ವಿಸ್ತಾರ TOP 10 NEWS | ಮುರುಘಾ ಶ್ರೀ ಅರೆಸ್ಟ್‌ನಿಂದ ಮೋದಿ ಪ್ರವಾಸದವರೆಗಿನ ಪ್ರಮುಖ ಸುದ್ದಿಗಳಿವು - Vistara News

ಕರ್ನಾಟಕ

ವಿಸ್ತಾರ TOP 10 NEWS | ಮುರುಘಾ ಶ್ರೀ ಅರೆಸ್ಟ್‌ನಿಂದ ಮೋದಿ ಪ್ರವಾಸದವರೆಗಿನ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

bangalore rains, Bengaluru Rains, Cervical Cancer Vaccine, hanuman birth place controversy, latest, LPG, Modi speech, muddahanumegowda, murugha sree case, murughashri, Yogi Adityanath Karnataka Visit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗುರುವಾರ ಅನೇಕ ಪ್ರಮುಖ ಘಟನಾವಳಿಗಳು ನಡೆದಿದ್ದು, ಮಠದ ಆವರಣದಲ್ಲೆ ಬಂಧಿಸಲಾಗಿದೆ. ಈಗಾಗಲೆ ಕೇರಳಕ್ಕೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದು, ಸರ್ಕಾರಿ ಯೋಜನೆಗಳ ಲೋಕಾರ್ಪಣೆ ಜತೆಗೆ ರಾಜಕೀಯ ಸಂದೇಶವನ್ನೂ ನೀಡುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ʼಕ್ಷೇಮವನʼವನ್ನು ಉತ್ತರ ಪ್ರದೇಶ ಯೋಗಿ ಆದಿತ್ಯನಾಥ ಉದ್ಘಾಟಿಸಿ ಸಿಎಂ ಬೊಮ್ಮಾಯಿಯವರನ್ನು ಶ್ಲಾಘಿಸಿದ್ದಾರೆ, 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಗೆ ಸರ್ಕಾರ ನಾಮಕರಣ ಮಾಡಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಮುರುಘಾಶ್ರೀ ಪ್ರಕರಣ| ದೂರು ದಾಖಲಾಗಿ ಒಂದು ವಾರದ ನಂತರ ಮುರುಘಾಶ್ರೀಗಳನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.
ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾಶರಣರನ್ನು ಬಂಧಿಸಲಾಗಿದೆ. ಶ್ರೀಗಳನ್ನು ಬಿಗಿ ಭದ್ರತೆ ಮಧ್ಯೆಯೇ ಬಂಧಿಸಲಾಗಿದ್ದು, ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಶ್ರೀಗಳ ವಿರುದ್ಧ ದೂರು ದಾಖಲಾದ ಆರು ದಿನಗಳ ಬಳಿಕ ಅವರನ್ನು ಬಂಧಿಸಲಾಗಿದೆ. ಬಂಧನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.
ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣವು ಕೆಲವು ದಿನಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾದರೂ ಬಂಧಿಸದ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
5 ಗಂಟೆ ಸತತ ವಿಚಾರಣೆ ಬಳಿಕ ವಾರ್ಡನ್‌ ರಶ್ಮಿ ಸಾಂತ್ವನ ಕೇಂದ್ರಕ್ಕೆ ಶಿಫ್ಟ್‌, ನಾಳೆ ಮತ್ತೆ ವಿಚಾರಣೆ

2. ಮೋದಿ in Mangaluru | ನಳಿನ್‌ ಕುಮಾರ್‌ ಕಟೀಲು ʼಪುನರ್‌ಪ್ರತಿಷ್ಠಾಪನೆʼ ಘೋಷಿಸುವರೇ ನಮೋ?
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ೩೮೦೦ ಕೋಟಿ ರೂ. ಮೊತ್ತದ ಪ್ರಮುಖ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಇದಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿರುವ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಆಗಸ್ಟ್‌ 28ರ ಭಾನುವಾರ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಇದೀಗ ಪ್ರಧಾನಿ ಕಾರ್ಯಕ್ರಮದಲ್ಲಿ ಕಟೀಲ್‌ ಅವರ ಕುರಿತು ಸ್ಪಷ್ಟ ಸಂದೇಶವೊಂದನ್ನು ನೀಡುವ ಮಾತುಗಳಿವೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮೋದಿ ಮಂಗಳೂರಿಗೆ ಬರುತ್ತಿರುವುದು ಯಾಕೆ? ಯಾವ್ಯಾವ ಯೋಜನೆಗಳಿಗೆ ಚಾಲನೆ? ಇಲ್ಲಿದೆ Full details

3. ಬೆಂಗಳೂರಿನ ಸಮಸ್ಯೆಗೆ ಹಿಂದಿನ ಸರ್ಕಾರಗಳೇ ಕಾರಣ: ಸಿಟಿ ರೌಂಡ್ಸ್‌ ನಂತರ ಸಿಎಂ ಬೊಮ್ಮಾಯಿ ಆರೋಪ
ರಾಜಕಾಲುವೆ ಒತ್ತುವರಿ, ರಸ್ತೆ ಗುಂಡಿ ಸೇರಿ ಬೆಂಗಳೂರಿನ ನಾಗರಿಕರನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಈ ಹಿಂದಿನ ಸರ್ಕಾರಗಳ ಆಡಳಿತವೇ ಕಾರಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾಗದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಬೊಮ್ಮಾಯಿ ಮಾತನಾಡಿದರು. ಕಳೆದ 8-10 ವರ್ಷದಲ್ಲಿ ಪೂರ್ತಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆಗ ಇಷ್ಟೆಲ್ಲಾ ಸವಾಲುಗಳು ಕೂಡ ಇರಲಿಲ್ಲ. ಆಗ ನಡೆದ ಕೆಲ ಯೋಜನೆಗಳು ಕಳಪೆಯದ್ದಾಗಿವೆ. ಹಿಂದಿನ ಸರ್ಕಾರಗಳು ಭ್ರಷ್ಟಾಚಾದಿಂದ ಕೂಡಿದ ಯೋಜನೆಗಳನ್ನು ರೂಪಿಸಿದ್ದು, ಬಿಬಿಎಂಪಿಯನ್ನು ತಮ್ಮಿಷ್ಟಕ್ಕೆ ನಡೆಸಿಕೊಂಡಿವೆ ಎಂದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಸಿಎಂ ಬೊಮ್ಮಾಯಿಗೆ ಯೋಗಿ ಆದಿತ್ಯನಾಥ ಬಹುಪರಾಕ್‌: ʼಕ್ಷೇಮವನʼದಲ್ಲಿ ಸಿಕ್ಕಿತು ರಾಜಕೀಯ ಸಂದೇಶ!
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸರ್ಕಾರದ ನೇತೃತ್ವ, ನಾಯಕತ್ವದ ವಿಚಾರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಹುಮುಖ್ಯವಾದ ಸಂದೇಶವೊಂದನ್ನು ಬೆಂಗಳೂರಿನಲ್ಲಿ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವಕ್ಕೆ ಅನೇಕ ಬಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ಬಳಿಯ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ಯೋಗಿಕ್‌ ಸೈನ್ಸಸ್‌ನ ʼಕ್ಷೇಮವನʼ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾಷಣದ ನಡುವೆ ಅನೇಕ ಬಾರಿ ಸಿಎಂ ಬೊಮ್ಮಾಯಿ ಅವರನ್ನು ಶ್ಲಾಘಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಆಂಜನೇಯನ ಜನ್ಮಸ್ಥಳ ಕರ್ನಾಟಕ ಎಂದ ಯೋಗಿ ಆದಿತ್ಯನಾಥ: ʼಕ್ಷೇಮವನʼದಲ್ಲಿ UP ಸಿಎಂ ಹೇಳಿದ್ದೇನು?
ರಾಮಭಕ್ತ ಹನುಮಂತನ ಜನ್ಮಸ್ಥಾನದ ಕುರಿತು ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಚರ್ಚೆಗಳು ನಡೆದಿರುವಂತೆಯೇ, ಕರ್ನಾಟಕವೇ ಹನುಮನ ಜನ್ಮಸ್ಥಳ ಎಂದು ಅಯೋಧ್ಯೆ ಕ್ಷೇತ್ರವನ್ನೊಳಗೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುದ್ರೆ ಒತ್ತಿದ್ದಾರೆ. ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಸಹಾಯಕ್ಕೆ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಯಿತು. ಭಾರತದಲ್ಲಿ ರಾಮರಾಜ್ಯ ಸ್ಥಾಪನೆಗೆ ಹನುಮಂತನ ಈ ಕಾರ್ಯವೇ ಆಧಾರವಾಯಿತು ಎಂದು ಶ್ಲಾಘಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rain News | ಮುಂದಿನ 24 ಗಂಟೆಯಲ್ಲಿ ಮಳೆ ಅಬ್ಬರ; ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್‌!
ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮಳೆಗೆ ಪೂರಕ ವಾತಾವರಣ ಇದ್ದು ಇದರ ಪ್ರಭಾವದಿಂದ ರಾಜ್ಯಾದ್ಯಂತ ಮಳೆಯಾಗಲಿದೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಮಳೆ ಅಬ್ಬರ ಇರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಬೆಂಗಳೂರಿನಲ್ಲಿ ಮಳೆಯ ಎಫೆಕ್ಟ್‌, ಕಚೇರಿಗೆ ತೆರಳಲು ತಗಲುವ ಸಮಯದಲ್ಲಿ 62% ಏರಿಕೆ!

7. 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಗೆ ನಾಮಕರಣ: ಉದ್ಘಾಟನೆ ದಿನಾಂಕ ಘೋಷಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರಿನ ದೇವನಹಳ್ಳಿಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪನೆಯಾಗುತ್ತಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ರಾಜ್ಯ ಸರ್ಕಾರ ನಾಮಕರಣ ಮಾಡಿದೆ. 108 ಅಡಿಯ ಪ್ರತಿಮೆಗೆ “ಪ್ರಗತಿಯ ಪ್ರತಿಮೆ” ಎಂದು ನಾಮಕರಣ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದು, ನವೆಂಬರ್‌ 2ರಂದು ಪ್ರಧಾನಿ ಮೋದಿಯವರಿಂದಲೇ ಉದ್ಘಾಟನೆ ಆಗುತ್ತದೆ ಎಂದೂ ತಿಳಿಸಿದ್ದಾರೆ. ಅಮೆರಿಕದಲ್ಲಿರುವ 151 ಅಡಿ ಎತ್ತರದ ಬೃಹತ್‌ ಪ್ರತಿಮೆಗೆ ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ಎಂದು ನಾಮಕರಣ ಮಾಡಲಾಗಿದೆ. ಗುಜರಾತ್‌ನಲ್ಲಿ, ಸರ್ದಾರ್‌ ಪಟೇಲರ 597 ಅಡಿ ಎತ್ತರದ ಪ್ರತಿಮೆಗೆ ಏಕತಾ ಪ್ರತಿಮೆ ಎಂದು ಹೆಸರಿಡಲಾಗಿದೆ. ಹೈದರಾಬಾದ್‌ ಬಳಿ ಇತ್ತೀಚೆಗಷ್ಟೆ ನಿರ್ಮಾಣವಾದ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Cervical Cancer

8. ವಿಸ್ತಾರ Explainer | ಗರ್ಭಕಂಠ ಕ್ಯಾನ್ಸರ್‌ಗೆ ಸ್ವದೇಶಿ ಲಸಿಕೆ, ಇನ್ನಿಲ್ಲ ಸಾವಿನ ಅಂಜಿಕೆ
ಗರ್ಭಕಂಠ ಕ್ಯಾನ್ಸರ್ (Cervical Cancer). ಇದು ಮಹಿಳೆಯರ ಜೀವ ಹಿಂಡುವ ಅರ್ಬುದ ರೋಗ. ಭಾರತದಲ್ಲಿ ವಾರ್ಷಿಕವಾಗಿ 74 ಸಾವಿರ ಮಹಿಳೆಯರ ಸಾವಿಗೆ ಈ ಕ್ಯಾನ್ಸರ್ ಕಾರಣವಾಗಿದೆ. ಈವರೆಗೂ ಈ ಕ್ಯಾನ್ಸರ್ ನಿವಾರಿಸುವ ಸ್ವದೇಶಿ ಔಷಧ, ಲಸಿಕೆಯಾಗಲಿ ಇರಲಿಲ್ಲ. ಆದರೆ, ಇನ್ನು ಮುಂದೆ ಅಂಥ ಕೊರತೆ ಎದುರಾಗುವುದಿಲ್ಲ. ಭಾರತವು ಈ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ (Cervical Cancer Vaccine) ಯನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವೈದ್ಯ ವಿಜ್ಞಾನದಲ್ಲಿ ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಸ್ವದೇಶಿಯವಾಗಿ ನಿರ್ಮಿಸಲಾದ ಮೊದಲ ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ(HPV)ಯನ್ನು ಗುರುವಾರ ಲಾಂಚ್ ಮಾಡಲಾಗುತ್ತಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Congress Politics | ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ ಮಾಜಿ ಸಂಸದ ಮುದ್ದಹನುಮೇಗೌಡ; ಮುಂದಿನ ದಾರಿ?
ಮಾಜಿ ಸಂಸದ, ಕಾಂಗ್ರೆಸ್‌ ಹಿರಿಯ ಮುಖಂಡ ಮುದ್ದಹನುಮೇಗೌಡ ಕಾಂಗ್ರೆಸ್‌ ತೊರೆದಿದ್ದಾಗಿ ಅಧಿಕೃತವಾಗಿ (Congress Politics) ಘೋಷಣೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಮುದ್ದಹನುಮೇಗೌಡ ಅವರು ಪಕ್ಷ ತೊರೆಯುವ ಸಂಬಂಧ ಮಾತನಾಡಿದ್ದಾರೆನ್ನಲಾಗಿದೆ. ಬಳಿಕ ಅಲ್ಲಿಂದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಮಗೆ ಪಕ್ಷದಿಂದ ಆದ ಅನ್ಯಾಯಗಳು, ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಅಡುಗೆ ಅನಿಲ ಬೆಲೆ ಸಿಲಿಂಡರ್‌ಗೆ 91.50 ರೂ. ಇಳಿಕೆ, ಇಂದಿನಿಂದಲೇ ಜಾರಿ, ಯಾವುದಕ್ಕೆ ಅನ್ವಯ?
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ೯೧.೫೦ ರೂ. ಇಳಿಸಿವೆ. ಇದು ಸೆಪ್ಟೆಂಬರ್‌ ೧ರಿಂದಲೇ ಜಾರಿಗೆ ಬರಲಿದೆ. ಈ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು ದೊಡ್ಡದೊಂದು ಕೊಡುಗೆ ನೀಡಿದಂತಾಗಿದೆ.
ಇಂಡೇನ್‌ ಗ್ಯಾಸ್‌ ಕಮರ್ಷಿಯಲ್‌ ೧೯ ಕೆಜಿ ಸಿಲಿಂಡರ್‌ಗೆ ೧,೯೭೬ ರೂ.ನಿಂದ ೧೮೮೫ ರೂ.ಗೆ ಇಳಿದಿದೆ. ಅದೇ ರೀತಿ, ಕೋಲ್ಕೊತಾದಲ್ಲಿ ೨೦೯೫ ರೂ. ಇದ್ದಿದ್ದು ೧೯೯೫ ರೂ.ಗೆ ಇಳಿದಿದೆ. ಮುಂಬಯಿಯಲ್ಲಿ ಇದುವರೆಗೆ ೧೯೩೬ ರೂ. ಇತ್ತು. ಅದೀಗ ೧೮೪೪ ರೂ.ಗೆ ಇಳಿಯಲಿದೆ. ಚೆನ್ನೈಯಲ್ಲಿ ೧೯ ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ದರ ೨೧೪೧ ರೂ. ಇತ್ತು. ಈಗ ಅದು ೨೦೪೫ ರೂ.ಗೆ ಇಳಿಯಲಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
Oil price | ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಇಳಿಮುಖ, ಪೆಟ್ರೋಲ್-ಡೀಸೆಲ್‌ ದರ ಇಳಿಕೆಯ ನಿರೀಕ್ಷೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಈ ಬಗ್ಗೆ ಜನ ಜಾಗೃತರಾಗುವುದು ಮುಖ್ಯ.

VISTARANEWS.COM


on

Steet Food
Koo

ಬೇಸಿಗೆಯ ಬಿಸಿಲಿನ ತೀವ್ರತೆ ಹಾಗೂ ನೀರಿನ ಲಭ್ಯತೆಯ ಕೊರತೆ ಹೆಚ್ಚಾಗುತ್ತಿರುವಂತೆ, ಬೀದಿ ಬದಿಯ ಆಹಾರ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆಯಾಗುವ ಆಹಾರವನ್ನು ಸೇವಿಸಿ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಂಡ್ಯದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಐಸ್ ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್‌ ತಿಂದು ಅಸ್ವಸ್ಥನಾಗಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡವತ್ತಿ ಕ್ರಾಸ್‌ನ ಗೊಲ್ಲರಹಟ್ಟಿಯಲ್ಲಿ ರಾಮನವಮಿಯಂದು ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥರಾಗಿದ್ದಾರೆ. ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು, ವಾಂತಿ- ಭೇದಿ ಶುರುವಾಗಿದೆ.

ಇಂಥ ಪ್ರಕರಣಗಳು ಹೆಚ್ಚುತ್ತಿವೆ; ಹೀಗಾಗಿಯೇ ಸ್ಥಳೀಯಾಡಳಿತಗಳು, ಸರ್ಕಾರದ ಜೊತೆಗೆ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಿದೆ. ಬೇಸಿಗೆಯಲ್ಲಿ ಸಹಜವಾಗಿಯೇ ಹೊರಗೆ ಓಡಾಡುವವರಿಗೆ ದಾಹ ಹೆಚ್ಚು. ಈ ಸಲವಂತೂ ಧಗೆ ಇನ್ನಷ್ಟು ಹೆಚ್ಚಿದೆ. ತಣ್ಣಗೆ ಏನಾದರೂ ಸಿಕ್ಕರೆ ಕುಡಿದುಬಿಡೋಣ ಎನಿಸುತ್ತದೆ. ರಾಮನವಮಿ ಕೂಡ ಕಡುಬೇಸಿಗೆಯಲ್ಲಿ ಬರುತ್ತದೆ. ಸಾರ್ವಜನಿಕವಾಗಿ ಪಾನಕ- ಪನಿವಾರ ವಿತರಣೆ ನಡೆಯುತ್ತದೆ. ಹೆಚ್ಚಿನ ಭಕ್ತರು ಸ್ವಚ್ಛತೆಯ ಕಾಳಜಿ ವಹಿಸುತ್ತಾರಾದರೂ, ಕೆಲವೆಡೆ ಪ್ರಮಾದವಶಾತ್‌ ಅವಘಡಗಳು ಸಂಭವಿಸುತ್ತವೆ. ಇದಕ್ಕಾಗಿಯೇ ಸಾರ್ವಜನಿಕವಾಗಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ವಿತರಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನು ಖಾಸಗಿ, ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಐಸ್‌ಕ್ರೀಮ್‌ನಂಥ ತಿಂಡಿತಿನಿಸುಗಳು ಸೇವಿಸುವಾಗ ಆಹಾ ಎನಿಸಿದರೂ, ಅದರ ಪರಿಣಾಮ ಆಮೇಲೆ ತಿಳಿಯುತ್ತದೆ. ತಣ್ಣಗೆ ಕೊರೆಯುವ ಐಸ್‌ಕ್ರೀಮ್‌ ಗಂಟಲಿನಲ್ಲಿ ಸೋಂಕು ಉಂಟುಮಾಡಬಲ್ಲದು. ಇದು ಎಲ್ಲ ಐಸ್‌ಕ್ರೀಮ್‌ಗಳಿಗೆ ಹೇಳಿದ ಮಾತಲ್ಲ. ಶುಚಿತ್ವ, ಶುದ್ಧತೆ, ಗ್ರಾಹಕರ ಆರೋಗ್ಯದ ಕಡೆಗೆ ಗಮನ ಕೊಡದ ಈಟರಿಗಳ ಬಗ್ಗೆ ಮಾತ್ರ ಈ ಮಾತನ್ನು ಹೇಳಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಇರಾನ್ -‌ ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ

ಹಾಗಾದರೆ ಸ್ಥಳೀಯಾಡಳಿತಗಳು ಸಾರ್ವಜನಿಕರ ಆರೋಗ್ಯ ಖಾತರಿಪಡಿಸಿಕೊಳ್ಳಲು ಏನು ಮಾಡಬಹುದು? ಬೀದಿ ಬದಿಯ ಈಟರಿಗಳಿಗೆ ದಿಡೀರ್‌ ದಾಳಿ ನಡೆಸಿ ಅಲ್ಲಿನ ಹೈಜೀನ್‌ ಅನ್ನು ಪರೀಕ್ಷಿಸುವುದು ಒಂದು ದಾರಿ. ಹೋಟೆಲ್‌ಗಳೂ ಈ ಹೈಜೀನ್‌ ಮಾನದಂಡಗಳನ್ನು ಅನುಸರಿಸಬೇಕು. ಸಾರ್ವಜನಿಕರೂ, ಸ್ವಚ್ಛತೆ ಕಾಪಾಡಿಕೊಳ್ಳದ ಸ್ಥಳಗಳಲ್ಲಿ ಆಹಾರ ಸೇವಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರಿನಿಂದ ಹಾಗೂ ಆಹಾರದಿಂದ ಬಂದ ಕಾಲರಾ ಕೂಡ ಕೆಲವರಲ್ಲಿ ಕಂಡುಬಂದಿದೆ. ಸೋಂಕುಗಳು ವ್ಯಾಪಕವಾಗಿರುವ ಕಾಲದಲ್ಲಿ, ಮನೆಯಲ್ಲಿ ಮಾಡಿಕೊಳ್ಳುವ ಆರೋಗ್ಯಕರ ಆಹಾರವೇ ಅತ್ಯುತ್ತಮ.

Continue Reading

ಪ್ರಮುಖ ಸುದ್ದಿ

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Moral policing: ಈರಜ್ಜನ ಹಟ್ಟಿ ನಿವಾಸಿ ಉಮೇಶ್ (25) ಹಲ್ಲೆಗೆ ಒಳಗಾದವರು. ಅವರ ಮರ್ಮಾಂಗ ಸೇರಿದಂತೆ ಹಲವೆಡೆ ಮಾರಕ ಹಲ್ಲೆಯನ್ನು ನಡೆಸಲಾಗಿದೆ. ಉಮೇಶ್ ಹಾಗೂ ಅವರು ಡ್ರಾಪ್ ಮಾಡಿದ ಮುಸ್ಲಿಂ ಯುವತಿ ಒಂದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಂತೆಯೇ ಅವರು ಬೈಕ್​ನಲ್ಲಿ ಜತೆಯಾಗಿ ಹೋಗುತ್ತಿದ್ದಾಗ ಪುಂಡರ ಗುಂಪು ನಗರದ SJM ಕಾಲೇಜು ಬಳಿ ಅಡ್ಡಗಟ್ಟಿ ಹಲ್ಲೆ ನಡೆಸಿದೆ.

VISTARANEWS.COM


on

Moral policing
Koo

ಚಿತ್ರದುರ್ಗ: ಜತೆಗೆ ಕೆಲಸ ಮಾಡುವ ಮುಸ್ಲಿಂ ಯುವತಿಯೊಬ್ಬಳನ್ನು ಬೈಕ್​ನಲ್ಲಿ ಡ್ರಾಪ್ ಮಾಡಿರುವುದನ್ನು ಆಕ್ಷೇಪಿಸಿ ಮುಸ್ಲಿಂ ಯುವಕರ ಗುಂಪು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ ನೈತಿಕ ಪೊಲೀಸ್​ಗಿರಿ (Moral policing) ಪ್ರದರ್ಶಿಸಿದ ಪ್ರಕರಣ ಚಿತ್ರದುರ್ಗದಲ್ಲಿ ವರದಿಯಾಗಿದೆ. ಈ ಬಗ್ಗೆ ವಿರೋಧ ವ್ಯಕ್ತಗೊಂಡಿದ್ದು ನೈತಿಕ ಪೊಲೀಸ್​ಗಿರಿ ಪ್ರದರ್ಶಿಸಿದವರನ್ನು ಶಿಕ್ಷಿಸಬೇಕು ಎಂಬ ಒತ್ತಾಯ ಕೇಳಿ ಬಂದಿದ.

ಈರಜ್ಜನ ಹಟ್ಟಿ ನಿವಾಸಿ ಉಮೇಶ್ (25) ಹಲ್ಲೆಗೆ ಒಳಗಾದವರು. ಅವರ ಮರ್ಮಾಂಗ ಸೇರಿದಂತೆ ಹಲವೆಡೆ ಮಾರಕ ಹಲ್ಲೆಯನ್ನು ನಡೆಸಲಾಗಿದೆ. ಉಮೇಶ್ ಹಾಗೂ ಅವರು ಡ್ರಾಪ್ ಮಾಡಿದ ಮುಸ್ಲಿಂ ಯುವತಿ ಒಂದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಂತೆಯೇ ಅವರು ಬೈಕ್​ನಲ್ಲಿ ಜತೆಯಾಗಿ ಹೋಗುತ್ತಿದ್ದಾಗ ಪುಂಡರ ಗುಂಪು ನಗರದ SJM ಕಾಲೇಜು ಬಳಿ ಅಡ್ಡಗಟ್ಟಿ ಹಲ್ಲೆ ನಡೆಸಿದೆ.

ಉಮೇಶ್ ನ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸತತವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ತೆಲೆ, ಮರ್ಮಾಂಗ ಭಾಗಕ್ಕೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಉಮೇಶ್​ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ

ಕಾರ್ಪೋರೇಟರ್‌ ಮಗಳ ಕೊಲೆ; ಪ್ರೀತಿಸಲು ನಿರಾಕರಿಸಿದ್ದಕ್ಕೆ 9 ಬಾರಿ ಚಾಕುವಿನಿಂದ ಇರಿದ ಫಯಾಜ್‌!

ಹುಬ್ಬಳ್ಳಿ: ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿಯೊಬ್ಬ ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್‌ವೊಬ್ಬರ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದಾನೆ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ನೇಹಾ ಹಿರೇಮಠ ಕೊಲೆಯಾದ ಯುವತಿಯಾಗಿದ್ದಾಳೆ. ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ. ಫೈಜಲ್ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.

ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಆರೋಪಿ ಫೈಜಲ್ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ‌ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಿದ್ದಾರೆ.

Continue Reading

ಪ್ರಮುಖ ಸುದ್ದಿ

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Lok Sabha Election: ಕೋಲಾರ ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಮುಖಂಡ ಸಭೆಯಲ್ಲಿ ಮಾತನಾಡುವಾಗ ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡರೆ ಸಿದ್ದರಾಮಯ್ಯ ಅವರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

lok Sabha Election
Koo

ಕೋಲಾರ : ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್​ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಸಚಿವ ಬೈರತಿ ಸುರೇಶ್​ ನೀಡಿರುವ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ. ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಕೋಲಾರ ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಮುಖಂಡ ಸಭೆಯಲ್ಲಿ ಮಾತನಾಡುವಾಗ ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡರೆ ಸಿದ್ದರಾಮಯ್ಯ ಅವರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕುರುಬ ಸಮುದಾಯ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ಅವರು ಸಿಎಂ ಕುರ್ಚಿಯಲ್ಲಿ ಇರಬೇಕು ಎಂದು ಸುರೇಶ್ ಅವರು ಹೇಳಿದ್ದಾರೆ. ನಿಮ್ಮ ಬೆಂಬಲ ಕಾಂಗ್ರೆಸ್​ ಪಕ್ಷದ ಮೇಲಿರಬೇಕು. ಸಿದ್ದರಾಮಯ್ಯ ನವರ ಮೇಲಿರಬೇಕು. ಅದಕ್ಕಾಗಿ ಅಭ್ಯರ್ಥಿ ಗೌತಮ್​ ಅವರನ್ನು ಗೆಲ್ಲಿಸಬೇಕು ಎಂದು ಸುರೇಶ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಮಪತ್ರ ಸಲ್ಲಿಕೆ

ಸಮುದಾದಯ ಜನರು ಬೇರೆ ಮನಸ್ಸು ಮಾಡಿ ಬೇರೆಯವನ್ನು ಗೆಲ್ಲಿಸಿದರೆ ಸಿದ್ದರಾಮಯ್ಯನವರ ಸೀಟಿಗೆ ಕಂಟಕವಾಗಲಿದೆ ಎಂದು ಸಚಿವ ಬಿ.ಎಸ್​.ಸುರೇಶ್​ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಕೈಗೊಂಬೆ ಐಟಿ ಅಧಿಕಾರಿಗಳಿಂದ ಕಾರ್ಯಕರ್ತರ ಮೇಲೆ ದೌರ್ಜನ್ಯ: ಡಿ.ಕೆ. ಸುರೇಶ್

ಆನೇಕಲ್: ಬಿಜೆಪಿ (BJP) ಹಾಗೂ ಮಾಜಿ ಪ್ರಧಾನಿಗಳ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮನೆಯಲ್ಲಿ ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ (Lok Sabha Election 2024) ಆರೋಪಿಸಿದ್ದಾರೆ.

ಆನೇಕಲ್‌ನಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಭೀತಿಯಿಂದ ಐಟಿ, ಇಡಿ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಕೆಲವು ಅಧಿಕಾರಿಗಳು ಬಂದು ನಮ್ಮ ಕಾರ್ಯಕರ್ತರನ್ನು, ಅವರ ಕುಟುಂಬದ ಹೆಣ್ಣುಮಕ್ಕಳನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಬರೆಯುತ್ತಿದ್ದು, ಐಟಿ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ. ಅವರ ಕೆಲಸ ಕೇವಲ ಪರಿಶೀಲನೆ ಮಾಡುವುದು ಮಾತ್ರ. ಅದನ್ನು ಬಿಟ್ಟು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನ ಚಾಲಕರ ಮನೆಯಲ್ಲಿ ಅವರ ಕುಟುಂಬದವರನ್ನು ಎಳೆದಾಡಿದ್ದಾರೆ. ಮಹಿಳೆಯರನ್ನು ತೀಕ್ಷ್ಣವಾಗಿ ಕಂಡು, ಯುವಕರನ್ನು ಒಂಟಿ ಕಾಲಲ್ಲಿ ನಿಲ್ಲಿಸಿದ್ದಾರೆ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಬಿಜೆಪಿಯವರ ಕೈಗೊಂಬೆಯಾಗಿ ಐಟಿ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿದೆ. ಅವರು ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಅಧಿಕಾರಿಗಳ ದುರ್ಬಳಕೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಿಷ್ಪಕ್ಷಪಾತ ಚುನಾವಣೆ ಮಾಡಬೇಕು. ನಾನು ನನ್ನ ಕೆಲಸದ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ ಹೊರತು, ನನಗೆ ಯಾರನ್ನು ಬೆದರಿಸುವ ಅಗತ್ಯವಿಲ್ಲ ಎಂದು ಸಂಸದ ಡಿ.ಕೆ ಸುರೇಶ್‌ ತಿಳಿಸಿದ್ದಾರೆ.

ಜನತಾದಳ ಹಾಗೂ ಜೆಡಿಎಸ್‌ನವರು ಕ್ಷುಲ್ಲಕ ರಾಜಕಾರಣ ಮಾಡುವುದರಲ್ಲಿ ಹೆಸರುವಾಸಿ. ಅವರು ಹಿರಿಯರಿದ್ದು, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಮಾಡಿರುವ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದ ಅವರು, ನಾನು ಹಾಗೂ ಶಿವಕುಮಾರ್ ಅವರಿಗೆ ಕಲ್ಲು ಹೊಡೆದಿದ್ದಾರೆ ಎಂದು ಹೇಳುತ್ತಾರಲ್ಲ, ಅವರ ಕುಟುಂಬದಲ್ಲಿ ಯಾರೆಲ್ಲಾ ಎಲ್ಲಿ ಕಲ್ಲು ಹೊಡೆದಿದ್ದಾರೆ ಎಂದು ನಾನು ತೋರಿಸುತ್ತೇನೆ. ಅವರು ಯಾರ ಜಮಿನುಗಳನ್ನು ಯಾರ ಹೆಸರಲ್ಲಿ ಹಾಕಿಕೊಂಡಿದ್ದಾರೆ ಎಂಬುದನ್ನು ತೋರಿಸಬಹುದು. ಆದರೆ ಅದರ ಅಗತ್ಯ ನಮಗಿಲ್ಲ ಎಂದು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

Hubli murder case : ಆರೋಪಿ ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಯಾಗಿದ್ದಾನೆ. ತಂದೆ ಬಾಬಾಸಾಬ್, ತಾಯಿ ಮುಮ್ತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಫಯಾಜ್​ ಫೇಲ್ ಆಗಿದ್ದರಿಂದ ಕಾಲೇಜ್ ಬಿಟ್ಟಿದ್ದ. ಆತ ಅದೇ ಕಾಲೇಜಿನಲ್ಲಿ ಬಿಸಿಎ ಕೋರ್ಸ್​ನಲ್ಲಿ ಫೇಲ್ ಆಗಿದ್ದ. ಬಿಸಿಎ ಕಲಿಯುವಾಗ ವೇಳೆ ನೇಹಾ ಆತನ ಕ್ಲಾಸ್​ಮೇಟ್ ಆಗಿದ್ದರು.

VISTARANEWS.COM


on

Hubli Murder Case
Koo

ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ (Hubli murder case) ಆರೋಪಿ ಫಯಾಜ್​ನ ಪೋಷಕರಿಬ್ಬರೂ ಶಾಲಾ ಶಿಕ್ಷಕರು ಎಂಬ ಮಾಹಿತಿ ಗೊತ್ತಾಗಿದೆ. ಆದರೆ, ವಿದ್ಯೆ ತಲೆಗೆ ಹತ್ತಿಸಿಕೊಳ್ಳದ ಆತ ಕಾಲೇಜಿನಿಂದ ಫೇಲ್ ಆಗಿ ಹೊರಕ್ಕೆ ಬಿದಿದ್ದ. ಇದೀಗ ಹಳೇ ಸಹಪಾಠಿಯನ್ನೇ ಕೊಲೆ ಮಾಡಿದ್ದಾನೆ. ಆಕೆಯನ್ನು ಕೊಲ್ಲಲೆಂದೇ ಚಾಕು ಹಿಡಿದುಕೊಂಡು ಕಾಲೇಜ್​ ಕ್ಯಾಂಪ್​ಸ್​ಗೆ ಬಂದಿದ್ದ ಎಂಬ ಮಾಹಿತಿ ಗೊತ್ತಾಗಿದೆ.

ಆರೋಪಿ ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಯಾಗಿದ್ದಾನೆ. ತಂದೆ ಬಾಬಾಸಾಬ್, ತಾಯಿ ಮುಮ್ತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಫಯಾಜ್​ ಫೇಲ್ ಆಗಿದ್ದರಿಂದ ಕಾಲೇಜ್ ಬಿಟ್ಟಿದ್ದ. ಆತ ಅದೇ ಕಾಲೇಜಿನಲ್ಲಿ ಬಿಸಿಎ ಕೋರ್ಸ್​ನಲ್ಲಿ ಫೇಲ್ ಆಗಿದ್ದ. ಬಿಸಿಎ ಕಲಿಯುವಾಗ ವೇಳೆ ನೇಹಾ ಆತನ ಕ್ಲಾಸ್​ಮೇಟ್ ಆಗಿದ್ದರು.

ಹಲವು ಸಮಯದಿಂದ ಆಕೆಯ ಹಿಂದೆ ಬಿದ್ದಿದ್ದ ಫಯಾಜ್​ ಪ್ರೀತಿ ಮಾಡುವಂತೆ ಸತಾಯಿಸಿದ್ದ. ಆದರೆ ಅದಕ್ಕೆ ನಿರಾಕರಿಸಿದ್ದಳು. ಅಂತೆಯೇ ಗುರುವಾರ ಕಾಲೇಜಿಗೆ ಚಾಕು ಸಮೇತ ಬಂದಿದ್ದ ಆತ ಕೊಲೆ ಮಾಡಿದ್ದಾನೆ.

ಏನಿದು ಪ್ರಕರಣ?

ಫಯಾಜ್​ ಪಾಗಲ್‌ ಪ್ರೇಮಿಯಾಗಿದ್ದು, ನೇಹಾ ಅವರನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದಾನೆ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.

ಇದನ್ನೂ ಓದಿ: Wild Animals Attack: ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು

ನೇಹಾಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಆರೋಪಿ ಫಯಾಜ್​ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ‌ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.

ಪೊಲೀಸ್ ಠಾಣೆ ಎದುರು ಹಿಂದೂ ಸಂಘಟನೆಗಳ ಪ್ರತಿಭಟನೆ

ನೇಹಾಳನ್ನು ಕೊಂದ ಆರೋಪಿಯನ್ನು ಎನ್​ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ ಹಿಂದೂ ಕಾರ್ಯಕರ್ತರು ಪೊಲೀಸ್​ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದಿದೆ. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆರೋಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯಿಸಿದ್ದಾರೆ. ಪಯಾಜ್‌ನನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಡಿಸಿಪಿ ರಾಜೀವ್ ಮತ್ತು ಸಂಘಟನೆಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

Continue Reading
Advertisement
Steet Food
ಆಹಾರ/ಅಡುಗೆ33 mins ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ45 mins ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ1 hour ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ1 hour ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ2 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ2 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ2 hours ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ3 hours ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ3 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ3 hours ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌