Theft Case : ಕೊನೆಗೂ ಕಳ್ಳನಿಂದ ಮರಳಿ ಸಿಕ್ತು ರಿವಾಲ್ವರ್‌; ಜಿಗಿದು ಜಿಗಿದು ಕಸಿದುಕೊಂಡ ಎಸ್‌ಪಿ ಇಶಾಪಂತ್‌ - Vistara News

ಕರ್ನಾಟಕ

Theft Case : ಕೊನೆಗೂ ಕಳ್ಳನಿಂದ ಮರಳಿ ಸಿಕ್ತು ರಿವಾಲ್ವರ್‌; ಜಿಗಿದು ಜಿಗಿದು ಕಸಿದುಕೊಂಡ ಎಸ್‌ಪಿ ಇಶಾಪಂತ್‌

Kalaburagi News : ಕಲಬುರಗಿಯಲ್ಲಿಂದು ಕಳ್ಳನಿಗೆ (Theft case) ಆಟವಾದರೆ ಪೊಲೀಸರಿಗೆ ಪ್ರಾಣ ಸಂಕಟವಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ಪಿಎಸ್‌ಐ ರಿವಾಲ್ವರ್‌ ಕಸಿದು ಮರವೇರಿ ಕುಳಿತುಬಿಟ್ಟಿದ್ದ. ಆರೋಪಿಯ ಕುಟುಂಬಸ್ಥರಿಂದ ಮನವೊಲಿಸಿ ಎಸ್‌ಪಿ ಇಶಾಪಂತ್‌ (SP Ishapant) ರಿವಾಲ್ವರ್‌ ವಾಪಸ್‌ ಪಡೆದಿದ್ದಾರೆ.

VISTARANEWS.COM


on

theft case in kalaburagi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲಬುರಗಿ : ತನ್ನನ್ನು ಅಟ್ಟಾಡಿಸಿಕೊಂಡು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ (Theft case) ಪಿಎಸ್‌ಐ ಕೈಯಲ್ಲಿದ್ದ ಸರ್ವಿಸ್‌ ರಿವಾಲ್ವರ್‌ ಕಸಿದು ಪರಾರಿ ಆಗಿದ್ದ. ಮರವೇರಿ ಕುಳಿತ ಕಳ್ಳನಿಂದ ಅಂತೂ ಸತತ ಮನವೊಲಿಕೆ ಮಾಡಿ ಎಸ್‌ಪಿ ಇಶಾಪಂತ್‌ (SP Ishapant) ಕಳ್ಳನಿಂದ ರಿವಾಲ್ವರ್‌ ವಾಪಸ್‌ ಪಡೆದಿದ್ದಾರೆ.

ಪಿಎಸ್‌ಐ ಸರ್ವಿಸ್ ರಿವಾಲ್ವರ್‌ ಕಸಿದುಕೊಂಡು ಕಳ್ಳನೊಬ್ಬ (Theft Case) ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಅಫಜಲಪುರ ಪಟ್ಟಣದಲ್ಲಿ ನಡೆದಿತ್ತು. ಅಫಜಲಪುರದ ಪಿಎಸ್‌ಐ ಭೀಮರಾಯ್ ಬಂಕಲಿ ಅವರ ರಿವಾಲ್ವರ್‌ ಕಿತ್ತುಕೊಂಡು (Snatch the revolver) ಖಾಜಾ ಗಾಯಕವಾಡ ಎಂಬಾತ ಓಡಿಹೋಗಿದ್ದ.

ಬಂಧಿತ ಆರೋಪಿ ಖಾಜಾಪ್ಪ ಗಾಯಕವಾಡ

ಖಾಜಾ ಗಾಯಕವಾಡನನ್ನು ಬಂಧಿಸಲು ಬೆಂಗಳೂರಿನಿಂದ ಅಫಜಲಪುರಕ್ಕೆ ಸಿಸಿಬಿ ಪೊಲೀಸರು ಆಗಮಿಸಿದ್ದರು. ಕಳ್ಳತನ ಮಾಡಿ ಕ್ಷಣಾರ್ಧದಲ್ಲೇ ಪರಾರಿ ಆಗುತ್ತಿದ್ದ ಇವನನ್ನು ಹೆಡೆಮುರಿ ಕಟ್ಟಲು ಪೊಲೀಸರು ಪ್ಲ್ಯಾನ್‌ ಮಾಡಿದ್ದರು. ಇಂದು ಸೋಮವಾರ (ಜು.17) ಸೊನ್ನ ಗ್ರಾಮದ ಬಳಿ ಡಸ್ಟರ್ ವಾಹನದಲ್ಲಿ ಖಾಜಾ ಕುಳಿತಿದ್ದ. ಇದರ ಮಾಹಿತಿ ಪಡೆದು ಪಿಎಸ್‌ಐ ಭೀಮರಾಯ್‌ ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಕಾರಿನ ಗ್ಲಾಸ್ ಒಡೆಯಲು ಮುಂದಾಗಿದ್ದರು. ಇದರಿಂದ ಅಲರ್ಟ್‌ ಆದ ಖಾಜಾ ಏಕಾಏಕಿ ಸರ್ವಿಸ್‌ ರಿವಾಲ್ವರ್‌ ಕಸಿದು ಪರಾರಿ ಆಗಿಬಿಟ್ಟಿದ್ದ.

ಬಳ್ಳೂರ್ಗಿ ಮೂಲದ ಖಾಜಾ ಗಾಯಕವಾಡ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ಈತನನ್ನು ಹಿಡಿದು ಬಂಧಿಸಬೇಕೆಂದು ಬಂದ ಪೊಲೀಸರ ರಿವಾಲ್ವರ್‌ ಕಸಿದು ಖಾಜಪ್ಪ ಪರಾರಿ ಆಗಿದ್ದ. ಇತ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಖಾಜಪ್ಪ ಬೃಹತ್ ಮರ ಏರಿ ಕುಳಿತಿದ್ದ.

ಅಫಜಲಪುರದಿಂದ ಸುಮಾರು 6 ಕಿ.ಮೀವರೆಗೂ ಓಡಿ ಸುಸ್ತಾದ ಖಾಜಪ್ಪ, ಅಫಜಲಪುರ- ಬಳೂರ್ಗಿ ಗ್ರಾಮದ ಮಧ್ಯದಲ್ಲಿರುವ ಮರ ಏರಿ ಕುಳಿತಿದ್ದ. ಮರ ಏರಿ ಕುಳಿತಿರುವ ಖಾಜಪ್ಪನನ್ನು ಕೆಳಗಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆತನ ಕೈಯಲ್ಲಿ ಪುಲ್ ಲೋಡೆಡ್ ಸರ್ವಿಸ್‌ ರಿವಾಲ್ವರ್‌ ಇದ್ದರಿಂದ ಪೊಲೀಸರಿಗೆ ಮತ್ತಷ್ಟು ಆತಂಕ ಹೆಚ್ಚಾಗಿತ್ತು.

ಇದನ್ನೂ ಓದಿ: Jain Muni Murder: ಮಗ ಹೀಗೆ ಮಾಡಿದ್ರೆ ಏನು ಮಾಡೋದು: ಆರೋಪಿ ಹಸನ್‌ ತಂದೆ ಭಾವುಕ

Sp ishapath juming to Withdrawn revolver
ವಾಪಸ್‌ ನೀಡುತ್ತಿದ್ದವನಿಂದ ಜಿಗಿದು ರಿವಾಲ್ವರ್‌ ಪಡೆದ ಎಸ್‌ಪಿ ಇಶಾಪಂತ್‌

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಇಶಾಪಂತ್ ಭೇಟಿ ನೀಡಿದ್ದರು. ಖಾಜಾಪ್ಪ ಮನವೊಲಿಸಲು ನಾನಾ ರೀತಿಯ ಕಸರತ್ತು ಮಾಡಿದರು. ಇದ್ಯಾವುದಕ್ಕೂ ಜಗ್ಗದೆ ಇದ್ದಾಗ ಆರೋಪಿಯ ತಾಯಿ ಹಾಗೂ ತಮ್ಮನನ್ನು ಕರೆಸಿ ಮನವೊಲಿಸಿದಾಗ, ಪೊಲೀಸರಿಗೆ ವಾಪಸ್‌ ರಿವಾಲ್ವರ್‌ ನೀಡಿದ್ದಾನೆ.

ರಿವಾಲ್ವರ್‌ ಪಡೆದುಕೊಳ್ಳುವಾಗ ಎಸ್‌ಪಿ ಇಶಾಪಂತ್‌ ಜಿಗಿದು ಜಿಗಿದು ಕಸಿದುಕೊಂಡಿದ್ದಾರೆ. ಸದ್ಯ ರಿವಾಲ್ವರ್‌ ವಾಪಸ್‌ ಪಡೆದು ಆತನನ್ನು ಮರದಿಂದ ಕೆಳಗಿಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

DK Shivakumar: ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ; ಮಳೆ ಬರಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದ ಡಿಕೆಶಿ

DK Shivakumar: ಕೆಆರ್‌ಎಸ್ ಅಣೆಕಟ್ಟೆಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಿದೆ. ಅಲ್ಲಿನ ಜನತೆಗೆ ಭಗವಂತನ ಕೃಪೆಯಿಂದ ಜ್ಞಾನೋದಯವಾಗುತ್ತದೆ. ನಮ್ಮ ಕಾಲದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಾರೆ ಎಂದು ನಂಬಿದ್ದೇವೆ ಎಂದು ತಿಳಿಸಿದ್ದಾರೆ.

VISTARANEWS.COM


on

DK Shivakumar
Koo

ಮಂಡ್ಯ: ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಈಗಾಗಲೇ ತಮಿಳುನಾಡಿಗೆ 84 ಟಿಎಂಸಿಯಷ್ಟು ನೀರು ತಲುಪಿದೆ. ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವಂತಹ ಆಶೀರ್ವಾದವನ್ನು ಕಾವೇರಿ ತಾಯಿ ನಮ್ಮ ಸರ್ಕಾರಕ್ಕೆ ಮಾಡುತ್ತಾಳೆ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದ್ದು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮಳೆ ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

ಕೆಆರ್‌ಎಸ್ ಅಣೆಕಟ್ಟೆಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜುಲೈ ತಿಂಗಳಿನಲ್ಲಿ ಪ್ರತಿ ದಿನ 1 ಟಿಎಂಸಿಯಂತೆ ತಮಿಳುನಾಡಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಅದಕ್ಕಿಂತ ಹೆಚ್ಚಿನ ನೀರು ಹರಿದು ತಾಯಿ ಕಾವೇರಿ ನೆಮ್ಮದಿ ಶಾಂತಿ ತಂದಿದ್ದಾಳೆ” ಎಂದು ಹೇಳಿದರು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಿದೆ. ಸಂಕಷ್ಟ ಕಾಲದಲ್ಲಿ ಅವರ ಪಾಲಿನ 177 ಟಿಎಂಸಿ ನೀರನ್ನು ಅವರಿಗೆ ಹರಿಸಬಹುದು. ಸುಮಾರು 400 ಮೆ.ವ್ಯಾ ವಿದ್ಯುತ್ ತಯಾರಿಸಬಹುದು. ಈ ಅಣೆಕಟ್ಟು ಕಟ್ಟಲು ನ್ಯಾಯಾಲಯ ಅನುವು ಮಾಡಿಕೊಡುತ್ತದೆ ಎಂದು ನಂಬಿದ್ದೇವೆ. ತಮಿಳುನಾಡಿನ ಜನತೆಗೆ ಭಗವಂತನ ಕೃಪೆಯಿಂದ ಜ್ಞಾನೋದಯವಾಗುತ್ತದೆ. ನಮ್ಮ ಕಾಲದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಾರೆ ಎಂದು ನಂಬಿದ್ದೇವೆ ಎಂದರು.

ಇದನ್ನೂ ಓದಿ | BJP-JDS Padayatra: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್‌

2018- 19ರಲ್ಲಿ 404 ಟಿಎಂಸಿ, 2019-20ರಲ್ಲಿ 275, 2020-21ರಲ್ಲಿ 211, 2021-22ರಲ್ಲಿ 281, 2022- 23ರಲ್ಲಿ 667 ಹಾಗೂ 2023-24ರಲ್ಲಿ 87 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಈ ವರ್ಷ 84 ಟಿಎಂಸಿ ನೀರು ಹರಿದಿದ್ದು, ಇದೇ ರೀತಿ ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಬೇಕು ಎಂದು ಹೇಳಿದರು.

ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ

ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ತಮಿಳುನಾಡಿನವರು ಈ ನದಿಯ ಮೂಲಕ ಅನ್ನ ಬೆಳೆಯುತ್ತಿದ್ದೇವೆ. ಎಲ್ಲರ ಪಾಲಿನ ಜೀವನದಿ ಕಾವೇರಿಗೆ 92 ವರ್ಷ ಕಳೆದರೂ ನಮನ ಸಲ್ಲಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡಿದ್ದೆವು. ನಮ್ಮ ಬದುಕು ಉಳಿಸು ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದೆವು, ಮನುಷ್ಯ ಪ್ರಯತ್ನಕ್ಕೆ ಸೋಲಾಗಬಹುದು ಆದರೆ ಪ್ರಾರ್ಥನೆಗೆ ಎಂದೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಕಾವೇರಿ ತಾಯಿ ತುಂಬಿ ಹರಿಯುತ್ತಿರುವುದೇ ಸಾಕ್ಷಿ. ಸ್ವರ್ಣಗೌರಿ ಹಬ್ಬದ ದಿನ ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ಅರ್ಪಿಸಿದಂತೆ ಶುಭಗಳಿಗೆಯ ಅಭಿಜಿನ್ ಲಗ್ನದಲ್ಲಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಾಗಿದೆ ಎಂದರು.

ಮೇಲಿರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಇದೆ ಎಂದು ಗೊತ್ತಿರುವುದಿಲ್ಲ?

ತಮಿಳುನಾಡಿಗೆ ನಾನು ಅಥವಾ ಸಿದ್ದರಾಮಯ್ಯ ಅವರು ನೀರು ಬಿಟ್ಟಿಲ್ಲ. ತಾಯಿ ಕೃಪೆಯಿಂದ ಹೆಚ್ಚು ಮಳೆ ಬಂದಿದೆ ಆದ ಕಾರಣ ನೀರು ಅವರಿಗೆ ಹೋಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದ ನಂತರ ಮಳೆ ಬರಲಿಲ್ಲ, ನೀರು ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಅವರಿಗೆಲ್ಲ ಈಗ ತಕ್ಕ ಉತ್ತರ ಸಿಕ್ಕಿದೆ. ಮೇಲೆ ಇರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಅಧಿಕಾರದಲ್ಲಿ ಇದೆ ಎನ್ನುವುದು ಗೊತ್ತಿರುವುದಿಲ್ಲ ಎಂದು ಹೇಳಿದರು.

ಮಳೆ ಇದೇ ರೀತಿ ಉತ್ತಮವಾಗಿ ಬಂದರೆ ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಈ ವರ್ಷ ನೀಡಬಹುದು. ಕಳೆದ ವರ್ಷ 223 ತಾಲೂಕುಗಳಲ್ಲಿ ಬರ ಬಂದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬರ ಬರುತ್ತದೆ ಎಂದು ಟೀಕೆ ಮಾಡಿದರು. ಆದರೂ ನಾವು ಜನಪರವಾಗಿ ಕೆಲಸ ಮಾಡಿದೆವು. ಏಕೆಂದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಯಾರನ್ನೂ ನಾನು ಟೀಕೆ ಮಾಡುವುದಿಲ್ಲ. ನಮ್ಮ ಕೆಲಸ ಗಳು ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತವೆ ಎಂದು ಹೇಳಿದರು.

82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ

ಭಾರತದ ಏಳು ಪವಿತ್ರ ನದಿಗಳಲ್ಲಿ ಕಾವೇರಿಯೂ ಒಂದು. ಜನರ ಕುಡಿಯುವ ನೀರು, ವ್ಯವಸಾಯ, ಕೈಗಾರಿಕೆಗಳಿಗೆ ಕಾವೇರಿ ಜೀವ ನೀಡುತ್ತಿದ್ದಾಳೆ. ಈ ವರ್ಷ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಸುಮಾರು 62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಕಾವೇರಿ ಜಲಾನಯನ ಪ್ರದೇಶಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಮುಂದಾಗಿದೆ. ಕಳೆದ ವರ್ಷ ಎಲ್ಲಾ ಕಾಲುವೆಗಳನ್ನು ಸ್ವಚ್ಚಗೊಳಿಸಲಾಗಿದೆ. ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ತಲುಪಬೇಕು ಎಂದು 1964-65ರ ಕಾನೂನಿಗೆ ತಿದ್ದುಪಡಿ ತಂದು ಈ ಬಾರಿಯ ವಿಧಾನಸಭೆಯಲ್ಲಿ ಮಂಡನೆ ಮಾಡಿ ಹೊಸ ಕಾನೂನು ತಂದಿದ್ದೇವೆ. ರೈತರ ಬದುಕು ಹಸನಾಗಬೇಕು ಎಂದು ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎನ್ನುವ ಕನಸನ್ನು ಸಚಿವ ಚೆಲುವರಾಯಸ್ವಾಮಿ ಅವರು ಹೊಂದಿದ್ದಾರೆ. ಇದು ಮಂಡ್ಯ ಜಿಲ್ಲೆಯ ರೈತರ ಬದುಕಿಗೆ ದೊಡ್ಡ ಮಾರ್ಗದರ್ಶನ ಸಿಗಲಿದೆ. ರೈತನಿಗೆ ಬಡ್ತಿ, ಸಂಬಳ, ನಿವೃತ್ತಿ ಎಂಬುದಿಲ್ಲ. ಆದ ಕಾರಣಕ್ಕೆ ರೈತರನ್ನು ನಾವು ಉಳಿಸಬೇಕಿದೆ ಎಂದರು.

ಸಂಕಷ್ಟದ ವರ್ಷಗಳಲ್ಲಿ ಮೇಕೆದಾಟು ಅಣೆಕಟ್ಟು ಪರಿಹಾರ ಎಂದು ನಾವು ಪಾದಯಾತ್ರೆ ಮಾಡಿದ್ದೆವು. ನಮ್ಮ ಎದುರು ಪಕ್ಷದವರು ಕೋವಿಡ್ ಕಾರಣ ಹೇಳಿ ಪಾದಯಾತ್ರೆಗೆ ತಡೆ ಹಾಕಿದರು. ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಪಾದಯಾತ್ರೆಗೆ ಸೇರುವ ವೇಳೆ ರಾಮನಗರದಲ್ಲಿ ಪಾದಯಾತ್ರೆ ನಿಲ್ಲುವಂತೆ ಮಾಡಲಾಯಿತು. ಯಾರೇ ಏನೇ ತಡೆ ಹಾಕಿದರೂ ಪಾದಯಾತ್ರೆ ಸಂಪೂರ್ಣ ಮಾಡುತ್ತೇವೆ ಎಂದು ಬೆಂಗಳೂರಿನ ತನಕ ಹೆಜ್ಜೆ ಹಾಕಿದೆವು. ಕಾವೇರಿ ತೀರದ ಎಲ್ಲಾ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಜನ ಸೇವೆಗೆ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಜನರ ಋಣ ತೀರಿಸುತ್ತೇವೆ. ನಮ್ಮ ಮೇಲೆ ವಿಶ್ವಾಸವಿರಲಿ ಎಂದು ತಿಳಿಸಿದರು.

ಬೃಂದಾವನಕ್ಕೆ ಹೊಸ ರೂಪ; ಕಾವೇರಿ ಆರತಿ ಪ್ರಾರಂಭ

ಕೆಆರ್‌ಎಸ್‌ ಅಣೆಕಟ್ಟೆ ಬಳಿ ಬೃಂದಾವನ ಗಾರ್ಡನ್‌ ಅನ್ನು ಮೈಸೂರು ಮಹಾರಾಜರು ಅದ್ಭುತವಾಗಿ ನಿರ್ಮಾಣ ಮಾಡಿದ್ದರು. ಗುಂಡೂರಾವ್ ಅವರು ಇದಕ್ಕೆ ಹೊಸರೂಪ ನೀಡಿದರು. ಪ್ರವಾಸೋದ್ಯಮವನ್ನು ಗುರಿಯಾಗಿಟ್ಟುಕೊಂಡು ಪಿಪಿಪಿ ಮಾದರಿಯಲ್ಲಿ ಹೊಸ ರೂಪ ನೀಡಲು ನಮ್ಮ ಸರ್ಕಾರ ಹೊರಟಿದೆ. ಗಂಗಾ ಆರತಿಗಿಂತ ಮಿಗಿಲಾಗಿ ಪ್ರತಿವಾರ ಕಾವೇರಿ ಆರತಿ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಪ್ರಾರಂಭ ಮಾಡಲಾಗುವುದು. ಈಗಾಗಲೇ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕಾವೇರಿ ಜಲಾನಯದ ಪ್ರದೇಶದ ಶಾಸಕರ ಹಾಗೂ ಸಂಬಂಧಪಟ್ಟ ಇಲಾಖೆಗಳನ್ನು ಸೇರಿಸಿ ಸಮಿತಿ ರಚಿಸಲಾಗಿದೆ ಎಂದರು.

ರೈತರ ಜಮೀನನ್ನು ಒತ್ತಾಯವಾಗಿ ವಶಪಡಿಸಿಕೊಳ್ಳಲ್ಲ

ರೈತರು ಬೃಂದಾವನಕ್ಕೆ ಹೊಸ ರೂಪ ನೀಡುವ ಮೊದಲು ನಮ್ಮ ಜೊತೆ ಚರ್ಚೆ ನಡೆಸಿ ಎಂದು ಹೇಳಿದ್ದಾರೆ. ಯಾವುದೇ ಮುಚ್ಚುಮರೆಯಿಲ್ಲದೇ ಇದರ ಅಭಿವೃದ್ಧಿ ಮಾಡಲಾಗುವುದು ಹಾಗೂ ಅವರ ಜತೆ ಚರ್ಚೆ ನಡೆಸಲಾಗುವುದು. ಯಾರ ಜಮೀನು ವಶಪಡಿಸಿಕೊಳ್ಳುವುದಿಲ್ಲ. ಸರ್ಕಾರದ ಜಮೀನಿನಲ್ಲೇ ಅಭಿವೃದ್ಧಿ ಮಾಡಲಾಗುವುದು. ಇಷ್ಟವಿದ್ದವರು ಜಮೀನು ನೀಡಬಹುದು, ಯಾರಿಗೂ ಒತ್ತಾಯ ಮಾಡುವುದಿಲ್ಲ. ಅಣೆಕಟ್ಟಿನ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುವುದು. ಸ್ಥಳೀಯ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರು ನೀರಾವರಿಗೆ ಸಂಬಂಧಿಸಿದಂತೆ ಅನೇಕ ಮನವಿಗಳನ್ನು ಸಲ್ಲಿಸಿದ್ದಾರೆ. ಅವರ ಮನವಿಗಳನ್ನು ಶೀಘ್ರ ಪರಿಗಣಿಸಲಾಗುವುದು ಎಂದು ಹೇಳಿದರು.

ಪ್ರತಿವರ್ಷ ಐದು ಮಂದಿಗೆ ಪ್ರಶಸ್ತಿ

ಕಬಿನಿ, ಕೆಆರ್‌ಎಸ್, ಹೇಮಾವತಿ ವಿಭಾಗದಲ್ಲಿ ಮೂರು ಜನ ರೈತರು ಹಾಗೂ ಒಬ್ಬ ಪ್ರಗತಿಪರ ರೈತ ಮತ್ತು ಕಿರಿಯ ಎಂಜಿನಿಯರ್ ಅವರಿಗೆ ಕಾವೇರಿ ನೀರಾವರಿ ನಿಗಮದಿಂದ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಬಾಗಿನ ಅರ್ಪಣೆಗೂ ಮುಂಚಿತವಾಗಿ ಕೆಆರ್ ಎಸ್ ಅಣೆಕಟ್ಟಿನ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅತಿಥಿಗೃಹದ ಬಳಿ ಉತ್ತರಿಸಿದ ಡಿಸಿಎಂ ಅವರು, ಪ್ರಸ್ತುತ ಮಳೆ ಕಡಿಮೆಯಾಗಿದೆ. ಕಾವೇರಿ ನದಿ ತೀರದ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ತಮಿಳುನಾಡಿದ ಸಿಎಂ ಅವರ ರಾಜ್ಯಗಳ ಕೆರೆಗಳನ್ನು ತುಂಬಿಸಲು ಸೂಚನೆ ನೀಡಿದ್ದಾರೆ. ನಾವು ನಮ್ಮ ರಾಜ್ಯದ ಕೆರೆಗಳನ್ನು ತುಂಬಿಸುತ್ತಿದ್ದೇವೆ. ನಮ್ಮ ರೈತರನ್ನು ನಾವು ಕಾಪಾಡುತ್ತೇವೆ. ತಮಿಳುನಾಡಿಗೆ ಹಾಗೂ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿ. ಹೆಚ್ಚು ಕಾವೇರಿ ನೀರನ್ನು ಬಳಸಿಕೊಳ್ಳುವ ವಿಚಾರವಾಗಿ ಚರ್ಚೆ ನಡೆಸಬೇಕಾಗಿದೆ ಎಂದರು.

ಇದನ್ನೂ ಓದಿ | BJP Padayatra: ಮುಡಾ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧಾರ

ಬಿಜೆಪಿ- ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಕೇಳಿದಾಗ, ಮೊದಲು ಭೂತಾಯಿ ಮತ್ತು ವರುಣದೇವನಿಗೆ ಪೂಜೆ ಸಲ್ಲಿಸೋಣ. ಆನಂತರ ರಾಜಕಾರಣ ಮಾತನಾಡೋಣ ಎಂದು ಹೇಳಿದರು.

Continue Reading

ಮಳೆ

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Karnataka Rain: ಸೋಮವಾರ ಜೋರಾಗಿ ಸುರಿದ ಗಾಳಿ ಮಳೆಗೆ ಮನೆಗಳ ಚಾವಣಿ ಹಾರಿಹೋದರೆ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ವಿದ್ಯುತ್‌ ಸರಿಪಡಿಸಲು ಹೆಸ್ಕಾಂ ಸಿಬ್ಬಂದಿಗೆ ರಿವರ್‌ ರ‍್ಯಾಫ್ಟಿಂಗ್‌ ತಂಡ ಸಾಥ್‌ ಕೊಟ್ಟಿದ್ದಾರೆ.

VISTARANEWS.COM


on

By

karnataka Rain
Koo

ಕಾರವಾರ: ಕರಾವಳಿಯಲ್ಲಿ ವರುಣನ ಅಬ್ಬರ (Karnataka Rain) ಮತ್ತಷ್ಟು ಹೆಚ್ಚಿದೆ. ಭಾರೀ ಗಾಳಿಗೆ 20ಕ್ಕೂ ಅಧಿಕ ಮನೆಗಳ ಚಾವಣಿ ಹಾರಿಹೋಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಾರವಾಡ ಸೀಬರ್ಡ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಸುಧಾ ಹರಿಕಾಂತ, ನಿರ್ಮಲಾ ದುರ್ಗೇಕರ್, ಶೋಭಾ ದುರ್ಗೇಕರ್ ಸೇರಿ 20ಕ್ಕೂ ಅಧಿಕ ನಿವಾಸಿಗಳ ಮನೆಗಳ ಚಾವಣಿಗೆ ಹಾನಿಯಾಗಿದೆ. ತಡರಾತ್ರಿ ಬೀಸಿದ ಭಾರೀ ಗಾಳಿಗೆ ತಗಡಿನ ಶೀಟ್‌ಗಳು ಹಾರಿಹೋಗಿದೆ. ಕೆಲವರ ಹೆಂಚಿನ ಮನೆಗಳಿಗೂ ಹಾನಿಯಾಗಿದೆ. ಕೆಲವರು ಹೆಂಚಿನ ತುಂಡು ತಲೆಗೆ ಬಿದ್ದು ಗಾಯಗೊಂಡಿದ್ದಾರೆ. ಚಾವಣಿ ಹಾರಿಹೋದ ಪರಿಣಾಮ ಮಳೆ ನೀರು ಬಿದ್ದು ಮನೆಯ ವಸ್ತುಗಳಿಗೂ ಹಾನಿಯಾಗಿದೆ.

ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಹಾಸನದ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಮತ್ತೆ ಭೂಕುಸಿತ ಉಂಟಾಗಿದೆ. ಶಿರಾಡಿಘಾಟ್ ರಸ್ತೆ 75 ರಲ್ಲಿ ಭೂಕುಸಿತದಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕಾಂಕ್ರಿಟ್ ರಸ್ತೆ ಗುತ್ತಿಗೆ ಪಡೆದಿರುವ ಕಂಪನಿಯ ಸಿಬ್ಬಂದಿ ಮಣ್ಣು ತೆರವುಗೊಳಿಸುತ್ತಿದ್ದಾರೆ. ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ ಸವಾರರು ಕಿಡಿಕಾರಿದ್ದಾರೆ. ಮಣ್ಣು ತೆರವು ಮಾಡುತ್ತಿರುವುದು ವಿಳಂಬವಾಗುತ್ತಿದೆ, ಬೇಸಿಗೆ ಕಾಲದಲ್ಲಿ ಕೆಲಸ ಮಾಡುವುದು ಬಿಟ್ಟು ಮಳೆಗಾಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೆಸ್ಕಾಂ ಸಿಬ್ಬಂದಿಗೆ ಸಾಥ್‌ ಕೊಟ್ಟ ರಿವರ್‌ ರ‍್ಯಾಫ್ಟಿಂಗ್‌ ತಂಡ

ಭಾರಿ ಮಳೆಗೆ ಹಲವಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಕರೆಂಟ್‌ ಇಲ್ಲದೇ ಜನರು ಕಂಗಲಾಗಿದ್ದಾರೆ. ಹೀಗಾಗಿ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ ಸಿಬ್ಬಂದಿಗೆ ರಿವರ್ ರ‍್ಯಾಫ್ಟಿಂಗ್ ತಂಡ ನೆರವಾಗಿದೆ. ಉತ್ತರ ಕನ್ನಡದ ಜೋಯಿಡಾದ ಅಸು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಂದೇವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಮೇಲೆ ಭಾರೀ ಗಾತ್ರದ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಬಜಾರಕುಣಂಗ್, ಕ್ಯಾಸಲ್‌ರಾಕ್, ಅಸು, ಅಕೇತಿ ಪಂಚಾಯತ್ ವ್ಯಾಪ್ತಿಯ ಹತ್ತಾರು ಗ್ರಾಮಗಳು ಕತ್ತಲೇಯಲ್ಲೇ ಕಾಲ ಕಳೆಯುತ್ತಿದ್ದವು.

ಚಾಂದೇವಾಡಿ ಗ್ರಾಮವು ಭಾರೀ ಮಳೆಯಿಂದ ಪಾಂಡ್ರಿ ನದಿ ಉಕ್ಕಿ ಸಂಪರ್ಕ ಕಡಿದುಕೊಂಡಿತ್ತು. ಇತ್ತ ವಿದ್ಯುತ್ ಸಂಪರ್ಕ ಸರಿಪಡಿಸಲು ಮುಂದಾಗಿದ್ದ ಹೆಸ್ಕಾಂ, ಕೆಪಿಟಿಸಿಎಲ್‌ (KPTCL) ಸಿಬ್ಬಂದಿ ನದಿ ಹರಿವು ಹೆಚ್ಚಿದ್ದರಿಂದ ಗ್ರಾಮಕ್ಕೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ಗ್ರಾಮಸ್ಥರು, ರಿವರ್ ರ‍್ಯಾಫ್ಟಿಂಗ್ ಸಹಾಯದಿಂದ ಚಾಂದೇವಾಡಿ ಗ್ರಾಮಕ್ಕೆ ತಲುಪಿದ್ದಾರೆ. 13 ಮಂದಿ ಹೆಸ್ಕಾಂ ಸಿಬ್ಬಂದಿ, 6 ಮಂದಿ ರ‍್ಯಾಫ್ಟಿಂಗ್ ತಂಡದ ಸದಸ್ಯರಿಂದ ಕಾರ್ಯಾಚರಣೆ ನಡೆಸಿ ಸುಮಾರು 600 ಮೀಟರ್ ಬೋಟ್‌ನಲ್ಲಿ ತೆರಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡಿದ್ದಾರೆ. ದಾಂಡೇಲಿ ವಿಭಾಗದ ಸೂಪಾ-ಅನಮೋಡ್ 110 ಕೆವಿ ವಿದ್ಯುತ್ ಮಾರ್ಗ ಸರಿಪಡಿದ್ದಾರೆ. ಹೆಸ್ಕಾಂ, ಕೆಪಿಟಿಸಿಎಲ್ ಸಿಬ್ಬಂದಿ ಕಾರ್ಯವೈಖರಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಇದನ್ನೂ ಓದಿ: Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಕೃಷ್ಣಾ ನದಿಯ ಆರ್ಭಟಕ್ಕೆ ಜನರು ತತ್ತರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನದಿ ತೀರದ ಪ್ರದೇಶಗಳಿಗೆ ಕೃಷ್ಣಾ ನದಿ ನೀರು ನುಗ್ಗಿದೆ. ಗ್ರಾಮದ ಬಸ್ ನಿಲ್ದಾಣ, ಬಸ್ ನಿಲ್ದಾಣ ಸಮೀಪದ 15 ಕ್ಕೂ ಹೆಚ್ಚು ಅಂಗಡಿಗಳು, ಪ್ರೌಢ ಶಾಲೆ ಆವರಣ ಜಲಾವೃತಗೊಂಡಿದೆ.

ಇನ್ನೂ ಹಾವೇರಿ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಕುಮದ್ವತಿ ನದಿ ಉಕ್ಕಿ ಹರಿಯುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬಾಂದಾರ ಕೊಚ್ಚಿ ಹೋಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಡಪಲಿ- ಬಡಸಂಗಾಪುರ ಗ್ರಾಮದ ಬಳಿ ಕಟ್ಟಿದ್ದ ಬಾಂದರ್ ಕಾಣದಂತಾಗಿದೆ. ಸ್ಥಳಕ್ಕೆ ಹಿರೇಕೆರೂರ ಶಾಸಕ ಯುಬಿ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತರಿಗೆ ಹಾವುಗಳ ಕಾಟ

ನಿರಂತರ ಮಳೆಯಿಂದಾಗಿ ನದಿಗಳ ಮಟ್ಟ ಏರಿಕೆ ಹಿನ್ನೆಲೆ ನದಿ ಪಾತ್ರದ ರೈತರು ಮೋಟಾರ್, ಪಂಪ್‌ಸೆಟ್‌ ಹಾಗೂ ವಿದ್ಯುತ್ ಸರಬರಾಜಿನ ಡಬ್ಬಿಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಈ ನಡುವೆ ರೈತರಿಗೆ ಹಾವುಗಳ ಕಾಟ ಪ್ರಾರಂಭವಾಗಿದೆ. ರೈತರೊಬ್ಬರು ವಿದ್ಯುತ್ ಡಬ್ಬಿ ಸ್ಥಳಾಂತರಿಸುವಾಗ ಹಾವು ಪ್ರತ್ಯಕ್ಷಗೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಬಳಿ ಘಟನೆ ನಡೆದಿದೆ. ಯಕ್ಸಂಬಾ ಗ್ರಾಮದ ಹೊರವಲಯದ ದೂದ್‌ಗಂಗಾ ನದಿಯ ದಂಡೆಯ ಮೇಲೆ ಅಲ್ಲಲ್ಲಿ ಹಾವುಗಳ ಪ್ರತ್ಯಕ್ಷಗೊಳ್ಳುತ್ತಿರುವುದರಿಂದ ರೈತರು ಭಯಭೀತರಾಗಿದ್ದಾರೆ.

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಬಾಗಲಕೋಟೆ ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ರೈತ ಸಿದ್ದಪ್ಪ ಅಡಹಳ್ಳಿ(60) ಶವವಾಗಿ ಪತ್ತೆಯಾಗಿದ್ದಾರೆ. ಕೊಚ್ಚಿ ಹೋದ ಸಿದ್ದಪ್ಪನಿಗಾಗಿ ಶೋಧ ಕಾರ್ಯ ನಡೆದಿತ್ತು. ಸೋಮವಾರ ಬಬಲೇಶ್ವರ ತಾಲೂಕಿನ ಶಿರಗೂರ ಗ್ರಾಮದ ಬಳಿ ಶವ ಪತ್ತೆಯಾಗಿದೆ. ಶವ ಇದ್ದ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇವು ಮಾಡಿಕೊಂಡು ಮರಳಿ‌ ಬರುವಾಗ ಆಲಗೂರ ಗ್ರಾಮದ ಸಿದ್ದಪ್ಪ ಅಡಹಳ್ಳಿ 3 ದಿನದ ಹಿಂದೆ ನದಿ ಪಾಲಾಗಿದ್ದರು.

ಕಾವೇರಿ ನದಿಗೆ ಹಾರಿದ ನೌಕರನ ಮೃತದೇಹ ಪತ್ತೆ

ಕೊಡಗಿನ ಕುಶಾಲನಗರದಲ್ಲಿ ಸರಕಾರಿ ನೌಕರನೊಬ್ಬ ಕಾವೇರಿ‌ ನದಿಗೆ ಹಾರಿದ್ದ. 5 ದಿನಗಳ ಬಳಿಕ‌ ಸೋಮವಾರ ಮೃತದೇಹ ಪತ್ತೆಯಾಗಿದೆ. ಎಸಿ ಕಚೇರಿ ಪ್ರಥಮ ದರ್ಜೆ ನೌಕರ ಅರುಣ್(52) ಮೃತ ದುರ್ದೈವಿ. ಕೊಪ್ಪ ಸೇತುವೆಯಿಂದ ಕಾವೇರಿ ನದಿಗೆ ಹಾರಿದ್ದ ಅರುಣ್, ಸೇತುವೆಯಿಂದ 5 ಕಿ.ಮೀ ದೂರದಲ್ಲಿ ಶವ ಪತ್ತೆಯಾಗಿದೆ. ಮೃತದೇಹಕ್ಕಾಗಿ ರ‍್ಯಾಫ್ಟಿಂಗ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ

ಕರಾವಳಿಯ ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾಗಿ, ಕೊಡಗು ಸುತ್ತಮುತ್ತ ವಿಪರೀತ ಮಳೆಯಾಗಲಿದ್ದು, ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Kabini Dam: ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿದ ಸಿಎಂ; ರಾಜ್ಯದ ಜಲಾಶಯಗಳು ತುಂಬಿದ್ದಕ್ಕೆ ಸಂತಸ

Kabini Dam: ಧನುರ್ ಲಗ್ನದಲ್ಲಿ ಪೂಜೆ ಸಲ್ಲಿಸಿ ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಣೆ‌ ಮಾಡಿದರು. ಈ ವೇಳೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಉತ್ತಮ ಮಳೆಯಾಗಿರುವುದರಿಂದ ರಾಜ್ಯ ಸಮೃದ್ಧವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Kabini Dam
Koo

ಮೈಸೂರು: ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿನ ಕಬಿನಿ ಜಲಾಶಯಕ್ಕೆ (Kabini Dam) ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರು ಸೋಮವಾರ ಸಂಜೆ ಬಾಗಿನ ಅರ್ಪಿಸಿದರು. ಧನುರ್ ಲಗ್ನದಲ್ಲಿ ಪೂಜೆ ಸಲ್ಲಿಸಿ, ಸಿಎಂ, ಡಿಸಿಎಂ ಬಾಗಿನ ಅರ್ಪಣೆ ಮಾಡಿದರು. ಈ ವೇಳೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿ ಹಳೆ ಮೈಸೂರು ಭಾಗದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಉತ್ತಮ ಮಳೆಯಾಗಿ ರಾಜ್ಯ ಸಮೃದ್ಧಿಯಿಂದ ಕೂಡಿದೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿದೆ. ಇದರಿಂದ ರಾಜ್ಯ ಸಮೃದ್ಧಿಯಿಂದ ಕೂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಮಿಳುನಾಡು ನಮಗೂ ಕಾವೇರಿ ನೀರು ಹಂಚಿಕೆ ಸಮಸ್ಯೆ ಉಂಟಾಗಿದೆ. ಇದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 47 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಿತ್ತು. ಇದೀಗ ತಮಿಳುನಾಡಿಗೆ 80 ಟಿಎಂಸಿಗೂ ಹೆಚ್ಚು ನೀರು ಬಿಡಲಾಗಿದೆ. ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ರಾಜ್ಯ ಸಮೃದ್ಧಿಯಿಂದ ಕೂಡಿದೆ ಎಂದು
ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ ಎಂದ ಡಿಸಿಎಂ

ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ. ತಮಿಳುನಾಡಿಗೆ ನೀರು ಬಿಡಬೇಕಿತ್ತು. ಜಲಾಶಯ ತುಂಬಿದ್ದರಿಂದ ನೀರನ್ನು ಬಿಡಲಾಗಿದೆ. ನಾನು, ಸಿಎಂ ಇಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೇವೆ. ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ ಎಂದು ಬಾಗಿನ ಅರ್ಪಣೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ | BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ

ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ; ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್‌) ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿದರು. ಬೆಳಗ್ಗೆ 11 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಜಲಾಶಯಕ್ಕೆ (KRS Dam) ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ ಅವರು, ನಂತರ ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬಾಗಿನ ಅರ್ಪಿಸುವ ವೇಳೆ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಎನ್. ಚೆಲುವರಾಯಸ್ವಾಮಿ, ವೆಂಕಟೇಶ್, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ಸಿದ್ಧ ಎಂದ ಸಿದ್ದರಾಮಯ್ಯ

ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆಯಾಗದಿದ್ದರೂ ಮಾತನಾಡಲು ಅವರು ಸಿದ್ಧರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೇ ನಾವು ನಿರ್ಮಾಣ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬಿಜೆಪಿ ಪಾದಯಾತ್ರೆ: ರಾಜಕೀಯವಾಗಿ ವಿರೋಧಿಸುತ್ತೇವೆ

ವಾಲ್ಮೀಕಿ ಮತ್ತು ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಮಾಡಲಿ, ನಾವೂ ಕೂಡ ರಾಜಕೀಯವಾಗಿ ವಿರೋಧಿಸುತ್ತೇವೆ. ವಾಲ್ಮೀಕಿ ಹಗರಣದಲ್ಲಿ ನಾವು 84.63 ಕೋಟಿ ಹಗರಣವಾಗಿದೆ ಎನ್ನುವುದು ನಿಜ. ಎಸ್.ಐ.ಟಿ ರಚನೆಯಾಗಿದ್ದು ತನಿಖೆಯಾಗುತ್ತಿದೆ. ಅವರೂ ಕೂಡ ಸಿಬಿಐ, ಇಡಿಯವರೂ ತನಿಖೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ | BJP-JDS Padayatra: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್‌

ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ?

ಉಪಮುಖ್ಯಮಂತ್ರಿಗಳು ಅಯೋಗ್ಯ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಅದಕ್ಕಾಗಿಯೇ 21 ಹಗರಣಗಳನ್ನು ಪಟ್ಟಿ ಮಾಡಿ ಹೇಳಿದ್ದೇನೆ ಎಂದರು. ಕೆಲವು ತನಿಖೆಗಳು ನಡೆಯುತ್ತಿವೆ. ರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇಂದಿನವರೆಗೂ ಸಿಬಿಐ ತನಿಖೆ ಪೂರ್ಣಗೊಳಿಸಿಲ್ಲ. ಅವರ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. 7-8 ಹಗರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಇದೆ ಬಿಜೆಪಿ ನಾವು ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಈಗ ಸಿಬಿಐ ಗೆ ಮೇಲೆ ಇವರಿಗೇನು ಪ್ರೀತಿ ಎಂದರು. ಈ ಕುರಿತ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದರು.


Continue Reading

ಬೆಂಗಳೂರು ಗ್ರಾಮಾಂತರ

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

Elephant attack: ಮೂವರನ್ನು ಬಲಿ ಪಡೆದಿದ್ದ ಮಕ್ನಾ ಆನೆಯೂ (Elephant combing) ಕೂನೆಗೂ ಸೆರೆಯಾಗಿದೆ. ಭೀಮ, ಮಹೇಂದ್ರರ ಆರ್ಭಟಕ್ಕೆ ಮಕ್ನಾ ಆನೆ ಮಂಡಿಯೂರಿದೆ. ಇತ್ತ ಕೊಡಗಿನಲ್ಲಿ ಮಕ್ನಾ ಆನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.

VISTARANEWS.COM


on

By

Elephant combing Makna elephant captured near Bannerghatta
Koo

ಬೆಂಗಳೂರು ಗ್ರಾಮಾಂತರ: ಕೊನೆಗೂ ಪುಂಡ ಮಕ್ನಾ ಆನೆ (Elephant attack) ಸೆರೆಯಾಗಿದೆ. ಮಕ್ನಾ ಅಡ್ಡೆಗೆ ನುಗ್ಗಿದ ಭೀಮ, ಮಹೇಂದ್ರ ತಟ್ಟಗುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ (Elephant combing) ಸೆರೆಹಿಡಿದಿದ್ದಾರೆ.

ಡ್ರೋನ್ ಮೂಲಕ ಮಕ್ನಾ ಲೋಕೇಷನ್ ಟ್ರಾಕ್ ಮಾಡಿ ಬಳಿಕ ಮಾವುತರು, ಕಾವಾಡಿಗಳು ಸುತ್ತುವರಿದರು. ಮಾವುತರು ಮತ್ತು ಕಾವಾಡಿಗಳ ಮಾಹಿತಿ ಆಧರಿಸಿ ವೈದ್ಯರ ತಂಡ ಅಖಾಡಕ್ಕೆ ಇಳಿದರು. ತಗ್ಗು ಪ್ರದೇಶದಲ್ಲಿದ್ದ ಮಕ್ನಾ ಚಲನವಲನ ಆಧರಿಸಿ ಶಾರ್ಟ್ ಶೂಟರ್ ರಂಜನ್ ಶೂಟ್‌ ಮಾಡಿದ್ದಾರೆ.

Elephant combing Makna elephant captured near Bannerghatta
Elephant combing Makna elephant captured near Bannerghatta

ಸಮೀಪದ ದಿಬ್ಬದ ಮೇಲೆ ನಿಂತು ಡಾಟ್ ಆಗುತ್ತಿದ್ದಂತೆ ಆಕ್ರೋಶಗೊಂಡ ಮಕ್ನಾ ಆನೆ ಸುಮಾರು ಒಂದು ಕಿ.ಮೀ ದೂರ ಸಾಗಿ ನಿತ್ರಾಣಗೊಂಡಿದೆ. ನಿತ್ರಾಣಗೊಂಡಿರುವುದನ್ನು ವೈದ್ಯರು ಖಚಿತ ಪಡಿಸುತ್ತಿದ್ದಂತೆ ಭೀಮ ಮತ್ತು ‌ಮಹೇಂದ್ರ ಸಾಕಾನೆ ಫೀಲ್ಡಿಗಿಳಿದಿದೆ.

ಭೀಮ ಹಾಗೂ ಮಹೇಂದ್ರ ಎದುರಿಗೆ ಬಾಲ ಬಿಚ್ಚದ ಮಕ್ನಾ ಆನೆಯನ್ನು ದಪ್ಪದಾಗಿರುವ ಹಗ್ಗದಿಂದ ಕಟ್ಟಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸೀಗೆ ಕಟ್ಟೆಯ ಆನೆ ಬಿಡಾರಕ್ಕೆ ರವಾನಿಸಿದ್ದಾರೆ.

ಸೆರೆಗೂ ಮುನ್ನ ಪುಂಡ ಮಕ್ನಾ ಕಾಡಾನೆಯ ಆರ್ಭಟ ಜೋರಾಗಿತ್ತು. ಈ ಹಿಂದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಹಾವಳಿ ಎಬ್ಬಿಸಿದ್ದ ಮಕ್ನಾ ಆನೆ, ಅರಣ್ಯ ಸಿಬ್ಬಂದಿಯ ವಾಹನದ ಮೇಲೆ ಅಟ್ಯಾಕ್ ಮಾಡಿತ್ತು. ವಾಹನವನ್ನು ಹಿಂಬಾಲಿಸಿ ಅಟ್ಟಾಡಿಸಿತ್ತು. ಬನ್ನೇರುಘಟ್ಟ ಕಾಡಂಚಿನ ಭಾಗದಲ್ಲಿ ದಾಂಧಲೆ ಎಬ್ಬಿಸಿತ್ತು. ಮೂರು ಮಂದಿಯನ್ನು ತುಳಿದು ಕೊಂದು ಹಾಕಿತ್ತು.

ಇದನ್ನೂ ಓದಿ:Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಕಾಫಿ ತೋಟದಲ್ಲಿ ಮಕ್ನಾ ಕಾಡಾನೆ ಸಾವು

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲದ ಹುಂಡಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಮಕ್ನಾ ಆನೆ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೂ ಆಹಾರ ಅರಸಿ‌‌ ಕಾಡಿನಿಂದ ನಾಡಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟಿವೆ. ಹುಂಡಿ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದು, ಹಗಲು ಹೊತ್ತಿನಲ್ಲೂ ಕಾಣಿಸಿಕೊಳ್ಳುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Paris Olympics 2024
ಕ್ರೀಡೆ29 mins ago

Paris Olympics 2024 : ಭಾರತಕ್ಕೆ ಶೂಟಿಂಗ್​ನಲ್ಲಿ ಕಂಚಿನ ಪದಕ ಜಸ್ಟ್​ ಮಿಸ್​!

Rajendra Nagara tragedy
ದೇಶ56 mins ago

Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Mosquito Repellents
ಆರೋಗ್ಯ58 mins ago

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

DK Shivakumar
ಕರ್ನಾಟಕ1 hour ago

DK Shivakumar: ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ; ಮಳೆ ಬರಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದ ಡಿಕೆಶಿ

ICW 2024
ಫ್ಯಾಷನ್2 hours ago

ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!

Aditya Birla Group
ಚಿನ್ನದ ದರ2 hours ago

Aditya Birla Group: ಟಾಟಾ, ಅಂಬಾನಿಯೊಂದಿಗೆ ಸ್ಪರ್ಧೆ: ಆಭರಣ ವ್ಯಾಪಾರಕ್ಕೆ ಬಿರ್ಲಾ ಎಂಟ್ರಿ!

ಪ್ರಮುಖ ಸುದ್ದಿ2 hours ago

Rohit Sharma : ಏಕ ದಿನ ಸರಣಿಗಾಗಿ ಶ್ರೀಲಂಕಾ ತಲುಪಿದ ರೋಹಿತ್, ವಿರಾಟ್​ ಕೊಹ್ಲಿ

karnataka Rain
ಮಳೆ2 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

New Toll System
ತಂತ್ರಜ್ಞಾನ2 hours ago

New Toll System: ಫಾಸ್ಟ್‌ ಟ್ಯಾಗ್‌ಗೂ ಉಪಗ್ರಹ ಆಧರಿತ ಟೋಲ್‌ ಸಂಗ್ರಹಕ್ಕೂ ಏನು ವ್ಯತ್ಯಾಸ? ಏನು ಪ್ರಯೋಜನ?

Manu Bhaker
ಪ್ರಮುಖ ಸುದ್ದಿ2 hours ago

Paris Olympics 2024 : ಮನು ಭಾಕರ್ ಸೇರಿದಂತೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರ ಎಕ್ಸ್​ ಖಾತೆಯಲ್ಲಿ ಐಫೆಲ್​ ಟವರ್ ಚಿತ್ರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌