Viral video: ಪ್ರವಾಸಿಗರ ವಾಹನ ಅಡ್ಡಗಟ್ಟಿ ನಿಂತ ಆನೆ; ಗಣಪತಿ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟನಾ ಗಜರಾಜ! - Vistara News

ಕರ್ನಾಟಕ

Viral video: ಪ್ರವಾಸಿಗರ ವಾಹನ ಅಡ್ಡಗಟ್ಟಿ ನಿಂತ ಆನೆ; ಗಣಪತಿ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟನಾ ಗಜರಾಜ!

Viral video: ಪ್ರವಾಸಕ್ಕೆಂದು ಹೊರಟಿದ್ದ ಅವರಿಗೆ ಮಾರ್ಗ ಮಧ್ಯೆ ಕಾಡಾನೆಯೊಂದು ಎದುರಾಯಿತು. ಕೂಗಳತೆ ದೂರದಲ್ಲಿದ್ದ ಆನೆಯು ಕಾರಿನತ್ತ ಓಡೋಡಿ ಬಂದಿತ್ತು. ಕಾರಿನಲ್ಲಿದ್ದವರೆಲ್ಲರೂ ಇನ್ನೇನು ಸಾವೇ ಹತ್ತಿರ ಬರುತ್ತಿದೆ ಎಂದು ನಡುಗಿದ್ದರು. ಆದರೆ, ಮುಂದೆ ಆಗಿದ್ದೇ ಬೇರೆ!

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು: ಪ್ರವಾಸಿಗರ ವಾಹನಕ್ಕೆ ಅಡ್ಡಗಟ್ಟಿನಿಂತ ಕಾಡಾನೆಯೊಂದು ಗಣಪತಿ ಸೇರಿದಂತೆ ನಾನಾ ದೇವರ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟು ಕೊಟ್ಟ ಘಟನೆ ನಡೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದೆ.

ಪ್ರವಾಸಕ್ಕೆಂದು ಕಾರಿನಲ್ಲಿ ಐದಾರು ಮಂದಿ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾಡಾನೆಯೊಂದು ಅಡ್ಡಗಟ್ಟಿ ನಿಂತಿತ್ತು. ಕೂಗಳತೆ ದೂರದಲ್ಲಿದ್ದ ಕಾಡಾನೆಯನ್ನು ಕಂಡೊಂಡನೆ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಆದರೂ ಬಿಡದ ಕಾಡಾನೆಯು ಕಾರಿನತ್ತ ಓಡೋಡಿ ಬಂದಿತ್ತು. ಕಾರಿನಲ್ಲಿದ್ದವರೆಲ್ಲರೂ ಇನ್ನೇನು ನಾವೆಲ್ಲ ಆನೆ ತುಳಿತಕ್ಕೆ ಸತ್ತು ಹೋಗುತ್ತೇವೆ ಎಂದು ನಡುಗಿದ್ದರು.

ದಾರಿ ಬಿಟ್ಟು ಕೊಟ್ಟ ಕಾಡಾನೆ

ಕಾರಿನಲ್ಲಿದ್ದ ಮಹಿಳೆಯರೆಲ್ಲ ಗಾಬರಿಯಾಗಿ ಆನೆ ಬಂದೇ ಬಿಡ್ತು.. ಕೃಷ್ಣಾ ವಾಸುದೇವಾ.. ಎನ್ನುತ್ತಾ ಜೀವ ಕೈಲಿ ಹಿಡಿದು ಕುಳಿತಿದ್ದರು. ಕಾಡಾನೆ ಸಮೀಪ ಬಂದೊಡನೆ ಆತಂಕಕ್ಕೆ ಒಳಗಾಗಿ ಸಾಮೂಹಿಕವಾಗಿ ಗಣಪತಿ ಮಂತ್ರ ಹೇಳಲು ಶುರು ಮಾಡಿದರು. ಕಾರು ಹಿಂದೆ ಹೋದಂತೆಲ್ಲ ಆನೆ ಕೂಡಾ ಮುಂದೆ ಮುಂದೆ ಬರುತ್ತಿತ್ತು.

ಇದನ್ನೂ ಓದಿ: Child theft in Bengaluru: ಮನೆಯೊಳಗೆ ತಾಯಿ ಜತೆ ಬೆಚ್ಚಗೆ ಮಲಗಿದ್ದ ಮಗುವನ್ನು ಕದ್ದೊಯ್ದ ಕಳ್ಳಿ; ಮತ್ತೆ ಹೆತ್ತವರ ಮಡಿಲು ಸೇರಿದ್ದೇ ರೋಚಕ!

ಈ ವೇಳೆ ವಿಘ್ನ ವಿನಾಶಕನ ಮಂತ್ರವನ್ನು ಜಪಿಸುತ್ತಿದ್ದಂತೆಯೇ ಸಮಾಧಾನಗೊಂಡಂತೆ ಕಂಡ ಕಾಡಾನೆ, ಕಾರಿನಿಂದ ಪಕ್ಕಕ್ಕೆ ಸರಿದಿದೆ. ಮಾತ್ರವಲ್ಲದೆ ಮುಂದೆ ಹೋಗುತ್ತಿದ್ದಂತೆ ಸೊಂಡಿಲು ಎತ್ತಿ ಆಶೀರ್ವಾದ ಮಾಡಿದೆ! ಇದರಿಂದ ಗಜರಾಜನ ಆಶೀರ್ವಾದ ಸಿಕ್ತು ಎಂದು ಪ್ರವಾಸಿಗರು ಖುಷಿ ಆಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

Fortis Hospital: ರಾಜ್ಯದಲ್ಲಿ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯು ಮಿಜೋರಾಂ ರಾಜ್ಯದ 75 ವರ್ಷದ ವನ್ಲಾಲಸಂಗ ಎಂಬ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ (TAVR) ನಡೆಸುವ ಮೂಲಕ ಅತ್ಯಾಧುನಿಕ ಎಡ್ವರ್ಡ್ಸ್ ಸೇಪಿಯನ್ 3 ಅಲ್ಟ್ರಾ ವಾಲ್ವ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.

VISTARANEWS.COM


on

First successful TAVR surgery in the state at Fortis Hospital
Koo

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯು (Fortis Hospital) 75 ವರ್ಷದ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ (TAVR) ನಡೆಸುವ ಮೂಲಕ ಅತ್ಯಾಧುನಿಕ ಎಡ್ವರ್ಡ್ಸ್ ಸೇಪಿಯನ್ 3 ಅಲ್ಟ್ರಾ ವಾಲ್ವ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಹಿರಿಯ ಸಲಹೆಗಾರ ಡಾ. ಬಿ.ವಿ. ಶ್ರೀನಿವಾಸ್ ಪ್ರಸಾದ್ ಅವರ ಆರೈಕೆ ಮತ್ತು ಮೇಲ್ವಿಚಾರಣೆಯಲ್ಲಿ ಕೇವಲ 45 ನಿಮಿಷಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿದೆ.

ಇದನ್ನೂ ಓದಿ: Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

ಈ ಕುರಿತು ಡಾ. ಬಿ.ವಿ. ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಮಿಜೋರಾಂ ರಾಜ್ಯದ 75 ವರ್ಷದ ವನ್ಲಾಲಸಂಗ ಎಂಬ ರೋಗಿಯು ಈ ಮೊದಲು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಅವರಿಗೆ ಹೃದಯದ ಮಹಾಪಧಮನಿಯ ಕವಾಟವು ಚಿಕ್ಕದಾಗುತ್ತಾ ಸಾಗಿದೆ. ಇದರಿಂದ ಇವರ ಹೃದಯಕ್ಕೆ ಸೂಕ್ತ ರೀತಿಯಲ್ಲಿ ರಕ್ತ ಪರಿಚಲನೆ ಸಾಧ್ಯವಾಗುತ್ತಿರಲಿಲ್ಲ. ಕಾಲಕ್ರಮೇಣ ಇದು ವಿಕೋಪಕ್ಕೆ ತಿರುಗಿ, ಅವರು ಎಂದಿನಂತೆ ನಡೆಯಲು ಸಹ ಸಾಧ್ಯವಾಗದೇ ಗಾಲಿಕುರ್ಚಿಯಲ್ಲಿ ಓಡಾಡುವಂತಾಯಿತು.

ಇದಕ್ಕೆ ಸೂಕ್ತ ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗೆ ತೆರಳಿದರೂ ಸಾಧ್ಯವಾಗಲಿಲ್ಲ. ಬಳಿಕ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಇವರ ಪರಿಸ್ಥಿತಿಯನ್ನು ಅವಲೋಕಿಸಿ ಇವರಿಗೆ ಟಿಎವಿಆರ್‌ (TAVR) ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಿದೆವು. ಸಾಂಪ್ರದಾಯಿಕ ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆಯಿಂದ ಹೆಚ್ಚಿನ ಅಪಾಯದ ಜತೆಗೆ, ಚೇತರಿಕೆಯ ಅವಧಿಯೂ ದೀರ್ಘವಾಗಿದೆ. ಹೀಗಾಗಿ ನೂತನ ಚಿಕಿತ್ಸೆಯಾದ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ರಿಪ್ಲೇಸ್‌ಮೆಂಟ್ (TAVR) ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆವು. ಇದು ಕಡಿಮೆ ಅಪಾಯ ನೀಡಲಿದ್ದು, ವೇಗವಾಗಿ ಚೇತರಿಸಿಕೊಳ್ಳಬಹುದಾಗಿದೆ ಎಂದವರು ತಿಳಿಸಿದರು.

ಇದನ್ನೂ ಓದಿ: Karnataka Weather : ರಾಜ್ಯಾದ್ಯಂತ ಜೂನ್‌ ಮೊದಲ ವಾರ ಅಬ್ಬರಿಸಲಿದ್ಯಾ ಮಳೆ; ಕುಸಿಯಲಿದೆ ತಾಪಮಾನ

ಈ ನೂತನ ಶಸ್ತ್ರಚಿಕಿತ್ಸೆಯು ರಾಜ್ಯದಲ್ಲೇ ಮೊದಲ ಬಾರಿಗೆ ನಡೆದಿರುವುದು ವಿಶೇಷ. 45 ನಿಮಿಷಗಳ ಈ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಕೆಲವೇ ಗಂಟೆಗಳಲ್ಲಿ ಸ್ವತಂತ್ರವಾಗಿ ನಡೆಯಲು ಪ್ರಾರಂಭಿಸಿದರು ಎಂದು ಅವರು ವಿವರಿಸಿದರು.

Continue Reading

ರಾಜಕೀಯ

MLC Election: ವಿಧಾನಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ಬೇಳೂರು ಗೋಪಾಲಕೃಷ್ಣ ಮತಯಾಚನೆ

MLC Election: ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಹಾಗೂ ಮೇರಿ ಮಾತಾ ಪ್ರೌಢಶಾಲೆಗಳಲ್ಲಿ ಗುರುವಾರ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಶಾಸಕ ಬೇಳೂರು ಗೋಪಾಲಕೃಷ್ಣ ಮತಯಾಚನೆ ನಡೆಸಿದರು.

VISTARANEWS.COM


on

MLA Belur Gopalakrishna election campaign for Congress candidates at ripponpete
Koo

ರಿಪ್ಪನ್‌ಪೇಟೆ: ವಿಧಾನಪರಿಷತ್‌ನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ (MLC Election) ಗೆಲುವು ಸಾಧಿಸುವುದು ನಿಶ್ಚಿತ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಹಾಗೂ ಮೇರಿ ಮಾತಾ ಪ್ರೌಢಶಾಲೆಗಳಲ್ಲಿ ಗುರುವಾರ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚನೆ ನಡೆಸಿ ಅವರು ಮಾತನಾಡಿದರು.

ಇದನ್ನೂ ಓದಿ: Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

ಇದೇ ಜೂನ್ 3 ರಂದು ನಡೆಯುವ ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಕೆ. ಮಂಜುನಾಥ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ, ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ 85 ಸಾವಿರ ಪದವೀಧರ ಮತದಾರರು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 24 ಸಾವಿರ ಮತದಾರರನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷದ ಪಕ್ಷದ ಅಭ್ಯರ್ಥಿಗಳು ಹಿರಿಯರು ನೀಡಿರುವ ಜವಾಬ್ದಾರಿಯನ್ನು ಯಾವುದೇ ಕಪ್ಪು ಚುಕ್ಕಿ ಬಾರದಂತೆ ಸಮರ್ಥವಾಗಿ ನಿರ್ವಹಿಸುವ ಮೂಲಕ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಪರಿಷತ್‌ನಲ್ಲಿ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Kantara Movie: `ಕಾಂತಾರ ಚಾಪ್ಟರ್‌ 1‌’ ಸಿನಿಮಾಗೆ ಖ್ಯಾತ ಮಾಲಿವುಡ್‌ ನಟ ಎಂಟ್ರಿ!

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಹೊಸನಗರ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮೀ, ಪಕ್ಷದ ಹಿರಿಯ ಮುಖಂಡರುಗಳಾದ ಕೆರೆಹಳ್ಳಿ ರವಿ, ಫ್ಯಾನ್ಸಿ ರಮೇಶ್, ಮಧುಸೂದನ್, ಜಿ. ಆರ್. ಗೋಪಾಲಕೃಷ್ಣ, ಲೇಖನ, ಅಮೀರ್ ಹಂಜಾ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Continue Reading

ವಿಜಯನಗರ

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Vijayanagara News: ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು. ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಥವಾ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಅಮರೇಶ್ ಜಿ.ಕೆ. ತಿಳಿಸಿದ್ದಾರೆ.

VISTARANEWS.COM


on

Vijayanagara News Distribute good quality sowing seeds and fertilizers says Tehsildar Amaresh G K
Koo

ಕೊಟ್ಟೂರು: ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗುತ್ತಿದ್ದು, ಕಳೆದ ಬಾರಿಯ ರೈತರ ನೋವನ್ನು ಮರೆಸಿ ಸ್ವಲ್ಪ ಸಂತಸವನ್ನು ತಂದಿದೆ. ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು ಎಂದು ತಹಸೀಲ್ದಾರ್‌ ಅಮರೇಶ್ ಜಿ.ಕೆ. (Vijayanagara News) ಸೂಚಿಸಿದರು.

ಪಟ್ಟಣದ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ನಡೆದ ಬೀಜ/ಗೊಬ್ಬರ ಮಾರಾಟಗಾರರ ಮತ್ತು ರೈತರ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು. ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಥವಾ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: IAS Exam : ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ

ವ್ಯಾಪಾರಸ್ಥರು ತಾವು ಸಂಗ್ರಹ ಮಾಡಿರುವ ಗೋದಾಮಿನ ಮುಂದೆ ತಮ್ಮ ಅಂಗಡಿಯ ಮಾಹಿತಿ ಫಲಕವನ್ನು ಹಾಕಬೇಕು. ಅಂಗಡಿಯಲ್ಲಿ ಪ್ರತಿದಿನ ಬೀಜ ಗೊಬ್ಬರದ ದಾಸ್ತಾನು ಹಾಗೂ ಧರಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ಯಾರಾದರೂ ಗೊಬ್ಬರ ಬೀಜಗಳನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು. ನಿಗದಿತ ಬೆಲೆಯಲ್ಲಿ ಬೀಜ/ರಸಗೊಬ್ಬರಗಳನ್ನು ಪೂರೈಸಿ ತಾಲೂಕಿನಲ್ಲಿ ಯಾವುದೇ ರೀತಿಯ ದೂರುಗಳು ಬಾರದಂತೆ ವ್ಯಾಪಾರವನ್ನು ಮಾಡುವಂತೆ ಸಲಹೆ ನೀಡಿದರು.

ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಎಂ.ಟಿ. ಮಾತನಾಡಿ, ಡಿಎಪಿ ಮತ್ತು ಯೂರಿಯಾ ಸಹಿತ ಎಲ್ಲ ರಸಗೊಬ್ಬರಗಳು ಸಾಕಷ್ಟು ಪೂರೈಕೆ ಇದ್ದು, ಯಾವುದೇ ಒಂದು ಕಂಪನಿ/ವಿಧದ ಬೀಜ/ರಸಗೊಬ್ಬರಗಳ ಮೇಲೆ ಅವಲಂಬನೆಯಾಗದೇ ಪರ್ಯಾಯ ಬೀಜ/ರಸಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು.

ಸಿಪಿಐ ವೆಂಕಟಸ್ವಾಮಿ ಮಾತನಾಡಿದರು.

ಇದನ್ನೂ ಒದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಎಎಚ್ಒ ಅಶ್ವಿನಿ ಡಿ., ಕೃಷಿ ಅಧಿಕಾರಿ (ತಾಂತ್ರಿಕ) ನೀಲಾನಾಯ್ಕ, ಕುಮಾರಸ್ವಾಮಿ ಕೆ., ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಶ್ರೀಧರಶೆಟ್ಟಿ, ರೈತ ಮುಖಂಡರಾದ ರಾಮಪ್ಪ, ಶ್ರೀಧರ, ಜಯಪ್ರಕಾಶನಾಯ್ಕ, ಸುರೇಶನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು. ಸಿ.ಮ. ಗುರುಬಸವರಾಜ ನಿರ್ವಹಿಸಿದರು.

Continue Reading

ಉತ್ತರ ಕನ್ನಡ

Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

Uttara Kannada News: ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯ ಶಿಕ್ಷಕರಿಗೆ ‘ಪ್ರಶಿಕ್ಷಣ ಭಾರತಿ ‘ ಮತ್ತು ‘ಮ್ಯಾಕ್ ಮಿಲನ್ ‘ ವತಿಯಿಂದ ಎರಡು ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

VISTARANEWS.COM


on

Vishwadarshan Education Institute President Hariprakash konemane spoke in Training Workshop for Vishwadarshan Central School Teachers at Yallapura
Koo

ಯಲ್ಲಾಪುರ: ಜ್ಞಾನವೇ ಶ್ರೇಷ್ಠವಾದ ಸಂಪತ್ತು ಎಂಬ ಧ್ಯೇಯದೊಂದಿಗೆ ಸದಾ ಸಂಸ್ಕಾರಯುತ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಮುಂಚೂಣಿಯಲ್ಲಿ ಸಾಗುತ್ತಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ (Uttara Kannada News) ತಿಳಿಸಿದರು.

ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯ ಶಿಕ್ಷಕರಿಗೆ ‘ಪ್ರಶಿಕ್ಷಣ ಭಾರತಿ ‘ ಮತ್ತು ‘ಮ್ಯಾಕ್ ಮಿಲನ್ ‘ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಪ್ರತಿವರ್ಷವೂ ಶಿಕ್ಷಕರ ಕಲಿಕಾ ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತದೆ ಎಂದರು.

ನಗರಗಳಲ್ಲಿ ದೊರೆಯುವ ಉತ್ತಮ ಗುಣಾತ್ಮಕ ಶಿಕ್ಷಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬ ಉದ್ದೇಶದೊಂದಿಗೆ ನಮ್ಮ ಶಿಕ್ಷಣ ಸಂಸ್ಥೆಯು ಸದಾ ಅಗತ್ಯ, ರಚನಾತ್ಮಕವಾದ ಚಟುವಟಿಕೆ ಮತ್ತು ಕಾರ್ಯಕ್ರಮಗಳೊಂದಿಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು.

ರಾಷ್ಟ್ರೋತ್ಥಾನ ಪರಿಷತ್‌ನ ‘ಪ್ರಶಿಕ್ಷಣ ಭಾರತಿ’ಯ ಸಹಯೋಗದಲ್ಲಿ ಪಂಚಮುಖಿ ಶಿಕ್ಷಣದ ಪ್ರಾಮುಖ್ಯತೆ, ಶಿಕ್ಷಕರು ತರಗತಿಗಳಲ್ಲಿ ಪಂಚಮುಖಿ ಶಿಕ್ಷಣದ ಅಂಶಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಅದನ್ನು ಕಲಿಸುವ ಪದ್ಧತಿಗಳ ಕುರಿತು ಒಂದು ದಿನದ ತರಬೇತಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಉಪನ್ಯಾಸಕ ಎಂ.ಎನ್. ಹೆಗಡೆ ಅವರು ಸಂತೋಷದಾಯಕ ತರಗತಿ ನಿರ್ವಹಣೆಯ ಕುರಿತು, ಉಪನ್ಯಾಸಕ ಡಾ. ಮಹೇಶ್ ಭಟ್ ಅವರು ಪಂಚಮುಖಿ ಶಿಕ್ಷಣ ಹಾಗೂ ಸನಾತನ ಶಿಕ್ಷಣ ಪದ್ಧತಿಯ ಕುರಿತು ಮತ್ತು ಕೀರ್ತಿವತಿ ಮಾತಾಜಿಯವರು ಕಲಿಕಾ ಚಟುವಟಿಕೆ ಆಧಾರಿತ ತರಗತಿ ನಿರ್ವಹಣೆಯ ಕುರಿತು ತರಬೇತಿ ನೀಡಿದರು.

ಎರಡನೇ ದಿನ ಬೆಂಗಳೂರಿನ ಮ್ಯಾಕ್ ಮಿಲನ್ ಸಂಸ್ಥೆಯಿಂದ ತರಗತಿ ನಿರ್ವಹಣೆಯಲ್ಲಿ ಶಿಕ್ಷಕರ ಪಾತ್ರ ಮತ್ತು ಮ್ಯಾಕ್ ಮಿಲನ್ ಸಂಸ್ಥೆಯ ಪಠ್ಯ ಪುಸ್ತಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಶಿಕ್ಷಕರು ತಮ್ಮ ಕಲಿಕಾ ಕೌಶಲ್ಯವನ್ನು ಹೆಚ್ಚಿಸಿಕೊಂಡು ತರಗತಿಯನ್ನು ಸುಗಮ ಗೊಳಿಸುವ ಕುರಿತು ತರಬೇತಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಚಾರ್ಯರಾದ ಸುಜಾತ ಹಿರೇಮಠ್ ಭಾಗವಹಿಸಿದ್ದರು.

ಇದನ್ನೂ ಓದಿ: Kantara Movie: `ಕಾಂತಾರ ಚಾಪ್ಟರ್‌ 1‌’ ಸಿನಿಮಾಗೆ ಖ್ಯಾತ ಮಾಲಿವುಡ್‌ ನಟ ಎಂಟ್ರಿ!

ನಿವೃತ್ತ ಉಪನ್ಯಾಸಕ ಎಂ.ಎನ್. ಹೆಗಡೆ, ಪ್ರಾಂಶುಪಾಲೆ ಮಹಾದೇವಿ ಭಟ್, ಪಿಯು ವಿಭಾಗದ ಪ್ರಾಚಾರ್ಯ ಡಿ.ಕೆ. ಗಾಂವ್ಕರ್, ಸಂಸ್ಥೆಯ ವ್ಯವಸ್ಥಾಪಕ ಅಜಯ್ ಭಾರತೀಯ, ಕೇಂದ್ರೀಯ ಶಾಲೆಯ ಉಪ ಪ್ರಾಂಶುಪಾಲೆ ಆಸ್ಮಾ ಶೇಖ್ ಹಾಗೂ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

Continue Reading
Advertisement
Star Fashion
ಫ್ಯಾಷನ್23 mins ago

Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Health Insurance
ಮನಿ-ಗೈಡ್37 mins ago

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

First successful TAVR surgery in the state at Fortis Hospital
ಬೆಂಗಳೂರು40 mins ago

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

MLA Belur Gopalakrishna election campaign for Congress candidates at ripponpete
ರಾಜಕೀಯ47 mins ago

MLC Election: ವಿಧಾನಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ಬೇಳೂರು ಗೋಪಾಲಕೃಷ್ಣ ಮತಯಾಚನೆ

Vijayanagara News Distribute good quality sowing seeds and fertilizers says Tehsildar Amaresh G K
ವಿಜಯನಗರ48 mins ago

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Vishwadarshan Education Institute President Hariprakash konemane spoke in Training Workshop for Vishwadarshan Central School Teachers at Yallapura
ಉತ್ತರ ಕನ್ನಡ50 mins ago

Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

indo Chaina border
ದೇಶ50 mins ago

Indo China Border : ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನ ನಿಯೋಜನೆ

Prevention Of Obesity
ಆರೋಗ್ಯ53 mins ago

Prevention Of Obesity: ಆರೋಗ್ಯಪೂರ್ಣ ಜೀರ್ಣಕ್ರಿಯೆ ಮೂಲಕ ಬೊಜ್ಜು ನಿವಾರಣೆ ಸಾಧ್ಯ

Karnataka Weather Forecast
ಮಳೆ55 mins ago

Karnataka Weather : ರಾಜ್ಯಾದ್ಯಂತ ಜೂನ್‌ ಮೊದಲ ವಾರ ಅಬ್ಬರಿಸಲಿದ್ಯಾ ಮಳೆ; ಕುಸಿಯಲಿದೆ ತಾಪಮಾನ

Union Minister Pralhad Joshi Statement
ಕರ್ನಾಟಕ1 hour ago

Pralhad Joshi: ಕನ್ನಡಿಗರ ತೆರಿಗೆಯಲ್ಲಿ ಕೇರಳಿಗರನ್ನು ಸಾಕುತ್ತಿದ್ದಾರೆ ಸಿದ್ದರಾಮಯ್ಯ: ಜೋಶಿ ಆರೋಪ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ6 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌