12 Tips for Better Life: ನಿಮ್ಮ ಬದುಕು ಬದಲಾಗಬೇಕೇ?; ಈ 12 ಸೂತ್ರಗಳನ್ನು ಶಿಸ್ತಾಗಿ ಪಾಲಿಸಿ! - Vistara News

ಲೈಫ್‌ಸ್ಟೈಲ್

12 Tips for Better Life: ನಿಮ್ಮ ಬದುಕು ಬದಲಾಗಬೇಕೇ?; ಈ 12 ಸೂತ್ರಗಳನ್ನು ಶಿಸ್ತಾಗಿ ಪಾಲಿಸಿ!

12 Tips for Better Life: ನಮ್ಮ ಅಭ್ಯಾಸಗಳನ್ನು ಬಿಟ್ಟು ಹೊಸ ಅಭ್ಯಾಸಗಳನ್ನು ಕರಗತ ಮಾಡಿಕೊಳ್ಳಲು ನಮಗೆ ನಲುವತ್ತು ದಿನಗಳು ಸಾಕು ಎನ್ನುತ್ತಾರೆ ನಮ್ಮ ಹಿರಿಯರು. ಇದನ್ನು ವೇದಗಳ ಕಾಲದಿಂದಲೂ ಒಪ್ಪುತ್ತಾರೆ. ಬನ್ನಿ, ನಿಮ್ಮ ಅಭ್ಯಾಸಗಳನ್ನು ಬದಿಗಿರಿಸಿ, ಹೊಸ ಆರೋಗ್ಯಕರ ಜೀವನಕ್ರಮವನ್ನು ಶಿಸ್ತಾಗಿ ಹೀಗೆ 40 ದಿನ ಮಾಡಿ. ಅವೇ ನಿಮ್ಮ ಶಾಶ್ವತ ಜೀವನಕ್ರಮವಾಗಿ ಬದಲಾಗುತ್ತದೆ. ನಿಮ್ಮ ಬದುಕೇ ಇದರಿಂದ ಬದಲಾಗುತ್ತದೆ!

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವೊಮ್ಮೆ ನಮ್ಮ ಅಭ್ಯಾಸಗಳನ್ನು (12 Tips for Better Life) ಎಷ್ಟು ಪ್ರಯತ್ನಿಸಿದರೂ ಬಿಡಲು ಸಾಧ್ಯವಾಗುವುದಿಲ್ಲ. ಬೆಳಗ್ಗೆ ಬೇಗ ಏಳಬೇಕೆಂದುಕೊಳ್ಳುತ್ತೇವೆ. ಆದರೆ, ನಾಲ್ಕು ದಿನ ಮಾಡಿ, ಆಗುವುದಿಲ್ಲ ಎಂದು ಕೈಬಿಡುತ್ತೇವೆ. ಒಳ್ಳೆಯ ಆಹಾರಾಭ್ಯಾಸಗಳನ್ನು ಆರಂಭಿಸುತ್ತೇವೆ. ಆದರೆ, ನಾಲ್ಕೇ ದಿನಕ್ಕೆ ಬೋರಾಗಿ, ಹೊರಗೆ ಹೋಗಿ ತಿನ್ನುತ್ತೇವೆ. ಇವೆಲ್ಲ ಕೇವಲ ಉದಾಹರಣೆಯಷ್ಟೆ. ಇಂತಹ ಹಲವು ವಿಚಾರಗಳು ಎಲ್ಲರ ಬದುಕಿನಲ್ಲಿ ನಡೆದೇ ಇರುತ್ತದೆ.
ಆದರೆ, ನಮ್ಮ ಅಭ್ಯಾಸಗಳನ್ನು ಬಿಟ್ಟು ಹೊಸ ಅಭ್ಯಾಸಗಳನ್ನು ಕರಗತ ಮಾಡಿಕೊಳ್ಳಲು ನಮಗೆ ನಲುವತ್ತು ದಿನಗಳು ಸಾಕು ಎನ್ನುತ್ತಾರೆ ನಮ್ಮ ಹಿರಿಯರು. ಇದನ್ನು ವೇದಗಳ ಕಾಲದಿಂದಲೂ ಒಪ್ಪುತ್ತಾರೆ. ಬನ್ನಿ, ನಿಮ್ಮ ಅಭ್ಯಾಸಗಳನ್ನು ಬದಿಗಿರಿಸಿ, ಹೊಸ ಆರೋಗ್ಯಕರ ಜೀವನಕ್ರಮವನ್ನು ಶಿಸ್ತಾಗಿ ಹೀಗೆ ೪೦ ದಿನ ಮಾಡಿ. ಅವೇ ನಿಮ್ಮ ಶಾಶ್ವತ ಜೀವನಕ್ರಮವಾಗಿ ಬದಲಾಗುತ್ತದೆ. ನಿಮ್ಮ ಬದುಕೇ ಇದರಿಂದ ಬದಲಾಗುತ್ತದೆ!

Morning sun light and get up early

ಬೆಳಗ್ಗೆ ಆರು ಗಂಟೆಯ ಮೊದಲೇ ಏಳುವುದು

ಬೆಳಗ್ಗೆ ಆರು ಗಂಟೆಯ ನಂತರ ದೇಹದಲ್ಲಿ ಕಫ ಪ್ರಕೃತಿಯು ಹೆಚ್ಚಾಗುತ್ತದೆ. ಇದರಿಂದ ಆಲಸ್ಯ ಹೆಚ್ಚಾಗುತ್ತದೆ. ತಡವಾದಷ್ಟೂ ದೇಹಕ್ಕೆ ಆಲಸ್ಯ ಹೆಚ್ಚು. ಹಾಗಾಗಿ ಇಡೀ ದಿನ ಉಲ್ಲಾಸದಿಂದಿರಲು, ಚುರುಕಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಬೇಗ ಏಳುವುದು ಒಳ್ಳೆಯದು.

ಹತ್ತು ನಿಮಿಷ ಧ್ಯಾನ

ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದ ಮೇಲೆ ಕನಿಷ್ಟ ಹತ್ತು ನಿಮಿಷ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಷ್ಟೇ ಬ್ಯುಸಿಯಾಗಿದ್ದರೂ, ಒಂದಿಷ್ಟು ಸಮಯ ಇದಕ್ಕಾಗಿ ಮೀಸಲಿಡಿ. ನಿಧಾನವಾಗಿ ದೀರ್ಘವಾಗಿ ಉಸಿರಾಡುವ ಅಭ್ಯಾಸಕ್ಕಾಗಿ ಐದು ನಿಮಿಷ ಇಟ್ಟುಕೊಳ್ಳಿ. ನಂತರ, ವ್ಯಾಯಾಮಕ್ಕೆಂದು ಕನಿಷ್ಟ ಹತ್ತು ನಿಮಿಷವಾದರೂ ಇಟ್ಟುಕೊಳ್ಳಿ.

ಬೆಳಗಿನ ತಿಂಡಿಯ ಮೊದಲು ಫೋನ್‌ ಮುಟ್ಟಬೇಡಿ

ಬೆಳಗ್ಗೆ ಏಳುವಾಗಲೇ ಫೋನ್‌ ಚೆಕ್‌ ಮಾಡವುದು ನಮಗೆಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ. ಇದನ್ನು ಬಿಡಿ. ಎದ್ದು ನಿತ್ಯಕರ್ಮಗಳನ್ನು ಮಾಡಿ, ಸಾವಕಾಶವಾಗಿ ಕೂತು ತಿಂಡಿ ತಿನ್ನಿ. ಇಡೀ ದಿನ ಏನೇನು ಮಾಡಬೇಕೆಂಬುದನ್ನು ಮನಸ್ಸಿನಲ್ಲೊಮ್ಮೆ ಲೆಕ್ಕ ಹಾಕಿಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಿ.

Woman drinking water.

ಒಂದು ಲೋಟ ಬಿಸಿ ನೀರು

ಬೆಳಗಿನ ತಿಂಡಿಗೆ ಅರ್ಧ ಗಂಟೆ ಮೊದಲು ಒಂದು ಲೋಟ ಬಿಸಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿ. ಇದು ನಿಮ್ಮ ದೇಹವನ್ನು ಹೈಡ್ರೇಟ್‌ ಮಾಡುವುದಲ್ಲದೆ, ದೇಹದ ಕಶ್ಮಲಗಳನ್ನು ಹೊರಕ್ಕೆ ಕಳಿಸುತ್ತದೆ. ಜೊತೆಗೆ ಜೀರ್ಣಕಾರಿ ಅಂಗಾಂಗಗಳನ್ನು ಕೆಲಸಕ್ಕೆ ರೆಡಿ ಮಾಡುತ್ತದೆ.

ಊಟ ಬಿಡಬೇಡಿ

ಊಟವನ್ನು ಸ್ಕಿಪ್‌ ಮಾಡಬೇಡಿ. ಮೂರು ಹೊತ್ತು ಉಣ್ಣಿ. ಊಟ ಬಿಡುವುದರಿಂದ ನಿಮ್ಮ ಜೀರ್ಣಕ್ರಿಯೆಯ ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನಿನ ಏರುಪೇರಾಗಿ ಮಾನಸಿಕವಾಗಿಯೂ ನೀವು ಕುಗ್ಗುತ್ತೀರಿ.

ಮಧ್ಯಾಹ್ನ ಹೊಟ್ಟೆ ತುಂಬ ಊಟ

ಮಧ್ಯಾಹ್ನದೂಟವನ್ನು ಹೊಟ್ಟೆ ತುಂಬ ಉಣ್ಣಿ. ಮಧ್ಯಾಹ್ನದ ಹೊತ್ತು ನಿಮ್ಮ ಜಠರಾಗ್ನಿಯು ಅತ್ಯಂತ ಚುರುಕಾಗಿರುವುದರಿಂದ ಮಾಡಿದ ಊಟ ಕರಗುತ್ತದೆ. ಪೋಷಕಾಂಶಗಳು ಸಮರ್ಪಕವಾಗಿ ದೇಹ ಸೇರುತ್ತದೆ.

ದೇಹಕ್ಕೆ ಎಣ್ಣೆ

ಸಮಯ ಮಾಡಿಕೊಂಡು ಸ್ನಾನಕ್ಕೆ 10 ನಿಮಿಷ ಮೊದಲು ದೇಹಕ್ಕೆ ಎಣ್ಣೆ ಲೇಪಿಸಿಕೊಳ್ಳಿ. ಆಯುರ್ವೇದದಲ್ಲಿ ಇದನ್ನು ತೈಲ ಅಭ್ಯಂಗ ಎನ್ನುತ್ತಾರೆ. ನಂತರ ಸ್ನಾನ ಮಾಡಿ. ನಿಮ್ಮ ಚರ್ಮ ಹೊಳಪಾಗುವುದಲ್ಲದೆ, ಆರೋಗ್ಯವೂ ಹೆಚ್ಚುತ್ತದೆ.

reading

ಓದಿಗೆ ಸಮಯ

ಪ್ರತಿನಿತ್ಯವೂ ಓದಿಗಾಗಿ ಕೊಂಚ ಸಮಯ ಮೀಸಲಿಡಿ. ನಿಮ್ಮಿಷ್ಟದ ಪುಸ್ತಕಕ್ಕಾಗಿ, ಜ್ಞಾನವೃದ್ಧಿಗೆ ಅರ್ಧಗಂಟೆಯಾದರೂ ಇಡಿ.

ಹೂದೋಟಗಳ ಆರೈಕೆ

ಮನೆಯಲ್ಲಿ ಹೂದೋಟವಿದ್ದರೆ, ಗಿಡಗಳನ್ನು ಬೆಳೆಸಿದ್ದರೆ ಅವುಗಳ ಆರೈಕೆಗಾಗಿ ಹದಿನೈದು ನಿಮಿಷವಾದರೂ ಇಟ್ಟುಕೊಳ್ಳಿ. ಸಸ್ಯಗಳ ಜೊತೆಗಿನ ಒಡನಾಡ, ನೆಮ್ಮದಿಯನ್ನು, ಸಂತೋಷವನ್ನು ಇಮ್ಮಡಿಸುತ್ತದೆ. ಒತ್ತಡ ಕಡಿಮೆ ಮಾಡುತ್ತದೆ.

ಟೈಮ್‌ಟೇಬಲ್‌ ಇರಲಿ

ಪ್ರತಿನಿತ್ಯವೂ ನಿಮ್ಮ ದಿನ ಹೀಗೆಯೇ ಇರಬೇಕೆಂಬ ಟೈಮ್‌ಟೇಬಲ್‌ ಇರಲಿ. ಅದನ್ನು ಶಿಸ್ತಾಗಿ ಪಾಲಿಸಲು ಪ್ರಯತ್ನಿಸಿ. ನಿಮ್ಮ ಗುರಿಯನ್ನು ನಿತ್ಯವೂ ನೆನಪು ಮಾಡಿಕೊಳ್ಳುತ್ತಿರಿ. ಆ ನಿಟ್ಟಿನಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನ ಸಾಗಲಿ.

dinner

ರಾತ್ರಿಯೂಟ ಬೇಗ ಆಗಲಿ

ಆದಷ್ಟೂ ಬೇಗ ರಾತ್ರಿಯೂಟ ಮಾಡುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಎಂಟು ಗಂಟೆಯ ಮೊದಲೇ ಊಟ ಮುಗಿಸಿದರೆ ಒಳ್ಳೆಯದು. ನಂತರ ಮಲಗುವ ಒಂದು ಗಂಟೆಯ ಮೊದಲು ಒಂದು ಲೋಟ ಬಿಸಿಯಾದ ಹಾಲು ಕುಡಿಯಿರಿ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Sugar Eating: ನಾವು ತಿನ್ನುವ ಸಕ್ಕರೆ ಪ್ರಮಾಣ ಅತಿಯಾಗುತ್ತಿದೆ ಅನ್ನೋದನ್ನ ತಿಳಿಯೋದು ಹೇಗೆ?

ಮಲಗುವ ಕೋಣೆಯೊಳಗೆ ಫೋನ್‌ ಬೇಡ

ಮಲಗುವ ಕೋಣೆಯೊಳಗೆ ಫೋನ್‌ ಒಯ್ಯಬೇಡಿ. ಡಿಜಿಟಲ್‌ ಅಭ್ಯಾಸಗಳನ್ನು ಮಲಗುವ ಒಂದು ಗಂಟೆಗೆ ಮೊದಲೇ ನಿಲ್ಲಿಸಿ. ಕಣ್ಣು ಮನಸ್ಸಿಗೆ ವಿಶ್ರಾಂತಿ ನೀಡಿ. ರಾತ್ರಿ 10 ಗಂಟೆಯ ನಂತರ ದೇಹದಲ್ಲಿ ಪಿತ್ತ ಪ್ರಕೃತಿ ಮೇಳೈಸುತ್ತದೆ. ಈ ಸಂದರ್ಭ ನಿದ್ದೆ ಬೇಕು. ರಾತ್ರಿ ಹತ್ತರೊಳಗೆ ನಿಮ್ಮ ಎಲ್ಲವನ್ನೂ ಮುಗಿಸಿ ನಿದ್ದೆಗೆ ಜಾರಿ.

ಈ ಅಭ್ಯಾಸಗಳನ್ನು ಶಿಸ್ತಾಗಿ ಕನಿಷ್ಟ 40 ದಿನ ಮಾಡಿ ನೋಡಿ. ನಿಮ್ಮ ಬದುಕು ವಿಶಿಷ್ಟ ರೂತಿಯಲ್ಲಿ ಬದಲಾಗುತ್ತದೆ. ಆರೋಗ್ಯ, ಶಾಂತಿ, ನೆಮ್ಮದಿ ಮೈಗೂಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Mosquito Repellent Plants: ಸೊಳ್ಳೆಗಳನ್ನು ದೂರ ಮಾಡಲು ಎಂಥಾ ಸರ್ಕಸ್‌ ಮಾಡಿದರೂ ನಷ್ಟವಿಲ್ಲ ಎಂಬಂತಾಗಿದೆ ಈ ಮಳೆಗಾಲದಲ್ಲಿ. ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳನ್ನು ಓಡಿಸಬಹುದು. ಜೊತೆಗೆ, ಮನೆಯ ಒಳ-ಹೊರಗೆ ಕೆಲವು ಬಗೆಯ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ.

VISTARANEWS.COM


on

Mosquito Repellent Plants
Koo

ಮಳೆಗಾಲವೆಂದರೆ ಸೊಳ್ಳೆಗಳ (Mosquito Repellent Plants) ಕಾಲವೆಂಬ ಭಾವನೆ ಬಂದರೆ ಅಚ್ಚರಿಯಿಲ್ಲ. ಬರೀ ಸೊಳ್ಳೆ ಕಚ್ಚುವುದು ಸಮಸ್ಯೆಯಲ್ಲ, ಅದರೊಂದಿಗೆ ಬರುವ ಮಲೇರಿಯ, ಡೆಂಗ್ಯೂ, ಜೀಕಾ ಮುಂತಾದ ವೈರಸ್‌ಗಳು ಭೀತಿ ಮೂಡಿಸುತ್ತಿವೆ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೂ, ಮನೆಯೆದುರಿನ ರಸ್ತೆಯಲ್ಲೋ ಚರಂಡಿಯಲ್ಲೋ ನೀರು ನಿಲ್ಲುತ್ತಿದ್ದರೆ ಎಷ್ಟೆಂದು ಒದ್ದಾಡುವುದಕ್ಕೆ ಸಾಧ್ಯ? ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಹಾಕಿದ್ದಾಗಿದೆ, ಆದರೂ ಬಾಗಿಲು ತೆರೆದಾಗ ನಮಗಿಂತ ಮೊದಲು ಸೊಳ್ಳೆಗಳು ನುಗ್ಗುತ್ತವೆ. ರಾತ್ರಿ ಮಲಗುವಾಗಲೂ ಪರದೆಯೊಳಗೇ ಮಲಗುತ್ತೇವೆ, ಹಗಲೆಲ್ಲ ಸೊಳ್ಳೆ ಪರದೆ ಸುತ್ತಿಕೊಂಡು ಓಡಾಡಲು ಸಾಧ್ಯವೇ?
ಈ ಕ್ರಮಗಳೆಲ್ಲ ಒಳ್ಳೆಯದೇ. ಅಗತ್ಯವಾಗಿ ಬೇಕಾಗಿದ್ದು ಸಹ ಹೌದು. ಜೊತೆಗೆ ಕೆಲವು ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳು ಹತ್ತಿರ ಬಾರದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ, ಮನೆಯ ಸುತ್ತಮುತ್ತ ಕೆಲವು ಒಳಾಂಗಣ/ಹೊರಾಂಗಣದ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ. ಸೊಳ್ಳೆಗಳನ್ನು ದೂರ ಓಡಿಸುವಂಥ ಗುಣವನ್ನುಳ್ಳ ಐದು ಗಿಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

citronella

ಸಿಟ್ರೋನೆಲ್ಲ

ಲೆಮೆನ್‌ಗ್ರಾಸ್‌, ನಿಂಬೆ ಹುಲ್ಲು ಎಂದೆಲ್ಲಾ ಈ ಗಿಡವನ್ನು/ಹುಲ್ಲನ್ನು ಕರೆಯಲಾಗುತ್ತದೆ. ಸೊಳ್ಳೆಯನ್ನು ದೂರ ಅಟ್ಟುವ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಈ ಗಿಡದ ಸಾರವನ್ನು ಸ್ಪ್ರೇ, ಕ್ರೀಮ್‌, ಲೋಶನ್‌, ತೈಲ, ಮೋಂಬತ್ತಿಗಳು ಮುಂತಾದ ಹಲವು ರೀತಿಯ ಉತ್ಪನ್ನಗಳಲ್ಲಿ ಉಪಯೋಗಿಸಲಾಗುತ್ತದೆ. ಇದಕ್ಕಿರುವ ನಿಂಬೆಯ ಗಾಢವಾದ ಸುಗಂಧವೇ ಸೊಳ್ಳೆಯನ್ನು ದೂರ ಇರಿಸುತ್ತದೆ. ಮನೆಯ ಸುತ್ತಮುತ್ತಲಿನ ಭಾಗದಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲಾದರೂ ಸರಿ, ಬೆಳೆಸಿ. ಇದು ಹಲವು ಔಷಧೀಯ ಉಪಯೋಗಗಳನ್ನೂ ಹೊಂದಿದ್ದು, ಸೊಳ್ಳೆ ಬಾರದಂತೆ ತಡೆಯಲೂ ನೆರವಾಗುತ್ತದೆ. ಆದರೆ ಈ ಹುಲ್ಲಿನ ಅಂಚು ಹರಿತವಾಗಿರುವುದರಿಂದ, ನೇರವಾಗಿ ಕೈ-ಕಾಲುಗಳ ಮೇಲೆ ಉಜ್ಜಿಕೊಳ್ಳಲು ಯತ್ನಿಸಬೇಡಿ, ಗಾಯವಾದೀತು.

Lavender Fragrant Flowers

ಲಾವೆಂಡರ್

ಇದರ ಹೂವುಗಳು ನಿಮ್ಮ ಬಾಲ್ಕನಿ ಮತ್ತು ಮನೆಯೊಳಗಿನ ಜಾಗವನ್ನು ಸುಂದರಗೊಳಿಸುವುದು ಮಾತ್ರವಲ್ಲ, ಆಹ್ಲಾದಕರ ಪರಿಮಳವು ಸೊಳ್ಳೆಗಳನ್ನು ದೂರ ಓಡಿಸುತ್ತದೆ. ಇದರ ಘಮ ಮನುಷ್ಯರಿಗೆ ಆಪ್ಯಾಯಮಾನವೇ ಹೊರತು ಸೊಳ್ಳೆ ಅಥವಾ ಇತರ ಕೀಟಗಳಿಗಲ್ಲ. ಬಿಸಿಲು ಬರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಯಬಹುದು. ಈ ಹೂವನ್ನು ಒಣಗಿಸಿ ಅದನ್ನು ಪುಟ್ಟ ಸ್ಯಾಶೆಗಳಲ್ಲಿ ತುಂಬಿ ಮನೆಯಲ್ಲೆಲ್ಲಾ ಇರಿಸಿಕೊಳ್ಳಬಹುದು. ಲ್ಯಾವೆಂಡರ್‌ ತೈಲವನ್ನೂ ಇತರ ಎಣ್ಣೆಯೊಂದಿಗೆ ಸೇರಿಸಿ ಚರ್ಮಕ್ಕೆ ಲೇಪಿಸಿಕೊಳ್ಳಬಹುದು. ಇದನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಹಲವು ರೀತಿಯಲ್ಲಿ ಅನುಕೂಲಗಳಿವೆ.

Marigold

ಮಾರಿಗೋಲ್ಡ್‌

ಚೆಂಡು ಹೂವು ಎಂದೇ ಇವು ಪ್ರಸಿದ್ಧ. ಮಳೆಗಾಲದ ಈ ಹೊತ್ತಿನಲ್ಲಿ ಮೇಲೇಳುವ ಚೆಂಡು ಹೂವಿನ ಗಿಡಗಳು, ನವರಾತ್ರಿ-ದೀಪಾವಳಿಯ ಆಸುಪಾಸಿನಲ್ಲಿ ಇಡೀ ಗಿಡ ತುಂಬುವಷ್ಟು ಹೂ ಬಿಡುತ್ತವೆ. ಇವೂ ಸಹ ಸೊಳ್ಳೆ ಓಡಿಸುವಲ್ಲಿ ಸಹಕಾರ ನೀಡುವಂಥವು. ಬಾಲ್ಕನಿಯಲ್ಲಿ, ಬಾಗಿಲು-ಕಿಟಕಿಗಳ ಬಳಿ, ಅಂದರೆ ಸೊಳ್ಳೆ ಒಳ ಪ್ರದೇಶ ಮಾಡುವ ಜಾಗಗಳಲ್ಲಿ ಇದನ್ನು ಕುಂಡದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಉಪಾಯ. ಇದರ ಹೂವುಗಳನ್ನು ಗೊಂಚಲು ಮಾಡಿ, ಹೂದಾನಿಗಳಲ್ಲಿ ಮನೆಯೊಳಗೆ ಇರಿಸಿಕೊಳ್ಳಬಹುದು. ಹೂವನ್ನು ಒಣಗಿಸಿಟ್ಟುಕೊಂಡರೆ ಸೊಳ್ಳೆ ಓಡಿಸುವಲ್ಲಿ ಇನ್ನಷ್ಟು ನೆರವು ದೊರೆಯುತ್ತದೆ.

Basil

ಬೆಸಿಲ್

ಇದು ಕೇವಲ ಸೊಳ್ಳೆ ಓಡಿಸುವುದಕ್ಕೆ ಮಾತ್ರವಲ್ಲ, ರುಚಿಕಟ್ಟಾದ ಅಡುಗೆಗೂ ಉಪಯೋಗವಾಗುತ್ತದೆ. ಇದರ ತೀಕ್ಷ್ಣವಾದ ಪರಿಮಳವು ಸೊಳ್ಳೆಗಳನ್ನು ಹತ್ತಿರ ಸುಳಿಯಗೊಡುವುದಿಲ್ಲ. ಹಾಗಾಗಿ ಸೊಳ್ಳೆ ಓಡಿಸುವ ಉಪಾಯಗಳಲ್ಲಿ ಇದನ್ನು ಸಹ ಅಳವಡಿಸಿಕೊಳ್ಳಬಹುದು. ಸಾಕಷ್ಟು ಗಾಳಿ-ಬೆಳಕು ಇರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಸಬಹುದು. ಇದರ ಎಲೆಗಳನ್ನು ಕಿವುಚಿ ಮೈ-ಕೈಗೆಲ್ಲ ರಸ ಲೇಪಿಸಿಕೊಂಡರೂ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಇದರ ಕುಂಡಗಳನ್ನು ಸೊಳ್ಳೆಯ ಪ್ರವೇಶ ದ್ವಾರಗಳಲ್ಲಿ ಇರಿಸಿಕೊಂಡರೆ, ಸೊಳ್ಳೆಯ ಉಪಟಳಕ್ಕೆ ಬಾಗಿಲು ತೆರೆಯಲೂ ಅಳುಕುವ ಸ್ಥಿತಿ ತೊಲಗುತ್ತದೆ.

Lemon balm

ಲೆಮೆನ್‌ ಬಾಮ್‌

ಪುದೀನಾ ಜಾತಿಗೆ ಸೇರಿದ ಸಸ್ಯವಿದು. ಇದರ ಕಟುವಾದ ಘಮ ಸೊಳ್ಳೆ ಓಡಿಸುವಲ್ಲಿ ನೆರವಾಗುತ್ತದೆ. ಯಾವುದೇ ಕೈತೋಟ ಅಥವಾ ಬಾಲ್ಕನಿಗಳಲ್ಲಿ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಇದರ ಗಾಢವಾದ ನಿಂಬೆಯಂಥ ಪರಿಮಳ ನಮಗೆ ಹಿತವೆನಿಸಿದರೂ ಸೊಳ್ಳೆಗಳಿಗೆ ಆಗದು. ಮನಸ್ಸನ್ನು ಶಾಂತಗೊಳಿಸುವ ಗುಣಗಳು ಇದಕ್ಕಿರುವುದರಿಂದ, ಈ ಮೂಲಿಕೆಯ ಎಲೆಗಳನ್ನು ಚಹಾ ಮಾಡಿ ಕುಡಿಯುವವರಿದ್ದಾರೆ.

ಇದನ್ನೂ ಓದಿ: Head Massage Tips: ತಲೆಯ ಮಸಾಜ್‌ನಿಂದ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ! ಹಾಗಂತ ಬೇಕಾಬಿಟ್ಟಿ ಮಸಾಜ್‌ ಮಾಡಬೇಡಿ

Continue Reading

ಫ್ಯಾಷನ್

Aparna Fashion Connection: ಫ್ಯಾಷನ್‌ ಪೇಜೆಂಟ್‌ ಕನ್ನಡದಲ್ಲಿ ನಿರೂಪಿಸಿ ಟ್ರೆಂಡ್‌ ಸೆಟ್‌ ಮಾಡಿದ್ದ ಅಪರ್ಣಾ!

Aparna Fashion Connection: ನಟಿ, ನಿರೂಪಕಿ ಅಪರ್ಣಾ ಅವರು ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಕನ್ನಡ ಭಾಷೆಯಲ್ಲೆ ನಿರೂಪಣೆ ಮಾಡುವ ಮೂಲಕ ಇಂಗ್ಲೀಷ್‌ಮಯವಾಗಿದ್ದ ಫ್ಯಾಷನ್‌ ಲೋಕದಲ್ಲಿ ಕನ್ನಡದ ಕಂಪನ್ನು ಹುಟ್ಟುಹಾಕಿ, ಟ್ರೆಂಡ್‌ ಸೆಟ್‌ ಮಾಡಿದ್ದರು. ಈ ಅವಕಾಶ ನೀಡಿದ್ದ ಪೇಜೆಂಟ್‌ ಡೈರೆಕ್ಟರ್‌ ಪ್ರತಿಭಾ ಸಂಶಿಮಠ್ ಈ ಅನುಭವವನ್ನು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Aparna fashion connection
ಚಿತ್ರಗಳು: ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ 2018ರ ಚಿತ್ರಗಳು
Koo

ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಫ್ಯಾಷನ್‌ಗೂ ಅಪರ್ಣಾಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ! ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ, ಅಪರ್ಣಾ ಅವರು ಕೇವಲ ಸಾಹಿತ್ಯ ಹಾಗೂ ಕನ್ನಡ ಭಾಷೆಯ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ! ಬದಲಿಗೆ ಮಿಸೆಸ್‌ ಇಂಡಿಯಾ ಕರ್ನಾಟಕದಂತಹ ಬ್ಯೂಟಿ ಪೇಜೆಂಟ್‌ಗೂ ಕಂಪ್ಲೀಟ್‌ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡಿ, ಫ್ಯಾಷನ್‌ ಲೋಕದಲ್ಲೂ ಕಂಪ್ಲೀಟ್‌ ಕನ್ನಡ ಬಳಸಬಹುದು ಎಂಬ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದರು.
ಹೌದು, ಫ್ಯಾಷನ್‌ ಲೋಕದಲ್ಲೂ ಅಪರ್ಣಾ ಅವರ ಈ ಕನ್ನಡ ಕಂಪು ಹರಡಿದ್ದ ಅಪರ್ಣಾ ಅವರ ಕುರಿತಂತೆ ರಿಜಿನಲ್‌ ಡೈರೆಕ್ಟರ್‌ ಹಾಗೂ ಮಿಸೆಸ್‌ ಏಷಿಯಾ ಪೆಸಿಫಿಕ್‌ ಪ್ರತಿಭಾ ಸಂಶಿಮಠ್ ಖುದ್ದು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಪೇಜೆಂಟ್‌ನ ಆರಂಭಿಕ ವರ್ಷಗಳಲ್ಲಿ, ನಿರೂಪಣೆಯ ಜವಾಬ್ದಾರಿ ಹೊತ್ತು, ಕರ್ನಾಟಕದಲ್ಲೂ ಇಂಗ್ಲೀಷ್‌ ಮಯವಾಗಿರುವ ಫ್ಯಾಷನ್‌ ಲೋಕದಲ್ಲೂ, ಕನ್ನಡವನ್ನು ಬಳಸಿ ಅಂದವಾಗಿ ನಿರೂಪಣೆ ಮಾಡಬಹುದು ಎಂಬುದನ್ನು ಅಪರ್ಣಾ ತೋರಿಸಿಕೊಟ್ಟಿದ್ದರು ಎಂದಿದ್ದಾರೆ. ಪೇಜೆಂಟ್‌ ಸಮಯದಲ್ಲಿ ಅವರೊಂದಿಗಿನ ಒಡನಾಟದ ಅನುಭವದ ಒಂದಿಷ್ಟು ವಿಷಯಗಳನ್ನು ಹಾಗೂ ಒಂದಿಷ್ಟು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Aparna fashion connection

ವಿಸ್ತಾರ ನ್ಯೂಸ್‌

ಇಂಗ್ಲೀಷ್‌ಮಯವಾಗಿದ್ದ ಫ್ಯಾಷನ್‌ ಲೋಕದಲ್ಲೂ ಕನ್ನಡದಲ್ಲಿ ನಿರೂಪಣೆ ಮಾಡಿ ಟ್ರೆಂಡ್‌ ಸೆಟ್‌ ಮಾಡಿದ್ದ ಅಪರ್ಣಾ ಅವರ ಬಗ್ಗೆ ಹೇಳಿ?

Aparna fashion connection

ಪ್ರತಿಭಾ ಸಂಶಿಮಠ್

ಖಂಡಿತ. ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಫ್ಯಾಷನ್‌ ಶೋಗಳು ಪೇಜೆಂಟ್‌ಗಳು ಎಲ್ಲವೂ ಇಂಗ್ಲೀಷ್‌ಮಯವಾಗಿರುತ್ತಿದ್ದವು. ನಮ್ಮ ಪೇಜೆಂಟ್‌ ಸಾಕಷ್ಟು ಬಾರಿ ಕನ್ನಡವನ್ನು ಬಳಸುವುದರ ಮೂಲಕ ಟ್ರೆಂಡ್‌ ಹುಟ್ಟುಹಾಕಿದ್ದೆವು. ಇದಕ್ಕೆ ಪ್ರಮುಖವಾಗಿ ಸಹಕರಿಸಿದ್ದು ಅಪರ್ಣಾ. ಅವರ ಸುಂದರ ನಿರೂಪಣೆ ಟ್ರೆಂಡ್‌ ಹುಟ್ಟುಹಾಕಿತು.

ವಿಸ್ತಾರ ನ್ಯೂಸ್‌

ಅಪರ್ಣಾ ಅವರ ಕನ್ನಡದಲ್ಲಿನ ನಿರೂಪಣೆ ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾದರೂ ಹೇಗೆ?

Aparna fashion connection

ಪ್ರತಿಭಾ ಸಂಶಿಮಠ್

ಅವರ ಶುದ್ಧ ಕನ್ನಡ ಭಾಷೆ ಹಾಗೂ ನಿರೂಪಣೆಯ ಶೈಲಿ, ಭಾಷೆ ಅರ್ಥವಾಗದಿದ್ದವರಿಗೂ ಮನ ಮುಟ್ಟುವಂತಹ ಭಾವನೆ ಹೊಂದಿದ ಪದಗಳು ಎಲ್ಲರನ್ನೂ ಆಕರ್ಷಿಸಿತ್ತು.

ವಿಸ್ತಾರ ನ್ಯೂಸ್‌

ಫ್ಯಾಷನ್‌ ಪೇಜೆಂಟ್‌ನಲ್ಲಿ ನಿರೂಪಣೆ ಮಾಡುವಾಗ ಅವರೊಂದಿಗೆ ಕಳೆದ ಕ್ಷಣಗಳು ಹೇಗಿದ್ದವು?

Aparna fashion connection

ಪ್ರತಿಭಾ ಸಂಶಿಮಠ್

ಅಪರ್ಣಾ ಅವರು ಕನ್ನಡ ಭಾಷೆಯ ಖಜಾನೆ. ಅವರಿಂದಲೇ ಸಾಕಷ್ಟು ನಾವು ಕಲಿತಿದ್ದಿದೆ. ಅಷ್ಟು ಮಾತ್ರವಲ್ಲದೇ, ಇಂಗ್ಲೀಷ್‌ ಕೂಡ ಅಷ್ಟೇ ಚೆನ್ನಾಗಿ ಬಲ್ಲವರಾಗಿದ್ದರು. ಅವರ ಭಾಷಾ ಪ್ರೇಮ, ಮುಂದೆಯೂ ನಾವು ರ‍್ಯಾಂಪ್‌ ಮೇಲೆ ಕನ್ನಡ ಬಳಕೆ ಮಾಡಲು ಪ್ರೋತ್ಸಾಹ ನೀಡಿತ್ತು.

Aparna fashion connection

ವಿಸ್ತಾರ ನ್ಯೂಸ್‌

ಸದಾ ಎಥ್ನಿಕ್‌ ಲುಕ್‌ನಲ್ಲಿ ಇರುತ್ತಿದ್ದ ಅಪರ್ಣಾ ಅವರು ಫ್ಯಾಷನ್‌ ಪೇಜೆಂಟ್‌ಗೆ ಹೊಂದಿಕೊಂಡದ್ದು ಹೇಗೆ?

ಪ್ರತಿಭಾ ಸಂಶಿಮಠ್

ಫ್ಯಾಷನ್‌ ಪೇಜೆಂಟ್‌ಗೆ ತಕ್ಕಂತೆ ಅವರು ಕೂಡ ಡಿಸೈನರ್‌ ಗೌನ್‌ ಡಿಸೈನ್‌ ಮಾಡಿಸಿ ಧರಿಸಿದ್ದರು. ಮಾಡೆಲ್‌ನಂತೆ ಕಾಣಿಸಿಕೊಂಡಿದ್ದರು.

Aparna fashion connection

ವಿಸ್ತಾರ ನ್ಯೂಸ್‌

ಫ್ಯಾಷನ್‌ ಜಗತ್ತಿನಲ್ಲಿ ಅಪರ್ಣಾ ಅವರು ಕನ್ನಡ ಬಳಸಿದ ನಂತರ ಆದ ಬದಲಾವಣೆಗಳೇನು?

ಇದನ್ನೂ ಓದಿ: Kim Kardashian Saree Fashion: ರೆಡಿ ರೆಡ್‌ ಸೀರೆಯಲ್ಲಿ ಸೆಕ್ಸಿಯಾಗಿ ಕಂಡ ಕಿಮ್‌ ಕಾರ್ಡಶಿಯಾನ್‌! ವಿಡಿಯೊ ನೋಡಿ

ಪ್ರತಿಭಾ ಸಂಶಿಮಠ್

ನಮ್ಮ ಪೇಜೆಂಟ್‌ನಲ್ಲಿ ಅಪರ್ಣಾ ಅವರು ಕನ್ನಡದಲ್ಲಿ ನಿರೂಪಣೆ ಮಾಡಿದ ನಂತರ, ಇತರೇ ಫ್ಯಾಷನ್‌ ಇವೆಂಟ್‌ಗಳಲ್ಲೂ ಕನ್ನಡ ಇಣುಕತೊಡಗಿತು. ಕನ್ನಡ ಭಾಷೆ ಬಗ್ಗೆ ಪ್ರೀತಿ ಹುಟ್ಟಿಕೊಂಡಿತು. ಇದೇ ಅವರು ಟ್ರೆಂಡ್‌ ಸೆಟ್‌ ಮಾಡಿದ್ದಕ್ಕೆ ಸಾಕ್ಷಿ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Head Massage Tips: ತಲೆಯ ಮಸಾಜ್‌ನಿಂದ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ! ಹಾಗಂತ ಬೇಕಾಬಿಟ್ಟಿ ಮಸಾಜ್‌ ಮಾಡಬೇಡಿ

Head Massage Tips: ತಲೆಗೆ ಎಣ್ಣೆ ಮಸಾಜ್‌ ಮಾಡುತ್ತೀರಾ? ಮನಸ್ಸಿನ ಒತ್ತಡ ನಿರ್ವಹಣೆಗೆ ಇದು ಅತ್ಯಂತ ಒಳ್ಳೆಯ ಮಾರ್ಗ ಎಂಬುದನ್ನು ಹೆಚ್ಚಿನ ತಕರಾರಿಲ್ಲದೇ ಒಪ್ಪಿಕೊಳ್ಳಬಹುದು. ಇದರಿಂದ ಲಾಭವೇನು, ಹೇಗೆ ಮಾಡಿದರೆ ಸೂಕ್ತ ಎಂಬಿತ್ಯಾದಿ ವಿವರಗಳು ಇಲ್ಲಿವೆ. ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಿ, ಆಮ್ಲಜನಕದ ಪೂರೈಕೆಯನ್ನು ವೃದ್ಧಿಸಿ, ಮನಸ್ಸನ್ನು ಶಾಂತಗೊಳಿಸುವ ಈ ಅಭ್ಯಾಸದಿಂದ ಇನ್ನೂ ಏನೇನು ಲಾಭಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

Head Massage Tips
Koo

ಬದುಕಿನಲ್ಲಿ ಕಡೆಯವರೆಗೆ ನಮ್ಮ ಜೊತೆಗಿರುವುದು ನಮ್ಮ ಆತಂಕ, ಒತ್ತಡಗಳು ಮಾತ್ರ ಎಂಬುದು ಆಧುನಿಕ ಕಾಲದ ಗಾದೆ. ಇವುಗಳಿಂದ ಬಿಡಿಸಿಕೊಳ್ಳಲು ಮಾಡದ ಸರ್ಕಸ್‌ ಯಾವುದಿದೆ? ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುವುದರಿಂದ ಹಿಡಿದು, ಲೋಕದ ಸಹವಾಸವೇ ಸಾಕೆಂದು ಆಶ್ರಮ ಸೇರಿ ಸನ್ಯಾಸ ತೆಗೆದುಕೊಂಡವರೂ ಇದ್ದಾರೆ. ಇದೆಲ್ಲ ಬಿಡಿ, ನಮ್ಮ-ನಿಮ್ಮ ಮಟ್ಟವನ್ನು ಮೀರಿದ್ದು. ಈಗ ಸಾಮಾನ್ಯರಿಗೆ ಆಗುವಂಥ ಸರಳವಾದ ವಿಷಯಕ್ಕೆ ಬರೋಣ. ಸರಳವಾದ ತಲೆಯ ಮಸಾಜ್‌ (Head Massage Tips) ಒತ್ತಡ ಕಡಿಮೆ ಮಾಡುವಲ್ಲಿ ಎಷ್ಟೊಂದು ಪರಿಣಾಮಕಾರಿ ಎನ್ನುವುದು ಗೊತ್ತೇ? ಆಯುರ್ವೇದವನ್ನು ಶತಶತಮಾನಗಳಿಂದ ಬದುಕಿನ ರೀತಿಯಂತೆ ಆಚರಿಸುತ್ತಾ ಬಂದಿರುವ ಭಾರತದಲ್ಲಿ ತಲೆಗೆ ಎಣ್ಣೆ ಮಸಾಜ್‌ ಮಾಡುವ ಬಗ್ಗೆ ಹೆಚ್ಚು ಹೇಳುವುದು ಬೇಕಿಲ್ಲ- ಎಂದು ತಿಳಿದಿದ್ದರೆ, ತಪ್ಪು! ತಲೆ ಕೂದಲಿಗೆ ಎಣ್ಣೆ ಹಚ್ಚುವುದಕ್ಕೂ ಜಾಹೀರಾತುಗಳನ್ನು ಕೊಡಬೇಕಾಗಿರುವ ಈ ಕಾಲದಲ್ಲಿ ಎಲ್ಲರೂ ಹಳೆಯ ಕಾಲದವರಂತೆ ಎಣ್ಣೆ ಮಸಾಜ್‌ ಮಾಡಿಕೊಳ್ಳುತ್ತಾರೆ ಎಂಬ ಭಾವಿಸುವುದಾದರೂ ಹೇಗೆ? ಹೀಗೆನ್ನುತ್ತಿದ್ದಂತೆ ತಲೆಯ ಕೂದಲೆಲ್ಲ ಕಿತ್ತು ಬರುವಂತೆ ಉಗ್ರವಾಗಿ ಮಸಾಜ್‌ ಮಾಡುವ ಚಿತ್ರವನ್ನು ಕಣ್ಣಿಗೆ ತಂದುಕೊಳ್ಳಬೇಡಿ. ಲಘುವಾದ ಆದರೆ ಸ್ಥಿರವಾದ ಲಯದಲ್ಲಿನ ಮಸಾಜ್‌ ಇದು. ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸಿ, ಆಮ್ಲಜನಕದ ಪೂರೈಕೆಯನ್ನು ವೃದ್ಧಿಸಿ, ಮನಸ್ಸನ್ನು ಶಾಂತಗೊಳಿಸುವ ಈ ಅಭ್ಯಾಸದಿಂದ ಇನ್ನೂ ಏನೇನು ಲಾಭಗಳಿವೆ (Head Massage Tips) ಎಂಬುದನ್ನು ನೋಡೋಣ.

Lady Sitting on the Couch Gives Herself a Scalp Massage Gooseberry Benefits

ಸೆರೋಟೋನಿನ್‌ ಹೆಚ್ಚಳ

ಒತ್ತಡ ನಿವಾರಿಸುವಲ್ಲಿ ನಮ್ಮ ದೇಹದ ಹ್ಯಾಪಿ ಹಾರ್ಮೋನುಗಳ ಭೂಮಿಕೆ ಮಹತ್ವದ್ದು. ತಲೆಗೆ ಲಘುವಾದ ಎಣ್ಣೆ ಅಥವಾ ಜೆಲ್‌ ಮಸಾಜ್‌ ಮಾಡುವುದು ಸೆರೋಟೋನಿನ್‌ ಚೋದಕದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಆತಂಕ ನಿವಾರಣೆ ಮತ್ತು ಒತ್ತಡ ಪರಿಹಾರ ಸಾಧ್ಯವಿದೆ. ಇದು ನಮ್ಮ ಮೂಡ್‌ ಸರಿಪಡಿಸಿ, ಆಹ್ಲಾದದ ಭಾವವನ್ನು ಹೆಚ್ಚಿಸುತ್ತದೆ. ಹಣೆಯ ನರಗಳನ್ನು ಸಡಿಲಿಸಿ, ಕಣ್ಣಿನ ಒತ್ತಡ ಕಡಿಮೆ ಮಾಡಿ, ಮನಸ್ಸಿನ ಸಮಾಧಾನ ಹೆಚ್ಚಿಸುತ್ತದೆ.

ಕಾರ್ಟಿಸೋಲ್‌ ಕಡಿಮೆ

ನಮ್ಮ ದೇಹದಲ್ಲಿ ಒತ್ತಡ ಹೆಚ್ಚುತ್ತಿದ್ದಂತೆ ಕಾರ್ಟಿಸೋಲ್‌ ಪ್ರಮಾಣವೂ ಹೆಚ್ಚುತ್ತದೆ. ಒತ್ತಡಕ್ಕೆ ಪ್ರತಿಯಾಗಿ ಬಿಡುಗಡೆಯಾಗುವ ಹಾರ್ಮೋನು ಎಂದು ತಿಳಿಯಬಹುದು ಇದನ್ನು. ಈ ಚೋದಕದ ಪ್ರಮಾಣ ದೇಹದಲ್ಲಿ ಹೆಚ್ಚಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಮುತ್ತಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ, ಕಾರ್ಟಿಸೋಲ್‌ ಪ್ರಮಾಣ ಹೆಚ್ಚದಂತೆ ನಿಭಾಯಿಸುವುದು ಅತಿ ಮುಖ್ಯ.

ಇದನ್ನೂ ಓದಿ: Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

ಮಾಡುವುದು ಹೇಗೆ?

ನಮಗೆ ನಾವೇ ಮಸಾಜ್‌ ಮಾಡಿಕೊಳ್ಳುವುದು ಅಸಾಧ್ಯವಲ್ಲ, ಆದರೆ ಪರಿಣಾಮಕಾರಿ ಆಗದೆಯೇ ಹೋಗಬಹುದು. ಹಾಗಾಗಿ ಒಬ್ಬರಿಗೊಬ್ಬರು ತಲೆಗೆ ಎಣ್ಣೆ ಮಸಾಜ್‌ ಮಾಡುವ ಕ್ರಮ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ತಲೆಯ ಮಸಾಜ್‌ಗೆ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಯಂಥ ಯಾವುದನ್ನಾದರೂ ಬಳಸಬಹುದು. ಇವುಗಳ ಜೊತೆಗೆ ಕೆಲವು ಹನಿಗಳಷ್ಟು ಯಾವುದಾದರೂ ಸಾರಭೂತ ತೈಲವನ್ನು ಸೇರಿಸಿಕೊಂಡರೆ ಒತ್ತಡ ನಿವಾರಣೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಮಸಾಜ್‌ ಮಾಡುವಾಗ ಇಡೀ ಅಂಗೈ ಹಾಕಿ ತಲೆಯನ್ನು ಉಜ್ಜುವ ಬದಲು, ಬೆರಳುಗಳ ತುದಿಯನ್ನು ಹೆಚ್ಚು ಬಳಸಿ. ತಲೆಯನ್ನು ತಿಕ್ಕಿ, ತೀಡಿ, ಲಘುವಾಗಿ ತಟ್ಟಬಹುದು. ಸಣ್ಣ ವೃತ್ತಾಕಾರದಲ್ಲಿ ತಿಕ್ಕುವುದು ಸರಿಯಾದ ಕ್ರಮ. ಹಣೆಯಿಂದ ಪ್ರಾರಂಭಿಸಿ, ತಲೆಯ ಹಿಂಭಾಗದತ್ತ ಮುಂದುವರಿಯಿರಿ. ಯಾವುದಾದರೂ ಭಾಗದಲ್ಲಿ ಹೆಚ್ಚಿನ ಒತ್ತಡವಿದೆ ಎನಿಸಿದರೆ, ಆ ಭಾಗಕ್ಕೆ ಹೆಚ್ಚು ಹೊತ್ತು ಮಸಾಜ್‌ ಮಾಡಿ. ಮುಖ್ಯವಾಗಿ ಹುಬ್ಬಿನ ಪಕ್ಕದ ಭಾಗ, ಮೂರನೇ ಕಣ್ಣಿನ ಭಾಗ, ನೆತ್ತಿ, ಕುತ್ತಿಗೆಯ ಹಿಂಭಾಗ- ಇಲ್ಲೆಲ್ಲ ಮಸಾಜ್‌ ಮಾಡಿದರೆ ಬೇಗ ಆರಾಮ ದೊರೆಯುತ್ತದೆ. ಕಣ್ಣಿನ ಸುತ್ತ ವೃತ್ತಾಕಾರದಲ್ಲೂ ಹಗುರವಾಗಿ ತಿಕ್ಕಬಹುದು. ಆದರೆ ಈ ಭಾಗಕ್ಕೆ ಹೆಚ್ಚಿನ ತೈಲ ಬಳಸುವುದು ಬೇಡ. ಕಣ್ಣಿಗೆ ಎಣ್ಣೆ ತಾಗಿದರೆ ವಿಪರೀತ ಉರಿಯಾಗುತ್ತದೆ. ಇದನ್ನು ವಾರಕ್ಕೊಮ್ಮೆ ನಿಶ್ಚಿತವಾಗಿ ಮಾಡಬಹುದು. ಹೆಚ್ಚು ಬಾರಿ ಮಾಡಿದರೆ, ಅನುಕೂಲ ಹೆಚ್ಚು. ಸಾಧಾರಣವಾಗಿ 10-15 ನಿಮಿಷಗಳ ಲಘುವಾದ ಮಸಾಜ್‌ ಒತ್ತಡ ನಿರ್ವಹಣೆಯಲ್ಲಿ ಹೆಚ್ಚಿನ ಪರಿಣಾಮ ನೀಡುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ, ಆರಾಮದಾಯಕ ನಿದ್ರೆ ನಿಮ್ಮದಾಗುತ್ತದೆ.

Continue Reading

ಫ್ಯಾಷನ್

Ambani Wedding Fashion: ನೀತಾ ಅಂಬಾನಿಯ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಬಂಗಾರದಲ್ಲಿ ಮೂಡಿದ ಕುಟುಂಬದವರ ಹೆಸರು!

Ambani Wedding Fashion: ಅಂಬಾನಿ ಫ್ಯಾಮಿಲಿಯ ಮದುವೆ ಸಮಾರಂಭದಲ್ಲಿ ನೀತಾ ಅಂಬಾನಿ ಧರಿಸಿದ್ದ ಗ್ರ್ಯಾಂಡ್‌ ಡಿಸೈನರ್‌ ಬ್ಲೌಸ್‌ ಮೇಲೆ ಬಂಗಾರದಲ್ಲಿ ಕುಟುಂಬದವರ ಹೆಸರು ಮೂಡಿಸಲಾಗಿದೆ. ಹಾಗಾದಲ್ಲಿ ಇದ್ಯಾವ ಬಗೆಯ ಹೊಸ ಡಿಸೈನ್‌? ದುಬಾರಿ ಘಾಗ್ರದ ವಿಶೇಷತೆಯೇನು? ಈ ಕುರಿತಂತೆ ಫ್ಯಾಷನ್‌ ಪರಿಣತರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Ambani Wedding Fashion
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀತಾ ಅಂಬಾನಿಯವರ (Ambani Wedding Fashion) ದುಬಾರಿ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಕುಟುಂಬದವರ ಹೆಸರು ಬಂಗಾರದಲ್ಲಿ ಮೂಡಿಸಿರುವುದು, ಬ್ಲೌಸ್‌ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದೆ. ಹೌದು, ಸೆಲೆಬ್ರೆಟಿ ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಅವರ ಕೈಚಳಕದಲ್ಲಿ ಎಂದಿನಂತೆ ಬಂಗಾರ-ವಜ್ರ ವೈಢೂರ್ಯದಿಂದಲೇ ಸಿದ್ಧಗೊಂಡ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ನ ಬ್ಯಾಕ್‌ ಡಿಸೈನ್‌ನಲ್ಲಿ, ನೀತಾ ಅವರ ಪ್ರೀತಿ ಪಾತ್ರರಾದ ಇಡೀ ಕುಟುಂಬದವರ ಹೆಸರು ದಾಖಲಿಸಲಾಗಿದೆ. ಕೋಟಿಗಟ್ಟಲೇ ಬೆಲೆ ಬಾಳುವ ಈ ಡಿಸೈನರ್‌ ಘಾಗ್ರದಲ್ಲಿ ಆಂಟಿಕ್‌ ವಿನ್ಯಾಸವನ್ನುಕೂಡ ಚಿತ್ರಿಸಲಾಗಿದೆ.

Ambani Wedding Fashion

ಡಿಸೈನರ್‌ ಘಾಗ್ರ ವಿಶೇಷತೆ ಏನು?

ಭಾರತೀಯ ಸಂಸ್ಕೃತಿ ಬಿಂಬಿಸುವ ಕಲಾತ್ಮಕ ಹ್ಯಾಂಡ್‌ಮೇಡ್‌ ಚಿನ್ನ-ಬೆಳ್ಳಿ ಸೂಕ್ಷ್ಮ ಕುಸುರಿ ಚಿತ್ತಾರ ಹೊಂದಿರುವ ಈ ಡಿಸೈನರ್‌ವೇರ್‌ ಅಬು ಜಾನಿ ಸಂದೀಪ್‌ ಅವರ ಸ್ಪೆಷಲ್‌ ಡಿಸೈನ್‌ದ್ದಾಗಿದ್ದು, ನೀತಾ ಅವರ ಅಭಿಲಾಷೆಗೆ ತಕ್ಕಂತೆ, ವಿನ್ಯಾಸಗೊಳಿಸಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನೀತಾ ಅವರ ಆಧ್ಯಾತ್ಮಿಕ ಪ್ರೀತಿಯನ್ನು ವಿವರಿಸುವ ವಾರಣಾಸಿ ಅಂದರೇ, ಕಾಶಿಯ ಪ್ರೇಮ ಕುರಿತಾದ ಚಿತ್ರಣವನ್ನು ಡಿಸೈನ್‌ ಮೂಲಕ ಮೂಡಿಸಲಾಗಿದೆ. ಉತ್ತರ ಭಾರತದ ಟೆಂಪಲ್‌ ಡಿಸೈನ್ಸ್ ಈ ಘಾಗ್ರಾದಲ್ಲಿ, ಮನಮೋಹಕವಾಗಿ ಬೆಳ್ಳಿ-ಬಂಗಾರದ ದಾರದಿಂದ ಹ್ಯಾಂಡ್‌ವರ್ಕ್ ಮೂಲಕ ಡಿಸೈನ್‌ ಮಾಡಲಾಗಿದೆ.

Ambani Wedding Fashion

ಅಪರೂಪದ ಘಾಗ್ರ ವಿನ್ಯಾಸ

ಕಲಾಕಾರರ ಜರ್ದೋಸಿ ಹ್ಯಾಂಡ್‌ ಮೇಡ್‌ ಡಿಸೈನ್‌ ಹೊಂದಿರುವ ಈ ಘಾಗ್ರ ಸಾಮಾನ್ಯವಾದ ಘಾಗ್ರವಲ್ಲ! ಉತ್ತರ ಭಾರತದ ಟೆಂಪಲ್‌ ಡಿಸೈನ್ಸ್ ಭಕ್ತಿ ಪೂರ್ವಕವಾಗಿ ಪ್ರತಿನಿಧಿಸಿದೆ. ಇದುವರೆಗೂ ಜ್ಯುವೆಲರಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಟೆಂಪಲ್‌ ಡಿಸೈನ್‌ಗೆ ಸಂಬಂಧಿಸಿದ ವಿನ್ಯಾಸಗಳು, ಇದೀಗ ಈ ವಿಶೇಷ ಘಾಗ್ರದ ಕುಸುರಿ ಕಲೆಯಲ್ಲಿ ಕಂಡು ಬಂದಿರುವುದು ಇದೇ ಮೊದಲು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Ambani Wedding Fashion

ಜ್ಯುವೆಲ್‌ ಬ್ಲೌಸ್‌ ಮೇಲೆ ಬಂಗಾರದ ಹೆಸರು

ಅತಿ ಸೂಕ್ಷ್ಮವಾದ ಸಾಫ್ಟ್ ನೆಟ್ಟೆಡ್‌ ಫ್ಯಾಬ್ರಿಕ್‌ನಿಂದ ಘಾಗ್ರದ ಬ್ಲೌಸ್‌ ವಿನ್ಯಾಸಗೊಳಿಸಲಾಗಿದೆ. ಬ್ಯಾಕ್‌ ಡಿಸೈನ್‌ನ ಮಧ್ಯಭಾಗದಲ್ಲಿ ಜೋಡಿ ಆನೆಯ ಸುತ್ತಾ ಬಂಗಾರದ ದಾರದಲ್ಲಿ ಹ್ಯಾಂಡ್‌ವರ್ಕ್ನಿಂದ ಕುಟುಂಬದವರೆಲ್ಲರ ಹೆಸರನ್ನು ಹಿಂದಿ ಭಾಷೆಯಲ್ಲಿ ಮೂಡಿಸಲಾಗಿದೆ. ಇನ್ನು, ಎರಡು ಸ್ಲೀವ್‌ಗಳ ಮೇಲೆ ವಿನ್ಯಾಸಗೊಳಿಸಿರುವ ಜುಮ್ಕಾ ಡಿಸೈನ್‌ ಈ ಔಟ್‌ಫಿಟ್‌ಗೆ ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ ನೀಡಿದೆ. ಈ ದುಬಾರಿ ಬ್ಲೌಸ ಅನ್ನು ಬಂಗಾರದ ಟೈನಿ ಬೀಡ್ಸ್ ಹಾಗೂ ಸಿಕ್ವಿನ್ಸ್‌ನಿಂದಲೇ ಸಿದ್ಧಪಡಿಸಿರುವುದು ವಿಶೇಷ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್‌ ದಿಯಾ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Continue Reading
Advertisement
7th Pay Commission
ಕರ್ನಾಟಕ5 mins ago

7th Pay Commission: ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ

Sexual Abuse
Latest6 mins ago

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

MAX Teaser
ಸ್ಯಾಂಡಲ್ ವುಡ್12 mins ago

MAX Teaser: ಬಹುನಿರೀಕ್ಷಿತ ʼಮ್ಯಾಕ್ಸ್ʼ ಚಿತ್ರದ ಟೀಸರ್‌ ಔಟ್‌; ರೌಡಿಗಳ ಅಡ್ಡದಲ್ಲಿ ನಿಂತು ಲಾಂಗ್‌ ಬೀಸಿದ ಸುದೀಪ್‌

Soldier 2
ಸಿನಿಮಾ15 mins ago

Soldier 2: ಮುಂದಿನ ವರ್ಷ ‘ಸೋಲ್ಜರ್ 2’ ಶೂಟಿಂಗ್; ಮತ್ತೆ ಒಂದಾಗಲಿದ್ದಾರೆಯೇ ಬಾಬಿ ಡಿಯೋಲ್-ಪ್ರೀತಿ ಜಿಂಟಾ?

Rain Effect.. karnataka Rain Effect
ಮಳೆ32 mins ago

Rain Effect : ಭಾರಿ ಮಳೆಗೆ ಶಿರೂರು ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದ ಮಹಿಳೆ ಮೃತದೇಹ ಪತ್ತೆ

RCB
ಕ್ರೀಡೆ46 mins ago

RCB: ಆರ್​ಸಿಬಿ ಕಪ್​ ಗೆಲ್ಲದಿರಲು ನೈಜ ಕಾರಣ ತಿಳಿಸಿದ ತಂಡದ ಮಾಜಿ ಆಟಗಾರ

Gold Rate Today
ಚಿನ್ನದ ದರ52 mins ago

Gold Rate Today: ಮತ್ತೆ ಏರಿಕೆಯಾದ ಚಿನ್ನದ ಬೆಲೆ; ಆಭರಣ ಕೊಂಡುಕೊಳ್ಳುವ ಮುನ್ನ ದರ ಗಮನಿಸಿ

Karnataka assembly live hd revanna
ಪ್ರಮುಖ ಸುದ್ದಿ59 mins ago

Karnataka Assembly Live: ವಾಲ್ಮೀಕಿ ಹಗರಣ ಚರ್ಚೆಯ ನಡುವೆ ಗದ್ದಲ ಸೃಷ್ಟಿಸಿದ ರೇವಣ್ಣ ಪ್ರಕರಣ; ರೊಚ್ಚಿಗೆದ್ದ ರೇವಣ್ಣ

Assembly Session 2024
ಕರ್ನಾಟಕ1 hour ago

Assembly Session 2024: ಮೈಸೂರು ಪೇಪರ್ ಮಿಲ್ಸ್‌ ಪುನರಾರಂಭಕ್ಕೆ ಸರ್ಕಾರ ಚಿಂತನೆ: ಸಚಿವ ಎಂ.ಬಿ. ಪಾಟೀಲ್

Donald Trump
ವಿದೇಶ1 hour ago

Donald Trump: ಬೆದರಿಕೆಗೆ ಬಗ್ಗದ ಡೊನಾಲ್ಡ್‌ ಟ್ರಂಪ್;‌ ಕಿವಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಜನರೆದುರು ಪ್ರತ್ಯಕ್ಷ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ21 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌