Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್;‌ ಬಡ್ಡಿ ದಂಧೆ ಕರಾಳತೆ ಬಯಲು - Vistara News

ಕ್ರೈಂ

Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್;‌ ಬಡ್ಡಿ ದಂಧೆ ಕರಾಳತೆ ಬಯಲು

Self Harming : ತುಮಕೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣದ ಹಿಂದೆ ಬಡ್ಡಿ ದಂಧೆಯ ಕೈವಾಡವಿದೆ ಎಂಬ ದೂರಿನ ಆಧಾರದಲ್ಲಿ ತನಿಖೆ ನಡೆಯುತ್ತಿದೆ.

VISTARANEWS.COM


on

Tumkur Suicide Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ತುಮಕೂರಿನ ಸದಾಶಿವ ನಗರದ ಒಂದೇ ಕುಟುಂಬದ ಐವರು ಆತ್ಮಹತ್ಯೆ (Five member family ends life) ಮಾಡಿಕೊಂಡ ಘಟನೆಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಸದಾಶಿವ ನಗರ ನಿವಾಸಿ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30) ದಂಪತಿ ಡೆತ್‌ ನೋಟ್‌ (Death note) ಬರೆದಿಟ್ಟು, ತಮ್ಮ ಮೂವರು ಮಕ್ಕಳಾದ ಪುತ್ರಿ ಹಾಜಿರಾ (14), ಪುತ್ರರಾದ ಮೊಹಮ್ಮದ್‌ ಸುಭಾನ್‌ (10), ಮೊಹಮ್ಮದ್‌ ಮುನೀರ್‌ (8) ಅವರಿಗೆ ವಿಷ ಉಣಿಸಿ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ಭಾದೆ ತಾಳಲಾರದೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನುವುದು ಮೊದಲೇ ಗೊತ್ತಾಗಿತ್ತು. ಇದೀಗ ಬಡ್ಡಿ ದಂಧೆಯ ಕಿರುಕುಳ (Meter interest scam) ಮತ್ತು ಪಕ್ಕದ ಮನೆಯವರೇ ಇದರ ಹಿಂದಿರುವ ಸಂಗತಿ ಬೆಳಕಿಗೆ ಬಂದಿದೆ.

Tumkur Suicide  Case

ಏನಿದೆ ಎರಡು ಎಫ್‌ಐಆರ್‌ಗಳಲ್ಲಿ?

ಘಟನೆಗೆ ಸಂಬಂಧಿಸಿ ತುಮಕೂರಿನ ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಮೃತ ಗರೀಬ್‌ ಸಾಬ್‌ ಅವರ ಸಹೋದರ ಖಲಂದರ್‌ ಸಾಬ್‌ ಅವರು ನೀಡಿದ ದೂರಿನ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 302, 109, 34 ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಎರಡನೇ ಎಫ್ಐಆರ್ ನಲ್ಲಿ ಬಡ್ಡಿ ದಂಧೆ ಹಾಗೂ ಕಿರುಕುಳ ಆರೋಪ ದಾಖಲಾಗಿದೆ. ಇದರಲ್ಲಿ ಪಕ್ಕದ ಮನೆಯವರಾದ ಖಲಂದರ್, ಸಾನಿಯಾ, ಶಾಬಾಜ್, ಶಬಾನಾ, ಸಾನಿಯಾ ವಿರುದ್ಧ ದೂರಲಾಗಿದೆ. ಐಪಿಸಿ ಸೆಕ್ಷನ್ 305, 306, 34 ಅಡಿ ಎಫ್ಐಆರ್ ದಾಖಲಾಗಿದೆ. ಗರೀಬ್‌ ಸಾಬ್‌ನ ವಿಡಿಯೋ ಹೇಳಿಕೆ ಆಧರಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಗರೀಬ್‌ ಸಾಬ್‌ ಅವರು ಮಕ್ಕಳ ಶಿಕ್ಷಣಕ್ಕಾಗಿ‌ ಹಾಗೂ ವ್ಯವಹಾರಕ್ಕಾಗಿ ಸಾಲ ಮಾಡಿದ್ದರು. ಆದರೆ, ಕಬಾಬ್‌ ವ್ಯವಹಾರ ಸೋಲು ಕಂಡಿತ್ತು. ಹಣ ಹೊಂದಾಣಿಕೆಗೆ ಕಷ್ಟಪಡುತ್ತಿದ್ದರು. ಇದರ ನಡುವೆ, ಆರೋಪಿಗಳಾದ ಖಲಂದರ್, ಖಲಂದರ್ ಪುತ್ರಿ ಸಾನಿಯಾ, ಖಲಂದರ್ ಪುತ್ರ ಶಾಬಾಜ್, ಹಾಗೂ ಪಕ್ಕದ ಮನೆಯ ಶಬಾನಾ, ಶಬಾನಾ ಪುತ್ರಿ ಸಾನಿಯಾ ಅವರು ಸಾಲ ಕೊಟ್ಟವರ ಬಳಿ ಚಾಡಿ ಹೇಳಿ ಮಾನಸಿಕ ಕಿರುಕುಳ ಕೊಡಿಸಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಗರೀಬ್‌ ಸಾಬ್‌ ಡೆತ್‌ ನೋಟ್‌ನಲ್ಲಿ ಏನೇನಿದೆ?

ಮೃತ ಗರೀಬ್‌ ಸಾಬ್‌ ತನ್ನ ದೊಡ್ಡಮ್ಮನಿಗೆ ಬರೆದ ಡೆತ್​ನೋಟ್​ʼನಲ್ಲಿ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿರುವ ಪ್ರಮುಖಾಂಶಗಳು ಇಲ್ಲಿವೆ.

Tumkur Suicide  Case Death Note
  1. ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದ್ದು, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ. ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ ಮತ್ತು ಊಟ ಮಾಡೋಕು ಕಷ್ಟ ಆಗಿದೆ.
  2. ಊರಲ್ಲಿದ್ದಾಗ ಹೆಂಡತಿ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ರು. ಅದಕ್ಕೆ ನಾವು ಇಲ್ಲಿಗೆ ಬಂದೆವು. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ.
  3. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನು ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ.
  4. ಮನೆ ವಸ್ತುಗಳನ್ನು ನೀವು ತಗೋಳಿ (ದೊಡ್ಡಮ್ಮನಿಗೆ ಹೇಳಿದ್ದು). ಹದಿನೈದು ಸಾವಿರ ರೂಪಾಯಿಯನ್ನು ಜರೀನಾ ಆಂಟಿಗೆ ಕೊಡಿ. ನಮ್ಮ ಬೈಕ್​ನ ನಮ್ಮ ಹಿರಿಯಣ್ಣ ಅಜಾಜ್​ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ.
  5. ದೊಡ್ಡಮ್ಮ… ನೀವು ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು.
  6. ತುಂಬಾ ವಿಷಯ ಇದೆ, ಆದರೆ ಇದ್ರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ.
  7. ಸದಾಶಿವನಗರದ ಮೂರನೇ ಬಿ ಮುಖ್ಯರಸ್ತೆಯಲ್ಲಿರುವ, ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ. ನಮಗೆ ಯಾರಾದ್ರೂ ಸಹಾಯ ಮಾಡಿದ್ರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದ್ರು. ನಾವು ಅವರು ಹೇಳಿದಂತೆ ಕೇಳಬೇಕಿತ್ತು, ಇಲ್ಲವಾದ್ರೆ ಅವರು ನಮ್ಮ ಜೊತೆ ಜಗಳ ಮಾಡ್ತಿದ್ರು.
  8. ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಳು. ನಮ್ಮ ಸಾವಿಗೆ ನಮ್ಮ ಮನೆಯ ಕೆಳಗಿನ ಖಲಂದರ್, ಅವನ ಮಗಳು ಸಾನಿಯಾ, ಅವನ ಹಿರಿಯ ಮಗ, ಮಹಡಿ ಮನೆಯ ಶಬಾನಾ ಮತ್ತು ಅವಳ ಮಗಳು ಸಾನಿಯಾ ಎಲ್ಲರೂ ಕಾರಣ.
  9. ನಮ್ಮ ಸಾವಿಗೆ ಕಾರಣರಾದವರಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ. ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ಕೊತ್ತೀವಿ, ನಮ್ಮ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಬೇಡಿ. ಇನ್ನೂ ಹಲವು ವಿಷಯಗಳು ಫೋನ್​ನಲ್ಲಿವೆ.

ಇದನ್ನೂ ಓದಿ : Kota Suicides: ಪೋಷಕರ ಒತ್ತಡವೇ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣ; ಸುಪ್ರೀಂ ಕೋರ್ಟ್ ಚಾಟಿ

ಮರಣೋತ್ತರ ಪರೀಕ್ಷೆ ಮುಕ್ತಾಯ, ಶವಗಳ ಹಸ್ತಾಂತರ

ಈ ನಡುವೆ, ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಮೃತರ ಶವಗಳ ಮರಣೋತ್ತರ ಪರೀಕ್ಷೆ ನಡೆದು ಬಳಿಕ ಪೊಲೀಸರ ಸಮ್ಮುಖದಲ್ಲಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿದೆ. ಕುಟುಂಬಿಕರು ಶವಗಳನ್ನು ಶಿರಾಗೆ ತೆಗೆದುಕೊಂಡು ಹೋಗಿದ್ದಾರೆ.

ಬಡ್ಡಿ ದಂಧೆಯ ದೂರಿನ ಬಗ್ಗೆ ವಿಚಾರಣೆ ಎಂದ ಪರಮೇಶ್ವರ್‌

ರಾಜ್ಯದ ಗೃಹ ಸಚಿವರಾಗಿರುವ ಜಿ. ಪರಮೇಶ್ವರ್‌ ಅವರು ಸೋಮವಾರ ಶವಾಗಾರಕ್ಕೆ ಭೇಟಿ ನೀಡಿದರು. ಗರೀಬ್‌ ಸಾಬ್‌ ಕುಟುಂಬಕ್ಕೆ ಸಾಂತ್ವನ ಹೇಳಿದರು.

ʻʻಇದು ನಿಜಕ್ಕೂ ಬಹಳ ನೋವು ತರುವ ವಿಷಯ. ಕುಟುಂಬದಲ್ಲಿ ಯಾರೂ ಉಳಿದಿಲ್ಲ. ಗರೀಬ್‌ ಸಾಬ್‌ ಅವರಿಗೆ ತಂದೆ, ತಾಯಿ, ಸಹೋದರರು ಇದ್ದರು. ಸಾಲ ತೀರಿಸಲು ಆಗದೆ ತೊಂದರೆಯಲ್ಲಿದ್ದರು. ಅವರಿಗೆ ಸಾಲ ಮರುಪಾವತಿಗೆ ಒತ್ತಡ ಹೇರಲಾಗುತ್ತಿತ್ತು. ಅವರು ಡೆತ್‌ ನೋಟದಲ್ಲಿ ಬರೆದವರ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆʼʼ ಎಂದು ಜಿ. ಪರಮೇಶ್ವರ್‌ ತಿಳಿಸಿದರು.

ಈ ಸಾವಿನ ಹಿಂದೆ ಬಡ್ಡಿ ದಂಧೆ ಇದೆ ಎಂದು ಜನರು ಮಾತನಾಡುತ್ತಿದ್ದಾರೆ. ಅದನ್ನು ಗಂಭೀರವಾಗಿ ತೆಗದುಕೊಂಡು, ಬಡ್ಡಿ ವ್ಯವಹಾರವನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ ಅವರು, ಮೃತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಜತೆ ಮಾತನಾಡುವುದಾಗಿ ಹೇಳಿದರು.

ʻʻಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವುದು ಜಾಸ್ತಿಯಾಗಿದೆ. ತನಿಖೆಯ ನಂತರ ಎಲ್ಲ ವಿಚಾರಗಳಲ್ಲಿ ಬಯಲಿಗೆ ಬರಲಿವೆ. ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆʼʼ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಲಬುರಗಿ

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Murder Case : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok sabha Election 2024) ಯುವಕನೊಬ್ಬ ಕಾಂಗ್ರೆಸ್‌ ಪರ ಪ್ರಚಾರ ಮಾಡಿ, ಮತ ಹಾಕಿದ್ದಕ್ಕೆ ಸಿಟ್ಟಾದ ಕೆಲ ಕಿಡಿಗೇಡಿಗಳು ಅಮಾವಾಸ್ಯೆ ದಿನ ಕರೆದು ಕೊಂದಿದ್ದಾರೆ. ಪಾರ್ಟಿ ಮಾಡುವ ನೆಪದಲ್ಲಿ ಯುವಕನನ್ನು ಕರೆಸಿಕೊಂಡ ದುಷ್ಕರ್ಮಿಗಳು ಕೊಲೆಗೈದು ಬಾವಿಗೆ ಬಿಸಾಡಿದ್ದಾರೆ.

VISTARANEWS.COM


on

By

murder case kalaburagi
Koo

ಕಲಬುರಗಿ: ಚುನಾವಣೆ ಮುಗಿದರೂ ಹಗೆತನ ಮುಗಿಯಲಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ. ಜಾವೀದ್ ಚಿನ್ನಮಳ್ಳಿ (25)ಹತ್ಯೆಯಾದವನು. ಕಲಬುರಗಿಯ (kalaburagi news) ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ (Murder case) ನಡೆದಿದೆ.

ಮೇ 7 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಜಾವೀದ್‌ ಕಾಂಗ್ರೆಸ್ ಪರ ಪ್ರಚಾರ ಮಾಡಿ, ಮತ ಹಾಕಿಸಿದ್ದ. ಇದಕ್ಕೆ ದ್ವೇಷ ಬೆಳೆಸಿಕೊಂಡ ಕೆಲವರು ಅಮಾವಾಸ್ಯೆ ದಿನ ಪಾರ್ಟಿ ಮಾಡಲು ಕರೆಸಿಕೊಂಡಿದ್ದಾರೆ. ಕಿಡಿಗೇಡಿಗಳ ಪ್ಲಾನ್‌ ತಿಳಿಯದೆ ಹೋದ ಜಾವೀದ್‌ ಜತೆಗೆ ಗಲಾಟೆ ಮಾಡಿದ್ದಾರೆ. ನಂತರ ಜಾವೀದ್‌ನನ್ನು ಕೊಲೆಗೈದಿದ್ದಾರೆ.

ಕೊಲೆ ‌ಮಾಡಿ ಮೃತದೇಹವನ್ನು ಅಲ್ಲೆ ಬಾವಿಯಲ್ಲಿ ಬಿಸಾಡಿ ಆರೋಪಿಗಳು ಪರಾರಿ ಆಗಿದ್ದಾರೆ. ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿ ಆಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ.

ಪ್ರೀತಿ ವಿಷ್ಯಕ್ಕೆ ಬೀದಿ ಹೆಣವಾದ! ಮಗನ ಡೆಡ್‌ಬಾಡಿ ನೋಡಿ ಮೂರ್ಛೆ ಹೋದ ತಾಯಿ

ಬೆಂಗಳೂರು: ಬೆಂಗಳೂರಿನ ಎಸ್‌ಆರ್‌ ನಗರ ಠಾಣಾ ವ್ಯಾಪ್ತಿಯಲ್ಲಿ ಯುವಕನ ಶವ (Dead Body Found) ಪತ್ತೆಯಾಗಿದೆ. ಮಿಷನ್ ರೋಡ್‌ನ ಪಿ.ಸಿ.ಮೋಹನ್ ಆ್ಯಂಡ್‌ ಕೊ ಕಾಂಪ್ಲೆಕ್ಸ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಶವ (Murder Case) ಪತ್ತೆಯಾಗಿದೆ. ಮೃತನನ್ನು ಕೆ.ಎಸ್. ಗಾರ್ಡನ್ ನಿವಾಸಿ ಸತ್ಯ (22) ಎಂದು ಗುರುತಿಸಲಾಗಿದೆ.

ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಸತ್ಯ ಗುರುವಾರ ರಾತ್ರಿ ಸ್ನೇಹಿತರ ಜತೆಗೆ ಮನೆಯಿಂದ ಹೊರಗಡೆ ಹೋಗಿದ್ದ. ಆದರೆ ಬೆಳಗಾಗುವುದರಲ್ಲಿ ಬೀದಿ ಹೆಣವಾಗಿದ್ದಾನೆ. ಸ್ಥಳೀಯರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ಮೃತ ಗುರುತು ಪತ್ತೆ ಮಾಡಿದ್ದಾರೆ. ಸತ್ಯನ ಕಿವಿಯಿಂದ ರಕ್ತ ಬಂದಿರುವುದು ಪತ್ತೆಯಾಗಿದೆ. ಮಗನ ಮೃತದೇಹ ಕಂಡು ಸತ್ಯ ತಾಯಿ ಮೂರ್ಚೆ ಹೋಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರೀತಿ ವಿಷ್ಯಕ್ಕೆ ಬಲಿ?

ಸತ್ಯ ಹುಡುಗಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ವಿಷಯ ತಿಳಿದ ಯುವತಿಯ ಮನೆಯವರು ಸತ್ಯನಾ ವಿರುದ್ಧ ಬಲವಂತವಾಗಿ ಯುವತಿ ಕಡೆಯಿಂದ ಪೊಲೀಸರಿಗೆ ದೂರು ಕೊಡಿಸಿದ್ದರು. ಈ ಸಂಬಂಧ ಸತ್ಯನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿಯೇ ಕೂರಿಸಿಕೊಂಡಿದ್ದರು. ಈ ಘಟನೆಯ ಬಳಿಕ ಸತ್ಯ ಸಾಕಷ್ಟು ನೊಂದಿದ್ದ. ಆದರೆ ಇತ್ತೀಚೆಗೆ ಮತ್ತೆ ಯುವತಿಯ ಜತೆ ಮಾತಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದು ಯುವತಿಯ ಕಡೆಯವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದು ಕೊಲೆಯೋ ಆಕಸ್ಮಿಕ ಸಾವೋ ಎಂಬುದನ್ನು ತಿಳಿಯಲು ಮುಂದಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder case : ಪ್ರೀತಿ ವಿಷ್ಯಕ್ಕೆ ಬೀದಿ ಹೆಣವಾದ! ಮಗನ ಡೆಡ್‌ಬಾಡಿ ನೋಡಿ ಮೂರ್ಛೆ ಹೋದ ತಾಯಿ

Murder Case : ಸ್ನೇಹಿತರ ಜತೆ ಹೊರಹೋದ ಯುವಕನೊಬ್ಬ ಬೀದಿ ಹೆಣವಾಗಿದ್ದಾನೆ. ಮಗನ ಮೃತದೇಹವನ್ನು ಕಂಡು ತಾಯಿ ಮೂರ್ಛೆ ಹೋಗಿದ್ದಾರೆ. ಯುವಕ ಪ್ರೀತಿಸುತ್ತಿದ್ದ ಯುವತಿ ಮನೆಯವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

Murder Case
Koo

ಬೆಂಗಳೂರು: ಬೆಂಗಳೂರಿನ ಎಸ್‌ಆರ್‌ ನಗರ ಠಾಣಾ ವ್ಯಾಪ್ತಿಯಲ್ಲಿ ಯುವಕನ ಶವ (Dead Body Found) ಪತ್ತೆಯಾಗಿದೆ. ಮಿಷನ್ ರೋಡ್‌ನ ಪಿ.ಸಿ.ಮೋಹನ್ ಆ್ಯಂಡ್‌ ಕೊ ಕಾಂಪ್ಲೆಕ್ಸ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಶವ (Murder Case) ಪತ್ತೆಯಾಗಿದೆ. ಮೃತನನ್ನು ಕೆ.ಎಸ್. ಗಾರ್ಡನ್ ನಿವಾಸಿ ಸತ್ಯ (22) ಎಂದು ಗುರುತಿಸಲಾಗಿದೆ.

ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಸತ್ಯ ಗುರುವಾರ ರಾತ್ರಿ ಸ್ನೇಹಿತರ ಜತೆಗೆ ಮನೆಯಿಂದ ಹೊರಗಡೆ ಹೋಗಿದ್ದ. ಆದರೆ ಬೆಳಗಾಗುವುದರಲ್ಲಿ ಬೀದಿ ಹೆಣವಾಗಿದ್ದಾನೆ. ಸ್ಥಳೀಯರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ಮೃತ ಗುರುತು ಪತ್ತೆ ಮಾಡಿದ್ದಾರೆ. ಸತ್ಯನ ಕಿವಿಯಿಂದ ರಕ್ತ ಬಂದಿರುವುದು ಪತ್ತೆಯಾಗಿದೆ. ಮಗನ ಮೃತದೇಹ ಕಂಡು ಸತ್ಯ ತಾಯಿ ಮೂರ್ಚೆ ಹೋಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರೀತಿ ವಿಷ್ಯಕ್ಕೆ ಬಲಿ?

ಸತ್ಯ ಹುಡುಗಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ವಿಷಯ ತಿಳಿದ ಯುವತಿಯ ಮನೆಯವರು ಸತ್ಯನಾ ವಿರುದ್ಧ ಬಲವಂತವಾಗಿ ಯುವತಿ ಕಡೆಯಿಂದ ಪೊಲೀಸರಿಗೆ ದೂರು ಕೊಡಿಸಿದ್ದರು. ಈ ಸಂಬಂಧ ಸತ್ಯನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿಯೇ ಕೂರಿಸಿಕೊಂಡಿದ್ದರು. ಈ ಘಟನೆಯ ಬಳಿಕ ಸತ್ಯ ಸಾಕಷ್ಟು ನೊಂದಿದ್ದ. ಆದರೆ ಇತ್ತೀಚೆಗೆ ಮತ್ತೆ ಯುವತಿಯ ಜತೆ ಮಾತಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದು ಯುವತಿಯ ಕಡೆಯವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದು ಕೊಲೆಯೋ ಆಕಸ್ಮಿಕ ಸಾವೋ ಎಂಬುದನ್ನು ತಿಳಿಯಲು ಮುಂದಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಕೊಡಗಿನಲ್ಲಿ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯ ರುಂಡ ಕತ್ತರಿಸಿದ ಪ್ರೇಮಿ

ಸೋಮವಾರಪೇಟೆ: ತನ್ನ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯೊಬ್ಬಳನ್ನು ಎಳೆದೊಯ್ದು ರುಂಡ ಕತ್ತರಿಸಿದ (Murder Case) ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ. ಕೊಲೆ ಮಾಡಿದ ಪಾಗಲ್‌ ಪ್ರೇಮಿಯನ್ನು ವಿರೂಪಾಕ್ಷ ಎಂದು ಗುರುತಿಸಲಾಗಿದೆ. ಮೀನಾ ಕೊಲೆಯಾಗಿರುವ ಬಾಲಕಿ. ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ರದ್ದಾಗಿದ್ದರೆ ಸಂಜೆ ವೇಳೆ ಆಕೆಯ ಮನೆಗೆ ನುಗ್ಗಿದ ಆರೋಪಿ ವಿರೂಪಾಕ್ಷ ಆಕೆಯನ್ನು ಎಳೆದೊಯ್ದು ಕತ್ತು ಕೊಯ್ದು ದೇಹವನ್ನು ಬಿಸಾಡಿ ರುಂಡ ಕೊಂಡೊಯ್ದಿದ್ದಾನೆ. ಭೀಕರ ಘಟನೆಯು ಈ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ.

ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮದುವೆ ರದ್ದು ಮಾಡಲಾಗಿತ್ತು. ಆಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಇದೇ ವೇಳೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಆಕೆಯ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು. ಪೊಲೀಸರೇ ಮುಂದೆ ನಿಂತು ಮದುವೆಯನ್ನು ಕೊನೆಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಆಕೆಯನ್ನು ಎಳೆದೊಯ್ದು ಕೊಲೆ ಮಾಡಿದ್ದಾನೆ ಆರೋಪಿ ವಿರೂಪಾಕ್ಷ.

ಬಾಲಕಿಯನ್ನು ಆರೋಪಿ ವಿರೂಪಾಕ್ಷ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದ ಆತ ಅಲ್ಲಿಂದ ಎಳೆದೊಯ್ದಿದ್ದ. ಬಳಿಕ ಕತ್ತು ಕತ್ತರಿಸಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಎಸ್​ಎಸ್​ಎಲ್​ಸಿ ಪಾಸಾಗಿದ್ದ ಬಾಲಕಿ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರವಷ್ಟೇ ಫಲಿತಾಂಶ ಪ್ರಕಟಿಸಿತ್ತು. ಅಂತೆಯೇ ಸುರ್ಲಬ್ಬಿ ಸರ್ಕಾರಿ ಹೈಸ್ಕೂಲ್​ನ ಏಕೈಕ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೀನಾ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆಕೆ ತೇರ್ಗಡೆಗೊಂಡಿರುವ ಸಂಗತಿ ಶಾಲಾ ಅಧ್ಯಾಪಕರಿಗೆ ಸಂತಸ ತಂದಿದ್ದು. ಅಲ್ಲದೆ ಶಾಲೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿತ್ತು. ಆದರೆ ಸಂಜೆಯ ವೇಳೆಗೆ ಬಾಲಕಿ ಭಯಾನಕವಾಗಿ ಕೊಲೆಯಾಗಿದ್ದಳು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

NEET-UG: ನೀಟ್‌ ಪರೀಕ್ಷೆ ವೇಳೆ ವಂಚನೆ; 10 ಲಕ್ಷ ರೂ.ಗೆ ಬೇಡಿಕೆ ಇಟ್ಟ ಶಿಕ್ಷಕ ಸೇರಿ ಮೂವರ ವಿರುದ್ಧ ಬಿತ್ತು ಕೇಸು

NEET-UG: ನೀಟ್-ಯುಜಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಆರು ಅಭ್ಯರ್ಥಿಗಳಿಂದ ತಲಾ 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಅವರನ್ನು ತೇರ್ಗಡೆ ಮಾಡುವುದಾಗಿ ಭರವಸೆ ನೀಡಿದ್ದ ಆರೋಪದ ಮೇಲೆ ಶಾಲಾ ಶಿಕ್ಷಕ ಮತ್ತು ಇತರ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಮತ್ತು ಕೆಲವು ನೀಟ್-ಯುಜಿ ಆಕಾಂಕ್ಷಿಗಳ ನಡುವೆ ಒಪ್ಪಂದ ನಡೆದಿತ್ತು. ಅದರ ಪ್ರಕಾರ ಅಭ್ಯರ್ಥಿಗಳು ತಮಗೆ ಗೊತ್ತಿಲ್ಲದ ಪ್ರಶ್ನೆಗೆ ಉತ್ತರ ಬರೆಯದೆ ಹಾಗೆ ಖಾಲಿ ಬಿಡಬೇಕಿತ್ತು. ಪರೀಕ್ಷೆಯ ನಂತರ ಉತ್ತರ ಪತ್ರಿಕೆಯನ್ನು ಸಂಗ್ರಹಿಸಿ ಆ ಖಾಲಿ ಸ್ಥಳವನ್ನು ಭರ್ತಿ ಮಾಡುವುದಾಗಿ ಒಪ್ಪಂದ ನಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಭೌತಶಾಸ್ತ್ರ ಶಿಕ್ಷಕ ತುಷಾರ್ ಭಟ್ ಮತ್ತು ಪರಶುರಾಮ್ ರಾಯ್, ಆರಿಫ್ ವೋರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

VISTARANEWS.COM


on

NEET-UG
Koo

ಗಾಂಧಿನಗರ: ನೀಟ್-ಯುಜಿ (NEET-UG) ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಆರು ಅಭ್ಯರ್ಥಿಗಳಿಂದ ತಲಾ 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಅವರನ್ನು ತೇರ್ಗಡೆ ಮಾಡುವುದಾಗಿ ಭರವಸೆ ನೀಡಿದ್ದ ಆರೋಪದ ಮೇಲೆ ಶಾಲಾ ಶಿಕ್ಷಕ ಮತ್ತು ಇತರ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಭಾನುವಾರ (ಮೇ 5) ನೀಟ್-ಯುಜಿ ಪರೀಕ್ಷೆ ನಡೆಸಿತ್ತು. ಈ ವೇಳೆ ಗೋಧ್ರಾ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆದಿದೆ ಎಂಬ ಸುಳಿವು ಜಿಲ್ಲಾಧಿಕಾರಿಗೆ ದೊರೆತ ನಂತರ ತನಿಖೆ ನಡೆಸಲಾಗಿತ್ತು. ಈ ವೇಳೆ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳು

ಸದ್ಯ ಭೌತಶಾಸ್ತ್ರ ಶಿಕ್ಷಕ ತುಷಾರ್ ಭಟ್ ಮತ್ತು ಪರಶುರಾಮ್ ರಾಯ್, ಆರಿಫ್ ವೋರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತುಷಾರ್ ಭಟ್‌ ಕಾರಿನಲ್ಲಿ 7 ಲಕ್ಷ ರೂ. ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ. ಇದು ಅಭ್ಯರ್ಥಿಯೊಬ್ಬರನ್ನು ಮೆರಿಟ್ ಪಟ್ಟಿಗೆ ಸೇರಿಸಲು ಸಹಾಯ ಮಾಡುವಂತೆ ವೋರಾ ಮುಂಗಡವಾಗಿ ಪಾವತಿಸಿದ ಮೊತ್ತ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಹೇಗೆ?

ವಿಚಾರಣೆ ವೇಳೆ ವಂಚನೆಯ ಜಾಲದ ವಿವರ ಬೆಳಕಿಗೆ ಬಂದಿದೆ. ಆರೋಪಿಗಳು ಮತ್ತು ಕೆಲವು ನೀಟ್-ಯುಜಿ ಆಕಾಂಕ್ಷಿಗಳ ನಡುವೆ ಒಪ್ಪಂದ ನಡೆದಿತ್ತು. ಅದರ ಪ್ರಕಾರ ಅಭ್ಯರ್ಥಿಗಳು ತಮಗೆ ಗೊತ್ತಿಲ್ಲದ ಪ್ರಶ್ನೆಗೆ ಉತ್ತರ ಬರೆಯದೆ ಹಾಗೆ ಖಾಲಿ ಬಿಡಬೇಕಿತ್ತು. ಪರೀಕ್ಷೆಯ ನಂತರ ಉತ್ತರ ಪತ್ರಿಕೆಯನ್ನು ಸಂಗ್ರಹಿಸಿ ಆ ಖಾಲಿ ಸ್ಥಳವನ್ನು ಭರ್ತಿ ಮಾಡುವುದಾಗಿ ಒಪ್ಪಂದ ನಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಜಿಲ್ಲಾ ಶಿಕ್ಷಣ ಅಧಿಕಾರಿಯ ದೂರಿನ ಮೇರೆಗೆ ಗೋಧ್ರಾ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯ್ ಜಲರಾಮ್ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ತುಷಾರ್ ಭಟ್ ನೀಟ್‌ ಕೇಂದ್ರದ ಉಪ ಅಧೀಕ್ಷಕರಾಗಿ ನೇಮಕಗೊಂಡಿದ್ದರು. ತನಿಖೆ ವೇಳೆ ಅವರ ಮೊಬೈಲ್‌ನಲ್ಲಿ ಸಾಕ್ಷಿ ದೊರೆತಿದೆ. ಪರಶುರಾಮ್ ರಾಯ್ ವ್ಯಾಟ್‌ಆ್ಯಪ್‌ ಮೂಲಕ ಕಳುಹಿಸಿದ 16 ಅಭ್ಯರ್ಥಿಗಳ ಪಟ್ಟಿ ಕಂಡು ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಪಟ್ಟಿಯ ಬಗ್ಗೆ ಕೇಳಿದಾಗ ತುಷಾರ್‌ ಭಟ್‌, ಇವರು ತಮ್ಮ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಎಂದು ಹೇಳಿದ್ದಾರೆ. ಈ ಅಭ್ಯರ್ಥಿಗಳು ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಲು ತಲಾ 10 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಕಿರಿತ್ ಪಟೇಲ್ ತಿಳಿಸಿದ್ದಾರೆ.

ಸದ್ಯ ತುಷಾರ್‌ ಭಟ್‌ ಅವರ ಮೊಬೈಲ್‌ ಫೋನ್‌, ನಗದು ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಮೂವರು ಆರೋಪಿಗಳ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಲಾಗಿದೆ ಎಂದು ಗೋಧ್ರಾ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral News: ತಮ್ಮನ ಬದಲು ನೀಟ್‌ ಪರೀಕ್ಷೆ ಬರೆದ ಅಣ್ಣ; ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾಗಿದ್ದು ಹೇಗೆ?

Continue Reading

ಪ್ರಮುಖ ಸುದ್ದಿ

Prajwal Revanna Case: “ಟ್ರಾನ್ಸ್‌ಫರ್‌ಗಾಗಿ ಪೀಡಿಸಿ ತಿಂದ…” ಪ್ರಜ್ವಲ್‌ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಯಿಂದಲೂ ದೂರು!

Prajwal Revanna Case: ಮೊದಲಿಗೆ, ಈ ವಿಚಾರದಲ್ಲಿ ನಮ್ಮನ್ನ ಎಳೆಯಬೇಡಿ ಎಂದು ಮಹಿಳೆಯರು ಹೇಳಿದ್ದರು. ತಾವು ಮದುವೆಯಾಗಿ ಸಂಸಾರದೊಂದಿಗೆ ಇದ್ದು, ತಮ್ಮನ್ನು ಅನಗತ್ಯವಾಗಿ ಪ್ರಕರಣದಲ್ಲಿ ತನಿಖೆ, ವಿಚಾರಣೆಗಾಗಿ ಕರೆಯುವುದರಿಂದ ಕುಟುಂಬದ ಶಾಂತಿ, ಮನಶ್ಶಾಂತಿ ಕೆಡಲಿದೆ. ಸಾಮಾಜಿಕವಾಗಿಯೂ ಕೆಟ್ಟ ಪರಿಸ್ಥಿತಿ ಎದುರಿಸಲಿದ್ದೇವೆ ಎಂದು ಸಂತ್ರಸ್ತೆಯರು ಆತಂಕ ತೋಡಿಕೊಂಡಿದ್ದರು.

VISTARANEWS.COM


on

prajwal revanna case women
Koo

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna Case) ಅವರಿಂದ ಆಗಿದೆ ಎನ್ನಲಾದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಕೊನೆಗೂ ವಿಡಿಯೋದಲ್ಲಿ (obscene video) ಕೆಲವು ಮಹಿಳಾ ಸರ್ಕಾರಿ ಅಧಿಕಾರಿಗಳು ಮೌನ ಮುರಿದಿದ್ದು, ಎಸ್‌ಐಟಿಗೆ (SIT) ದೂರು ಕೊಡಲು ಮುಂದೆ ಬಂದಿದ್ದಾರೆ.

ಇಬ್ಬರು ಸರ್ಕಾರಿ ಇಲಾಖೆಗಳ ಮಹಿಳಾ ಅಧಿಕಾರಿಗಳಿಂದ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. “ಟ್ರಾನ್ಸ್‌ಫರ್ ಲೆಟರ್ ಕೊಡುವುದಾಗಿ ಕರೆಸಿಕೊಂಡು ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅದನ್ನು ವೀಡಿಯೊ ಮಾಡಿಟ್ಟುಕೊಂಡು ಪದೇ ಪದೆ ಕರೆಸಿ ಬಟ್ಟೆಬಿಚ್ಚುವಂತೆ ಒತ್ತಾಯ ಮಾಡಿದ್ದರು. ವೀಡಿಯೊ ಇಟ್ಟುಕೊಂಡು ವೀಡಿಯೊ ಕಾಲ್ ಮಾಡಿ ಬಟ್ಟೆ ಬಿಚ್ಚಿ ತೋರಿಸುವಂತೆ ಬೆದರಿಕೆ ಹಾಕುತ್ತಿದ್ದರು” ಎಂದು ಹೇಳಿಕೆ ನೀಡಿದ್ದಾರೆ.

ಇಬ್ಬರು ಸರ್ಕಾರಿ ಅಧಿಕಾರಿಗಳ ಹೇಳಿಕೆಯ ಮೇಲೆ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ಪ್ರತ್ಯೇಕ ಎಫ್ಐಆರ್‌ನಲ್ಲಿ ದಾಖಲಿಸಬೇಕೇ, ಅಥವಾ ಹಳೆಯ ಎಫ್ಐಆರ್‌ಗೆ ಸೇರಿಸಬೇಕೆ ಎಂದು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ.

ಮೊದಲಿಗೆ, ಈ ವಿಚಾರದಲ್ಲಿ ನಮ್ಮನ್ನ ಎಳೆಯಬೇಡಿ ಎಂದು ಮಹಿಳೆಯರು ಹೇಳಿದ್ದರು. ತಾವು ಮದುವೆಯಾಗಿ ಸಂಸಾರದೊಂದಿಗೆ ಇದ್ದು, ತಮ್ಮನ್ನು ಅನಗತ್ಯವಾಗಿ ಪ್ರಕರಣದಲ್ಲಿ ತನಿಖೆ, ವಿಚಾರಣೆಗಾಗಿ ಕರೆಯುವುದರಿಂದ ಕುಟುಂಬದ ಶಾಂತಿ, ಮನಶ್ಶಾಂತಿ ಕೆಡಲಿದೆ. ಸಾಮಾಜಿಕವಾಗಿಯೂ ಕೆಟ್ಟ ಪರಿಸ್ಥಿತಿ ಎದುರಿಸಲಿದ್ದೇವೆ ಎಂದು ಸಂತ್ರಸ್ತೆಯರು ಆತಂಕ ತೋಡಿಕೊಂಡಿದ್ದರು. ಕೆಲವರು ರಜೆ ಪಡೆದು ತನಿಖೆಯಿಂದ ದೂರ ಉಳಿದಿದ್ದರು.

ಎಸ್‌ಐಟಿ ಇವರ ಮನವೊಲಿಸಲು ಪ್ರಯತ್ನಿಸಿತ್ತು. ಇದೀಗ ಒತ್ತಡಕ್ಕೆ ಮಣಿದು ಎಸ್ಐಟಿ ಮುಂದೆ ಹೇಳಿಕೆ ಕೊಟ್ಟರೇ ಎಂಬ ಅನುಮಾನವೂ ಮೂಡಿದೆ.

ಪ್ರಜ್ವಲ್‌ ರೇವಣ್ಣ ಮೇಲೆ ಸುಳ್ಳು ಆರೋಪ ನೀಡಲು ಒತ್ತಡ: ಮಹಿಳೆ ದೂರು

ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna case) ವಿರುದ್ಧ ಸುಳ್ಳು ಕೇಸ್ (Fake case) ಹಾಕಲು ತನಗೆ ಒತ್ತಾಯಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (National Commission for Women) ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD revanna jailed) ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದುಕೊಂಡಿದೆ. ಸೂಕ್ತ ಭದ್ರತೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವಂತೆ ನನಗೆ ಒತ್ತಡ ಹಾಕಲಾಗುತ್ತಿದೆ. ಮೂವರು ಸಿವಿಲ್ ಡ್ರೆಸ್‌ನಲ್ಲಿ ಬಂದವರು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಮಹಿಳೆ ಪತ್ರ ಬರೆದಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ. ಹಾಸನ ಮೂಲದ ಮಹಿಳೆ ಪತ್ರ ಬರೆದಿದ್ದು, ಪತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ದೂರಿನ ಪ್ರತಿ ಹಾಗೂ ಸೂಕ್ತ ಭದ್ರತೆಗೆ ಮನವಿ ಮಾಡಲಾಗಿದೆ.

ಪ್ರಜ್ವಲ್ ಕೇಸ್‌ನಲ್ಲಿ ಮಹಿಳೆಗೆ ದೂರು ನೀಡುವಂತೆ ಒತ್ತಡ ಹಾಕಲಾಗ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಯೋಗದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇಂದು ಮತ್ತೆ ಪತ್ರ ಬರೆಯುತ್ತೇವೆ. ಆಯೋಗದ ಅಧಿಕಾರಿಗಳು ಪತ್ರ ಬರೆದ ಮಹಿಳೆಯನ್ನು ಭೇಟಿ ಮಾಡುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

ವಕೀಲ ದೇವರಾಜೇಗೌಡ ಮೇಲೂ ಲೈಂಗಿಕ ದೌರ್ಜನ್ಯ ದೂರು

ಪೆನ್ ಡ್ರೈವ್ ಪ್ರಕರಣದಲ್ಲಿ (Prajwal Revanna Case) ಹೋರಾಟ ನಡೆಸುತ್ತಿದ್ದ ವಕೀಲ ದೇವರಾಜೇಗೌಡ (Devaraje Gowda) ವಿರುದ್ದ ಎಫ್ಐಆರ್ ದಾಖಲಾಗಿದೆ. ಮಹಿಳೆಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಹತ್ತು ತಿಂಗಳ ಹಿಂದೆ ಪರಿಚಯವಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಸಂತ್ರಸ್ತ ಮಹಿಳೆ ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ವಾಟ್ಸ್​ಆ್ಯಪ್​ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪ ದೇವರಾಜ್ ವಿರುದ್ಧ ಕೇಳಿ ಬಂದಿದೆ. ಅದೇ ರೀತಿ ಬಳಿಕ ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವೂ ಕೇಳಿ ಬಂದಿದೆ.

ಮಹಿಳೆಗೆ ಫೋನ್ ಮಾಡಿ ತಾವು ಜೊತೆಯಲ್ಲಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ ಆರೋಪವೂ ದಾಖಲಾಗಿದೆ. ಅದೇ ರೀತಿ ಮಹಿಳೆಗೆ ವಿಡಿಯೋ ಕಾಲ್‌ ಮಾಡಿ‌ ಖಾಸಗಿ ಅಂಗಗಳನ್ನು ಪ್ರದರ್ಶನದ ಮಾಡಿರುವ ಆರೋಪವೂ ದಾಖಲಾಗಿದೆ.

ತಾನು ಹೇಳಿದ ಹಾಗೆ ಕೇಳಬೇಕು.ಇಲ್ಲದೇ ಹೋದರೆ ಪತಿಯ ಜೀವಕ್ಕೆ ಪಾಯ ತಂದೊಡ್ಡುವುದಾಗಿ ದೇವರಾಜೇಗೌಡ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ತನ್ನ ಬೆಂಬಲಿಗರನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ ಅರೋಪವೂ ಕೇಳಿ ಬಂದಿದೆ. ಹಲವಾರು ಆರೋಪಗಳ ಮೇಲೆ ದೂರು ದಾಖಲಾಗಿದೆ. ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Continue Reading
Advertisement
murder case kalaburagi
ಕಲಬುರಗಿ11 mins ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

gold rate today
ಚಿನ್ನದ ದರ24 mins ago

Gold Rate Today: ಅಕ್ಷಯ ತದಿಗೆಯಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಬಂಗಾರ ಕೊಳ್ಳಲು ಮುಗಿಬಿದ್ದ ಜನ; ದರಗಳು ಹೀಗಿವೆ

Yogi Adityanath
ದೇಶ25 mins ago

Yogi Adityanath: ʼಅಕ್ಬರ್‌ಪುರʼದ ಮೇಲೆ ಯೋಗಿ ಆದಿತ್ಯನಾಥ್ ಮಾಸ್ಟರ್‌ ಸ್ಟ್ರೋಕ್‌; ಹೆಸರು ಬದಲಾವಣೆಯ ಸೂಚನೆ

mani shankar iyer
ದೇಶ29 mins ago

Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

ICMR Dietary Guidelines
ಆರೋಗ್ಯ42 mins ago

ICMR Dietary Guidelines: ಬೊಜ್ಜು ತಡೆಯಲು ಏನು ಮಾಡಬೇಕು? ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಶೋಧನಾ ಸಂಸ್ಥೆ

Murder Case
ಬೆಂಗಳೂರು46 mins ago

Murder case : ಪ್ರೀತಿ ವಿಷ್ಯಕ್ಕೆ ಬೀದಿ ಹೆಣವಾದ! ಮಗನ ಡೆಡ್‌ಬಾಡಿ ನೋಡಿ ಮೂರ್ಛೆ ಹೋದ ತಾಯಿ

pm narendra modi basava jayanti 2024
ಪ್ರಮುಖ ಸುದ್ದಿ1 hour ago

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

Sharia law
ವಿದೇಶ1 hour ago

Sharia Law: “ಅಮೆರಿಕನ್ನರ ಮೇಲೂ ಷರಿಯಾ ಕಾನೂನು ಹೇರಲಾಗುತ್ತದೆ…”; ಸಂಚಲನ ಮೂಡಿಸಿದ ವೈರಲ್‌ ವಿಡಿಯೋ

Rain Effect In karnataka
ಮಳೆ2 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

NEET-UG
ದೇಶ2 hours ago

NEET-UG: ನೀಟ್‌ ಪರೀಕ್ಷೆ ವೇಳೆ ವಂಚನೆ; 10 ಲಕ್ಷ ರೂ.ಗೆ ಬೇಡಿಕೆ ಇಟ್ಟ ಶಿಕ್ಷಕ ಸೇರಿ ಮೂವರ ವಿರುದ್ಧ ಬಿತ್ತು ಕೇಸು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect In karnataka
ಮಳೆ2 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ8 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ15 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ16 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ17 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ23 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ24 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು1 day ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ1 day ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಟ್ರೆಂಡಿಂಗ್‌