sslc-exam-2023-If you ask for a hall ticket, you will offer prayers at the temple. Private school cheats childrenSSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು - Vistara News

ಕರ್ನಾಟಕ

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಎಸ್‌ಎಸ್‌ಎಲ್‌ಸಿ ಎಕ್ಸಾಂನ (SSLC Exam 2023) ಮೊದಲ ದಿನವೇ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ಸಿಗದೆ ಕಿರಿಕಿರಿ ಅನುಭವಿಸಬೇಕಾಯಿತು. ಕ್ರೈಸ್ಟ್ ಕೃಪಾನಿಧಿ ಶಾಲೆಯಲ್ಲಿ ಹಾಲ್‌ ಟಿಕೆಟ್‌ ಕೇಳಿದ್ದರೆ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಕೊಡುವುದಾಗಿ ಹೇಳಿ ವಂಚಿಸಿದ್ದರೆ, ಮತ್ತೊಂದು ಸೇಂಟ್‌ ಮೇರಿಸ್‌ ಪಬ್ಲಿಕ್‌ ಶಾಲೆಯು ಸಪ್ಲಿಮೆಂಟರಿಗೆ ಎಕ್ಸಾಂ ಬರೆಸುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಕಂಗಾಲು ಮಾಡಿತ್ತು. ವಿಸ್ತಾರ ನ್ಯೂಸ್‌ ಈ ಬಗ್ಗೆ ವರದಿ ಮಾಡುತ್ತಿದ್ದಂತೆ ಶಿಕ್ಷಣ ಇಲಾಖೆ ಈ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara impact

ಬೆಂಗಳೂರು: ಬೆಂಗಳೂರಿನಲ್ಲಿ ಅನಧಿಕೃತ ಶಾಲೆಗಳ ಹಾವಳಿ ಮಿತಿಮೀರಿದೆ. ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡುತ್ತಿರುವ ಶಾಲೆಗಳ ಆಡಳಿತ ಮಂಡಳಿಯವರು ಅನುಮತಿ ಪಡೆದ ತರಗತಿಯಿಂದ ಮುಂದಿನ ತರಗತಿಗಳನ್ನು ಮಾಡಿ ಮಕ್ಕಳ ದಿಕ್ಕು ತಪ್ಪಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಬೆಂಗಳೂರಿನ ಕ್ರೈಸ್ಟ್ ಕೃಪಾನಿಧಿ ಶಾಲೆ, ಸೆಂಟ್‌ ಮೇರಿಸ್‌ ಪಬ್ಲಿಕ್‌ ಶಾಲೆಯಲ್ಲಿ ಅನಧಿಕೃತವಾಗಿ 10ನೇ ತರಗತಿ ಪಾಠ ಮಾಡಿ, ಬಳಿಕ ಹಾಲ್‌ ಕೊಡದೇ ಯಾಮಾರಿಸಿದ್ದರು. ಈ ವಿಷಯ ತಿಳಿದ ವಿಸ್ತಾರ ನ್ಯೂಸ್‌ ವರದಿ ಮಾಡುತ್ತಿದ್ದಂತೆ ಬಿಇಒ ಮಧ್ಯಪ್ರವೇಶ ಮಾಡಿ ವಂಚಿತ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಮಾಡಿದ್ದಾರೆ.

Sslc Exam 2023
9 ಮತ್ತು 10ನೇ ತರಗತಿಯನ್ನು ಅನಧಿಕೃತವಾಗಿ ನಡೆಸಿದ ಶಾಲೆ

ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಕೊಡುವುದಾಗಿ ಹೇಳಿ ವಂಚನೆ

ಎಸ್‌ಎಸ್‌ಎಲ್‌ಸಿ (SSLC Exam 2023) ವಿದ್ಯಾರ್ಥಿಗಳು ಹಾಲ್ ಟಿಕೆಟ್ (Hall Ticket) ಕೇಳಿದರೆ ರಾಘವೇಂದ್ರ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಕೊಡುವುದಾಗಿ ಹೇಳಿ ಖಾಸಗಿ ಶಾಲೆಯೊಂದು ವಂಚಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ರಾಜ್ಯದಲ್ಲಿ ಶುಕ್ರವಾರದಿಂದ (ಮಾ.31) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರುವಾಗಿದ್ದು, ಮೊದಲ ದಿನವೇ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ಗಾಗಿ ಪರದಾಡಬೇಕಾಯಿತು. ಕ್ರೈಸ್ಟ್ ಕೃಪಾನಿಧಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ಕೇಳಿದ್ದರೆ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಕೊಡುವುದಾಗಿ ಹೇಳಿ ವಂಚಿಸಿದ್ದಾರೆ. ಶಾಲೆಯ ವಂಚನೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದು ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಂದು ಕಡೆ ಅನಧಿಕೃತ ಖಾಸಗಿ ಶಾಲೆಯೊಂದರ ಯಡವಟ್ಟಿಗೆ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿಗೆ ಸಿಲುಕುವಂತಾಯಿತು. ಲಗ್ಗೆರೆಯಲ್ಲಿರುವ ಸೇಂಟ್‌ ಮೇರಿಸ್‌ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ಎಕ್ಸಾಂ ಹಾಲ್‌ ಟಿಕೆಟ್‌ ಕೇಳಿದ್ದರೆ ಸಪ್ಲಿಮೆಂಟರಿಯಲ್ಲಿ ಬರೆಸುವುದಾಗಿ ಆಡಳಿತ ಮಂಡಳಿ ಹೇಳುತ್ತಿತ್ತು. ಈ ಶಾಲೆಯಲ್ಲಿ ಓದುತ್ತಿರುವ ನಾಲ್ಕು ಎಸ್ಎಸ್ಎಲ್‌ಸಿ ಮಕ್ಕಳಿಗೆ ಹಾಲ್‌ ಟಿಕೆಟ್‌ ಸಿಗದೆ ಪರೀಕ್ಷೆಗೆ ಕೂರಲು ಸಾಧ್ಯವಾಗದೇ ಕಂಗಾಲಾಗಿದ್ದರು.

Sslc exam 2023
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು

ಕೇವಲ 5 ಕೊಠಡಿಗಳನ್ನು ಹೊಂದಿರುವ ಸೇಂಟ್‌ ಮೇರಿಸ್‌ ಶಾಲೆಯಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ಸೇರಿ 1 ರಿಂದ 10ನೇ ತರಗತಿವರೆಗೂ ಬೋಧನೆ ಮಾಡುತ್ತಿದೆ. ಆದರೆ ಈ ಶಾಲೆಯಲ್ಲಿ 1-8ನೇ ತರಗತಿಗೆ ಮಾತ್ರ ಶಾಲೆ ನಡೆಸಲು ಅವಕಾಶ ಇದ್ದು, 9 ಮತ್ತು 10ನೇ ತರಗತಿಯನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ.

ಈ ಬಗ್ಗೆ ಗೊತ್ತಿರದ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನ ಶಾಕ್‌ ಆಗಿದೆ. ಇದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿನಿ ನಂದಿನಿ ಪ್ರತಿಕ್ರಿಯೆ ನೀಡಿದ್ದು, ನಾನು ಎಕ್ಸಾಂಗೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದೇನೆ. ಹೇಗಾದರೂ ಮಾಡಿ ನನಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಳಲು ತೋಡಿಕೊಂಡಿದ್ದಾಳೆ. ಕೊನೇ ಕ್ಷಣದಲ್ಲಿ ಹಾಲ್‌ ಟಿಕೆಟ್‌ ಇಲ್ಲ, ಸಪ್ಲಿಮೆಂಟರಿ ಎಕ್ಸಾಂ ಬರಿರಿ ಎನ್ನುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ.

ಎರಡು ಶಾಲೆಗಳ 8 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದೆ ನಿರ್ಲಕ್ಷ್ಯವಹಿಸಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಖಾಸಗಿ ಶಾಲೆಯ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ವಿಸ್ತಾರ ನ್ಯೂಸ್‌ ಇಂಪ್ಯಾಕ್ಟ್‌; ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಬಿಇಒ ರಮೇಶ್‌

ಎರಡು ಶಾಲೆಗಳ ವಂಚನೆಯನ್ನು ವಿಸ್ತಾರ್‌ ನ್ಯೂಸ್‌ ಬಿತ್ತರಿಸುತ್ತಿದ್ದಂತೆ ವಿಷಯ ತಿಳಿದ ಶಿಕ್ಷಣ ಇಲಾಖೆಯ ಬಿಇಒ ರಮೇಶ್‌, ಪರೀಕ್ಷೆಯಿಂದ ವಂಚನೆಗೊಳಗಾದ ಎರಡೂ ಶಾಲೆಗಳ ಎಂಟು ವಿದ್ಯಾರ್ಥಿಗಳಿಗೆ ಎಕ್ಸಾಂ ಬರೆಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು

ಲಗ್ಗರೆಯ ಅನಿಕೇತನ ಶಾಲೆಯಲ್ಲಿ 8 ಮಕ್ಕಳಿಗೆ ಹಾಲ್ ಟಿಕೆಟ್ ನೀಡಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದರು. ಕೈಗೆ ಹಾಲ್‌ ಟಿಕೆಟ್‌ ಸಿಗುತ್ತಿದ್ದಂತೆ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ಕಣ್ಣೀರು ಹಾಕುತ್ತಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು.

ವಿಸ್ತಾರ ನ್ಯೂಸ್‌ಗೆ ಧನ್ಯವಾದ ತಿಳಿಸಿದ ಪೋಷಕರು

ನೀವೇ ನಮಗೆ ನ್ಯಾಯ ಕೊಡಿಸಿ, ನಮ್ಮ‌ ಮಗಳು ಪರೀಕ್ಷೆ ಬರೆಯುವಂತೆ ಮಾಡಿದ್ದು, ಕೇವಲ ನಮ್ಮ ಮಗಳು ಮಾತ್ರವಲ್ಲ, ಇನ್ನುಳಿದ ಏಳು ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಯ್ತು ಎಂದು ವಿಸ್ತಾರ ನ್ಯೂಸ್‌ಗೆ ಹಾಲ್ ಟಿಕೆಟ್ ವಂಚಿತ ವಿದ್ಯಾರ್ಥಿನಿ ನಂದಿನಿ ತಂದೆ-ತಾಯಿ ಧನ್ಯವಾದ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Lok Sabha Election 2024 : ಮಾವಿನ ಹಣ್ಣಿನ ಬ್ಯಾಗ್‌ ಬಿಡ್ರೀ ಎಂದವರ ಬಳಿ ಗರಿ ಗರಿ ನೋಟು; ಜಯನಗರದಲ್ಲಿ 4 ಕೋಟಿ ರೂ. ಸೀಜ್‌

Lok Sabha Election 2024 : ಕಂತೆ ಕಂತೆ ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗಲೇ ಕಿಡಿಗೇಡಿಗಳು ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನ ಜಯನಗರದ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ತಪಾಸಣೆಗೆ ಹೋದಾಗ ಕಿಡಿಗೇಡಿಗಳು ಮೊದಲು ಮಾವಿನ ಹಣ್ಣು ತುಂಬಿರುವ ಬ್ಯಾಗ್‌ ಬಿಡ್ರೀ ಎಂದಿದ್ದಾರೆ. ಆದರೆ ಬ್ಯಾಗ್‌ನಲ್ಲಿ 4 ಕೋಟಿ ರೂ. ಹಣ ಇರುವುದು ಪತ್ತೆಯಾಗಿದೆ.

VISTARANEWS.COM


on

By

Lok Sabha Election 2024
Koo

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ (Lok Sabha Election 2024) ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಕಣ್ತಪ್ಪಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿ ಕೋಟಿ ಹಣವನ್ನು ಸೀಜ್‌ ಮಾಡಲಾಗಿದೆ. ಬೆಂಗಳೂರಿನ ಜಯನಗರದ ಕಾರೊಂದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಕೋಟಿ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಅಪರಿಚಿತರಿಂದ ಬಂದ ಫೋನ್‌ ಕರೆ ಮೇರೆಗೆ ಅಧಿಕಾರಿಗಳು ಫೀಲ್ಡಿಗಿಳಿದಿದ್ದರು. ಜಯನಗರದಲ್ಲಿ ಬೆಂಜ್‌ ಕಾರಿನಲ್ಲಿ ಕೋಟಿ ಕೋಟಿ ಹಣವನ್ನು ಸಾಗಿಸಲಾಗುತ್ತಿದೆ ಎಂಬ ವಿಷಯ ತಿಳಿದಿತ್ತು. ಕಿಡಿಗೇಡಿಗಳು ಎರಡು ಕಾರು ಹಾಗೂ ಸ್ಕೂಟಿಯಲ್ಲಿ ಬಂದಿದ್ದರು. ಸ್ಕೂಟಿಯಲ್ಲಿದ್ದ ಕೋಟಿ ಕೋಟಿ ಹಣವನ್ನು ಕಾರಿಗೆ ಶಿಫ್ಟ್‌ ಮಾಡಿದ್ದರು.

ಕೂಡಲೇ ಎರಡು ಕಾರುಗಳನ್ನು ನಿಲ್ಲಿಸಿ ಪರಿಶೀಲನೆ ಮಾಡುವಾಗ ಮೊದಮೊದಲು ತಪಾಸಣೆಗೆ ಅಡ್ಡಿಪಡಿಸಿದ್ದಾರೆ. ಅನುಮಾನಬಾರದಿರಲಿ ಎಂದು ಸುಮಾರು 4 ಕೋಟಿ ರೂ. ಹಣವನ್ನು ಚೀಲವೊಂದರಲ್ಲಿ ತುಂಬಿಸಿದ್ದರು. ಅಧಿಕಾರಿಗಳು ತಪಾಸಣೆಗೆ ಮುಂದಾದ ಮಾವಿನ ಹಣ್ಣಿನ ಬ್ಯಾಗ್‌ ಅದು ಬಿಡ್ರೀ ಎಂದು ದಬಾಯಿಸಿ, ಕಾರು ಲಾಕ್‌ ಮಾಡಿದ್ದಾರೆ.

ಆದರೆ ಇವರ ನಡೆಯಿಂದ ಮತ್ತಷ್ಟು ಅನುಮಾನಗೊಂಡ ಚುನಾಣಾಧಿಕಾರಿಗಳು ಕಾರಿನ ಗ್ಲಾಸ್‌ ಒಡೆದು ಪರಿಶೀಲನೆ ನಡೆಸಿದಾಗ ನಾಲ್ಕು ಕೋಟಿ ರೂ. ಹಣ ಪತ್ತೆಯಾಗಿದೆ. ಕಂತೆ ಕಂತೆ ಹಣ ಸಿಗುತ್ತಿದ್ದಂತೆ ಕಾರಿನಲ್ಲಿದ್ದ ಐವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ, 4 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಹಣ ತುಂಬಿದ್ದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗುವುದು ಕಷ್ಟ ಸಾಧ್ಯ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರು ಸೋಲೊಪ್ಪಿಕೊಂಡರೇ ಎಂಬ ಪ್ರಶ್ನೆಗಳು ಮೂಡಿವೆ. ಇಂಡಿಯಾ ಒಕ್ಕೂಟದಿಂದ ಪಶ್ಚಿಮ ಬಂಗಾಳದ ಟಿಎಂಸಿ ಸೇರಿ ಹಲವು ಪಕ್ಷಗಳು ಹೊರನಡೆದಿರುವುದೇ ಸಿದ್ದರಾಮಯ್ಯ ಹೇಳಿಕೆಗೆ ಕಾರಣ ಎನ್ನಲಾಗುತ್ತಿದೆ.

VISTARANEWS.COM


on

CM Siddaramaiah
Koo

ಬೆಂಗಳೂರು: ಕರ್ನಾಟಕ (Karnataka) ಸೇರಿ ದೇಶಾದ್ಯಂತ ಲೋಕಸಭೆ ಚುನಾವಣೆ (Lok Sabha Election 2024) ಕಾವು ಬೇಸಿಗೆಯ ಬಿಸಿಲಿಗಿಂತ ಜಾಸ್ತಿ ಇದೆ. ಕರ್ನಾಟಕದಲ್ಲಂತೂ ಚುನಾವಣೆಯ ಭರಾಟೆ ದಿನೇದಿನೆ ಜಾಸ್ತಿಯಾಗುತ್ತಲೇ ಇದೆ. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ, ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ, “ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ (India Bloc) ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಕಡಿಮೆ” ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಸಿದ್ದರಾಮಯ್ಯ ಅವರು ಹೀಗೆ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. “ಲೋಕಸಭೆ ಚುನಾವಣೆ ವೇಳೆ ಇಂಡಿಯಾ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಸಿಗುವುದು ಕಷ್ಟಸಾಧ್ಯ. ಹಾಗಂತ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ಇಂಡಿಯಾ ಒಕ್ಕೂಟವು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಒಡಿಶಾದ ನವೀನ್‌ ಪಟ್ನಾಯಕ್‌ ಸೇರಿ ಹಲವು ರಾಜ್ಯಗಳ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುತ್ತದೆ” ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ದೇಶದಲ್ಲಿ ಬಿಜೆಪಿಯು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಅವರು ಕೂಡ ಎನ್‌ಡಿಎ ಎಂಬ ಮೈತ್ರಿಕೂಟವನ್ನು ರಚಿಸಿಯೇ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅವರು ಗಳಿಸುವ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ, ಬಿಜೆಪಿಯೊಂದೇ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರಕ್ಕೆ ಬಂದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗಲು ಸಾಧ್ಯವೇ ಇಲ್ಲ” ಎಂದಿದ್ದಾರೆ.

ಸಿದ್ದು-ಶ್ರೀನಿವಾಸ ಪ್ರಸಾದ್‌ ಭೇಟಿ

ಪ್ರಚಾರದ ಮಧ್ಯೆಯೇ ಸಿದ್ದರಾಮಯ್ಯ ಅವರು ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ತೆರಳಿ ಕೆಲ ಹೊತ್ತು ಚರ್ಚಿಸಿದರು. ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ಅವರಿಂದ ಶ್ರೀನಿವಾಸ ಪ್ರಸಾದ್‌ ಅವರು ದೂರವೇ ಉಳಿದಿದ್ದರು. ಈಗ ಏಕಾಏಕಿ ಸಿದ್ದರಾಮಯ್ಯ ಅವರೇ ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿದರು. ಭೇಟಿಯ ಬೆನ್ನಲ್ಲೇ, “ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ, ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್‌ ಪರವಾದ ಅಲೆ ಇದೆ” ಎಂದು ಹೇಳಿದ್ದಾರೆ. ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ನಾನು, ಶ್ರೀನಿವಾಸ ಪ್ರಸಾದ್‌ ಅವರು ಬಹುಕಾಲದ ಗೆಳೆಯರು. ರಾಜಕೀಯ ನಿವೃತ್ತಿ ಬಳಿಕ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿಯಾದೆ ಅಷ್ಟೆ. ಇದು ರಾಜಕೀಯದ ಭೇಟಿ ಅಲ್ಲ” ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಶ್ರೀನಿವಾಸ ಪ್ರಸಾದ್!‌ ಏನಿದರ ಮರ್ಮ?

Continue Reading

ಕರ್ನಾಟಕ

ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಶ್ರೀನಿವಾಸ ಪ್ರಸಾದ್!‌ ಏನಿದರ ಮರ್ಮ?

ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಸ್ವಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿಯಾಗಿದ್ದಾರೆ. ಇದರ ಬೆನ್ನಲ್ಲೇ, ಶ್ರೀನಿವಾಸ ಪ್ರಸಾದ್‌ ಅವರು ಮಾತನಾಡಿದ್ದು, ನಾನು ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದಿದ್ದಾರೆ. ಇದು ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.

VISTARANEWS.COM


on

Siddaramaiah
Koo

ಮೈಸೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೈಸೂರಿಗೆ ಆಗಮಿಸಿ ಮತಬೇಟೆ ಆರಂಭಿಸುವ ಒಂದು ದಿನದ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರು ಪ್ರಮುಖ ರಣತಂತ್ರ ಹೆಣೆದಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್‌ (V Srinivas Prasad) ಅವರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದು, ಕಾಂಗ್ರೆಸ್‌ಗೆ ಬಿಜೆಪಿಯ ಪ್ರಭಾವಿ ದಲಿತ ನಾಯಕನ ಬೆಂಬಲವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ, “ಭಾನುವಾರ ನಡೆಯುವ ಮೋದಿ ಸಮಾವೇಶಕ್ಕೆ ನಾನು ಹೋಗುವುದಿಲ್ಲ” ಎಂದು ಶ್ರೀನಿವಾಸ ಪ್ರಸಾದ್‌ ಅವರು ಹೇಳಿರುವುದು ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ ಅವರು ಕೆಲ ಹೊತ್ತು ಚರ್ಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ಅವರಿಂದ ಶ್ರೀನಿವಾಸ ಪ್ರಸಾದ್‌ ಅವರು ದೂರವೇ ಉಳಿದಿದ್ದರು. ಈಗ ಏಕಾಏಕಿ ಸಿದ್ದರಾಮಯ್ಯ ಅವರೇ ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿದರು. ಭೇಟಿಯ ಬೆನ್ನಲ್ಲೇ, “ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ, ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್‌ ಪರವಾದ ಅಲೆ ಇದೆ” ಎಂದು ಹೇಳಿದ್ದಾರೆ. ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ನಾನು, ಶ್ರೀನಿವಾಸ ಪ್ರಸಾದ್‌ ಅವರು ಬಹುಕಾಲದ ಗೆಳೆಯರು. ರಾಜಕೀಯ ನಿವೃತ್ತಿ ಬಳಿಕ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿಯಾದೆ ಅಷ್ಟೆ. ಇದು ರಾಜಕೀಯದ ಭೇಟಿ ಅಲ್ಲ” ಎಂದು ತಿಳಿಸಿದರು.

ಶ್ರೀನಿವಾಸ ಪ್ರಸಾದ್‌ ಅವರು ಈಗಾಗಲೇ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದರೂ ಅವರಿಗೆ ಬೇಡಿಕೆ ಇದೆ. ಪ್ರಭಾವಿ ದಲಿತ ನಾಯಕರಾಗಿರುವ ಕಾರಣ ಅವರ ಬೆಂಬಲ ಸೆಳೆಯಲು ಕಾಂಗ್ರೆಸ್ಸಿಗರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶ್ರೀನಿವಾಸ ಪ್ರಸಾದ್‌ ಅವರ ಅಳಿಯ ಧೀರಜ್‌ ಪ್ರಸಾದ್‌ ಅವರು ಕಾಂಗ್ರೆಸ್‌ ಸೇರಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ, ಸಿಎಂ ಕೂಡ ಸಂಸದರನ್ನು ಭೇಟಿಯಾಗಿರುವುದು ತೀವ್ರ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ಗೆ ಶ್ರೀನಿವಾಸ ಪ್ರಸಾದ್‌ ಬೆಂಬಲ ಎಂದ ಸುನೀಲ್‌ ಬೋಸ್‌

“ಶ್ರೀನಿವಾಸ ಪ್ರಸಾದ್‌ ಅವರ ಬೆಂಬಲ ನಮಗಿದೆ” ಎಂಬುದಾಗಿ ಚಾಮರಾಜನಗರ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಕೂಡ ಬಹಿರಂಗವಾಗಿ ಹೇಳಿದ್ದು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್‌ ಬೋಸ್‌, “ಶ್ರೀನಿವಾಸ ಪ್ರಸಾದ್‌ ಅವರ ಸಂಪೂರ್ಣ ಬೆಂಬಲ ಕಾಂಗ್ರೆಸ್‌ಗೆ ಇದೆ. ಬಿಜೆಪಿ ಸಂಸದರ ಆಶೀರ್ವಾದ ಪಡೆದಿದ್ದೇನೆ. ಗೆದ್ದು ಬಾ ಎಂದು ಅವರು ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಬೆಂಬಲಿಗರು ಕೂಡ ಕಾಂಗ್ರೆಸ್‌ ಸೇರಿದ್ದಾರೆ. ಹಾಗಾಗಿ ನಮ್ಮ ಗೆಲುವು ನಿಶ್ಚಿತ” ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು ಹಾಗೂ ಚಾಮರಾಜನಗರ ಲೋಕಸಭೆ ಕ್ಷೇತ್ರಗಳನ್ನು ಸಿದ್ದರಾಮಯ್ಯ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಅವರು ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಅವರೂ ಮೈಸೂರಿನಲ್ಲಿ ಬೃಹತ್‌ ಸಮಾವೇಶ ಕೈಗೊಳ್ಳುತ್ತಿದ್ದು, ಎರಡೂ ಕ್ಷೇತ್ರಗಳ ಮೇಲೆ ಇದು ಪ್ರಭಾವ ಬೀರಲಿದೆ. ಇದರ ಮಧ್ಯೆಯೇ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿಯಾಗಿ ಹೊಸ ದಾಳ ಉರುಳಿಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: Operation Kamala: ಸಿದ್ದರಾಮಯ್ಯ ತವರಲ್ಲಿ ಆಪರೇಷನ್ ಕಮಲ; ಸಿಎಂ ಆಪ್ತನನ್ನು ಬಿಜೆಪಿಗೆ ಸೆಳೆದ ವಿಜಯೇಂದ್ರ

Continue Reading

ಚಿತ್ರದುರ್ಗ

Medical Negligence : ಗ್ಯಾಸ್ಟ್ರಿಕ್‌ ಎಂದು ಆಸ್ಪತ್ರೆಗೆ ಹೋದ ಯುವಕ ಮನೆಗೆ ಹೆಣವಾಗಿ ವಾಪಸ್‌

Medical Negligence : ಗ್ಯಾಸ್ಟ್ರಿಕ್‌ನಿಂದ ಬಳಲುತ್ತಿದ್ದ (Gastric) ಯುವಕನೊಬ್ಬ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಹೋದವನು ಹೆಣವಾಗಿ ವಾಪಸ್‌ ಆಗಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,‌ ಮಗನ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕಿಡಿಕಾರಿದ್ದಾರೆ.

VISTARANEWS.COM


on

By

Medical Negligence in Chitradurga
Koo

ಚಿತ್ರದುರ್ಗ: ಗ್ಯಾಸ್ಟ್ರಿಕ್‌ (Gastric) ಎಂದು ಆಸ್ಪತ್ರೆಗೆ ಹೋದ ಯುವಕನೊಬ್ಬ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) ಸ್ಮಶಾನದ ಪಾಲಾಗಿದ್ದಾನೆ. ಚಿತ್ರದುರ್ಗದ ಗೋಪಾಲಪುರದ ನಿವಾಸಿ ನಯಾಜ್ (18) ಮೃತ ದುರ್ದೈವಿ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದೆ.

ಗ್ಯಾಸ್ಟ್ರಿಕ್‌ನಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ನಯಾಜ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಇತ್ತ ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮನೆ ಮಗನ ಸಾವಿನಿಂದ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಮುಂಭಾಗ ನಯಾಜ್ ಕುಟುಂಬಸ್ಥರ ದೌಡಾಯಿಸಿ, ವೈದ್ಯಾಧಿಕಾರಿಗಳು ಸರಿಯಾದ ಚಿಕಿತ್ಸೆ ಕೊಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ನಿನ್ನೆ ಶುಕ್ರವಾರ ನಯಾಜ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ ಯಾವೊಬ್ಬ ವೈದ್ಯಾಧಿಕಾರಿಗಳೂ ಬಂದಿಲ್ಲ. ಹೀಗಾಗಿ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಜಿಲ್ಲಾಸ್ಪತ್ರೆ ವ್ಯವಸ್ಥೆ ಬದಲಾಗಬೇಕು. ನನ್ನ ಮಗ ಸತ್ತು ಹೋದ, ನಾನೇನು ಮಾಡಲಿ ಎಂದು ನಯಾಜ್‌ ತಂದೆಯ ಅಸಹಾಯಕದ ಮಾತುಗಳನ್ನಾಡಿದರು. ಮಗನ ಸಾವಿಗೆ ನ್ಯಾಯಕ್ಕಾಗಿ ಕೊಡಿಸಿ ಎಂದು ಹಂಗಲಾಚಿದರು.

ಇದನ್ನೂ ಓದಿ: Rain News: ವಿಜಯಪುರದಲ್ಲಿ ಸಿಡಿಲಿಗೆ ಮತ್ತೊಂದು ಬಲಿ; ಬೀದರ್‌ನಲ್ಲಿ ಮಳೆಗೆ ಧರೆಗುರುಳಿದ ಬೃಹತ್‌ ಮರ

ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಬಾಲಕ ನೀರಲ್ಲಿ ಮುಳುಗಿ ಸಾವು; ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ಕ್ಷಣ

ಉಡುಪಿ‌: ಎನ್ವೆಂಚರ್ಸ್ ರೆಸಾರ್ಟ್‌ನ ಸ್ವಿಮ್ಮಿಂಗ್ (Ventures Resort) ಪೂಲ್‌ನಲ್ಲಿ (Swimming pool) ಬಾಲಕನೊರ್ವ ಮುಳುಗಿ ಮೃತಪಟ್ಟಿದ್ದಾರೆ. ಉಡುಪಿಯ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್‌ನಲ್ಲಿ (Drowned in water) ಘಟನೆ ನಡೆದಿದೆ. ಹೊಡೆ ಮೂಲದ ಮುಹಮ್ಮದ್ ಅರೀಝ್ (10) ಮೃತ ದುರ್ದೈವಿ.

ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣಕ್ಕೆ ಮುಹಮ್ಮದ್ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ.

ರೆಸಾರ್ಟ್ ಸ್ವಿಮ್ಮಿಂಗ್ ಪೂಲ್ ನೀರಿಗೆ ಇಳಿದ ಮುಹಮ್ಮದ್‌ ಹೊರಬರಲು ಆಗದೆ ತೀವ್ರ ಅಸ್ವಸ್ಥಗೊಂಡಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಮುಹಮ್ಮದ್‌ನನ್ನು ಕೂಡಲೇ ಮೇಲೆತ್ತಿ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುಹಮ್ಮದ್‌ ಕೊನೆಯುಸಿರೆಳೆದಿದ್ದಾನೆ. ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.

ಮುಹಮ್ಮದ್‌ ಪೂಲ್‌ ಬಳಿ ಬಂದವನೇ ಆಳ ತಿಳಿಯದೆ ನೀರಿಗೆ ಇಳಿದಿದ್ದ. ಈ ವೇಳೆ ಮೇಲೆ ಬರಲು ಪ್ರಯತ್ನಿಸಿದ್ದಾನೆ. ಸುಮಾರು ಎರಡು ನಿಮಿಷಗಳ ಜೀವನ್ಮರಣ ಹೋರಾಡಿದ್ದಾನೆ. ಆದರೆ ವಿಧಿಯಾಟ ಅಂದರೆ ಸುತ್ತಮುತ್ತ ಮೂವತ್ತು ಹೆಚ್ಚು ಜನರು ಇದ್ದರೂ ಯಾರು ಇದನ್ನೂ ಗಮನಿಸಿಲ್ಲ. ಮುಹಮ್ಮದ್‌ನ ಕೊನೆ ಕ್ಷಣದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Urvashi Rautela
ಕ್ರೀಡೆ9 mins ago

Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

murder-case
ಕ್ರೈಂ31 mins ago

Murder Case: ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!

Gold price
ಚಿನ್ನದ ದರ40 mins ago

Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

Lok Sabha Election 2024
ಬೆಂಗಳೂರು60 mins ago

Lok Sabha Election 2024 : ಮಾವಿನ ಹಣ್ಣಿನ ಬ್ಯಾಗ್‌ ಬಿಡ್ರೀ ಎಂದವರ ಬಳಿ ಗರಿ ಗರಿ ನೋಟು; ಜಯನಗರದಲ್ಲಿ 4 ಕೋಟಿ ರೂ. ಸೀಜ್‌

Sonu Srinivas Gowda shares Jail Experience
ಸಿನಿಮಾ1 hour ago

Sonu Srinivas Gowda: ಸಿಕ್ಕಾಪಟ್ಟೆ ಸೊಳ್ಳೆ ಕಾಟ ಇತ್ತು ಎಂದು ಜೈಲಿನ ಅನುಭವ ಹಂಚಿಕೊಂಡ ಸೋನು ಗೌಡ!

CM Siddaramaiah
ಕರ್ನಾಟಕ1 hour ago

ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

Siddaramaiah
ಕರ್ನಾಟಕ2 hours ago

ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಶ್ರೀನಿವಾಸ ಪ್ರಸಾದ್!‌ ಏನಿದರ ಮರ್ಮ?

Vinesh Phogat
ಕ್ರೀಡೆ2 hours ago

Vinesh Phogat: ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ; ಡಬ್ಲ್ಯುಎಫ್‌ಐ ವಿರುದ್ಧ ಗಂಭೀರ ಆರೋಪ ಹೊರಿಸಿದ ವಿನೇಶ್

Salman khan Aayush Sharma recalls his father words marry Arpita
ಸಿನಿಮಾ2 hours ago

Salman Khan: ಬಿಡಿಗಾಸೂ ಕೈಯಲ್ಲಿ ಇಲ್ಲದೇ ಇದ್ದಾಗ ಸಲ್ಮಾನ್‌ ಖಾನ್‌ ಸಹೋದರಿಯನ್ನು ಮದುವೆಯಾಗಿದ್ರಂತೆ ಈ ನಟ!

Medical Negligence in Chitradurga
ಚಿತ್ರದುರ್ಗ2 hours ago

Medical Negligence : ಗ್ಯಾಸ್ಟ್ರಿಕ್‌ ಎಂದು ಆಸ್ಪತ್ರೆಗೆ ಹೋದ ಯುವಕ ಮನೆಗೆ ಹೆಣವಾಗಿ ವಾಪಸ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 day ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 day ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ2 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ4 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ4 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

ಟ್ರೆಂಡಿಂಗ್‌