Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್‌.ಎಸ್‌ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ Vistara News

ಉಡುಪಿ

Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್‌.ಎಸ್‌ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ

Dr HS Shetty : ಸಾಧಕ ಉದ್ಯಮಿ ಡಾ.ಎಚ್‌.ಎಸ್‌. ಶೆಟ್ಟಿ ಅವರಿಗೆ ಶುಕ್ರವಾರ ಹಾಲಾಡಿಯ ನಾಗರಿಕರು ಹುಟ್ಟೂರ ಸನ್ಮಾನ ಆಯೋಜಿಸಿದ್ದರು. ತಮ್ಮೂರಿನ ಹುಡುಗ ಇಷ್ಟು ಎತ್ತರಕ್ಕೇರಿದ್ದು, ಸಾಧನೆಯೊಂದಿಗೆ ಸೇವೆ ಮಾಡುತ್ತಿರುವುದು, ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಗಳಿಸಿದ್ದು ಅವರನ್ನು ಪುಳಕಿತಗೊಳಿಸಿದೆ.

VISTARANEWS.COM


on

Dr HS Shetty Felicitation
ಕುಂದಾಪುರದ ಹಾಲಾಡಿಯಲ್ಲಿ ನಡೆದ ಡಾ.ಎಚ್‌.ಎಸ್‌. ಶೆಟ್ಟಿ ಅವರ ಹುಟ್ಟೂರ ಸಂಭ್ರಮದ ದೃಶ್ಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿ, ವಿಭಿನ್ನ ಔದ್ಯಮಿಕ ಮತ್ತು ಸೇವಾ ಪರಿಕಲ್ಪನೆಗಳೊಂದಿಗೆ ಮುನ್ನಡೆಯುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಮೂಲದ ಡಾ.ಎಚ್‌.ಎಸ್‌. ಶೆಟ್ಟಿ (Dr HS Shetty) ಅವರಿಗೆ ಹುಟ್ಟೂರಿನ ಜನರೆಲ್ಲ ಸೇರಿ ಶುಕ್ರವಾರ (ಸೆ. 22) ಅತ್ಯಂತ ಗೌರವಾದರಗಳಿಂದ ಸನ್ಮಾನ ಮಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (Vishweshwarayya Technical University) ಡಾ. ಶೆಟ್ಟಿ ಅವರ ಸಾಧನೆಗಾಗಿ ಡಾಕ್ಟರ್‌ ಆಫ್‌ ಸೈನ್ಸ್‌ (Doctor of Science) ನೀಡಿ ಗೌರವಿಸಿದ್ದನ್ನು ಊರಿನ ಜನ ತಮ್ಮೂರಿನ ಕಿರೀಟಕ್ಕೆ ಮುಡಿದ ಗರಿ ಎಂಬಂತೆ ಸಂಭ್ರಮಿಸಿದರು.

ಶುಕ್ರವಾರ ಬೆಳಗ್ಗೆ ಹಾಲಾಡಿಯ ಶಾಲಿನಿ. ಜಿ. ಶಂಕರ್‌ ಕನ್ವೆನ್‌ಶನ್‌ ಸೆಂಟರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಗಣ್ಯರೂ ಅತ್ಯಂತ ಕಷ್ಟದ ಬಾಲ್ಯದಿಂದ, ಕಷ್ಟಪಟ್ಟು ವಿದ್ಯಾಭ್ಯಾಸ ಪಡೆದು, ಕಠಿಣ ಪರಿಶ್ರಮದೊಂದಿಗೆ ಅದ್ವಿತೀಯ ಸಾಧನೆ ಮಾಡುತ್ತಿರುವ ಡಾ. ಎಚ್‌.ಎಸ್‌ ಶೆಟ್ಟಿ ಅವರ ಆದರ್ಶ ಮತ್ತು ಆದರಣೀಯ ಬದುಕನ್ನು ಕೊಂಡಾಡಿದರು. ಅವರು ವೃತ್ತಿಪರ ಬದುಕಿನಲ್ಲಿ ಮಾಡಿದ ಸಾಧನೆಯ ಜತೆಗೆ ಅವರು ತಮ್ಮ ಊರು, ನಾಡಿಗಾಗಿ ಮಾಡುತ್ತಿರುವ ಸೇವೆ, ಬಡ ಮಕ್ಕಳ ಶಿಕ್ಷಣಕ್ಕೆ ಅವರು ಬೆಂಗಾವಲಾಗಿ ನಿಂತಿರುವ ಬಗೆಯನ್ನು ತೆರೆದಿಟ್ಟರು.

Dr. HS Shetty felicitation
ಹುಟ್ಟೂರ ಸನ್ಮಾನಕ್ಕಾಗಿ ಡಾಎಚ್‌ಎಸ್‌ಶೆಟ್ಟಿ ದಂಪತಿಯನ್ನು ಕರೆತರುತ್ತಿರುವ ಕ್ಷಣ

ಡಾ. ಎಚ್‌.ಎಸ್‌. ಶೆಟ್ಟಿ ಮತ್ತು ಡಾ. ಸುಮನಾ ಶೆಟ್ಟಿ ದಂಪತಿ ಹುಟ್ಟೂರಿನ ಜನರ ಪ್ರೀತಿ, ಗಣ್ಯರ ಅಭಿಮಾನದ ನುಡಿಗಳಿಂದ ಬದುಕಿನ ಸಾರ್ಥಕ್ಯದ ಅನುಭೂತಿಯನ್ನು ಅನುಭವಿಸಿದರು. ಸಾವಿರಾರು ಜನರು ಸೇರಿದ್ದ ಸಭಾಂಗಣದಲ್ಲಿ ಮಗನ ಸಾಧನೆಯ ಪುಟಗಳು ಒಂದೊಂದಾಗಿ ತೆರೆದುಕೊಂಡಾಗ ಕೇಳಿದ ಚಪ್ಪಾಳೆಗಳಿಗೆ ಕಿವಿಯಾದ ಡಾ. ಎಚ್‌.ಎಸ್‌ ಶೆಟ್ಟಿ ಅವರ ತಾಯಿ ನಿವೃತ್ತ ಶಿಕ್ಷಕಿ ಸರೋಜಿನಿ ಶೆಟ್ಟಿ ಅವರು ಧನ್ಯತೆಯ ಕ್ಷಣಗಳನ್ನು ಎದೆಯೊಳಗೆ ತುಂಬಿಕೊಂಡರು. ಶಿಕ್ಷಕರಾಗಿದ್ದ ತಂದೆ ಹೆಗ್ಗುಂಜೆ ರಾಜೀವ್‌ ಶೆಟ್ಟಿ ಅವರ ಹೆಸರಿನಲ್ಲಿ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ಡಾ. ಶೆಟ್ಟಿ ಅವರು ನಡೆಸುತ್ತಿರುವ ಸಾಮಾಜಿಕ ಕೈಂಕರ್ಯಗಳು ಅನ್ಯಾದೃಶ ಎಂದು ಜನರು ಕೊಂಡಾಡಿದ ಕ್ಷಣಗಳು ಸಭಾಂಗಣವನ್ನೇ ಭಾವುಕಗೊಳಿಸಿದವು.

Dr. HS Shetty felicitation
ಡಾಎಚ್ಎಸ್‌ ಶೆಟ್ಟಿ ಅವರಿಗೆ ಅಮ್ಮನ ಆಶೀರ್ವಾದ

ಎತ್ತರಕ್ಕೇರಿದರೂ ಬಡವರ ಸೇವೆಗೆ ನಿಂತ ಸಾಧಕನಿಗೆ ಸನ್ಮಾನ

ಡಾ ಎಚ್‌.ಎಸ್‌.ಶೆಟ್ಟಿ ಅವರು ಹೋಟೆಲ್‌ ಉದ್ಯಮಿಯಾಗಿ ಹೊಸ ಎತ್ತರಕ್ಕೆ ಏರಿದ ಬಳಿಕ ಉದ್ಯಮವನ್ನು ಹಲವು ದಿಕ್ಕುಗಳಲ್ಲಿ ವಿಸ್ತರಿಸಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ದೊಡ್ಡ ಪ್ರಮಾಣದ ವಿದ್ಯುತ್‌ ಉತ್ಪಾದನೆ, ವಿದೇಶಕ್ಕೆ ರಫ್ತು ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ. ಮೈಸೂರು ಮರ್ಕೆಂಟೈಲ್‌ ಕಂಪನಿ ಲಿಮಿಟೆಡ್‌ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್‌ ಎಕ್ಸ್‌ಪೋರ್ಟ್‌ ಅವಾರ್ಡ್‌ ಲಭಿಸಿದೆ. ಅದೆಲ್ಲವನ್ನೂ ಮೀರಿದ್ದು ಅವರ ಸಮಾಜ ಸೇವೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ಅವರು ಸಾವಿರಾರು ಮಕ್ಕಳಿಗೆ ಉಚಿತ ಸಮವಸ್ತ್ರ, ಶಾಲೆಗಳಿಗೆ ಕೊಡುಗೆ ನೀಡುವ ಮೂಲಕ ಕೆರೆಯ ನೀರನು ಕೆರೆಗೆ ಚೆಲ್ಲುವ ಕಾಯಕ ಮಾಡುತ್ತಿದ್ದಾರೆ. ವಿಸ್ತಾರ ನ್ಯೂಸ್‌ನ (Vistara News) ಕಾರ್ಯ ನಿರ್ವಾಹಕ ಚೇರ್ಮನ್ (Executive Chairman) ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಅವರ ವೈವಿಧ್ಯಮಯ ಆಸಕ್ತಿಯನ್ನು ಕಂಡು ನಿಬ್ಬೆರಗಾದ ಜನ ʻನಮ್ಮೂರ ಸಾಧಕʼನನ್ನು ಖುಷಿಯಿಂದ ಸನ್ಮಾನಿಸಿ ಸಂಭ್ರಮಿಸಿದರು.

Dr. HS Shetty felicitation

ಇದನ್ನೂ ಓದಿ: VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್‌ ಪ್ರದಾನ

ಸಾಧಕನ ಸನ್ಮಾನಕ್ಕೆ ನೆರೆದಿತ್ತು ಗಣ್ಯರ ದಂಡು

ಡಾ. ಎಚ್.ಎಸ್. ಶೆಟ್ಟಿ ಅವರ ಸನ್ಮಾನ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌, ಮಾಜಿ ಸಚಿವರಾದ ಕೆ. ಜಯಪ್ರಕಾಶ್‌ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್‌ ಕೋಣೆಮನೆ, ಉದ್ಯಮಿ ಎಂ. ದಿನೇಶ್‌ ಹೆಗ್ಡೆ, ಹಾಲಾಡಿಯ ಗ್ರಾ.ಪಂ ಅಧ್ಯಕ್ಷ ಅಶೋಕ ಶೆಟ್ಟಿ ಭಾಗವಹಿಸಿ ಸನ್ಮಾನಿಸಿ ಖುಷಿಪಟ್ಟರು.

Dr. HS Shetty felicitation

ದೇವರೇ ಇವರನ್ನು ಕಳುಹಿಸಿಕೊಟ್ಟಿದ್ದಾರೆ ಎಂದರು ಲಕ್ಷ್ಮೀ ಹೆಬ್ಬಾಳ್ಕರ್‌

ಸಮಾರಂಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಆ ದೇವರೇ ನಿಮಗೆ ಈ ರೀತಿಯಾಗಿ ಶಕ್ತಿ ತುಂಬಿ ಕಳುಹಿಸಿಕೊಟ್ಟಿದ್ದಾನೆ. ಯಾಕೆಂದರೆ, ಎಲ್ಲರಿಗೂ ಈ ರೀತಿಯ ಮನಸು, ಹೃದಯ ವೈಶಾಲ್ಯ ಬರುವುದಿಲ್ಲ ಎಂದು ಹೇಳಿದರು. ಎಚ್‌.ಎಸ್‌. ಶೆಟ್ಟಿ ಅವರು ಸಾಧನೆಯಲ್ಲೂ ಸಮಾಜ ಸೇವೆಯಲ್ಲೂ ನಮಗೆ ಆದರ್ಶಪ್ರಾಯರು ಎಂದು ಹೃದಯ ತುಂಬಿ ಮಾತನಾಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕಾರ್ಯಕ್ರಮ ಉದ್ಘಾಟಿಸಿದರು

ತಮ್ಮ ಜೀವನದ ಶಿಲ್ಪಿ ತಾವೇ ಆದ ಎಚ್‌.ಎಸ್‌.ಶೆಟ್ಟಿ: ಹರಿಪ್ರಕಾಶ್‌ ಕೋಣೆಮನೆ

ವಿವೇಕಾನಂದರು ಹೇಳಿದ ಒಂದು ಮಾತು ಎಚ್‌.ಎಸ್‌. ಶೆಟ್ಟಿ ಅವರಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ನಿನ್ನ ಜೀವನದ ಶಿಲ್ಪಿ ನೀನೇ ಎಂಬ ವಿವೇಕಾನಂದರ ಮಾತಿನಂತೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡ ಸಾಧಕ ಎಚ್.ಎಸ್‌. ಶೆಟ್ಟಿ ಅವರು ಎಂದವರು ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ.

ಡಾ.ಎಚ್‌.ಎಸ್‌ ಶೆಟ್ಟಿ ಅವರು ಎಲ್ಲೂ ವಿರಮಿಸುವವರಲ್ಲ. ಒಂದು ನಿರ್ದಿಷ್ಟ ಉದ್ಯಮಕ್ಕೆ ಅಂಟಿಕೊಳ್ಳುವವರಲ್ಲ. ಹೊಸತನ್ನು ಹುಡುಕುತ್ತಾ ಹೋಗುವುದು ಅವರ ಜಾಯಮಾನ. ಅದಕ್ಕಾಗಿಯೇ ಅವರು ಬೆಹರಿನ್‌ನಲ್ಲಿ ಇದ್ದ ಒಳ್ಳೆಯ ಉದ್ಯಮವನ್ನು, ಅಮೆರಿಕದ ಕಂಪನಿಯ ಉದ್ಯೋಗ ಆಫರನ್ನು ತಿರಸ್ಕರಿಸಿ ಭಾರತಕ್ಕೆ ಬಂದವರು ಎಂಬುದನ್ನು ನೆನಪಿಸಿದರು. ತಾವು ತಮ್ಮ ಊರಿನಲ್ಲೇ ಉದ್ಯಮ ಸ್ಥಾಪನೆ ಮಾಡಿ, ಊರಿನವರಿಗೆ ಕೆಲಸ ಕೊಡಬೇಕು, ತಮ್ಮ ಉದ್ಯಮದ ಲಾಭ, ತೆರಿಗೆ ಎಲ್ಲವೂ ತಮ್ಮ ದೇಶಕ್ಕೇ ಸೇರಬೇಕು ಎಂಬ ಕಾರಣಕ್ಕಾಗಿ ಅವರು ಭಾರತಕ್ಕೆ, ತಮ್ಮ ಊರಿಗೆ ಮರಳಿದ್ದಾರೆ ಎಂದು ಹೇಳಿದರು.

ಎಚ್‌.ಎಸ್‌. ಶೆಟ್ಟಿ ಅವರು ಈಗ ಶ್ರೀಮಂತರಾಗಿರಬಹುದು. ಆದರೆ, ತಮ್ಮ ಬಾಲ್ಯದ ನೋವನ್ನು ಅವರು ಮರೆತಿಲ್ಲ. ಈಗ ಅದೆಷ್ಟೋ ಬಡ ಮಕ್ಕಳಿಗೆ ಶಿಕ್ಷಣದ ಸವಲತ್ತುಗಳನ್ನು ಒದಗಿಸುವ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಸೇರಿದಂತೆ ಸವಲತ್ತು ಒದಗಿಸಿದ್ದಾರೆ. ಅದಕ್ಕೆ ಅವರು ವರ್ಷಂಪ್ರತಿ ಖರ್ಚು ಮಾಡುವ ಮೊತ್ತ ಏಳೆಂಟು ಕೋಟಿ ರೂ. ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಹುಟ್ಟೂರು, ನಾಡಿಗಾಗಿ ಹಲವು ಕೊಡುಗೆ ಘೋಷಿಸಿದ ಡಾ.ಎಚ್‌.ಎಸ್‌ ಶೆಟ್ಟಿ

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಚ್‌.ಎಸ್‌. ಶೆಟ್ಟಿ ಅವರು ತಮ್ಮ ಬದುಕಿನ ಸಿಂಹಾವಲೋಕನ ಮಾಡಿಕೊಂಡರು. ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟದ ಜೀವನ ಸವೆಸಿ ಪಂಚೆ ಸೀನನಾಗಿದ್ದು, ಹೊಟ್ಟೆಗೆ ಹಿಟ್ಟಿಲ್ಲದ ದಿನಗಳನ್ನು ನೆನಪಿಸಿಕೊಂಡರು. ತಮ್ಮ ಬದುಕಿಗೆ ದಾರಿದೀಪವಾಗಿದ್ದ ಹಾಲಾಡಿಯ ಹಿರಿಯ ವ್ಯಕ್ತಿ ವಿ.ಆರ್‌. ಪಟೇಲ್‌ ಹಿರಿಯಣ್ಣ ಶೆಟ್ಟರ ನಿಧನ, ನಂತರ ಒದಗಿದ ಅತಂತ್ರ ಸ್ಥಿತಿ, ಅಮ್ಮನ ಸೂಚನೆಯಂತೆ ಊರು ಬಿಡಬೇಕಾಗಿ ಬಂದದ್ದು, ಮುಂಬಯಿಯ ಧಾರಾವಿಯ ಉದ್ಯೋಗ, ಗಲ್ಫ್‌ನಲ್ಲಿ ಮಾಡಿದ ಉದ್ಯಮ, ಮರಳಿ ಭಾರತಕ್ಕೆ ಬಂದದ್ದು, ಬೇರೇನೋ ಮಾಡಬೇಕು ಎನ್ನುವ ತುಡಿತ ತಮ್ಮನ್ನು ಉದ್ಯಮಿಯಾಗಿ ರೂಪಿಸಿದ ಪ್ರೇರಣಾದಾಯಿ ಕಥೆ ಹೇಳಿದರು.

Dr HS Shetty

ತಪ್ಪು ಮಾಡದಿದ್ದರೆ ಯಾರಿಗೂ ಹೆದರಬೇಕಾಗಿಲ್ಲ ಎಂಬ ಹಿರಿಯಣ್ಣ ಶೆಟ್ಟರ ನುಡಿ, ಡಸ್ಟರ್‌ ಸಿಗದೆ ಇದ್ದಾಗ ರಾಷ್ಟ್ರ ಧ್ವಜದಲ್ಲೇ ಬೋರ್ಡ್‌ ಒರೆಸಲು ಹೊರಟ ಮೇಸ್ಟ್ರನ್ನು ತಡೆದು ನಿಲ್ಲಿಸಿದ ಸಾಯಿಬ್ರು ಮಾಸ್ಟ್ರ ದೇಶಪ್ರೇಮ, ಬೇರೆಯವರಿಗಾಗಿಯೇ ಬದುಕಿದ ಅಜ್ಜಿಯ ನಿಸ್ವಾರ್ಥ ಬದುಕಿನ ಒಂದೊಂದು ಕಥೆಗಳು ತಮ್ಮಲ್ಲಿ ಮೂಡಿಸಿದ ಭಾವಗಳೇ ಈವತ್ತಿನ ಈ ಸ್ಥಿತಿಗೆ ಕಾರಣ ಎಂದು ನೆನೆದರು.

ಸನ್ಮಾನ ಸ್ವೀಕರಿಸಿದ ಕ್ಷಣದಲ್ಲಿ ತಮ್ಮೂರು ಮತ್ತು ನಾಡಿಗೆ ಇನ್ನಷ್ಟು ಹೊಸ ಸೇವಾ ಯೋಜನೆಗಳನ್ನು ಡಾ. ಎಚ್‌ ಎಸ್‌ ಶೆಟ್ಟಿ ಅವರು ಪ್ರಕಟಿಸಿದರು. ಅವರು ಹೇಳಿದ್ದಿಷ್ಟು:

1. ಬ್ರಹ್ಮಾವರದಲ್ಲಿ ಅತಿ ವಿಶಿಷ್ಟವಾದ ಖಾಸಗಿ ಮತ್ತು ಸರ್ಕಾರಿ ಪಾಲುದಾರಿಕೆಯ ಸರ್ಕಾರಿ ಪಬ್ಲಿಕ್‌ ಸ್ಕೂಲ್‌ ನಿರ್ಮಾಣ ಮಾಡುತಿದ್ದೇವೆ. ಡಿಸೆಂಬರ್‌ನಲ್ಲಿ ಅದರ ಉದ್ಘಾಟನೆ ನಡೆಯಲಿದೆ.

2. ಹಾಲಾಡಿಯಲ್ಲಿರುವ ಸಣ್ಣ ಸಣ್ಣ ಶಾಲೆಗಳನ್ನು ಸೇರಿಸಿ ಒಂದು ದೊಡ್ಡ ಪಬ್ಲಿಕ್‌ ಸ್ಕೂಲ್‌ ಮಾಡುತ್ತೇನೆ. ನನ್ನೂರಿನ ಮಕ್ಕಳು ಚೆನ್ನಾಗಿ ಓದಬೇಕು ಎನ್ನುವುದು ನನ್ನಾಸೆ.

3. ಚೆನ್ನೈ ಐಐಟಿಯ ಪ್ರಾಧ್ಯಾಪಕರಿಂದ ಕರ್ನಾಟಕದ 150 ಶಾಲೆಗಳಿಗೆ ದೂರ ಶಿಕ್ಷಣ ಕೋಚಿಂಗ್‌ ಒದಗಿಸುವ ಮೆಗಾ ಪ್ರಾಜೆಕ್ಟ್‌ ಶುರುವಾಗಲಿದೆ. ಮೊದಲ ವರ್ಷ ಈ ಯೋಜನೆಗೆ ನಾಲ್ಕು ಕೋಟಿ ರೂ. ಬೇಕು. ಉಡುಪಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಈ ಕೋಚಿಂಗ್‌ ಇರುತ್ತದೆ. ಹಾಲಾಡಿ ಶಾಲೆಯನ್ನೂ ಆಯ್ಕೆ ಮಾಡಿದ್ದೇನೆ. ತಮ್ಮ ಮಾತೃಭಾಷೆಯಲ್ಲಿ ಓದಿದ ಮಕ್ಕಳೂ ದೊಡ್ಡ ಸಾಧನೆ ಮಾಡಬಲ್ಲರು ಎನ್ನುವುದನ್ನು ಇಸ್ರೋ ಸಾಧನೆಯ ಹಿಂದಿರುವ ವಿಜ್ಞಾನಿಗಳನ್ನು ನೋಡಿ ಅರಿತಿದ್ದೇನೆ. ಅಂಥಹುದೇ ಸಾಧಕರಾಗಲು ಅವರಿಗೆ ಮಾರ್ಗದರ್ಶನ ಮಾಡುವ ಆಸೆ ನನ್ನದು ಎಂದರು ಡಾ.ಎಚ್‌.ಎಸ್‌ ಶೆಟ್ಟಿ.

ಡಾ.ಎಚ್‌.ಎಸ್‌ ಶೆಟ್ಟಿ ಅವರ ಹುಟ್ಟೂರ ಸನ್ಮಾನ ಕಾರ್ಯಕ್ರಮ ಇಲ್ಲಿ ನೋಡಿ…

ಇದನ್ನೂ ಓದಿ: VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್‌ ಪ್ರದಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉಡುಪಿ

Karnataka weather: ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಇಲ್ಲಷ್ಟೇ ಮಳೆ ಸೂಚನೆ

Rain News: ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

VISTARANEWS.COM


on

By

Cloudy weather in Bengaluru for the entire day Rain Forecast
Koo

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ. ಜತೆಗೆ ಗುಡುಗು ಮಿಂಚಿನ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka weather Forecast) ನೀಡಿದೆ.

ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಇನ್ನೆರಡು ದಿನಗಳು ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಕನ್ನಡದಲ್ಲಿ ಒಣಹವೆ ಇರಲಿದೆ.

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮೈಸೂರಲ್ಲಿ ಮಳೆ ನಿರೀಕ್ಷೆ ಇದೆ.

ಇದನ್ನೂ ಓದಿ: Model Fashion Life: ಕಲಾತ್ಮಕ ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ

ಭಾಗಶಃ ಮೋಡ ಕವಿದ ವಾತಾವರಣ!

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯಂದು ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇಲ್ಲೆಲ್ಲ ಶುಷ್ಕ ವಾತಾವರಣ

ದಕ್ಷಿಣ ಒಳನಾಡಿ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಹಾಗೂ ರಾಮನಗರ, ತುಮಕೂರು, ವಿಜಯನಗರದಲ್ಲಿ ಒಣಹವೆ ಇರಲಿದೆ. ಇನ್ನು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆಯೇ ಇರಲಿದೆ.

ಶನಿವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ. ಮೂಲ್ಕಿ, ಪುತ್ತೂರು, ಮಂಗಳೂರು ವಿಮಾಣ ನಿಲ್ದಾಣದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಪಣಂಬೂರಲ್ಲಿ 2, ಮಣಿ, ಮಂಗಳೂರು, ಉಪ್ಪಿನಂಗಡಿ, ಶ್ರವಣಬೆಳಗೊಳದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕನಿಷ್ಠ ಉಷ್ಣಾಂಶ 13.9 ಡಿ.ಸೆ ವಿಜಯಪುರದಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಉಡುಪಿ

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Rain News : ದಕ್ಷಿಣ ಒಳನಾಡು ಹಾಗೂ ಮಲೆನಾಡು, ಕರಾವಳಿ ಭಾಗದಲ್ಲಿ ವರುಣ (Karnataka weather Forecast) ಸಕ್ರಿಯನಾಗಿದ್ದರೆ, ಉತ್ತರ ಒಳನಾಡಿನಲ್ಲಿ ಒಣಹವೆ (Dry weather) ಮುಂದುವರಿಯಲಿದೆ.

VISTARANEWS.COM


on

By

Rain News
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಕರಾವಳಿ ಮತ್ತು ದಕ್ಷಿಣ ಒಳನಾಡಿನ (Karnataka weather Forecast) ಕೆಲವು ಕಡೆಗಳಲ್ಲಿ ಮಳೆಯಾಗಲಿದ್ದು, (Rain News) ಉತ್ತರ ಒಳನಾಡಿನಲ್ಲಿ ಒಣಹವೆ (Dry weather) ಇರಲಿದೆ. ಬಹುತೇಕ ಜಿಲ್ಲೆಗಳಲ್ಲಿ ಉರಿ ಉರಿ ವಾತಾವರಣ ಇರಲಿದೆ.

ಮೈಸೂರಲ್ಲಿ ಭಾರಿ ಮಳೆ

ದಕ್ಷಿಣ ಒಳನಾಡಿನ ಮೈಸೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದರೆ, ಉಳಿದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಹಾವೇರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ನಿರೀಕ್ಷೆ ಇದೆ. ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸಲಿದೆ.

ಸಾಧಾರಣದೊಂದಿಗೆ ಹಗುರ ಮಳೆ ಸಾಧ್ಯತೆ

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾದರೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆ ಸುರಿಯಲಿದೆ.

ಮೋಡ ಕವಿದ ವಾತಾವರಣ

ಬೆಂಗಳೂರಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣವಿರಲಿದೆ. ಮಧ್ಯಾಹ್ನ ಬಿಸಿಲು ಇರಲಿದೆ. ಸಂಜೆ ಅಥವಾ ರಾತ್ರಿಯಂದು ಆಯ್ದ ಕಡೆಗಳಲ್ಲಿ ಮಳೆ ಇರಲಿದೆ. ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: KGF 3 Actor Yash | ಕೆಜಿಎಫ್​ನ ರಾಕಿ ಭಾಯ್​, ಪಾಂಡ್ಯ ಬ್ರದರ್ಸ್​ ಭೇಟಿ; ಕೆಜಿಎಫ್​ 3 ಟ್ರೆಂಡಿಂಗ್​

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 29 ಡಿ.ಸೆ -20 ಡಿ.ಸೆ
ಮಂಗಳೂರು: 34 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 29 ಡಿ.ಸೆ – 19 ಡಿ.ಸೆ
ಗದಗ: 31 ಡಿ.ಸೆ – 17 ಡಿ.ಸೆ
ಹೊನ್ನಾವರ: 35 ಡಿ.ಸೆ- 22 ಡಿ.ಸೆ
ಕಲಬುರಗಿ: 31 ಡಿ.ಸೆ – 19 ಡಿ.ಸೆ
ಬೆಳಗಾವಿ: 31 ಡಿ.ಸೆ – 16 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಉಡುಪಿ

Karnataka Weather : ನಾಳೆ ಬೆಂಗಳೂರು ಸೇರಿ ಹಲವೆಡೆ ಮಳೆ ಸಾಧ್ಯತೆ!

Rain News : ಡಿ.10ರಂದು ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ (Karnataka weather Forecast) ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ (Dry weather) ಮುಂದುವರಿಯಲಿದೆ.

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ (Karnataka weather Forecast) ಕೆಲವು ಕಡೆಗಳಲ್ಲಿ ಮಳೆಯಾಗುವ (Rain News) ಬಹಳಷ್ಟು ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ (Dry weather) ಇರಲಿದೆ.

ದಕ್ಷಿಣ ಒಳನಾಡಿನ ಮೈಸೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಹಾವೇರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಚದುರಿದಂತೆ ಹಗುರದಿಂದ ಮಳೆ ಇರಲಿದ್ದು, ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸಲಿದೆ.

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆ ಸುರಿಯಲಿದೆ.

ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಮಳೆಯಾಗುವ ಬಹಳಷ್ಟು ಸಾಧ್ಯತೆಗಳಿದ್ದು, ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಲಿದೆ. ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Cyber Crime: ಪಾರ್ಟ್‌ ಟೈಂ ಜಾಬ್‌ ಆಮಿಷ; ಲಿಂಕ್‌ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ!

ಕರಾವಳಿ- ಮಲೆನಾಡಲ್ಲಿ ಉತ್ತಮ ಮಳೆ

ರಾಜ್ಯದಲ್ಲಿ ಶುಕ್ರವಾರದಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಜಯಪುರ (ಚಿಕ್ಕಮಗಳೂರು ಜಿಲ್ಲೆ) 6, ಅಜ್ಜಂಪುರ (ಚಿಕ್ಕಮಗಳೂರು ಜಿಲ್ಲೆ), ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ) ತಲಾ 5 ಸೆಂ.ಮೀ ಮಳೆಯಾಗಿದೆ.

ಹೊಸದುರ್ಗ (ಚಿತ್ರದುರ್ಗ ಜಿಲ್ಲೆ), ಕಡೂರು (ಚಿಕ್ಕಮಗಳೂರು ಜಿಲ್ಲೆ) ತಲಾ 4 ಸೆಂ.ಮೀ ಹಾಗೂ ಕೊಟ್ಟಿಗೆಹಾರ, ಎನ್.ಆರ್.ಪುರ, ತರೀಕೆರೆ, ಯಗಟಿ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ), ಬೇಲೂರು (ಹಾಸನ ಜಿಲ್ಲೆ), ಮೂರ್ನಾಡು (ಕೊಡಗು ಜಿಲ್ಲೆ) ತಲಾ 3 ಸೆಂ.ಮೀ ಮಳೆಯಾಗಿದೆ. ಹುಂಚದಕಟ್ಟೆ (ಶಿವಮೊಗ್ಗ ಜಿಲ್ಲೆ) 2 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ (ದಕ್ಷಿಣ ಕನ್ನಡ ಜಿಲ್ಲೆ), ಭಾಗಮಂಡಲ (ಕೊಡಗು ಜಿಲ್ಲೆ), ವೈ.ಎನ್.ಹೊಸಕೋಟೆ, ಸಿರಾ (ಎರಡೂ ತುಮಕೂರು ಜಿಲ್ಲೆ), ಬಾಳೆಹೊನ್ನೂರು (ಚಿಕ್ಕಮಗಳೂರು ಜಿಲ್ಲೆ), ಸಕಲೇಶಪುರ (ಹಾಸನ ಜಿಲ್ಲೆ) ತಲಾ 1 ಸೆಂ. ಮೀ ಮಳೆಯಾಗಿದೆ. ಕಡಿಮೆ ಉಷ್ಣಾಂಶ 14.0 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಉಡುಪಿ

Mooru Muttugalu Nataka: ಮೂರು ಮುತ್ತುಗಳು ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ಇನ್ನಿಲ್ಲ

Mooru Muttugalu Nataka: ಮೂರು ಮುತ್ತುಗಳು ನಾಟಕ ಕಳೆದ 26 ವರ್ಷಗಳಿಂದ ಸುಮಾರು 1900 ಪ್ರದರ್ಶನ ಕಂಡಿದ್ದು, ಪ್ರತಿವರ್ಷ 50-60 ಪ್ರದರ್ಶನ ಕಾಣುತ್ತಿತ್ತು. ಅದರಲ್ಲಿಯೂ ಅಶೋಕ್ ಶಾನಭಾಗ್ ಅವರ ಕಾಮಿಡಿಯಂತೂ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿತ್ತು.

VISTARANEWS.COM


on

moorumuthu fame drama artist ashok shanbag passes away
Koo

ಬೆಂಗಳೂರು: ರೂಪಕಲಾ ನಾಟಕ ತಂಡದ ʻಮೂರು ಮುತ್ತುಗಳುʼ ನಾಟಕ (Mooru Muttugalu Nataka) ಖ್ಯಾತಿಯ ಅಶೋಕ್ ಶಾನಭಾಗ್ (ashok shanbhag) ವಿಧಿವಶರಾಗಿದ್ದಾರೆ. ಕೆಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಶೋಕ್ ಶಾನಭಾಗ್ ಅವರು, ಡಿ.8ರಂದು ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ಮುತ್ತು ನಾಟಕ ಮಾತ್ರವಲ್ಲದೇ ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಲ್ಲಿ ಅಶೋಕ್ ಶಾನಭಾಗ್ ನಟಿಸಿದ್ದರು.

ಮೂರು ಮುತ್ತುಗಳು ನಾಟಕ ಕಳೆದ 26 ವರ್ಷಗಳಿಂದ ಸುಮಾರು 1900 ಪ್ರದರ್ಶನ ಕಂಡಿದ್ದು, ಪ್ರತಿವರ್ಷ 50-60 ಪ್ರದರ್ಶನ ಕಾಣುತ್ತಿತ್ತು. ಅದರಲ್ಲಿಯೂ ಅಶೋಕ್ ಶಾನಭಾಗ್ ಅವರ ಕಾಮಿಡಿಯಂತೂ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿತ್ತು. ಸೃಜನ್‌ ಲೋಕೇಶ್‌ ನಡೆಸಿಕೊಡುತ್ತಿದ್ದ `ಮಜಾ ಟಾಕೀಸ್‌’ನಲ್ಲೂ ಅಶೋಕ್ ಶಾನಭಾಗ್ ಭಾಗವಹಿಸಿದ್ದರು. ಕುಂದಾಪುರದ `ಕಾಮಿಡಿ ಕಿಂಗ್‌’ ಎಂದೇ ಪ್ರಸಿದ್ಧಿ ಪಡೆದ ಅಶೋಕ್ ಶಾನಭಾಗ್ ಅವರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: Yash19 Title Reveal: ಯಶ್‌ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌! ವಿಡಿಯೊ ನೋಡಿ!

Mooru Muttugalu Nataka

ಅಶೋಕ್ ಶಾನಭಾಗ್ ಅವರ ಅಂತ್ಯಕ್ರಿಯೆ ಇಂದು(ಡಿಸೆಂಬರ್‌ 09) ಶನಿವಾರ ಕುಂದಾಪುರದಲ್ಲಿ ನಡೆಯಲಿ ಎಂದು ಮೂಲಗಳು ತಿಳಿಸಿವೆ. ಮೂರು ಮುತ್ತುಗಳು ನಾಟಕದಲ್ಲಿ ಕೆಲವು ಬದಲಾವಣೆಗಳನ್ನೂ ತಂದಿದ್ದರೂ ಸಹ, ಎಲ್ಲಿಯೂ ತನ್ನ ಬೇಡಿಕೆಯನ್ನು ಕಳೆದುಕೊಂಡಿರಲಿಲ್ಲ. ಇತ್ತೀಚೆಗೆ ಅಶೋಕ್‌ ಅವರು ಯುಟ್ಯೂಬ್‌ನಲ್ಲಿ ಹಲವು ವಿಡಿಯೊಗಳನ್ನು ಹಂಚಿಕೊಂಡಿದ್ದರು.

Continue Reading
Advertisement
Mysore people
ಕರ್ನಾಟಕ6 mins ago

Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

Winter Food Tips
ಆಹಾರ/ಅಡುಗೆ22 mins ago

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

ipl fans
ಕ್ರಿಕೆಟ್51 mins ago

IPL 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​; ಐಪಿಎಲ್​ ಆರಂಭಕ್ಕೆ ಡೇಟ್​ ಫಿಕ್ಸ್!​

Moral policing
ಕರ್ನಾಟಕ1 hour ago

Moral Policing: ಉಪ್ಪಿನಂಗಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ತಡೆದು ಧಮಕಿ!

Akash anand is BSP Leader mayawati's political heir
ದೇಶ1 hour ago

Akash Anand: ಯಾರಿವರು ಮಾಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್?

Cloudy weather in Bengaluru for the entire day Rain Forecast
ಉಡುಪಿ1 hour ago

Karnataka weather: ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಇಲ್ಲಷ್ಟೇ ಮಳೆ ಸೂಚನೆ

money guide
ಮನಿ-ಗೈಡ್1 hour ago

Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

rohit sharma jay shah
ಕ್ರಿಕೆಟ್2 hours ago

Rohit Sharma: ಜಯ್​ ಶಾ ಕೈಯಲ್ಲಿದೆ ರೋಹಿತ್​ ಟಿ20 ವಿಶ್ವಕಪ್ ಭವಿಷ್ಯ!

Model Fashion Life
ಫ್ಯಾಷನ್2 hours ago

Model Fashion Life: ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ ಚಳಿಗಾಲದ ಟಿಪ್ಸ್‌ ಹೀಗಿದೆ

Retired clerk jagadish sexually abuses girl
ಕರ್ನಾಟಕ2 hours ago

Physical Abuse : 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ನಿವೃತ್ತ ಕ್ಲರ್ಕ್!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ3 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ5 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ13 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌