ಕ್ರೈಂ
Drowned in river : ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು
Drowned in River: ಅವರಿಬ್ಬರು ಕಾಲೇಜು ಹುಡುಗರು. ರಜೆಯ ದಿನ ಜತೆಯಾಗಿ ಮೀನು ಹಿಡಿಯಲು ತುಂಗಾ ತೀರಕ್ಕೆ ಹೋಗಿದ್ದರು. ಆದರೆ, ಅಲ್ಲಿ ಜವರಾಯ ನೀರಿನಲ್ಲಿ ಕಾದು ಕುಳಿತಿದ್ದ. ಇಬ್ಬರು ಯುವಕರು ನೀರುಪಾಲಾಗಿದ್ದಾರೆ.
ಶಿವಮೊಗ್ಗ: ಮೀನು ಹಿಡಿಯಲೆಂದು ತುಂಗಾ ನದಿಗೆ (Tunga river) ಇಳಿದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ (Two Youngsters drowned). ಕಾಲೇಜು ವಿದ್ಯಾರ್ಥಿಗಳಾಗಿರುವ (College Students) ಮೊಯಿನ್ ಖಾನ್ ಮತ್ತು ಅಂಜುಂ ಖಾನ್ ನೀರಿನಲ್ಲಿ ಕಣ್ಮರೆಯಾದವರು. ಇಬ್ಬರೂ 18 ವರ್ಷದವರು.
ಶಿವಮೊಗ್ಗದ ಶಿವಮೊಗ್ಗದ ಕುರುಬರ ಪಾಳ್ಯದಲ್ಲಿ ದುರ್ಘಟನೆ ನಡೆದಿದೆ. ಸವಾಯಿಪಾಳ್ಯದ ಮೊಯಿನ್ ಖಾನ್(18), ಇಲ್ಯಾಸ್ ನಗರದ ಅಂಜುಂ ಖಾನ್(18) ಇಬ್ಬರೂ ಬೇರೆ ಕೆಲವು ಸ್ನೇಹಿತರ ಜತೆ ಮೀನು ಹಿಡಿಯಲೆಂದು (Youths went for fishing) ನದಿ ತೀರಕ್ಕೆ ಬಂದಿದ್ದರು. ಅಲ್ಲಿ ನೀರಿಗಿಳಿದು ಮೀನು ಹಿಡಿಯುತ್ತಾ ಸುಳಿಗೆ ಸಿಲುಕಿಕೊಂಡಿದ್ದಾರೆ. ಹಾಗೆ ನೀರಿನಲ್ಲಿ ಮುಳುಗಿದ ಅವರು ಮೇಲೆ ಬಂದಿಲ್ಲ.
ಬಿಸಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಮೊಯಿನ್ ಖಾನ್ ಶವ ಪತ್ತೆಯಾಗಿದ್ದರೆ, ಬಿಎ ಮೊದಲ ವರ್ಷದ ವಿದ್ಯಾರ್ಥಿ ಅಂಜುಂಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಇವರು ಮೀನು ಹಿಡಿಯಲು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಉತ್ಸಾಹದಲ್ಲಿ ಅವರಿಗೆ ಸಾವು ಕಣ್ಣೆದುರು ಬಂದು ನಿಂತಿದ್ದು ಗೊತ್ತಾಗಲಿಲ್ಲ. ಅವರ ಮನೆಯವರು ಕುಟುಂಬಿಕರು ನದಿ ತೀರಕ್ಕೆ ಬಂದಿದ್ದು ಕುಟುಂಬದವರ ಕಣ್ಣೀರು ಹರಿಯುತ್ತಲೇ ಇದೆ. ವಯಸ್ಸಿಗೆ ಬಂದ ಮಕ್ಕಳು ಈ ರೀತಿಯಾಗಿ ಪ್ರಾಣ ಕಳೆದುಕೊಳ್ಳುವ ನೋವಿನ ಬಗ್ಗೆ ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: Murder Case : ಎಗ್‌ರೈಸ್, ಕಬಾಬ್ ಇಲ್ಲ ಎಂದಿದ್ದೇ ತಪ್ಪಾಯ್ತಾ? ಅಂಗಡಿ ಮಾಲೀಕನನ್ನು ಇರಿದು ಕೊಂದ ಪಾತಕಿ
ವ್ಯಕ್ತಿಯನ್ನು ಕೊಂದು ಇಂಗುಗುಂಡಿಯಲ್ಲಿ ಮುಚ್ಚಿಟ್ಟಿದ್ದವರು 48 ಗಂಟೆಯಲ್ಲಿ ಸೆರೆ
ಶಿರಸಿ: ವ್ಯಕ್ತಿಯೊಬ್ಬನನ್ನು ಕೊಂದು ಇಂಗು ಗುಂಡಿಯಲ್ಲಿ ಮುಚ್ಚಿಟ್ಟಿದ್ದ ಮೂವರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಕೇವಲ 48 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಲಾಗಿದೆ.
ಶಿರಸಿ ತಾಲೂಕಿನ ವಡ್ಡಿನಕೊಪ್ಪದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ನಿವಾಸಿ ಅಶೋಕ ಗಿರಿಯಪ್ಪ ಉಪ್ಪಾರ (48) ಕೊಲೆಯಾದ ವ್ಯಕ್ತಿ. ಇದನ್ನು ಬೆನ್ನು ಹತ್ತಿದ ಪೊಲೀಸರು ಪ್ರಕರಣ ದಾಖಲಾದ 48ಗಂಟೆಯಲ್ಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾನಗಲ್ ತಾಲೂಕಿನ ಪರಶುರಾಮ ಸುರಳೇಶ್ವರ (23), ನಿರಂಜನ ತಳವಾರ (19), ಗುಡ್ಡಪ್ಪ (19) ಬಂಧಿತರು. ಇವರು ಗಿರಿಯಪ್ಪ ಉಪ್ಪಾರ ಅವರನ್ನು ಕೊಲೆಗೈದು ವಡ್ಡಿಕೊಪ್ಪ ಅರಣ್ಯ ಪ್ರದೇಶದ ಇಂಗುಗುಂಡಿಯಲ್ಲಿ ಶವ ಮುಚ್ಚಿಟ್ಟಿದ್ದರು. ಹಣಕ್ಕಾಗಿ ಕೊಲೆ ನಡೆಸಿ ಗೋಣಿ ಚೀಲ ಮುಚ್ಚಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ ಆರೋಪಿತರು ಏನೂ ಆಗಿಲ್ಲ ಎಂಬಂತೆ ತಮ್ಮ ಪಾಡಿಗೆ ತಾವಿದ್ದರು. ಆದರೆ, ಪೊಲೀಸರು ಮಾತ್ರ ಪ್ರಕರಣದ ಬೆನ್ನು ಹತ್ತಿ ಬಂಧಿಸಿದರು.
ಕರ್ನಾಟಕ
Belagavi News: ಹಣಕಾಸು ವಿಚಾರಕ್ಕೆ ಯೋಧನಿಂದಲೇ ಯೋಧನ ಮೇಲೆ ಗುಂಡಿನ ದಾಳಿ
Belagavi News: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಯೋಧ, ಮತ್ತೊಬ್ಬ ಯೋಧನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಬೆಳಗಾವಿ: ಹಣಕಾಸಿನ ವಿಚಾರಕ್ಕೆ ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಯೋಧನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಬಸಪ್ಪ ಮೈಲಪ್ಪ ಬಂಬರಗಾ (32) ಗಾಯಾಳು ಯೋಧ. ನಂಜುಂಡಿ ಲಕ್ಷ್ಮಣ ಬೂದಿಹಾಳ (32) ಗುಂಡಿನ ದಾಳಿಗೈದ ಆರೋಪಿ. ಇಬ್ಬರೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಣಕಾಸಿನ ವಿಚಾರಕ್ಕೆ ನಡುವೆ ಗಲಾಟೆಯಾಗಿದೆ. ಈ ವೇಳೆ ಬಸಪ್ಪ ಮೈಲಪ್ಪ ಬಂಬರಗಾ ಮೇಲೆ ನಂಜುಂಡಿ ಲಕ್ಷ್ಮಣ ಬೂದಿಹಾಳ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು!
ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು
ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).
ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಯುವಕರಿಂದ ಥಳಿತ
ಯಾದಗಿರಿ: ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಕಬಡ್ಡಿ ಪಂದ್ಯದ ವೇಳೆ ದೈಹಿಕ ಶಿಕ್ಷಕ ಔಟ್ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ, ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ. ಹೀಗಾಗಿ ಆತನ ಮೇಲೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಗಲಾಟೆ ಬಿಡಿಸಲು ಅಧಿಕಾರಿಗಳು, ಸಿಬ್ಬಂದಿ ಹರಸಾಹಸಪಟ್ಟರು.
ಕ್ರೈಂ
Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು!
Great robbery: ದಿಲ್ಲಿಯಲ್ಲಿ ಕಳ್ಳರು ಜ್ಯುವೆಲ್ಲರಿ ಶಾಪ್ ಒಂದರಿಂದ ಬರೋಬ್ಬರಿ 25 ಕೋಟಿ ರೂ.(25 crore) ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಸಿಸಿ ಟಿವಿ ಕ್ಯಾಮರಾ(cc tv camera) ಅಳವಡಿಸಿದ್ದರೂ ಅದರ ಸಂಪರ್ಕ ಕಡಿತಗೊಳಿಸಿ ಈ ಕೃತ್ಯ ಎಸಗಲಾಗಿದೆ.
ನವ ದೆಹಲಿ: ಚಿನ್ನಾಭರಣಗಳಂತಹ ಬೆಲೆಬಾಳುವ ವಸ್ತುಗಳ ರಕ್ಷಣೆಗೆ ಆಧುನಿಕ ತಂತ್ರಜ್ಞಾನಗಳ ಮೊರೆ ಹೋದರೂ ಕಳ್ಳರು ಅದೆಲ್ಲವನ್ನೂ ಬೇಧಿಸಿ ಸೊತ್ತುಗಳನ್ನು ಕಳವು ಮಾಡೇ ಮಾಡುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಸಿಸಿ ಟಿವಿ ಕ್ಯಾಮರಾ(cc tv camera) ಅಳವಡಿಸಿದ ಜ್ಯುವೆಲ್ಲರಿ ಶಾಪ್ ಒಂದರಿಂದ ಕಳ್ಳರು ಬರೋಬ್ಬರಿ 25 ಕೋಟಿ ರೂ.(25 crore) ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ.
ದಕ್ಷಿಣ ದೆಹಲಿಯ ಜುಂಗ್‌ಪುರದ ಭೋಗಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೆಪ್ಟಂಬರ್ 25 ಮತ್ತು 26ರ ಮಧ್ಯೆ ಅಂಗಡಿಯ ಗೋಡೆಗೆ ಕನ್ನ ಕೊರೆದು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅಂಗಡಿ ಮಾಲಕ ಬಾಗಿಲು ತೆರೆಯಲು ಬಂದಾಗ ಕಳವಿನ ವಿಚಾರ ಬೆಳಕಿಗೆ ಬಂದಿದೆ.
ಉಮ್ರಾವ್ ಸಿಂಗ್ ಜ್ಯುವೆಲ್ಲರಿಯಿಂದ ಈ ಕಳವು ನಡೆದಿದೆ. 1948ರಲ್ಲಿ ಆರಂಭವಾದ ಈ ಜ್ಯುವೆಲ್ಲರಿ ಈ ಪ್ರದೇಶದಲ್ಲಿ ಜನಪ್ರಿಯವಾಗಿದೆ. ಸೋಮವಾರ ಮಧ್ಯರಾತ್ರಿ ಈ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದೆ. ಆಭರಣ ಅಂಗಡಿಯ ಗೋಡೆಗೆ ರಂಧ್ರವನ್ನು ಕೊರೆದು ಕಳ್ಳರು ಲಾಕರ್ ಹೊಂದಿರುವ ಸ್ಟ್ರಾಂಗ್ ರೂಮ್ ಗೆ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷ ಎಂದರೆ ಬೆಳ್ಳಿಯ ಆಭರಣಗಳನ್ನು ಅಲ್ಲೇ ಬಿಟ್ಟಿರುವ ಖದೀಮರು ಚಿನ್ನ ಮತ್ತು ವಜ್ರದ ಆಭರಣಗಳನ್ನು ದೋಚಿದ್ದಾರೆ.
ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಪ್ರಯೋಜಕ್ಕೆ ಬರಲಿಲ್ಲ
ಈ ಜ್ಯುವೆಲ್ಲರಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರೂ ಪ್ರಯೋಜನವಾಗಲಿಲ್ಲ. ಕಳ್ಳರು ಕ್ಯಾಮರಾದ ಸಂಪರ್ಕ ಕತ್ತರಿಸಿ ಕೃತ್ಯ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ಅಂಗಡಿಯ ನಾಮಫಲಕ ಮುರಿದಿರುವುದನ್ನು ನೋಡಿದ ಅಂಗಡಿ ಮಾಲಕರಿಗೆ ಅನುಮಾನ ಮೂಡಿತ್ತು. ಬಳಿಕ ಅವರು ಅಂಗಡಿಯ ಬಾಗಿಲು ತೆರೆದಾಗ ಎಲ್ಲಾ ವಜ್ರ ಮತ್ತು ಚಿನ್ನದ ಆಭರಣಗಳು ಕಾಣೆಯಾಗಿರುವುದು ಕಂಡುಬಂತು. ಅಲರಾಂ ಸಂಪರ್ಕವನ್ನೂ ಕಳ್ಳರು ಕಡಿತಗೊಳಿಸಿದ್ದರು.
ʼʼನಾಲ್ಕು ಮಹಡಿಯ ಕಟ್ಟಡದ ಟೆರೇಸ್ ಮೇಲಿನಿಂದ ಕೆಳ ಅಂತಸ್ತಿಗೆ ಬಂದ ಕಳ್ಳರು ಗೋಡೆಯನ್ನು ಡ್ರಿಲ್‌ನಿಂದ ಕೊರೆದು ಸ್ಟ್ರಾಂಗ್ ರೂಮ್ ಪ್ರವೇಶಿಸಿರುವ ಸಾಧ್ಯತೆ ಇದೆ. 10ರಿಂದ 15 ಲಕ್ಷ ರೂಪಾಯಿ ನಗದು ಕೂಡ ಕಳವಾಗಿದೆ. ಕಳ್ಳರ ಪೈಕಿ ಒಬ್ಬಾತ ಸ್ಟ್ರಾಂಗ್ ರೂಮ್ ಪ್ರವೇಶಿಸಿ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಚೀಲದಲ್ಲಿ ತುಂಬಿ ಹೊರಗಡೆ ಸಾಗಿಸಿರಬೇಕು” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: NCP Crisis: ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದ ಎನ್‌ಸಿಪಿ ಎರಡೂ ಬಣ!
ಅಪರಾಧಿಗಳಿಗೆ ಅಂಗಡಿ ಮತ್ತು ಆಭರಣಗಳ ಬಗ್ಗೆ ಮೊದಲೇ ಮಾಹಿತಿ ಇತ್ತು ಮತ್ತು ಸ್ಟ್ರಾಂಗ್ ರೂಮ್ ಅನ್ನು ಹೇಗೆ ತಲುಪಬೇಕೆಂದು ಅವರಿಗೆ ತಿಳಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳ್ಳರಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆಯೂ ತಿಳಿದಿರುವ ಸಾಧ್ಯತೆ ಇದೆ. ದರೋಡೆ ನಡೆದ ರೀತಿಯನ್ನು ನೋಡಿದರೆ, ಅಪರಾಧಿಗಳು ತಮ್ಮ ಕೃತ್ಯದ ಬಗ್ಗೆ ಯೋಜನೆ ರೂಪಿಸಲು ಮೊದಲೇ ಸ್ಥಳಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಕರ್ನಾಟಕ
Bangalore Bandh: ಬೆಂಗಳೂರು ಬಂದ್ ಹತ್ತಿಕ್ಕಲು ಪೊಲೀಸ್ ಬಲ ಪ್ರಯೋಗ ನಡೆಯಿತೇ? ಕಮಿಷನರ್ ಹೇಳಿದ್ದೇನು?
Bangalore Bandh : ಬೆಂಗಳೂರು ಬಂದ್ ಏನೋ ಸಾಂಗವಾಗಿ ಮುಗಿದಿದೆ. ಆದರೆ, ಪೊಲೀಸರ ಬಲ ಪ್ರಯೋಗದ ಮೂಲಕ ಬಂದ್ ಪರಿಣಾಮವನ್ನು ತಗ್ಗಿಸಲಾಯಿತೇ ಎಂಬ ಪ್ರಶ್ನೆ ಮೂಡಿದೆ. ಇಬ್ಬರು ನಾಯಕರು, ಪೊಲೀಸ್ ಕಮೀಷನರ್ ಹೇಳಿದ್ದೇನು?
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ (Cauvery water Dispute) ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ಕರೆ ನೀಡಿದ್ದ ಒಂದು ದಿನದ ಬೆಂಗಳೂರು ಬಂದ್ (Bangalore Bandh) ಸಾಂಗವಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆದ ಪ್ರತಿಭಟನೆಯ ವೇಳೆ ಗಮನೀಯ ಅನಾಹುತಕಾರಿ ಘಟನೆಗಳು ಇಲ್ಲದೆ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು.
ನೂರಾರು ಸಂಘಟನೆಗಳು ಸೇರಿ ನಡೆಸಿದ ಈ ಬಂದ್ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬೆಂಬಲ ನೀಡಿವೆ. ಈ ನಡುವೆ, ಪ್ರತಿಭಟನೆಗೆ ನಮ್ಮ ಯಾವುದೇ ಆಕ್ಷೇಪ ಇಲ್ಲ ಎಂದು ಪದೇಪದೆ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಒಳಗಿಂದೊಳಗೆ ಪೊಲೀಸ್ ಬಲ ಪ್ರಯೋಗದ (Police Force used to curb bandh?) ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದರೇ ಎಂಬ ಪ್ರಶ್ನೆ ಕೇಳಿಬಂದಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಬೆಳಗ್ಗೆ ಬಂದ್ ಆರಂಭವಾಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಬಲಪ್ರಯೋಗದ ಮೂಲಕ ಬಂದ್‌ನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದರು. ನಾಯಕರನ್ನು ಬಂಧಿಸಿದ್ದು, ರಾತ್ರೋರಾತ್ರಿ ನಡೆದ ಮುನ್ನೆಚ್ಚರಿಕಾ ಕ್ರಮದ ಬಂಧನಗಳನ್ನು ಅವರು ಉಲ್ಲೇಖ ಮಾಡಿದ್ದರು.
ಇತ್ತ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಎಲ್ಲ ರೀತಿಯಿಂದಲೂ ಹತ್ತಿಕ್ಕುವ ಪ್ರಯತ್ನಗಳ ನಡುವೆ ಬಂದ್ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಅವರು ಕೂಡಾ ಪೊಲೀಸ್ ಬಲ ಪ್ರಯೋಗದ ಉಲ್ಲೇಖ ಮಾಡಿದ್ದಾರೆ.
ಸೆಕ್ಷನ್ ಜಾರಿಗೆ ಬಿಜೆಪಿ, ಜೆಡಿಎಸ್ ವಿರೋಧ
ಬಂದ್‌ನ ದಿನ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ. ಮಾಡುವುದಿದ್ದರೆ ಕೇವಲ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಅವಕಾಶ. ಬೇರೆ ಎಲ್ಲೂ ಮೆರವಣಿಗೆ ಕೂಡಾ ಮಾಡುವಂತಿಲ್ಲ ಎಂದು ಪೊಲೀಸ್ ಕಮೀಷನರ್ ಬಿ. ದಯಾನಂದ್ ಹೇಳಿದ್ದರು. ಇದನ್ನು ಬಿಜೆಪಿ ಮತ್ತು ಜೆಡಿಎಸ್ ಆಕ್ಷೇಪಿಸಿವೆ. ಪೊಲೀಸ್ ಅಧಿಕಾರಿಗಳು ಸೆಕ್ಷನ್ 144ರ ಹೆಸರಿನಲ್ಲಿ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ನವರೆಗೆ ನಡೆಯುವ ಮೆರವಣಿಗೆಯನ್ನೂ ತಡೆಯುತ್ತಿದ್ದಾರೆ ಎಂದಿದ್ದಾರೆ.
ಎಲ್ಲೇ ಬಂಧನವಾದರೂ ಫ್ರೀಡಂ ಪಾರ್ಕ್‌ಗೆ
ಮಂಗಳವಾರ ಮುಂಜಾನೆ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಆದರೆ, ಪೊಲೀಸರು ಅಲ್ಲೆಲ್ಲ ಮೊದಲೇ ಹಾಜರಿದ್ದು ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಫ್ರೀಡಂ ಪಾರ್ಕ್‌ಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಬಂದ್‌ಗೆ ಕರೆ ನೀಡಿದ್ದ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಮುಖಂಡ, ರೈತ ನಾಯಕ ಕುರುಬೂರು ಶಾಂತ ಕುಮಾರ್ ಅವರನ್ನು ಅವರು ಮೈಸೂರು ಬ್ಯಾಂಕ್ ಸರ್ಕಲ್‌ಗೆ ಬರುತ್ತಲೇ ಬಂಧಿಸಲಾಯಿತು. ಅವರು ಟೌನ್ ಹಾಲ್‌ವರೆಗೆ ಮೆರವಣಿಗೆ ಹೋಗುತ್ತೇವೆ, ಒಂದು ಪ್ರತಿಭಟನೆ ಸಭೆ ನಡೆಸುತ್ತೇವೆ ಎಂದರೂ ಅವಕಾಶ ಸಿಕ್ಕಿಲ್ಲ. ಹೀಗೆ ಎಲ್ಲಾ ನಾಯಕರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Bangalore Bandh : ಪ್ರತಿಭಟನಾಕಾರರ ಬಂಧನಕ್ಕೆ ಎಚ್‌ಡಿಕೆ ಕೆಂಡಾಮಂಡಲ; ಇದು ಸ್ಟಾಲಿನ್‌ನ ಬಾಡಿಗೆ ಸರ್ಕಾರವೇ?
1000ಕ್ಕೂ ಅಧಿಕ ಮಂದಿಯನ್ನು ಮೊದಲೇ ಕಸ್ಟಡಿಗೆ ಪಡೆಯಲಾಗಿತ್ತು!
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರೇ ಹೇಳಿದಂತೆ ಬೆಂಗಳೂರಿನಲ್ಲಿ ಬಂದ್‌ನ ಮುನ್ನಾ ದಿನವೇ ಮುನ್ನೆಚ್ಚರಿಕೆ ಕ್ರಮವಾಗಿ 1000ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ʻʻಬೆಳಗ್ಗೆಯಿಂದ ಶಾಂತಿಯುತವಾಗಿ ಬಂದ್ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಗರದಲ್ಲಿ ನಡೆದಿಲ್ಲ. ನಗರದಾದ್ಯಂತ ವ್ಯಾಪಕವಾದ ಬಂದೋಬಸ್ತ್ ಮಾಡಲಾಗಿತ್ತು. ಮೊದಲೇ ಕೆಲವರನ್ನು ನಾವು ವಶಕ್ಕೆ ಪಡೆದಿದ್ದೆವು. ಇನ್ನು ಪ್ರತಿಭಟನೆಗೆ ಬಂದವರನ್ನು ವಶಕ್ಕೆ ಪಡೆದೆವುʼʼ ಎಂದು ಅವರು ಬಂದ್ ಬಳಿಕ ಹೇಳಿದರು.
ʻʻಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟು ಸ್ವಯಂಪ್ರೇರಿತವಾಗಿ ಬಂದ್ ಮಾಡಿದರು. ಯಾವುದೇ ಬಸ್ ಗಳಿಗೆ ಕಲ್ಲು ತೂರಾಟ ಆಗಿಲ್ಲ. ಜಯನಗರದಲ್ಲಿ ಕೆಲ ಘಟನೆಗಳು ಆಗಿವೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡ್ತಾ ಇದ್ದಾರೆ. ತಮಿಳುನಾಡು ಬಸ್ ಗಳು ಅವರೇ ಸಂಚಾರ ನಿಲ್ಲಿಸಿದರುʼʼ ಎಂದು ವಿವರಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಕಸ್ಟಡಿಗೆ ಪಡೆದಿದ್ದೆವು. ಅವರನ್ನು ಬಿಡುಗಡೆ ಮಾಡಲಾಗಿದೆʼʼ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಬಂಧಿತರಲ್ಲಿ ಈ ಹಿಂದೆ ಬಂದ್ ಸಂದರ್ಭದಲ್ಲಿ ಗಲಾಟೆ ಮಾಡಿದ ಹಿನ್ನೆಲೆ ಇರುವವರು, ಸಂಘಟನೆಗಳು ಮುಖಂಡರು ಇದ್ದರು.
ಕರ್ನಾಟಕ
Bike Accident: ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು
Bike Accident: ಕಲಬುರಗಿ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ಅಫಘಾತ ನಡೆದಿದೆ. ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿದ್ದರಿಂದ ಇಬ್ಬರು ವಿದಯಾರ್ಥಿಗಳು ಮೃತಪಟ್ಟಿದ್ದಾರೆ.
ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).
ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಯುವಕರಿಂದ ಥಳಿತ
ಯಾದಗಿರಿ: ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಕಬಡ್ಡಿ ಪಂದ್ಯದ ವೇಳೆ ದೈಹಿಕ ಶಿಕ್ಷಕ ಔಟ್ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ, ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ. ಹೀಗಾಗಿ ಆತನ ಮೇಲೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಗಲಾಟೆ ಬಿಡಿಸಲು ಅಧಿಕಾರಿಗಳು, ಸಿಬ್ಬಂದಿ ಹರಸಾಹಸಪಟ್ಟರು.
10 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ; ಕಾಮುಕ ಹೆಡ್ ಮಾಸ್ಟರ್ ಅರೆಸ್ಟ್
ಗದಗ: ಮಕ್ಕಳಿಗೆ ಸದ್ಬುದ್ಧಿಯನ್ನು ಹೇಳಿಕೊಡಬೇಕಾದ ಶಿಕ್ಷಕನೊಬ್ಬ ಮಗಳಂಥ ವಿದ್ಯಾರ್ಥಿನಿ ಮೇಲೆ ತನ್ನ ಕಾಮುಕತನವನ್ನು (Harassment Case) ಪ್ರದರ್ಶನ ಮಾಡಿದ ಹೇಯ ಘಟನೆ ಗದಗ ಜಿಲ್ಲಾ (Gadaga News) ನರಗುಂದ ತಾಲೂಕಿನಲ್ಲಿ ನಡೆಸಿದೆ. ನರಗುಂದ ಪಟ್ಟಣದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ (Head Master of Urdu school) 10 ವರ್ಷದ ಬಾಲಕಿಗೆ ಲೈಂಗಿಕ ಹಿಂಸೆ (Sexual harassment on 10 year old girl ನೀಡಿದ್ದಾನೆ.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಪ್ರಭಾರ ಮುಖ್ಯ ಶಿಕ್ಷಕನಾಗಿರುವ ಅಲ್ಲಾದಿನ್ ಚವಡಿಯೇ ಈ ರೀತಿ ನಡೆದುಕೊಂಡವನು. ಅವನು ತನ್ನದೇ ಶಾಲೆಯ 10 ವರ್ಷದ ವಿದ್ಯಾರ್ಥಿನಿಗೆ ಹಿಂಸೆ ನೀಡಿದ್ದಾನೆ.
ಆರೋಪಿ ಚವಡಿ ಬಾಲಕಿಯನ್ನು ತನ್ನ ಕಚೇರಿಯ ಒಳಗೆ ಕರೆಸಿಕೊಂಡು ಆಕೆಯ ದೇಹದ ಮೇಲೆಲ್ಲ ಕೈ ಆಡಿಸುತ್ತಿದ್ದನೆಂದು ಹೇಳಲಾಗಿದೆ. ಈ ವಿಷಯವನ್ನು ಯಾರಿಗೂ ಹೇಳಬಾರದು. ಹೇಳಿದರೆ ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಬೆದರಿಸಿದ್ದ ಎನ್ನಲಾಗಿದೆ.
ಶಾಲೆಯಲ್ಲಿ ಆದ ಘಟನೆಯ ಬಗ್ಗೆ ಹುಡುಗಿಯ ತಾಯಿಯ ಬಳಿ ಹೇಳಿದ್ದಳು. ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ದೂರು ನೀಡಿದರೆ ಮಗಳ ಭವಿಷ್ಯಕ್ಕೆ ತೊಂದರೆಯಾದೀತು, ಮದುವೆ ಮಾಡುವುದು ಕಷ್ಟವಾದೀತು ಎಂದು ಭಾವಿಸಿದ ಮನೆಯವರು ಕೆಲವು ದಿನ ಸುಮ್ಮನಿದ್ದರು.
ಇದನ್ನೂ ಓದಿ | Road Accident : ಆಕ್ಸೆಲ್ ಕಟ್ ಆಗಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್; 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ
ಬಳಿಕ ಮುಂದೆಯೂ ಈ ರೀತಿಯ ಘಟನೆ ಮುಂದುವರಿಯಬಾರದು ಎಂಬ ಕಾರಣಕ್ಕಾಗಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈಗ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಅನ್ವಯ ಎಫ್ ಐ ಆರ್ ದಾಖಲಾಗಿದೆ.
ಪೊಲೀಸರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಅಲ್ಲಾದಿನ್‌ನನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿದ್ದಾರೆ.
-
Live News14 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ4 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ21 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ
-
ದೇಶ24 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕ್ರಿಕೆಟ್21 hours ago
Babar Azam: ಆಡಿ ಕಾರ್ ಓವರ್ಸ್ಪೀಡ್ ಓಡಿಸಿ, ದಂಡ ಕಟ್ಟಿದ ಪಾಕ್ ಕ್ರಿಕೆಟ್ ಟೀಂ ನಾಯಕ ಬಾಬರ್ ಅಜಮ್!
-
South Cinema7 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ದೇಶ22 hours ago
MP Assembly Election: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಮೂವರು ಕೇಂದ್ರ ಸಚಿವರು, ಹಲವು ಸಂಸದರು ಕಣಕ್ಕೆ!
-
ದೇಶ23 hours ago
Sanatan Dharma row: ತಮಿಳುನಾಡು ಸಿಎಂ ಪುತ್ರ ಉದಯನಿಧಿ ವಿರುದ್ಧ ದಿಲ್ಲಿಯಲ್ಲಿ ಸಂತರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ