ಸಿಇಟಿ ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ; ಅಭ್ಯರ್ಥಿಗಳೂ ಈ ಸೂಚನೆಗಳನ್ನು ಪಾಲಿಸಿದರೆ ಕ್ಷೇಮ - Vistara News

Latest

ಸಿಇಟಿ ಪರೀಕ್ಷೆ: ವಸ್ತ್ರ ಸಂಹಿತೆ ಕಡ್ಡಾಯ; ಅಭ್ಯರ್ಥಿಗಳೂ ಈ ಸೂಚನೆಗಳನ್ನು ಪಾಲಿಸಿದರೆ ಕ್ಷೇಮ

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಕಳೆದ ವರ್ಷ ಸಿಇಟಿ ಪರೀಕ್ಷೆ (CET) ನಡೆದಾಗ ಜನಿವಾರದ ಘಟನೆ ಕೋಲಾಹಲವನ್ನೇ ಸೃಷ್ಟಿಸಿತ್ತು. ಹೀಗಾಗಿ ಈ ಬಾರಿ ಮುನ್ನೆಚ್ಚರಿಕೆ ವಹಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ.

ರಾಜ್ಯದಲ್ಲಿ ಏಪ್ರಿಲ್​ 23 ಹಾಗೂ 24 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಈ ಬಾರಿ ಸುಮಾರು 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ವಸ್ತ್ರ ಸಂಹಿತೆ ಅಧಿಕಾರಿ ನೇಮಕ: ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಪ್ರಾಧಿಕಾರ ಎಲ್ಲ 750 ಪರೀಕ್ಷೆ ಕೇಂದ್ರಗಳಲ್ಲಿಯೂ ವಸ್ತ್ರ ಸಂಹಿತೆ ಅಧಿಕಾರಿಗಳನ್ನ ನೇಮಕ ಮಾಡಲು ನಿರ್ಧರಿಸಿದೆ. ಡ್ರೆಸ್ ಕೋಡ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆಯಾ ಕಾಲೇಜಿನ ಹಿರಿಯ ಪ್ರಾಧ್ಯಾಪಕರಿಗೆ ಡ್ರೆಸ್ ಕೂಡ ವಿಚಾರವಾಗಿ ಈಗಾಗಲೇ ವಿಶೇಷ ತರಬೇತಿ ನೀಡಲಾಗಿದೆ ಎಂದು ಕೆಇಎ ತಿಳಿಸಿದೆ.

ವಸ್ತ್ರ ಸಂಹಿತೆ ಹೀಗಿರಲಿದೆ:
ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್, ಸರಳವಾದ ಪ್ಯಾಂಟ್ ಧರಿಸಬಹುದು. ಆದರೆ ಡಿಸೈನ್‌ ಬಟನ್, ಜಿಪ್ ಪಾಕೆಟ್ ಅಥವಾ ಹೆಚ್ಚಿನ ಕಸೂತಿ​ ಇರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಶೂಗಳಿಗೆ ಬದಲಾಗಿ ಚಪ್ಪಲಿ ಧರಿಸಬೇಕು. ಯಾವುದೇ ಸರ, ಕಿವಿಯೋಲೆ, ಉಂಗುರ ಅಥವಾ ಕಡಗಗಳಂತಹ ಯಾವುದೇ ಲೋಹದ ಆಭರಣಗಳನ್ನು ಧರಿಸುವಂತಿಲ್ಲ.

ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಡಿಸೈನ್​, ಹೂ, ಬ್ರೂಚ್‌ ಗಳು ಅಥವಾ ಬಟನ್‌ ಗಳನ್ನು ಹೊಂದಿರುವ ಡ್ರೆಸ್‌ ಅನ್ನು ನಿಷೇಧಿಸಲಾಗಿದೆ. ಪೂರ್ಣ ತೋಳಿನ ಟಾಪ್‌, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಹೀಲ್ಡ್​ ಶೂ, ಹೀಲ್ಡ್​ ಚಪ್ಪಲಿಗೂ ಅವಕಾಶ ಇಲ್ಲ. ಪ್ರತಿ ಕೇಂದ್ರದಲ್ಲೂ ಸಿಸಿ ಕ್ಯಾಮೆರಾ ಮತ್ತು ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ.

ನಿಷೇಧಿತ ವಸ್ತುಗಳು:
ಮೊಬೈಲ್, ಪೆನ್ ಡ್ರೈವ್, ಬ್ಲೂಟೂತ್, ಇಯರ್ ಫೋನ್ ಹಾಗೂ ಯಾವುದೇ ರೀತಿಯ ವಾಚ್; ಪೆನ್ಸಿಲ್, ಎರೇಸರ್, ಜಿಯೋಮೆಟ್ರಿ ಬಾಕ್ಸ್, ಪೇಪರ್ ಅಥವಾ ಲಾಗ್ ಟೇಬಲ್; ಟೋಪಿ, ಮಾಸ್ಕ್, ಬಣ್ಣದ ಅಥವಾ ಲೋಹದ ನೀರಿನ ಬಾಟಲಿ ಹಾಗೂ ತಿಂಡಿ ತಿನಿಸುಗಳನ್ನು ತರುವಂತಿಲ್ಲ.
ಅಭ್ಯರ್ಥಿಗಳು ಈ ಸೂಚನೆಗಳನ್ನು ಪಾಲಿಸಿದರೆ ಸರಾಗವಾಗಿ ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದೆ ಪರೀಕ್ಷೆ ಬರೆಯಬಹುದು. ಇಲ್ಲವಾದಲ್ಲಿ ಗೊಂದಲಕ್ಕೆ ಈಡಾಗಿ ವಿನಾಕಾರಣ ಪರೀಕ್ಷೆಯಿಂದ ತಪ್ಪಿಸಿಕೊಳ್ಳಬೇಕಾದೀತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

bigbreaking

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

VISTARANEWS.COM


on

ಪಶ್ಚಿಮ ಬಂಗಾಳವನ್ನು ಈ ಸಲ ಗೆದ್ದೇ ಗೆಲ್ಲಬೇಕು ಎಂಬ ಬಿಜೆಪಿ ಹಠ-ನಾಲ್ಕನೇ ಬಾರಿಯೂ ಸಿಎಂ ಪಟ್ಟ ಉಳಿಸಿಕೊಳ್ಳಬೇಕು ಎಂಬ ಮಮತಾ ಬ್ಯಾನರ್ಜಿ ಛಲ – ಈ ಸಲ ಪಶ್ಚಿಮ ಬಂಗಾಲದಲ್ಲಿ ಮೋದಿಯಾ..ದೀದಿಯಾ ಅನ್ನೋ ಪ್ರಶ್ನೆಗೆ ಬುಧವಾರದ ವೋಟಿಂಗ್‌ ನಿರ್ಧರಿಸಲಿದೆ. ಬುಧವಾರ 142 ಸೀಟುಗಳೇ ಬಂಗಾಳದ ರಾಜಕೀಯ ಭವಿಷ್ಯ ಬರೆಯಲಿವೆ.

ಯಾಕೆ ಬುಧವಾರ ನಿರ್ಣಾಯಕ?:
ಬುಧವಾರ ಎರಡನೇ ಹಂತದಲ್ಲಿ ಬಂಗಾಳದ 8 ಜಿಲ್ಲೆಗಳಲ್ಲಿ ಮತದಾನ ನಡೆಯಲಿವೆ. ಕೋಲ್ಕತ್ತಾ ಉತ್ತರ, ಕೋಲ್ಕತ್ತಾ ದಕ್ಷಿಣ, ಹೌರಾ, ನಾಡಿಯಾ, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಹೂಗ್ಲಿ ಮತ್ತು ಪೂರ್ವ ಬರ್ಧಮನ್‌ ಜಿಲ್ಲೆಗಳಲ್ಲಿ ಮತಯುದ್ಧ ನಡೆಯಲಿವೆ. ಹಾಗೆ ನೋಡಿದರೆ ಈ ಎಂಟೂ ಜಿಲ್ಲೆಗಳು ಟಿಎಂಸಿಯ ಭದ್ರಕೋಟೆ. 2021ರ ಫಲಿತಾಂಶ ಒಮ್ಮೆ ನೋಡಿದರೆ, 142 ಸೀಟುಗಳಲ್ಲಿ ಟಿಎಂಸಿ 123ನ್ನು ಗೆದ್ದಿದೆ. ಬಿಜೆಪಿ ಗೆಲುವಿನ ನಗೆ ಬೀರಿದ್ದು ಕೇವಲ 18 ಸೀಟುಗಳಲ್ಲಿ. ಮತ್ತೊಂದು ಸೀಟು ಐಎಸ್‌ಎಫ್‌ ಪಾಲಾಗಿದೆ. ಹಾಗಾಗಿ, ಅಧಿಕಾರ ಉಳಿಸಿಕೊಳ್ಳಲು ಟಿಎಂಸಿಗೆ, ಅಧಿಕಾರ ಕಿತ್ತುಕೊಳ್ಳಲು ಬಿಜೆಪಿಗೆ ಈ 142 ಸೀಟುಗಳೇ ನಿರ್ಣಾಯಕ.
ವೋಟಿನ ಲೆಕ್ಕಾಚಾರ ಗಮನಿಸಿದರೆ ಎರಡನೇ ಹಂತದ ಮತದಾನದಲ್ಲಿ ಟಿಎಂಸಿ ಮುಂದೆ ಬಿಜೆಪಿ ಲೆಕ್ಕಕ್ಕೇ ಇಲ್ಲ. 2021ರಲ್ಲಿ ಎರಡನೇ ಹಂತದ ಕ್ಷೇತ್ರಗಳಲ್ಲಿ ಟಿಎಂಸಿಯದ್ದು ಅಭೂತಪೂರ್ವ ಶೇ. 82ರ ಸ್ಟ್ರೈಕ್‌ ರೇಟ್‌ (142ರಲ್ಲಿ 123 ಸೀಟು). ಬಿಜೆಪಿಯದ್ದು ಏನಿದ್ದರೂ ಶೇ. 17 ( 142ರಲ್ಲಿ 18 ಸೀಟು). ಆದರೆ, ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಎಂಟು ಜಿಲ್ಲೆಗಳಲ್ಲಿ ಬಿಜೆಪಿಯ ವೋಟ್‌ ಶೇರಿಂಗ್‌ ಗಣನೀಯವಾಗಿ ಸುಧಾರಿಸಿದೆ. ಹಾಗಾಗಿ ಎರಡನೇ ಹಂತ ಮಮತಾ ಬ್ಯಾನರ್ಜಿಗೆ ಸುಲಭದ ತುತ್ತಲ್ಲ.

ಎರಡನೇ ಹಂತದ ಮೇಲೆ ಬಿಜೆಪಿ ಕಣ್ಣೇಕೆ?
ಪಶ್ಚಿಮ ಬಂಗಾಳದಲಿ ಬಿಜೆಪಿ ಧ್ವಜ ಹಾರಿಸಬೇಕಾದರೆ ಬುಧವಾರ ಮತದಾನವನ್ನು ಗೆಲ್ಲಲೇಬೇಕು ಎಂಬ ಸತ್ಯ ಬಿಜೆಪಿಗೆ ಅರಿವಿದೆ. ದೀದಿಯಿಂದ ಅಧಿಕಾರ ಕಿತ್ತುಕೊಳ್ಳಬೇಕಾದರೆ ಬಂಗಾಳದ ದಕ್ಷಿಣದ 8 ಜಿಲ್ಲೆಗಳಲ್ಲಿ ಬಿಜೆಪಿ ಪರಾಕ್ರಮ ತೋರಲೇ ಬೇಕಿದೆ. ಯಾಕಂದರೆ, ಉತ್ತರ ಬಂಗಾಳದಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಅಲ್ಲಿ 59 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಆದರೆ, ದಕ್ಷಿಣ ಬಂಗಾಳದಲ್ಲಿ ಆ ಪಾರಮ್ಯವನ್ನು ಸಾಬೀತುಪಡಿಸಬೇಕಿದೆ. ಹಾಗಿದ್ದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಧ್ವಜ ರಾರಾಜಿಸಬಹುದು.

ಪ. ಬಂಗಾಳದಲ್ಲಿ ಬಿಜೆಪಿ ಗುಪ್ತಗಾಮಿನಿ:
ದೀದಿನಾಡಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರಾನೇರ ಹಣಾಹಣಿ ಇದೆ. ಮೂರು ಸಲ ಸತತ ಸಿಎಂ ಆಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇದೆ. ಕಳೆದ ಸಲ ಈ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿತ್ತು. ಆದರೂ ಅದರ ಸೀಟು ಮೂರರಿಂದ 77ಕ್ಕೆ ಏರಿತ್ತು. ಇದು ಕೂಡಾ ಗಮನಾರ್ಹ ಸಾಧನೆಯೇ. ಒಮ್ಮೆ ಪಶ್ಚಿಮ ಬಂಗಾಳದ ಅತಿದೊಡ್ಡ ಶಕ್ತಿಯಾಗಿ ಮೆರೆದಿದ್ದ ಎಡಪಕ್ಷಗಳು ಈಗ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ. ಕಾಂಗ್ರೆಸ್‌ ಕೂಡಾ ಕಣದಲ್ಲಿದೆಯಾದರೂ ಆ ಪಕ್ಷಕ್ಕೇ ಗೆಲ್ಲುವ ಯಾವುದೇ ಆತ್ಮವಿಶ್ವಾಸ ಇಲ್ಲ. ಆದರೆ, ಬಿಜೆಪಿ ಈ ಸಲ ತನ್ನ ರಣತಂತ್ರ ಬದಲಾಯಿಸಿದೆ. ಗುಪ್ತಗಾಮಿನಿಯಾಗಿ ಬಿಜೆಪಿಯ ಕಾರ್ಯಕರ್ತರು ಜನರ ನಡುವೆ ಸೇರಿದ್ದು, ಪಕ್ಷದ ಪರ ಸೈಲೆಂಟಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೈವೋಲ್ಟೇಜ್‌ ಪ್ರಚಾರದಿಂದ ಬಿಜೆಪಿ ದೂರ ಉಳಿದಿದೆ. ಜೊತೆಗೆ ಮಮತಾ ಬ್ಯಾನರ್ಜಿಗೆ ವ್ಯಕ್ತಿಗತ ನಿಂದನೆಯಿಂದ ಹಿಂದೆ ಸರಿದಿದೆ. ಮಮತಾ ಆಡಳಿತ ವಿರೋಧಿ ಅಲೆ, ನುಸುಳುಕೋರರ ಸಮಸ್ಯೆ, ತುಷ್ಟೀಕರಣ ನೀತಿಯನ್ನೇ ಹೈಲೈಟ್‌ ಮಾಡಿ ಪ್ರಚಾರ ನಡೆಸುತ್ತಿದೆ. ಮತದಾರರ ಧ್ರುವೀಕರಣಕ್ಕೂ ಬಿಜೆಪಿ ರಣತಂತ್ರ ರೂಪಿಸಿದೆ. ಇದು ಫಲನೀಡಿದ್ರೆ, ಕಮಲ ಅರಳುವ ಎಲ್ಲಾ ಸಾಧ್ಯತೆಗಳಿವೆ.

ದಾಖಲೆ ವೋಟಿಂಗ್‌ ಯಾರಿಗೆ ವರ?
ಮೊದಲ ಹಂತದಲ್ಲಿ ಪ. ಬಂಗಾಳದಲ್ಲಿ ಶೇ. 93.19ರಷ್ಟು ಮತದಾನವಾಗಿದೆ. ಇದೊಂದು ಮಹಾ ದಾಖಲೆ. ಯಾಕೆ ಇಷ್ಟೊಂದು ಪ್ರಮಾಣದ ವೋಟಿಂಗ್‌ ಆಗಿದೆ ಅನ್ನೋದಕ್ಕೆ ಮೊದಲು ಸಿಗುವ ಉತ್ತರ ಎಸ್‌ಐಆರ್‌. ಮತಪಟ್ಟಿಯ ನವೀಕರಣ ಸಂದರ್ಭದಲ್ಲಿ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸುಮಾರು 90 ಲಕ್ಷ ಮತದಾರರು ಪಟ್ಟಿಯಿಂದ ಡಿಲೀಟ್‌ ಆಗಿದ್ದಾರೆ. ಇದು ಕೂಡಾ ಮತದಾನದ ದಾಖಲೆಗೆ ಕಾರಣ. ಈ ದಾಖಲೆ ವೋಟಿಂಗ್‌ ಲಾಭ ಬಿಜೆಪಿ ಪಡೆಯುತ್ತಾ? ಟಿಎಂಸಿಗೆ ಸಿಗುತ್ತಾ ಎಂಬುದಕ್ಕೆ ಹಲವು ತರ್ಕಗಳಿವೆ. ಇದಕ್ಕೆ ಉತ್ತರ ಮೇ 4ಕ್ಕೆ ಸಿಗಲಿದೆ

Continue Reading

Latest

ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’: ಸಿಎಂ ಬದಲಾವಣೆ ಬಗ್ಗೆ ರಾಜಣ್ಣ ನೀಡಿದ ಹೇಳಿಕೆಯ ಮರ್ಮವೇನು?

VISTARANEWS.COM


on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಸುಳಿವೊಂದನ್ನು ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಅಂಟಿಕೊಳ್ಳುವ ವ್ಯಕ್ತಿಯಲ್ಲ, ಅವರು ಮುಂದುವರಿಯುವುದಕ್ಕೂ ಸಿದ್ಧ ಅಥವಾ ಪದತ್ಯಾಗ ಮಾಡುವುದಕ್ಕೂ ಸೈ ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಸಿಎಂ ಜೊತೆಗಿನ ಸಭೆಯ ಸಂದರ್ಭದಲ್ಲಿ ಅವರು ಅತ್ಯಂತ ಮುಕ್ತ ಮನಸ್ಸಿನಿಂದ ಮಾತನಾಡಿದ್ದು, “ರಾಹುಲ್ ಗಾಂಧಿ ಅವರು ಏನು ಸೂಚನೆ ನೀಡುತ್ತಾರೋ ಅದನ್ನು ಪಾಲಿಸಲು ನಾನು ಬದ್ಧ” ಎಂದು ಹೇಳಿರುವುದಾಗಿ ರಾಜಣ್ಣ ಬಹಿರಂಗಪಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸದ್ಯ ಸೃಷ್ಟಿಯಾಗಿರುವ ಗೊಂದಲಗಳನ್ನು ಹೈಕಮಾಂಡ್ ಶೀಘ್ರವಾಗಿ ಬಗೆಹರಿಸಬೇಕು ಎಂದು ರಾಜಣ್ಣ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡುತ್ತಾ ಅವರು, “ಗೊಂದಲಗಳು ಮುಂದುವರಿಯುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕೇವಲ ವೈಯಕ್ತಿಕ ನಿರ್ಧಾರವಲ್ಲ, ಪಕ್ಷದ ಭವಿಷ್ಯವೂ ಇದರಲ್ಲಿ ಅಡಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ‘ದಲಿತ ಮುಖ್ಯಮಂತ್ರಿ’ ಕೂಗಿನ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಆಗಬೇಕು ಎಂಬ ತಮ್ಮ ಹಳೆಯ ನಿಲುವಿಗೆ ಈಗಲೂ ಬದ್ಧವಾಗಿರುವುದಾಗಿ ನುಡಿದ್ದಾರೆ. ಇದು ಪರೋಕ್ಷವಾಗಿ ನಾಯಕತ್ವ ಬದಲಾವಣೆಯ ಮುನ್ಸೂಚನೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸಿದ್ದರಾಮಯ್ಯ ಅವರ ಮೊದಲ ಅವಧಿಗೂ (2013-18) ಮತ್ತು ಈಗಿನ ಅವಧಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದ ರಾಜಣ್ಣ, ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳುವ ಮೂಲಕ ಕುತೂಹಲ ಕಾಯ್ದಿರಿಸಿದ್ದಾರೆ. ಮುಂದಿನ ಚುನಾವಣೆಗೆ ಇನ್ನೂ ಸಮಯವಿರುವುದರಿಂದ ರಾಜಕೀಯ ದಿಕ್ಸೂಚಿಯನ್ನು ಈಗಲೇ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ, ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ ಮತ್ತು ಅವರು ಯಾವುದೇ ನಿರ್ಧಾರಕ್ಕೂ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂಬುದು ಬೆಂಗಳೂರಿನಲ್ಲಿ ರಾಜಣ್ಣ ಅವರು ನೀಡಿದ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.

Continue Reading

ಕ್ರೀಡೆ

ಕಿಂಗ್ ಕೊಹ್ಲಿಗೆ ಟಕ್ಕರ್ ಕೊಟ್ಟ ಯುವ ಕಿಡಿ: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಹಿಂದಿಕ್ಕಿದ ವೈಭವ್ ಸೂರ್ಯವಂಶಿ!

VISTARANEWS.COM


on

ಐಪಿಎಲ್ 2026ರ ಪ್ಲೇಆಫ್‌ ಹಂತ ಹತ್ತಿರವಾಗುತ್ತಿದ್ದಂತೆ ಆರೆಂಜ್ ಕ್ಯಾಪ್‌ಗಾಗಿ ದಿಗ್ಗಜ ಆಟಗಾರರ ನಡುವೆ ಭಾರಿ ಪೈಪೋಟಿ ಶುರುವಾಗಿದೆ. ಈ ರೇಸ್‌ನಲ್ಲಿ ರಾಜಸ್ತಾನ ರಾಯಲ್ಸ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಅವರನ್ನೇ ಹಿಂದಿಕ್ಕಿ ಸದ್ದು ಮಾಡುತ್ತಿದ್ದಾರೆ. ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ 12 ಸಿಕ್ಸರ್‌ಗಳ ನೆರವಿನಿಂದ ಶತಕ ಸಿಡಿಸಿದ ಸೂರ್ಯವಂಶಿ, ಸದ್ಯ 357 ರನ್‌ಗಳೊಂದಿಗೆ ರೇಸ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಇತ್ತ ಎಂಟು ಪಂದ್ಯಗಳಿಂದ 351 ರನ್ ಗಳಿಸಿರುವ ಕಿಂಗ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್ ತಂಡದ ಅಭಿಷೇಕ್ ಶರ್ಮಾ 380 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಆರೆಂಜ್ ಕ್ಯಾಪ್ ಧರಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ 358 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಅವರಿಗಿಂತ ಕೇವಲ ಒಂದು ರನ್ ಕಡಿಮೆ (357 ರನ್) ಹೊಂದಿರುವ ವೈಭವ್ ಸೂರ್ಯವಂಶಿ ಮೂರನೇ ಸ್ಥಾನದಲ್ಲಿದ್ದಾರೆ. 234.86ರ ಭೀಕರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯವಂಶಿ ಅವರ ಆಟ ನೋಡಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಡುತ್ತಿದ್ದಾರೆ. ಹೆನ್ರಿಚ್ ಕ್ಲಾಸೆನ್ 349 ರನ್‌ಗಳೊಂದಿಗೆ ಐದನೇ ಸ್ಥಾನ ಪಡೆದಿದ್ದು, ಪೈಪೋಟಿ ತೀವ್ರಗೊಂಡಿದೆ.

ವೈಭವ್ ಸೂರ್ಯವಂಶಿ ಅವರ ಈ ಸಾಧನೆಗೆ ಅವರ ಅದ್ಭುತ ಫಾರ್ಮ್ ಕಾರಣವಾಗಿದೆ. ಗುಜರಾತ್ ಟೈಟನ್ಸ್‌ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅವರು, ಈಗ ಹೈದ್ರಾಬಾದ್ ವಿರುದ್ಧವೂ ಅಬ್ಬರಿಸಿದ್ದಾರೆ. ಮಧ್ಯದಲ್ಲಿ ಮಂಡಿ ಗಾಯದಿಂದ ಕೊಂಚ ಹಿನ್ನಡೆ ಅನುಭವಿಸಿದ್ದರೂ, ಈಗ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಐಪಿಎಲ್ ಇತಿಹಾಸದ ಸ್ಟಾರ್ ಬ್ಯಾಟರ್‌ಗಳನ್ನೇ ಮೀರಿಸಿರುವ ಈ 15ರ ಹರೆಯದ ಪೋರ, ಈ ಬಾರಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವ ಟಾರ್ಗೆಟ್ ಹೊಂದಿದ್ದಾರೆ. ಪ್ಲೇಆಫ್‌ ವೇಳೆಗೆ ಈ ರೇಸ್ ಇನ್ನು ಎಷ್ಟು ರೋಚಕವಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Continue Reading

Latest

ಅಪ್ಪು ಸರ್ ಕೊಟ್ಟ ಆ ಪ್ರೋತ್ಸಾಹವೇ ನನ್ನ ಯಶಸ್ಸಿನ ಗುಟ್ಟು: ಕನ್ನಡಿಗರ ನೆಚ್ಚಿನ ‘ಅಂಜನಿಪುತ್ರ’ನ ಬಗ್ಗೆ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಹೇಳಿದ್ದೇನು?

VISTARANEWS.COM


on

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇಂದು ಭಾರತೀಯ ಚಿತ್ರರಂಗದ ‘ನ್ಯಾಷನಲ್ ಕ್ರಶ್’ ಆಗಿ ಬೆಳೆದಿರಬಹುದು, ಆದರೆ ಅವರ ಈ ಯಶಸ್ಸಿನ ಪಯಣದ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಪಾತ್ರವಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ರಶ್ಮಿಕಾ, “ನನ್ನ ವೃತ್ತಿಜೀವನದ ಆರಂಭದಲ್ಲಿ ನನಗೆ ನನ್ನ ಪ್ರತಿಭೆಯ ಮೇಲೆ ನಂಬಿಕೆ ಇರಲಿಲ್ಲ. ಆದರೆ ನನಗಿಂತ ಮೊದಲೇ ನನ್ನೊಳಗಿನ ಶಕ್ತಿಯನ್ನು ಗುರುತಿಸಿದ್ದು ಅಪ್ಪು ಸರ್” ಎಂದು ಸ್ಮರಿಸಿದ್ದಾರೆ. ‘ಕಿರಿಕ್ ಪಾರ್ಟಿ’ ನಂತರ ಸಿಕ್ಕ ಅವಕಾಶಗಳು ಕೇವಲ ಅದೃಷ್ಟ ಎಂದು ಭಾವಿಸಿದ್ದ ರಶ್ಮಿಕಾ ಅವರಿಗೆ, ಆತ್ಮವಿಶ್ವಾಸ ತುಂಬಿದವರು ಪುನೀತ್ ರಾಜ್‌ಕುಮಾರ್.

‘ಅಂಜನಿಪುತ್ರ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಪುನೀತ್ ಅವರು ರಶ್ಮಿಕಾ ಅವರ ನಟನೆಗೆ ಮೆಚ್ಚುಗೆ ಸೂಚಿಸುತ್ತಿದ್ದರಂತೆ. “ನಿನ್ನ ಪ್ರತಿಭೆಯ ಮೇಲೆ ನಂಬಿಕೆ ಇಡು, ಯಾವುದಕ್ಕೂ ಹಿಂಜರಿಯಬೇಡ” ಎಂದು ಅಪ್ಪು ನೀಡಿದ ಆ ಕಿವಿಮಾತು ರಶ್ಮಿಕಾ ಅವರ ಆಲೋಚನಾ ಕ್ರಮವನ್ನೇ ಬದಲಿಸಿತ್ತು. ಒಬ್ಬ ದೊಡ್ಡ ಸ್ಟಾರ್ ಆಗಿದ್ದರೂ, ಸೆಟ್‌ನಲ್ಲಿ ಹೊಸಬರಿಗೆ ಅವರು ನೀಡುತ್ತಿದ್ದ ಗೌರವ ಮತ್ತು ಪ್ರೋತ್ಸಾಹವೇ ತಾನು ವೃತ್ತಿಜೀವನದಲ್ಲಿ ಗಟ್ಟಿಯಾಗಿ ನೆಲೆಯೂರಲು ಅಡಿಪಾಯವಾಯಿತು ಎಂದು ರಶ್ಮಿಕಾ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ.

ಅಂದು ಅಪ್ಪು ನೀಡಿದ ಆ ದೃಢವಾದ ನಂಬಿಕೆಯ ಫಲವಾಗಿಯೇ ರಶ್ಮಿಕಾ ಇಂದು ಕೇವಲ ಕನ್ನಡಕ್ಕೆ ಸೀಮಿತವಾಗದೆ ತೆಲುಗಿನ ‘ಪುಷ್ಪ’ ಮತ್ತು ಹಿಂದಿಯ ‘ಅನಿಮಲ್’ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ‘ಗೀತಾ ಗೋವಿಂದಂ’ನಿಂದ ಆರಂಭವಾದ ಅವರ ಪ್ಯಾನ್ ಇಂಡಿಯಾ ಜರ್ನಿ ಇಂದು ಬಾಲಿವುಡ್‌ನಲ್ಲೂ ಸೈ ಎನಿಸಿಕೊಳ್ಳುವಂತೆ ಮಾಡಿದೆ. “ಅಪ್ಪು ಸರ್ ಕೇವಲ ಸಹ-ನಟನಲ್ಲ, ನನ್ನ ಸಾಮರ್ಥ್ಯವನ್ನು ನನಗೆ ಪರಿಚಯಿಸಿದ ಶಕ್ತಿ” ಎನ್ನುವ ರಶ್ಮಿಕಾ ಅವರ ಮಾತುಗಳು ಕನ್ನಡಿಗರ ಮನಗೆದ್ದಿವೆ.

Continue Reading
Advertisement
bigbreaking5 hours ago

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

Latest5 hours ago

ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’: ಸಿಎಂ ಬದಲಾವಣೆ ಬಗ್ಗೆ ರಾಜಣ್ಣ ನೀಡಿದ ಹೇಳಿಕೆಯ ಮರ್ಮವೇನು?

ಕ್ರೀಡೆ6 hours ago

ಕಿಂಗ್ ಕೊಹ್ಲಿಗೆ ಟಕ್ಕರ್ ಕೊಟ್ಟ ಯುವ ಕಿಡಿ: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಹಿಂದಿಕ್ಕಿದ ವೈಭವ್ ಸೂರ್ಯವಂಶಿ!

Latest6 hours ago

ಅಪ್ಪು ಸರ್ ಕೊಟ್ಟ ಆ ಪ್ರೋತ್ಸಾಹವೇ ನನ್ನ ಯಶಸ್ಸಿನ ಗುಟ್ಟು: ಕನ್ನಡಿಗರ ನೆಚ್ಚಿನ ‘ಅಂಜನಿಪುತ್ರ’ನ ಬಗ್ಗೆ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಹೇಳಿದ್ದೇನು?

bigbreaking7 hours ago

20 ಸಾವಿರ ಕೋಟಿ ಹಗರಣದ ಮೂಲ ದಾಖಲೆಗಳೇ ನಾಪತ್ತೆ. ಎನ್‌.ಆರ್‌.ರಮೇಶ್‌ ಗಂಭೀರ ಆರೋಪ.

Latest7 hours ago

ಕಿಂಗ್ ಕೊಹ್ಲಿಗಾಗಿ ಪುಟಾಣಿ ಫ್ಯಾನ್ ಹಠ: ಹೋಟೆಲ್ ಸಿಬ್ಬಂದಿ ತಡೆದಿದ್ದಕ್ಕೆ ಕಣ್ಣೀರು ಹಾಕಿದ ಬಾಲಕ

Latest8 hours ago

ಹಣ ಪಡೆಯಲು ಬ್ಯಾಂಕಿಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದ ವ್ಯಕ್ತಿ!

Latest10 hours ago

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರಾ? ಪರಮೇಶ್ವರ್ ಮೌನದ ಹಿಂದೆ ಅಡಗಿದೆಯೇ ದೊಡ್ಡ ರಹಸ್ಯ?

Latest11 hours ago

ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ! ಆರ್ಥಿಕ ಶಿಸ್ತಿನ ಬಗ್ಗೆ ಹೆಚ್‌ಡಿಕೆ ಆತಂಕ

Latest11 hours ago

ರಿಷಬ್ ಶೆಟ್ಟಿ ಸಿನಿಮಾದ ತೆಲುಗು ವರ್ಷನ್ ರೆಡಿ: ಟಾಲಿವುಡ್‌ನಲ್ಲಿ ಬಿಡುಗಡೆಗೆ ದಿನಾಂಕ ನಿಗದಿ! ಯಾವುದು ಆ ಸಿನಿಮಾ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌