Vijayanagara News World famous Hampi selected for central government s ambitious project Swadesh Darshan 2.0 Assist in project implementation DC Vijayanagara News: ಸ್ವದೇಶ್ ದರ್ಶನ್ 2.0ಕ್ಕೆ ಹಂಪಿ ಆಯ್ಕೆ; ಯೋಜನಾ ಅನುಷ್ಠಾನಕ್ಕೆ ಸಹಕರಿಸಲು ಡಿಸಿ ಕರೆ - Vistara News

ಕರ್ನಾಟಕ

Vijayanagara News: ಸ್ವದೇಶ್ ದರ್ಶನ್ 2.0ಕ್ಕೆ ಹಂಪಿ ಆಯ್ಕೆ; ಯೋಜನಾ ಅನುಷ್ಠಾನಕ್ಕೆ ಸಹಕರಿಸಲು ಡಿಸಿ ಕರೆ

Vijayanagara News: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವದೇಶ್ ದರ್ಶನ್ 2.0ಕ್ಕೆ ಹಂಪಿ ಆಯ್ಕೆಯಾಗಿದೆ. ಇದರಿಂದ ಇಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವು ಅಭಿವೃದ್ಧಿ ಕಾಣಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Vijayanagara DC latest meeting
ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಮಾತನಾಡಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸಪೇಟೆ: ವಿಶ್ವವಿಖ್ಯಾತ (World famous), ವಿಶ್ವ ಪಾರಂಪರಿಕ ತಾಣವಾದ ಹಂಪಿಯು (Hampi) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ (Ambitious project) ಸ್ವದೇಶ್ ದರ್ಶನ್‌ಗೆ 2.0 (Swadesh Darshan 2.0) ಆಯ್ಕೆಯಾಗಿದ್ದು, ಖಾಸಗಿ ಸಂಸ್ಥೆಯ ಮೂಲಕ ಯೋಜನೆ ಅನುಷ್ಠಾನಗೊಳ್ಳಲಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಯೋಜನಾ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್ ಟಿ. ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರವಾಸಿ ತಾಣಗಳಾದ ಮೈಸೂರು ಹಾಗೂ ಹಂಪಿ ಈ ಯೋಜನೆಗೆ ಆಯ್ಕೆಯಾಗಿದ್ದು, ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ಸಹಕಾರವನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ನೀಡಬೇಕು ಎಂದರು.

ಇದನ್ನೂ ಓದಿ: Jobs News : ಕೇಂದ್ರ ಸರ್ಕಾರದ ಉದ್ಯೋಗ ಬೇಕೇ? ಯುಪಿಎಸ್‌ಸಿ, ಎಸ್‌ಎಸ್‌ಸಿಯ ಈ ವೇಳಾಪಟ್ಟಿ ನೋಡಿ!

ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಹಂಪಿಯಲ್ಲಿ ಜಾರಿಗೊಳಿಸಲು ಸಲ್ಲಿಸಿದ ಪ್ರಸ್ತಾವನೆಯಂತೆ ಈ ಯೋಜನೆ ಆಯ್ಕೆಯಾಗಿದೆ. ಖಾಸಗಿ ಸಂಸ್ಥೆಯ ಮೂಲಕ ಅಂದಾಜು 2 ವರ್ಷಗಳ ಕಾಲ ಅನುಷ್ಠಾನ ಪ್ರಕ್ರಿಯೆ ನೆರವೇರಲಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಸಹ ಸೂಕ್ತ ನಿರ್ವಹಣೆಯನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಸ್ವದೇಶ್ ದರ್ಶನ್ 2.0 ಯೋಜನೆಯ ಅನುಷ್ಠಾನ ಕುರಿತು ಮಾಹಿತಿಯನ್ನು ನೀಡಲಾಯಿತು.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಕಂಡೊಡನೆ ಓಡಿ ಬಂದು ಬಿಗಿಯಾಗಿ ತಬ್ಬಿಕೊಂಡ ಬಾಲಕ; ವಿಡಿಯೊ ವೈರಲ್‌

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ, ಹವಾಮಾ (ಹಂಪಿ ಅಭಿವೃದ್ಧಿ ಪ್ರಾಧಿಕಾರ) ಆಯುಕ್ತ ಸಿದ್ಧರಾಮೇಶ್ವರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ, ತಹಸೀಲ್ದಾರ್ ಪ್ರತಿಭಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಶಿಕ್ಷಣ

CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

CET 2024 Exam: ಗುರುವಾರ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ಸಂಬಂಧ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ದೂರು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಇಎ, ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ (ಏಪ್ರಿಲ್‌ 24) ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡುವುದಾಗಿ ಹೇಳಿದೆ. ಈಗ ಎರಡನೇ ದಿನವೂ ಇದೇ ಗೊಂದಲವಾಗಿದೆ. ಹೀಗಾಗಿ ಈ ಎರಡೂ ಸಮಸ್ಯೆಗಳ ಬಗ್ಗೆ ಬುಧವಾರ ಚರ್ಚೆ ನಡೆಸಲಾಗುತ್ತದೆ.

VISTARANEWS.COM


on

Day 2 of CET 2024 Exam 26 out of syllabus question KEA asks to raise objections by April 27
Koo

ಬೆಂಗಳೂರು: ಎಂಜಿನಿಯರಿಂಗ್, ಕೃಷಿ ಸೇರಿದಂತೆ ಹಲವು ವೃತ್ತಿಪರ ಕೋರ್ಸ್‌ಗಳಿಗೆ ಗುರುವಾರ ನಡೆದಿದ್ದ ಮೊದಲ ದಿನದ ಸಿಇಟಿ-2024 ಪರೀಕ್ಷೆಯಲ್ಲಿ (CET 2024 exam) ಗಣಿತ ಹಾಗೂ ಜೀವಶಾಸ್ತ್ರದ ವಿಷಯದಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಈಗ ಎರಡನೇ ದಿನದ ಪರೀಕ್ಷೆಯಲ್ಲಿಯೂ ಈ ಸಮಸ್ಯೆ ಪುನರಾವರ್ತನೆಯಾಗಿದೆ. ಭೌತಶಾಸ್ತ್ರದಲ್ಲಿ 8 ಹಾಗೂ ರಸಾಯನಶಾಸ್ತ್ರ ವಿಷಯದಲ್ಲಿ 18 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳನ್ನು ಕೇಳಲಾಗಿದೆ. ಇದು ವಿದ್ಯಾರ್ಥಿಗಳ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ಸಂಬಂಧ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ದೂರು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಇಎ, ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ (ಏಪ್ರಿಲ್‌ 24) ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡುವುದಾಗಿ ಹೇಳಿದೆ. ಈಗ ಎರಡನೇ ದಿನವೂ ಇದೇ ಗೊಂದಲವಾಗಿದೆ. ಹೀಗಾಗಿ ಈ ಎರಡೂ ಸಮಸ್ಯೆಗಳ ಬಗ್ಗೆ ಬುಧವಾರ ಚರ್ಚೆ ನಡೆಸಲಾಗುತ್ತದೆ.

ಏಪ್ರಿಲ್‌ 27ರವರೆಗೆ ಆಕ್ಷೇಪಣೆ ಸಲ್ಲಿಕೆಗೆ KEA ಅವಕಾಶ

ಈ ಬಾರಿ ಸಿಇಟಿಯಲ್ಲಿ ನೋಂದಣಿ ಮಾಡಿಕೊಂಡಿದ್ದ 3,49,637 ವಿದ್ಯಾರ್ಥಿಗಳ ಪೈಕಿ ಶೇ.92ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಅಲ್ಲದೆ, ಈಗ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಬಗ್ಗೆ‌ ಆಕ್ಷೇಪಣೆಗಳು ಇದ್ದರೆ, ಇದೇ ಏಪ್ರಿಲ್ 27ರೊಳಗೆ ‌ದೂರು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿನ ಯಾವುದೇ ಪ್ರಶ್ನೆಗಳ ಬಗ್ಗೆ ಆಕ್ಷೇಪಣೆಗಳು ಇದ್ದರೆ, ವಿಷಯ, ವರ್ಷನ್‌ ಕೋಡ್, ಪ್ರಶ್ನೆ ಸಂಖ್ಯೆಗಳನ್ನು ನಮೂದಿಸಿ keaugcet24@gmail.com ಗೆ ಇ – ಮೇಲ್‌ ಮೂಲಕ ಸಂಜೆ 5.30ರ ಒಳಗೆ ದೂರು ಸಲ್ಲಿಸಲು ಕೆಇಎ ಸೂಚಿಸಿದೆ. ಇದಕ್ಕೆ ತಜ್ಞರ ಸಮಿತಿಯು ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

ಗಣಿತ, ಜೀವಶಾಸ್ತ್ರದ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ವಿರುದ್ಧ ದೂರು

ಜೀವಶಾಸ್ತ್ರದ 11 ಪ್ರಶ್ನೆಗಳು ಹಾಗೂ ಗಣಿತದ 9 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ಕೆಇಎಗೆ ದೂರು ನೀಡಿದ್ದಾರೆ. ಇವುಗಳಿಗೆ ಗ್ರೇಸ್ ಮಾರ್ಕ್ಸ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಠ್ಯಪುಸ್ತಕದಲ್ಲಿ ಇಲ್ಲದ ಪ್ರಶ್ನೆಗಳು ಬಂದಿವೆ. ಒಟ್ಟು 14 ಮಾರ್ಕ್ಸ್ ಔಟ್ ಆಫ್ ಸಿಲೆಬಸ್ ಬಂದಿದೆ ಎಂದು ಗುರುವಾರ ವಿದ್ಯಾರ್ಥಿಗಳು ಆರೋಪ ಮಾಡಿದ್ದರು. ಈಗ 11 ಮಾರ್ಕ್ಸ್ ಬಗ್ಗೆ ದೂರಿದ್ದಾರೆ.

ಕೆಇಎ ಹೇಳೋದೇನು?

ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಕೆಇಎ ಈವರೆಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು. ನಂತರ ಗ್ರೇಸ್ ಮಾರ್ಕ್ಸ್ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ವಿಸ್ತಾರ ನ್ಯೂಸ್‌ಗೆ ಕೆಇಎ ಮಂಡಳಿ ಮಾಹಿತಿ ನೀಡಿದೆ. ಈ ಸಮಿತಿ ರಚನೆಯಾದ ಬಳಿಕ ಅಧ್ಯಯನ ಮಾಡಿ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು.

ದಾಖಲೆ ಸಂಖ್ಯೆಯಲ್ಲಿ ಸಿಇಟಿ ಬರೆದಿರುವ ವಿದ್ಯಾರ್ಥಿಗಳು

ಈ ವರ್ಷ ಸಿಇಟಿ ಪರೀಕ್ಷೆಗೆ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಯನ್ನು ಬರೆದಿದ್ದಾರೆ. ಈ ಹಿಂದೆ ಯಾವತ್ತೂ ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿರಲಿಲ್ಲ. ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ 167 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆಯನ್ನು ನಡೆಸಲಾಗಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಭೇಟಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಗುರುವಾರ ಮಲ್ಲೇಶ್ವರಂ ಪಿಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶುಕ್ರವಾರ ನಡೆಯುವ ಪರೀಕ್ಷೆಗೂ ಬಿಗಿ ಭದ್ರತೆ ಇರಲಿದೆ ಎಂದು ಹೇಳಿದ್ದರು.

ಸಿಇಟಿಗೆ ಹೆಚ್ಚು ಅಂಕಗಳ ಪಟ್ಟಿ ಪರಿಗಣನೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್‌ನ್ಯೂಸ್‌ ನೀಡಿದೆ. ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಯಾವುದರಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೋ ಅದನ್ನೇ ಸಿಇಟಿ (CET 2024)ಗೆ ಪರಿಗಣಿಸಲು ಕೆಇಎ ಸಮ್ಮತಿ ಸೂಚಿಸಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ನಿರಾಳವಾಗಿದ್ದಾರೆ. ಎಂಜಿನಿಯರ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೆಇಎ ಪ್ರತಿವರ್ಷ ಸಿಇಟಿ ನಡೆಸುತ್ತದೆ.

ಸಿಇಟಿ ಜತೆಗೆ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕವನ್ನೂ ರ‍್ಯಾಂಕಿಂಗ್​ಗೆ ಪರಿಗಣಿಸಲಾಗುತ್ತದೆ. ಇದುವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದರೆ ಪೂರಕ ಪರೀಕ್ಷೆ ಬರೆದು ತೇರ್ಗಡೆಯಾಗಬೇಕಿತ್ತು. ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕ್ರೋಡೀಕರಿಸಿ ಅಂಕಪಟ್ಟಿ ನೀಡಲಾಗುತ್ತಿತ್ತು.

ನಿಯಮದಲ್ಲಿ ಬದಲಾವಣೆ

ಈ ಬಾರಿ ಈ ನಿಯಮದಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಒಂದು ವೇಳೆ ಕಡಿಮೆ ಅಂಕ ಬಂದಿದ್ದರೆ ಅದನ್ನು ಉತ್ತಮಪಡಿಸಿಕೊಳ್ಳಲು ವಿದ್ಯಾರ್ಥಿಗಳು ಇನ್ನು ಉಳಿದ ಎರಡು ಪರೀಕ್ಷೆಗಳನ್ನೂ ಬರೆಯಬಹುದು. ಹೆಚ್ಚು ಅಂಕ ಬಂದಿರುವುದನ್ನೇ ಪರಿಗಣಿಸಿ ಅಂತಿಮ ಅಂಕಪಟ್ಟಿ ನೀಡಲಾಗುತ್ತದೆ.

ಇದನ್ನೂ ಓದಿ: Neha Murder Case: ಐಸಿಸ್‌ ಮಾದರಿಯಲ್ಲಿ ನೇಹಾಗೆ ಚಾಕು ಇರಿತ; ಲವ್‌ ಜಿಹಾದ್‌ ಫಲಿಸದ್ದಕ್ಕೆ ಕೃತ್ಯ: ಪ್ರಮೋದ್‌ ಮುತಾಲಿಕ್

ಇದೀಗ ಆ ಹೆಚ್ಚುವರಿ ಅಂಕವನ್ನೇ ಸಿಇಟಿ ರ‍್ಯಾಂಕಿಂಗ್‌ಗೂ ಪರಿಣಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ಮಾತನಾಡಿ, ʼʼಹೆಚ್ಚು ಅಂಕ ಬಂದಿರುವ ಅಂತಿಮ ಅಂಕ ಪಟ್ಟಿಯನ್ನು ಸಿಇಟಿ ಅಂಕಗಳ ಜತೆ ರ‍್ಯಾಂಕಿಂಗ್‌ ಪಟ್ಟಿ ಸಿದ್ಧಪಡಿಸಲು ಪರೀಕ್ಷಾ ಪ್ರಾಧಿಕಾರ ಪರಿಗಣಿಸಲಿದೆʼʼ ಎಂದು ತಿಳಿಸಿದ್ದಾರೆ.

Continue Reading

ಕರ್ನಾಟಕ

letter to President: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

letter to President: ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಯಾವುದೇ ಮುನ್ಸೂಚನೆ ನೀಡದೇ ಧ್ವಂಸ ಮಾಡಲಾಗಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಗೋವಾ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮನವಿ ಮಾಡಿದ್ದಾರೆ.

VISTARANEWS.COM


on

letter to President
Koo

ಬೆಂಗಳೂರು: ಗೋವಾ ಕನ್ನಡಿಗರ ರಕ್ಷಣೆಗೆ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ನ್ಯಾಯ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಸಂಬಂಧ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದ ನಿಯೋಗ ಶುಕ್ರವಾರ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ (letter to President) ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದ ನೆಲ, ಜಲ, ನುಡಿ, ಸಂಸ್ಕೃತಿ, ಪರಂಪರೆ ರಕ್ಷಣೆಗಾಗಿ ಇರುವ ಸಂಘಟನೆಯಾಗಿದ್ದು, ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಳವಳಿಯ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಸುಮಾರು 70 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಯಕರ್ತರನ್ನು ಹೊಂದಿರುವ ಸಂಘಟನೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಗಳಲ್ಲೂ ಸಂಘಟನೆಯನ್ನು ಹೊಂದಿದೆ. ಗೋವಾದಲ್ಲಿ ನಡೆಯುತ್ತಿರುವ ಕಳವಳಕಾರಿ ವಿದ್ಯಮಾನಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ಟಿ.ಎ. ನಾರಾಯಣಗೌಡ ಅವರು ತಿಳಿಸಿದ್ದಾರೆ.

ಭಾರತ ಒಕ್ಕೂಟದ ಭಾಗವಾಗಿರುವ ಗೋವಾದಲ್ಲಿ ಸಾವಿರಾರು ಕನ್ನಡಿಗರು ಹಲವಾರು ದಶಕಗಳಿಂದ ವಾಸವಾಗಿದ್ದು, ಗೋವಾದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ಕೊಡುತ್ತ ಬಂದಿದ್ದಾರೆ. ಆದರೆ ದುರದೃಷ್ಟವಶಾತ್ ಅಲ್ಲಿನ ಕನ್ನಡರಿಗೆ ಗೋವಾ ಸರ್ಕಾರ ಮೊದಲಿನಿಂದಲೂ ಕಿರುಕುಳ ನೀಡುತ್ತ ಅಮಾನವೀಯವಾಗಿ ನಡೆಸಿಕೊಳ್ಳುತ್ತ ಬಂದಿದೆ.

ಇದನ್ನೂ ಓದಿ | Neha Murder Case: ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ ಸರ್: ಜೋಶಿಗೆ ನೇಹಾ ತಂದೆ ನಿರಂಜನ್ ಮನವಿ

ಕಳೆದ ಏಪ್ರಿಲ್ 14, 15ರಂದು ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಯಾವುದೇ ಮುನ್ಸೂಚನೆಯನ್ನೂ ನೀಡದೇ ಧ್ವಂಸ ಮಾಡಲಾಗಿದೆ. ಈ ಸಂದರ್ಭದಲ್ಲಿ ತಮ್ಮನ್ನು ಒಕ್ಕಲೆಬ್ಬಿಸದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಕೈ ಮುಗಿದು ಬೇಡಿದರೂ ಪ್ರಯೋಜನವಾಗಿಲ್ಲ. ಪ್ರತಿರೋಧ ಒಡ್ಡಿದವರ ಮೇಲೆ ಪೊಲೀಸರು ಲಾಠಿ ಬೀಸಿ ಮನೆಯಿಂದ ಹೊರಗೆ ಓಡಿಸಲಾಗಿದೆ. ದವಸ-ಧಾನ್ಯ, ಬಟ್ಟೆ-ಹಾಸಿಗೆಗಳೂ ಮನೆಯ ಅವಶೇಷಗಳ ಅಡಿ ನಾಶವಾಗಿವೆ. ಕನ್ನಡ ಸಮುದಾಯ ಅನಾಥವಾಗಿದೆ, ಅಸಹಾಯಕವಾಗಿದೆ ಎಂದು ಹೇಳಿದ್ದಾರೆ.

ಉದ್ಯೋಗ ಅರಸಿ ಕರ್ನಾಟಕದಿಂದ ಇಲ್ಲಿಗೆ ಬಂದಿರುವ ಈ ಕುಟುಂಬಗಳು ಕಳೆದ ನಾಲ್ಕು ದಶಕಗಳಿಂದ ಇಲ್ಲಿ ವಾಸವಾಗಿವೆ. 200ಕ್ಕೂ ಹೆಚ್ಚು ಮಂದಿ ಇಲ್ಲಿ ಬದುಕುತ್ತಿದ್ದಾರೆ. ಬಹಳಷ್ಟು ಮಂದಿ ಇಲ್ಲಿಯೇ ಹುಟ್ಟಿದವರು. ಬಹುತೇಕರು ಕಟ್ಟಡ, ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಯಾಳಾಗಿ ತೊಡಗಿಕೊಂಡಿದ್ದಾರೆ. ಮತ್ತೆ ಕೆಲವರು ದುಡಿಮೆಗಾಗಿ ಬಟ್ಟೆ ವ್ಯಾಪಾರ ಇತ್ಯಾದಿ ಕೆಲಸ ಮಾಡುತ್ತಿದ್ದಾರೆ. ಇವರ ಪುಟ್ಟ ಮನೆಗಳಿಗೆ ಸ್ಥಳೀಯ ಆಡಳಿತ ವಿದ್ಯುತ್, ನಲ್ಲಿ ನೀರು, ವೈಯಕ್ತಿಕ ಶೌಚಾಲಯ, ರಸ್ತೆ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿತ್ತು.

ಈಗ ಈ ಕುಟುಂಬಗಳನ್ನು ನಿರ್ದಾಕ್ಷಿಣ್ಯವಾಗಿ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಕನ್ನಡಿಗರ ಮೇಲೆ ಗೋವಾದಲ್ಲಿ ನಡೆಯುತ್ತಿರುವ ದಬ್ಬಾಳಿಕೆಗಳನ್ನು ಗಮನಿಸಿದರೆ, ಗೋವಾದಲ್ಲಿ ಕನ್ನಡಿಗರು ಯಾರೂ ಇರಲೇಬಾರದು ಎಂಬ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಬಂದಂತಿದೆ. ಭಾಷಾ ಅಲ್ಪಸಂಖ್ಯಾತರ ವಿರುದ್ಧ ಗೋವಾ ಸರ್ಕಾರ ಮೊದಲಿನಿಂದಲೂ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತವಾಗಿ ದೌರ್ಜನ್ಯ ನಡೆಯುತ್ತಿದ್ದು, 2005ರಲ್ಲಿ 1,162 ಕನ್ನಡಿಗರ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. 2014ರಲ್ಲಿ 70 ಕುಟುಂಬಗಳನ್ನು, 2015ರಲ್ಲಿ 157 ಕುಟುಂಬಗಳನ್ನು, 2017ರಲ್ಲಿ 211 ಕುಟುಂಬಗಳನ್ನು, 2019ರಲ್ಲಿ 62 ಕನ್ನಡಿಗ ಕುಟುಂಬಗಳನ್ನು ಗೋವಾ ಸರ್ಕಾರ ಒಕ್ಕಲೆಬ್ಬಿಸಿದೆ. ಈಗ 15 ಮನೆಗಳನ್ನು ಧ್ವಂಸಗೊಳಿಸಿದೆ. ಇಂತಹ ದೌರ್ಜನ್ಯವು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು ಭಾರತ ಒಕ್ಕೂಟ ವ್ಯವಸ್ಥೆ ಮತ್ತು ಭಾರತ ಸಂವಿಧಾನದ ಮೂಲ ಆಶಯಗಳಿಗೆ ಮಾಡಿದ ಅಪಮಾನವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Lok Sabha Election : ಮಣಿಪುರದ ಮತಗಟ್ಟೆಯಲ್ಲಿ ಗುಂಡಿನ ಚಕಮಕಿ; ಇಲ್ಲಿದೆ ವಿಡಿಯೊ

ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕೆಂದು ಭಾರತದ ಸಂವಿಧಾನದ 29 ಮತ್ತು 30ನೇ ವಿಧಿಗಳು ಸ್ಪಷ್ಟವಾಗಿ ಹೇಳಿವೆ. ಆದರೆ ಗೋವಾ ಸರ್ಕಾರವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದೆ. ಸನ್ಮಾನ್ಯ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಗೋವಾದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗ ಕುಟುಂಬಗಳ ಮೇಲೆ ಗೋವಾ ಸರ್ಕಾರವು ನಿರಂತವಾಗಿ ದೌರ್ಜನ್ಯ ಎಸಗುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಗೋವಾ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಟಿ.ಎ. ನಾರಾಯಣಗೌಡರು ಕೋರಿದ್ದಾರೆ.

Continue Reading

ಯಾದಗಿರಿ

Yadgiri News: ರಾಜಾವೇಣುಗೋಪಾಲ ನಾಯಕಗೆ ಬೆಂಬಲಿಸಿ, ಗೆಲ್ಲಿಸಿ: ಸಚಿವ ದರ್ಶನಾಪುರ

Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಶುಕ್ರವಾರ ನಾಮಪತ್ರ ಸಲ್ಲಿಸಿದರು.

VISTARANEWS.COM


on

Surapura assembly constituency by election Congress candidate Rajavenugopal Nayaka filed nomination
Koo

ಯಾದಗಿರಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ (Guarantee Scheme) ಜತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಸುರಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ತರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ (Yadgiri News) ಮನವಿ ಮಾಡಿದರು.

ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ರೋಡ್‌ ಶೋ ನಡೆಸಿ ಮತಯಾಚಿಸಿದರು.

ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಮುನ್ನ ಕಾಂಗ್ರೆಸ್ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಸಚಿವರು, ದಿ. ರಾಜಾವೆಂಕಟಪ್ಪ ನಾಯಕ ಅವರು ಸುರಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರಾಜಾವೆಂಕಟಪ್ಪ ನಾಯಕ ಅವರ ಪುತ್ರ ರಾಜಾವೇಣುಗೋಪಾಲ ನಾಯಕ ಅವರು ಈಗ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಮತದಾರರು ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಿ ತರಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: Uttara Kannada News: ಬನವಾಸಿಯ ಐತಿಹಾಸಿಕ ಶ್ರೀ ಉಮಾಮಧುಕೇಶ್ವರ ದೇವರ ಮಹಾರಥೋತ್ಸವ

ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಕೇಂದ್ರ ಸರ್ಕಾರ ರಾಜ್ಯರ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ರೈತರ ಕಾಳಜಿ ತೊರುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಮಾತನಾಡಿ, ಕ್ಷೇತ್ರದ ಮತದಾರರು ನನ್ನ ಪಾಲಿನ ತಂದೆ, ತಾಯಿ ಇದ್ದಂತೆ. ಕ್ಷೇತ್ರದ ಜನರ ಮಗನಾಗಿ ಜನ ಸೇವೆ ಮಾಡುತ್ತೇನೆ. ತಂದೆ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಅವರ ಹಾದಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Diabetic Controle: ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ತಂತ್ರ

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರನಾಯಕ ಮಾತನಾಡಿದರು.

ಭರ್ಜರಿ ರೋಡ್ ಶೋ

ನಂತರ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ಅವರು ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ವಸಂತ ಮಹಲ್‌ನಿಂದ ಸುರಪುರ ತಹಸೀಲ್ದಾರ್‌ ಕಚೇರಿವರೆಗೆ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ ನಂತರ ತಹಸೀಲ್ದಾರ್‌ ಕಚೇರಿಗೆ ತೆರಳಿ, ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲ ನಾಯಕ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

ಈ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರ, ರಾಜಾ ಕೃಷ್ಣಪ್ಪ ನಾಯಕ, ಕೆಪಿಸಿಸಿ ಕಾರ್ಯದರ್ಶಿ ವಿಠಲ್ ಯಾದವ್‌, ರಾಜಶೇಖರ ಪಾಟೀಲ್ ವಜ್ಜಲ್, ಚಂದ್ರಶೇಖರ ದಂಡಿನ್, ರವಿಚಂದ್ರ ಆಲ್ದಾಳ, ಗುಂಡಪ್ಪ ಸೊಲ್ಲಾಪೂರ ಕಕ್ಕೇರಾ, ಮಲ್ಲಣ್ಣ ಸಾಹುಕಾರ, ಶಂಕ್ರಣ್ಣ ವಣಕ್ಯಾಳ, ರಾಜಾ ಕುಮಾರನಾಯಕ, ಶಾಂತಗೌಡ ಚನ್ನಪಟ್ಟಣ, ಹಣಮಂತ್ರಾಯ ಮಕಾಶಿ, ಅಬ್ದುಲ್ ಗಫರ್ ನಗನೂರಿ, ದೊಡ್ಡದೇಸಾಯಿ ದೇವರಗೋನಾಲ್‌ ಸೇರಿದಂತೆ ಸಹಸ್ರಾರು ಕಾಯಕರ್ತರು ಇದ್ದರು.

Continue Reading

ಕ್ರೀಡೆ

Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

Royal Challenges Bangalore: ರಾಜಾನುಕುಂಟೆ ಸಮೀಪದ ಇಟ್ಟಗಲ್ಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ ಆರ್​ಸಿಬಿ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ಮಾಡಿದೆ. ಅಕ್ಟೋಬರ್ 2023 ರಲ್ಲಿ ಆರ್​ಸಿಬಿ ಈ ಯೋಜನೆ ಪ್ರಾರಂಭಿಸಿತ್ತು. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಬೋರ್​ವೆಲ್​ಗಳನ್ನು 1000 ರಿಂದ 1500 ಅಡಿಗಳವರೆಗೆ ಕೊರೆಸಬೇಕಾಗಿದೆ. ಈ ಪ್ರದೇಶಗಳು ಕಾವೇರಿ ನದಿಯ ನೀರಿನ ಲಭ್ಯತೆಯನ್ನು ಹೊಂದಿಲ್ಲ. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

VISTARANEWS.COM


on

Royal Challengers Banaglore
Koo

ಬೆಂಗಳೂರು: ಇಂಡಿಯಾ ಕೇರ್ಸ್ ಫೌಂಡೇಶನ್​ನ ಇತ್ತೀಚಿನ ವರದಿಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challenges Bangalore) ಬೆಂಗಳೂರಿನ ಎರಡು ಪ್ರಮುಖ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಪೂರ್ಣಗೊಳಿಸಿದೆ, ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಮೂರನೇ ಕೆರೆ ಪಕ್ಕದಲ್ಲಿ ನಾಗರಿಕ ಸೌಲಭ್ಯಗಳನ್ನು ಸೇರಿಸಿದೆ.

ರಾಜಾನುಕುಂಟೆ ಸಮೀಪದ ಇಟ್ಟಗಲ್ಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ ಆರ್​ಸಿಬಿ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕೆಲಸ ಮಾಡಿದೆ. ಅಕ್ಟೋಬರ್ 2023 ರಲ್ಲಿ ಆರ್​ಸಿಬಿ ಈ ಯೋಜನೆ ಪ್ರಾರಂಭಿಸಿತ್ತು. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಬೋರ್​ವೆಲ್​ಗಳನ್ನು 1000 ರಿಂದ 1500 ಅಡಿಗಳವರೆಗೆ ಕೊರೆಸಬೇಕಾಗಿದೆ. ಈ ಪ್ರದೇಶಗಳು ಕಾವೇರಿ ನದಿಯ ನೀರಿನ ಲಭ್ಯತೆಯನ್ನು ಹೊಂದಿಲ್ಲ. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

ವರದಿಯ ಪ್ರಕಾರ, ಇಟ್ಟಗಲ್ಲಪುರ ರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಿಂದ 1.20 ಲಕ್ಷ ಟನ್ ಹೂಳು ಮತ್ತು ಮರಳನ್ನು ತೆಗೆಯಲಾಗಿದೆ. ಇದನ್ನು ಕೆರೆಗಳಿಗೆ ಅಡ್ಡಲಾಗಿ ಕಟ್ಟೆಗಳು ಮತ್ತು ಮಾರ್ಗಗಳನ್ನು ನಿರ್ಮಿಸಲು ಬಳಸಲಾಗಿದೆ. 52 ರೈತರು ತಮ್ಮ ಹೊಲಗಳಿಗೆ ಮೇಲ್ಮಣ್ಣು ಬಳಸಲು ಮಣ್ಣನ್ನು ತೆಗೆದುಕೊಂಡಿದ್ದಾರೆ.

ಒಟ್ಟು ಒಂಬತ್ತು ಎಕರೆ ಕೆರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಕೊಳಗಳು ಮತ್ತು ಗದ್ದೆಗಳು ಸೃಷ್ಟಿಯಾಗಿವೆ. ಈ ವೈಶಿಷ್ಟ್ಯಗಳು ಸರೋವರಗಳಲ್ಲಿ ವಾಸಿಸುವ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಪ್ರಯೋಜನವನ್ನು ನೀಡುತ್ತಿವೆ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ೧೭ ಎಕರೆಗಳವರೆಗೆ ಹೆಚ್ಚಾಗಿದೆ.

ಇದನ್ನೂ ಓದಿ: IPL 2024 : ಆರ್​ಸಿಬಿ, ಕೊಹ್ಲಿಯ ನೆರವು ಸ್ಮರಿಸಿದ ಕೆ. ಎಲ್ ರಾಹುಲ್​

ಈ ಸರೋವರಗಳು ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗುವುದಲ್ಲದೆ, ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಬೆಂಬಲಿಸುತ್ತವೆ. ಇದು ಎರಡು ಸರೋವರಗಳ ಮೀನುಗಾರರು ಮತ್ತು ರೈತರಿಗೆ ಹೆಚ್ಚುವರಿ ಜೀವನೋಪಾಯದ ಅವಕಾಶಗಳನ್ನು ನೀಡುತ್ತದೆ. ಈಗ ಮೊದಲಿಗಿಂತ ಮೂರು ಪಟ್ಟು ಹೆಚ್ಚು ಮೀನು ಪಡೆಯಬಹುದು. ಪ್ರಸ್ತುತ ಕೃಷಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಿರುವ ರೈತರು ಈಗ ಈ ಪುನರುಜ್ಜೀವನಗೊಂಡ ಸರೋವರಗಳನ್ನು ಕೃಷಿ ಮತ್ತು ಇತರ ಉದ್ದೇಶಗಳಿಗಾಗಿ ಬಳಸಬಹುದು.

ಕಣ್ಣೂರು ಕರೆಯ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳನ್ನು ನೀಡಲಾಗಿದೆ. ಎಲ್ಲಾ ಮೂರು ಸರೋವರಗಳಲ್ಲಿ ಜನಾಂಗೀಯ-ಔಷಧೀಯ ಸಸ್ಯಗಳ ಉದ್ಯಾನವನಗಳು, ಬಿದಿರು ಉದ್ಯಾನಗಳು ಮತ್ತು ಚಿಟ್ಟೆ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಏಕೆಂದರೆ ಈ ಉಪಕ್ರಮವು ಸರೋವರಗಳ ಜೀವವೈವಿಧ್ಯತೆಯನ್ನು ಸುಧಾರಿಸುವ ಮತ್ತು ಸುಸ್ಥಿರಗೊಳಿಸುವ ಗುರಿ ಹೊಂದಿದೆ, ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಶೈಕ್ಷಣಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ.

Continue Reading
Advertisement
Day 2 of CET 2024 Exam 26 out of syllabus question KEA asks to raise objections by April 27
ಶಿಕ್ಷಣ10 mins ago

CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

Maldives Tourism
ವಿದೇಶ13 mins ago

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

IPL 2024
ಕ್ರೀಡೆ16 mins ago

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

Party symbols
ರಾಜಕೀಯ19 mins ago

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

letter to President
ಕರ್ನಾಟಕ21 mins ago

letter to President: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

Surapura assembly constituency by election Congress candidate Rajavenugopal Nayaka filed nomination
ಯಾದಗಿರಿ38 mins ago

Yadgiri News: ರಾಜಾವೇಣುಗೋಪಾಲ ನಾಯಕಗೆ ಬೆಂಬಲಿಸಿ, ಗೆಲ್ಲಿಸಿ: ಸಚಿವ ದರ್ಶನಾಪುರ

Royal Challengers Banaglore
ಕ್ರೀಡೆ42 mins ago

Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

Video Viral Parameshwara statement on ballot paper bogus voting
ವೈರಲ್ ನ್ಯೂಸ್44 mins ago

Video Viral: ಬ್ಯಾಲೆಟ್‌ ಪೇಪರ್‌ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್;‌ ಕಾಂಗ್ರೆಸ್‌ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!

Money Guide
ಮನಿ-ಗೈಡ್1 hour ago

Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

‌Assault Case
ಕರ್ನಾಟಕ1 hour ago

‌Assault Case: ಮೋದಿ ಹಾಡು ಬರೆದ ಯುವಕನ ಮೇಲೆ ಹಲ್ಲೆ; ಐವರ ವಿರುದ್ಧ ಎಫ್ಐಆರ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ5 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ16 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌