Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು! - Vistara News

ಆಹಾರ/ಅಡುಗೆ

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

ಚಳಿಗಾಲದಲ್ಲಿ ದೇಹವನ್ನು (winter food tips) ಬಿಸಿ ಮಾಡುವ ಕೆಲವು ಸಿಹಿತಿನಿಸುಗಳನ್ನು ಮಾಡಿ ತಿನ್ನಬಹುದು. ಚಳಿಗಾಲಕ್ಕೆಂದೇ ವಿಶೇಷವಾಗಿರುವ ಅವುಗಳನ್ನು ತಿನ್ನುವುದರಿಂದ ದೇಹ ಬೆಚ್ಚಗೂ ಇರುತ್ತದೆ, ನಮ್ಮ ಆಸೆಯೂ ನೆರವೇರಿ, ದೇಹ ಮನಸ್ಸಿಗೂ ಸಮಾಧಾನವಾಗುತ್ತದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Winter Food Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲದಲ್ಲಿ (winter food tips) ಬಾಯಿಚಪಲ ಹೆಚ್ಚು. ಎಷ್ಟೇ ಕಡಿಮೆ ತಿನ್ನಬೇಕು ಎಂದುಕೊಂಡರೂ, ಮನಸ್ಸು ತಡೆಯದೆ ನಮ್ಮದೇ ವ್ರತವನ್ನು ನಾವು ಮುರಿಯುತ್ತೇವೆ. ಇಷ್ಟು ತಿನ್ನುವುದು ಒಳ್ಳೆಯದಲ್ಲ ಎಂದು ಅಂದುಕೊಂಡರೂ, ಚಳಿ ಹೆಚ್ಚು ತಿನ್ನುವಂತೆ ಮಾಡುತ್ತದೆ. ಬಿಸಿಬಿಸಿ ಬಜ್ಜಿ ಬೋಂಡಾಗಳು, ಸಿಹಿತಿನಿಸುಗಳು, ಮನೆಯಲ್ಲಿ ಗರಮಾಗರಂ ಚಹಾ, ರಸ್ತೆಬದಿಯಲ್ಲಿ ಕಂಡ ಬಿಸಿಬಿಸಿ ಜಿಲೇಬಿ, ಹೀಗೆ ಒಂದೇ ಎರಡೇ, ನಾನಾ ಆಸೆಗಳು, ಚಳಿಗಾಲದಲ್ಲಿ ಗರಿಗೆದರಿ ಬಿಡುತ್ತವೆ. ಆರೋಗ್ಯದ ದೃಷ್ಟಿಯಿಂದ ಕೆಲವು ಆಸೆಗಳನ್ನು ಬಿಡಲೇಬೇಕಾಗುತ್ತದೆ, ನಿಜ. ಆದರೆ, ನಾವು ಅಷ್ಟೂ ನಿರಾಸೆಗೊಳ್ಳಬೇಕಿಲ್ಲ. ಚಳಿಗಾಲದಲ್ಲಿ ದೇಹವನ್ನು ಬಿಸಿ ಮಾಡುವ ಕೆಲವು ಸಿಹಿತಿನಿಸುಗಳನ್ನು ಮಾಡಿ ಅಥವಾ ಕೊಂಡು ತಿನ್ನಬಹುದು. ಚಳಿಗಾಲಕ್ಕೆಂದೇ ವಿಶೇಷವಾಗಿರುವ ಅವುಗಳನ್ನು ತಿನ್ನುವುದರಿಂದ ದೇಹ ಬೆಚ್ಚಗೂ ಇರುತ್ತದೆ, ನಮ್ಮ ಆಸೆಯೂ ನೆರವೇರಿ, ದೇಹ ಮನಸ್ಸಿಗೂ ಸಮಾಧಾನವಾಗುತ್ತದೆ. ಬನ್ನಿ, ಚಳಿಗಾಲದಲ್ಲಿ ತಿನ್ನಲೇಬೇಕಾದ ದೇಹವನ್ನು ಬೆಚ್ಚಗಿಡುವ ಸಿಹಿತಿನಿಸುಗಳು ಯಾವುವು ಎಂಬುದನ್ನು ನೋಡೋಣ.

gond ke laddu

ಗೋಂದಿನ ಲಡ್ಡು

ಗೋಂದು, ಮರದಿಂದ ಸ್ರವಿಸಲ್ಪಡುವ ಅಂಟು. ಸಿಹಿತಿನಿಸುಗಳನ್ನು ಮಾಡಲು ಅಂಟಿಗಾಗಿ ಬಳಸುತ್ತಾರೆ. ಈ ಅಂಟಿನದೇ ಲಡ್ಡನ್ನು ಮಾಡಿ ತಿಂದರೆ ಹೇಗೆ ಹೇಳಿ. ಹೌದು, ಗೋಂದಿನ ಲಡ್ಡು ಬಲು ರುಚಿ. ದೇಹಕ್ಕೂ ಒಳ್ಳೆಯದು. ಗೋಧಿ ಹುಡಿ, ತುಪ್ಪ, ಒಣ ಬೀಜಗಳ ಜೊತೆಗೆ ಗೋಂದನ್ನೂ ಹಾಕಿ ಮಾಡುವ ಈ ಲಡ್ಡು ಚಳಿಗಾಲಕ್ಕೆ ದೇಹ ಬೆಚ್ಚಗಿಡಲು ಹೇಳಿ ಮಾಡಿಸಿದ ಲಡ್ಡು.

Dry fruits laddu

ಒಣಹಣ್ಣುಗಳ ಲಡ್ಡು

ದ್ರಾಕ್ಷಿ, ಬಾದಾಮಿ, ಗೋಡಂಬಿ, ಖರ್ಜೂರ ಸೇರಿದಂತೆ ಬಗೆಬಗೆಯ ಒಣಹಣ್ಣುಗಳು ಹಾಗೂ ಬೀಜಗಳನ್ನು ಹಾಕಿ ಮಾಡುವ ಲಡ್ಡು ಚಳಿಗಾಲಕ್ಕೆ ಬಹಳ ಒಳ್ಳೆಯದು. ಆರೋಗ್ಯಕ್ಕೂ ಹಾನಿಯಿಲ್ಲದ, ಸಕ್ಕರೆಯನ್ನೂ ಸೇರಿಸದೆ ಮಾಡಬಹುದಾದ ಈ ಲಡ್ಡನ್ನು ಯಾವ ಸಂದೇಹವೂ ಇಲ್ಲದೆ ತಿನ್ನಬಹುದು. ಇದು ದೇಹವನ್ನು ಬೆಚ್ಚಗೂ, ಗಟ್ಟಿಯಾಗಿಯೂ ಇಡುತ್ತದೆ.

Wheat halwa

ಗೋಧಿ ಹಲ್ವಾ

ಪಂಜಾಬಿಗಳ ಅತ್ಯಂತ ಪ್ರಸಿದ್ಧ ಸಿಹಿತಿನಿಸಿದು. ಗೋಧಿ ಹುಡಿಯಿಂದ ಮಾಡುವ ಈ ಹಲ್ವಾವನ್ನು ಪ್ರಸಾದವಾಗಿಯೂ ನೀಡಲಾಗುತ್ತದೆ. ಶಕ್ತಿ ನೀಡುವ, ದೇಹವನ್ನೂ ಬೆಚ್ಚಗಿಡುವ ಸಿಹಿತಿನಿಸಿದು.

Sesame laddu

ಎಳ್ಳುಂಡೆ

ಎಳ್ಳು ಉಷ್ಣಾಹಾರ. ಚಳಿಗಾಲಕ್ಕೆ ಎಳ್ಳು ತಿನ್ನಲೇಬೇಕು. ಸಾಕಷ್ಟು ಕ್ಯಾಲ್ಶಿಯಂ ಹಾಗೂ ಬಹುತೇಕ ಎಲ್ಲ ಪೋಷಕಾಂಶಗಳನ್ನೂ ಹೊಂದಿರುವ ಎಳ್ಳನ್ನು ಉಂಡೆ ಮಾಡಿ ಚಳಿಗಾಲದಲ್ಲಿ ತಿನ್ನುವುದು ಸಾಮಾನ್ಯ. ಬೆಲ್ಲದ ಪಾಕದಲ್ಲಿ ಎಳ್ಳನ್ನು ಉಂಡೆಗಟ್ಟಿ ಮಾಡುವ ಈ ಸರಳ ಸಿಹಿತಿಂಡಿ ಬಹಳ ಒಳ್ಳೆಯದು. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಇದನ್ನು ತಿನ್ನಲೇಬೇಕು!

Carrot Halwa

ಕ್ಯಾರೆಟ್‌ ಹಲ್ವಾ

ಚಳಿಗಾಲದ ಇನ್ನೊಂದು ತಿನ್ನಲೇಬೇಕಾದ ಪ್ರಸಿದ್ಧ ಸಿಹಿತಿನಿಸು. ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಕ್ಯಾರೆಟ್ಟನ್ನು ತಿರಿದು ಹಲ್ವಾ ಮಾಡುವುದೆಂದರೆ ಅದೊಂದು ಸಂಪ್ರದಾಯ. ದೇಹವನ್ನು ಇವು ಬೆಚ್ಚಗೂ ಇಡುತ್ತವೆ. ಪೋಷಕಾಂಶಗಳಿಂದಲೂ ಸಮೃದ್ಧ.

moong dal halwa

ಹೆಸರುಬೇಳೆ ಹಲ್ವಾ

ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಮಾಡುವ ಇನ್ನೊಂದು ಹಲ್ವಾ ಹೆಸರುಬೇಳೆ ಹಲ್ವಾ. ಇದೂ ಕೂಡಾ ದೇಹವನ್ನು ಬೆಚ್ಚಗಿಡುವ ಗುಣವನ್ನು ಹೊಂದಿದೆ. ಸಾಕಷ್ಟು ಪ್ರೊಟೀನ್‌ ಹೊಂದಿರುವ ಈ ಸಿಹಿತಿನಿಸು ಚಳಿಗಾಲಕ್ಕೆ ಒಳ್ಳೆಯದು.

Date barfi

ಖರ್ಜೂರದ ಬರ್ಫಿ

ಖರ್ಜೂರದ ಯಾವುದೇ ಬಗೆಯ ಸಿಹಿತಿನಿಸನ್ನು ತಿನ್ನಲು ಚಳಿಗಾಲ ಸಕಾಲ. ಇದರಲ್ಲಿ ಹೇರಳವಾಗಿ ಕಬ್ಬಿಣಾಂಶವಿದ್ದು ಸಾಕಷ್ಟು ಉಷ್ಣ ಪ್ರಕೃತಿಯನ್ನೂ ಹೊಂದಿದೆ. ದೇಹ ಗಟ್ಟಿಮುಟ್ಟಾಗಲು ಇದು ಒಳ್ಳೆಯದು. ಚಳಿಗಾಲದಲ್ಲಿ ಖರ್ಜೂರದ ವಿವಿಧ ಸಿಹಿತಿನಿಸು ಮಾಡಿ ಅಥವಾ ಹಾಗೆಯೇ ತಿನ್ನುವುದು ಒಳ್ಲೆಯದು.

Gajjak

ಚಿಕ್ಕಿ/ಗಜ್ಜಕ್

ಚಳಿಗಾಲದಲ್ಲಿ ಸಾಮಾನ್ಯವಾಗುತ್ತರಭಾರತದಲ್ಲಿ ಬಹುತೇಕ ಎಲ್ಲರೂ ಮರೆಯದೆ ತಿನ್ನುವ ಸರಳ ಸಿಹಿತಿನಿಸು. ಬೆಲ್ಲದ ಪಾಕದಲ್ಲಿ ಹಾಕಿದ ನೆಲಗಡಲೆ, ಬೀಜಗಳು ಹಾಗೂ ಎಳ್ಳಿನಿಂದ ಈ ಸಿಹಿತಿನಿಸನ್ನು ಮಾಡುತ್ತಾರೆ. ದೇಹವನ್ನು ಬೆಚ್ಚಗಿಡುವ ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಸಿಹಿತಿನಿಸಿದು.

ಇದನ್ನೂ ಓದಿ: Winter Foods: ಚಳಿಯಲ್ಲಿ ಮೆದುಳಿನ ಆರೈಕೆಗೆ ಬೇಕು ಈ ಆಹಾರಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Food Hacks: ಕರಿದ ತಿನಿಸುಗಳನ್ನು ಹೆಚ್ಚು ಹೊತ್ತು ಗರಿಗರಿಯಾಗಿರಿಸಬೇಕೇ? ಇಲ್ಲಿವೆ ಪಂಚಸೂತ್ರಗಳು!

ಆಹಾರಗಳನ್ನು ತಾಜಾ ಆಗಿ ಉಳಿಯುವಂತೆ ಹೆಚ್ಚು ಕಾಲ ಗರಿಗರಿಯಾಗಿ ಉಳಿಯುವಂತೆ, ತನ್ನ ಕ್ರಿಸ್ಪೀ ಗುಣವನ್ನು ಕಳೆದುಕೊಳ್ಳದಂತೆ ಇಡಲು ಕೆಲವು ಸ್ಮಾರ್ಟ್‌ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಬನ್ನಿ, ಆ ಸ್ಮಾರ್ಟ್‌ ಉಪಾಯಗಳೇನು (food hacks) ಎಂಬುದನ್ನು ನೋಡೋಣ.

VISTARANEWS.COM


on

Food Hacks
Koo

ಕೆಲವು ತಿನಿಸುಗಳನ್ನು ಗರಿಗರಿಯಾಗಿದ್ದಾಗ ತಿಂದರೇನೆ ರುಚಿ. ಮಾಡಿದ ಕೂಡಲೇ ತಾಜಾ ಆಗಿ ತಿಂದರೆ ರುಚಿ ಹೆಚ್ಚು. ಹೆಚ್ಚು ಹೊತ್ತು ಇಟ್ಟರೆ ಅದು ತನ್ನ ತಾಜಾತನವನ್ನು ಕಳೆದುಕೊಂಡು ಮೆತ್ತಗಾಗಿಬಿಡುತ್ತದೆ. ಗರಿಗರಿಯಾಗಿ ಮಾಡಿದ ಫ್ರೆಂಚ್‌ಫ್ರೈಸ್‌, ಪೊಟೇಟೋ ವೆಜಸ್‌, ಅಥವಾ ಇನ್ಯಾವುದೋ ಪಕೋಡಾ ಹೊರತೆಗೆದ ನಿಮಿಷದಲ್ಲಿ ಮೆತ್ತಗಾಗಿ, ನೀರಸವೆನಿಸಿಬಿಡುತ್ತದೆ. ಎಷ್ಟೇ ರುಚಿಯಾದ ತಿನಿಸೂ ಸ್ವಲ್ಪ ಹೊತ್ತಿನಲ್ಲಿ ತನ್ನ ಮೊದಲ ರುಚಿಯನ್ನು ಕಳೆದುಕೊಳ್ಳುತ್ತದೆ. ಆದರೆ, ಕೆಲವೊಮ್ಮೆ, ಮಾಡಿದ ತಕ್ಷಣ ತಿನ್ನಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಹೊತ್ತಾದರೂ ಇಡಲೇಬೇಕಾಗುತ್ತದೆ. ಹಾಗಾದರೆ, ಅಂತಹ ಆಹಾರಗಳನ್ನು ತಾಜಾ ಆಗಿ ಉಳಿಯುವಂತೆ ಹೆಚ್ಚು ಕಾಲ ಗರಿಗರಿಯಾಗಿ ಉಳಿಯುವಂತೆ, ತನ್ನ ಕ್ರಿಸ್ಪೀ ಗುಣವನ್ನು ಕಳೆದುಕೊಳ್ಳದಂತೆ ಇಡಲು ಕೆಲವು ಸ್ಮಾರ್ಟ್‌ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಬನ್ನಿ, ಆ ಸ್ಮಾರ್ಟ್‌ ಉಪಾಯಗಳೇನು (food hacks) ಎಂಬುದನ್ನು ನೋಡೋಣ.

Wavy Chips in a Bowl

ನೀವು ಏರ್‌ ಫ್ರೈ ಅಥವಾ ಸಾಂಪ್ರದಾಯಿಕ ಮಾದರಿಯಲ್ಲಿ ಎಣ್ಣೆಯಲ್ಲಿ ಕರಿದು ಮಾಡಿರುವ ತಿನಿಸು ಹೆಚ್ಚು ಹೊತ್ತು ಹಾಗೆಯೇ ಗರಿಗರಿಯಾಗಿ ಉಳಿಯಬೇಕೆಂದರೆ ವೈರ್‌ ರ್ಯಾಕ್‌ ಬಳಸಿ. ಎಲ್ಲ ಬದಿಗಳಲ್ಲೂ ಗಾಳಿಯಾಡುವ ಅವಕಾಶ ಇದರಲ್ಲಿ ಸಿಗುತ್ತದೆ. ಅಥವಾ ತೂತುಗಳಿರುವ ಮೆಶ್‌ನಂಥ ಡಬ್ಬ ಇದ್ದರೆ ಅದರಲ್ಲಿ ಹಾಕಿಡಿ. ಆಗ ಕರಿದ ತುಂಡಿತ ಹಬೆ ಮತ್ತೆ ಅದರ ಮೇಲೆ ಕೂರುವುದಿಲ್ಲ. ಎಲ್ಲ ಬದಿಯಿಂದಲೂ ಗಾಳಿ ತಾಗುವ ಕಾರಣ, ತಣ್ಣಗಾದರೂ ಹೆಚ್ಚು ಹೊತ್ತು ಹಾಗೆಯೇ ಗರಿಯಾಗಿಯೇ ಇರುತ್ತದೆ.

ಏರ್‌ಫ್ರೈ ಮಾಡಿದ ಅಥವಾ ಎಣ್ಣೆಯಲ್ಲಿ ಕರಿದ ತಿನಿಸು ಸ್ವಲ್ಪ ಹೊತ್ತಿನಲ್ಲಿ ಮೆತ್ತಗಾಗುತ್ತದೆ ಹಾಗೂ ತನ್ನ ತಾಜಾತನವನ್ನು ಕಳೆದುಕೊಳ್ಳುತ್ತದೆ. ಹೀಗಾಗದಂತೆ ತಡೆಯಲು ಓವನ್‌ನಲ್ಲಿ ವೈರ್‌ ರ್ಯಾಕ್‌ನ ಮೇಲೆ 15 ನಿಮಿಷಗಳ ಕಾಲ ಹಾಗೆಯೇ ಇಡಿ. ಆಗ ಬಹುಬೇಗನೆ ಮೆತ್ತಗಾಗದು.

Microwave Oven

ಮೈಕ್ರೋವೇವ್‌ ಓವನ್‌ನಲ್ಲಿ ಮಾಡಿದ ತಿಂಡಿಯನ್ನು ಮತ್ತೆ ಬಿಸಿ ಮಾಡಬೇಡಿ. ಇದು ಆ ಆಹಾರ ವಸ್ತುವಿನಲ್ಲಿ ಇನ್ನಷ್ಟು ಹೆಚ್ಚು ತೇವಾಂಶ ಸೇರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಮತ್ತೆ ಬಹುಬೇಗನೆ ಮೆತ್ತಗಾಗಿಬಿಡುತ್ತದೆ.

ಸಾಸ್‌ ಅಥವಾ ಕೆಚಪ್‌ಗಳನ್ನು ನಿಮ್ಮ ಕ್ರಿಸ್ಟೀ ತಿನಿಸುಗಳನ್ನು ಮಾಡುವಾಗ ಹಾಕಬೇಡಿ. ಇದರಿಂದ ಇದು ಇನ್ನೂ ಬೇಗ ಮೆತ್ತಗಾಗಿಬಿಡುತ್ತದೆ. ಆದರೆ, ಕೆಲವು ಬಗೆಯಲ್ಲಿ ಹಾಕಲೇಬೇಕಾಗಿದ್ದರೆ, ಕೊನೆಯ ಕ್ಷಣದಲ್ಲಿ ಮಾಡು, ಅವಾಗಲೇ ತಿನ್ನಿ. ಹೆಚ್ಚು ಹೊತ್ತು ಇಡಲು ಹೋಗಬೇಡಿ. ಫಟಾಫಟ್‌ ತಿನಿಸಿನ ಸಂದರ್ಭ ಮಾತ್ರ ಇವು ಉಪಯೋಗಕ್ಕೆ ಬರುತ್ತವೆ.

ನೀವು ಇಂತಹ ಕರಿದ ತಿನಿಸುಗಳನ್ನು ಆಫೀಸಿಗೆ ಅಥವಾ ಹೊರಗೆ ಹೋಗುವಾಗ ಡಬ್ಬದಲ್ಲಿ ಪ್ಯಾಕ್‌ ಮಾಡಿ ತೆಗೆದುಕೊಂಡು ಹೋಗಬೇಕಾದ ಸಂದರ್ಭ ಬಂದರೆ ತಿನಿಸನ್ನು ಪೇಪರ್‌ ಟವಲ್‌ನಲ್ಲಿ ರ್ಯಾಪ್‌ ಮಾಡಿ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚು ತೆಗೆದುಕೊಂಡು ಹೋಗಿ. ಆದ ಹೆಚ್ಚಿನ ತೇವಾಂಶ ಪೇಪರ್‌ ರ್ಯಾಪರ್ ಹೀರಿಕೊಳ್ಳುವುದರಿಂದ ಹೆಚ್ಚು ಮೆತ್ತಗಾಗದು.

Continue Reading

ವೈರಲ್ ನ್ಯೂಸ್

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

ಭಾರತದ ಪ್ರೀತಿಯ ಇಡ್ಲಿ, ಚನ್ನಾ ಮಸಾಲಾ, ರಾಜ್ಮಾ ಮತ್ತು ಚಿಕನ್ ಜಲ್ಫ್ರೇಜಿ (chicken jalfrezi) ಜೀವವೈವಿಧ್ಯದ (Biodiversity) ಮೇಲಿನ ದುಷ್ಪ್ರಪ್ರಭಾವದ ಪಟ್ಟಿಯಲ್ಲಿ ಟಾಪ್ 25ರಲ್ಲಿ ಇವೆಯಂತೆ.

VISTARANEWS.COM


on

Idli
Koo

ಹೊಸದಿಲ್ಲಿ: ನೀವು ಪ್ರತಿದಿನ ಇಡ್ಲಿ (Idli) ಸೇವಿಸುವವರಾಗಿದ್ದರೆ, ಅಥವಾ ರಾಜ್ಮಾ (Rajma) ಸವಿಯುವವರಾಗಿದ್ದರೆ, ನೀವು ಜೀವವೈವಿಧ್ಯತೆಗೆ (biodiversity) ಸ್ವಲ್ಪ ಹೆಚ್ಚಿನ ಹಾನಿಯನ್ನೇ ಉಂಟುಮಾಡುತ್ತಿದ್ದೀರಿ ಅಂತ ಅರ್ಥ ಮಾಡಿಕೊಳ್ಳಬೇಕು. ಇದನ್ನು ಹೇಳಿದ್ದು ನಾವಲ್ಲ, ಕೆಲವು ಜೀವವಿಜ್ಞಾನಿಗಳು.

ಹೌದು, ವಿಜ್ಞಾನಿಗಳು ಪ್ರಪಂಚದಾದ್ಯಂತದ 151 ಜನಪ್ರಿಯ ಭಕ್ಷ್ಯಗಳ ʼಜೀವವೈವಿಧ್ಯತೆಯ ಹೆಜ್ಜೆಗುರುತುʼ (biodiversity footprints) ನಿರ್ಣಯಿಸಿದ್ದಾರೆ. ಈ ಪಟ್ಟಿಯನ್ನು ನೋಡಿದರೆ ನಿಮಗೆ ಆಶ್ಚರ್ಯ ಆಗಬಹುದು. ಭಾರತದ ಪ್ರೀತಿಯ ಇಡ್ಲಿ, ಚನ್ನಾ ಮಸಾಲಾ, ರಾಜ್ಮಾ ಮತ್ತು ಚಿಕನ್ ಜಲ್ಫ್ರೇಜಿ (chicken jalfrezi) ಪರಿಸರದ ಮೇಲಿನ ದುಷ್ಪ್ರಪ್ರಭಾವದ ಪಟ್ಟಿಯಲ್ಲಿ ಟಾಪ್ 25ರಲ್ಲಿ ಇವೆಯಂತೆ.

ಸ್ಪ್ಯಾನಿಷ್ ಹುರಿದ ಭಕ್ಷ್ಯ ʼಲೆಚಾಜೊʼ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಕುರಿ ಮಾಂಸದ ಭಕ್ಷ್ಯ. ಇದರ ನಂತರ ನಾಲ್ಕು ಭಕ್ಷ್ಯಗಳು ಬ್ರೆಜಿಲಿಯನ್ ಮಾಂಸಕೇಂದ್ರಿತ ಅಡುಗೆಗಳು. ಸಂಶೋಧಕರು ಆರನೇ ಸ್ಥಾನದಲ್ಲಿ ಇಡ್ಲಿ ಮತ್ತು ಏಳನೇ ಸ್ಥಾನದಲ್ಲಿ ರಾಜ್ಮಾ ಕರಿಯನ್ನು ಇರಿಸಿದ್ದಾರೆ.

ವೈಜ್ಞಾನಿಕ ಜರ್ನಲ್ PLOS Oneನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಿಂಗಾಪುರ (Singapore) ವಿಶ್ವವಿದ್ಯಾನಿಲಯ ಪ್ರೊಫೆಸರ್‌ ಎಲಿಸ್ಸಾ ಚೆಂಗ್ ಮತ್ತು ಸಹೋದ್ಯೋಗಿಗಳು ಇದನ್ನು ಮಾಡಿದ್ದಾರೆ. ಇದು 151 ಭಕ್ಷ್ಯಗಳ ಪ್ರಭಾವವನ್ನು ವಿಶ್ಲೇಷಿಸಿದೆ. ಆಯಾಯ ದೇಶದ ಒಟ್ಟು ಉತ್ಪನ್ನದ ಆಧಾರದ ಮೇಲೆ ಅಗ್ರ 25ರ ಪಟ್ಟಿ ಮಾಡಲಾಗಿದೆ.

ಸಾಮಾನ್ಯವಾಗಿ ಸಸ್ಯಾಹಾರಿ ಅಡುಗೆಗಳು (Vegetarian dish) ಮಾಂಸದ ಅಡುಗೆಗಳಿಗಿಂತ ಕಡಿಮೆ ಜೀವವೈವಿಧ್ಯದ ಹೆಜ್ಜೆಗುರುತುಗಳನ್ನು ಹೊಂದಿವೆ. ಆದರೆ ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಕೆಲವು ಭಕ್ಷ್ಯಗಳು ಈ ಪಟ್ಟಿಯಲ್ಲಿ ಮೇಲಿರುವುದನ್ನು ಕಂಡು ಸ್ವತಃ ಸಂಶೋಧಕರು ಆಶ್ಚರ್ಯಚಕಿತರಾಗಿದ್ದಾರೆ.

ʼಜೀವವೈವಿಧ್ಯದ ಹೆಜ್ಜೆಗುರುತುʼ ಇದು ಜೀವವೈವಿಧ್ಯದ ಮೇಲೆ ನಮ್ಮ ಚಟುವಟಿಕೆಗಳ ಪ್ರಭಾವವನ್ನು ಅಳೆಯುವ ಮಾನದಂಡ. ಇಂಗಾಲದ ಹೆಜ್ಜೆಗುರುತನ್ನೂ (carbon footprints) ಹೀಗೇ ಅಳೆಯಲಾಗುತ್ತದೆ. ಇದು ಜೀವರಾಶಿಯ ಮೇಲೆ ನಮ್ಮ ಕ್ರಿಯೆಗಳ ವಿಶಾಲವಾದ ಪರಿಸರ ಪರಿಣಾಮಗಳನ್ನು ಪರಿಗಣಿಸುತ್ತದೆ.

ಇಡ್ಲಿ ಹೇಗೆ ಹಾನಿಕರ?

ಕೃಷಿಯಿಂದ ಪರಿಸರದ ಮೇಲಿನ ದುಷ್ಪರಿಣಾಮವು ಇದರ ಹಿನ್ನೆಲೆಯಲ್ಲಿದೆ. ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಬಳಸಲಾಗುವ ಭೂಮಿ ಸಾಮಾನ್ಯವಾಗಿ ಐತಿಹಾಸಿಕವಾಗಿ ಜೀವವೈವಿಧ್ಯ ಪ್ರದೇಶಗಳನ್ನುಅತಿಕ್ರಮಿಸಿದೆ. ಇದಕ್ಕಾಗಿ ಮಾಡಲಾದ ಭೂ ಪರಿವರ್ತನೆಗಳು ಹೆಚ್ಚಿನ ಹೆಜ್ಜೆ ಗುರುತನ್ನು ಮೂಡಿಸಿವೆ. ಭಾರತವು ಕಡಲೆ ಮತ್ತು ಕಿಡ್ನಿ ಬೀನ್ಸ್‌ನಂತಹ ದ್ವಿದಳ ಧಾನ್ಯಗಳ ಪ್ರಮುಖ ಉತ್ಪಾದಕ. ಜೈವಿಕ ವೈವಿಧ್ಯತೆಯ ಸಮಾವೇಶದ ಪ್ರಕಾರ, ಪ್ರಪಂಚದ ಒಟ್ಟಾರೆ ದ್ವಿದಳ ಧಾನ್ಯದ ಅಂದಾಜು 7-8%ರಷ್ಟನ್ನು ಬೆಳೆಯುತ್ತದೆ.

ಆಶ್ಚರ್ಯಕರ ಸಂಗತಿ ಎಂದರೆ, ಈ ಅಧ್ಯಯನದಲ್ಲಿ ʼಫ್ರೆಂಚ್ ಫ್ರೈʼ ಕಡಿಮೆ ಜೀವವೈವಿಧ್ಯದ ಹೆಜ್ಜೆಗುರುತನ್ನು ಹೊಂದಿದೆಯಂತೆ! ಇದರ ನಂತರ ಬ್ಯಾಗೆಟ್‌ಗಳು, ಟೊಮೆಟೊ ಸಾಸ್ ಮತ್ತು ಪಾಪ್‌ಕಾರ್ನ್ ಇವೆ. ಭಾರತೀಯ ಸನ್ನಿವೇಶದಲ್ಲಿ ಆಲೂ ಪರೋಟಾ 96ನೇ, ದೋಸೆ 103ನೇ ಮತ್ತು ಬೋಂಡಾಗಳು 109ನೇ ಸ್ಥಾನದಲ್ಲಿವೆ.

ಇದನ್ನೂ ಓದಿ: Trekking Restriction: ಚಾರಣಪ್ರಿಯರಿಗೆ ಶಾಕ್‌; ಆನ್‌ಲೈನ್‌ ಬುಕಿಂಗ್‌ ಇಲ್ಲದ ಜಾಗಗಳಿಗೆ ಪ್ರವೇಶವಿಲ್ಲ

Continue Reading

ಆರೋಗ್ಯ

Cooking Soda: ಅಡುಗೆ ಸೋಡಾ ಬಳಕೆ ಆರೋಗ್ಯಕ್ಕೆ ನಿಜಕ್ಕೂ ಮಾರಕವೆ?

ಎಲ್ಲವೂ ಚುರುಕಾಗಿ ಆಗಬೇಕು. ಅಜ್ಜಿಯರ ಕಾಲದಂತೆ ಒರಳಲ್ಲಿ ಅಕ್ಕಿ ಹಾಕಿಕೊಂಡು ರುಬ್ಬುತ್ತಾ ಕೂರಲು ಸಾಧ್ಯವಿಲ್ಲ. ಬೆಳಗ್ಗೆ ದೋಸೆ ಬೇಕು ಎಂದು ರಾತ್ರಿ ಮಲಗುವಾಗ ಅನಿಸಿದರೂ, ಬೆಳಗಿಗೆ ದೋಸೆ ಸಿದ್ಧವಾಗುತ್ತದೆ. ಹೀಗೆ ಇನ್ಸ್‌ಟಂಟ್‌ಗಳ ಕಾಲದಲ್ಲಿ ನಾವಿರುವಾಗ, ಅಡುಗೆಗೆ ಸೋಡಾ (Cooking Soda) ಬಳಸುವುದು ಸರಿಯೇ ಎಂಬ ಪ್ರಶ್ನೆ ಇಲ್ಲಿದೆ.

VISTARANEWS.COM


on

Cooking Soda
Koo

ಉಬ್ಬದಿರುವ ಇಡ್ಲಿ, ವಡೆ, ಗರಿಯಾಗದ ದೋಸೆ ಇವೆಲ್ಲ ಯಾರಿಗೆ ಇಷ್ಟವಾಗುತ್ತದೆ? ಹಾಗೆಂದು ಎಲ್ಲ ಸಾರಿಯೂ ಸರಿಯಾದ ಪ್ರಮಾಣದಲ್ಲಿ ಹಿಟ್ಟು ಹುದುಗು ಬರುವುದಕ್ಕೆ ಸಾಧ್ಯವಿಲ್ಲ. ರುಬ್ಬುವುದು ವ್ಯತ್ಯಾಸವಾದೀತು, ಚಳಿಯಿಂದ ಹುದುಗು ಬಾರದಿರಬಹುದು… ಇಂಥವೆಲ್ಲ ಏನೇ ಆದರೂ ಅಡುಗೆ ಮಾತ್ರ ಸರಿಯಾಗಿಯೇ ಇರಬೇಕು ಎನ್ನುವ ಕಾಲವಿದು. ಇಂಥ ದಿನಗಳಿಗೆಂದೇ ಇರಿಸಿಕೊಂಡ ಆಪತ್‌ಬಾಂಧವ ಅಡುಗೆ ಸೋಡಾವನ್ನು ಕೊಂಚ ಬೆರೆಸಿಬಿಟ್ಟರೆ, ಎಲ್ಲವೂ ಸರಿಯಾಗಿ ಬಿಡುತ್ತದೆ. ದೋಕ್ಲಾ ಮಾಡುವಾಗ ಸೋಡಾ ಬೆರೆಸದವರು, ಇನೊ ಸೇರಿಸಬಹುದು. ಆಂಟಾಸಿಡ್‌ನಂತೆ ಬಳಕೆಯಾಗುವ ಸ್ಯಾಶೆ ಇನೊ. ಬೇಕಿಂಗ್‌ ಸೋಡಾ (Cooking Soda), ಇನೊ ಇಂಥವುಗಳು ಹಿಟ್ಟನ್ನು ತ್ವರಿತವಾಗಿ ಹುದುಗು ಬರುವಂತೆ ಸುಲಭದಲ್ಲಿ ಮಾಡುತ್ತವೆ. ಅವಸರಕ್ಕೆ ಹಿಟ್ಟು ಹುದುಗು ಬರಿಸುವ ಈ ವಸ್ತುಗಳು ಎಷ್ಟೋ ಜನರಿಗೆ ಮೆಚ್ಚು ಎನಿಸಿವೆ. ಸೋಡಾ ಬಳಕೆ ಆರೋಗ್ಯಕ್ಕೆ ಹಿತವೇ ಎಂಬುದು ಪ್ರಶ್ನೆ.

Baking soda for Fungal Infection Home Remedies

ಅತಿ ಬಳಕೆ ಸರಿಯಲ್ಲ

ಯಾವತ್ತೋ ಒಂದೆರಡು ಬಾರಿ ಉಪಯೋಗಿಸಿದರೆ ಇವುಗಳಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇವುಗಳನ್ನೇ ನೆಚ್ಚಿಕೊಂಡಿದ್ದರೆ ಆರೋಗ್ಯ ಹದಗೆಡುತ್ತದೆ. ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ಗೆ ಇರುವ ಸಹಜ ಗುಣವೆಂದರೆ ಕ್ಷಾರ ಅಥವಾ ಆಲ್ಕಲೈನ್. ಇದನ್ನು ಅತಿಯಾಗಿ ದೇಹಕ್ಕೆ ಸೇರಿಸಿದರೆ ರಕ್ತ ಪಿಎಚ್‌ ವ್ಯತ್ಯಾಸವಾಗಬಹುದು. ರಕ್ತದ ಪಿಎಚ್‌ ಸಾಮಾನ್ಯವಾಗಿ ಸೂಕ್ಷ್ಮ ಪ್ರಕ್ರಿಯೆಗಳಿಂದ ಸಮತೋಲನಕ್ಕೆ ಒಳಪಡುತ್ತದೆ. ಒಂದೊಮ್ಮೆ ಈ ಸಮತೋಲನ ವ್ಯತ್ಯಾಸವಾದರೆ ಅನಾರೋಗ್ಯ ನಿಶ್ಚಿತ. ದೇಹದ ಚಯಾಪಚಯದ ಮೇಲೆ ತೀವ್ರತರ ಪರಿಣಾಮ ಇದರಿಂದ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಮೂತ್ರಪಿಂಡಗಳ ಮೇಲಿನ ಒತ್ತಡ ಹೆಚ್ಚುವುದು ಸಾಮಾನ್ಯ. ಸೋಡಾ ಬಳಕೆ ಹೆಚ್ಚಾದರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್‌ ಉತ್ಪಾದನೆ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಅಂಶ ಏರಿ, ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬಾಗಿ ಪರಿವರ್ತನೆ ಹೊಂದುತ್ತದೆ. ಮಾತ್ರವಲ್ಲ, ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಕ್ಯಾಲ್ಶಿಯಂ ಇದ್ದರೂ ಅದನ್ನು ಹೀರಿಕೊಳ್ಳಲು ಮೂಳೆಗಳಿಗೆ ಸೋಡಿಯಂ ತಡೆಯೊಡ್ಡುತ್ತದೆ. ಆಸ್ಟಿಯೊಪೊರೊಸಿಸ್‌ನಂಥ ಮಾರಕ ಕಾಯಿಲೆಗಳು ಅಮರಿಕೊಳ್ಳುವುದಕ್ಕೆ ಇಷ್ಟು ಸಾಲದೇ?

Baking soda

ಹಾಗಾಗಿಯೇ ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ ಬಳಕೆ ಅತಿಯಾದರೆ, ಅದರ ದೂರಗಾಮಿ ಪರಿಣಾಮವಾಗಿ ಮೂತ್ರಪಿಂಡಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಇನೊದಲ್ಲಿರುವುದು ಶೇ. ೬೦ರಷ್ಟು ಸೋಡಿಯಂ. ಈ ವಸ್ತುಗಳನ್ನು ಎಂದಾದರೊಮ್ಮೆ ಉಪಯೋಗಿಸಬಹುದೇ ಹೊರತು ನಿತ್ಯದ ಅಡುಗೆಯಲ್ಲಿ ಇವುಗಳನ್ನು ಉಪ್ಪು, ಸಕ್ಕರೆಯಂತೆ ಬಳಸುವ ಹಾಗಿಲ್ಲ. ಸೋಡಾಗಿಂತಲೂ ಇನೊ ಕಡಿಮೆ ತೀವ್ರತೆಯದ್ದು ಹೌದಾದರೂ, ಇಡ್ಲಿ, ದೋಕ್ಲಾ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಪದೇಪದೆ ಬಳಸಿದರೆ ರಕ್ತದೊತ್ತಡ ಹೆಚ್ಚುವುದು ಖಂಡಿತ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಆಂಟಾಸಿಡ್‌ನಂತೆ ಬಳಸುವಾಗಲೂ ೫ ಗ್ರಾಂ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಸಲ್ಲದು. ಅದರಲ್ಲೂ ರಕ್ತದೊತ್ತಡ, ಮೂತ್ರಪಿಂಡ, ಯಕೃತ್‌ ಮತ್ತು ಹೃದಯದ ಆರೋಗ್ಯಗಳ ಸಮಸ್ಯೆ ಇರುವವರು ಇಂಥ ವಸ್ತುಗಳನ್ನು ಆದಷ್ಟೂ ಬಳಸದೇ ಇರುವುದೇ ಕ್ಷೇಮ. ಹೆಚ್ಚಿನ ಸೋಡಿಯಂ ದೇಹಕ್ಕೆ ಹೊರೆಯೇ.

Baking soda

ಆಂಟಾಸಿಡ್‌ ಬಗ್ಗೆ ಎಚ್ಚರ

ಯಾವುದೇ ಆಂಟಾಸಿಡ್‌ಗಳು ದೇಹದ ಪ್ರತಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸೋಂಕುಗಳು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಾಗುವ ಆಸಿಡಿಟಿ ನಿಯಂತ್ರಣಕ್ಕೆ ಆಂಟಾಸಿಡ್‌ ಮೊರೆ ಹೋಗುವ ಬದಲು, ಜೀವನಶೈಲಿಯ ಬದಲಾವಣೆಯಿಂದ ಈ ಸಮಸ್ಯೆಯನ್ನು ಹತೋಟಿಗೆ ತರುವುದಕ್ಕೆ ಯತ್ನಿಸುವುದು ಕ್ಷೇಮ. ಸೋಡಾದಲ್ಲಿ ಹೇಳುವಂಥ ಯಾವುದೇ ಪೋಷಕಾಂಶ ಇಲ್ಲ. ಇದರಲ್ಲಿರುವ ಫಾಸ್ಫಾರಿಕ್‌ ಆಮ್ಲವು ಹೊಟ್ಟೆಯಲ್ಲಿರುವ ಜೀರ್ಣ ರಸದೊಂದಿಗೆ ಬೆರೆತು, ಪಚನವನ್ನು ಇನ್ನಷ್ಟು ನಿಧಾನಗೊಳಿಸುತ್ತದೆ; ಸತ್ವಗಳನ್ನು ಹೀರಿಕೊಳ್ಳುವ ದೇಹದ ಕೆಲಸಕ್ಕೆ ಅಡ್ಡಿ ಮಾಡುತ್ತದೆ. ಇದರಿಂದ ಆರೋಗ್ಯ ಹಾಳು ಹೊರತಾಗಿ ಮತ್ತೇನಿಲ್ಲ.
ಹಾಗಾಗಿ ಬೇಕ್ ಮಾಡುವಾಗ ಮೊಟ್ಟೆ, ಮೊಸರು ಅಥವಾ ಅಗಸೆಯಂಥ ಲೋಳೆ ಬರುವ ಬೀಜಗಳ ಬಳಕೆಯಂಥ ಇತರ ಮಾರ್ಗಗಳ ಉಪಯೋಗ ಸಾಧ್ಯವೇ ಎಂಬುದನ್ನು ಪರಿಶೀಲಿಸುವುದು ಕ್ಷೇಮ. ಹಿಟ್ಟು ಹುದುಗು ಬರಬೇಕೆಂದರೆ, ಎಂಟು ತಾಸುಗಳ ಅಥವಾ ರಾತ್ರಿ-ಬೆಳಗಿನ ಸಮಯ ನೀಡುವುದೇ ಸರಿ. ಇಷ್ಟಕ್ಕೂ ಕಾಳು-ಬೇಳೆ ಸಾಕಷ್ಟು ಬಳಸಿದಲ್ಲಿ ಹಿಟ್ಟು ತಾನಾಗಿಯೇ ಹುದುಗುತ್ತದೆ, ಸೋಡಾ ಅಗತ್ಯವೂ ಬೀಳುವುದಿಲ್ಲ. ಅಂತೂ ಅಜ್ಜಿ ಕಾಲದ್ದೇ ಕೆಲವೊಮ್ಮೆ ಕ್ಷೇಮ ಎಂಬುದರಲ್ಲಿ ಅತಿಶಯವಿಲ್ಲ.

ಇದನ್ನೂ ಓದಿ: Healthy Weight Gain: ತೂಕ ಹೆಚ್ಚಿಸಿಕೊಳ್ಳಬೇಕೆ? ಇಲ್ಲಿದೆ ಆರೋಗ್ಯಕರ ಆಯ್ಕೆ!

Continue Reading

ಆಹಾರ/ಅಡುಗೆ

Pasta Cooking Tips: ನೀವು ಪಾಸ್ತಾ ಪ್ರಿಯರೇ? ಆರೋಗ್ಯಕರವಾಗಿ ಪಾಸ್ತಾ ಹೀಗೆ ತಯಾರಿಸಿ

ನಿಮ್ಮ ಮಕ್ಕಳಿಗೆ ಪಾಸ್ತಾ ಎಂದರೆ ಸ್ವರ್ಗವೇ? ಅವರಿಗೂ ಪಾಸ್ತಾ ತಿನ್ನಬಾರದೆಂದು ತಾಕೀತು ಮಾಡಿದ್ದೀರಾ? ಹಾಗಾದರೆ ನೀವು ಇಷ್ಟೆಲ್ಲ ತಲೆಬಿಸಿ ಮಾಡುವ ಅಗತ್ಯವಿಲ್ಲ. (pasta cooking tips) ಈ ಲೇಖನ ಓದಿ.

VISTARANEWS.COM


on

Pasta Cooking Tips
Koo

ನೀವು ಪಾಸ್ತಾ ಪ್ರಿಯರೇ? ಆದರೆ, ಪಾಸ್ತಾ ತಿನ್ನುವುದು ಅನಾರೋಗ್ಯಕರ ಎಂಬ ಕಾರಣಕ್ಕೆ ನೀವು ಪಾಸ್ತಾ ತಿನ್ನುವುದನ್ನು ಬಿಟ್ಟಿದ್ದೀರಾ? ಅಥವಾ ನಿಮ್ಮ ಮಕ್ಕಳಿಗೆ ಪಾಸ್ತಾ ಎಂದರೆ ಸ್ವರ್ಗವೇ? ಅವರಿಗೂ ಪಾಸ್ತಾ ತಿನ್ನಬಾರದೆಂದು ತಾಕೀತು ಮಾಡಿದ್ದೀರಾ? ಹಾಗಾದರೆ ನೀವು ಇಷ್ಟೆಲ್ಲ ತಲೆಬಿಸಿ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಕಾರ್ಬೋಹೈಡ್ರೇಟ್‌ ಇರುವುದರಿಂದ ಇದನ್ನು ಖಾಲಿ ಕ್ಯಾಲರಿಗಳು ಎಂದೇ ಪರಿಗಣಿಸಲಾಗುತ್ತದೆ. ನಮ್ಮ ದೇಹಕ್ಕೆ ಶಕ್ತಿ ನೀಡಲು ಬೇಕಾಗುವ ಪೋಷಕಾಂಶಗಳ ಪೈಕಿ ಕಾರ್ಬೋಹೈಡ್ರೇಟ್‌ ಕೂಡಾ ಒಂದಾಗಿದ್ದರೂ, ಇತರ ಪೋಷಕಾಂಶಗಳ ಸೇವನೆಯೂ ಬಹಳ ಮುಖ್ಯ. ಜೊತೆಗೆ ಪಾಸ್ತಾದ ಹೆಸರಿನಲ್ಲಿ ರೆಡಿ ಟು ಕುಕ್‌ ಪಾಸ್ತಾ ಪ್ಯಾಕೆಟ್‌ಗಳು, ರಾಶಿ ರಾಶಿ ಚೀಸ್‌, ಬೆಣ್ಣೆ ಮೆಯೋನೀಸ್‌, ಕ್ರೀಂ, ಕೆಚಪ್‌ ಸುರಿದು ಮಾಡಲಾಗುವ ಪಾಸ್ತಾಗಳ ಮೂಲಕ ನಿಮ್ಮ ಮಕ್ಕಳಿಗಾಗಲೀ, ನಿಮಗಾಗಲೀ ಯಾವ ಪೋಷಕಾಂಶವೂ ಸರಿಯಾಗಿ ಸಿಗಲಾರದು. ಬದಲಾಗಿ ಅನಾರೋಗ್ಯಕರ ಆಹಾರವಾಗಿಯೇ ಪಾಸ್ತಾ ಬದಲಾಗುತ್ತದೆ. ಹಾಗಾದರೆ ಪಾಸ್ತಾವನ್ನು ಆರೋಗ್ಯಕರವನ್ನಾಗಿ ಮಾಡುವುದು ಹೇಗೆ ಅಂತೀರಾ? ಇಲ್ಲಿವೆ (pasta cooking tips) ಸರಳ ತಂತ್ರಗಳು.

People at cooking workshop making fresh pasta

ಪಾಸ್ತಾದ ಮೂಲ ತಿಳಿಯಿರಿ

ಪಾಸ್ತಾವನ್ನು ಕೊಳ್ಳುವಾಗ ಅದು ಯಾವುದರಿಂದ ಮಾಡಿದ ಪಾಸ್ತಾ ಎಂಬುದನ್ನು ಓದಿ. ಉದಾಹರಣೆಗೆ ಮೈದಾದಿಂದ ಮಾಡಿದ ಪಾಸ್ತಾ ಖರೀದಿಸಬೇಡಿ. ಗೋಧಿಯಿಂದ ಅಥವಾ ಇತರ ಧಾನ್ಯಗಳಿಂದ ಮಾಡಿದ ಪಾಸ್ತಾಕ್ಕೆ ಮಹತ್ವ ನೀಡಿ. ಹೋಲ್‌ ಗ್ರೈನ್‌ ಪಾಸ್ತಾ ಸಿಕ್ಕರೆ ಒಳ್ಳೆಯದು. ಈಗ ಬಗೆಬಗೆಯ ಮಾದರಿಯ ಪ್ರೊಟೀನ್‌ನಿಂದ ಶ್ರೀಮಂತವಾಗಿರುವ ಪಾಸ್ತಾಗಳು ಸಿಗುತ್ತವೆ.

Pasta Salad with Tuna

ತರಕಾರಿ ಹೆಚ್ಚು ಬಳಸಿ

ಪಾಸ್ತಾ ಮಾಡುವಾಗ ಸಾಕಷ್ಟು ತರಕಾರಿಗಳನ್ನು ಹಾಕಿ. ಅಣಬೆ, ಪನೀರ್‌, ಬೀನ್ಸ್‌, ಜೋಳ, ಬಟಾಣಿ, ಕ್ಯಾರೆಟ್‌, ಕ್ಯಾಪ್ಸಿಕಂ ಇತ್ಯಾದಿ ಇತ್ಯಾದಿ ತರಕಾರಿಗಳು ಪಾಸ್ತಾಕ್ಕೆ ಹೊಂದಿಕೊಳ್ಳುತ್ತವೆ. ಹೀಗಾಗಿ ಹೊಂದಿಕೊಳ್ಳುವ ತರಕಾರಿಗಳನ್ನು ಬಳಸಿ. ತರಕಾರಿಯೂ ಸೇರಿದಾಗ ಪಾಸ್ತಾದ ಆರೋಗ್ಯಕರ ಅಂಶ ಇನ್ನೂ ಹೆಚ್ಚಾಗುತ್ತದೆ.

Pasta with tomato sauce

ಸಾಸ್ ಮನೆಯಲ್ಲೇ ತಯಾರಿಸಿ

ಪಾಸ್ತಾಕ್ಕೆ ಬಳಸುವ ಸಾಸ್‌ ಅಥವಾ ಮಯನೀಸ್‌ ಅನ್ನು ಮನೆಯಲ್ಲೇ ತಯಾರಿಸಿ. ಕ್ರೀಂ ಕೆಚಪ್‌ಗಳಿಗೆ ಮೊರೆ ಹೋಗಬೇಡಿ. ಟೊಮೇಟೋ, ಈರುಳ್ಳಿ ಇತ್ಯಾದಿಗಳನ್ನು ಬಳಸಿ ಮನೆಯಲ್ಲಿಯೇ ಚಟ್ನಿ ಮಾಡಿ. ರೆಡ್‌ ಪಾಸ್ತಾ ಮಾಡಬಹುದು. ರೆಸ್ಟೋರೆಂಟ್‌ಗಳಿಗೂ ಸೆಡ್ಡು ಹೊಡೆಯಬಲ್ಲ ಪಾಸ್ತಾವನ್ನು ಕ್ಷಣ ಮಾತ್ರದಲ್ಲಿ ನೀವು ಕೆಚಪ್‌ ಬಳಸದೆಯೇ ಮಾಡಬಹುದು. ಇಂತಹ ಅಡುಗೆಯನ್ನು ಕಲಿಯಿರಿ.

Pasta

ಅಡುಗೆ ಮನೆಯಲ್ಲಿ ಜಾದೂ ಮಾಡಿ

ವೈಟ್‌ ಪಾಸ್ತಾ ಮಾಡಲು ಬಳಸುವ ಮೆಯೋನೀಸ್‌ ಅನ್ನು ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಿ. ಒಂದಿಷ್ಟು ಬೆಳ್ಳುಳ್ಳಿ, ಹಂಗ್‌ ಕರ್ಡ್‌ ಹಾಗೂ ಗೋಡಂಬಿಯನ್ನು ನೆನೆಹಾಕಿ ಪೇಸ್ಟ್‌ ಮಾಡಿದರೆ ಮಾರುಕಟ್ಟೆಯ ಮಯೋನೀಸನ್ನು ಕೂಡಾ ನಿವಾಳಿಸಿ ಎಸೆಯಬಹುದು. ಇಂತಹ ಅಡುಗೆ ತಂತ್ರಗಳನ್ನು ಕಲಿತುಕೊಂಡು, ಅಡುಗೆಮನೆಯಲ್ಲಿಯೇ ಜಾದೂ ಮಾಡಿ!

ಇದನ್ನೂ ಓದಿ: Cooking Tips: ನೀವೂ ಹೀಗೇನಾ? ಹಾಗಿದ್ದರೆ ಅಡುಗೆ ನಿಮಗೆ ಕಬ್ಬಿಣದ ಕಡಲೆ!

Continue Reading
Advertisement
Nitasha Kaul
ದೇಶ1 min ago

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Namma Metro Farmer dismiss
ಬೆಂಗಳೂರು10 mins ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

Rajya Sabha Elections Yogendra appointed as KRPP agent Reddy supports to Congress
ರಾಜಕೀಯ14 mins ago

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

Actor Darshan rally police deny permission
ಸ್ಯಾಂಡಲ್ ವುಡ್26 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು33 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ45 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ46 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ54 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ57 mins ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ1 hour ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌