Kantara Effect : ಕಣ್ಮರೆಯಾಗಿದ್ದಯುವಕ 8 ದಿನಗಳ ಬಳಿಕ ನಾಯಿ ಜತೆ ಪ್ರತ್ಯಕ್ಷ; ಅವನ ಹಿಂದೆ ಇದೆ ಕಾಂತಾರ ಪವಾಡ ಕಥೆ! Vistara News

ಉಡುಪಿ

Kantara Effect : ಕಣ್ಮರೆಯಾಗಿದ್ದಯುವಕ 8 ದಿನಗಳ ಬಳಿಕ ನಾಯಿ ಜತೆ ಪ್ರತ್ಯಕ್ಷ; ಅವನ ಹಿಂದೆ ಇದೆ ಕಾಂತಾರ ಪವಾಡ ಕಥೆ!

Kantara Effect : ಕುಂದಾಪುರ ತೊಂಬಟ್ಟಿನ ಒಬ್ಬ ಯುವಕ ದಿಢೀರ್‌ ನಾಪತ್ತೆಯಾಗುತ್ತಾನೆ. ಎಲ್ಲಿ ಹುಡುಕಿದರೂ ಇಲ್ಲ. ಎಂಟು ದಿನದ ಬಳಿಕ ಒಂದು ನಾಯಿ ಜತೆ ಆತ ಪ್ರತ್ಯಕ್ಷನಾಗುತ್ತಾನೆ. ಇದರ ಹಿಂದೆ ಕಾಂತಾರದಂಥಹುದೇ ಕಥೆ ಇದೆ.. ಏನಿದು ಅಚ್ಚರಿ?

VISTARANEWS.COM


on

Disappeared man reaapears, people connect to Kantara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಶ್ವತ್ಥ್‌ ಆಚಾರ್ಯ, ವಿಸ್ತಾರ ನ್ಯೂಸ್‌ ಉಡುಪಿ

ಕಾಂತಾರ (Kantara Movie) ಒಂದು ಸಿನಿಮಾ ಅಲ್ಲ, ಅದೊಂದು ಅನುಭವ ಎಂದು ಹಲವು ಹೇಳುತ್ತಾರೆ. ಹಲವರಿಗೆ ಇಂಥ ಅತೀಂದ್ರಿಯ ಅನುಭವ (Unnatural Experience) ಆಗಿರುವುದರಿಂದಲೇ ಅದು ನಮ್ಮೆಲ್ಲರ ಕಥೆ ಅನಿಸುವುದು. ಅಂಥಹುದೇ ಒಂದು ಅನುಭವ ಈಗ ಕುಂದಾಪುರ ತಾಲೂಕಿನ (Kundapura taluk) ಮಚ್ಚಟ್ಟು ಗ್ರಾಮದ ತೊಂಬಟ್ಟಿನ ಜನತೆಗೆ ಆಗಿದೆ. ಮನೆಯಿಂದ ದಿಢೀರ್‌ ಕಣ್ಮರೆಯಾಗಿದ್ದ ಒಬ್ಬ ಯುವಕ (Young man dissapears) ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆದರೆ, ದೈವದ ನುಡಿಯಲ್ಲಿ ಕೇಳಿದಾಗ ಅವನು ಇಲ್ಲೇ ಇದ್ದಾನೆ ಎನ್ನುತ್ತದೆ. ಎಂಟು ದಿನಗಳ ಬಳಿಕ ಆತ ದಿಢೀರ್‌ ಪ್ರತ್ಯಕ್ಷನಾಗುತ್ತಾನೆ (Young man Reappears). ಅವನನ್ನು ಕರೆದುಕೊಂಡು ಬರುವುದು ಒಂದು ನಾಯಿ! ಎಲ್ಲಿ ಹೋಗಿದ್ದೆ ಎನ್ನುವುದು ಅವನಿಗೇ ಗೊತ್ತಿಲ್ಲ! ಹಾಗಿದ್ದರೆ ಮರಳಿ ಬಂದಿದ್ದು ಹೇಗೆ? ದೈವವೇ ಕರೆದುಕೊಂಡುಬಂದಿದೆ ಎನ್ನುತ್ತಾರೆ (Kantara Effect) ತೊಂಬಟ್ಟಿನ ಜನ.

ಹಾಗಿದ್ದರೆ ನಿಜಕ್ಕೂ ಆಗಿದ್ದೇನು? ಇಲ್ಲದೆ ಕಂಪ್ಲೀಟ್‌ ರಿಪೋರ್ಟ್‌

ಆ ಯುವಕನ ಹೆಸರು ವಿವೇಕಾನಂದ. ಕುಂದಾಪುರ ತಾಲೂಕು ಅಮವಾಸೆ ಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ನಿವಾಸಿ ಶೀನ ನಾಯ್ಕರ ಮಗ. ವಯಸ್ಸು 28. ಕಳೆದ ಸೆಪ್ಟೆಂಬರ್‌ 16ರಂದು ವಿವೇಕಾನಂದ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಜತೆಗೆ ಮನೆಯ ನಾಯಿಯೂ ಕಣ್ಮರೆಯಾಗಿತ್ತು.

Kantara vivekananda missing
ಇವನೇ ನೋಡಿ ವಿವೇಕಾನಂದ

ಈ ಭಾಗದಲ್ಲಿ ಚಿರತೆಗಳ ಕಾಟ ವಿಪರೀತ. ಹೀಗಾಗಿ ಮೊದಲ ಸಂಶಯ ಬಂದಿದ್ದು ಚಿರತೆಗಳೇನಾದರೂ…! ಅಂತ. ಇಲ್ಲಿ ಯಾವುದೇ ದನ, ನಾಯಿ ಕಣ್ಮರೆಯಾದರೂ ಜನ ಗುಂಪಾಗಿ ಹುಡುಕಾಟ ಮಾಡುವುದು ರೂಢಿ. ಹೀಗಾಗಿ ವಿವೇಕಾನಂದ ನಾಪತ್ತೆಯಾದಾಗಲೂ ಹುಡುಕಾಟ ನಡೆಸಿದರು. ಅರಣ್ಯ ಇಲಾಖೆಗೂ ದೂರು ನೀಡಿದರು. ಅವರೂ ಬಂದು ಬಂದು ಹುಡುಕಾಟ ನಡೆಸಿದರು. ಅದು ದಟ್ಟವಾದ ಕಾಡಿನ ಪ್ರದೇಶ. ಹೀಗಾಗಿ ಎಷ್ಟು ದಿನ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಮೃತದೇಹವಾಗಲೀ, ಸಾವಿನ ಯಾವುದೇ ಕುರುಹುಗಳಾಗಲೀ ಸಿಗಲಿಲ್ಲ. ಹೀಗಾಗಿ ಜನ ಆತನನ್ನು ಚಿರತೆ ಹೊತ್ತುಕೊಂಡು ಹೋಗಿರಲಾರದು ಅಂದುಕೊಂಡರು.

ಶೀನ ನಾಯ್ಕ ಮತ್ತು ಮನೆಯವರು ಇದ್ದ ದೈವ ದೇವರಿಗೆಲ್ಲ ಹರಕೆ ಹೊತ್ತರು. ಕೊರಗಜ್ಜಾ ಹುಡುಕಿಕೊಡು ಎಂದರು. ಸಾಮಾನ್ಯವಾಗಿ ಈ ಭಾಗದಲ್ಲಿ ಮನುಷ್ಯರು, ಪ್ರಾಣಿಗಳು ನಾಪತ್ತೆಯಾದಾಗ ʻನಿಮಿತ್ತ ಕೇಳುವುದುʼ ರೂಢಿ. ಅಂದರೆ ದೈವದಲ್ಲಿ, ದೇವರಲ್ಲಿ, ಜೋಯಿಸರಲ್ಲಿ ಪ್ರಶ್ನೆ ಕೇಳುವುದು. ವೀಳ್ಯದೆಲೆ, ಕವಡೆ ಕಾಯಿಯ ಮೂಲಕ ಅವರು ಪ್ರಶ್ನೆ ಹೇಳುತ್ತಾರೆ.

ಹಾಗೆ ಶೀನ ನಾಯ್ಕರೂ ನಿಮಿತ್ತ ಕೇಳಿದರು. ಕೇಳಿಬಂದ ಸಂತಸದ ಸಂಗತಿ ಏನೆಂದರೆ: ವಿವೇಕಾನಂದ ಈಸ್‌ ಸೇಫ್!.‌ ಯಾವುದೋ ಒಂದು ನಿರ್ದಿಷ್ಟ ದಿಕ್ಕು ಹೇಳಿದರು. ಎಷ್ಟೋ ದೂರ ಅಂದರು. ಮರಳಿ ಬರುತ್ತಾನೆ ಅಂದರು. ಇದನ್ನು ಕೇಳಿದ ಕುಟುಂಬ ಮತ್ತು ಊರಿನವರು ಅಲ್ಲೆಲ್ಲ ಹುಡುಕಿದರು.

ಇದಾದ ಬಳಿಕ ಸಂಭವಿಸಿದ್ದೇ ಅಚ್ಚರಿ. ಸರಿಯಾಗಿ 8 ದಿನಗಳ ಬಳಿಕ ವಿವೇಕಾನಂದ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದ. ಆತನ ಮುಂದೆ ನಾಯಿ ದಾರಿ ತೋರಿಸುತ್ತಾ ಬರುತ್ತಿತ್ತು. ಹಾಗಂತ ವಿವೇಕಾನಂದ ಬಂದಿದ್ದು ತನ್ನ ಮನೆಗಲ್ಲ. ತೊಂಬಟ್ಟಿನಿಂದ ಸುಮಾರು ಏಳೆಂಟು ಕಿ.ಮೀ. ದೂರದ ಕಬ್ಬಿನಾಲೆಯ ಸಮೀಪದ ಮನೆಯೊಂದರ ಸಮೀಪ ಬಂದಿದ್ದಾನೆ. ವಿವೇಕಾನಂದ ಮತ್ತು ನಾಯಿ ಎರಡನ್ನೂ ಗಮನಿಸಿದ ಮನೆಯವರು ಶೀನ ನಾಯ್ಕರಿಗೆ ಸುದ್ದಿ ಮುಟ್ಟಿಸಿದರು. ಈಗ ವಿವೇಕಾನಂದನನ್ನು ಮನೆಗೆ ಕರೆತರಲಾಗಿದೆ. ಆಹಾರ ಸೇವಿಸದೆ ಬರಿ ನೀರಿನಲ್ಲೇ ಬದುಕಿದಂತಿರುವ ವಿವೇಕಾನಂದ ನಿತ್ರಾಣನಾಗಿದ್ದಾನೆ. ಆದರೆ, ಮರಳಿಬಂದನಲ್ಲ ಎಂದು ಜನರು ದೈವ ದೇವರ ಮಹಿಮೆಯನ್ನು ಕೊಂಡಾಡುತ್ತಿದ್ದಾರೆ. ಈಗ ವಿವೇಕಾನಂದ ನಾಯಿ, ಮನೆಯವರು ಎಲ್ಲರೂ ಖುಷಿಯಾಗಿದ್ದಾರೆ. ಎಂಬಲ್ಲಿಗೆ ಕಥೆ ಮುಗಿಯುವುದಿಲ್ಲ!

Kantara man missing story
ವಿವೇಕಾನಂದನನ್ನು ಕರೆ ತಂದ ನಾಯಿ

ನಿಜವಾದ ಕಥೆ ಶುರುವಾಗುವುದು ಇಲ್ಲಿಂದಲೇ!

ವಿವೇಕಾನಂದ ಎಂಬ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿರುವ ಯುವಕ ನಾಪತ್ತೆಯಾಗಿ ಎಷ್ಟು ದಿನ ಹುಡುಕಿದರೂ ಸಿಗದೆ ಕೊನೆಗೆ ಎಂಟು ದಿನಗಳ ಬಳಿಕ ಮನೆಗೆ ಬರುವ ಈ ಕಥೆಗೆ ಸಂಬಂಧಿಸಿ ಮತ್ತೊಂದು ಮಗ್ಗುಲೂ ಇದೆ. ನೀವು ಕಾಂತಾರಕ್ಕೂ ಈ ಘಟನೆಗೂ ಏನು ಸಂಬಂಧ ಎಂದು ಯೋಜಿಸುತ್ತಿದ್ದೀರಲ್ಲಾ.. ಅದುವೇ ಈ ಕಥೆ. ಈ ಘಟನೆಗೆ ಸಂಬಂಧಿಸಿ ನಡೆದಿದೆ ಎನ್ನಲಾದ ವಿದ್ಯಮಾನವನ್ನು ರವೀಶ್‌ ಎಂಬವರು ಬರೆದಿದ್ದಾರೆ. ಅವರು ಹೇಳುವ ಕುತೂಹಲಕಾರಿ ವಿಚಾರವನ್ನು ಅವರ ಬರವಣಿಗೆಯಲ್ಲೇ ಓದಿ. ಮುಂದಿನದು ರವೀಶ್‌ ಅವರು ಹೇಳಿದ ಕಥೆ.

ಕಾಂತಾರದಲ್ಲಿ ದೈವ ನರ್ತಕ ಮಾಯವಾಗುವ ಕಥೆಗೂ ಇದಕ್ಕೂ ಸಂಬಂಧ

ಕಾಂತಾರ ಸಿನಿಮಾಮಾದಲ್ಲಿ ದೈವ ನರ್ತಕರು ಕಾಡಿನಲ್ಲಿ ಮಾಯವಾಗುವ ದೃಶ್ಯವಿದೆ. ಅದು ನಿಜವಾ ? ಕಲ್ಪನೆಯಾ? ಎನ್ನುವ ಒಂದು ಚರ್ಚೆ ಹುಟ್ಟು ಹಾಕಿತ್ತು. ಅದು ನಿಜವಾ? ಸುಳ್ಳಾ ಗೊತ್ತಿಲ್ಲ. ಅಂತಹದ್ದೆ ಒಂದು ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟಿನಲ್ಲಿ ನಡೆದಿದೆ.

ಇಂದಿಗೆ ಸುಮಾರು ಹತ್ತು ದಿನ‌ ಮೊದಲು ಊರಿನ ಯುವಕನೊಬ್ಬ ತನ್ನ ಮನೆಯ ಎರಡು ನಾಯಿಗಳೊಂದಿಗೆ ಕಾಣೆಯಾಗುತ್ತಾನೆ. ಮನೆಯವರು ಹುಡುಕಲು ಆರಂಭಿಸುತ್ತಾರೆ ಎಲ್ಲಿ ಹುಡುಕಿದರೂ ಸುಳಿವು ಸಿಗುವುದಿಲ್ಲ. ಮನೆಯವರು,‌ ಊರವರು, ಪೊಲೀಸರು, ಸಿಕ್ಕ ಸಿಕ್ಕವರೆಲ್ಲ ದಟ್ಟ ಕಾಡಿನಲ್ಲಿ ಬಿಟ್ಟು ಬಿಡದೆ ಹುಡುಕುತ್ತಾರೆ ಒಂದೆರಡು ದಿನದಲ್ಲಿ‌ ಒಂದು ನಾಯಿ‌ ಮನೆಗೆ ವಾಪಸ್‌ ಬರುತ್ತದೆ. ಅಲ್ಲಿಗೆ ಊರವರು ಅನಾಹುತವನ್ನು ಗ್ರಹಿಸುತ್ತಾರೆ ಆದರೆ ಹುಡುಕುವುದು ನಿಲ್ಲುವುದಿಲ್ಲ.

ಸಿಗದೆ ಹೋದಾಗ ದೈವ, ದೇವರುಗಳ ಮೊರೆ ಹೋಗುತ್ತಾರೆ . ಕೊರಗಜ್ಜನ ಸನ್ನಿದಿಯಲ್ಲಿ ಕೇಳಿದಾಗ ಬದುಕಿದ್ದಾನೆ ಎಂಬ ಆಶ್ವಾಸನೆ ಸಿಗುತ್ತದೆ. ಅದಾಗಲೇ ಒಂದು ವಾರ ಕಳೆದುಹೋಗುತ್ತದೆ ಯುವಕನ ಸುಳಿವಿಲ್ಲ. ಮನೆಯವರು ಜ್ಯೋತಿಷಿಗಳ‌ ಮೊರೆ ಹೋಗುತ್ತಾರೆ. ಅದರಲ್ಲಿ ಒಂದು ಆಡಿಯೋ ಮಾತ್ರ ದಿಗ್ಬ್ರಮೆಗೊಳಿಸುತ್ತದೆ.

Kantara Movie

ಅದೊಂದು ಫೋನ್ ಕಾಲ್ ಸಂಭಾಷಣೆ. ಒಂದು ಕಡೆ ಒಬ್ಬ ಹೆಂಗಸು: ಮಾಂತ್ರಿಕರೊ, ತಾಂತ್ರಿಕರೊ ಇರಬಹುದು ಇನ್ನೊಂದು ಕಡೆ ಈ ಯುವಕನ ಸಂಬಂಧಿಕರು ಇದ್ದಂತಿದೆ.

ಆ ಮಹಿಳೆ ಹೇಳುತ್ತಾರೆ: “ಹುಡುಗ ಬದುಕಿದ್ದಾನೆ. ಅವರ ಮನೆಯ ಗದ್ದೆಯಲ್ಲಿ ಒಂದು ಕಲ್ಲಿದೆ. ನೋಡಲು ಅದೊಂದು ಸಾಧಾರಣ ಕಲ್ಲು. ಆ ಕಲ್ಲಿನಲ್ಲಿ ದೇವಿ ಇದ್ದಾಳೆ. ಆ ಕಲ್ಲಿನ ಮೇಲೆ ಈತ ಆವಾಗಾವಾಗ ಕೂರುತಿದ್ದ. ಈಗ ಆ ಕಲ್ಲನ್ನು ಗದ್ದೆಯ ಪಕ್ಕದಲ್ಲಿ ಎಸೆದಿದ್ದಾರೆ. ನನಗೆ ಸ್ಪಷ್ಟವಾಗಿ ಕಾಣುತ್ತಿದೆ ಆ ದೇವಿಯ ಕೈಯಲ್ಲಿ ಕತ್ತಿ ಇದೆ. ಅವಳೇ ಅವನನ್ನು ಅಡಗಿಸಿ ಇಟ್ಟಿದ್ದಾಳೆ. ಈಗ ಮನೆಯವರು ಆ ಕಲ್ಲನ್ನು ಹುಡುಕಬೇಕು, ಸಂಜೆ ಆರು ಘಂಟೆಯ ನಂತರ ಕಲ್ಲಿಗೆ ಪೂಜೆ ಮಾಡಿ ಒಂದು ರೂಪಾಯಿ ನಾಣ್ಯವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಎಕ್ಕದ ಮರಕ್ಕೆ‌ ಕಟ್ಟಿ ಪ್ರಾರ್ಥಿಸಿಕೊಳ್ಳಬೇಕು ಹುಡುಗ ಮನೆಗೆ ಬರುತ್ತಾನೆ ” ಎಂದು ಹೇಳುತ್ತಿರುವ ಆಡಿಯೋ ಅದು.

ದಿನ ಬೆಳಗಾದರೆ ಇಂತಹ ಅದೆಷ್ಟೊ ಜ್ಯೋತಿಷಿಗಳು ಹೊಟ್ಟೆ ಪಾಡಿಗೆ ಏನೇನೊ ಹೇಳುತ್ತಿರುತ್ತಾರೆ. ಎಂಟು ದಿನ ಊಟ ವಿಲ್ಲದೆ ಸುರಿವ ಮಳೆಯಲ್ಲಿ ಕ್ರೂರ ಪ್ರಾಣಿಗಳಿರುವ ಕಾಡಿನಲ್ಲಿ ಆ ಯುವಕ ಬದುಕವ ಸಾದ್ಯತೆ ತೀರಾ ಕಡಿಮೆ‌ ಅನಿಸದಿರದು.

Kantara Movie
Kantara Movie scene

ಆದರೆ, ಮನೆಯವರು ಆ ಕಲ್ಲನ್ನು ಹುಡುಕಿದರು. ಆ ಕಲ್ಲಿಗೆ ಪೂಜೆ ಮಾಡಿ ದೀಪವಿಟ್ಟು ಬೇಡಿಕೊಂಡರು. ಆ ರಾತ್ರಿ ಹಾಗೆ ಮುಗಿಯಿತು. ಮರುದಿನ ಆ ಯುವಕ ತನಗೇನೂ ಆಗಿಲ್ಲ ಎಂಬಂತೆ ತನ್ನ ಇನ್ನೊಂದು ನಾಯಿ ಜೊತೆ ನಡೆದುಕೊಂಡು ಬರುತ್ತಿರುವುದನ್ನು ಊರವರು ನೋಡಿ ಅವರ ಮನೆಯಲ್ಲಿರಿಸಿ ಊಟಕ್ಕೆ ಹಾಕಿ ಮನೆಯವರಿಗೆ ಸುದ್ದಿ ಮುಟ್ಟಿಸುತ್ತಾರೆ.

ಈಗ ಸುತ್ತಮುತ್ತ ಎಲ್ಲ ಕಡೆ ಇದೇ ಸುದ್ದಿ. ಆ ಕಲ್ಲು, ಈ ಮಾಂತ್ರಿಕ ಮಹಿಳೆ, ಅವರು ಹೇಳಿದ ದೇವಿ. ಊಟವಿಲ್ಲದ ಎಂಟು ದಿನ ಬದುಕಿದ ಯುವಕ ಅವನನ್ನು ಬಿಟ್ಟು ಬಾರದ ನಾಯಿ. ಅದೇ ಕಾಂತಾರದ ಕಾಡು. ಅಲ್ಲಿ ಮಾಯವಾದವರು ಮತ್ತೆ ಬರಲಿಲ್ಲ. ಇಲ್ಲಿ ಈ ಯುವಕ ಬಂದಿದ್ದಾನೆ.

Kantara  Movie and vivekananda missing

ಈ ವಿಜ್ಞಾನದ ಯುಗದಲ್ಲಿ ಹೀಗೂ ನಡೆಯುತ್ತದಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಹೌದು ಮತ್ತು ಇಲ್ಲ. ನಂಬಿದವರಿಗೆ ಹೌದು. ನಾನು ಇದೆ ಊರಿನಲ್ಲಿ ಹುಟ್ಟಿ ಬೆಳೆದಿರುವುದರಿಂದ ನಾನದನ್ನು ಬಲವಾಗಿ ನಂಬುತ್ತೇನೆ. ನಂಬದವರಿಗೆ ಒಂದು ಅವಕಾಶವಿದೆ ಇದು ಕಥೆಯಲ್ಲ ನಿಜ ಘಟನೆ ಈಗಷ್ಟೆ ನಡೆದಿದೆ ನೀವು ಇದರ ಹಿಂದೆ‌ ಬೀಳಬಹುದು.
-ಇದಿಷ್ಟು ರವೀಶ್‌ ಅವರು ಹೇಳುವ ಕಥೆ. ಈ ಜಗತ್ತಿನಲ್ಲಿ ಅತಿಮಾನುಷವಾದ ದೈವಿಕ ಶಕ್ತಿಯೊಂದಿದೆ. ಅದುವೇ ಜಗತ್ತನ್ನು ನಿಯಂತ್ರಿಸುತ್ತದೆ ಎನ್ನುವುದನ್ನು ಸಾರವಾಗಿ ಹೇಳುತ್ತದೆ ಕತೆ.

ಇದನ್ನೂ ಓದಿ ; Rishab Shetty : ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಕಾಂತಾರ 2! ಶೂಟಿಂಗ್‌ ಯಾವಾಗ?

ವಿವೇಕಾನಂದನ ಕರೆ ತಂದ ನಾಯಿಗಿದೆ ಸನ್ಮಾನ

ವಿವೇಕಾನಂದ ಬದುಕಿದ್ದಾನೆ ಎಂಬುದನ್ನು ಸಾರಿ ಸಾರಿ ಹೇಳಿದ್ದರು ಹೆಬ್ರಿ ಸಮೀಪದ ಗುಡಿಯೊಂದರ ಕೊರಗಜ್ಜ. ಹೀಗಾಗಿ ಮನೆಯವರೆಲ್ಲ ಸೋಮವಾರ ಸಂಜೆ ಆ ಗುಡಿಗೆ ಹೋಗಲಿದ್ದಾರೆ. ಇತ್ತ ವಿವೇಕಾನಂದನ ಪ್ರಾಣ ಉಳಿಸಿದ್ದು, ಮರಳಿ ಮನೆಗೆ ಕರೆತಂದಿದ್ದು ನಾಯಿ ಎಂಬುದು ನಂಬಿಕೆ. ಇಂಥ ವಿಶ್ವಾಸಾರ್ಹ ಪ್ರಾಣಿಯನ್ನು ಸನ್ಮಾನಿಸುವ ಕಾರ್ಯಕ್ರಮವೂ ಸೋಮವಾರ ಸಂಜೆ ನಡೆಯಲಿದೆ. ಅಂದ ಹಾಗೆ, ಈ ಎಲ್ಲ ವಿದ್ಯಮಾನಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿರುವವರು ಪೊಲೀಸರು. ವಿವೇಕಾನಂದ ಬದುಕಿದ್ದಾನೆ, ಮರಳಿ ಬಂದಿದ್ದಾನೆ ಎಂದು ಮನೆಯವರು ಹೇಳಿದಾಗ, ನಾವು ಅಷ್ಟು ಹುಡುಕಿದರೂ ಸಿಗದಿದ್ದವನು ಎಲ್ಲಿದ್ದ ಎಂಬ ಅಚ್ಚರಿಯೊಂದಿಗೆ, ಅವನನ್ನು ಒಮ್ಮೆ ಠಾಣೆಗೆ ಕರೆದುಕೊಂಡು ಬನ್ನಿ. ಅವನು ಬದುಕಿದ್ದಾನೆ ಎಂದು ರುಜುವಾತು ಮಾಡಿ ನಾಪತ್ತೆ ಕೇಸು ಕ್ಲೋಸ್‌ ಮಾಡಿಬಿಡುವ ಎಂದಿದ್ದಾರಂತೆ.

ಇದನ್ನೂ ಓದಿ: ಪತ್ನಿ, ಮಕ್ಕಳೊಂದಿಗೆ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ; ದೇವರ ದರ್ಶನ, ಖಾವಂದರ ಆಶೀರ್ವಾದ ಪಡೆದ ಕಾಂತಾರ ಹೀರೋ

ಇದಿಷ್ಟು ಕಾಂತಾರ ಕಥೆ. ಜನಜೀವನದಲ್ಲಿ ನಡೆಯುವ ಹಲವು ಅಚ್ಚರಿಗಳಲ್ಲಿ ಇದೂ ಒಂದು. ನೀವು ದೈವ ದೇವರುಗಳನ್ನು ನಂಬುವವರೇ ಆದರೆ ದೈವವೇ ಆ ಯುವಕನನ್ನು ಮರಳಿ ತಂದು ಮನೆ ಸೇರಿಸಿದೆ ಎಂದು ನಂಬಬಹುದು. ಇಲ್ಲಾ ಈಗೆಲ್ಲ ಅದು ಸಾಧ್ಯವಾ ಎನ್ನುವ ಯೋಚನೆ ನಿಮ್ಮದಾಗಿದ್ದರೆ ನಾಯಿಯೇ ಅವನನ್ನು ಕೈಹಿಡಿದಿದೆ ಎಂದೂ ಒಪ್ಪಬಹುದು. ಅಂತೂ ಅಚ್ಚರಿಯ ವಿದ್ಯಮಾನವೊಂದು ಇಲ್ಲಿ ನಡೆದಿರುವುದು ಮಾತ್ರ ನಿಜ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉಡುಪಿ

Billionaire Farmer : ಕುಂದಾಪುರದ ರಮೇಶ್‌ ನಾಯಕ್‌ ಬಿಲಿಯನೇರ್‌ ರೈತ; ಇವರ ತೋಟ ನೋಡಿದ್ರಾ?

Billionaire farmer: ಕುಂದಾಪುರದ ಪ್ರಗತಿಪರ ರೈತ, ಉದ್ಯಮಿಯೊಬ್ಬರು ಕೇಂದ್ರ ಸರ್ಕಾರದ ಬಿಲಿಯನೇರ್‌ ರೈತ ಪ್ರಶಸ್ತಿ ಪಡೆದಿದ್ದಾರೆ. ಹಾಗಿದ್ದರೆ ಅವರು ಮಾಡಿದ್ದೇನು? ಇಲ್ಲಿದೆ ಮಾಹಿತಿ.

VISTARANEWS.COM


on

Ramesh Nayak Billionaire farmer
Koo

ಉಡುಪಿ: ರೈತ ಅಂದ ಕೂಡಲೇ ಬಡವ, ಸಾಲ ಸುಳಿಗೆ ಸಿಲುಕಿದವರು ಎಂಬೆಲ್ಲಾ ಚಿತ್ರಣಗಳು ಮೂಡುವ ಕಾಲದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆಯ‌ ವ್ಯಕ್ತಿಯೊಬ್ಬರು ಬಿಲಿಯನೇರ್‌ ರೈತ (Billionaire Farmer) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರ ಕೊಡುವ ಈ ಪ್ರಶಸ್ತಿಯನ್ನು ಪಡೆದವರು ತೆಕ್ಕಟ್ಟೆಯ ರೈತ ಕಮ್‌ ಉದ್ಯಮಿ ರಮೇಶ್‌ ನಾಯಕ್‌ (Ramesh Nayak). ಡಿಸೆಂಬರ್‌ 7ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರೈಸ್‌ಮಿಲ್ ಉದ್ಯಮದ ಜತೆಗೆ ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನೆಲುಬಾಗಿ ನಿಂತ ಉದ್ಯಮಿ ರಮೇಶ್ ನಾಯಕ್ ಕೇಂದ್ರ ಸರಕಾರ ಕೊಡಮಾಡುವ ಬಿಲಿಯನೇರ್ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತೆಕ್ಕಟ್ಟೆಯ ರೈಸ್‌ಮಿಲ್ ಉದ್ಯಮಿ ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಸುಮಾರು 11 ಜಾತಿಯ, ಸುಮಾರು 1,634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ನಿಸರ್ಗ ಪ್ರೇಮ ಮೆರೆದು ಜಿಲ್ಲೆಯಲ್ಲಿ ಮಾದರಿಯಾಗಿದ್ದಾರೆ.

ವಾರ್ಷಿಕ ಸುಮಾರು ಕೋಟಿ ರೂ.ಗಳಿಗೂ ಅಧಿಕ ವಹಿವಾಟು ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹೊಸದಿಲ್ಲಿಯಲ್ಲಿ ಡಿ. 7ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Ramesh Nayak Billionaire farmer

ಯಾರಿವರು ರೈತ ರಮೇಶ್‌ ನಾಯಕ್‌?

ತೆಕ್ಕಟ್ಟೆ ರಮೇಶ್ ನಾಯಕ್, ಮೂಲತಃ ರೈಸ್ ಮಿಲ್ ಉದ್ಯಮಿ, ಇವರು ಹಣ್ಣುಗಳ ಬಗ್ಗೆ ಇರುವ ವಿಶೇಷ ಪ್ರೀತಿಯಿಂದ ವಿವಿಧ ಉಪ ಉಷ್ಣ ವಲಯದಲ್ಲಿ ಎಳೆಯುವ ವಿಶೇಷ ಹಣ್ಣುಗಳ ಬಗ್ಗೆ ಅಧ್ಯಯನ ಮಾಡಿ
ಕೆದೂರು ಗ್ರಾಮದಲ್ಲಿ ಸುಮಾರು 13 ಎಕ್ರೆ ಜಾಗದಲ್ಲಿ ಕಾಮಾಕ್ಷಿ ಫಾರ್ಮ್ಸ ಅನ್ನು 2019ರಲ್ಲಿ ಸ್ಥಾಪಿಸಿದರು. ರಂಬುಟನ್, 5 ವಿಧದ ಹಲಸು, ಮ್ಯಾಂಗೋಸ್ಟೀನ್, ದುರಿಯನ್, ಡ್ರಾಗನ್, ಪ್ಯಾಶನ್ ಹಣ್ಣು ಹೀಗೆ ವಿವಿಧ ಹಣ್ಣುಗಳನ್ನು ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸದೆ ಬೆಳೆಯುತ್ತಾರೆ.

ಹಣ್ಣುಗಳನ್ನು ಬೆಳೆಯುವುದು ಅಷ್ಟೇ ಅಲ್ಲದೆ ಹಣ್ಣುಗಳನ್ನು ಸ್ವಚ್ಛಗೊಳಿಸಿ ಕತ್ತರಿಸಿ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಿ ಕರಾವಳಿ ಕರ್ನಾಟಕದಲ್ಲಿ ಹಣ್ಣುಗಳ ವ್ಯಾಪಾರಕ್ಕೆ ಹೊಸ ಭಾಷ್ಯ ಬರೆದಿದ್ದು ರಮೇಶ್ ನಾಯಕ್ ಅವರ ಕಾಮಾಕ್ಷಿ ಫಾರ್ಮ್ಸ್.

Ramesh Nayak Billionaire farmer

ಹಲಸಿನ ಸೊಳೆ ಹೋಮ್‌ ಡೆಲಿವರಿ ಮಾಡ್ತಾರೆ!

ವಿವಿಧ ತಳಿಯ ಹಲಸಿನ ಹಣ್ಣನ್ನು ಬಾಕ್ಸ್ ಮಾಡಿ ತಳಿಗಳ ಬಗ್ಗೆ ಗ್ರಾಹಕರಿಗೆ ತಿಳಿಸಿ ಉತ್ತಮ ರುಚಿಯ ಶುಚಿಯಾದ ಹಲಸಿನ ಸೊಳೆಗಳ ಬಾಕ್ಸ್ ಅನ್ನು ಹೋಂ ಡೆಲಿವರಿ ಮೂಲಕ ಮನೆ ಮನೆಗೆ ತಲುಪಿಸಿ ಪ್ರಾರಂಭವಾದ ಹಣ್ಣುಗಳ ಬಾಕ್ಸ್ ಮಾರಾಟ ನಂತರದ ದಿನಗಳಲ್ಲಿ ಅನಾನಸ್, ಪಪಾಯ, ಡ್ರಾಗನ್ ಹೀಗೆ ತೋಟದಲ್ಲಿ ಬೆಳೆಯುವ ಎಲ್ಲ ಹಣ್ಣುಗಳಿಗೆ ಅಳವಡಿಸಿ ಅದರಲ್ಲಿ ಯಶ ಕಂಡಿದ್ದಾರೆ. ತೋಟದಿಂದ ಗ್ರಾಹಕರಿಗೆ ಎಂಬ ವಿಚಾರವನ್ನಿಟ್ಟು ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹರಿಗೆ ತಲುಪಿಸುವಲ್ಲಿ ಹೆಜ್ಜೆಯನ್ನು ಇಟ್ಟಿದ್ದಾರೆ.

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ವಿದೇಶದಿಂದ ಆಮದಾಗುವ ಹಣ್ಣುಗಳನ್ನು ರುಚಿ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಹಾನಿಕಾರಕ ರಾಸಾಯನಿಕಗಳನ್ನೂ ಬಳಸದೆ ಬೆಳೆದು ಮಾರುಕಟ್ಟೆ ಮಾಡುವಲ್ಲಿ ಕಾಮಾಕ್ಷಿ ಫಾರ್ಮ್ಸ್ ಯಶ ಕಂಡಿದೆ.

Continue Reading

ಉಡುಪಿ

Fraud Case : ವಂಚಕಿ ಚೈತ್ರಾಗೆ ಕೊನೆಗೂ ಸಿಕ್ತು ಜಾಮೀನು, ಇಂದು ಜೈಲಿಂದ ಬಿಡುಗಡೆ

Fraud Case : ಉದ್ಯಮಿ ಗೋವಿಂದ ಪೂಜಾರಿ ಅವರಿಗೆ 5 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಕುಂದಾಪುರದ ಚೈತ್ರಾ ಮತ್ತು ಶ್ರೀಕಾಂತ್‌ ಗೆ ಜಾಮೀನು ಸಿಕ್ಕಿದೆ.

VISTARANEWS.COM


on

Chaitra from Kundapura released
Koo

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Poojari) ಅವರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ (Fraud Case) ಜೈಲು ಸೇರಿದ್ದ ‌ ಉಗ್ರ ಹಿಂದುತ್ವದ ಭಾಷಣಕಾರ್ತಿ ಕುಂದಾಪುರದ ಚೈತ್ರಾಗೆ (Chaitra from Kundapura) ಕೋರ್ಟ್‌ ಜಾಮೀನು ಮಂಜೂರು (Bail from Court) ಮಾಡಿದೆ. ಆಕೆ ಮಂಗಳವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾಳೆ. ಆಕೆಯ ಜತೆ ಸಹ ಆರೋಪಿ ಶ್ರೀಕಾಂತ್‌ ಕೂಡಾ ಬಿಡುಗಡೆಯಾಗಲಿದ್ದಾನೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್‌ 12ರ ರಾತ್ರಿ ಚೈತ್ರಾಳನ್ನು ಉಡುಪಿಯಲ್ಲಿ ಬಂಧಿಸಲಾಗಿತ್ತು. ಅದೇ ಸಂದರ್ಭದಲ್ಲಿ ಆಕೆಯ ಸಹಚರ ಗಗನ್‌ ಕಡೂರ್‌, ಪ್ರಜ್ವಲ್‌, ಶ್ರೀಕಾಂತ್‌ ಕೂಡಾ ಸೆರೆಯಾಗಿದ್ದರು. ಮುಂದೆ ಕಡೂರಿನ ರಮೇಶ್‌ ಮತ್ತು ಧನರಾಜ್‌ ಹಾಗೂ ಚೆನ್ನಾ ನಾಯ್ಕ್‌ ಸೆರೆಸಿಕ್ಕಿದ್ದರು. ಅದಾದ ಕೆಲವೇ ದಿನದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಕಟಕ್‌ನಲ್ಲಿ ಬಂಧಿಸಲಾಗಿತ್ತು. ಹಾಲಶ್ರೀ ಸ್ವಾಮೀಜಿಗೆ ನವೆಂಬರ್‌ 11ರಂದು ಕೋರ್ಟ್‌ ಜಾಮೀನು ನೀಡಿತ್ತು. ಇದೀಗ ಪ್ರಕರಣದ ಮೊದಲ ಆರೋಪಿ ಚೈತ್ರಾ ಮತ್ತು ಏಳನೇ ಆರೋಪಿ ಶ್ರೀಕಾಂತ್‌ಗೆ 3ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಬಂಧನವಾದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಚೈತ್ರಾ ಎಂಟ್‌ ಟೀಮ್‌ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ಸಿಕ್ಕಿರಲಿಲ್ಲ. ಈ ನಡುವೆ, ಹಾಲಶ್ರೀಗೆ ಜಾಮೀನು ಸಿಕ್ಕಿರುವುದು ಚೈತ್ರಾ ಮತ್ತು ತಂಡಕ್ಕೆ ಅನುಕೂಲವಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್‌ ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಎರಡು ಲಕ್ಷ ಬಾಂಡ್ ನೀಡುವಂತೆ ಸೂಚಿಸಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿದೆ. ಆರೋಪಿಗಳಿಂದ ಈಗಾಗಲೇ ಅವರು ವಂಚನೆ ಮಾಡಿದ ಲಕ್ಷಾಂತರ ರೂ. ನಗದು, ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಚೈತ್ರಾ ವಂಚನೆ ಪ್ರಕರಣ?

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗೋವಿಂದ ಪೂಜಾರಿ ಅವರು ಸಮಾಜಸೇವಕರೂ ಆಗಿದ್ದು ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊತ್ತಿದ್ದರು. ಈ ಸಂಬಂಧ ಟಿಕೆಟ್‌ ಪಡೆಯಲು ಯಾರ ಮೂಲಕ ಪ್ರಯತ್ನಿಸಬಹುದು ಎಂಬ ಚರ್ಚೆ ನಡೆದಾಗ ಯಾರೋ ಭಾಷಣಕಾರ್ತಿ ಚೈತ್ರಾ ಹೆಸರು ಹೇಳಿದ್ದರು. ಆಕೆಯನ್ನು ಭೇಟಿ ಮಾಡಿದಾಗ ಆಕೆ ಖಂಡಿತವಾಗಿಯೂ ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದಳು. ಈ ನಡುವೆ, ಚೈತ್ರಾ ಗೋವಿಂದ ಬಾಬು ಪೂಜಾರಿಯವರನ್ನು ಹಾಲಶ್ರೀ ಸ್ವಾಮೀಜಿಗಳ ಬಳಿ ಕರೆದುಕೊಂಡು ಹೋಗಿದ್ದಳು. ಆಗ ಸ್ವಾಮೀಜಿ ಟಿಕೆಟ್‌ ಗಾಗಿ 1.5 ಕೋಟಿ ರೂ ಬೇಡಿಕೆ ಇಟ್ಟಿದ್ದರು. ಅದನ್ನು ಗೋವಿಂದ ಪೂಜಾರಿ ಕೆಲವೇ ಸಮಯದಲ್ಲಿ ಹಸ್ತಾಂತರ ಮಾಡಿದ್ದರು. ಈ ನಡುವೆ, ಎಲ್ಲಾ ದುಡ್ಡು ಸ್ವಾಮೀಜಿ ಪಾಲಾಗುತ್ತದೆ, ಇಷ್ಟು ಕಷ್ಟ ಪಟ್ಟ ತನಗೆ ಏನೂ ಸಿಗುವುದಿಲ್ಲ ಎಂದು ಯೋಚಿಸಿ ಗೋವಿಂದ ಪೂಜಾರಿಯಿಂದ ಹಣ ಕಸಿಯುವ ಪ್ಲ್ಯಾನ್‌ ಮಾಡಿದ್ದಳು. ಅದಕ್ಕೆ ಕಡೂರಿನ ಬಿಜೆಪಿ ನಾಯಕ ಗಗನ್‌ ನನ್ನು ಸೇರಿಸಿಕೊಂಡು ವ್ಯೂಹ ಹೆಣೆದಳು. ಆರೆಸ್ಸೆಸ್‌ನ ಹಿರಿಯ ನಾಯಕರು, ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಿಸುವ ನಾಟಕವಾಡಿ ನಾಟಕದ ವ್ಯಕ್ತಿಗಳನ್ನು ತೋರಿಸಿ ಹಣ ಪಡೆದುಕೊಂಡಳು. ಕೊನೆಗೆ ಟಿಕೆಟ್‌ ಸಿಗದೆ ಹೋದಾಗ ತನಿಖೆಗೆ ಶುರು ಮಾಡಿದ ಗೋವಿಂದ ಪೂಜಾರಿ ಅವರಿಗೆ ಜ್ಞಾನೋದಯವಾಗಿ ದೂರು ನೀಡಿದರು. ಸೆ. 12ರಂದು ಚೈತ್ರಾ ಎಂಡ್‌ ಟೀಮ್‌ ಬಂಧನವಾಗಿ ಜೈಲಿನಲ್ಲಿದೆ. ನವೆಂಬರ್‌ 12ರಂದು ಹಾಲಶ್ರೀ ಸ್ವಾಮೀಜಿ, ಡಿಸೆಂಬರ್‌ 11ರಂದು ಚೈತ್ರಾ ಮತ್ತು ಶ್ರೀಕಾಂತ್‌ಗೆ ಜಾಮೀನು ಸಿಕ್ಕಿದೆ.

Continue Reading

ಉಡುಪಿ

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Rain News : ಇನ್ನೆರಡು ದಿನಗಳು ಹಗುರ ಮಳೆಯೊಂದಿಗೆ ಥಂಡಿ ಗಾಳಿಯು ಬೀಸಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

women enjoying in rain
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ ಡಿ. 4-5ರಂದು ಮಳೆಯ ಸಿಂಚನವಾಗಲಿದ್ದು, ಪ್ರತಿ ಗಂಟೆಗೆ 30 ಕಿ.ಮೀ ವೇಗದಲ್ಲಿ ನೆಲಗಾಳಿಯು ಬೀಸಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚುಂಗ್ ಚಂಡಮಾರುತದ ಪರಿಣಾಮದಿಂದಾಗಿ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ (karnataka Weather Forecast) ಸಾಧ್ಯತೆ ಇದೆ.

ಮುಂದಿನ 24 ಗಂಟೆಗಳಲ್ಲಿ ಮಿಚುಂಗ್ ಸೈಕ್ಲೋನ್ ತೀವ್ರಗೊಳ್ಳುವ ನಿರೀಕ್ಷೆ ಇದ್ದು, ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಮಳೆಯಾಗಲಿದೆ.

ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ರಾಯಚೂರಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು, ಉಳಿದೆಡೆ ಒಣ ಹವೆ ಇರಲಿದೆ. ಕರಾವಳಿಯಲ್ಲಿ ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಇರಲಿದ್ದು, ಉತ್ತರ ಕನ್ನಡದಲ್ಲಿ ಶುಷ್ಕ ವಾತಾವರಣ ಇರಲಿದೆ.

ಇದನ್ನೂ ಓದಿ: Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

ಕನಿಷ್ಠ ತಾಪಮಾನ ಏರಿಕೆ

ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ಮುಂದಿನ 48 ಗಂಟೆಯಲ್ಲಿ ಕನಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಕೆಲವೆಡೆ ಚಳಿಯು ಮೈ ನಡುಗಿಸಲಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 27 ಡಿ.ಸೆ -18 ಡಿ.ಸೆ
ಮಂಗಳೂರು: 36 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 31 ಡಿ.ಸೆ – 18 ಡಿ.ಸೆ
ಗದಗ: 33 ಡಿ.ಸೆ – 18ಡಿ.ಸೆ
ಹೊನ್ನಾವರ: 36 ಡಿ.ಸೆ- 23 ಡಿ.ಸೆ
ಕಲಬುರಗಿ: 34 ಡಿ.ಸೆ – 20 ಡಿ.ಸೆ
ಬೆಳಗಾವಿ: 32 ಡಿ.ಸೆ – 18 ಡಿ.ಸೆ
ಕಾರವಾರ: 36 ಡಿ.ಸೆ – 23 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಉಡುಪಿ

Karnataka weather : ಸೈಕ್ಲೋನ್‌ ಎಫೆಕ್ಟ್‌; ನಾಳೆ ಮಳೆ ಜತೆಗೆ ಥಂಡಿ ಗಾಳಿ

Karnataka Weather Forecast : ಮಿಚುಂಗ್‌ ಸೈಕ್ಲೋನ್‌ ಎಫೆಕ್ಟ್‌ನಿಂದಾಗಿ ಮುಂದಿನ 24 ಗಂಟೆಯಲ್ಲಿ ಥಂಡಿ ಗಾಳಿ ಬೀಸಲಿದ್ದು, ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

Rain alert
Koo

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚುಂಗ್ ಚಂಡಮಾರುತದ ಪರಿಣಾಮದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣ (karnataka weather Forecast) ಇರಲಿದೆ. ಮುಂದಿನ 24 ಗಂಟೆಗಳಲ್ಲಿ ಮಿಚುಂಗ್ ಸೈಕ್ಲೋನ್ ತೀವ್ರಗೊಳ್ಳುವ ನಿರೀಕ್ಷೆ ಇದ್ದು ಮಳೆಯಾಗುವ (Rain News) ನಿರೀಕ್ಷೆ ಇದೆ.

ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಲ್ಲಿ ಹಗುರ ಮಳೆಯಾಗಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಚದುರಿದಂತೆ ಮಳೆಯಾಗಲಿದೆ.

ಮೇಲ್ಮೈ ಗಾಳಿಯೊಂದಿಗೆ ಮಳೆ ಸಾಥ್‌

ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಳೆ ನಡುವೆಯೂ ತಾಪಮಾನ ಎಚ್ಚರಿಕೆ

ಮುಂದಿನ 48 ಗಂಟೆಯಲ್ಲಿ ಕನಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಶನಿವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು. ಕಡಿಮೆ ಉಷ್ಣಾಂಶ 16.0 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading
Advertisement
Vistara Editorial, Leaf spot disease for areca nut
ಕರ್ನಾಟಕ16 mins ago

ವಿಸ್ತಾರ ಸಂಪಾದಕೀಯ: ಅಡಿಕೆ ಬೆಳೆಯ ಸಂಕಷ್ಟಗಳನ್ನು ನಿವಾರಿಸಿ

read your daily horoscope predictions for december 6 2023
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

Sphoorti Salu
ಸುವಚನ1 hour ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Elephant Arjuna
ಕರ್ನಾಟಕ7 hours ago

Elephant Arjuna: ಮೈಸೂರು, ಹಾಸನದಲ್ಲಿ ಅರ್ಜುನ ಆನೆಯ ಸ್ಮಾರಕ ನಿರ್ಮಾಣ: ಈಶ್ವರ ಖಂಡ್ರೆ

Kabaddi news
ಕ್ರೀಡೆ7 hours ago

Pro Kabaddi : ಮುಂಬಾ ವಿರುದ್ಧ ಜಯಂಟ್ಸ್​​ಗೆ 39-37 ಅಂಕಗಳ ಜಯ

Belagavi Winter Session
ಕರ್ನಾಟಕ7 hours ago

Belagavi Winter Session: ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು

our former mlas they did not get even 50 votes in Madhya Pradesh Says Congress
ದೇಶ7 hours ago

ಮಾಜಿ ಎಮ್ಮೆಲ್ಲೆಗಳಿಗೆ ಅವರ ಊರಲ್ಲೇ 50 ವೋಟು ಬಿದ್ದಿಲ್ಲ! ಕಾಂಗ್ರೆಸ್ ನಾಯಕ

Team India1
ಟಾಪ್ 10 ನ್ಯೂಸ್8 hours ago

VISTARA TOP 10 NEWS : ಸಿದ್ದು ಮುಸ್ಲಿಂ ಓಲೈಕೆ ಜಟಾಪಟಿ, ʼಅರ್ಜುನʼನಿಗೆ ಕಂಬನಿಯ ವಿದಾಯ ಇತ್ಯಾದಿ ಪ್ರಮುಖ ಸುದ್ದಿಗಳು

Vistara News Best Teacher Award -2023 programme inauguration by Yadgiri DC Sushila B. at Yadgiri
ಕರ್ನಾಟಕ8 hours ago

ಯಾದಗಿರಿಯಲ್ಲಿ ‘ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್’ ಕಾರ್ಯಕ್ರಮಕ್ಕೆ ಚಾಲನೆ

BJP knew the result two days earlier vote count Says Congress
ದೇಶ9 hours ago

ಬಿಜೆಪಿಗೆ ರಿಸಲ್ಟ್ ಎರಡು ದಿನ ಮೊದ್ಲೇ ಗೊತ್ತಿತ್ತು! ಕಾಂಗ್ರೆಸ್ ಹೊಸ ವರಾತ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

read your daily horoscope predictions for december 6 2023
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ9 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ10 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ10 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

ಟ್ರೆಂಡಿಂಗ್‌