Vistara News Launch | ಅತಿರಂಜಿತ, ನಿರುಪಯುಕ್ತ ಸುದ್ದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುತ್ತು: ಹರ್ಷವರ್ಧನ್ - Vistara News

ಕರ್ನಾಟಕ

Vistara News Launch | ಅತಿರಂಜಿತ, ನಿರುಪಯುಕ್ತ ಸುದ್ದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುತ್ತು: ಹರ್ಷವರ್ಧನ್

Vistara News Launch | ನಿಖರ-ಜನಪರ ಘೋಷವಾಕ್ಯದೊಂದಿಗೆ ಆರಂಭವಾಗಿರುವ ವಿಸ್ತಾರ ನ್ಯೂಸ್‌ ವತಿಯಿಂದ ನಂಜನಗೂಡಿನಲ್ಲಿ ಹಮ್ಮಿಕೊಂಡಿದ್ದ ವಿಸ್ತಾರ ಕನ್ನಡ ಸಂಭ್ರಮಕ್ಕೆ ಶಾಸಕ ಹರ್ಷವರ್ಧನ್ ಚಾಲನೆ ನೀಡಿದರು.

VISTARANEWS.COM


on

Vistara News Launch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಸಭಾಂಗಣದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ವಿಸ್ತಾರ ನ್ಯೂಸ್ ಚಾನೆಲ್ (Vistara News Launch) ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಹರ್ಷವರ್ಧನ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ಹರ್ಷವರ್ಧನ್, ಅತಿರಂಜಿತ ಹಾಗೂ ನಿರುಪಯುಕ್ತ ಸುದ್ದಿಗಳ ಪ್ರಚಾರ ಹೆಚ್ಚಾಗಿದೆ. ಇದರಿಂದ ಮಾಧ್ಯಮ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಇದರ ನಡುವೆ ವಿಸ್ತಾರ ನ್ಯೂಸ್ ಜನರ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು. ನಿಖರ ಹಾಗೂ ಜನಪರ ಎಂಬ ಘೋಷವಾಕ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸದಾನಂದ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.

ಇದನ್ನೂ ಓದಿ | Vistara News Launch | ವಿಸ್ತಾರ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ: ವಿರೂಪಾಕ್ಷಪ್ಪ ಬಳ್ಳಾರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Nitin Gadkari : ಪೆಟ್ರೋಲ್‌ ಬೆಲೆ ಶೀಘ್ರವೇ 50 ರೂ.ಗೆ ಇಳಿಯಲಿದೆ ಎಂದ ನಿತಿನ್‌ ಗಡ್ಕರಿ

Nitin Gadkari : ರಾಜ್ಯದಲ್ಲಿ 13,458 ಕೋಟಿ ರೂ. ವೆಚ್ಚದ 18 ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ 50 ರೂ.ಗೆ ಒಂದು ಲೀಟರ್‌ ಪೆಟ್ರೋಲ್‌ ಸಿಗಲಿದೆ ಎಂದರು.

VISTARANEWS.COM


on

Nitin Gadkari highways
Koo

ಬೆಳಗಾವಿ/ಶಿವಮೊಗ್ಗ: ಲೋಕಸಭಾ ಚುನಾವಣೆ (Parliament Election) ಸಮೀಪಿಸುತ್ತಿರುವ ಹೊತ್ತಿನಲ್ಲೇ ರಾಜ್ಯದಲ್ಲಿ 13,458 ಕೋಟಿ ರೂ. ವೆಚ್ಚದ 18 ಹೆದ್ದಾರಿ ಯೋಜನೆಗಳಿಗೆ (18 National high way scheme) ಚಾಲನೆ ದೊರೆತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ನಡೆದ ಎರಡು ಕಾರ್ಯಕ್ರಮಗಳ ಮೂಲಕ ಹೆದ್ದಾರಿ ಕ್ರಾಂತಿಗೆ ಅಡಿಗಲ್ಲಿಟ್ಟರು. ಇದೇ ವೇಳೆ ಎಲೆಕ್ಟ್ರಾನಿಕ್‌ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಬೆಲೆ 50 ರೂ.ಗಳಿಗೆ ಇಳಿಯಲಿದೆ ಎಂದರು.

ಬೆಳಗಾವಿಯಲ್ಲಿ 7290 ಕೋಟಿ ರೂ. ವೆಚ್ಚದ 376 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಚಾಲನೆ

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ 8 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರ ಈ 8 ಜಿಲ್ಲೆಗಳ‌ 376 ಕಿ.ಮೀ ಉದ್ದದ ರಸ್ತೆಗಳಿಗೆ 7290 ಕೋಟಿ ರೂ.ಗಳ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಈ ವೇಳೆ ಮಾತನಾಡಿದ ನಿತಿನ್ ಗಡ್ಕರಿ ಅವರು, ಬೆಳಗಾವಿ ಮುಂದಿನ ದಿನಗಳಲ್ಲಿ ಎಥೆನಾಲ್‌ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ ಎಂದರು.

ಲೋಕೋಪಯೋಗಿ ಸಚಿವರು ಕರ್ನಾಟಕದಲ್ಲಿ ಇಥೆನಾಯಿಲ್ ಬಳಕೆಗೆ ಪ್ರೋತ್ಸಾಹ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಪೆಟ್ರೋಲ್ ಗಿಂತಲೂ ಕಡಿಮೆ ದರದಲ್ಲಿ ಎಥೆನಾಲ್‌ ಲಭ್ಯವಾಗಲಿದೆ. ಪೆಟ್ರೋಲ್​ನಲ್ಲಿ ಎಥೆನಾಲ್ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಥೆನಾಲ್​ನ್ನು ಡೀಸೆಲ್​ನಲ್ಲಿ ಉಪಯೋಗಿಸಲಾಗುವುದು ಎಂದು ಗಡ್ಕರಿ ತಿಳಿಸಿದರು.

ನಿತಿನ್‌ ಗಡ್ಕರಿ ಅವರನ್ನು ಹಾಡಿ ಹೊಗಳಿದ ಸತೀಶ್‌ ಜಾರಕಿಹೊಳಿ

ಸಮಾರಂಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸತೀಶ್ ಜಾರಕಿಹೊಳಿ ಅವರು ನಿತಿನ್‌ ಗಡ್ಕರಿ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರನ್ನು ನೋಡಿದರೆ ಹೆಮ್ಮೆ ಆಗುತ್ತದೆ. ನಿತಿನ್ ಗಡ್ಕರಿ ಅಂದರೆ ಸಡಕ್ ಕೆ ಭಾಷಾ ಎಂದು ಕೊಂಡಾಡಿದರು.

ಕಳೆದ 9 ತಿಂಗಳಲ್ಲಿ 5 ಬಾರಿ ಗಡ್ಕರಿ ಅವರನ್ನ ಭೇಟಿ ಮಾಡಿರುವೆ. ರಾಜ್ಯದಲ್ಲಿ ನನೆಗುದ್ದಿಗೆ ಬಿದ್ದಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೂಚಿಸಿದ್ದಾರೆ. ಅದರಲ್ಲಿ ಕೆಲವೊಂದಿಷ್ಟು ಕಾಮಗಾರಿ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು. ಕೇಂದ್ರ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ ಇದ್ದಾಗ ದ್ವೇಷದ ಭಾವನೆ ಇರುತ್ತದೆ. ಆದರೆ ನಿತಿನ್ ಗಡ್ಕರಿ ಅವರ ಸಚಿವಾಲಯದಲ್ಲಿ ಹಾಗಾಗಿಲ್ಲ. ಅದು ನಮಗೆ ನಮ್ಮದೇ ಸರ್ಕಾರ ಎನ್ನುವ ಭಾವನೆ ಬರುತ್ತದೆ. ಪಕ್ಷಕ್ಕಿಂತ ರಸ್ತೆ ಅಭಿವೃದ್ಧಿ ಕಾರ್ಯ ಮುಖ್ಯ. ಇದೇ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಬಿಜೆಪಿ, ಕಾಂಗ್ರೆಸ್ ಶಾಸಕರಿಗೆ ಸಮಾನ ಅನುದಾನ ನೀಡಿದ್ದೇವೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಈರಣ್ಣ ಕಡಾಡಿ, ಮಂಗಳಾ ಅಂಗಡಿ ಅಮರೇಶ ನಾಯಕ್, ಕರಡಿ ಸಂಗಣ್ಣ, ಪಿ.ಸಿ.ಗದ್ದಿಗೌಡರ್ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಎರಡು ರೋಪ್‌ ವೇ ನಿರ್ಮಾಣ: ನಿತಿನ್‌ ಗಡ್ಕರಿ

ಬೆಳಗಾವಿ ಕಾರ್ಯಕ್ರಮದ ಬಳಿಕ ಶಿವಮೊಗ್ಗಕ್ಕೆ ಆಗಮಿಸಿದ ನಿತಿನ್‌ ಗಡ್ಕರಿ ಅವರು ಅಲ್ಲಿ 6168 ಕೋಟಿ ರೂ. ವೆಚ್ಚದ 18 ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಎಕ್ಸ್‌ಪ್ರೆಸ್‌ ಹೈ ವೇ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದರು. ದೇಶದಲ್ಲಿ 16 ರೋಪ್ ವೇ ನಿರ್ಮಾಣ ಮಾಡಲಾಗುವುದು. ಅದರಲ್ಲಿ ಎರಡು ಕರ್ನಾಟಕದಲ್ಲಿ ನಿರ್ಮಾಣವಾಗಲಿವೆ. ಕೊಡಚಾದ್ರಿಯಿಂದ ಕೊಲ್ಲೂರಿಗೆ ಮತ್ತು ಕೊಪ್ಪಳದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲಾಗುವುದು ಎಂದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಕೇಂದ್ರ ಸಚಿವರು, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರು ದೇಶಕ್ಕೆ ನಂಬರ್ ಒನ್‌ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರು ನಿರಂತರವಾಗಿ ನನ್ನ ಕಚೇರಿಗೆ ಬಂದು ಭೇಟಿ ಮಾಡಿದ್ದಾರೆ. ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರಲ್ಲದೆ, ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ ಎಂದರು.

ಪೆಟ್ರೋಲ್‌ ಬೆಲೆ 50 ರೂ.ಗೆ ಇಳಿಯಲಿದೆ ಎಂದ ಗಡ್ಕರಿ

ಕರ್ನಾಟಕ ಆರ್ಥಿಕವಾಗಿ ಮುಂದುವರಿದಿದೆ. ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಹೆಚ್ಚೆಚ್ಚು ಬಳಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಅನಿಲ ಬಳಕೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಎಲೆಕ್ಟ್ರಾನಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಬೇಕು. ಆಗ ಪೆಟ್ರೋಲ್ 50 ರೂಪಾಯಿಗೆ ಸಿಗುತ್ತದೆ ಎಂದು ಹೇಳಿದರು.

ರಾಘವೇಂದ್ರ ಅವರು ಸಾಗರದಿಂದ ಮರಕುಟುಕಕ್ಕೆ ರಸ್ತೆ ಕೇಳಿದ್ದಾರೆ. ಅದಕ್ಕೆ ಅನುಮೋದನೆ ನೀಡುತ್ತೇನೆ. ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ಮಾಡಲು, ಅಧಿಕಾರಿಗಳು ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ನಿತಿನ್‌ ಗಡ್ಕರಿ ಹೇಳಿದರು.

ಕರ್ನಾಟಕಕ್ಕೆ ಸಾಕಷ್ಟು ರಸ್ತೆಗಳನ್ನು ನೀಡಿದ್ದೇನೆ, ಇನ್ನಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಮುಂದಿನ ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಬೆಂಗಳೂರು ಟು ಚೆನೈ ಎಕ್ಸ್‌ಪ್ರೆಸ್‌ ರಸ್ತೆ ಶ್ರೀಘ್ರದಲ್ಲೇ ಮುಕ್ತಾಯವಾಗುತ್ತದೆ. ಆಗ ಆಗ ಎರಡು ಗಂಟೆಯಲ್ಲಿ ಚೆನ್ನೈ ತಲುಪಬಹುದು ಎಂದು ಹೇಳಿದರು.

Continue Reading

ದೇಶ

Rahul Gandhi: ಐಶ್ವರ್ಯಾ ರೈರನ್ನು ಅವಮಾನಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ತರಾಟೆ

Rahul Gandhi: ರಾಮ ಮಂದಿರ ಉದ್ಘಾಟನೆ ವೇಳೆ ಶೇ.70ರಷ್ಟು ಹಿಂದುಳಿದ ವರ್ಗ, ದಲಿತರು, ಆದಿವಾಸಿಗಳಿಗೆ ಸೂಕ್ತ ಪ್ರಾತಿನಿಧಿ ದೊರೆತಿರಲಿಲ್ಲ ಎಂದು ಹೇಳುವಾಗ ರಾಹುಲ್ ಗಾಂಧಿ ಅವರು ಐಶ್ವರ್ಯಾ ರೈ ಹೆಸರನ್ನು ಎಳೆದು ತಂದಿದ್ದರು.

VISTARANEWS.COM


on

BJP hits out at Rahul Gandhi for insulting Actor aishwarya rai bachchan
Koo

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Actor aishwarya rai bachchan) ಕುರಿತು ರಾಹುಲ್ ಗಾಂಧಿ(Rahul Gandhi) ಆಡಿರುವ ಮಾತುಗಳಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯು (BJP Party) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಐಶ್ವರ್ಯಾ ರೈ ಬಚ್ಚನ್‌ ಕುರಿತು ಕೀಳಾಗಿ ಮಾತನಾಡುವ ಮೂಲಕ ರಾಹುಲ್ ಗಾಂಧಿ ಅವರು ಕೆಳಮಟ್ಟಕ್ಕೆ ಇಳಿದಿದ್ದಾರೆ. 53 ವರ್ಷದ ರಾಹುಲ್ ಗಾಂಧಿ ಅವರು, ಸ್ವಂತವಾಗಿ ಮೇಲೆ ಬಂದ ಮತ್ತು ಯಶಸ್ವಿ ಮಹಿಳೆ ಜತೆಗೆ ಅಪಾಯಕಾರಿ ಮತ್ತು ತೆಗಳುವ ಗೀಳು ಬೆಳೆಸಿಕೊಂಡಿದ್ದಾರೆಂದು ಬಿಜೆಪಿ ಆರೋಪಿಸಿದೆ.

ಉತ್ತರ ಪ್ರದೇಶದಲ್ಲಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಕಳೆದ ತಿಂಗಳು ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮವನ್ನು ವಿಶೇಷವಾಗಿ ಟೀಕಿಸಿದ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಶತಕೋಟ್ಯಾಧಿಪತಿಗಳು ಭಾಗವಹಿಸಿದ್ದ ಮಹಾ ಸಮರ್ಪಣೆ ಸಮಾರಂಭದಲ್ಲಿ ದೇಶದ ಜನಸಂಖ್ಯೆಯ 73 ಪ್ರತಿಶತವನ್ನು ಒಳಗೊಂಡಿರುವ ಒಬಿಸಿ, ದಲಿತ ಅಥವಾ ಬುಡಕಟ್ಟು ಸಮುದಾಯಗಳಿಂದ ಯಾರೂ ಭಾಗವಹಿಸಲಿಲ್ಲ ಎಂದು ರಾಹುಲ್ ಹೇಳಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಭಾಗವಹಿಸಿದ್ದರೆ, ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಅಯೋಧ್ಯೆಗೆ ಹೋಗಿರಲಿಲ್ಲ ಅಥವಾ ಅವರು ಸಮಾರಂಭದಲ್ಲಿ ಇರಲಿಲ್ಲ. ಆದರೂ ರಾಹುಲ್ ಗಾಂಧಿ ಅವರು, ಐಶ್ವರ್ಯಾ ರೈ ಅವರು ಹೋಗಿದ್ದರು ಎಂದು ಹೇಳಿದ್ದರು.

ಭಾರತೀಯರ ನಿರಂತರ ನಿರಾಕರಣೆಗಳಿಂದ ಹತಾಶರಾಗಿರುವ ರಾಹುಲ್ ಗಾಂಧಿ ಅವರು ಭಾರತದ ಹೆಮ್ಮೆಯ ಐಶ್ವರ್ಯಾ ರೈ ಅವರನ್ನು ಅವಮಾನಿಸುವ ಹೊಸ ಅಧೋಗತಿಗೆ ಇಳಿದಿದ್ದಾರೆ ಎಂದು ಬಿಜೆಪಿಯ ಕರ್ನಾಟಕ ರಾಜ್ಯ ಘಟಕವು ಹೇಳಿದೆ. “ಶೂನ್ಯ ಸಾಧನೆಗಳೊಂದಿಗೆ ನಾಲ್ಕನೇ ತಲೆಮಾರಿನ ರಾಜವಂಶವು ಈಗ ರಾಹುಲ್ ಗಾಂಧಿಯವರ ಇಡೀ ಕುಟುಂಬಕ್ಕಿಂತ ಭಾರತಕ್ಕೆ ಹೆಚ್ಚಿನ ಕೀರ್ತಿಯನ್ನು ತಂದ ಐಶ್ವರ್ಯಾ ರೈ ವಿರುದ್ಧ ನಿಂದನೆಗಳನ್ನು ಆಶ್ರಯಿಸಿದೆ ಎಂದು ಟೀಕಿಸಿದೆ.

ರಾಹುಲ್ ಗಾಂಧಿ ಅವರು ತಮ್ಮ ಭಾಷಣಗಳಲ್ಲಿ ಕಲಾವಿದರನ್ನು ಉಲ್ಲೇಖಿಸಿದ ವಿವಿಧ ನಿದರ್ಶನಗಳ ತುಣುಕುಗಳನ್ನು ಬಿಜೆಪಿ ಹಂಚಿಕೊಂಡಿದೆ. ಅಲ್ಲದೇ, ಕನ್ನಡತಿಗೆ ಅವಮಾನವಾಗಿದ್ದರೂ ಕರ್ನಾಟಕದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ಸುಮ್ಮನಿದ್ದಾರೆಂದು ಬಿಜೆಪಿ ಪ್ರಶ್ನಿಸಿದೆ. ನಿಮ್ಮ ಬಾಸ್ ಕನ್ನಡಿಗನನ್ನು ಅವಮಾನಿಸುವುದನ್ನು ಮುಂದುವರೆಸಿರುವ ನೀವು ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುವಿರಿ ಮತ್ತು ಅಂತಹ ಅಗೌರವದ ವಿರುದ್ಧ ಮಾತನಾಡುತ್ತೀರಾ ಅಥವಾ ನಿಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಕಾಪಾಡಲು ನೀವು ಮೌನವಾಗಿರುತ್ತೀರಾ? ಎಂದು ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sona Mohapatra: ಮೋದಿ ಟೀಕಿಸಲು ಐಶ್ವರ್ಯಾ ಹೆಸರು ಬಳಕೆ, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

Continue Reading

ಚಾಮರಾಜನಗರ

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

Social Sevice : ಸಿಂಗಾಪುರದಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಉದ್ಯಮಿ ಆರ್ಯಮನ್​ ಅಶೋಕ್​ ಶಂಕರ್ ಅವರಿಂದ ಮಕ್ಕಳಿಗೆ ಕೊಡುಗೆ

VISTARANEWS.COM


on

Aryaman Ashok Shankar
Koo

ಬೆಂಗಳೂರು : ಯುವ ಉದ್ಯಮಿ ಆರ್ಯಮನ್​ ಅಶೋಕ್ ಶಂಕರ್ ಅವರು ಕೊಳ್ಳೆಗಾಲದಲ್ಲಿರುವ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ (Seventh-Day Adventist School for Speech and Hearing) ಶಾಲೆಗೆ ಕ್ರೀಡಾ ಪರಿಕರಗಳು ಸೇರಿದಂತೆ ಹಲವು ವಸ್ತುಗಳನ್ನು ( Social Sevice) ವಿತರಿಸಿದರು. ದಿ. ಸಾವಿತ್ರಮ್ಮ ಟ್ರಸ್ಟ್​​ನ ಸಮಾಜ ಸೇವಾ ಕಾರ್ಯದ ಮುಂದುವರಿದ ಭಾಗವಾಗಿ ಅವರು ಶ್ರವಣ ಮತ್ತು ವಾಕ್​ದೋಷ ಇರುವ ಮಕ್ಕಳ ಆಶ್ರಮಕ್ಕೆ ಪರಿಕರಗಳನ್ನು ನೀಡಿದರು.

ಆರ್ಯಮನ್ ಅಶೋಕ್ ಶಂಕರ್​ ಅವರು ಉದ್ಯಮಿ ಸುನಿತಾ ತಿಮ್ಮೇಗೌಡ ಮತ್ತು ಅಶೋಕ್ ಶಂಕರ್ ಅವರ ಪುತ್ರ. ಸಿಂಗಾಪುರದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಕಲಿಕೆಯ ಅವಧಿಯಲ್ಲಿಯೇ ಬಿಲೇನಿಯರ್ ಎನಿಸಿಕೊಂಡಿದ್ದಾರೆ. ಅವರು ಸಮಾಜ ಸೇವೆಗಾಗಿ ಕೊಳ್ಳೇಗಾಲದ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೇಂದ್ರಕ್ಕೆ ತೆರಳಿದ ಅವರು ಅಲ್ಲಿನ ಮಕ್ಕಳೊಂದಿಗೆ ಕಾಲ ಕಳೆದು ಪರಿಕರಗಳನ್ನು ವಿತರಿಸಿದರು.

ಯುವ ಉದ್ಯಮಿ ಆರ್ಯಮನ್‌ ಅವರು 11ನೇ ವರ್ಷದಲ್ಲಿ ಸಿಂಗಾಪುರಕ್ಕೆ ಶಿಕ್ಷಣಕ್ಕಾಗಿ ತೆರಳಿದ್ದರು. ವಿದ್ಯಾಭ್ಯಾಸದ ಅವಧಿಯಲ್ಲೇ ಅವರು ಉದ್ಯಮ ಕ್ಷೇತ್ರಕ್ಕೆ ಧುಮುಕಿದ್ದರು .13ನೇ ವರ್ಷದಲ್ಲಿ ಅವರು ಲಿಮಿಟೆಡ್​ ಎಡಿಷನ್​ ಶೂಗಳ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಆದಾಯ ಗಳಿಸಲು ಆರಂಭಿಸಿದ್ದರು. ಇದೀಗ 1000 ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮಿಯಾಗಿದ್ದಾರೆ. ತಮ್ಮ ಗಳಿಕೆಯಲ್ಲಿ ಸಮಾಜ ಸೇವೆಗೆ ಮೀಸಲಿಡುವ ಕುಟುಂಬದ ಪರಂಪರೆಯಂತೆ ಅವರು ಆಶ್ರಮಕ್ಕೆ ಕೊಡುಗೆಗಳನ್ನು ಕೊಟ್ಟಿದ್ದಾರೆ.

ಆರ್ಯಮನ್​ ಅವರು ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಜಪಾನ್ ದೇಶದ ಸಹಪಾಠಿಗಳಿದ್ದರು. ಅವರೆಲ್ಲರೂ ಉತ್ತಮ ಗೆಳೆಯರಾಗಿದ್ದಾರೆ. ಆ ಅವರು ಕೂಡ ಕೊಳ್ಳೆಗಾಲಕ್ಕೆ ಆರ್ಯಮನ್ ಅವರ ಜತೆ ಪ್ರಯಾಣಿಸಿದ್ದಾರೆ. ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕೇಂದ್ರದಲ್ಲಿ ಆರ್ಯಮನ್ ಅವರೊಂದಿಗೆ ಸಮಯ ಕಳೆದಿದ್ದಾರೆ.

ಇದನ್ನೂ ಓದಿ : Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

ಉದ್ಯಮ ಪರಿಣತ ಕುಟುಂಬದ ಕುಡಿಯಾಗಿರುವ ಆರ್ಯಮನ್ ಅಶೋಕ್​ ಅವರು ಉದ್ಯಮ ಕ್ಷೇತ್ರವನ್ನು ಬಾಲ್ಯದಲ್ಲಿಯೇ ಕರಗತ ಮಾಡಿಕೊಂಡಿದ್ದಾರೆ. ಎಳೆವೆಯಲ್ಲಿಯೇ ಉದ್ಯಮದ ಮೂಲಕ ಯಶಸ್ಸು ಸಾಧಿಸಿರುವ ಅವರು ತಮ್ಮ ಕುಟುಂಬದ ಪರಂಪರೆಯಂತೆ ಸಮಾಜಸೇವೆ ಕಾರ್ಯವನ್ನೂ ಮುಂದುವರಿಸಿಕೊಂಡು ಹೋಗುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ.

ಆರ್ಯಮನ್ ಅಶೋಕ್ ಅವರ ತಾಯಿ ಹಾಗೂ ಖ್ಯಾತ ಉದ್ಯಮಿ ಸನಿತಾ ತಿಮ್ಮೇಗೌಡ ಅವರು ಕೂಡ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ (Seventh-Day Adventist School for Speech and Hearing) ಕೇಂದ್ರಕ್ಕೆಸಾಕಷ್ಟು ನೆರವು ಕೊಟ್ಟಿದ್ದಾರೆ. ಅವರ ಸಾಮಾಜಿಕ ಸೇವೆಗಳಿಗಾಗಿ ಕೇಂದ್ರದ ಪ್ರಿನ್ಸಿಪಾಲ್​ ಅಭಿನಂದನೆಗಳನ್ನು ಕೂಡ ಸಲ್ಲಿಸಿದ್ದಾರೆ.

Continue Reading

ರಾಜಕೀಯ

Karnataka Budget Session 2024: ಈ ಸರ್ಕಾರದಿಂದ ಹಿಂದೂಗಳಿಗೆ ದ್ರೋಹ: ಆರ್‌. ಅಶೋಕ್‌

Karnataka Budget Session 2024: ಬಿಜೆಪಿ ಸರ್ಕಾರವಿದ್ದಾಗ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ 274 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜತೆಗೆ ಸಿಎಂ ವಿಶೇಷ ಅನುದಾನದಡಿ, ಮಠ ಹಾಗೂ ದೇವಾಲಯಗಳಿಗೆ 2022-23 ರಲ್ಲಿ 154.80 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಕೇವಲ 17 ಕೋಟಿ ರೂ. ಮೀಸಲಿಟ್ಟಿದ್ದು, ಸುಮಾರು ಶೇ. 90ರಷ್ಟು ಅನುದಾನ ಕಡಿತವಾಗಿದೆ. ಇದೇ ಕಾಂಗ್ರೆಸ್‌ ನಾಯಕರು ತೋರುವ ಪ್ರೀತಿ. ಅದೇ ವಕ್ಫ್‌ ಮಂಡಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಆರ್.‌ ಅಶೋಕ್‌ ಕಿಡಿಕಾರಿದ್ದಾರೆ.

VISTARANEWS.COM


on

Koo

ಬೆಂಗಳೂರು: ಹಿಂದೂ ದೇವಾಲಯ (Hindu Temple), ಧಾರ್ಮಿಕ ಸಂಸ್ಥೆಗಳಿಗೆ ಕಾಂಗ್ರೆಸ್‌ ಸರ್ಕಾರ (Congress Government) ಬಹಳ ಅನ್ಯಾಯ ಮಾಡಿದೆ. ಹಾಗೆಯೇ ಪ್ರತಿ ಇಲಾಖೆಗಳಲ್ಲಿ ಅಭಿವೃದ್ಧಿಗಾಗಿ ಹಣ ಖರ್ಚಾಗದೆ ಬಾಕಿ ಉಳಿದಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರ 15ನೇ ಬಜೆಟ್‌ ಒಡೆದ ಕನ್ನಡಿಯಂತಿದೆ, ಬಡವರ ವಿರೋಧಿಯಾಗಿದೆ, ಹಿಂದೂಗಳಿಗೆ ದ್ರೋಹ ಬಗೆದಿದೆ ಎಂದು ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್.‌ ಅಶೋಕ್‌, ಕಾಂಗ್ರೆಸ್‌ ಸರ್ಕಾರದಿಂದ ದೇವಾಲಯಗಳಿಗೂ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರವಿದ್ದಾಗ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ 274 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜತೆಗೆ ಸಿಎಂ ವಿಶೇಷ ಅನುದಾನದಡಿ, ಮಠ ಹಾಗೂ ದೇವಾಲಯಗಳಿಗೆ 2022-23 ರಲ್ಲಿ 154.80 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಕೇವಲ 17 ಕೋಟಿ ರೂ. ಮೀಸಲಿಟ್ಟಿದ್ದು, ಸುಮಾರು ಶೇ. 90ರಷ್ಟು ಅನುದಾನ ಕಡಿತವಾಗಿದೆ. ಇದೇ ಕಾಂಗ್ರೆಸ್‌ ನಾಯಕರು ತೋರುವ ಪ್ರೀತಿ. ಅದೇ ವಕ್ಫ್‌ ಮಂಡಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ಒಬ್ಬರು ರಾಮ ನನ್ನ ಹೆಸರಿನಲ್ಲಿದೆ ಎಂದರೆ, ಮತ್ತೊಬ್ಬರು ಶಿವ ನನ್ನ ಹೆಸರಲ್ಲಿದೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 24.7 ಕೋಟಿ ರೂ. ಖರ್ಚು ಮಾಡಿದ್ದು, ಈಗಿನ ಸರ್ಕಾರ 10 ಕೋಟಿ ರೂ. ಮೀಸಲಿಟ್ಟಿದೆ ಎಂದು ಆರ್.‌ ಅಶೋಕ್ ದೂರಿದರು.

ದೇವಸ್ಥಾನಗಳ ಆಸ್ತಿ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿದ್ದು, ಅದನ್ನು ನಿರ್ವಹಿಸಲು ಹೆಚ್ಚು ಅನುದಾನ ಬೇಕಾಗುತ್ತದೆ. ನಾನು ಸಾರಿಗೆ ಸಚಿವನಾಗಿದ್ದಾಗ 1,200 ಎಕರೆ ಸರ್ಕಾರಿ ಜಮೀನನ್ನು ಹರಾಜು ಹಾಕುವುದನ್ನು ತಪ್ಪಿಸಿ ಸಾರಿಗೆ ಇಲಾಖೆಗೆ ಕೊಡಲು ಕ್ರಮ ವಹಿಸಿ ಯಶಸ್ವಿಯಾಗಿದ್ದೆ. ಈ ರೀತಿ ಸರ್ಕಾರಿ ಜಮೀನನ್ನು ಉಳಿಸಲು ಕ್ರಮ ವಹಿಸಿ ಎಂದು ಆರ್.‌ ಅಶೋಕ್ ಕಿವಿಮಾತು ಹೇಳಿದರು.

ತೆರಿಗೆ ಸಂಗ್ರಹ ಇಳಿಕೆ

2023-24 ರಲ್ಲಿ ತೆರಿಗೆ ಸಂಗ್ರಹದ ಗುರಿ 1,75,653 ಕೋಟಿ ರೂ. ಇದ್ದು, 1,61,494 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಗುರಿಗಿಂತ 14,159 ಕೋಟಿ ರೂ. ಸಂಗ್ರಹ ಕಡಿಮೆಯಾಗಿದೆ. ಇದು ಕಾಂಗ್ರೆಸ್‌ ಸರ್ಕಾರದ ವೈಫಲ್ಯ. 2024-25 ರಲ್ಲಿ ತೆರಿಗೆ ಸಂಗ್ರಹದ ಗುರಿ 1,89,893 ಕೋಟಿ ರೂ. ಇದ್ದು, ಕಳೆದ ಬಾರಿಗಿಂತ 28,399 ಕೋಟಿ ರೂ. ಅಧಿಕ ಗುರಿ ನೀಡಲಾಗಿದೆ. ಕಳೆದ ವರ್ಷದ್ದೇ ಗುರಿ ಈಡೇರಿಸಲಾಗದೆ ಈ ಬಾರಿ ಹೆಚ್ಚು ಗುರಿ ನೀಡಲಾಗಿದೆ. ಕೋವಿಡ್‌ ಬಂದಾಗ ಬಿಜೆಪಿ ಸರ್ಕಾರ ಆಸ್ತಿ ನೋಂದಣಿ ದರವನ್ನು ಶೇ.10 ರಷ್ಟು ಇಳಿಕೆ ಮಾಡಲಾಯಿತು. ಇದರಿಂದಾಗಿ ಗುರಿಗಿಂತ ಹೆಚ್ಚು ತೆರಿಗೆ ಸಂಗ್ರಹ ಸಾಧ್ಯವಾಯಿತು. ಈ ರೀತಿ ಸರ್ಕಾರ ತೆರಿಗೆ ಹೆಚ್ಚು ಬರಲು ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ಈ ಬಾರಿಯೂ 10-12 ಸಾವಿರ ಕೋಟಿ ರೂ. ಕಡಿಮೆಯಾಗಲಿದ್ದು, ಮತ್ತೆ ಸಾಲ ಮಾಡುವ ಸಂಭವವಿದೆ ಎಂದು ದೂರಿದರು.

2022-23 ರಲ್ಲಿ ಬಜೆಟ್‌ ಗಾತ್ರ 2,89,653 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 57,348 ಕೋಟಿ ರೂ. ಇತ್ತು. 2023-24 ರಲ್ಲಿ ಬಜೆಟ್‌ ಗಾತ್ರ 3,27,747 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 51,231 ಕೋಟಿ ರೂ. ಆಗಿತ್ತು. 2024-25 ರಲ್ಲಿ ಬಜೆಟ್‌ ಗಾತ್ರ 3,71,383 ಕೋಟಿ ರೂ. ಆಗಿದ್ದು, ಬಂಡವಾಳ ವೆಚ್ಚ 52,903 ಕೋಟಿ ರೂ. ಆಗಿದೆ. ಅಂದರೆ ಬಂಡವಾಳ ವೆಚ್ಚ ಶೇ.6 ರಷ್ಟು ಕಡಿಮೆಯಾಗಿದೆ. ಇದು ಒಂದು ರೀತಿಯಲ್ಲಿ ಪ್ರಪಾತಕ್ಕೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಯಾಗಿ 15ನೇ ಬಜೆಟ್‌ಗೆ ಸಾಲದ ಮೊತ್ತವನ್ನು 1 ಲಕ್ಷ ಕೋಟಿ ರೂ. ತಲುಪಿಸಿದ್ದಾರೆ. ಈವರೆಗೆ 6,65,095 ಕೋಟಿ ರೂಪಾಯಿಗೆ ಸಾಲ ತಲುಪಿದೆ. ಅಂದರೆ ಒಬ್ಬ ಪ್ರಜೆಯ ಮೇಲೆ 95,013 ರೂ. ಸಾಲ ಬೀಳಲಿದೆ. ಇನ್ನು ಸಾಲ ಮಾಡಲು ಆಗಲ್ಲ, ತೆರಿಗೆ ಹಾಕಲೂ ಆಗಲ್ಲ ಎನ್ನುವ ಸ್ಥಿತಿ ಉಂಟಾಗಿದೆ. ವಿತ್ತೀಯ ಕೊರತೆ 2022-23 ರಲ್ಲಿ 2.14%, 2023-24 ರಲ್ಲಿ 2.67% ಆಗಿದ್ದು, 2024-25 ರಲ್ಲಿ 2.9 ಗೆ ಹೋಗುವ ಸಾಧ್ಯತೆ ಇದೆ. ಕೇವಲ ಎರಡು ವರ್ಷದಲ್ಲಿ ಸಾಲದ ಪ್ರಮಾಣ ಶೇಕಡಾ 13.6ಕ್ಕೆ ಏರಿಕೆಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಡ್ಡಿ ಪ್ರಮಾಣ 73,000 ಕೋಟಿ ರೂಪಾಯಿ ತಲುಪುವ ಅಂದಾಜಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಅನುದಾನ

ಕೇಂದ್ರ ಸರ್ಕಾರವು ಮೈಸೂರು-ಬೆಂಗಳೂರು ಹೆದ್ದಾರಿಗೆ ಸುಮಾರು 8,408 ಕೋಟಿ ರೂ., ಆವಾಸ್‌ ಯೋಜನೆಗೆ 6,679 ಕೋಟಿ ರೂ., ಬುಡಕಟ್ಟು ವಿದ್ಯಾರ್ಥಿವೇತನಕ್ಕೆ 875 ಕೋಟಿ ರೂ., ಪಿಎಂ ಸ್ವನಿಧಿಗೆ 648 ಕೋಟಿ ರೂ., ಕಿಸಾನ್‌ ಸಮ್ಮಾನ್‌ ಯೋಜನೆಗೆ 13,669 ಕೋಟಿ ರೂ. ನೀಡಿದೆ. ರಾಜ್ಯದಲ್ಲಿ 6,005 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಪೂರ್ಣವಾಗಿದ್ದು, 97,246 ಕೋಟಿ ರೂ. ವೆಚ್ಚವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ -2 ಗೆ 5,000 ಕೋಟಿ ರೂ ಹಾಗೂ ರನ್‌ವೇ ಕಾಮಗಾರಿಗೆ 2,708 ಕೋಟಿ ರೂ. ನೀಡಲಾಗಿದೆ. ನೈಋತ್ಯ ರೈಲ್ವೆಗೆ 3,424 ಕೋಟಿ ರೂ., ಸ್ಮಾರ್ಟ್‌ ಸಿಟಿ ಯೋಜನೆಗೆ 3,305 ಕೋಟಿ ರೂ., ಅಮೃತ ಯೋಜನೆಗೆ 2,319 ಕೋಟಿ ರೂ. ನೀಡಲಾಗಿದೆ. ಒಟ್ಟು 2 ಲಕ್ಷ ಕೋಟಿ ರೂ. ಅಧಿಕ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ಮನಮೋಹನ್‌ ಸಿಂಗ್‌ ಸರ್ಕಾರ ರಾಜ್ಯಕ್ಕೆ ಎಂಟು ವರ್ಷದಲ್ಲಿ 3,233 ಕೋಟಿ ರೂ. ನೀಡಿದ್ದು, ಮೋದಿ ಸರ್ಕಾರ ಎಂಟು ವರ್ಷದಲ್ಲಿ 11,630 ಕೋಟಿ ರೂ. ನೀಡಿದ್ದು, ನಾಲ್ಕು ಪಟ್ಟು ಹೆಚ್ಚಾಗಿದೆ ಎಂದರು.

ಹಣ ಬಳಕೆಯಾಗಿಲ್ಲ

ಪ್ರವಾಸೋದ್ಯಮ ಇಲಾಖೆಗೆ 381 ಕೋಟಿ ರೂ. ನೀಡಿದ್ದು, 253.12 ಕೋಟಿ ರೂ. ಬಳಕೆಯಾಗಿಲ್ಲ. ಅಂದರೆ 66% ಹಣ ಬಳಕೆಯಾಗಿಲ್ಲ. ಇಂತಹ ಇಲಾಖೆಯನ್ನು ಮುಚ್ಚಿ ಹಾಕುವುದೇ ಸೂಕ್ತ. ಆಹಾರ ಇಲಾಖೆಗೆ 10,716 ಕೋಟಿ ರೂ. ನೀಡಿದ್ದು, 5,660.80 ಕೋಟಿ ರೂ. ಬಳಕೆ ಮಾಡಿಲ್ಲ. ಅಂದರೆ 52% ರಷ್ಟು ಹಣ ಬಳಕೆಯಾಗಿಲ್ಲ. ವಸತಿ ಇಲಾಖೆಗೆ 5,849 ಕೋಟಿ ರೂ. ನೀಡಿದ್ದು, 3,019 ಕೋಟಿ ರೂ. ಬಳಕೆಯಾಗದೆ ಉಳಿದಿದೆ. ನಗರಾಭಿವೃದ್ಧಿ ಇಲಾಖೆಗೆ 22,719 ಕೋಟಿ ರೂ. ನೀಡಿದ್ದು, 10,765 ಕೋಟಿ ರೂ. ಉಳಿದಿದೆ, ಇದೇ ರೀತಿ ಎಲ್ಲ ಇಲಾಖೆಗಳಲ್ಲೂ ಅನುದಾನ ಬಳಕೆಯಾಗದೆ ಉಳಿದಿದೆ ಎಂದು ಆರ್.‌ ಅಶೋಕ್ ದೂರಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 2022-23 ರಲ್ಲಿ 1,534.9 ಕೋಟಿ ರೂ. ನೀಡಿತ್ತು. ಕಾಂಗ್ರೆಸ್‌ ಸರ್ಕಾರ 2023-24 ರಲ್ಲಿ 1,038 ಕೋಟಿ ರೂ. ಹಾಗೂ ಈ ಬಜೆಟ್‌ನಲ್ಲಿ 940 ಕೋಟಿ ರೂ. ಮೀಸಲಿಟ್ಟಿದೆ. ನೇಕಾರರ ಪ್ಯಾಕೇಜ್‌ ಯೋಜನೆಗೆ ಬಿಜೆಪಿ ಸರ್ಕಾರ 2022-23 ರಲ್ಲಿ 125.77 ಕೋಟಿ ರೂ. ಖರ್ಚು ಮಾಡಿದ್ದು, ಕಾಂಗ್ರೆಸ್‌ ಸರ್ಕಾರ 2023-24 ರಲ್ಲಿ 103 ಕೋಟಿ ರೂ. ಹಾಗೂ ಈ ಬಜೆಟ್‌ನಲ್ಲಿ ಕೇವಲ 10 ಕೋಟಿ ರೂ. ನೀಡಿದೆ. ಕೆಎಸ್‌ಆರ್‌ಪಿ ಮೂಲಸೌಕರ್ಯಕ್ಕೆ ಬಿಜೆಪಿ ಸರ್ಕಾರ 9.26 ಕೋಟಿ ರೂ. ಖರ್ಚು ಮಾಡಿತ್ತು. ಕಾಂಗ್ರೆಸ್‌ ಹಿಂದಿನ ಬಜೆಟ್‌ನಲ್ಲಿ 3.56 ಕೋಟಿ ರೂ. ನೀಡಿದ್ದು, ಈ ಸಲ 1 ಲಕ್ಷ ರೂ. ಮೀಸಲಿಟ್ಟಿದೆ. ಇಷ್ಟು ಹಣದಲ್ಲಿ ಕೋಲು ಖರೀದಿಸಲು ಕೂಡ ಸಾಧ್ಯವಿಲ್ಲ ಎಂದು ಆರ್.‌ ಅಶೋಕ್ ವ್ಯಂಗ್ಯವಾಡಿದರು.

ಕವನ ವಾಚಿಸಿದ ಆರ್‌.ಅಶೋಕ್‌

“ಮುಂಗಡದ ಅಂಗಡಿಯಲ್ಲಿ ತಳಿರು ತೋರಣದ ಸದ್ದು,
ಅಂಗಡಿಯಲ್ಲಿ ಏನಿಲ್ಲ ಏನಿಲ್ಲ,
ಖಾಲಿ ಡಬ್ಬ, ಖಾಲಿ ಡಬ್ಬ” ಎಂದು ಆರ್‌. ಅಶೋಕ್‌ ಅವರು ಬಜೆಟ್‌ ಕುರಿತು ಕವನ ವಾಚಿಸಿದರು.

ಇದನ್ನೂ ಓದಿ: Karnataka Budget Session 2024: ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ; ದಂಡದ ಪ್ರಮಾಣ ಶೇ.50 ಕಡಿತ

ನಮ್ಮ ತೆರಿಗೆ ವಯನಾಡಿನ ಆನೆಗೆ

ನಮ್ಮ ತೆರಿಗೆ ಈಗ ರಾಹುಲ್‌ ಗಾಂಧಿಯವರ ವಯನಾಡು ಕ್ಷೇತ್ರಕ್ಕೆ ಹೋಗಿದೆ. ಈ 15 ಲಕ್ಷ ರೂ. ಯಾರ ಹಕ್ಕು? ನಮ್ಮ ಮನೆಯಲ್ಲಿ ಹಣವಿದ್ದು ಹೆಚ್ಚುವರಿಯಾದರೆ ಮಾತ್ರ ಹಾಗೆ ಮಾನವೀಯತೆಯಿಂದ ನೀಡಬೇಕು. ಆದರೆ ಕನಕಪುರ ತಾಲೂಕಿನ ಪುಟ್ಟನಂಜಯ್ಯ ಅವರು ಆನೆಯಿಂದ ಮೃತಪಟ್ಟಿದ್ದು, ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

Continue Reading
Advertisement
Nitin Gadkari highways
ಬೆಂಗಳೂರು17 mins ago

Nitin Gadkari : ಪೆಟ್ರೋಲ್‌ ಬೆಲೆ ಶೀಘ್ರವೇ 50 ರೂ.ಗೆ ಇಳಿಯಲಿದೆ ಎಂದ ನಿತಿನ್‌ ಗಡ್ಕರಿ

BJP hits out at Rahul Gandhi for insulting Actor aishwarya rai bachchan
ದೇಶ28 mins ago

Rahul Gandhi: ಐಶ್ವರ್ಯಾ ರೈರನ್ನು ಅವಮಾನಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ತರಾಟೆ

INDIA Alliance partners Congress and AAP Seal seat deal for Goa, Haryana, Gujarat
ದೇಶ1 hour ago

INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

Aryaman Ashok Shankar
ಚಾಮರಾಜನಗರ1 hour ago

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

ರಾಜಕೀಯ1 hour ago

Karnataka Budget Session 2024: ಈ ಸರ್ಕಾರದಿಂದ ಹಿಂದೂಗಳಿಗೆ ದ್ರೋಹ: ಆರ್‌. ಅಶೋಕ್‌

Mudda Hanumegowda joins Congress
ತುಮಕೂರು1 hour ago

Mudda hanumegowda : ಕೆಲವರ ಅತೃಪ್ತಿ ನಡುವೆ ಮತ್ತೆ ಕೈ ಸೇರಿದ ಮುದ್ದಹನುಮೇಗೌಡ

D. hiremath foundation
ಉತ್ತರ ಕನ್ನಡ1 hour ago

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

For Registration Movie Telugu Dubbing Rights sold for huge amount
ಸಿನಿಮಾ2 hours ago

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

Uttara Kannada ZP CEO eshwar Kandu visited Dayanilaya specially abled School in Kumta
ಉತ್ತರ ಕನ್ನಡ2 hours ago

Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

Chakravarthi sulibele spoke in Namo Bharat programme at Kudligi
ವಿಜಯನಗರ2 hours ago

Vijayanagara News: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಚಕ್ರವರ್ತಿ ಸೂಲಿಬೆಲೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Catton Candy contain cancer Will there be a ban in Karnataka
ಬೆಂಗಳೂರು4 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ7 hours ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ5 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ6 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ6 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಟ್ರೆಂಡಿಂಗ್‌