Vistara News Launch | ವಿಸ್ತಾರ News ಚಾನೆಲ್‌ ಆಗದೆ Views ಚಾನೆಲ್‌ ಆಗಲಿ, ವಚನಾನಂದ ಶ್ರೀ ಆಶೀರ್ವಚನ - Vistara News

ಕರ್ನಾಟಕ

Vistara News Launch | ವಿಸ್ತಾರ News ಚಾನೆಲ್‌ ಆಗದೆ Views ಚಾನೆಲ್‌ ಆಗಲಿ, ವಚನಾನಂದ ಶ್ರೀ ಆಶೀರ್ವಚನ

ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದ ವಿಸ್ತಾರ ನ್ಯೂಸ್‌ (Vistara News Launch) ನಾಡಿನ ನಾಡಿಮಿಡಿತವಾಗಲಿ ಎಂದು ಶ್ರೀ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

VISTARANEWS.COM


on

Swamiji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಸ್ತಾರ ನ್ಯೂಸ್‌ ಚಾನೆಲ್‌ (Vistara News Launch) ಹತ್ತಾರು ಕಾರಣಗಳಿಂದಾಗಿ ವಿಭಿನ್ನವಾಗಿದೆ. ಇದೊಂದು ಕೇವಲ News ಚಾನೆಲ್‌ ಆಗದೆ Views ಚಾನೆಲ್‌ ಆಗಲಿ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಯಾವುದೇ ಮಾಧ್ಯಮವು ಕಾರ್ಯನಿರ್ವಹಿಸಲು ಆರಂಭಿಸಿದ ಪ್ರಾರಂಭಿಕ ವರ್ಷಗಳಲ್ಲಿ ಲಾಭ ಗಳಿಸಲು ಆಗುವುದಿಲ್ಲ. ಹಾಗಾಗಿ, ಮಾಧ್ಯಮಗಳು ಮೊದಲ ಎರಡು ವರ್ಷ ಲಾಭ ನಷ್ಟದ ಲೆಕ್ಕ ಹಾಕದೆ ಜನಪರವಾಗಿ ಕಾರ್ಯನಿರ್ವಹಿಸಲಿ. ಇದೇ ದಿಸೆಯಲ್ಲಿ ಸಾಗಿ ವಿಸ್ತಾರ ನ್ಯೂಸ್‌ ನಾಡಿಗೆ ದಾರಿದೀಪವಾಗಲಿ” ಎಂದು ಆಶಿಸಿದರು.

“ನನಗೆ ಹರಿಪ್ರಕಾಶ್‌ ಕೋಣೆಮನೆ ಅವರು 10-12 ವರ್ಷಗಳಿಂದ ಆತ್ಮೀಯರಾಗಿದ್ದಾರೆ. ಅವರ ವೃತ್ತಿ ಬದ್ಧತೆಯ ಪರಿಚಯ ನನಗಿದೆ. ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಒಂಬತ್ತು ಭಾಷೆಗಳಲ್ಲಿ ಲಭ್ಯವಿರುವುದೇ ಅದರ ವಿಭಿನ್ನತೆ ಹಾಗೂ ಸಂಪಾದಕರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ವಿಸ್ತಾರ ನಾಡಿನ ಜನರ ನಾಡಿಮಿಡಿತವಾಗಲಿ” ಎಂದರು.

ಇದನ್ನೂ ಓದಿ | Vistara News Launch | ಮಾಧ್ಯಮಗಳಿಗೆ ವಿಸ್ತಾರ ನ್ಯೂಸ್‌ ಮೇಲ್ಪಂಕ್ತಿ ಆಗಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

Physical Abuse : ಅಶ್ಲೀಲ ವಿಡಿಯೋ ತೋರಿ ಅದೇ ರೀತಿ ಸೆಕ್ಸ್‌ ಮಾಡುವಂತೆ 2ನೇ ಪತಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಠಾಣೆ ಮೆಟ್ಟಿಲೇರಿದ್ದಾರೆ. ಮನೆಗೆ ಕಾಲ್‌ ಗರ್ಲ್‌ನ ಕರೆಸಿಕೊಂಡು ನನ್ನ ಎದುರು ಅಸಭ್ಯವಾಗಿ ವರ್ತಿಸುತ್ತಾನೆ. ಇತ್ತ ಅತ್ತೆ-ಮಾವ ಜತೆಯಾಗಿ ಸೇರಿಕೊಂಡು ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM


on

By

Physical Abuse From husband
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ವಿಕೃತ ಮನಸ್ಥಿತಿಯ ಪತಿಯೊಬ್ಬ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸ್‌ ದೂರು ನೀಡಿದ್ದಾರೆ. ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಮಾದರಿಯಲ್ಲಿ ಸಂಭೋಗಕ್ಕೆ ಒತ್ತಾಯ ಮಾಡುತ್ತಿದ್ದಾನೆ. ಕಾಲ್‌ ಗರ್ಲ್ಸ್‌ಗಳನ್ನು ಮನೆಗೆ ಕರೆಸಿಕೊಂಡು, ತನ್ನ ಎದುರು ಅಸಭ್ಯವಾಗಿ ವರ್ತಿಸುತ್ತಾನೆ. ಇದರಿಂದ ಮಾನಸಿಕವಾಗಿ ಕಿರುಕುಳವಾಗುತ್ತಿದೆ ಎಂದು ನೊಂದ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸಂತ್ರಸ್ತೆ (28) ದೂರಿನನ್ವಯ ಪತಿ ವಿಘ್ನೇಶ್ವರನ್‌ (36), ಅತ್ತೆ ವಿಜಯಲಕ್ಷ್ಮೀ (60), ಮಾವ ಕಲೈ ಸೇಲ್ವನ್‌ (63), ನಾದಿನಿ ಪ್ರಿಯದರ್ಶಿನಿ (30) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಂತ್ರಸ್ತೆಗೆ ಈ ಹಿಂದೆಯೇ ಮದುವೆಯಾಗಿತ್ತು. ಆದರೆ, ಆ ಮದುವೆ ಇಷ್ಟವಾಗದೆ ಪತಿಯನ್ನು ತೊರೆದು ಹೈದರಾಬಾದ್‌ಗೆ ತೆರಳಿ ನೆಲೆಸಿದ್ದರು. ವೃತ್ತಿಯಲ್ಲಿ ಕಾಸ್ಮಟಾಲೋಜಿಸ್ಟ್‌ ಆಗಿದ್ದ ಮಹಿಳೆ ಕೆಲ ವರ್ಷಗಳ ಹಿಂದೆ ಚೆನ್ನೈ ಮೂಲದ ವಿಘ್ನೇಶ್ಚರನ್‌ ಪರಿಚಯವಾಗಿತ್ತು. ಗೆಳತನವು ಪ್ರೀತಿಗೆ ತಿರುಗಿ, ಮದುವೆ ಹಂತಕ್ಕೆ ತಲುಪಿತ್ತು.

ಇದನ್ನೂ ಓದಿ: Road Rage : ನಿಲ್ಲದ ರೋಡ್‌ ರೇಜ್; ನಿವೃತ್ತ ಬ್ರಿಗೇಡಿಯರ್ ಕಾರು ಅಡ್ಡಗಟ್ಟಿ ಬೆಲ್ಟ್‌ನಿಂದ ಹೊಡೆದು ಹಲ್ಲೆ

ಆಗ ವಿಘ್ನೇಶ್ವರನ್‌ ಮುಂದೆ ನಿಂತು ಸಂತ್ರಸ್ತೆಗೆ ಮೊದಲ ಪತಿಯಿಂದ ಡಿವೋರ್ಸ್‌ ಕೊಡಿಸಿದ್ದ. ಬಳಿಕ ಇಬ್ಬರ ಕುಟುಂಬಗಳ ಒಪ್ಪಿಗೆ ಪಡೆದು ಸಂತ್ರಸ್ತೆ ಹಾಗೂ ವಿಘ್ನೇಶ್ವರನ್ 2018ರಲ್ಲಿ ತಿರುಪತಿಯಲ್ಲಿ ಮದುವೆಯಾಗಿದ್ದಾರೆ. ಆರಂಭದಲ್ಲಿ ವಿಘ್ನೇಶ್ವರನ್‌ ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಆದರೆ ಬರಬರುತ್ತಾ ವಿಘ್ನೇಶ್ವರನ್‌ ನಡವಳಿಕೆ ವಿಕೃತಕ್ಕೆ ತಿರುಗಿತ್ತು. ಇತ್ತ ವಿಘ್ನೇಶ್ವರನ್‌ ಪೋಷಕರು ಆಗಾಗ ಮನೆಗೆ ಬಂದು ವಿನಾಕಾರಣ ಜಗಳ ತೆಗೆದು, ಚಾಡಿ ಹೇಳಿ ಹೋಗುತ್ತಿದ್ದರು. ಈ ನಡುವೆ ಸಂತ್ರಸ್ತೆಗೆ ಒಂದು ಗಂಡು ಮಗುವಾಗಿದ್ದು, ನಮ್ಮಿಬ್ಬರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮೊದಲ ಪತಿಯ ವಿಚಾರ ಪ್ರಸ್ತಾಪಿಸಿ ನಿಂದಿಸುವುದು, ಹೀಯಾಳಿಸುತ್ತಿದ್ದರು. ನಾದಿನಿ ಪ್ರಿಯಾದರ್ಶಿನಿ ನನ್ನ ಹಾಗೂ ಮಗುವಿಗೆ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪತಿ ವಿಘ್ನೇಶ್ವರನ್‌ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಆ ಮಾದರಿಯಲ್ಲಿ ಸೆಕ್ಸ್‌ ಮಾಡುವಂತೆ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿನಾಕಾರಣ ಜಗಳ ತೆಗೆದು ಹಲವು ಬಾರಿ ಹಲ್ಲೆ ಮಾಡಿದ್ದಾನೆ. 2023ರಲ್ಲಿ ಹೈದರಾಬಾದ್‌ನಿಂದ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆತಂದಿದ್ದಾನೆ. ಇಲ್ಲಿಯೂ ಆತ ಸರಿಯಾಗಿ ನೋಡಿಕೊಳ್ಳದೆ ಕಿರಕುಳ ಮುಂದುವರೆಸಿದ್ದಾನಂತೆ. ಮನೆಗೆ ಕಾಲ್‌ ಗರ್ಲ್‌ಗಳನ್ನು ಕರೆಸಿಕೊಂಡು ಸಂತ್ರಸ್ತೆಯ ಎದುರು ಅಸಭ್ಯವಾಗಿ ವರ್ತಿಸಿ ಮಾನಸಿಕ ಕಿರುಕುಳ ನೀಡಿದ್ದ. ಈ ಸಂಬಂಧ ಹಿಂದೆ ಪೊಲೀಸರಿಗೆ ದೂರು ನೀಡಿದ್ದಾಗ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದ.

ಇದೀಗ ಮತ್ತೆ ನನಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಅತ್ತೆ, ಮಾವ, ನಾದಿನಿಯೂ ಸಹ ಹಿಂಸೆ ನೀಡುತ್ತಿದ್ದಾರೆ. ಸಂತ್ರಸ್ತೆ ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Lok Sabha Election 2024: ಮೋದಿ ಟೀಂಗೆ ಡಾ.ಮಂಜುನಾಥ್ ಸೇರ್ಪಡೆ; ಬಿಜೆಪಿ ವಿಷನ್‌ ಬಿಚ್ಚಿಟ್ಟ ಅಶ್ವತ್ಥನಾರಾಯಣ್

Lok Sabha Election 2024: ಅಟಲ್ ಪಿಂಚಣಿ, ಆರೋಗ್ಯ ವಿಮೆ ಮೊದಲಾದವುಗಳನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಯುವಕರು ನಮ್ಮ ಆಶಾಕಿರಣ. ಅವರಿಗೆ ಹೆಚ್ಚಿನ ಒತ್ತು ಕೊಡಲು ತಂತ್ರಜ್ಞಾನ, ಕೌಶಲ್ಯಕ್ಕೆ ಒತ್ತು ಕೊಡಲಾಗುವುದು. ಮುದ್ರಾ ಯೋಜನೆಯಡಿ ಇನ್ನಷ್ಟು ಜನರಿಗೆ ಪ್ರಯೋಜನ ಸಿಗಲಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗುವುದು. ಈಗಾಗಲೇ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ ಎಂದು ವಿವರ ನೀಡಿದರು. ಮನೆಬಾಗಿಲಿಗೆ ಸರ್ಕಾರದ ಎಲ್ಲ ಸೇವೆಗಳು ದೊರಕಲಿವೆ ಎಂದು ಅಶ್ವತ್ಥನಾರಾಯಣ್ ಹೇಳಿದ್ದಾರೆ.

VISTARANEWS.COM


on

Lok Sabha Election 2024 Dr Manjunath joins PM Narendra Modi team Ashwathnarayan reveals BJP vision
Koo

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ (Bangalore Rural Constituency) ಡಾ. ಸಿ.ಎನ್. ಮಂಜುನಾಥ್ ಗೆದ್ದು ನರೇಂದ್ರ ಮೋದಿಯವರ (PM Narendra Modi) ತಂಡ ಸೇರಲಿದ್ದಾರೆ. ಈ ಭಾಗದಲ್ಲಿ ದೊಡ್ಡ ಸಂಚಲನ ಉಂಟಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ (Dr CN Ashwathnarayan) ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ನಿರತರಾಗಿರುವ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪುನಃ ಸರ್ಕಾರ ರಚನೆಯಾದಲ್ಲಿ ಯಾವೆಲ್ಲ ವಿಷನ್‌ ಅನ್ನು ಹಾಕಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ್, ಬಡವರು, ಮಹಿಳೆಯರು, ಯುವಜನತೆ, ರೈತರ ಪರವಾಗಿ 4 ಪ್ರಮುಖ ಶಕ್ತಿಗಳನ್ನು ವಿಂಗಡಣೆ ಮಾಡಿದ್ದಾರೆ. ರೈತರ ಪರವಾಗಿ ಕಿಸಾನ್ ಸಮ್ಮಾನ್ ಮುಂದುವರಿಸುವಿಕೆ ಜತೆಗೆ ಬೆಂಬಲ ಬೆಲೆ ಕಾಲಕಾಲಕ್ಕೆ ಕೊಡುವುದಲ್ಲದೆ, ಅದನ್ನು ಹೆಚ್ಚಿಸಲು ಮೋದಿಜೀ ಅವರು ಸಂಕಲ್ಪ ಮಾಡಿದ್ದಾರೆ ಎಂದು ವಿವರಿಸಿದರು.

ಉಪಗ್ರಹ ಬಳಸಿ ಬೆಳೆಗಳ ಮಾಹಿತಿ ಸಂಗ್ರಹಿಸಿ ನೀಡುವುದು, ಹವಾಮಾನದ ಮುನ್ಸೂಚನೆ ನೀಡಲಿದ್ದಾರೆ. ಕೃಷಿ ಮೂಲ ಸೌಕರ್ಯಕ್ಕೆ ಒತ್ತು ಕೊಡಲು ಸರ್ಕಾರ ಮುಂದಾಗಲಿದೆ. ವ್ಯವಸಾಯದಲ್ಲಿ ದೊಡ್ಡ ಕ್ರಾಂತಿ ಆಗಲಿದೆ ಎಂದು ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ಲಕ್ಷಪತಿಯಾಗಲಿದ್ದಾರೆ 3 ಕೋಟಿ ಮಹಿಳೆಯರು

ಮಹಿಳಾ ಸಬಲೀಕರಣ ಮಾಡಲು ಎಲ್ಲ ಸೌಕರ್ಯಗಳನ್ನು ನೀಡಲಾಗುವುದು. 3 ಕೋಟಿ ಮಹಿಳೆಯರನ್ನು ಲಕ್ಷಪತಿ ಮಾಡಲು‌ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. 4 ಕೋಟಿ ಮನೆಗಳ ನಿರ್ಮಾಣ ಆಗಲಿದೆ. ಶೌಚಾಲಯ, ನೀರು ಮತ್ತಿತರ ಮೂಲಭೂತ ಸೌಲಭ್ಯ ಕೊಡಲಾಗುವುದು ಎಂದು ಅಶ್ವತ್ಥನಾರಾಯಣ್ ತಿಳಿಸಿದರು.

ಸಮಾನ ನಾಗರಿಕ ಸಂಹಿತೆ ಜಾರಿ ಗ್ಯಾರಂಟಿ

ಸಮಾನ ನಾಗರಿಕ ಸಂಹಿತೆಯನ್ನು ಗ್ಯಾರಂಟಿಯಾಗಿ ಜಾರಿಗೊಳಿಸಲಾಗುವುದು. ಮಹಿಳಾ ಮೀಸಲಾತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಪಡಿತರ ವಿಸ್ತರಣೆ ಸೇರಿದಂತೆ ಬಡವರಿಗೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಂಕಲ್ಪ ಪತ್ರವು ಬದ್ಧತೆಯನ್ನು ತೋರಿದೆ ಎಂದು ಅಶ್ವತ್ಥನಾರಾಯಣ್ ಹೇಳಿದರು.

ಇದನ್ನೂ ಓದಿ: Lok Sabha Election 2024: ಡಾ. ಮಂಜುನಾಥ್‌ ಬೆಂಬಲಿಸಿದ ರೈತನ ಜಮೀನಿಗೆ ಬೆಂಕಿ; ಇದು ಕೈ ಕಾರ್ಯಕರ್ತರ ಕೃತ್ಯ ಎಂದ ಬಿಜೆಪಿ!

ಈಗಾಗಲೇ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ

ಅಟಲ್ ಪಿಂಚಣಿ, ಆರೋಗ್ಯ ವಿಮೆ ಮೊದಲಾದವುಗಳನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಯುವಕರು ನಮ್ಮ ಆಶಾಕಿರಣ. ಅವರಿಗೆ ಹೆಚ್ಚಿನ ಒತ್ತು ಕೊಡಲು ತಂತ್ರಜ್ಞಾನ, ಕೌಶಲ್ಯಕ್ಕೆ ಒತ್ತು ಕೊಡಲಾಗುವುದು. ಮುದ್ರಾ ಯೋಜನೆಯಡಿ ಇನ್ನಷ್ಟು ಜನರಿಗೆ ಪ್ರಯೋಜನ ಸಿಗಲಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗುವುದು. ಈಗಾಗಲೇ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ ಎಂದು ವಿವರ ನೀಡಿದರು. ಮನೆಬಾಗಿಲಿಗೆ ಸರ್ಕಾರದ ಎಲ್ಲ ಸೇವೆಗಳು ದೊರಕಲಿವೆ ಎಂದು ಅಶ್ವತ್ಥನಾರಾಯಣ್ ಹೇಳಿದರು.

Continue Reading

ಕರ್ನಾಟಕ

Lok Sabha Election 2024: ಹಾವೇರಿ, ಬಾಗಲಕೋಟೆ ಸೇರಿ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 87 ಲಕ್ಷ ರೂ. ಜಪ್ತಿ

Lok Sabha Election 2024: ಹಾವೇರಿ, ಬಾಗಲಕೋಟೆ ಹಾಗೂ ಅನೇಕಲ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 87.67 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Lok Sabha Election 2024:
ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಚೆಕ್ ಪೋಸ್ಟ್‌ನಲ್ಲಿ 75 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ.
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿವಿಧೆಡೆ ಮತದಾರರಿಗೆ ಹಂಚಲು ಹಣ, ಮದ್ಯ, ಉಡುಗೊರೆಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬರುತ್ತಿದೆ. ಈ ನಡುವೆ ಹಾವೇರಿ, ಬಾಗಲಕೋಟೆ ಹಾಗೂ ಅನೇಕಲ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 87.67 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೋಟೆಬೆನ್ನೂರಿನಲ್ಲಿ 75 ಲಕ್ಷ ರೂ. ವಾಹನ ಜಪ್ತಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 75 ಲಕ್ಷ ರೂ. ಹಾಗೂ ವಾಹನವನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಜಪ್ತಿ ಮಾಡಿದೆ. ಕಾರಿನಲ್ಲಿ ಸಮರ್ಪಕ ದಾಖಲೆಗಳಿಲ್ಲದೇ ಹಣ ಸಾಗಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ.

ಬಾದಾಮಿ ತಾಲೂಕಿನಲ್ಲಿ 6.87 ಲಕ್ಷ ರೂ. ವಶ

ಬಾಗಲಕೋಟೆ: ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ದಾಖಲೆ‌‌ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 6.87 ಲಕ್ಷ ರೂ.ಗಳನ್ನು ಬಾದಾಮಿ ತಾಲೂಕಿನ ಕುಳಗೇರಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿದೆ. ಆರ್.ಎಲ್.ನದಾಫ್ ನೇತೃತ್ವದ ಎಸ್.ಎಸ್.ಟಿ ತಂಡ ವಾಹನಗಳ ಪರಿಶೀಲನಾ ವೇಳೆ ಹಣ ವಶಕ್ಕೆ ಪಡೆದಿದೆ.

ನವಲಗುಂದದಿಂದ ಕೆರೂರಗೆ ಹೊರಟ ಕಾರಿನಲ್ಲಿ 2.83 ಲಕ್ಷ, ಗೂಡ್ಸ್ ವಾಹನದಲ್ಲಿ 1 ಲಕ್ಷ, ಹುಬ್ಬಳ್ಳಿಯಿಂದ ಕೆರೂರಿಗೆ ಹೊರಟ ವಾಹನದಲ್ಲಿ 2.40 ಲಕ್ಷ, ಶಿಗ್ಗಾಂವಿ ತಾಲೂಕಿನ ಪಾನಿಗಟ್ಟಿಯಿಂದ ಕೆರೂರಗೆ ಹೊರಟ ಬೊಲೆರೊದಲ್ಲಿ 1 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | Road Rage : ನಿಲ್ಲದ ರೋಡ್‌ ರೇಜ್; ನಿವೃತ್ತ ಬ್ರಿಗೇಡಿಯರ್ ಕಾರು ಅಡ್ಡಗಟ್ಟಿ ಬೆಲ್ಟ್‌ನಿಂದ ಹೊಡೆದು ಹಲ್ಲೆ

ಆನೇಕಲ್‌ನಲ್ಲಿ ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದ 5.28 ಲಕ್ಷ ವಶಕ್ಕೆ

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್‌ನಲ್ಲಿ ದಾಖಲೆ ಇಲ್ಲದೆ ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದ 5.28 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಂಪಲಘಟ್ಟ ರಮೇಶ್ ಎಂಬುವವರು, ಹೊಂಪಲಘಟ್ಟ ಕಡೆಯಿಂದ ಆನೇಕಲ್ ಮಾರ್ಗವಾಗಿ ಹಣ ತೆಗೆದುಕೊಂಡು ಬರುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಯನಗರದಲ್ಲಿ ಸೀಜ್‌ ಆದ ಕೋಟ್ಯಂತರ ಹಣ; ಇಬ್ಬರ ವಿರುದ್ಧ ಎಫ್‌ಐಆರ್‌

Lok Sabha Election 2024

ಬೆಂಗಳೂರು: ಚುನಾವಣಾ ಸಮಯದಲ್ಲಿ (Lok Sabha Election 2024) ಹಣದ ಹೊಳೆಯೇ (Lok Sabha Election 2024) ಹರಿಯುತ್ತದೆ. ಸದ್ಯ ಜಯನಗರ ಚೆಕ್‌ಪೋಸ್ಟ್‌ನಲ್ಲಿ ಕಾರೊಂದರಲ್ಲಿ ಸಿಕ್ಕಿದ ಕೋಟ್ಯಂತರ ರೂ. ಹಣದ ಬ್ಯಾಗ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಅಧಿಕಾರಿ ಎನ್‌ ಮಂಜುನಾಥ್‌ ಕೊಟ್ಟ ದೂರನ್ನು ಆಧರಿಸಿ ಏ.15ರಂದು ಸ್ಕೂಟರ್‌ ಹಾಗೂ ಕಾರು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಇಬ್ಬರಿಗೂ ನೋಟಿಸ್‌ ನೀಡಿದ್ದಾರೆ.

ವಶಕ್ಕೆ ಪಡೆದಿರುವ ಕೋಟ್ಯಂತರ ರೂ. ಹಣವನ್ನು ನಗರ ಚುನಾವಣಾಧಿಕಾರಿ ಮನೀಶ್ ಮೌದ್ಗಿಲ್ ಅವರು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ. ಕಾರಿನಲ್ಲಿ ಸಿಕ್ಕ ಹಣವನ್ನು ಎಣಿಕೆ ಮಾಡಿದಾಗ 1,34,99,000 ರೂ. ಹಣ ಪತ್ತೆಯಾಗಿದ್ದು, ಜತೆಗೆ ಬಿಬಿಎಂಪಿಗೆ ಸಂಬಂಧಿಸಿದ ಕೆಲ ದಾಖಲೆಗಳು ಸಿಕ್ಕಿವೆ. ಇವೆಲ್ಲವನ್ನೂ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕರಣದ ವರದಿಯನ್ನು ಕೊಟ್ಟಿದ್ದಾರೆ.

ಇನ್ನೂ ಕ್ಲಾಸ್ ಒನ್ ಗುತ್ತಿಗೆದಾರನಿಗೆ ಸೇರಿದ ಹಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣವು ಯಾವುದಾದರು ಪಕ್ಷಕ್ಕೆ ಸೇರಿದ್ದಾ? ವೈಯಕ್ತಿಕ ವ್ಯವಹಾರದ್ದ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸೀಜ್‌ ಮಾಡಿರುವ ಸ್ಕೂಟರ್‌ ಹಾಗೂ ಕಾರಿನ ಮಾಲೀಕರಾದ ಸೋಮಶೇಖರ್ ಮತ್ತು ಧನಂಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: Auto Fare : ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

ಆ ದಿನ ನಡೆದಿದ್ದು ಏನು? ದೂರಿನಲ್ಲಿ ಏನಿದೆ?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರು ಪ್ಲೈಯಿಂಗ್‌ ಸ್ಕ್ವಾಡ್‌ ತಂಡ 3ರ ಟೀಮ್‌ ಲೀಡರ್‌ ಆಗಿ ನೇಮಕಗೊಂಡಿರುವ ಮಂಜುನಾಥ್‌ ಪ್ರಕರಣ ಸಂಬಂಧ ದೂರು ನೀಡಿದ್ದಾರೆ. ಆ ದೂರಿನನ್ವಯ ಏ.13ರ ಬೆಳಗ್ಗೆ 11:50ರ ಸುಮಾರಿಗೆ ಜಯನಗರ 4ನೇ ಬ್ಲಾಕ್‌ ಸಮೀಪ ಅಪರಿಚಿತ ವ್ಯಕ್ತಿಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಹೆಚ್ಚಿನ ಪ್ರಮಾಣದ ನಗದನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ನೋಡಲ್‌ ಅಧಿಕಾರಿ ನಿಖಿತ ಚಿನ್ನಸ್ವಾಮಿ ಅವರು ತೆರಳಿದ್ದರು.

ಈ ವೇಳೆ ನೀಲಿ ಬಣ್ಣದ ಆಕ್ಸಸ್‌ ಗಾಡಿಯಲ್ಲಿ ವ್ಯಕ್ತಿಯೊಬ್ಬ ಬ್ಯಾಗ್‌ ಇಟ್ಟುಕೊಂಡಿದ್ದ. ನೋಡಲ್‌ ಅಧಿಕಾರಿ ನಿಖಿತ ಅವರು ಆತನ ಬಳಿ ಹೋಗಿ ವಿಚಾರಿಸಲು ಮುಂದಾಗುತ್ತಿದ್ದಂತೆ, ಸ್ಕೂಟರ್‌ ಹಾಗೂ ಹಣದ ಬ್ಯಾಗ್‌ ಬಿಟ್ಟು ಪರಾರಿ ಆಗಿದ್ದ. ಅದೇ ರಸ್ತೆಯಲ್ಲಿದ್ದ ಕೆಂಪು ಬಣ್ಣದ ವೋಕ್ಸ್‌ ವ್ಯಾಗನ್‌ ಕಾರು ಮತ್ತು ರಿಜಿಸ್ಟೇಷನ್‌ ನಂಬರ್‌ ಇಲ್ಲದ ಬಿಳಿ ಬಣ್ಣದ ಬೆಂಜ್‌ ಕಾರಿನಲ್ಲೂ ಗರಿ ಗರಿ ನೋಟು ಪತ್ತೆಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಮೊದಮೊದಲು ಬ್ಯಾಗ್‌ನಲ್ಲಿ ಏನಿದೆ ತೋರಿಸಿ ಎಂದಾಗ ಮಾವಿನ ಹಣ್ಣಿನ ಬ್ಯಾಗ್‌ ಎಂದಿದ್ದರು. ಯಾವಾಗ ನೋಡೆಲ್‌ ಅಧಿಕಾರಿ ನಿಖಿತ ಅವರು ಕಾರು ಪರಿಶೀಲನೆ ಮಾಡಲು ಹೋದಾಗ ಕಾರಲ್ಲಿದ್ದ ಐವರು ಕಾಲ್ಕಿತ್ತಿದ್ದರು. ಒಟ್ಟು 1,34,99,000 ಹಣ ಪತ್ತೆಯಾಗಿದೆ. ಜತೆಗೆ ವೋಕ್ಸ್‌ ವ್ಯಾಗನ್‌ ಕಾರಲ್ಲಿ ಬಿಬಿಎಂಪಿ ದಾಖಲಾತಿಗಳು ಹಾಗೂ ರಿಜಿಸ್ಟೇಷನ್‌ ನಂಬರ್‌ ಇಲ್ಲದ ಕಾರಲ್ಲಿ ಒಂದು ಮೊಬೈಲ್‌, ಒಂದು ಕಾರ್ಡ್‌ ಪೌಚ್‌ ದೊರೆತಿದೆ. ಇದೆಲ್ಲವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

Continue Reading

ಬೆಂಗಳೂರು

Road Rage : ನಿಲ್ಲದ ರೋಡ್‌ ರೇಜ್; ನಿವೃತ್ತ ಬ್ರಿಗೇಡಿಯರ್ ಕಾರು ಅಡ್ಡಗಟ್ಟಿ ಬೆಲ್ಟ್‌ನಿಂದ ಹೊಡೆದು ಹಲ್ಲೆ

Road Rage : ಬೆಂಗಳೂರಲ್ಲಿ ರೋಡ್ ರೇಜ್ ಪ್ರಕರಣಗಳು ಕಂಟ್ರೋಲ್‌ಗೆ ಸಿಗದಂತಾಗಿದೆ. ಇಲ್ಲಿಯವರೆಗೆ ಸಾರ್ವಜನಿಕರ ಮೇಲೆ ದರ್ಪ ತೋರಿಸುತ್ತಿದ್ದವರು, ಈಗ ಮಾಜಿ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ. ಸುಖಾಸುಮ್ಮನೆ ಹಲ್ಲೆ ಮಾಡಿ ಕಿರಿಕ್‌ ಮಾಡಿದ ಕಿಡಿಗೇಡಿಗಳ ಮೇಲೆ ಕೇಸ್‌ ದಾಖಲಾಗಿದ್ದು, ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.

VISTARANEWS.COM


on

By

Road Rage in Bengaluru
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೋಡ್ ರೇಜ್ (Road Rage) ಕೇಸ್‌ಗಳು ಹೆಚ್ಚಾಗುತ್ತಿವೆ. ಪೊಲೀಸರ ಯಾವ ವಾರ್ನಿಂಗ್‌ಗಳು ಕೂಡ ವರ್ಕೌಟ್‌ ಆಗುತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿ ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.

ಕಾರಿನಲ್ಲಿ ಹೋಗುತ್ತಿದ್ದ ರವಿ ಮುನಿಸ್ವಾಮಿಗೆ ಕಿಡಿಗೇಡಿಗಳು ಅಡ್ಡ ಹಾಕಿದ್ದಾರೆ. ಏನೆಂದು ಕೇಳಲು ರವಿ ಅವರು ಕಾರಿನ ಗ್ಲಾಸ್ ಇಳಿಸಿದ್ದಾರೆ. ಆಗ ಗಾಡಿ ಕೀ ಕಿತ್ತುಕೊಂಡು, ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿವೃತ್ತ ಯೋಧನನ್ನು ಕಾರಿನಿಂದ ಹೊರಗೆಳೆದಿದ್ದಾರೆ. ಅಷ್ಟೆ ಅಲ್ಲದೆ ಮೂವರು ಸುತ್ತುವರಿದು ಬೆಲ್ಟ್ ಹಾಗೂ ಕೈಗಳಿಂದ ಹಲ್ಲೆ ನಡೆಸಿದ್ದಾರೆ.

ರವಿ ಮುನಿಸ್ವಾಮಿಯವರೇ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದಂತೆ ಅವರು ಹಲ್ಲೆ ನಡೆಸುತ್ತಿದ್ದ ವೇಳೆ ತನಗೆ ವಯಸಾದ ಕಾರಣ ನಾನು ಅಸಹಾಯಕನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಘಟನೆ ವೇಳೆ ಎದೆ ಭಾಗ, ಕೈ ಬೆರಳಿಗೆ ಗಾಯವಾಗಿದೆ. ಅಷ್ಟೆ ಅಲ್ಲದೆ ಆರೋಪಿಗಳು ಹಲ್ಲೆ ನಡೆಸಿ ಮೊಬೈಲ್‌ ಅನ್ನು ಒಡೆದು ಹಾಕಿದ್ದಾರೆಂದು ಆರೋಪಿಸಿದ್ದಾರೆ.

ರವಿ ಮುನಿಸ್ವಾಮಿ ನಿವೃತ್ತ ಬ್ರಿಗೇಡಿಯರ್ ಹಾಗೂ ಕಳೆದ ಬಾರಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸದ್ಯ ಸದಾಶಿವನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Robbery case : ಎಎಸ್‌ಐ ಬೈಕ್‌ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌

ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

ಬೆಂಗಳೂರು: ಬೆಂಗಳೂರಲ್ಲಿ ಆಟೋ ಮೀಟರ್‌ಗೆ ಪ್ರಯಾಣಿಕರೊಬ್ಬರು (Auto Fare) ಬೆಚ್ಚಿ ಬಿದ್ದಿದ್ದಾರೆ. ಅಲಾಮ್ ಸುಲ್ತಾನ್ ಎಂಬಾತ ಮೆಜೆಸ್ಟಿಕ್‌ನಿಂದ ಆಟೋ ಹಿಡಿದು ಲಾಲ್ ಬಾಗ್‌ಗೆ ಬಂದು ಇಳಿದಿದ್ದರು. ಈ ವೇಳೆ ಆಟೋ ಮೀಟರ್‌ ಚಾರ್ಜ್‌ ಕಂಡು ಶಾಕ್‌ ಆಗಿದ್ದರು.

ಯಾಕಂದರೆ ಮೆಜೆಸ್ಟಿಕ್‌ನಿಂದ ಲಾಲ್‌ಬಾಗ್‌ 5 ರಿಂದ 6 ಕಿ.ಮೀ ಅಷ್ಟೇ ಅಂತರವಿದ್ದು, ಆಟೋ ಚಾರ್ಜ್‌ 400 ರೂಪಾಯಿ ತೋರಿಸಿತ್ತು. ಅಂದರೆ ಸೆಕೆಂಡ್‌ಗೆ 5 ರೂಪಾಯಿನಂತೆ ಮೀಟರ್ ಚಾರ್ಜ್‌ ಆಗಿತ್ತು. ಆಟೋ ಚಾಲಕನಿಗೆ ಅಲಾಮ್‌ ಇದನ್ನೂ ಪ್ರಶ್ನಿಸಿದ್ದಕ್ಕೆ 400 ರೂಪಾಯಿ ಆದರೂ ಡಬಲ್ ಮೀಟರ್ ಚಾರ್ಚ್ ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲಾಮ್ ಸುಲ್ತಾನ್ ಈ ಬಗ್ಗೆ ಫೋಟೊ ಸಮೇತ ಪೊಲೀಸರಿಗೆ ಪೋಸ್ಟ್ ಮಾಡಿ ದೂರು ನೀಡಿದ್ದಾರೆ. ಇನ್ನೂ ಹೆಚ್ಚುವರಿ ಹಣ ಕೊಡದ ಹಿನ್ನೆಲೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ: Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

ಟಿನ್‌ ಫ್ಯಾಕ್ಟರಿಯಿಂದ ಉಬರ್ ಆಟೋ ಹತ್ತಿದವನಿಗೆ 1 ಕೋಟಿ ರೂ. ಚಾರ್ಜ್‌

ಬೆಂಗಳೂರು: ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಆ ವ್ಯಕ್ತಿ ತುರ್ತು ಕೆಲಸಕ್ಕೆಂದು ಉಬರ್‌ ಆಟೋ (Uber Auto) ಬುಕ್‌ ಮಾಡಿದ್ದರು. ಟಿನ್‌ ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲಕ್ಕೆ ಇಳಿದ ಪ್ರಯಾಣಿಕ (Uber Auto Fare) ತಬ್ಬಿಬ್ಬಾಗಿದ್ದರು. ಯಾಕೆಂದರೆ ಟಿನ್‌ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಜಸ್ಟ್‌ 15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 500-1000 ರೂ. ಅಲ್ಲ ಬದಲಿಗೆ 1 ಕೋಟಿ ರೂ. (Uber Auto Fare) ತೋರಿಸಿತ್ತು.

ಆ್ಯಪ್ ಆಧಾರಿತ ಉಬರ್‌ ಆಟೋ ಬುಕ್‌ ಮಾಡಿ ಪ್ರಯಾಣಿಸಿದ ಆಂಧ್ರ ಪ್ರಯಾಣಿಕ ನಿಜಕ್ಕೂ ಕಕ್ಕಾಬಿಕ್ಕಿಯಾಗಿದ್ದರು. ಕೆಲಸ ನಿಮಿತ್ತ ಹೊರಹೋಗಲು ಉಬರ್ ಆಟೋ ಬುಕ್‌ ಮಾಡಿ ಟಿನ್‌ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲದಲ್ಲಿ ಬಂದು ಇಳಿದಿದ್ದರು. ಆಟೋ ಚಾರ್ಜ್‌ ಕೊಡೊಣಾ ಎಂದು ಪಾಕೆಟ್‌ನಿಂದ ಪರ್ಸ್‌ ತೆಗೆದು ಮೊಬೈಲ್‌ ನೋಡಿದಾಗ ಶಾಕ್‌ವೊಂದು ಕಾದಿತ್ತು.

Uber auto fare
ಪ್ರಯಾಣಿಕನಿಗೆ ಶಾಕ್‌

ಉಬರ್‌ ಆ್ಯಪ್‌ನಲ್ಲಿ ತೋರಿಸಿದ ಆಟೋ ಚಾರ್ಜ್‌ ನೋಡಿ, ಒಂದು ಕ್ಷಣ ತಲೆ ತಿರುಗುವಂತೆ ಮಾಡಿತ್ತು. ಯಾಕಂದರೆ ಟಿನ್‌ ಫ್ಯಾಕ್ಟರಿಯಿಂದ ಕೋರಮಂಗಲಗೆ 1,03,11,055 ರೂ. ಆಟೋ ಚಾರ್ಜ್ ತೋರಿತ್ತು. 207 ರೂ. ಆಗಿದ್ದ ಜಾಗದಲ್ಲಿ ಕೋಟಿ ರೂ. ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದ.

ಸದ್ಯ ಕೋಟಿ ರೂ. ಆಟೋ ಚಾರ್ಜ್‌ ತೋರಿಸುತ್ತಿದ್ದ ಉಬರ್ ಆ್ಯಪ್‌ನ ವಿಡಿಯೊ ಮಾಡಿ ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಂತಹ ಆ್ಯಪ್ ಆಧಾರಿತ ಆಟೋಗಳನ್ನು ಬಳಕೆ ಮಾಡದಂತೆ ಮನವಿ ಮಾಡಿದ್ದಾರೆ. ಕೂಡಲೇ ಇಂತಹ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಯಾಣಿಕರಿಂದ ಕಂಪೆನಿಗಳು ಹೇಗೆಲ್ಲ ಸುಲಿಗೆ ಮಾಡುತ್ತವೆ. 100-200ಪ್ರಯಾಣದ ಶುಲ್ಕಕ್ಕೆ 1 ಕೋಟಿ ರೂ. ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Ram Navami
ಧಾರ್ಮಿಕ18 mins ago

Ram Navami: ನಾಳೆ ದೇಶಾದ್ಯಂತ ರಾಮ ನವಮಿ ಸಂಭ್ರಮ; ಈ ದಿನದ ಮಹತ್ವವೇನು ಗೊತ್ತೇ ?

Indian stock market
ವಾಣಿಜ್ಯ22 mins ago

Indian stock market: ಸೆನ್ಸೆಕ್ಸ್ ಕುಸಿತ: ಭಾರತೀಯ ಷೇರು ಮಾರುಕಟ್ಟೆಗೆ ಭಾರಿ ಹೊಡೆತ

Air India
ದೇಶ27 mins ago

Air India: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಏರ್​ ಇಂಡಿಯಾ ವಿಮಾನಗಳ ಹಾರಾಟ; ಅಧಿಕಾರಿಗಳು ಹೇಳಿದ್ದೇನು?

Physical Abuse From husband
ಬೆಂಗಳೂರು27 mins ago

Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

Actor Dwarakish
ಸ್ಯಾಂಡಲ್ ವುಡ್31 mins ago

Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Lok Sabha Election 2024 Dr Manjunath joins PM Narendra Modi team Ashwathnarayan reveals BJP vision
Lok Sabha Election 202453 mins ago

Lok Sabha Election 2024: ಮೋದಿ ಟೀಂಗೆ ಡಾ.ಮಂಜುನಾಥ್ ಸೇರ್ಪಡೆ; ಬಿಜೆಪಿ ವಿಷನ್‌ ಬಿಚ್ಚಿಟ್ಟ ಅಶ್ವತ್ಥನಾರಾಯಣ್

Star Saree Fashion
ಫ್ಯಾಷನ್54 mins ago

Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ‌ ಹಸಿರು ಸೀರೆಯ ಸೀಕ್ರೆಟ್ ಇದು!

t20 World Cup
ಕ್ರೀಡೆ60 mins ago

T20 World Cup : ವಿಶ್ವ ಕಪ್​ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನೋ ಚಾನ್ಸ್​; ಆಯ್ಕೆದಾರರ ಇಂಗಿತ ಬಹಿರಂಗ

Donuru Ananya Reddy
ದೇಶ1 hour ago

UPSC Results 2023: ಕೋಚಿಂಗ್‌ ಇಲ್ಲದೆ ಓದಿದ ಅನನ್ಯಾ ರೆಡ್ಡಿಗೆ ಯುಪಿಎಸ್‌ಸಿಯಲ್ಲಿ 3ನೇ ರ‍್ಯಾಂಕ್!

Lok Sabha Election 2024:
ಕರ್ನಾಟಕ1 hour ago

Lok Sabha Election 2024: ಹಾವೇರಿ, ಬಾಗಲಕೋಟೆ ಸೇರಿ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 87 ಲಕ್ಷ ರೂ. ಜಪ್ತಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ13 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌