Hot Corn Recipe: ಮಳೆಗಾಲದಲ್ಲಿ ಬಿಸಿಬಿಸಿಯಾದ ಜೋಳವನ್ನು ಮನೆಯಲ್ಲೇ ಮಾಡುವುದು ಹೇಗೆ? - Vistara News

ಆಹಾರ/ಅಡುಗೆ

Hot Corn Recipe: ಮಳೆಗಾಲದಲ್ಲಿ ಬಿಸಿಬಿಸಿಯಾದ ಜೋಳವನ್ನು ಮನೆಯಲ್ಲೇ ಮಾಡುವುದು ಹೇಗೆ?

Hot Corn Recipe: ಜೋಳದ ತೆನೆಯನ್ನು ಹಾಗೆಯೇ ಬೆಂಕಿಯಲ್ಲಿ ಸುಟ್ಟು ತಿನ್ನುವ ಮಜಾವೇ ಬೇರೆ. ಹೊರಗೆ ಕಾಲಿಟ್ಟರೆ ರಸ್ತೆಬದಿಯಲ್ಲಿ ಒಂದಿಷ್ಟು ಜೋಳದ ತೆನೆಗಳನ್ನಿಟ್ಟುಕೊಂಡು ರುಚಿಯಾದ ಜೋಳ ಸುಟ್ಟು ಕೊಡುತ್ತಾರೆ. ಸುಮ್ಮನೆ ಪಾರ್ಕಿನಲ್ಲಿ ಕೂರುವಾಗಲೋ, ರಸ್ತೆಯುದ್ದಕ್ಕೂ ಹಸಿವಾಗಿ ನಡೆಯುವಾಗಲೋ, ಬಸ್ಸಿಗಾಗಿ, ಮೆಟ್ರೋಗಾಗಿ ಕಾಯುವಾಗಲೋ, ಕೆರೆ ಬದಿಯಲ್ಲಿ ಸುಮ್ಮನೆ ಸಂಗಾತಿಯ ಹೆಗಲಿಗೆ ತಲೆಯಿಟ್ಟು ಕೂತಿರುವಾಗಲೋ ಈ ಬಿಸಿಬಿಸಿ ಜೋಳವನ್ನು ತಿನ್ನುವುದರಿಂದ ಸಿಕ್ಕುವ ಖುಷಿ ಅಪರಿಮಿತವೇ. ಇಂತಹ ರುಚಿಯಾದ ಜೋಳವನ್ನು ಮನೆಯಲ್ಲೂ ನಾವು ಮಾಡಬಹುದು.

VISTARANEWS.COM


on

Hot Corn Recipe
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಳೆಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಲು ಬೇಕು ಅನಿಸುವುದು ಸಹಜ. ಇಂತಹ ಸಮಯದಲ್ಲಿ ಬಿಸಿಬಿಸಿಯಾಗಿ, ರುಚಿಯಾಗಿ ಜೊತೆಗೆ ಆರೋಗ್ಯಕರವಾಗಿಯೂ ಕಾಣುವ ಕೆಲವೇ ಕೆಲವು ತಿನಿಸುಗಳ ಪೈಕಿ ಥಟ್ಟನೆ ನೆನಪಾಗುವುದು ಜೋಳ. ಜೋಳದ ತೆನೆಯನ್ನು ಹಾಗೆಯೇ ಬೆಂಕಿಯಲ್ಲಿ ಸುಟ್ಟು ತಿನ್ನುವ ಮಜಾವೇ ಬೇರೆ. ಹೊರಗೆ ಕಾಲಿಟ್ಟರೆ ರಸ್ತೆಬದಿಯಲ್ಲಿ ಒಂದಿಷ್ಟು ಜೋಳದ ತೆನೆಗಳನ್ನಿಟ್ಟುಕೊಂಡು ರುಚಿಯಾದ ಜೋಳ ಸುಟ್ಟು ಕೊಡುತ್ತಾರೆ. ಸುಮ್ಮನೆ ಪಾರ್ಕಿನಲ್ಲಿ ಕೂರುವಾಗಲೋ, ರಸ್ತೆಯುದ್ದಕ್ಕೂ ಹಸಿವಾಗಿ ನಡೆಯುವಾಗಲೋ, ಬಸ್ಸಿಗಾಗಿ, ಮೆಟ್ರೋಗಾಗಿ ಕಾಯುವಾಗಲೋ, ಕೆರೆ ಬದಿಯಲ್ಲಿ ಸುಮ್ಮನೆ ಸಂಗಾತಿಯ ಹೆಗಲಿಗೆ ತಲೆಯಿಟ್ಟು ಕೂತಿರುವಾಗಲೋ ಈ ಬಿಸಿಬಿಸಿ ಜೋಳವನ್ನು ತಿನ್ನುವುದರಿಂದ ಸಿಕ್ಕುವ ಖುಷಿ ಅಪರಿಮಿತವೇ. ಇಂತಹ ರುಚಿಯಾದ ಜೋಳವನ್ನು ಮನೆಯಲ್ಲೂ ನಾವು ಮಾಡಬಹುದಲ್ಲ ಎಂದುಕೊಂಡು ಜೋಳ ಸುಟ್ಟರೆ ಆರಂಭದಲ್ಲಿ ಈ ಪ್ರಯತ್ನ ಕೈಕೊಡುವುದೇ ಹೆಚ್ಚು. ಸುಟ್ಟರಾಯಿತಲ್ಲ, ಅದೇನು ಬ್ರಹ್ಮವಿದ್ಯೆಯೇ ಎಂದು ಕೇಳಬೇಡಿ. ಇಲ್ಲಿ, ಜೋಳವನ್ನು ಸುಡುವುದಷ್ಟೇ ಅಲ್ಲ, ಅದೇ ರುಚಿಯೂ ನಮಗೆ ಬೇಕು. ಸುಟ್ಟ ಕೂಡಲೇ, ಸ್ಟ್ರೀಟ್‌ ಸ್ಟೈಲ್‌ ಜೋಳದ ರುಚಿ ಬರದು. ಬನ್ನಿ, ಸರಿಯಾದ ಕ್ರಮದಲ್ಲಿ, ಸ್ಟ್ರೀಟ್‌ ಸ್ಟೈಲ್‌ ಸುಟ್ಟ ಜೋಳ (ಭುಟ್ಟಾ) ಮಾಡವ ಬಗೆಯನ್ನು ನೋಡೋಣ. ಅದೇ ರುಚಿ ಪಡೆಯಲು ಬೇಕಾದ ಕೆಲವು (Hot Corn Recipe ) ಸರಳ ಕ್ರಮಗಳನ್ನು ತಿಳಿಯೋಣ.

Cooked Corn Cobs
  • ಸುಟ್ಟ ಜೋಳದ ರುಚಿ, ಯಾವಾಗಲೂ ಅದಕ್ಕೆ ಬಳಸುವ ಮಸಾಲೆಯಲ್ಲಿಯೂ ಅಡಗಿದೆ. ಸಾಮಾನ್ಯವಾಗಿ ಸುಟ್ಟ ಜೋಳಕ್ಕೆ ಚಾಟ್‌ ಮಸಾಲದ ಜೊತೆಗೆ ಕೆಂಪುಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಸವರಲಾಗುತ್ತದೆ. ನೀವು ಈ ಮಸಾಲೆಯನ್ನು ಹೊರಗಡೆಯಿಂದ ಕೊಂಡು ತಂದು ಬಳಸುತ್ತೀರಾದರೆಸರಿ, ನೀವೇ ಮನೆಯಲ್ಲಿ ಈ ಮಸಾಲೆಯನ್ನು ಅರೆದು ಸಿದ್ಧಪರಿಸಿದರೆ, ಘಮ, ತಾಜಾತನ ಹಾಗೂ ರುಚಿ ಎಲ್ಲವೂ ಹೆಚ್ಚು. ಖಂಡಿತವಾಗಿ ಇದು ನಿಮ್ಮ ಶ್ರಮ ಹಾಗೂ ಸಮಯವನ್ನು ಬೇಡುತ್ತದೆ.
  • ಜೋಳದ ತೆನೆಯನ್ನು ಸುಡುವಾಗ ಸಾಮಾನ್ಯವಾಗಿ ಹೊರಗಡೆ ಬೀದಿಬದಿಯಲ್ಲಿ ಇದ್ದಿಲಿನ ಒಲೆಯಲ್ಲಿ ಸುಡುವುದು ಜಾಸ್ತಿ. ಆದರೆ, ಮನೆಯಲ್ಲಿ ನಾವು ಸುಡುವಾಗ ನೇರವಾಗಿ ಗ್ಯಾಸ್‌ನ ಒಲೆಯಲ್ಲಿ ಇಡುತ್ತೇವೆ. ಇಂತಹ ಸಂದರ್ಭ ಇದು ಕೆಲವೊಮ್ಮೆ ಹೆಚ್ಚಾಗುವುದು ಅಥವಾ ಕಡಿಮೆಯಾಗುವ ಸಂಭವ ಹೆಚ್ಚು. ಗ್ಯಾಸ್‌ನ ಒಲೆಯ ತೀಕ್ಷ್ಣತೆ ಹೆಚ್ಚು. ಗ್ಯಾಸ್‌ನ ಒಲೆಯಲ್ಲಿ ಸುಡುವಾಗ ಎಲ್ಲ ಬದಿಯನ್ನು ನಿಯಮಿತವಾಗಿ ತಿರುಗಿಸಿ ಸುಡುತ್ತಾ ಬನ್ನಿ. ಆಗ ಎಲ್ಲ ಬದಿಯೂ ಸರಿಯಾಗಿ ಸುಡುತ್ತದೆ.
  • ಬದಿಗಳೆಲ್ಲ ಸ್ವಲ್ಪ ಕಪ್ಪಾಗುವ ಹಾಗೆ ಸುಟ್ಟ ಮೇಲೆ, ಬೆಣ್ಣೆಯನ್ನು ಸವರಿ. ಬೆಣ್ಣೆ ಸವರಿದ ಜೋಳಕ್ಕೆ ಆಹಾ ಎಂಬ ರುಚಿ.
  • ಬೆಣ್ಣೆ ಸವರಿದ ಮೇಲೆ ಜೋಳವನ್ನು ನೀವು ರೆಡಿ ಮಾಡಿದ ಮಸಾಲೆಯ ಮೇಲೆ ಹೊರಳಿಸಿ. ಅಥವಾ ಕೈಯಿಂದ ಮಸಾಲೆಯನ್ನು ತೆಗೆದು ಚಿಮುಕಿಸಿ. ಎಲ್ಲ ಬದಿಗಳಿಗೂ ಮಸಾಲೆ ತಲುಪಲಿ. ನಿಮ್ಮ ರುಚಿಗೆ ಅನುಗುಣವಾಗಿ ಬೇಕಾದಷ್ಟು ಮಸಾಲೆ ಹಾಕಿಕೊಳ್ಳಬಹುದು.
  • ಇಲ್ಲಿಗೇ ಮುಗಿಯಲಿಲ್ಲ. ಈಗ ಈ ಮಸಾಲೆಯುಕ್ತ ಜೋಳದ ತೆನೆಯ ಮೇಲೆ ನಿಂಬೆಹಣ್ಣಿನ ರಸವನ್ನು ಹಿಂಡಿ. ನಿಂಬೆಹಣ್ಣಿನ ಹುಳಿ ರುಚಿಯೂ ಸುಟ್ಟ ಜೋಳದ ಜೊತೆಗೆ ಸೇರಿಕೊಂಡರೆ ಸಿಗುವ ರುಚಿಯ ಮುಂದೆ ಬೇರಾವುದೂ ನಿಲ್ಲದು. ಅಂಥ ಸ್ವರ್ಗ ಸಮಾನ ರುಚಿಯ ಹಬೆಯಾಡುವ ಬಿಸಿ ಜೋಳವನ್ನು ಕೈಯಲ್ಲಿ ಹಿಡಿದು, ಬಾಲ್ಕನಿಯಲ್ಲಿ ಮಳೆ ನೋಡುತ್ತಾ ತಿನ್ನಲು ಕೂತರೆ, ಇನ್ನೇನು ಬೇಕು ಹೇಳಿ. ಮಳೆಯಲ್ಲಿ ಸುಖವನ್ನು ಕಾಣಲು ಇದಕ್ಕಿಂತ ಸುಲಭವಾದ ಪರ್ಫೆಕ್ಟ್‌ ಉಪಾಯ ಇನ್ನೊಂದಿಲ್ಲ.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

World Biryani Day : ಕೋಲ್ಕತಾ, ಹೈದರಾಬಾದ್ ಬಿರಿಯಾನಿ ತಿಂದಿರಬಹುದು; ಇವುಗಳ ಹಿನ್ನೆಲೆ ಗೊತ್ತಾ?

ಬಿರಿಯಾನಿಯ ಜನಪ್ರಿಯತೆಯ ಬಗ್ಗೆ ಎಲ್ಲರೂ ಒಪ್ಪಿಕೊಂಡರೂ ಯಾವ ಪ್ರಕಾರ ಉತ್ತಮವಾಗಿದೆ ಎಂಬುದಕ್ಕೆ ಒಮ್ಮತವಿಲ್ಲ. ವಿಶ್ವ ಬಿರಿಯಾನಿ ದಿನಚರಣೆಯ (World Biryani Day) ಈ ಸಂದರ್ಭದಲ್ಲಿ ಈ ಸಾಂಪ್ರದಾಯಿಕ ಖಾದ್ಯವನ್ನು ಸವಿಯಲು ಸೂಕ್ತವಾದ ಹಲವಾರು ಬಿರಿಯಾನಿ ಪಾಯಿಂಟ್ ಗಳಿವೆ. ಆದರೆ ಇವುಗಳಲ್ಲಿ ಎರಡು ಅತ್ಯಂತ ಪ್ರಸಿದ್ಧವಾದವುಗಳಾಗಿವೆ. ಒಂದು ಹೈದರಾಬಾದ್ ಬಿರಿಯಾಣಿ ಮತ್ತು ಇನ್ನೊಂದು ಕೋಲ್ಕತಾ ಬಿರಿಯಾನಿ.

VISTARANEWS.COM


on

By

World Biryani Day:
Koo

ಬಿರಿಯಾನಿಯನ್ನು (World Biryani Day) ಇಷ್ಟಪಡದವರು ಯಾರಿದ್ದಾರೆ? ಹೆಸರು ಹೇಳಿದ ತಕ್ಷಣವೇ ಬಾಯಲ್ಲಿ ನೀರೂರುವಂತೆ ಮಾಡುವ ಬಿರಿಯಾನಿ ಪ್ರಿಯರು ಪ್ರತಿ ಮನೆಯಲ್ಲಿ ಒಬ್ಬರಾದರೂ ಸಿಗುತ್ತಾರೆ. ದೇಶದಲ್ಲಿ ಎಲ್ಲೇ ಪ್ರಯಾಣಿಸಿ ನೆಚ್ಚಿನ ಖಾದ್ಯದ (food) ಬಗ್ಗೆ ಜನರನ್ನು ಕೇಳಿದರೆ ಹೆಚ್ಚಾಗಿ ಕೇಳಿ ಬರುವ ಹೆಸರು ಬಿರಿಯಾನಿಯೇ ಆಗಿರುತ್ತದೆ.

ಭಾರತದಲ್ಲಿ (india) ಬಿರಿಯಾನಿ ಪ್ರಿಯರು ಎಷ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ 2023ರಲ್ಲಿ ಭಾರತದಲ್ಲಿ 10.09 ಕೋಟಿ ಬಿರಿಯಾನಿ ಆನ್ ಲೈನ್ ನಲ್ಲಿ ಆರ್ಡರ್ ಆಗಿದೆ. ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ ಎಂದು ಇತ್ತೀಚಿನ ಅಧ್ಯಯನಗಳು ಬಹಿರಂಗಪಡಿಸಿವೆ. ಇದು ಈ ಖಾದ್ಯಕ್ಕಾಗಿ ರಾಷ್ಟ್ರದ ಅಪಾರ ಪ್ರೀತಿಯನ್ನು ಪ್ರದರ್ಶಿಸುತ್ತದೆ.

ಬಿರಿಯಾನಿಯ ಜನಪ್ರಿಯತೆಯ ಬಗ್ಗೆ ಎಲ್ಲರೂ ಒಪ್ಪಿಕೊಂಡರೂ ಯಾವ ಪ್ರಕಾರ ಉತ್ತಮವಾಗಿದೆ ಎಂಬುದಕ್ಕೆ ಒಮ್ಮತವಿಲ್ಲ. ವಿಶ್ವ ಬಿರಿಯಾನಿ ದಿನಚರಣೆಯ ಈ ಸಂದರ್ಭದಲ್ಲಿ ಈ ಸಾಂಪ್ರದಾಯಿಕ ಖಾದ್ಯವನ್ನು ಸವಿಯಲು ಸೂಕ್ತವಾದ ಹಲವಾರು ಬಿರಿಯಾನಿ ಪಾಯಿಂಟ್ ಗಳಿವೆ. ಆದರೆ ಇವುಗಳಲ್ಲಿ ಎರಡು ಅತ್ಯಂತ ಪ್ರಸಿದ್ಧವಾದವುಗಳಾಗಿವೆ. ಒಂದು ಹೈದರಾಬಾದ್ ಮತ್ತು ಇನ್ನೊಂದು ಕೋಲ್ಕತಾ.

ಪ್ರತಿಯೊಂದು ಬಿರಿಯಾನಿಯು ತನ್ನದೇ ಆದ ಇತಿಹಾಸ ಮತ್ತು ಗುರುತನ್ನು ಹೊಂದಿದೆ. ವಿಶೇಷವಾದ ಸುವಾಸನೆ ಮತ್ತು ಸೇರ್ಪಡೆಗಳನ್ನು ಹೊಂದಿದೆ. ಇದು ಆಲೂಗೆಡ್ಡೆ ಅಥವಾ ವಿಶೇಷ ಮಸಾಲೆಗಳ ಮಿಶ್ರಣವಾಗಿರುತ್ತದೆ. ಭಾರತದ ಎರಡು ನೆಚ್ಚಿನ ಬಿರಿಯಾನಿ ವಿಧಗಳ ಹಿನ್ನೆಲೆ ಹೀಗಿದೆ.

ಕೋಲ್ಕತಾ ಬಿರಿಯಾನಿ

ಪಶ್ಚಿಮ ಬಂಗಾಳದ ಕೋಲ್ಕತಾ ನಗರದಲ್ಲಿ ಬಿರಿಯಾನಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಕೋಲ್ಕತಾದ ಬಿರಿಯಾನಿಯು ಅದರ ತಿಳಿ ಸುವಾಸನೆ, ಕಡಿಮೆ ಮಸಾಲೆಯುಕ್ತ ಮಾಂಸ ಮತ್ತು ಆಲೂಗಡ್ಡೆಯ ಸರಿಯಾದ ಸೇರ್ಪಡೆಗಳಿಗೆ ಹೆಸರುವಾಸಿಯಾಗಿದೆ. ಆಲೂಗಡ್ಡೆ ಕೋಲ್ಕತಾದ ಬಿರಿಯಾನಿಯ ಭಾಗವಾಗಿ ಹೇಗೆ ಬಂದಿತು ಎಂಬ ಕಥೆಯೇ ಇದೆ. ಇದನ್ನು ಅವಧ್‌ನ ಕೊನೆಯ ನವಾಬ್ ವಾಜಿದ್ ಅಲಿ ಷಾ ಅವರು ಪರಿಚಯಿಸಿದರು.

1856ರಲ್ಲಿ ಅವರನ್ನು ಬ್ರಿಟಿಷರು ಪದಚ್ಯುತಗೊಳಿಸಿದ ಅನಂತರ ಇದು ಕೋಲ್ಕತಾಗೆ ಭಕ್ಷ್ಯವಾಗಿದೆ. ದಂತಕಥೆಯ ಪ್ರಕಾರ, ಆರ್ಥಿಕ ಸಂಕಷ್ಟವು ನವಾಬನಿಗೆ ಕೆಲವು ಮಾಂಸವನ್ನು ಆಲೂಗಡ್ಡೆಯೊಂದಿಗೆ ಬದಲಿಸುವಂತೆ ಮಾಡಿತು! ಆದರೆ ಐತಿಹಾಸಿಕ ಪುರಾವೆಗಳು ಅವರು ಶ್ರೀಮಂತರಾಗಿದ್ದರು ಎನ್ನುತ್ತದೆ. ಬಿರಿಯಾನಿಯಲ್ಲಿ ಆಲೂಗಡ್ಡೆಯ ಬಳಕೆ 17ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸರಿಂದ ಭಾರತಕ್ಕೆ ಬಂದಿತು ಎನ್ನಲಾಗುತ್ತದೆ.

ಹೈದರಾಬಾದ್ ಬಿರಿಯಾನಿ

ಹೈದರಾಬಾದ್‌ನಲ್ಲಿ ಬಿರಿಯಾನಿ ನಗರದ ಸಂಸ್ಕೃತಿ ಮತ್ತು ಇತಿಹಾಸದ ಒಂದು ಭಾಗವಾಗಿದೆ. ಈ ಖಾದ್ಯದ ನಿಜವಾದ ಮೂಲ ಹೈದರಾಬಾದ್ ಎಂದು ಹಲವರು ನಂಬುತ್ತಾರೆ. ಆದರೆ ಅದರ ಪರಂಪರೆಯು ಅನೇಕ ಸಂಸ್ಕೃತಿಗಳ ಸಂಗಮವಾಗಿದೆ. “ಬಿರಿಯನ್” ಎಂಬ ಪದವು ಪರ್ಷಿಯನ್ ಭಾಷೆಯಿಂದ ಬಂದಿದೆ.

ಇದು ಅಡುಗೆ ಮಾಡುವ ಮೊದಲು ಹುರಿಯುವುದನ್ನು ಸೂಚಿಸುತ್ತದೆ. ಬಿರಿಂಜ್ ಎಂದರೆ ಎಂದರೆ ಅಕ್ಕಿ. ಒಂದು ಕಥೆಯ ಪ್ರಕಾರ, ಮುಮ್ತಾಜ್ ಮಹಲ್ ಅಪೌಷ್ಟಿಕ ಮೊಘಲ್ ಸೈನಿಕರ ಬಗ್ಗೆ ಕಾಳಜಿ ವಹಿಸಿ, ಮಾಂಸ ಮತ್ತು ಅನ್ನವನ್ನು ಸಂಯೋಜಿಸುವ ಪೌಷ್ಟಿಕಾಂಶದ ಭಕ್ಷ್ಯವನ್ನು ತಯಾರಿಸಲು ಬಾಣಸಿಗರಿಗೆ ಸೂಚಿಸಿದರು. ಮಸಾಲೆ ಮತ್ತು ಕೇಸರಿಗಳಿಂದ ಇದನ್ನು ಸಮೃದ್ಧಗೊಳಿಸಲಾಯಿತು. ಕಟ್ಟಿಗೆಯ ಬೆಂಕಿಯಿಂದ ಇದನ್ನು ಬೇಯಿಸಲಾಗುತ್ತದೆ.

ಇನ್ನೊಂದು ದಂತಕಥೆಯ ಪ್ರಕಾರ 1398ರಲ್ಲಿ ಭಾರತಕ್ಕೆ ಬಿರಿಯಾನಿಯನ್ನು ಪರಿಚಯಿಸಿದ ಟರ್ಕ್-ಮಂಗೋಲ್ ವಿಜಯಿ ತೈಮೂರ್‌ಗೆ ಸಲ್ಲುತ್ತದೆ. ಇತರರು ಈ ಪಾಕವಿಧಾನವು ಹೈದರಾಬಾದ್‌ನ ನಿಜಾಮರು ಮತ್ತು ಲಕ್ನೋದ ನವಾಬರ ಅಡುಗೆಮನೆಯಲ್ಲಿ ಹುಟ್ಟಿಕೊಂಡಿದೆ ಎಂದು ನಂಬುತ್ತಾರೆ. ಮೊಘಲ್ ಯುಗದಲ್ಲಿ ಬಿರಿಯಾನಿಯು ಆಗಾಗ್ಗೆ ಯುದ್ಧಗಳಲ್ಲಿ ತೊಡಗಿರುವ ಸೇನೆಗಳಿಗೆ ಆಹಾರಕ್ಕಾಗಿ ಪ್ರಧಾನವಾಯಿತು. ವಿಶೇಷವಾಗಿ ಉತ್ತರ ಭಾರತದಲ್ಲಿ ಇದು ಪಕ್ಕಿ ಗೋಷ್ಟ್ ಕಿ ಬಿರಿಯಾನಿ ಎಂದು ಖ್ಯಾತಿಯನ್ನು ಗಳಿಸಿತು.

ಹೈದರಾಬಾದ್‌ನ ಅಸಫ್ ಜಾಹಿ ಆಡಳಿತಗಾರನಾಗಿ ಔರಂಗಜೇಬ್ ನೇಮಿಸಿದ ನಿಜಾಮ್-ಉಲ್-ಮುಲ್ಕ್ ಈ ಭಕ್ಷ್ಯದ ಜನಪ್ರಿಯತೆಗೆ ಗಣನೀಯ ಕೊಡುಗೆ ನೀಡಿದರು. ಸುಮಾರು ನಾಲ್ಕು ಶತಮಾನಗಳವರೆಗೆ ಬಿರಿಯಾನಿಯು ಹೈದರಾಬಾದ್ ಪಾಕಪದ್ಧತಿಯಲ್ಲಿ ಅವಿಭಾಜ್ಯವಾಗಿ ಉಳಿದಿದೆ.

ತೆಲುಗು ಪಾಕಶಾಲೆಯ ಪ್ರಭಾವಗಳನ್ನು ಒಳಗೊಂಡಿದೆ. ಕಚ್ಚಿ ಗೋಷ್ಟ್ ಬಿರಿಯಾನಿ ಹಸಿ ಮಾಂಸ ಮತ್ತು ಮಸಾಲೆಗಳೊಂದಿಗೆ ಬೆರೆಸಿದ ಅಕ್ಕಿಯೊಂದಿಗೆ ನಿಧಾನವಾಗಿ ಬೇಯಿಸಿದ ಭಕ್ಷ್ಯವಾಗಿದೆ. ಇದು ನಿಜಾಮರ ವಿಶೇಷ ಸೃಷ್ಟಿಯಾಗಿತ್ತು ಮತ್ತು ನಂತರ ನವಾಬರು ಅದನ್ನು ಸ್ವೀಕರಿಸಿದರು. ಇಂದು ಹೈದರಾಬಾದಿ ಬಿರಿಯಾನಿ ಭಕ್ಷ್ಯಕ್ಕಾಗಿ ಅತ್ಯಂತ ಪ್ರಸಿದ್ಧ ಮತ್ತು ವ್ಯಾಪಕವಾದ ಪಾಕವಿಧಾನಗಳಲ್ಲಿ ಒಂದಾಗಿದೆ. ಇದು ದೇಶಾದ್ಯಂತ ಜನಪ್ರಿಯವಾಗಿದೆ.

Continue Reading

ಆರೋಗ್ಯ

Health Food Tips: ಈ ಕೆಲವು ಆಹಾರಗಳ ಸೇವನೆಯಿಂದ ಬಾಯಾರಿ, ಗಂಟಲೊಣಗಿ ನೀರು ಬೇಕೆನಿಸುತ್ತದೆ!

Health Food Tips: ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

Health Food Tips
Koo

ಕೆಲವು ಆಹಾರಗಳೇ ಹಾಗೆ (Health Food Tips). ತಿಂದು ಸ್ವಲ್ಪ ಹೊತ್ತಿನಲ್ಲಿ ಬಾಯಾರುತ್ತದೆ. ಗಂಟಲು ಒಣಗುತ್ತದೆ. ದೇಹದ ನೀರೆಲ್ಲ ಬಸಿದು ಹೋದಂಥ ಅನುಭವ. ಮತ್ತೆ ಮತ್ತೆ ನೀರು ಕುಡಿಯಬೇಕೆನಿಸುತ್ತದೆ. ಎಷ್ಟು ನೀರು ಕುಡಿದರೂ, ಹೊಟ್ಟೆಯಲ್ಲಿ ನೀರು ಸದ್ದು ಮಾಡುವಷ್ಟರವರೆಗೆ ನೀರು ತುಂಬಿಸಿಕೊಂಡರೂ ಯಾಕೋ ತೃಪ್ತಿಯಿಲ್ಲದ ಅನುಭವ. ಪದೇ ಪದೇ ಗಂಟಲೊಣಗುವುದು, ಬಾತ್‌ರೂಂಗೆ ಹೋಗಬೇಕೆನಿಸುವುದು ಇತ್ಯಾದಿ ಸಾಮಾನ್ಯ. ಬೇಸಗೆಯಲ್ಲಂತೂ ಈ ಸಮಸ್ಯೆ ಹೇಳತೀರದು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Salt is predominant in processed foods Keep this away Foods To Avoid For Blood Pressure

ಅತಿಯಾಗಿ ಸಂಸ್ಕರಿಸಿದ ಆಹಾರಗಳು

ಅತಿಯಾಗಿ ಸಂಸ್ಕರಿಸಿದ ಆಹಾರಗಳಾದ ಆಲೂಗಡ್ಡೆ ಚಿಪ್ಸ್‌, ಫ್ರೋಜನ್‌ ಪ್ಯಾಕೇಜ್ಡ್‌ ಆಹಾರಗಳು, ನಿಮ್ಮಿಷ್ಟದ ಕ್ಯಾಂಡಿ ಬಾರ್‌ ಇತ್ಯಾದಿಗಳಿಂದ ದೇಹದಲ್ಲಿ ನಿರ್ಜಲೀಕರಣದ ಸ್ಥಿತಿ ಅಂದರೆ ಡಿಹೈಡ್ರೇಶನ್‌ ಉಂಟಾಗುತ್ತದೆ. ಬಾಯಿ ಬಹುಬೇಗನೆ ಒಣಗಿದಂತಾಗುತ್ತದೆ. ನೀರು ಬೇಕೆನಿಸುತದೆ. ಈ ಆಹಾರಗಳಲ್ಲಿ ಸೋಡಿಯಂ ಹಾಗೂ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ದೇಹಕ್ಕೆ ಈ ಸ್ಥಿತಿ ಬರುತ್ತದೆ.

Kerala Inji Curry Ginger Pickle Most Famous Indian Pickles And Their Origin Place

ಉಪ್ಪಿನಕಾಯಿ

ಉಪ್ಪಿನಕಾಯಿ ಇದ್ದರೆ ಊಟ ರುಚಿ ಹೌದು. ಆದರೆ, ಉಪ್ಪಿನಕಾಯಿಯಲ್ಲಿ ಉಪ್ಪು ಹೆಚ್ಚಿರುವುದರಿಂದ ಬಾಯಾರುವುದು ಹೆಚ್ಚು. ಈಗೆಲ್ಲ ಉಪ್ಪು ಕಡಿಮೆ ಇರುವ ಥರಥರದ ಉಪ್ಪಿನಕಾಯಿಗಳನ್ನೂ ಮಾಡಬಹುದಾದ್ದರಿಂದ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಉಪ್ಪಿನಕಾಯಿ ತಿನ್ನುವ ಆಸೆಯ ಮಂದಿ ತಮ್ಮ ಆಸೆಗೆ ಎಳ್ಳುನೀರು ಬಿಡಬೇಕಾಗಿಲ್ಲ.

Soy sauce

ಸೋಯಾ ಸಾಸ್‌

ಯಾವುದೇ ಚೈನೀಸ್‌ ಅಡುಗೆ ಮಾಡುವುದಿದ್ದರೂ ಸೋಯಾ ಸಾಸ್‌ ಬಹುಮುಖ್ಯವಾದ ಪದಾರ್ಥ. ಆದರೆ ಇದರಲ್ಲೂ ಅಧಿಕ ಸೋಡಿಯಂ ಹಾಗೂ ಬ್ರಿಮ್‌ ಇರುವುದರಿಂದ ಇದು ಡಿಹೈಡ್ರೇಶನ್‌ಗೆ ದೂಡುತ್ತದೆ. ಇದರಲ್ಲೂ ಈಗ ಮಾರುಕಟ್ಟೆಯಲ್ಲಿ ಕಡಿಮೆ ಸೋಡಿಯಂ ಇರುವ ವೆರೈಟಿಗಳು ಲಭ್ಯವಿವೆ. ಹಾಗಾಗಿ ಅಂಥವುಗಳ ಆಯ್ಕೆಯನ್ನೂ ಮಾಡಬಹುದು.

Heavy or Rich Desserts Healthy Foods That Are Harmful To Consume At Night

ಸಿಹಿತಿನಿಸುಗಳು/ಡೆಸರ್ಟ್‌ಗಳು

ಸಿಹಿತಿನಿಸಿನಲ್ಲಿ ಹಾಗೂ ಯಾವುದೇ ಡೆಸರ್ಟ್‌ ವಿಚಾರಕ್ಕೆ ಬಂದರೆ ಅದರಲ್ಲಿ ಸಕ್ಕರೆಯಂಶ ಹೆಚ್ಚೇ. ಕೃತಕ ಸಿಹಿಗಳು ಇಂದು ಎಲ್ಲದರಲ್ಲೂ ಇರುವುದರಿಂದ ಕೇಕ್, ಕುಕ್ಕೀಸ್‌, ಐಸ್‌ಕ್ರೀಂ ಸೇರಿದಂತೆ ಯಾವುದೇ ಡೆಸರ್ಟ್‌ ತಿಂದರೆ ನೀವು ನೀರು ಹೆಚ್ಚು ಕುಡಿಯಲೇಬೇಕು. ಗಂಟಲೊಣಗಿ, ಬಾಯಾರುವುದು ನಿಶ್ಚಿತ. ಅದಕ್ಕೇ, ಮದುವೆ ಮನೆ, ಪಾರ್ಟಿ, ಸಮಾರಂಭಗಳ ಊಟ ಉಂಡು ಬಂದ ಮೇಲೆ ಹೆಚ್ಚು ಸುಸ್ತೂ, ಬಾಯಾರಿಕೆಯೂ ಆಗುತ್ತದೆ.

Beetroot

ಬೀಟ್‌ರೂಟ್‌

ತರಕಾರಿಗಳ ವಿಚಾರಕ್ಕೆ ಬಂದರೆ ಬೀಟ್‌ರೂಟ್‌ ಡಿಹೈಡ್ರೇಶನ್‌ಗೆ ದೂಡುವ ತರಕಾರಿ. ಬೀಟ್‌ರೂಟಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ಹೀಗಾಗಿ ಇದು ದೇಹದಿಂದ ನೀರಿನಂಶವನ್ನು ಹೊರಕ್ಕೆ ದೂಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿಯೇ ಬೀಟ್‌ರೂಟ್‌ ಜ್ಯೂಸ್‌ ಕುಡಿದರೆ ಹೆಚ್ಚು ಬಾತ್‌ರೂಂಗೆ ಹೋಗಬೇಕೆನಿಸುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಇದೆ. ಇಷ್ಟದ ತಿನಿಸನ್ನು ಈ ಕಾರಣಕ್ಕೆ ಬಿಡಬೇಕಾಗಿಲ್ಲ. ಆದರೆ, ಅತಿಯಾಗಿ ತಿನ್ನದಿರಿ. ಇಂತಹ ಆಹಾರ ಹಿತಮಿತವಾಗಿರಲಿ. ಈ ಸಂದರ್ಭ ಹಣ್ಣು ಹಂಪಲು, ತರಕಾರಿಗಳೂ ಜೊತೆಯಲ್ಲೇ ಹೊಟ್ಟೆ ಸೇರಲಿ. ಇವನ್ನು ತಿಂದ ಮೇಲೆ ಬಾಯಾರಿದರೆ, ಕಾಫಿ, ಚಹಾದಂತಹ ಕೆಫಿನ್‌ಯುಕ್ತ ಪದಾರ್ಥಗಳ ಮೊರೆ ಹೋಗದಿರಿ. ಆದಷ್ಟೂ ನೀರನ್ನೇ ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ನಿಮ್ಮ ಮಂತ್ರವಾಗಲಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Continue Reading

ಲೈಫ್‌ಸ್ಟೈಲ್

World Chocolate Day: ಬಾಯಿ ಸಿಹಿ ಮಾಡಿಕೊಳ್ಳುವುದಕ್ಕೆ ಮತ್ತೊಂದು ದಿನ! ಇಂದು ಚಾಕಲೇಟ್ ಮರೆಯದೇ ತಿನ್ನಿ!

World Chocolate Day: ಇಂದು ವಿಶ್ವ ಚಾಕಲೇಟ್‌ ದಿನ. ವರ್ಷವಿಡೀ ಚಾಕಲೇಟ್‌ ಮೆಲ್ಲುವ ಈ ಜಗತ್ತು, ಜುಲೈ ತಿಂಗಳ 7ನೇ ದಿನವನ್ನು ಚಾಕಲೇಟ್‌ಗಾಗಿ ಮೀಸಲಿರಿಸಿದೆ! ಇಂದೇ ಏಕೆ? ಇದನ್ನು ಮೆಲ್ಲುವುದರ ಪ್ರಯೋಜನಗಳೇನು ಮುಂತಾದ ಹಲವು ಮಾಹಿತಿಗಳು ಇಲ್ಲಿವೆ.

VISTARANEWS.COM


on

World Chocolate Day
Koo

ಬ್ರಿಟನ್‌ ದೇಶದ ಲೇಖಕ ರೊವಾಲ್ಡ್‌ ಡಹ್ಲ್‌, 1964ರಲ್ಲಿ ಬರೆದ ಮಕ್ಕಳ ಕಾದಂಬರಿಯೊಂದರ ಹೆಸರು- ಚಾರ್ಲಿ ಎಂಡ್‌ ದ ಚಾಕಲೇಟ್‌ ಫ್ಯಾಕ್ಟರಿ. ಇಡೀ ಕಾದಂಬರಿಯಲ್ಲಿ ಬರುವ ಉಳಿದೆಲ್ಲ ವರ್ಣನೆಗಳ ಜೊತೆಗೆ ಚಾಕಲೇಟ್‌ಗಳ ವಿವರಗಳು ಒಂದು ಕಾಲದ ಮಕ್ಕಳ ಬಾಯಲ್ಲಿ ಮಾತ್ರವಲ್ಲ, ಓದಿದ ದೊಡ್ಡವರ ಬಾಯಲ್ಲೂ ನೀರೂರಿಸುತ್ತಿದ್ದವು. ಆ ಕಾದಂಬರಿಯು ಮುಂದೆ ಸಿನೆಮಾ ಆಗಿ ಹೆಸರು ಮಾಡಿದ್ದು ಇತಿಹಾಸ. ಆದರೆ ಚಾಕಲೇಟ್‌ ಎಂಬ ಸಿಹಿಯ ಬಗ್ಗೆ ಎಲ್ಲರಿಗೂ ಇರುವ ಪ್ರೀತಿಯನ್ನು, ಹುಚ್ಚನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇಂಥವು ಸಾಕಾಗುತ್ತವೆ. ಎಲ್ಲ ಬಿಟ್ಟು ಈಗೇಕೆ ಬಂತು ಚಾಕಲೇಟ್‌ ವಿಷಯ? ಇಂದು ವಿಶ್ವ ಚಾಕಲೇಟ್‌ ದಿನ (World Chocolate Day). ವರ್ಷವಿಡೀ ಚಾಕಲೇಟ್‌ ಮೆಲ್ಲುವ ಈ ಜಗತ್ತು, ಜುಲೈ ತಿಂಗಳ 7ನೇ ದಿನವನ್ನು ಚಾಕಲೇಟ್‌ಗಾಗಿ ಮೀಸಲಿರಿಸಿದೆ! ಆದರೆ ಇಂದೇ ಏಕೆ? ಕಾರಣವೇನೆಂದರೆ, ಕ್ರಿ.ಶ. 1550ನೇ ಇಸವಿಯ ಇದೇ ದಿನದಂದು ಈ ಸಿಹಿ ಐರೋಪ್ಯ ಖಂಡವನ್ನು ಪ್ರವೇಶಿಸಿತಂತೆ. ಜುಲೈ ತಿಂಗಳ 7ನೇ ತಾರೀಖಿಗೆ ಹೀಗೊಂದು ಇತಿಹಾಸ ಇರುವುದರಿಂದ, 1009ರಿಂದ ಈ ದಿನದ ಆಚರಣೆ ರೂಢಿಗೆ ಬಂದಿದೆ.

Appetite Control Dark Chocolate Benefits

ಇದರ ಮೂಲ ಇದ್ದಿದ್ದು, ಮೆಕ್ಸಿಕೊ, ದಕ್ಷಿಣ ಮತ್ತು ಮಧ್ಯ ಅಮೇರಿಕ ಖಂಡಗಳಲ್ಲಿ. ಕೊಕೊ ಮರಗಳ ಹಣ್ಣಿನಿಂದ ತಯಾರಾಗುವ ತಿನಿಸು ಇದು. ಹಣ್ಣುಗಳ ಒಳಗಿರುವ, ಸ್ವಲ್ಪ ಕಹಿ ಎನ್ನಬಹುದಾದ ರುಚಿಯ ಕೊಕೊ ಬೀಜಗಳನ್ನು ಒಣಗಿಸಿ, ಹುದುಗು ಬರಿಸಿ, ಅದರಿಂದ ಪೇಯ ತಯಾರಿಸುತ್ತಿದ್ದ ಮಾಹಿತಿ ಮೆಕ್ಸಿಕೊದ ಅಜ್‌ಟೆಕ್‌ ನಾಗರಿಕತೆಯ ಕಾಲದಲ್ಲೇ ದೊರೆಯುತ್ತದೆ. ಆದರೆ ಕೊಕೊ ಬಳಸಿದ್ದು ಆ ನಾಗರಿಕತೆಯಲ್ಲೇ ಮೊದಲೇನಲ್ಲ. ಕ್ರಿಸ್ತಪೂರ್ವ ೧೧೦೦ ಕಾಲದಲ್ಲೇ ಮಧ್ಯ ಅಮೆರಿಕದಲ್ಲಿ ಕೊಕೊ ಬಳಕೆಯಲ್ಲಿದ್ದ ಮಾಹಿತಿಯಿದೆ. ತೀರಾ ನಂತರದ ಕಾಲದಲ್ಲಿ ಅದು ಯುರೋಪ್‌ ಖಂಡದ ದಿಕ್ಕಿಗೆ ಪಸರಿಸಿ, ಚಾಕಲೇಟ್‌ ರೂಪದಲ್ಲಿ ಜನಪ್ರಿಯವಾಯಿತು. ಮೊದಲಿಗೆ ಕಪ್ಪು ಚಾಕಲೇಟ್‌ ಮಾತ್ರವೇ ಬಳಕೆಗೆ ಬಂದಿದ್ದು. ಹಾಲಿನ ಚಾಕಲೇಟ್‌, ಬೀಜಗಳನ್ನು, ಒಣ ಹಣ್ಣುಗಳನ್ನು, ಇನ್ನೂ ಏನೇನೋ ಆಸಕ್ತಿಕರ ವಸ್ತುಗಳನ್ನು ಸೇರಿಸಿ ಮಾಡಿದ ಚಾಕಲೇಟ್‌ಗಳು ಬಳಕೆಗೆ ಬಂದಿದ್ದು ನಂತರದ ದಿನಗಳಲ್ಲಿ. ಕೊಕೊ ಸೇವನೆ ಮಿತಿಯಲ್ಲಿದ್ದರೆ, ಆರೋಗ್ಯಕ್ಕೆ ಲಾಭ ತರುತ್ತದೆ. ಆದರೆ ಸಿಹಿ ಮತ್ತು ಹಾಲು ಬೆರೆಸಿದ ಚಾಕಲೇಟ್‌ಗಳ ಸೇವನೆ ಅತಿಯಾದರೆ ಸಮಸ್ಯೆಗಳು ಬರಬಹುದು. ಏನು ಲಾಭಗಳಿವೆ ಚಾಕಲೇಟ್‌ ತಿನ್ನುವುದರಿಂದ?

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಕೊಕೊ ನಮಗೆ ಬೇಕಾಗುವುದು ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಿಗಾಗಿ. ಇದರಲ್ಲಿರುವ ಪಾಲಿಫೆನೋಲ್‌ಗಳು ಮತ್ತು ಫ್ಲೆವನಾಯ್ಡ್‌ಗಳು ಉರಿಯೂತ ತಗ್ಗಿಸುತ್ತವೆ. ಆದರೆ ಸಿಹಿ ಸೇರಿದ ಚಾಕಲೇಟ್‌ಗಿಂತ ಸಿಹಿ ಇಲ್ಲದ ಅಥವಾ ಕಡಿಮೆ ಇರುವ ಕಪ್ಪು ಚಾಕಲೇಟ್‌ಗಳು ಈ ನಿಟ್ಟಿನಲ್ಲಿ ಹೆಚ್ಚಿನ ಲಾಭ ತರಬಲ್ಲವು. ಕಾರಣ ಸಕ್ಕರೆಯಂಶ ಉರಿಯೂತವನ್ನು ಹೆಚ್ಚಿಸುತ್ತದೆಯೇ ಹೊರತು ತಗ್ಗಿಸುವುದಿಲ್ಲ. ಆಗ ಕೊಕೊದಲ್ಲಿರುವ ಉಳಿದ ಒಳ್ಳೆಯ ಅಂಶಗಳು ಗೌಣವಾಗಬಹುದು.

Heart Health Fish Benefits

ಹೃದಯಕ್ಕೆ ಪೂರಕ

ಹೃದಯದ ಆರೋಗ್ಯ ರಕ್ಷಣೆಯಲ್ಲಿ ಡಾರ್ಕ್‌ ಚಾಕಲೇಟ್‌ಗಳು ಪೂರಕವಾಗಿ ಕೆಲಸ ಮಾಡಬಲ್ಲವು ಎನ್ನುತ್ತವೆ ಹಲವು ಅ‍ಧ್ಯಯನಗಳು. ಕೊಕೊದಲ್ಲಿರುವ ಫ್ಲೆವನಾಯ್ಡ್‌ಗಳು ಹೃದಯದ ಕ್ಷಮತೆಯನ್ನು ಹೆಚ್ಚಿಸಬಲ್ಲವು. ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಬಲ್ಲವು. ರಕ್ತದೊತ್ತಡ ಹೆಚ್ಚದಂತೆ ಕಾಪಾಡಿ, ರಕ್ತ ಪರಿಚಲನೆಯನ್ನು ಸುಧಾರಿಸಬಲ್ಲವು. ಈ ಕಾರಣಗಳಿಂದಾಗಿ ಸಕ್ಕರೆ ರಹಿತವಾದ, ಡಾರ್ಕ್‌ ಚಾಕಲೇಟನ್ನು ಆಗೀಗ ಮೆಲ್ಲಬಹುದು ಎನ್ನುತ್ತವೆ ಅಧ್ಯಯನಗಳು.

Mood Enhancement Dark Chocolate Benefits

ಮೂಡ್‌ ಸುಧಾರಣೆ

ʻಹ್ಯಾಪಿ ಹಾರ್ಮೋನ್‌ʼ ಎಂದೇ ಕರೆಯಲಾಗುವ ಸೆರೊಟೋನಿನ್‌ ಮತ್ತು ಎಂಡಾರ್ಫಿನ್‌ ಚೋದಕಗಳ ಉತ್ಪಾದನೆಯನ್ನು ದೇಹದಲ್ಲಿ ಪ್ರಚೋದಿಸುವಂಥ ಸಾಮರ್ಥ್ಯ ಕೊಕೊದಲ್ಲಿದೆ. ಉತ್ತಮ ಗುಣಮಟ್ಟದ ಕೊಕೊ ಹೊಂದಿರುವ ಡಾರ್ಕ್‌ ಚಾಕಲೇಟ್‌ಗಳು ಮೂಡ್‌ ಸುಧಾರಿಸಿ, ಸಂತೋಷದ ಭಾವಗಳನ್ನು ಹೆಚ್ಚಿಸಬಲ್ಲವು. ಮನಸ್ಸನ್ನು ಉಲ್ಲಾಸವಾಗಿರಿಸಬಲ್ಲವು.

ಖನಿಜಗಳು ಭರಪೂರ

ಹಲವು ರೀತಿಯ ಖನಿಜಗಳು ಕೊಕೊದಲ್ಲಿ ಸಾಂದ್ರವಾಗಿವೆ. ಅದರಲ್ಲೂ ಮೆಗ್ನೀಶಿಯಂ, ಕಬ್ಬಿಣ ಮತ್ತು ಪೊಟಾಶಿಯಂ ಸತ್ವಗಳು ಭರಪೂರ ಇವೆ. ನರ ಮತ್ತು ಸ್ನಾಯುಗಳ ಕ್ಷಮತೆಗೆ ಮೆಗ್ನೀಶಿಯಂ ಖನಿಜ ಅಗತ್ಯ. ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವಲ್ಲಿ ಕಬ್ಬಿಣ ಮಹತ್ವದ ಕೆಲಸ ಮಾಡಿದರೆ, ರಕ್ತದೊತ್ತಡ ನಿಯಂತ್ರಿಸುವಲ್ಲಿ ಪೊಟಾಶಿಯಂ ಸಹಕಾರಿ. ಹಾಗಾಗಿ ರುಚಿಗಾಗಿ ಒಮ್ಮೊಮ್ಮೆ ಕೊಕೊವನ್ನು ಬಾಯಲ್ಲಿಟ್ಟು ಕರಗಿಸುವುದರಲ್ಲಿ ತಪ್ಪಿಲ್ಲವೇನೊ.

ಇದನ್ನೂ ಓದಿ: Hot Corn Recipe: ಮಳೆಗಾಲದಲ್ಲಿ ಬಿಸಿಬಿಸಿಯಾದ ಜೋಳವನ್ನು ಮನೆಯಲ್ಲೇ ಮಾಡುವುದು ಹೇಗೆ?

ಮೆದುಳು ಚುರುಕು

ಇದರ ಫ್ಲೆವನಾಯ್ಡ್‌ಗಳು ಮೆದುಳಿನ ಚುರುಕುತನ ಹೆಚ್ಚಿಸುವಲ್ಲಿ ಉಪಯುಕ್ತ ಕೆಲಸವನ್ನು ಮಾಡುತ್ತವೆ. ನೆನಪು ಹೆಚ್ಚಿಸುವಲ್ಲಿ ಮತ್ತು ಕಲಿಯುವಿಕೆಯನ್ನು ಉತ್ತೇಜಿಸುವಲ್ಲಿ ಇವು ನೆರವಾಗುತ್ತವೆ. ಕೊಕೊ ಸೇವನೆಯ ಅನುಕೂಲಗಳ ಬಗ್ಗೆ ಇಷ್ಟೆಲ್ಲ ತಿಳಿದ ಮೇಲೆ ಒಂದೂ ಚಾಕಲೇಟ್‌ ಮೆಲ್ಲದಿದ್ದರೆ ಹೇಗೆ?

Continue Reading

ಕರ್ನಾಟಕ

Shawarma: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌; ಶೀಘ್ರದಲ್ಲೇ ರಾಜ್ಯದಲ್ಲಿ ಶವರ್ಮಾ ಬ್ಯಾನ್ ?

Shawarma: ಗೋಬಿ ಮಂಚೂರಿ ಹಾಗೂ ಕಬಾಬ್ ಬಳಿಕ ಇದೀಗ ರಾಜ್ಯದಲ್ಲಿ ಶವರ್ಮಾ ಬ್ಯಾನ್‌ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಚಿಕನ್‌ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇರಳದಲ್ಲಿ ಈಗಾಗಲೇ ಶವರ್ಮಾ ತಿಂದು ಸಾಕಷ್ಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ‌ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

VISTARANEWS.COM


on

Shawarma
Koo

ಬೆಂಗಳೂರು: ಗೋಬಿ ಮಂಚೂರಿ ಹಾಗೂ ಕಬಾಬ್ ಬಳಿಕ ಇದೀಗ ರಾಜ್ಯದಲ್ಲಿ ಶವರ್ಮಾ (Shawarma) ಬ್ಯಾನ್‌ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಚಿಕನ್‌ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇರಳದಲ್ಲಿ ಈಗಾಗಲೇ ಶವರ್ಮಾ ತಿಂದು ಸಾಕಷ್ಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ‌ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಬೆಂಗಳೂರಿನಲ್ಲಿ ಶವರ್ಮಾ ಗುಣಮಟ್ಟ ಪರಿಶೀಲನೆ ನಡೆಸಿದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಬೆಚ್ಚಿ ಬೀಳಿಸುವ ಅಂಶ ಕಂಡು ಬಂದು ಬಂದಿದೆ. ಶವರ್ಮಾಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ, ಈಸ್ಟ್ ಪತ್ತೆಯಾಗಿದೆ. ಬೆಂಗಳೂರು ಮಾತ್ರವಲ್ಲ ಹುಬ್ಬಳ್ಳಿ, ಮೈಸೂರು, ತುಮಕೂರು, ಮಂಗಳೂರು, ಬಳ್ಳಾರಿ ಸೇರಿದಂತೆ ಹಲವೆಡೆ ಪರೀಕ್ಷೆ ನಡೆಸಲಾಗಿದೆ.

ಶವರ್ಮಾ ತಯಾರಿಕೆಯಲ್ಲಿ ನೈಮರ್ಲ್ಯದ ಕೊರತೆ ಕಂಡು ಬರುತ್ತಿದೆ. ಅಲ್ಲದೆ ಧೀರ್ಘ ಕಾಲದವರೆಗೂ ಶೇಖರಣೆ ಮಾಡುವುದರಿಂದ ಇದರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಈಸ್ಟ್ ಉತ್ಪತ್ತಿಯಾಗಿ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಶವರ್ಮಾ ತಿನ್ನುವುದರಿಂದ ಆರೋಗ್ಯದಲ್ಲಿ ಭಾರೀ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೇಳಿದ್ದೇನು?

ಮಾಧ್ಯಮಗಳಲ್ಲಿ ಶವರ್ಮಾ ಸೇವಿಸಿ ಫುಡ್‌ ಪಾಯ್ಸನ್‌ ಆಗಿರುವ ಕುರಿತು ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಧಾರವಾಡ, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಕಾರ್ಪೋರೇಷನ್‌ ವ್ಯಾಪ್ತಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಶವರ್ಮಾದ ಆಹಾರ ಮಾದರಿಗಳನ್ನ್ ವಿಶ್ಲೇಷಣೆಗೊಳಪಡಿಸಲಾಗಿದೆ. ಒಟ್ಟು 17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತವಾಗಿದ್ದರೆ 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ ಕಂಡು ಬಂದಿರುವುದರಿಂದ ಅಸುರಕ್ಷಿತ ಎಂದು ನಿರ್ಧರಿಸಲಾಗಿದೆ. ಅಸುರಕ್ಷಿತ ಎಂದು ವರದಿಯಾಗಿರುವ ಆಹಾರ ಮಾದರಿಗಳ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಎಲ್ಲ ಶವರ್ಮಾ ತಯಾರಕರು ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಸಂಪೂರ್ಣ ನೈರ್ಮಲ್ಯತೆ ಮತ್ತು ಗುಣಮಟ್ಟವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ 2006ರ ಶೆಡ್ಯೂಲ್‌ 4ರ ಅನುಸಾರ ಕಾಪಾಡಲು ಸೂಚಿಸಲಾಗಿದೆ. ಜತೆಗೆ ಶವರ್ಮಾವನ್ನು ಪ್ರತಿ ದಿನ ಹೊಸದಾಗಿ ತಯಾರಿಸಿ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಅಲ್ಲದೆ ಎಲ್ಲ ಶವರ್ಮಾ ಆಹಾರ ತಯಾರಕರು ತಮ್ಮ ಉದ್ದಿಮೆಗೆ ಎಫ್‌ಎಸ್‌ಎಸ್‌ಎಐ ನೋಂದಣಿ / ಪರವಾನಿಗೆಯನ್ನು ಪಡೆದುಕೊಳ್ಳುವುದಲ್ಲದೇ ಅದನ್ನು ತಮ್ಮ ವ್ಯಾಪಾರದ ಸ್ಥಳದಲ್ಲಿ ಪ್ರದರ್ಶಿಸಲು ಸೂಚಿಸಿದೆ.

ಜತೆಗೆ ಸಾರ್ವಜನಿಕರು ನೋಂದಣಿ / ಪರವಾನಿಗೆಯನ್ನು ಪಡೆದುಕೊಂಡ ಮಾರಾಟಗಾರರಿಂದಲೇ ಶವರ್ಮಾವನ್ನು ಖದೀದಿಸಲು ಸೂಚಿಸಲಾಗಿದೆ. ಮುಂದಿನ ಪರಿಶೀಲನೆ ವೇಳೆ ಆಹಾರ ತಯಾರಕರು ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Chemicals in Food: ಗೋಬಿ- ಕಬಾಬ್‌ ಆಯ್ತು‌, ಈಗ ಪಾನಿಪುರಿಯಲ್ಲೂ ಕ್ಯಾನ್ಸರ್‌ಕಾರಿ ವಿಷ ಪತ್ತೆ; ಸದ್ಯದಲ್ಲೇ ಬ್ಯಾನ್?

Continue Reading
Advertisement
School Principal
ದೇಶ2 hours ago

School Principal: ಶಾಲೆಯಲ್ಲೇ ಮಹಿಳಾ ಟೀಚರ್‌ ಜತೆ ಪ್ರಿನ್ಸಿಪಾಲ್‌ ರೊಮ್ಯಾನ್ಸ್;‌ ವೈರಲ್‌ ಫೋಟೊ ಇಲ್ಲಿದೆ

WCPL 2024
ಪ್ರಮುಖ ಸುದ್ದಿ2 hours ago

WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

KRS Inflow
ದೇಶ3 hours ago

KRS Inflow: ಕೆಆರ್‌ಎಸ್‌ಗೆ ದಾಖಲೆಯ 11 ಸಾವಿರ ಕ್ಯುಸೆಕ್‌ ನೀರು ಒಳಹರಿವು; ಸೋಮವಾರದಿಂದ ನಾಲೆಗಳಿಗೆ ನೀರು

Abhishek Sharma
ಕ್ರೀಡೆ3 hours ago

Abhishek Sharma : 47 ಎಸೆತಕ್ಕೆ ಶತಕ ಬಾರಿಸಿ ಹಲವಾರು ದಾಖಲೆ ಮುರಿದಿ ಅಭಿಷೇಕ್​ ಶರ್ಮಾ

Dengue Scare
ಕರ್ನಾಟಕ3 hours ago

Dengue Scare: ಸರ್ಕಾರದಿಂದಲೇ ಉಚಿತವಾಗಿ ಡೆಂಗ್ಯೂ ಪರೀಕ್ಷೆ ಮಾಡಿಸಲಿ; ಆರ್.‌ ಅಶೋಕ್‌ ಆಗ್ರಹ

World Biryani Day:
ಪ್ರಮುಖ ಸುದ್ದಿ4 hours ago

World Biryani Day : ಕೋಲ್ಕತಾ, ಹೈದರಾಬಾದ್ ಬಿರಿಯಾನಿ ತಿಂದಿರಬಹುದು; ಇವುಗಳ ಹಿನ್ನೆಲೆ ಗೊತ್ತಾ?

Accident
Latest4 hours ago

Accident: ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

Puri Jagannath Rath Yatra
ಪ್ರಮುಖ ಸುದ್ದಿ4 hours ago

Puri Jagannath Rath Yatra: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಒಬ್ಬನ ಸಾವು, 400 ಭಕ್ತರಿಗೆ ಗಾಯ!

NIA Arrest
ದೇಶ4 hours ago

NIA Arrest: ಹಿಜ್ಬುಲ್‌, LeT ಉಗ್ರ ಸಂಘಟನೆಗಳ ಜೊತೆ ನಂಟು; ಪ್ರಮುಖ ಆರೋಪಿ ಅರೆಸ್ಟ್‌

Elephant attack car in Kodagu‌ four people escape
ಕೊಡಗು4 hours ago

Elephant attack :ಕಾರಿನ ಮೇಲೆ ಕಾಡಾನೆ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ6 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ9 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ9 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ20 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌