Shivamogga News: ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ: ಗೋಪಾಲಕೃಷ್ಣ ಬೇಳೂರು - Vistara News

ಶಿವಮೊಗ್ಗ

Shivamogga News: ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ: ಗೋಪಾಲಕೃಷ್ಣ ಬೇಳೂರು

Shivamogga News: ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮತದಾರರಿಗೆ ನೀಡದ್ದ ಐದು ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ತಲುಪಿಸುವ ಮೂಲಕ ಇತಿಹಾಸ ನಿರ್ಮಿಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

VISTARANEWS.COM


on

MLA Gopalakrishna Belur Bhumi Puja for various works in kenchanala village‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷವು (Congress Party) ನೀಡಿದ ಭರವಸೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ನುಡಿದಂತೆ ನಡೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು (Shivamogga News) ಹೇಳಿದರು.

ಪಟ್ಟಣದ ಸಮೀಪದ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿವಾಡಿ ಕೇಂದ್ರ ಕಟ್ಟಡ, ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ, ಅಕ್ಷರ ದಾಸೋಹ ಕೊಠಡಿ,. ಎನ್.ಆರ್.ಎಲ್. ಎಂ. ಕೊಠಡಿ ಉದ್ಘಾಟನೆ ಹಾಗೂ ಕೆಂಚನಾಲ ಮಾರಿಕಾಂಬ ದೇವಸ್ಥಾನ ಸಮೀಪ ಸಮುದಾಯ ಭವನ ಮತ್ತು ಜಲಜೀವನ್ ಯೋಜನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮತದಾರರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ತಲುಪಿಸುವ ಮೂಲಕ ಇತಿಹಾಸ ನಿರ್ಮಿಸಿದೆ ಎಂದರು.

ಇದನ್ನೂ ಓದಿ: UPI service: ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತೀಯ ಯುಪಿಐ ಸೇವೆ ಆರಂಭ

ಇದೇ ವೇಳೆ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಹಾಗೂ ಕಲೆ, ಸಾಹಿತ್ಯ, ಕೃಷಿ, ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ನಿವೃತ್ತ ಯೋಧರನ್ನು ಗ್ರಾಮ ಪಂಚಾಯಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಂಚನಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಉಬೇದುಲ್ಲಾ ಶರೀಫ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಗ್ರಾಮಕ್ಕೆ ಆಗಮಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು.

ಇದನ್ನೂ ಓದಿ: Karnataka Budget Session 2024: ಗೃಹಲಕ್ಷ್ಮಿಗೆ 17500 ಕೋಟಿ ರೂ. ನಿಗದಿ; ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮ: ಲಕ್ಷ್ಮಿ ಹೆಬ್ಬಾಳ್ಕರ್

ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಎಂ.ಬಸವರಾಜ್, ಇಒ ನರೇಂದ್ರ ಕುಮಾರ್, ಬಿಇಒ ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಮ್ಯಾ, ಸದಸ್ಯರಾದ ಮಹಮದ್ ಶರೀಫ್, ಕೃಷ್ಣ, ಪರಮೇಶ್ವರ್, ಪುಟ್ಟಮ್ಮ, ಹೂವಮ್ಮ, ಗೌರಮ್ಮ, ಅರಸಾಳು ಗ್ರಾ.ಪಂ ಮಾಜಿ ಅಧ್ಯಕ್ಷ ಉಮಾಕರ್, ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ಮಧುಸೂದನ್, ಆಶೀಫ್ ಬಾಷಾ, ಗಣಪತಿ, ಸಿಡಿಪಿಒ ಸುರೇಶ್, ಮೊಬೈಲ್ ಹರ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Shivamogga News: ಕೃಷಿ ಪದ್ಧತಿಯ ಜ್ಞಾನ ಹಂಚುವ ಕೆಲಸ ವಿವಿ ಮಾಡುತ್ತಿದೆ: ಡಾ. ಶಶಿಧರ

Shivamogga News: ರಿಪ್ಪನ್‌ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕೃಷಿ ಮೇಳ-2024 ಜರುಗಿತು.

VISTARANEWS.COM


on

Krushi mela inauguration at Koduru village
Koo

ರಿಪ್ಪನ್‌ಪೇಟೆ: ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಕೃಷಿ (Agriculture) ಚಟುವಟಿಕೆ ಜ್ಞಾನವನ್ನು ವರ್ಗಾವಣೆ ಮಾಡುತ್ತಿದ್ದರು. ಆದರೆ ಬದಲಾದ ಇತ್ತೀಚಿನ ದಿನಗಳಲ್ಲಿ ಅದು ಆಗುತ್ತಿಲ್ಲ. ಕೃಷಿ ಪದ್ಧತಿಯ ಜ್ಞಾನವನ್ನು ರೈತರಿಗೆ ಹಂಚುವ ಕೆಲಸವನ್ನು ಈಗ ಕೃಷಿ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಇರುವಕ್ಕಿ ಶಿವಪ್ಪನಾಯಕ ಕೃಷಿ ವಿವಿಯ ಕುಲಸಚಿವ ಹಾಗೂ ವಿಶೇಷಾಧಿಕಾರಿ ಡಾ. ಶಶಿಧರ (Shivamogga News) ಹೇಳಿದರು.

ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಇರುವಕ್ಕಿ ಕೃಷಿ ವಿವಿ, ಕೃಷಿ ಇಲಾಖೆ ಹೊಸನಗರ ಹಾಗೂ ಕೋಡೂರು, ಚಿಕ್ಕಜೇನಿ, ರಿಪ್ಪನ್‌ಪೇಟೆ, ಮಾರುತಿಪುರ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಚಟುವಟಿಕೆಯನ್ನು ತುಂಬಲು ವಿಶ್ವವಿದ್ಯಾಲಯವು ಗ್ರಾಮೀಣ ಭಾಗಗಳಲ್ಲಿ ಕೃಷಿ ಅನುಭವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕಾರ್ಯಾನುಭವ ಶಿಬಿರವನ್ನು ಏರ್ಪಡಿಸಲಾಗುತ್ತದೆ. ಅಲ್ಲಿ ಗ್ರಾಮೀಣ ರೈತರೊಂದಿಗೆ ಬೆರೆತು ಅವರ ಕೃಷಿ ಪದ್ಧತಿಯ ಅನುಭವಗಳನ್ನು ತಾವು ಪಡೆದುಕೊಂಡು ಇವರಲ್ಲಿರುವ ಸಲಹೆಗಳನ್ನು ಅವರಿಗೆ ನೀಡುತ್ತ ವೈಜ್ಞಾನಿಕ ಕೃಷಿ ಪದ್ಧತಿಯತ್ತ ಗಮನ ಹರಿಸುವಂತೆ ಪ್ರೇರೇಪಿಸುತ್ತಾರೆ ಎಂದರು.

ಕೃಷಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಯೋಗ್ಯ ಕೃಷಿ ವಿಜ್ಞಾನಿಗಳನ್ನಾಗಿ ರೂಪಿಸುವುದರ ಜತೆಗೆ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾರ್ಗೋಪಾಯಗಳನ್ನು ತಿಳಿಸುತ್ತದೆ. ರೈತರು ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆಯನ್ನು ಬೆಳೆಯಲು ಸಲಹೆ ನೀಡಿದರು.

ಇದನ್ನೂ ಓದಿ: Chamarajanagar News : ಜೋಳದ ಬೆಳೆ ತಿಂದ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಕೃಷಿಮೇಳ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸುಮಾರು ಎರಡುವರೆ ತಿಂಗಳುಗಳ ಕಾಲ ಗ್ರಾಮೀಣ ಭಾಗದಲ್ಲಿ ಅಧ್ಯಯನ ನಡೆಸಿ ಇಲ್ಲಿನ ರೈತ ಮಹಿಳೆಯರಿಗೆ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ತಯಾರಿಸಲು ಮಾರ್ಗದರ್ಶನ ಮಾಡಿದ್ದಾರೆ. ಹಂತಹಂತವಾಗಿ ಮಾಹಿತಿ ನೀಡುತ್ತ ಕೃಷಿಯಲ್ಲಿಯೂ ಲಾಭವಿದೆ ಎನ್ನುವುದನ್ನು ರೈತರಿಗೆ ತೋರಿಸಿದ್ದಾರೆ ಎಂದು ತಿಳಿಸಿದರು. ‌

ಕೋಡೂರು ಗ್ರಾ.ಪಂ. ಅಧ್ಯಕ್ಷ ಉಮೇಶ ಕಲಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇಳದಲ್ಲಿ 20ಕ್ಕೂ ಹೆಚ್ಚು ಕೃಷಿಗೆ ಸಂಬಂಧಿಸಿದ ಪ್ರಾತ್ಯಕ್ಷತೆ ಮಳಿಗೆಗಳಿದ್ದವು.

ಇದನ್ನೂ ಓದಿ: Devdutt Padikkal: ಆರೋಗ್ಯ ಸಮಸ್ಯೆಗೆ ಸಡ್ಡು ಹೊಡೆದು ಎದ್ದುಬಂದ ಪಡಿಕ್ಕಲ್​ ಭಾರತ ಟೆಸ್ಟ್​ ಕ್ಯಾಪ್​ ಧರಿಸುವುದು ಖಚಿತ

ಈ ಸಂದರ್ಭದಲ್ಲಿ ಗ್ರಾ,ಪಂ. ಅಧ್ಯಕ್ಷರಾದ ಧನಲಕ್ಷ್ಮಿ, ದೀಪಿಕಾ, ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಜಯಪ್ರಕಾಶಶೆಟ್ಟಿ, ಮುಖಂಡರಾದ ಬಿ.ಜಿ. ಚಂದ್ರಮೌಳಿ, ವೇದಾಂತಪ್ಪಗೌಡ, ತೋಟಗಾರಿಕೆ ಇಲಾಖೆಯ ಪುಟ್ಟನಾಯ್ಕ ಸಹಪ್ರಾಧ್ಯಪಕರಾದ ಶಶಿಕಲಾ, ಗಣಪತಿ, ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Karnataka Weather: ಬೆಂಗಳೂರು ಭಾಗದ ಸುತ್ತಮುತ್ತ ಭಾಗಶಃ ಮಂಜು ಮುಸುಕಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಮುಂದಿನ ಒಂದು ವಾರದ ವಾತಾವರಣವನ್ನು ಗಮನಿಸುವುದಾದರೆ, ಗರಿಷ್ಠ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

VISTARANEWS.COM


on

Karnataka Weather Rain for first week of March
Koo

ಬೆಂಗಳೂರು: ರಾಜ್ಯಾದ್ಯಂತ ಬಿಸಿಲು ತೀವ್ರತೆ ಪಡೆದುಕೊಂಡಿರುವುದರಿಂದ ಜನರು ಹೈರಾಣಾಗಿದ್ದಾರೆ. ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶಗಳಲ್ಲಿ ಏರಿಕೆ ಕಾಣುತ್ತಿರುವುದು ಜನರನ್ನು ಕಂಗೆಡಿಸಿದೆ. ಬೇಸಿಗೆ ಬಿಸಿಲಿನ ಹೊಡೆತ ಬಲವಾಗಿ ಬೀಳುತ್ತಿದೆ. ಈ ಮಧ್ಯೆ ಉತ್ತರ ಭಾರತದ ಹಲವು ಕಡೆ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಹ ಮಾರ್ಚ್‌ ಮೊದಲ ವಾರದಲ್ಲಿ ಮಳೆಯಾಗಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಆದರೆ, ಸದ್ಯದ ವರದಿ ಪ್ರಕಾರ ಅಂತಹ ಯಾವುದೇ ವಾತಾವರಣದ ಮುನ್ಸೂಚನೆ ಇಲ್ಲ. ಆದರೆ, ಬಿಸಿಲು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆ ನೀಡಿದೆ.

ಮುಂದಿನ ಎರಡು ದಿನದ ವಾತಾವರಣವನ್ನು ಗಮನಿಸುವುದಾದರೆ, ಗುರುವಾರ ಮತ್ತು ಶುಕ್ರವಾರ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳಲ್ಲಿ (Maximum and Minimum Temperature) 1 – 2 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗಬಹುದು. ಇದು ರಾಜ್ಯದ ಜನರ ನೆತ್ತಿಯನ್ನು ಸುಡಲಿದೆ.

ಬೆಂಗಳೂರಲ್ಲಿ ಇನ್ನೊಂದು ವಾರದ ಸ್ಥಿತಿ ಹೇಗೆ?

ಬೆಂಗಳೂರು ಭಾಗದ ಸುತ್ತಮುತ್ತ ಭಾಗಶಃ ಮಂಜು ಮುಸುಕಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಮುಂದಿನ ಒಂದು ವಾರದ ವಾತಾವರಣವನ್ನು ಗಮನಿಸುವುದಾದರೆ, ಗರಿಷ್ಠ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ತೀವ್ರ ಪ್ರಮಾಣದಲ್ಲಿ ಸೆಕೆ ಇರಲಿದೆ.

ಇನ್ನು ಬೆಂಗಳೂರಿನಲ್ಲಿ ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರುವ ಸಾಧ್ಯತೆಯಿದೆ. ಇದರಿಂದಾಗಿ ಹಗಲಿರುಳು ಗಾಳಿ ವೇಗವು ಹೆಚ್ಚಾಗಿ ಇರಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ

ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ 35-36 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಇರಲಿದೆ. ಗದಗದಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಇನ್ನು ಈ ಭಾಗದ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನ ಸಹ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದೆ.

ಕರಾವಳಿಯಲ್ಲಿ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಳ

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.

ದಕ್ಷಿಣ ಒಳನಾಡಲ್ಲೂ ಬಿಸಿಲ ಧಗೆ

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣವು ಹೆಚ್ಚಳವಾಗಲಿದೆ. ಈ ಭಾಗದ ಕೆಲವು ಕಡೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಹೆಚ್ಚಾಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Yadgiri News: ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 31 ಡಿ.ಸೆ – 20 ಡಿ.ಸೆ
ಮಂಗಳೂರು: 35 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 21 ಡಿ.ಸೆ
ಗದಗ: 36 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 22 ಡಿ.ಸೆ
ಕಲಬುರಗಿ: 36 ಡಿ.ಸೆ – 22 ಡಿ.ಸೆ
ಬೆಳಗಾವಿ: 35 ಡಿ.ಸೆ – 18 ಡಿ.ಸೆ
ಕಾರವಾರ: 36 ಡಿ.ಸೆ – 23 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Hosanagara News: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರಿಂದ ಮಹಿಳೆಗೆ ಚೂರಿ ಇರಿತ

Hosanagara News: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರು ಮಹಿಳೆಯೊಬ್ಬರಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಹೊಸನಗರ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

VISTARANEWS.COM


on

A woman was stabbed by a strangers on a bike
ಸಾಂದರ್ಭಿಕ ಚಿತ್ರ.
Koo

ಹೊಸನಗರ: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರು ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ (Hosanagara News) ಪಟ್ಟಣದಲ್ಲಿ ಜರುಗಿದೆ.

ನಾಜೀಮಾ (38) ಗಾಯಗೊಂಡ ಮಹಿಳೆ. ಪಟ್ಟಣದ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಕೆಲಸ ಮಾಡುವ ಈ ಮಹಿಳೆಯು ಇಲ್ಲಿನ ಗಣಪತಿ ದೇವಸ್ಥಾನ ರಸ್ತೆಯ ಸಮೀಪದ ಮನೆಯಲ್ಲಿ ಊಟ ಮುಗಿಸಿ ಪಾರ್ಲರ್‌ಗೆ ಮರಳುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಹರಿತವಾದ ಚಾಕುವಿನಿಂದ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಮಹಿಳೆಯು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Karnataka Weather: ಬಿಸಿಲ ಧಗೆಯೊಳಗೆ ಕಾವೇರಿದ ಕರ್ನಾಟಕ; ಇನ್ನೆರಡು ದಿನ ಬಿಸಿಲು ಹೆಚ್ಚಳ

ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

ಶಿವಮೊಗ್ಗ

Shivamogga News: ನಾಟಕಗಳು ಸಮಾಜದಲ್ಲಿನ ತಾರತಮ್ಯ, ಲೋಪ ತಿದ್ದುವ ಕೆಲಸ ಮಾಡುತ್ತವೆ: ಗಣಪತಿ ಹುಲ್ತಿಕೊಪ್ಪ

Shivamogga News: ಸಮಾಜದಲ್ಲಿನ ತಾರತಮ್ಯ, ಲೋಪಗಳನ್ನು ತಿದ್ದುವ ಕೆಲಸ ನಾಟಕಗಳಿಂದಾಗುತ್ತದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ ತಿಳಿಸಿದ್ದಾರೆ.

VISTARANEWS.COM


on

Tavaru Mane social comedy drama performance in Nadahalli village
Koo

ಸೊರಬ: ಸಮಾಜದಲ್ಲಿನ ತಾರತಮ್ಯ, ಲೋಪಗಳನ್ನು ತಿದ್ದುವ ಕೆಲಸ ನಾಟಕಗಳಿಂದಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ (Shivamogga News) ಹೇಳಿದರು.

ಪಟ್ಟಣ ವ್ಯಾಪ್ತಿಯ ನಡಹಳ್ಳಿ ಗ್ರಾಮದಲ್ಲಿ ಮಾರಿಕಾಂಬ ದೇವಿಯ ವಾರ್ಷಿಕೋತ್ಸವ ಅಂಗವಾಗಿ ಶ್ರೀ ರೇಣುಕಾಂಬ ಕಲಾ ನಾಟ್ಯ ಸಂಘ ನಡಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ’ತವರು ಮನೆ’ ಸಾಮಾಜಿಕ ಹಾಸ್ಯನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ನಡಹಳ್ಳಿ ಗ್ರಾಮ ಕಲೆ, ಸಾಹಿತ್ಯ, ಧಾರ್ಮಿಕತೆಗೆ ಹೆಸರಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಮಾತನಾಡಿದರು.

ಇದನ್ನೂ ಓದಿ: Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…

ನಡಹಳ್ಳಿ ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಕೆ.ಶ್ರೀಧರಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೊರಬ ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾಧಿಕಾರಿ ಸುಬ್ರಾಯ ನಾಯ್ಕ್, ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಕನ್ನಡ ಉಪನ್ಯಾಸಕ ಎಸ್.ಎಂ.ನೀಲೇಶ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ವೇಣುಗೋಪಾಲ್, ಪುರಸಭೆ ಸದಸ್ಯ ಮಧುರಾಯ್ ಜಿ.ಶೇಟ್, ಲಿಂಗಪ್ಪ ಗುಂಡಶೆಟ್ಟಿಕೊಪ್ಪ, ನಡಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಹೆಡ್ಡೆ ರಾಮಪ್ಪ, ಸದಾಶಿವ, ದೂಪಪ್ಪ ಹಾಗೂ ಸಂಘದ ಅಧ್ಯಕ್ಷ ದೊಡ್ಮನೆ ಲಕ್ಷ್ಮಣಪ್ಪ, ಸಂಚಾಲಕ ಪ್ರಮೋದ್, ಶಿಕ್ಷಕ ಪರಮೇಶ್ವರಪ್ಪ, ನಾಗೇಶ್ ನಡಹಳ್ಳಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Weather: ಬಿಸಿಲ ಧಗೆಯೊಳಗೆ ಕಾವೇರಿದ ಕರ್ನಾಟಕ; ಇನ್ನೆರಡು ದಿನ ಬಿಸಿಲು ಹೆಚ್ಚಳ

ಉಪನ್ಯಾಸಕ ಮಹಾಬಲೇಶ್ವರ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಬಸವರಾಜ್ ನಿರ್ವಹಿಸಿದರು. ಕಾರ್ಯದರ್ಶಿ ಎನ್.ಆರ್.ರಘುಪತಿ ವಂದಿಸಿದರು.

Continue Reading
Advertisement
Modi GDP
ಪ್ರಮುಖ ಸುದ್ದಿ49 mins ago

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

2nd PU Exam from tomorrow what are the conditions
ಶಿಕ್ಷಣ49 mins ago

2nd PU Exam: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

insurance
ಮನಿ-ಗೈಡ್51 mins ago

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Budget session Siddaramaiah
ವಿಧಾನಮಂಡಲ ಅಧಿವೇಶನ1 hour ago

Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

Nitasha Kaul
ದೇಶ1 hour ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Siddaramaiah plan behind accepting Caste Census Report Sunil Kumar reveals reason
ರಾಜಕೀಯ2 hours ago

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Rowdy sheeter kidnaps cricket bookie
ಕ್ರಿಕೆಟ್2 hours ago

WPL 2024 : ಮಹಿಳಾ ಐಪಿಎಲ್‌ನಲ್ಲಿ ಬೆಟ್ಟಿಂಗ್ ಕಟ್ಟಿದ ಬುಕ್ಕಿಯೇ ಕಿಡ್ನ್ಯಾಪ್‌!

GDP Growth
ಪ್ರಮುಖ ಸುದ್ದಿ2 hours ago

GDP Growth : ನಿರೀಕ್ಷೆಗೂ ಮೀರಿ ಭಾರತದ ಜಿಡಿಪಿ ಬೆಳವಣಿಗೆ; ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಪ್ರಗತಿ

film festival
ಸಿನಿಮಾ2 hours ago

Bengaluru Film Festival: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

BJP protest demanding action against those who shouted pro Pak slogan
ಉತ್ತರ ಕನ್ನಡ2 hours ago

Uttara Kannada News: ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಲ್ಲಾಪುರದಲ್ಲಿ ಬಿಜೆಪಿ ಪ್ರತಿಭಟನೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ16 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌