Winter Food: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಮನೆಯಲ್ಲೇ ಚಿಕ್ಕಿಗಳನ್ನು ಮಾಡಿ! - Vistara News

ಆಹಾರ/ಅಡುಗೆ

Winter Food: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಮನೆಯಲ್ಲೇ ಚಿಕ್ಕಿಗಳನ್ನು ಮಾಡಿ!

ಒಣಹಣ್ಣು, ಬೀಜಗಳು, (winter food) ಹಸಿರು ತರಕಾರಿಗಳು, ಬೆಲ್ಲ, ಸೇರಿದಂತೆ, ಹಲವು ಬಗೆಯ ತರಕಾರಿಗಳು, ಕಷಾಯಗಳು ದೇಹವನ್ನು ಬಿಸಿ ಮಾಡುತ್ತವೆ. ಇಂಥ ಚಳಿಗಾಲದ ಆಹಾರಗಳ ಪೈಕಿ ಚಿಕ್ಕಿಯೂ ಒಂದು.

VISTARANEWS.COM


on

Winter Food
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲದಲ್ಲಿ (winter food) ಸಾಮಾನ್ಯವಾಗಿ, ದೇಹವನ್ನು ಬಿಸಿ ಮಾಡುವ ಉಷ್ಣ ಪ್ರಕೃತಿಯ ಕೆಲವು ಆಹಾರಗಳನ್ನು ಸೇವಿಸುವುದು ವಾಡಿಕೆ. ಪರ್ವತ ಪ್ರದೇಶಗಳಲ್ಲಿ, ಅಥವಾ ಚಳಿ ಹೆಚ್ಚಿರುವ ಪ್ರದೇಶಗಳಲ್ಲಿ ಚಳಿಗಾಲ ಬರುತ್ತಿದ್ದ ಹಾಗೆಯೇ, ಚಳಿಗಾಲಕ್ಕೆ ಸಂಬಂಧಿಸಿದಂತೆ ಜೀವನಕ್ರಮವೇ ಬದಲಾಗುತ್ತದೆ. ಆಹಾರದಿಂದ ಹಿಡಿದು, ಧರಿಸುವ ಬಟ್ಟೆಗಳು, ಮಾಡುವ ವೃತ್ತಿ ಎಲ್ಲವೂ ಬದಲಾಗುತ್ತದೆ. ಉಳಿದೆಡೆಗಳಲ್ಲಿ ಚಳಿಗಾಲ ಅಂಥ ತೀವ್ರತೆಯಲ್ಲಿ ಇರದಿದ್ದರೂ, ಜನರು ತಮ್ಮ ಜೀವನಕ್ರಮದಲ್ಲಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕೊಂಚ ಮಟ್ಟಿನ ಬದಲಾವಣೆಯನ್ನಾದರೂ ಮಾಡಿಯೇ ಮಾಡುತ್ತಾರೆ. ಮುಖ್ಯವಾಗಿ ಆಹಾರ ಕ್ರಮ ಹಾಗೂ ಬಟ್ಟೆಬರೆಯ ವಿಚಾರದಲ್ಲಿ. ಇಂಥ ಸಂದರ್ಭ, ವಾತಾವರಣದಲ್ಲಿ ಉಷ್ಣತೆಯು ಇಳಿಯುತ್ತಿದ್ದ ಹಾಗೆಯೇ ನಮ್ಮ ದೇಹವೂ ಕೂಡಾ ತನ್ನನ್ನು ತಾನು ಬೆಚ್ಚಗೆ ಇರಿಸಿಕೊಳ್ಳಲು ಕೆಲವು ಉಷ್ಣ ಪ್ರಕೃತಿಯ ಆಹಾರವನ್ನು ಬೇಡುತ್ತದೆ. ಪ್ರಕೃತಿಯೂ ಕೂಡಾ ತಾನೇತಾನಾಗಿ, ಆಯಾ ವಾತಾವರಣಕ್ಕೆ ಅನುಗುಣವಾಗಿಯೇ ಆಹಾರವನ್ನು ನೀಡುವುದರಿಂದ ಆಹಾರದ ಆಯ್ಕೆಯಲ್ಲಿ ನಾವೂ ಹೆಚ್ಚು ಕಷ್ಟಪಡಬೇಕಾಗಿಲ್ಲ. ಒಣಹಣ್ಣು, ಬೀಜಗಳು, ಹಸಿರು ತರಕಾರಿಗಳು, ಬೆಲ್ಲ, ಸೇರಿದಂತೆ, ಹಲವು ಬಗೆಯ ತರಕಾರಿಗಳು, ಕಷಾಯಗಳು ದೇಹವನ್ನು ಬಿಸಿ ಮಾಡುವ ಜೊತೆಗೆ, ಚಳಿಗಾಲದಲ್ಲಿ ಸುಲಭವಾಗಿ ಕಾಡುವ ಶೀತ, ನೆಗಡಿ, ಜ್ವರ, ಕೆಮ್ಮಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳೂ ನಮ್ಮನ್ನು ಬಾಧಿಸದಂತೆ ರಕ್ಷಿಸುವ ಕೆಲಸವನ್ನೂ ಮಾಡುತ್ತವೆ. ಇಂಥ ಚಳಿಗಾಲದ ಆಹಾರಗಳ ಪೈಕಿ ಚಿಕ್ಕಿಯೂ ಒಂದು. ಎಳ್ಳು, ನೆಲಗಡಲೆ ಸೇರಿದಂತೆ, ಒಣ ಬೀಜಗಳನ್ನೂ ಹಾಕಿ ಮಾಡುವ ಚಿಕ್ಕಿ ಚಳಿಗಾಲದಲ್ಲಿ ಎಲ್ಲೆಡೆ ದೊರೆಯುವ ಸರಳವಾದ ಸಿಹಿತಿನಿಸು.

Indian traditional sweets Mithai Gajjak Gur Gajjak

ರುಚಿಯಾದ ತಿನಿಸು

ಉತ್ತರ ಭಾರತದಲ್ಲಿ, ಹಿಮಾಲಯದ ಪ್ರಾಂತ್ಯಗಳಲ್ಲಿ ಗಜ್ಜಕ್‌ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಸಿಹಿತಿನಿಸು, ಸಾಮಾನ್ಯರ ಭಾಷೆಯಲ್ಲಿ ಚಿಕ್ಕಿ. ಕಟ್ಲೀಸ್‌ ಎಂಬ ಹೆಸರಿನಿಂದಲೂ ಕೆಲವೆಡೆ ಕರೆಯಲ್ಪಡುತ್ತದೆ. ಬೆಲ್ಲದ ಪಾಕದಲ್ಲಿ ನೆಲಗಡಲೆಯನ್ನೋ, ಎಳ್ಳನ್ನೋ ಹಾಕಿ ಗಟ್ಟಿಯಾದ ತುಂಡುಗಳನ್ನಾಗಿ ಕತ್ತರಿಸಿ ಮಾಡು ತಿನಿಸು ಇದು. ನೆಲಗಡಲೆ, ಎಳ್ಳು, ಬೆಲ್ಲ ಎಲ್ಲವೂ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಮಾಡುವ ಉಷ್ಣ ಪ್ರಕೃತಿಯ ಆಹಾರಗಳು. ಅಷ್ಟೇ ಅಲ್ಲ, ಕ್ಯಾಲ್ಶಿಯಂ, ಕಬ್ಬಿಣಾಂಶ, ಪ್ರೊಟೀನುಗಳೂ ಸಾಕಷ್ಟು ಇರುವ ಆಹಾರ. ದೇಹವನ್ನು ಗಟ್ಟಿಗೊಳಿಸಿ, ಬೆಚ್ಚಗೂ ಇರಿಸಿ, ರೋಗ ನಿರೋಧಕತೆಯನ್ನೂ ಹೆಚ್ಚು ಮಾಡಿಸುವ ಸಮೃದ್ಧ ಆಹಾರವಿದು. ಚಳಿಗಾಲ ಬಂದಾಗ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸುಲಭವಾಗಿ ಮಾಡಬಹುದಾದ ಹಾಗೂ ಮಾಡಿ ತಮ್ಮ ಮಕ್ಕಳಿಗೂ ತಿನ್ನಿಸಲೇ ಬೇಕಾದ ಆಹಾರ ಇದು. ಬನ್ನಿ, ಪರ್ಫೆಕ್ಟ್‌ ಚಿಕ್ಕಿ ಮಾಡಲು ಕೆಲವು ಟಿಪ್ಸ್‌ಗಳು ಇಲ್ಲಿವೆ.

  • ಬೆಲ್ಲದ ಪಾಕ ಮಾಡಲು ನೀರು ಬಳಸಬೇಡಿ. ನೀರು ಬಳಸಿದರೆ, ಇದು ಬೆಲ್ಲದ ಪಾಕದ ಗುಣಮಟ್ಟವನ್ನು ತಗ್ಗಿಸುತ್ತದೆ.
  • ನೀವು ಯಾವೆಲ್ಲ ಒಣ ಬೀಜಗಳನ್ನು ಹಾಕಿ ಚಿಕ್ಕಿ ಮಾಡಬೇಕೆಂದು ಬಯಸುತ್ತಿದ್ದೀರೋ, ಆ ಬೀಜಗಳನ್ನು ಮೊದಲು ಹದವಾಗಿ ತುಪ್ಪದಲ್ಲಿ ಹುರಿಯಿರಿ. ಇದು ಚಿಕ್ಕಿಯ ರುಚಿಯನ್ನು ಹೆಚ್ಚಿಸುತ್ತದೆ.
  • ಬೆಲ್ಲದ ಪಾಕಕ್ಕೆ ಕೊಂಚ ಬೇಕಿಂಗ್‌ ಪೌಡರ್‌ ಸೇರಿಸಬಹುದು. ಇದು ಚಿಕ್ಕಿಯನ್ನು ಗರಿಗರಿಯನ್ನಾಗಿ ಮಾಡುತ್ತದೆ.
  • ನೆಲಗಡಲೆಯ ಚಿಕ್ಕಿಯೋ, ಎಳ್ಳಿನದೋ, ಅಥವಾ ಒಣಹಣ್ಣು ಹಾಗೂ ಬೀಜಗಳೋ ಎಂಬ ಮೂರ್ನಾಲ್ಕು ಬಗೆಗಳನ್ನು ಮೊದಲೇ ಆಯ್ಕೆಮಾಡಿ. ಒಂದಕ್ಕೊಂದು ಹೊಂದುವ ಕಾಂಬಿನೇಶನ್‌ನಲ್ಲಿ ಮಾಡಿ.

ಮಾಡುವ ವಿಧಾನ

ಮೊದಲು ನೆಲಗಡಲೆಯನ್ನು ಹುರಿದುಕೊಳ್ಳಿ. ಸ್ವಲ್ಪ ಅವನ್ನು ಕ್ರಷ್‌ ಮಾಡಿ. ತೀರಾ ಪುಡಿಪುಡಿಯಾಗಿಸುವುದು ಬೇಡ. ನಂತರ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಬೆಲ್ಲವನ್ನು ಹಾಕಿ. ಅದು ಪಾಕವಾಗಲು ಬಿಡಿ. ಬೆಲ್ಲವೆಲ್ಲ ಕರಗಿ ಪಾಕವಾದ ಮೇಲೆ, ಅದು ಪಾಕದ ಹದಕ್ಕೆ ಕೊಂಚ ಗಟ್ಟಿಯಾಗಲು ಹಾಗೆಯೇ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಪಾಕ ಸರಿಯಾದ ಹದಕ್ಕೆ ಬಂದಿದೆಯೇ ಎಂದು ಪರೀಕ್ಷಿಸಲು ಒಧೆರಡು ಹನಿ ಚಿಮುಕಿಸಿ ನೋಡಬಹುದು. ಈಗ ಕ್ರಷ್‌ ಮಾಡಿದ ನೆಲಗಡಲೆಯನ್ನು ಸೇರಿಸಿ. ನೆಲಗಡಲೆ ಅಲ್ಲದಿದ್ದರೆ, ಯಾವುದರ ಚಿಕ್ಕಿ ಮಾಡುತ್ತೀರೋ ಅವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಒಂದು ಟ್ರೇಯಲ್ಲಿ ತುಪ್ಪ ಸವರಿ, ಈ ಮಿಶ್ರಣವನ್ನು ಹರಡಿ. ಇದು ಸಂಪೂರ್ಣ ತಣ್ಣಗಾದ ಮೇಲೆ ಇವನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಕತ್ತರಿಸಿದ ತುಂಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ. ರುಚಿಯಾದ ಚಿಕ್ಕಿ ತಿನ್ನಲು ರೆಡಿ! ಚಳಿಗಾಲದಲ್ಲಿ ಊಟದ ನಂತರ ತಿನ್ನಲು ಆರೋಗ್ಯಕರ ಸಿಹಿತಿನಿಸಿದು.

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Best Ways To Clean Fruits: ಹಣ್ಣುಗಳನ್ನು ತಿನ್ನುವ ಮೊದಲು ನೀವು ಈ ವಿಧಾನದಲ್ಲಿ ತೊಳೆದುಕೊಂಡಿದ್ದೀರಾ?

ಆರೋಗ್ಯಕರವಾದದ್ದನ್ನೇ ನಿಜವಾಗಿಯೂ ತಿಂದಿದ್ದೇವಾ ಎಂದು ಒಮ್ಮೆ ಹೆಗಲು ಮುಟ್ಟಿ ನೋಡಬೇಕಾದ ಸಂದರ್ಭ ಈಗಿದೆ. ಹಾಗಾದರೆ, ಬನ್ನಿ, ಹಣ್ಣುಗಳನ್ನು ತಿನ್ನುವ ಮೊದಲು ಯಾವ ಎಚ್ಚರ ನಮಗಿರಬೇಕು (Best Ways To Clean Fruit) ಎಂಬುದನ್ನು ನೋಡೋಣ.

VISTARANEWS.COM


on

Best Ways To Clean Fruits
Koo

ಹೇಳಿ ಕೇಳಿ ಈಗ ಹಣ್ಣುಗಳ ಸುಗ್ಗಿ. ಚಳಿಗಾಲ ಮುಗಿದು ವಸಂತ ಕಾಲ ಬರುವ ಈ ಸಮಯದಲ್ಲಿ ಹೂಗಳೂ ಅರಳಿ ನಳನಳಿಸುವ ಜೊತೆಗೆ ಮಾರುಕಟ್ಟೆ ತುಂಬ ಥರವೇಹಾರಿ ಹಣ್ಣುಗಳು. ಕಪ್ಪು, ಹಸಿರು ಬಣ್ಣಗಳ ದ್ರಾಕ್ಷಿಗಳು, ಸ್ಟ್ರಾಬೆರಿ, ರಸ್ಬೆರಿ, ಕಿತ್ತಳೆ, ಜ್ಯೂಸಿಯಾಗಿರುವ ಕಿನ್ನೋ ಸೇರಿದಂತೆ ಎಲ್ಲ ಕಾಲದಲ್ಲೂ ಸಿಗುವ ಹಣ್ಣುಗಳೂ ಸೇರಿ ಮಾರುಕಟ್ಟೆ ಬಣ್ಣಬಣ್ಣಗಳಿಂದ ಕಂಗೊಳಿಸುತ್ತಿರುತ್ತದೆ. ಮಕ್ಕಳ ಡಬ್ಬಿಗೆ, ನಮಗೆ, ಬಿಡುವಾದ ಹೊತ್ತಿನಲ್ಲಿ ತಿನ್ನಲು, ಹಿರಿಯರಿಗೆ ಎಂದೆಲ್ಲ ಯೋಚಿಸಿ ನಾವು ಆದಷ್ಟೂ ಆರೋಗ್ಯಕರ ಹಣ್ಣುಗಳನ್ನೇ ತಿನ್ನುವುದು ಕೂಡಾ ಒಳ್ಳೆಯದಲ್ಲವೇ ಎಂದುಕೊಂಡು ಕೆಜಿಗಟ್ಟಲೆ ಹಣ್ಣನ್ನು ಮನೆಗೆ ತರುತ್ತೇವೆ. ಮಕ್ಕಳಿಗೂ, ಹಿರಿಯರಿಗೂ ಕೊಟ್ಟು ನಾವೂ ತಿನ್ನುತ್ತೇವೆ. ಆಹಾ ಎಂಥಾ ಸಿಹಿ ರುಚಿಯ ಹಣ್ಣುಗಳು ಎಂದು ಸವಿದು ಚಪ್ಪರಿಸಿ ತಿನ್ನುತ್ತೇವೆ. ಆರೋಗ್ಯಕರವಾದದ್ದನ್ನೇ ನಾವು ಸೇವಿಸಿದ್ದೇವೆ ಎಂಬ ತೃಪ್ತಿಯೂ ನಮ್ಮದು. ಆದರೆ, ತಿನ್ನುವ ಮೊದಲು ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಆರೋಗ್ಯಕರವಾದದ್ದನ್ನೇ ನಿಜವಾಗಿಯೂ ತಿಂದಿದ್ದೇವಾ ಎಂದು ಒಮ್ಮೆ ಹೆಗಲು ಮುಟ್ಟಿ ನೋಡಬೇಕಾದ ಸಂದರ್ಭ ಈಗಿದೆ. ಹಾಗಾದರೆ, ಬನ್ನಿ, ಹಣ್ಣುಗಳನ್ನು ತಿನ್ನುವ ಮೊದಲು ಯಾವ ಎಚ್ಚರ ನಮಗಿರಬೇಕು (Best Ways To Clean Fruit)  ಎಂಬುದನ್ನು ನೋಡೋಣ.

ripe and juicy fruits, hands wash fruits under running water

ಹಣ್ಣುಗಳನ್ನು ತಿನ್ನುವ ಮೊದಲು ಕೇವಲ ನೀರಿಗೊಡ್ಡಿ ತೊಳೆದರೆ ಸಾಲದು ಚೆನ್ನಾಗಿ ತೊಳೆಯುವುದು ನಮಗೆ ಗೊತ್ತಿರಬೇಕು. ಹೌದು. ಹಣ್ಣುಗಳನ್ನು ತಿನ್ನುವಾಗ ಕಾಡುವ ಬಹು ದೊಡ್ಡ ಪ್ರಶ್ನೆ ಎಂದರೆ, ನಾವು ತಿನ್ನುತ್ತಿರುವ ಹಣ್ಣು ರಾಸಾಯನಿಕ ಮುಕ್ತವಾಗಿದೆಯೇ? ನಾನು ತೊಳೆದಿರುವುದು ಅದರ ಮೇಲಿರುವ ರಾಸಾಯನಿಕಗಳನ್ನು ಸಂಪೂರ್ಣವಾಗಿ ತೊಳೆಯುವಲ್ಲಿ ಯಶಸ್ವಿಯಾಗಿದೆಯೇ ಎಂದು. ಯಾಕೆಂದರೆ, ಕೇವಲ ಸುಮ್ಮನೆ ನೀರಿಗೊಮ್ಮೆ ಹಿಡಿದು ತೊಳೆಯುವ ಶಾಸ್ತ್ರ ಮಾಡಿ ತಿಂದರೆ, ಅಥವಾ ತೊಳೆಯದೇ ತಿಂದರೆ, ಅವುಗಳ ಮೇಲ್ಮೈಯಲ್ಲಿರುವ ಕೀಟನಾಶಕಗಳು, ರಸಾಯನಿಕಗಳು, ಧೂಳು ಎಲ್ಲವೂ ನಮ್ಮ ಹೊಟ್ಟೆ ಸೇರುತ್ತವೆ. ಸ್ಟ್ರಾಬೆರ್ರಿಗಳು, ಇತರ ಬೆರ್ರಿ ಹಣ್ಣುಗಳು, ದ್ರಾಕ್ಷಿ ಹಣ್ಣುಗಳಲ್ಲಿ ಹೆಚ್ಚು ಕೀಟನಾಶಕ ಸಿಂಪಡಿಸಲ್ಪಟ್ಟರುತ್ತದೆಯಂತೆ. ಮುಖ್ಯವಾಗಿ ದ್ರಾಕ್ಷಿ ಹಣ್ಣಿನ ಬೆಳೆಗೆ ಅತ್ಯಂತ ಹೆಚ್ಚು ಕೀಟನಾಶಕಗಳು ಸಿಂಪಡಣೆಯಾಗಿರುತ್ತದೆ. ಹೀಗಾಗಿ ಅವುಗಳನ್ನು ತಿನ್ನುವ ಮೊದಲು ಸಾಕಷ್ಟು ಎಚ್ಚರಿಗೆ ವಹಿಸಬೇಕು.

Washing Fruits

ಸ್ಟ್ರಾಬೆರ್ರಿ ಹಣ್ಣನ್ನು ಹೆಚ್ಚು ದಿನಗಳ ಕಾಲ ತೇವಾಂಶದಲ್ಲಿ ಇಡುವುದರಿಂದ ಅದರ ಮೇಲ್ಮೈಯಲ್ಲಿ ಫಂಗಸ್‌ ಬೆಳೆಯುವ ಸಂದರ್ಭಗಳಿರುತ್ತವೆ. ಇವು ಕಣ್ಣಿಗೆ ಕಾಣದೆ ಇರುವ ಸಾಧ್ಯತೆಗಳೂ ಕೆಲವೊಮ್ಮೆ ಇರುತ್ತವೆ. ಇವುಗಳನ್ನು ತಿನ್ನುವುದರಿಂದ ಈ ಫಂಗಸ್‌ ಹೊಟ್ಟೆ ಸೇರಿಕೊಂಡು ಗಂಟಲ ಇನ್ಫೆಕ್ಷನ್‌, ಶೀತ, ನೆಗಡಿ, ಮತ್ತಿತರ ಸಮಸ್ಯೆಗಳೂ ಬರಬಹುದು. ಹಾಗಾದರೆ ಬನ್ನಿ, ಯಾವೆಲ್ಲ ಕ್ರಮಗಳಿಂದ ಹಣ್ಣುಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬಹುದು ನೋಡೋಣ.

Salt water Washing Fruits

ಉಪ್ಪುನೀರು

ಎಲ್ಲಕ್ಕಿಂತ ಸುಲಭವಾಗಿ ತೊಳೆಯುವ ಕ್ರಮ ಎಂದರೆ, ಕನಿಷ್ಟ 20 ನಿಮಿಷಗಳ ಕಾಲ ದ್ರಾಕ್ಷಿಯಂತಹ ಹಣ್ಣುಗಳನ್ನು ಉಪ್ಪು ನೀರಿನಲ್ಲಿ ಮುಳುಗಿಸಿ ಇಡುವುದು. ನೀರಿಗೆ ಉಪ್ಪು ಹಾಕಿಟ್ಟು ಅದರಲ್ಲಿ ದ್ರಾಕ್ಷಿಯನ್ನು ಅದ್ದಿಟ್ಟು ನಂತರ ಹರಿಯುವ ನೀರಿನಲ್ಲಿ ತೊಳೆದುಕೊಂಡರೆ, ದ್ರಾಕ್ಷಿ ತಿನ್ನಬಹುದು. ಅಥವಾ ಯಾವುದೇ ಹಣ್ಣನ್ನು ಹೀಗೆ ತೊಳೆದು ತಿನ್ನಬಹುದು.

ವಿನೆಗರ್

ಉಪ್ಪುನೀರಿನ ವಿಧಾನ ಬೇಡವೆಂದರೆ ಬೇರೆ ತೊಳೆಯುವ ವಿಧಾನಗಳೂ ಇವೆ. ವಿನೆಗರ್‌ ಹಾಗೂ ನೀರಿನ ಮಿಶ್ರಣದಲ್ಲಿಯೂ ತೊಳೆಯಬಹುದು. ನೀರು ಹಾಗೂ ವಿನೆಗರ್‌ ಅನ್ನು 3:1 ಅನುಪಾತದಲ್ಲಿ ಬೆರೆಸಿ ಅದರಲ್ಲಿ ಹಣ್ಣನ್ನು 10ರಿಂದ 15 ನಿಮಿಷಗಳ ಕಾಲ ತೊಳೆಯಬೇಕು.

ಬೇಕಿಂಗ್‌ ಸೋಡಾ

1:3ರ ಅನುಪಾತದಲ್ಲಿ ಬೇಕಿಂಗ್‌ ಸೋಡಾ ಹಾಗೂ ನೀರನ್ನು ಬೆರೆಸಿ ಈ ಮಿಶ್ರಣದಲ್ಲಿ 10ರಿಂದ 15 ನಿಮಿಷಗಳ ಕಾಲ ಹಣ್ಣನ್ನು ಮುಳುಗಿಸಿ ತೊಳೆದು ಸ್ವಚ್ಛಗೊಳಿಸಬಹುದು.

Washing Fresh Apples

ಫ್ರುಟ್‌ ವಾಶ್ ಅಥವಾ ವೆಜ್ಜೀ ವಾಶ್‌

ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ರುಟ್‌ ವಾಶ್‌ ಲಿಕ್ವಿಡ್‌ ಮೂಲಕವೂ ತೊಳೆಯಬಹುದು. ಮಾರುಕಟ್ಟೆಯಲ್ಲಿ ರೆಡಿಮೇಡ್‌ ಆಗಿ ಸಿಗುವ ಇಂತಹ ವಾಶ್‌ಗಳನ್ನು ಬಳಸುವ ಸಂದರ್ಭದಲ್ಲಿ ಅವುಗಳಲ್ಲಿ ಬರೆದಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಅವರು ಹೇಳಿದ ಪ್ರಮಾಣದಲ್ಲೇ ಲಿಕ್ವಿಡ್‌ ಅನ್ನು ನೀರಿನ ಜೊತೆಗೆ ಹಾಖಿ ತೆಳುವಾಗಿಸಿ ಆಮೇಲೆ ಬಳಸಿ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading

ಆಹಾರ/ಅಡುಗೆ

Study Superfoods: ಪರೀಕ್ಷೆಗೆ ಓದುವ ಮಕ್ಕಳ ಆಹಾರ ಹೇಗಿರಬೇಕು?

ಪರೀಕ್ಷೆಯ ಈ ದಿನಗಳಲ್ಲಿ ಮಕ್ಕಳ ಆಹಾರಕ್ರಮ (Study Superfoods) ಹೇಗಿರಬೇಕು? ದೇಹ ಮತ್ತು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಎಂಥ ಆಹಾರವಿದ್ದರೆ ಸರಿ ಎನ್ನುವ ಪಾಲಕರ ಗೊಂದಲಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

Study Superfoods
Koo

ತಟ್ಟಿದ್ದು ಮುಟ್ಟಿದ್ದಕ್ಕೆಲ್ಲಾ ಸೂಪರ್‌ಫುಡ್‌ಗಳ ಬಗ್ಗೆ ಮಾತಾಡುವ ಕಾಲವಿದು. ದೇಹದ ಫಿಟ್‌ನೆಸ್‌ಗೆ ಸೂಪರ್‌ಫುಡ್‌ಗಳು ಬೇಕಾಗುವಂತೆ ಮೆದುಳಿನ ದಾರ್ಢ್ಯತೆಗೂ ಸೂಪರ್‌ಫುಡ್‌ಗಳು ಬೇಕೆ? ಹೌದೆನ್ನುತ್ತಾರೆ ತಜ್ಞರು. ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವಂಥ ಆಹಾರಗಳು ಪರೀಕ್ಷೆಯ ಸಮಯದಲ್ಲಿ ಮಕ್ಕಳ ಕ್ಷಮತೆಯನ್ನೂ ಹೆಚ್ಚಿಸಬಲ್ಲವು. ಇದರರ್ಥ, ಈ ಆಹಾರಗಳನ್ನು ಮಕ್ಕಳು ತಿಂದುಬಿಟ್ಟರೆ ಓದದಿದ್ದರೂ ಪರೀಕ್ಷೆಯಲ್ಲಿ ಬರೆಯಬಲ್ಲರು ಎಂದಲ್ಲ. ಆದರೆ ಓದುವ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಹೌದು.
ಏಕಾಗ್ರತೆ, ನೆನಪು ಮತ್ತು ಒತ್ತಡ ಭರಣೆಯನ್ನು ಮೆದುಳು ಹೊಂದುವುದಕ್ಕೆ ಸರಿಯಾದ ಆಹಾರದ ಜೊತೆಗೆ ಸಾಕಷ್ಟು ನಿದ್ದೆ ಬೇಕು; ಆಗಾಗ ಓದಿನಿಂದ ಸ‍ಣ್ಣ ಬಿಡುವೂ ಬೇಕು. ಈ ಕ್ರಮಗಳನ್ನು ಮಕ್ಕಳಲ್ಲಿ ಪಾಲಕರು ಅಭ್ಯಾಸ ಮಾಡಿದರೆ ಪರೀಕ್ಷೆಯ ಸಂದರ್ಭಗಳಲ್ಲಿ ಮಾತ್ರವಲ್ಲ, ಜೀವನದುದ್ದಕ್ಕೂ ಇವು ಮಕ್ಕಳನ್ನು ಗುರಿ ಮುಟ್ಟಿಸಲು ಜೊತೆ ನೀಡುತ್ತವೆ. ಆಹಾರದ ವಿಷಯಕ್ಕೆ ಬಂದರೆ, ಸಾಕಷ್ಟು ಪ್ರೊಟೀನ್‌, ನಾರು, ಸಂಕೀರ್ಣ ಪಿಷ್ಟಗಳು, ನೀರು ಮತ್ತು ಸೂಕ್ಷ್ಮ ಪೋಷಕಾಂಶಗಳು ಅಗತ್ಯ. ಜೊತೆಗೆ ಒಮೇಗಾ 3 ಕೊಬ್ಬಿನಾಮ್ಲವಿರುವ ಆಹಾರಗಳು ಈ ಹಂತದಲ್ಲಿ ಅಗತ್ಯವಾಗಿ ಬೇಕು. ಯಾವೆಲ್ಲ (Study Superfoods) ಆಹಾರಗಳಲ್ಲಿ ಈ ಅಂಶಗಳಿವೆ?

Mixed Nuts and Seeds Weight Loss Snacks

ಬೀಜಗಳು ಮತ್ತು ಕಾಯಿಗಳು

ಅಗಸೆಬೀಜ, ಬಾದಾಮಿ, ವಾಲ್‌ನಟ್‌, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು ಹಾಗೂ ಬ್ಲಾಕ್‌ಕರೆಂಟ್‌ಗಳಲ್ಲಿ ಒಮೇಗಾ ೩ ಕೊಬ್ಬಿನಾಮ್ಲಗಳು ಸಾಂದ್ರವಾಗಿವೆ. ಜೊತೆಗೆ ವಿಟಮಿನ್‌ ಇ ಹಾಗೂ ಜಿಂಕ್‌ ಸಹ ದೊರೆತು, ಮೆದುಳಿನ ಸಾಮರ್ಥ್ಯ ಹೆಚ್ಚಳಕ್ಕೆ ಅನುಕೂಲಕರ ಅಂಶಗಳು ದೇಹ ಸೇರುತ್ತವೆ. ಇದಲ್ಲದೆ ಕೊಬ್ಬಿನ ಮೀನುಗಳು ಗರಿಷ್ಠ ಪ್ರಮಾಣದಲ್ಲಿ ಒಮೇಗಾ ೩ ಕೊಬ್ಬಿನಾಮ್ಲ ಮತ್ತು ಖನಿಜಗಳನ್ನು ಹೊಂದಿರುತ್ತವೆ.

Leafy greens Foods For Fight Against Dengue Fever

ಸೊಪ್ಪುಗಳು

ಹಲವು ರೀತಿಯ ಬಿ ವಿಟಮಿನ್‌ಗಳಿಂದ ಸೊಪ್ಪುಗಳು ಸಮೃದ್ಧವಾಗಿವೆ. ಇವು ನರಮಂಡಲ ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ನೆನಪಿನ ಶಕ್ತಿ ಹೆಚ್ಚಲು ಮತ್ತು ಮೆದುಳನ್ನು ಜಾಗೃತ ಸ್ಥಿತಿಯಲ್ಲಿ ಇರಿಸಲು ಈ ಅಂಶಗಳು ಪೂರಕ. ಇದಲ್ಲದೆ, ಪಾಲಕ್‌ ಸೊಪ್ಪು, ಬ್ರೊಕೊಲಿಯಂಥವು ಫೋಲೇಟ್‌ಗಳನ್ನು ಹೊಂದಿದ್ದು, ಬೌದ್ಧಿಕ ವಿಕಾಸಕ್ಕೆ ಈ ಅಂಶ ಅಗತ್ಯ.

Oats Vegetarian foods for stamina

ಓಟ್ಸ್‌

ಇದರಲ್ಲಿ ನಾರಿನಂಶ ಹೇರಳವಾಗಿದೆ. ಇದರಲ್ಲಿ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದ್ದು, ದೀರ್ಘ ಕಾಲದವರೆಗೆ ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದರಿಂದ ಆಹಾರ ಸೇವಿಸಿದ ನಂತರ ಬಹಳ ಹೊತ್ತಿನವರೆಗೆ ದೇಹ ಬಳಲದಂತೆ ಉಳಿಯುತ್ತದೆ. ಶಕ್ತಿಯ ಮಟ್ಟ ದೇಹದಲ್ಲಿ ಏರಿಳಿತವಾಗುತ್ತಿದ್ದರೆ, ಅದು ಮಕ್ಕಳ ಏಕಾಗ್ರತೆಗೂ ಭಂಗ ತರಬಹುದು. ಹಾಗಾಗಿ ಬೆಳಗಿನ ತಿಂಡಿಗೆ ಸೂಕ್ತವಾದಂಥ ಆಹಾರವಿದು.

Dried Pulses Super Foods For Heart

ಬೇಳೆ-ಕಾಳುಗಳು

ಮೊಳಕೆ ಕಾಳುಗಳು, ರಾಜ್ಮ ಮತ್ತು ಕಡಲೆಯಂಥ ಧಾನ್ಯಗಳು ಸಹ ಈ ದಿನಗಳಲ್ಲಿ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಪ್ರೊಟೀನ್‌ ಜೊತೆಗೆ ಸಂಕೀರ್ಣ ಪಿಷ್ಟಗಳಿದ್ದು, ರಾತ್ರಿ ದೀರ್ಘಕಾಲದವರೆಗೆ ಓದುವ ಮಕ್ಕಳಿಗೆ ನಡುರಾತ್ರಿಯಲ್ಲಿ ಕಳ್ಳಹಸಿವಾಗದಂತೆ ತಡೆಯುತ್ತವೆ. ಇವುಗಳಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಮೆದುಳನ್ನು ಚುರುಕು ಮಾಡುತ್ತವೆ.

Red rice Dietary Fiber

ಕೆಂಪಕ್ಕಿ

ಬಿಳಿಯ ಅಕ್ಕಿಯನ್ನು ಬಳಸುವ ಅಭ್ಯಾಸವನ್ನು ನಿಲ್ಲಿಸುವುದಕ್ಕೆ ಇದು ಒಳ್ಳೆಯ ಸಮಯ. ತೌಡು ಸಮೇತ ಇರುವ ಕೆಂಬಣ್ಣದ ಅಕ್ಕಿಯ ಸೇವನೆಯಿಂದ ದೇಹಕ್ಕೆ ಬೇಕಾದ ನಾರು ಮತ್ತು ಸಂಕೀರ್ಣ ಪಿಷ್ಟಗಳೆರಡೂ ದೊರೆಯುತ್ತವೆ. ತೌಡು ರಹಿತವಾದ ಅಕ್ಕಿಯು ಬೇಗನೇ ಶಕ್ತಿಯನ್ನು ರಕ್ತಕ್ಕೆ ಸೇರಿಸಿ, ನಿದ್ದೆ ಬರುವಂತೆ ಮಾಡುತ್ತದೆ. ಆದರೆ ಕೆಂಪಕ್ಕಿ ಸೇವನೆಯಿಂದ ದೀರ್ಘಕಾಲದವರೆಗೆ ನಿಧಾನವಾಗಿ ದೇಹಕ್ಕೆ ಶಕ್ತಿ ದೊರೆಯುತ್ತಿರುತ್ತದೆ.

Quinoa Protein Foods

ಕಿನೊವಾ

ಕೊಲಿನ್‌ ಅಂಶವನ್ನು ಹೊಂದಿರುವ ಅತ್ಯಂತ ಪೌಷ್ಟಿಕವಾದ ಧಾನ್ಯವಿದು. ಮೆದುಳಿನ ಸಾಮರ್ಥ್ಯ ಮತ್ತು ನರ ಸಂವಾಹಕಗಳ ಕ್ಷಮತೆಯನ್ನು ಹೆಚ್ಚಿಸುವ ಗುಣವನ್ನಿದು ಹೊಂದಿದೆ. ಗೋದಿ, ಅಕ್ಕಿಯ ಬದಲಿಗೆ ಈ ಧಾನ್ಯವನ್ನು ಆಗಾಗ ಬಳಸಬಹುದು. ಇದರಿಂದ ದೇಹ ಮತ್ತು ಮೆದುಳು- ಎರಡಕ್ಕೂ ಉತ್ತಮ ಪೋಷಣೆ ದೊರೆಯುತ್ತದೆ.

Citrus fruits Foods To Avoid Eating With Tea

ಸಿಟ್ರಸ್‌ ಹಣ್ಣುಗಳು

ವಿಟಮಿನ್‌ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳನ್ನು ಧಾರಾಳವಾಗಿ ಹೊಂದಿರುವ ಕಿತ್ತಳೆ, ಮೂಸಂಬಿ, ದ್ರಾಕ್ಷಿ, ನಿಂಬೆಯಂಥ ಹಣ್ಣುಗಳನ್ನು ಆಹಾರದ ಭಾಗ ಆಗಿಸಿಕೊಳ್ಳುವುದು ಅಗತ್ಯ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ, ಪರೀಕ್ಷೆಯ ದಿನಗಳಲ್ಲಿ ಸೋಂಕುಗಳ ಕಾಟವನ್ನು ತಡೆಯಬಹುದು. ಇವುಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಸಿಹಿ ತಿನ್ನಬೇಕೆಂಬ ಬಯಕೆಯನ್ನು ಹತ್ತಿಕ್ಕಲು ನೆರವಾಗುತ್ತವೆ.

ಇದನ್ನೂ ಓದಿ: Banana Benefits For Pregnant Women: ಗರ್ಭಿಣಿಯರು ಬಾಳೆಹಣ್ಣನ್ನು ತಿನ್ನಲೇಬೇಕು, ಏಕೆಂದರೆ…

Continue Reading

ಆಹಾರ/ಅಡುಗೆ

Rameshwaram Cafe : ರಾಮೇಶ್ವರಂ ಕೆಫೆ ಮಾಲಕಿ ದಿವ್ಯಾ ರಾಘವೇಂದ್ರ ರಾವ್‌ ಯಾರು? ಅರ್ಚಕರ ಮಗಳ ಅಡ್ವೆಂಚರ್‌!

Rameshwaram Cafe : ಬಾಂಬ್‌ ಸ್ಫೋಟದೊಂದಿಗೆ ಸುದ್ದಿಯಾದ ರಾಮೇಶ್ವರಂ ಕೆಫೆ ಅದರಾಚೆಗೂ ದೇಶಾದ್ಯಂತ ಫೇಮಸ್‌. ಯಾಕೆಂದರೆ ಅದರ ಆರಂಭ ಮತ್ತು ಬೆಳವಣಿಗೆ ಒಂದು ದೊಡ್ಡ ಸಕ್ಸಸ್‌ ಸ್ಟೋರಿ.

VISTARANEWS.COM


on

Rameshwaram Cafe Divya Raghavendra Rao main
Koo

ಬೆಂಗಳೂರು: ಕೇವಲ ಮೂರು ವರ್ಷಗಳಲ್ಲಿ ಇಡೀ ದೇಶ ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಫುಡ್‌ ಜಾಯಿಂಟ್‌ ಅಂದರೆ ಅದು ರಾಮೇಶ್ವರಂ ಕೆಫೆ (Rameshwaram Cafe). ಈಗ ಬಾಂಬ್‌ ಸ್ಫೋಟದ (Blast in Bengaluru) ಮೂಲಕ ಸುದ್ದಿಯಲ್ಲಿರುವ ಈ ಜನಪ್ರಿಯ ಕೆಫೆ ಅದಕ್ಕಿಂತ ಮೋದಲೇ ತನ್ನ ವಿಶಿಷ್ಟ ಮತ್ತು ರುಚಿಕರ ಖಾದ್ಯ ವಿಶೇಷಗಳಿಗಾಗಿ (Special and tasty Cuisines) ಜನರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಮೂರು ವರ್ಷಗಳ ಹಿಂದೆ ಸಣ್ಣ ಜಾಗದಲ್ಲಿ ಆರಂಭಗೊಂಡ ರಾಮೇಶ್ವರಂ ಕೆಫೆಯ ನಾಲ್ಕು ಜಾಯಿಂಟ್‌ಗಳು ಬೆಂಗಳೂರಿನಲ್ಲೇ ಇವೆ. ಉಳಿದಂತೆ ದುಬೈ ಮತ್ತು ಹೈದರಾಬಾದ್‌ನಲ್ಲೂ ಒಂದೊಂದು ಹೋಟೆಲ್‌ ಇದೆ.

ಇದೊಂದು ಹೋಟೆಲ್‌ ಎನ್ನುವುದಕ್ಕಿಂತಲೂ ವಿಶಿಷ್ಟ ರೀತಿಯ ಭೋಜನ ಶಾಲೆ ಎನ್ನಬಹುದು. ಇಲ್ಲಿನ ತುಪ್ಪವೇ ತುಂಬಿ ತುಳುಕುವ ದೋಸೆ, ಪೊಂಗಲ್‌ ಮತ್ತು ಎಲ್ಲ ಖಾದ್ಯಗಳು ಭಾರಿ ಫೇಮಸ್‌. ಬೆಳಗ್ಗಿನಿಂದ ರಾತ್ರಿವರೆಗೆ ಜನರಿಂದ ತುಂಬಿ ತುಳುಕುವ ಈ ಕೆಫೆಗಳಲ್ಲಿ ಆರಾಮವಾಗಿ ನೆಲದಲ್ಲೇ ಕುಳಿತು ತಿಂಡಿ ತಿನ್ನಬಹುದಾದಷ್ಟು ಸ್ವಚ್ಛತೆ ಇದೆ. ಇಲ್ಲಿ ಯಾವ ಮಟ್ಟದ ರಶ್‌ ಎಂದರೆ ಒಂದು ದೋಸೆ ತಿನ್ನಲು ಹೋದರೆ ಕನಿಷ್ಠ ಒಂದರ್ಧ ಗಂಟೆಯಾದರೂ ಕಾಯಲೇಬೇಕು.

Rameshwaram Cafe foods

ಹಾಗಿದ್ದರೆ ಈ ರಾಮೇಶ್ವರಂ ಕೆಫೆ ಯಾರದ್ದು? ಕೇವಲ ಮೂರೇ ವರ್ಷದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣವೇನು? ಅದರ ಮಾಲಕಿ ದಿವ್ಯಾ (Divya Raghavendra Rao) ಯಾರು? ಅವರ ಬೆನ್ನಿಗೆ ನಿಂತ ರಾಘವೇಂದ್ರ ರಾವ್‌ (Raghavendra Rao) ಯಾರು ಎಂಬೆಲ್ಲ ವಿಚಾರಗಳು ಎಲ್ಲರ ತಲೆಯಲ್ಲಿ ಓಡುತ್ತಿರುತ್ತವೆ.

Rameshwaram Cafe : ಇದು ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರ ಕನಸಿನ ಕೂಸು

ಬೆಂಗಳೂರಿನ ದಿವ್ಯಾ ಮತ್ತು ರಾಘವೇಂದ್ರ ರಾವ್‌ ಎಂಬಿಬ್ಬರು ಸೇರಿ ಕಟ್ಟಿದ ಹೋಟೆಲ್‌ ಚೈನ್‌ ಇದು. ರಾಘವೇಂದ್ರ ರಾವ್‌ ಅವರು ಒಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌. ಅವರಿಗೆ ಅಡುಗೆ ಮೇಲೆ ಅಪಾರವಾದ ಆಸಕ್ತಿ. ಬೆಂಗಳೂರಿನವರೇ ಆದ ದಿವ್ಯಾ ಅವರು ಐಐಎಂ ಪದವೀಧರೆ ಮತ್ತು ಚಾರ್ಟರ್ಡ್‌ ಅಕೌಂಟೆಂಟ್‌. ಅವರಿಗೆ ಉದ್ಯಮದಲ್ಲಿ ಆಸಕ್ತಿ. ಪರಿಚಿತರೇ ಆಗಿದ್ದ ಅವರಿಬ್ಬರೂ ಮಾತನಾಡುತ್ತಿದ್ದಾಗ ಒಂದು ಹೋಟೆಲ್‌ ಕನಸು ಹುಟ್ಟಿತು.

Rameshwaram Cafe Divya Raghavendra Rao1

ತಾವು ಹೋಟೆಲ್‌ ಮಾಡಬೇಕು ಎಂದು ಯೋಚಿಸಿದಾಗ ಅವರ ತಲೆಗೆ ಬಂದಿದ್ದು ಎರಡು ವಿಷಯ. ಒಂದು ಇದು ದಕ್ಷಿಣ ಭಾರತದ ವಿಶೇಷ ಖಾದ್ಯಗಳ ತಾಣವಾಗಬೇಕು (South Indian Food joint) ಎಂಬ ಕನಸು ಕನಸು ಕಂಡರು. ಎರಡನೇಯದು ಹೋಟೆಲ್‌ಗೆ ಏನು ಹೆಸರು ಇಡುವುದು? ಈ ಯೋಚನೆ ಬಂದಾಗ ಅವರಿಗೆ ನೆನಪಾದದ್ದು ಇಬ್ಬರೂ ತುಂಬ ಅಭಿಮಾನದಿಂದ ಕಾಣುತ್ತಿದ್ದ ಡಾ. ಎಪಿಜೆ ಅಬ್ದುಲ್‌ ಕಲಾಂ. ಅಬ್ದುಲ್‌ ಕಲಾಂ ಅವರು ಹುಟ್ಟಿದ ಊರಾದ ರಾಮೇಶ್ವರಂ ಅನ್ನೇ ತಮ್ಮ ಹೋಟೆಲ್‌ಗೂ ಇಟ್ಟರು. ಅಲ್ಲಿಂದ ಶುರುವಾಯಿತು ಜೈತ್ರ ಯಾತ್ರೆ.

ದಕ್ಷಿಣ ಭಾರತದ ತಿನಿಸುಗಳನ್ನು ಜಾಗತಿಕ ಮಟ್ಟಕ್ಕೆ ಒಯ್ಯಬೇಕು ಎಂಬ ಕನಸಿನೊಂದಿಗೆ ಹುಟ್ಟಿದ ರಾಮೇಶ್ವರಂ ಕೆಫೆ ಇವತ್ತು ಬೆಂಗಳೂರಿನಲ್ಲಿ ನಾಲ್ಕು ಸೇರಿ ಒಟ್ಟು ಆರು ಔಟ್‌ಲೆಟ್‌ಗಳನ್ನು ಹೊಂದಿದೆ. ಇಲ್ಲಿನ ಖಾದ್ಯಗಳ ಬಗ್ಗೆ, ಅಲ್ಲಿನ ಆಂಬಿಯೆನ್ಸ್‌, ಶುಚಿ ರುಚಿಗಳ ಬಗ್ಗೆ ಜಗತ್ತಿನ ಬ್ಲಾಗರ್‌ಗಳು ಬರೆಯುತ್ತಿದ್ದಾರೆ. ಜನರು ಖುಷಿಯಿಂದ ತಿನ್ನುತ್ತಿದ್ದಾರೆ.

Rameshwaram Cafe Divya Raghavendra Rao3

ಓಪನ್‌ ಕಿಚನ್‌, ವಿಶಾಲ ಅಂಗಳ, ಮರದ ಕಟ್ಟೆಗಳು

ಯಾರು ಬೇಕಾದರೂ ಒಳಗೆ ಹೋಗಿ ನೋಡಬಹುದಾದ ಓಪನ್‌ ಕಿಚನ್‌, ಅದರ ಎದುರು ಒಂದು ರೌಂಡ್‌ ಕುಳಿತು ಯಾ ನಿಂತು ತಿನ್ನಬಹುದಾದ ಜಾಗ. ಅದರ ಹೊರಾವರಣದಲ್ಲಿ ನಾಲ್ಕೈದು ವಿಶಾಲ ಮೆಟ್ಟಿಲು, ನಂತರ ವಿಶಾಲವಾದ ಅಂಗಳದಂಥ ಜಾಗ. ಅಲ್ಲಲ್ಲಿ ಮರದ ಕಟ್ಟೆಗಳು.. ಇದು ಎಲ್ಲಾ ರಾಮೇಶ್ವರಂ ಕೆಫೆಗಳ ಸಾಮಾನ್ಯ ನೋಟ.

ಸುಮಾರು 700ಕ್ಕೂ ಅಧಿಕ ಸಿಬ್ಬಂದಿಗಳ ಪರಿವಾರವಾಗಿ ಬೆಳೆದಿದೆ ಅದು. 4.5 ಕೋಟಿ ರೂ ವ್ಯವಹಾರ ನಡೆಯುತ್ತಿದೆ. ಇದರ ಜನಪ್ರಿಯತೆ ಎಷ್ಟೆಂದರೆ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿಯವರ ವಿವಾಹ ಪೂರ್ವ ಸಂಭ್ರಮಾಚರಣೆಗೆ ದಕ್ಷಿಣ ಭಾರತದ ತಿನಿಸು ಪೂರೈಕೆ ಮಾಡುವ ಜವಾಬ್ದಾರಿ ರಾಮೇಶ್ವರಂ ಕೆಫೆಗೆ ಸಿಕ್ಕಿದೆ. ಹಲವಾರು ಬಾಲಿವುಡ್‌ ನಟರು ಇಲ್ಲಿಗೆ ಬರುತ್ತಾರೆ.

ಹಾಗಿದ್ದರೆ ಈಗ ಮೂಲ ಪ್ರಶ್ನೆಗೆ ಬರೋಣ ಈ ದಿವ್ಯಾ ಯಾರು?

ದಿವ್ಯಾ ರಾಘವೇಂದ್ರ ರಾವ್‌ ಅವರನ್ನು ನೋಡಿದರೆ ನೀವು ಇವರು ಇಡೀ ದೇಶದಲ್ಲೇ ಜನಪ್ರಿಯತೆ ಪಡೆದಿರುವ ರಾಮೇಶ್ವರಂ ಕೆಫೆಯ ಮಾಲಕಿ ಎಂದು ಹೇಳುವುದು ಸಾಧ್ಯವೇ ಇಲ್ಲ. ಅಷ್ಟೊಂದು ಸಿಂಪಲ್‌ ಆಗಿದ್ದಾರೆ. ಇವರು ಅಹಮದಾಬಾದ್‌ನ ಐಐಎಂನಲ್ಲಿ ಓದಿದವರು, ಚಾರ್ಟರ್ಡ್‌ ಅಕೌಂಟೆಂಟ್‌ ಅಂದರೆ ನಂಬಲು ಸಾಧ್ಯವೇ ಇಲ್ಲ. ಅಷ್ಟೊಂದು ಹೋಮ್ಲೀ ಆಗಿದ್ದಾರೆ… ಪಕ್ಕದ್ಮನೆ ಹುಡುಗಿಯ ಹಾಗೆ ಮುಗ್ಧ ಮುಗ್ಧ.

Rameshwaram Cafe Divya Raghavendra Rao3

ಇದಕ್ಕೆ ಒಂದು ಕಾರಣವೂ ಇದೆ. ಈಗ ಕೋಟಿ ಕೋಟಿ ವ್ಯವಹಾರ ನಡೆಸುವ ಇವರೇನೂ ಹುಟ್ಟಾ ಶ್ರೀಮಂತರಲ್ಲ. ಪುರೋಹಿತರ ಕುಟುಂಬದಲ್ಲಿ ಹುಟ್ಟಿದ ಇವರು ಪಕ್ಕಾ ಮಿಡಲ್‌ ಕ್ಲಾಸ್‌ ಹುಡುಗಿ. ಬಾಲ್ಯದಿಂದಲೇ ಬಡತನವನ್ನು ಕಂಡು ಉಂಡವರು. ಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗಬೇಕು ಎಂದೇ ಕಷ್ಟಪಟ್ಟು ಓದಿದರು. ಅದಕ್ಕಾಗಿ ಸಿಎ ಮಾಡಿದರು.

ಪಿಯುಸಿ ಬಳಿಕ ಐಐಎಂ ಅಹಮದಾಬಾದ್‌ನಲ್ಲಿ ‘ಮ್ಯಾನೇಜ್‌ಮೆಂಟ್‌ ಮತ್ತು ಫೈನಾನ್ಸ್‌’ ಶಿಕ್ಷಣ ಪಡೆದರು. ಅಲ್ಲಿ ಅವರು ಫುಡ್ ಬಿಸಿನೆಸ್‌ ಬಗ್ಗೆ ಕೆಲವೊಂದು ಕೇಸ್‌ ಸ್ಟಡಿ ಮಾಡುತ್ತಿದ್ದಾಗ ನಾನ್ಯಾಕೆ ಹೋಟೆಲ್‌ ಉದ್ಯಮ ಮಾಡಬಾರದು ಎಂದು ಅನಿಸಿತು. ಹಾಗೆ ಶುರುವಾಗಿದ್ದೇ ಹೊಸ ಕನಸು.

ಇದನ್ನು ತಮ್ಮ ಪರಿಚಿತರೇ ಆಗಿದ್ದ, ಫುಡ್‌ ಅಂದರೆ ಅಂದರೆ ಜೀವ ಬಿಡುವ, ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದರೂ ಆಹಾರ ತಯಾರಿಯಲ್ಲಿ ನಳ ಮಹಾರಾಜನೇ ಆಗಿದ್ದ ರಾಘವೇಂದ್ರ ರಾವ್‌ ಅವರಿಗೆ ಹೇಳಿದರು. ಅವರಿಬ್ಬರ ಪಾರ್ಟ್ನರ್‌ಶಿಪ್‌ನಲ್ಲಿ ಹೊಸ ವೆಂಚರ್‌ ತಲೆ ಎತ್ತಿತ್ತು. ಅಂದ ಹಾಗೆ ಜಗತ್ತು ಕೋವಿಡ್‌ನಿಂದ ಕಣ್ತೆರೆಯೋ ಗಳಿಗೆಯಲ್ಲಿ ರಾಮೇಶ್ವರಂ ಕೆಫೆ ಕೂಡಾ ಬೆಳಕು ಕಂಡಿತು.

ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

ಉದ್ಯಮಿ ದಂಪತಿಗೆ ಈಗ ಪುಟ್ಟ ಮಗು

ಎಲ್ಲರೂ ತಿಳಿದುಕೊಂಡ ಹಾಗೆ ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರು ಮದುವೆಯಾದ ಬಳಿಕ ಕಟ್ಟಿದ ಸಂಸ್ಥೆಯಲ್ಲ ಈ ರಾಮೇಶ್ವರಂ ಕೆಫೆ. ಅದು ಅವರು ಪರಿಚಿತರಾಗಿದ್ದು ಬ್ಯುಸಿನೆಸ್‌ ಪಾರ್ಟ್ನರ್‌ಗಳಾಗಿ ಕಟ್ಟಿದ್ದು. ಬಳಿಕವಷ್ಟೇ ಅವರು ಬದುಕಿನಲ್ಲೂ ಪಾಲುದಾರರಾದರು. ಅಂದ ಹಾಗೆ, ಈ ದಂಪತಿಗೆ ಒಂದು ಪುಟ್ಟ ಮಗುವಿದೆ. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸುತ್ತಿದ್ದಾಗ ದಿವ್ಯಾ ರಾವ್‌ ಅವರು ಜಗದ ಪರಿವೆಯನ್ನೇ ಮರೆತು ತನ್ನ ಪುಟ್ಟ ಕಂದಮ್ಮನನ್ನು ಕಾಲ ಮೇಲೆ ಮಲಗಿಸಿ ಬಿಸಿ ಬಿಸಿ ಸ್ನಾನ ಮಾಡಿಸುತ್ತಿದ್ದರು. ಇದು ದಿವ್ಯಾ ರಾವ್‌ ಎಂಬ ಹೆಣ್ಮಗಳ ಸರಳತೆಯ ಚಿತ್ರ.

Continue Reading

ಆಹಾರ/ಅಡುಗೆ

Biryani Tea: ಟ್ರೆಂಡ್‌ನಲ್ಲಿದೆ ಘಮಘಮಿಸುವ ಹೊಸ ಬಿರಿಯಾನಿ ಚಹಾ! ಒಮ್ಮೆ ರುಚಿ ನೋಡಿ!

ಸಾಮಾಜಿಕ ಜಾಲತಾಣದಲ್ಲಿ ಈಗ ಬಿರಿಯಾನಿ ಚಹಾ (Biryani tea) ಎಂಬ ಹೊಸತೊಂದು ಚಹಾ ಸದ್ದು ಮಾಡುತ್ತಿದೆ. ಭಾರೀ ಸುದ್ದಿಯಲ್ಲಿರುವ ಈ ಟ್ರೆಂಡಿಂಗ್‌ ಚಹಾದ ಹೆಸರಿನ ಜೊತೆ ಬಿರಿಯಾನಿ ಏಕೆಂದು ಆಶ್ಚರ್ಯವೆ? ಈ ಸುದ್ದಿ ಓದಿ.

VISTARANEWS.COM


on

Biryani Tea
Koo

ಬಹುತೇಕರ ನಿತ್ಯದ ದಿನಚರಿಯಲ್ಲಿ ಚಹಾಕ್ಕೊಂದು ಪ್ರತ್ಯೇಕ ಸ್ಥಾನವಿದೆ. ಭಾರತೀಯರಾದ ನಮಗೆ ದಿನ ಬೆಳಗಾಗುವುದೇ ಚಹಾದಿಂದ. ಬೆಳಗ್ಗೆ ಎದ್ದ ಕೂಡಲೇ, ಬಿಸಿಬಿಸಿ ಹಬೆಯಾಡುವ ಚಹಾ ಕಪ್‌ ಜೊತೆಗೆ ಕೈಯಲ್ಲೊಂದು ಪತ್ರಿಕೆ ಇದ್ದರೆ ಬೆಳಗಿನ ಅನುಭವ. ಮಸಾಲೆ ಚಹಾ, ಚಳಿಗಾಲದ ಶುಂಠಿ ಹಾಕಿದ ಚಹಾ, ಶೀತಕ್ಕೆ ತುಳಸಿ ಹಾಕಿದ ಚಹಾ, ಏಲಕ್ಕಿ ಚಹಾ ಹೀಗೆ ಚಹಾದಲ್ಲಿ ಬಗೆಬಗೆಯ ವಿಧಗಳಿದ್ದರೂ, ಆಗಾಗ ಹೊಸತೊಂದು ಬಗೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಿನ ದಿನಗಳಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಕೆಲವು ವಿಡಿಯೋಗಳು ಚಹಾದ ಅಂದಗೆಡಿಸಿದರೆ, ಇನ್ನೂ ಕೆಲವೊಮ್ಮೆ ಹೊಸತೊಂದು ಚಹಾದ ಬಗೆಯು ಗಮನ ಸೆಳೆದು ಎಲ್ಲರೂ ಆ ಸ್ವಲ್ಪ ದಿನಗಳ ಕಾಲ ಆ ಹೊಸ ಚಹಾದ ಮೋಹದಲ್ಲಿ ಬೀಳುತ್ತಾರೆ. ಈಗ ಈ ಹವಾ ಮತ್ತೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಬಿರಿಯಾನಿ ಚಹಾ ಎಂಬ ಹೊಸತೊಂದು ಚಹಾ ಸದ್ದು ಮಾಡುತ್ತಿದೆ. ಭಾರೀ ಸುದ್ದಿಯಲ್ಲಿರುವ ಈ ಟ್ರೆಂಡಿಂಗ್‌ ಚಹಾದ ಹೆಸರಿನ ಜೊತೆ ಬಿರಿಯಾನಿ ಏಕಿದೆ ಎಂದು ಆಶ್ಚರ್ಯಪಡಬೇಡಿ. ಬಿರಿಯಾನಿ ಹಾಕಿ ಚಹಾದ (Biryani tea) ಕುಲಗೆಡಿಸಿದ್ದಾರೇನೋ ಎಂದು ಮೂಗು ಮುರಿಯುವ ಮುನ್ನ ಈ ಚಹಾದ ವಿಶೇಷ ಏನು ಎಂಬುದನ್ನು ನೋಡಿಕೊಂಡು ಬರೋಣ. ಕೆಲವರಿಗೆ ಇದು ವಾಹ್‌ ಎನಿಸಿದರೆ, ಇನ್ನೂ ಕೆಲವರಿಗೆ ಅಯ್ಯೋ ಎನಿಸಬಹುದು!

tea powder

ಚಹಾ ಪುಡಿ ಬೇಕೇಬೇಕು

ಈ ಬಿರಿಯಾನಿ ಚಹಾ ಮಾಡಲು ಚಹಾ ಪುಡಿ ಬೇಕೇಬೇಕು. ನಿಮ್ಮ ಇಷ್ಟದ ಬ್ರ್ಯಾಂಡ್‌ನ ಯಾವುದೇ ಚಹಾಪುಡಿಯನ್ನೂ ನೀವು ಈ ಬಿರಿಯಾನಿ ಚಹಾ ಮಾಡಲು ಬಳಸಬಹುದು. ಒಳ್ಳೆಯ ಸ್ಟ್ರಾಂಗ್‌ ಫ್ಲೇವರ್‌ ಇರುವ ಚಹಾಪುಡಿಯನ್ನೇ ಬಳಸಿ. ಯಾಕೆಂದರೆ ಇದು ಚಹಾಕ್ಕೆ ಉತ್ತಮ ಖಡಕ್‌ ರುಚಿಯನ್ನು ನೀಡುತ್ತದೆ.

ಕೆಲವು ಮಸಾಲೆ ಬಳಸಿ

ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಕುದಿಸುವಾಗ ಚಹಾಪುಡಿಯನ್ನು ಹಾಕಿ. ಈ ಚಹಾ ಪುಡಿಯ ಜೊತೆಗೆ ಕೆಲವು ಮಸಾಲೆಗಳನ್ನೂ ಹಾಕಿ. ಕರಿಮೆಣಸು, ಏಲಕ್ಕಿ, ಚೆಕ್ಕೆ, ಸೋಂಪು ಇತ್ಯಾದಿ ಮಸಾಲೆಗಳನ್ನು ಕುಟ್ಟಿ ಮೊದಲೇ ಪುಡಿ ಮಾಡಿಟ್ಟುಕೊಂಡು ಅದನ್ನು ಚಹಾ ಕುದಿಸುವಾಗ ಎರಡು ಮೂರು ಚಿಟಿಕೆಯಷ್ಟು ಅಥವಾ ನಿಮ್ಮ ನಿಮ್ಮ ಘಮಕ್ಕೆ ಅನುಕೂಲವಾಗುವಷ್ಟು ಹಾಕಿ. ಈ ಮಿಶ್ರಣ ಸುಮಾರು ಐದು ನಿಮಿಷಗಳ ಕಾಲ ಕುದಿಯಲಿ.

ಇಲ್ಲಿ ವಿಧಾನ ಭಿನ್ನ

ಈಗ ಇದೆ ಟ್ವಿಸ್ಟ್‌. ಸಾಮಾನ್ಯವಾಗಿ ಚಹಾ ಕುದಿಯುವಾಗಲೇ ಅದಕ್ಕೆ ಶುಂಠಿಯನ್ನೂ ತುರಿದು ಹಾಕುವುದುಂಟು. ಶುಂಠಿ ಚಹಾ ಮಾಡುವುದೂ ಕೂಡಾ ಇದೇ ಕ್ರಮದಲ್ಲಿ. ಆದರೆ, ಇಲ್ಲಿ ಮಾತ್ರ ವಿಧಾನ ಕೊಂಚ ಭಿನ್ನ. ಇಲ್ಲೀಗ ನೀವು ಶುಂಠಿಯನ್ನು ತುರಿದಿಡಿ. ಕುದಿಸಿದ ಚಹಾವನ್ನು ಕೆಳಗಿಳಿಸಿ ಸೋಸಿಕೊಳ್ಳಿ. ಸೋಸಿದ ಚಹಾಕ್ಕೆ ಈ ಹಸಿ ಶುಂಠಿಯನ್ನು ಮೇಲಿನಿಂದ ಹಾಕಿ. ನಂತರ ನಿಂಬೆಹಣ್ಣನ್ನು ಹಿಂಡಿ. ಬೇಕಿದ್ದರೆ, ಒಂದು ಚಮಚ ಜೇನುತುಪ್ಪವನ್ನೂ ಸೇರಿಸಬಹುದು.

Process brewing tea,tea ceremony. Cup of freshly brewed black tea,warm soft light

ಒಮ್ಮೆ ಮಾಡಿ ನೋಡಿ

ವಿಶೇಷವೆಂದರೆ ಬಿರಿಯಾನಿ ಚಹಾದ ಕಥೆ ಇಲ್ಲಿಗೇ ಮುಗಿದಿಲ್ಲ. ಶುಂಠಿ, ಜೇನುತುಪ್ಪ ಹಾಕಿ, ನಿಂಬೆಹಣ್ಣು ಹಿಂಡಿದ ಮೇಲೆ ಚಹಾದ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಉದುರಿಸಿ. ಥೇಟ್‌ ಬಿರಿಯಾನಿಯ ಅಥವಾ ಪುಲಾವ್‌ ಮೇಲೆ ಉದುರಿಸಿದ ಹಾಗೆ. ಹೊಂಬಣ್ಣದ ಚಹಾದ ಮೇಳೆ ಹಸಿರು ತೋರಣದ ಹಾಗೆ ಈ ಕೊತ್ತಂಬರಿ ಸೊಪ್ಪು ಕಾಣಿಸುತ್ತದೆ. ನೋಡಲು ಅದ್ಭುತವಾಗಿ ಕಾಣುವ ಇದರ ರುಚಿಯೂ ಮಜವಾಗಿದೆ ಎಂದು ಕೆಲವರು ಈಗಾಗಲೇ ಇದರ ಘಮ ಹಾಗೂ ರುಚಿಗೆ ಫಿದಾ ಆಗಿದ್ದಾರೆ. ಆದರೆ, ಇನ್ನೂ ಕೆಲವರು, ಇದ್ಯಾಕೋ ನಮಗೆ ಸರಿ ಹೊಂದುತ್ತಿಲ್ಲ ಎಂದು ಹಳೆಯ ಶೈಲಿಯ ಹಾಲು ಹಾಕಿದ ಚಹಾಕ್ಕೇ ಮರಳಿದ್ದಾರಂತೆ. ನಿಮಗೆ ಹೇಗನಿಸಿತು ಈ ಹೊಸ ಬಿರಿಯಾನಿ ಚಹಾ? ತಡವೇಕೆ, ಒಮ್ಮೆ ಮಾಡಿ ನೋಡಿ!

Continue Reading
Advertisement
soumya shetty
ಸಿನಿಮಾ1 min ago

Soumya Shetty: ಗೆಳತಿಯ ಮನೆಯಿಂದಲೇ ಚಿನ್ನ ಕದ್ದು ಸಿಕ್ಕಿಬಿದ್ದ ತೆಲುಗು ನಟಿ

railway crossing work Bengaluru Mysuru train services suspended for 5 days
ಬೆಂಗಳೂರು24 mins ago

Train services: ರೈಲ್ವೆ ಕ್ರಾಸಿಂಗ್‌ ಕಾಮಗಾರಿ; 5 ದಿನ ಬೆಂಗಳೂರು-ಮೈಸೂರು ರೈಲು ಸಂಚಾರ ಬಂದ್‌

Sedition Case Mandya
ಮಂಡ್ಯ51 mins ago

Sedition Case : ಪಾಕಿಸ್ತಾನ್‌ ಮುರ್ದಾಬಾದ್‌ ಬದಲು ಜಿಂದಾಬಾದ್‌ ಎಂದ ಬಿಜೆಪಿ ಕಾರ್ಯಕರ್ತ ಜೈಲಿಗೆ!

Couple
ದೇಶ1 hour ago

ಹೆಣ್ಣುಮಕ್ಕಳನ್ನು ‘ಡಾರ್ಲಿಂಗ್‌’ ಎಂದು ಕರೆಯುವುದೂ ಇನ್ನು ಲೈಂಗಿಕ ಕಿರುಕುಳ; ಹುಡುಗರೇ ಹುಷಾರ್!

china military
ವಿದೇಶ1 hour ago

ಮಾಲ್ಡೀವ್ಸ್‌ಗೆ ಉಚಿತ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಚೀನಾ ಸಹಿ

Rameshwarm Cafe
ಪ್ರಮುಖ ಸುದ್ದಿ1 hour ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಚೆನ್ನೈಯಲ್ಲಿ NIA ದಾಳಿ, ಐವರು ಕ್ರಿಮಿಗಳ ಸೆರೆ

NIA Raid
ಕರ್ನಾಟಕ1 hour ago

NIA Raid: ಬೆಂಗಳೂರು ಜೈಲಿನಲ್ಲಿ ಉಗ್ರ ದಾಳಿಗೆ ಸ್ಕೆಚ್; 7 ರಾಜ್ಯಗಳಲ್ಲಿ ಎನ್‌ಐಎ ದಾಳಿ

Missile Attack
ವಿದೇಶ2 hours ago

Missile Attack: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ; ಕೇರಳ ಮೂಲದ ವ್ಯಕ್ತಿ ಸಾವು

Raja Marga Column Beena das2
ಸ್ಫೂರ್ತಿ ಕತೆ4 hours ago

Raja Marga Column : ಕ್ರಾಂತಿ ಸಿಂಹಿಣಿ ಬೀನಾ ದಾಸ್! ಅನಾಥ ಶವದ ಪರ್ಸಲ್ಲಿತ್ತು ಸುಭಾಸ್ ಚಿತ್ರ!

Best Ways To Clean Fruits
ಆಹಾರ/ಅಡುಗೆ4 hours ago

Best Ways To Clean Fruits: ಹಣ್ಣುಗಳನ್ನು ತಿನ್ನುವ ಮೊದಲು ನೀವು ಈ ವಿಧಾನದಲ್ಲಿ ತೊಳೆದುಕೊಂಡಿದ್ದೀರಾ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ18 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ21 hours ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌