Beauty Care: ಟೀನೇಜ್‌ಗೆ ಬ್ಲೀಚ್‌ ಯಾಕೆ! - Vistara News

ಫ್ಯಾಷನ್

Beauty Care: ಟೀನೇಜ್‌ಗೆ ಬ್ಲೀಚ್‌ ಯಾಕೆ!

ಚಿಕ್ಕ ವಯಸ್ಸಿಗೆ ಹುಡುಗಿಯರು ತ್ವಚೆಗೆ ಬ್ಲೀಚಿಂಗ್‌ ಮಾಡಿಸುವುದರಿಂದ ಸುಕೋಮಲ ಚರ್ಮ ಅತಿ ಬೇಗ ಸುಕ್ಕಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಸೌಂದರ್ಯ ತಜ್ಞರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ ಶೆಟ್ಟಿ, ಬೆಂಗಳೂರು

ಟೀನೇಜ್‌ ಹುಡುಗಿಯರು ತ್ವಚೆಗೆ ಬ್ಲೀಚ್‌ ಮಾಡಿಸುವುದು ಬೇಡ! ಹೌದು. ಟೀನೇಜ್‌ ಹುಡುಗಿಯರ ಮುಖ ಸುಕೋಮಲವಾಗಿರುತ್ತದೆ. ಜಾಹೀರಾತುಗಳಿಗೆ ಮಾರು ಹೋಗಿ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಲೀಚ್‌ ಮಾಡಿಸಿದಲ್ಲಿ ಅಥವಾ ಮಾಡಿದಲ್ಲಿ ಮೃದುವಾದ ಚರ್ಮವು ತನ್ನ ನೈಜತೆಯನ್ನು ಅತಿ ಬೇಗನೇ ಕಳೆದುಕೊಂಡು ಬೇಗ ಮುಪ್ಪಾದಂತೆ ಕಾಣಬಹುದು ಎಂದು ಬ್ಯೂಟಿಕೇರ್‌ಗೆ ಸಂಬಂಧಿಸಿದ ಅಧ್ಯಯನವೊಂದು ವರದಿ ಮಾಡಿದೆ.

ಇಪ್ಪತ್ತರ ನಂತರ ಬ್ಲೀಚ್‌

“ಈಗಿನ ಕೆಲವು ಹುಡುಗಿಯರು ಇನ್ನು ಕಾಲೇಜು ಮೆಟ್ಟಿಲು ಹತ್ತಿರುವುದಿಲ್ಲ, ಆಗಲೇ ಮುಖ, ಕೈ-ಕಾಲಿನ ಬ್ಲೀಚ್‌ ಮಾಡಿಸಲಾರಂಭಿಸುತ್ತಾರೆ. ಇಲ್ಲವೇ ಬ್ಲೀಚ್‌ ಕ್ರೀಮ್‌ ಬಳಸಲಾರಂಭಿಸುತ್ತಾರೆ. ಇಂದು ಬ್ಲೀಚ್‌ ಮಾಡುವುದು/ಮಾಡಿಸುವುದು ಎಷ್ಟೊಂದು ಕಾಮನ್‌ ಆಗಿದೆ ಎಂದರೆ, ಇನ್ನೂ ಟೀನೇಜ್‌ ದಾಟದ ಹುಡುಗಿಯರೂ ಕೂಡ ಇದರ ಮೋಹ ಪಾಶಕ್ಕೆ ಒಳಗಾಗುತ್ತಿದ್ದಾರೆ. ಬ್ಲೀಚ್‌ ಮಾಡಿಸಲೇಬೇಕಿದ್ದವರು ಕನಿಷ್ಠ ಪಕ್ಷ 20 ವರ್ಷದ ನಂತರ ಮಾಡಿಸುವುದು ಉತ್ತಮ.

ಅತಿ ಚಿಕ್ಕ ವಯಸ್ಸಿನಲ್ಲಿ ಬ್ಲೀಚ್‌ ಮಾಡಿಸುವುದರಿಂದ ಮುಂದಿನ ದಿನಗಳಲ್ಲಿ ಚರ್ಮದಲ್ಲಿ ನೆರಿಗೆ ಮೂಡಬಹುದು. ಇಲ್ಲವೇ ಸುಕೋಮಲ ಚರ್ಮವು ಅತಿ ಬೇಗ ಸುಕ್ಕಿಗೆ ತುತ್ತಾಗಬಹುದು. ಹಾಗಾಗಿ ಟೀನೇಜ್‌ ಹುಡುಗಿಯರು ಬ್ಲೀಚ್‌ ಮಾಡಿಸದಿದ್ದರೇ ಒಳಿತು” ಎನ್ನುತ್ತಾರೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್‌.

ಪದೇಪದೇ ಬೇಡ

ಸೆನ್ಸಿಟೀವ್‌ ಚರ್ಮ ಹೊಂದಿರುವವರು ಕೂಡ ಈ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಕೆಲವೊಮ್ಮೆ ಅತಿ ಹೆಚ್ಚು ಬ್ಲೀಚ್‌ ಮಾಡಿಸುವುದರಿಂದಲೂ ಚರ್ಮದ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. ಇನ್ನು ಕೆಲವರು ಪದೇಪದೇ ಬ್ಲೀಚ್‌ ಮಾಡಿಸಲು ಬ್ಯೂಟಿ ಪಾರ್ಲರ್‌ಗೆ ಹೋಗಲು ಸಾಧ್ಯವಾಗದಿರುವವರು, ಅಂಗಡಿಯಿಂದ ಕೊಂಡು ತಂದ ಬ್ಲೀಚಿಂಗ್‌ ಕ್ರೀಂನಿಂದ ಖುದ್ದು ಬ್ಲೀಚ್‌ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅಂತಹವರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಬ್ಲೀಚಿಂಗ್‌ ಕ್ರೀಂ ಮುಖದ ಕೂದಲ ಬಣ್ಣವನ್ನು ಮಾಸುವಂತೆ ಮಾಡಿ, ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ. ಆದರೆ, ಇದನ್ನು ಎಂದಿಗೂ ಹುಬ್ಬಿನ ಕೂದಲ ಮೇಲೆ ಪ್ರಯೋಗಿಸಕೂಡದು.

ಚರ್ಮದ ಮೇಲೆ ಬ್ಲೀಚ್‌ ಕ್ರೀಮ್‌ ಬಳಸುವುದರಿಂದ ಚಿಕ್ಕ ಪುಟ್ಟ ಕೂದಲು ಉದುರುವುದಿಲ್ಲ, ಬದಲಿಗೆ ಮಾಸಿದಂತೆ ಬಿಂಬಿಸುತ್ತದೆ. ಒಟ್ಟಿನಲ್ಲಿ, ತಾತ್ಕಾಲಿಕವಾಗಿ ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ ಅಷ್ಟೇ! ಇನ್ನು ವಯಸ್ಸು ಇಪ್ಪತ್ತರ ನಂತರ ಚರ್ಮವು ಆರೋಗ್ಯಕರವಾಗಿ ಬೆಳೆದಿರುತ್ತದೆ. ಸೂಕ್ಷ್ಮವಾಗಿರುವುದಿಲ್ಲ. ಆಗ ಸನ್‌ ಟ್ಯಾನ್‌ನಂತಹ ಹಲವಾರು ಸಮಸ್ಯೆಗಳಿಗೆ ಬ್ಲೀಚ್‌ ಮಾಡಿಸಬಹುದು. ಪರಿಹಾರವೂ ಕಂಡು ಕೊಳ್ಳಬಹುದು ಎನ್ನುತ್ತಾರೆ.

ಅಂತರವಿರಲಿ

ಪ್ರತಿ ಬ್ಲೀಚ್‌ಗೂ ಕೆಲವು ದಿನಗಳ ಕಾಲ ಅಂತರವಿದ್ದಲ್ಲಿಒಳ್ಳೆಯದು. ಬ್ಲೀಚ್‌ ಮಾಡಿದ ಅಥವಾ ಮಾಡಿಸಿದ ದಿನ ಮುಖಕ್ಕೆ ಸಾಬೂನು ಬಳಸಬೇಡಿ ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ| Beauty Care: ನೆಕ್‌ ಬ್ಯೂಟಿಗೆ ಇಲ್ಲಿದೆ 5 ಐಡಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಮುಂಬಯಿನಲ್ಲಿ ಬುಧವಾರ ನಡೆದ ಕ್ಲಾಸಿ ಗಾಲಾದಲ್ಲಿ ಭಾಗವಹಿಸಿದ್ದು ಬಿಳಿ ಬಣ್ಣದ ಧಿರಿಸಿಗೆ ಮ್ಯಾಚಿಂಗ್ ಆಗಿ ಹೈ ಹೀಲ್ಸ್ ಧರಿಸಿದ್ದರು. ಜೊತೆಗೆ ಅವರು ಹಾಕಿದ್ದ ದಪ್ಪನಾದ ವಜ್ರದ ನೆಕ್ಲೇಸ್ ಎಲ್ಲರ ಗಮನ ಅವರತ್ತ ಸೆಳೆಯುವಂತೆ ಮಾಡಿತ್ತು.

VISTARANEWS.COM


on

By

Ranveer Singh
Koo

ಬಹು ದಿನಗಳ ಬಳಿಕ ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ದುಬಾರಿ ಮೌಲ್ಯದ ವಜ್ರದ ನೆಕ್ಲೆಸ್ (diamond necklace), ಹೈ ಹೀಲ್ಸ್ ನೊಂದಿಗೆ (high heels) ಬಿಳಿ ಬಣ್ಣದ ದಿರಸಿನಲ್ಲಿ ಜನಮನ ಸೆಳೆದರು. ಬಿಳಿ ಸ್ಯಾಟಿನ್ ಶರ್ಟ್ (white satin shirt) ಮತ್ತು ಮ್ಯಾಚಿಂಗ್ ಪ್ಯಾಂಟ್‌ನಲ್ಲಿ (matching trousers) ರಣವೀರ್ ಸ್ಟೈಲಿಶ್ ಆಗಿ ಕಾಣುತ್ತಿದ್ದರು.

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರು ಮುಂಬಯಿನಲ್ಲಿ ಬುಧವಾರ ನಡೆದ ಕ್ಲಾಸಿ ಗಾಲಾದಲ್ಲಿ ಭಾಗವಹಿಸಿದ್ದರು. ಕೆಲವು ದಿನಗಳ ಬಳಿಕ ನಗರದಲ್ಲಿ ಕಾಣಿಸಿಕೊಂಡ ಅವರು, ಬಿಳಿ ಬಣ್ಣದ ಹೈ ಹೀಲ್ಸ್ ಧರಿಸಿದ್ದು, ಅವರ ದಿರಸಿಗೆ ಮ್ಯಾಚಿಂಗ್ ಆಗಿ ಹೊಳೆಯುತ್ತಿತ್ತು. ದಪ್ಪನಾದ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ಧ ಅವರು ನಡೆಯುತ್ತಿದ್ದಾಗ ಎಲ್ಲರ ದೃಷ್ಟಿ ಅವರತ್ತ ನೆಟ್ಟಿತ್ತು.

ರಣವೀರ್ ಬಿಳಿ ಸ್ಯಾಟಿನ್ ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ನಲ್ಲಿ ಕೊಂಚ ಕಪ್ಪಾಗಿ ಕಾಣುತ್ತಿದ್ದರು. ಆದರೆ ಉಬರ್-ಸ್ಟೈಲಿಶ್ ವೈಟ್ ಬೆಲ್ಟ್‌ನೊಂದಿಗೆ ತಮ್ಮ ಧಿರಿಸನ್ನು ಪೂರ್ಣಗೊಳಿಸಿದ ಅವರು ನೀಲಿ ಬಣ್ಣದ ಸನ್ ಗ್ಲಾಸ್ ಧರಿಸಿದ್ದರು. ಆದರೆ ಈ ಸಂದರ್ಭದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು ಅವರು ಧರಿಸಿದ್ದ ಡೈಮಂಡ್ ನೆಕ್ಲೇಸ್.

ಎಷ್ಟು ಮೌಲ್ಯ?

ರಣವೀರ್ ಅವರು ಆಭರಣ ಸಂಗ್ರಹವನ್ನು ಇಷ್ಟಪಡುತ್ತಾರೆ. ಅವರಲ್ಲಿ ಸಾಕಷ್ಟು ಸಂಗ್ರಹವೂ ಇದೆ. ಬಿಳಿ ಬಣ್ಣದ ಸೂಟ್ ನೊಂದಿಗೆ ಅವರು 2 ಕೋಟಿ ರೂಪಾಯಿ ಮೌಲ್ಯದ ಬೆಸ್ಪೋಕ್ ಟಿಫಾನಿ ನೆಕ್ಲೇಸ್ ಅನ್ನು ಧರಿಸಿರುವುದು ಅವರ ಲುಕ್ ಗೆ ಹೆಚ್ಚಿನ ಮೆರುಗು ನೀಡಿತ್ತು. ದಪ್ಪನಾದ ಹೀಲ್ಸ್‌ಗಳನ್ನು ಧರಿಸಿ ಫೋಟೋಗಳಿಗೆ ಪೋಸ್ ನೀಡಿದ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ತಮ್ಮ ಆಭರಣ ಪ್ರೀತಿಯ ಬಗ್ಗೆ ಮಾತನಾಡಿದ ರಣವೀರ್ ಸಿಂಗ್, ವೈಯಕ್ತಿಕ, ಭಾವನಾತ್ಮಕ ಮೌಲ್ಯವನ್ನು ಹೊಂದಿರುವ ಆಭರಣಗಳು ನನ್ನ ನೆಚ್ಚಿನ, ಅತ್ಯಂತ ಪ್ರಿಯವಾದ ತುಣುಕುಗಳಾಗಿವೆ. ಇದರಲ್ಲಿ ಮದುವೆಯ ಉಂಗುರವೂ ಒಂದು. ಇದು ನನ್ನ ಹೆಂಡತಿ ದೀಪಿಕಾ ಪಡುಕೋಣೆ ನನಗೆ ಉಡುಗೊರೆಯಾಗಿ ನೀಡಿರುವುದು. ಇನ್ನೊಂದು ಪ್ಲಾಟಿನಂ ಎಂಗೇಜ್‌ಮೆಂಟ್ ರಿಂಗ್ ಆಗಿದೆ. ತದನಂತರ ಸಹಜವಾಗಿ ನನ್ನ ತಾಯಿಯ ವಜ್ರದ ಕಿವಿಯೋಲೆಗಳು ಮತ್ತು ನನ್ನ ಅಜ್ಜಿಯ ಮುತ್ತುಗಳು ಎಂದು ತಿಳಿಸಿದರು.


ಮೊದಲ ಮಗುವಿನ ನಿರೀಕ್ಷೆ

ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಣವೀರ್ ದೀರ್ಘ ಸಮಯದ ಬಳಿಕ ಬುಧವಾರ ಮುಂಬಯಿಗೆ ಮರಳಿದ್ದಾರೆ. ಗರ್ಭಧಾರಣೆಯ ಘೋಷಣೆಯ ಅನಂತರ ದಂಪತಿ ತಮ್ಮ ಸಂಪೂರ್ಣ ಗಮನವನ್ನು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೇಂದ್ರೀಕರಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

ಇದನ್ನೂ ಓದಿ: Janhvi Kapoor: ಕ್ರಿಕೆಟ್ ಥಿಮ್‌ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟ ಜಾನ್ವಿ ಕಪೂರ್; ಚೆಂಡಿದೆ ಬೆನ್ನ ಹಿಂದೆ!

ಚಿತ್ರೀಕರಣದಲ್ಲೂ ಬ್ಯುಸಿ

ಸದ್ಯ ರಣವೀರ್ ಫರ್ಹಾನ್ ಅಖ್ತರ್ ಅವರ ಡಾನ್ ಫ್ರ್ಯಾಂಚೈಸ್‌ನಲ್ಲಿ ಹೊಸ ಡಾನ್ ಆಗಲು ಸಿದ್ಧರಾಗಿದ್ದಾರೆ. ಇದನ್ನು ಮೊದಲು ಶಾರುಖ್ ಖಾನ್ ಗಾಗಿ ನಿರ್ಮಿಸಲಾಗಿತ್ತು. ಇದಲ್ಲದೇ ರಣವೀರ್ ಹನುಮಾನ್ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

Continue Reading

ಫ್ಯಾಷನ್

New Fashion Trend: ಕ್ವೀನ್‌ ಲುಕ್‌ ನೀಡುವ ಡಿಸೈನರ್‌ ಪರ್ಲ್ ಶೈಲಿಯ ಹೆಡ್‌ಬ್ಯಾಂಡ್‌

ಕ್ವೀನ್‌ ಲುಕ್‌ ನೀಡುವ (New fashion Trend) ನಾನಾ ಬಗೆಯ ಮುತ್ತಿನ ಹೆಡ್‌ಬ್ಯಾಂಡ್‌ಗಳು ಇಂದು ಆಕ್ಸೆಸರೀಸ್‌ ಲೋಕಕ್ಕೆ ಲಗ್ಗೆ ಇಟ್ಟಿವೆ. ಚಿಣ್ಣರು ಬಳಸುತ್ತಿದ್ದ ಈ ಶೈಲಿಯ ಹೆಡ್‌ಬ್ಯಾಂಡ್‌ಗಳು ಇದೀಗ ಮಾನಿನಿಯರ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಬಗೆಯವನ್ನು ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಹೇರ್‌ ಸ್ಟೈಲಿಸ್ಟ್‌ಗಳು ಇಲ್ಲಿ ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

New fashion Trend
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ವೀನ್‌ ಲುಕ್‌ಗೆ (New fashion Trend) ಸಾಥ್ ನೀಡುವ ಪರ್ಲ್ ಹೆಡ್‌ಬ್ಯಾಂಡ್‌ಗಳು ಇದೀಗ ಆಕ್ಸೆಸರೀಸ್‌ ಲೋಕಕ್ಕೆ ಎಂಟ್ರಿ ನೀಡಿವೆ. ಧರಿಸಿದಾಗ ನೋಡಲು ರಾಣಿ-ಮಹಾರಾಣಿಯಂತೆ ಬಿಂಬಿಸುವ ನಾನಾ ವಿನ್ಯಾಸದ ಮುತ್ತಿನ ಹೆಡ್‌ಬ್ಯಾಂಡ್‌ಗಳು ಇಂದು ಆಕ್ಸೆಸರೀಸ್‌ ಲೋಕಕ್ಕೆ ಲಗ್ಗೆ ಇಟ್ಟಿದ್ದು, ಒಂದಕ್ಕಿಂತ ಒಂದು ಡಿಸೈನ್‌ನವು ಆಕರ್ಷಕವಾದ ವಿನ್ಯಾಸದಲ್ಲಿ ಆಗಮಿಸಿವೆ. ಈ ಹಿಂದೆ ಚಿಣ್ಣರು ಬಳಸುತ್ತಿದ್ದ, ಈ ಶೈಲಿಯ ಹೆಡ್‌ಬ್ಯಾಂಡ್‌ಗಳು ಇದೀಗ ಹೊಸ ರೂಪ ಪಡೆದು ಮಾನಿನಿಯರ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಅದರಲ್ಲೂ ಪಾರ್ಟಿವೇರ್‌ ಜೊತೆಗೆ, ವೀಕೆಂಡ್‌ ಔಟ್‌ಫಿಟ್‌ಗಳೊಂದಿಗೆ ಹಾಗೂ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್ ಜಯಾ ಶರ್ಮಾ. ಅವರ ಪ್ರಕಾರ, ಪರ್ಲ್ ಹೆಡ್‌ಬ್ಯಾಂಡ್‌ಗಳು ಡೀಸೆಂಟ್‌ ಲುಕ್‌ ನೀಡುವುದರೊಂದಿಗೆ ಹೇರ್‌ಸ್ಟೈಲನ್ನು ಅತ್ಯಾಕರ್ಷಕವಾಗಿಸುತ್ತವೆ ಎನ್ನುತ್ತಾರೆ.

New fashion Trend

ಟ್ರೆಂಡಿಯಾಗಿರುವ ಪರ್ಲ್ ಹೆಡ್‌ಬ್ಯಾಂಡ್ಸ್

ಮಿನಿ ಪರ್ಲ್ ಹೆಡ್‌ಬ್ಯಾಂಡ್, ಕ್ರಿಸ್ಟಲ್‌-ಪರ್ಲ್ ಹೆಡ್‌ಬ್ಯಾಂಡ್‌, ಮಲ್ಟಿಲೈನ್‌ ಪರ್ಲ್ ಹೆಡ್‌ಬ್ಯಾಂಡ್‌, ಸಿಂಗಲ್‌ ಲೈನ್‌ ಬೀಡ್ಸ್ ಸ್ಟೈಲ್‌ ಹೆಡ್‌ಬ್ಯಾಂಡ್‌, ಬಿಗ್‌ ಪರ್ಲ್ ಹೆಡ್‌ಬ್ಯಾಂಡ್, ಟೈನಿ ಪರ್ಲ್ ಹೆಡ್‌ಬ್ಯಾಂಡ್‌ ಸೇರಿದಂತೆ ಬೀಡ್ಸ್ ಮಿಕ್ಸ್ ಇರುವಂತವು ಈ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿವೆ. ಶ್ವೇತ ವರ್ಣದವು, ಹಾಫ್‌ ವೈಟ್‌, ಕ್ರೀಮಿಶ್‌ ಶೇಡ್‌ನ ಪರ್ಲ್ ಹೆಡ್‌ಬ್ಯಾಂಡ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅಂದಹಾಗೆ, ಇವೆಲ್ಲಾ ರಿಯಲ್‌ ಮುತ್ತಿನ ಹೆಡ್‌ಬ್ಯಾಂಡ್‌ಗಳಲ್ಲ, ಹೌದು. ಮುತ್ತಿನಂತೆ ಕಾಣುವ ಕೃತಕ ಮಣಿಯಂತಹ ಬೀಡ್ಸ್‌ಗಳ ಹೆಡ್‌ಬ್ಯಾಂಡ್‌ಗಳಿವು. ಹಾಗಾಗಿ ಇವುಗಳ ಬೆಲೆಯೂ ಕಡಿಮೆ. ಸುಮಾರು 50 ರೂ. ಗಳಿಂದ ಆರಂಭಗೊಂಡು 300 ರೂ.ಗಳವರೆಗೂ ಇದೆ. ಆಯಾ ಡಿಸೈನ್‌ ಹಾಗೂ ಪರ್ಲ್ ಸೈಝಿಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು. ಎಲ್ಲಾ ಫ್ಯಾನ್ಸಿ ಶಾಪ್‌ಗಳಲ್ಲೂ ಇವು ದೊರೆಯುತ್ತಿವೆ. ಅಷ್ಟೇಕೆ! ಸ್ಟ್ರೀಟ್‌ ಶಾಪಿಂಗ್‌ ಮಾಡುವವರಾದಲ್ಲಿ, ಬೀದಿ ಬದಿಯ ಶಾಪ್‌ಗಳಲ್ಲೂ ಇವು ದೊರೆಯುತ್ತವೆ. ಬೆಲೆ ಕಡಿಮೆ ಎನ್ನುತ್ತಾರೆ.

New fashion Trend

ಪರ್ಲ್ ಹೆಡ್‌ಬ್ಯಾಂಡ್‌ ಪ್ರಿಯರ ಗಮನಕ್ಕೆ

ಇನ್ನು, ಮಕ್ಕಳಾದಲ್ಲಿ ಯಾವುದೇ ಉಡುಪಿಗಾದರೂ ಈ ಪರ್ಲ್ ಡಿಸೈನ್‌ನ ಹೆಡ್‌ಬ್ಯಾಂಡ್‌ ಧರಿಸಬಹುದು. ಆದರೆ, ದೊಡ್ಡವರ ವಿಷಯದಲ್ಲಿ ಹಾಗೆ ಆಗುವುದಿಲ್ಲ. ಹಾಗಾಗಿ, ಧರಿಸುವ ಉಡುಪು ಹಾಗೂ ಹೇರ್‌ಸ್ಟೈಲ್‌ಗೆ ಅನುಗುಣವಾಗಿ ಧರಿಸಬೇಕಾಗುತ್ತದೆ. ಉದಾಹರಣೆಗೆ., ಫ್ರೀ ಹೇರ್‌ಸ್ಟೈಲ್‌ ಮಾಡಿದಾಗ ಧರಿಸಬಹುದು. ಚೆನ್ನಾಗಿ ಹೊಂದುತ್ತದೆ.

New fashion Trend
  • ಸೀರೆಗೆ ಇವನ್ನು ಧರಿಸುವುದು ನಾಟ್‌ ಓಕೆ.
  • ಪಾರ್ಟಿವೇರ್‌ ಗೌನ್‌ಗಳಿಗೆ ಧರಿಸಬಹುದು.
  • ಇತರೇ ಪರ್ಲ್ ಆಕ್ಸೆಸರೀಸ್‌ಗೂ ಮ್ಯಾಚ್‌ ಮಾಡಬಹುದು.
  • ಎಥ್ನಿಕ್ ಉಡುಪಿಗೆ ಹೊಂದುವುದಿಲ್ಲ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

Continue Reading

ಫ್ಯಾಷನ್

Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಆಕರ್ಷಕ ಮೂಗಿನ ಸ್ಟಡ್ಸ್

ಈ ಬಾರಿಯ ಅಕ್ಷಯ ತೃತೀಯದಲ್ಲಿ ಮಾನಿನಿಯರಿಗೆ (Akshaya Tritiya Fashion) ಪ್ರಿಯವಾಗುವಂತಹ ಕಾಸಗಲದ ಬಂಗಾರದ ಮೂಗುತಿಗಳು ಹಾಗೂ ಮೂಗಿನ ಸ್ಟಡ್ಸ್‌ ಬಂದಿವೆ. ಯಾವ್ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಯಾರಿಗೆ ಯಾವುದು ಸೂಕ್ತ ಎಂಬುದರ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Akshaya Tritiya Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಅಕ್ಷಯ ತೃತೀಯದಲ್ಲಿ (Akshaya Tritiya Fashion) ಕಾಸಗಲದ ಬಂಗಾರದ ಮೂಗುತಿಗಳು ಹಾಗೂ ಮೂಗಿನ ಸ್ಟಡ್ಸ್‌ ಬಂದಿವೆ. ನೋಡಲು ಕಿವಿಯ ಓಲೆ ಹಾಗೂ ಸ್ಟಡ್ಸ್‌ನಂತೆ ಕಾಣುವ ಈ ನೋಸ್‌ ರಿಂಗ್ಸ್‌ , ಡ್ಯಾಂಗಲ್ಸ್‌ ಅಥವಾ ಸ್ಟಡ್ಸ್‌ ಲೆಕ್ಕವಿಲ್ಲದಷ್ಟು ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ. ಕಿವಿಗೆ ಧರಿಸುವ ಓಲೆಯಷ್ಟೇ ಮಹತ್ವವನ್ನು ಪಡೆದುಕೊಂಡಿವೆ.

Akshaya Tritiya Fashion

ಯುವತಿಯರ ನೋಸ್‌ ಸ್ಟಡ್ಸ್‌ ಒಲವು

“ಮೂಗುತಿ ಎಂದರೇ ಚಿಕ್ಕದೊಂದು ನೋಸ್‌ ರಿಂಗ್ಸ್‌ ಅಥವಾ ಚಿಕ್ಕ ಚುಕ್ಕೆಯಂತಹ ಡಿಸೈನ್‌ನವು ಈ ಮೊದಲೆಲ್ಲಾ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ರೆಟ್ರೊ ಫ್ಯಾಷನ್‌ನಲ್ಲಿದ್ದವು, ಅದರಲ್ಲೂ ಹಳೆಯ ಸಿನಿಮಾಗಳಲ್ಲಿ ಪೌರಾಣಿಕ ಚಲನಚಿತ್ರಗಳಲ್ಲಿ ರಾಣಿ-ಮಹಾರಾಣಿಯರು, ದೇವಾನುದೇವತೆಗಳ ಪಾತ್ರಧಾರಿಗಳು ಧರಿಸುತ್ತಿದ್ದ ಬಿಗ್‌ ನೋಸ್‌ ರಿಂಗ್‌ ಅಥವಾ ಕಿವಿಯ ಓಲೆಯಂತೆ ಕಾಣುವ ಸ್ಟಡ್ಸ್‌ ಈ ಸೀಸನ್‌ನಲ್ಲಿ ಮರಳಿವೆ. ಮಾನಿನಿಯರ ಮುಖವನ್ನು ಎದ್ದು ಕಾಣುವಂತೆ ಮಾಡಬಲ್ಲ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಎಲ್ಲದಕ್ಕಿಂತ ಖುಷಿ ಪಡುವ ವಿಚಾರವೆಂದರೇ ಯುವತಿಯರು ಕೂಡ ಇದರತ್ತ ವಾಲತೊಡಗಿದ್ದಾರೆ. ತಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳಲ್ಲಿ ಇವನ್ನು ಸೇರಿಸಿಕೊಂಡಿದ್ದಾರೆ. ಪರಿಣಾಮ, ಜ್ಯುವೆಲರಿ ವಿನ್ಯಾಸಕಾರರು ಈ ಬಿಗ್‌ ನೋಸ್‌ ಸ್ಟಡ್ಸ್‌ ಅನ್ನು ನಾನಾ ರೂಪದಲ್ಲಿ ಬಿಡುಗಡೆಗೊಳಿಸಿದ್ದಾರೆ” ಎನ್ನುತ್ತಾರೆ ಆಭರಣ ವಿನ್ಯಾಸಕಾರರಾದ ರಮಣ ಆಚಾರ್‌ ಹಾಗೂ ಜಯಂತ್‌.

Akshaya Tritiya Fashion

ಟ್ರೆಂಡಿಯಾಗಿರುವ ಡಿಸೈನ್‌ಗಳ್ಯಾವುವು?

ಫ್ಲೋರಲ್‌, ಹರಳಿನ, ಅಮೆರಿಕನ್‌ ಡೈಮಂಡ್‌ನ ನಾನಾ ಡಿಸೈನ್‌ನ ಸ್ಟಡ್ಸ್‌, ಒಂಭತ್ತು, ಏಳು, ಐದು ಕಲ್ಲಿನ ಹಳೆಯ ನಕ್ಷತ್ರದಂತಹ ವಿನ್ಯಾಸ, ಮುತ್ತಿನ ಮೂಗುತಿಗಳು, ಟ್ವಿಸ್ಟೆಡ್‌, ಡಾಂಗಲ್ಸ್‌, ಡ್ರಾಪ್ಸ್‌, ಮಹಾರಾಷ್ಟ್ರದ ಮಹಿಳೆಯರು ಧರಿಸುವ ನಾನಾ ಬಗೆಯ ನತ್‌ ಜೊತೆಗಿನ ಸ್ಟಡ್ಸ್‌, ಕಲರ್‌ಫುಲ್‌ ಸೆಮಿ ಪ್ರಿಶಿಯಸ್‌ ಸ್ಟೋನ್ಸ್‌ ಇರುವಂತಹ ಡಿಸೈನ್‌ನವು, ಫ್ಲೋರಲ್‌, ನವಿಲು ಸೇರಿದಂತೆ ನಾನಾ ಬಗೆಯ ಬಿಗ್‌ ನೋಸ್‌ ಸ್ಟಡ್ಸ್‌ ಡಿಸೈನ್‌ನವು ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಅದರಲ್ಲೂ ಮೂಗುತಿ ಆಭರಣಗಳ ಕೆಟಗರಿಯಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಆಭರಣ ಮಾರಾಟಗಾರರು.

Akshaya Tritiya Fashion

ಯಾರಿಗೆ ಯಾವುದು ಸೂಕ್ತ?

  • ಅಗಲವಾದ ಮೂಗು ಹೊಂದಿರುವವರು ಆದಷ್ಟೂ ಉದ್ದನೆಯ ಡಿಸೈನ್‌ ಹೊಂದಿರುವಂತವು ಅಥವಾ ಡ್ಯಾಂಗಲ್ಸ್‌ ಚೂಸ್‌ ಮಾಡಬೇಕು.
  • ಉದ್ದನಾದ ಮೂಗಿರುವವರಿಗೆ ಯಾವುದೇ ಡಿಸೈನ್‌ನ ನೋಸ್‌ ಸ್ಟಡ್ಸ್‌ ಆದರೂ ಓಕೆ. ಆಕರ್ಷಕವಾಗಿ ಕಾಣುತ್ತದೆ.
  • ಪುಟ್ಟ ಮೂಗಿರುವವರು ಆದಷ್ಟೂ ಚಿಕ್ಕ ಸ್ಟೋನ್ಸ್‌ ಇರುವಂತಹ ಮಿನಿಯೇಚರ್‌ ಮೂಗುತಿಗಳನ್ನು ಆಯ್ಕೆ ಮಾಡುವುದು ಬೆಸ್ಟ್.‌
  • ದಪ್ಪಗಿನ ಮೂಗಿರುವವರು ಡಾಂಗಲ್ಸ್‌ ಇಲ್ಲವೇ ಪುಟ್ಟ ಡ್ರಾಪ್ಸ್‌ ಇರುವಂತಹ ನೋಸ್‌ ರಿಂಗ್‌ ಧರಿಸಿದಾಗ ನೋಡಲು ಚೆನ್ನಾಗಿ ಕಾಣುತ್ತದೆ.
  • ಮೂಗಿನ ಸ್ಟಡ್ಸ್‌ ಧರಿಸುವವರು ಆದಷ್ಟೂ ಇತರೇ ಆಭರಣಗಳನ್ನು ಮ್ಯಾಚ್‌ ಮಾಡುವ ಚಾಲಕಿತನ ಹೊಂದಿರಬೇಕು.
  • ಆದಷ್ಟೂ ಲೈಟ್‌ವೈಟ್‌ ನೋಸ್‌ ಸ್ಟಡ್ಸ್‌ ಸೆಲೆಕ್ಟ್‌ ಮಾಡಿ, ಧರಿಸಿದಲ್ಲಿ ಹೆಚ್ಚು ಭಾರವೆನಿಸದು.
  • ಸ್ಟೋನ್ಸ್‌ ಇರುವಂತಹ ಮೂಗುತಿಗಳು ಬೆಳಕಿನಲ್ಲಿ ಮಿನುಗುತ್ತವೆ. ಇಂತವು ಟ್ರೆಂಡಿಯಾಗಿವೆ.
  • ಪ್ರತಿದಿನ ಅಗಲವಾದ ಮೂಗುತಿಗಳನ್ನು ಧರಿಸಬೇಡಿ. ಕಾರ್ಯಕ್ರಮಗಳಿಗೆ ಮಾತ್ರ ಧರಿಸಿ.
  • ಅಗಲವಾದ ಪಿನ್‌ ಇರುವಂತವು ಮೂಗಿನ ತೂತನ್ನು ಮತ್ತಷ್ಟು ದೊಡ್ಡದಾಗಿಸಬಲ್ಲವು.
  • ಉಡುಪಿಗೆ ತಕ್ಕಂತೆ ಮ್ಯಾಚಿಂಗ್‌ ಬಣ್ಣ ಬಣ್ಣದ ಹರಳಿನ ನೋಸ್‌ ಸ್ಟಡ್ಸ್‌ ಕೂಡ ಪ್ರಚಲಿತದಲ್ಲಿದ್ದು, ಎಲ್ಲರಿಗೂ ಆಕರ್ಷಕವಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

Continue Reading

ಫ್ಯಾಷನ್

Girls Pleats Skirts Fashion: ಹುಡುಗಿಯರ ಮೆಚ್ಚಿನ ಆಯ್ಕೆ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್ಸ್‌ಗಳು

ಇದೀಗ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್‌ಗಳು ಹುಡುಗಿಯರ ಫ್ಯಾಷನ್‌ಗೆ (Girls Pleats Skirts Fashion) ಎಂಟ್ರಿ ನೀಡಿವೆ. ಇದಕ್ಕೆ ಪೂರಕ ಎಂಬಂತೆ, ಸ್ಥಳೀಯ ಡಿಸೈನ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಆಗಿ ಹೊಸ ರೂಪ ಪಡೆದು ನಾನಾ ಶೈಲಿಯಲ್ಲಿ ಕಾಲಿಟ್ಟಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Girls Pleats Skirts Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್‌ಗಳು ಹುಡುಗಿಯರ ಫ್ಯಾಷನ್‌ಗೆ (Girls Pleats Skirts Fashion) ಎಂಟ್ರಿ ನೀಡಿವೆ. ಕೊರಿಯನ್‌ ಗ್ಲಾಸ್‌ ಸ್ಕಿನ್‌ ಟ್ರೆಂಡ್‌ ಸೈಡಿಗೆ ಸರಿಯುತ್ತಿದ್ದಂತೆ, ಇದೀಗ ಕೊರಿಯನ್‌ ಪ್ಲೀಟೇಡ್‌ ಸ್ಕರ್ಟ್‌ಗಳು, ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ವೆಸ್ಟರ್ನ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿಕೊಂಡು ಹಂಗಾಮಾ ಎಬ್ಬಿಸಿವೆ.

Girls Pleats Skirts Fashion

ಹುಡುಗಿಯರನ್ನು ಸೆಳೆದ ಕೊರಿಯನ್‌ ಸ್ಕರ್ಟ್ಸ್‌

ಕೊರಿಯನ್‌ ಪ್ಲೀಟೇಡ್‌ ಸ್ಕರ್ಟ್ಸ್‌ ಇಂದು ಕಾಲೇಜು ಹುಡುಗಿಯರನ್ನು ಮಾತ್ರವಲ್ಲ, ವೀಕೆಂಡ್‌ ಹಾಗೂ ಔಟಿಂಗ್‌ ಇಷ್ಟಪಡುವ ಹುಡುಗಿಯರನ್ನು ಆವರಿಸಿಕೊಂಡಿವೆ. ಸಮ್ಮರ್‌ ಲುಕ್‌ಗೆ ಸಾಥ್‌ ನೀಡುವ ಇವು ನಾನಾ ಶೈಲಿಯ ಟಾಪ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಆಗಿ ಆಕರ್ಷಕ ಸ್ಕರ್ಟ್‌ ಫ್ಯಾಷನ್‌ಗೆ ನಾಂದಿ ಹಾಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Girls Pleats Skirts Fashion

ಟ್ರೆಂಡಿಯಾಗಿರುವ ಕೊರಿಯನ್‌ ಸ್ಕರ್ಟ್ಸ್‌

ಹೈ ವೇಸ್ಟ್‌ ಪ್ಲೀಟೆಡ್‌ ಕೊರಿಯನ್‌ ಸ್ಕರ್ಟ್‌, ಎ-ಲೈನ್‌ ಪ್ಲೀಟೆಡ್‌, ಹೈ ವೇಸ್ಟ್‌ ಟೆನ್ನೀಸ್‌ ಸ್ಕರ್ಟ್‌, ಸ್ಯಾಟೀನ್‌ ಪ್ಲೀಟೆಡ್‌, ನೆಟ್ಟೆಡ್‌ ಪ್ಲೀಟೆಡ್‌, ಪ್ಲೀಟೆಡ್‌ ಮಿಡಿ ಸ್ಕರ್ಟ್‌, ಶಾರ್ಟ್‌ ಪ್ಲೀಟೆಡ್‌, ಬಿಗೇ ಪ್ಲೀಟೆಡ್‌, ಮಿನಿ ಪ್ಲೀಟೆಡ್‌ ಸ್ಕರ್ಟ್‌, ಲಾಂಗ್‌ ಪ್ಲೀಟೆಡ್‌ ಸ್ಲರ್ಟ್‌ ಸೇರಿದಂತೆ ಸಾಕಷ್ಟು ನೆರಿಗೆ ಇರುವ ಕೊರಿಯನ್‌ ಸ್ಕರ್ಟ್‌ಗಳು ನಮ್ಮಲ್ಲಿ ಬಂದು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Girls Pleats Skirts Fashion

ಏನಿದು ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್ಸ್‌?

ಕೊರಿಯನ್‌ ಶೈಲಿಯ ನೆರಿಗೆ ಪಕ್ಕ ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ಪಕ್ಕ ಪಕ್ಕದಲ್ಲೆ ಇರುವಂತಹ ಪ್ಲೀಟೆಡ್‌ ಸ್ಕರ್ಟ್ಸ್‌ ನೋಡಲು ತಕ್ಷಣಕ್ಕೆ ನಮ್ಮ ರಾಷ್ಟ್ರದಲ್ಲಿ ಶಾಲೆಯ ಯೂನಿಫಾರ್ಮ್‌ ಸ್ಕರ್ಟ್‌ನಂತೆಯೇ ಕಾಣುತ್ತವೆ. ಒಟ್ಟಿನಲ್ಲಿ, ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ನೆರಿಗೆಯ ಸ್ಕರ್ಟ್‌ಗಳು ಎಂದು ಹೇಳಬಹುದು. ದಪ್ಪನೆಯ ಫ್ಯಾಬ್ರಿಕ್‌ನದ್ದಾದಲ್ಲಿ ನೀಟಾಗಿ ಈ ನೆರಿಗೆಗಳು ಕಾಣಿಸುತ್ತವೆ. ತೆಳುವಾದ ಅಂದರೇ, ನೆಟ್ಟೆಡ್‌ನದ್ದಾದಲ್ಲಿ ಲೈನಿಂಗ್‌ ಕಾಣಿಸುತ್ತವೆ. ಒಟ್ನಲ್ಲಿ, ನಾನಾ ಬಗೆಯವು ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

“ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್‌ಗಳು ಇಂದು ಟೀನೇಜ್‌ ಹಾಗೂ ಕಾಲೇಜು ಹುಡುಗಿಯರ ಫೇವರೇಟ್‌ ವಾರ್ಡ್ರೋಬ್‌ ಲಿಸ್ಟ್‌ಗರ ಸೇರಿವೆ. ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡುವ ಈ ಕೊರಿಯನ್‌ ಶೈಲಿಯವು ಇದೀಗ ಜಾಗತೀಕ ಮಟ್ಟದಲ್ಲಿ ಪ್ರಚಲಿತದಲ್ಲಿವೆ. ಪಾಸ್ಟೆಲ್‌ ಶೇಡ್‌ನವು ಹಾಗೂ ಚೆಕ್ಸ್‌ ಮತ್ತು ಮಾನೋಕ್ರಾಮ್‌ ಡಿಸೈನ್‌ನವು ಹೆಚ್ಚು ಹುಡುಗಿಯರಿಗೆ ಪ್ರಿಯವಾಗಿವೆ ” ಎನ್ನುವ ಸ್ಟೈಲಿಸ್ಟ್‌ಗಳು, ಇವು ನಾನಾ ಬಗೆಯಲ್ಲಿ ಧರಿಸಬಹುದು ಎನ್ನುತ್ತಾರೆ.

Girls Pleats Skirts Fashion

ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್ಸ್‌ ಟಿಪ್ಸ್‌

  • ಫ್ಯಾಬ್ರಿಕ್‌ ಆಧಾರದ ಮೇಲೆ ಸ್ಟೈಲಿಂಗ್‌ ಮಾಡಬಹುದು.
  • ಸ್ಕರ್ಟ್ಸ್‌ ಜೊತೆ ಸ್ಟಾಕಿಂಗ್ಸ್‌ ಧರಿಸಬಹುದು.
  • ಹೈ ಹೀಲ್ಸ್‌ ಅಥವಾ ಶೂ ಧರಿಸಿದರೆ ಆಕರ್ಷಕವಾಗಿ ಕಾಣಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Viral video
ಕ್ರೈಂ6 mins ago

Viral Video:ಛೀ.. ಎಂಥಾ ಹೇಯ ಕೃತ್ಯ! ಶಾಲಾ ಬಾಲಕಿ ಮೇಲೆ ಆಟೋ ಚಾಲಕನ ನೀಚ ಕೃತ್ಯ; ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case SIT issues 2nd notice to Bhavani Revanna Big trouble for Revanna family
ಕ್ರೈಂ9 mins ago

Prajwal Revanna Case: ಭವಾನಿ ರೇವಣ್ಣಗೆ SIT 2ನೇ ನೋಟಿಸ್‌; ರೇವಣ್ಣ ಫ್ಯಾಮಿಲಿಗೆ ಭಾರಿ ಸಂಕಷ್ಟ!

Murder case
ಬೆಳಗಾವಿ21 mins ago

Murder Case: ಆಸ್ತಿಗಾಗಿ ದಾಯಾದಿಗಳ ಕಲಹ; ತಲೆ ಮೇಲೆ ರುಬ್ಬುವ ಕಲ್ಲು ಎತ್ತಿಹಾಕಿ ಕೊಲೆ

mustafa paichar praveen nettar ಪ್ರವೀಣ್‌ ನೆಟ್ಟಾರು
ಪ್ರಮುಖ ಸುದ್ದಿ44 mins ago

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ; ಈತನನ್ನು ಹಿಡಿದುಕೊಟ್ಟವರಿಗಿತ್ತು 5 ಲಕ್ಷ ಬಹುಮಾನ!

Narendra Dabholkar
ದೇಶ45 mins ago

Narendra Dabholkar Case: ವಿಚಾರವಾದಿ ದಾಭೋಲ್ಕರ್ ಹತ್ಯೆ ಪ್ರಕರಣ; ಹಂತಕರಿಗೆ ಜೀವಾವಧಿ ಶಿಕ್ಷೆ

Star Suvarna
ಕಿರುತೆರೆ46 mins ago

Star Suvarna: ಬಹುಮಾನದ ಜತೆಗೆ ಮನೋರಂಜನೆ ಹೊತ್ತು ಬರುತ್ತಿದೆ ʼಸುವರ್ಣ ಗೃಹಮಂತ್ರಿʼ; ಯಾವಾಗ ಪ್ರಸಾರ?

Lok Sabha Election 2024 26000 km travelled for Lok Sabha campaigning CM to campaign for 14 to 18 hours a day
ರಾಜಕೀಯ48 mins ago

Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

murder case kalaburagi
ಕಲಬುರಗಿ1 hour ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

gold rate today
ಚಿನ್ನದ ದರ1 hour ago

Gold Rate Today: ಅಕ್ಷಯ ತದಿಗೆಯಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಬಂಗಾರ ಕೊಳ್ಳಲು ಮುಗಿಬಿದ್ದ ಜನ; ದರಗಳು ಹೀಗಿವೆ

Yogi Adityanath
ದೇಶ1 hour ago

Yogi Adityanath: ʼಅಕ್ಬರ್‌ಪುರʼದ ಮೇಲೆ ಯೋಗಿ ಆದಿತ್ಯನಾಥ್ ಮಾಸ್ಟರ್‌ ಸ್ಟ್ರೋಕ್‌; ಹೆಸರು ಬದಲಾವಣೆಯ ಸೂಚನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect In karnataka
ಮಳೆ2 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ9 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ16 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ17 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ18 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು1 day ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ1 day ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಟ್ರೆಂಡಿಂಗ್‌