Youths Drowned: ಸ್ವಿಮ್ಮಿಂಗ್‌ ಪೂಲ್‌ಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು - Vistara News

ಕರ್ನಾಟಕ

Youths Drowned: ಸ್ವಿಮ್ಮಿಂಗ್‌ ಪೂಲ್‌ಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು

Youths Drowned: ಸ್ನೇಹಿತರಿಬ್ಬರು ಸ್ವಿಮ್ಮಿಂಗ್‌ ಪೂಲ್‌ಗೆ ಈಜಲು ಹೋಗಿದ್ದು ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

VISTARANEWS.COM


on

Two persons drowned in ganga river
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ವಿಮ್ಮಿಂಗ್‌ ಪೂಲ್‌ಗೆ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ (Youths drowned) ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಇಲ್ಲಿನ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿರುವ ಈಜು ತರಬೇತಿ ನೀಡುವ ಎಂಎನ್‌ಸಿ ಅಕಾಡೆಮಿಯಲ್ಲಿ ಸೋಮವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ.

ನೀರಲ್ಲಿ ಮುಳುಗಿದ ಇಬ್ಬರು ಬಾಲಕರು ಸುಮಾರು 10-11 ವರ್ಷ ವಯಸ್ಸಿನವರು ಎಂದು ಮಾಹಿತಿ ಲಭ್ಯವಾಗಿದೆ. ಖಾಸಗಿ ಶಾಲೆಯೊಂದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಬಾಲಕರು ತಲಾ 100 ರೂ. ಶುಲ್ಕ ನೀಡಿ ಈಜಲು ಹೋಗಿದ್ದಾರೆ.

ಇದನ್ನೂ ಓದಿ: Youth drowned: ಈಜಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ; ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ಆದರೆ ಈಜು ಬಾರದೆ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ದುರ್ಘಟನೆಗೆ ಅಕಾಡೆಮಿ ಸಿಬ್ಬಂದಿ ನಿರ್ಲಕ್ಷ್ಯ ಕಾರಣವೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Prajwal Revanna Case: ರಾಹುಲ್‌ ಗಾಂಧಿ ಗೆದ್ದರೂ ಸಂಸತ್‌ ಸದಸ್ಯತ್ವ ರದ್ದು ಮಾಡಲು ಜೆಡಿಎಸ್‌ ಮೆಗಾ ಪ್ಲ್ಯಾನ್‌!

Prajwal Revanna Case: ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಆಗಿದ್ದು, 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಲೋಕಸಭಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆ ಈಗ ಅವರಿಗೆ ಸಂಕಷ್ಟ ತಂದೊಡ್ಡಲಿದೆ. ಈ ಬಗ್ಗೆ ಕೋರ್ಟ್‌ ಮೊರೆ ಹೋಗಲು ಜೆಡಿಎಸ್‌ ತಯಾರಿ ನಡೆಸಿದೆ. ಒಂದು ವೇಳೆ ಈ ಪ್ರಕರಣವು ಕೋರ್ಟ್‌ ಮೆಟ್ಟಿಲೇರಿ ರಾಹುಲ್‌ ವಿರುದ್ಧ ಆರೋಪ ಸಾಬೀತಾದರೆ, ಅವರು ಸಂಸತ್‌ ಚುನಾವಣೆಯಲ್ಲಿ ಗೆದ್ದರೂ ಸಂಸತ್‌ ಸ್ಥಾನ ಉಳಿಯುವುದಿಲ್ಲ. ಹೀಗಾಗಿ ಸಂಸತ್‌ ಸ್ಥಾನಕ್ಕೆ ಕುತ್ತು ತರಲು ಜೆಡಿಎಸ್‌ ಕಾರ್ಯತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

VISTARANEWS.COM


on

Prajwal Revanna Case JDS mega plan to cancel Parliament membership even if Rahul Gandhi wins
Koo

ಬೆಂಗಳೂರು: ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna Case) ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್‌ ಪ್ಲ್ಯಾನ್‌ ಮಾಡಿದೆ. ಈಗಾಗಲೇ ಅವರ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ (JDS Karnataka) ದೂರು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯವನ್ನೂ ಮಾಡಿದೆ. ಈಗ ರಾಹುಲ್‌ರನ್ನು ಕಾನೂನು ಸಂಕಷ್ಟಕ್ಕೆ ಸಿಲುಕಿಸಲು ಜೆಡಿಎಸ್‌ ಪ್ಲ್ಯಾನ್‌ ಮಾಡಲಾಗಿದೆ.

ಒಂದು ವೇಳೆ ಈ ಪ್ರಕರಣವು ಕೋರ್ಟ್‌ ಮೆಟ್ಟಿಲೇರಿ ರಾಹುಲ್‌ ವಿರುದ್ಧ ಆರೋಪ ಸಾಬೀತಾದರೆ, ಅವರು ಸಂಸತ್‌ ಚುನಾವಣೆಯಲ್ಲಿ ಗೆದ್ದರೂ ಸಂಸತ್‌ ಸ್ಥಾನ ಉಳಿಯುವುದಿಲ್ಲ. ಹೀಗಾಗಿ ಸಂಸತ್‌ ಸ್ಥಾನಕ್ಕೆ ಕುತ್ತು ತರಲು ಜೆಡಿಎಸ್‌ ಕಾರ್ಯತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣವೇ ರಾಹುಲ್‌ಗೆ ಸಂಕಷ್ಟ?

ರಾಹುಲ್‌ ಗಾಂಧಿ ಚುನಾವಣೆ ಭಾಷಣ ಮಾಡುವಾಗ ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ್ದರು. ಮಾಸ್‌ ರೆಪಿಸ್ಟ್‌ ಪ್ರಜ್ವಲ್‌‌ ಎಂದಿದ್ದಲ್ಲದೆ, 400 ಮಹಿಳೆಯರ ಮೇಲೆ ಅತ್ಯಾಚಾರ ಎಂದು ಆರೋಪ ಮಾಡಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಮಾಸ್‌ ರೇಪಿಸ್ಟ್‌ ಎಂದು ಮೂದಲಿಸಿದ್ದರು.

ಈ ಪ್ರಕರಣದಲ್ಲಿ ರಾಹುಲ್‌‌ ಗಾಂಧಿ ವಿರುದ್ಧ ದೂರು ನೀಡಲಾಗಿದ್ದು, ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲು ಕೋರಲಾಗಿದೆ. ಕೋರ್ಟ್‌ ಮುಂದೆ ಇದೇ ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆನ್ನಲಾಗಿದ್ದು, ಇದಕ್ಕೆ ಸಂಬಂಧ ಪಟ್ಟ ಆಡಿಯೊ, ವಿಡಿಯೊಗಳನ್ನು ಸಂಗ್ರಹ ಮಾಡಲಾಗಿದೆ. ರಾಹುಲ್‌ ಗಾಂಧಿ ವಿರುದ್ಧ ಕ್ರಿಮಿನಲ್‌‌ ಮಾನಹಾನಿ ಕೇಸ್‌ ಅನ್ನು ಹೂಡಲು ಜೆಡಿಎಸ್‌ ಮುಂದಾಗಿದೆ. ಲೋಕಸಭಾ ಚುನಾವಣೆ ಬಳಿಕ ಕಾನೂನು ಹೋರಾಟ ಮಾಡಿ, ರಾಜಕೀಯ ಲಾಭಕ್ಕಾಗಿ ದೇವೇಗೌಡರ ಕುಟುಂಬಕ್ಕೆ ಹಾನಿಯಾಗುವಂತೆ ಹೇಳಿಕೆ ನೀಡಿದ್ದಾರೆಂದು ಆರೋಪ ಮಾಡಲು ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಸಮಸ್ಯೆ ಮಾಡಿಕೊಂಡಿದ್ದ ರಾಹುಲ್!

2019ರ ರಾಹುಲ್‌‌ ಗಾಂಧಿ ಹೇಳಿಕೆಯನ್ನೇ ಜೆಡಿಎಸ್‌ ನಾಯಕರು ಈಗ ಉದಾಹರಣೆಯಾಗಿ ಕೊಡುತ್ತಿದ್ದಾರೆ. ಕೋಲಾರದ ಪ್ರಚಾರ ಭಾಷಣ ವೇಳೆ, ಮೋದಿ ಹೆಸರಿಟ್ಟುಕೊಂಡವರು ಮೋಸ ಮಾಡುತ್ತಾರೆ. ದೇಶ ಬಿಟ್ಟು ಓಡಿ ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಲಲಿತ್‌ ಮೋದಿ, ನೀರವ್‌‌‌ ಮೋದಿ ಹೆಸರು ಪ್ರಸ್ತಾಪ ಮಾಡಿ ಈ ಹೇಳಿಕೆಯನ್ನು ನೀಡಿದ್ದರು. ಇದೇ ಹೇಳಿಕೆಯನ್ನು ಇಟ್ಟುಕೊಂಡು ಗುಜರಾತ್‌ನಲ್ಲಿ ದೂರು ದಾಖಲು ಮಾಡಲಾಗಿತ್ತು. ಈ ಕೇಸ್‌ಲ್ಲಿ ರಾಹುಲ್‌ಗೆ ಶಿಕ್ಷೆಯಾಗಿತ್ತು. ಅಲ್ಲದೆ, ಲೋಕಸಭಾಧ್ಯಕ್ಷರು ಸಂಸತ್‌ ಸ್ಥಾನವನ್ನು ರದ್ದು ಮಾಡಿದ್ದರು. ಬಳಿಕ ಸುಪ್ರೀಂ ಕೋರ್ಟಿಂದ ರಿಲೀಫ್‌‌ ಸಿಕ್ಕಿತ್ತು. ಈಗ ಇಂಥದ್ದೇ ಕೇಸ್‌ ಅನ್ನು ರಾಜ್ಯದಲ್ಲೂ ದಾಖಲಿಸಲು ಜೆಡಿಎಸ್‌‌ ತೀರ್ಮಾನ ಮಾಡಿದೆ. ರಾಹುಲ್‌‌ ಗಾಂಧಿಯವರ ಸಂಸತ್‌ ಸ್ಥಾನಕ್ಕೆ ಸಂಕಷ್ಟ ತರಲು ಪ್ಲ್ಯಾನ್‌ ಮಾಡಿದೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna Case) ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ (JDS Karnataka) ದೂರು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯ ಮಾಡಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಹೇಳಿದ್ದರು. ಇದೇ ಮಾಹಿತಿಯನ್ನು ಮಾಧ್ಯಮಗಳ ಮುಂದೆಯೂ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಹುಲ್‌ ಗಾಂಧಿಗೆ ಎಸ್‌ಐಟಿ ಸಮನ್ಸ್ ಜಾರಿ ಮಾಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಮಂಜೇಗೌಡ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್, ಬೆಂಗಳೂರು ನಗರದ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಅವರಿದ್ದ ನಿಯೋಗ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.

ದೂರಿನಲ್ಲಿ ಇನ್ನೇನು ಇದೆ?

ಎಚ್.ಎಂ. ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಅನೇಕ ಗಂಭೀರ, ಗುರುತರ ಆರೋಪಗಳನ್ನು ಮಾಡಲಾಗಿದೆ.

ಕಾಂಗ್ರೆಸ್ ನಾಯಕ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದೆ.

400 ಮಹಿಳೆಯರ ಮಾಹಿತಿ ರಾಹುಲ್‌ ಗಾಂಧಿಗೆ ಇದೆ!

ನೊಂದ ಮಹಿಳೆಯರ ನ್ಯಾಯ ಕೊಡಿಸುವುದನ್ನು ಕಡೆಗಣಿಸಿ ಒಬ್ಬ ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ಅವರು ಇಂಥ ಹೇಳಿಕೆ ನೀಡಿರುವುದು ಕಾನೂನು ಉಲ್ಲಂಘನೆ ಆಗಿರುತ್ತದೆ. ನಾನೂರು ಮಹಿಳೆಯರ ಮೇಲೆ ಮಾಸ್ ರೇಪ್ ಆಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಲ್ಲ ಮಾಹಿತಿ ಇದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಅಷ್ಟೂ ಮಹಿಳೆಯರ ಮಾಹಿತಿ ಅವರಲ್ಲಿ ಇದೆ ಎನ್ನುವುದು ಅವರದೇ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 1860ರ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಲ್ಲಿ ಜೆಡಿಎಸ್ ಪಕ್ಷ ಒತ್ತಾಯ ಮಾಡಿದೆ.

ರಾಜ್ಯ ಸರ್ಕಾರವೂ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದ್ದು, ಕೂಡಲೇ ಈ ತಂಡವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಇಲ್ಲಿಗೆ ಕರೆಸಬೇಕು. ನಾನೂರು ಮಹಿಳೆಯರು ಎಂದು ತಪ್ಪು ಮಾಹಿತಿ ನೀಡಿ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತೆ ಮಾಡಿದ ಅವರ ವಿರುದ್ಧ ಕೂಡಲೇ ಸೆಕ್ಷನ್ 202, 1860ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ಆಗ್ರಹಪಡಿಸಿದೆ.

ಇದನ್ನೂ ಓದಿ: Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

ಅಲ್ಲದೆ, ಪೆನ್ ಡ್ರೈವ್ ಹಂಚಿಕೆಯ ಬಗ್ಗೆಯೂ ಜೆಡಿಎಸ್ ಡಿಜಿ ಅವರ ಜತೆ ಮಾತುಕತೆ ನಡೆಸಿತು. ಎಸ್‌ಐಟಿ ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಆದರೆ, ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಗ್ಗೆ ಮೌನ ವಹಿಸಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಈವರೆಗೆ ಅವರನ್ನು ಎಸ್ ಐಟಿ ಬಂಧನ ಮಾಡಿಲ್ಲ ಎಂದು ನಿಯೋಗ ದೂರಿತ್ತು.

Continue Reading

ತುಮಕೂರು

Naxal activities: ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿ ಕೇಸ್‌; 19 ವರ್ಷಗಳಿಂದ ತಲೆಮರೆಸಿಕೊಂಡಿದ್ದವನು ಅರೆಸ್ಟ್‌

Naxal activities: ನಕ್ಸಲ್‌ ದಾಳಿಯಲ್ಲಿ 19 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

VISTARANEWS.COM


on

By

Naxal activities
Koo

ತುಮಕೂರು: ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿ (Naxal activities) ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯ ಬಂಧನವಾಗಿದೆ. ಶಂಕರ ಅಲಿಯಾಸ್‌ ಕೊತ್ತಗೆರೆ ಶಂಕರ (38) ಬಂಧಿತ ಆರೋಪಿಯಾಗಿದ್ದಾನೆ.

2005ರಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲಿಯರ ದಾಳಿ ನಡೆದಿತ್ತು. ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300ಕ್ಕೂ ಹೆಚ್ಚು ಮಾವೊಯಿಸ್ಟ್ ನಕ್ಸಲಿಯರು ದಾಳಿ ಮಾಡಿದ್ದರು. ದಾಳಿ ವೇಳೆ ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಬಂದೂಕು ಹಾಗೂ ಬಾಂಬ್‌ಗಳಿಂದ ಕೊಲೆಗೈದಿದ್ದರು. ಘಟನೆಯಲ್ಲಿ 5 ಮಂದಿ ಪೊಲೀಸರಿಗೆ ಗಂಭೀರ ಗಾಯವಾಗಿತ್ತು.

ಅಲ್ಲದೇ ಕ್ಯಾಂಪ್ ಮುಂಭಾಗ ನಿಂತಿದ್ದ ಖಾಸಗಿ ಬಸ್ ಡ್ರೈವರ್‌ನ ಕೊಲೆಯಾಗಿತ್ತು. ಪೊಲೀಸ್ ಕ್ಯಾಂಪ್‌ನಲ್ಲಿದ್ದ ಬಂದೂಕುಗಳು ಹಾಗೂ ಗುಂಡುಗಳನ್ನು ದೋಚಿಕೊಂಡು ನಕ್ಸಲ್ ಟೀಂ ನಾಪತ್ತೆಯಾಗಿತ್ತು. ಈ ಸಂಬಂಧ ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಸದರಿ ಪ್ರಕರಣದಲ್ಲಿ 32 ಆರೋಪಿಗಳ ಮೇಲೆ ಪಾವಗಡ ಜೆಎಂಎಫ್‌ಸಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಪ್ರಕರಣ ಸಂಬಂಧ ಆರೋಪಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಆರೋಪಿ ಶಂಕರ ಸಿಕ್ಕಿ ಬಿದ್ದಿದ್ದಾನೆ. ಬೆಂಗಳೂರಿನ ಗೌರಿಪಾಳ್ಯದಲ್ಲಿ ವಾಸವಿದ್ದ ಆರೋಪಿ ಶಂಕರ ಬಿಬಿಎಂಪಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Ration Card : ಸಾವಿನ ಎಡವಟ್ಟು ಸರಿಪಡಿಸಿದ ಆಹಾರ ಇಲಾಖೆ! ಮನೆ ಬಾಗಿಲಿಗೆ ಬಂತು ರೇಷನ್‌ ಕಾರ್ಡ್‌; ಇದು ವಿಸ್ತಾರ ನ್ಯೂಸ್‌ ಇಂಪ್ಯಾಕ್ಟ್‌

ಶಾಲೆ, ದೇವಸ್ಥಾನದ ಬಳಿಕ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ಗೂ ಬಾಂಬ್‌ ಬೆದರಿಕೆ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic city) ಪ್ರತಿಷ್ಠಿತ ಹೋಟೆಲ್‌ಗೆ ಇಂದು ಬಾಂಬ್ ಬೆದರಿಕೆ ಮೇಲ್ (Bomb Hoax) ಬಂದಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ (Hotel) ಆವರಣವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ. ಶಾಲೆ, ದೇವಸ್ಥಾನ ಬಳಿಕ ಇದೀಗ ಹೋಟೆಲ್‌ ಬಾಂಬ್‌ ಬೆದರಿಕೆಗೆ ತುತ್ತಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಬಳಿಯ ಒಟೇರಾ (Hotel Oterra) ಎಂಬ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಮೇಲ್ ರವಾನೆಯಾಗಿದೆ. ತಡರಾತ್ರಿ 2 ಘಂಟೆಗೆ ಮೇಲ್ ಬಂದಿದ್ದು, ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿಗಳು ಮೇಲ್ ಚೆಕ್ ಮಾಡುವಾಗ ಕಂಡಿದೆ. ಆಗ ಗಾಬರಿಯಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಟೇರಾ ಹೋಟೆಲ್‌ಗೆ ಎಲೆಕ್ಟ್ರಾನಿಕ್ ಸಿಟಿ ಪೋಲೀಸರು ಭೇಟಿ ನೀಡಿದ್ದು, ಬಾಂಬ್ ಸ್ಕ್ವಾಡ್ ಕರೆಸಿ ತಪಾಸಣೆ ನಡೆಸಿದ್ದಾರೆ. ಸದ್ಯ ಯಾವುದೇ ಬಾಂಬ್‌ ಕಂಡುಬಂದಿಲ್ಲ. ಮುನ್ನೆಚ್ಚರಿಕೆಯಾಗಿ ತಪಾಸಣೆ ಮುಗಿಯುವವರೆಗೂ ಹೋಟೆಲ್‌ ಆವರಣವನ್ನು ಗ್ರಾಹಕರಿಗೆ ಬಂದ್‌ ಮಾಡಲಾಗಿದೆ.

ಶಾಲೆ, ದೇವಸ್ಥಾನಗಳಿಗೆ ಬೆದರಿಕೆ

ಇತ್ತೀಚೆಗೆ ನಾಗವಾರದ ಸೇಂಟ್ ಫಿಲೋಮಿನಾ ಆಸ್ಪತ್ರೆ‌ಯಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಇಲಾಖೆಯ ಸಿಟಿ ಎಸ್.ಬಿ.ಗೆ ಇ-ಮೇಲ್ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ ಹಲವು ಪ್ರತಿಷ್ಠಿತ ಶಾಲೆಗಳಿಗೆ ಇದೇ ರೀತಿಯ ಬಾಂಬ್‌ ಬೆದರಿಕೆ ಇಮೇಲ್‌ ಬಂದಿತ್ತು. ಇದು ಕೂಡ ಹುಸಿಯಾಗಿತ್ತು. ಇತ್ತೀಚೆಗೆ ಹೊಸದಿಲ್ಲಿಯ ಹತ್ತಾರು ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿದ್ದು, ಆ ಎಲ್ಲ ಶಾಲೆಗಳ ಮಕ್ಕಳಿಗೂ ರಜೆ ನೀಡಿ ಆವರಣ ತಲಾಶ್‌ ಮಾಡಲಾಗಿತ್ತು. ಇದು ಕೂಡ ಹುಸಿ ಎಂದು ಕಂಡುಬಂದಿತ್ತು. ಹೀಗೆ ಬೆದರಿಕೆ ಇಮೇಲ್‌ ಮಾಡಿದ ವ್ಯಕ್ತಿ ಅಪ್ರಾಪ್ತ ವಯಸ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದರು. ನಂತರ ದೆಹಲಿಯ ವಿಮಾನ ನಿಲ್ದಾಣ (delhi airport) ಮತ್ತು ಹಲವಾರು ಆಸ್ಪತ್ರೆಗಳಿಗೆ (hospital) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಸಂದೇಶಗಳು ಬಂದಿದ್ದವು.

ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಹೀಗೆ ಬೆದರಿಕೆ ಮೇಲ್‌ ಮಾಡುತ್ತಿರುವವರ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ದೇಶದ ಸರ್ವರ್‌ ಕನೆಕ್ಷನ್‌ ತಪ್ಪಿಸಿ ವಿಪಿಎನ್‌ ಮೂಲಕ ಕಾರ್ಯಾಚರಿಸಿ ವಿದೇಶಗಳ ಸರ್ವರ್‌ನಿಂದ ಬಂದಂತೆ ತೋರಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಹೀಗಾಗಿ ಇದನ್ನು ಭೇದಿಸುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.

ದೂರು ದಾಖಲು

ಇ-ಮೇಲ್‌ಗಳ ನಿಖರವಾದ ಮೂಲವನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಇಂಟರ್‌ಪೋಲ್ ಮೂಲಕ ರಷ್ಯಾದ ಮೇಲಿಂಗ್ ಸೇವಾ ಕಂಪೆನಿ Mail.ru ಅನ್ನು ಸಂಪರ್ಕಿಸಿದರು. ಬಾಂಬ್ ಹುಸಿ ಇ-ಮೇಲ್‌ಗಳ ಉದ್ದೇಶವು ಸಾಮೂಹಿಕ ಭೀತಿಯನ್ನು ಸೃಷ್ಟಿಸುವುದು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿದೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸುಳ್ಳು ಬಾಂಬ್ ಬೆದರಿಕೆಗಳ ಸಂದರ್ಭಗಳನ್ನು ಎದುರಿಸಲು ವಿವರವಾದ ಪ್ರೋಟೋಕಾಲ್ ಮತ್ತು ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್ಸ್ (SOP) ಗಾಗಿ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವಾರದ ಆರಂಭದಲ್ಲಿ, ಗೃಹ ಕಾರ್ಯದರ್ಶಿ ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ತಪ್ಪು ಮಾಹಿತಿಯಿಂದಾಗಿ ಯಾವುದೇ ಅನಗತ್ಯ ಭಯವನ್ನುಉಂಟಾಗದಂತೆ ತಡೆಯಲು ವ್ಯವಸ್ಥೆಗೊಳಿಸುವಂತೆ ಕೇಳಿಕೊಂಡಿದ್ದರು.
ಭದ್ರತೆ ಹೆಚ್ಚಳಕ್ಕೆ ಸೂಚನೆ

ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ, ಸಿಸಿಟಿವಿ ಕೆಮರಾ ಮತ್ತು ಇಮೇಲ್‌ಗಳ ನಿಯಮಿತ ಮೇಲ್ವಿಚಾರಣೆಯನ್ನು ಹೆಚ್ಚಿಸುವ ಅಗತ್ಯವನ್ನು ಸಚಿವಾಲಯ ಒತ್ತಿಹೇಳಿದೆ. ತಪ್ಪು ಮಾಹಿತಿಯು ಯಾವುದೇ ಅನಗತ್ಯ ಭೀತಿಯನ್ನು ಸೃಷ್ಟಿಸದಂತೆ ಪರಿಣಾಮಕಾರಿ ಪ್ರತಿಕ್ರಿಯೆ ಕಾರ್ಯವಿಧಾನಕ್ಕಾಗಿ ನಿಕಟ ಸಮನ್ವಯವನ್ನು ಹೊಂದಲು ದೆಹಲಿ ಪೊಲೀಸರು ಮತ್ತು ಶಾಲೆಗಳಿಗೆ ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಲಬುರಗಿ

Prajwal Revanna Case: ಗಾಣಗಾಪುರಕ್ಕೆ ಎಚ್‌ಡಿ ರೇವಣ್ಣ ಭೇಟಿ; ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ

Prajwal Revanna Case: ಷ್ಟಗಳನ್ನು ನಿವಾರಣೆ ಮಾಡುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಭೇಟಿ ನೀಡಿದ್ದು, ದತ್ತಾತ್ರೇಯನ ದರ್ಶನ ಪಡೆದಿದ್ದಾರೆ. ಒಂದು ಗಂಟೆಗಳ ಕಾಲ ದತ್ತಾತ್ರೇಯ ದೇವಸ್ಥಾನದಲ್ಲಿ ರೇವಣ್ಣ ಪೂಜೆ ಸಲ್ಲಿಸಿದ್ದಾರೆ. ಎಚ್‌ಡಿ ರೇವಣ್ಣ ಅವರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಸತ್ಕಾರ ಮಾಡಲಾಗಿದೆ. ಈ ಹಿಂದೆಯೂ ಹಲವು ಬಾರಿ ಗಾಣಗಾಪುರಕ್ಕೆ ಆಗಮಿಸಿ ದತ್ತನ ದರ್ಶನವನ್ನು ರೇವಣ್ಣ ಪಡೆದಿದ್ದರು.

VISTARANEWS.COM


on

Prajwal Revanna Case HD Revanna visit to Gangapur and special pooja to Dattatreya
Koo

ಕಲಬುರಗಿ: ಪ್ರಜ್ವಲ್‌ ರೇವಣ್ಣ ಮೇಲಿನ ಅತ್ಯಾಚಾರ ಪ್ರಕರಣಕ್ಕೆ (Prajwal Revanna Case) ಸಂಬಂಧಪಟ್ಟಂತೆ ಬಂದಿರುವ ಸಂಕಷ್ಟಗಳನ್ನು ನಿವಾರಣೆ ಮಾಡುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಭೇಟಿ ನೀಡಿದ್ದು, ದತ್ತಾತ್ರೇಯನ ದರ್ಶನ ಪಡೆದಿದ್ದಾರೆ.

ದೇವಸ್ಥಾನದಲ್ಲಿ ದತ್ತನ ನಿರ್ಗುಣ ಪಾದುಕೆಗಳಿಗೆ ಎಚ್.ಡಿ. ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸುವ ಸಲುವಾಗಿ ರೇವಣ್ಣ ಅವರು ತಮ್ಮ ಜತೆಯಲ್ಲಿಯೇ ಪುರೋಹಿತರನ್ನು ಕರೆದುಕೊಂಡು ಬಂದಿರುವುದು ವಿಶೇಷವಾಗಿತ್ತು.

Prajwal Revanna Case HD Revanna visit to Gangapur and special pooja to Dattatreya

ಒಂದು ಗಂಟೆಗಳ ಕಾಲ ದತ್ತಾತ್ರೇಯ ದೇವಸ್ಥಾನದಲ್ಲಿ ರೇವಣ್ಣ ಪೂಜೆ ಸಲ್ಲಿಸಿದ್ದಾರೆ. ಎಚ್‌ಡಿ ರೇವಣ್ಣ ಅವರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಸತ್ಕಾರ ಮಾಡಲಾಗಿದೆ. ಈ ಹಿಂದೆಯೂ ಹಲವು ಬಾರಿ ಗಾಣಗಾಪುರಕ್ಕೆ ಆಗಮಿಸಿ ದತ್ತನ ದರ್ಶನವನ್ನು ರೇವಣ್ಣ ಪಡೆದಿದ್ದರು.

Prajwal Revanna Case HD Revanna visit to Gangapur and special pooja to Dattatreya

ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಶುರು; ಪ್ರಜ್ವಲ್‌ ರೇವಣ್ಣ ಬಂಧನ ಖಚಿತ

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ರಾಜತಾಂತ್ರಿಕ ಸಮರ ಸಾರಿದೆ. ಪ್ರಜ್ವಲ್‌ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic passport) ರದ್ದು ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ಇಕ್ಕಟ್ಟಿಗೆ ಸಿಲುಕಿದ್ದು, ಬಂಧನ ಬಹುತೇಕ ಖಚಿತ ಎಂದೇ ಹೇಳಲಾಗಿದೆ.

ರಾಜ್ಯ ಸರ್ಕಾರದ ಪತ್ರ ಆಧರಿಸಿ ವಿದೇಶಾಂಗ ಇಲಾಖೆಯು ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆಯನ್ನು ಶುರು ಮಾಡಿದೆ. ಕಾರಣ, ಈಗಾಗಲೇ ಅರೆಸ್ಟ್ ವಾರೆಂಟ್, ಸಮೇತ ಪತ್ರ ಎಸ್‌ಐಟಿ ಬರೆದಿದೆ.

ಹೇಗೆ ರದ್ದಾಗುತ್ತದೆ ಪ್ರಜ್ವಲ್ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌?

ಭಾರತೀಯ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಅಧಿಕಾರಿಗಳು ರಾಜ್ಯ ಗೃಹ ಇಲಾಖೆ ಮುಖಾಂತರ ಪತ್ರ ರವಾನಿಸಿದ್ದಾರೆ. ಈ ಹಿಂದೆ ಸಿಎಂ ಪತ್ರ ಬರೆದಿದ್ದ ವೇಳೆ ನ್ಯಾಯಾಲಯದ ಆದೇಶ ಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಹಾಗಾಗಿ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಪಡೆದು ಎಸ್‌ಐಟಿಯವರು ಪುನಃ ಪತ್ರ ಬರೆದಿದ್ದಾರೆ. ಹೀಗಾಗಿ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆಯನ್ನು ಆರಂಭ ಮಾಡಿದೆ.

ಪಾಸ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಭಾರತೀಯ ವಿದೇಶಾಂಗ ಇಲಾಖೆ ಅಡಿಯಲ್ಲಿ ಬರುತ್ತದೆ. ಎಸ್‌ಐಟಿಯಿಂದ ಬಂದಿರುವ ಪತ್ರವನ್ನು ದೃಢೀಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡುತ್ತದೆ. ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದರೆ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ಅನ್ನು ರದ್ದು ಮಾಡುತ್ತದೆ.

ಪಾಸ್‌ಪೋರ್ಟ್‌ ರದ್ದಾದರೆ ಮುಂದೇನು?

ಒಮ್ಮೆ ಪಾಸ್‌ಪೋರ್ಟ್ ರದ್ದಾದರೆ ಈ ಬಗ್ಗೆ ಎಲ್ಲ ದೇಶಗಳ ಇಮಿಗ್ರೇಷನ್‌ಗೂ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಲ್ಲವೇ ಐಡೆಂಟಿಟಿ ಬದಲಾಯಿಸಿ ತಲೆಮರೆಸಿಕೊಂಡು ಓಡಾಡಬೇಕು. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ.

ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್‌ ಕರೆತರುವುದು ಹೇಗೆ?

ಒಂದು ವೇಳೆ ಪಾಸ್‌ಪೋರ್ಟ್‌ ರದ್ದು ಮಾಡಿದರೆ, ಎರಡು ವಿಧಾನಗಳಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆತರಬಹುದು. ಪ್ರಜ್ವಲ್‌ ಯಾವ ದೇಶದಲ್ಲಿದ್ದಾರೋ ಅಲ್ಲಿ ಅವರನ್ನು ಹಸ್ತಾಂತರ ಪ್ರಕ್ರಿಯೆ (Extradition) ಅಡಿ ವಾಪಸ್‌ ಕರೆತರಬಹುದಾಗಿದೆ. ಆದರೆ, ಆ ದೇಶದ ನಡುವೆ ಭಾರತವು ಈ ಮೊದಲು ಒಪ್ಪಂದ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ, ಗಡಿಪಾರು ಪ್ರಕ್ರಿಯೆ (Deportation) ಮೂಲಕವೂ ಪ್ರಜ್ವಲ್‌ ಅವರನ್ನು ಕರೆತರಬಹುದು.

ಹಸ್ತಾಂತರ, ಗಡಿಪಾರು ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ?

  1. ಆರೋಪಿ ಮೊದಲು ಯಾವ ದೇಶದಲ್ಲಿ ಇದ್ದಾನೆ ಎನ್ನುವುದರ ಮಾಹಿತಿಯನ್ನು ಸಂಗ್ರಹಿಸಬೇಕು
  2. ನಂತರ ಆ ದೇಶದೊಟ್ಟಿಗೆ MLAT ( mutual legal assistance treaty) ಪ್ರಕ್ರಿಯೆಯನ್ನು ಆರಂಭ ಮಾಡಬೇಕು
  3. ಅದಾದ ಬಳಿಕ ದೇಶಕ್ಕೆ ಸಂಬಂಧಪಟ್ಟ ಪ್ರಕರಣದ ಮಾಹಿತಿಯನ್ನು ಒದಗಿಸಬೇಕು
  4. ಆಗ ಆ ದೇಶವು ಆರೋಪಿಯನ್ನು ಬಂಧನ ಮಾಡಿ ಇಲ್ಲಿಯ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡುತ್ತದೆ
  5. ಆಗ ಹಸ್ತಾಂತರ ಪ್ರಕ್ರಿಯೆ ಮುಖಾಂತರವಾದರೆ ಇಲ್ಲಿಯ ತನಿಖಾಧಿಕಾರಿಗಳ ತಂಡ ಅಲ್ಲಿ ಬಂಧನವಾದ ವ್ಯಕ್ತಿಯನ್ನು ತಮ್ಮ ವಶಕ್ಕೆ ಹಸ್ತಾಂತರ ಮಾಡಿಕೊಳ್ಳಬೇಕು
  6. ಇದಕ್ಕಾಗಿ ಇಲ್ಲಿಯ ಪ್ರಕರಣದ ಕಡತವನ್ನು ಸಂಬಂಧಪಟ್ಟ ದೇಶದ ಭಾಷೆಗೆ ತರ್ಜುಮೆ‌ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆಯಬೇಕು
  7. ಗಡಿಪಾರು ಪ್ರಕ್ರಿಯೆಗೊಳಪಡುವುದಾದರೆ, ಇದರಲ್ಲಿ ಆ ದೇಶವೇ ಇಲ್ಲಿಯ ಪ್ರಕರಣದ ಮಾಹಿತಿಯನ್ನು ಅಲ್ಲಿಯ ನ್ಯಾಯಾಲಯಕ್ಕೆ ನೀಡಿ ಗಡಿಪಾರು ಮಾಡಲು ಅನುಮತಿ ಪಡೆಯುತ್ತದೆ
  8. ನಂತರ ಇಲ್ಲಿಯ ವಿದೇಶಾಂಗ ಇಲಾಖೆಗೆ ಆ ದೇಶ ಮಾಹಿತಿ ನೀಡಿ ನಿರ್ದಿಷ್ಟ ವಿಮಾನದಲ್ಲಿ ಆರೋಪಿಯನ್ನು ಕಳಿಸಿಕೊಡುತ್ತದೆ

ಪಿಎಂಗೆ ಸಿದ್ದರಾಮಯ್ಯ ಇನ್ನೊಂದು ಪತ್ರ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಪತ್ರ ಆಧರಿಸಿ ಕೆಲಸಕ್ಕೆ ಆರಂಭಿಸಿರುವ ಕೇಂದ್ರ ವಿದೇಶಾಂಗ ಇಲಾಖೆ, ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ. ಪಾಸ್‌ಪೋರ್ಟ್ ಆ್ಯಕ್ಟ್ 1967ರ ಸೆಕ್ಷನ್ 10(3)(h) ಅಡಿ ಪಾಸ್‌ಪೋರ್ಟ್ ರದ್ದು ಮಾಡಿ. ಭಾರತಕ್ಕೆ ವಾಪಸ್ ಕರೆ ತರಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಪತ್ರದ ಮೂಲಕ ಕೇಂದ್ರದ ಸಹಕಾರವನ್ನು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ. ಎಸ್‌ಐಟಿ ಹೊರಡಿಸಿದ ಅರೆಸ್ಟ್‌ ವಾರಂಟ್‌ ಸಮೇತ ಪತ್ರದ ಜೊತೆಗೆ ಲಗತ್ತಿಸಲಾಗಿದೆ.

ಪ್ರಕರಣ ಪ್ರಧಾನ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಹಾಲಿ ಸಂಸದ ಹಾಗೂ ಮಾಜಿ ಪ್ರಧಾನಿಗಳ ಕುಟುಂಬದ ಸದಸ್ಯನಾಗಿದ್ದು, ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪ್ರಯಾಣ ಮಾಡಿದ್ದಾರೆ. FIR ದಾಖಲಾಗುವ ಕೆಲ ಗಂಟೆಗಳಿಗೆ ಮುನ್ನ ದೇಶ ತೊರೆದಿದ್ದಾರೆ. ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಒತ್ತಾಯ ಪೂರ್ವಕವಾಗಿ ವಿಡಿಯೋ ಮಾಡಿರುವ ಆರೋಪಗಳಿವೆ. ಇಂತಹ ಆರೋಪಿ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆರೋಪಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ. ಈ ವಿಚಾರವನ್ನು ಅತ್ಯಂತ ಗಂಭೀರ ಎಂದು ಪರಿಗಣಿಸಿ. ಸಾರ್ವಜನಿಕ ಹಿತಾಸಕ್ತಿ ಕಾರಣಕ್ಕಾಗಿ ಪಾಸ್‌ಪೋರ್ಟ್ ರದ್ದುಗೊಳಿಸಿ ಭಾರತಕ್ಕೆ ಬರುವಂತೆ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಮುಜುಗರ, ಇಕ್ಕಟ್ಟಿಗೆ ಸಿಲುಕಿಸಲು ಪತ್ರ?

ಇದು ಸಿಎಂ ಕೇಂದ್ರಕ್ಕೆ ಎರಡನೇ ಬಾರಿ ಬರೆಯುತ್ತಿರುವ ಪತ್ರವಾಗಿದೆ. ಈ ಹಿಂದೆಯೂ ಒಮ್ಮೆ ಅವರು ಪತ್ರ ಬರೆದಿದ್ದರು. ಪ್ರಕರಣದ ಪ್ರಮುಖ ಆರೋಪಿ ಜೆಡಿಎಸ್‌ ಸಂಸದರಾಗಿದ್ದು, ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯನ್ನು ಮುಜುಗರ ಹಾಗೂ ಇಕ್ಕಟ್ಟಿಗೆ ಸಿಕ್ಕಿಸುವುದು ಈ ಪತ್ರಗಳ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಾರಿ ವಿದೇಶಾಂಗ ಇಲಾಖೆ ಪ್ರಕ್ರಿಯೆ ಚುರುಕುಗೊಳಿಸಿರುವುದರಿಂದ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ಗೆ ನಿಜವಾಗಿಯೂ ಸಂಕಷ್ಟ ಎದುರಾಗಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡಿದರೆ ಪ್ರಜ್ವಲ್‌ ವಿದೇಶ ಯಾನ ಕಷ್ಟವಾಗಲಿದೆ. ಚಾಲ್ತಿಯಲ್ಲಿಲ್ಲದ ಪಾಸ್‌ಪೋರ್ಟ್‌ ಬಳಸಿದರೆ ಅಧಿಕಾರಿಗಳು ಅವರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲು ಸುಲಭವಾಗಲಿದೆ. ಇದರೊಂದಿಗೆ ಪ್ರಜ್ವಲ್‌ಗೆ ಪಲಾಯನದ ದಾರಿಗಳು ಬಂದ್‌ ಆಗಿವೆ.

ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ವಿದೇಶದಲ್ಲಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ನಗರದ 42ನೇ ಎಸಿಎಂಎಂ ಕೋರ್ಟ್‌, ಇತ್ತೀಚೆಗೆ ಸಂಸದನ ವಿರುದ್ಧ ಬಂಧನ ವಾರಂಟ್‌ ಹೊರಡಿಸಿ, ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಿತ್ತು. ಹೀಗಾಗಿ‌ ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಎಸ್‌ಐಟಿ ಪತ್ರ ಬರೆದಿದೆ.

ಇದನ್ನೂ ಓದಿ: Prajwal Revanna Case: 400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

ಈ ಕೂಡಲೇ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡಬೇಕು ಎಂದು ಮನವಿ ಮಾಡಿರುವ ಎಸ್‌ಐಟಿ, ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಎಲ್ಲವನ್ನೂ ಪತ್ರದ ಜತೆ ಟ್ಯಾಗ್ ಮಾಡಿದೆ. ಜತೆಗೆ ಪ್ರಜ್ವಲ್ ವಿರುದ್ಧದ ಪ್ರಕರಣಗಳ ಬಗ್ಗೆ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದು, ಸಂಸದ ಯಾವ ದೇಶದಲ್ಲಿ ಇದ್ದಾನೆ ಎಂಬ ಮಾಹಿತಿ ನೀಡುವಂತೆ ಮನವಿ ಮಾಡಿದೆ.

Continue Reading

ವಿಜಯನಗರ

Ration Card : ಸಾವಿನ ಎಡವಟ್ಟು ಸರಿಪಡಿಸಿದ ಆಹಾರ ಇಲಾಖೆ! ಮನೆ ಬಾಗಿಲಿಗೆ ಬಂತು ರೇಷನ್‌ ಕಾರ್ಡ್‌; ಇದು ವಿಸ್ತಾರ ನ್ಯೂಸ್‌ ಇಂಪ್ಯಾಕ್ಟ್‌

Ration Card : ಜೀವಂತ ಇದ್ದ ಮಹಿಳೆಯನ್ನು ಸತ್ತಿದ್ದಾಗಿ ತಿಳಿದ ಆಹಾರ ಇಲಾಖೆ ಅಧಿಕಾರಿಗಳು ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌ ಮಾಡಿದ್ದರು. ಇದರಿಂದ ನೊಂದಿದ್ದ ಮಹಿಳೆ ಕಣ್ಣೀರು ಹಾಕಿದ್ದರು. ಈ ಸಂಬಂಧ ವಿಸ್ತಾರ ನ್ಯೂಸ್‌ (Vistara news Impact) ಸುದ್ದಿ ಪ್ರಸಾರ ಮಾಡಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಕಡು ಬಡತನ ಕುಟುಂಬಕ್ಕೆ ಹೊಸ ಪಡಿತರ ಚೀಟಿಯನ್ನು ಮನೆ ಬಾಗಿಲಿಗೆ ತಂದು ಕೊಟ್ಟಿದೆ.

VISTARANEWS.COM


on

By

Ration Card Officials who gave new ration card to poor Family
ಅಂಜಿನಮ್ಮ ಕುಟುಂಬದ ಕೈ ಸೇರಿದ ಹೊಸ ರೇಷನ್‌ ಕಾರ್ಡ್‌
Koo

ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸತ್ತಿದ್ದಾಗಿ ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ (BPL Card) ಹೆಸರಿನಿಂದ ಆಹಾರ ಇಲಾಖೆಯು (Food Department) ಡಿಲೀಟ್ ಮಾಡಿತ್ತು. ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ (ration card) ಎಡವಟ್ಟಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ವಿಸ್ತಾರ ನ್ಯೂಸ್ ವರದಿಯ ಪರಿಣಾಮ ಬಡ ಕುಟುಂಬಕ್ಕೆ ನಾಲ್ಕೇ ದಿನದಲ್ಲಿ ಮನೆ ಬಾಗಿಲಿಗೆ ಪಡಿತರ ಚೀಟಿ ಬಂದಿದೆ.

ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಬದುಕಿದ್ದರೂ 2019ರಲ್ಲೇ ಸತ್ತಿದ್ದಾರೆ ಎಂದು ಬಿಪಿಎಲ್‌ ಕಾರ್ಡ್‌ನಿಂದ ಹೆಸರು ಡಿಲೀಟ್‌ ಮಾಡಲಾಗಿತ್ತು. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿತ್ತು. ಆಹಾರ ಇಲಾಖೆ ಎಡವಟ್ಟಿನಿಂದ ಪಡಬಾರದ ಕಷ್ಟ ಪಡುತ್ತಿರುವ ಕುಟಂಬ ತಿಂಗಳ ಪಡಿತರಕ್ಕೂ ಅಲೆಯುತ್ತಿತ್ತು.

ಕೂಡ್ಲಿಗಿ ತಾಲೂಕಿನ ಅಂಜಿನಮ್ಮ ತೀರಾ ಕಡು ಬಡವರಾಗಿದ್ದು, ಆಹಾರ ಇಲಾಖೆಯ ಕೆಲಸಕ್ಕೆ ಇತರೇ ಸೌಕರ್ಯಗಳಿಂದ ವಂಚಿತರಾಗಿದ್ದರು. ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಅಂಜಿನಮ್ಮಗೆ ಸಿಕ್ಕಿರಲಿಲ್ಲ. ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆದು ಸುಸ್ತಾಗಿದ್ದರು.

ಅಂಜಿನಮ್ಮ ಪಡುತ್ತಿರುವ ಸಮಸ್ಯೆಯನ್ನು ಮನಗಂಡು ವಿಸ್ತಾರ ನ್ಯೂಸ್, ಆಹಾರ ಇಲಾಖೆ ಯಡವಟ್ಟು, ಐದು ವರ್ಷದಿಂದ ಬಡ ಮಹಿಳೆ ಅಂಜೀನಮ್ಮ ಇದ್ದು ಸತ್ತಂತೆ ಬದುಕುತ್ತಿದ್ದಾಳೆ ಎನ್ನುವ ನಾಮಾಂಕಿತದಡಿ ವರದಿಯನ್ನು ಪ್ರಸಾರ ಮಾಡಿತ್ತು. ವಿಸ್ತಾರ ನ್ಯೂಸ್ ವರದಿ ಪ್ರಸಾರದ ಬಳಿಕ ಖುದ್ದು ಆಹಾರ ಇಲಾಖೆ ಅಧಿಕಾರಿಗಳು ಕೂಡ್ಲಿಗಿ ತಾಲೂಕಿನ 10ನೇ ವಾರ್ಡ್‌ನಲ್ಲಿ ವಾಸ ಮಾಡುತ್ತಿದ್ದ ಅಂಜೀನಮ್ಮ ಮನೆಗೆ ತೆರಳಿ ವಾಸ್ತವ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ನಾಲ್ಕು ದಿನದಲ್ಲೇ ಹೊಸ ಪಡಿತರ ಚೀಟಿಯನ್ನು ಅಂಜೀನಮ್ಮಗೆ ನೀಡಿದ್ದಾರೆ.

ಇದನ್ನೂ ಓದಿ: Self Harming : ಮದುವೆಗೆ ವಧು ಸಿಕ್ಕಿಲ್ಲವೆಂದು ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ವಿಸ್ತಾರ ನ್ಯೂಸ್‌ ಕಾರ್ಯಕ್ಕೆ ನಗು ಬೀರಿದ ಅಂಜೀನಮ್ಮ

ಇನ್ನೂ ಆಹಾರ ಇಲಾಖೆ ಯಡವಟ್ಟಿನಿಂದ ಅಂಜೀನಮ್ಮ, ಪುತ್ರ ಅಜ್ಜಯ್ಯ ಜೀವಂತ ಇದ್ದರೂ ಕಳೆದ ಐದು ವರ್ಷದಿಂದ ಸತ್ತಂತೆ ಬದುಕುತ್ತಿದ್ದರು. ಐದು ವರ್ಷದಿಂದ ಪಡಿತರವೂ ಇಲ್ಲ, ಅತ್ತ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಇಲ್ಲದಂತಾಗಿತ್ತು. ಜತೆಗೆ ಪಡಿತರ ಇಲ್ಲದಿರುವ ಕಾರಣ ಇತರೇ ಸೌಲಭ್ಯದಿಂದಲೂ ಅಂಜೀನಮ್ಮ ವಂಚಿತರಾಗಿದ್ದರು.

ಕಷ್ಟದಲ್ಲಿ ಇದ್ದ ಅಂಜೀನಮ್ಮಗೆ ಸಹಾಯ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿಸ್ತಾರ ಟಿವಿಯಲ್ಲಿ ವರದಿ ಪ್ರಸಾರ ಆಗಿದ್ದಕ್ಕೆ ಅಧಿಕಾರಿಗಳು ನಮ್ಮ ಮನೆಗೆ ಬಂದು ಮಾತಾಡಿಸಿದ್ದಾರೆ. ಜತೆಗೆ ನನಗೆ ಪಡಿತರ ಚೀಟಿ ಕೊಟ್ಟಿದ್ದಾರೆ. ಹೀಗಾಗಿ ವಿಸ್ತಾರ ಟಿವಿಯವರಿಗೆ ಧನ್ಯವಾದ ಎಂದು ನಗು ಮುಖ ಬೀರಿದರು. ನೊಂದವರ ಧ್ವನಿಯಾಗಿ ನಿಖರ – ಜನಪರ ಕೆಲಸ ಮಾಡುತ್ತಿರುವ ವಿಸ್ತಾರ ನ್ಯೂಸ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
viral video
ಕ್ರೀಡೆ7 mins ago

Viral Video: ಔಟಾದ ಸಿಟ್ಟಿನಲ್ಲಿ ಡಗೌಟ್​​ ಸ್ಟ್ಯಾಂಡ್​ಗೆ ಕೈ ಬಡಿದ ಯಶಸ್ವಿ ಜೈಸ್ವಾಲ್

Prajwal Revanna Case JDS mega plan to cancel Parliament membership even if Rahul Gandhi wins
ರಾಜಕೀಯ33 mins ago

Prajwal Revanna Case: ರಾಹುಲ್‌ ಗಾಂಧಿ ಗೆದ್ದರೂ ಸಂಸತ್‌ ಸದಸ್ಯತ್ವ ರದ್ದು ಮಾಡಲು ಜೆಡಿಎಸ್‌ ಮೆಗಾ ಪ್ಲ್ಯಾನ್‌!

Naxal activities
ತುಮಕೂರು42 mins ago

Naxal activities: ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿ ಕೇಸ್‌; 19 ವರ್ಷಗಳಿಂದ ತಲೆಮರೆಸಿಕೊಂಡಿದ್ದವನು ಅರೆಸ್ಟ್‌

Viral Video
ವೈರಲ್ ನ್ಯೂಸ್43 mins ago

Viral Video: ದಬಾಂಗ್‌ ಸ್ಟೈಲ್‌ನಲ್ಲಿ ಆಸ್ಪತ್ರೆಯೊಳಗೆ ನುಗ್ಗಿದ ಪೊಲೀಸ್‌ ಜೀಪ್‌! ವಿಡಿಯೋ ವೈರಲ್‌

Prajwal Revanna Case HD Revanna visit to Gangapur and special pooja to Dattatreya
ಕಲಬುರಗಿ56 mins ago

Prajwal Revanna Case: ಗಾಣಗಾಪುರಕ್ಕೆ ಎಚ್‌ಡಿ ರೇವಣ್ಣ ಭೇಟಿ; ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ

Ration Card Officials who gave new ration card to poor Family
ವಿಜಯನಗರ1 hour ago

Ration Card : ಸಾವಿನ ಎಡವಟ್ಟು ಸರಿಪಡಿಸಿದ ಆಹಾರ ಇಲಾಖೆ! ಮನೆ ಬಾಗಿಲಿಗೆ ಬಂತು ರೇಷನ್‌ ಕಾರ್ಡ್‌; ಇದು ವಿಸ್ತಾರ ನ್ಯೂಸ್‌ ಇಂಪ್ಯಾಕ್ಟ್‌

Aadhaar Card Fact Check
ವೈರಲ್ ನ್ಯೂಸ್1 hour ago

Aadhaar Card Fact Check: 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್‌ ಜೂ. 14ರ ಬಳಿಕ ರದ್ದಾಗುತ್ತದೆಯೆ?

cm siddaramaiah meet
ಪ್ರಮುಖ ಸುದ್ದಿ1 hour ago

CM Siddaramaiah: ಕಾಲರಾ ಕಂಡು ಬಂದರೆ ಅಧಿಕಾರಿಗಳು ಸಸ್ಪೆಂಡ್‌; ಸಿಎಂ ಖಡಕ್‌ ವಾರ್ನಿಂಗ್

Job Alert
ಉದ್ಯೋಗ2 hours ago

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

SRH vs RR
ಕ್ರೀಡೆ2 hours ago

SRH vs RR: ರಾಜಸ್ಥಾನ್​-ಹೈದರಾಬಾದ್​ ಐಪಿಎಲ್​ ದಾಖಲೆ, ಹವಾಮಾನ ವರದಿ ಹೇಗಿದೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ10 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌