Viral Video: ಎಲ್ಲ ಬಿಟ್ಟು ಟ್ರಾನ್ಸ್‌ಫಾರ್ಮರ್‌ ಏರಿ ಸತ್ತ ಕರಡಿ; ಮೃತ ದೇಹದ ಮೇಲೆ ಕೂತ ಲೈನ್‌ಮನ್! - Vistara News

Latest

Viral Video: ಎಲ್ಲ ಬಿಟ್ಟು ಟ್ರಾನ್ಸ್‌ಫಾರ್ಮರ್‌ ಏರಿ ಸತ್ತ ಕರಡಿ; ಮೃತ ದೇಹದ ಮೇಲೆ ಕೂತ ಲೈನ್‌ಮನ್!

ಹಿಮಾಚಲ ಪ್ರದೇಶದ ಕಥಲಾಗ್ ಪ್ರದೇಶದಲ್ಲಿ‌ (Viral Video) ವಿದ್ಯುತ್ ಶಾಕ್ ತಗುಲಿ ಹೆಣ್ಣು ಕರಡಿ ಮತ್ತು ಅದರ ಮರಿ ಸಾವನಪ್ಪಿತ್ತು. ಆದರೆ ವ್ಯಕ್ತಿಯೊಬ್ಬ ಆ ಕರಡಿಯ ಮೃತದೇಹದ ಜೊತೆ ಪೋಸ್ ನೀಡುತ್ತಾ ಫೋಟೊಶೂಟ್ ಮಾಡಿದ್ದಲ್ಲದೇ ಅದರ ದೇಹವನ್ನು ಅಮಾನವೀಯವಾಗಿ ಎಸೆಯುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಮನಸ್ಸಿನಲ್ಲಿ ಕರುಣೆಯ ಭಾವನೆ ಇರುವವರನ್ನು ಮನುಷ್ಯರು ಎಂದು ಕರೆಯುತ್ತಾರೆ. ಆದರೆ ಇಂದಿನ ಕಾಲದ ಮನುಷ್ಯರಲ್ಲಿ ಮನುಷ್ಯತ್ವದ ಭಾವನೆ ಮಾಯವಾಗಿದೆ. ಸತ್ತ ದೇಹವನ್ನು ನೋಡಿ ಮಾನವೀಯತೆ ಇಲ್ಲದಂತಹ ಪ್ರಾಣಿಗಳು ಹೇಗೆ ವರ್ತಿಸುತ್ತವೆ ಹಾಗೇ ಇಂದಿನ ಜನರು ವರ್ತಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ನಡೆದ ಘಟನೆಯೇ ಸಾಕ್ಷಿ. ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ ಗುರುವಾರ ತಡರಾತ್ರಿ ವಿದ್ಯುತ್‌ ಶಾಕ್‌ ತಗುಲಿ ಹೆಣ್ಣು ಕರಡಿ ಮತ್ತು ಅದರ ಮರಿ ಸಾವನಪ್ಪಿದ ಘಟನೆ ನಡೆದಿದೆ. ಆದರೆ ವ್ಯಕ್ತಿಯೊಬ್ಬ ಆ ಕರಡಿಯ ಮೃತದೇಹದ ಜೊತೆ ಪೋಸ್ ನೀಡುತ್ತಾ ಫೋಟೊಶೂಟ್ ಮಾಡಿದ್ದಲ್ಲದೇ ಅದರ ದೇಹವನ್ನು ಅಮಾನವೀಯವಾಗಿ ಎಸೆಯುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಥಲಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ವೈರಲ್ ವಿಡಿಯೊದಲ್ಲಿ ಟ್ರಾನ್ಸ್ ಫಾರ್ಮರ್ ಕಂಬದಲ್ಲಿ ಸಿಕ್ಕಿಬಿದ್ದ ಕರಡಿಯ ದೇಹವನ್ನು ತೆಗೆಯಲು ವ್ಯಕ್ತಿಯೊಬ್ಬರು ಮೇಲಕ್ಕೆ ಹತ್ತಿದ್ದಾರೆ. ಅವರು ಅದರ ದೇಹವನ್ನು ಕೆಳಗೆ ಎಸೆದಿದ್ದಾರೆ. ಆದರೆ ಈ ವ್ಯಕ್ತಿ ಅಧಿಕಾರಿಯೇ ಅಥವಾ ಸ್ಥಳೀಯರೇ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಅವರು ಕರಡಿಯ ದೇಹವನ್ನು ಎಸೆದು ಅದರೊಂದಿಗೆ ಪೋಸ್ ನೀಡಿ ಫೋಟೊಶೂಟ್ ಮಾಡಿದ್ದಾರೆ. ನಂತರ ಅಮಾನುಷವಾಗಿ ಕರಡಿಯ ಮೃತದೇಹವನ್ನು ಎಸೆದಿದ್ದಾರೆ.

ಕೆಲವು ವರದಿಗಳ ಪ್ರಕಾರ, ಆ ವ್ಯಕ್ತಿಯನ್ನು ಮುನ್ಸಿಪಲ್ ಕೌನ್ಸಿಲ್ ಜೂನಿಯರ್ ಎಂಜಿನಿಯರ್ ಸಂಜೀವ್ ಶರ್ಮಾ ಎಂದು ಗುರುತಿಸಲಾದ ವಿದ್ಯುತ್ ಇಲಾಖೆ ಸಿಬ್ಬಂದಿ ಎನ್ನಲಾಗಿದೆ. ಅವರು ಕೆಲವು ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ವಿದ್ಯುತ್ ಆಘಾತಕ್ಕೊಳಗಾದ ಕರಡಿಯ ದೇಹವನ್ನು ಟ್ರಾನ್ಸ್ ಫಾರ್ಮರರ್‌ನಿಂದ ಕೆಳಗೆ ಇಳಿಸಿದ್ದಾರೆ ಎನ್ನಲಾಗಿದೆ.

ಆದರೆ ವ್ಯಕ್ತಿಯ ಈ ಅಮಾನವೀಯ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರಡಿಯ ಮೃತ ದೇಹದ ಜೊತೆ ಅವರು ವರ್ತಿಸಿದ ರೀತಿಯ ವಿರುದ್ಧ ಪ್ರಾಣಿ ಪ್ರಿಯರು ಮತ್ತು ಕಲ್ಯಾಣ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ. ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಾಗ, ವಿದ್ಯುತ್ ಆಘಾತಕ್ಕೊಳಗಾದ ಕರಡಿಯ ಮೃತ ದೇಹವನ್ನು ನಿರ್ದಯವಾಗಿ ಟ್ರಾನ್ಸ್ಫಾರ್ಮರ್ ನಿಂದ ಎಸೆದ ನಂತರ ಅದರ ಮೇಲೆ ಕುಳಿತು ಪೋಸ್ ನೀಡಿದ ವ್ಯಕ್ತಿಯ ಅಗೌರವ ಮತ್ತು ಅಮಾನವೀಯ ಕೃತ್ಯವನ್ನು ಖಂಡಿಸಿ ಜನರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ಸಿರಾಜ್‌ ಅಹ್ಮದ್‌ ಎಂಬಾತನ ಕಿರುಕುಳ; ಕುತ್ತಿಗೆಗೆ ಇರಿದುಕೊಂಡು ಸಾಯಲೆತ್ನಿಸಿದ ಬಾಲಕಿ; ಆತಂಕಕಾರಿ ವಿಡಿಯೊ

“ಇದು ನೋಡಲು ನಾಚಿಕೆಗೇಡಿನ ದೃಶ್ಯವಾಗಿದೆ. ಸಾವಿನ ಬಗ್ಗೆ ಯಾವುದೇ ಗೌರವವಿಲ್ಲದ ಆತ ನಾಚಿಕೆಯಿಲ್ಲದ ವ್ಯಕ್ತಿ” ಎಂದು ಬಳಕೆದಾರರೊಬ್ಬರು ಬರೆದರೆ, ಇನ್ನೊಬ್ಬರು “ಮೃತ ದೇಹಗಳೊಂದಿಗೆ ಫೋಟೋ ತೆಗೆದುಕೊಳ್ಳುವುದು ಸಂಪೂರ್ಣವಾಗಿ ಭಯಾನಕ ಮತ್ತು ಸಂಪೂರ್ಣವಾಗಿ ಅಗೌರವದಿಂದ ಕೂಡಿದೆ” ಎಂದು ಬರೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಬಳ್ಳಾಪುರ

Congress Protest: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ; ಚಿಕ್ಕಬಳ್ಳಾಪುರ, ದೇವನಹಳ್ಳಿಯಲ್ಲಿ ಕಾಂಗ್ರೆಸ್‌ ಬೃಹತ್ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ (Congress Protest) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸುಧಾಕರ್, ಮಾಜಿ ಸಚಿವ, ಎಂಎಲ್‌ಸಿ ಡಾ. ಎಂ.ಆರ್. ಸೀತಾರಾಂ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹಾಗೂ ಮತ್ತಿತರೆ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

VISTARANEWS.COM


on

Congress Protest
Koo

ಚಿಕ್ಕಬಳ್ಳಾಪುರ/ದೇವನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಬೃಹತ್ ಪ್ರತಿಭಟನೆ (Congress Protest) ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ. ಸುಧಾಕರ್, ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಸೀತಾರಾಂ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹಾಗೂ ಮತ್ತಿತರೆ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯಪಾಲರ ಭಾವಚಿತ್ರ ಹಿಡಿದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರ ಮುಖವಾಡ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರು ಅರೆ ಬೆತ್ತಲೆ ಮೆರವಣಿಗೆ ನಡೆಸಿದರು.

ಇದನ್ನೂ ಓದಿ: Fake Garlic: ಎಚ್ಚರ..ಎಚ್ಚರ.. ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ ಸಿಮೆಂಟ್‌ ಬೆಳ್ಳುಳ್ಳಿ! ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ‌ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ರಾಜ್ಯಪಾಲರ ವಿರುದ್ಧದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ‌ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ರಾಜ್ಯಪಾಲರ ಕ್ರಮ ಅಸಂವಿಧಾನಿಕ ಹಾಗೂ ರಾಜಕೀಯ ಪ್ರೇರಿತ, ದುರುದ್ದೇಶಪೂರಿತ ಕ್ರಮ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದಲ್ಲಿ ಬಹುಮತದೊಂದಿಗೆ ಆಯ್ಕೆಯಾದ ಸರ್ಕಾರವೊಂದನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಷಡ್ಯಂತ್ರದ ಮೂಲಕ ಅಸ್ಥಿರಗೊಳಿಸಲು ಮುಂದಾಗಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶುದ್ಧ, ಕಳಂಕರಹಿತ ರಾಜಕಾರಣ ಮಾಡಿಕೊಂಡು ಶೋಷಿತರು, ಹಿಂದುಳಿದವರ ಪರ ಪ್ರಾಮಾಣಿಕ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯಲು ಎರಡೂ ಪಕ್ಷಗಳು ಹೊರಟಿವೆ. ಇದಕ್ಕೆ ಬೆನ್ನೆಲುಬಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಹೊರಟಿರುವುದು ‌ಖಂಡನೀಯ ಎಂದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ‌ ಸಚಿವ ಕೆ.ಎಂ. ಮುನಿಯಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: BSNL 4G Plan: ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ ಬಿಎಸ್‌ಎನ್‌ಎಲ್ 4ಜಿ; ಹೊಸ ರಿಚಾರ್ಜ್ ಪ್ಲ್ಯಾನ್‌ ಪ್ರಕಟ

ದೇವನಹಳ್ಳಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು.

Continue Reading

ಮನಿ-ಗೈಡ್

National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

ನಿವೃತ್ತಿ ಮತ್ತು ಮಾಸಿಕ ಪಿಂಚಣಿ ಎರಡಕ್ಕೂ ಏಕಕಾಲದಲ್ಲಿ ಪಾವತಿ ವ್ಯವಸ್ಥೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಕಲ್ಪಿಸಿದೆ. ವಿಶ್ವಾಸಾರ್ಹ ಪಿಂಚಣಿ ಯೋಜನೆಗಾಗಿ ಹುಡುಕುತ್ತಿದ್ದರೆ ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.

VISTARANEWS.COM


on

By

National Pension Scheme
Koo

ದಿನಕ್ಕೆ 200 ರೂ. ಪಾವತಿಸಿ ಮಾಸಿಕ ಪಿಂಚಣಿಯಾಗಿ (monthly pension) ಲಕ್ಷಾಂತರ ರೂಪಾಯಿ ಮಾತ್ರವಲ್ಲದೆ ಕೋಟ್ಯಂತರ ರೂಪಾಯಿ ನಿವೃತ್ತಿ ಪಿಂಚಣಿಯನ್ನು (Retirement Pension) ಪಡೆಯಲು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (National Pension Scheme) ಅತ್ಯುತ್ತಮ ದಾರಿ ಇದೆ. ಭವಿಷ್ಯದ ದೃಷ್ಟಿಯಿಂದ ಉಳಿತಾಯ ಯೋಜನೆಯನ್ನು ಯೋಚಿಸುತ್ತಿದ್ದರೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ನಿವೃತ್ತಿ ಮತ್ತು ಮಾಸಿಕ ಪಿಂಚಣಿ ಎರಡಕ್ಕೂ ಏಕಕಾಲದಲ್ಲಿ ಪಾವತಿ ವ್ಯವಸ್ಥೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಕಲ್ಪಿಸಿದೆ. ವಿಶ್ವಾಸಾರ್ಹ ಪಿಂಚಣಿ ಯೋಜನೆಗಾಗಿ ಹುಡುಕುತ್ತಿದ್ದರೆ ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.

ದಿನಕ್ಕೆ ಕೇವಲ 167 ರೂ.

18 ವರ್ಷ ತುಂಬಿದ ಅನಂತರ ಮೊದಲ ತಿಂಗಳಿನಿಂದ ಹೂಡಿಕೆಯನ್ನು ಪ್ರಾರಂಭಿಸಿದರೆ 57 ವರ್ಷಗಳ ಅವಧಿಯವರೆಗೆ ಅಂದರೆ 75 ವಯಸ್ಸಿನವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ದಿನಕ್ಕೆ 167 ರೂಪಾಯಿಯಂತೆ ತಿಂಗಳಿಗೆ 5,000 ರೂ. ಹೂಡಿಕೆ ಮಾಡಿದರೆ ಪಿಂಚಣಿ ಮತ್ತು ನಿವೃತ್ತಿ ಪಾವತಿ ಮೊತ್ತ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಹುದು.

ಹೂಡಿಕೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿದರೆ ಚಂದಾದಾರರು 3,51,978 ರೂ.ಗಿಂತ ಕಡಿಮೆಯಿಲ್ಲದ ಮಾಸಿಕ ಪಿಂಚಣಿ ಮತ್ತು 10.55 ಕೋಟಿ ರೂ.ಗಳ ಒಂದು ಬಾರಿ ಪಾವತಿಗೆ ಅರ್ಹರಾಗಿರುತ್ತಾರೆ. ಪಿಂಚಣಿಯು 60ನೇ ವಯಸ್ಸಿನಿಂದ ಪ್ರಾರಂಭವಾಗುತ್ತದೆ. ಆ ವಯಸ್ಸಿನಲ್ಲಿ ಒಟ್ಟು ಮೊತ್ತವನ್ನು ಪಡೆಯಬಹುದು.

ವರ್ಷಾಶನ ಶೇ. 40ರಷ್ಟು ಇರುವುದನ್ನು ಶೇ. 50ರಷ್ಟು ಏರಿಕೆ ಮಾಡಿದರೆ ಮಾಸಿಕ ಪಿಂಚಣಿಯಾಗಿ 4,39,973 ರೂ. ಆಗುತ್ತದೆ. ಆದರೆ ಒಂದು ಬಾರಿ ಪಾವತಿ 8,79,94,588 ರೂ.ಗೆ ಇಳಿಯಲಿದೆ.

ದಿನಕ್ಕೆ 200 ರೂ.

ದಿನಕ್ಕೆ 167 ರೂ. ಅನ್ನು 200 ರೂ.ಗೆ ಹೆಚ್ಚಿಸಿದರೆ ಎನ್‌ಪಿಎಸ್ 4,22,374 ರೂ. ಪಿಂಚಣಿ ನೀಡುತ್ತದೆ ಮತ್ತು 12.67 ಕೋಟಿ ರೂ. ಗಳ ಒಂದು ಬಾರಿ ಪಾವತಿಯನ್ನು ನೀಡುತ್ತದೆ. ಇದು ಕಾರ್ಪಸ್‌ನ ಶೇ. 40ರ ದರದಂತೆ ವರ್ಷಾಶನವನ್ನು ನಿರೀಕ್ಷಿಸಬಹುದು ಮತ್ತು ಉಳಿದ ಶೇ. 60 ಅನ್ನು ಒಂದು ಬಾರಿ ಪಾವತಿಯಾಗಿ ತೆಗೆದುಕೊಳ್ಳಬಹುದು.

ಇದನ್ನೂ ಓದಿ: UPI Payment: ಡಿಜಿಟಲ್ ಪಾವತಿಯಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆಯಾದರೆ ಏನು ಮಾಡಬೇಕು?

National Pension Scheme
National Pension Scheme


30 ವರ್ಷದಿಂದ ಪ್ರಾರಂಭಿಸಿದರೆ

ಒಬ್ಬನು 30 ವರ್ಷದಿಂದ ಪ್ರಾರಂಭಿಸಿ ಪೂರ್ಣ ಅವಧಿಗೆ ತಿಂಗಳಿಗೆ 5,000 ರೂ. ಹೂಡಿಕೆ ಮಾಡಿದರೆ ಎನ್‌ಪಿಎಸ್ 1,29,260 ರೂಪಾಯಿಗಳ ಪಿಂಚಣಿ ಮತ್ತು 3.87 ಕೋಟಿ ರೂಪಾಯಿಗಳ ಒಂದು ಬಾರಿಯ ಪಾವತಿಯನ್ನು ನೀಡುತ್ತದೆ. ಇದು ಕಾರ್ಪಸ್‌ನ ಶೇ. 40ರಷ್ಟು ವರ್ಷಾಶನ ಖರೀದಿ ಮಾಡಬಹುದು.

ಒಬ್ಬ ವ್ಯಕ್ತಿಯು ತಿಂಗಳಿಗೆ 6,000 ರೂ. ಹೂಡಿಕೆ ಮಾಡಿದರೆ 1,55,112 ರೂ. ಪಿಂಚಣಿಯಾಗಿ ಮತ್ತು 4.65 ಕೋಟಿ ರೂ. ಅನ್ನು ಒಂದು ಬಾರಿ ಪಾವತಿಯಾಗಿ ಪಡೆಯಬಹುದು. ಇದು ಕಾರ್ಪಸ್‌ನ ಶೇ. 40ರಷ್ಟನ್ನು ವರ್ಷಾಶನದ ಖರೀದಿ ಮಾಡಬಹುದು. ಹೂಡಿಕೆದಾರರು ಮಾಡಿದ ಮಾಸಿಕ ಕೊಡುಗೆಗಳಿಗೆ ಹೂಡಿಕೆಯ ಮೇಲಿನ ಲಾಭವು ಶೇ. 10ರಷ್ಟನ್ನು ಆಗಿರುತ್ತದೆ. ವರ್ಷಾಶನದ ಆದಾಯ ದರವು ಶೇ. 6 ಆಗಿದೆ.

Continue Reading

Latest

Viral Video: ಮೆಟ್ರೊದಲ್ಲಿ ಕುಳಿತು ಜೋಡಿಯ ಖುಲ್ಲಂಖುಲ್ಲಾ ಕಿಸ್ಸಿಂಗ್‌; ಪ್ರಯಾಣಿಕರಿಗೆ ಟೆನ್ಶನ್‌!

ದೆಹಲಿ ಮೆಟ್ರೊ (Viral Video) ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಈ ಹಿಂದೆ ದೆಹಲಿ ಮೆಟ್ರೊ ಜಗಳ, ಡ್ಯಾನ್ಸ್, ಮೇಕಪ್ ಮಾಡಿಕೊಳ್ಳುವ ವಿಚಾರಕ್ಕೆ ಸುದ್ದಿಯಾಗಿತ್ತು. ಇದೀಗ ದೆಹಲಿ ಮೆಟ್ರೋ ಮತ್ತೆ ರೊಮ್ಯಾನ್ಸ್ ವಿಚಾರಕ್ಕೆ ಸುದ್ಧಿಯಾಗಿದೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರಾದ ದಂಪತಿ ಸಾರ್ವಜನಿಕರ ಮುಂದೆ ಚುಂಬಿಸುವುದು ಮತ್ತು ಮುದ್ದಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ: ದೆಹಲಿ ಮೆಟ್ರೊ ಪ್ರತಿಬಾರಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿರುತ್ತದೆ. ಈ ಹಿಂದೆ ದೆಹಲಿ ಮೆಟ್ರೊ ಜಗಳ, ಡ್ಯಾನ್ಸ್, ಮೇಕಪ್ ಮಾಡಿಕೊಳ್ಳುವ ವಿಚಾರಕ್ಕೆ ಸುದ್ದಿಯಾಗಿತ್ತು. ಇದೀಗ ದೆಹಲಿ ಮೆಟ್ರೋ ಮತ್ತೆ ರೊಮ್ಯಾನ್ಸ್ ವಿಚಾರಕ್ಕೆ ಸುದ್ದಿಯಾಗಿದೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರಾದ ದಂಪತಿ ಸಾರ್ವಜನಿಕರ ಮುಂದೆ ಚುಂಬಿಸುವುದು ಮತ್ತು ಮುದ್ದಾಡುತ್ತಿರುವುದು ಕಂಡುಬಂದಿದೆ. ಇದನ್ನು ಕಂಡು ಅವರ ಸುತ್ತಲಿನ ಪ್ರಯಾಣಿಕರು ತಬ್ಬಿಬ್ಬಾಗುವಂತಾಯಿತು. ಅವರ ಹತ್ತಿರದಲ್ಲಿ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕರು ಈ ದೃಶ್ಯವನ್ನು ರೆಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ವೈರಲ್ (Viral Video) ಆಗಿದೆ.

ಈ ಘಟನೆ ನಡೆದ ದಿನಾಂಕ ತಿಳಿದುಬಂದಿಲ್ಲ. ಆದರೆ ವ್ಯಕ್ತಿ ವಿಡಿಯೊ ಶೂಟ್ ಮಾಡುತ್ತಿರುವುದು ಆ ದಂಪತಿಗೆ ತಿಳಿದಿದ್ದರೂ ಕೂಡ ಅವರು ಮಾತ್ರ ರೊಮ್ಯಾನ್ಸ್ ಮಾಡುವುದನ್ನು ನಿಲ್ಲಿಸಲಿಲ್ಲ. ಇವರ ನಡವಳಿಕೆ ನೋಡಿ ಕೆಲವರು ಬೇಸರಗೊಂಡಿದ್ದರೆ ಇನ್ನೂ ಕೆಲವರು ಇವರಿಬ್ಬರನ್ನು ನೋಡಿ ಗೇಲಿ ಮಾಡಿದರು. ಈ ವಿಡಿಯೊವನ್ನು ‘ದೆಹಲಿ ಮೇರಿ ಜಾನ್’ ಎಂಬ ಹ್ಯಾಂಡಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. “ಇಂತಹ ಜನರಿಗೆ ಏನು ಮಾಡಬೇಕು” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೊವನ್ನು ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದ್ದು, ಇದು ಜನರಿಂದ 12 ಸಾವಿರಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ. ಹಾಗೆಯೇ ಕಾಮೆಂಟ್ ವಿಭಾಗದಲ್ಲಿ, ಹಲವು ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹುಡುಗ ನಿಂತಿರುವಾಗ, ಒಂದು ರೀತಿಯ ಬಟ್ಟೆಗಳು ಮತ್ತು ಚಪ್ಪಲಿಗಳನ್ನು ಧರಿಸಿದ್ದರೆ ಆತ ಕುಳಿತಾಗ, ಬೇರೆ ಬಟ್ಟೆಗಳು ಮತ್ತು ಚಪ್ಪಲಿಗಳನ್ನು ಧರಿಸಿದ್ದಾನೆ. ಆದ್ದರಿಂದ ಇದನ್ನು ರೆಕಾರ್ಡ್ ಮಾಡಲಾಗುತ್ತಿದೆ. ಮತ್ತು ಹುಡುಗನಿಗೆ ಬೇರೆ ವ್ಯಕ್ತಿ ವಿಡಿಯೊ ರೆಕಾರ್ಡ್ ಮಾಡುತ್ತಿರುವುದು ತಿಳಿದಿದ್ದರೂ ಅದಕ್ಕೆ ಏನು ಪ್ರತಿಕ್ರಿಯೆ ನೀಡಲಿಲ್ಲ. ಹಾಗೇ ಜನರು ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ!

ಇಂಥ ಘಟನೆಗಳು ಎಲ್ಲಿ ನಡೆಯುತ್ತವೆ? ದೆಹಲಿಯ ಯಾವ ಪ್ರದೇಶದಲ್ಲಿ ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ? ಏಕೆಂದರೆ ಅಂತಹ ಯಾವುದೇ ವಿಷಯಗಳನ್ನು ನಾನು ಏಕೆ ನೋಡುವುದಿಲ್ಲ?” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ವೈರಲ್ ಆಗಲು ಇದೆನೆಲ್ಲ ಮಾಡುತ್ತಾರೆ. ಅವರು ಈಗಾಗಲೇ ಕಳೆದ ಕೆಲವು ದಿನಗಳಲ್ಲಿ ಇದನ್ನು ಮಾಡಿದ್ದಾರೆ ಮತ್ತು ಕೆಲವು ದಿನಗಳ ನಂತರ, ಅವರು ಅದನ್ನು ಮೆಟ್ರೋ ಟ್ರ್ಯಾಕ್‍ನಲ್ಲಿಯೇ ಮಾಡಲು ಶುರುಮಾಡುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

Continue Reading

ಗ್ಯಾಜೆಟ್ಸ್

BSNL 4G Plan: ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ ಬಿಎಸ್‌ಎನ್‌ಎಲ್ 4ಜಿ; ಹೊಸ ರಿಚಾರ್ಜ್ ಪ್ಲ್ಯಾನ್‌ ಪ್ರಕಟ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಈಗ ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ 4ಜಿ ಸೇವೆಗಳನ್ನು (BSNL 4G Plan) ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ ಬಿಎಸ್ ಎನ್ ಎಲ್ ನ 4ಜಿ ಸೇವೆಯನ್ನು ಈಗಾಗಲೇ ಹೊರತರಲಾಗಿದೆ.ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ಕೊಡುವ ಒಂದು ರೀಚಾರ್ಜ್ ಯೋಜನೆಯನ್ನು ಈಗ ಪ್ರಕಟಿಸಿದೆ.

VISTARANEWS.COM


on

By

BSNL 4G Plan
Koo

ಬಿಎಸ್‌ಎನ್‌ಎಲ್ (BSNL 4G Plan) ತನ್ನ ಟೆಲಿಕಾಂ (telecom) ಬಳಕೆದಾರರಿಗೆ ಹಲವಾರು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು (new prepaid recharge plans) ಪರಿಚಯಿಸಿದೆ. ಇವುಗಳು ದೀರ್ಘಾವಧಿಯ ಲಾಭದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ಡೇಟಾದಂತಹ ಪ್ರಯೋಜನಗಳನ್ನು ನೀಡಲಿದೆ. ಜುಲೈನಲ್ಲಿ ಖಾಸಗಿ ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ಕಾರಣ ಅನೇಕ ಬಳಕೆದಾರರು ಬಿಎಸ್‌ಎನ್‌ಎಲ್‌ಗೆ ತಮ್ಮ ನಂಬರ್ ಗಳನ್ನು ಪೋರ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ಈಗ ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ 4ಜಿ ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ಈಗಾಗಲೇ ಹೊರತರಲಾಗಿದೆ.


ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ಕೊಡುವ ಒಂದು ರೀಚಾರ್ಜ್ ಯೋಜನೆಯು 160 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ಒಟ್ಟು 320 ಜಿಬಿ ಡೇಟಾವನ್ನು ಪಡೆಯುತ್ತಾರೆ. 997 ರೂ. ಬೆಲೆಯ ಈ ಪ್ಲಾನ್ ಪ್ರತಿದಿನ 100 ಉಚಿತ ಎಸ್‌ಎಂಎಸ್ ಜೊತೆಗೆ ದಿನಕ್ಕೆ 2ಜಿಬಿ ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತದೆ.

ಹೆಚ್ಚುವರಿಯಾಗಿ ಬಳಕೆದಾರರು ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಧ್ವನಿ ಕರೆಗಳನ್ನು ಮಾಡಬಹುದಾಗಿದೆ. ಈ ಯೋಜನೆಯು ಭಾರತದಾದ್ಯಂತ ಉಚಿತ ರೋಮಿಂಗ್ ಮತ್ತು ಜಿಂಗ್ ಮ್ಯೂಸಿಕ್ ಮತ್ತು ಬಿಎಸ್‌ಎನ್‌ಎಲ್ ಟ್ಯೂನ್‌ಗಳಂತಹ ಹಲವಾರು ಮೌಲ್ಯವರ್ಧಿತ ಸೇವೆಗಳೊಂದಿಗೆ ಬರುತ್ತದೆ.

ಇದನ್ನೂ ಓದಿ: Phone Charging Tips: ಫೋನ್‌ಗಳನ್ನು ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

BSNL 4G Plan
BSNL 4G Plan


ಬಿಎಸ್‌ಎನ್‌ಎಲ್‌ ಕೂಡ ಶೀಘ್ರದಲ್ಲೇ 5ಜಿ ಸೇವೆಗಳನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ. ಕಂಪನಿಯು ತನ್ನ 4ಜಿ ಸೇವೆಗಾಗಿ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಸಾವಿರಾರು ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದೆ ಮತ್ತು 5ಜಿ ನೆಟ್‌ವರ್ಕ್ ಪರೀಕ್ಷೆಯು ಈಗಾಗಲೇ ಪ್ರಾರಂಭವಾಗಿದೆ.

ಮುಂಬರುವ ತಿಂಗಳುಗಳಲ್ಲಿ ಸರ್ಕಾರಿ ಟೆಲಿಕಾಂ ಕಂಪನಿಯು 5ಜಿ ಸೇವೆಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದಲ್ಲದೆ ದೆಹಲಿ ಮತ್ತು ಮುಂಬೈನಲ್ಲಿರುವ ಎಂಟಿಎನ್ ಎಲ್ ಬಳಕೆದಾರರು ಶೀಘ್ರದಲ್ಲೇ 4ಜಿ ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಯಾಕೆಂದರೆ ಎಂಟಿಎನ್‌ಎಲ್ ಬಿಎಸ್‌ಎನ್‌ಎಲ್ ನ 4ಜಿ ಮೂಲಸೌಕರ್ಯವನ್ನು ಬಳಸುತ್ತಿದೆ.

Continue Reading
Advertisement
PM Narendra Modi
ದೇಶ11 mins ago

PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

Congress Protest
ಚಿಕ್ಕಬಳ್ಳಾಪುರ24 mins ago

Congress Protest: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ; ಚಿಕ್ಕಬಳ್ಳಾಪುರ, ದೇವನಹಳ್ಳಿಯಲ್ಲಿ ಕಾಂಗ್ರೆಸ್‌ ಬೃಹತ್ ಪ್ರತಿಭಟನೆ

National Pension Scheme
ಮನಿ-ಗೈಡ್33 mins ago

National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

Hoax bomb threat
ಪ್ರಮುಖ ಸುದ್ದಿ43 mins ago

Hoax Bomb Threat: ವೈಟ್ ಫೀಲ್ಡ್‌ನ ಮಾಲ್ ಸೇರಿ‌ ಬೆಂಗಳೂರಿನ ಹಲವು ಮಾಲ್‌ಗಳಿಗೆ ಬಾಂಬ್ ಬೆದರಿಕೆ!

triple talaq
ಪ್ರಮುಖ ಸುದ್ದಿ1 hour ago

Triple Talaq : ತ್ರಿವಳಿ ತಲಾಖ್​​ಗೆ ಶಿಕ್ಷೆ ಆಗಲೇಬೇಕು; ಸುಪ್ರೀಂ ಕೋರ್ಟ್​ಗೆ ಹೊಸ ಅಫಿಡವಿಟ್​ ಸಲ್ಲಿಸಿ ಕಾನೂನನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

DK Shivakumar
ಕರ್ನಾಟಕ2 hours ago

Congress Protest: 10 ಜನ್ಮ ಎತ್ತಿ ಬಂದ್ರೂ ನಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದ ಡಿಕೆಶಿ

Viral Video
Latest2 hours ago

Viral Video: ಮೆಟ್ರೊದಲ್ಲಿ ಕುಳಿತು ಜೋಡಿಯ ಖುಲ್ಲಂಖುಲ್ಲಾ ಕಿಸ್ಸಿಂಗ್‌; ಪ್ರಯಾಣಿಕರಿಗೆ ಟೆನ್ಶನ್‌!

BSNL 4G Plan
ಗ್ಯಾಜೆಟ್ಸ್2 hours ago

BSNL 4G Plan: ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ ಬಿಎಸ್‌ಎನ್‌ಎಲ್ 4ಜಿ; ಹೊಸ ರಿಚಾರ್ಜ್ ಪ್ಲ್ಯಾನ್‌ ಪ್ರಕಟ

Viral Video
Latest2 hours ago

Viral Video: ಎಲ್ಲ ಬಿಟ್ಟು ಟ್ರಾನ್ಸ್‌ಫಾರ್ಮರ್‌ ಏರಿ ಸತ್ತ ಕರಡಿ; ಮೃತ ದೇಹದ ಮೇಲೆ ಕೂತ ಲೈನ್‌ಮನ್!

Karnataka Weather Forecast
ಮಳೆ3 hours ago

Karnataka Weather : ಸಣ್‌ ಮಳೆಗೆ ಕೆರೆಯಂತಾದ ಬೆಂಗಳೂರಿನ ರಸ್ತೆಗಳು; ನಾಳೆಗೂ ಅಲರ್ಟ್‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌