ಈ ಡಾಕ್ಟರ್‌ಗೆ ಕುಡಿಯೋದೇ ಡ್ಯೂಟಿ; ಆಸ್ಪತ್ರೆಗೆ ಬರಲ್ಲ, ರೋಗಿಗಳನ್ನು ನೋಡಲ್ಲ; ಕ್ವಾರ್ಟರ್ಸ್‌ ತುಂಬಾ ಕ್ವಾರ್ಟರ್‌ ಬಾಟಲ್‌! Vistara News

ಕರ್ನಾಟಕ

ಈ ಡಾಕ್ಟರ್‌ಗೆ ಕುಡಿಯೋದೇ ಡ್ಯೂಟಿ; ಆಸ್ಪತ್ರೆಗೆ ಬರಲ್ಲ, ರೋಗಿಗಳನ್ನು ನೋಡಲ್ಲ; ಕ್ವಾರ್ಟರ್ಸ್‌ ತುಂಬಾ ಕ್ವಾರ್ಟರ್‌ ಬಾಟಲ್‌!

Alcoholic Doctor: ಪಾವಗಡ ತಾಲೂಕಿನ ಕ್ವಾಟಗುಡ್ಡ ಆಸ್ಪತ್ರೆಯ ವೈದ್ಯರು ಸದಾ ಮದ್ಯ ಕುಡಿದುಕೊಂಡೇ ಇರ್ತಾರೆ ಎನ್ನುವುದು ಜನರ ಆರೋಪ. ಬುಧವಾರ ಅವರನ್ನು ರೆಡ್‌ ಹ್ಯಾಂಡಾಗಿಯೇ ಹಿಡಿದರು ಜನ.

VISTARANEWS.COM


on

Alcoholic doctor in pavagada hospital
ಡಾಕ್ಟರ್‌ ಅವರ ಕ್ವಾರ್ಟರ್ಸ್‌ನಲ್ಲಿ ಕಂಡ ಬಾಟಲಿಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ಇಲ್ಲೊಬ್ಬ ಡಾಕ್ಟರ್‌ (Alcoholic doctor) ಇದ್ದಾನೆ. ಇವನಿಗೆ ಕುಡಿಯೋದೇ ಕಾಯಕ. ಅದು ಬಿಟ್ಟು ಬೇರೆ ಏನಾದರೂ ಮಾಡಬೇಕು ಎಂದರೆ ಸಿಗರೇಟು ಸೇದೋದು ಅಷ್ಟೆ. ಆಸ್ಪತ್ರೆಗೆ ಇವರೇ ಚೀಫ್‌. ಆದರೆ, ಒಂದಿನವೂ ಆಸ್ಪತ್ರೆಗೆ ಬರಲ್ಲ. ಯಾವತ್ತಾದರೂ ಬಂದರೂ ಫುಲ್‌ ಟೈಟಾಗೇ ಇರ್ತಾರೆ: ಹೀಗೆ ಒಬ್ಬ ಡಾಕ್ಟರ್‌ ವಿರುದ್ಧ ಜನಾಕ್ರೋಶ (people protest against doctor) ಭುಗಿಲೆದ್ದಿತ್ತು. ಘಟನೆ ನಡೆದಿರುವುದು ತುಮಕೂರು ಜಿಲ್ಲೆ (Tumkur News) ಪಾವಗಡ ತಾಲೂಕಿನ ಕ್ವಾಟಗುಡ್ಡ ಗ್ರಾಮದಲ್ಲಿ.

ಕೋಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಾಂಜಿನಪ್ಪ ಪ್ರತಿ ದಿನವೂ ಕುಡಿದು ಬಿದ್ದಿರುತ್ತಾರೆ. ಬೆಳ್ಳಂಬೆಳಗ್ಗೆ ಕುಡಿದೇ ಡ್ಯೂಟಿಗೆ ಹಾಜರಾಗುತ್ತಾರೆ ಎಂದು ಸಿಟ್ಟಿಗೆದ್ದ ಗ್ರಾಮಸ್ಥರು ಅವರನ್ನು ರೆಡ್‌ ಹ್ಯಾಂಡಾಗಿಯೇ ಹಿಡಿಯಲು ಸನ್ನದ್ಧರಾಗಿದ್ದರು.

ಪ್ರತಿನಿತ್ಯ ಕುಡಿದು ಬಂದೇ ಡ್ಯೂಟಿಗೆ ಹಾಜರಾಗುತ್ತಿದ್ದ ರಾಮಾಂಜಿನಪ್ಪನ ಬಗ್ಗೆ ಹಲವಾರು ಬಾರಿ ಮೇಲಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ರೆಡ್‌ ಹ್ಯಾಂಡಾಗಿ ಹಿಡಿಯಬೇಕು ಎಂದು ಸೇರಿದ್ದೇವೆ ಎಂದು ಗ್ರಾಮಸ್ಥರು ತಾವೇ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

Alcoholic doctor
ಪಾವಗಡ ತಾಲೂಕಿನ ಕ್ವಾಟಗುಡ್ಡ ಗ್ರಾಮದಲ್ಲಿರುವ ವಸತಿಗೃಹಕ್ಕೆ ನುಗ್ಗಿದ ಜನ

ಈ ರಾಮಾಂಜಿನಪ್ಪ ಆಸ್ಪತ್ರೆಗೆ ಬಂದಿರುವುದಾಗಿ ಸಹಿ ಮಾಡಲಾಗಿದೆ. ಆದರೆ, ಆಸ್ಪತ್ರೆಗೆ ಬಂದೇ ಇರಲಿಲ್ಲ. ಜನರೆಲ್ಲ ಸೇರಿ ಹೋಗಿ ನೋಡಿದರೆ ರಾಮಾಂಜಿನಪ್ಪ ಎಂದಿನ ಚಾಳಿಯಂತೆ ಎಣ್ಣೆ ಹೊಡೆಯುತ್ತಿರುವುದು ಕಂಡಿತು. ಈ ನಡುವೆ, ಪ್ರತಿಭಟನೆಯ ಸುಳಿವು ಪಡೆದ ಪೊಲೀಸರು ಕೂಡಾ ಸ್ಥಳಕ್ಕೆ ಬಂದಿದ್ದರು.

ರಾಮಾಂಜಿನಪ್ಪ ಆಸ್ಪತ್ರೆಯ ಆವರಣದಲ್ಲೇ ಇರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದು, ಅಲ್ಲಿಗೆ ಬೇರೆ ಯಾರೂ ಬರಬಾರದು ಎಂದು ತಾಕೀತು ಮಾಡಿದ್ದ. ಆದರೆ, ಪೊಲೀಸರ ಸಮ್ಮುಖದಲ್ಲಿ ನಾವು ನುಗ್ಗೇ ನುಗ್ಗುತ್ತೇವೆ ಎಂದು ಜನರು ಹಠ ಹಿಡಿದರು. ಕೊನೆಗೆ ಜನರ ಹಠವೇ ಗೆದ್ದಿತ್ತು. ಒಳಗೆ ಹೋಗಿ ನೋಡಿದರೆ ಬಗೆಬಗೆಯ ಮದ್ಯಗಳು ಅಲ್ಲಿದ್ದದ್ದು ಕಂಡುಬಂತು. ಜತೆಗೆ ಪ್ಯಾಕ್‌ ಪ್ಯಾಕ್‌ ಸಿಗರೇಟುಗಳು.

Accusations against Doctor near Pavagada
ಕುಡುಕ ಡಾಕ್ಟರ್‌ ಮೇಲೆ ಆರೋಪ ಮಾಡುತ್ತಿರುವ ಗ್ರಾಮಸ್ಥರು

ಜನರನ್ನು ಒಳಗೆ ಬಾರದಂತೆ ತಡೆಯಲು ಮುಂದಾದ ರಾಮಾಂಜಿನಪ್ಪ. ಇದು ನನ್ನ ಖಾಸಗಿ ಜಾಗ. ಇಲ್ಲಿಗೆ ಬರಬಾರದು ಎಂದಿದ್ದ. ಆದರೆ, ಜನರು, ಇದು ಖಾಸಗಿಯಲ್ಲಿ ಕ್ವಾರ್ಟರ್ಸ್‌ ಇದು. ನೀವು ಇಷ್ಟು ಹೊತ್ತಿಗೆ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಇಲ್ಲಿ ಕುಡಿದುಕೊಂಡು ಕುಳಿತಿದ್ದೀರಿ ಎಂದು ಆಕ್ಷೇಪಿಸಿದರು.

ಇದಾದ ಬಳಿಕ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾದರು. ಕುಡುಕ ವೈದ್ಯನನ್ನ ವಜಾ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಆಗ ರಾಮಾಂಜಿನಪ್ಪ ನಾನೇ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತೇನೆ, ನಿಮ್ಮ ಸಹವಾಸವೇ ಬೇಡ ಎಂದು ಹೇಳಿದ. ಅದಕ್ಕೆ ಗ್ರಾಮಸ್ಥರು, ನಿಮ್ಮನ್ನು ಟ್ರಾನ್ಸ್‌ ಫರ್‌ ಮಾಡುವುದ ಬೇಡ, ವಜಾ ಮಾಡಬೇಕು. ಇಲ್ಲದಿದ್ದರೆ ನೀವು ಬೇರೆ ಕಡೆ ಹೋದರೂ ಅಲ್ಲೂ ಇದೇ ಚಾಳಿ, ಸಮಸ್ಯೆ ಮುಂದುವರಿಸುತ್ತೀರಿ ಎಂದರು.

ಇದನ್ನೂ ಓದಿ: Harrassment Case : ಡಿ ಗ್ರೂಪ್‌ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಗೂಸಾ

ಆಸ್ಪತ್ರೆಗೆ ಬಂದಿದ್ದ ಮಹಿಳೆಯರು ಕೂಡಾ ಇಲ್ಲಿ ಡಾಕ್ಟರ್‌ ಇರುವುದೇ ಇಲ್ಲ. ಕೇವಲ ನರ್ಸ್‌ಗಳು ಮಾತ್ರ ಚಿಕಿತ್ಸೆ ಕೊಡುತ್ತಾರೆ. ನಮಗೆ ಭಯವಾಗುತ್ತದೆ ಎಂದರು. ಈ ನಡುವೆ, ವೈದ್ಯ ರಾಮಾಂಜಿನಪ್ಪಗೆ ತಾಲೂಕು ವೈದ್ಯಾಧಿಕಾರಿ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂತು. ಇಲ್ಲವಾದರೆ ಬೆಳಗ್ಗೆಯಿಂದ ಪ್ರತಿಭಟನೆ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

ರಾಮನಗರದ ಮೂಲದ ಭಕ್ತರೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೆಲಿಕಾಪ್ಟರ್‌ ನೀಡುವುದಾಗಿ ಘೋಷಿಸಿದ್ದಾರೆ.

VISTARANEWS.COM


on

mantralaya mutt
Koo

ರಾಯಚೂರು: ದೇವಾಲಯಗಳಿಗೆ ನಗದು, ಚಿನ್ನಾಭರಣ ಕಾಣಿಕೆಯಾಗಿ ಕೊಡುವ ಭಕ್ತರನ್ನು ಎಲ್ಲೆಡೆ ಕಾಣುತ್ತೇವೆ. ಆದರೆ, ಇಲ್ಲೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೆಲಿಕಾಪ್ಟರ್‌ ಕೊಡುಗೆ ನೀಡಲು ಮುಂದಾಗಿದ್ದಾರೆ.

ರಾಮನಗರದ ಶ್ರೀ ಫೌಂಡೇಶನ್‌ ಸಂಸ್ಥಾಪಕ ಸುರೇಶ್‌ ಅವರು ಮಂತ್ರಾಲಯ ಮಠದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರಿಗೆ ಹೆಲಿಕಾಪ್ಟರ್‌ ನೀಡುವುದಾಗಿ ತಿಳಿಸಿದ್ದು, ಶೀಘ್ರದಲ್ಲೇ ಹೆಲಿಪ್ಯಾಡ್‌ ಕಾಮಗಾರಿ ಆರಂಭಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡರೆ ಸಂಕ್ರಾಂತಿ ಹಬ್ಬಕ್ಕೆ ಮಂತ್ರಾಲಯದ ಶ್ರೀಗಳಿಗೆ ಹೆಲಿಕಾಪ್ಟರ್ ಹಸ್ತಾಂತರಿಸುವ ಪ್ರಯತ್ನ ಮಾಡಲಾಗುತ್ತದೆ. ಈ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ.

ಇನ್ನು ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ 253 ಅಡಿ ಎತ್ತರದ ರಾಘವೇಂದ್ರ ಸ್ವಾಮಿ ವಿಗ್ರಹ ನಿರ್ಮಿಸಲಾಗುತ್ತಿದೆ. ಡಿಸೆಂಬ‌ರ್‌ನಲ್ಲಿ ಸುಬುದೇಂದ್ರ ತೀರ್ಥರು ಮೂರ್ತಿ ಪ್ರತಿಷ್ಠಾಪನೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಸೀತಾಪಹಾರದ ಹಿಂದಿನ ಕುತೂಹಲಕಾರಿ ವಿಷಯಗಳು

ಶಬರಿಮಲೆ ಯಾತ್ರಿಕರಿಗೆ KSRTC ವಿಶೇಷ ಬಸ್‌ ಸೇವೆ, ಬುಕಿಂಗ್‌ ಹೇಗೆ?

Shabarimale yatre KSRTC BUS

ಬೆಂಗಳೂರು: ಡಿಸೆಂಬರ್‌ ಆರಂಭವಾಗುತ್ತಿದ್ದಂತೆಯೇ ಕೇರಳದ ಪುಣ್ಯ ಕ್ಷೇತ್ರ ಶಬರಿಮಲೆಗೆ (Shabarimale yatre) ಹೋಗುವ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ. ಡಿಸೆಂಬರ್‌ 1ರಿಂದ ವಿಶೇಷ ಬಸ್‌ ಸೌಲಭ್ಯವನ್ನು (Special bus Service) ಒದಗಿಸಲಾಗುತ್ತಿದ್ದು, ಯಾತ್ರಾರ್ಥಿಗಳು ಇದನ್ನು ಉಪಯೋಗ ಮಾಡಿಕೊಳ್ಳಬಹುದು (Shabarimale Bus) ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಡಿಸೆಂಬರ್‌ 1ರಿಂದ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ ವೋಲ್ವೋ ಮತ್ತು ರಾಜಹಂಸ ಬಸ್ ಸಂಚರಿಸಲಿದೆ ಎಂದು ತಿಳಿಸಿರುವ ಕೆ.ಎಸ್‌.ಆರ್‌.ಟಿ.ಸಿಯು ವೋಲ್ವೊ ಬಸ್​​ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ದರ ಎಷ್ಟು, ಯಾವ ಹೊತ್ತಿಗೆ ಹೊರಡುತ್ತದೆ?

ಕೆ.ಎಸ್‌.ಆರ್‌.ಟಿಸಿ ವೋಲ್ವೋ ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಅದೇ ದಿನ ಸಂಜೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ವೋಲ್ವೋ ಬಸ್‌ನಲ್ಲಿ ಒಂದು ಟಿಕೆಟ್‌ನ ದರ 1600 ರೂ. ಆಗಿರುತ್ತದೆ.

ರಾಜಹಂಸ ಬಸ್ (ನಾನ್‌ಎಸಿ) ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ಪಂಪಾ ತಲುಪಲಿದೆ. ಆ ದಿನ ಸಂಜೆ 5 ಗಂಟೆಗೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂ. ಆಗಿದೆ.

ಡಿಸೆಂಬರ್‌ ತಿಂಗಳಲ್ಲಿ ಶಬರಿಮಲೆ ಸನ್ನಿಧಿಯಲ್ಲಿ ಮಂಡಲೋತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಆ ಬಳಿಕ ಜನವರಿ 14ರಂದು ಮಕರ ವಿಳಕ್ಕು (ಮಕರ ಜ್ಯೋತಿ) ನಡೆಯುತ್ತದೆ. ಆ ಸಂದರ್ಭದಲ್ಲಿ 48 ದಿನಗಳ ಕಾಲ ಮಾಲಾ ಧಾರಣೆ ಮಾಡಿ ವ್ರತಧಾರಿಗಳಾದ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಹೊಸ ಬಸ್‌ ಸೇವೆ ಅನುಕೂಲಕರವಾಗಲಿದೆ.

ಇದನ್ನೂ ಓದಿ : Shobha Karandlaje: ಶಬರಿಮಲೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಬಸ್​ ಟಿಕೆಟ್ ಬುಕಿಂಗ್ ಹೇಗೆ?

ಶಬರಿಮಲೆಗೆ ಹೋಗುವ ಬಸ್‌ಗಳ ಬುಕಿಂಗ್‌ನ್ನು ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ (www.ksrtc.in) ಮೂಲಕ ಮಾಡಬಹುದು. ಅದಲ್ಲದೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್‌ಗಳು ಇವೆ.

Continue Reading

ಕರ್ನಾಟಕ

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Siddaramaiah
Koo

ಬೆಂಗಳೂರು: ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse) ಜಿಲ್ಲೆಯ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಿರಂತರ ಪ್ರಯತ್ನದಿಂದ ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಸತತ ಹದಿನೇಳು ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು.

ಇದನ್ನೂ ಓದಿ | ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ನಿಮ್ಮ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ಮರುಹುಟ್ಟು ಸಿಕ್ಕಂತಾಗಿದೆ.
ಕೋಟ್ಯಂತರ ಭಾರತೀಯರ ಹಾರೈಕೆಗಳು, ಕಾರ್ಮಿಕರ ಕುಟುಂಬ ಸದಸ್ಯರ ಪ್ರಾರ್ಥನೆ ಈ ಕ್ಷಣ ಫಲ ನೀಡಿದೆ ಎಂದು ತಿಳಿಸಿದ್ದಾರೆ.

ಉತ್ತರಕಾಶಿಯಲ್ಲಿ 41 ಕಾರ್ಮಿಕರ ರಕ್ಷಣೆ

ಉತ್ತರಾಖಂಡದ (Uttarakhand) ಉತ್ತರಕಾಶಿ (Uttarkashi Tunnel Collapse) ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರ ತರಲಾಗಿದೆ. ಮಂಗಳವಾರ ರಾತ್ರಿ ಎಂಟು ಗಂಟೆಗೆ ಒಬ್ಬೊಬ್ಬರಾಗಿ ಸುರಂಗದೊಳಿಗಿಂದ ಕಾರ್ಮಿಕರನ್ನು ಹೊರ ಕರೆ ತರಲಾಯಿತು(rescue operation). ಅಂತಿಮ ಹಂತದ ಕಾರ್ಯಾಚರಣೆ ಆರಂಭವಾದ ಅರ್ಧ ಗಂಟೆಯಲ್ಲಿ ಎಲ್ಲ 41 ಕಾರ್ಮಿಕರು ಸುರಂಗದ ಅವಶೇಷಗಳಿಂದ ಹೊರ ಬಂದಿದ್ದಾರೆ.

ಸುರಂಗದ ಅವಶೇಷಗಳಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಮಂಗಳವಾರ (ನವೆಂಬರ್‌ 28) ಫಲ ಕೊಟ್ಟಿದೆ (Uttarkashi Tunnel Rescue). ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂದು ಶತಕೋಟಿ ಭಾರತೀಯರು ಮಾಡಿದ ಪ್ರಾರ್ಥನೆಯು ಫಲಿಸಿದೆ. ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿದ್ದು, ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿ, ಪೊಲೀಸರು, ನುರಿತ ರಕ್ಷಣಾ ಸಿಬ್ಬಂದಿ, ವಿದೇಶಿ ತಂಡಗಳು, ಅತ್ಯಾಧುನಿಕ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳನ್ನು ಬಳಸಿ ಸತತವಾಗಿ ಕಾರ್ಯಾಚರಣೆ ಕೈಗೊಂಡರೂ ಹಲವು ಅಡೆತಡೆಗಳು ಎದುರಾದವು. ಆದರೆ, ಇದೆಲ್ಲವನ್ನೂ ಮೀರಿ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದೆ. 41 ಹಾಸಿಗೆಗಳು ಇರುವ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಆಂಬುಲೆನ್ಸ್‌ ಮೂಲಕ ಎಲ್ಲ ಕಾರ್ಮಿಕರನ್ನು ಕರೆದೊಯ್ಯಲಾಗಿದೆ.ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಆಂಬುಲೆನ್ಸ್‌ ಮೂಲಕ ಎಲ್ಲ ಕಾರ್ಮಿಕರನ್ನು ಕರೆದೊಯ್ಯಲಾಗಿದೆ.

ಇದನ್ನೂ ಓದಿ | ಹೊರ ಬಂದರು ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು! ಫಲಿಸಿತು ಭಾರತೀಯರ ಪ್ರಾರ್ಥನೆ

ಸ್ಥಳದಲ್ಲಿ ಹಾಜರಿದ್ದ ಉತ್ತರಾಖಂಡ ಸಿಎಂ ಪುಷ್ಕರ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ಜನರಲ್ ವಿ ಕೆ ಸಿಂಗ್ ಅವರು ಸುರಂಗದಿಂದ ಹೊರ ಬಂದ ಕಾರ್ಮಿಕರನ್ನು ಬರಮಾಡಿಕೊಂಡು, ಅವರೊಂದಿಗೆ ಮಾತುಕತೆ ನಡೆಸಿದರು. ಕೂಡಲೇ ಕಾರ್ಮಿಕರನ್ನು ತಾತ್ಕಾಲಿಕ ಆಸ್ಪತ್ರೆಗೆ ದಾಖಲಿಸಲಾಯಿತು. 17 ದಿನಗಳ ಕಾಲ ಸುರಂಗದ ಅವಶೇಷಗಳಲ್ಲಿ ಸಿಲುಕಿದ್ದ ಕಾರ್ಮಿಕರು ಹೊರ ಬಂದಾಗಲೂ ಅವರ ಮುಖದ ಮೇಲೆ ಮಂದಹಾಸವಿತ್ತು. ಈ ಕಾರ್ಮಿಕರ ರಕ್ಷಣೆಗೆ ಕೋಟ್ಯಂತರ ಭಾರತೀಯರು ಪಾರ್ಥನೆ ಮಾಡಿದ್ದರು.

Continue Reading

ಕರ್ನಾಟಕ

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News

VISTARANEWS.COM


on

Top 10 news
Koo

1. ಹೊರ ಬಂದರು ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು! ಫಲಿಸಿತು ಭಾರತೀಯರ ಪ್ರಾರ್ಥನೆ
ಡೆಹ್ರಾಡೂನ್:‌ ಉತ್ತರಾಖಂಡದ (Uttarakhand) ಉತ್ತರಕಾಶಿ (Uttarkashi Tunnel Collapse) ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರ ತರಲಾಗಿದೆ. ಮಂಗಳವಾರ ರಾತ್ರಿ ಎಂಟು ಗಂಟೆಗೆ ಒಬ್ಬೊಬ್ಬರಾಗಿ ಸುರಂಗದೊಳಿಗಿಂದ ಕಾರ್ಮಿಕರನ್ನು ಹೊರ ಕರೆ ತರಲಾಯಿತು(rescue operation). ಅಂತಿಮ ಹಂತದ ಕಾರ್ಯಾಚರಣೆ ಆರಂಭವಾದ ಅರ್ಧ ಗಂಟೆಯಲ್ಲಿ ಎಲ್ಲ 41 ಕಾರ್ಮಿಕರು ಸುರಂಗದ ಅವಶೇಷಗಳಿಂದ ಹೊರ ಬಂದಿದ್ದಾರೆ. ಅಂತೂ, ಸುರಂಗದ ಅವಶೇಷಗಳಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಕೈಗೊಂಡ ಕಾರ್ಯಾಚರಣೆಯು ಮಂಗಳವಾರ (ನವೆಂಬರ್‌ 28) ಫಲ ಕೊಟ್ಟಿದೆ (Uttarkashi Tunnel Rescue). ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂದು ಶತಕೋಟಿ ಭಾರತೀಯರು ಮಾಡಿದ ಪ್ರಯತ್ನವು ಯಶಸ್ವಿಯಾಗಿದೆ. ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿದ್ದು, ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

2. ಮಕ್ಕಳ ಮಾರಾಟದ ಬೃಹತ್‌ ಜಾಲ ಪತ್ತೆ;‌ ಹೊಟ್ಟೆಯಲ್ಲಿ ಇರುವಾಗಲೇ ಬುಕಿಂಗ್!
ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಭ್ರೂಣ ಹತ್ಯೆ ಜಾಲದ (feticide scam) ಭಯಾನಕ ಮುಖಗಳು ಒಂದೊಂದಾಗಿ ಹೊರಬರುತ್ತಿರುವ ನಡುವೆಯೇ ಬೆಂಗಳೂರಿನಲ್ಲಿ ಇನ್ನೊಂದು ಆತಂಕಕಾರಿ ದಂಧೆ ಬಯಲಾಗಿದೆ. ಇದು ಹಸುಗೂಸುಗಳನ್ನೇ (Newborn Child Market) ಮಾರಾಟ ಮಾಡುವ ಕ್ರಿಮಿನಲ್‌ ದಂಧೆ. ಸಾಮಾನ್ಯವಾಗಿ ಮಕ್ಕಳ ಮಾರಾಟ ಜಾಲ ಎಂದರೆ ಮಕ್ಕಳನ್ನು ಅಪಹರಣ (Children kidnap) ಮಾಡಿ ಮಾರಾಟ ಮಾಡುವುದು ಅಥವಾ ಹೆತ್ತವರೇ ತಮ್ಮ ಮಕ್ಕಳನ್ನು ಮಾರಾಟ ಮಾಡುವುದು ಎಂದು ಅಂದುಕೊಳ್ಳುತ್ತೇವೆ. ಆದರೆ, ಇಲ್ಲಿ ಬಯಲಾಗಿರುವುದು ಅದನ್ನೂ ಮೀರಿದ ದಂಧೆ. ಅದೇನೆಂದರೆ ಮಕ್ಕಳನ್ನು ಮಾರಾಟಕ್ಕಾಗಿಯೇ ಹುಟ್ಟಿಸಿ ಬಳಿಕ ಮಾರಾಟ ಮಾಡುವ ದಂಧೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Child Trade : ಒಂದು ಮಗು ಹೆತ್ತು ಕೊಟ್ರೆ ತಾಯಿಗೆ 3 ಲಕ್ಷ, ಏಜೆಂಟ್‌ಗೆ 5 ಲಕ್ಷ ರೂ.!

3. ನಿಗಮ-ಮಂಡಳಿ ಲಿಸ್ಟ್‌ ಡೆಲ್ಲಿಗೆ ರವಾನೆ;‌ ಶಾಸಕರಿಗೆ ಮಾತ್ರ ಅವಕಾಶವೆಂದ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress Karnataka) ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದ ಬಳಿಕ ನಿಗಮ – ಮಂಡಳಿಗಳ ಅಧ್ಯಕ್ಷರ ಆಯ್ಕೆ ಫೈನಲ್‌ ಆಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ನಡುವಿನ ಮುಸುಕಿನ ಗುದ್ದಾಟದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೇಲುಗೈ ಸಾಧಿಸಿದ್ದಾರೆ. ಕಾರ್ಯಕರ್ತರಿಗೂ ಈ ಬಾರಿ ಅವಕಾಶ ನೀಡಬೇಕು ಎಂಬ ಡಿಕೆಶಿ ಬೇಡಿಕೆಗೆ ಈ ಬಾರಿ ಬೆಲೆ ಸಿಕ್ಕಿಲ್ಲ. ಹೀಗಾಗಿ ಮೊದಲ ಹಂತದ ಲಿಸ್ಟ್‌ನಲ್ಲಿ ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

4. ಡಿಕೆಶಿ ವಿರುದ್ಧದ ಸಿಬಿಐ ಕೇಸ್‌ ವಾಪಸ್‌ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಯತ್ನಾಳ್‌
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ವಿರುದ್ಧ ಸಿಬಿಐ ದಾಖಲಿಸಿಕೊಂಡಿರುವ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು (CBI Case against DK Shivakumar) ಹಿಂದಕ್ಕೆ ಪಡೆಯುವ ರಾಜ್ಯ ಸಚಿವ ಸಂಪುಟದ (State Cabinet meeting) ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಬಸನ ಗೌಡ ಪಾಟೀಲ್‌ ಯತ್ನಾಳ್‌ (Basanagowda pateel Yatnal) ಅವರು ಹೈಕೋರ್ಟ್‌ (Karnataka High court) ಮೆಟ್ಟಿಲೇರಿದ್ದಾರೆ. ಸರ್ಕಾರದ ಈ ನಡೆ ಕಾನೂನುಬಾಹಿರವಾಗಿದ್ದು, ಇದನ್ನು ತಡೆಯಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿದ ದಾವೆಯಲ್ಲಿ ಮನವಿ ಮಾಡಲಾಗಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

5. ಸಿಎಂ, ಡಿಸಿಎಂ ನಡೆಗೆ ಹಿರಿಯ ಸಚಿವರ ಮುನಿಸು; ಅಭಿಪ್ರಾಯ ಕೇಳುತ್ತಿಲ್ಲವೆಂದ ಪರಮೇಶ್ವರ್!
ಬೆಂಗಳೂರು: ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ. ಒಂದನ್ನು ಬಗೆಹರಿಸುವ ಹೊತ್ತಿಗೆ ಮತ್ತೊಂದು ಶುರು ಎಂಬಂತೆ ಆಗುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ನಡೆಗೆ ಹಿರಿಯ ಸಚಿವರು ಅಸಮಾಧಾನಗೊಂಡಿದ್ದಾರೆ. ಜತೆಗೆ ಹೈಕಮಾಂಡ್‌ (Congress High Command) ಬಗ್ಗೆಯೂ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ಯಾವುದೇ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಬೇಕಿದ್ದರೂ ಸಲಹೆಗಳನ್ನು ಸಹ ಕೇಳುತ್ತಿಲ್ಲ. ಅವರಿಬ್ಬರೇ ಫೈನಲ್‌ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ಹೈಕಮಾಂಡ್‌ ಕೂಡಾ ಮಣೆ ಹಾಕುತ್ತಿದೆ ಎಂಬ ಅಸಮಾಧಾನವನ್ನು ಹೊರಹಾಕಲಾಗುತ್ತಿದೆ. ಈಗ ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಸ್ವತಃ ಆಕ್ರೋಶ ಹೊರಹಾಕಿದ್ದಾರೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

6. ಯೂಟ್ಯೂಬ್​ನಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್; ವೀವ್ಸ್ ಎಷ್ಟು?
ಬೆಂಗಳೂರು: ಕಳೆದ ವರ್ಷ ತೆರೆಕಂಡ ʼಕಾಂತಾರʼ ಚಿತ್ರ (Kantara Movie) ಸೂಪರ್‌ ಹಿಟ್‌ ಆಗಿತ್ತು. ಕನ್ನಡ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರ ಎರಡನೇ ಭಾಗ ಬರುತ್ತದೆ ಎನ್ನುವಾಗಲೇ ಸಾಕಷ್ಟು ಕುತೂಹಲ ಮೂಡಿತ್ತು. ಅದರಂತೆ ನವೆಂಬರ್ 27ರಂದು ರಿಲೀಸ್ ಆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್ ದಾಖಲೆಯ ವೀಕ್ಷಣೆ ಕಂಡಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : ಕನ್ನಡ ಚಿತ್ರಗಳನ್ನು ನಿರಾಕರಿಸುತ್ತಿರುವ ಒಟಿಟಿ ವೇದಿಕೆಗಳು: ರಿಷಬ್ ಶೆಟ್ಟಿ ಆರೋಪ

7. ಗೂಳಿ’ಯಂತೆ ಜಿಗಿದ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ, 20% ಏರಿಕೆಗೆ ಏನು ಕಾರಣ?
ಮುಂಬೈ: ಗೌತಮ್‌ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್‌ ಷೇರುಗಳ (Adani Stocks) ಮೌಲ್ಯವು ಮಂಗಳವಾರ (ನವೆಂಬರ್‌ 18) ದಿಢೀರನೇ ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ವಹಿವಾಟು (Share Market) ಆರಂಭವಾಗುತ್ತಲೇ ಅದಾನಿ ಗ್ರೂಪ್‌ ಷೇರುಗಳ ಮೌಲ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದಾನಿ ಗ್ರೂಪ್‌ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

8. ಆಧಾರ್‌ ಮಾಹಿತಿ ಪಕ್ಕಾ ಪರ್ಸನಲ್‌, ಹೆಂಡತಿಗೂ ಕೊಡುವಂತಿಲ್ಲ!
ಬೆಂಗಳೂರು: ಆಧಾರ್‌ ಕಾರ್ಡ್‌ಗೆ (Aadhaar Card) ಸಂಬಂಧಿಸಿದ ಮಾಹಿತಿಗಳು ಖಾಸಗಿಯಾಗಿದ್ದು, ಅದನ್ನು ಹೆಂಡತಿಗೂ ಕೊಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ (Karnataka High court) ಮಹತ್ವದ ತೀರ್ಪೊಂದರಲ್ಲಿ ಹೇಳಿದೆ. ಗಂಡ-ಹೆಂಡತಿ ಮಧ್ಯೆ ಏನು ಗೌಪ್ಯತೆ, ಹೆಂಡತಿಯ ಮಾಹಿತಿಯನ್ನು ಗಂಡನಿಗೆ, ಗಂಡನ ಮಾಹಿತಿಯನ್ನು ಹೆಂಡತಿಗೆ ನೀಡಬಹುದಲ್ಲವೇ ಎಂಬ ಪ್ರಶ್ನೆಗೆ ಕೋರ್ಟ್‌ ಕಾನೂನಿನ ಉತ್ತರ ನೀಡಿದೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

9. ದುಡ್ಡು ಖಾಲಿಯಾಗಿದ್ದು ಆರ್​ಸಿಬಿಯದ್ದು, ಲಾಭ ಆಗುತ್ತಿರುವುದು ಮುಂಬೈಗೆ!
ಬೆಂಗಳೂರು: ಗುಜರಾತ್ ಟೈಟಾನ್ಸ್ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಆಡಲು ಮುಂಬೈ ಇಂಡಿಯನ್ಸ್ ಸೇರಲು ನಿರ್ಧರಿಸಿದಾಗಿನಿಂದ ಐಪಿಎಲ್​ 2024ನೇ ಆವೃತ್ತಿಯು ಕಳೆಗಟ್ಟುತ್ತಿದೆ. ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ್ಪರ ನಾಯಕನಾಗಿ ಮತ್ತು ಆಟಗಾರನಾಗಿ ಒಂದೆರಡು ಯಶಸ್ವಿ ವರ್ಷಗಳ ಕಳೆದ ನಂತರ ಅವರು ಮುಂಬೈಗೆ ವಾಪಸಾಗಿದ್ದಾರೆ. ಅವರೀಗ , ರೋಹಿತ್ ಶರ್ಮಾ ನೇತೃತ್ವದ ತಂಡದ ಜತೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಅವರು ಈ ಫ್ರಾಂಚೈಸಿಯ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿದೆ. ಆದರೆ, ಈ ಟ್ರೇಡಿಂಗ್ ಡೀಲ್ ಅತ್ಯಂತ ಕುತೂಹಲಕಾರಿಯಾಗಿತ್ತು. ಅವರಿಗೆ ನೀಡಬೇಕಾದ 15 ಕೋಟಿ ರೂಪಾಯಿ ಮೊತ್ತವನ್ನು ಸಜ್ಜುಗೊಳಿಸಲು ಮುಂಬಯಿ ಇಂಡಿಯನ್ಸ್​ ತಂಡ ಹೊಸ ಐಡಿಯಾ ಮಾಡಿತ್ತು. ತನ್ನ ತಂಡದಲ್ಲಿರುವ 17.5 ಕೋಟಿ ರೂಪಾಯಿ ಮೌಲ್ಯದ ಆಸ್ಟ್ರೇಲಿಯನ್​ ಆಲ್​ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಬೆಂಗಳೂರು ತಂಡಕ್ಕೆ ಮಾರಿತು. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

10. `ಗೇ’ ಆ್ಯಪ್‌ನಲ್ಲಿ ಸಿಕ್ಕ ಮಹಾಶೂರ; ಮೀಟ್‌ ಮಾಡಲು ಬಂದವ ಲೂಟ್‌ ಮಾಡಿದ!
ಬೆಂಗಳೂರು: ಈಗಂತೂ ಆನ್‌ಲೈನ್‌ನಲ್ಲಿ ನೂರಾರು ಡೇಟಿಂಗ್‌ ಆ್ಯಪ್‌ಗಳು (Dating App) ಸಿಗುತ್ತವೆ. ಇದರ ಹಿಂದೆ ಬಿದ್ದ ಯುವಜನತೆ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಆಡುಗೋಡಿಯಲ್ಲಿ ಗ್ರೈಂಡರ್ (GRINDR) ಎಂಬ ಗೇ ಡೇಟಿಂಗ್‌ ಆ್ಯಪ್‌ (Gay App) ಮೂಲಕ ಪರಿಚಯ ಆದವನೇ ದರೋಡೆಕೋರನಾಗಿ ಎಲ್ಲವನ್ನೂ (Robbery Case) ದೋಚಿ ಹೋಗಿದ್ದಾನೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Child trade : IVFಗೆ ಗಾರ್ಮೆಂಟ್ಸ್‌ ಯುವತಿಯರ ಅಂಡಾಣು!; ಮಕ್ಕಳ ಮಾರಾಟ ಗ್ಯಾಂಗ್‌ ಕರಾಮತ್ತು

Child trade : ಬೆಂಗಳೂರಿನ ಸಿಸಿಬಿ ಪೊಲೀಸರು ದೊಡ್ಡದೊಂದು ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ್ದಾರೆ. ಈ ಜಾಲವು ಮಕ್ಕಳನ್ನು ಕೃತಕ ಗರ್ಭಧಾರಣೆ ಮೂಲಕ ಸೃಷ್ಟಿಸಿ ಮಾರಾಟ ಮಾಡುತ್ತಿತ್ತು!

VISTARANEWS.COM


on

Child trade in Bangalore
ಬಂಧಿತರ ಮಕ್ಕಳ ಮಾರಾಟ ಜಾಲದ ಆರೋಪಿಗಳು
Koo

ಬೆಂಗಳೂರು: ಬೆಂಗಳೂರಿನಲ್ಲಿ ಬಯಲಾಗಿರುವ ಮಕ್ಕಳ ಮಾರಾಟ ಜಾಲದ (Child trade) ಭಯಾನಕ ಕೃತ್ಯಗಳು ಒಂದರ ಹಿಂದೊಂದರಂತೆ ಬಯಲಾಗುತ್ತಿವೆ. ಕಳೆದ ಹಲವು ವರ್ಷಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದಲ್ಲಿ ಮಕ್ಕಳನ್ನು ಮಾರಾಟ ಮಾಡುವ ಜಾಲ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗಿದ್ದು, ಇವರ ಪೈಕಿ ಎಂಟು ಮಂದಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಇವರ ಪೈಕಿ ಒಬ್ಬಾಕೆ ಮಗುವನ್ನು ಮಾರಾಟ ಮಾಡಿದವಳಾಗಿದ್ದರೆ, ಉಳಿದವರು ಮಾರಾಟ ಜಾಲದವರು.

ಈ ಗ್ಯಾಂಗ್‌ ಮಕ್ಕಳ ಬೇಡಿಕೆ ಇಡುವ ಗ್ರಾಹಕರು ಮತ್ತು ಮಕ್ಕಳನ್ನು ಹೆತ್ತು ಮಾರಾಟ ಮಾಡುವ ಬಡವರ ನಡುವೆ ಆಪರೇಷನ್‌ ನಡೆಸುತ್ತಿತ್ತು. ಅದರ ನಡುವೆ, ತಾನೇ ಕೃತಕ ಗರ್ಭಧಾರಣೆ (ಐವಿಎಫ್‌) ಮೂಲಕವೂ ಮಕ್ಕಳನ್ನು ಪಡೆಯುವ ತಂತ್ರಗಳನ್ನು ಮಾಡುತ್ತಿತ್ತು. ಇದಕ್ಕೆ ಗಾರ್ಮೆಂಟ್ಸ್‌ ಯುವತಿಯರನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಲಾಗಿದೆ.

ಸಾಮಾನ್ಯವಾಗಿ ಆಗಲೇ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದು, ಬಳಿಕ ಗರ್ಭಧಾರಣೆಯಾದ ಹಂತದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಗರ್ಭಪಾತ ಮಾಡಿಸಲು ಮುಂದಾಗುವ ಬಡವರನ್ನೇ ಟಾರ್ಗೆಟ್‌ ಮಾಡುತ್ತಿತ್ತು ಈ ತಂಡ. ಅವರ ಮನವೊಲಿಸಿ ಅವರಿಗೆ ಹಣ ಕೊಡುವ ಆಮಿಷ ಒಡ್ಡಿ, ಮಕ್ಕಳನ್ನು ಹೆತ್ತು ತಮಗೆ ನೀಡುವಂತೆ ಮಾಡುತ್ತಿದ್ದರು.

ಈ ನಡುವೆ, ಐವಿಎಫ್‌ ತಂತ್ರಜ್ಞಾನದ ಮೂಲಕ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವ ತಂತ್ರವೂ ಇವರಲ್ಲಿತ್ತು. ಇದಕ್ಕಾಗಿ ಹದಿಹರೆಯದ ಯುವತಿಯರ ಅಂಡಾಣುಗಳನ್ನು ಬಳಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಅದರಲ್ಲೂ ಮುಖ್ಯವಾಗಿ ಬಡತನದ ಕಾರಣಕ್ಕಾಗಿ ಅಂಡಾಣು ಮಾರಾಟಕ್ಕೆ ಮುಂದಾಗುವ ಗಾರ್ಮೆಂಟ್ಸ್‌ ಕಾರ್ಮಿಕ ಯುವತಿಯರನ್ನು ಈ ಟೀಮ್‌ ಟಾರ್ಗೆಟ್‌ ಮಾಡಿತ್ತು ಎನ್ನಲಾಗಿದೆ. ಸಣ್ಣ ವಯಸ್ಸಿನ ಹೆಣ್ಮಕ್ಕಳಲ್ಲಿ ಹೆಚ್ಚು ಫಲವಂತಿಕೆ ಇರುವ ಅಂಡಾಣುಗಳು ಇರುತ್ತವೆ. ಅವರ ಅಂಡಾಣುಗಳನ್ನು ಬಳಸಿಕೊಂಡು ಪುರುಷನೊಬ್ಬನ ವೀರ್ಯಾಣು ಬಳಸಿ ಭ್ರೂಣಗಳನ್ನು ಕೃತಕವಾಗಿ ಸೃಷ್ಟಿಸಿ ಅದನ್ನು ಬೇರೊಬ್ಬ ಹೆಣ್ಣಿನ ಹೊಟ್ಟೆಯಲ್ಲಿ ಬೆಳೆಸಲಾಗುತ್ತಿತ್ತು. ಇದೆಲ್ಲವೂ ಒಬ್ಬ ನುರಿತ ವೈದ್ಯರು ಮತ್ತು ತಂತ್ರಜ್ಞರ ಸಹಕಾರದಿಂದಲೇ ನಡೆಯುತ್ತಿತ್ತು ಎನ್ನಲಾಗಿದೆ. ಈ ರೀತಿ ಅಂಡಾಣು ಮಾರಾಟ ಮಾಡುವ ಯುವತಿಯರಿಗೆ ಒಳ್ಳೆಯ ಹಣ ಕೂಡಾ ನೀಡಲಾಗುತ್ತಿತ್ತು ಎನ್ನುವುದು ಸಿಸಿಬಿ ತನಿಖೆಯಿಂದ ಬಯಲಾಗಿದೆ.

ತಮಿಳುನಾಡಿನಿಂದ ಆಪರೇಟ್‌ ಮಾಡುತ್ತಿದ್ದ ತಂಡ

ಈಗ ಸಿಕ್ಕಿಬಿದ್ದಿರುವ ಎಂಟು ಮಂದಿಯ ತಂಡ, ತಮಿಳುನಾಡಿನಿಂದ ಪ್ರಮುಖವಾಗಿ ಕಾರ್ಯಾಚರಣೆ ಮಾಡುತ್ತಿತ್ತು. ಈ ತಂಡದಲ್ಲಿರುವ ರಾಧಾ ಎಂಬಾಕೆ ಈ ಹಿಂದೆ ತಮಿಳುನಾಡಿನ ಆಸ್ಪತ್ರೆಯಲ್ಲಿ ಬಾಡಿಗೆ ತಾಯ್ತನದ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಯಾರು ಮಗು ಬೇಕು ಅನ್ನುತ್ತಾರೆ, ಯಾರಿಗೆ ಬಾಡಿಗೆ ತಾಯ್ತನದ ಮೂಲಕ ಮಗು ಬೇಕು ಎನ್ನುವುದರ ಅರಿವು ಆಕೆಗೆ ಚೆನ್ನಾಗಿತ್ತು ಎನ್ನಲಾಗಿದೆ. ಮಹಾಲಕ್ಷ್ಮಿ ಎಂಬಾಕೆ ಕರ್ನಾಟಕದಲ್ಲಿ ಏಜೆಂಟ್‌ ಆಗಿದ್ದು, ತಮಿಳುನಾಡಿನ ಕೊಂಡಿಯಾಗಿದ್ದಾಳೆ.

ಈ ಟೀಮ್‌ ಮಕ್ಕಳ ಮಾರಾಟದಲ್ಲಿ ಬಣ್ಣ, ಲಿಂಗದ ಆಧಾರದಲ್ಲಿ ದರ ನಿರ್ಣಯ ಮಾಡುತ್ತಿದೆ. ತುಂಬ ಬೆಳ್ಳಗಿರುವ ಮಕ್ಕಳಾದರೆ, ಗಂಡು ಮಕ್ಕಳಾದರೆ ಹೆಚ್ಚು ಹಣ ಕೇಳಿದರೆ, ಹೆಣ್ಣು ಮಕ್ಕಳಿಗೆ ಸ್ವಲ್ಪ ಕಡಿಮೆ ದರ ಇರುತ್ತದೆ ಎನ್ನಲಾಗಿದೆ. ಗಂಡು ಮಕ್ಕಳನ್ನು ಐದರಿಂದ ಹತ್ತು ಲಕ್ಷಕ್ಕೆ ಮಾರಾಟ ಮಾಡಿದರೆ ಹೆಣ್ಣು ಮಕ್ಕಳಿಗೆ ನಾಲ್ಕುರಿಂದ ಐದು ಲಕ್ಷ ರೂ. ಇರುತ್ತದೆಯಂತೆ. ಮಗುವನ್ನು ಹೆತ್ತು ಕೊಡುವ ಮಹಿಳೆಯರಿಗೆ ಒಂದುವರೆಯಿಂದ ಎರಡು ಲಕ್ಷ ರೂ ನೀಡುತ್ತಾರೆ ಎನ್ನುವುದು ಸಿಸಿಬಿ ತನಿಖೆಯ ವೇಳೆ ಬಯಲಾಗಿದೆ.

Continue Reading
Advertisement
PM Narendra Modi phone call to workers, who rescued from collapsed tunnel
ದೇಶ2 hours ago

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ!

mantralaya mutt
ಕರ್ನಾಟಕ2 hours ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ3 hours ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್3 hours ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ3 hours ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ4 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ4 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER5 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ5 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್5 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ21 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌