Stock Market : ರಂಗಸ್ವಾಮಿ ಮೂಕನಹಳ್ಳಿಯವರ ನೂತನ ಪುಸ್ತಕ ಷೇರು ಮಾರುಕಟ್ಟೆ ಹೂಡಿಕೆ ಮಾರ್ಗದರ್ಶಿ ಬಿಡುಗಡೆ - Vistara News

ಕರ್ನಾಟಕ

Stock Market : ರಂಗಸ್ವಾಮಿ ಮೂಕನಹಳ್ಳಿಯವರ ನೂತನ ಪುಸ್ತಕ ಷೇರು ಮಾರುಕಟ್ಟೆ ಹೂಡಿಕೆ ಮಾರ್ಗದರ್ಶಿ ಬಿಡುಗಡೆ

ಹೆಸರಾಂತ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ನೂತನ ಕೃತಿ ಷೇರು ಮಾರುಕಟ್ಟೆ ಸಮಗ್ರ ಹೂಡಿಕೆ ಮಾರ್ಗದರ್ಶಿ ಕೃತಿಯನ್ನು ಗುರುವಾರ ಬೆಂಗಳೂರಿನಲ್ಲಿ (Stock Market) ಲೋಕಾರ್ಪಣೆ ಮಾಡಲಾಯಿತು.

VISTARANEWS.COM


on

Rangaswamy Mookanahalli's new book release
ಷೇರು ಮಾರುಕಟ್ಟೆ-ಸಮಗ್ರ ಹೂಡಿಕೆ ಮಾರ್ಗದರ್ಶಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಏಮ್‌ ಹೈ ಕನ್ಸಲ್ಟಿಂಗ್‌ನ ಸಿಇಒ ಎನ್.‌ ರವಿಶಂಕರ್‌, ವಿಸ್ತಾರನ್ಯೂಸ್‌ನ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಲೇಖಕ ರಂಗಸ್ವಾಮಿ ಮೂಕನಹಳ್ಳಿ, ಸಾವಣ್ಣ ಪ್ರಕಾಶನದ ಜಮೀಲ್.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೆಸರಾಂತ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿಯವರ ಬಹು ನಿರೀಕ್ಷಿತ ನೂತನ ಕೃತಿ ಷೇರು ಮಾರುಕಟ್ಟೆ-ಸಮಗ್ರ ಹೂಡಿಕೆ ಮಾರ್ಗದರ್ಶಿ ಗುರುವಾರ ಲೋಕಾರ್ಪಣೆಯಾಗಿದೆ. (Stock Market ) ಸಾವಣ್ಣ ಪ್ರಕಾಶನ ಸಂಸ್ಥೆಯಿಂದ ಪ್ರಕಟಿತವಾಗಿರುವ ಈ ಕೃತಿಯನ್ನು ವಿಸ್ತಾರ ನ್ಯೂಸ್‌ನ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಹಾಗೂ ಏಮ್‌ ಹೈ ಕನ್ಸಲ್ಟಿಂಗ್‌ನ ಸಿಇಒ ಎನ್.‌ ರವಿಶಂಕರ್‌ ಅವರು ಬಿಡುಗಡೆಗೊಳಿಸಿದರು. ಥಟ್‌ ಅಂತ ಹೇಳಿ ದೂರದರ್ಶನ ರಸಪ್ರಶ್ನೆ ಕಾರ್ಯಕ್ರಮದಿಂದ ನಾಡಿನಾದ್ಯಂತ ಮನೆಮಾತಾಗಿರುವ ಡಾ. ನಾ. ಸೋಮೇಶ್ವರ, ಹಿರಿಯ ಲೇಖಕ ಜೋಗಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಹಣಕಾಸು ಸಾಕ್ಷರತೆ (Finance literacy) ಇಂದಿನ ಅಗತ್ಯ

ಷೇರು ಮಾರುಕಟ್ಟೆ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಹರಿಪ್ರಕಾಶ್‌ ಕೋಣೆಮನೆ, ದೇಶ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಹಸಿವಿನ ಸಮಸ್ಯೆಯಿಂದ ಭಾರತವನ್ನು ಪಾರು ಮಾಡುವ ಸವಾಲು ಎಲ್ಲಕ್ಕಿಂತ ಮುಖ್ಯವಾಗಿತ್ತು. ಹೀಗಾಗಿ ಸರ್ಕಾರ ಆಹಾರ ಕೊರತೆಯನ್ನು ನೀಗಿಸಲು ಒತ್ತು ನೀಡಿತ್ತು. ಹಾಗೂ ಅದರಲ್ಲಿ ಯಶಸ್ವಿಯೂ ಆಯಿತು. ಹಸಿರು ಕ್ರಾಂತಿಯೂ ಸಂಭವಿಸಿತು. ದೇಶ ಈಗ ನಾನಾ ಬಗೆಯ ಆಹಾರೋತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಅವುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಕೇವಲ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲದೆ, ಈಗಿನ ಭಾರತ ರಕ್ಷಣಾ ವಲಯದ ಶಸ್ತ್ರಾಸ್ತ್ರಗಳ ರಫ್ತನ್ನೂ ಆರಂಭಿಸುವಷ್ಟು ಮುಂದುವರಿದಿದೆ. ಇದೇ ರೀತಿಯಲ್ಲಿ ಹಣಕಾಸು ಸಾಕ್ಷರತೆಯನ್ನು ಸಾಧಿಸಬೇಕಾದ, ಅದರ ಮೂಲಕ ಎಲ್ಲರ ವೈಯಕ್ತಿಕ, ಸಾಮಾಜಿಕ, ಆರ್ಥಿಕ ಪ್ರಗತಿಯನ್ನು ಕಾಣಬೇಕಾದ ಅವಶ್ಯಕತೆ ಉಂಟಾಗಿದೆ. ಎಲ್ಲರೂ ಪ್ರಗತಿಶೀಲರಾದಾಗ ದೇಶವೂ ಅಭಿವೃದ್ಧಿ ಹೊಂದಿದಂತಾಗುತ್ತದೆ. ಆದ್ದರಿಂದ ಉದ್ಯೋಗವನ್ನು ಹುಡುಕುವುದಕ್ಕಿಂತಲೂ, ಉದ್ಯೋಗಗಳನ್ನು ಸೃಷ್ಟಿಸಬಲ್ಲ ಉದ್ಯಮಶೀಲತೆಗೂ ಆದ್ಯತೆ, ಉತ್ತೇಜನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ರಂಗಸ್ವಾಮಿ ಮೂಕನಹಳ್ಳಿಯವರ ಷೇರು ಮಾರುಕಟ್ಟೆ ಕೃತಿ ಸಹಕಾರಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ರಂಗಸ್ವಾಮಿಯವರು ದೇಶ ಸುತ್ತು ಕೋಶ ಓದು ಎಂಬ ಹಿರಿಯರ ಮಾತನ್ನು ಅನುಸರಿಸಿದವರು. ಹಲವಾರು ದೇಶಗಳಲ್ಲಿದ್ದು ಗಳಿಸಿದ ಅನುಭವ, ಅಧ್ಯಯನದ ಜ್ಞಾನವನ್ನು ಬಳಸಿಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ಸಮಾಜದ ವಿಕಾಸಕ್ಕೆ ಇಂಥ ಸೇವೆ ಅವಶ್ಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಏಮ್‌ ಹೈ ಕನ್ಸಲ್ಟಿಂಗ್‌ ಸಿಇಒ ಎನ್.‌ ರವಿಶಂಕರ್‌ ಅವರು ಮಾತನಾಡಿ, ಹಣದುಬ್ಬರದ ಪ್ರಮಾಣ ಶೇ.8ರ ಆಸುಪಾಸಿನಲ್ಲಿ ಜನಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಪ್ರಸ್ತುತ ಸಂದರ್ಭದಲ್ಲಿ, ಷೇರು, ಮ್ಯೂಚುವಲ್‌ ಫಂಡ್‌, ಇಟಿಎಫ್‌ ಇತ್ಯಾದಿಗಳಲ್ಲಿ ಹೂಡಿಕೆಯ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುವುದು ಅವಶ್ಯಕವಾಗಿದೆ. ಏಕೆಂದರೆ ಈಗಿನ ಬ್ಯಾಂಕ್‌ ಎಫ್‌ ಡಿ, ಆರ್‌ಡಿ, ಅಂಚೆ ಕಚೇರಿಯ ಉಳಿತಾಯ ಯೋಜನೆಗಳಾಗಲಿ, ಹಣದುಬ್ಬರದ ಪ್ರಮಾಣಕ್ಕಿಂತಲೂ ಹೆಚ್ಚಿನ ಆದಾಯವನ್ನು ಹೂಡಿಕೆದಾರರಿಗೆ ತಂದುಕೊಡುವುದಿಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುನ್ನ ಅವುಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಷೇರು ಜಗತ್ತಿನಲ್ಲಿ ಹೇಗೆ ಆದಾಯ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳಲು ರಂಗಸ್ವಾಮಿಯವರ ಈ ಕೃತಿ ಉಪಯುಕ್ತ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಡೆದ ಸಂವಾದ ಹಾಗೂ ಪ್ರಶ್ನೋತ್ತರದಲ್ಲಿ ಬಿಸಿನೆಸ ಸಲಹೆಗಾರ ನವೀನ್‌ ಕಟ್ಟೆ, ಚಾರ್ಟರ್ಡ್‌ ಅಕೌಂಟೆಂಟ್‌ ರಾಜೇಶ್‌ ಸತ್ರಸಾಲ, ಲೇಖಕ ರಂಗಸ್ವಾಮಿ ಮೂಕನಹಳ್ಳಿ ಭಾಗವಹಿಸಿದ್ದರು. ಓದುಗರು ಅಪಾರ ಆಸಕ್ತಿಯಿಂದ ಷೇರು ಮಾರುಕಟ್ಟೆ ಕುರಿತ ಪ್ರಶ್ನೆಗಳನ್ನು ಮುಂದಿಟ್ಟು ತಜ್ಞರಿಂದ ಉತ್ತರ ಪಡೆದರು. ಸಾವಣ್ಣ ಪ್ರಕಾಶನದ ಜಮೀಲ್‌ ಅವರು ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಷೇರು ಮಾರುಕಟ್ಟೆ ಕೃತಿಯಲ್ಲೇನಿದೆ?

ರಂಗಸ್ವಾಮಿ ಮೂಕನಹಳ್ಳಿ ಅವರ ಷೇರು ಮಾರುಕಟ್ಟೆ- ಸಮಗ್ರ ಹೂಡಿಕೆ ಮಾರ್ಗದರ್ಶಿ ಕೃತಿಯಲ್ಲಿ, ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಫಂಡಮೆಂಟಲ್‌ ಅನಾಲಿಸಿಸ್‌, ಟೆಕ್ನಿಕಲ್‌ ಅನಾಲಿಸಿಸ್‌ ಜತೆಗೆ ಬಹು ಮುಖ್ಯವಾದ ಸೆಂಟಿಮೆಂಟ್‌ ಅನಾಲಿಸಿಸ್‌ ಬಗ್ಗೆ ವಿವರಗಳಿವೆ.

ಪ್ರೈಮರಿ ಮಾರುಕಟ್ಟೆ, ಸೆಕೆಂಡರಿ ಮಾರುಕಟ್ಟೆ, ಡಿರೈವೆಟಿಸ್‌ ಮಾರುಕಟ್ಟೆಯಲ್ಲಿನ ಫ್ಯೂಚರ್‌ ಮತ್ತು ಆಪ್ಷನ್‌ ವಹಿವಾಟುಗಳು ಹೇಗೆ ನಡೆಯುತ್ತವೆ ಎಂಬ ವಿವರಗಳು ಇವೆ. ಹೂಡಿಕೆದಾರರರು ಸಾಮಾನ್ಯವಾಗಿ ಮಾಡುವ ತಪ್ಪು ನಡೆಗಳು, ಅವರು ಎದುರಿಸುವ ಸವಾಲುಗಳು, ಅವುಗಳನ್ನು ಎದುರಿಸುವುದು ಹೇಗೆ ಎಂಬುದರ ವಿಶ್ಲೇಷಣೆ, ಒಳನೋಟಗಳು ಇವೆ. ಷೇರುದಾರರ ಹಕ್ಕುಗಳು, ಆಲ್ಗೊಟ್ರೇಡಿಂಗ್‌, ಸೆಕ್ಯುರಿಟೀಸ್‌, ಷೇರು ಮಾರುಕಟ್ಟೆಯ ಟರ್ಮಿನಾಲಜಿಗಳು, ಷೇರುಗಳಿಗೆ ಸಂಬಂಧಿಸಿದ ತೆರಿಗೆ ನೀತಿ ಬಗ್ಗೆ ಮಾಹಿತಿಗಳಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

Lok Sabha Election 2024 : ವೋಟ್‌ ಮಾಡಲು ಒಂದೂವರೆ ಲಕ್ಷ ರೂ. ಖರ್ಚು; ಲಂಡನ್‌ನಿಂದ ಮಂಡ್ಯಕ್ಕೆ ಬಂದ ಮಹಿಳೆ

Lok Sabha Election 2024 : ಲಂಡನ್‌ನಲ್ಲಿರುವ ಮಹಿಳೆಯೊಬ್ಬರು ಮಂಡ್ಯಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ವೋಟ್‌ ಮಾಡಲೆಂದೇ ಮಂಡ್ಯಕ್ಕೆ ಬಂದ ಮಹಿಳೆಗೆ ವಿಮಾನದ ಖರ್ಚು ಒಂದೂವರೆ ಲಕ್ಷ ರೂ. ಖರ್ಚು ಆಗಿದೆ ಅಂತೆ.

VISTARANEWS.COM


on

By

Lok sabha election 2024
Koo

ಮಂಡ್ಯ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಲಂಡನ್‌ನಿಂದ ಮಂಡ್ಯಕ್ಕೆ ಮಹಿಳೆಯೊಬ್ಬರು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ವೋಟ್ ಮಾಡಿದ್ದಾರೆ. ಮಂಡ್ಯದ ಕಾಳೇನಹಳ್ಳಿ ಗ್ರಾಮದ ಸೋನಿಕಾ ಎಂಬಾಕೆ ಲಂಡನ್‌ನಿಂದ ಬಂದು ಕಾಳೇನ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಇದೇ ವೇಳೆ ಮಾತಾನಾಡಿದ ಸೋನಿಕಾ ಎಲ್ಲೆಡೆ ಬರ ಇದೆ ನಮ್ಮ ರಾಜ್ಯ ಹಾಗೂ ದೇಶಕ್ಕೆ ಒಳ್ಳೆಯದಾಗಬೇಕು. ಮೋದಿ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದೆ. ಹಾಗಾಗಿ ಕುಮಾರಸ್ವಾಮಿ ಅವರಿಗೆ ಮತ ಚಲಾಯಿಸಿದ್ದೀನಿ. ನೀವು ಮತದಾನ ಮಾಡಿ, ಮತ ಚಲಾಯಿಸುವುದಕ್ಕಾಗಿಯೇ ನಾನು ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಬಂದಿದ್ದೀನಿ. ಮತದಾನ ನಮ್ಮ ಹಕ್ಕು, ನಿರ್ಲಕ್ಷ್ಯ ಮಾಡದೆ ಉದಾಸೀನತೆ ತೋರದೆ ಮತ ಹಾಕಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Lok Sabha Election 2024: 2ನೇ ಬಾರಿಗೆ ಬಂದು ಮತದಾನ ಮಾಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು!

ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು

ಕೋಲಾರ/ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಬಿರುಸಿನ ಮತದಾನ ನಡೆಯುತ್ತಿದ್ದು, ದುಬೈನಿಂದ ಬಂದು ಕೋಲಾರದ ನಿವಾಸಿಯೊಬ್ಬರು ಮತದಾನ ಮಾಡಿದ್ದಾರೆ. ಕೋಲಾರ ನಿವಾಸಿ ಅಬ್ದುಲ್ ಸುಬಾನ್ ಎಂಬುವವರು ಬ್ಯುಸಿನೆಸ್‌ಗೆಂದು ದುಬೈಗೆ ತೆರಳಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲೆಂದು ದುಬೈನಿಂದ ಬಂದಿದ್ದರು. ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿದರು.

ಇತ್ತ ಮಂಗಳೂರಿನ ಉಳಾಯಿಬೆಟ್ಟುವಿನ ಜೀವಿತ ಎಂಬುವವರು ದುಬೈನಿಂದ ಬಂದು ಮತದಾನ ಮಾಡಿದ್ದರು. ನಮ್ಮ ಮತ ನಮ್ಮ ಹಕ್ಕು ಎನ್ನುವ ದೃಷ್ಟಿಯಿಂದ ಮತದಾನ ಮಾಡಲು ಬಂದಿದ್ದಾಗಿ ಜೀವಿತ ತಿಳಿಸಿದರು.

ಚಿತ್ರದುರ್ಗದ ಶಿಕ್ಷಕರ ಕಾಲೋನಿ ನಗರದ ನಿವಾಸಿಯಾಗಿರುವ ಲಿಖಿತ ಅವರು ಫಿಲಿಫೈನ್ಸ್‌ನಿಂದ ಬಂದು ಮತದಾನ ಮಾಡಿದರು. ಫಿಲಿಫೈನ್ಸ್‌ನಲ್ಲಿ ಎಂಬಿಬಿಎಸ್‌ (MBBS) ಓದುತ್ತಿರುವ ಲಿಖಿತ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದಿದ್ದರು. ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯಲ್ಲಿರುವ ಮತಗಟ್ಟೆ ಸಂಖ್ಯೆ 230ರಲ್ಲಿ ಮತದಾನ ಮಾಡಿದರು. ಪ್ರತಿ ಬಾರಿ ತಪ್ಪದೆ ಬಂದು ಮತದಾನ ಮಾಡುತ್ತಿರುವುದಾಗಿ ಲಿಖಿತ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

ಉಡುಪಿಯಿಂದ ತುಮಕೂರಿಗೆ ಬಂದು ಮತ ಹಾಕಿದ ನ್ಯಾಯಾಧೀಶ

ನ್ಯಾಯಾಧೀಶ ಜೀತು ಆರ್.ಎಸ್ ಅವರು ಉಡುಪಿಯಿಂದ ತುಮಕೂರಿಗೆ ಬಂದು ಮತ ಹಾಕಿದರು. ತುಮಕೂರು ಗ್ರಾಮಾಂತರದ ಕೆ.ಪಾಲಸಂದ್ರದಲ್ಲಿರುವ ಮತಗಟ್ಟೆ ಸಂಖ್ಯೆ 114ರಲ್ಲಿ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸಾಕಷ್ಟು ಜನ ಮಹಾನ್ ಪುರುಷರು ಹೋರಾಡಿದ್ದಾರೆ. ಮತದಾನ ಮಾಡುವ ಮೂಲಕ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನ ಸಂಭ್ರಮಿಸಬೇಕು. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಇಂತಹ ಪ್ರಾತಃಸ್ಮರಣೀಯರನ್ನು ಗೌರವಿಸಬೇಕು ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ

Lok Sabha Election 2024: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ 14 ಕೋಟಿಗೂ ಅಧಿಕ ಶೌಚಗೃಹ ನಿರ್ಮಿಸಿ ಜನರು ಕೈಯಲ್ಲಿ ಚೊಂಬು ಹಿಡಿಯುವುದನ್ನು ನಿಲ್ಲಿಸಿದ್ದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

VISTARANEWS.COM


on

Lok Sabha Election 2024 union minister pralhad joshi latest statement at hubballi
Koo

ಹುಬ್ಬಳ್ಳಿ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರ ಕೈಗೆ ಚೊಂಬು ಕೊಡೋದನ್ನು ಕಾಂಗ್ರೆಸ್ (Congress) ನಿಲ್ಲಿಸಲಿಲ್ಲ. ಪರಿಣಾಮ ಜನರೂ ಕಾಂಗ್ರೆಸಿಗರ ಕೈಗೆ ಚೊಂಬು ಕೊಡುತ್ತಾ ಬಂದರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಲೇವಡಿ (Lok Sabha Election 2024) ಮಾಡಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಡ್ಡಾಡೋದು ಅಭ್ಯಾಸವಾಗಿದೆ ಎಂದು ಟೀಕಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ 14 ಕೋಟಿಗೂ ಅಧಿಕ ಶೌಚಗೃಹ ನಿರ್ಮಿಸಿ ಜನರು ಕೈಯಲ್ಲಿ ಚೊಂಬು ಹಿಡಿಯುವುದನ್ನು ನಿಲ್ಲಿಸಿದ್ದಾರೆ ಎಂದು ಸಚಿವ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Lok Sabha Election 2024: ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು

ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೂ ಚೊಂಬು ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರನ್ನು ಸೋಲಿಸಿದ್ದಲ್ಲದೆ, ಅವರ ವಿರುದ್ಧ ಗೆದ್ದವರಿಗೆ ಪದ್ಮವಿಭೂಷಣ ಕೊಟ್ಟು ಸತ್ಕರಿಸುವ ಮೂಲಕ ದಲಿತರ ಕೈಗೆ ಚೊಂಬು ಕೊಟ್ಟವರು ಕಾಂಗ್ರೆಸ್ಸಿಗರು ಎಂದು ಸಚಿವ ಜೋಶಿ ಹರಿಹಾಯ್ದರು.

ಇದೆಲ್ಲದರ ಪರಿಣಾಮ ಜನರೂ ನಿಮ್ಮ ಕೈಗೆ ಚೊಂಬು ಕೊಟ್ಟು ಕಳಿಸುತ್ತಿದ್ದಾರೆ. ದೇಶದ 20-25 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಎರಡೇ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election: ರಾಜ್ಯಾದ್ಯಂತ 1 ಗಂಟೆ ವೇಳೆಗೆ 38.23% ಮತದಾನ; ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

ಚತ್ತಿಸಗಢ, ರಾಜಸ್ಥಾನ, ಮಧ್ಯಪ್ರದೇಶ ಹೀಗೆ ಎಲ್ಲೆಡೆಯೂ ಹೀನಾಯವಾಗಿ ಸೋಲಿಸಿ ವಿರೋಧ ಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳದಂತೆ ಜನ ನಿಮ್ಮ ಕೈಗೆ ಚೊಂಬು ಕೊಟ್ಟಿದ್ದಾರೆ ನೆನಪಿಟ್ಟುಕೊಳ್ಳಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

Continue Reading

Lok Sabha Election 2024

Lok Sabha Election 2024: 2ನೇ ಬಾರಿಗೆ ಬಂದು ಮತದಾನ ಮಾಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು!

Lok Sabha Election 2024: ಅದಮಾರು ಶ್ರೀಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ಬಾರಿ ಮತದಾನ ಮಾಡುವಂತಾಗಿದೆ. ಶುಕ್ರವಾರ ಬೆಳಗ್ಗೆಯೇ ಮತಗಟ್ಟೆ ಮುಂದೆ ಇದ್ದ ಅದಮಾರು ಶ್ರೀಗಳು ಮೊದಲಿಗರಾಗಿ ಮತದಾನ ಮಾಡಿದರು. ನೋಂದಣಿ ಮಾಡಿ, ಕೈಗೆ ಇಂಕ್ ಹಾಕಿಸಿಕೊಂಡು, ಬಟನ್ ಪ್ರೆಸ್ ಮಾಡಿದ್ದರು. ಆದರೆ, ಬೀಪ್‌ ಸೌಂಡ್‌ ಕೇಳಲೇ ಇಲ್ಲ. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಅಧಿಕಾರಿಗಳು ಮತದಾನವಾಗಿದೆ ಎಂದು ಉತ್ತರ ಹೇಳಿದ್ದಾರೆ. ಹೀಗಾಗಿ ಅದಮಾರು ಶ್ರೀ ಮತಗಟ್ಟೆಯಿಂದ ವಾಪಾಸ್ ಆಗಿದ್ದರು. ಪುನಃ ಪರಿಶೀಲನೆ ಮಾಡಿದ್ದರಿಂದ ಅವರಿಗೆ ಮತ್ತೊಂದು ಸುತ್ತು ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಯಿತು.

VISTARANEWS.COM


on

Lok Sabha Election 2024 Sri Vishwapriya Theertha Swamiji of Adamaru Mutt casts his vote for second time
Koo

ಉಡುಪಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನ (First phase of polling) ನಡೆಯುತ್ತಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ (Udupi Chikkamagaluru Lok Sabha constituency) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಉಡುಪಿಯಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು (Adamaru Mutt Sri Vishwapriya Theertha Swamiji) ಎರಡೆರಡು ಬಾರಿ ಮತ ಚಲಾವಣೆ ಮಾಡಿದ ಪ್ರಸಂಗ ನಡೆದಿದೆ.

ಅದಮಾರು ಶ್ರೀಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ಬಾರಿ ಮತದಾನ ಮಾಡುವಂತಾಗಿದೆ. ಶುಕ್ರವಾರ ಬೆಳಗ್ಗೆಯೇ ಮತಗಟ್ಟೆ ಮುಂದೆ ಇದ್ದ ಅದಮಾರು ಶ್ರೀಗಳು ಮೊದಲಿಗರಾಗಿ ಮತದಾನ ಮಾಡಿದರು. ನೋಂದಣಿ ಮಾಡಿ, ಕೈಗೆ ಇಂಕ್ ಹಾಕಿಸಿಕೊಂಡು, ಬಟನ್ ಪ್ರೆಸ್ ಮಾಡಿದ್ದರು. ಆದರೆ, ಬೀಪ್‌ ಸೌಂಡ್‌ ಕೇಳಲೇ ಇಲ್ಲ. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಅಧಿಕಾರಿಗಳು ಮತದಾನವಾಗಿದೆ ಎಂದು ಉತ್ತರ ಹೇಳಿದ್ದಾರೆ. ಹೀಗಾಗಿ ಅದಮಾರು ಶ್ರೀ ಮತಗಟ್ಟೆಯಿಂದ ವಾಪಾಸ್ ಆಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ಶ್ರೀಗಳ ಶಿಷ್ಯರ ಬೇಸರ

ಬಳಿಕ ಮಾಧ್ಯಮಗಳ ಬಳಿ ಈ ಬಗ್ಗೆ ಅದಮಾರು ಶ್ರೀಗಳು ಮಾಹಿತಿ ನೀಡುತ್ತಿದ್ದಾಗ ಮತಗಟ್ಟೆ ಅಧಿಕಾರಿಗಳು ಸ್ಥಳಕ್ಕೆ ಬಂದು ಶ್ರೀಗಳನ್ನು ಮತ್ತೆ ಒಳಗೆ ಕರೆದು ಮತದಾನ ಮಾಡುವಂತೆ ಹೇಳಿದರು. ಹೀಗಾಗಿ ಅಧಿಕಾರಿಗಳ ಸೂಚನೆ ಬಳಿಕ ಎರಡನೇ ಬಾರಿ ಬಂದು ಶ್ರೀಗಳು ಮತದಾನ ಮಾಡಿದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಶ್ರೀಗಳ ಶಿಷ್ಯರು ಬೇಸರ ಹೊರಹಾಕಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯಿಂದ ಮತದಾನ

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಶುಕ್ರವಾರ ಬೆಳಗ್ಗೆ ಮತಗಟ್ಟೆ ಸಂಖ್ಯೆ 185ರಲ್ಲಿ ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ತಮಗೆ ಬೇಕಾಗಿರುವ ಸರ್ಕಾರ ರೂಪಿಸುವ ದೊಡ್ಡ ಬದ್ಧತೆ ಪ್ರಜೆಗಳ ಮೇಲೆ ಇದೆ. ಎಲ್ಲ ಪ್ರಜೆಗಳು ಅವಶ್ಯವಾಗಿ ಮತದಾನ ಮಾಡಬೇಕು. ಯಾರು ಕೂಡ ಮತದಾನದಿಂದ ದೂರ ಉಳಿಯಬಾರದು. ಮತದಾನ ಮಾಡಲು ತುಂಬಾ ಹೆಮ್ಮೆ ಅನಿಸುತ್ತಿದೆ. ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಾಗ ಅನುಭವಿಸಿದ ಧನ್ಯತಾಭಾವವನ್ನು ಈಗಲೂ ಅನುಭವಿಸಿದ್ದೇವೆ. ದೇಶದಲ್ಲಿ ಎಲ್ಲ ಬಗೆಯ ಜನ ಎಲ್ಲ ಕಾಲಕ್ಕೂ ಇರುತ್ತಾರೆ. ನೆಲದ ಸಂಸ್ಕೃತಿಯನ್ನು ಗೌರವಿಸುವ ಸರ್ಕಾರವನ್ನು ರೂಪಿಸುವ ಅವಕಾಶ ನಮಗೆ ಇದೆ.‌ ಸಮಾಜದ ಪ್ರಸಕ್ತ ವಾತಾವರಣವನ್ನು ಅರ್ಥ ಮಾಡಿಕೊಂಡು ಮತದಾನ ಮಾಡಬೇಕು. ನಮಗೆ ಬೇಕಾಗಿರುವ ಸರ್ಕಾರವನ್ನು ರೂಪಿಸಬೇಕು. ರಾಜನಾದವ ಸರಿಯಾಗಿದ್ದರೆ ಕಾಲ ಯಾವತ್ತೂ ಹಾಳಾಗುವುದಿಲ್ಲ. ಈಗ ಪ್ರಜೆಗಳೇ ರಾಜರು ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಚಾಮರಾಜನಗರದಲ್ಲಿ ಮತ ಯಂತ್ರ ಪೀಸ್‌ ಪೀಸ್‌; ಮತಗಟ್ಟೆ ಧ್ವಂಸ, ಲಾಠಿ ಚಾರ್ಜ್‌!

ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಬಗ್ಗೆ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀಗಳು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಧಾನಿ ಇದ್ದಾರೆ ಎಂದಾದರೆ ಅವರು ಸರ್ವಾಧಿಕಾರಿ ಆಗುವುದು ಹೇಗೆ? ಪ್ರಜೆಗಳು ತಮಗೆ ಬೇಕಾದ ಸರ್ಕಾರವನ್ನು ರೂಪಿಸುತ್ತಿದ್ದಾರೆ. ಅದನ್ನು ಆಕ್ಷೇಪಿಸಿದರೆ ಸಾರ್ವಕಾಲಿಕ ಆಕ್ಷೇಪವಾಗುತ್ತದೆ. ಮತದಾನ ಪ್ರಮಾಣ ಕಡಿಮೆ ಆಗಬಾರದು. ವ್ಯವಸ್ಥೆ ನಮಗೆ ಅನುಕೂಲವಾಗಿಲ್ಲ ಅಂತ ದೂರುತ್ತೇವೆ. ಹಾಗಾದರೆ ವ್ಯವಸ್ಥೆಯನ್ನು ಸರಿ ಮಾಡುವುದು ಯಾರು? ಮತದಾನದಿಂದ ದೂರ ಉಳಿದವರು ಈ ದೇಶದ ನಾಗರಿಕರೇ ಅಲ್ಲ. ಅವರಿಗೆ ಸಿಟಿಜನ್‌ಶಿಪ್ ಕೊಡಬಾರದು. ಅದು ಕಠೋರ ನಿಲುವು ಆಗುತ್ತದೆ. ಆದರೆ, ಅವಶ್ಯವಾಗಿ ಬೇಕು. ಸರ್ಕಾರ ನೀಡುವ ಸವಲತ್ತುಗಳನ್ನು ಬಂದ್ ಮಾಡಬೇಕು. ಅವರನ್ನು ದ್ವಿತೀಯ, ತೃತೀಯ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಬೇಕು. ಆಗ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದರು.

Continue Reading

Lok Sabha Election 2024

Lok Sabha Election 2024 : ಟೇಬಲ್ ಕಿತ್ತೆಸೆದು ಬಿಜೆಪಿ ಕಾರ್ಯಕರ್ತನ ಎದೆಗೆ ಒದ್ದ ರೌಡಿಶೀಟರ್‌ ಕಟ್ಟಿಂಗ್ ಸೀನ

Lok Sabha Election 2024 : ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಬಳಿ ಟೇಬಲ್‌ ಹಾಕಿದ್ದಕ್ಕೆ ರೌಡಿಶೀಟರ್‌ ಹಾಗೂ ಕಾಂಗ್ರೆಸ್‌ ಮುಖಂಡ ತನ್ನ ಸಹಚರರೊಂದಿಗೆ ದಾಂಧಲೆ ನಡೆಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮಾರಾಮಾರಿಯಲ್ಲಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Lok sabha election 2024
Koo

ಆನೇಕಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Lok Sabha Election 2024) ಸರ್ಜಾಪುರದ ಮತಗಟ್ಟೆ79, 80, 81ಹಾಗೂ 82ರ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬಿಜೆಪಿ ಕಾರ್ಯಕರ್ತರು ಮತಗಟ್ಟೆ ದಾರಿಯಲ್ಲಿ ಟೇಬಲ್ ಹಾಕಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಟೇಬಲ್ ಕಿತ್ತೆಸೆದು ದಾಂಧಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಕಿದ್ದ ಟೇಬಲ್‌ಗಳು ಮತ್ತು ಚೇರ್‌ಗಳನ್ನು ಎಸೆದು ಹಾಕಿ ಗಲಾಟೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರೌಡಿ ಶೀಟರ್ ಹಾಗೂ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬಾತ ಪ್ರಕಾಶ್‌ರ ಎದೆಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ.

ಪ್ರಕಾಶ್ ಕಳೆದ ಮೂರು ತಿಂಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಕಟ್ಟಿಂಗ್ ಸೀನ ತನ್ನ ಸಹಚರರೊಂದಿಗೆ ಬಂದು ಪ್ರಕಾಶರ ಎದೆಗೆ ಕಾಲಿನಿಂದ ಒದ್ದಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ಪ್ರಕಾಶ್ ಅವರನ್ನು ವಂದನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

lok sabha election 2024

ಕಾರ್ಯಕರ್ತರ ಕಿರಿಕ್‌ನಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Lok Sabha Election 2024 ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಸತ್ಯ; ನಮ್ಮ ಬಳಿ ದಾಖಲೆ ಇದೆ ಎಂದ ಪ್ರಲ್ಹಾದ್‌ ಜೋಶಿ

ಚಾಮರಾಜನಗರದಲ್ಲಿ ಮತ ಯಂತ್ರ ಪೀಸ್‌ ಪೀಸ್‌; ಮತಗಟ್ಟೆ ಧ್ವಂಸ, ಲಾಠಿ ಚಾರ್ಜ್‌!

ಚಾಮರಾಜನಗರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನ (First phase of polling) ನಡೆಯುತ್ತಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರೆ, ಚಾಮರಾಜನಗರ ಲೋಕಸಭಾ ಕ್ಷೇತ್ರದ (Chamarajanagar Lok Sabha constituency) ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿದೆ. ಇದೇ ವೇಳೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಲಾಗಿದೆ.

ಎಷ್ಟೇ ಬಾರಿ ಮನವಿ ಮಾಡಿದರೂ ಈ ಗ್ರಾಮಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಲಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಈ ರಾಜಕಾರಣಿಗಳಿಗೆ ನಮ್ಮ ನೆನಪಾಗುತ್ತದೆ. ಅದಾದ ಬಳಿಕ ನಮ್ಮನ್ನು ಕೇಳುವವರೇ ಇಲ್ಲ ಎಂದು ಆರೋಪಿಸಿ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದಾರೆ.

Lok Sabha Election 2024 Villagers vandalise polling booth in Chamarajanagar

85 ಮಂದಿಯಲ್ಲಿ ಮತ ಚಲಾಯಿಸಿದ್ದು ಇಬ್ಬರೇ!

ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸಿಕೆರೆ ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗಿದೆ. ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದಾರೆ. ಉಳಿದಂತೆ ಮತಗಟ್ಟೆಗಳತ್ತ ಯಾರೊಬ್ಬರೂ ಸುಳಿದಿಲ್ಲ.

Lok Sabha Election 2024 Villagers vandalise polling booth in Chamarajanagar

ನೀರು, ರಸ್ತೆ, ವಿದ್ಯುತ್‌ ಏನೂ ಇಲ್ಲ!

ಕನಿಷ್ಠ ಮೂಲಭೂತ ಸೌಕರ್ಯವನ್ನೂ ನೀಡಲಾಗಿಲ್ಲ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಎಲ್ಲವೂ ಇಲ್ಲಿ ಮರೀಚಿಕೆಯಾಗಿದೆ. ಕೆಲವು ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೂ, ಯಾವೊಂದು ಭರವಸೆ ಸಿಗದೇ ಇರುವ ಹಿನ್ನೆಲೆಯಲ್ಲಿ ಮತದಾನವನ್ನು ಬಹಿಷ್ಕಾರ ಮಾಡುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ಮತಯಂತ್ರ ಧ್ವಂಸ ಮಾಡಿದ ಗ್ರಾಮಸ್ಥರು

ಇನ್ನು ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಮತದಾನದಿಂದ ದೂರ ಉಳಿದ ಗ್ರಾಮಸ್ಥರಿಂದ ಈ ಕೃತ್ಯ ನಡೆದಿದೆ. ಈ ವೇಳೆ ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ.

ಲಾಠಿ ಚಾರ್ಚ್‌; ಹಲವರಿಗೆ ಗಾಯ

ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿದೆ. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿವೆ. ಪುರುಷರು, ಮಹಿಳೆಯರು ಎನ್ನದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lok sabha election 2024
Lok Sabha Election 202412 mins ago

Lok Sabha Election 2024 : ವೋಟ್‌ ಮಾಡಲು ಒಂದೂವರೆ ಲಕ್ಷ ರೂ. ಖರ್ಚು; ಲಂಡನ್‌ನಿಂದ ಮಂಡ್ಯಕ್ಕೆ ಬಂದ ಮಹಿಳೆ

IPL 2024
ಪ್ರಮುಖ ಸುದ್ದಿ16 mins ago

IPL 2024 : ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದ ಅಫಘಾನಿಸ್ತಾನ ತಂಡದ ಆಟಗಾರ

Lok Sabha Election 2024 union minister pralhad joshi latest statement at hubballi
ಕರ್ನಾಟಕ17 mins ago

Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ

X Server Down
ದೇಶ17 mins ago

X Server Down: ದೇಶಾದ್ಯಂತ ಎಕ್ಸ್‌ ಜಾಲತಾಣದ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

Lok Sabha Election 2024 Sri Vishwapriya Theertha Swamiji of Adamaru Mutt casts his vote for second time
Lok Sabha Election 202418 mins ago

Lok Sabha Election 2024: 2ನೇ ಬಾರಿಗೆ ಬಂದು ಮತದಾನ ಮಾಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು!

Rekha kisses Richa Chadha baby bump at Heeramandi event
ಬಾಲಿವುಡ್23 mins ago

Richa Chadda:  ರಿಚಾ ಚಡ್ಡಾ ಬೇಬಿ ಬಂಪ್‌ಗೆ ಮುತ್ತಿಟ್ಟ ನಟಿ ರೇಖಾ!

Lok sabha election 2024
Lok Sabha Election 202430 mins ago

Lok Sabha Election 2024 : ಟೇಬಲ್ ಕಿತ್ತೆಸೆದು ಬಿಜೆಪಿ ಕಾರ್ಯಕರ್ತನ ಎದೆಗೆ ಒದ್ದ ರೌಡಿಶೀಟರ್‌ ಕಟ್ಟಿಂಗ್ ಸೀನ

Lok Sabha Election 2024
ಕರ್ನಾಟಕ34 mins ago

Lok Sabha Election 2024: ಮೂರು ಗಂಟೆವರೆಗೆ ಶೇ.50.93 ವೋಟಿಂಗ್‌; ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗುತ್ತಾ?

IPL 2024
ಪ್ರಮುಖ ಸುದ್ದಿ46 mins ago

IPL 2024 : ಐಪಿಎಲ್ ವಿಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಡಿಸ್ನಿ ಹಾಟ್​​ಸ್ಟಾರ್​

Mangoes for Health
ಆರೋಗ್ಯ55 mins ago

Mangoes for Health: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ5 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20246 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20246 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ12 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌