Vistara Top 10 News : ಸದನದಲ್ಲಿ ಬಿಜೆಪಿ ಗದ್ದಲ, ಬೆಂಗಳೂರು ಸ್ಫೋಟಕ್ಕೆ ಉಗ್ರರ ಸಂಚು ಸೇರಿದಂತೆ ದಿನದ ಪ್ರಮುಖ ಸುದ್ದಿಗಳಿವು - Vistara News

ಕರ್ನಾಟಕ

Vistara Top 10 News : ಸದನದಲ್ಲಿ ಬಿಜೆಪಿ ಗದ್ದಲ, ಬೆಂಗಳೂರು ಸ್ಫೋಟಕ್ಕೆ ಉಗ್ರರ ಸಂಚು ಸೇರಿದಂತೆ ದಿನದ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

Vistara top 10
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1) Assembly Session : 5 ವಿಧೇಯಕ ಪಾಸ್;‌ ಬಿಲ್‌ ಹರಿದು ಸ್ಪೀಕರ್‌ ಮುಖಕ್ಕೆಸೆದ ಬಿಜೆಪಿ-ಜೆಡಿಎಸ್! ವಿಧಾನಮಂಡಲ ಅಧಿವೇಶನದಲ್ಲಿ (Assembly Session) ಬುಧವಾರ (ಜುಲೈ 19) ತೀವ್ರ ಗದ್ದಲ ಏರ್ಪಟ್ಟಿದೆ. ಐದು ತಿದ್ದುಪಡಿ ವಿಧೇಯಕಗಳನ್ನು ಸದನದಲ್ಲಿ ಅಂಗೀಕಾರ ಮಾಡಲಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಕೆಂಡಾಮಂಡಲವಾಗಿದೆ. ವಿಪಕ್ಷಗಳ ಗದ್ದಲದ ನಡುವೆಯೂ ಅಂಗೀಕಾರ ನಡೆಸಿ ಚರ್ಚೆಗೆ ಸ್ಪೀಕರ್‌ (Vidhanasbha Speaker) ಅವಕಾಶ ನೀಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ವಿಧೇಯಕ ಪ್ರತಿಯನ್ನು (Copy of the Bill) ಹರಿದು ವಿಧಾನಸಭಾಧ್ಯಕ್ಷರ ಮುಖದ ಮೇಲೆ ಎಸೆದಿದ್ದಾರೆ. ಇದೀಗ ಮತ್ತೊಂದು ಸುತ್ತಿನ ರಾಜಕೀಯ ಕೆಸರೆರಚಾಟಕ್ಕೆ ನಾಂದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ
ಮತ್ತಷ್ಟು ಓದಿಗಾಗಿ: 1) Assembly Session : 10 ಬಿಜೆಪಿ ಸದಸ್ಯರು ಸಸ್ಪೆಂಡ್; ಎಳೆದು ಹೊರಹಾಕಿದ ಮಾರ್ಷಲ್‌.
2) Assembly Session : ವಿಧಾನಸಭೆಯಲ್ಲಿ ತಳ್ಳಾಟಕ್ಕೆ ಕುಸಿದು ಬಿದ್ದ ಯತ್ನಾಳ್‌; ಆಸ್ಪತ್ರೆಗೆ ಶಿಫ್ಟ್

2. ಬೆಂಗಳೂರು ಸ್ಫೋಟಕ್ಕೆ ಸ್ಕೆಚ್‌ ಹಾಕಿದ್ದ ಶಂಕಿತ ಉಗ್ರರು; ಬಂಧಿತರಿಂದ ಭಯಾನಕ ವಿವರ ಬಹಿರಂಗ
ಬೆಂಗಳೂರು: ಬೆಂಗಳೂರನ್ನೇ ನಡುಗಿಸಬಹುದಾಗಿದ್ದ ಬೃಹತ್‌ ಸ್ಫೋಟ (Bangalore Blast) ಸಂಚೊಂದನ್ನು ವಿಫಲಗೊಳಿಸಲಾಗಿದೆ (Bangalore Terror). ಬೆಂಗಳೂರಿನ ಸಿಸಿಬಿ ಪೊಲೀಸರು (Bangalore CCB Police) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಐವರು ಶಂಕಿತ ಉಗ್ರರನ್ನು (Five suspected terrorists) ಬಂಧಿಸಲಾಗಿದ್ದು, ಅವರಿಂದ ವಶಪಡಿಸಿಕೊಂಡ ಒಂದೊಂದು ವಸ್ತುಗಳು ಕೂಡಾ ಭಯ ಹುಟ್ಟಿಸುವಂತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಮತ್ತಷ್ಟು ಓದಿಗಾಗಿ: ಉಗ್ರರು ಇದ್ದದ್ದು ಹಿಂದುಗಳ ಮನೆಯಲ್ಲಿ; ತಾಯಿ, ತಂಗಿಯನ್ನು ತೋರಿಸಿ ಮನೆ ಪಡೆದಿದ್ದ ಉಗ್ರ!

3. ಗೃಹಲಕ್ಷ್ಮಿ ಯೋಜನೆಗೆ ಸಿಕ್ತು ಚಾಲನೆ; ನಾಳೆಯಿಂದಲೇ ನೋಂದಣಿ, Get Ready
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಗೆ (Gruha lakshmi scheme) ಬುಧವಾರ ಸಂಜೆ (ಜುಲೈ 19) ವಿಧಾನಸಭೆಯ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಚಾಲನೆ ನೀಡಲಾಗಿದೆ. ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ. ಜಮಾ ಮಾಡುವ ಈ ಯೋಜನೆಗೆ ಅರ್ಜಿ ಸ್ವೀಕಾರ ಕಾರ್ಯ ಗುರುವಾರದಿಂದ ಆರಂಭವಾಗಲಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಪ್ರಕಟಿಸಿದರು. ರಾಜ್ಯದಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ಸಿಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಮತ್ತಷ್ಟು ಓದಿಗಾಗಿ: ಗೃಹಲಕ್ಷ್ಮಿಗೆ ಆರಂಭದಲ್ಲೇ ವಿಘ್ನ; ಅರ್ಜಿ ಸ್ವೀಕಾರಕ್ಕೆ ಗ್ರಾಮ ಒನ್‌ ನಕಾರ!

4. ಸೌಜನ್ಯ ಪ್ರಕರಣದಲ್ಲಿ ಮೌನ ಮುರಿದ ಡಾ. ಹೆಗ್ಗಡೆ; ವೈಯಕ್ತಿಕ ನಿಂದನೆ ನಿಲ್ಲಿಸಿ ಎಂದು ಎಚ್ಚರಿಕೆ
ಸೌಜನ್ಯ ಸಾವಿನ ಪ್ರಕರಣಕ್ಕೆ (Sowjanya death case) ಸಿಬಿಐ ತನಿಖೆಗೆ (CBI Investigation) ಒಪ್ಪಿಸಿ ಎಂದು ಮೊದಲು ಹೇಳಿದ್ದೇ ನಾನು. ಹಾಗಿರುವಾಗ ಈ ಪ್ರಕರಣದಲ್ಲಿ ಕ್ಷೇತ್ರದ ವತಿಯಿಂದ ರಕ್ಷಣೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ (Shree Kshetra Dharmasthala) ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ (Dr. D Veerendra Heggade) ಸ್ಪಷ್ಟಪಡಿಸಿದ್ದಾರೆ. ಅದೇ ಹೊತ್ತಿಗೆ ವೈಯಕ್ತಿಕವಾಗಿ ಅಪಮಾನ ಮಾಡುವುದನ್ನು ಸಹಿಸಲಾಗದು, ಅದನ್ನು ನಿಲ್ಲಿಸಲೇಬೇಕು ಎಂಬ ಎಚ್ಚರಿಕೆಪೂರ್ವಕ ಸಂದೇಶ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಚಿಕ್ಕಮಗಳೂರು, ಬೆಳಗಾವಿ ಸೇರಿ ವಿವಿಧೆಡೆ ಭಾರಿ ಮಳೆ; ನೆಲಕ್ಕುರುಳಿದ ಮರ, ವಿದ್ಯುತ್‌ ಕಂಬಗಳು
ರಾಜ್ಯದ ವಿವಿಧೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಕೆಲವೆಡೆ ಬಿರುಗಾಳಿ ಮಳೆಗೆ ವಿದ್ಯುತ್‌ ಕಂಬಗಳು, ಮರಗಳು ನೆಲಕ್ಕುರುಳಿರುವುದರಿಂದ ವಿದ್ಯುತ್‌ ಸಂಪರ್ಕ ಕಡಿತವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅದೇ ರೀತಿ ನಿರಂತರ ಮಳೆಯಿಂದ (Rain News) ಮನೆಗಳು, ಬೆಳೆಗಳಿಗೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಬಿರುಕು ತರಲಿದೆಯಾ INDIA; ಬಿಹಾರ ಸಿಎಂ ನಿತೀಶ್​ ಕುಮಾರ್​ ನಿಲುವೇನು?
2024ರ ಲೋಕಸಭೆ ಚುನಾವಣೆಯಲ್ಲಿ (2024 Lok Sabha Election) ಬಿಜೆಪಿಯನ್ನು ಹೇಗಾದರೂ ಸೋಲಿಸಬೇಕು ಎಂದು ಫಣತೊಟ್ಟ ಪ್ರತಿಪಕ್ಷಗಳೆಲ್ಲ ಸೇರಿ ಮೈತ್ರಿಕೂಟ ರಚಿಸಿಕೊಂಡು ಎರಡು ಸಭೆಗಳನ್ನೂ ನಡೆಸಿಯಾಯ್ತು. ಜುಲೈ 18ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ INDIA (Indian National Developmental Inclusive Alliance) ಎಂದು ನಾಮಕರಣ ಮಾಡಿದ್ದಾರೆ. ಆದರೆ ಈಗ INDIA ಎಂಬ ಹೆಸರಿನ ಬಗ್ಗೆ ವಿವಿಧ ಆಯಾಮದ ಚರ್ಚೆಗಳು ಹುಟ್ಟುಕೊಂಡಿವೆ. ಇತ್ತ ಬಿಜೆಪಿ ನಾಯಕರು BJP For Bharat ಎನ್ನುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

7. ಟ್ರಾನ್ಸ್‌ಫಾರ್ಮರ್‌ ಸ್ಫೋಟ; ನಮಾಮಿ ಗಂಗೆ ಯೋಜನೆಯ 20 ಕಾರ್ಮಿಕರ ಸಾವು, ಹಲವರಿಗೆ ಗಾಯ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ನಮಾಮಿ ಗಂಗೆ ಯೋಜನೆಯಲ್ಲಿ ತೊಡಗಿದ್ದ (Namami Gange) ವೇಳೆ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು 20 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಚಮೋಲಿ ಜಿಲ್ಲೆಯ ಅಲಕನಂದ ನದಿ ತೀರದಲ್ಲಿ ಯೋಜನೆಯ ಕೆಲಸ ನಡೆಯುತ್ತಿರುವಾಗ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಚಮೋಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

8. ನನ್ನ‌ ಮತ್ತು ಸುದೀಪ್‌ ಮಧ್ಯೆ ತಂದಿಡಬೇಡಿ ಎಂದು ಮಧ್ಯಸ್ಥಿಕೆಗೆ ಮುಂದಾದ ರವಿಚಂದ್ರನ್‌!
ನಿರ್ಮಾಪಕ ಎಮ್‌ ಎನ್‌​ ಕುಮಾರ್ (MN Kumar) ಹಾಗೂ ಕಿಚ್ಚ ಸುದೀಪ್ ಮಧ್ಯೆ ಮನಸ್ತಾಪ ತಾರಕಕ್ಕೆ ಏರುತ್ತಲೇ ಇದೆ. ಸುದೀಪ್ ಚಿತ್ರಗಳನ್ನು ಕುಮಾರ್ ನಿರ್ಮಾಣ ಮಾಡಿದ್ದರು. ಇಬ್ಬರ ಮಧ್ಯೆ ಗೆಳೆತನ ಇತ್ತು. ಆದರೆ, ಈಗ ಈ ಗೆಳೆತನ ಹಾಳಾಗಿದೆ. ಕುಮಾರ್ ಫಿಲ್ಮ್ ಚೇಂಬರ್ ಮೊರೆ ಹೋದರೆ, ಸುದೀಪ್ (Kichcha Sudeepa) ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ನಾನು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೆ ಎಲ್ಲರೂ ಶಾಂತರಾಗಿರಿ. ನನ್ನ-ಸುದೀಪ್ ಮಧ್ಯೆ ತಂದಿಡಬೇಡಿ ಎಂದು ರವಿಚಂದ್ರನ್ ಕೋರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಪೂರಕ ಸುದ್ದಿಗಾಗಿ: 1) ಕಿಚ್ಚ-ಕುಮಾರ್ ಮನಸ್ತಾಪಕ್ಕೆ ಶಿವಣ್ಣ ಎಂಟ್ರಿ!

9. 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ
ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿ (PDO Recruitment 2023) ಪ್ರಕಟಣೆಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿನ (ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-I, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-II, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-I, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-II ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ನೇಮಕಕ್ಕೆ ಸದ್ಯವೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

10. ಸೋದರ, ಚಿಕ್ಕಪ್ಪ ಇರುವುದು ಪಾಕ್ ಸೇನೆಯಲ್ಲಿ; ಸೀಮಾ ಹೈದರ್ ಬಂದಿದ್ದು ಪ್ರೀತಿಗಾಗೋ, ಗೂಢಚಾರಿಣಿಯೋ?
ಪಬ್​ಜಿ ಮೂಲಕ ಪರಿಚಯ ಆದ ಭಾರತೀಯ ಯುವಕನನ್ನು ಸೇರಲು ಪಾಕಿಸ್ತಾನದಿಂದ, ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ಸೀಮಾ ಹೈದರ್ (Seema Haider)​ ಸುತ್ತ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಸೀಮಾ ಹೈದರ್​ ಮೇ ತಿಂಗಳಲ್ಲಿ ಕಾನೂನು ಬಾಹಿರವಾಗಿ ಭಾರತಕ್ಕೆ ಕಾಲಿಟ್ಟಿದ್ದಾಳೆ. ಸದ್ಯ ಅವಳು ತನ್ನ ಪ್ರಿಯಕರ ಸಚಿನ್ ಮೀನಾ ಜತೆಗೇ ವಾಸವಾಗಿದ್ದಾಳೆ. ಪಾಕಿಸ್ತಾನದಿಂದ ಬಂದಿರುವ ಇವಳು ನಿಜಕ್ಕೂ ಪ್ರೀತಿಗಾಗಿ ಬಂದಿದ್ದಾಳಾ? ಪಾಕ್​ ಗುಪ್ತಚರ ದಳ ಐಎಸ್​ಐ ಜತೆ ಲಿಂಕ್ ಇದೆಯಾ? ಗೂಢಚಾರಿಕೆ ಮಾಡಲು ಬಂದಿದ್ದಾ? ಎಂಬಿತ್ಯಾದಿ ಅನುಮಾನಗಳು ಎದ್ದಿವೆ. ಹೀಗಾಗಿ ಪೊಲೀಸರು ಈಕೆಯ ಮೇಲೆ ಕಣ್ಣಿಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Road Accident : ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Road Accident : ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬಸ್‌ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

VISTARANEWS.COM


on

By

Road Accident
Koo

ಶಿವಮೊಗ್ಗ: ಬಸ್ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೋಡ್ಲು-ಹೊಳೆಬಾಗಿಲು ಬಳಿ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಮೂಲದ ಮಹಿಳೆ (37) ಎನ್ನಲಾಗಿದೆ.

ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬರುವಾಗ ಆತುರದಲ್ಲಿ ಕೆಎಸ್ಆರ್‌ಟಿಸಿ ಬಸ್ ಹತ್ತುವಾಗ ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ ಮುಂದೆ ಚಲಿಸಿದ್ದು, ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

ವಿಜಯನಗರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ; ಎಗರಿ ಬಿದ್ದ ಬಾಲಕ ಸಾವು

ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕ್ ಹಿಂದೆ ಕುಳಿತಿದ್ದ ಬಾಲಕ ಎಗರಿ ಬಿದ್ದು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ವಿಜಯನಗರದ ಹರಪನಹಳ್ಳಿ – ಕೂಡ್ಲಿಗಿ ರಸ್ತೆಯ ಹರಾಳು ಕ್ರಾಸ್ ಬಳಿ ಘಟನೆ ನಡೆದಿದೆ. ಕೂಡ್ಲಿಗಿ ತಾಲೂಕಿನ ನಿವಾಸಿ ಮಹಮದ್ (13) ಮೃತ ದುರ್ದೈವಿ.

ಮಹಮದ್‌ ತಂದೆ ಅಸ್ಲಾಂ ಭಾಷಾ ಅವರು ಕೆಎಸ್‌ಆರ್‌ಸಿಟಿ ಬಸ್‌ ಓವರ್ ಟೆಕ್ ಮಾಡಲು ಹೋಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ರೇವಣಸಿದ್ದಪ್ಪ ಎಂಬುವವರ ಬೈಕ್‌ಗೆ ಗುದ್ದಿದ್ದಾರೆ. ಪರಿಣಾಮ ಡಿಕ್ಕಿ ರಭಸಕ್ಕೆ ಹಿಂಬದಿ ಕುಳಿತಿದ್ದ ಮಹಮದ್‌ ಹಾರಿ ಬಿದ್ದು ಮೃತಪಟ್ಟಿದ್ದಾನೆ. ಅಸ್ಲಾಂ ಭಾಷಾ, ಮತ್ತೊಬ್ಬ ಪುತ್ರ ಮಹಮದ್ ಫರಾನ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಮಹಮದ್‌ ತಾಯಿ ಬಸ್ ಚಾಲಕನನ್ನು ದೂರಿದ್ದಾರೆ. ಬಸ್ ಸ್ಪೀಡ್ ಆಗಿ ಬಂದಾಗ ಬೈಕ್ ಬ್ಯಾಲೆನ್ಸ್ ತಪ್ಪಿ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬಸ್‌ ಮಗನಿಗೂ ಡಿಕ್ಕಿ ಹೊಡೆದಿದೆ. ನನ್ನ ಮಗನ ಸಾವಿಗೆ ಬಸ್ ಚಾಲಕ ಶಿವಕುಮಾರ್ ಕೂಡಾ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Kannada stone inscription: ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

VISTARANEWS.COM


on

Kannada stone inscription found in Kashi Use as a foot bridge at the ghat
Koo

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ (Kashi Vishwanath Temple) ಕನ್ನಡದ ಶಿಲಾ ಶಾಸನ (Kannada stone inscription) ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ ಶಾಸನ ಎಂದು ಗೊತ್ತಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದಿದ್ದ ಕೆಳದಿ ಸಂಸ್ಥಾನವು ಬರೆದಿದ್ದ ಶಿಲಾ ಶಾಸನ ಇದಾಗಿದೆ. ವಿಜಯನಗರದ ಸಾಮ್ರಾಜ್ಯಕ್ಕೆ ಕೆಳದಿಯ ಅರಸರು ಸಾಮಂತರಾಗಿದ್ದರು.

ಕಪಿಲಾ ಘಾಟ್ ಬಳಿ ಶಾಸನ ಪತ್ತೆ

ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

ಕನ್ನಡದಲ್ಲಿ ಕೆತ್ತಲಾಗಿರುವ ಶಾಸನ

ಶಾಸನದಲ್ಲಿ ಕೆಳದಿ ಅರಸ ಶಿವಪ್ಪ ನಾಯಕನ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದು 16ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತಿದೆ. ಶಾಸನ ಕಾಲುಸಂಕವಾಗಿ ಬಳಕೆಯಾಗುತ್ತಿರುವುದಕ್ಕೆ ಶಾಸನ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಗರದ ವಕೀಲ ಹಾಗೂ ಶಾಸನ ಪ್ರಿಯ ಪ್ರವೀಣ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸನ ರಕ್ಷಣೆ ಆಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಈ ಶಾಸನ ರಕ್ಷಣೆಗೆ ಮುಂದಾಗಬೇಕು. ಉತ್ತರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಿ ಶಾಸನವನ್ನು ರಕ್ಷಿಸಬೇಕು. ಕೇಂದ್ರ ಪುರಾತತ್ವ ಇಲಾಖೆಯು ತಕ್ಷಣವೇ ಶಾಸನ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

ಇನ್ನು ಈ ಶಾಸನವು ಕನ್ನಡ ಹಾಗೂ ಪರ್ಶಿಯನ್ ಭಾಷೆಯಲ್ಲಿದ್ದು, ಎರಡೂ ಶಾಸನವನ್ನು ರಕ್ಷಿಸಬೇಕು, ಇದು ಶಿವಮೊಗ್ಗದ ಹೆಮ್ಮೆಯ ಪ್ರತೀಕವಾಗಿದೆ. ಹೀಗಾಗಿ ಇದರ ರಕ್ಷಣೆಯ ಅವಶ್ಯಕತೆ ಇದೆ ಎಂದು ಪ್ರವೀಣ್ ಕುಮಾರ್ ಒತ್ತಾಯಿಸಿದ್ದಾರೆ.

Continue Reading

ಬೆಂಗಳೂರು ಗ್ರಾಮಾಂತರ

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Road Accident : ತುಮಕೂರು ರಸ್ತೆ ಮಾದಾವರ ಫ್ಲೈಓವರ್ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌ ಪಕ್ಕದ ಹೆದ್ದಾರಿಗೆ ಹಾರಿದೆ. ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Road Accident
Koo

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಅಡಕಮಾರನಹಳ್ಳಿಯ ತುಮಕೂರು ರಸ್ತೆ ಮಾದಾವರ ಫ್ಲೈಓವರ್ ಬಳಿ ಭಾರೀ ದುರಂತವೊಂದು (Road Accident) ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್‌ವೊಂದು ಪ್ರಯಾಣಿಕರನ್ನು ಹೊತ್ತು ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿತ್ತು. ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು, ಹೆದ್ದಾರಿಯ ತಡೆಗೋಡೆಯನ್ನು ಹಾರಿ ಪಕ್ಕದ ರಸ್ತೆಗೆ ಬಂದು ನಿಂತಿತ್ತು. ಇದು 40 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಒಂದು ವೇಳೆ ಬಸ್‌ ಏನಾದರೂ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರೆ, ಪ್ರಯಾಣಿಕರ ಜೀವಕ್ಕೆ ಕುತ್ತು ಬರುತ್ತಿತ್ತು. ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳಬೇಕಿತ್ತು.

Road accidents in Bengaluru  Vijayanagar

ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಚಾಲಕ ನಿರ್ವಾಹಕ ಸೇರಿದಂತೆ ಆರು ಮಂದಿಗೆ ಗಾಯವಾಗಿದ್ದು, ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಕದ ರಸ್ತೆಗೆ ಹಾರಿದ್ದ ಬಸ್‌ ಅನ್ನು ತೆರವುಗೊಳಿಸುತ್ತಿದ್ದಾರೆ.

Road accidents in Bengaluru  Vijayanagar

ಇದನ್ನೂ ಓದಿ: Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

ವಿಜಯನಗರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ; ಎಗರಿ ಬಿದ್ದ ಬಾಲಕ ಸಾವು

ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕ್ ಹಿಂದೆ ಕುಳಿತಿದ್ದ ಬಾಲಕ ಎಗರಿ ಬಿದ್ದು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ವಿಜಯನಗರದ ಹರಪನಹಳ್ಳಿ – ಕೂಡ್ಲಿಗಿ ರಸ್ತೆಯ ಹರಾಳು ಕ್ರಾಸ್ ಬಳಿ ಘಟನೆ ನಡೆದಿದೆ. ಕೂಡ್ಲಿಗಿ ತಾಲೂಕಿನ ನಿವಾಸಿ ಮಹಮದ್ (13) ಮೃತ ದುರ್ದೈವಿ.

ಮಹಮದ್‌ ತಂದೆ ಅಸ್ಲಾಂ ಭಾಷಾ ಅವರು ಕೆಎಸ್‌ಆರ್‌ಸಿಟಿ ಬಸ್‌ ಓವರ್ ಟೆಕ್ ಮಾಡಲು ಹೋಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ರೇವಣಸಿದ್ದಪ್ಪ ಎಂಬುವವರ ಬೈಕ್‌ಗೆ ಗುದ್ದಿದ್ದಾರೆ. ಪರಿಣಾಮ ಡಿಕ್ಕಿ ರಭಸಕ್ಕೆ ಹಿಂಬದಿ ಕುಳಿತಿದ್ದ ಮಹಮದ್‌ ಹಾರಿ ಬಿದ್ದು ಮೃತಪಟ್ಟಿದ್ದಾನೆ. ಅಸ್ಲಾಂ ಭಾಷಾ, ಮತ್ತೊಬ್ಬ ಪುತ್ರ ಮಹಮದ್ ಫರಾನ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಮಹಮದ್‌ ತಾಯಿ ಬಸ್ ಚಾಲಕನನ್ನು ದೂರಿದ್ದಾರೆ. ಬಸ್ ಸ್ಪೀಡ್ ಆಗಿ ಬಂದಾಗ ಬೈಕ್ ಬ್ಯಾಲೆನ್ಸ್ ತಪ್ಪಿ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬಸ್‌ ಮಗನಿಗೂ ಡಿಕ್ಕಿ ಹೊಡೆದಿದೆ. ನನ್ನ ಮಗನ ಸಾವಿಗೆ ಬಸ್ ಚಾಲಕ ಶಿವಕುಮಾರ್ ಕೂಡಾ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

HD Deve Gowda: ಎಚ್‌.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

PM Modi wishes HD Deve Gowda on his 93rd birthday Jackfruit gift to former PM
Koo

ಬೆಂಗಳೂರು: ದಣಿವರಿಯದ ನಾಯಕ, ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು (HD DeveGowda) ಇಂದು 93ರ ಹುಟ್ಟುಹಬ್ಬ (HD Deve Gowda birthday) ಆಚರಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತನೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ದೇವೇಗೌಡರು ಅದರ ಪರಿಮಳವನ್ನು ಆಸ್ವಾದಿಸಿ ಖುಷಿಪಟ್ಟರು.

PM Modi wishes HD Deve Gowda on his 93rd birthday Jackfruit gift to former PM

ಎಚ್‌.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

ಹಲಸಿನ ಹಣ್ಣು ಕೊಟ್ಟ ಕಾರ್ಯಕರ್ತ

ಇನ್ನು ಕಟ್ಟಾ ಅಭಿಮಾನಿಯೊಬ್ಬ ದೇವೇಗೌಡರಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ಅದನ್ನು ಅಷ್ಟೇ ಪ್ರೀತಿಪೂರ್ವಕವಾಗಿ, ಖುಷಿ ಖುಷಿಯಿಂದ ದೇವೇಗೌಡ ಅವರು ಸ್ವೀಕರಿಸಿದರು. ಅಲ್ಲದೆ, ಆ ಹಲಸಿನ ಹಣ್ಣಿನ ಬಳಿಗೆ ತಮ್ಮ ಮೂಗನ್ನು ಇಟ್ಟು ಅದರ ಪರಿಮಳವನ್ನು ಆಸ್ವಾದಿಸಿದರು. ಕಾರ್ಯಕರ್ತನ ಗಿಫ್ಟ್‌ ಬಗ್ಗೆ ಬಹಳವೇ ಖುಷಿಪಟ್ಟರು.

ಈ ಅವಮಾನದಿಂದ ಪಾರು ಮಾಡು: ದೇವೇಗೌಡರ ಮೌನ ಪ್ರಾರ್ಥನೆ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಇಂದು ತಮ್ಮ ಹುಟ್ಟುಹಬ್ಬವನ್ನು ದೇವಾಲಯ ಭೇಟಿಯೊಂದಿಗೆ (Temple visit) ಸರಳವಾಗಿ ಆಚರಿಸಿಕೊಂಡಿದ್ದಾರೆ. ಮೊಮ್ಮಗ (Prajwal Revanna Case) ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.

ಮೊಮ್ಮಗ ಪ್ರಜ್ವಲ್‌ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್‌ ಶೇವ್‌ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು.

ಜನ್ಮದಿನವಾಗಿದ್ದರೂ ದೇವೇಗೌಡರ ನಿವಾಸದ ಮುಂದೆ ಇಂದು ಹಬ್ಬದ ವಾತಾವರಣ ಕಂಡುಬಂದಿಲ್ಲ. ಇಂದು ಯಾರನ್ನೂ ಭೇಟಿ ಆಗುವುದಿಲ್ಲ. ಇದ್ದಲ್ಲಿಂದಲೇ ಹಾರೈಸಿ ಎಂದು ದೇವೇಗೌಡರು ಸಂದೇಶ ರವಾನಿಸಿದ್ದಾರೆ. “ಇಂದು ನನ್ನ ಜನ್ಮ ದಿನ. ಮನೆ ಬಳಿ ಬಂದು ಯಾರೂ ಆಚರಣೆ ಮಾಡದಂತೆ ಮನವಿ ಮಾಡಿದ್ದೇನೆ. ಅವರು ಇದ್ದಲ್ಲಿಯೇ ಹಾರೈಸಿ ಎಂದು ಹೇಳಿದ್ದೇನೆ” ಎಂದಿದ್ದಾರೆ.

ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ

“ಪ್ರಜ್ವಲ್ ರೇವಣ್ಣ ಬಗ್ಗೆ, ರೇವಣ್ಣ ಪ್ರಕರಣ (HD Revanna Case) ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ರೇವಣ್ಣ ಪ್ರಕರಣದ ಜಾಮೀನು ಅರ್ಜಿ ಸೋಮವಾರ ವಿಚಾರಣೆ ಇದೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿನ ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುವಂತೆ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಬಹಳ ಜನ ಇದ್ದಾರೆ. ಇದರಲ್ಲಿ ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಆ ಘಟನೆ ಬಗ್ಗೆ ಕುಮಾರಸ್ವಾಮಿಯವರು (HD Kumaraswamy) ಇಡೀ ನಮ್ಮ ಕುಟುಂಬದ ಪರವಾಗಿ ಮಾತನಾಡುತ್ತಾರೆ. ಕಾನೂನು ಏನಿದೆಯೋ ಆ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ ಅಂತ ಹೇಳಿದ್ದಾರೆ. ನಾನು ಅದನ್ನು ಪುನರುಚ್ಚರಿಸುತ್ತೇನೆ” ಎಂದು ದೇವೇಗೌಡರು ಹೇಳಿದರು.

ಕುಮಾರಸ್ವಾಮಿಗೆ ಹೋರಾಟದ ಛಲ ಇದೆ

ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ದೇವರಾಜೇಗೌಡ 100 ಕೋಟಿ ರೂ. ಆಫರ್ ಆರೋಪದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಅವರು, “ಇದೆಲ್ಲದಕ್ಕೂ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡೊಲ್ಲ. ಕುಮಾರ ಸ್ವಾಮಿಯವರು ಎಲ್ಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಹೋರಾಟದ ಛಲ ಇದೆ. ಹೀಗಾಗಿ ಅವರು ಎಲ್ಲ ವಿಚಾರವನ್ನೂ ಹೇಳ್ತಾರೆ. ಜೂನ್ 4ರ ನಂತರ ನಾನು ಮಾಧ್ಯಮಗಳ ಮುಂದೆ ಮಾತಾಡ್ತೀನಿ. ಅಲ್ಲಿಯವರೆಗೂ ನಾನು ಯಾರ ಜೊತೆಯೂ ಮಾತನಾಡೊಲ್ಲ” ಎಂದಿದ್ದಾರೆ.

“ಇದರಲ್ಲಿ ಅನೇಕ ಜನ ಇದ್ದಾರೆ. ನಾನು ಅವರ್ಯಾರ ಹೆಸರನ್ನೂ ಹೇಳಲು ಹೋಗಲ್ಲ. ಈ ವಿಚಾರದಲ್ಲಿ ಯಾರ್ಯಾರು ಇದ್ದಾರೆ ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಕ್ಕಿದ್ದಾರೆ, ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರೂ ಇಲ್ಲ. ಆದರೆ ರೇವಣ್ಣ ಅವರ ಬಗ್ಗೆ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ದಾಖಲು ಮಾಡಿದ್ದಾರೆ ಅಂತ ನೋಡಿ. ಒಂದು ಕೇಸ್, ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ಜಡ್ಜ್‌ಮೆಂಟ್ ಇದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನು ವಿಶ್ಲೇಷಣೆ ಮಾಡಲ್ಲ” ಎಂದಿದ್ದಾರೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

ಇದು ರಾಜಕೀಯವಾಗಿ ದೇವೆಗೌಡರ ಕುಟುಂಬಕ್ಕೆ ಹಿನ್ನಡೆ ಉಂಟುಮಾಡುವ ಕೆಲಸವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜ, ಒಟ್ಟಾರೆ ಏನು ನಡೆದಿದೆ, ದೇವರಾಜೇಗೌಡರ ಹೇಳಿಕೆಯಂತೆ, ಇದರಲ್ಲಿ ತುಂಬ ಜನ ಇದ್ದಾರೆ. ಬೇರೆ ಬೇರೆಯವರೆಲ್ಲ ಇದ್ದಾರೆ” ಎಂದಿದ್ದಾರೆ.

“ಇವತ್ತು ನನ್ನ 91 ವರ್ಷ ಮುಗಿಯಿತು. ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತೇನೆ” ಎಂದು ಅವರು ತಿಳಿಸಿದ್ದಾರೆ.

Continue Reading
Advertisement
RCB FANS BIKE RALLY
ಕ್ರೀಡೆ6 mins ago

RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

Pavithra Jayaram Chandrakant are just friends, daughter said
ಕಿರುತೆರೆ12 mins ago

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Powerful Bike
ಪ್ರಮುಖ ಸುದ್ದಿ14 mins ago

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Road Accident
ಶಿವಮೊಗ್ಗ25 mins ago

Road Accident : ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Kannada stone inscription found in Kashi Use as a foot bridge at the ghat
ಶಿವಮೊಗ್ಗ32 mins ago

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Road Accident
ಬೆಂಗಳೂರು ಗ್ರಾಮಾಂತರ55 mins ago

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Hyderabadi Biryani
ಪ್ರಮುಖ ಸುದ್ದಿ1 hour ago

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Job Alert
ಉದ್ಯೋಗ1 hour ago

Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Sangeetha Sringeri Wore Lioness Logo On Her Belt
ಬಿಗ್ ಬಾಸ್1 hour ago

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

swati maliwal bibhav kumar
ಪ್ರಮುಖ ಸುದ್ದಿ1 hour ago

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ18 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌