಿರುದ್ಧ ಬಿಜೆಪಿ ದೊಡ್ಡ ಮಟ್ಟದ ಪ್ರತಿಭಟನೆ (BJP Protest) ನಡೆಸಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡಾ ತಿರುಗೇಟು ನೀಡುತ್ತಿದೆ. ಈ ಜಟಾಪಟಿ ಸಾಮಾಜಿಕ ಜಾಲತಾಣದಲ್ಲೂ (Fight in Social Media) ಮುಂದುವರಿದಿದೆ.

ಕಾಂಗ್ರೆಸ್‌ ಇದೊಂದು ಸುಳ್ಳು ಆರೋಪ. ನಸೀರ್‌ ಸಾಬ್‌ ಜಿಂದಾಬಾದ್‌ ಎಂದು ಹೇಳಿದ್ದನ್ನು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿದಂತೆ ಬಿಂಬಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದೆ. ಅದಕ್ಕೆ ಬಿಜೆಪಿ ಕೂಡಾ ಡಿಚ್ಚಿ ಹೊಡೆದಿದೆ.

ಈ ನಡುವೆ, ಇನ್ನೊಂದು ಪೋಸ್ಟ್‌ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರಿ ಸಮರಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Sedition Case: ಪಾಕಿಸ್ತಾನ ಜಿಂದಾಬಾದ್ ಕೂಗಿದ್ದು ಯಾರು?; ಬ್ಯಾಡಗಿಯ ಮುಸ್ಲಿಂ ವ್ಯಾಪಾರಿ ಮೇಲೆ ಅನುಮಾನ

ಪಾ‘ಕೈ’ಸ್ತಾನ ಎಂದು ಬಿಜೆಪಿ ಪೋಸ್ಟ್

ಕಾಂಗ್ರೆಸ್​ ಚಿಹ್ನೆಯಾದ ಹಸ್ತವನ್ನ ಬಳಸಿ ಪಾ‘ಕೈ’ಸ್ತಾನ ಎಂದು ಬಿಜೆಪಿ ಪೋಸ್ಟ್ ಮಾಡಿದೆ. ಭಾರತದಲ್ಲಿ ಪಾಕಿಸ್ತಾನವನ್ನು ಕಾಂಗ್ರೆಸ್‌ ಬೆಂಬಲಿಸುತ್ತಿದೆ. ಹೀಗಾಗಿ ಈ ಕೈಯನ್ನು ಹೆಡೆಮುರಿ ಕಟ್ಟಿ ಎಂಬರ್ಥದಲ್ಲಿ ಸಂದೇಶವನ್ನು ಹಾಕಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷದ ಚಿಹ್ನೆ ಹಸ್ತಕ್ಕೆ ಹಸಿರು ಬಣ್ಣ ಹಾಗೂ ಪಾಕ್‌ ಬಾವುಟವನ್ನು ಚಿತ್ರಿಸಿ ಹರಿಬಿಡಲಾಗಿದೆ. ಅದಕ್ಕೆ ಪಾಕೈಸ್ತಾನ ಎಂದು ವಿವರಣೆ ನೀಡಲಾಗಿದೆ.

ಬಿಜೆಪಿ ಪೋಸ್ಟರ್ ಹಾಕಿದ್ದಕ್ಕೆ ಕೆರಳಿ ಕೆಂಡವಾದ ಕಾಂಗ್ರೆಸ್ ಪಕ್ಷವು, ಅಯೋಗ್ಯ ಬಿಜೆಪಿ ಎಂದು ತಿರುಗೇಟು ನೀಡಿದ್ದಲ್ಲದೆ, ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಠಿಣ ಕ್ರಮ ಜರುಗಿಸುವುದು ನಿಶ್ಚಿತ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.

ಈ ನಡುವೆ, ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ತಿರುಗೇಟು ನೀಡಿದ ಬಿಜೆಪಿ, ‘ನೀವು ದೂರು ದಾಖಲಿಸುವುದು ಪಾಕ್​ನಲ್ಲೋ ಅಥವಾ ಭಾರತದಲ್ಲೋ? ಎಂದು ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿದೆ.

ಇದೀಗ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

Continue Reading

ಶಿವಮೊಗ್ಗ

Hosanagara News: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರಿಂದ ಮಹಿಳೆಗೆ ಚೂರಿ ಇರಿತ

Hosanagara News: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರು ಮಹಿಳೆಯೊಬ್ಬರಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಹೊಸನಗರ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

VISTARANEWS.COM


on

A woman was stabbed by a strangers on a bike
ಸಾಂದರ್ಭಿಕ ಚಿತ್ರ.
Koo

ಹೊಸನಗರ: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರು ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ (Hosanagara News) ಪಟ್ಟಣದಲ್ಲಿ ಜರುಗಿದೆ.

ನಾಜೀಮಾ (38) ಗಾಯಗೊಂಡ ಮಹಿಳೆ. ಪಟ್ಟಣದ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಕೆಲಸ ಮಾಡುವ ಈ ಮಹಿಳೆಯು ಇಲ್ಲಿನ ಗಣಪತಿ ದೇವಸ್ಥಾನ ರಸ್ತೆಯ ಸಮೀಪದ ಮನೆಯಲ್ಲಿ ಊಟ ಮುಗಿಸಿ ಪಾರ್ಲರ್‌ಗೆ ಮರಳುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಹರಿತವಾದ ಚಾಕುವಿನಿಂದ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಮಹಿಳೆಯು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Karnataka Weather: ಬಿಸಿಲ ಧಗೆಯೊಳಗೆ ಕಾವೇರಿದ ಕರ್ನಾಟಕ; ಇನ್ನೆರಡು ದಿನ ಬಿಸಿಲು ಹೆಚ್ಚಳ

ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

ಕ್ರೈಂ

Fake Matrimony : ಅವನು 259 ಯುವತಿಯರನ್ನು ಪಟಾಯಿಸಿದ ಮೋಜುಗಾರ! ಹಾಗಂತ ಬೇರೇನೂ ಮಾಡಿಲ್ಲ!

Fake Matrimony : ಅವನು 259 ಯುವತಿಯರನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಇನ್ನೊಬ್ಬರಿಗೆ ಗೊತ್ತಾಗದಂತೆ ವ್ಯವಹಾರ ಇಟ್ಟುಕೊಂಡಿದ್ದ. ಆದರೆ, ಆತ ಕಾಮುಕನಲ್ಲ, ರೊಮ್ಯಾಂಟಿಕ್‌ ಆಗಿ ಮಾತನಾಡಿದ್ದ. ಆದರೆ, ದುರುಪಯೋಗ ಮಾಡಿಕೊಂಡಿರಲಿಲ್ಲ. ಯಾರಿವನು?

VISTARANEWS.COM


on

Fake MatrimonyFake Matrimony
Koo

ಬೆಂಗಳೂರು: ಇವನೇನೂ ಕಾಮುಕನಲ್ಲ,(Womanizer) ವಿಕೃತಕಾಮಿ (Perverted commie) ಅಲ್ಲ. ಆದರೆ ಇದುವರೆಗೆ ದೇಶಾದ್ಯಂತ 259 ಯುವತಿಯರು/ ಮಹಿಳೆಯರನ್ನು ನಂಬಿಸಿ (Fake Matrimony), ಬಳಸಿಕೊಂಡು ಮೋಸ ಮಾಡಿದ್ದ! (Fraud Case) ಹೀಗೆ ಲೆಕ್ಕವಿಲ್ಲದಷ್ಟು ಜನರಿಗೆ ಅವನು ಹೇಗೆ ಮೋಸ ಮಾಡಿದ. ಮೋಸ ಮಾಡಿದ್ದು ಅಂದ್ರೆ ಏನು? ಒಬ್ಬ ಹುಡುಗಿನೇ ಸಿಗಲು ಕಷ್ಟಪಡೋ ಈ ಕಾಲದಲ್ಲಿ ಅವನ ಬಲೆಗೆ 259 ಮಂದಿ ಬಿದ್ದಿದ್ದು ಹೇಗೆ?

ಇದೊಂದು ಇಂಟ್ರೆಸ್ಟಿಂಗ್‌ ಸ್ಟೋರಿ! ಇದನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್‌ನಿಂದ ಆರಂಭ ಮಾಡಿದರೆ ಚೆನ್ನಾಗಿರುತ್ತದೆ.

ಅವರು ಕೊಯಮತ್ತೂರಿನ ದಂಪತಿ. ಅವರ ಮಗಳಿಗೆ ಮೊದಲೊಂದು ಮದುವೆಯಾಗಿ ಕೆಲವೊಂದು ಸಮಸ್ಯೆಗಳಿಂದ ಸಂಬಂಧ ಮುರಿದುಹೋಗಿತ್ತು. ಎರಡನೇ ಮದುವೆಗಾಗಿ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನು ಹುಡುಕುತ್ತಿದ್ರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಪರಿಚಯ ಆಗಿದ್ದ.

ನಿಮ್ಮ‌ ಮಗಳನ್ನು ನಾನು ಮದುವೆಯಾಗುತ್ತೇನೆ ಅಂದಿದ್ದ ಪವನ್ ಅಗರವಾಲ್. ತಾನು ಒಬ್ಬ ಕಸ್ಟಮ್‌ ಆಫೀಸರ್‌. ಏನೋ ಕಾರಣದಿಂದ ಮೊದಲ ಮದುವೆ ಮುರಿದಿದೆ. ನಿಮ್ಮ ಮಗಳಿಗೆ ನಾನು ಬಾಳು ಕೊಡ್ತೇನೆ ಅಂದಿದ್ದ. ಒಮ್ಮೆ ಬೆಂಗಳೂರಿಗೆ ಬಂದು ಹೋಗಿ, ಮಾತಾಡೋಣ ಎಂದಿದ್ದ ಪವನ್‌.

ಹಾಗೆ ದಂಪತಿ ಮದುವೆ ಮಾತುಕತೆಗಾಗಿ ರೈಲಿನಲ್ಲಿ ಕೊಯಮತ್ತೂರಿನಿಂದ ಬೆಂಗಳೂರಿಗೆ ಬಂದಿದ್ದರು. ನಾನೇ ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್‌ಗೆ ಬಂದು ಪಿಕ್‌ ಮಾಡುತ್ತೇನೆ ಅಂದಿದ್ದ. ದಂಪತಿ ಖುಷಿಯಾಗಿದ್ದರು. ಎಂಥಾ ಅಳಿಯನನ್ನು ಪಡೆಯಲಿದ್ದೇವೆ ಅಂತ.

ಹಾಗೆ ಅವರು ಬೆಂಗಳೂರಿಗೆ ಹತ್ತಿರವಾಗುತ್ತಿದ್ದಂತೆಯೇ ಪವನ್‌ ಅಗರ್ವಾಲ್‌ ಕರೆ ಬಂತು. ನಂಗೆ ಸ್ವಲ್ಪ ಬೇರೆ ಕೆಲಸ ಇರುವುದರಿಂದ ನಂಗೆ ಬರ್ಲಿಕೆ ಆಗ್ತಾ ಇಲ್ಲ. ನಿಮ್ಮನ್ನು ಕರೆದುಕೊಂಡು ಬರುವುದಕ್ಕಾಗಿ ನನ್ನ ಚಿಕ್ಕಪ್ಪ ಬರ್ತಾ ಇದ್ದಾರೆ ಅಂದ. ಈ ದಂಪತಿಗೆ ಇನ್ನಷ್ಟು ಖುಷಿ. ಅಪ್ಪ, ಚಿಕ್ಕಪ್ಪ ಎಲ್ಲರೂ ಜತೆಯಾಗಿ, ಚೆನ್ನಾಗಿರುವ ಕುಟುಂಬಕ್ಕೆ ಮಗಳು ಹೋದರೆ ಎಷ್ಟು ಚೆನ್ನಾಗಿರುತ್ತದಲ್ಲಾ ಎಂದು!

ಅದಾಗಿ ಸ್ವಲ್ಪ ಹೊತ್ತಲ್ಲಿ ಪವನ್‌ನ ಚಿಕ್ಕಪ್ಪ ರೈಲ್ವೆ ನಿಲ್ದಾಣಕ್ಕೆ ಬಂದೇ ಬಿಟ್ಟರು. ಆಗ ಪವನ್‌ ಮತ್ತೆ ಫೋನ್‌ ಮಾಡಿದ. ʻʻಅಯ್ಯೋ ನಾನು ಚಿಕ್ಕಪ್ಪನಿಗೆ ಟಿಕೆಟ್‌ ರಿಸರ್ವೇಷನ್‌ ಮಾಡಿಕೊಂಡು ಬನ್ನಿ ಅಂತ ಹೇಳಿದ್ದೆ. ಅವರು ನೋಡಿದರೆ ಪರ್ಸ್‌ ಇಲ್ಲವೇ ಬಿಟ್ಟು ಹೋಗಿದ್ದಾರೆ. ದಯವಿಟ್ಟು ಅವರಿಗೆ 10000 ರೂ. ಕೊಡಬಹುದಾ? ಅವರು ಟಿಕೆಟ್‌ ರಿಸರ್ವೇಷನ್‌ ಮಾಡಿಸಿಕೊಂಡು ನಿಮ್ಮನ್ನು ಕರೆದುಕೊಂಡು ಮನೆಗೆ ಬರುತ್ತಾರೆʼʼ ಅಂದ. ದಂಪತಿ ತುಂಬ ಖುಷಿಯಿಂದ 10000 ರೂ. ಹಣವನ್ನು ಪವನ್‌ನ ಚಿಕ್ಕಪ್ಪನಿಗೆ ಕೊಟ್ಟರು.

ಚಿಕ್ಕಪ್ಪ ಹಣವನ್ನು ಪಡೆದು ನೀವು ಇಲ್ಲೇ ಇರಿ, ರಿಸರ್ವೇಷನ್‌ ಮಾಡಿಸಿಕೊಂಡು ಬರ್ತೇನೆ ಎಂದು ರಿಸರ್ವೇಷನ್‌ ಕೌಂಟರ್‌ ಕಡೆಗೆ ಹೋದರು. ಆದರೆ, ಎಷ್ಟು ಹೊತ್ತಾದರೂ ಬರಲಿಲ್ಲ. ಹುಡುಕಿದರೂ ಸಿಗಲಿಲ್ಲ. ಕೊನೆಗೆ ಚಿಕ್ಕಪ್ಪ ಮಿಸ್‌ ಆಗಿದ್ದಾರೆ ಎಂದು ಪವನ್‌ ಅಗರ್ವಾಲ್‌ಗೆ ಹೇಳೋಣ ಎಂದು ಕರೆ ಮಾಡಿದರೆ ಆ ಮೊಬೈಲ್‌ ಕೂಡಾ ಸ್ವಿಚ್‌ ಆಫ್‌.

ಇಲ್ಲಿಗೆ ಒಂದು ಕಥೆ ಮುಗಿಯಿತು!

ಕೊಯಮತ್ತೂರಿನ ದಂಪತಿ ಬಳಿಕ ತಮ್ಮ ಸಂಬಂಧಿಕರೊಬ್ಬರ ಮನೆಗೆ ಹೋದರು. ಅಲ್ಲಿ ತಾವು ಬಂದಿದ್ದು, ಪವನ್‌ ಅಗರ್ವಾಲ್‌, ರೈಲ್ವೇ ಸ್ಟೇಷನ್‌, ಚಿಕ್ಕಪ್ಪ, 10000 ರೂ, ರಿಸರ್ವೇಷನ್‌, ನಾಪತ್ತೆ ಎಲ್ಲ ಕಥೆ ಹೇಳಿದರು. ಆಗ ಅವರಿಗೆ ತಾವು ವಂಚನೆಗೆ ಒಳಗಾಗಿದ್ದು ಸ್ಪಷ್ಟವಾಗಿದೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿದರು.

Fake Matrimony : ಇಲ್ಲಿಂದ ಶುರುವಾಗೋದೇ 259 ಹುಡುಗಿಯರ ಕಥೆ!

ದಂಪತಿ ಕೈಯಿಂದ ದೂರು ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಇಂಥದ್ದು ದಿನವೂ ತುಂಬ ನಡೀತವೆ ಎಂಬ ಹಾಗೆ ಅಂದುಕೊಂಡರು. ಆದರೆ, ಕಾಂಟ್ಯಾಕ್ಟ್‌ ನಂಬರ್‌ ಒಂದು ಇದ್ದಿದ್ದರಿಂದ ಅದರ ಟವರ್‌ ಲೊಕೇಶನ್‌, ರೈಲು ನಿಲ್ದಾಣದಲ್ಲಿ ಕೊಯಮತ್ತೂರು ದಂಪತಿ ಮತ್ತು ʻಚಿಕ್ಕಪ್ಪʼ ಭೇಟಿಯಾದ ಜಾಗದ ಫೂಟೇಜ್‌ಗಳು ಸೇರಿದಂತೆ ಹಲವು ಸುಳಿವುಗಳನ್ನು ಹಿಡಿದುಕೊಂಡು ಬೆನ್ನು ಹತ್ತಿದರು.

ಅವನನ್ನು ನೋಡಿ ಪೊಲೀಸರಿಗೇ ಶಾಕ್‌, ಯಾಕೆಂದರೆ ಅವನು ಯುವಕನೇ ಅಲ್ಲ!

ಎಲ್ಲಾ ತಾಂತ್ರಿಕ ಅಂಶಗಳ ಬೆನ್ನುಹಿಡಿದು ಅವನನ್ನು ಖೆಡ್ಡಾಕ್ಕೆ ಹಾಕಿಯೇ ಬಿಟ್ಟ ಪೊಲೀಸರಿಗೆ ದೊಡ್ಡ ಅಚ್ಚರಿಯೊಂದು ಕಾದಿತ್ತು. ಈ ವಂಚಕ ಒಬ್ಬ ಯುವಕನಾಗಿರಲಿಲ್ಲ. ಅವನೊಬ್ಬ ಮಧ್ಯ ವಯಸ್ಕನಾಗಿದ್ದ.

ಹಾಗೆ ಬಂಧಿತನಾದವನ ಹೆಸರು ಪವನ್‌ ಅಗರ್ವಾಲ್‌ ಕೂಡಾ ಆಗಿರಲಿಲ್ಲ. ಅವನು ನರೇಶ್‌ ಪುರಿ ಗೋಸ್ವಾಮಿ. ಅವನು ಯಾಕೆ ಹೀಗೆ ಮಾಡಿದ? ಬೇರೆ ಯಾರಿಗಾದರೂ ವಂಚನೆ ಮಾಡಿದ್ದಾನಾ? ಅವನ ಉದ್ದೇಶವೇನು ಎಂದು ಕೆದಕುತ್ತಾ ಹೋದಾಗ ಪೊಲೀಸರು ಮತ್ತೊಮ್ಮೆ ಬೆಚ್ಚಿ ಬಿದ್ದರು. ಯಾಕೆಂದರೆ ಅವನು ಮೋಸ ಮಾಡಿದ್ದು‌ ಒಬ್ಬಿಬ್ಬರಿಗಲ್ಲ. ಅಂದಾಜು 259 ಮಂದಿಗೆ!

ಯಸ್‌ ಅವನು ವಂಚಿಸಿದ್ದು ದೇಶಾದ್ಯಂತ 259 ಯುವತಿಯರಿಗೆ!

ಆರೋಪಿ ನರೇಶ್ ವಂಚನೆ ಮಾಡಿದ್ದು ಇದೊಂದೇ ಕುಟುಂಬಕ್ಕಲ್ಲ ಅಲ್ಲ.. ಬರೋಬ್ಬರಿ 259 ಕುಟುಂಬಕ್ಕೆ. ರಾಜಸ್ಥಾನ 56 ಜನ , ಉತ್ತರ ಪ್ರದೇಶ 32 , ದೆಹಲಿ 32 ,ಕರ್ನಾಟಕ 17 ಮಧ್ಯಪ್ರದೇಶ 16 ,ಮಹಾರಾಷ್ಟ್ರ13, ಗುಜರಾತ್ 11, ತಮಿಳುನಾಡು 6, ಬಿಹಾರ 05, ಆಂಧ್ರ ಪ್ರದೇಶದ 02 ಜನ ಯುವತಿ /ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ : Matrimony Sites : ಮ್ಯಾಟ್ರಿಮೊನಿ ವರನ ಬಗ್ಗೆ ಇರಲಿ ಎಚ್ಚರ; ಆತನಿಗೆ ಡಜನ್‌ ಮದುವೆ ಆಗಿರಬಹುದು!

ಅದ್ಸರಿ ಅವನು ಇಷ್ಟು ಜನರನ್ನು ಬುಟ್ಟಿಗೆ ಹಾಕಿಕೊಂಡಿದ್ದು ಹೇಗೆ?

ಅವನು ಟಾರ್ಗೆಟ್‌ ಮಾಡುತ್ತಿದ್ದುದು ಪ್ರಮುಖವಾಗಿ ವಯಸ್ಸಾದರೂ ಮದುವೆಯಾಗದ ಹೆಣ್ಮಕ್ಕಳನ್ನು ಮತ್ತು ಮದುವೆಯಾಗಿ ವಿಚ್ಚೇದನ ಪಡೆದು ಇಲ್ಲವೇ ದೂರವಾಗಿ ಎರಡನೇ ಸಂಬಂಧಕ್ಕಾಗಿ ಕಾಯುತ್ತಿದ್ದ ಹುಡುಗಿಯರನ್ನು.

ಅವನು ಒಂದು ವಾಟ್ಸ್‌ ಆಪ್‌ ‌ಗ್ರೂಪ್‌ ಮಾಡಿದ್ದ. ಇದರಲ್ಲಿ ಹೆಚ್ಚು ಇರುವುದೇ ವಿವಾಹಾಕಾಂಕ್ಷಿ ಮಹಿಳೆಯರು. ಅದರ ಹೆಸರು ಅಗರ್ ಸೇನ್ ವೈವಾಹಿಕ್ ಮಂಚ್. ಯಾರ್ಯಾರು ವಿವಾಹಾಪೇಕ್ಷಿಗಳು ಇರುತ್ತಾರೋ ಅವರನ್ನು ಗುರುತಿಸಿ ತನ್ನ ಗ್ರೂಪ್‌ಗೆ ಸೇರಿಸುತ್ತಿದ್ದ. ಅಲ್ಲಿ ಅವರಿಗೆ ಗ್ರೂಪ್‌ನಲ್ಲಿ ಬೇರೆ ವಿವಾಹಾಪೇಕ್ಷಿಗಳ ಮಾಹಿತಿ ಕೊಡುತ್ತಿದ್ದ.

ಅವನು ಪತ್ರಿಕೆಗಳಲ್ಲಿ ಬರುವ ವರ ಬೇಕಾಗಿದ್ದಾನೆ ಮತ್ತು ವಧು ಬೇಕಾಗಿದ್ದಾಳೆ ಜಾಹೀರಾತು ನೋಡಿಕೊಂಡು ಅವರನ್ನು ಸಂಪರ್ಕ ಮಾಡುತ್ತಿದ್ದ. ಅವನ್ನು ಗ್ರೂಪ್‌ಗೆ ಸೇರಿಸುತ್ತಿದ್ದ. ಗ್ರೂಪ್‌ನಲ್ಲಿ ತನ್ನ ನೈಜ ಫೋಟೊ ಬಳಸುತ್ತಿರಲಿಲ್ಲ. ಬದಲಾಗಿ ಯುವಕನೆಂದು ಬಿಂಬಿಸಲು ಬೇರೆ ಫೋಟೊ ಹಾಕುತ್ತಿದ್ದ. ಹೀಗೆ ನೂರಾರು ಯುವತಿಯನ್ನು ಗುಡ್ಡೆ ಹಾಕಿಕೊಂಡು ಒಬ್ಬೊಬ್ಬರಿಗೇ ವಂಚನೆ ಮಾಡುತ್ತಿದ್ದ.

Fake Matrimony1

ಗ್ರೂಪ್‌ನಲ್ಲಿರುವ ಯುವತಿಯರಿಗೆ ಬೇರೊಂದು ನಂಬರ್‌ನಿಂದ ಫೋನ್‌ ಮಾಡುತ್ತಿದ್ದ. ತಾನು ಅಗರ್ ಸೇನ್ ವೈವಾಹಿಕ್ ಮಂಚ್‌ನಿಂದ ಮಾಹಿತಿ ಪಡೆದೆ ಎಂದು ಹೇಳಿ ಅವರ ಜತೆ ವಿವಾಹ ಮಾತುಕತೆ ನಡೆಸುತ್ತಿದ್ದ. ಅವರ ಮುಂದೆ ತಾನೊಬ್ಬ ಕಸ್ಟಮ್‌ ಆಫೀಸರ್‌, ಐಪಿಎಸ್‌ ಅಧಿಕಾರಿ ಎಂದೆಲ್ಲ ಹೇಳಿ ಅವರನ್ನು ಇಂಪ್ರೆಸ್‌ ಮಾಡುತ್ತಿದ್ದ. ಬಳಿಕ ಅವರ ಜತೆ ರೊಮ್ಯಾಂಟಿಕ್‌ ಆಗಿ ಮಾತನಾಡುತ್ತಿದ್ದ. ಅದೂ ರಾತ್ರಿ ಹೊತ್ತು. ಒಂದು ಹಂತ ದಾಟಿ ಯುವತಿಯರು ತನ್ನ ಮೇಲೆ ನಂಬಿಕೆ ಇಟ್ಟರು ಎಂದುಕೊಳ್ಳುವಾಗಲೇ ಅವರ ಬಳಿ ನಾಜೂಕಾಗಿ ಹಣ ಪಡೆಯುತ್ತಿದ್ದ. ಹಾಗೆ ಅವನಿಗೆ ಒಂದು ನಿರ್ದಿಷ್ಟ ಮೊತ್ತ ಸಿಕ್ಕಿದ ಕೂಡಲೇ ಆ ನಂಬರ್‌ ಸ್ವಿಚ್‌ ಆಫ್‌ ಆಗುತ್ತಿತ್ತು.

ಬಳಿಕ ಮೊಬೈಲ್‌ಗೆ ಇನ್ನೊಂದು ನಂಬರ್‌ನ ಸಿಮ್‌ ಹಾಕುತ್ತಿದ್ದ. ಇನ್ನೊಬ್ಬಳ ಬೇಟೆಗೆ ಇಳಿಯುತ್ತಿದ್ದ. ಹೀಗೆ ನೂರಾರು ಮಂದಿಯನ್ನು ಆತ ವಂಚಿಸಿದ ಮಾಹಿತಿ ಬಂದಿದೆ. ಆದರೆ, ಇನ್ನೂ ಅದೆಷ್ಟೋ ಮಂದಿ ವಂಚನೆಯ ಬಗ್ಗೆ ಹೇಳಿಕೊಳ್ಳದೆ ಇರುವ ಸಾಧ್ಯತೆ ಇದೆ.

ಆತ ಮಹಿಳೆಯರ ಜತೆಗೆ ರೊಮ್ಯಾಂಟಿಕ್‌ ಆಗಿ ಮಾತನಾಡಿದ್ದಾನೆ. ಆದರೆ, ಯಾರನ್ನೂ ದುರುಪಯೋಗ ಮಾಡಿಕೊಂಡ ಬಗ್ಗೆ ದೂರುಗಳಿಲ್ಲ. ಅಥವಾ ದೊಡ್ಡ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲ್ಯಾಕ್‌ ಮೇಲ್‌ ಮಾಡಿದ್ದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಹಲವರನ್ನು ವಂಚಿಸಿದ್ದು ನಿಜ. ಈತನಿಂದ ವಂಚನೆಗೊಳಗಾದ ಮಹಿಳೆಯರು ದೂರು ನೀಡಿದರೆ ಈತನಿಗೆ ಇನ್ನೂ ಹೆಚ್ಚು ಶಿಕ್ಷೆಯಾಗಬಹುದು ಎನ್ನುತ್ತಾರೆ ಪೊಲೀಸರು.

Continue Reading

ಕರ್ನಾಟಕ

Road Accident: ರಸ್ತೆ ಬದಿ ನಿಂತಿದ್ದ ಲಾರಿಗೆ ಆಟೋ ಡಿಕ್ಕಿಯಾಗಿ ಒಬ್ಬ ಸಾವು, ಇಬ್ಬರಿಗೆ ಗಂಭೀರ ಗಾಯ

Road Accident: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ಅಪಘಾತ ನಡೆದಿದೆ. ಆಟೋದಲ್ಲಿದ್ದ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ.

VISTARANEWS.COM


on

Road Accident
Koo

ಹಾಸನ: ರಸ್ತೆ ಬದಿ ನಿಂತಿದ್ದ ಲಾರಿಗೆ ಆಟೋ ಡಿಕ್ಕಿಯಾಗಿ ಸ್ಥಳದಲ್ಲೇ ಒಬ್ಬರು ಮೃತಪಟ್ಟರು ಸಾವು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Road Accident) ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ.

ಅಭಿಷೇಕ್ (25) ಮೃತ ಯುವಕ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಡಿಕ್ಕಿ ರಭಸಕ್ಕೆ ಆಟೋ ನುಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Attack on Police : ರೈಲಿನಲ್ಲಿ ಗಾಂಜಾ ಸೇದುತ್ತಿದ್ದ ಯುವಕರು; ಆಕ್ಷೇಪಿಸಿದ ಪೊಲೀಸ್‌ಗೆ ಇರಿತ!

ಕಿಕ್ಕಿರಿದು ತುಂಬಿಸಿದ್ದ ಟಾಟಾ ಏಸ್‌ಗೆ ಟ್ರಕ್‌ ಡಿಕ್ಕಿ, 4 ಸಾವು

bidar road accident

ಬೀದರ್: ಭಾಲ್ಕಿ ಬಳಿ ನಡೆದ ಭೀಕರ ಅಪಘಾತವೊಂದರಲ್ಲಿ (Road Accident) ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಐದು ಜನರಿಗೆ ಗಾಯಗಳಾಗಿವೆ. ಬೆಳಗ್ಗೆ 4:30ರ ಸುಮಾರಿಗೆ ಟ್ರಕ್ ಹಾಗೂ ಟಾಟಾ ಎಸಿ (truck- Tata Ace hit) ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಮೃತರು ಮಹಾರಾಷ್ಟ್ರದ ಉಗ್ಗಿರ್ ಮೂಲದವರು ಎಂದು ಗೊತ್ತಾಗಿದೆ. ಐದು- ಆರು ಜನ ಕೆಪಾಸಿಟಿಯ ಟಾಟಾ ಏಸ್‌ ವಾಹನದಲ್ಲಿ 14 ಜನರನ್ನು ಕೂರಿಸಿಕೊಂಡಿದ್ದ ಏಸ್‌ ಚಾಲಕ ಉಗ್ಗಿರ್‌ನಿಂದ ಹೈದ್ರಾಬಾದ್ ಹೋಗುತ್ತಿದ್ದ. ಇದಕ್ಕೆ ಟ್ರಕ್‌ ಮುಖಾಮುಖಿ ಡಿಕ್ಕಿಯಾಗಿದೆ.

ಏಸ್‌ನಲ್ಲಿ 6 ಜನ ಮಹಿಳೆಯರು, 5 ಜನ ಪುರುಷರು, 3 ಮಕ್ಕಳು ಪ್ರಯಾಣಿಸುತ್ತಿದ್ದರು. ದಸ್ತಗಿರ್ ದಾವಲಸಾಬ್ (36), ರಸೀದಾ ಸೈಕ್ (41), ಟಾಟಾ ಏಸ್ ಚಾಲಕ ವಲಿ (31)‌, ಅಮಾಮ್ ಸೇಕ್ (51) ಮೃತರು. ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪರೀಕ್ಷೆ ಮುಗಿಸಿ ಖುಷಿಯಿಂದ ಈಜಲು ಹೋದ ನಾಲ್ಕು ಮಕ್ಕಳ ಶವ ಪತ್ತೆ

ಪರೀಕ್ಷೆ ಮುಗಿಸಿ ಖುಷಿಯಿಂದ ಈಜಲು ಹೋದ ನಾಲ್ಕು ಮಕ್ಕಳ ಶವ ಪತ್ತೆ

ಮಂಗಳೂರು: ಪರೀಕ್ಷೆ ಮುಗಿಸಿ ಖುಷಿಯಿಂದ ಈಜಲೆಂದು ನದಿಗೆ ಹೋಗಿ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳ ಶವಗಳು ಪತ್ತೆಯಾಗಿವೆ. ಈ ಮಕ್ಕಳು ಮಂಗಳೂರಿನ ಸುರತ್ಕಲ್‌ನ ವಿದ್ಯಾದಾಯಿನಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಮಕ್ಕಳ ಪೋಷಕರ ರೋದನ ಮುಗಿಲು ಮುಟ್ಟಿದೆ.

ನದಿಯಲ್ಲಿ ಈಜಾಡಲು ತೆರಳಿ ದಾರುಣವಾಗಿ ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ. ನಿನ್ನೆ ಶಾಲೆಯಲ್ಲಿ ಪರೀಕ್ಷೆ ಬರೆದು ಮುಗಿಸಿದ್ದ ವಿದ್ಯಾರ್ಥಿಗಳು ಮನೆಗೆ ತೆರಳದೇ ನಾಪತ್ತೆಯಾಗಿದ್ದರು. ಮಕ್ಕಳ ಪೋಷಕರು ಮತ್ತು ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು.

ಹಳೆಯಂಗಡಿ ರೈಲ್ವೇ ಸೇತುವೆ ಕೆಳಭಾಗದಲ್ಲಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ಗಳು ಹಾಗೂ ಸಮವಸ್ತ್ರ ಪತ್ತೆಯಾಗಿದ್ದವು. ನದಿಯಲ್ಲಿ ಹುಡುಕಾಟ ನಡೆಸಿದಾಗ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿವೆ. ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಅವರ ಪುತ್ರ ರಾಘವೇಂದ್ರ (15), ಸುರತ್ಕಲ್ ಗೊಡ್ಡೆಕೊಪ್ಲ ನಿವಾಸಿ ವಿಶ್ವನಾಥ ಅವರ ಮಗ ನಿರೂಪ(15), ಚಿತ್ರಾಪುರ ನಿವಾಸಿ ದೇವದಾಸ ಅವರ ಪುತ್ರ ಅನ್ವಿತ್ (15) ಸಾವಿಗೀಡಾದ ಮಕ್ಕಳು.

ಇದನ್ನೂ ಓದಿ | Sedition Case : ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ನಿಜವೇ?; ನಾಸಿರ್‌ ಹುಸೇನ್‌ ಹೇಳೋದೇನು?

ಮಕ್ಕಳು ನೇರವಾಗಿ ಶಾಲೆಯಿಂದ ಹಳೆಯಂಗಡಿ ನದಿಗೆ ಈಜಾಡಲು ಬಂದಿರುವ ಶಂಕೆ ಇದೆ. ಒಬ್ಬ ಮುಳುಗತೊಡಗಿದಾಗ ರಕ್ಷಿಸಲು ಹೋದ ಉಳಿದವರು ಮುಳುಗಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement
Karthik Mahesh And Namratha Gowda in wedding dress For Ad Shoot
ಸಿನಿಮಾ1 min ago

Karthik-Namratha: ಹಸೆಮಣೆ ಮೇಲೆ ಕಾರ್ತಿಕ್‌-ನಮ್ರತಾ: ಸಂಗೀತಾಗೆ `ಕರಿಮಣಿ ಮಾಲೀಕ’ ಯಾರು?

WPL 2024
ಕ್ರಿಕೆಟ್1 min ago

WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

Shahjahan-Sheikh
ದೇಶ6 mins ago

Sandeshkhali Violence: ಲೈಂಗಿಕ ದೌರ್ಜನ್ಯ ಆರೋಪಿ, ಟಿಎಂಸಿ ನಾಯಕ ಷಹಜಹಾನ್‌ ಶೇಖ್‌ ಬಂಧನ

Doctor listens to the human lungs
ಆರೋಗ್ಯ32 mins ago

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

kannada sign boards
ಪ್ರಮುಖ ಸುದ್ದಿ54 mins ago

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

graveyard
ಪ್ರಮುಖ ಸುದ್ದಿ1 hour ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ1 hour ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ1 hour ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ2 hours ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Karnataka Weather Rain for first week of March
ಕರ್ನಾಟಕ2 hours ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ4 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌