ಫ್ಯಾಷನ್
Designer Wedding Fashion : ಡ್ರೀಮ್ ಡಿಸೈನರ್‌ವೇರನ್ನು ತಾವೇ ವಿನ್ಯಾಸ ಮಾಡಿ ಮದುವೆಯಲ್ಲಿ ಧರಿಸಿದ ಖ್ಯಾತ ಡಿಸೈನರ್ ಮಸಾಬಾ ಗುಪ್ತಾ
ತನ್ನದೇ ಆದ ಖ್ಯಾತ ಡಿಸೈನರ್ ಬ್ರಾಂಡ್ ಹೊಂದಿರುವ ಮಸಾಬಾ ಗುಪ್ತಾ ತಮ್ಮ ಮದುವೆಗೆ (masaba gupta wedding) ಖುದ್ದು ಡಿಸೈನ್ ಮಾಡಿದ ಡ್ರೀಮ್ ಡಿಸೈನರ್‌ವೇರ್ ಧರಿಸಿ ಮದುವೆಯಾಗಿದ್ದಾರೆ. ಈ ಡಿಸೈನರ್‌ವೇರ್ ಬಗ್ಗೆ ಇಲ್ಲಿದೆ ವರದಿ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಖ್ಯಾತ ಸೆಲೆಬ್ರೆಟಿ ಡಿಸೈನರ್ ಮಸಾಬಾ ಗುಪ್ತಾ ತಮ್ಮ ಮದುವೆಗೆ ತಾವೇ ಡಿಸೈನ್ ಮಾಡಿದ ಡ್ರೀಮ್ (masaba gupta wedding) ಡಿಸೈನರ್‌ವೇರ್ ಧರಿಸಿ ಮದುವೆಯಾಗಿದ್ದಾರೆ. ನಟ ಸತ್ಯದೀಪ್ ಮಿಶ್ರಾ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮಸಾಬಾ ಗುಪ್ತಾ ತಮ್ಮ ಕನಸಿನ ಡಿಸೈನರ್‌ವೇರ್ ಡಿಟೇಲನ್ನು ಸೋಷಿಯಲ್ ಮೀಡಿಯಾದಲ್ಲಿ ಸಂತಸದಿಂದಲೇ ವಿವರಿಸಿದ್ದಾರೆ.
ಕ್ರಿಯೇಟಿವ್ ಡಿಸೈನರ್ ಮಸಾಬಾ ಗುಪ್ತಾ
ಅಂದಹಾಗೆ, ಮುಂಬಯಿಯ ಹೌಸ್ ಆಫ್ ಮಸಾಬಾ ಬ್ರಾಂಡ್‌ನ (house of masaba) ಖ್ಯಾತ ಡಿಸೈನರ್ ಮಸಾಬಾ ಗುಪ್ತಾ ಯಾರಿಗೆ ಗೊತ್ತಿಲ್ಲ! ಬಾಲಿವುಡ್ ನಟ-ನಟಿಯರಿಗೆ ಡ್ರೆಸ್‌ಗಳನ್ನು ಡಿಸೈನ್ ಮಾಡುವುದು ಮಾತ್ರವಲ್ಲ, ಕೋಟ್ಯಧಿಪತಿಗಳ ವೆಡ್ಡಿಂಗ್ ಕಾಸ್ಟ್ಯೂಮ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಸಿದ್ಧಪಡಿಸುವಲ್ಲಿ ನಿಸ್ಸೀಮರು. ಹಿರಿಯ ನಟಿ ನೀನಾ ಗುಪ್ತಾ ಅವರ ಮಗಳಾದ ಮಸಾಬಾ, ಈಗಾಗಲೇ ಖಾಸಗಿ ವಾಹಿನಿಯಲ್ಲಿ ತಮ್ಮ ಲೈಫ್‌ಸ್ಟೈಲ್ ಕುರಿತಂತೆ ಪ್ರಸಾರವಾದ ವೆಬ್‌ಸೀರೀಸ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಮೊದಲೊಂದು ಮದುವೆಯಾಗಿ ಬ್ರೇಕ್‌ಅಪ್ ಮಾಡಿಕೊಂಡಿದ್ದ ಮಸಾಬಾ ಅವರದ್ದು ಇದು ಎರಡನೇ ಮದುವೆ. ಪತಿ ಸತ್ಯದೀಪ್ ಮಿಶ್ರಾಗೂ ಕೂಡ ಇದು ಎರಡನೇ ಮದುವೆ. ಈ ಮೊದಲು ಅವರು ನಟಿ ಅದಿತಿ ಹೈದರ್ ಅವರನ್ನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ.
ಮಸಾಬಾ ಪ್ರೀತಿಯ ಬರ್ಫಿ ಪಿಂಕ್ ಪಾನ್ ಪತ್ತಿ ಲೆಹೆಂಗಾ
ಸೆಲೆಬ್ರಿಟಿ ಡಿಸೈನರ್ (masaba gupta wedding ) ಮಸಾಬಾ ಗುಪ್ತಾ ತಮ್ಮ ಲೆಹೆಂಗಾವನ್ನು ಅತ್ಯಂತ ಪ್ರೀತಿಯಿಂದಲೇ ಸಿದ್ಧಪಡಿಸಿದ್ದಾರೆ. ಅವರೇ ಹೇಳುವಂತೆ, ಕಲಾಕಾರರಾದ ಮನ್‌ಜೀತ್ ಬಾವಾ ಅವರ ಕಲಾಕೃತಿಯಿಂದ ಸ್ಫೂರ್ತಿಗೊಂಡು ಈ ಡಿಸೈನರ್‌ವೇರನ್ನು ಸಿದ್ಧಪಡಿಸಲಾಗಿದೆ. ಪಾನ್ ಪತ್ತಿ ಥೀಮ್ ಲೆಹೆಂಗಾ ಇದಾಗಿದ್ದು, ಎರಡು ದುಪಟ್ಟಾ ಇದಕ್ಕೆ ಜೊತೆ ಮಾಡಲಾಗಿದೆ. ವಾಲ್ ಪ್ರಿಂಟ್ ಇರುವ ಲೈಮ್ ಗ್ರೀನ್ ಹಾಗೂ ರಾಣಿ ಪಿಂಕ್‌ನ ಸಿಕ್ವಿನ್ಸ್ ವಿನ್ಯಾಸ ಹೊಂದಿರುವುದು ಜೊತೆಯಾಗಿದೆ. ಕಸ್ಟಮೈಸ್ಡ್ ಬಾರ್ಡರ್ ಟ್ರೆಡಿಷನಲ್ ಡಿಸೈನ್‌ಗೆ ಸಾಕ್ಷಿಯಾಗಿದೆ. ಇನ್ನು ಈ ಲೆಹೆಂಗಾದೊಂದಿಗೆ ಧರಿಸಿರುವ ಹೇರ್ ಆಕ್ಸೆಸರೀಸ್‌ನಲ್ಲಿ ಸೂರ್ಯ ಹಾಗೂ ಚಂದ್ರನ ಕ್ಲಿಪ್‌ಗಳನ್ನು ಧರಿಸಲಾಗಿದೆ. ಇದೇ ವಿನ್ಯಾಸದ ಕಿವಿಯ ಹ್ಯಾಂಗಿಂಗ್ಸ್ ಹಾಗೂ ಲೇಯರ್ ನೆಕ್ಲೇಸ್‌ಗಳು ಮತ್ತಷ್ಟು ಆಕರ್ಷಣೀಯವಾಗಿವೆ. ಇದು ಎನರ್ಜಿಯ ಸಂಕೇತ ಎಂದು ಮಸಾಬಾ ಹೇಳಿಕೊಂಡಿದ್ದಾರೆ.
ಇನ್ನು ಮೇಕಪ್ ವಿಷಯಕ್ಕೆ ಬಂದಲ್ಲಿ ಮಸಾಬಾ, ಸದಾ ನ್ಯಾಚುರಲ್ ಆಗಿರುವಂಥದ್ದನ್ನೇ ಪ್ರಿಫರ್ ಮಾಡುತ್ತಾರೆ. ಇನ್ನು ಮಸಾಬಾ ಜತೆಗೆ ನಟ, ಪತಿ ಸತ್ಯದೀಪ್ ಡಿಸೈನರ್‌ವೇರ್ ಕೂಡ ಪತ್ನಿ ಡಿಸೈನ್ ಮಾಡಿದ್ದನ್ನೇ ಧರಿಸಿದ್ದಾರೆ. ಇಬ್ಬರ ಡಿಸೈನರ್‌ವೇರ್‌ಗಳು ಪರ್ಫೆಕ್ಟ್ ಮ್ಯಾಚ್ ಆಗುವಂತಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Stars Desi Fashion : ಖಾದಿ-ಕಾಟನ್-ತ್ರಿವರ್ಣ ಶೇಡ್‌ನ ದೇಸಿ ಉಡುಗೆಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮಿಸಿದ ಸೆಲೆಬ್ರಿಟಿಗಳು
FAQʼs
1. ಮಸಾಬ ಗುಪ್ತಾ ಹೇಗೆ ಪ್ರಸಿದ್ಧಳಾದಳು?
Ans: ಮುಂಬೈನ SNDT ವಿಶ್ವವಿದ್ಯಾನಿಲಯದಿಂದ ಉಡುಪು ವಿನ್ಯಾಸ ಮತ್ತು ತಯಾರಿಕೆಯಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ ನಂತರ ಮಸಾಬಾ ಗುಪ್ತಾ ಫ್ಯಾಷನ್ ಡಿಸೈನರ್ ಆಗಿ ಖ್ಯಾತಿಯನ್ನು ಗಳಿಸಿದರು. 19 ನೇ ವಯಸ್ಸಿನಲ್ಲಿ, ಅವರು ತಮ್ಮ ಸ್ವಂತ ಮಹಿಳಾ ಉಡುಪುಗಳ ಲೇಬಲ್ ಹೌಸ್ ಆಫ್ ಮಸಾಬಾವನ್ನು ಪ್ರಾರಂಭಿಸಿದರು, ಇದು ಕಫ್ತಾನ್ಗಳು, ಉಡುಪುಗಳು, ಶರ್ಟ್ಗಳು ಮತ್ತು ಸೀರೆಗಳ ಮೇಲೆ ಅದರ ವಿಶಿಷ್ಟ ಮುದ್ರಣಗಳಿಗೆ ಹೆಸರುವಾಸಿಯಾಗಿದೆ. 2009 ರಲ್ಲಿ, ಅವರು ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ “ಕತ್ರನ್” ಸಂಗ್ರಹವನ್ನು ಪ್ರಾರಂಭಿಸಿದರು, ಅವರು ಉದ್ಯಮದಲ್ಲಿ ಪ್ರಮುಖ ವಿನ್ಯಾಸಕರಾಗಿ ಸ್ಥಾಪಿಸಲು ಸಹಾಯ ಮಾಡಿದರು.
2. ಹೌಸ್ ಆಫ್ ಮಸಾಬಾ ನಿಜವಾದ ಬ್ರಾಂಡ್ ಆಗಿದೆಯೇ?
ans: ಹೌಸ್ ಆಫ್ ಮಸಾಬಾ ಇಂಡೋ-ಕೆರಿಬಿಯನ್ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಸ್ಥಾಪಿಸಿದ ನಿಜವಾದ ಬ್ರಾಂಡ್ ಆಗಿದೆ. ಅವರು SNDT ಮಹಿಳಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ 2009 ರಲ್ಲಿ ಬ್ರ್ಯಾಂಡ್ ಅನ್ನು ಸ್ಥಾಪಿಸಿದರು.
3. ಸತ್ಯದೀಪ್ ಮಿಶ್ರಾ ಏನು ಮಾಡುತ್ತಾರೆ?
Ans: ಸತ್ಯದೀಪ್ ಮಿಶ್ರಾ ಅವರು ವೈವಿಧ್ಯಮಯ ವೃತ್ತಿಜೀವನವನ್ನು ಹೊಂದಿರುವ ಬಹುಮುಖಿ ವೃತ್ತಿಪರರಾಗಿದ್ದಾರೆ. ಅವರು ನವದೆಹಲಿಯಲ್ಲಿ ಕಾರ್ಪೊರೇಟ್ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಭಾರತ ಸರ್ಕಾರದೊಂದಿಗೆ ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದರು. 2010 ರಲ್ಲಿ, ಅವರು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಅವರು ಈ ಹಿಂದೆ ಅದಿತಿ ರಾವ್ ಹೈದರಿ ಅವರನ್ನು ವಿವಾಹವಾಗಿದ್ದರು, ಆದರೆ ದಂಪತಿಗಳು 2013 ರಲ್ಲಿ ಬೇರ್ಪಟ್ಟರು. ಜನವರಿ 27, 2023 ರಂದು ಅವರು ಫ್ಯಾಶನ್ ಡಿಸೈನರ್ ಮಸಾಬಾ ಗುಪ್ತಾ ಅವರನ್ನು ವಿವಾಹವಾದರು.
ಫ್ಯಾಷನ್
Ugadi Fashion: ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಮಾನಿನಿಯರ 3 ಟ್ರೆಡಿಷನಲ್ ಟ್ರೆಂಡಿ ಡಿಸೈನರ್‌ವೇರ್ಸ್
ಈ ಬಾರಿಯ ಯುಗಾದಿ ಹಬ್ಬಕ್ಕೆ ನಾನಾ ಬಗೆಯ ಟ್ರೆಡಿಷನಲ್ ಉಡುಪುಗಳು ಆಗಮಿಸಿದ್ದು, ಅವುಗಳಲ್ಲಿ 3 ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವು ಯಾವ್ಯುವು? ಯಾವ್ಯಾವ ಶೇಡ್‌ಗಳಲ್ಲಿ ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ವಿವರ.
ಶೀಲಾ ಸಿ. ಶೆಟ್ಟಿ ಬೆಂಗಳೂರು
ಯುಗಾದಿ ಹಬ್ಬಕ್ಕೆ ನಾನಾ ಬಗೆಯ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ 3 ಶೈಲಿಯ ಎಥ್ನಿಕ್ ಲುಕ್ ನೀಡುವ ಟ್ರೆಡಿಷನಲ್‌ವೇರ್‌ಗಳು ಟ್ರೆಂಡಿಯಾಗಿದ್ದು (Ugadi Fashion) ಬೇಡಿಕೆ ಹೆಚ್ಚಿಸಿಕೊಂಡಿವೆ. ಹುಡುಗಿಯರಿಂದಿಡಿದು ವಿವಾಹಿತರು ಕೂಡ ಟ್ರೆಡಿಷನಲ್ ಅಟೈರ್‌ನತ್ತ ಆಕರ್ಷಿತರಾಗತೊಡಗಿದ್ದಾರೆ. ಅವುಗಳಲ್ಲಿ ಎಥ್ನಿಕ್ ಲುಕ್ ನೀಡುವ ಹೊಸ ಬಗೆಯ ರೇಷ್ಮೆಯ ಲಂಗ ದಾವಣಿ, ಸೌತ್ ಇಂಡಿಯನ್ ರಿಪ್ಲಿಕಾ ಲೆಹಂಗಾ ಹಾಗೂ ಸೀರೆ ಸ್ಟೈಲ್ ಲಂಗ-ದಾವಣಿ ಮಾದರಿಯವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ರೇಷ್ಮೆಯ ಕಾಂಟ್ರಸ್ಟ್ ವರ್ಣದ ಲಂಗ ದಾವಣಿ
ಇದೀಗ ಮಾನೋಕ್ರೋಮ್ ವರ್ಣದ ದಾವಣಿ-ಲಂಗದ ಫ್ಯಾಷನ್ ಮರೆಯಾಗಿದೆ. ಕಾಂಟ್ರಸ್ಟ್ ವರ್ಣದ ದಾವಣಿ-ಲಂಗದ ಡಿಸೈನರ್‌ವೇರ್‌ಗಳು ಟ್ರೆಂಡಿಯಾಗಿವೆ. ನೋಡಲು ಕಲರ್‌ಫುಲ್ ಆಗಿ ಕಾಣಿಸುವ ಇವು ಹಬ್ಬದ ರಂಗನ್ನು ಹೆಚ್ಚಿಸುತ್ತಿವೆ.
ಬ್ಲೌಸ್ ಒಂದು ವರ್ಣ, ಲಂಗ ಇನ್ನೊಂದು ವರ್ಣ ಇದಕ್ಕೆ ಧರಿಸುವ ದಾವಣಿ ಮತ್ತೊಂದು ವರ್ಣ ಹೊಂದಿರುವಂತಹ ದಾವಣಿ-ಲಂಗ ಇಂದು ಬೇಡಿಕೆ ಹೆಚ್ಚು ಪಡೆದುಕೊಂಡಿರುವುದರೊಂದಿಗೆ ಟ್ರೆಂಡಿಯಾಗಿದೆ ಎನ್ನುತ್ತಾರೆ ನಟಿ ಸುಷ್ಮಾ ಶೇಖರ್.
ಸೌತ್ ಇಂಡಿಯನ್ ಲೆಹೆಂಗಾ ರಿಪ್ಲಿಕಾ
ನಾರ್ತ್ ಇಂಡಿಯನ್ ಧರಿಸುವ ಲೆಹೆಂಗಾಗಳು ಇದೀಗ ಸೌತ್ ಇಂಡಿಯನ್ ಮಾನಿನಿಯರಿಗೂ ಸೂಟ್ ಆಗುವಂತಹ ಡಿಸೈನ್‌ನಲ್ಲಿ ಬಂದಿವೆ. ಇಲ್ಲಿನ ಸ್ಥಳೀಯ ಫ್ಯಾಷನ್ ಪ್ರೇಮಿಗಳು ಇಲ್ಲಿನ ಹಬ್ಬಗಳಿಗೆ ಧರಿಸಿದಲ್ಲಿ ಆಕರ್ಷಕವಾಗಿ ಕಾಣುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಸ್ಟಿಚ್ ಹಾಗೂ ಸೆಮಿ ಸ್ಟಿಚ್ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕಲರ್‌ಗಳು ಕೂಡ ಅಷ್ಟೇ ಇಲ್ಲಿನ ಮಹಿಳೆಯರ ಸ್ಕಿನ್ ಟೋನ್‌ಗೆ ಹೊಂದುವಂತಹ ಬಣ್ಣಗಳಲ್ಲಿ ಆಗಮಿಸಿವೆ. ಅದರಲ್ಲೂ ಬ್ಲೌಸ್ ಹಾಗೂ ಲಂಗದ ವಿನ್ಯಾಸಗಳು ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಇದರೊಂದಿಗೆ ಲಾಂಗ್ ದುಪಟ್ಟ ದಾವಣಿಯಂತೆ ಕಂಗೊಳಿಸುತ್ತಿದೆ.
ಸೀರೆ ಸ್ಟೈಲ್ ದಾವಣಿ-ಲಂಗ
ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುವ ನೋಡಲು ದಾವಣಿ-ಲಂಗದಂತೆ ಉಡಬಹುದಾದ ರೇಷ್ಮೆ ಸೀರೆ ಇಲ್ಲವೇ ಡಿಸೈನರ್‌ವೇರ್‌ಗಳು ಇಂದು ಬೋಟಿಕ್‌ಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಇವು ಕೊಂಚ ದುಬಾರಿಯಾದರೂ ನೋಡಲು ಮನಮೋಹಕವಾಗಿ ಕಾಣುತ್ತವೆ. ಕೆಲವು ರೆಡಿಮೇಡ್ ಸೀರೆಯಂತೆ ಕಂಡರೂ ಇದು ಅದಲ್ಲ! ನೆರಿಗೆ ಹೊಂದಿರುವ ಲಂಗ ಹಾಗೂ ಬ್ಲೌಸ್‌ಗೆ ಹೊಂದುವಂತೆ ವಿನ್ಯಾಸ ಮಾಡಲಾಗಿರುತ್ತದೆ.
ಟ್ರೆಡಿಷನಲ್ ಅಟೈರ್ ಆಯ್ಕೆ ಪ್ರಿಯರು ಗಮನಿಸಬೇಕಾದ್ದು
- ರೇಷ್ಮೆಯ ಫ್ಯಾಬ್ರಿಕ್‌ನ ಟ್ರೆಡಿಷನಲ್ ಅಟೈರ್ ಹಬ್ಬಕ್ಕೆ ಹೊಂದುತ್ತದೆ.
- ಟ್ರೆಡಿಷನಲ್ ಉಡುಗೆಗೆ ತಕ್ಕಂತೆ ಮೇಕಪ್, ಆಕ್ಸೆಸರೀಸ್ ಧರಿಸಿ.
- ಟ್ರೆಡಿಷನಲ್ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್ ಕುರ್ತಾಗಳು
ಫ್ಯಾಷನ್
Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್ ಕುರ್ತಾಗಳು
ಯುವಕರ ಯುಗಾದಿ ಫ್ಯಾಷನ್‌ನಲ್ಲಿ (Ugadi Mens Fashion) ಬ್ರೈಟ್ ಹಾಗೂ ಲೈಟ್ ಶೇಡ್‌ನ ಆಕರ್ಷಕ ಸ್ಲಿಮ್ ಫಿಟ್ ಕುರ್ತಾಗಳು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಯಾವ ಶೇಡ್‌ನವು ಬೇಡಿಕೆ ಹೆಚ್ಚಿಸಿಕೊಂಡಿವೆ ಎಂಬುದರ ಬಗ್ಗೆ ಇಲ್ಲಿದೆ ವರದಿ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬಕ್ಕೆ ಯುವಕರಿಗೆಂದೇ (Ugadi Mens Fashion) ನಾನಾ ಶೇಡ್‌ನ ಆಕರ್ಷಕ ಸ್ಲಿಮ್ ಫಿಟ್ ಕುರ್ತಾಗಳು ಎಂಟ್ರಿ ನೀಡಿವೆ. ಬ್ರೈಟ್ ಹಾಗೂ ಲೈಟ್ ಶೇಡಿನ ಸೆಲ್ಫ್ ಡಿಸೈನ್‌ನ ಬಟನ್ ಡೌನ್, ಕ್ರಾಸ್ ಕುರ್ತಾ, ಸ್ಟ್ರೈಟ್ ಕುರ್ತಾ, ಸ್ಲಿಮ್ ಫಿಟ್ ಕುರ್ತಾಗಳು ಲಗ್ಗೆ ಇಟ್ಟಿವೆ. ಇವುಗಳೊಂದಿಗೆ ಕಾಟನ್ ಫ್ಯಾಬ್ರಿಕ್‌ನದ್ದು ಮಾತ್ರವಲ್ಲದೇ, ಹಬ್ಬಕ್ಕೆ ಕೊಂಚ ಗ್ರ್ಯಾಂಡ್ ಲುಕ್ ನೀಡುವ ಡುಪಿಯನ್ ಸಿಲ್ಕ್, ಡೋರಿ ವರ್ಕ್, ಪಟಾನಿ , ರಾ ಸಿಲ್ಕ್ ಫ್ಯಾಬ್ರಿಕ್‌ನಲ್ಲಿಯೂ ಬಿಡುಗಡೆಗೊಂಡಿವೆ. ಹಬ್ಬದ ಆಚರಣೆಯ ನಂತರವೂ ಧರಿಸುವಂತಹ ಲೆನಿನ್ ಸಾಫ್ಟ್ ಫ್ಯಾಬ್ರಿಕ್‌ನಲ್ಲೂ ಕಾಣಿಸಿಕೊಂಡಿವೆ.
ಹಬ್ಬಕ್ಕಿರಲಿ ಬ್ರೈಟ್ ಕುರ್ತಾ
ಹಬ್ಬಕ್ಕೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಯಲ್ ಕಾಲರ್, ಚೈನಾ ಥ್ರೆಡ್ ಡಿಸೈನ್ ಕಾಲರ್, ಶೆಫ್ ಕೋಟ್ ಕುರ್ತಾ, ಡಿಸೈನರ್ ಬಟನ್ ಎಂಬ್ರಾಯ್ಡರಿ ಕುರ್ತಾ, ಸಿಲ್ಕ್ ಡಿಸೈನ್ ಕುರ್ತಾಗಳು ಟ್ರೆಂಡಿಯಾಗಿವೆ. ಇವು ನೋಡಲು ಗ್ರ್ಯಾಂಡ್ ಲುಕ್ ನೀಡುವುದರೊಂದಿಗೆ ಇತರೇ ಸಮಯದಲ್ಲೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಕಿರಣ್. ಅವರ ಪ್ರಕಾರ, ಸಿಂಪಲ್ ಬೇಕಿದ್ದಲ್ಲಿ, ಕಂಪ್ಲೀಟ್ ಕಾಟನ್ ಹಾಗೂ ಲೆನಿನ್ ಫ್ಯಾಬ್ರಿಕ್‌ನಲ್ಲಿ ಕೊಂಚ ಡಿಸೈನ್ ಇರುವಂತವನ್ನು ಖರೀದಿಸಬಹುದು.
ಶೆರ್ವಾನಿಗಿಂತ ಕುರ್ತಾ ಲೈಟ್‌ವೈಟ್
ಹೌದು. ಈ ಬೇಸಿಗೆಯ ಹಬ್ಬಗಳಲ್ಲಿ ಗ್ರ್ಯಾಂಡ್ ಲುಕ್‌ಗಾಗಿ ಶೆರ್ವಾನಿ ಧರಿಸುವವರು ಕಡಿಮೆ. ಯಾಕೆಂದರೇ, ದಪ್ಪ ಮೆಟಿರಿಯಲ್‌ನಲ್ಲಿ ಸಿದ್ಧಪಡಿಸಲಾಗುವ ಶೆರ್ವಾನಿಗಳನ್ನು ಇಡೀ ದಿನ ಧರಿಸಲಾಗದು. ಉಸಿರುಗಟ್ಟುವಂತಾಗಬಹುದು. ಅದೇ ಕುರ್ತಾ ಲೈಟ್‌ವೈಟ್ ಮಾತ್ರವಲ್ಲ, ಫುಲ್ ಸ್ಲೀವ್‌ನದ್ದು ಧರಿಸಿದರೂ ಸೆಕೆಯಾಗದು. ಪರಿಸರ ಸ್ನೇಹಿ ಫ್ಯಾಬ್ರಿಕ್ ಹೊಂದಿದ್ದರಂತೂ ಆರಾಮ ಎಂದೆನಿಸುತ್ತದೆ ಎನ್ನುತ್ತಾರೆ ಡಿಸೈನರ್‌ಗಳು.
ಸಾಲಿಡ್ ಕಲರ್ಸ್‌ನ ಸ್ಲಿಮ್ ಫಿಟ್ ಕುರ್ತಾಗಳು
ಮೊದಲೆಲ್ಲಾ ಕುರ್ತಾ ಎಂದಾಕ್ಷಣಾ ಮಂಡಿಯಿಂದ ಕೆಳಗಿನ ತನಕ ಹಾಗೂ ದೊಗಲೆ ಉಡುಪು ಎಂದು ಭಾವಿಸಲಾಗುತ್ತಿತ್ತು. ಈಗ ಹಾಗಿಲ್ಲ! ಇವುಗಳಲ್ಲೂ ಸ್ಲಿಮ್ ಫಿಟ್ ಕುರ್ತಾಗಳು ಬಂದಿವೆ. ಇವು ಯುವಕರ ದೇಹಕ್ಕೆ ಸರಿಯಾಗಿ ಫಿಟ್ ಆಗಿ ಕೂರುವುದರಿಂದ ದೊಗಲೆಯಾಗಿ ಕಾಣುವುದಿಲ್ಲ! ನೋಡಲು ಆಕರ್ಷಕವಾಗಿ ಕಾಣುತ್ತದೆ. ಪೈಜಾಮ ಧರಿಸದೇ ಜೀನ್ಸ್ ಧರಿಸಿದರೂ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್ ದಿವಾಕರ್.
ಹಬ್ಬದ ಆಕರ್ಷಕ ಕುರ್ತಾ ಆಯ್ಕೆ ಹೀಗಿರಲಿ
- ಆದಷ್ಟೂ ಡಿಸೈನ್ ಇರುವಂತಹದ್ದನ್ನು ಆಯ್ಕೆ ಮಾಡಿ.
- ಸಾಲಿಡ್ ಕಲರ್‌ಗಳ ಕುರ್ತಾಗಳು ಇಂದು ಟ್ರೆಂಡಿಯಾಗಿವೆ.
- ಕುರ್ತಾಗೆ ಜೀನ್ಸ್ ಪ್ಯಾಂಟ್ ಮ್ಯಾಚ್ ಮಾಡಬಹುದು.
- ಎಲ್ಬೋ ಸ್ಲೀವ್‌ನ ಬಟನ್ ಹಾಕುವಂತಹ ಕುರ್ತಾಗಳು ದೊರೆಯುತ್ತಿವೆ.
- ಧರಿಸಿದಾಗ ಕುರ್ತಾಗೆ ಎಲ್ಲಾ ಬಟನ್ ಹಾಕಬೇಕಾಗಿಲ್ಲ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Jewel Fashion: ಯುಗಾದಿ ಹಬ್ಬದ ಗ್ರ್ಯಾಂಡ್ ಲುಕ್‌ಗೆ ಟ್ರೆಂಡಿಯಾದ ಮಿಕ್ಸ್ ಮ್ಯಾಚ್ ಆಭರಣಗಳು
ಫ್ಯಾಷನ್
Benefits Of Pongame: ಬಹೂಪಯೋಗಿ ಹೊಂಗೆ: ಏನೇನಿವೆ ಇದರ ಸದ್ಗುಣಗಳು?
ಹೊಂಗೆಯಲ್ಲಿ ರೋಗನಾಶಕ ಗುಣಗಳಿವೆ. ಉರಿಯೂತ ಶಮನ ಮಾಡುವ ಸಾಮರ್ಥ್ಯವೂ ಇದೆ. ಸೋಂಕು ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಇನ್ನೂ ಏನೇನಿವೆ ಹೊಂಗೆಯ ಉಪಯೋಗ? (benefits of pongame) ತಿಳಿಯೋಣ ಬನ್ನಿ
ʻಹೊಂಗೆ ಹೂವ ತೊಂಗಲಲ್ಲಿ/ ಭೃಂಗದ ಸಂಗೀತ ಕೇಲಿ/ ಮತ್ತೆ ಕೇಳಬರುತಿದೆʼ ಎಂಬ ಕವಿವಾಣಿಯಂತೆ ಹೊಂಗೆ ಮರಗಳೆಲ್ಲಾ ಹೂವು ಬಿಟ್ಟು, ದಾರಿಯುದ್ದಕ್ಕೂ ಘಮ ಬೀರುತ್ತಿವೆ. ಮರದ ತುಂಬೆಲ್ಲಾ ಎಳೆಹಸಿರು ಚಪ್ಪರ, ಅದರ ಸುತ್ತೆಲ್ಲಾ ಭೃಂಗಗಳ ಕಲರವ, ಮರದಡಿಗೆಲ್ಲಾ ಹೂವುಗಳ ಹಾಸಿಗೆ- ಯುಗಾದಿಯ ಹೊತ್ತಿಗೆ ಹೊಸದಾಗಿ ಮೈ ತಳೆದು ನಿಲ್ಲುವ ಹೊಂಗೆ ಮರದ ತುಂಬೆಲ್ಲಾ ಹೊಸಜೀವದ ಸಂಚಾರ.
ಹೊಂಗೆ ಮರದಡಿಗೆಲ್ಲಾ ಹಾಸಿಗೆಯಂತೆ ಹರಡುವ ಹೂವುಗಳನ್ನು ಗುಡಿಸಿ ಗೊಬ್ಬರ ಮಾಡುವುದರಿಂದ ಹಿಡಿದು, ಹೊಂಗೆ ಎಣ್ಣೆಯ ದೀಪ ಉರಿಸಿ, ಹೊಂಗೆಯ ನೆರಳು- ತಾಯಿಯ ಮಡಿಲು ಎನ್ನುವವರೆಗೆ ಹೊಂಗೆ ಬಹೂಪಯೋಗಿ. ಈ ಮರದ ಬೇರು, ಎಲೆ, ಕಾಯಿ, ಹೂವು, ಚಕ್ಕೆ, ಕಡೆಗೆ ನೆರಳಿನವರೆಗೆ ಎಲ್ಲವೂ ನಮಗೆ ಉಪಯುಕ್ತ. ಹೊಂಗೆ ಮರಗಳೇ ಇರುವ ದಾರಿಗಳಲ್ಲಿ ಬಿರುಬೇಸಿಗೆಯ ಬಿಸಿಲೂ ತಾಗದಂತೆ ತಂಪಾಗಿ ನಡೆಯಬಹುದು. ಬೇಸಿಗೆಯ ಹೊಂಗೆಯಲ್ಲಿ ರೋಗನಾಶಕ ಗುಣಗಳ ಢಾಳಾಗಿದ್ದು, ಉರಿಯೂತ ಶಮನ ಮಾಡುವ ಸಾಮರ್ಥ್ಯವೂ ಇದೆ. ಸೋಂಕು ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಏನೇನಿವೆ ಹೊಂಗೆಯ ಉಪಯೋಗ (benefits of pongame) ತಿಳಿಯೋಣ ಬನ್ನಿ
ಅಜೀರ್ಣ ಪರಿಹಾರಕ್ಕೆ
ಜಠರಾಗ್ನಿ ಮಂದವಾಗಿ ಆಹಾರ ಸರಿಯಾಗಿ ಪಚನವಾಗದಿರುವ ಸಂದರ್ಭದಲ್ಲಿ ಕಾರಂಜ ಅಥವಾ ಹೊಂಗೆಯನ್ನು ಜೀರ್ಣಕ್ರಿಯೆಯ ಉದ್ದೀಪನಕ್ಕಾಗಿ ಬಳಸಲಾಗುತ್ತದೆ. ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಿಸಿ, ಅಜೀರ್ಣದ ದೋಷವನ್ನು ನಿವಾರಣೆ ಮಾಡುವುದಕ್ಕೆ ಕಾರಂಜವನ್ನು ಚೂರ್ಣದ ರೀತಿಯಲ್ಲಿ ಬಳಸುವ ಪದ್ಧತಿಯಿದೆ
ಆರ್ಥರೈಟಿಸ್ ಶಮನಕ್ಕೆ
ಸಂಧಿವಾತದ ನಿವಾರಣೆಗೆ ಹೊಂಗೆ ಬಳಕೆಯಲ್ಲಿದೆ. ವಾತವನ್ನು ತಡೆಯುವ ಗುಣ ಹೊಂಗೆಯಲ್ಲಿದೆ. ಹಾಗೆಂದೇ ದೇಹದಲ್ಲಿರುವ ಉರಿಯೂತವನ್ನು ತಗ್ಗಿಸುತ್ತದೆ ಎಂದು ಹೊಂಗೆಯನ್ನು ಗುರುತಿಸಲಾಗಿದೆ. ಕೀಲುಗಳ ನೋವಿಗೆ ಪರಿಣಾಮಕಾರಿ ಔಷಧವಿದು.
ಶೀತ-ಕೆಮ್ಮಿಗೆ
ಮಳೆಗಾಲ, ಚಳಿಗಾಲದಲ್ಲಿ ಋತುಮಾನದ ಬದಲಾವಣೆಯ ಹೊತ್ತಿಗೆ ಕಾಣಿಸಿಕೊಳ್ಳುವ ಶೀತ- ಕೆಮ್ಮಿಗೆ ಇದು ಪರಿಣಾಮಕಾರಿ ಔಷಧ. ಎದೆಭಾರವಾಗಿ ಕಫ ಬಿಗಿದಂತಾದಾಗಲೂ ಕಾರಂಜ ಚೂರ್ಣ ಸಹಕಾರಿ. ದಮ್ಮು, ಅಸ್ತಮಾದಂಥ ಅವಸ್ಥೆಯಲ್ಲೂ ಹೊಂಗೆಯನ್ನು ಬಳಸುವ ಪರಿಪಾಠವಿದೆ.
ಚರ್ಮದ ಸಮಸ್ಯೆಗಳಿಗೆ
ಹಲವು ರೀತಿಯ ಚರ್ಮದ ಸಮಸ್ಯೆಗಳಿಗೆ ಹೊಂಗೆ ಎಣ್ಣೆಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಸುಣ್ಣ ಗಾಯ, ಇಸುಬು, ತೊನ್ನುಗಳಿಗೆ ಹೊಂಗೆಯ ಉಪಚಾರ ಬಳಕೆಯಲ್ಲಿದೆ. ಹೊಂಗೆ ಎಣ್ಣೆಯ ಸೋಂಕು ನಿರೋಧಕ ಗುಣ ಈ ನಿಟ್ಟಿನಲ್ಲಿ ಪರಿಣಾಮಕಾರಿ. ಕೊಬ್ಬರಿ ಎಣ್ಣೆಯೊಂದಿಗೆ ಹೊಂಗೆ ಎಣ್ಣೆಯನ್ನು ಬೆರೆಸಿ ನಿಯಮಿತವಾಗಿ ಲೇಪಿಸಲಾಗುತ್ತದೆ. ಹೊಂಗೆ ಬೇರಿನ ಕಷಾಯವನ್ನು ರೋಸ್ ವಾಟರ್ ಜೊತೆ ಸೇರಿಸಿ ಬಳಸಲಾಗುತ್ತದೆ. ಮುಖದ ಮೊಡವೆಗಳಿಗೆ ಬೇವಿನೆಣ್ಣೆ ಬಳಸಿದಂತೆ ಹೊಂಗೆ ಎಣ್ಣೆ ಬಳಕೆ ಮಾಡುವುದು ಸರಿಯಲ್ಲ. ಮಾತ್ರವಲ್ಲ, ಅತಿಸೂಕ್ಷ್ಮ ಚರ್ಮದವರು ಹೊಂಗೆ ಎಣ್ಣೆ ಬಳಕೆಯ ಮುನ್ನ ತಜ್ಞರಲ್ಲಿ ಸಲಹೆ ಕೇಳುವುದು ಒಳ್ಳೆಯದು.
ಬಾಯಿ ಹುಣ್ಣಾದಾಗಲೂ ಇದರ ಬಳಕೆ ಜಾರಿಯಲ್ಲಿದೆ. ಕೊಬ್ಬರಿ ಎಣ್ಣೆಯೊಂದಿಗೆ ಒಂದೆರಡು ಹನಿ ಹೊಂಗೆ ಎಣ್ಣೆ ಬೆರೆಸಿ (ಕಹಿ ರುಚಿಯ ಎಣ್ಣೆಯಿದು) ಬಾಯಿಯ ಹುಣ್ಣಿಗೆ ನೇರವಾಗಿ ಲೇಪಿಸಬಹುದು. ಬೇವಿನ ಕಡ್ಡಿಗಳನ್ನು ಹಲ್ಲುಜ್ಜಲು ಬಳಸಿದಂತೆ, ಹೊಂಗೆಯ ಕಡ್ಡಿಗಳನ್ನೂ ಹಿಂದಿನ ಕಾಲದಲ್ಲಿ ಹಲ್ಲುಜ್ಜಲು ಬಳಸುತ್ತಿದ್ದರಂತೆ. ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೂ ಇದು ಉಪಕಾರಿ. ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ, ಆಸನದಲ್ಲಿ ಮೊಳೆ ಇರುವಲ್ಲಿ ಹಚ್ಚುವ ಕ್ರಮವಿದೆ.
ಕೂದಲ ಆರೈಕೆಗೆ
ಚಿಕ್ಕ ಮಕ್ಕಳ ತಲೆಯ ಹೇನುಗಳ ನಿವಾರಣೆಗೆ, ಇದನ್ನು ತಲೆಗೆ ಮಸಾಜ್ ಮಾಡಿ ಶಾಂಪೂವಿನಿಂದ ತೊಳೆಯುವ ಕ್ರಮವಿದೆ. ತಲೆಗೆ ಹಾಕುವ ಕೊಬ್ಬರಿ ಎಣ್ಣೆಯ ಜೊತೆಗೆ ಕೆಲವು ಹನಿ ಹೊಂಗೆ ಎಣ್ಣೆಯನ್ನೂ ಬೆರೆಸುವುದರಿಂದ ತಲೆಯ ಚರ್ಮದ ಸೋಂಕಿದ್ದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ತಲೆ ಹೊಟ್ಟು ನಿಯಂತ್ರಣಕ್ಕೂ ಇದು ಪರಿಣಾಮಕಾರಿ
ಇದನ್ನೂ ಓದಿ: Health Tips: ತಂಪು ತಂಪು ಕೂಲ್ ಕೂಲ್ ಈ ಲಾವಂಚ ಎಂಬ ಬೇಸಿಗೆಯ ಬಂಧು!
ಫ್ಯಾಷನ್
Ugadi Makeup Trend: ಸ್ತ್ರೀಯರ ಯುಗಾದಿ ಸಂಭ್ರಮಕ್ಕೆ ಸ್ಪೆಷಲ್ ಫೆಸ್ಟಿವ್ ಮೇಕಪ್ ಮಂತ್ರ
ಈ ಬಾರಿಯ ಯುಗಾದಿ ಸಂಭ್ರಮ ಹೆಚ್ಚಿಸಲು ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಆಕರ್ಷಕ ಫೆಸ್ಟೀವ್ ಮೇಕಪ್ (Ugadi Makeup Trend) ಮಾಡಿ ಎನ್ನುತ್ತಾರೆ ಮೇಕಪ್ ಎಜುಕೇಟರ್ ರಾಶಿ ಮೇಘನಾ. ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬದ ಸಂಭ್ರಮಕ್ಕೆ ನಾನಾ ಬಗೆಯ ಫೆಸ್ಟಿವ್ ಮೇಕಪ್ ಕಾನ್ಸೆಪ್ಟ್‌ಗಳು ಕಾಲಿಟ್ಟಿವೆ. ಟ್ರೆಡಿಷನಲ್ ಸೀರೆ ಹಾಗೂ ಉಡುಗೆಯೊಂದಿಗೆ ಸುಂದರವಾಗಿ ಕಾಣಿಸಲು ಈ ಮೇಕಪ್‌ಗಳು (Ugadi Makeup Trend) ಸಹಕಾರಿಯಾಗಲಿವೆ. ಇದೀಗ ಟ್ರೆಂಡಿ ಮೇಕಪ್ ಲಿಸ್ಟ್‌ನಲ್ಲೂ ಇವು ಸೇರಿಕೊಂಡಿವೆ. ಫೆಸ್ಟಿವ್ ಮೇಕಪ್ ಪ್ರಿಯರು ಇದಕ್ಕಾಗಿ ಮೇಕಪ್ ಹಾಗೂ ಡ್ರೆಸ್ ಮಾಡಿಕೊಳ್ಳುವ ಮುನ್ನ ಒಂದಿಷ್ಟು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಮೇಕಪ್ ಎಜುಕೇಟರ್ ರಾಶಿ ಸೃಜನ್. ಈ ಬಗ್ಗೆ ಒಂದಿಷ್ಟು ಸಿಂಪಲ್ ಮಾಹಿತಿ ಕೂಡ ನೀಡಿದ್ದಾರೆ. ಅವರ ಪ್ರಕಾರ, ಹಬ್ಬಗಳಲ್ಲಿ ಆದಷ್ಟೂ ಆಕರ್ಷಕವಾಗಿ ಕಾಣುವಂತಹ ಮೇಕಪ್‌ಗೆ ಮೊರೆ ಹೋಗಬೇಕು ಎನ್ನುತ್ತಾರೆ.
ಹಬ್ಬದ ಲುಕ್‌ಗೆ ಹೀಗಿರಲಿ ಮೇಕಪ್
ಸೀರೆ, ಲಂಗ-ದಾವಣಿ, ಉದ್ದ ಲಂಗ ಹಾಗೂ ನಾರ್ತ್ ಇಂಡಿಯನ್ ಶೈಲಿಯ ಗಾಗ್ರ, ಲೆಹೆಂಗಾಗಳಿಗೆ ತಕ್ಕಂತೆ ಮೇಕಪ್ ಆಯ್ಕೆ ಮಾಡಿ. ಕೆಲವೊಮ್ಮೆ ಸೀಸನ್‌ವೈಸ್ ಮೇಕಪ್ ಮಾಡಿದರೂ ಅದು ನೀವು ಧರಿಸುವ ಉಡುಪುಗಳಿಗೆ ಮ್ಯಾಚ್ ಆಗದು. ಹಾಗಾಗಿ ನಿಮ್ಮ ತ್ವಚೆಗೆ ಹೊಂದುವಂತಹ ಮೇಕಪ್ ಪ್ರಾಡಕ್ಟ್‌ಗಳ ಆಯ್ಕೆಯಲ್ಲಿ ಜಾಣತನ ತೋರಬೇಕು. ಸೀರೆಗಾದಲ್ಲಿ ಆದಷ್ಟು ಟ್ರೆಡಿಷನಲ್ ಲುಕ್ ನೀಡುವ ಬಣ್ಣಗಳ ಬಳಕೆ ಮಾಡುವುದು ಉತ್ತಮ. ಅದು ಲಿಪ್‌ಸ್ಟಿಕ್ ಆಗಬಹುದು, ಇಲ್ಲವೇ ಐ ಶ್ಯಾಡೋ ಆಗಿರಬಹುದು. ಚೀಕ್ಸ್ ರೋಸ್ ಆಗಿರಬಹುದು.
ಫೆಸ್ಟಿವ್ ಮೇಕಪ್‌ಗೂ ಮುನ್ನ ತಿಳಿದಿರಬೇಕಾದ್ದು
ಇನ್ನು ಫೆಸ್ಟಿವ್ ಮೇಕಪ್ ವಿಷಯಕ್ಕೆ ಬಂದಲ್ಲಿ, ಹೈಡೆಫನೇಷನ್ ವಾಟರ್ ಪ್ರೂಫ್ ಮೇಕಪ್ ಸೌಂದರ್ಯವರ್ಧಕ ಬಳಸಿ. ಇದರಲ್ಲೂ ಸಾಮಾನ್ಯ, ಜಿಡ್ಡಿನಾಂಶ ಹಾಗೂ ಒಣ ಚರ್ಮಕ್ಕೆ ತಕ್ಕಂತೆ ಫೌಂಡೇಷನ್‌ಗಳನ್ನು ಬಳಸಿ.
ಮೇಕಪ್‌ಗೂ ಮೊದಲು ಕ್ಲೆನ್ಸಿಂಗ್ ಮಾಡಿರಿ. ನಂತರ ಆಯಿಲ್ ಫ್ರೀ ಸನ್‌ಸ್ಕ್ರೀನ್ ಹಚ್ಚಿ .ನಂತರ ಫೌಂಡೇಷನ್, ತದನಂತರ ಪೌಡರ್ ಹಚ್ಚಿ. ಐಬ್ರೊ ಪೆನ್ಸಿಲ್‌ನಿಂದ ಹುಬ್ಬಿಗೆ ಆಕರ ನೀಡಿ. ಮ್ಯಾಚಿಂಗ್ ಐ ಶ್ಯಾಡೋ ಲೇಪಿಸಿ. ಇದರಲ್ಲೂ ಪ್ರಯೋಗ ಮಾಡಬಹುದು. ಬೇಕಿದ್ದಲ್ಲಿ ಗ್ಲಿಟರನ್ನು ಲೇಪಿಸಬಹುದು. ನಂತರ ಮಸ್ಕರಾದಿಂದ ನಿಮಗೆ ಬೇಕಾದಂತೆ ಲೈನ್ ಎಳೆಯಿರಿ. ಐ ಲೈನರ್ ಹಾಗೂ ಕಾಡಿಗೆ ಹಚ್ಚಿ. ಬ್ಲಷರನ್ನು ಕೆನ್ನೆಗಳಿಗೆ ಹಚ್ಚಿ. ನಂತರ ಲಿಪ್ ಲೈನರ್ ತೀಡಿ. ನಿಮಗೆ ಇಷ್ಟವಾದ ಲಿಪ್‌ಸ್ಟಿಕ್ ಲೇಪಿಸಿ. ಉತ್ತಮ ಹೇರ್ ಸ್ಟೈಲ್ ಮಾಡಿ, ಡಿಸೈನರ್ ಬಿಂದಿ ಹಚ್ಚಿ. ಈಗ ನೀವು ಹಬ್ಬದ ಮೇಕಪ್‌ನಲ್ಲಿ ಬ್ರೈಟ್ ಆಗಿ ಕಾಣಿಸುತ್ತೀರಿ!
ಹಬ್ಬದ ಉಡುಪಿಗೆ ತಕ್ಕಂತಹ ಲಿಪ್‌ಸ್ಟಿಕ್ ಇರಲಿ
ಸ್ಕಿನ್ ಟೋನ್‌ಗೆ ತಕ್ಕಂತೆ ಲಿಪ್‌ಸ್ಟಿಕ್ ಲೇಪಿಸಿ. ಕೊಂಚ ತಿಳಿ ವರ್ಣದವಾರಾಗಿದ್ದರೇ ಯಾವ ಲಿಪ್‌ಸ್ಟಿಕ್ ಆದರೂ ಹೊಂದುತ್ತದೆ. ಡಸ್ಕಿ ಸ್ಕಿನ್ ಟೋನ್ ಆಗಿದ್ದಲ್ಲಿ ಆದಷ್ಟೂ ರೆಡ್ ಹೊರತುಪಡಿಸಿ ಇನ್ನುಳಿದ ವರ್ಣಗಳನ್ನು ಆಯ್ಕೆ ಮಾಡಬಹುದು. ಅದು ಉಡುಪಿನ ಬಣ್ಣಕ್ಕೆ ಹೊಂದುವಂತಿರಬೇಕು. ಮೇಕಪ್ ಗ್ರ್ಯಾಂಡ್ ಆಗಿದ್ದರೂ ಲೈಟಾಗಿರಲಿ. ನ್ಯಾಚುರಲ್ ಲುಕ್ ಇದ್ದರಂತೂ ನೋಡಲು ಮನಮೋಹಕವಾಗಿರುತ್ತದೆ ಎನ್ನುತ್ತಾರೆ ರಾಶಿ.
ಫೆಸ್ಟಿವ್ ಮೇಕಪ್ ಟಿಪ್ಸ್
- ಮೇಕಪ್‌ನಲ್ಲಿ ಕಲರ್‌ಗಳನ್ನು ಆಯ್ಕೆ ಮಾಡುವ ಮುನ್ನ ಮ್ಯಾಚ್ ಆಗ್ತುತದೆಯೇ ತಿಳಿದುಕೊಳ್ಳಿ.
- ಲಿಪ್‌ಲೈನರ್, ಗ್ಲೋಸ್, ಬ್ಲಷರ್ ಬಳಕೆ ಬಗ್ಗೆ ಮಾಹಿತಿ ಇರಲಿ.
- ಮುಖದ ಆಕಾರಕ್ಕೆ ತಕ್ಕಂತೆ ಶೇಪ್ ನೀಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Jewel Fashion: ಯುಗಾದಿ ಹಬ್ಬದ ಗ್ರ್ಯಾಂಡ್ ಲುಕ್‌ಗೆ ಟ್ರೆಂಡಿಯಾದ ಮಿಕ್ಸ್ ಮ್ಯಾಚ್ ಆಭರಣಗಳು
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ