ವಿಸ್ತಾರ ಅನಾವರಣ
Vistara News Launch | ಸುದ್ದಿ ಮಾಧ್ಯಮಗಳು ಜನಪರವಾಗಿರಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಶಯ
ನಿಖರ ಹಾಗೂ ಜನಪರ ಘೋಷವಾಕ್ಯದೊಂದಿಗೆ ಆರಂಭವಾಗಿರುವ ವಿಸ್ತಾರ ನ್ಯೂಸ್ ಚಾನೆಲ್‌ನ ವಿಸ್ತಾರ ಕನ್ನಡ ಸಂಭ್ರಮಕ್ಕೆ ತೀರ್ಥಹಳ್ಳಿಯಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಚಾಲನೆ ನೀಡಿದರು.
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯ ಬಂಟರ ಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಸಂಭ್ರಮದಿಂದ ಶನಿವಾರ ನೆರವೇರಿತು. ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದ ವಿಸ್ತಾರ ನ್ಯೂಸ್ (Vistara News Launch) ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸಿದರು.
ಡಿಜಿಟಲ್ ಮಾಧ್ಯಮದ ಬೆಳವಣಿಗೆ ಹೆಚ್ಚಾದಂತೆ ದೃಶ್ಯ ಮಾಧ್ಯಮಗಳಲ್ಲಿ ಸಾಮಾಜಿಕ ಕಾಳಜಿಯ ವರದಿಗಳು ಕಡಿಮೆಯಾಗುತ್ತಿವೆ ಎಂಬ ಕಳವಳ ಸಾರ್ವಜನಿಕರಲ್ಲಿ ಮೂಡುತ್ತಿದೆ. ಸುದ್ದಿ ಮಾಧ್ಯಮಗಳು ಜನಪರವಾಗಿರದೆ ಮಾಲೀಕರ ಪರವಾಗಿ ಕೆಲಸ ಮಾಡುತ್ತವೆ ಎಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಇದನ್ನೂ ಓದಿ | Vistara News Launch | ಯಲ್ಲಾಪುರದಲ್ಲಿ ಅದ್ಧೂರಿ ವಿಸ್ತಾರ ಕನ್ನಡ ಸಂಭ್ರಮ
ಕನ್ನಡ ಪತ್ರಿಕೋದ್ಯಮಕ್ಕೆ ಭವ್ಯ ಇತಿಹಾಸವಿದೆ. ಅನೇಕ ಬಾರಿ ಮಾಧ್ಯಮಗಳು ಸರ್ಕಾರವನ್ನೇ ಬದಲಾಯಿಸುವಷ್ಟು ಪ್ರಭಾವವಾಗಿ ಕೆಲಸ ಮಾಡಿವೆ. ಈಗಲೂ ಕೂಡ ಜನತೆ ಸುದ್ದಿ ಮಾಧ್ಯಮಗಳನ್ನು ನಂಬುತ್ತಾರೆ. ವಿಸ್ತಾರ ಕನ್ನಡ ಚಾನೆಲ್ ತನ್ನ ಧ್ಯೇಯವಾಕ್ಯದಂತೆ ನಿಖರ ಹಾಗೂ ಜನಪರವಾಗಿ ಮೂಡಿಬರಲಿ ಎಂದವರು ಹಾರೈಸಿದರು.
ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಮಾಧ್ಯಮಗಳು ವಿಶ್ವಾಸಾರ್ಹ ವಿರೋಧಪಕ್ಷದ ರೀತಿ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡುವ ಬದಲು ತೀರಾ ಸಾಧಾರಣ ವಿಚಾರಗಳನ್ನು ವೈಭವೀಕರಿಸಲಾಗುತ್ತಿದೆ. ಇದು ಸಲ್ಲದು. ಯಾವುದೇ ಆಡಳಿತ ಪಕ್ಷವಿದ್ದರೂ ಅದರ ಲೋಪದೋಷಗಳನ್ನು ಎತ್ತಿ ಹಿಡಿಯಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಮಾತನಾಡಿ, ಸ್ಪರ್ಧೆ ಹೆಚ್ಚಾದಂತೆ ಪತ್ರಕರ್ತರ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ. ಟಿವಿ ಚಾನೆಲ್‌ಗಳಲ್ಲಿ ಜನತೆಗೆ ಅಗತ್ಯವೇ ಇರದ ವಿಚಾರಗಳ ಕುರಿತ ಚರ್ಚೆ ಹೆಚ್ಚುತ್ತಿದೆ. ಇಷ್ಟವಿಲ್ಲದಿದ್ದರೂ ಪ್ರತಿಸ್ಪರ್ಧಿ ಚಾನೆಲ್‌ನ ಸ್ಪರ್ಧೆಯ ಭೀತಿಯಿಂದಾಗಿ ಅನಿವಾರ್ಯವಾಗಿ ರಾಜಿಯಾಗಬೇಕಾದ ಪ್ರವೃತ್ತಿ ಹೆಚ್ಚುತ್ತಿದೆ. ಇದು ಜನಪರ ಪತ್ರಿಕೋದ್ಯಮಕ್ಕೆ ಒಳ್ಳೆಯ ಲಕ್ಷಣವಲ್ಲ. ವಿಸ್ತಾರ ಚಾನೆಲ್ ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಜನಪರವಾಗಿ ಬೆಳೆಯಲಿ ಎಂದು ಹಾರೈಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾನ್ ರಾಮಣ್ಣ ಮಾತನಾಡಿ, ಪತ್ರಿಕೋದ್ಯಮದಲ್ಲಿ ಹಿಂದೆಂದೂ ಕಂಡು ಕೇಳರಿಯದ ಸ್ಫರ್ಧೆ ಆರಂಭವಾಗಿದೆ. ಯಾವುದೇ ಸುದ್ದಿ ಸಂಸ್ಥೆ ಜಿಲ್ಲೆ, ತಾಲೂಕು ಮಟ್ಟದ ವರದಿಗಾರರಿಗೆ ಮುಕ್ತ ಸ್ವಾತಂತ್ರ್ಯ ನೀಡದಿದ್ದಲ್ಲಿ ಜನಪರ ಕೆಲಸ ನಿರ್ವಹಿಸುವುದು ಅಸಾಧ್ಯವಾಗುತ್ತದೆ. ಆಗ ಸಾರ್ವಜನಿಕ ವಿಶ್ವಾಸಾರ್ಹತೆಯೂ ಕಡಿಮೆಯಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥ ಶೆಟ್ಟಿ ಮಾತನಾಡಿ, ದೃಶ್ಯ ಮಾಧ್ಯಮ ಹಿಂದೆಂದಿಗಿಂತಲೂ ಪ್ರಭಾವಶಾಲಿಯಾಗಿದೆ. ಆದರೆ ಬ್ರೇಕಿಂಗ್ ಸುದ್ದಿಗಳನ್ನು ಕೊಡುವ ಗಡಿಬಿಡಿಯಲ್ಲಿ ವಸ್ತುನಿಷ್ಠತೆ ಕಡಿಮೆಯಾಗುತ್ತಿದೆ. ಯಾವುದೇ ಸುದ್ದಿ ಸಂಸ್ಥೆ ದೀರ್ಘಕಾಲ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ನಿಖರವಾದ ವಿಶ್ಲೇಷಣಾತ್ಮಕ ಸುದ್ದಿ ನೀಡುವುದು ಮುಖ್ಯವಾಗುತ್ತದೆ. ಯಾವ ಸಿದ್ಧಾಂತದ ಪರವಾಗಿಯೂ ಇರದೇ ಜನಪರವಾಗಿದ್ದಾಗ ಸುದ್ದಿ ಸಂಸ್ಥೆ ಹಾಗೂ ಪತ್ರಕರ್ತರ ಮೌಲ್ಯ ಹೆಚ್ಚುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ವಿಸ್ತಾರ ನ್ಯೂಸ್ ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ವಿವೇಕ್ ಮಾಹಾಲೆ ಹಾಜರಿದ್ದರು.
ಶೇಷಾದ್ರಿ ಬುಕ್ಲಾಪುರ ನಾಂದಿ ಗೀತೆ ಹಾಡಿದರು. ಚಾನೆಲ್‌ನ ತಾಲೂಕು ವರದಿಗಾರ ಮೋಹನ್ ಮುನ್ನೂರು ಸ್ವಾಗತಿಸಿದರು. ನಿಶ್ಚಲ್ ಜಾದೂಗಾರ್ ವಂದಿಸಿದರು. ಗಾಯತ್ರಿ ಶೇಷಗಿರಿ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ | Vistara News Launch | ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು: ಸಂಸದ ಬಿ.ವೈ. ರಾಘವೇಂದ್ರ
ಕರ್ನಾಟಕ
Pratap Simha: ವಿಸ್ತಾರ ನ್ಯೂಸ್ ಕಚೇರಿಗೆ ಸಂಸದ ಪ್ರತಾಪ್ ಸಿಂಹ ಭೇಟಿ
Pratap Simha: ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಪ್ರಮುಖರು ಮತ್ತು ಸಿಬ್ಬಂದಿ ಜತೆ ಆತ್ಮೀಯ ಮಾತುಕತೆ ನಡೆಸಿದರು.
ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ್ದರು.
ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಪ್ರತಾಪ್ ಸಿಂಹ ಅವರಿಗೆ (Pratap Simha) ಹೂಗುಚ್ಛ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು, ಡಿಜಿಟಲ್ ಮಾಧ್ಯಮದ ವಿವಿಧ ಸಾಧ್ಯತೆಗಳ ಕುರಿತು ವಿಸ್ತಾರ ನ್ಯೂಸ್ ಸಿಬ್ಬಂದಿ ಜತೆ ಅನಿಸಿಕೆ ಹಂಚಿಕೊಂಡರು. ವಿಸ್ತಾರ ನ್ಯೂಸ್ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಚಲಿತ ರಾಜಕೀಯ ಆಗುಹೋಗುಗಳ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದರು.
ಇದನ್ನೂ ಓದಿ | Tejasvi Surya: ವಿಸ್ತಾರ ನ್ಯೂಸ್ ಕಚೇರಿಗೆ ಸಂಸದ ತೇಜಸ್ವಿ ಸೂರ್ಯ ಭೇಟಿ
ವಿಸ್ತಾರ ನ್ಯೂಸ್ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ.ಎಸ್, ಸಿಒಒ ಪರಶುರಾಮ್. ಡಿ, ಇನ್ ಪುಟ್-ಔಟ್ ಪುಟ್ ಮುಖ್ಯಸ್ಥ ಮಂಜುನಾಥ್. ಪಿ, ವಿಸ್ತಾರ ನ್ಯೂಸ್ ಡಿಜಿಟಲ್ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ, ರಾಜಕೀಯ ವಿಭಾಗದ ಮುಖ್ಯಸ್ಥ ಮಾರುತಿ ಪಾವಗಡ ಮತ್ತಿತರರು ಜತೆಗಿದ್ದರು.
ಕರ್ನಾಟಕ
Ramesh Aravind: ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿದ ನಟ ರಮೇಶ್ ಅರವಿಂದ್
Ramesh Aravind: ನಟ ರಮೇಶ್ ಅರವಿಂದ್ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು: ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು (Ramesh Aravind) ಶುಕ್ರವಾರ ವಿಸ್ತಾರ ನ್ಯೂಸ್ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಪ್ರಮುಖರ ಜತೆ ಸಂವಾದ ನಡೆಸಿದರು. ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ರಮೇಶ್ ಅರವಿಂದ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರು, ವಿಸ್ತಾರ ಮೀಡಿಯಾ ಸಂಸ್ಥೆಯ ಟಿವಿ ಚಾನೆಲ್, ನ್ಯೂಸ್ ವೆಬ್‌ಸೈಟ್ ಮತ್ತು ಯುಟ್ಯೂಬ್ ಚಾನೆಲ್‌ಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | Tejasvi Surya: ವಿಸ್ತಾರ ನ್ಯೂಸ್ ಕಚೇರಿಗೆ ಸಂಸದ ತೇಜಸ್ವಿ ಸೂರ್ಯ ಭೇಟಿ
ವಿಸ್ತಾರ ನ್ಯೂಸ್ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ.ಎಸ್, ಸಿಒಒ ಪರಶುರಾಮ್ ಡಿ, ವಿ.ಪಿ(ಮಾರ್ಕೆಟಿಂಗ್) ನವನೀತ್ ಸಿ.ಎಂ, ಇನ್ ಪುಟ್-ಔಟ್ ಪುಟ್ ಮುಖ್ಯಸ್ಥ ಮಂಜುನಾಥ್. ಪಿ, ವಿಸ್ತಾರ ನ್ಯೂಸ್ ಡಿಜಿಟಲ್ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ., ಸಿನಿಮಾ ವಿಭಾಗದ ಮುಖ್ಯಸ್ಥ ಅಶೋಕ್ ದಾವಣಗೆರೆ ಮತ್ತಿತರರು ಜತೆಗಿದ್ದರು.
ಕರ್ನಾಟಕ
Tejasvi Surya: ವಿಸ್ತಾರ ನ್ಯೂಸ್ ಕಚೇರಿಗೆ ಸಂಸದ ತೇಜಸ್ವಿ ಸೂರ್ಯ ಭೇಟಿ
Tejasvi Surya: ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಬೆಂಗಳೂರಿನ ವಿಸ್ತಾರ ನ್ಯೂಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಶುಕ್ರವಾರ ವಿಸ್ತಾರ ನ್ಯೂಸ್ ಕಚೇರಿಗೆ ಸೌಹಾರ್ದಯುತ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಹೂಗುಚ್ಛ ನೀಡಿ ತೇಜಸ್ವಿ ಸೂರ್ಯ ಅವರನ್ನು ಬರಮಾಡಿಕೊಂಡರು.
ವಿಸ್ತಾರ ನ್ಯೂಸ್ ಸಿಬ್ಬಂದಿ ಜತೆ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಈ ವೇಳೆ ವಿಸ್ತಾರ ನ್ಯೂಸ್ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ.ಎಸ್, ಸಿಒಒ ಪರಶುರಾಮ್, ಇನ್ ಪುಟ್-ಔಟ್ ಪುಟ್ ಮುಖ್ಯಸ್ಥ ಮಂಜುನಾಥ್, ವಿಸ್ತಾರ ನ್ಯೂಸ್ ಡಿಜಿಟಲ್ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ, ಕ್ರಿಯೆಟಿವ್ ಹೆಡ್ ಮಹೇಶ್ ಚಿದ್ರೆ ಮತ್ತಿತರರು ಜತೆಗಿದ್ದರು.
ಇದನ್ನೂ ಓದಿ | Laxman Savadi: ವಿಸ್ತಾರ ನ್ಯೂಸ್ ಕಚೇರಿಗೆ ಲಕ್ಷ್ಮಣ ಸವದಿ ಭೇಟಿ
ಕರ್ನಾಟಕ
Laxman Savadi: ವಿಸ್ತಾರ ನ್ಯೂಸ್ ಕಚೇರಿಗೆ ಲಕ್ಷ್ಮಣ ಸವದಿ ಭೇಟಿ
Laxman Savadi: ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಬುಧವಾರ ಸೌಹಾರ್ದಯುತ ಭೇಟಿ ನೀಡಿದ್ದರು.
ಬೆಂಗಳೂರು: ಅಥಣಿ ಕ್ಷೇತ್ರದ ಶಾಸಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು (Laxman Savadi) ಬುಧವಾರ ವಿಸ್ತಾರ ನ್ಯೂಸ್ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವಿಸ್ತಾರ ನ್ಯೂಸ್ ಮಾಧ್ಯಮ ಸಂಸ್ಥೆ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಿಷ್ಪಕ್ಷಪಾತ ವರದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಲಕ್ಷ್ಮಣ ಸವದಿ ಅವರನ್ನು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಹೂ ಗುಚ್ಛ ನೀಡಿ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ. ಎಸ್, ರಾಜಕೀಯ ವಿಭಾಗದ ಮುಖ್ಯಸ್ಥ ಮಾರುತಿ ಪಾವಗಡ, ಮಾರ್ಕೆಟಿಂಗ್ ವಿಭಾಗದ ವಿಪಿ ನವನೀತ್ ಹಾಜರಿದ್ದರು.
ಇದನ್ನೂ ಓದಿ | ದಿನೇಶ್ ಗುಂಡೂರಾವ್ ಫೋನ್ ಇನ್; 108 ಆಂಬ್ಯುಲೆನ್ಸ್‌ಗೆ ಕಾಯಕಲ್ಪ, ಸರ್ಕಾರಿ ಆಸ್ಪತ್ರೆಗಳಿಗೆ ಸರ್ಜರಿ
-
ವೈರಲ್ ನ್ಯೂಸ್15 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಸುವಚನ5 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ13 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ಕರ್ನಾಟಕ20 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema17 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಬಾಲಿವುಡ್21 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ದೇಶ12 hours ago
Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್
-
ತಂತ್ರಜ್ಞಾನ17 hours ago
Apple Iphone : ಐಫೋನ್ ಬಳಕೆದಾರರೇ ಇಲ್ಲಿ ಕೇಳಿ; ನಿಮಗೊಂದು ಸೆಕ್ಯುರಿಟಿ ಅಲರ್ಟ್ ಕೊಟ್ಟಿದೆ ಕೇಂದ್ರ ಸರ್ಕಾರ