ಉಡುಪಿ
Weather report: ನಾಳೆ ಈ 20 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ; ಉತ್ತರ ಕನ್ನಡ ಜಿಲ್ಲೆಗೆ ಹೈ ಅಲರ್ಟ್
Rain News: ಜೂ. 24ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ (Weather Update) ಹೈ ಅಲರ್ಟ್ ನೀಡಿದೆ. ಜತೆಗೆ 20 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಲೆನಾಡು, ದಕ್ಷಿಣ ಒಳನಾಡಿನಲ್ಲೂ ವ್ಯಾಪಕ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಅಬ್ಬರ (Weather report) ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ವರುಣ ಅಬ್ಬರಿಸಲಿದ್ದಾನೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಧಾರವಾಡ, ಬೆಳಗಾವಿ, ರಾಯಚೂರು, ಹಾವೇರಿ ಹಾಗೂ ಗದಗ, ವಿಜಯಪುರದಲ್ಲೂ ಭರ್ಜರಿ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಗುರುವಾರದಂದು (ಜೂ.22) ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಾಮಾನ್ಯವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಉತ್ತರ ಕನ್ನಡದ ಮಂಕಿಯಲ್ಲಿ 13 ಸೆಂ.ಮೀ ಮಳೆಯಾಗಿರುವ ವರದಿಯಾಗಿದೆ. ಗರಿಷ್ಠ ಉಷ್ಣಾಂಶ 39.1 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: Monsoon Makeup Care: ಮಳೆಗಾಲಕ್ಕೆ ವಾಟರ್‌ಪ್ರೂಫ್ ಕಾಸ್ಮೆಟಿಕ್ಸ್ ಬಳಸುತ್ತೀರಾ! ಹಾಗಾದಲ್ಲಿ ಎಚ್ಚರ ವಹಿಸಿ!
ತಾಪಮಾನ ಏರಿಕೆ
ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿಒಣಹವೆ ಇರಲಿದೆ. ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆ ಆಗಲಿದೆ. ಉತ್ತರ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ , ದಕ್ಷಿಣ ಒಳನಾಡಿನಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 24ಗಂಟೆಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-50ಕಿ.ಮೀನಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ತುಮಕೂರು, ಬಾಗಲಕೋಟೆಯಲ್ಲಿ ವರ್ಷಧಾರೆ
ತುಮಕೂರಿನಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗುತ್ತಿದೆ. ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ತುಮಕೂರು ನಗರ ಕೂಲ್ ಆಗಿದೆ. ಇತ್ತ ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಬಾಗಲಕೋಟೆ ಜನತೆಗೆ ವರುಣ ದರ್ಶನ ಕೋರಿದ್ದಾನೆ. ಗಾಳಿ ಸಹಿತ ಮಳೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ರೈತರು ಬಿತ್ತನೆಗೆ ಭೂಮಿಯನ್ನು ಹದ ಮಾಡಿಟ್ಟುಕೊಂಡು ಮಳೆಗಾಗಿ ಕಾಯುತ್ತಿದ್ದರು. ಹವಾಮಾನ ಇಲಾಖೆ ಸೂಚನೆಯಂತೆ ಮಳೆ ಆಗುತ್ತಿದೆ. ಹೆಸರು, ತೊಗರಿ, ಅಲಸಂದಿ, ಮುಂಗಾರಿ ಜೋಳ ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್
Chaitra Kundapura : ವಂಚಕಿ ಚೈತ್ರಾ ಜತೆ ಕುಂದಾಪುರದ ಹೆಸರು ಬಳಸಬಾರದು ಎಂಬ ಅರ್ಜಿದಾರರ ದಾವೆಗೆ ಕೋರ್ಟ್ ತಾತ್ಕಾಲಿಕವಾಗಿ ಓಕೆ ಎಂದಿದೆ. ಮುಂದಿನ ವಿಚಾರಣೆಯ ಬಳಿಕ ಇದಕ್ಕೆ ಸ್ಪಷ್ಟತೆ ಸಿಗಲಿದೆ.
ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ ಮಾಡಿರುವ ಕುಂದಾಪುರ ಮೂಲದ ಫೈರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ (Chaitra Kundapura) ಹೆಸರು ಈಗ ಎಲ್ಲೆಡೆ ಫೇಮಸ್. ಆದರೆ, ಈಕೆಯ ಹೆಸರನ್ನು ಪದೇಪದೆ ವಂಚನೆಯ ಹೆಸರಲ್ಲಿ ಬಳಸುತ್ತಿರುವುದು ಕುಂದಾಪುರ (Kundapura Name of a town) ಎಂಬ ಊರಿಗೆ ಅಪಮಾನ ಮಾಡಿದಂತಾಗುತ್ತಿದೆ. ಹೀಗಾಗಿ ಆಕೆಯ ಹೆಸರಿನ ಜತೆಗಿರುವ ʻಕುಂದಾಪುರʼ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಎಂದು ಕುಂದಾಪುರದ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೊಕ್ಕಿದ್ದರು. ಈ ಕೋರ್ಟ್ ಈ ಬೇಡಿಕೆಗೆ ತಾತ್ಕಾಲಿಕ ಅಸ್ತು (Court restricts media from using Kundapuara name with Chaitra) ಎಂದಿದೆ.
ವಂಚನೆ ಪ್ರಕರಣವಾಗಿರುವುದರಿಂದ, ಬಿಜೆಪಿ ಟಿಕೆಟ್ ವಂಚನೆಯಾಗಿರುವುದರಿಂದ, ಪ್ರಧಾನ ಆರೋಪಿ ಸಾಕಷ್ಟು ಜನಪ್ರಿಯಳಾಗಿರುವುದರಿಂದ ಆಕೆಯ ಹೆಸರು ಮತ್ತು ಸುದ್ದಿ ಗಮನ ಸೆಳೆದಿತ್ತು. ಹೀಗಾಗಿ ಆಕೆಯೊಂದಿಗೆ ಆಕೆಯ ಊರಿನ ಹೆಸರೂ ಜತೆಯಾಗಿ ಬರುತ್ತಿತ್ತು. ಇದು ಸಹಜವಾಗಿ ಅಲ್ಲಿನ ಜನರಿಗೆ ಬೇಸರ ಉಂಟು ಮಾಡಿದೆ.
ಇದನ್ನು ಗಮನಿಸಿದ ಕುಂದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಕೆಯ ಹೆಸರಿನ ಜತೆ ಕುಂದಾಪುರದ ಹೆಸರು ತಳುಕು ಹಾಕುವುದು ಬೇಡ ಎಂದು ಕೋರಿದ್ದರು.
ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್ ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್ ಶೆಟ್ಟಿ ದಾವೆ ಹೂಡಿದವರು. ನಾನು ಕುಂದಾಪುರ ಮೂಲದವನಾಗಿದ್ದು, ಹೋಟೆಲ್ ನಡೆಸುತ್ತಿದ್ದೇನೆ. ಹೋಟೆಲ್ ಗೆ ಬರುವ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ಅವರು ದಾವೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. 10 ಮತ್ತು 11ನೇ ಶತಮಾನದಲ್ಲಿ ಅಲುಪು ರಾಜವಂಶಸ್ಥರಾದ ಕುಂದವರ್ಮ ಅವರು ಕುಂದಾಪುರದಲ್ಲಿ ಆಳ್ವಿಕೆ ನಡೆಸಿದ್ದು. ಐತಿಹಾಸಿಕ ಕುಂದೇಶ್ವರ ದೇವಸ್ಥಾನ ಸಹ ನಿರ್ಮಿಸಿದ್ದಾರೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಂತರ ಪೋರ್ಚಗೀಸರು, ಜರ್ಮನ್ನರು, ಟಿಪ್ಪುಸುಲ್ತಾನ್, ಬ್ರಿಟಿಷರು ಕುಂದಾಪುರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅನೇಕ ಐತಿಹಾಸಿಕ ದೇವಸ್ಥಾಗಳಿಂದ ಕುಂದಾಪುರ ಖ್ಯಾತಿ ಪಡೆದಿದೆ ಎಂದು ದಾವೆಯಲ್ಲಿ ವಿವರಿಸಲಾಗಿತ್ತು.
ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿತ್ತು.
ಇದನ್ನೂ ಓದಿ: Chaitra Kundapura : ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ
ಹೀಗಾಗಿ ಮಾಧ್ಯಮಗಳು ಆಕೆಯ ವಿಚಾರ ಬಂದಾಗ ಕುಂದಾಪುರ ಎಂಬ ಹೆಸರನ್ನು ಉಲ್ಲೇಖಿಸದಂತೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದರು. ಜತೆಗೆ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ಕೂಡಾ ಕೇಳಿದ್ದರು.
ಇದೀಗ ಕೋರ್ಟ್ ಅವರ ದಾವೆಯನ್ನು ಸ್ವೀಕರಿಸಿದ್ದು ಮುಂದಿನ ವಿಚಾರಣೆಯ ವರೆಗೆ ಮಾಧ್ಯಮಗಳು ಆಕೆಯ ಹೆಸರಿನ ಜತೆಗೆ ಕುಂದಾಪುರ ಎಂಬ ಹೆಸರನ್ನು ಬಳಸದಂತೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ವಿಚಾರಣೆಯವರೆಗೆ ಈ ನಿರ್ಬಂಧವನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಉಡುಪಿ
Weather report : ರಾಜ್ಯದಲ್ಲಿ ಮಳೆಯಾಟ ಆಟಕ್ಕುಂಟು ಆದರೆ ಲೆಕ್ಕಕ್ಕಿಲ್ಲ..
Rain News : ಉತ್ತರ ಒಳನಾಡಿನ 4 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಉಳಿದಂತೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಸಣ್ಣ ಪ್ರಮಾಣದಲ್ಲಿ (Weather report) ಮಳೆಯಾಗಲಿದೆ.
ಬೆಂಗಳೂರು: ರಾಜ್ಯದ ಹಲವೆಡೆ ಮಳೆರಾಯ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾನೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Weather report) ನಿರೀಕ್ಷೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮಳೆಯಾಟ (Rain News) ಆಟಕ್ಕುಂಟು ಲೆಕ್ಕಿಲ್ಲ ಎಂಬಂತೆ ಆಗಿದೆ.
ದಕ್ಷಿಣ ಒಳನಾಡಲ್ಲಿ ಸಣ್ಣದೊಂದು ಮಳೆ
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಭಾಗದಲ್ಲಿ ಚದುರಿದಂತೆ ಮಳೆಯಾಗಲಿದೆ. ಉಳಿದಂತೆ ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಮಂಡ್ಯ ಅತಿ ಕಡಿಮೆ ಮಳೆಯಾಗಲಿದೆ.
ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಈ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ.
ಇದನ್ನೂ ಓದಿ: Cylinder blast : ಸಿಲಿಂಡರ್ ಸ್ಫೋಟ; 7 ದಿನಗಳು ನರಳಾಡಿ ಪ್ರಾಣಬಿಟ್ಟ ಮಹಿಳೆ
ಸೆ.22ರ ಶುಕ್ರವಾರ ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಭಾರಿ ಮಳೆಯು ಬಿಳಗಿಯಲ್ಲಿ 10 ಹಾಗೂ ಮಂಠಾಳ 9, ಖಜೂರಿ 8 ಹಾಗೂ ಕಲಬುರಗಿ, ಸುತ್ತೂರಲ್ಲಿ ತಲಾ 7 ಸೆಂ. ಮೀ ಮಳೆಯಾಗಿದೆ.
ಅಡಕಿ, ಚಿತ್ತಾಪುರ, ಸೇಡಂ, ಸುಲೇಪೇಟ, ಬುಕ್ಕಪಟ್ಟಣ, ಕೊಟ್ಟಿಗೆಹಾರ, ಹೊಸಕೋಟೆಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಹಾಲಿಂಗಪುರ, ಕಲಬುರ್ಗಿ AWS, ಚಿಂಚೋಳಿ, ಗುಂಡಗುರ್ತಿ, ಕೋಲಾರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಕದ್ರಾ, ರಬಕವಿ, ಹುಮನಾಬಾದ್, ಮಹಾಗೋವಾ, ಕಮಲಾಪುರ, ಜಾಲಹಳ್ಳಿ, ಮುದಗಲ್ ಹಾಗೂ ಚಿಕ್ಕಬಳ್ಳಾಪುರ , ಸಿ ಆರ್ ಪಟ್ನಾದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.
ಮಂಕಿ, ಗೋಕರ್ಣ, ಗಬ್ಬೂರು , ಶಹಾಪುರ, ಹುಣಸಗಿ, ನಾರಾಯಣಪುರ ಎಚ್‌ಎಂಎಸ್ , ಆಲಮಟ್ಟಿ ಎಚ್‌ಎಂಎಸ್, ತಾಳಿಕೋಟೆ , ಆಳಂದ , ಸೇಡಬಾಳ ಹಾಗೂ ಭಾಲ್ಕಿ, ದೇವನಹಳ್ಳಿ, ಕಳಸ, ಯಗಟಿ, ಮಾಲೂರು, ಚಾಮರಾಜನಗರ, ಮಂಡ್ಯದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಪುತ್ತೂರು Hms, ಹೊನ್ನಾವರ, ಕುಮಟಾ, ಕಾರವಾರ, ಹಳಿಯಾಳ , ಕಕ್ಕೇರಿ, ಶೋರಾಪುರ, ಕೆಂಬಾವಿ, ವಿಜಯಪುರ, ನೆಲೋಗಿ, ಯೆಡ್ವಾಡ ಕೂಡಲಸಂಗಮ, ಮಧುಗಿರಿ, ಚಿಕ್ಕನಹಳ್ಳಿ AWS , ರಾಯಲ್ಪಾಡು, ಟಿ ನರಸೀಪುರ ಸೋಮವಾರಪೇಟೆ, ಹಾರಂಗಿ, ಚಿಂತಾಮಣಿ, ಮೈಸೂರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Chaitra Kundapura : ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ
Chaitra Kundapura: ಪ್ರಖರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಆರು ಮಂದಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್ ಆದೇಶಿಸಿದೆ.
ಸೆ. 12ರಂದು ಬಂಧಿತರಾಗಿದ್ದ ಆರೋಪಿಗಳ ಸಿಸಿಬಿ ಪೊಲೀಸರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ, ಪೊಲೀಸರು ಚೈತ್ರಾ ಸೇರಿ ಬಂಧಿತ ಏಳು ಆರೋಪಿಗಳನ್ನ ಶನಿವಾರ ಮೂರನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತ ಏಳು ಆರೋಪಿಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದ ಚೈತ್ರಾ ಆಂಡ್ ಗ್ಯಾಂಗ್ ಈಗ ಪರಪ್ಪನ ಅಗ್ರಹಾರ ಜೈಲಿನ ಕಡೆ ಮುಖ ಮಾಡಿದ್ದಾರೆ. ಸೆಪ್ಟೆಂಬರ್ 26ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಳೆದ ಸೆಪ್ಟೆಂಬರ್ 12ರಂದು ಚೈತ್ರಾ ಕುಂದಾಪುರಳನ್ನು (Chaitra Kundapura) ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಮರುದಿನ ಮುಂಜಾನೆಯೇ ಬೆಂಗಳೂರಿಗೆ ಕರೆದುಕೊಂಡು ಬಂದು ಸೆ. 13ರಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ (CCB Custody) ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಪ್ರಧಾನ ಆರೋಪಿಯಾಗಿರುವ ಚೈತ್ರಾ ಕುಂದಾಪುರ, ಎರಡನೇ ಆರೋಪಿ ಗಗನ್ ಕಡೂರು, ನಾಲ್ಕನೇ ಆರೋಪಿ(ಆರೆಸ್ಸೆಸ್ ಪ್ರಚಾರಕನ ವೇಷಧಾರಿ) ರಮೇಶ್ ಕಡೂರು, ಐದನೇ ಆರೋಪಿ ಚನ್ನಾ ನಾಯ್ಕ್ (ಬೆಂಗಳೂರಿನ ಬಿಜೆಪಿ ರಾಷ್ಟ್ರೀಯ ನಾಯಕನೆಂದು ಪೋಸ್ ಕೊಟ್ಟವನು), ಆರನೇ ಆರೋಪಿ ಧನರಾಜ್ (ರಮೇಶ್ ಕಡೂರ್ ಮತ್ತು ಚನ್ನಾ ನಾಯ್ಕನನ್ನು ಸಂಪರ್ಕಿಸಿ ಕೊಟ್ಟವನು), ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಹಾಗೂ ಎಂಟನೇ ಆರೋಪಿ ಪ್ರಸಾದ್ ಬೈಂದೂರು (ಗೋವಿಂದ ಪೂಜಾರಿ ಆಪ್ತ ಮತ್ತು ಚೈತ್ರಾ ಕುಂದಾಪುರಳನ್ನು ಪರಿಚಯ ಮಾಡಿಕೊಟ್ಟವನು) ಅವರು 10 ದಿನಗಳ ಸಿಸಿಬಿ ಕಸ್ಟಡಿ ಮುಗಿಸಿದ್ದಾರೆ. ಇದೀಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಾಲಶ್ರೀಗೆ ವಿಚಾರಣೆಗೆ ಸೆ. 29ರವರೆಗೆ ಸಮಯವಿದೆ
ಈ ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವಂ ಹಾಲಶ್ರೀ ಸ್ವಾಮೀಜಿ (Halashri swameeji) ತಲೆಮರೆಸಿಕೊಂಡಿದ್ದರು. ಅವರನ್ನು ಸೆಪ್ಟೆಂಬರ್ 19ರಂದು ಒಡಿಶಾದ ಕಟಕ್‌ನಲ್ಲಿ ಬಂಧಿಸಲಾಗಿತ್ತು. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ 10 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದ ಪರಿಣಾಮ ಸೆ. 29ರವರೆಗೆ ವಿಚಾರಣೆಗೆ ಅವಕಾಶವಿದೆ.
ವಿಚಾರಣೆಯ ವೇಳೆ ಏನೇನಾಗಿದೆ?
ಆರೋಪಿಗಳು ಕಳೆದ 10 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿ ಇದ್ದಾರಾದರೂ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ ಅನಾರೋಗ್ಯದ ನಾಟಕವಾಡಿ ಮೂರುವರೆ ದಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಲಗಿದ್ದಳು. ಉಳಿದ ಎಲ್ಲರೂ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದರು.
ಕಸ್ಟಡಿಯಲ್ಲಿದ್ದ ವೇಳೆ ಚೈತ್ರಾ ಎಂಡ್ ಗ್ಯಾಂಗ್ ತಾವು ಮಾಡಿರುವ ಮೋಸ ಮತ್ತು ವಂಚನೆಯನ್ನು ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ಸಿಸಿಬಿ ಅಧಿಕಾರಿಗಳು ಈ ಆರೋಪಿಗಳು ಹಣವನ್ನು ಎಲ್ಲೆಲ್ಲಿ ಇಟ್ಟಿದ್ದರು ಎಂಬ ಮಾಹಿತಿಯನ್ನು ಪಡೆದುಕೊಂಡು ಅಲ್ಲೆಲ್ಲ ಭೇಟಿ ನೀಡಿ ಸುಮಾರು 3.67 ಕೋಟಿ ರೂ. ಮೌಲ್ಯದ ನಗ ಮತ್ತು ನಗದನ್ನು ವಶಕ್ಕೆ ಪಡೆದಿದೆ.
ವಂಚನೆಯಲ್ಲಿ ಅತಿ ಹೆಚ್ಚು ಹಣ ಪಡೆದಿರುವುದು ಚೈತ್ರಾ ಕುಂದಾಪುರ ಎನ್ನುವುದು ಬೆಳಕಿಗೆ ಬಂದಿದೆ. 81 ಲಕ್ಷ ನಗದು, 23 ಲಕ್ಷ ಮೌಲ್ಯದ ಚಿನ್ನಾಭರಣ, 1.8 ಕೋಟಿ ಮೊತ್ತದ ನಿಶ್ಚಿತ ಠೇವಣಿ ಹೊಂದಿದ್ದ ಚೈತ್ರಾ 12 ಲಕ್ಷ ಮೌಲ್ಯದ ಕಿಯಾ ಕಾರು ಖರೀದಿಸಿದ್ದಾಳೆ.
ಸಿಸಿಬಿ ಪೊಲೀಸರು ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಗಗನ್ ಕಡೂರ್‌ನನ್ನು ಚಿಕ್ಕಮಗಳೂರು, ಕಡೂರು ಮತ್ತು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ನಕಲಿ ಆರೆಸ್ಸೆಸ್ ಪ್ರಚಾರಕನ ಭೇಟಿ, ಕಡೂರಿನ ಮನೆ, ಶಿವಮೊಗ್ಗದಲ್ಲಿ ಹಣ ಹಸ್ತಾಂತರ ಮಾಡಿದ ಜಾಗಗಳಲ್ಲೆಲ್ಲ ಮಹಜರು ಮಾಡಿಸಿದ್ದಾರೆ.
ಉಡುಪಿ
Weather Report : ನಾಳೆವರೆಗೂ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ
Rain News : ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಮುನ್ಸೂಚನೆ ಇದ್ದು, ಮುಂಗಾರು ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಲ್ಲಿ (Weather report) ಸಾಮಾನ್ಯವಾಗಿರಲಿದೆ.
ಬೆಂಗಳೂರು: ಸೆ.23-24ರಂದು ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಆದರೆ ಉತ್ತರ ಒಳನಾಡಲ್ಲಿ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಬಿಡುವೇ ಇಲ್ಲ
ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚೆನಯನ್ನು (weather report) ನೀಡಲಾಗಿದೆ. ಎಡಬಿಡದೆ ಮಳೆ ಸುರಿಯಲಿದ್ದು, ಜತೆಗೆ ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.
ದಕ್ಷಿಣ ಒಳನಾಡಲ್ಲಿ ಲಘು ಮಳೆ
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿಯಲ್ಲಿ ತಗ್ಗಿದ ಅಬ್ಬರ
ಕರಾವಳಿಯಲ್ಲಿ ಮಳೆ ಅಬ್ಬರ ತಗ್ಗಿದೆ. ಆದಾಗ್ಯೂ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ.
ಬೆಂಗಳೂರಲ್ಲಿ ಸಂಜೆಗೆ ಮಳೆ ಕಾಟ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವೊಮ್ಮೆ ಬಿಸಿಲಿನ ತಾಪ ಜಾಸ್ತಿ ಇದ್ದರೆ, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Cauvery Protest: ಕಾವೇರಿ ಕಿಚ್ಚು: ಮಂಡ್ಯ ಬಂದ್; ಹೆದ್ದಾರಿಯಲ್ಲಿ ಉರುಳುಸೇವೆ, ರೈತರ ಜತೆ ಸೇರಿದ ಬಿಜೆಪಿ, ಜೆಡಿಎಸ್
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ – 20 ಡಿ.ಸೆ
ಮಂಗಳೂರು: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 21 ಡಿ.ಸೆ
ಗದಗ: 31 ಡಿ.ಸೆ – 21 ಡಿ.ಸೆ
ಹೊನ್ನಾವರ: 31 ಡಿ.ಸೆ- 24 ಡಿ.ಸೆ
ಕಲಬುರಗಿ: 31 ಡಿ.ಸೆ – 23 ಡಿ.ಸೆ
ಬೆಳಗಾವಿ: 28 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 24 ಡಿ.ಸೆ
ಸೆಪ್ಟೆಂಬರ್ 23ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯದಲ್ಲಿ ಒಳಹರಿವು, ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನ ಮಟ್ಟ (ಅಡಿಗಳಲ್ಲಿ) | ಒಳ ಹರಿವು (ಕ್ಯೂಸೆಕ್) | ಹೊರ ಹರಿವು (ಕ್ಯೂಸೆಕ್) |
ಕೆಆರ್‌ಎಸ್ ಜಲಾಶಯ (KRS Dam) | 38.04 | 20.61 | 6016 | 5735 |
ಆಲಮಟ್ಟಿ ಜಲಾಶಯ (Almatti Dam) | 519.6 | 114.73 | 405 | 405 |
ಮಲಪ್ರಭಾ ಜಲಾಶಯ (Malaprabha Dam) | 633.80 | 21.44 | 0 | 194 |
ಘಟಪ್ರಭಾ ಜಲಾಶಯ (Ghataprabha Dam) | 662.91 | 42.40 | 2311 | 181 |
ತುಂಗಾಭದ್ರಾ ಜಲಾಶಯ (Tungabhadra Dam) | 497.71 | 62.92 | 4378 | 10316 |
ಭದ್ರಾ ಜಲಾಶಯ (Bhadra Dam) | 657.73 | 43.23 | 290 | 290 |
ಕಬಿನಿ ಜಲಾಶಯ (Kabini Dam) | 696.13 | 14.80 | 3166 | 4390 |
ಹಾರಂಗಿ (Harangi Dam) | 871.38 | 8.06 | 1335 | 2791 |
ಲಿಂಗನಮಕ್ಕಿ (Linganamakki Dam) | 554.44 | 68.30 | 5493 | 5393 |
ಹೇಮಾವತಿ (Hemavathi Dam) | 890.58 | 17.66 | 4986 | 1300 |
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ವೈರಲ್ ನ್ಯೂಸ್5 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ10 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ14 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
South Cinema7 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಅಂಕಣ18 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ಬಾಲಿವುಡ್11 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್11 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
-
South Cinema11 hours ago
Parineeti Chopra: ಮದುವೆಯಲ್ಲಿ ಫೋನ್, ಕ್ಯಾಮೆರಾಗಳಿಗೆ ಟೇಪ್, 100 ಭದ್ರತಾ ಸಿಬ್ಬಂದಿ!