Shimogga tense | ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದ ಗೃಹ ಸಚಿವ ಜ್ಞಾನೇಂದ್ರ - Vistara News

ಕರ್ನಾಟಕ

Shimogga tense | ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದ ಗೃಹ ಸಚಿವ ಜ್ಞಾನೇಂದ್ರ

ಶಿವಮೊಗ್ಗ ಜಿಲ್ಲೆಯವರೇ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಚೂರಿ ಇರಿತದಿಂದ ಗಾಯಗೊಂಡಿರುವ ಪ್ರೇಮ್‌ ಕುಮಾರ್‌ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಹಿರಿಯ ಅಧಿಕಾರಿಗಳಿಂದ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

VISTARANEWS.COM


on

Shimogga tense
ಚೂರಿ ಇರಿತದಿಂದ ಗಾಯಗೊಂಡಿರುವ ಪ್ರೇಮ್‌ ಕುಮಾರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ದುಷ್ಕರ್ಮಿಗಳ ಚೂರಿ ಇರಿತದಿಂದ ಗಾಯಗೊಂಡಿರುವ ಪ್ರೇಮ್‌ ಕುಮಾರ್‌ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ವೈದ್ಯಾಧಿಕಾರಿಗಳಿಂದ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಘರ್ಷಣೆ ಆರಂಭವಾಗುತ್ತಿದೆ ಎಂಬ ಮಾಹಿತಿ ಬಂದ ಕೂಡಲೇ ಗೃಹ ಸಚಿವರು ನಗರಕ್ಕೆ ಆಗಮಿಸಿದ್ದು, ಹಿರಿಯ ಅಧಿಕಾರಿಗಳಿಂದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಫ್ಲೆಕ್ಸ್‌ ಅಳವಡಿಕೆ ವಿಷಯದಲ್ಲಿ ಈ ಗಲಾಟೆ ನಡೆದಿದ್ದು, ಈ ಕುರಿತೂ ತನಿಖೆ ನಡೆಸಲಾಗುತ್ತದೆ. ಚಾಕುವಿನಿಂದ ಇರಿದ ಆರೋಪಿಗಳ ಬಂಧನಕ್ಕೂ ಕ್ರಮ ತೆಗೆದುಕೊಂಡಿದ್ದೇವೆ. ಈ ಘಟನೆಯಲ್ಲಿ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ‌ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಹೆಚ್ಚುವರಿ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದ್ದು, ಎಡಿಜಿಪಿ ಅಲೋಕ್ ಕುಮಾರ್ ಕೂಡ ಆಗಮಿಸಲಿದ್ದಾರೆ ಎಂದು ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಘಟನೆಯ ಹಿಂದೆ ಇರಬಹುದಾದ ಮತಾಂಧ ಶಕ್ತಿಗಳನ್ನು ಬಯಲು ಮಾಡಬೇಕಿದೆ ಎಂದು ಹೇಳಿದ ಸಚಿವರು, ಇತ್ತೀಚೆಗೆ ಎಸ್‌ಡಿಪಿಐ ಕಾರ್ಯಕರ್ತ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಲಘುವಾಗಿ ಮಾತನಾಡಿದ್ದಾರೆ. ಇದು ಅದರ ಮುಂದುವರಿದ ಭಾಗವೇ ಎಂಬುದನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.

ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆಯು ನಗರಾದ್ಯಂತ ಅಳವಡಿಸಿರುವ ಎಲ್ಲ ಫ್ಲೆಕ್ಸ್‌ ಗಳನ್ನು ತೆರವುಗೊಳಿಸಿದೆ.

ಮನೆಗೆ ಹೋಗುವಾಗ ದಾಳಿ
ಈ ನಡುವೆ ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಸರವಣ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. “ನಗರದಲ್ಲಿ ಗಲಾಟೆ ಆರಂಭಗೊಂಡಿದ್ದರಿಂದ ಮೂರು ಗಂಟೆಗೆ ಅಂಗಡಿ ಕ್ಲೋಸ್ ಮಾಡಿದ್ದೆವು.  ಅಂಗಡಿ ಕ್ಲೋಸ್ ಮಾಡಿ ಮನೆಗೆ ಹೋಗುವಾಗ ಎಂಟು ಹತ್ತು‌ಜನರ ತಂಡ ನಮ್ಮ ಮೇಲೆ ದಾಳಿ ಮಾಡಿತು. ಮೊದಲು ನನ್ನ ಮೇಲೆ ಹಲ್ಲೆ ನಡೆಸಲಾರಂಭಿಸಿದರು. ಆಗ ನಾನು ಅವರಿಂದ ತಪ್ಪಿಸಿಕೊಂಡು ಬಜಾರ್ ಕಡೆ ಓಡಿ ಹೋದೆ. ಬಳಿಕ ನನ್ನ ಹಿಂದೆ‌ ಬರುತಿದ್ದ ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿದರು. ನಾನು‌ ನೋಡನೋಡುತಿದ್ದಂತೆಯೇ ಪ್ರೇಮ್‌ ಸಿಂಗ್ ಗೆ ಚಾಕುವಿನಿಂದ ಇರಿದರುʼʼ ಎಂದು ಸರವಣ ಹೇಳಿದ್ದಾರೆ.

“ಕೂಡಲೇ ನಾನು ಅಂಗಡಿ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ಕೂಡಲೇ ಸ್ಥಳಕ್ಕೆ  ಆಗಮಿಸಿ ಪ್ರೇಮ್ ಸಿಂಗ್ ನನ್ನು ಆಸ್ಪತ್ರೆಗೆ ದಾಖಲಿಸಿದರುʼʼ ಎಂದು ಸರವಣ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ| Shimogga tense | ಉಸ್ತುವಾರಿ ಸಚಿವರ ಸಭೆ, ನಾಳೆ ಶಿವಮೊಗ್ಗ ನಗರ, ಭದ್ರಾವತಿಯಲ್ಲಿ ಶಾಲೆಗೆ ರಜೆಗೆ ಸೂಚನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Tungabhadra Dam: ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕಟ್‌; ನದಿಪಾತ್ರದಲ್ಲಿ ಪ್ರವಾಹ ಭೀತಿ

Tungabhadra Dam: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟಿನ ಚೈನ್‌ ತುಂಡಾಗಿ ಅಪಾರ ಪ್ರಮಾಣ ನೀರು ನದಿ ಪಾತ್ರದಕ್ಕೆ ಹರಿದು ಹೋಗುತ್ತಿದ್ದು, ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಸಂಪೂರ್ಣ ಭರ್ತಿಯಾಗಿದ್ದ ಜಲಾಶಯ ಗೇಟ್‌ಗೆ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹೀಗಾಗಿ ತನ್ನಿಂದ ತಾನೇ ಓಪನ್ ಆಗಿದೆ.

VISTARANEWS.COM


on

Tungabhadra Dam
Koo

ಕೊಪ್ಪಳ / ವಿಜಯನಗರ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್‌ ಗೇಟಿನ ಚೈನ್‌ ತುಂಡಾಗಿ ಅಪಾರ ಪ್ರಮಾಣ ನೀರು ನದಿ ಪಾತ್ರದಕ್ಕೆ ಹರಿದು ಹೋಗುತ್ತಿದ್ದು, ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

ಒಂದೇ ಗೇಟ್‌ನಿಂದ 35 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗಿರುವುಸಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಸಂಪೂರ್ಣ ಭರ್ತಿಯಾಗಿದ್ದ ಜಲಾಶಯ ಗೇಟ್‌ಗೆ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹೀಗಾಗಿ ತನ್ನಿಂದ ತಾನೇ ಓಪನ್ ಆಗಿದೆ. ಜಲಾಶಯ ಇತಿಹಾಸದಲ್ಲೇ ಗೇಟ್ ಕಿತ್ತೋಗಿರುವುದು ಇದು ಮೊದಲ ಬಾರಿ.

ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು

ಶನಿವಾರ ರಾತ್ರಿ ಗೇಟ್‌ ಓಪನ್‌ ಆಗಿದ್ದು, ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ವಿಜಯನಗರ ಜಿಲ್ಲಾ ಎಸ್‌ಪಿ ಶ್ರೀ ಹರಿಬಾಬು ಬಿ.ಎಲ್‌. ಆಗಮಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಮಾತ್ರವಲ್ಲ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳು, ಅದಿಕಾರಿಗಳು ಅಲರ್ಟ್‌ ಆಗಿದ್ದಾರೆ. ವಿಜಯನಗರ ಶಾಸಕ ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಧ್ಯರಾತ್ರಿಯಿಂದಲೇ ಡ್ಯಾಂ ಗೇಟ್ ಬಳಿ ಪೊಲೀಸರು ಜಮಾಯಿಸಿದ್ದು, ಪ್ರವೇಶ ನಿರಾಕರಿಸಲಾಗಿದೆ.

ಜಲಾಶಯದ 20 ಗೇಟ್‌ಗಳಿಂದ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಸಾಧ್ಯತೆ ಇದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ತಿಳಿಸಿದರು. ʼʼಗೇಟ್ ಕಟ್ ಆಗಿರುವ ಕುರಿತು ಜಲ ಸಂಪನ್ಮೂಲ ಸಚಿವರಿಗೆ ಮಾಹಿತಿ ನೀಡಿಲಾಗಿದೆ. ಮುಖ್ಯಮಂತ್ರಿಗೂ ಮಾಹಿತಿ ನೀಡುವ ಪಯತ್ನ ನಡೆದಿದೆ. ಸುಮಾರು 60 ಟಿಎಂಸಿ ನೀರು ಜಲಾಶಯದಿಂದ ನದಿ ಮೂಲಕ ಹೊರ ಬಿಡಬೇಕಿದೆ. ಇಷ್ಟು ಪ್ರಮಾಣದ ನೀರು ಹೊರ ಹೋಗಲು ನಾಲ್ಕಕ್ಕೂ ಹೆಚ್ಚು ದಿನ ಬೇಕು. ಚೈನ್ ಲಿಂಕ್ ಕಟ್ ಆಗಿರುವ ಗೇಟ್ ಸರಿಪಡಿಸುವ ಬಗ್ಗೆ ವಿಶೇಷ ತಾಂತ್ರಿಕ ತಂಡ ಆಗಮಿಸಲಿದೆʼʼ ಎಂದು ಅವರು ಮಾಹಿತಿ ನೀಡಿದರು.

ತುಂಗಭದ್ರಾ ಜಲಾಶಯದ 19ನೇ ಗೇಟ್ ಸಂಪೂರ್ಣ ಡ್ಯಾಮೇಜ್ ಆಗಿರುವ ಸುದ್ದಿ ತಿಳಿಯುತ್ತಲೇ ವಿಜಯನಗರ ಶಾಸಕ ಗವಿಯಪ್ಪ ಅವರು ಸ್ವತಃ ಕಾರು ಚಲಾಯಿಸಿಕೊಂಡು ಡ್ಯಾಂಗೆ ಬಳಿಗೆ ಮಧ್ಯರಾತ್ರಿಯೇ ಆಗಮಿಸಿದರು. ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಎಸ್.ಪಿ ಹರಿಬಾಬು ಅವರಿಂದ ಶಾಸಕ ಗವಿಯಪ್ಪ ಮಾಹಿತಿ ಪಡೆದುಕೊಂಡರು.

ಸಿಇಎಲ್ ಭೇಟಿ

ಇನ್ನು ತುಂಗಭದ್ರಾ ನೀರಾವರಿ ವಲಯದ ಸಿಇಎಲ್ ಬಸವರಾಜ್ ಭೇಟಿ ನೀಡಿ ಪರಿಶೀಲಿಸಿದರು. ʼʼ19ನೇ ಕ್ರಸ್ಟಗೇಟ್ ಡಿಲೀಂಕ್ ಆಗಿ‌ ಕಟ್ ಆಗಿ ಹೋಗಿದೆ. ಇದೀಗ ಒಂದೇ ಕಡೆ ಒತ್ತಡ ಬೀಳುವುದನ್ನು ಕಡಿಮೆ ಮಾಡಲಾಗಿದೆ. ಉಳಿದ ಗೇಟ್‌ಗಳನ್ನು ಓಪನ್ ಮಾಡಿ ನೀರು ಬಿಡಲಾಗುತ್ತಿದೆ. ಭಾನುವಾರ ಬೆಂಗಳೂರಿನಿಂದ ತಜ್ಞರ ತಂಡ ಡ್ಯಾಂಗೆ ಬರಲಿದೆʼʼ ಎಂದು ತಿಳಿಸಿದರು. ʼʼಪ್ರತಿವರ್ಷ ಡ್ಯಾಂ ಗೇಟ್‌ಗಳನ್ನು ದುರಸ್ತಿ ಮಾಡಲಾಗುತ್ತದೆ. ಡ್ಯಾಂಗೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಆತಂಕಪಡಬೇಕಾಗಿಲ್ಲ. ಇರುವ ನೀರಲ್ಲಿಯೇ ಕೆಲಸ ಮಾಡಲು ಆಗುತ್ತಾ, ಇಲ್ವಾ ಅನ್ನೋದನ್ನು ತಜ್ಞರ ತಂಡ ನಿರ್ಧರಿಸಲಿದೆ. 69 ವರ್ಷದ ಡ್ಯಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ಆಗಿದೆʼʼ ಎಂದು ಮಾಹಿತಿ ನೀಡಿದರು.

30 ಗೇಟ್ ಓಪನ್‌

ಸದ್ಯ 30 ಗೇಟ್‌ಗಳನ್ನು ತೆರೆದು ಟಿಬಿ ಬೋರ್ಡ್ ನೀರು ಹರಿಯಬಿಟ್ಟಿದೆ. ಇದರಿಂದ ಹಂಪಿ, ಜನತಾ ಪ್ಲಾಟ್, ಕಂಪಿ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ರಾತ್ರೋರಾತ್ರಿ ನದಿ ಪಾತ್ರದ ಜನರಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಸದ್ಯಕ್ಕೆ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಹರಿವು ಇದ್ದು, ಸಂಜೆ ವೇಳೆಗೆ ಜಾಸ್ತಿಯಾಗಲಿದೆ. 2.5 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯಬಿಟ್ಟಲ್ಲಿ ಪ್ರವಾಹ ಎದುರಾಗಲಿದೆ.

ಸಚಿವ ‌ಶಿವರಾಜ್ ತಂಗಡಗಿ ಭೇಟಿ

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ‌ಶಿವರಾಜ್ ತಂಗಡಗಿ ಭೇಟಿ ನೀಡಿದರು. ʼʼಅಧಿಕಾರಿಗಳ ಜತೆ ಈ ಬಗ್ಗೆ ಮಾತನಾಡಿದ್ದೇನೆ. ಸದ್ಯದ ಮಟ್ಟಿಗೆ 60ರಿಂದ 65 ಟಿಎಂಸಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. 20 ಅಡಿ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಏನಾಗಿದೆ ಅಂತ ಗೊತ್ತಾಗಲಿದೆ. ಹೀಗಾಗಿ ಡ್ಯಾಂ ನಲ್ಲಿರುವ ನೀರನ್ನು ಖಾಲಿ ಮಾಡುವ ಅನಿವಾರ್ಯತೆ ಉಂಟಾಗಿದೆ. ಡ್ಯಾಂ ನಿರ್ಮಾಣ ಸಮಯದಲ್ಲಿನ ಡಿಸೈನ್ ತರಿಸಲಾಗುತ್ತಿದೆ. ನೀರಿನ ಒತ್ತಡ ಹೆಚ್ಚಿರುವುದರಿಂದ ಕೆಳಗಿಳಿದು ಕೆಲಸ ಮಾಡಲು ಆಗುತ್ತಿಲ್ಲ. ಸದ್ಯ 1 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 2.35 ಲಕ್ಷ ಕ್ಯೂಸೆಕ್ ನೀರು ಬಿಟ್ಟರು ನದಿ ಪಾತ್ರದಲ್ಲಿ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. 2.50 ಲಕ್ಷ ಕ್ಯೂಸೆಕ್ ದಾಟಿದರೆ ಪ್ರವಾಹದ ಭೀತಿ ಎದುರಾಗಲಿದೆ. ಘಟನೆ ಬಗ್ಗೆ ಸಿಎಂ ಮತ್ತು ಡಿಸಿಎಂಗೆ ಮಾಹಿತಿ ನೀಡಲಾಗುತ್ತಿದೆʼʼ ಎಂದರು. ಇಂದು ಬೆಂಗಳೂರು, ಹೈದ್ರಾಬಾದ್, ಚೆನ್ನೈಯಿಂದ ತಜ್ಞರ ತಂಡ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದೂ ತಿಳಿಸಿದರು.

ಇದನ್ನೂ ಓದಿ: Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Continue Reading

ಕರ್ನಾಟಕ

Dog Meat: ಅಬ್ದುಲ್‌ ರಜಾಕ್‌ ಬಾಕ್ಸ್‌ನಲ್ಲಿದ್ದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ; ಹೈದರಾಬಾದ್‌ ಲ್ಯಾಬ್‌ ವರದಿ

Dog Meat: ರಾಜಸ್ಥಾನದಿಂದ ವ್ಯಾಪಾರಿ ಅಬ್ದುಲ್‌ ರಜಾಕ್‌ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್‌ ಕೆರೆಹಳ್ಳಿ ಸೇರಿ ಹಲವು ಆರೋಪಿಸಿದ್ದರು. ಹಾಗಾಗಿ, ಕೆಲ ಬಾಕ್ಸ್‌ಗಳಲ್ಲಿದ್ದ ಮಾಂಸದ ಸ್ಯಾಂಪಲ್‌ಅನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಅದರ ವರದಿ ಬಂದಿದ್ದು, ಬಾಕ್ಸ್‌ನಲ್ಲಿದ್ದಿದ್ದು ಕುರಿ ಮಾಂಸವೇ ಎಂಬುದು ಸಾಬೀತಾಗಿದೆ.

VISTARANEWS.COM


on

Dog meat
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಿ (Majestic Railway Station) ಪತ್ತೆಯಾಗಿರುವುದು ಕುರಿ ಮಾಂಸವೇ (mutton) ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್‌ ಹೇಳಿದ್ದಾರೆ. ಲ್ಯಾಬ್ ರಿಪೋರ್ಟ್‌ನಲ್ಲಿ (Lab Report) ಇದು ಕುರಿ ಮಾಂಸ ಎಂದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಹೈದರಾಬಾದ್‌ ಲ್ಯಾಬ್‌ ವರದಿ ಕೂಡ ಲಭ್ಯವಾಗಿದ್ದು, ಬಾಕ್ಸ್‌ನಲ್ಲಿದ್ದಿದ್ದು ಕುರಿ ಮಾಂಸವೇ ಎಂದು ಸ್ಪಷ್ಟಪಡಿಸಿದೆ. ಇದು ಕೂಡ ʼನಾಯಿ ಮಾಂಸ ವಿವಾದʼ (Dog Meat Controversy) ಎತ್ತಿರುವ ಪುನೀತ್‌ ಕೆರೆಹಳ್ಳಿ (Puneeth Kerehalli) ಬಳಗಕ್ಕೆ ಹಿನ್ನಡೆಯಾಗಿದೆ.

ರಾಜಸ್ಥಾನದಿಂದ ವ್ಯಾಪಾರಿ ಅಬ್ದುಲ್‌ ರಜಾಕ್‌ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್‌ ಕೆರೆಹಳ್ಳಿ ಸೇರಿ ಹಲವು ಆರೋಪಿಸಿದ್ದರು. ಹಾಗಾಗಿ, ಬಾಕ್ಸ್‌ನಲ್ಲಿದ್ದ ಮಾಂಸದ ಸ್ಯಾಂಪಲ್‌ಅನ್ನು ಹೈದರಾಬಾದ್‌ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಲ್ಯಾಬ್‌ ವರದಿ ಬಂದಿದ್ದು, ಅದು ಕುರಿ ಮಾಂಸವೇ ಎಂಬುದು ದೃಢವಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ. ಅಲ್ಲಿಗೆ, ನಾಯಿ ಮಾಂಸ ವಿವಾದವು ಸತ್ವ ಕಳೆದುಕೊಂಡಂತಾಗಿದೆ.

Puneeth Kerehalli
Puneeth Kerehalli

ಜುಲೈ 26ರಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 86 ಬಾಕ್ಸ್‌ಗಳಷ್ಟು ರಾಜಸ್ಥಾನದಿಂದ ತರಿಸಿದ ಮಾಂಸದ ಬಾಕ್ಸ್‌ಗಳು ಪತ್ತೆಯಾಗಿದ್ದವು. ಇವುಗಳನ್ನು ಹೈದರಾಬಾದ್‌ನ ICAR ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅದರಲ್ಲಿ S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದೆ. ಹಾಗೆಂದರೆ ಅದು ಕುರಿಯ ವೈಜ್ಞಾನಿಕ ಹೆಸರು. ಹೀಗಾಗಿ ಇದು ಕುರಿ ಮಾಂಸ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿಕೆ ನೀಡಿದ್ದರು.

FSSAI ಗೈಡ್‌ಲೈನ್ಸ್ ಪ್ರಕಾರ ಉದ್ಯಮಿ ರಜಾಕ್ ಕೊಟ್ಟ ದಾಖಲೆ ಎಲ್ಲವೂ ಸರಿಯಾಗಿಯೇ ಇದೆ. ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆಯಿಂದ ನಗರಕ್ಕೆ ಮಾಂಸ ಆಮದಾಗುತ್ತಿದೆ. ಮೀನು, ಕುರಿ ಸೇರಿದಂತೆ ವಿವಿಧ ರೀತಿಯ ಮಾಂಸ ಆಮದಾಗುತ್ತಿದೆ. ಎಲ್ಲವನ್ನೂ ಆಹಾರ ಗುಣಮಟ್ಟ ಇಲಾಖೆ ಪರೀಕ್ಷೆ ಮಾಡಿದೆ. ಮುಂದೆಯೂ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

Continue Reading

ಮಳೆ

Karnataka Weather : ಬೆಂಗಳೂರಿನಲ್ಲಿಂದು ಗುಡುಗು ಸಹಿತ ಸಾಧಾರಣ ಮಳೆ ಎಚ್ಚರಿಕೆ

karnataka Weather Forecast : ರಾಜ್ಯಾದ್ಯಂತ ಮಳೆ (Rain News) ಅಬ್ಬರ ತಗ್ಗಿದ್ದರೂ ಕೆಲವು ಆಯ್ದ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಇದೆ. ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗಬಹುದು.

VISTARANEWS.COM


on

By

Karnataka weather Forecast
Koo

ಬೆಂಗಳೂರು: ನೈರುತ್ಯ ಮಾನ್ಸೂನ್‌ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲಗೊಂಡಿದೆ. ದಕ್ಷಿಣ ಒಳನಾಡಿನಲ್ಲಿ (Karnataka weather Forecast) ಸಾಮಾನ್ಯವಾಗಿತ್ತು. ಆಗಸ್ಟ್‌ 11ರಂದು ಬೆಂಗಳೂರು ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗುವ (Rain News) ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನ ಮೈಸೂರು ಮತ್ತು ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರದ ಒಂದೆರಡು ಕಡಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ಯಾದಗಿರಿ, ಧಾರವಾಡ, ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ರಾಯಚೂರಿನಲ್ಲಿ ಮಧ್ಯಮ ಮಳೆಯಾಗುವ ನಿರೀಕ್ಷೆ ಇದೆ.

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಕರಾವಳಿ ದಕ್ಷಿಣ ಕನ್ನಡ ಉಡುಪಿ, ಉತ್ತರ ಕನ್ನಡದಲ್ಲಿ ಸಾಧಾರಣವಾಗಿರಲಿದೆ.

ಗುಡುಗು ಸಹಿತ ಮಳೆ

ಬೆಂಗಳೂರಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಜತೆಗೆ ಥಂಡಿ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28ºC ಮತ್ತು 21ºC ಇರಲಿದೆ.

ಇದನ್ನೂ ಓದಿ: KEA: ಸಹಾಯ ಎಂಜಿನಿಯರ್ ಹುದ್ದೆಗಳಿಗೆ ನಾಳೆ ನೇಮಕ ಪರೀಕ್ಷೆ; ವೆಬ್ ಕಾಸ್ಟಿಂಗ್ ಮೂಲಕ 28 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ

ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

ಮಾನ್ಸೂನ್‌ ಫ್ಯಾಷನ್‌ನಲ್ಲಿ ಆಕರ್ಷಕವಾದ ಕಿಡ್ಸ್ ರೈನ್‌ಕೋಟ್‌ಗಳು (Kids Raincoats) ಲಗ್ಗೆ ಇಟ್ಟಿವೆ. ಹೌದು, ಮಾನ್ಸೂನ್‌ ಸೀಸನ್‌ನಲ್ಲಿ ಎಲ್ಲಾ ವಯಸ್ಸಿನ ಮಕ್ಕಳಿಗೆ ಇಷ್ಟವಾಗುವಂತಹ ಬಗೆಬಗೆಯ ಕಾರ್ಟೂನ್‌ ಚಿತ್ತಾರವಿರುವಂತಹ ನಾನಾ ಬಗೆಯ ಆಕರ್ಷಕ ಬಣ್ಣ ಬಣ್ಣದ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ.

Kids Raincoats

ಮಕ್ಕಳನ್ನು ಉಲ್ಲಾಸಿತಗೊಳಿಸುವ ರೈನ್‌ಕೋಟ್ಸ್

“ ಪ್ರತಿ ಬಾರಿಯೂ ಮಾನ್ಸೂನ್‌ನಲ್ಲಿ ಮಕ್ಕಳಿಗೆ ನಾನಾ ವೆರೈಟಿ ವಿನ್ಯಾಸದ ರೈನ್‌ಕೋಟ್‌ಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಮಕ್ಕಳು ಇಷ್ಟಪಟ್ಟು ಧರಿಸುವಂತಹ ಕಲರ್‌ ಹಾಗೂ ಚಿತ್ತಾರಗಳಿರುವಂತವು ಹೆಚ್ಚಾಗಿ ಬಿಕರಿಯಾಗುತ್ತವೆ. ಇದಕ್ಕೆ ಪೂರಕ ಎಂಬಂತೆ, ಮಳೆಗಾಲದಲ್ಲಿ ಔಟಿಂಗ್‌ ಅಥವಾ ಹೊರಗಡೆ ಹೋದಾಗ ಆಕರ್ಷಕವಾಗಿ ಕಾಣಿಸುವಂತಹ ಕಲರ್‌ಫುಲ್‌ ಡಿಸೈನ್‌ನ ರೈನ್‌ಕೋಟ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಆಗಮಿಸಿವೆ. ಉತ್ತಮ ಗುಣ ಮಟ್ಟದ ಬ್ರಾಂಡ್‌ಗಳಿಂದಿಡಿದು, ರಸ್ತೆ ಬದಿ ಮಾರುವಂತಹ ಲೋಕಲ್‌ ಡಿಸೈನ್‌ನಲ್ಲೂ ದೊರೆಯುತ್ತಿವೆ. ಆದರೆ, ಇವನ್ನು ಕೊಳ್ಳುವಾಗ ಮೆಟಿರಿಯಲ್‌ ಪರಿಶೀಲಿಸಿ ಕೊಳ್ಳುವುದು ಮುಖ್ಯ “ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌‌ಗಳು.

Kids Raincoats

ಟ್ರೆಂಡ್‌ನಲ್ಲಿರುವ ಚಿಣ್ಣರ ರೈನ್‌ಕೋಟ್ಸ್

ವಾಟರ್‌ ಪ್ರೂಫ್‌ನ ಹೂಡಿ ರೈನ್‌ಕೋಟ್ಸ್, ಯೂನಿಸೆಕ್ಸ್ ರೈನ್‌ಕೋಟ್ಸ್, ಅನಿಮಲ್‌ ಪ್ರಿಂಟ್‌, ಕಾರ್ಟೂನ್‌ ಪ್ರಿಂಟ್, ಗ್ರಾಫಿಕ್ ಪ್ರಿಂಟ್‌, ಪಾಲಿಸ್ಟರ್‌, ತ್ರಿ ಡಿ ಕಲರ್‌, ಹೆಣ್ಣುಮಕ್ಕಳ ಬಾರ್ಬಿ ಪ್ರಿಂಟ್ಸ್, ಕೊರಿಯನ್‌ ಸ್ಟೈಲ್‌, ಕೇಪ್‌ ಸ್ಟೈಲ್‌, ಟ್ರೆಂಚ್‌ ಕೋಟ್‌ ಸ್ಟೈಲ್‌, ಬ್ಯಾಕ್‌ಪ್ಯಾಕ್‌ ಕವರ್‌ ರೈನ್‌ಕೋಟ್‌ಗಳು ಈ ಸೀಸನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿವೆ. ಎಲ್ಲರೂ ಅವರವರ ಮಕ್ಕಳಿಗೆ ಮ್ಯಾಚ್‌ ಆಗುವಂತಹ ರೈನ್‌ಕೋಟ್‌ಗಳನ್ನು ಪೋಷಕರು ಖರೀದಿಸುವುದು ಕೂಡ ಇಂದು ಹೆಚ್ಚಾಗಿದೆ ಎನ್ನುತ್ತಾರೆ ರೈನ್‌ಕೋಟ್‌ ವ್ಯಾಪಾರಿಗಳು.

Kids Raincoats
Kids Raincoats

ಆನ್‌ಲೈನ್‌ನಲ್ಲಿ ರೈನ್‌ಕೋಟ್‌ ಅಬ್ಬರ

ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆಂದೇ ಈಗಾಗಲೇ ಕಿಡ್ಸ್ ಕೆಟಗರಿಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ರೈನ್‌ಕೋಟ್‌ಗಳು ಲಗ್ಗೆ ಇಟ್ಟಿವೆ. ಕೆಲವು ಆನ್‌ಲೈನ್‌ ಶಾಪ್‌ಗಳು ಮಾನ್ಸೂನ್‌ ಆಫರ್‌ನಲ್ಲಿ ಕಡಿಮೆ ಬೆಲೆ ನಿಗಧಿಪಡಿಸಿದ್ದರೇ, ಇನ್ನು ಕೆಲವು ನ್ಯೂ ಅರೈವಲ್‌ ಕೆಟಗರಿಯಲ್ಲಿ ದರ ಹೆಚ್ಚಿಸಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

ಹೀಗಿರಲಿ ಮಕ್ಕಳ ರೈನ್‌ಕೋಟ್‌ ಆಯ್ಕೆ

  • ವಾಟರ್‌ಪ್ರೂಫ್‌ ರೈನ್‌ಕೋಟ್‌ಗೆ ಆದ್ಯತೆ ನೀಡಿ.
  • ಆದಷ್ಟೂ ಮಂಡಿ ಕೆಳಗಿನ ತನಕ ಉದ್ದವಿರುವ ರೈನ್‌ಕೋಟ್‌ ಖರೀದಿಸಿ.
  • ಮನೆಯಲ್ಲಿ ಇಬ್ಬರಿಗಿಂತ ಮಕ್ಕಳು ಹೆಚ್ಚಿದ್ದಲ್ಲಿ ಯೂನಿಸೆಕ್ಸ್ ರೈನ್‌ಕೋಟ್‌ ಬಳಸಬಹುದು.
  • ಟ್ರೆಂಡ್‌ಗೆ ತಕ್ಕಂತೆ ಬಿಡುಗಡೆಗೊಂಡಿರುವ ರೈನ್‌ಕೋಟ್‌ ಕೊಳ್ಳಿ.
  • ಮಕ್ಕಳನ್ನು ಉಲ್ಲಾಸಿತಗೊಳಿಸುವಂತಹ ಪ್ರಿಂಟ್ಸ್ ಇರುವಂತಹ ಕಲರ್‌ಫುಲ್‌ ರೈನ್‌ಕೋಟ್‌ ಚೂಸ್‌ ಮಾಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Tharun Sudhir: ತರುಣ್‌-ಸೋನಲ್‌ಗೆ ಬಿಎಸ್‌ವೈ, ರಮೇಶ್‌ ಅರವಿಂದ್‌ ಸೇರಿ ಗಣ್ಯರಿಂದ ಶುಭಾಶಯ; Video, Photos ಇಲ್ಲಿವೆ

Tharun Sudhir: ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್​ಲೈನ್​ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ. ಈಗ ಈ ಜೋಡಿಯು ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದೆ.

VISTARANEWS.COM


on

Tharun Sudhir
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕ ತರುಣ್‌ ಸುಧೀರ್‌ (Tharun Sudhir) ಹಾಗೂ ಸೋನಲ್‌ ಮೊಂಥೆರೋ (Sonal Monteiro) ಅವರ ಆರತಕ್ಷತೆಯು ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನಲ್ಲಿ ರಿಸೆಪ್ಶನ್‌ ನಡೆದಿದ್ದು, ಸ್ಯಾಂಡಲ್‌ವುಡ್‌ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ರಾಜಕಾರಣಿಗಳು ಸೇರಿ ನೂರಾರು ಗಣ್ಯರು ರಿಸೆಪ್ಶನ್‌ನಲ್ಲಿ ಭಾಗವಹಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ. ಭಾನುವಾರ (ಆಗಸ್ಟ್‌ 11) ಮದುವೆ ಸಮಾರಂಭ ನಡೆಯಲಿದ್ದು, ಇನ್ನಷ್ಟು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಸಿನಿಮಾ ಕಾನ್ಸೆಪ್ಟ್‌ನಲ್ಲಿಯೇ ಸಿದ್ಧವಾದ ವೇದಿಕೆ ಮೇಲೆ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಅವರು ಮಿಂಚಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟ ಪ್ರೇಮ್‌, ನಟಿಯರಾದ ಮಾಲಾಶ್ರೀ, ಆರಾಧನಾ ಮಾಲಾಶ್ರೀ, ಪ್ರೇಮಾ, ನಿರ್ಮಾಪಕ ಕೆ.ಮಂಜು, ನಟ ರಮೇಶ್‌ ಅರವಿಂದ್‌ ಸೇರಿ ಹಲವು ಸೆಲೆಬ್ರಿಟಿಗಳು, ಗಣ್ಯರು ನೂತನ ಜೋಡಿಗೆ ಶುಭ ಕೋರಿದರು.

ಕಿಚ್ಚ ಸುದೀಪ್ ಸೇರಿ ಹಲವು ನಟ, ನಟಿಯರು, ನಿರ್ದೆಶಕರನ್ನು ಭೇಟಿಯಾಗಿ ತರುಣ್ ಸುಧೀರ್​ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ. ರಚಿತಾ ರಾಮ್​, ಉಪೇಂದ್ರ, ರಾಘವೇಂದ್ರ ರಾಜ್​ಕುಮಾರ್​ ಅವರಿಗೂ ತರುಣ್​ ಸುಧೀರ್​ ಆಹ್ವಾನ ನೀಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರನ್ನು ತರುಣ್​ ಸುಧೀರ್​ ಅವರು ಮದುವೆಗೆ ಆಹ್ವಾನಿಸಿದ್ದಾರೆ. ಇವರೆಲ್ಲರೂ ಭಾನುವಾರ ಮದುವೆಗೆ ಹಾಜರಾಗುವ ಸಾಧ್ಯತೆ ಇದೆ.

ಆರತಕ್ಷತೆಯ ಲೈವ್‌ ವಿಡಿಯೊ ವೀಕ್ಷಿಸಿ

ಶಿವರಾಜ್​ಕುಮಾರ್​, ಗೀತಾ ದಂಪತಿಯನ್ನು ಭೇಟಿಯಾಗಿ ತರುಣ್​ ಆಹ್ವಾನ ಪತ್ರಿಕೆ ನೀಡಿದ್ದಾರೆ.ರಾಜಕೀಯ ಕ್ಷೇತ್ರದಲ್ಲೂ ಅನೇಕರ ಜೊತೆ ತರುಣ್​ ಸುಧೀರ್​ ಅವರು ಆತ್ಮೀಯತೆ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರು ಈ ಮದುವೆಗೆ ಬರುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರುಣ್​ ಸುಧೀರ್​ ಅವರು ಆಹ್ವಾನಿಸಿ ಬಂದಿದ್ದಾರೆ.

ತರುಣ್ ನೀಡಿರುವ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ. ವಿಶೇಷ ಅಂದರೆ ಮದುವೆ ಮುಗಿದ ನಂತರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂತರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್‌ನಲ್ಲಿ ಹಾಕಿದ್ದರೆ ಅದು ಮಣ್ಣಿನಲ್ಲಿ ಬೆರೆದು ಗಿಡ ಬೆಳೆಯುತ್ತೆ.

ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತರ ಅದು ಮಣ್ಣು ಸೇರಿದ್ದರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಎಂದು ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: Tharun Sudhir: ಸೋನಾಲ್‌  ಬ್ಯಾಚುಲರ್ ಪಾರ್ಟಿ ಬಲು ಜೋರು!  ಕೈ ಹಿಡಿಯೋ ಸುಂದರಿಯನ್ನು ಮುದ್ದಾಗಿ ತರುಣ್ ಹೇಗೆ ಕರೆಯುತ್ತಾರೆ?

Continue Reading
Advertisement
Abhishek Bachchan confirms divorce with Aishwarya Rai Bachchan
ಬಾಲಿವುಡ್2 mins ago

Abhishek Bachchan: ಐಶ್ವರ್ಯಾ ಮತ್ತು ನಾನು ವಿಚ್ಛೇದನ ಪಡೆಯುತ್ತಿದ್ದೇವೆ ಎಂದ ಅಭಿಷೇಕ್ ಬಚ್ಚನ್; ವಿಡಿಯೊ ಇಲ್ಲಿದೆ!

Paris Olympics
ಕ್ರೀಡೆ5 mins ago

Paris Olympics: “ಇಂಡಿಯಾ ಹೌಸ್‌”ನಲ್ಲಿ ನೀರಜ್​ ಚೋಪ್ರಾ ಸೇರಿ ಪದಕ ವಿಜೇತರನ್ನು ಗೌರವಿಸಿದ ನೀತಾ ಅಂಬಾನಿ

Vinay Rajkumar KRG will distribute 'Pepe' movie
ಸ್ಯಾಂಡಲ್ ವುಡ್16 mins ago

Vinay Rajkumar: ವಿನಯ್ ರಾಜ್ ಕುಮಾರ್ ‘ಪೆಪೆ’ ಸಿನಿಮಾ ವಿತರಣೆ ಮಾಡಲಿದೆ ಕೆ ಆರ್ ಜಿ!

Munich Massacre
ವಿದೇಶ20 mins ago

Munich Massacre: 11 ಇಸ್ರೇಲಿ ಅಥ್ಲೀಟ್‌ಗಳ ಹತ್ಯೆಯ ಪ್ರತಿಕಾರ ರೋಚಕ! ʼಮೊಸಾದ್‌ʼ ಏಜೆಂಟರ ಆಪರೇಷನ್‌ ಹೀಗಿತ್ತು

Varamahalakshmi Festival 2024
ಧಾರ್ಮಿಕ25 mins ago

Varamahalakshmi Festival 2024: ವರಮಹಾಲಕ್ಷ್ಮಿ ಪೂಜೆಗೆ ಮನೆಯನ್ನು ಸುಂದರವಾಗಿ ಅಲಂಕರಿಸಲು ಇಲ್ಲಿದೆ ಟಿಪ್ಸ್‌

Tungabhadra Dam
ಕರ್ನಾಟಕ45 mins ago

Tungabhadra Dam: ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕಟ್‌; ನದಿಪಾತ್ರದಲ್ಲಿ ಪ್ರವಾಹ ಭೀತಿ

Independence day Fashion 2024
ಫ್ಯಾಷನ್55 mins ago

Independence day Fashion 2024: ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್‌ಗೆ ಕಾಲಿಟ್ಟ ಸಿಂಪಲ್‌ ಎಥ್ನಿಕ್‌ ವೇರ್‌ಗಳಿವು

MNS v/s Shiv Sena
ದೇಶ57 mins ago

MNS v/s Shiv Sena: MNS ಕಾರ್ಯಕರ್ತರ ಪುಂಡಾಟ; ಉದ್ಧವ್‌ ಠಾಕ್ರೆ ಬೆಂಗಾವಲು ವಾಹನದ ಮೇಲೆ ದಾಳಿ

Almonds
ಆರೋಗ್ಯ2 hours ago

Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

Vastu Tips
ಧಾರ್ಮಿಕ3 hours ago

Vastu Tips: ವಿದ್ಯುತ್ ಕಂಬದಿಂದ ಮನೆಗೆ ನಕಾರಾತ್ಮಕ ಶಕ್ತಿ ತಟ್ಟಬಹುದು ಎನ್ನುತ್ತಾರೆ ವಾಸ್ತು ಪರಿಣತರು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ7 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌