Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ! - Vistara News

ಆಹಾರ/ಅಡುಗೆ

Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

Curd Rice Recipe: ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಮೊಸರನ್ನ ರುಚಿಕರ ಮಾಡಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.

VISTARANEWS.COM


on

Curd Rice Recipe
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಕ್ಷಿಣ ಭಾರತೀಯರಿಗೆ ಮೊಸರನ್ನ ಎಂದರೆ ಅಮೃತದ ಹಾಗೆ. ಏನೂ ಇಲ್ಲದ ಹೊತ್ತಲ್ಲಿ, ಹೊಟ್ಟೆ ತಣ್ಣಗಿರಲು ಬಯಸುವ ಹೊತ್ತಲ್ಲಿ, ಬೇಸಿಗೆಯ ಬಿಸಿಲಿಗೆ ದಣಿದು ಬಂದಾಗ ನೆನಪಾಗುವುದು ಮೊಸರನ್ನ. ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಇಷ್ಟು ಸಿಂಪಲ್‌ ಮೊಸರನ್ನವನ್ನು ಮಾಡುವುದೂ ಕೂಡಾ ಯಾಕೆ ಬರುವುದಿಲ್ಲ ಎಂದು ಕೆಲವೊಮ್ಮೆ ಗೊಂದಲವೂ ಆಗಬಹುದು. ಆದರೆ, ಎಷ್ಟೇ ಸಿಂಪಲ್‌ ಆದರೂ ರುಚಿಯಾದ ಮೊಸರನ್ನ ಮಾಡುವುದೂ ಕೂಡಾ ಒಂದು ಕಲೆ. ಯಾಕೆಂದರೆ ರುಚಿಯಾದ ಮೊಸರನ್ನದ ಗುಟ್ಟು ಅಡಗಿರುವುದು ಅದರ ಕ್ರೀಮೀಯಾದ ಸ್ವರೂಪದಲ್ಲಿ. ಅದು ಹೆಚ್ಚು ತೆಳುವೂ ಆಗಿರಬಾರದು, ಗಟ್ಟಿಯೂ ಆಗಿರಬಾರದು. ಹದವಾದ ಕ್ರೀಮಿನಂತೆ ಬಾಯಿಗಿಟ್ಟರೆ ಐಸ್‌ಕ್ರೀಮಿನಂತೆ ಕರಗುವ, ಹೊಟ್ಟೆ ತಂಪೆನಿಸುವ ಮೊಸರನ್ನವನ್ನು ನೀವು ಮನೆಯಲ್ಲಿ ಮಾಡುವುದಿದ್ದರೆ ಈ ಸಿಂಪಲ್‌ (Curd Rice Recipe) ವಿಚಾರಗಳನ್ನು ಮರೆಯದಿರಿ.

Health Benefits Of Curd Rice

ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ

ಯಾವುದೋ ಅನ್ನವನ್ನು ಮೊಸರನ್ನಕ್ಕೆ ಬಳಸಬೇಡಿ. ಮೊಸರನ್ನಕ್ಕೆ ಬಳಸುವ ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ. ಯಾಕೆಂದರೆ ಇಲ್ಲಿ ಅನ್ನಕ್ಕೆ ಬಹಳ ಮುಖ್ಯ ಪಾತ್ರವಿದೆ. ಬಾಸುಮತಿ ಅಕ್ಕಿಯ ಅನ್ನವಾದರೆ ಒಳ್ಳೆಯ ಘಮ ಹಾಘೂ ರುಚಿಯೂ ಬರುತ್ತದೆ. ಅಷ್ಟೇ ಅಲ್ಲ, ಅಕ್ಕಿಗೆ ಬೇಯಲು ಸರಿಯಾದ ಸಮಯ ಕೊಡಿ. ಅತಿಯಾಗದಂತೆ, ಹಾಗೆ ಕಡಿಮೆಯೂ ಆಗದಂತೆ ಅಕ್ಕಿಯನ್ನು ಬೇಯಿಸಬೇಕು.

ತಾಜಾ ಮೊಸರನ್ನೇ ಬಳಸಿ

ಯಾವಾಗಲೂ, ಉಳಿದ ಮೊಸರನ್ನು, ಬೇಡವಾದ ಮೊಸರನ್ನು ಮೊಸರನ್ನಕ್ಕೆ ಬಳಸಬೇಡಿ. ತಾಜಾ ಮೊಸರನ್ನೇ ಬಳಸಿ. ಹುಳಿ ಬಂದ ಮೊಸರು ಇದಕ್ಕೆ ಸಲ್ಲ. ಮನೆಯಲ್ಲೇ ಮಾಡಿದ ಮೊಸರಾದರೆ ಒಳ್ಳೆಯದು. ಅನ್ನ ಬೆಂದು ತಣಿದ ಮೇಲಷ್ಟೇ ಮೊಸರನ್ನು ಅನ್ನಕ್ಕೆ ಸೇರಿಸಿ. ಇಷ್ಟು ತಾಳ್ಮೆ ನಿಮ್ಮಲ್ಲಿದ್ದರೆ ರುಚಿಯಾದ ಮೊಸರನ್ನ ಮಾಡಬಹುದು.

Curd Rice

ಕೆನೆಯನ್ನೂ ಇದಕ್ಕೆ ಹಾಕಬಹುದು

ಮೊಸರನ್ನ ರುಚಿಯಾಗಿ ಬರಬೇಕೆಂದರೆ ಹಾಲಿನ ಕೆನೆಯನ್ನೂ ಇದಕ್ಕೆ ಹಾಕಬಹುದು. ಫ್ರೆಶ್‌ ಕ್ರೀಮನ್ನು ಇದಕ್ಕೆ ಹಾಕಿದರೆ ಅಂತಹ ಟೆಕ್ಷ್ಚರ್‌ ಪಡೆಯಬಹುದು. ಇಷ್ಟವಾಗದೆ ಇದ್ದರೆ ಹಾಕದೆಯೂ ಇರಬಹುದು. ಇದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ, ಕ್ರೀಂ ಹಾಕುವಾಗ ಹಾಲನ್ನೂ ಸ್ವಲ್ಪ ಸೇರಿಸಲು ಮರೆಯದಿರಿ.

ಮೊಸರಿಗೆ ಏನು ಹಾಕಬೇಕು?

ಮೊಸರನ್ನ ಎಂದರೆ ಬಹಳ ಮಂದಿ, ಮೊಸರು ಹಾಗೂ ಅನ್ನ ಎಂದಷ್ಟೇ ತಿಳಿದುಕೊಳ್ಳುವವರಿದ್ದಾರೆ. ಆದರೆ, ಮೊಸರನ್ನ ರುಚಿಯಾಗಲು ಇದು ಬಿಟ್ಟು ಬೇರೆ ಕೆಲವು ವಿಚಾರಗಳೂ ಮುಖ್ಯವಾಗುತ್ತದೆ. ಕೆಲವು ತರಕಾರಿ, ಹಣ್ಣುಗಳನ್ನು ಸೇರಿಸುವ ಮೂಲಕವೂ ಮೊಸರನ್ನ ಅಮೃತವಾಗಿ ಬದಲಾಗುತ್ತದೆ. ಮುಖ್ಯವಾಗಿ, ಕ್ಯಾರೆಟ್‌, ಸೌತೆಕಾಯಿ, ಮಾವು, ದಾಳಿಂಬೆ ಇತ್ಯಾದಿಗಳು ಮೊಸರನ್ನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಇದನ್ನೂ ಓದಿ: Hair Growth Tips: ಕೂದಲಿನ ಆರೈಕೆಯಲ್ಲಿ ಮೆಂತೆಯ ಜಾದೂ ಕಂಡಿದ್ದೀರಾ?

ಒಗ್ಗರಣೆ ಮರೆಯಬೇಡಿ

ಒಗ್ಗರಣೆ ಹಾಕುವುದರಲ್ಲಿ ಕಂಜೂಸಿತನ ತೋರಿಸಬೇಡಿ. ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಗೋಡಂಬಿ, ಕರಿಬೇವನ್ನು ಧಾರಾಳವಾಗಿ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯಿಂದ ಮೊಸರನ್ನಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬುದನ್ನು ನೆನಪಿಡಿ. ಕರಿಬೇವು ಇಲ್ಲವಾದರೆ ಚಿಂತಿಸಬೇಡಿ. ಕೊತ್ತಂಬರಿ ಸೊಪ್ಪಾದರೂ ಸೈ. ಆದರೆ, ಒಗ್ಗರಣೆಯನ್ನು ಎಂದಿಗೂ ಮರೆಯಬೇಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Pralhad Joshi: ಬೇಳೆ ದರ ಇಳಿಕೆಗೆ ಕೇಂದ್ರದಿಂದ ಕ್ರಮ: ಪ್ರಲ್ಹಾದ್‌ ಜೋಶಿ

Pralhad Joshi: ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ- ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಸೂಚಿಸಿದ್ದಾರೆ.

VISTARANEWS.COM


on

Action to reduce pulses price says Union Minister Pralhad Joshi
Koo

ನವದೆಹಲಿ: ಬೇಳೆ-ಕಾಳು ಬೆಲೆ ಇಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನವದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಸಚಿವರು ಈ ಬಗ್ಗೆ ತ್ವರಿತ ಕ್ರಮಕ್ಕೆ ಸಲಹೆ ನೀಡಿದ್ದಾರೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ- ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಧಾನ್ಯಗಳು ಲಭಿಸುವಂತೆ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಸಚಿವರು ಇದೇ ವೇಳೆ ಹೇಳಿದರು.

ಇದನ್ನೂ ಓದಿ: Karnataka Rain: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿ; ಕುಸಿದ ಸೇತುವೆಗಳು!

ಸಣ್ಣ ಸಣ್ಣ ವ್ಯಾಪಾರದ ಮಳಿಗೆಗಳಲ್ಲಿ ಮಾತ್ರ ತೊಗರಿ, ಉದ್ದು, ಕಡಲೆ ಬೇಳೆ ಬೆಲೆ ಇಳಿಸಲಾಗಿದೆ. ಆದರೆ, ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಬೆಲೆ ಇಳಿಸದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬೇಳೆಗಳ ಬೆಲೆಯನ್ನು ಕೂಡಲೇ ಇಳಿಸುವಂತೆ ಈ ದೊಡ್ಡ ವರ್ತಕರಿಗೂ ಸೂಚನೆ ನೀಡಲಾಗಿದೆ. ಈ ನಿರ್ದೇಶನ ಅನುಸರಿಸಲು ವಿಫಲವಾದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ

2025ಕ್ಕೆ ಜಿಡಿಪಿ ಶೇ.7ರಷ್ಟು ಬೆಳವಣಿಗೆ

ಐಎಂಎಫ್ ವರದಿ ಪರಿಷ್ಕರಿಸಿದ್ದು, 2025 ರಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ಶೇ.7 ರಷ್ಟು ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕತೆಯ ಸಾಲಿನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬುದಕ್ಕೆ ಐಎಂಎಫ್‌ನ ಈ ವರದಿಯೇ ನಿದರ್ಶನ ಎಂದು ಜೋಶಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

ಭಾರತದ ಬೆಳವಣಿಗೆಯು ಆರ್ಥಿಕ ವರ್ಷ 2025 ರಲ್ಲಿ ಶೇ.7ರಷ್ಟು ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆ ನೀಡಿದ್ದು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಬಣ್ಣಿಸಿದ್ದಾರೆ.

Continue Reading

ಆರೋಗ್ಯ

Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

ಕೊಬ್ಬಿನ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಅತಿಯಾಗಿ ಸೇವಿಸಿ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮಳೆಗಾಲ ಬಂದಾಗ ಇದೆಲ್ಲ ಸವಿಯುವ ಬಯಕೆ ಹುಟ್ಟುತ್ತದೆ. ಈ ಮಳೆಗಾಲದಲ್ಲಿ ಹೃದಯದ ಆರೋಗ್ಯವನ್ನು (Healthy Heart Tips) ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸುವುದು ಕೂಡ ಮುಖ್ಯ. ಅಲ್ಲದೆ ಈ ಏಳು ಆಹಾರಗಳಿಂದ ದೂರವಿದ್ದರೆ ಒಳ್ಳೆಯದು.

VISTARANEWS.COM


on

By

Healthy Heart Tips
Koo

ಮಳೆಗಾಲವೆಂದರೆ (rainy season) ದೇಹಕ್ಕೆ ಹಿತವಲ್ಲದೇ ಇದ್ದರೂ ನಾಲಗೆಗೆ ರುಚಿಯಾಗುವ ಖಾದ್ಯಗಳನ್ನು ಸವಿಯಬೇಕು ಎಂದೇ ಬಯಸುತ್ತೇವೆ. ಬಿಸಿಬಿಸಿ ಬೋಂಡಾ, ಪಕೋಡಾ, ಕುರುಕಲು ತಿನಿಸಿಗಳು ನೆನದಾಗಲೇ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಆದರೆ ಆರೋಗ್ಯವನ್ನು (health) ಕಾಪಾಡಲು ಬಯಸುವವರು ಮತ್ತು ಹೃದ್ರೋಗದ ಅಪಾಯದಿಂದ (Healthy Heart Tips) ಪಾರಾಗಲು ಮಳೆಗಾಲದಲ್ಲಿ ಇಂತಹ ತಿಂಡಿಗಳಿಂದ ದೂರವಿದ್ದರೆ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಈ 7 ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ.

ಮಳೆಗಾಲದಲ್ಲಿ ವಿವಿಧ ರೋಗಗಳ ಅಪಾಯ ಹೆಚ್ಚಾಗಿರುತ್ತದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಪರೀಕ್ಷಿಸುತ್ತದೆ. ಆದ್ದರಿಂದ ಪರಿಹರಿಸಲೇಬಕಾದ ಕೆಲವೊಂದು ಆರೋಗ್ಯ ಸಮಸ್ಯೆಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಅಧಿಕ ಕೊಲೆಸ್ಟ್ರಾಲ್ ಕೂಡ ಒಂದು. ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ನಮ್ಮ ಆಹಾರ ಪದ್ಧತಿ ಪ್ರಮುಖ ಪಾತ್ರವಹಿಸುತ್ತದೆ.

ಮಳೆಯನ್ನು ಆನಂದಿಸಲು ನಾವು ಸಾಮಾನ್ಯವಾಗಿ ಮೆಲ್ಲುವ ಕರಿದ ಆಹಾರ ಮತ್ತು ತಿಂಡಿಗಳು ನಮ್ಮ ಹೃದಯದ ಆರೋಗ್ಯವನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯದ ತೊಂದರೆಗಳನ್ನು ಹೆಚ್ಚು ಮಾಡುವ ಅಪಾಯವಿದೆ.

ಮಳೆಗಾಲದಲ್ಲಿ ತಿನ್ನಲೇಬಾರದ 7 ಆಹಾರಗಳು

ಅನಾರೋಗ್ಯಕರ ಮತ್ತು ಹೃದಯದ ಸಮಸ್ಯೆಗಳನ್ನು ಉಂಟುಮಾಡುವ 7 ಆಹಾರಗಳ ಬಗ್ಗೆ ತಿಳಿದುಕೊಂಡು ಈ ವರ್ಷದಿಂದಲೇ ಮಳೆಗಾಲದಲ್ಲಿ ಇಂತಹ ಆಹಾರದಿಂದ ದೂರವಿರೋಣ.

Healthy Heart Tips


ಸಂಸ್ಕರಿಸಿದ ಮಾಂಸ

ಕುರಿ ಮರಿ ಮತ್ತು ಕೋಳಿಯಂತಹ ಸಂಸ್ಕರಿಸಿದ ಪ್ರಾಣಿಗಳ ಮಾಂಸವನ್ನು ಸೇವಿಸುವುದನ್ನು ಮಳೆಗಾಲದಲ್ಲಿ ಕಡಿಮೆ ಮಾಡಬೇಕು. ಯಾಕೆಂದರೆ ಅವುಗಳ ಮೇಲೆ ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚು. ಮಳೆಯ ದಿನಗಳಲ್ಲಿ ತೇವಾಂಶವು ಆಹಾರದ ಮೇಲೆ ಬ್ಯಾಕ್ಟೀರಿಯಾವನ್ನು ನಿರ್ಮಿಸಲು ಕಾರಣವಾಗಬಹುದು ಮತ್ತು ಆಹಾರ ವಿಷವನ್ನಾಗಿ ಪರಿವರ್ತಿಸಬಹುದು.

Healthy Heart Tips


ಡೀಪ್ ಫ್ರೈಡ್ ಫುಡ್

ಆಳವಾದ ಕರಿದ ಆಹಾರವನ್ನು ಸೇವಿಸುವುದನ್ನು ಮಳೆಗಾಲದಲ್ಲಿ ತಪ್ಪಿಸಬೇಕು. ಅವುಗಳನ್ನು ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಕ್ಯಾಲೋರಿ ಎಣ್ಣೆಯಲ್ಲಿ ಹುರಿಯಲಾಗುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದು ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಹಾನಿ ಮಾಡುವ ಆಹಾರವನ್ನು ನಾವು ಸೇವಿಸಿದರೆ ದೇಹದ ರಕ್ಷಣಾ ಕಾರ್ಯವಿಧಾನವನ್ನು ದುರ್ಬಲಗೊಳಿಸಬಹುದು.

Healthy Heart Tips


ಉಪ್ಪಿನಾಂಶ ಇರುವ ಬೀಜಗಳು

ಕೇವಲ ಬೀಜಗಳು ಆರೋಗ್ಯಕ್ಕೆ ಅತ್ಯತ್ತಮ ಪೋಷಕಾಂಶದ ಮೂಲವಾಗಿರುತ್ತದೆ. ಚಹಾ, ಕಾಫಿಯೊಂದಿಗೆ ಇದರ ಸೇವನೆ ಒಳ್ಳೆಯದಾಗುತ್ತದೆಯಾದರೂ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಉಪ್ಪನ್ನು ತಿನ್ನುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಮತ್ತು ಹೃದ್ರೋಗದ ಅಪಾಯವನ್ನುಂಟು ಮಾಡುತ್ತದೆ ಎಂಬ ಅಂಶವನ್ನು ತಿಳಿದಿರಬೇಕು. ಉಪ್ಪು ಬೀಜಗಳು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ ಮತ್ತು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುವುದಿಲ್ಲ. ಆದ್ದರಿಂದ ಉಪ್ಪು ಮತ್ತು ಮಸಾಲೆಯುಕ್ತ ಬೀಜಗಳನ್ನು ತಿನ್ನುವುದನ್ನು ತಪ್ಪಿಸಿ.

Healthy Heart Tips


ಸಮುದ್ರಾಹಾರಕ್ಕೆ ಮಿತಿ ಇರಲಿ

ಒಮೆಗಾ -3 ಕೊಬ್ಬಿನಾಮ್ಲ ಹೊಂದಿರುವ ಮೀನುಗಳಲ್ಲಿರುವ ಪೋಷಕಾಂಶಗಳ ಕಾರಣದಿಂದಾಗಿ ಹೃದಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಮಳೆಗಾಲದಲ್ಲಿ ಅವುಗಳ ಹೆಚ್ಚು ಸೇವನೆ ಒಳ್ಳೆಯದಲ್ಲ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಮಳೆಗಾಲದಲ್ಲಿ ಜಲಮೂಲಗಳನ್ನು ಕಲುಷಿತಗೊಳಿಸುತ್ತದೆ ಮತ್ತು ಮೀನುಗಳಂತಹ ಸಮುದ್ರ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಲುಷಿತ ಸಮುದ್ರ ಆಹಾರವನ್ನು ತಿನ್ನುವುದು ಹೃದಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಮೀನು ತಿನ್ನಬೇಕು.

Healthy Heart Tips


ಪಿಜ್ಜಾ ಮತ್ತು ಬರ್ಗರ್

ಪಿಜ್ಜಾ ಮತ್ತು ಬರ್ಗರ್‌ಗಳು ಅನಾರೋಗ್ಯಕರ ಎಂದೇ ಪರಿಗಣಿಸಲಾಗಿದೆ. ಹೆಚ್ಚಿನ ಸೋಡಿಯಂ ಮತ್ತು ಕ್ಯಾಲೋರಿ ಆಹಾರಗಳಾಗಿರುವ ಇದರ ತಯಾರಿಕೆಯಲ್ಲಿ ಯಾವ ರೀತಿಯ ಹಿಟ್ಟು ಮತ್ತು ಎಣ್ಣೆಯನ್ನು ಬಳಸುತ್ತಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ಉತ್ತಮ ಹೃದಯದ ಆರೋಗ್ಯಕ್ಕಾಗಿ ಇವುಗಳನ್ನು ತ್ಯಜಿಸಲೇಬೇಕು.

Healthy Heart Tips


ಪ್ಯಾಕ್ ಮಾಡಲಾದ ಚಿಪ್ಸ್

ಪ್ಯಾಕ್ ಮಾಡಲಾದ ಆಲೂಗೆಡ್ಡೆ ಚಿಪ್ಸ್ ಮತ್ತು ಇತರ ತಿಂಡಿಗಳನ್ನು ಹೆಚ್ಚಿನ ಸೋಡಿಯಂನಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಸಂರಕ್ಷಕಗಳನ್ನು ಸೇರಿಸಲಾಗಿದೆ. ಅದು ಹೃದಯ ಸಮಸ್ಯೆಗಳ ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Noodles Side Effect: ಇನ್‌ಸ್ಟಂಟ್‌ ನೂಡಲ್‌‌ಗಳನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Healthy Heart Tips


ಎಣ್ಣೆಯುಕ್ತ ಆಹಾರಗಳು

ಆಲೂ ಟಿಕ್ಕಿ, ಚಾಟ್ ಮತ್ತು ಹೆಚ್ಚಿನ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಅವು ಸ್ಯಾಚುರೇಟೆಡ್ ಕೊಬ್ಬು ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಸರಾಗವಾದ ರಕ್ತದ ಹರಿವನ್ನು ತಡೆಯುವ ಅಪಧಮನಿಗಳಲ್ಲಿ ಪ್ಲೇಕ್ ಅನ್ನು ನಿರ್ಮಿಸಬಹುದು. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

Continue Reading

ವೈರಲ್ ನ್ಯೂಸ್

Viral Video: ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ಕಲ್ಲಂಗಡಿ ಹಣ್ಣಿನ ತಂದೂರಿ ಚಿಕನ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವಿಶಿಷ್ಟವಾದ ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿಯ ವಿಡಿಯೋವು ಆಹಾರಪ್ರಿಯರ ಗಮನವನ್ನು ಸೆಳೆದಿದೆ. ಎರಡೂ ಪದಾರ್ಥಗಳನ್ನು ಪ್ರತ್ಯೇಕವಾಗಿ ತಿಂದರೆ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಆದರೆ ಕಲ್ಲಂಗಡಿ ಒಳಗೆ ಕೋಳಿ ಹುರಿಯುವುದೇ? ಸರಿ, ಅದು ಸಂಪೂರ್ಣವಾಗಿ ಅಸಾಂಪ್ರದಾಯಿಕವೆಂದು ತೋರುತ್ತದೆ. ಈ ಬಗ್ಗೆ ನೆಟ್ಟಿಗರು ಏನು ಹೇಳಿದ್ದಾರೆ ಗೊತ್ತೇ? ಈ ಕುತೂಹಲಕರ ವಿಡಿಯೊ ನೋಡಿ.

VISTARANEWS.COM


on

By

Viral Video
Koo

ಯಾರೂ ಮಾಡದ, ಹೆಸರೇ ಕೇಳದ ಚಿತ್ರವಿಚಿತ್ರ ಆಹಾರಗಳು ಸಾಮಾಜಿಕ ಜಾಲತಾಣದಲ್ಲಿ (social media) ಕೆಲವೊಮ್ಮೆ ಎಲ್ಲರ ಗಮನ ಸೆಳೆಯುತ್ತದೆ. ಅಂತಹವುಗಳಲ್ಲಿ ಈಗ ಕಲ್ಲಂಗಡಿ (Watermelon) ಹಣ್ಣಿನ ತಂದೂರಿ (Tandoori Chicken) ಚಿಕನ್ ವಿಡಿಯೋ ವೈರಲ್ (Viral Video) ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಸಿದೆ.

ವಿಲಕ್ಷಣ ಆಹಾರ ಸಂಯೋಜನೆಗಳು ಮತ್ತು ಅಸಾಮಾನ್ಯ ಪಾಕಶಾಲೆಯ ಪ್ರಯೋಗಗಳು ಎಲ್ಲರನ್ನೂ ಆಶ್ಚರ್ಯಗೊಳ್ಳುವಂತೆ ಮಾಡುತ್ತದೆ. ಇದರ ರುಚಿ ಹೇಗಿರುತ್ತದೆ ಎಂಬುದನ್ನು ಮಾಡಿದವರು, ತಿಂದವರೇ ಹೇಳಬಹುದು. ಆದರೆ ಇಂತಹ ಪ್ರಯೋಗಗಳು ಕೆಲವೊಮ್ಮೆ ಭಯ ಹುಟ್ಟುವಂತೆ ಮಾಡಿದರೆ ಇನ್ನು ಕೆಲವೊಮ್ಮೆ ನಮ್ಮನ್ನು ದಂಗಾಗಿ ಬಿಡುವಂತೆ ಮಾಡುತ್ತದೆ.

ಇದೇ ರೀತಿಯಲ್ಲಿ ಈಗ ವಿಶಿಷ್ಟವಾದ ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿಯ ವಿಡಿಯೋವು ಆಹಾರಪ್ರಿಯರ ಗಮನವನ್ನು ಸೆಳೆದಿದೆ. ಎರಡೂ ಪದಾರ್ಥಗಳನ್ನು ಪ್ರತ್ಯೇಕವಾಗಿ ತಿಂದರೆ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಆದರೆ ಕಲ್ಲಂಗಡಿ ಒಳಗೆ ಕೋಳಿ ಹುರಿಯುವುದೇ? ಸರಿ, ಅದು ಸಂಪೂರ್ಣವಾಗಿ ಅಸಾಂಪ್ರದಾಯಿಕವೆಂದು ತೋರುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹೆಚ್ಚಾಗಿ ಅಪರಿಚಿತ ವಿಧಾನವನ್ನು ಬಳಸಿಕೊಂಡು ಇಡೀ ಕೋಳಿಯನ್ನು ಸಿದ್ಧಪಡಿಸುತ್ತಿದ್ದಾರೆ. ವಿಡಿಯೋ ಕ್ಲಿಪ್ ನಲ್ಲಿ ಅವರು ಕಲ್ಲಂಗಡಿಯ ಮೇಲಿನ ಭಾಗವನ್ನು ಕತ್ತರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಒಂದು ಲೋಟವನ್ನು ಬಳಸಿ ಅದರಲ್ಲಿರುವ ರಸಭರಿತವಾದ ಕೆಂಪು ಮಾಂಸವನ್ನು ಹೊರಹಾಕುತ್ತಾರೆ ಮತ್ತು ತುಂಡುಗಳನ್ನು ಪ್ರತ್ಯೇಕ ಬಟ್ಟಲಿನಲ್ಲಿ ಇಡುತ್ತಾಳೆ.

ವೈರಲ್ ವಿಡಿಯೋದಲ್ಲಿ ಪಿಂಕ್ ತಂದೂರಿ ಚಿಕನ್ ಅನ್ನು ತೋರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇದನ್ನು “ಬಾರ್ಬಿ-ಕ್ಯೂ ಚಿಕನ್” ಎಂದು ಕರೆದಿದ್ದಾರೆ.

ಮಹಿಳೆ ಸಂಪೂರ್ಣವಾಗಿ ಚರ್ಮದ ಚಿಕನ್ ಅನ್ನು ನೀರಿನಲ್ಲಿ ತೊಳೆದು ಮಾಂಸದ ಮೇಲೆ ಮೂರು ನಿಖರವಾದ ಕಡಿತಗಳನ್ನು ಮಾಡಿದ್ದಾಳೆ. ಮತ್ತೊಂದು ಬಟ್ಟಲಿನಲ್ಲಿ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಅನ್ನು ಸೇರಿಸಿದ್ದಾಳೆ. ಅನಂತರ ಮಸಾಲೆಗಳನ್ನು ಸೇರಿಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ಹಿಂಡಿ ಮಿಶ್ರಣಕ್ಕೆ ನೀರು ಬೆರೆಸಿ ಚಿಕನ್ ಅನ್ನು ಅದರೊಳಗೆ ಕಲಸುತ್ತಾರೆ.

ಬಳಿಕ ಚಿಕನ್ ಅನ್ನು ಮರದ ಕೋಲಿನ ಮೇಲೆ ಇಡಲಾಗುತ್ತದೆ. ಟೊಳ್ಳಾದ ಕಲ್ಲಂಗಡಿಯೊಳಗೆ ಮುಚ್ಚಲಾಗುತ್ತದೆ. ಮಾಂಸವನ್ನು ಹುರಿಯಲು ತೆಂಗಿನ ಸಿಪ್ಪೆ ಮತ್ತು ಕಡ್ಡಿಗಳನ್ನು ಬಳಸಲಾಗುತ್ತದೆ. ಬೆಂಕಿ ಕಡಿಮೆಯಾದ ಅನಂತರ ಗೋಲ್ಡನ್ ಬ್ರೌನ್ ಮತ್ತು ಸ್ವಲ್ಪ ಸುಟ್ಟ ಕೋಳಿಯನ್ನು ತೆಗೆಯಲಾಗುತ್ತದೆ. ಇದರೊಂದಿಗೆ ಕಲ್ಲಂಗಡಿ ಚಿಕನ್ ಬಡಿಸಲು ಸಿದ್ಧವಾಗುತ್ತದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಭಕ್ಷ್ಯದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೋಳಿಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಜಗತ್ತಿನಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ಇದು ಸಸ್ಯಾಹಾರಿ ಅಥವಾ ಮಾಂಸಾಹಾರವೇ ಎಂದು ಪ್ರಶ್ನಿಸಿದ್ದಾರೆ.


ಬಹುಶಃ ಈ ಖಾದ್ಯದಿಂದ ಅಸಹ್ಯಗೊಂಡಿರುವ ಒಬ್ಬ ಬಳಕೆದಾರ, ಸಸ್ಯಾಹಾರಿಯಾಗಲು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

ಇದು ನಿಜವಾಗಿಯೂ ಚೆನ್ನಾಗಿತ್ತು, ನಾನು ಅದನ್ನು ಇಷ್ಟಪಟ್ಟೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಲವ್ಲಿ ಸ್ಟೈಲ್ ಆಫ್ ಅಡುಗೆ ಎಂದು ಇನ್ನೊಬ್ಬರು ಹೊಗಳಿದ್ದಾರೆ.

ಈ ವಿಡಿಯೋ 25 ಮಿಲಿಯನ್‌‌ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Continue Reading

ಆಹಾರ/ಅಡುಗೆ

Boost Immunity: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ರುಚಿಕರ ಆಹಾರ ತಯಾರಿಸಿ

ಹೊರಗೆ ಮಳೆ ಸುರಿಯುವಾಗ ಬಿಸಿಬಿಸಿ ರುಚಿರುಚಿಯಾದ ಏನಾದರೂ ತಿನ್ನಬೇಕು ಎಂದು ಬಯಕೆಯಾಗುವುದು ಸಹಜ. ಆದರೆ ಆರೋಗ್ಯಕ್ಕೆ ಹಿತವಲ್ಲದ ತಿಂಡಿಗಳನ್ನು ತಿನ್ನುವುದಕ್ಕಿಂತ ದೇಹಕ್ಕೆ ಪೋಷಕಾಂಶದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು (Boost Immunity) ಹೆಚ್ಚಿಸುವ ಆಹಾರಕ್ಕೆ ಆದ್ಯತೆ ನೀಡಿದರೆ ಮಳೆಗಾಲದಲ್ಲಿ ಬರುವ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಇದಕ್ಕಾಗಿ ಕೆಲವು ರೆಸಿಪಿ ಇಲ್ಲಿದೆ.

VISTARANEWS.COM


on

By

Boost Immunity
Koo

ತಂಪಾದ ಹವಾಮಾನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಳೆಗಾಲದಲ್ಲಿ (rainy season) ರೋಗ ನಿರೋಧಕ ಶಕ್ತಿಯನ್ನು (Boost Immunity) ವೃದ್ಧಿಸಿಕೊಳ್ಳುವುದು ಬಹುಮುಖ್ಯ. ಇದಕ್ಕಾಗಿ ನಮ್ಮ ಆಹಾರದ (food) ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನಾವು ಪ್ರಯತ್ನಿಸಲೇಬೇಕು.

ಪೌಷ್ಟಿಕಾಂಶಯುಕ್ತ ಉಪಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಕಾಯಿಲೆಗಳನ್ನು ದೂರವಿರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಮಳೆಗಾಲಕ್ಕೆ ಸೂಕ್ತವಾದ ಎರಡು ರುಚಿಕರವಾದ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉಪಾಹಾರ ಮಾಡುವ ವಿಧಾನ ಇಲ್ಲಿದೆ.


ಅರಿಶಿನ ಶುಂಠಿ ಓಟ್ಸ್ ಮೀಲ್

ದೇಹಕ್ಕೆ ಬೇಕಾದ ಪೋಷಕಾಂಶವನ್ನು ಕೊಡುವ ಅರಿಶಿನ ಶುಂಠಿ ಓಟ್ಸ್ ಮೀಲ್ ನಲ್ಲಿರುವ ಅರಿಶಿನ ಮತ್ತು ಶುಂಠಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬೇಕಾಗುವ ಸಾಮಗ್ರಿಗಳು: 1 ಕಪ್ ಓಟ್ಸ್, 2 ಕಪ್ ನೀರು ಅಥವಾ ಹಾಲು, 1 ಟೀಸ್ಪೂನ್ ಅರಿಶಿನ ಪುಡಿ, 1 ಟೀಸ್ಪೂನ್ ನುಣ್ಣಗೆ ಕತ್ತರಿಸಿ ಇಟ್ಟಿರುವ ಶುಂಠಿ, ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಮೇಪಲ್ ಸಿರಪ್, ಕತ್ತರಿಸಿರುವ ಬೀಜ ಮತ್ತು ಹಣ್ಣುಗಳು

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಅಥವಾ ಹಾಲನ್ನು ಹಾಕಿ ಕುದಿಸಿ. ಓಟ್ಸ್, ಅರಿಶಿನ ಪುಡಿ ಮತ್ತು ತುರಿದ ಶುಂಠಿಯನ್ನು ಸೇರಿಸಿ ನಿಧಾನವಾದ ಉರಿಯಲ್ಲಿ ಸುಮಾರು 5- 7 ನಿಮಿಷಗಳ ಕಾಲ ಬೇಯಿಸಿ. ಜೇನುತುಪ್ಪ ಅಥವಾ ಮೇಪಲ್ ಸಿರಪ್ ಸೇರಿಸಿ ಸಿಹಿಗೊಳಿಸಿ. ಕತ್ತರಿಸಿರುವ ಬೀಜಗಳು ಮತ್ತು ಹಣ್ಣುಗಳನ್ನು ಹಾಕಿ ಬಿಸಿಯಾಗಿರುವಾಗಲೇ ಸೇವಿಸಿ.


ಪಾಲಕ್ ಮತ್ತು ಮಶ್ರೂಮ್ ಎಗ್ ವೈಟ್ ಸ್ಕ್ರಾಂಬಲ್

ಪ್ರೊಟೀನ್ ಹೇರಳವಾಗಿರುವ ಪಾಲಕ್, ಮಶ್ರೂಮ್, ಮೊಟ್ಟೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬೇಕಾಗುವ ಸಾಮಗ್ರಿಗಳು: 4 ಮೊಟ್ಟೆಯ ಬಿಳಿಭಾಗ, 1 ಕಪ್ ಕತ್ತರಿಸಿದ ಪಾಲಕ್, ಅರ್ಧ ಕಪ್ ಹೋಳು ಮಾಡಿದ ಅಣಬೆಗಳು, ಕಾಲು ಕಪ್ ಸುರುಳಿಯಾಗಿ ಕತ್ತರಿಸಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು, ಅಡುಗೆಗಾಗಿ ಆಲಿವ್ ಎಣ್ಣೆ

ಇದನ್ನೂ ಓದಿ: Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

ಮಾಡುವ ವಿಧಾನ: ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಈರುಳ್ಳಿಯನ್ನು ಹಾಕಿ ಹುರಿಯಿರಿ. ಅನಂತರ ಅಣಬೆಗಳನ್ನು ಸೇರಿಸಿ ಬೇಯಿಸಿ. ಬಳಿಕ ಕತ್ತರಿಸಿದ ಪಾಲಕ್ ಅನ್ನು ಸೇರಿಸಿ ಬೇಯಿಸಿ. ಮೊಟ್ಟೆಯ ಬಿಳಿಭಾಗವನ್ನು ಸುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕತ್ತರಿಸಿದ ಮೆಣಸು ಸೇರಿಸಿ. ಬಿಸಿಯಾಗಿರುವಾಗಲೇ ಬಡಿಸಿ.

Continue Reading
Advertisement
Bhole Baba
ದೇಶ3 mins ago

Bhole Baba: ʼʼಏನಾಗಬೇಕೋ ಅದೇ ಆಗುತ್ತೆʼʼ- 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಉವಾಚ

karnataka jobs reservation Siddaramaiah and BY Vijayendra
ಪ್ರಮುಖ ಸುದ್ದಿ17 mins ago

Karnataka Jobs Reservation: ಉದ್ಯೋಗ ವಿಚಾರದಲ್ಲಿ ಕನ್ನಡಿಗರೊಂದಿಗೆ ಸರ್ಕಾರ ಚೆಲ್ಲಾಟ: ವಿಜಯೇಂದ್ರ ಆಕ್ರೋಶ

gt world mall haveri farmer
ಪ್ರಮುಖ ಸುದ್ದಿ48 mins ago

GT World Mall: ಪಂಚೆ ಧರಿಸಿದ ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ದೂರು ದಾಖಲು

Curd Rice Recipe
ಆಹಾರ/ಅಡುಗೆ1 hour ago

Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

ಪ್ರಮುಖ ಸುದ್ದಿ1 hour ago

Karnataka Weather: ಇಂದು ಕರಾವಳಿ, ಮಲೆನಾಡು ಸೇರಿ ವಿವಿಧೆಡೆ ಭಾರಿ ಮಳೆ; ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಎಚ್ಚರಿಕೆ!

Varanasi Tour
ಪ್ರವಾಸ2 hours ago

Varanasi Tour: ವಾರಣಾಸಿಗೆ ಹೋದಾಗ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Monsoon Skincare
ಆರೋಗ್ಯ2 hours ago

Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

Vastu Tips
ಧಾರ್ಮಿಕ2 hours ago

Vastu Tips: ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ ನೋಡಿ!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya : ಈ ರಾಶಿಯವರಿಗೆ ಇಂದು ಪ್ರೀತಿ ಪಾತ್ರರಿಂದಲೇ ಕಿರಿಕಿರಿ ಸಾಧ್ಯತೆ!

Virat kohli
ಪ್ರಮುಖ ಸುದ್ದಿ8 hours ago

Virat Kohli : ವಿರಾಟ್​ ಕೊಹ್ಲಿಯನ್ನು ಅವಮಾನಿಸಿದ ಅಮಿತ್​ ಮಿಶ್ರಾ ಬೆಂಡೆತ್ತಿದ ಯಶ್​ ದಯಾಳ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ5 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌