Vistara News Launch | ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು: ಸಂಸದ ಬಿ.ವೈ. ರಾಘವೇಂದ್ರ Vistara News

ವಿಸ್ತಾರ ಅನಾವರಣ

Vistara News Launch | ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು: ಸಂಸದ ಬಿ.ವೈ. ರಾಘವೇಂದ್ರ

ನಿಖರ- ಜನಪರ ಘೋಷವಾಕ್ಯದೊಂದಿಗೆ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್ ಚಾನೆಲ್​ನ (Vistara News Launch) ವಿಸ್ತಾರ ಕನ್ನಡ ಸಂಭ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಚಾಲನೆ ನೀಡಿದರು.

VISTARANEWS.COM


on

Vistara News Launch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಇಲ್ಲಿನ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶುಕ್ರವಾರ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮ ನಡೆಯಿತು. ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಬಿ.ವೈ.ರಾಘವೇಂದ್ರ ಅವರು ಸುಸ್ಥಿರ ಸಮಾಜ, ಸಂಸ್ಕೃತಿ ನಿರ್ಮಾಣಕ್ಕೆ ವಿಸ್ತಾರ ನ್ಯೂಸ್ ಪ್ರೇರಣೆ ನೀಡಲಿ. ನಮ್ಮ ಸಂಸ್ಕೃತಿ ಶ್ರೀಮಂತಗೊಳಿಸುವ ಕೆಲಸ ಆಗಲಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು. ಕೇಂದ್ರ ಸರ್ಕಾರ ವಿದ್ಯುನ್ಮಾನ ಚಾನೆಲ್‌ಗಳಿಗೆ ನೀತಿ ಸಂಹಿತೆ ರೂಪಿಸಿ ಜಾರಿಗೊಳಿಸಿದೆ ಎಂದರು.

Vistara News Launch

ಸತ್ಯದ ವರದಿಯನ್ನು ನೀಡಲಿ- ಕೆಎಸ್‌ ಈಶ್ವರಪ್ಪ
ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದ ನಂತರವೂ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಆಗುತ್ತಿರುವ ಹೊಸ್ತಿಲಲ್ಲಿ ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ನೇತೃತ್ವದ ವಿಸ್ತಾರ ನ್ಯೂಸ್ ಲೋಕಾರ್ಪಣೆಗೊಂಡಿರುವುದು ಸಂತಸದ ವಿಷಯ. ವಿಸ್ತಾರ ನ್ಯೂಸ್ ಸತ್ಯದ ವರದಿಯನ್ನು ನೀಡುವಂತಾಗಲಿ ಎಂದು ಹಾರೈಸಿದರು.

ವಿವಿಧ ಕ್ಷೇತ್ರಗಳ ಪ್ರತ್ಯೇಕ ಯೂಟ್ಯೂಬ್‌ ಚಾನಲ್‌ನಲ್ಲಿ ವಿಸ್ತಾರ ಪ್ರಥಮ- ಬಸವ ಮರುಳಸಿದ್ದ ಸ್ವಾಮೀಜಿ
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಯೂಟ್ಯೂಬ್‌ ಚಾನೆಲ್‌ಗಳನ್ನು ಹೊರತಂದಿರುವ ವಿಸ್ತಾರ ನ್ಯೂಸ್ ಪ್ರಯತ್ನ ಮಾಧ್ಯಮ ಲೋಕದಲ್ಲಿ ಪ್ರಥಮದ್ದು. ಸವಾಲಿನ ನಡುವೆ ಲೋಕಾರ್ಪಣೆಗೊಂಡಿರುವ ವಿಸ್ತಾರ ನ್ಯೂಸ್ ಎಲ್ಲ ಸವಾಲು, ಸ್ಪರ್ಧೆಗಳನ್ನು ಮೀರಿ ನಿಖರ, ಜನಪರ ಸುದ್ದಿ ನೀಡುವಂತಾಗಲಿ ಎಂದು ಹಾರೈಸಿದರು. ಹರಿಪ್ರಕಾಶ್ ಕೋಣೆಮನೆಯವರು ಬಹುಮುಖ ವ್ಯಕ್ತಿತ್ವ ಹೊಂದಿರುವ ಆಕರ್ಷಕ ಪತ್ರಕರ್ತರು. ಅವರು ನೇತೃತ್ವ ವಹಿಸಿದ್ದ ಎರಡೂ ರಾಜ್ಯಮಟ್ಟದ ಪತ್ರಿಕೆಗಳು ನಂಬರ್ ಒನ್ ಆದವು. ಒಂದು ಪತ್ರಿಕೆಯನ್ನು ಬಹುಮಾಧ್ಯಮ ಪತ್ರಿಕೆಯನ್ನಾಗಿ ರೂಪಿಸುವಲ್ಲಿ ಅವರ ಪ್ರಯತ್ನ ಶ್ಲಾಘನೀಯ. ಒಳ್ಳೆಯ ತಂಡ ಕಟ್ಟಿರುವ ಹರಿಪ್ರಕಾಶ್ ಕೋಣೆಮನೆಯವರು ಯಶಸ್ವಿ ಆಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ವಿಸ್ತಾರ ಕನ್ನಡ ಸಂಭ್ರಮದಲ್ಲಿ ಸರ್ಜಿ ಫೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ್ ಸರ್ಜಿ ಶುಭ ಹಾರೈಸಿದರು. ನಿರಂತರ ಟ್ರಸ್ಟ್‌ನ ಚೈತ್ರಾ, ಕಲಾವಿದ ವಿನಯ್ ನೇತೃತ್ವದ ಸಮೃದ್ಧ ಕಲಾವಿದರ ತಂಡ ಹಾಗೂ ವಿಸ್ತಾರ ನ್ಯೂಸ್‌ನ ಶಿವಮೊಗ್ಗ ಬ್ಯೂರೋ ಹೆಡ್ ವಿವೇಕ ಮಹಾಲೆ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಅಧ್ಯಕ್ಷ ನಾಗರಾಜ್ ಸೇರಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ಪಾಲಿಕೆ ಸದಸ್ಯ ಪ್ರಭಾಕರ್, ಶಿಕ್ಷಣ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ, ರೋಟರಿ ಕ್ಲಬ್‌ನ ವಿಜಯಕುಮಾರ್, ನವ ಕರ್ನಾಟಕ ನಿರ್ಮಾಣ ವೇದಿಕೆಯ ರಮೇಶ್ ಗೌಡ, ರೋಟರಿ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು, ಮನ್ವಂತರ ಮಹಿಳಾ ಮಂಡಲ ಸದಸ್ಯರು, ಕರ್ನಾಟಕ ನಾಡು ರಕ್ಷಣಾ ವೇದಿಕೆ ಮತ್ತು ಕರುನಾಡು ಹಿರತಕ್ಷಣಾ ಸಮಿತಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ | Siddaramaiah in Kolar | ನಾನೇನೂ ನಾಮಿನೇಷನ್‌ ಹಾಕ್ಲಿಕೆ ಹೋಗ್ತಿಲ್ಲ, ಚರ್ಚೆಗೆ ಹೋಗ್ತಿದೇನೆ ಅಷ್ಟೆ ಎಂದ ಸಿದ್ದರಾಮಯ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Sharath MS: ವಿಸ್ತಾರ ನ್ಯೂಸ್‌ನ ಶರತ್ ಎಂ.ಎಸ್‌ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

Sharath MS:: ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್‌ ಎಂ.ಎಸ್ ಅವರಿಗೆ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆಯಿಂದ ʼಮಾಧ್ಯಮ ರತ್ನ ಪ್ರಶಸ್ತಿʼ ನೀಡಿ ಗೌರವಿಸಲಾಗಿದೆ.

VISTARANEWS.COM


on

Sharath MS
Koo

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆ ವತಿಯಿಂದ ನಗರದ ವೈಯಾಲಿಕಾವಲ್ ಬಳಿಯ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್ (Sharath MS) ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿವಿಧ ಸಾಧಕರಿಗೆ ಮಾಜಿ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ್ ಸೇರಿ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಆದರ್ಶ ರತ್ನ, ದ್ರೋಣ ರತ್ನ, ಕನ್ನಡ ರತ್ನ, ಸಾಧನೆ ರತ್ನ, ದಂತ ರತ್ನ ಸೇರಿ ಹಲವು ಪ್ರಶಸ್ತಿಗಳನ್ನು ನೀಡಲಾಯಿತು.

ರಾಷ್ಟ್ರ ಪ್ರಶಸ್ತಿ, ಮುಖ್ಯಮಂತ್ರಿ ಪದಕ ಪುರಸ್ಕೃತ ದಕ್ಷ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಸೇವಕರನ್ನು, ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪರೀಕ್ಷೆ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್ ಅವರು ಮಾತ್ರವಲ್ಲದೆ ಪತ್ರಕರ್ತರಾದ ಟಿವಿ 5 ವಾಹಿನಿಯ ಅರ್ಚನ ಶರ್ಮ, ಸುವರ್ಣ ನ್ಯೂಸ್‌ನ ಸುಗುಣ ಶ್ರೀನಿವಾಸ್‌, ಕರ್ನಾಟಕ ಡಿಜಿಟಲ್‌ ಟಿವಿಯ ಶಿವು ಬೆಸಗರಹಳ್ಳಿ, ಟಿವಿ 9 ಮಾಲತೇಶ್‌ ಜಗ್ಗೀನ್‌, ಪವರ್‌ ಟಿವಿಯ ಲೋಕೇಶ್‌ ಗೌಡ, ನ್ಯೂಸ್‌ 18 ವಾಹಿನಿಯ ಭೈರಹನುಮಯ್ಯ, ಝೀ ಕನ್ನಡ ವಾಹಿನಿಯ ಪ್ರಕಾಶ್‌ ಎಚ್.ಟಿ. ಅವರು ಸಹ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ | ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಡಾ. ಸುಮಾ ಶಿವಾನಂದ ದೇಸಾಯಿ ಆಯ್ಕೆ

ಜನ್ಮ ಭೂಮಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಅವರು ಮಾತನಾಡಿ, ನಮ್ಮ ಸಂಘದಿಂದ ರಾಜ್ಯದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಸಾಧಕರಿಗೆ ಕಳೆದ ಹಲವು ವರ್ಷಗಳಿಂದ ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಿಕೊಂಡು ಬಂದಿದ್ದು, ವಿವಿಧ ರಂಗದಲ್ಲಿ ಸಾಮಾಜಿಕ ಏಳಿಗೆಗಾಗಿ ದುಡಿದ ಸಾಧಕರನ್ನು ಈ ಬಾರಿಯೂ ಗುರುತಿಸಲಾಗಿದೆ ಎಂದು ತಿಳಿಸಿದರು.

ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Vistara Kannada Sambhrama: ಗುರುಕಿರಣ್‌ ಗಾಯನ ಮೋಡಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

Vistara Kannada Sambhrama: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ವಿಸ್ತಾರ ಕನ್ನಡ ಸಂಭ್ರಮದ ಹಿನ್ನೆಲೆಯಲ್ಲಿ ಗುರುಕಿರಣ್‌ ಅವರ ಲೈವ್‌ ಮ್ಯೂಸಿಕ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು.

VISTARANEWS.COM


on

gurukiran music
Koo

ಬೆಂಗಳೂರು: ವಿಸ್ತಾರ ಕನ್ನಡ ಸಂಭ್ರಮದಲ್ಲಿ (Vistara Kannada Sambhrama) ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್‌ ಮತ್ತು ತಂಡ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಳಿಸಿತು. ನಗರದ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಗುರುಕಿರಣ್‌ ಲೈವ್‌ ಮ್ಯೂಸಿಕ್‌ ಶೋನಲ್ಲಿ ಸಂಗೀತದ ಅಲೆಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಎಂಟಿವಿ ಸುಬ್ಬಲಕ್ಷ್ಮಿಗೆ ಬರಿ ಓಳು, ರಾ..ರಾ ರಕ್ಕಮ್ಮ, ಬಂಡಲ್‌ ಬಡಾಯಿ ಮಹದೇವ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿ ವಿವಿಧ ಸೂಪರ್‌ ಹಿಟ್‌ ಹಾಡುಗಳಿಗೆ ನೆರೆದಿದ್ದ ಜನರು ಹುಚ್ಚೆದ್ದು ಕುಣಿದರು. ಸಂಗೀತ ಕಾರ್ಯಕ್ರಮ ವೀಕ್ಷಿಸಲು ವಿವಿಧೆಡೆಯಿಂದ ನೂರಾರು ಜನರು ಆಗಮಿಸಿದ್ದರು.

ಇದನ್ನೂ ಓದಿ | Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ ಹೆಂಗಳೆಯರು

ಹೊಸತನಗಳ ಮೂಲಕ ಒಂದೇ ವರ್ಷದಲ್ಲಿ ಮನೆಮಾತಾದ ನಾಡಿನ ಜನಪ್ರಿಯ ಮಾಧ್ಯಮ ಸಂಸ್ಥೆ ವಿಸ್ತಾರ ನ್ಯೂಸ್‌ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮದ ಭಾಗವಾಗಿ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ಶನಿವಾರ ಬೆಳಗ್ಗೆ 9 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಾಡು, ಸಂಗೀತ, ಕನ್ನಡ ಸಾಹಿತ್ಯದ ಗೋಷ್ಠಿಗಳು, ನಟ-ನಟಿಯರು, ಕಿರುತೆರೆ ಕಲಾವಿದರ ಜತೆ ನೇರ ಮುಕ್ತ ಮಾತುಕತೆ, ಯಕ್ಷಗಾನ ವೈಭವ ನೋಡುಗರ ಗಮನ ಸೆಳೆದವು.

Continue Reading

ಕರ್ನಾಟಕ

Vistara Kannada Sambhrama: ಹಣ ಗಳಿಕೆ ಉದ್ದೇಶದಿಂದ ವಿಸ್ತಾರ ನ್ಯೂಸ್‌ ಆರಂಭಿಸಿಲ್ಲ: ಎಚ್‌.ಎಸ್‌. ಶೆಟ್ಟಿ

Vistara Kannada Sambhrama: ವಿಸ್ತಾರ ನ್ಯೂಸ್‌ ಆರಂಭವಾಗಿ ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ಕಷ್ಟ ಸುಖವನ್ನು ಕರಗತ ಮಾಡಿಕೊಂಡಿದ್ದೇವೆ ಎಂದು ವಿಸ್ತಾರ ನ್ಯೂಸ್‌ ಕಾರ್ಯ ನಿರ್ವಾಹಕ ಚೇರ್ಮನ್ ಡಾ. ಎಚ್‌. ಎಸ್‌. ಶೆಟ್ಟಿ ತಿಳಿಸಿದರು.

VISTARANEWS.COM


on

Dr HS Shetty
Koo

ಬೆಂಗಳೂರು: ವಿಸ್ತಾರ ವಾಹಿನಿ ಆರಂಭಿಸುವಾಗ, ನೀವು ವ್ಯವಹಾರದಲ್ಲಿರುವವರು, ನಿಮಗೆ ಈ ಮಾಧ್ಯಮದ ವ್ಯವಹಾರ ಯಾಕೆ ಬೇಕು ಎಂದು ಕೆಲವರು ಪ್ರಶ್ನಿಸಿದ್ದರು. ಆದರೆ, ನಾವು ಖಂಡಿತವಾಗಿಯೂ ಮಾಧ್ಯಮವನ್ನು ಹಣಕ್ಕಾಗಿ ಅಥವಾ ಲಾಭದ ಉದ್ದೇಶಕ್ಕೆ ಮಾಡಿಲ್ಲ. ಒಂದು ಉತ್ತಮ ಧ್ಯೇಯವನ್ನು ಇಟ್ಟುಕೊಂಡು ಚಾನೆಲ್‌ (Vistara Kannada Sambhrama) ಮಾಡಿದ್ದೇವೆ ಎಂದು ವಿಸ್ತಾರ ನ್ಯೂಸ್‌ ಕಾರ್ಯ ನಿರ್ವಾಹಕ ಚೇರ್ಮನ್ ಡಾ. ಎಚ್‌. ಎಸ್‌. ಶೆಟ್ಟಿ ತಿಳಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಮನುಷ್ಯನಿಗೆ ಬೇರೆ ಬೇರೆ ಕನಸುಗಳು, ಆಶಯ ಇರುತ್ತದೆ. ನಮಗೆ ಯಾವುದು ಮಾಡಲು ಸಾಧ್ಯವಿಲ್ಲವೋ, ಬೇರೆ ಯಾರಾದರೂ ಒಳ್ಳೆ ಕೆಲಸ ಮಾಡುತ್ತಿದ್ದರೆ ಅಂತಹವರಿಗೆ ಸಹಕಾರ ಕೊಡಬೇಕು ಎಂದು ನಾವೆಲ್ಲಾ ಸೇರಿ ವಿಸ್ತಾರ ನ್ಯೂಸ್‌ ಶುರು ಮಾಡಿದ್ದೇವೆ ಎಂದು ಹೇಳಿದರು.

ಒಂದು ವರ್ಷವನ್ನು ನಾವು ಕಳೆದಿದ್ದೇವೆ, ಈ ಸಂದರ್ಭದಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ಕಷ್ಟ ಸುಖವನ್ನು ಕರಗತ ಮಾಡಿಕೊಂಡಿದ್ದೇವೆ. ಕೆಲವರು ಈ ಚಾನೆಲ್‌ ಎರಡು ಮೂರು ತಿಂಗಳಲ್ಲಿ ಚಾನೆಲ್‌ ಮುಚ್ಚಿಹೋಗುತ್ತದೆ ಎಂದು ಹೇಳುತ್ತಿದ್ದರು. ಆದರೆ, ಒಂದು ವರ್ಷ ಸುಗಮ, ಸುಸೂತ್ರವಾಗಿ ಚಾನೆಲ್‌ ನಡೆಸಿದ್ದೇವೆ. ಇನ್ನು ಮುಂದೆ ಕೂಡ ಈ ಅನುಭವವನ್ನು ಬಳಸಿಕೊಂಡು ವಿಸ್ತಾರ ವಾಹಿನಿಯನ್ನು ಉತ್ತಮವಾಗಿ ಮುನ್ನಡೆಸುತ್ತೇವೆ. ನಿಮ್ಮೆಲ್ಲರ ಸಹಕಾರ ಹಾಗೂ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದ ಎಂದು ತಿಳಿಸಿದರು.

ಜನರ ಪರವಾಗಿ ಮಿಡಿಯುತ್ತಿರುವ ವಿಸ್ತಾರ ನ್ಯೂಸ್‌ ಸಾಧನೆ ಬಿಚ್ಚಿಟ್ಟ ಹರಿಪ್ರಕಾಶ್‌ ಕೋಣೆಮನೆ

ಸದಭಿರುಚಿ ಉದ್ದೇಶದೊಂದಿಗೆ ಪ್ರಾರಂಭವಾದ ವಿಸ್ತಾರ ನ್ಯೂಸ್‌ ಇಂದು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದೆ. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪಾರದರ್ಶಕ ಮತ್ತು ಗುಣಮಟ್ಟದ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಅಲ್ಲದೆ, ಜನ ಪರ ಅಭಿಯಾನಗಳ ಮೂಲಕ ಜನರನ್ನೂ ಒಳಗೊಂಡು ಮುನ್ನಡೆಯುತ್ತಿದೆ. ಇಂದು ನಮ್ಮೂರ ಶಾಲೆ – ನಮ್ಮೆಲ್ಲರ ಶಾಲೆ ಅಭಿಯಾನದಿಂದ ರಾಜ್ಯದ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ನಾವು ಕಾರಣರಾಗಿದ್ದೇವೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ ಎಂದು ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಈಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ ಅವರು ನಮ್ಮ ವಿಸ್ತಾರ ಚಾನೆಲ್‌ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಅಂದು ಆಡಿದ ಮಾತನ್ನು ನಾನು ನೆನೆಪಿಸಿಕೊಳ್ಳಲು ಇಷ್ಟಪಡುತ್ತೇನೆ. ಒಂದು ಚಾನೆಲ್‌ ಅನ್ನು ನಡೆಸುವುದು ಕಷ್ಟಸಾಧ್ಯ. ಅದರಲ್ಲೂ ಒಂದು ಸದುದ್ದೇಶ ಇಟ್ಟುಕೊಂಡು, ಸದಭಿರುಚಿಯ ಸುದ್ದಿಗಳನ್ನು ನೀಡಿ ಉಳಿದುಕೊಳ್ಳುವುದು ಬಹಳ ಕಷ್ಟ. ಈ ಸವಾಲುಗಳನ್ನು ಮೀರಿ ವಿಸ್ತಾರ ನ್ಯೂಸ್‌ ಬೆಳೆಯಲಿ ಎಂದು ಹೇಳಿದ್ದರು. ಈಗ ವಿಸ್ತಾರ ನ್ಯೂಸ್‌ ಎಲ್ಲ ಸವಾಲುಗಳನ್ನು ಮೀರಿ ಮುನ್ನಡೆಯುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಹೇಳಿದರು.

ನಮ್ಮದು ಸದಾ ನಿಖರ – ಜನಪರ

ಜಗತ್ತು ಯಾವಾಗಲೂ ಚಲನಶೀಲತೆಯನ್ನು ಹೊಂದಿರುತ್ತದೆ. ಇದು ಎಲ್ಲದಕ್ಕೂ ಅನ್ವಯವಾಗುತ್ತದೆ. ಮುದ್ರಣ ಮಾಧ್ಯಮದ ಸಹಿತ ಸುದ್ದಿ ವಾಹಿನಿಯೂ ಸಹ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಬರುತ್ತಿದೆ ಎಂಬ ಮಾತು ಈಗ ಕೇಳಿ ಬರುತ್ತಿದೆ. ಆದರೆ, ಈಗಿನ ಬದಲಾವಣೆಗಳಿಗೆ ತಕ್ಕಂತೆ ನಮ್ಮಲ್ಲಿ ನಾವು ಬದಲಾವಣೆಯನ್ನು ತಂದುಕೊಂಡರೆ ಸಾಧನೆ ಸುಲಭವಾಗುತ್ತದೆ. ನಾವು ಆ ನಿಟ್ಟಿನಲ್ಲಿ ಈಗ ಹೆಜ್ಜೆ ಹಾಕಿ ಸಾಧನೆ ಮಾಡಿದ್ದೇವೆ. ನಮ್ಮ ಚಾನೆಲ್‌ನ ಧ್ಯೇಯ ವಾಕ್ಯವೇ ನಿಖರ – ಜನಪರ ಎಂಬುದಾಗಿದೆ. ನಾವು ಸುದ್ದಿಯನ್ನು ನಿಖರವಾಗಿ ಬಿತ್ತರಿಸುವುದರ ಜತೆಗೆ ಜನರ ಪರವಾದಂತಹ ಸುದ್ದಿಗಳನ್ನು ನೀಡುತ್ತೇವೆ. ಅದಕ್ಕೇ ನಾವು ಜನಪ್ರಿಯ ಎಂದು ಹಾಕಿಕೊಂಡಿಲ್ಲ. ಜನಪರ ಎಂದು ಹಾಕಿಕೊಂಡಿರುವುದೇ ಸದಾ ನಾವು ಜನರ ಪರ ಎಂಬುದನ್ನು ಹೇಳಲು ಎಂದು ಹರಿಪ್ರಕಾಶ್‌ ಕೋಣೆಮನೆ ತಿಳಿಸಿದರು.

ಇದನ್ನೂ ಓದಿ | Vistara Kannada Sambhrama : ವಿಸ್ತಾರ ನ್ಯೂಸ್‌ನ ಶೈಕ್ಷಣಿಕ, ಜನಪರ ಕಾಳಜಿ ಶ್ಲಾಘನೀಯ: ಡಿ.ಕೆ. ಶಿವಕುಮಾರ್‌ ಮೆಚ್ಚುಗೆ

ನಾವು ವಿಷಯವನ್ನು ಎತ್ತರಿಸುತ್ತೇವೆ – ಧ್ವನಿಯನ್ನಲ್ಲ

ನಾವು ಧ್ವನಿಯನ್ನು ಎತ್ತರ ಮಾಡುವುದಿಲ್ಲ. ವಿಷಯವನ್ನು ಎತ್ತರಿಸುತ್ತೇವೆ ಎಂಬುದನ್ನು ನಮ್ಮ ಸುದ್ದಿವಾಹಿನಿಯನ್ನು ಪ್ರಾರಂಭ ಮಾಡುವ ದಿನದಿಂದಲೂ ನಾವು ಹೇಳುತ್ತಾ ಬಂದಿದ್ದೇವೆ. ಅಂದರೆ ನಾವೂ ಹೇಳುತ್ತೇವೆ, ಜನರು ಹೇಳುವುದನ್ನೂ ಕೇಳುತ್ತೇವೆ. ನಮಗೂ ಒಂದು ಹೊಣೆಗಾರಿಕೆ ಇದೆ. ನಾವು ಸಿಎಂ, ಡಿಸಿಎಂ, ಪ್ರಧಾನ ಮಂತ್ರಿ, ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು. ಹಾಗಾದರೆ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬಾರದಾ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ನಾವು ವಿಸ್ತಾರ ನ್ಯೂಸ್‌ ಚಾನೆಲ್‌ ಅನ್ನು ಪ್ರಾರಂಭ ಮಾಡಿದ್ದೇವೆ. ಇದಕ್ಕಾಗಿಯೇ ನಾವು ನಮ್ಮ ಘೋಷವಾಕ್ಯವಾಗಿ ನಿಖರ ಹಾಗೂ ಜನಪರ ಎಂದು ಇಟ್ಟಿರುವುದು ಎಂದು ಹೇಳುವ ಮೂಲಕ ವಿಸ್ತಾರ ನ್ಯೂಸ್‌ನ ಸದ್ದುದ್ದೇಶವನ್ನು ಹರಿಪ್ರಕಾಶ್‌ ಕೋಣೆಮನೆ ಅವರು ಜನರ ಮುಂದೆ ತೆರೆದಿಟ್ಟರು.

ಡಿಸಿಎಂ ಡಿ.ಕೆ. ಶಿವಕುಮಾರ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ವಿಸ್ತಾರ ನ್ಯೂಸ್‌ ವ್ಯವಸ್ಥಾಪಕ ನಿರ್ದೇಶಕ ಎಚ್.‌ ವಿ. ಧರ್ಮೇಶ್‌, ನಿರ್ದೇಶಕ ಶ್ರೀನಿವಾಸ ಹೆಬ್ಬಾರ್‌, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕ ಕಿರಣ್‌ ಕುಮಾರ್‌ ಡಿ.ಕೆ. ಸೇರಿ ಹಲವು ಗಣ್ಯರು‌, ಕಲಾಸಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Vistara Kannada Sambhrama : ವಿಸ್ತಾರ ನ್ಯೂಸ್‌ನ ಶೈಕ್ಷಣಿಕ, ಜನಪರ ಕಾಳಜಿ ಶ್ಲಾಘನೀಯ: ಡಿ.ಕೆ. ಶಿವಕುಮಾರ್‌ ಮೆಚ್ಚುಗೆ

Vistara Kannada Sambhrama : ವಿಸ್ತಾರ ನ್ಯೂಸ್‌ ಶೈಕ್ಷಣಿಕವಾಗಿ ನೀಡುತ್ತಿರುವ ಕೊಡುಗೆಯನ್ನು ಹೀಗೆಯೇ ಮುಂದುವರಿಸಲಿ. ಅಲ್ಲದೆ, ಈ ನಿಟ್ಟಿನಲ್ಲಿ ಸರ್ಕಾರ ಮಾಡುತ್ತಿರುವ ಶೈಕ್ಷಣಿಕ ಕೆಲಸಗಳಿಗೂ ಸಹಕಾರ ನೀಡಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಶಿಸಿದ್ದಾರೆ.

VISTARANEWS.COM


on

DK Shivakumar in vistara kannada sambrama
Koo

ಬೆಂಗಳೂರು: ವಿಸ್ತಾರ ನ್ಯೂಸ್‌ ಶೈಕ್ಷಣಿಕವಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಒತ್ತು ನೀಡುವ ಕೆಲಸವನ್ನು ಮಾಡುತ್ತಿದೆ. ಅವುಗಳಿಗೆ ಮೂಲಸೌಕರ್ಯವನ್ನು ಒದಗಿಸುವಂತಹ ಉತ್ತಮ ಕಾರ್ಯ ಮಾಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ. ಈ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಜನರಿಗಾಗಿ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿಸ್ತಾರ ಕನ್ನಡ ಸಂಭ್ರಮ (Vistara Kannada Sambhrama) ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು.

ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ” (Vistara Kannada Sambhrama) ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ವಿಸ್ತಾರ ನ್ಯೂಸ್‌ ಶೈಕ್ಷಣಿಕವಾಗಿ ನೀಡುತ್ತಿರುವ ಕೊಡುಗೆಯನ್ನು ಹೀಗೆಯೇ ಮುಂದುವರಿಸಲಿ. ಅಲ್ಲದೆ, ಈ ನಿಟ್ಟಿನಲ್ಲಿ ಸರ್ಕಾರ ಮಾಡುತ್ತಿರುವ ಶೈಕ್ಷಣಿಕ ಕೆಲಸಗಳಿಗೂ ಸಹಕಾರ ನೀಡಲಿ ಎಂದು ಆಶಿಸಿದರು.

DK Shivakumar in vistara kannada sambrama

ಶೈಕ್ಷಣಿಕ ಪ್ರಗತಿಯ ಕನಸು ಬಿಚ್ಚಿಟ್ಟ ಡಿಕೆಶಿ

ನನಗೂ ಸಹ ರಾಜ್ಯದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕು ಎಂಬ ಗುರಿ ಇದೆ. ಈ ಕಾರಣಕ್ಕಾಗಿಯೇ ನಮ್ಮ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದೆವು. ಈಗ ಆ ನಿಟ್ಟಿನಲ್ಲಿ ನಮ್ಮ ಕಾರ್ಯ ಸಾಗಿದೆ. ಇಡೀ ರಾಜ್ಯದಲ್ಲಿ ನೂತನ ಮಾದರಿಯ “ಕರ್ನಾಟಕ ಪಬ್ಲಿಕ್‌ ಶಾಲೆ”ಯನ್ನು ಪ್ರಾರಂಭಿಸಲು ನಾನು ಮುಂದಾಗಿದ್ದೇನೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಇದರ ಮೂಲ ಉದ್ದೇಶವೆಂದರೆ ಶಿಕ್ಷಣಕ್ಕಾಗಿ ಗ್ರಾಮೀಣ ಮಕ್ಕಳು ನಗರಗಳಿಗೆ ಬರಬಾರದು. ಅವರು ಇದ್ದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಅವರಿಗೆ ಸಿಗುವಂತಾಗಬೇಕು. ಹಾಗಾಗಿ ರಾಜ್ಯಾದ್ಯಂತ ಎರಡು ಸಾವಿರ ಸರ್ಕಾರಿ ಶಾಲೆಗಳನ್ನು ಮಾದರಿ “ಪಬ್ಲಿಕ್‌ ಶಾಲೆ”ಗಳಾಗಿ ಪರಿವರ್ತಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಅದೂ ಸಹ ಸರ್ಕಾರದ ಒಂದು ಪೈಸೆ ಖರ್ಚು ಇಲ್ಲದೆ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು.

ಇದನ್ನೂ ಓದಿ: Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮದಲ್ಲಿ ಹೇಗಿತ್ತು ಮನರಂಜನೆಯ ಸುಗ್ಗಿ; ಇಲ್ಲಿವೆ ಫೋಟೊ ಝಲಕ್‌

ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಕಾರ್ಪೊರೇಟ್‌ನವರೊಂದಿಗೆ ಕೈಜೋಡಿಸಿ ಸಿಎಸ್‌ಆರ್‌ ನಿಧಿ ಮೂಲಕ ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯುವ ಗುರಿ ನಮ್ಮದಾಗಿದೆ. ಕಾರ್ಪೋರೇಟ್‌ ಕಂಪನಿಗಳು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಮಾದರಿ ಶಾಲೆಯನ್ನಾಗಿ ಮಾಡುವ ಗುರಿಯನ್ನು ನಾನು ಹೊಂದಿದ್ದೇನೆ. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಸಹ ನಮಗೆ ಸಹಕಾರ ನೀಡಲಿ ಎಂದು ಡಿ.ಕೆ. ಶಿವಕುಮಾರ್‌ ಕೋರಿದರು.

ಸುದ್ದಿ ವಾಹಿನಿ ನಡೆಸುವುದು ಸುಲಭವಲ್ಲ

ಸುದ್ದಿ ವಾಹಿನಿಯನ್ನು ನಡೆಸುವುದು ಸುಲಭದ ಕೆಲಸ ಅಲ್ಲ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗವು ಪ್ರಜಾಪ್ರಭುತ್ವದ ಮೂರು ಅಂಗಗಳಾಗಿದ್ದು, ಆಧಾರ ಸ್ತಂಭಗಳಾಗಿವೆ. ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಪರಿಗಣಿಸಲಾಗುತ್ತದೆ. ಸುದ್ದಿ ವಾಹಿನಿಯನ್ನು ನಾನೂ ನಡೆಸಲು ಮುಂದಾದೆ. ಆದರೆ, ನನ್ನ ಕೈಯಲ್ಲಾಗದೆ ಹಿಂದೇಟು ಹಾಕಿದೆ. ಆದರೆ, ವಿಸ್ತಾರ ನ್ಯೂಸ್‌ನ ಈ ಏಳಿಗೆಯನ್ನು ನಾನು ಶ್ಲಾಘಿಸುತ್ತೇನೆ. ನಾನು ಯಾವುದೇ ಮಾಧ್ಯಮದೆದುರು ಬಿಚ್ಚು ಮನಸ್ಸಿನಿಂದ ಮಾತನಾಡಿಲ್ಲ. ಆದರೆ, ವಿಸ್ತಾರ ಮಾಧ್ಯಮಕ್ಕೆ ಸಂದರ್ಶನ ನೀಡಿದಾಗ ನಾನು ನನ್ನ ಮುಕ್ತ ಮನಸ್ಸಿನಿಂದ ಹೇಳಿಕೆ ನೀಡಿದ್ದೇನೆ.

ಸುದ್ದಿಗಳ ವೈಭವೀಕರಣ ಬೇಡ

ನಮ್ಮ ಪ್ರತಿ ಹೆಜ್ಜೆಯನ್ನು ಪ್ರತಿಯೊಬ್ಬರೂ ಗಮನಿಸುತ್ತಾರೆ. ಆದರೆ, ರಾಜಕಾರಣಿಗಳನ್ನು ಟಿವಿಯಲ್ಲಿ ಹೀರೋಗಳನ್ನಾಗಿಯೂ ಮಾಡುತ್ತಾರೆ. ವಿಲನ್‌ಗಳನ್ನಾಗಿಯೂ ಮಾಡುತ್ತಾರೆ. ನಮ್ಮನ್ನು ಈಗ ಜೈಲು – ಬೇಲು ಎಂದೆಲ್ಲ ತೋರಿಸಿ, ನಮ್ಮನ್ನು ನೋಡಿದರೆ ಕಳ್ಳ ಕಳ್ಳ ಎಂದು ಕರೆಯುವ ಪರಿಸ್ಥಿತಿ ಬಂದಿದೆ. ಸುದ್ದಿಗಳ ವೈಭವೀಕರಣ ಇಲ್ಲದೆ ಎಲ್ಲ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಕರ್ನಾಟಕ ರಾಜ್ಯಕ್ಕೆ 50 ವರ್ಷ ತುಂಬಿದೆ. ಇದನ್ನು ಇಡೀ ಕರ್ನಾಟಕ ಆಚರಣೆ ಮಾಡುತ್ತಿದೆ. ಹಂಪಿಯಲ್ಲಿ ಕಾರ್ಯಕ್ರಮ ಮಾಡಿದೆವು. ನಿನ್ನೆ ಗದಗದಲ್ಲಿ ಕನ್ನಡ ಜ್ಯೋತಿಗೆ ಚಾಲನೆ ನೀಡಿದೆವು. ಇದು ಇಡೀ ಕರ್ನಾಟಕವನ್ನು ಸುತ್ತಿ ಬರುತ್ತದೆ. ಇಂದು ಕನ್ನಡದ ಸಂಭ್ರಮವನ್ನು ವಿಸ್ತಾರ ನ್ಯೂಸ್‌ ಚಾನೆಲ್‌ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Dinesh Gundu rao in vistara kannada sambrama

ವಿಸ್ತಾರದ ವಿನೂತನ ಕಾರ್ಯಕ್ರಮ ಬೇರೆಲ್ಲೂ ಇಲ್ಲ: ದಿನೇಶ್‌ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ವಿಸ್ತಾರ ನ್ಯೂಸ್‌ ವಿನೂತನವಾದ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದೆ. ಇಂತಹ ಒಂದು ಕಾರ್ಯಕ್ರಮವನ್ನು ಯಾವ ಚಾನೆಲ್‌ಗಳೂ ಮಾಡಿಲ್ಲ ಎಂದು ನನಗೆ ಅನ್ನಿಸುತ್ತದೆ. ಇಂದು ನಾವು ಬಹಳಷ್ಟು ಸುದ್ದಿಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ನೋಡುತ್ತಿರುತ್ತೇವೆ. ಆದರೆ, ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಎಂದು ತಿಳಿಯುವುದು ಕಷ್ಟವಾಗಿದೆ. ಗೊಂದಲದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.

ಪತ್ರಿಕೆ, ಟಿವಿ ಮೀಡಿಯಾ ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿಗಳ ವೈಭವೀಕರಣ ಆಗುತ್ತಿದೆ. ಜನರನ್ನು ಸೆಳೆಯುವ ಉದ್ದೇಶವೇ ಹೆಚ್ಚಾಗಿದೆ. ಆ ಸುದ್ದಿಯ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ನೋಡದೇ ಸುದ್ದಿ ಬಿತ್ತರಿಸುವ ಪದ್ಧತಿ ಶುರುವಾಗಿದೆ. ಇಂಥ ಸಂದರ್ಭದಲ್ಲಿ ಗುಣಮಟ್ಟದ, ನೈಜ ಸುದ್ದಿಯನ್ನು ಕೊಡುವ ಸಂಕಲ್ಪದೊಂದಿಗೆ ವಿಸ್ತಾರ ನ್ಯೂಸ್‌ ಬಿತ್ತರಗೊಳ್ಳುತ್ತಿರುವುದು ಶ್ಲಾಘನೀಯ. ವಿಸ್ತಾರವನ್ನು ಯಾವ ರೀತಿಯಾಗಿ ಪ್ರಾರಂಭ ಮಾಡಲಾಗಿದೆಯೋ ಈಗಲೂ ಸಹ ಯಾವುದೇ ರಾಜಿ ಇಲ್ಲದೆ ಅದೇ ರೀತಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂದು ಹೇಳಲು ನನಗೆ ಸಂತಸವಾಗುತ್ತದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಬಹಳಷ್ಟು ಮಾಧ್ಯಮಗಳು ಒಳ್ಳೆಯ ಉದ್ದೇಶ ಇಟ್ಟುಕೊಂಡು ಪ್ರಾರಂಭವಾಗುತ್ತವೆ. ಆದರೆ, ಕಾಲಾ ನಂತರದಲ್ಲಿ ಆ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗದೆ, ಕೆಲವೊಂದು ವಿಚಾರಕ್ಕೆ ರಾಜಿ ಮಾಡಿಕೊಂಡು ಜನರ ಮೆಚ್ಚುಗೆಯನ್ನು ಕಳೆದುಕೊಂಡಿದ್ದನ್ನು ನಾವು ಕಂಡಿದ್ದೇವೆ. ಆದರೆ, ವಿಸ್ತಾರ ಯಾವುದೇ ವೈಭವೀಕರಣ ಇಲ್ಲದೆ ಸರಳವಾಗಿ ಮತ್ತು ನೇರವಾಗಿ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ ಅವರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಸೀರೆ – ಟೆಂಪ್ರೇಚರ್‌ ಬಗ್ಗೆ ಯೋಗರಾಜ್‌ ಭಟ್‌ ಮಾತು!

ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, ವಿಸ್ತಾರ ನ್ಯೂಸ್‌ನ್‌ ಕನ್ನಡ ಸಂಭ್ರಮದಲ್ಲಿ ಆಯೋಜಿಸಿದ್ದ “ಸೀರೆ ಸೊಬಗು” ಕಾರ್ಯಕ್ರಮದಲ್ಲಿ ಸೀರೆ ಉಟ್ಟ ನಾರಿಯರನ್ನು ನೋಡಿದೆ. ಆಗ ನನಗೆ ನಾನು ಬರೆದ ಒಂದು ಹಾಡು ನೆನಪಾಯಿತು. “ಸೀರೇಲಿ ಹುಡುಗೀರ ನೋಡಲೆಬಾರದು, ನಿಲ್ಲಲ್ಲ ಟೆಂಪ್ರೇಚರು” ಎಂಬ ಹಾಡನ್ನು ಬರೆದಿದ್ದು, ಅದು ಸೂಪರ್‌ ಹಿಟ್‌ ಕೂಡಾ ಆಯಿತು. ಆದರೆ, ನಾನು ಟೆಂಪ್ರೇಚರು ಎಂದು ಮೊದಲು ಬರೆದಿರಲಿಲ್ಲ. ಅದರ ಬದಲು ರೋಮಾಂಚನ ಎಂಬ ಪದವನ್ನು ಬಳಕೆ ಮಾಡಿದ್ದೆ. ಅಷ್ಟರಲ್ಲಿ ಬೆಂಗಳೂರಿನ ಒಂದು ಹುಡುಗರ ತಂಡವು ಶಾರ್ಟ್‌ ಫಿಲ್ಮ್‌ ಮಾಡಿ ನನ್ನ ಬಳಿಗೆ ತೆಗೆದುಕೊಂಡು ಬಂದಿದ್ದರು. ಆಗ ಈ ಹಾಡಿನ ಪ್ರಸ್ತಾಪವನ್ನು ಅವರ ಮುಂದೆ ಮಾಡಿದೆ. ಅಲ್ಲಿ ಒಬ್ಬ ಬೆಂಗಳೂರಿನ ಹುಡುಗ ನನ್ನ ಬಳಿ ಕೇಳುತ್ತಾ, “ರೋಮಾಂಚನ” ಎಂದರೆ ಏನು ಅಂದ! ಆತನಿಗೆ ಆ ಪದದ ಬಗ್ಗೆ ಗೊತ್ತೇ ಇರಲಿಲ್ಲ. ಕೊನೆಗೆ ನಾನು ಸಂದರ್ಭ ಸಹಿತ ವಿವರಿಸಿ, ಇದನ್ನು ನಿಮ್ಮ ಕನ್ನಡ ಭಾಷೆಯಲ್ಲಿ ಏನು ಹೇಳುತ್ತೀಯಾ ಎಂದು ಕೇಳಿದೆ. ಅದಕ್ಕಾತ, “ಟೆಂಪ್ರೇಚರ್‌” ಎಂಬ ಶಬ್ದವನ್ನು ಹೇಳಿದ. ಹಾಗಾಗಿ ಕನ್ನಡ ಹಾಡಿನಲ್ಲಿ “ಟೆಂಪ್ರೇಚರ್‌” ಎಂಬ ಇಂಗ್ಲಿಷ್‌ ಪದ ಸೇರಿಕೊಂಡಿತು ಎಂಬುದನ್ನು ವಿವರಿಸಿದರು.

ಹೊಸ ಚಾನೆಲ್‌ ಇರಬಹುದು, ಹೊಸ ವಾಹನ ಸೇರಿದಂತೆ ಯಾವುದೇ ಇದ್ದರೂ ಅದರಲ್ಲಿ ಪ್ರೋಗ್ರೆಸ್‌ ಇರಬೇಕು. ಆ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಸಾಗುತ್ತಿದೆ. ಇನ್ನು ಹೆಸರೇ ವಿಸ್ತಾರ ಎಂದಿದ್ದು, ಅದರಂತೆ ವಿಸ್ತೃತವಾಗಿ ಬೆಳೆಯುತ್ತಿದೆ. ಈ ಚಾನೆಲ್‌ ಒಂದು ವರ್ಷ ದಾಟಿದ್ದೇ ಗೊತ್ತಾಗಲಿಲ್ಲ. ಸೂಕ್ಷ್ಮ ಮನಸ್ಥಿತಿಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಚಾನೆಲ್‌ ಉತ್ತಮ ಗುಣಮಟ್ಟದೊಂದಿಗೆ ಸಾಗುತ್ತಿದೆ. ಈ ಕೆಲಸವು ಹೀಗೇ ಮುಂದುವರಿಯಲಿ ಎಂದು ಯೋಗರಾಜ್‌ ಭಟ್‌ ಹೇಳಿದರು.

Ragini dwivedi in vistara kannada sambrama

ವಿಸ್ತಾರ ಚಾನೆಲ್‌ಗೆ ಶುಭಾಶಯ ಹೇಳಿದ ರಾಗಿಣಿ

ನಟಿ ರಾಗಿಣಿ ದ್ವಿವೇದಿ ಮಾತನಾಡಿ, ನಾನು ಸಹ ಪತ್ರಿಕೋದ್ಯಮವನ್ನು ಓದಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ಬರುವ ಮುಂಚೆ ಅಭ್ಯಾಸ ಮಾಡಿದ್ದು, ಈ ಕ್ಷೇತ್ರದ ಸವಾಲುಗಳ ಬಗ್ಗೆ ತಿಳಿದಿದ್ದೇನೆ. ಇಂದು ಎಲ್ಲರಿಗೂ ಮಾಧ್ಯಮ ಎಂಬುದು ಬೇಕು. ವಿಸ್ತಾರ ನ್ಯೂಸ್‌ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ಉತ್ತಮ ಗುಣಮಟ್ಟದ ಸುದ್ದಿಗಳನ್ನು ಕೊಡುತ್ತಿದೆ. ವಿಸ್ತಾರ ಚಾನೆಲ್‌ಗೆ ಶುಭಾಶಯಗಳು ಎಂದು ಹೇಳಿದರು.

ಇದನ್ನೂ ಓದಿ: Vistara Kannada Sambhrama : ನಿಮ್ಮ ನಿರ್ಧಾರ ನಿಮ್ಮದಾಗಲಿ; ವಿಸ್ತಾರ ಕನ್ನಡ ಸಂಭ್ರಮದಲ್ಲಿ ಯುವಜನತೆಗೆ ರಮೇಶ್‌ ಕಿವಿಮಾತು

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ವಿಸ್ತಾರ ನ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕರಾಗಿರುವ ಕಿರಣ್‌ ಕುಮಾರ್‌ ಡಿ.ಕೆ. ಸೇರಿದಂತೆ ಹಲವು ಗಣ್ಯರು‌, ಕಲಾಸಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Continue Reading
Advertisement
CLAT Result 2024 announced
ದೇಶ48 seconds ago

CLAT Result 2024: ಕಾನೂನು ಪ್ರವೇಶ ಪರೀಕ್ಷೆ ಸಿಎಲ್ಎಟಿ ರಿಸಲ್ಟ್ ಪ್ರಕಟ

girl students fall ill
ಕರ್ನಾಟಕ35 mins ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್46 mins ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್1 hour ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ1 hour ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ2 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್2 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ2 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ3 hours ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ3 hours ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ7 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ10 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌