Gruha lakshmi : ಗೃಹಲಕ್ಷ್ಮಿ ದುಡ್ಡು ಬರೋದು ಯಾವಾಗ? ಮೊಬೈಲ್‌ನಲ್ಲಿ ನೋಂದಣಿ ಸಾಧ್ಯವೇ? ಸಮಸ್ಯೆಯಾದರೆ? - Vistara News

ಕರ್ನಾಟಕ

Gruha lakshmi : ಗೃಹಲಕ್ಷ್ಮಿ ದುಡ್ಡು ಬರೋದು ಯಾವಾಗ? ಮೊಬೈಲ್‌ನಲ್ಲಿ ನೋಂದಣಿ ಸಾಧ್ಯವೇ? ಸಮಸ್ಯೆಯಾದರೆ?

Gruha lakshmi : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಪ್ರಕ್ರಿಯೆ ಭರದಿಂದ ಸಾಗಿದೆ. ಮಹಿಳೆಯರು ಉತ್ಸಾಹದಿಂದ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಈ ವೇಳೆ ಎದುರಾಗುವ ಕೆಲವು ಸಮಸ್ಯೆಗಳು, ನೋಂದಣಿ ಪ್ರಕ್ರಿಯೆ ಬಗ್ಗೆ ಇರುವ ಗೊಂದಲಗಳು, ಸಮಸ್ಯೆಗಳಾದರೆ ಏನು ಮಾಡಬೇಕು? ಯೋಜನೆಯ ಹಣ ಯಾವಾಗ ನಿಮ್ಮ ಖಾತೆಗೆ ಬರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Gruha Lakshmi scheme apply and problems
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ (Congress Guarantee Scheme) ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ (Gruha lakshmi scheme)ಯ ನೋಂದಣಿ ಭರ್ಜರಿ ಯಶಸ್ಸು ಪಡೆಯುತ್ತಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ನೋಂದಣಿಯಾಗಬೇಕಾದ ಒಟ್ಟು ಯಜಮಾನಿಯರ ಸಂಖ್ಯೆ 1.28 ಕೋಟಿ. ಕಳೆದ ಜುಲೈ 20ರಿಂದ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಬುಧವಾರದವರೆಗೆ ಯೋಜನೆಗೆ 3,83,505 ಮಹಿಳೆಯರಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದುವರೆಗೆ ಒಟ್ಟಾರೆಯಾಗಿ 94,64,914 ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ. ಹಾಗಾದರೆ, 2 ಸಾವಿರ ರೂಪಾಯಿ ಯಾವ ಖಾತೆಗೆ ಬರಲಿದೆ ಎಂಬ ಕಾತುರತೆ ಇದ್ದೇ ಇದೆ. ಇದು ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ನೋಂದಣಿಗೆ ಕೊನೇ ದಿನಾಂಕ ಇದೆಯೇ?

ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಯಾವುದೇ ಕಾಲ ಮಿತಿಯನ್ನು ಈವರೆಗೆ ನಿಗದಿ ಮಾಡಿಲ್ಲ. ಇದಕ್ಕೆ ಯಾವಾಗ ಬೇಕಾದರೂ ನೀವು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ, ನೋಂದಣಿ ವಿಳಂಬ ಆದಷ್ಟು ನಿಮಗೆ ಹಣ ಬರುವುದು ಸಹ ವಿಳಂಬವಾಗುತ್ತಾ ಹೋಗುತ್ತದೆ. ಅಲ್ಲದೆ, ಈಗ ನೋಂದಣಿ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದೆ.

ಇದನ್ನೂ ಓದಿ: Job News : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಉಪನ್ಯಾಸಕರ ಹುದ್ದೆ; 21 ವಿಭಾಗಗಳಿಗೆ ಅರ್ಜಿ ಆಹ್ವಾನ

ಎಲ್ಲಿ ನೋಂದಣಿ ಮಾಡಲಾಗುತ್ತದೆ? ಮೊಬೈಲ್‌ನಲ್ಲಿ ಮಾಡಬಹುದೇ?

ಈ ಯೋಜನೆ ಬಗ್ಗೆ ಕೆಲವರಿಗೆ ಇನ್ನೂ ಸಮರ್ಪಕ ಮಾಹಿತಿ ಸಿಕ್ಕಿಲ್ಲ. ಗೃಹ ಜ್ಯೋತಿಯಂತೆ ಮೊಬೈಲ್‌ನಲ್ಲೇ ತಾವೇ ಸ್ವತಃ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಭಾವಿಸಿದವರು ಸಹ ಇದ್ದಾರೆ. ಆದರೆ, ಖಂಡಿತವಾಗಿಯೂ ನಿಮ್ಮ ಮೊಬೈಲ್‌ನಲ್ಲಿ ನೋಂದಣಿ ಸಾಧ್ಯವಿಲ್ಲ. ಇದಕ್ಕಾಗಿ ನೀವು ಸಮೀಪದ ಗಾಮ ಒನ್‌, ಬಾಪೂಜಿ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಈ ಕೇಂದ್ರಗಳಿಗೆ ಹೋಗಬೇಕು. ಈ ಮೊದಲು ಮೊಬೈಲ್‌ ಸಂಖ್ಯೆ ಮೂಲಕ ನೋಂದಾಯಿಸಿಕೊಳ್ಳಬೇಕಿತ್ತು. ಅದರಲ್ಲಿ ಬರುವ ಸಮಯ, ದಿನಾಂಕ ಹಾಗೂ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಈಗ ಇದನ್ನು ಸರಳೀಕರಿಸಲಾಗಿದೆ.

ಸರಳೀಕೃತ ವಿಧಾನ ಹೇಗಿದೆ?

ಹೊಸ ವಿಧಾನದಡಿ ನೀವು ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಹೋಗುವ ಮೊದಲು ಸಹಾಯವಾಣಿಗೆ ಮೆಸೇಜ್‌ ಮಾಡಬೇಕಾಗಿಲ್ಲ. ಸ್ಲಾಟ್‌ ಬುಕ್‌ ಮಾಡಬೇಕಾಗಿಲ್ಲ. ನೇರವಾಗಿ ಸಂಬಂಧಿತ ದಾಖಲೆಗಳನ್ನು ಹಿಡಿದುಕೊಂಡು ನೋಂದಣಿ ಕೇಂದ್ರಕ್ಕೆ ಹೋದರೆ ಅಲ್ಲೇ ದಾಖಲಾತಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಏನು ದಾಖಲಾತಿ ಬೇಕು?

ಮಹಿಳೆಯರು ತಮ್ಮ ಪಡಿತರ ಚೀಟಿ, ಆಧಾರ್‌ ಕಾರ್ಡ್‌ನಲ್ಲಿ ಲಿಂಕ್‌ ಆಗಿರುವ ಮೊಬೈಲ್‌, ಆಧಾರ್‌ ಕಾರ್ಡ್‌ ಅನ್ನು ಹಿಡಿದುಕೊಂಡು ನೇರವಾಗಿ ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಿಗೆ ಹೋಗಬಹುದು. ಅಲ್ಲಿ ಯಾವುದೇ ಒತ್ತಡಕ್ಕೆ ಅವಕಾಶವಿಲ್ಲದಂತೆ ನೋಂದಣಿ ಮಾಡಿಕೊಳ್ಳಬಹುದು.

ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಅಕೌಂಟ್‌ ಲಿಂಕ್‌ ಆಗದಿದ್ದರೆ?

ಈ ಆತಂಕ ಬಹಳಷ್ಟು ಮಂದಿಗೆ ಕಾಡಿದ್ದಿದೆ. ನಮ್ಮ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಅಕೌಂಟ್‌ ಲಿಂಕ್‌ ಆಗದೆ ಇದ್ದರೆ ಏನು ಮಾಡುವುದು ಎಂಬ ಪ್ರಶ್ನೆ ಕಾಡಿದ್ದಿದೆ. ಅಥವಾ ಆಗಿದ್ದರೂ ಅ ಅಕೌಂಟ್‌ಗೆ ಬೇಡ ಬೇರೆ ಖಾತೆಗೆ ಹಣ ಬರಲಿ ಎಂದೇನಾದರೂ ಇದ್ದರೆ ಏನು ಮಾಡಬೇಕು? ಅದಕ್ಕೆ ಇಲಾಖೆಗೆ ಅಲೆಯಬೇಕೇ ಎಂದು ಕೇಳುವವರೂ ಇದ್ದಾರೆ. ಹೀಗಾಗಿ ಕೊನೆಗೆ ನೋಡಿಕೊಂಡರಾಯಿತು ಎಂದು ಸುಮ್ಮನಾದವರೂ ಇದ್ದಾರೆ. ಆದರೆ, ಇದಕ್ಕೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದು ಬೇಡ. ಬದಲಿ ಅಕೌಂಟ್‌ಗೆ ಸಂಬಂಧಿಸಿದ ಪಾಸ್‌ ಬುಕ್‌ ದಾಖಲೆಯನ್ನು ಹಿಡಿದುಕೊಂಡೇ ಕೇಂದ್ರಕ್ಕೆ ಹೋದರೆ ಸಾಕು. ಅಲ್ಲಿ ನಿಮ್ಮ ಖಾತೆಗೆ ಲಿಂಕ್‌ ಮಾಡಿ ನೋಂದಣಿ ಮಾಡಿ ಕೊಡಲಾಗುತ್ತದೆ.

ಪ್ರಜಾಪ್ರತಿನಿಧಿಗಳು ಸಹ ಇದ್ದಾರೆ!

ಇನ್ನು ಕೆಲವು ಮಹಿಳೆಯರು ಮೇಲೆ ಸೂಚಿಸಲಾದ ಕೇಂದ್ರಗಳಿಗೆ ನೋಂದಣಿ ಮಾಡಿಸಿಕೊಳ್ಳಲು ಹೋಗಲಾಗದ ಪರಿಸ್ಥಿತಿಯಲ್ಲಿ ಇರುತ್ತದೆ. ಅಂಥವರಿಗಾಗಿ ಸರ್ಕಾರ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿದೆ. ಪ್ರತಿ ಸಾವಿರ ಜನಸಂಖ್ಯೆಗೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ಇವರು ಪ್ರತಿ ಮನೆಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿಗೆ ನೋಂದಣಿ ಮಾಡಿಕೊಡಲಿದ್ದಾರೆ.

ಸಮಸ್ಯೆಯಾದರೆ, ಹಣ ಬಾರದಿದ್ದರೆ ಇಲ್ಲಿ ದೂರು ಕೊಡಿ

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಯೋಜನೆ ಜಾರಿಯಾಗುತ್ತಿದ್ದಂತೆ ನಿಮಗೆ ಪರಿಚಯದವರ ಖಾತೆಗೆ ಹಣ ಜಮಾವಣೆ ಆಗಿದೆ. ಆದರೆ, ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಮೊದಲು ನೋಂದಣಿ ಸರಿಯಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇಲ್ಲವೇ ನಿಮ್ಮ ಪತಿ ಜಿಎಸ್‌ಟಿ ಇಲ್ಲವೇ ಆದಾಯ ತೆರಿಗೆ ಕಟ್ಟಿದ್ದಾರೆಯೇ ಎಂದು ನೋಡಬೇಕು. ಎಲ್ಲವೂ ಸರಿಯಾಗಿದ್ದರೆ ದೂರು ನೀಡಬಹುದು. ಇದಲ್ಲದೆ, ನೋಂದಣಿ ವೇಳೆ ಯಾರಾದರೂ ದುಡ್ಡು ಕೇಳಿದರೆ, ಅನಗತ್ಯ ಕಿರಿಕಿರಿ ಮಾಡಿದರೆ ಸಹ 1902 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ನಿಮ್ಮ ಖಾತೆಗೆ ಹಣ ಬರುವುದು ಯಾವಾಗ?

ಮನೆಯ ಯಜಮಾನಿಗೆ ಮಾಸಿಕವಾಗಿ 2 ಸಾವಿರ ರೂಪಾಯಿಯನ್ನು ಕೊಡುವ ಯೋಜನೆ ಇದಾಗಿದೆ. ಈ ಮೂಲಕ ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಕುಟುಂಬಗಳಿಗೆ ಆರ್ಥಿಕ ಧೈರ್ಯ ಹೇಳುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಒಟ್ಟು 94,64,914 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿಕೆ ಪ್ರಕಾರ, ಆಗಸ್ಟ್ 15 ಅಥವಾ 16 ರಂದು ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ.

ಇದನ್ನೂ ಓದಿ: Gruha jyothi Scheme : ಗೃಹಜ್ಯೋತಿ ಬಿಲ್‌ ಬಂತಾ? ಅಪ್ಲೈ ಮಾಡಿಲ್ವಾ? ಫ್ರೀ ಬೇಕಿದ್ದರೆ ಹೀಗೆ ಮಾಡಿ!

ಈ ವರ್ಷ ಸರ್ಕಾರಕ್ಕೆ ಎಷ್ಟು ಖರ್ಚು?

ಆಗಸ್ಟ್‌ನಿಂದಲೇ ಮನೆ ಯಜಮಾನಿ ಖಾತೆಗೆ ಹಣ ಹಾಕುವುದರಿಂದ ಈ ವರ್ಷ ಗೃಹಲಕ್ಷ್ಮಿ ಯೋಜನೆಯಿಂದ ಸರ್ಕಾರಕ್ಕೆ 17,500 ಕೋಟಿ ರೂಪಾಯಿ ಖರ್ಚು ಬರುತ್ತದೆ. ಮುಂದಿನ ವರ್ಷದಿಂದ ಇದು 30 ಸಾವಿರ ಕೋಟಿ ರೂಪಾಯಿ ಮೇಲ್ಪಟ್ಟು ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Davanagere News : ಕುತ್ತಿಗೆಗೆ ಬಿಗಿದ ಜೋಕಾಲಿ ಹಗ್ಗ; 4ನೇ ಕ್ಲಾಸ್‌ ಹುಡುಗ ದುರ್ಮರಣ

ಜೋಕಾಲಿ ಆಡುತ್ತಿದ್ದಾಗ ಉರುಳಿಗೆ ಸಿಲುಕಿ ಬಾಲಕನೊರ್ವ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.

VISTARANEWS.COM


on

By

Boy dies after being hit by a roll while playing jokali in Davangere
Koo

ದಾವಣಗೆರೆ: ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಈ ಘಟನೆ ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿ ಪಿ.ಜೆ.ಕೊಟ್ರೇಶಿ ಮೃತಪಟ್ಟ ಬಾಲಕ.

ಸವಳಂಗದ ಎನ್ ಜಿ ಪ್ರವೀಣ್ ಅವರ ಮಗ ಕೊಟ್ರೇಶಿ ಶಿವಮೊಗ್ಗ ಖಾಸಗಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆಡಲೆಂದು ನಡುಮನೆಯಲ್ಲಿ ಜೋಕಾಲಿಯೊಂದನ್ನು ಪೋಷಕರು ಸಿದ್ಧಪಡಿಸಿಕೊಟ್ಟಿದ್ದರು. ಅಂತೆಯೇ ಕೊಟ್ರೇಶಿ ಶಾಲೆಯಿಂದ ಮನೆಗೆ ಬಂದವನೇ ಜೋಕಾಲಿಯಲ್ಲಿ ಕುಳಿತು ಆಡುತ್ತಿದ್ದ.

ಜೋಕಾಲಿ ಆಡುತ್ತಿದಾಗ ಆಕಸ್ಮಿಕವಾಗಿ ಉರುಳಿದ್ದು, ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಉಸಿರಗಟ್ಟಿ ಮೃತಪಟ್ಟಿದ್ದಾನೆ. ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆದಾಗಲೇ ಆತ ಉಸಿರುನಿಲ್ಲಿಸಿದ್ದ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

Assault Case : ಕುಡಿದು ಬಂದು ಹೊಡೆದು ಬಡಿದು ಮಾಡುತ್ತಿದ್ದ ಸಂಶಯ ಪಿಶಾಚಿ ಪತಿ ವಿರುದ್ಧ ಪತ್ನಿ ಠಾಣೆ (Family Dispute) ಮೆಟ್ಟಿಲೀರಿದ್ದಾರೆ.

VISTARANEWS.COM


on

By

Drunk husband assaults wife
Koo

ಬೆಂಗಳೂರು: ಪತಿಯ ಸಂಶಯವು ಇಡೀ ಸಂಸಾರವನ್ನೇ ಹಾಳು ಮಾಡಿದೆ. ಪರಪುರಷನ ಜತೆ ಪತ್ನಿಗೆ ಸಂಬಂಧವಿದೆ ಎಂದು ಅನುಮಾನಿಸಿದ ಪತಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನ ಸಂಜಯನಗರದಲ್ಲಿ (Assault Case)ಈ ಘಟನೆ ನಡೆದಿದೆ.

ಸುಬ್ರಮಣಿ ಎಂಬಾತ ಕಂಠ ಪೂರ್ತಿ ಕುಡಿದು ಪತ್ನಿ ಸರಸ್ವತಿಗೆ ಮನಬಂದಂತೆ ಥಳಿಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಸರಸ್ವತಿ ಕುಟುಂಬಸ್ಥರು ದೂರದ ಸಂಬಂಧಿಯಾಗಿರುವ ಸುಬ್ರಮಣಿಗೆ 2015ರಲ್ಲಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆಗಿ 9 ವರ್ಷ ಕಳೆದಿರುವ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಫಿಲ್ಟರ್‌ ಕೆಲಸವನ್ನು ಮಾಡಿಕೊಂಡಿದ್ದ ಸುಬ್ರಮಣಿ ಮೊದಮೊದಲು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಇತ್ತೀಚೆಗೆ ಕುಡಿದು ಬಂದು ಸಣ್ಣ-ಪುಟ್ಟ ವಿಚಾರಕ್ಕೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದ.

ಪತಿ ಕಾಟಕ್ಕೆ ಸರಸ್ವತಿ 6 ಬಾರಿ ಪೊಲೀಸ್‌ ಠಾಣೆಗೆ ದೂರು ಕೊಡಲು ಹೋಗಿದ್ದರು. ಆದರೆ ಆಗೆಲ್ಲ ಊರಿನ ಹಿರಿಯರು ಮಧ್ಯಸ್ಥಿತಿಕೆ ವಹಿಸಿ ಜಗಳವನ್ನು ಪರಿಹರಿಸಿದ್ದರು. ಆದರೆ ಇದ್ಯಾವುದರಿಂದಲೂ ಬದಲಾಗದ ಸುಬ್ರಮಣಿ ನಿತ್ಯ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ನಡುವೆ ಮನೆ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯನ್ನು ಅನುಮಾನಿಸುತ್ತಿದ್ದ ಸುಬ್ರಮಣಿ, ಸರಸ್ವತಿ ಕೆಲಸಕ್ಕೆ ಹೋದರೆ ಹಿಂಬಾಲಿಸಿಕೊಂಡು ಹೋಗುವುದು ಮಾಡಿದ್ದಾನೆ.

ಇದನ್ನೂ ಓದಿ: Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ

ತಮ್ಮನಿಗೆ ಕಾರು ಕೊಡಿಸಲು ಹೆಂಡ್ತಿ ಒಡವೆ ಅಡವಿಟ್ಟ

ಇನ್ನು ಸುಬ್ರಮಣಿ ತನ್ನ ತಮ್ಮನಿಗೆ ಕಾರು ಕೊಡಿಸುವ ಸಲುವಾಗಿ ಪತ್ನಿ ಸರಸ್ವತಿಯ ಒಡವೆಗಳನ್ನೆಲ್ಲ ಅಡವಿಟ್ಟಿದ್ದಾನೆ. ಚಿನ್ನಾಭರಣವನ್ನು ಬಿಡಿಸಿಕೊಡಿ‌ ಎಂದರೆ ಜಗಳ ತೆಗೆದು ಹೊಡೆದು ಬಡಿದು ಮಾಡಿದ್ದಾನೆ.

ಈ ಗಲಾಟೆ ವಿಚಾರವನ್ನು ಪೋಷಕರಿಗೆ ಹಾಗೂ ಸಂಬಂಧಿಕರಿಗೆ ಹೇಳಿದರೆ ಕೊಲ್ಲುವುದಾಗಿ ಸುಬ್ರಮಣಿ ಬೆದರಿಕೆ ಹಾಕಿದ್ದಾನೆ. ಸದ್ಯ ಈತನ ಕಾಟಕ್ಕೆ ಬೇಸತ್ತಿರುವ ಸರಸ್ವತಿ ಸಂಜಯನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

40 percent commission: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ, ಪ್ರತಿಭಟನೆ ಜಾಹೀರಾತು ಕೊಟ್ಟರೆ ಅದು ಮಾನನಷ್ಟ ಮೊಕದ್ದಮೆ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

VISTARANEWS.COM


on

40 percent commission Court summons CM No defamation if advertised says Siddaramaiah
Koo

ಹಾಸನ: ಕಳೆದ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆ ಚುನಾವಣೆ (Karnataka Assembly Elections 2023) ವೇಳೆ 40 ಪರ್ಸೆಂಟ್‌ ಕಮಿಷನ್ (40 percent commission) ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ನ್ಯಾಯಾಲಯ ಸಮನ್ಸ್​ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ಅವರು ಸಮರ್ಪಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ‌ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ, ಪ್ರತಿಭಟನೆ ಜಾಹೀರಾತು ಕೊಟ್ಟರೆ ಅದು ಮಾನನಷ್ಟ ಮೊಕದ್ದಮೆ ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ಪ್ರಕರಣ? ಯಾರು ಯಾರಿಗೆ ಸಮನ್ಸ್‌ ಜಾರಿ?

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್‌ ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿವಿ ಸೇರಿದಂತೆ ಮಾಧ್ಯಮಗಳಲ್ಲಿ ಈ ಕುರಿತು ಜಾಹೀರಾತು ನೀಡಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್​​​ಗೆ (DK Shivakumar) ಅವರಿಗೆ ಕೋರ್ಟ್​ ಸಮನ್ಸ್​ ಜಾರಿ ಮಾಡಿದ್ದು, ಖುದ್ದು ಹಾಜರಾಗುವಂತೆ ಸೂಚಿಸಿದೆ.

ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್‌ 40 ಪರ್ಸೆಂಟ್‌ ಆರೋಪ ಮಾಡಿತ್ತು. ಅಲ್ಲದೆ, ಈ ಸಂಬಂಧ ಜಾಹೀರಾತನ್ನು ಸಹ ನೀಡಿತ್ತು. ಹೀಗಾಗಿ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿದ್ದಾರೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ಈ ದೂರಿನ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಜಾಹೀರಾತು ವಿರುದ್ಧ ದೂರು ನೀಡಿದ್ದ ಬಿಜೆಪಿ

ಈ ಸಂಬಂಧ ಬಿಜೆಪಿ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿತ್ತು. ಕೆಪಿಸಿಸಿ ಹಾಗೂ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಆರೋಪಗಳ ಜಾಹೀರಾತು ನೀಡಿ ಪಕ್ಷದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ರಾಜ್ಯ ಕಾರ್ಯದರ್ಶಿ ಎಸ್‌. ಶಿವಪ್ರಸಾದ್‌ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಹುಲ್‌ ಗಾಂಧಿ, ಕೆಪಿಸಿಸಿ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಈಗ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

ಬಿಜೆಪಿಗೆ ಡ್ಯಾಮೇಜ್‌ ಮಾಡಿದ್ದ 40 ಪರ್ಸೆಂಟ್‌ ಅಭಿಯಾನ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ 40 ಪರ್ಸೆಂಟ್‌ ಅಭಿಯಾನ ಮಾಡಿದ್ದರಿಂದ ಬಿಜೆಪಿಗೆ ಭಾರಿ ಡ್ಯಾಮೇಜ್‌ ಆಗಿತ್ತು. ಈ ಸಂಬಂಧ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟರ್‌ಗಳನ್ನು ಹರಿಬಿಡಲಾಗಿತ್ತು. ಅಲ್ಲದೆ, ಬೀದಿಗಳಲ್ಲಿ ಪೋಸ್ಟರ್‌ ಅಂಟಿಸಲಾಗಿತ್ತು. ಈ ಸಂಬಂಧ ಮೊಬೈಲ್‌ಗಳಲ್ಲಿ ಆಡಿಯೊ ಜಾಹೀರಾತು ಸೇರಿದಂತೆ ಟಿವಿ, ಪೇಪರ್‌ಗಳಲ್ಲಿ ಜಾಹೀರಾತುಗಳನ್ನು ನೀಡಲಾಗಿತ್ತು. ಈ ಸಂಬಂಧ ಬಿಜೆಪಿ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗ ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್​​​ಗೆ ಸಮನ್ಸ್‌ ಜಾರಿ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗ ಪ್ರತಿಕ್ರಿಯೆ ನೀಡಿದ್ದು, ವಕೀಲರು ಸೂಕ್ತ ಉತ್ತರ ನೀಡಲಿದ್ದಾರೆ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ.

Continue Reading

ರಾಜಕೀಯ

PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್‌ ಜೋಶಿ

PM Narendra Modi: ಈಗ ಆರ್ಥಿಕವಾಗಿ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಹೆಜ್ಜೆ ಇಡುತ್ತಿದ್ದೇವೆ. ಇನ್ನು 20 ವರ್ಷಗಳಲ್ಲಿ ಅಭಿವೃದ್ಧಿ ರಾಷ್ಟ್ರವಾಗಿ ಭಾರತ ಮೊದಲಿರುತ್ತದೆ ಎಂದು ಪ್ರಲ್ಹಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

PM Narendra Modi is determined to make India a developing country by 2047 says Pralhad Joshi
Koo

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾರತವನ್ನು 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿಸಲು ಸಂಕಲ್ಪ ತೊಟ್ಟಿದ್ದಾರೆ. ಅಲ್ಲದೆ, ಮೋದಿ ಚಿಂತೆ ಮಾಡುವವರಲ್ಲ. ಚಿಂತನೆ ಮಾಡುವ ಪ್ರಧಾನಿಯಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು.

ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನಕ್ಲೇವ್-2024’ (Veerashaiva Lingayat Global Business Conclave-2024) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಲ್ಹಾದ್‌ ಜೋಶಿ, ವಿಕಸಿತ ಭಾರತಕ್ಕೆ ತಮ್ಮ ದೂರದೃಷ್ಟಿ ಹಾಗೂ ಅವಿಸ್ಮರಣೀಯ ಕಾರ್ಯವೈಖರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಅಡಿಪಾಯ ಹಾಕಿದ್ದಾರೆ. ವಿಕಸಿತ ಭಾರತ ಮೋದಿ ಅವರ ಮಹೋನ್ನತ ಕನಸು ಎಂದು ಹೇಳಿದರು.

ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ ನಾವಿನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ ಎನಿಸಿಕೊಂಡಿದೆ. ಇನ್ನು ಮೇಲೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ಈಗ ಆರ್ಥಿಕವಾಗಿ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಹೆಜ್ಜೆ ಇಡುತ್ತಿದ್ದೇವೆ. ಇನ್ನು 20 ವರ್ಷಗಳಲ್ಲಿ ಅಭಿವೃದ್ಧಿ ರಾಷ್ಟ್ರವಾಗಿ ಭಾರತ ಮೊದಲಿರುತ್ತದೆ ಎಂದು ಪ್ರಲ್ಹಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಚಿಂತನೆಯುಳ್ಳ ಪ್ರಧಾನಿ

ನರೇಂದ್ರ ಮೋದಿ ಅವರು ಚಿಂತೆ ಮಾಡುವವರಲ್ಲ. ಚಿಂತನೆ ಮಾಡುವ ಪ್ರಧಾನಿಯಾಗಿದ್ದಾರೆ. ತಾವು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಇಲಾಖೆಗಳಲ್ಲಿ ಏನಿರಬೇಕು?, ಹೇಗಿರಬೇಕು? ಎಂಬುದನ್ನು ಈಗಲೇ ಅಧಿಕಾರಿ ವರ್ಗಕ್ಕೆ ಸಲಹೆ- ಸೂಚನೆ ನೀಡಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ಜಗತ್ತಿನ ವಿವಿಧ ದೇಶಗಳಲ್ಲಿ ಲಿಂಗಾಯತ ವೀರಶೈವರು ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಸಮಾಜದ ಯುವ ಪೀಳಿಗೆ ಸಹ ಇದನ್ನು ಅನುಸರಿಸಬೇಕು ಎಂದು ಪ್ರಲ್ಹಾದ್‌ ಜೋಶಿ ಜೋಶಿ ಕರೆ ನೀಡಿದರು.

ಇದನ್ನೂ ಓದಿ: medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

ಅಂತಾರಾಷ್ಟ್ರೀಯ ಬ್ಯುಸಿನೆಸ್ ಸಮಾವೇಶಗಳ ಆಯೋಜನೆಯಿಂದ ಯುವ ಜನತೆಯ ಉನ್ನತಿಗೆ ಮಾರ್ಗದರ್ಶನ ದೊರೆಯುತ್ತದೆ ಎಂದು ಇದೇ ವೇಳೆ ಪ್ರಲ್ಹಾದ್‌ ಜೋಶಿ ಹೇಳಿದರು.

Continue Reading
Advertisement
Boy dies after being hit by a roll while playing jokali in Davangere
ಕರ್ನಾಟಕ6 mins ago

Davanagere News : ಕುತ್ತಿಗೆಗೆ ಬಿಗಿದ ಜೋಕಾಲಿ ಹಗ್ಗ; 4ನೇ ಕ್ಲಾಸ್‌ ಹುಡುಗ ದುರ್ಮರಣ

Drunk husband assaults wife
ಬೆಂಗಳೂರು40 mins ago

Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

indian penal code
ದೇಶ43 mins ago

New Laws: ಐಪಿಸಿ ಮೂಲೆಗೆ; ಜುಲೈ 1ರಿಂದಲೇ ಹೊಸ ಕಾನೂನು ಜಾರಿ, ಏನೆಲ್ಲ ಬದಲು?

bankok
ವೈರಲ್ ನ್ಯೂಸ್52 mins ago

Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

Amazon Sweets
ವಾಣಿಜ್ಯ1 hour ago

Empower HER Exhibition : ಎಫ್‌ಕೆಸಿಸಿಐ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ

Actor Manoj Rajput Arrested On Allegations Of Raping
ಸಿನಿಮಾ1 hour ago

Actor Manoj Rajput: ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಮನೋಜ್ ರಜಪೂತ್ ಬಂಧನ

40 percent commission Court summons CM No defamation if advertised says Siddaramaiah
ರಾಜಕೀಯ1 hour ago

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

Shah Rukh Kahan
ಪ್ರಮುಖ ಸುದ್ದಿ1 hour ago

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

PM Narendra Modi is determined to make India a developing country by 2047 says Pralhad Joshi
ರಾಜಕೀಯ2 hours ago

PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್‌ ಜೋಶಿ

Idli
ವೈರಲ್ ನ್ಯೂಸ್2 hours ago

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ4 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ11 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ23 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌