Vistara Kannada Sambhrama : ʼವಿಸ್ತಾರ ಕನ್ನಡ ಸಂಭ್ರಮʼ ಹಬ್ಬಕ್ಕೆ ಅದ್ಧೂರಿ ಪ್ರಾರಂಭ - Vistara News

ಕರ್ನಾಟಕ

Vistara Kannada Sambhrama : ʼವಿಸ್ತಾರ ಕನ್ನಡ ಸಂಭ್ರಮʼ ಹಬ್ಬಕ್ಕೆ ಅದ್ಧೂರಿ ಪ್ರಾರಂಭ

Vistara Kannada Sambhrama : ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುತ್ತಿರುವ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮಕ್ಕೆ ಬೆಳಗ್ಗೆ 9 ಗಂಟೆಗೆ ಖ್ಯಾತ ಹಾಡುಗಾರರಾದ ರಾಮಚಂದ್ರ ಹಡಪದ ಹಾಗೂ ಆರ್‌. ಕೆ. ಸ್ಪರ್ಶ ಅವರ ಗಾನಸುಧೆ ಮೂಲಕ ಚಾಲನೆ ದೊರೆಯಿತು.

VISTARANEWS.COM


on

Vistara Kannada Sambrama at ravindra kalakshetra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ”ಕ್ಕೆ (Vistara Kannada Sambhrama) “ಗೀತ ಬೆಳಗು” ಕಾರ್ಯಕ್ರಮದ ಮೂಲಕ ಅದ್ಧೂರಿ ಚಾಲನೆ ಸಿಕ್ಕಿದೆ.

Vistara Kannada Sambhrama programme
ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಮತ್ತು ಹಿರಿಯ ಕವಿ ಬಿ.ಆರ್.‌ ಲಕ್ಷ್ಮಣ ರಾವ್

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ನಡೆಯುತ್ತಿರುವ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮಕ್ಕೆ ಬೆಳಗ್ಗೆ 9 ಗಂಟೆಗೆ ಖ್ಯಾತ ಹಾಡುಗಾರರಾದ ರಾಮಚಂದ್ರ ಹಡಪದ ಹಾಗೂ ಆರ್‌. ಕೆ. ಸ್ಪರ್ಶ ಅವರ ಗಾನಸುಧೆ ಮೂಲಕ ಚಾಲನೆ ದೊರೆಯಿತು.

Vistara Kannada Sambhrama programme

ಭಕ್ತಿ ಗೀತೆ, ಭಾವ ಗೀತೆ, ಜನಪದ, ಸೂಫಿ ಹಾಡುಗಳ ಮಾಧುರ್ಯವನ್ನು ಸೇರಿದ್ದ ಸಭಿಕರಿಗೆ ಗಾಯಕದ್ವಯರು ಉಣಬಡಿಸಿದರು. ಈ ವೇಳೆ ಸಭಿಕರಿಂದ ಚಪ್ಪಾಳೆಗಳ ಮೂಲಕ ಪ್ರಶಂಸೆಗಳು ವ್ಯಕ್ತವಾದವು. ಅಲ್ಲದೆ, ಪ್ರತಿ ಹಾಡುಗಳೂ ಮನಮುಟ್ಟುವಂತೆ ಹಾಡಿದ ರಾಮಚಂದ್ರ ಹಡಪದ ಹಾಗೂ ಆರ್‌. ಕೆ. ಸ್ಪರ್ಶ ಅವರ ಗಾನ ಮಾಧುರ್ಯತೆಗೆ ಕೇಳುಗರು ತಲೆದೂಗಿದರು.

Vistara Kannada Sambhrama programme

ವಿಸ್ತಾರ ನ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕರಾಗಿರುವ ಕಿರಣ್‌ ಕುಮಾರ್‌ ಡಿ.ಕೆ. ಸೇರಿದಂತೆ ಹಲವು ಗಣ್ಯರು‌, ಕಲಾಸಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Vistara Kannada Sambhrama programme

ಕನ್ನಡ ಟಿವಿ ಇತಿಹಾಸದಲ್ಲೇ ಮೊದಲು

ಕನ್ನಡ ಟಿವಿ ವಾಹಿನಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಮತ್ತು ಸಾಹಿತ್ಯದ ಹಬ್ಬ ಆಯೋಜಿಸಿದ ಕೀರ್ತಿ ವಿಸ್ತಾರ ನ್ಯೂಸ್‌ಗೆ ಸಲ್ಲುತ್ತದೆ. 2022ರಲ್ಲಿ ನಡೆದ ಕಾರ್ಯಕ್ರಮದ ಅದ್ಧೂರಿ ಯಶಸ್ಸಿನ ಬಳಿಕ ಇದೀಗ ಎರಡನೇ ವರ್ಷ ʻವಿಸ್ತಾರ ಕನ್ನಡ ಸಂಭ್ರಮʼ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳು ರಂಜಿಸುತ್ತಿವೆ. ಇನ್ನು ವಿಸ್ತಾರ ನ್ಯೂಸ್‌ಗೆ ಒಂದು ವರ್ಷದ ತುಂಬುತ್ತಿರುವ ಹೊತ್ತಿನಲ್ಲಿ ಇದನ್ನು ʻವರ್ಷ ವೈಭವʼವಾಗಿಯೂ (Vistara Varsha Vaibhava) ಆಚರಿಸಲಾಗುತ್ತಿದೆ.

Vistara Kannada Sambhrama programme

ರಾತ್ರಿ 12 ಗಂಟೆವರೆಗೂ ಇದೆ ನಾನ್‌ಸ್ಟಾಪ್‌ ಮನರಂಜನೆ!

ಬೆಳಗ್ಗೆ 9 ಗಂಟೆಗೆ ಗೀತ ಬೆಳಕು ಮೂಲಕ ಆರಂಭವಾಗಿರುವ ವಿಸ್ತಾರ ಕನ್ನಡ ಸಂಭ್ರಮವು ರಾತ್ರಿ 12 ಗಂಟೆಯವರೆಗೂ ನಾನ್‌ಸ್ಟಾಪ್‌ ಮನರಂಜನೆ ನೀಡುತ್ತದೆ. ಹಾಡು, ಸಂಗೀತ, ಕನ್ನಡ ಸಾಹಿತ್ಯದ ಗೋಷ್ಠಿಗಳು, ನಟ-ನಟಿಯರು, ಕಿರುತೆರೆ ಕಲಾವಿದರ ಜತೆ ನೇರ ಮುಕ್ತ ಮಾತುಕತೆ, ಜಾದೂ ಪ್ರದರ್ಶನ, ಮಕ್ಕಳ ನಾಟಕ, ಯಕ್ಷಗಾನ ವೈಭವಗಳೊಂದಿಗೆ ಮೇಳೈಸಲಿದೆ.

Vistara Kannada Sambhrama programme

ಈ ಸಂಭ್ರಮದ ಲೋಕದಲ್ಲಿ ಏನುಂಟು ಏನಿಲ್ಲ?

ವಿಸ್ತಾರ ಕನ್ನಡ ಸಂಭ್ರಮದಲ್ಲಿ ಸಂಗೀತೋತ್ಸವವಿದೆ, ನಾಟಕೋತ್ಸವವಿದೆ. ಆಹಾರೋತ್ಸವದ ಸವಿಯಿದೆ, ಪುಸ್ತಕೋತ್ಸವದ ಸೊಬಗಿದೆ. ಯಕ್ಷ ಗಾನ ಗಂಧರ್ವರೆಲ್ಲ ಧರೆಗಿಳಿವ ಸಡಗರವಿದೆ. ನಾಡಿನ ಯೋಗಕ್ಷೇಮದ ರೂವಾರಿಗಳಾದ ಜನಪ್ರತಿನಿಧಿಗಳು, ನಿಮ್ಮ ನೆಚ್ಚಿನ ಚಂದನವನದ ಚಂದದ ತಾರೆಯರು, ಕಿರುತೆರೆಯ ನಿಮ್ಮ ಇಷ್ಟದ ನಟ-ನಟಿಯರು ಇಲ್ಲಿ ಸೇರಲಿದ್ದಾರೆ. ಕನ್ನಡಕ್ಕೆ ದನಿಯಾದ ಗಾಯಕರು, ಸಂಗೀತಗಾರರು, ಸ್ಟಾಂಡಪ್‌ ಕಾಮಿಡಿಯನ್‌ಗಳು, ಯಕ್ಷಿಣಿ ಜಾದೂಗಾರರು, ಎಲ್ಲರೂ ನಿಮ್ಮನ್ನು ಒಂದೇ ಕಡೆ ಎದುರ್ಗೊಳ್ಳಲಿದ್ದಾರೆ. ಇದು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಖುಷಿಪಡಬಹುದಾದ ಒಂದು ಪರಿಶುದ್ಧ ಫ್ಯಾಮಿಲಿ ಪ್ಯಾಕೇಜ್‌ ಕಾರ್ಯಕ್ರಮವಾಗಿ ಕಳೆಗಟ್ಟಲಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ.

Vistara Kannada Sambhrama programme

ಮುಖ್ಯಮಂತ್ರಿಗಳಿಂದ ವಿಸ್ತಾರ ಕನ್ನಡ ಸಂಭ್ರಮಕ್ಕೆ ಚಾಲನೆ

ವಿಸ್ತಾರ ಕನ್ನಡ ಸಂಭ್ರಮ- ವಿಸ್ತಾರ ನ್ಯೂಸ್‌ ವರ್ಷ ವೈಭವ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಹಕಾರ ಸಚಿವ ಕೆ.ಎನ್‌ ರಾಜಣ್ಣ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರು ಸೆಂಟ್ರಲ್‌ ಸಂಸದರಾದ ಪಿ.ಸಿ. ಮೋಹನ್‌, ಶಾಸಕರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಕನ್ನಡ ವಿಸ್ತರಿಸುತ್ತಿರುವ ಹೊಸ ದಿಕ್ಕುಗಳು: ವಿಚಾರಗೋಷ್ಠಿ

Vistara Kannada Sambhrama kannada Goshti

ವಿಷಯ ಮತ್ತು ಭಾಗವಹಿಸುವ ವಿಷಯ ತಜ್ಞರು

  1. ಕನ್ನಡ ಓದಿನ ಹೊಸ ಮೀಡಿಯಂ: ವಸಂತ್ ಶೆಟ್ಟಿ ಮೈಲಾಂಗ್ ಸಂಸ್ಥಾಪಕರು
  2. ಮುಕ್ತ ಡಬ್ಬಿಂಗ್‌: ಕನ್ನಡಕ್ಕೆ ಲಾಭ ಆಯ್ತಾ? ನಷ್ಟ ಆಯ್ತಾ?: ಹೃದಯಶಿವ ಚಿತ್ರ ಸಾಹಿತಿ
  3. ಮಾತೃ ಭಾಷೆಯಲ್ಲೇ ಏಕೆ ಕಲಿಯಬೇಕು?: ವೀಣಾ ರಾವ್​
    ಸಂಸ್ಥಾಪಕರು, ಭಾಷಾ ವಿದ್ಯಾ ಕನ್ನಡ ಕಲಿಕಾ ಕೇಂದ್ರ
  4. ನಿತ್ಯದ ಬರವಣಿಗೆಯಾಗಿ ಕನ್ನಡ: ಶ್ರೀಧರ್‌​ ನಾಗರಾಜ್​ ‘ಜಸ್ಟ್​ ಕನ್ನಡ’ ರೂವಾರಿ
  5. ಅಪಾರ್ಟ್‌ಮೆಂಟ್ ಗಳಲ್ಲಿ ಕನ್ನಡಾಭಿಮಾನ: ವಿಕ್ರಂ ರೈ ಕಾರ್ಯದರ್ಶಿ,
    ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್
  6. ನಿರ್ವಹಣೆ: ಶ್ರೀ ಎನ್‌. ರವಿಶಂಕರ್‌ ಸಿಇಒ, ಏಮ್ಸ್​ ಹೈ ಕನ್ಸಲ್ಟಿಂಗ್

ವಾಯ್ಸ್‌ ಆಫ್‌ ಯಂಗ್‌ ಕನ್ನಡಿಗ

ದನಿ ಬೇರೆ, ಭಾಷೆ ಒಂದೇ!: ವಿಶಿಷ್ಟ ಸಂವಾದ

Vistara Kannada Sambhrama kannada Goshti2

ಸಂವಾದದಲ್ಲಿ ಪಾಲ್ಗೊಳ್ಳುವವರು
ಚಂದನ್​ ಶೆಟ್ಟಿ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಕನ್ನಡ ರ‍್ಯಾಪರ್​
ನಿರಂಜನ್​ ದೇಶಪಾಂಡೆ ಹೆಸರಾಂತ ನಿರೂಪಕರು
ನೇತ್ರಾ ಖ್ಯಾತ ಆರ್​ ಜೆ
ಸಿರಿ ಜನಪ್ರಿಯ ನಟಿ-ನಿರೂಪಕಿ

ಮಧ್ಯಾಹ್ನ 3.00 – 4.00: ಭಾಗ್ಯಲಕ್ಷ್ಮೀ & ಟೀಮ್‌ ಬರ್ತಾರಮ್ಮ!

Bhagya lakshmi team

ಕಲರ್ಸ್​ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಟೀಮ್ ಜತೆ ಆತ್ಮೀಯ ಸಂವಾದ

ಸಂಜೆ 4.30 – 5.30: ಮಕ್ಕಳ ನಾಟಕ

ಮೈಸೂರಿನ ಖ್ಯಾತ ‘ಅರಿವು’ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಟಕ: ವಿಗಡ ವಿಕ್ರಮರಾಯ
ರಚನೆ: ಸಂಸ, ನಿರ್ದೇಶನ: ಯತೀಶ್ ಎನ್. ಕೊಳ್ಳೇಗಾಲ

Vistara Kannada Sambhrama Drama

ಸಂಜೆ 6.00- 7.30: ಸಮಾರೋಪ ಸಮಾರಂಭ

ರಾತ್ರಿ 8.00- 9.30: ಲೈವ್‌ ಮ್ಯೂಸಿಕ್‌ ಧಮಾಕಾ

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಶ್ರೀ ಗುರುಕಿರಣ್‌ ಮತ್ತು ತಂಡದಿಂದ ಸೂಪರ್‌ ಹಿಟ್‌ ಹಾಡುಗಳು (GURUKIRAN Live in Concert)

Gurukiran Vistara Kannada sambhrama

ರಾತ್ರಿ 10ರಿಂದ 12: ಯಕ್ಷಗಾನ ಪ್ರದರ್ಶನ

ಪ್ರಸಂಗ: ಕವಿರತ್ನ ಕಾಳಿದಾಸ
ಹೇರಂಜಾಲು ಯಕ್ಷಬಳಗ ಹಾಗೂ ಟೀಮ್ ಉತ್ಸಾಹಿ, ಬೆಂಗಳೂರು ತಂಡದಿಂದ
ಭಾಗವತರು: ಹೇರಂಜಾಲು ಗೋಪಾಲ ಗಾಣಿಗ, ಪಲ್ಲವ ಗಾಣಿಗ, ಜತೆಗೆ, ಕರಾವಳಿಯ ಪ್ರಖ್ಯಾತ ಯಕ್ಷಗಾನ ಕಲಾವಿದರು.

Yakshagana Vistara Kannada Sambhrama

ಸಂಸ ಬಯಲು ರಂಗಮಂದಿರದಲ್ಲಿ ಹಲವು ಕಾರ್ಯಕ್ರಮ

ಪ್ರಧಾನ ವೇದಿಕೆಯ ಜತೆ ಜತೆಯಲ್ಲೇ ಸಂಸ ಬಯಲು ರಂಗ ಮಂದಿರದಲ್ಲೂ ಕಾರ್ಯಕ್ರಮಗಳು ನಡೆಯಲಿವೆ.

1. ಸಂಜೆ 4.00ರಿಂದ ಚಿಣ್ಣರಿಗಾಗಿ ಜಾದೂ: ಆಕಾಶ್‌ ಗುಪ್ತಾ ಅವರಿಂದ

2. ಸಂಜೆ 5ರಿಂದ 6: ಸ್ಟ್ಯಾಂಡಪ್ ಕಾಮಿಡಿ: ಖ್ಯಾತ ಹಾಸ್ಯ ಕಲಾವಿದ ಕಾರ್ತಿಕ್‌ ಪತ್ತಾರ್ ಹಾಸ್ಯ ಕಾರಂಜಿ

3. ಸಂಜೆ 6ರಿಂದ 6.30: ಸೀರೆ ಸೊಬಗು: ಸೀರೆಯಲ್ಲಿ ನೋಡಿ, ಲಲನೆಯರ ಮೋಡಿ!
ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್‌ ಪ್ರತಿಭಾ ಸಂಶಿಮಠ ತಂಡದಿಂದ ನಾಡಿನ ಪಾರಂಪರಿಕ ಉಡುಗೆ ಬಿಂಬಿಸುವ ರಾಂಪ್ ವಾಕ್

ಹೊರಾಂಗಣದಲ್ಲಿ ಪುಸ್ತಕ ಮೇಳ: 20%ವರೆಗೆ ರಿಯಾಯಿತಿ

ರವೀಂದ್ರ ಕಲಾಕ್ಷೇತ್ರದ ಹೊರಾವರಣದಲ್ಲಿ ಅಪೂರ್ವ ಪುಸ್ತಕ ಮೇಳ ನಡೆಯಲಿದ್ದು, 20ಕ್ಕೂ ಹೆಚ್ಚು ಜನಪ್ರಿಯ ಬುಕ್‌ ಸ್ಟಾಲ್‌ಗಳು ಭಾಗಿಯಾಗಲಿವೆ. ಸಾವಿರಾರು ಪುಸ್ತಕಗಳು ಒಂದೇ ಕಡೆ ಲಭ್ಯವಾಗಲಿದೆ. ಪುಸ್ತಕಗಳಿಗೆ ಶೇ.20ರವರೆಗೆ ವಿಶೇಷ ರಿಯಾಯಿತಿ ಇರಲಿದೆ.

ಭಾಗವಹಿಸಲಿರುವ ಪ್ರಕಾಶನ ಸಂಸ್ಥೆಗಳು

ಸಪ್ನ ಬುಕ್‌ ಹೌಸ್‌, ನವ ಕರ್ನಾಟಕ, ಅಂಕಿತ, ವಿಸ್ತಾರ ಪ್ರಕಾಶನ, ಸ್ನೇಹ ಬುಕ್‌ ಹೌಸ್‌, ಛಂದ ಪುಸ್ತಕ, ಸಾವಣ್ಣ ಪ್ರಕಾಶನ, ವೀರಲೋಕ, ಸಮನ್ವಿತ, ಸಾಹಿತ್ಯ ಪ್ರಕಾಶನ, ಸಾಹಿತ್ಯ ಲೋಕ, ವಿಕ್ರಂ ಪ್ರಕಾಶನ, ಹರಿವು ಬುಕ್ಸ್‌, ಅಯೋಧ್ಯ ಪ್ರಕಾಶನ, ಅಭಿನವ, ಅಮೂಲ್ಯ ಪುಸ್ತಕ, ಮೈತ್ರಿ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನ, ಕದಂಬ ಪ್ರಕಾಶನ

ಬಿಡುಗಡೆಯಾಗಲಿರುವ ವಿಸ್ತಾರ ಪ್ರಕಾಶನದ ನೂತನ ಪುಸ್ತಕಗಳು

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಸ್ತಾರ ಪ್ರಕಾಶನದ ನಾಲ್ಕು ಪುಸ್ತಕಗಳು ಬಿಡುಗಡೆಯಾಗಲಿವೆ.
1. ಕುಣಿಯೇ ಜೀವ : ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಹಯೋಗದಲ್ಲಿ ನಡೆಸಿದ್ದ ವಿಸ್ತಾರ ನ್ಯೂಸ್
ಯುಗಾದಿ ಕಥಾಸ್ಪರ್ಧೆ 2023ರ ಬಹುಮಾನಿತ ಕಥೆಗಳ ಸಂಕಲನ
2. ನಮ್ಮದೇ ಕಥೆಗಳು: ಲೇಖಕರು: ಕೃಷ್ಣ ಭಟ್ ಅಳದಂಗಡಿ
3.ರಾಜಮಾರ್ಗ: ಪ್ರೇರಣಾದಾಯಕ ಕಥೆಗಳು ಲೇಖಕರು: ರಾಜೇಂದ್ರ ಭಟ್ ಕೆ
4. ಅಮ್ಮ ಹೇಳುವ ಚಂದದ ಕಥೆಗಳು: ಲೇಖಕರು: ಅಲಕಾ ಕಟ್ಟೆಮನೆ

ಮಕ್ಕಳಿಗೆ ನಾನಾ ಮನರಂಜನೆಗಳ ಮಹಾಲೋಕ

ಯುವಕ ಸಂಘ, ಸಾಂಸ್ಕೃತಿಕ ಸಂಘಟನೆಗಳಿಂದ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ. ವಿಶೇಷ ಸ್ಪರ್ಧೆ ಮತ್ತು ಬಹುಮಾನಗಳಿವೆ. ಪುಟ್ಟ ಮಕ್ಕಳಿಗೆ ಆಟವಾಡಲು ಆಕರ್ಷಕ ಸಾಧನಗಳು ಇರಲಿವೆ.

ಹೊಟ್ಟೆ ತಣ್ಣಗಾಗಿಸುವ ಸವಿ ಸಂಭ್ರಮ

Vistara Kannada Sambharama foods

ವಿಸ್ತಾರ ಸಂಭ್ರಮದಲ್ಲಿ ಮೆದುಳಿಗೆ ಮಾತ್ರವಲ್ಲ, ಹೊಟ್ಟೆಯನ್ನೂ ತಣ್ಣಗೆ ಮಾಡುವ ವಿಶೇಷ ಆಹಾರ ಖಾದ್ಯಗಳ ಲೋಕವಿದೆ.
 ಬಾಯಿಯಲ್ಲಿ ನೀರೂರಿಸುವ ರಾಜ್ಯದ ನಾನಾ ಭಾಗಗಳ ಆಹಾರ ಮಳಿಗೆಗಳು
 ಮೈಸೂರು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ವಿಶೇಷ ತಿಂಡಿಗಳು
 ಸಾವಯವ ಆಹಾರ ಪದಾರ್ಥಗಳು, ದೇಸಿ ಉತ್ಪನ್ನಗಳ ವಿಶೇಷ ಮಳಿಗೆಗಳು ಇರಲಿವೆ.

ಜಾನಪದ ಕಲಾ ತಂಡದ ಪ್ರದರ್ಶನ: ಡಿಜಿಟಲ್ 3ಡಿ ಶೋ ಇರಲಿದೆ

ಸ್ಥಳದಲ್ಲೇ ನಿಮ್ಮ ಚಿತ್ರ ಬಿಡಿಸುತ್ತಾರೆ ಐವರು ಕಲಾವಿದರು

ಖ್ಯಾತ ಕಲಾವಿದರಾದ ಬಿ.ಜಿ. ಗುಜ್ಜಾರಪ್ಪ, ಜಿ.ಎಸ್‌. ರಂಗನಾಥ್‌, ರಘುಪತಿ ಶೃಂಗೇರಿ, ವಿ.ಆರ್‌.ಸಿ. ಶೇಖರ್‌, ರವಿ ಪೂಜಾರಿ ಅವರು ಕೆಲವೇ ನಿಮಿಷದಲ್ಲಿ ನಿಮ್ಮ ಪೆನ್ಸಿಲ್‌ ಸ್ಕೆಚ್‌ ರೆಡಿ ಮಾಡಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

R Ashok: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ನಡೆದ, ತುರ್ತು ಪರಿಸ್ಥಿತಿ ಸಂಬಂಧ ರಾಹುಲ್‌ ಗಾಂಧಿ ಕ್ಷಮೆ ಕೋರಬೇಕೆಂಬ ಆಗ್ರಹದ ಪೋಸ್ಟರ್‌ ಅಭಿಯಾನದಲ್ಲಿ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ ಕಾಂಗ್ರೆಸ್‌ ಜನರ ಕ್ಷಮೆ ಕೇಳಬೇಕು. ರಾಹುಲ್‌ ಗಾಂಧಿ ರಾಮ್‌ಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

VISTARANEWS.COM


on

R Ashok demands that the Congress apologize for imposing emergency
Koo

ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ ಕಾಂಗ್ರೆಸ್‌ ಜನರ ಕ್ಷಮೆ ಕೇಳಬೇಕು. ರಾಹುಲ್‌ ಗಾಂಧಿ ರಾಮ್‌ಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರ ಕ್ಷಮೆ ಕೇಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆಗ್ರಹಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ನಡೆದ, ತುರ್ತು ಪರಿಸ್ಥಿತಿ ಸಂಬಂಧ ರಾಹುಲ್‌ ಗಾಂಧಿ ಕ್ಷಮೆ ಕೋರಬೇಕೆಂಬ ಆಗ್ರಹದ ಪೋಸ್ಟರ್‌ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ. ಬಿ. ಆರ್. ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ತೋರಿದ ಕಾಂಗ್ರೆಸ್‌ ಪಕ್ಷ ಹಾಗೂ ಇಂದಿರಾ ಗಾಂಧಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನು ಕಪಿಮುಷ್ಟಿಗೆ ತೆಗೆದುಕೊಂಡು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಎಲ್‌.ಕೆ.ಅಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಮೊದಲಾದ ಘಟಾನುಘಟಿ ನಾಯಕರನ್ನು ಜೈಲಿಗೆ ತಳ್ಳಿದ್ದರು ಎಂದು ಆರೋಪಿಸಿದರು.

ಇದನ್ನೂ ಓದಿ: Job Alert: ಗಮನಿಸಿ; GTTCಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ; ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

ಆಗ ನಾನು ವಿವಿ ಪುರ ಕಾಲೇಜಿನಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಯಶವಂತಪುರ ಸರ್ಕಲ್‌ನಲ್ಲಿ ಆರ್‌ಎಸ್‌ಎಸ್‌ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಇಂದಿರಾಗಾಂಧಿ ವಿರುದ್ಧ ಎರಡು ವಾಕ್ಯ ಘೋಷಣೆ ಕೂಗಿದ್ದೆ. ಆಗ ಯಶವಂತಪುರ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದ್ದರು. ನಮ್ಮ ಇಡೀ ಕುಟುಂಬದಲ್ಲಿ ಆರ್‌ಎಸ್‌ಎಸ್‌ನವರೇ ಇದ್ದರು. ಅವರು ಕೂಡ ತಲೆಮರೆಸಿಕೊಳ್ಳಬೇಕಾಯಿತು. ನಾನು ಒಂದು ತಿಂಗಳು ಸ್ವಾತಂತ್ರ್ಯ ಉದ್ಯಾನದ ಜೈಲಿನಲ್ಲಿದ್ದೆ. 200 ಜನರಿಗೆ ಒಂದು ಶೌಚಾಲಯವಿತ್ತು. ಊಟ ಕೂಡ ಕೊಡುತ್ತಿರಲಿಲ್ಲ. ಆ ಕಷ್ಟಗಳು ಈಗಲೂ ನೆನಪಿನಲ್ಲಿದೆ. ಜನರಿಗೆ ಅಷ್ಟು ಕಿರುಕುಳ ನೀಡಿದ ಕಾಂಗ್ರೆಸ್‌ ಈಗ ಅಧಿಕಾರದಲ್ಲಿದೆ ಎಂದರು.

ಸಂವಿಧಾನಕ್ಕೆ ಅಪಮಾನ ಮಾಡಿದ ಕಾಂಗ್ರೆಸ್‌ ಈಗ ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಆದ್ದರಿಂದ ರಾಹುಲ್‌ ಗಾಂಧಿ ಅವರಿಗೆ ಮಾನ, ಮರ್ಯಾದೆ ಇದ್ದರೆ ರಾಮ್‌ಲೀಲಾ ಮೈದಾನಕ್ಕೆ ಬಂದು ಇಡೀ ದೇಶದ ಜನರ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕು. ಸಂವಿಧಾನಕ್ಕೆ ಅಪಚಾರ ಮಾಡಿದ ದೇಶ ವಿರೋಧಿ ಕಾಂಗ್ರೆಸ್‌ ಪಕ್ಷ ಕ್ಷಮೆ ಕೇಳಬೇಕು. ಸಂವಿಧಾನ ಬದಲಾವಣೆ ಮಾಡಲಿದ್ದೇವೆ ಎಂದು ಬಿಜೆಪಿಯ ಮೇಲೆ ಆರೋಪ ಮಾಡುತ್ತಾರೆ. ಆದರೆ ದ್ರೋಹ ಬಗೆದಿದ್ದು ಕಾಂಗ್ರೆಸ್‌ ಎಂದು ದೂರಿದರು.

ಇದನ್ನೂ ಓದಿ: Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

ಸಂವಿಧಾನ ನಮಗೆ ಭಗವದ್ಗೀತೆಗೆ ಸಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಸಂವಿಧಾನವನ್ನು ಕಾಂಗ್ರೆಸ್‌ ಬದಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Continue Reading

ಪ್ರಮುಖ ಸುದ್ದಿ

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

LKG UKG in Anganwadis: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ.

VISTARANEWS.COM


on

LKG UKG in Anganwadis
Koo

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ (LKG UKG in Anganwadis) ಆರಂಭಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ ಇನ್ನುಳಿದ ಭಾಗದಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಶಿಕ್ಷಣದ ಸಚಿವ ಮಧು ಬಂಗಾರಪ್ಪ‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಸೋಮವಾರ ಸಭೆ ನಡೆಸಿದ್ದಾರೆ.

ಪೂರ್ವ ಪ್ರಾಥಮಿಕ (LKG, UKG) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿ ರಚಿಸಲು ಸಿಎಂ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದು, ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ತೀರ್ಮಾನ ಮಾಡಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ನೀಡುವು ನಮ್ಮ ಉದ್ದೇಶವಾಗಿದೆ,. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಇಲಾಖೆಯ ಮೂಲಕವೇ ಸಮವಸ್ತ್ರ, ಪುಸ್ತಕ, ಬ್ಯಾಗ್ ನೀಡಲು ತೀರ್ಮಾನ ಮಾಡಲಾಗಿದೆ. ಜತೆಗೆ ಶಾಲೆಗಳ ಮಾದರಿಯಲ್ಲೆ ವರ್ಗಾವಣೆ ಪತ್ರ (ಟಿಸಿ) ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸೂಚನೆ: ಲಕ್ಷ್ಮಿ ಹೆಬ್ಬಾಳ್ಕರ್‌

ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದು, ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಇನ್ನುಳಿದಂತೆ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೆ ಪೂರ್ವ ಪ್ರಾಥಮಿಕ (LKG, UKG) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೆ ದೊರೆಯಬೇಕೆಂಬ ಕಳಕಳಿಯಿಂದ ಶಿಕ್ಷಣ ಇಲಾಖೆಯೂ ಸರ್ಕಾರಿ ಮಾಂಟೆಸರಿ ಆರಂಭಿಸಲು ಮುಂದಾಗಿದ್ದು, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ವಿರೋಧ ವ್ಯಕ್ತವಾಗಿದೆ. ಈ‌ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಗೊಳಿಸಿ, ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಲಿಸುವ ಚಿಂತನೆ ಇದೆ ಎಂದು ಹೇಳಿದರು.

ಇದನ್ನೂ ಓದಿ | LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಸಂಬಂಧ ಈಗಾಗಲೇ ಅಂಗನವಾಡಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಾಗಿದೆ. ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರ ಪೈಕಿ 9 ಸಾವಿರ ಮಂದಿ ಪದವಿ ಪಡೆದವರಾಗಿದ್ದರೆ, ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೀಗಾಗಿ, ಗುಣಮಟ್ಟದ ಶಿಕ್ಷಣ ನೀಡಿಕೆಗೆ ಯಾವುದೇ ಸಮಸ್ಯೆ ಆಗದು ಎಂದು ಹೇಳಿದ ಸಚಿವರು, ಯಾರನ್ನೂ ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Continue Reading

ಕ್ರೈಂ

Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

Tumkur Shoot out : 15ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿಸಲು ಹೋದಾಗ ಪೊಲೀಸರ ಮೇಲೆ ಬಿಯರ್‌ ಬಾಟೆಲ್‌ ಎಸೆದು ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

VISTARANEWS.COM


on

By

tumkur Shoot out
ಆರೋಪಿ ರಿಜ್ವಾನ್
Koo

ತುಮಕೂರು: ತುಮಕೂರಿನಲ್ಲಿ ಪೊಲೀಸ್ ತುಪಾಕಿ (Tumkur Shoot out) ಸದ್ದು ಮಾಡಿದೆ. ನಿರಂತರವಾಗಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆಂಧ್ರದ ಹಿಂದೂಪುರ ಮೂಲದ ರಿಜ್ವಾನ್ ಎಂಬಾತನಿಗೆ ಗುಂಡೇಟು ಬಿದ್ದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಈಜೀಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ.

ಆರೋಪಿ ರಿಜ್ವಾನ್‌ ಒಟ್ಟು 15ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳೆದ ಒಂದು ವಾರದ ಹಿಂದೆ ಎ1 ಆರೋಪಿ ಚಿನ್ನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ (ಜೂ.24) ಖಚಿತ ಮಾಹಿತಿ ಮೇರೆಗೆ ಎ2 ಆರೋಪಿ ರಿಜ್ವಾನ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದರು.

ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ, ಸಿಪಿಐ ಹನುನಂತರಾಯಪ್ಪ, ಪಿಎಸ್‌ಐ ಶ್ರೀನಿವಾಸ್, ದಾದಪೀರ್, ಹಾಗೂ ಪೊಲೀಸ್ ಸಿಬ್ಬಂದಿ ರಮೇಶ್ ತಂಡ ತೆರಳಿತ್ತು. ಹೊಸಪೇಟೆಯಿಂದ ಪೊಲೀಸ್ ಜೀಪ್‌ನಲ್ಲಿ ಮಧುಗಿರಿಗೆ ಕರೆತರುತ್ತಿದ್ದಾಗ, ಬಹಿರ್ದೆಸೆಗೆ ಹೋಗುವುದಾಗಿ ಈಜಿಹಳ್ಳಿ ಕ್ರಾಸ್ ಬಳಿ ಇಳಿದಿದ್ದ. ಈ ವೇಳೆ ಪೊಲೀಸ್ ಪೇದೆ ರಮೇಶ್ ಮೇಲೆ ರಿಹ್ವಾನ್‌ ಬಿಯರ್ ಬಾಟಲ್‌ ಎಸೆದು ಹಲ್ಲೆ ನಡೆಸಿ, ಪರಾರಿ ಆಗಲು ಯತ್ನಿಸಿದ್ದ. ಪೊಲೀಸರು ಶರಣಾಗುವಂತೆ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಕರೆ ತಂದಿದ್ದಾರೆ.

tumkur Shoot out
ಗಾಯಾಳು ಪೊಲೀಸ್‌ ಪೇದೆ ರಮೇಶ್‌

ಇದನ್ನೂ ಓದಿ: Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

ಬಿಯರ್‌ ಬಾಟೆಲ್‌ನಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ರಮೇಶ್‌ಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಿಜ್ವಾನ್‌ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನೂ ರಿಜ್ವಾನ್‌ ಮೇಲೆ ಮಧುಗಿರಿ 3, ಮಿಡಗೇಶಿ 4, ಬಡವನಹಳ್ಳಿ 2, ಕೊರಟಗೆರೆ 1, ಕೊಡಿಗೇನಹಳ್ಳಿ 2 ಹಾಗೂ ಮಡಕಶಿರಾ 1, ಪಟ್ಟನಾಯಕನಹಳ್ಳಿ 2, ಗೌರಿಬಿದನೂರು 1 ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿವೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ ಎರಡು ತಿಂಗಳಿಂದ ಸುಮಾರು 18 ಸರಗಳ್ಳತನ ಆಗಿತ್ತು. ಹಳ್ಳಿಗಳಿಗೆ ಹೋಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು. ಮಧುಗಿರಿ ಡಿವೈಎಸ್‌ಪಿ ನೇತೃತ್ವದಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ತಂಡ ರಚನೆ ಮಾಡಲಾಗಿತ್ತು. A1 ಆರೋಪಿ ಚಿನ್ನು ಎಂಬಾತನನ್ನು ಮೊದಲಿಗೆ ಬಂಧಿಸಲಾಗಿತ್ತು. A2 ಆರೋಪಿ ರಿಜ್ವಾನ್ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಹೊಸಕೋಟೆಯಿಂದ ಆರೋಪಿ ರಿಜ್ವಾನ್‌ನನ್ನು ಬಂಧಿಸಿ ಕರೆತರುವಾಗ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಈಜಿಹಳ್ಳಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬಿಯರ್ ಬಾಟಲ್‌ನಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾ‌ನೆ. ಆಗ ಮಧುಗಿರಿ ಸಿಪಿಐ ಹನುಮಂತರಾಯಪ್ಪ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡು ಹೊಡೆದು ಬಂಧಿಸಿದ್ದಾರೆಂದು ಮಾಹಿತಿ ಬಂದಿದೆ. ಪೊಲೀಸ್ ಸಿಬ್ಬಂದಿಯ ಎಡಗೈಗೆ ಗಾಯ ಆಗಿದ್ದು, ಮಧುಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಆರೋಪಿಗಳು ಕದ್ದ ಚಿನ್ನವನ್ನು ರಿಕವರಿ ಮಾಡಲಾಗಿದೆ. 500 ಗ್ರಾಂ ಚಿನ್ನವನ್ನ ರಿಕವರಿ ಮಾಡಲಾಗಿದೆ ಎಂದರು.

ಕೊಡಗಿನಲ್ಲಿ ಮತ್ತೆ ಮಾರ್ಧನಿದ ಗುಂಡಿನ ಸದ್ದು

ಕೊಡಗಿನ ಕುಶಾಲನಗರಲ್ಲಿ ತಡರಾತ್ರಿ 12 ಗಂಟೆಗೆ ಗುಂಡಿನ ಶಬ್ಧ ಕೇಳಿ ಬಂದಿದೆ. ಅನುದೀಪ್ ( ಡುಮ್ಮಿ) ಮತ್ತು ಶಶಿಕುಮಾರ್ ಗೌಡ (ಎಂಎಲ್ಎ ಶಶಿ) ಇವರಿಬ್ಬರು ಸ್ನೇಹಿತರಾಗಿದ್ದಾರೆ. ತಡರಾತ್ರಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಈ ವೇಳೆ ಅನುದೀಪ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಶಶಿ ಕಾಲಿಗೆ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಶಾಲನಗರದ ಚೌಡೇಶ್ವರಿ ಬಡಾವಣೆ ಗುಮ್ಮನಕೊಲ್ಲಿಯಲ್ಲಿ ಘಟನೆ ನಡೆದಿದೆ. ಕುಶಾಲನಗರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

LKG UKG In Govt Schools: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ‌ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.

VISTARANEWS.COM


on

LKG UKG In Govt Schools
Koo

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ (LKG UKG In Govt Schools) ಪ್ರಾರಂಭ ವಿರೋಧಿಸಿ, ಗೌರವ ಧನ ಹೆಚ್ಚಳ ಹಾಗೂ ಗುಣಮಟ್ಟದ ಆಹಾರ ಪೂರೈಕೆ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನಿಂದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಾಗುತ್ತಿದೆ. ಹೀಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ‌ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳ ಬಗ್ಗೆ ಸಿಎಂಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಬೇಡಿಕೆಗಳ ಪೈಕಿ ಕೆಲವೊಂದನ್ನು ಪರಿಶೀಲಿಸಿ ಪರಿಗಣಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುಮೋದನೆಗೊಂಡಂತೆ ರಾಜ್ಯದ ಆಯ್ದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (govt pre-schools) ಪ್ರಾರಂಭಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿತ್ತು. ಆದರೆ, ಸರ್ಕಾರದ ಈ ನಿರ್ಧಾರದ ಹಿಂದೆ, ಅಂಗನವಾಡಿಗಳನ್ನು ಮುಚ್ಚುವ ಹುನ್ನಾರವಿದೆ. ಎಲ್‌ಕೆಜಿ, ಯುಕೆಜಿ ಆರಂಭಿಸಿದರೆ ಅಂಗನವಾಡಿಗಳಲ್ಲೇ ಆರಂಭಿಸಬೇಕು. ಇಲ್ಲದಿದ್ದರೆ ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂಬುವುದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒತ್ತಾಯವಾಗಿದೆ.

ತಜ್ಞರ ಕಮಿಟಿ ರಚನೆ ಮಾಡಲು ಚರ್ಚೆ: ಲಕ್ಷ್ಮಿ ಹೆಬ್ಬಾಳ್ಕರ್‌

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಲ್‌ಕೆಜಿ, ಯುಕೆಜಿ ಪ್ರಾರಂಭಕ್ಕೆ ಸರ್ಕಾರದಿಂದ ಚಿಂತನೆ ಮಾಡಲಾಗಿದೆ. ಆದರೆ, ಈ ನಿರ್ಧಾರ ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಕಳಕಳಿ ಶಿಕ್ಷಣ ಇಲಾಖೆಗೆ ಇದೆ. ಆದರೆ ಅಂಗನವಾಡಿಯವರು ವಿರುದ್ಧವಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Job Alert: ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

40 ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ. ಮಕ್ಕಳಿಗೆ ಕಲಿಸುವ ಕೆಲಸವೂ ಆಗುತ್ತಿದೆ. ಹಾಗಾಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಬೇಡ ಎಂಬುವುದು ಅವರ ವಾದ. ಈ ನಿಟ್ಟಿನಲ್ಲಿ ತಜ್ಞರ ಕಮಿಟಿ ರಚನೆ ಮಾಡುವ ಚರ್ಚೆಯಾಗಿದೆ, ಅಂಗನವಾಡಿಗಳನ್ನು ಮೇಲ್ದೆರ್ಜೇಗೇರಿಸುವ ಬಗ್ಗೆ ಸಿಎಂ ಹೇಳಿದ್ದಾರೆ. ಕನ್ನಡ, ಇಂಗ್ಲಿಷ್ ಎರಡನ್ನೂ ಕಲಿಸುವ ಚಿಂತನೆ ಇದೆ. ಸರ್ಕಾರಿ ಮಾಂಟೆಸ್ಸರಿ ಮಾದರಿಯಲ್ಲಿ ಮಾಡುತ್ತೇವೆ. 9000 ಪದವಿ ಪಡೆದ ಶಿಕ್ಷಕಿಯರು ಇದ್ದಾರೆ. ಸ್ನಾತಕ್ಕೋತ್ತರ ಪದವಿ ಪಡೆದವರು ಇದ್ದಾರೆ. ಹೀಗಾಗಿ ಸಿಎಂ ಫೈನಾನ್ಸ್‌ ಡಿಪಾರ್ಟ್‌ಮೆಂಟ್ ಅಪ್ರೂವಲ್ ಪಡೆದು ಮಾಡೋಣ ಎಂದಿದ್ದಾರೆ. ಪ್ರಸ್ತುತ 2600 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಮಾಡೋಕೆ ಸುತ್ತೋಲೆ ಹೊರಡಿಸಿದ್ದಾರೆ. ಇದರ ಬಗ್ಗೆ ಅಂಗನವಾಡಿ ಕಾರ್ಯಕರ್ತರ ಜತೆ ಚರ್ಚಿಸಿದ್ದೇವೆ. ಯಾರನ್ನೂ ಕೆಲಸದಿಂದ ತೆಗೆಯೋದಿಲ್ಲ ಎಂದು ಹೇಳಿದರು.

Continue Reading
Advertisement
Sleep After Lunch
ಲೈಫ್‌ಸ್ಟೈಲ್3 mins ago

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

R Ashok demands that the Congress apologize for imposing emergency
ಕರ್ನಾಟಕ9 mins ago

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

Viral Video
Latest16 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ23 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ23 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್33 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Kamal Haasan predicts Deepika Padukone baby choose cinema career
ಟಾಲಿವುಡ್48 mins ago

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

tumkur Shoot out
ಕ್ರೈಂ56 mins ago

Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

LKG UKG In Govt Schools
ಕರ್ನಾಟಕ1 hour ago

LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

Sex Doll
ದೇಶ1 hour ago

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌